ಮಂಡ್ಯ: ಕೊನೆಗೂ ಬಯಲಾಯ್ತು ರಕ್ತ ರಹಸ್ಯ! ಮನೆಯಿಡೀ ನಿಗೂಢವಾಗಿ ಹರಿದಿದ್ದ ನೆತ್ತರು ಯಾರದ್ದು ಗೊತ್ತೇ? – Kannada News | Maddur Blood Stain Mystery Solved: FSL Confirms House Owner’s Blood in Mandya’s Village

ಮಂಡ್ಯ, ಡಿಸೆಂಬರ್ 20: ಮಂಡ್ಯ (Mandya) ಜಿಲ್ಲೆಯ ಮದ್ದೂರು ತಾಲೂಕಿನ ಹೊಂಬಾಳೆಗೌಡನ ದೊಡ್ಡಿ ಗ್ರಾಮದಲ್ಲಿ ಸತೀಶ್ ಹಾಗೂ ಸೌಮ್ಯ ದಂಪತಿಯ ಮನೆಯಲ್ಲಿ ಪತ್ತೆಯಾಗಿದ್ದ ನಿಗೂಢ ರಕ್ತದ ಕಲೆಗಳ ಪ್ರಕರಣದ ಸತ್ಯಾಸತ್ಯತೆ ಕೊನೆಗೂ ಬಯಲಾಗಿದೆ. ಎಫ್‌ಎಸ್‌ಎಲ್ (Forensic Science Laboratory) ವರದಿ ಬಹಿರಂಗಗೊಂಡಿದ್ದು, ಮನೆಯೊಳಗೆ ಹರಿದಿದ್ದ ರಕ್ತವು ಮನೆ ಮಾಲೀಕ ಸತೀಶ್ ಅವರದ್ದೇ ಎಂಬುದು ದೃಢಪಟ್ಟಿದೆ! ಅಕ್ಟೋಬರ್ 28ರಂದು ಸತೀಶ್ ದಂಪತಿಯ ಮನೆಯ ಹಾಲ್, ಬಾತ್‌ರೂಂ, ಟಿವಿ ಹಾಗೂ ಫ್ಯಾನ್‌ಗಳ ಮೇಲೆ ರಕ್ತದ ಕಲೆಗಳು ಕಾಣಿಸಿಕೊಂಡು ಗ್ರಾಮದೆಲ್ಲೆಡೆ ಆತಂಕ ಸೃಷ್ಟಿಸಿತ್ತು. ಮೊದಲಿಗೆ ಅದು ಯಾವುದೋ ಪ್ರಾಣಿಯ ರಕ್ತವಿರಬಹುದು ಎಂಬ ಶಂಕೆ ವ್ಯಕ್ತವಾಗಿತ್ತು. ಆದರೆ ಪ್ರಾಥಮಿಕ ತನಿಖೆಯಲ್ಲೇ ಅದು ಮನುಷ್ಯನ ರಕ್ತ ಎಂಬುದು ಗೊತ್ತಾಗಿತ್ತು.

ಎಫ್​ಎಸ್​ಎಲ್ ವರದಿಯಿಂದ ಬಯಲಾಯ್ತು ರಹಸ್ಯ

ಈ ಪ್ರಕರಣದ ಗಂಭೀರತೆಯನ್ನು ಗಮನಿಸಿ ಬೆಸಗರಹಳ್ಳಿ ಠಾಣಾ ಪೊಲೀಸರು, ಎಫ್‌ಎಸ್‌ಎಲ್ ಹಾಗೂ ಶ್ವಾನದಳದ ಸಿಬ್ಬಂದಿ ಸ್ಥಳ ಪರಿಶೀಲನೆ ನಡೆಸಿ ರಕ್ತದ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದರು. ಇದೀಗ ಬಂದಿರುವ ವರದಿಯಲ್ಲಿ, ಆ ರಕ್ತವು ಮನೆ ಮಾಲೀಕ ಸತೀಶ್ ಅವರದೇ ಎಂದು ಉಲ್ಲೇಖಿಸಲಾಗಿದೆ.

ಗೊತ್ತಾಗದಂತೇ ಹರಿದಿದ್ಹೇಗೆ ನೆತ್ತರು?

ಪೊಲೀಸ್ ತನಿಖೆಯಲ್ಲಿ ತಿಳಿದುಬಂದಂತೆ, ಸತೀಶ್ ಅವರು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ರಕ್ತ ತೆಳುಗೊಳಿಸುವ (ಬ್ಲಡ್ ಥಿನ್ನರ್) ಮಾತ್ರೆಗಳನ್ನು ಸೇವಿಸುತ್ತಿದ್ದರು. ಅವರಿಗೆ ದೇಹದ ಮೇಲೆ ಸೂಜಿ ಗಾತ್ರದ ಸಣ್ಣ ಗಾಯವಾಗಿದ್ದು, ಅದು ಅವರಿಗೂ ತಿಳಿಯದಂತೆ ರಕ್ತ ಚಿಮ್ಮಿ ಮನೆಯೊಳಗೆ ಹರಿದಿದೆ ಎನ್ನಲಾಗಿದೆ. ಆದರೆ ಇದರ ಅರಿವು ಅವರಿಗೂ ಆಗಿಲ್ಲದೇ ಇದ್ದುದರಿಂದ ಯಾರೋ ದುಷ್ಕೃತ್ಯ ಎಸಗಿರಬಹುದು, ಅಥವಾ ಮಾಟ ಮಂತ್ರಕ್ಕಾಗಿ ರಕ್ತ ಚೆಲ್ಲಿರಬಹುದು ಎಂಬ ಅನುಮಾನಗಳು ಕುಟುಂಬಸ್ಥರು ಹಾಗೂ ಗ್ರಾಮಸ್ಥರಲ್ಲಿ ಮೂಡಿದ್ದವು. ಯಾಕೆಂದರೆ, ಕೇವಲ ಒಂದು ಕಡೆ ಅಲ್ಲದೆ ಮನೆ ಹಾಲ್, ಬಾತ್‌ರೂಂ, ಟಿವಿ ಹಾಗೂ ಫ್ಯಾನ್‌ಗಳ ಮೇಲೆಲ್ಲ ರಕ್ತದ ಕಲೆ ಕಾಣಿಸಿತ್ತು. ಹೀಗಾಗಿ ಸಹಜವಾಗಿಯೇ ಅನುಮಾನಗಳು ಹೆಚ್ಚಾಗಿದ್ದವು. ಇದರಿಂದ ಗ್ರಾಮದಲ್ಲಿ ಕೆಲಕಾಲ ಭಯ ಮತ್ತು ಕುತೂಹಲ ವಾತಾವರಣ ನಿರ್ಮಾಣವಾಗಿತ್ತು.

ಇದನ್ನೂ ಓದಿ: ಮಂಡ್ಯ: ನೆತ್ತರ ನಿಗೂಢತೆಗೆ ನಡುಗಿದ ದಂಪತಿ, ಮನೆಯಲ್ಲಿ ಎಲ್ಲಿ ನೋಡಿದರೂ ರಕ್ತದ ಕಲೆ!

ಆದರೆ ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸಿದ ಬಳಿಕ ಇದೀಗ ರಕ್ತ ರಹಸ್ಯ ಸಂಪೂರ್ಣವಾಗಿ ಬಯಲಾಗಿದ್ದು, ಯಾವುದೇ ಅಪರಾಧ ಅಥವಾ ಹೊರಗಿನ ದುರುದ್ದೇಶ ಇಲ್ಲ ಎಂಬುದು ಸ್ಪಷ್ಟವಾಗಿದೆ. ಎಫ್‌ಎಸ್‌ಎಲ್ ವರದಿಯಿಂದ ಸತೀಶ್ ದಂಪತಿ ಮತ್ತು ಗ್ರಾಮಸ್ಥರು ಕೊನೆಗೂ ನಿಟ್ಟುಸಿರು ಬಿಟ್ಟಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 7:48 am, Sat, 20 December 25

Source link

ಶ್ವಾನಕ್ಕೆ ಮಡಿಲು ತುಂಬಿ ಅದ್ಧೂರಿ ಸೀಮಂತ; 500 ಜನರಿಗೆ ಭರ್ಜರಿ ಭೋಜನ ಹಾಕಿದ ಮಾಲೀಕ! – Kannada News | Tumakuru Owner Hosts Grand Baby Shower for Pet Dog Khushi

ತುಮಕೂರು, ಡಿಸೆಂಬರ್ 20: ತುಮಕೂರು ಜಿಲ್ಲೆಯ ತುರುವೇಕೆರೆ ತಾಲ್ಲೂಕಿನ ದಸರಿಘಟ್ಟದಲ್ಲಿ ಪ್ರವೀಣ್ ಎಂಬುವವರು ತಮ್ಮ ಸಾಕು ನಾಯಿ ‘ಖುಷಿ’ಗೆ ಅದ್ಧೂರಿ ಸೀಮಂತ ಕಾರ್ಯಕ್ರಮ ಆಯೋಜಿಸಿದ್ದರು. ತನ್ನ ಪ್ರೀತಿಯ ನಾಯಿಯ ಸೀಮಂತಕ್ಕಾಗಿ 20 ಸಾವಿರ ರೂಪಾಯಿ ವೆಚ್ಚದಲ್ಲಿ 50 ಕೆಜಿ ಗೀ ರೈಸ್, 50 ಕೆಜಿ ಚಿಕನ್ ಗ್ರೇವಿ ಮಾಡಿಸಿ 500 ಜನರಿಗೆ ಭೋಜನ ಏರ್ಪಡಿಸಿದ್ದ ಮಾಲೀಕ, ಹೊಸ ಬಟ್ಟೆ, ಹೂವಿನ ಸಿಂಗಾರ, ಕೇಕ್ ಕಟಿಂಗ್ ಮೂಲಕ ಖುಷಿಯ ಗರ್ಭಧಾರಣೆಯನ್ನು ಸಂಭ್ರಮದಿಂದ ಆಚರಿಸಿದ್ದಾರೆ. ಮಾಲೀಕನ ಈ ವಿಶಿಷ್ಟ ಶ್ವಾನ ಪ್ರೀತಿಗೆ ಇಡೀ ಊರೇ ಮೆಚ್ಚುಗೆ ವ್ಯಕ್ತಪಡಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ನಿಮ್ಮಿಂದ ನಮಗೆ ಎಲ್ಲಾ ಕಡೆ ನೋವಾಗ್ತಿದೆ ಎಂದ ಸುದೀಪ್ – Kannada News | Kichcha Sudeep Says He face Too Much Headache from Rakshita And Dhruvanth

ಸುದೀಪ್ ಅವರು ಪ್ರತಿ ಶನಿವಾರದ ಎಪಿಸೋಡ್​ನ ಗಂಭೀರವಾಗಿ ನಡೆಸಿಕೊಡುತ್ತಾರೆ. ಆದರೆ, ಈ ವಾರ ಅವರು ಫನ್ ಮೂಡ್​ನಲ್ಲಿ ಇದ್ದಂತೆ ಕಾಣಿಸಿದೆ. ರಕ್ಷಿತಾ ಅವರು ಸೀಕ್ರೇಟ್ ರೂಂ ಅನುಭವ ಬಿಚ್ಚಿಟ್ಟರು.ಧ್ರುವಂತ್ ಸಹವಾಸ ಮಾಡಿ ನನಗೆ ತಲೆ ನೋವು ಬರುತ್ತಿದೆ ಎಂದರು ರಕ್ಷಿತಾ. ಆದರೆ, ನಮಗೆ ಎಲ್ಲಾ ಕಡೆಗಳಲ್ಲೂ ನೋವಾಗುತ್ತಿದೆ ಎಂದರು ಸುದೀಪ್. ಕಲರ್ಸ್ ಕನ್ನಡ ವಾಹಿನಿ ಈ ಪ್ರೋಮೋನ ಹಂಚಿಕೊಂಡಿದೆ. ಆ ಸಂದರ್ಭದ ಫನ್ ವಿಟಿ ಇಲ್ಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Train Accident: ಅಸ್ಸಾಂನಲ್ಲಿ ಆನೆಗಳ ಹಿಂಡಿಗೆ ಡಿಕ್ಕಿ ಹೊಡೆದ ರೈಲು, 8 ಆನೆಗಳು ಸಾವು, ಹಳಿ ತಪ್ಪಿದ ಬೋಗಿಗಳು – Kannada News | Assam Train Accident: 8 Elephants Dead, Rajdhani Express Derails in Hojai

ಗುವಾಹಟಿ, ಡಿಸೆಂಬರ್ 20: ಇಂದು ಮುಂಜಾನೆ ಅಸ್ಸಾಂನ ಹೊಜೈ ಜಿಲ್ಲೆಯಲ್ಲಿ ಸಾಯಿರಾಂಗ್ ನವದೆಹಲಿ ರಾಜಧಾನಿ ಎಕ್ಸ್‌ಪ್ರೆಸ್‌ ಆನೆ(Elephant)ಗಳ ಹಿಂಡಿಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ 8 ಆನೆಗಳು ಸಾವನ್ನಪ್ಪಿವೆ. ಹಾಗೆಯೇ ಐದು ಬೋಗಿಗಳು ಹಳಿ ತಪ್ಪಿವೆ ಎನ್ನುವ ಮಾಹಿತಿ ಲಭ್ಯವಾಗಿದೆ. ಪ್ರಯಾಣಿಕರಿಗೆ ಯಾವುದೇ ಗಾಯಗಳಾಗಿಲ್ಲ. ಬೆಳಗಿನ ಜಾವ 2.17 ರ ಸುಮಾರಿಗೆ ಅಪಘಾತ ಸಂಭವಿಸಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಹೊಜೈ ಜಿಲ್ಲೆಯ ಚಾಂಗ್ಜುರೈ ಪ್ರದೇಶದಲ್ಲಿ ಈ ಡಿಕ್ಕಿ ಸಂಭವಿಸಿದೆ ಎಂದು ನಾಗಾಂವ್ ವಿಭಾಗೀಯ ಅರಣ್ಯ ಅಧಿಕಾರಿ ಸುಹಾಶ್ ಕದಮ್ ಪಿಟಿಐಗೆ ತಿಳಿಸಿದ್ದಾರೆ. ಘಟನೆಯ ನಂತರ ಕದಮ್ ಮತ್ತು ಇತರ ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ತಲುಪಿದ್ದಾರೆ. ಜಮುನಾಮುಖ್ ಕಂಪೂರ್ ವಿಭಾಗದಲ್ಲಿ ರೈಲು ಸೇವೆಗಳು ಅಸ್ತವ್ಯಸ್ತಗೊಂಡಿವೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಈ ಮಾರ್ಗದ ಮೂಲಕ ಹಾದುಹೋಗಬೇಕಾದ ರೈಲುಗಳನ್ನು ಯುಪಿ ಮಾರ್ಗದ ಮೂಲಕ ತಿರುಗಿಸಲಾಗುತ್ತಿದೆ, ಆದರೆ ಪುನಃಸ್ಥಾಪನೆ ಕಾರ್ಯ ನಡೆಯುತ್ತಿದೆ ಎಂದು ಕದಮ್ ಹೇಳಿದರು.

ಸಾಯಿರಂಗ್ ನವದೆಹಲಿ ರಾಜಧಾನಿ ಎಕ್ಸ್‌ಪ್ರೆಸ್ ಮಿಜೋರಾಂನ ಸಾಯಿರಾಂಗ್ ಅನ್ನು ಐಜ್ವಾಲ್ ಬಳಿ ದೆಹಲಿಯ ಆನಂದ್ ವಿಹಾರ್ ಟರ್ಮಿನಲ್‌ನೊಂದಿಗೆ ಸಂಪರ್ಕಿಸುತ್ತದೆ. ಅಪಘಾತ ಸ್ಥಳವು ಗುವಾಹಟಿಯಿಂದ ಸುಮಾರು 126 ಕಿ.ಮೀ ದೂರದಲ್ಲಿದೆ. ಘಟನೆಯ ನಂತರ, ಅಪಘಾತ ಪರಿಹಾರ ರೈಲುಗಳು ಮತ್ತು ರೈಲ್ವೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು.

ರೈಲು ಹಳಿತಪ್ಪಿದ್ದರಿಂದ ಮತ್ತು ಆನೆಯ ದೇಹದ ಭಾಗಗಳು ಹಳಿಗಳ ಮೇಲೆ ಚದುರಿಹೋಗಿದ್ದರಿಂದ, ಅಸ್ಸಾಂ ಮತ್ತು ಈಶಾನ್ಯದ ಇತರ ಭಾಗಗಳಿಗೆ ರೈಲು ಸೇವೆಗಳು ಬಾಧಿತವಾಗಿವೆ ಎಂದು ಮೂಲಗಳು ತಿಳಿಸಿವೆ. ಪರಿಣಾಮ ಬೀರಿದ ಬೋಗಿಗಳ ಪ್ರಯಾಣಿಕರನ್ನು ತಾತ್ಕಾಲಿಕವಾಗಿ ರೈಲಿನ ಇತರ ಬೋಗಿಗಳಲ್ಲಿ ಲಭ್ಯವಿರುವ ಖಾಲಿ ಬರ್ತ್‌ಗಳಲ್ಲಿ ಇರಿಸಲಾಯಿತು.

ಮತ್ತಷ್ಟು ಓದಿ: Video: ಶ್ವಾನಕ್ಕೆ ಸೊಂಡಿಲಿನಿಂದ ನೀರು ಎರಚುತ್ತಾ ಖುಷಿ ಪಟ್ಟ ಕಂಜನ್‌ ಆನೆ

ರೈಲು ಗುವಾಹಟಿ ತಲುಪಿದ ನಂತರ, ಎಲ್ಲಾ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಹೆಚ್ಚುವರಿ ಬೋಗಿಗಳನ್ನು ಜೋಡಿಸಲಾಗುತ್ತದೆ, ನಂತರ ರೈಲು ತನ್ನ ಮುಂದಿನ ಪ್ರಯಾಣವನ್ನು ಪುನರಾರಂಭಿಸುತ್ತದೆ. ಈ ಘಟನೆ ಆನೆ ಕಾರಿಡಾರ್ ಅಲ್ಲದ ಸ್ಥಳದಲ್ಲಿ ಸಂಭವಿಸಿದೆ. ಹಳಿಗಳ ಮೇಲೆ ಹಿಂಡು ನಿಂತಿರುವುದನ್ನು ಗಮನಿಸಿದ ಲೋಕೋ ಪೈಲಟ್ ತುರ್ತು ಬ್ರೇಕ್ ಹಾಕಿದರು. ಇದರ ಹೊರತಾಗಿಯೂ, ಆನೆಗಳಿಗೆ ರೈಲು ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಆಸ್ಟ್ರೇಲಿಯಾ ದಾಂಡಿಗರ ಸಿಡಿಲಬ್ಬರ… ಟಿ20 ದಾಖಲೆಗಳು ಧೂಳೀಪಟ – Kannada News | Renshaw, Wildermuth Creates New World Record in T20 Cricket

BBL 2025: ಬಿಗ್ ಬ್ಯಾಷ್​ ಲೀಗ್​ನ 6ನೇ ಪಂದ್ಯವು ಹಲವು ದಾಖಲೆಗಳಿಗೆ ಸಾಕ್ಷಿಯಾಗಿದೆ. ಅದು ಕೂಡ ಟಿ20 ಇತಿಹಾಸದಲ್ಲೇ ಚೇಸಿಂಗ್ ವೇಳೆ ಇಬ್ಬರು ಬ್ಯಾಟರ್​ಗಳು ಶತಕ ಸಿಡಿಸುವ ಮೂಲಕ. ಇದರೊಂದಿಗೆ ಬಿಗ್ ಬ್ಯಾಷ್​ ಲೀಗ್​ನ ಹಲವು ದಾಖಲೆಗಳು ಕೂಡ ಧೂಳೀಪಟವಾಗಿದೆ.

Source link

ಮೆಟ್ರೋ ಪ್ರಯಾಣಿಕರೇ ಗಮನಿಸಿ: ಯೆಲ್ಲೋ ಮಾರ್ಗದಲ್ಲಿ ಭಾನುವಾರ ರೈಲು ಸಂಚಾರ ಶುರುವಾಗೋದು ಲೇಟ್ – Kannada News | Bangalore Metro Alert: Yellow Line Services to Start Late Tomorrow, BMRCL Announces

ಬೆಂಗಳೂರು, ಡಿಸೆಂಬರ್ 20: ಬೆಂಗಳೂರಿನ ನಮ್ಮ ಮೆಟ್ರೋದ ಹಳದಿ ಮಾರ್ಗದಲ್ಲಿ ಭಾನುವಾರ (ಡಿಸೆಂಬರ್ 21) ಮೆಟ್ರೋ ರೈಲು ಸಂಚಾರ ವಿಳಂಬವಾಗಿ ಶುರುವಾಗಲಿದೆ. ನವೀಕರಣ ಕಾರ್ಯದ ಹಿನ್ನೆಲೆಯಲ್ಲಿ ಬೆಳಗ್ಗೆ ಮೆಟ್ರೋ ಸೇವೆಗಳು ಒಂದು ಗಂಟೆ ತಡವಾಗಿ ಆರಂಭವಾಗಲಿವೆ. ಬೆಳಗ್ಗೆ 7 ಗಂಟೆಗೆ ಪ್ರಾರಂಭವಾಗುವ ಬದಲಾಗಿ, ಯೆಲ್ಲೋ ಲೈನ್ ರೈಲುಗಳು 8 ಗಂಟೆಗೆ ಸಂಚಾರವನ್ನು ಪ್ರಾರಂಭಿಸುತ್ತವೆ. ನೇರಳೆ ಮತ್ತು ಹಸಿರು ಮಾರ್ಗಗಳಲ್ಲಿ ಮೆಟ್ರೋ ಸಂಚಾರದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಮಾಹಿತಿ ನೀಡಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರಿಗರೇ ಮಾಸ್ಕ್ ಧರಿಸದೆ ಹೊರಬಂದರೆ ಎಚ್ಚರ! ಕಳಪೆ ಏರ್ ಕ್ವಾಲಿಟಿಯಿಂದ ಶುರುವಾಗುತ್ತೆ ಅಸ್ತಮಾ, ಅಲರ್ಜಿ – Kannada News | Bangalore AQI: Bengaluru Air Quality Crosses 190, Asthma, Heart disease can be caused by poor air quality

ಬೆಂಗಳೂರಿಗರೇ ಮಾಸ್ಕ್ ಧರಿಸದೆ ಹೊರಬಂದರೆ ಎಚ್ಚರ!

ಬೆಂಗಳೂರು, ಡಿಸೆಂಬರ್ 20: ದಿನೇ ದಿನೇ ಹಡಗೆಡುತ್ತಿರುವ ಬೆಂಗಳೂರಿನ ಗಾಳಿಯ ಗುಣಮಟ್ಟ (Bengaluru Air Quality) , ಸಾರ್ವಜನಿಕರಿಗೆ ಸಂಕಷ್ಟ ತಂದೊಡ್ಡಿದೆ. ಕಳೆದ ಹಲವು ದಿನಗಳಿಂದ 170 ರಿಂದ 200ರವೆಗೂ ಏರಿಳಿತ ಕಾಣುತ್ತಿರುವ ಗುಣಮಟ್ಟ ವಾಯು ಮಾಲಿನ್ಯ, ಇಂದೂ ಸಹ 196ಕ್ಕೆ ತಲುಪಿದೆ. ನಗರದ ಈ ವಾತಾರಣ ದೆಹಲಿಯನ್ನು ನೆನಪಿಸುತ್ತಿದ್ದು, ಇದು ಹೀಗೆ ಮುಂದುವರೆದರೆ ಜನರ ಜೀವಕ್ಕೇ ಕುತ್ತು ಬರುವ ಸಂಭವವಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ಕಳಪೆ ಗುಣಮಟ್ಟದ ಗಾಳಿಯಿಂದ ಶ್ವಾಸಕೋಶ ಸಂಬಂಧಿ ಕಾಯಿಲೆ

ರಾಜ್ಯದೆಲ್ಲೆಡೆ ಉಂಟಾಗುತ್ತಿರುವ ಶೀತದಲೆಯ ಪರಿಣಾಮ ಈಗಾಗಲೇ ಮಕ್ಕಳು, ವೃದ್ಧರು ಸೇರಿದಂತೆ ಎಲ್ಲರಿಗೂ ಉಸಿರಾಟದ ಸಮಸ್ಯೆಗಳು ಎದುರಾಗುತ್ತಿವೆ. ಅದರೊಂದಿಗೆ ವಾಯು ಮಾಲಿನ್ಯ ಮತ್ತು ಹದಗೆಟ್ಟ ಗಾಳಿಯೂ ಸೇರಿ ಅನಾರೊಗ್ಯ ಉಂಟುಮಾಡಬಹುದೆಂದು ತಜ್ಞರು ಹೇಳುತ್ತಾರೆ. ಇಂದೂ ಬೆಂಗಳೂರಿನಲ್ಲಿ PM2.5 ಪ್ರಮಾಣ 121ಕ್ಕೆ ತಲುಪಿದ್ದು, PM10 ಪ್ರಮಾಣ 167ಕ್ಕೆ ಇಳಿದಿದೆ.

ಇದರಿಂದಾಗಿ ಅಸ್ತಮಾ, ಅಲರ್ಜಿ ಸೇರಿದಂತೆ ಹೃದಯ ಸಂಬಂಧಿ ಖಾಯಿಲೆಗಳೂ ಎದುರಾಗಬಹುದು. 150ಕ್ಕಿಂತ ಹೆಚ್ಚಿನ ಗಾಳಿಯ ಗುಣಮಟ್ಟ ಜನರಲ್ಲಿ ಅಸ್ತಮಾ ತಂದೊಡ್ಡಬಹುದಾಗಿದ್ದು, ಈ ಸಮಸ್ಯೆಯಿಂದ ಬಚಾವಾಗಲು ಏರ್ ಪ್ಯೂರಿಫೈಯರ್ ಬಳಸುವುದರ ಜೊತೆಗೆ ಆದಷ್ಟು ಮನೆಯಿಂದ ಹೊರಹೋಗದಿರೊ ಎಂದು ತಜ್ಞರು ಸಲಹೆ ನೀಡಿದ್ದಾರೆ.

ಇದನ್ನೂ ಓದಿ ಬೆಂಗಳೂರಿನಲ್ಲಿ ಉಸಿರಾಡೋದು, ದಿನಕ್ಕೆ ಮೂರು ಸಿಗರೇಟ್ ಸೇದೋದು ಎರಡೂ ಒಂದೇ!

ಕಳೆದ ನಾಲ್ಕು ವರ್ಷಗಳಲ್ಲೇ ಕಳಪೆ ಏರ್ ಕ್ವಾಲಿಟಿ

ಕಳೆದ ನಾಲ್ಕು ವರ್ಷಗಳಿಗಿಂತ ಈ ವರ್ಷವೇ ಗಾಳಿಯ ಗುಣಮಟ್ಟ ಹೆಚ್ಚು ಹದಗೆಟ್ಟಿದೆ. 2025ರಲ್ಲಿ ಸುಮಾರು 90ಕ್ಕೂ ಹೆಚ್ಚು ದಿನಗಳ ಕಾಲ ಬೆಂಗಳೂರಿನ ಏರ್ ಕ್ವಾಲಿಟಿ ಅನಾರೋಗ್ಯಕರವಾಗಿತ್ತು ಎಂದು AQI ತಿಳಿಸಿದೆ. ಉಳಿದಂತೆ 2 ದಿನ ಉತ್ತಮ ಗಾಳಿಯ ಗುಣಮಟ್ಟವಿದ್ದರೆ, 253 ದಿನ ಸಾಧಾರಣ ಏರ್ ಕ್ವಾಲಿಟಿ ಕಂಡು ಬಂದಿದೆ. ಇಂದಿನ ದಿನಗಳಲ್ಲಿ ಶೀತದಲೆಯ ಜೊತೆಗೆ ಕಳಪೆ ಗುಣಮಟ್ಟದ ಗಾಳಿಯೂ ಸೇರಿ ಸಾರ್ವಜನಿಕರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿವೆ.

ರಾಜ್ಯದ ಇತರ ನಗರದಲ್ಲಿ ಇಂದಿನ ಗಾಳಿಯ ಗುಣಮಟ್ಟ (Air Quality Index):

  • ಬೆಂಗಳೂರು –196
  • ಮಂಗಳೂರು – 140
  • ಮೈಸೂರು – 136
  • ಬೆಳಗಾವಿ – 144 ಕ
  • ಲಬುರ್ಗಿ – 94
  • ಶಿವಮೊಗ್ಗ – 73
  • ಬಳ್ಳಾರಿ – 166
  • ಹುಬ್ಬಳ್ಳಿ- 101
  • ಉಡುಪಿ – 111
  • ವಿಜಯಪುರ –68

ಗಾಳಿ ಗುಣಮಟ್ಟ ತಿಳಿಯುವುದು ಹೇಗೆ?

  • ಉತ್ತಮ- 0-50
  • ಮಧ್ಯಮ – 50-100
  • ಕಳಪೆ – 100-150
  • ಅನಾರೋಗ್ಯಕರ – 150-200
  • ಗಂಭೀರ – 200 – 300
  • ಅಪಾಯಕಾರಿ – 300 -500+

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಚೈತ್ರಾ ಪತಿಯಿಂದಲೂ ಕಿರುಕುಳ ಉಂಟಾಗಿದೆ; ತಂದೆಯ ಆರೋಪ – Kannada News | Chaithra Kundapura Father Alleges her Husband Also gave Harassment

ಚೈತ್ರಾ ಕುಂದಾಪುರ ಅವರ ತಂದೆ ಕೋರ್ಟ್ ಹೋಗಿದ್ದರು ಮತ್ತು ಮಗಳಿಂದ ಕಿರುಕುಳ ಆಗುತ್ತದೆ ಎಂದಿದ್ದರು. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಪೊಲೀಸರಿಗೆ ಕೋರ್ಟ್ ಸೂಚಿಸಿದೆ. ಈಗ ಚೈತ್ರಾ ತಂದೆ ಮಾತನಾಡಿದ್ದು, ‘ನನಗೆ ಚೈತ್ರಾ ಪತಿ ಶ್ರೀಕಾಂತ್ ಅವರಿಂದಲೂ ಕಿರುಕುಳ ಆಗುತ್ತಿದೆ’ ಎಂದು ಹೇಳಿದನ್ನು ಕಾಣಬಹುದು.

 

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ದೇಶೀಯ ಏಕದಿನ ಟೂರ್ನಿಗೆ ದೆಹಲಿ, ಮುಂಬೈ ತಂಡಗಳು ಪ್ರಕಟ

Source link

‘ಕಿಂಗ್’ ಸಿನಿಮಾ ಬಿಡುಗಡೆಗೂ ಮುನ್ನವೇ ಹಾಡು ಸೋರಿಕೆ? – Kannada News | Shah Rukh Khan And Deepika Padukone King Movie AI Video Goes viral

‘ಕಿಂಗ್’ ಚಿತ್ರದಲ್ಲಿ ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ. ‘ಓಂ ಶಾಂತಿ ಓಂ’, ‘ಚೆನ್ನೈ ಎಕ್ಸ್‌ಪ್ರೆಸ್’, ‘ಪಠಾಣ್’ ಮತ್ತು‘ ಹ್ಯಾಪಿ ನ್ಯೂ ಇಯರ್’ ಚಿತ್ರಗಳಲ್ಲಿ ಇವರು ಒಟ್ಟಿಗೆ ನಟಿಸಿದ್ದಾರೆ.‘ಜವಾನ್’ ಸಿನಿಮಾದಲ್ಲೂ ಶಾರುಖ್-ದೀಪಿಕಾ ಕಾಂಬಿನೇಷನ್ ಇದೆ. ಈ ಜೋಡಿ ‘ಕಿಂಗ್’ ಚಿತ್ರಕ್ಕಾಗಿ ಮತ್ತೆ ಒಂದಾಗಿದ್ದಾರೆ. ಈ ಚಿತ್ರದ ಹಾಡಿನ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ವೀಡಿಯೊ ಕಿಂಗ್ ಚಿತ್ರದ ಸೋರಿಕೆಯಾದ ಹಾಡು ಎಂದು ಹೇಳಲಾಗುತ್ತಿದೆ. ಆದರೆ, ಇದರ ಅಸಲಿಯತ್ತ ಬೇರೆಯೇ ಇದೆ.

ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಅವರ ರೊಮ್ಯಾಂಟಿಕ್ ಹಾಡು ಗಮನ ಸೆಳೆದಿದೆ. ಇವರು ಡ್ಯಾನ್ಸ್ ಮಾಡುತ್ತಿದ್ದು ಹಿನ್ನೆಲೆಯಲ್ಲಿ ಒಂದು ಹಾಡು ಪ್ಲೇ ಆಗುತ್ತಿದೆ. ಇಬ್ಬರ ನಡುವಿನ ಚುಂಬನ ದೃಶ್ಯವೂ ವೀಡಿಯೊದಲ್ಲಿ ಕಂಡುಬರುತ್ತದೆ. ಈ ಕಾರಣದಿಂದಾಗಿ, ಸೋರಿಕೆಯಾದ ಈ ವೀಡಿಯೊ ನಿಜವಾಗಿಯೂ ‘ಕಿಂಗ್’ ಚಿತ್ರದ್ದೇ ಎಂದು ಅಭಿಮಾನಿಗಳಲ್ಲಿ ಗೊಂದಲ ಉಂಟಾಗಿದೆ.

ವೈರಲ್ ಆಗಿರುವ ಈ ಕ್ಲಿಪ್‌ನಲ್ಲಿ ಶಾರುಖ್ ಹಾಗೂ ದೀಪಿಕಾ ರಿಯಲ್ ಎಂಬಂತೆ ಕಾಣಿಸಿಕೊಂಡಿದ್ದಾರೆ. ವೀಡಿಯೊದ ಟೋನ್ ಸಂಪೂರ್ಣವಾಗಿ ಸಿನಿಮೀಯ ಮತ್ತು ರೋಮ್ಯಾಂಟಿಕ್ ಆಗಿದೆ. ಇದು ಕಿಂಗ್ ಚಿತ್ರದ ಸೋರಿಕೆಯಾದ ಹಾಡು ಎಂದು ಹಲವರು ಭಾವಿಸುತ್ತಿದ್ದಾರೆ. ಆದಾಗ್ಯೂ, ಈ ವೀಡಿಯೊ ಯಾವುದೇ ರೀತಿಯಲ್ಲಿ ‘ಕಿಂಗ್’ ಚಿತ್ರದ ಭಾಗವಲ್ಲ. ಇದು AI- ರಚಿತವಾದ ಫ್ಯಾನ್ ಎಡಿಟ್ ಮಾಡಿದ ವೀಡಿಯೊ ಎಂದು ತಿಳಿದುಬಂದಿದೆ. ಇದರಲ್ಲಿ ಶಾರುಖ್ ಖಾನ್ ಅವರ ಸಾಲ್ಟ್ ಆ್ಯಂಡ್ ಪೆಪ್ಪರ್ ಲುಕ್ ‘ಜವಾನ್’ ಚಿತ್ರದಂತೆಯೇ ಕಾಣುತ್ತದೆ. ವೀಡಿಯೊವನ್ನು ನೈಜವಾಗಿ ಕಾಣುವಂತೆ ಮಾಡಲು ತಂತ್ರಜ್ಞಾನವನ್ನು ಬಳಸಿಕೊಂಡು ಇಬ್ಬರ ಮುಖವನ್ನು ಎಡಿಟ್ ಮಾಡಲಾಗಿದೆ.

AI Grok ಸೇರಿದಂತೆ ಹಲವಾರು ಪರಿಕರಗಳು ವೈರಲ್ ವೀಡಿಯೊವನ್ನು ತನಿಖೆ ಮಾಡಿವೆ. ಅವರು ವೀಡಿಯೊ ನಕಲಿ ಮತ್ತು ಅಭಿಮಾನಿಗಳಿಂದ ನಿರ್ಮಿತ ಎಂದು ಹೇಳುತ್ತಾರೆ. ಚಿತ್ರದ ಯಾವುದೇ ಹಾಡುಗಳು ಅಥವಾ ದೃಶ್ಯಗಳು ಸೋರಿಕೆಯಾಗಿಲ್ಲ.

ವೀಡಿಯೊ ಕಾಣಿಸಿಕೊಂಡ ನಂತರ, ಸಾಮಾಜಿಕ ಮಾಧ್ಯಮ ಬಳಕೆದಾರರು ಉತ್ಸಾಹದಿಂದ ಪ್ರತಿಕ್ರಿಯಿಸಿದರು. ಅನೇಕ ಅಭಿಮಾನಿಗಳು ಈ ವೀಡಿಯೊವನ್ನು AI ನಿಂದ ರಚಿಸಲಾಗಿದೆ ಎಂದು ತಕ್ಷಣವೇ ಗುರುತಿಸಿದರು. ಕೆಲವರು ಇದನ್ನು ತಮಾಷೆಯೆಂದು ಕಂಡುಕೊಂಡರೆ, ಇತರರು ಇಂತಹ ನಕಲಿ ವೀಡಿಯೊಗಳ ಬಗ್ಗೆ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು. ತಂತ್ರಜ್ಞಾನದ ಈ ಯುಗದಲ್ಲಿ, ನಿಜವಾದ ಮತ್ತು ನಕಲಿ ನಡುವೆ ವ್ಯತ್ಯಾಸವನ್ನು ಕಂಡುಹಿಡಿಯುವುದು ಹೆಚ್ಚು ಕಷ್ಟಕರವಾಗುತ್ತಿದೆ ಎಂದು ಜನರು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version