ಗಣಂಗೂರು ಟೋಲ್‌ನಲ್ಲಿ ಗೂಂಡಾವರ್ತನೆ: ಫಾಸ್ಟ್‌ಟ್ಯಾಗ್‌ನಲ್ಲಿ ಹಣವಿಲ್ಲದ್ದಕ್ಕೆ ಯುವಕನಿಗೆ ಹಿಗ್ಗಾಮುಗ್ಗಾ ಥಳಿತ!
ಮಂಡ್ಯ, ಏಪ್ರಿಲ್ 10: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ವೇಯಲ್ಲಿ ಶ್ರೀರಂಗಪಟ್ಟಣ ತಾಲೂಕಿನ ಗಣಂಗೂರು ಟೋಲ್ ಸಿಬ್ಬಂದಿ ಯುವಕನ ಮೇಲೆ ಹಲ್ಲೆ ನಡೆಸಿ ಗೂಂಡಾವರ್ತನೆ ತೋರಿದ್ದಾರೆ. ಫಾಸ್ಟ್‌ಟ್ಯಾಗ್‌ನಲ್ಲಿ ಹಣ ಖಾಲಿಯಾದ ಕಾರಣಕ್ಕೆ ಉಂಟಾದ ಮಾತಿನ ಚಕಮಕಿ ವಿಕೋಪಕ್ಕೆ ಹೋಗಿ, ಮಹೇಶ್ ಎಂಬ ಯುವಕನಿಗೆ ಟೋಲ್ ಸಿಬ್ಬಂದಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಎರಡು ದಿನದ ಹಿಂದೆ ಮಹೇಶ್ ತನ್ನ ಸ್ನೇಹಿತರೊಂದಿಗೆ ಕಾರಿನಲ್ಲಿ ಬರುತ್ತಿದ್ದಾಗ ಫಾಸ್ಟ್‌ಟ್ಯಾಗ್‌ನಲ್ಲಿ ಹಣವಿಲ್ಲದಿರುವುದು ಗೊತ್ತಾಗಿತ್ತು. ಈ ವೇಳೆ ಯುವಕ ತನ್ನ ಪರಿಚಿತರಿಗೆ ಕರೆ ಮಾಡಿ ಮಾತಾಡುವುದಾಗಿ ಹೇಳಿದರೂ ಕೇಳದ ಸಿಬ್ಬಂದಿ,…