IND vs ZIM: ವಿಶ್ವಕಪ್ ಫೈನಲ್‌ನಲ್ಲಿ 175 ರನ್! ಮತ್ತೆ ಅಬ್ಬರಿಸ್ತಾರಾ ವೈಭವ್?

Source link

ಪ್ರಧಾನಿ ಮೋದಿ ನಿವಾಸದಲ್ಲಿ ಉನ್ನತ ಮಟ್ಟದ ಸಭೆ; ವಿಕಸಿತ ಭಾರತ ಸೇರಿ ಪ್ರಮುಖ ವಿಷಯಗಳ ಚರ್ಚೆ – Kannada News | PM Narendra Modi Chairs High Level Meeting with Secretaries in His Residence

ನವದೆಹಲಿ, ಜುಲೈ 22: ವಿಕಸಿತ ಭಾರತ ನಿರ್ಮಾಣದ ಕನಸು ದೇಶದ ಪ್ರತಿಯೊಬ್ಬ ನಾಗರಿಕನ ಜನಾಂದೋಲನವಾಗಬೇಕು. ಈ ದೃಷ್ಟಿಕೋನಕ್ಕೆ ದೇಶದ ಯುವಜನತೆಯೇ ಪ್ರಮುಖ ತಳಹದಿಯಾಗಬೇಕು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ (PM Narendra Modi) ಅವರು ಪ್ರತಿಪಾದಿಸಿದ್ದಾರೆ. ಸರ್ಕಾರದ ಪ್ರತಿಯೊಂದು ಸುಧಾರಣೆಗಳ ಕೇಂದ್ರಬಿಂದು ಸಾರ್ವಜನಿಕರ ಕ್ಷೇಮಾಭಿವೃದ್ಧಿಯೇ ಆಗಿರಬೇಕು ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಇಂದು ತಮ್ಮ ಅಧಿಕೃತ ನಿವಾಸದಲ್ಲಿ ವಿವಿಧ ಸಚಿವಾಲಯಗಳ ಕಾರ್ಯದರ್ಶಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಈ ಬಗ್ಗೆ ತಿಳಿಸಿದ್ದಾರೆ.

ನವದೆಹಲಿಯಲ್ಲಿ ವಿಕಸಿತ ಭಾರತದ ಗುರಿಗಳಿಗೆ ಸಂಬಂಧಿಸಿದಂತೆ ಗ್ರಾಮೀಣಾಭಿವೃದ್ಧಿ, ಕೃಷಿ, ಸಾಮಾಜಿಕ ಕಲ್ಯಾಣ ಹಾಗೂ ಸಂಯೋಜಿತ ವಲಯಗಳ ಪ್ರಗತಿಯನ್ನು ಪರಿಶೀಲಿಸಲು ನಡೆಸಿದ ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿ ಪ್ರಧಾನಿ ಮೋದಿ ಮಾತನಾಡಿದರು. ಈ ಸಭೆಯಲ್ಲಿ ಸಂಪುಟ ಕಾರ್ಯದರ್ಶಿ, ಪ್ರಮುಖ ಸಚಿವಾಲಯಗಳ ಕಾರ್ಯದರ್ಶಿಗಳು ಹಾಗೂ ಪ್ರಧಾನಮಂತ್ರಿ ಕಚೇರಿಯ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

ಇದನ್ನೂ ಓದಿ: ಸಂಸತ್ ಮುಂಗಾರು ಅಧಿವೇಶನ: ಯುವಶಕ್ತಿ, ಬಾಹ್ಯಾಕಾಶ ಸಾಧನೆ, ದೇಶದ ಆರ್ಥಿಕ ಪ್ರಗತಿ ಶ್ಲಾಘಿಸಿದ ಪ್ರಧಾನಿ ಮೋದಿ

ಬದಲಾಗುತ್ತಿರುವ ಸನ್ನಿವೇಶಗಳಿಗೆ ಅನುಗುಣವಾಗಿ ಆಡಳಿತ ವ್ಯವಸ್ಥೆಗಳು ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು ಎಂದು ಪ್ರಧಾನಿ ಸೂಚಿಸಿದರು. ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳಲ್ಲಿ ಹೊಸ ಅಗತ್ಯಗಳನ್ನು ಗುರುತಿಸಿ ಅವುಗಳ ಮೇಲೆ ಸಮಗ್ರ ನಕ್ಷೆ ರೂಪಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ದೇಶದ ಅಭಿವೃದ್ಧಿ ಗುರಿಗಳನ್ನು ಸಾಧಿಸಲು ಸಂಪೂರ್ಣ ಸರ್ಕಾರದ ವಿಧಾನವು ಅತ್ಯಗತ್ಯ ಎಂದು ಮೋದಿ ಹೇಳಿದರು. ಯುವಜನರು ಪ್ರಮುಖ ಪಾತ್ರ ವಹಿಸಬೇಕಾದ ವಿಕಸಿತ ಭಾರತದ ಗುರಿಯನ್ನು ಜನರ ಚಳುವಳಿಯಾಗುವಂತೆ ಅವರು ಕರೆ ನೀಡಿದರು. ಯುವಜನರಲ್ಲಿ ಹೆಚ್ಚುತ್ತಿರುವ ಮಾದಕ ದ್ರವ್ಯ ಸೇವನೆಯ ಬಗ್ಗೆಯೂ ಪ್ರಧಾನಿ ಕಳವಳ ವ್ಯಕ್ತಪಡಿಸಿದರು.

ಜನಕೇಂದ್ರಿತ ಸುಧಾರಣೆಗಳು:

ಈ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಜನರ ಅಗತ್ಯಗಳಿಗೆ ಅನುಗುಣವಾಗಿ ರೂಪಿಸಲಾದ ಸುಧಾರಣೆಗಳು ನೈಜ ವೇಗವನ್ನು ಪಡೆದುಕೊಳ್ಳಬೇಕು ಮತ್ತು ಸಮಾಜದಲ್ಲಿ ಅರ್ಥಪೂರ್ಣ ಬದಲಾವಣೆಯನ್ನು ತರಬೇಕು ಎಂದರು. “ಸುಧಾರಣೆಗಳ ಮುಖ್ಯ ಉದ್ದೇಶ ಕೇವಲ ಸರ್ಕಾರದ ಕಾರ್ಯಾಚರಣೆಯನ್ನು ಸುಧಾರಿಸುವುದು ಮಾತ್ರವಲ್ಲ, ಬದಲಿಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಪ್ರಯಾಣವನ್ನು ವೇಗಗೊಳಿಸುವುದಾಗಿದೆ” ಎಂದು ಮೋದಿ ಹೇಳಿದ್ದಾರೆ.

ಇಂದು ‘ಕ್ರೀಡಾ ಪ್ರವಾಸೋದ್ಯಮ’ ಒಂದು ಪ್ರಮುಖ ಕ್ಷೇತ್ರವಾಗಿ ಹೊರಹೊಮ್ಮುತ್ತಿದ್ದು, ಭಾರತವನ್ನು ಜಾಗತಿಕ ಕ್ರೀಡಾ ಕೇಂದ್ರವನ್ನಾಗಿ ಮಾಡಲು ದೇಶವು ಪ್ರಮುಖ ಅಂತಾರಾಷ್ಟ್ರೀಯ ಕ್ರೀಡಾಕೂಟಗಳನ್ನು ಆಯೋಜಿಸುವ ಗುರಿ ಹೊಂದಬೇಕು. ಕ್ರೀಡಾ ಕ್ಷೇತ್ರದಲ್ಲಿ ತಂತ್ರಜ್ಞಾನವನ್ನು ಉತ್ತೇಜಿಸುವ ಮತ್ತು ‘ಸ್ಟಾರ್ಟ್‌ಅಪ್‌ಗಳ’ ಮೂಲಕ ನಾವೀನ್ಯತೆಯನ್ನು ಪೋಷಿಸುವ ಅಗತ್ಯತೆಯ ಬಗ್ಗೆಯೂ ಮೋದಿ ಮಾತನಾಡಿದರು.

ಇದನ್ನೂ ಓದಿ: ಪ್ರಶ್ನೆಪತ್ರಿಕೆ ಸೋರಿಕೆ ತಡೆಯುವುದು ಕೇವಲ ಸರ್ಕಾರದ ಜವಾಬ್ದಾರಿಯಲ್ಲ, ರಾಷ್ಟ್ರೀಯ ಜವಾಬ್ದಾರಿ: ಎನ್​ಡಿಎ ಸಭೆಯಲ್ಲಿ ಮೋದಿ

ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಪ್ರಧಾನಿ ಮೋದಿ, ಪಿಎಂ ಕುಸುಮ್ ಯೋಜನೆಯಂತಹ ಕಾರ್ಯಕ್ರಮಗಳನ್ನು ರೈತರು ವ್ಯಾಪಕವಾಗಿ ಅಳವಡಿಸಿಕೊಳ್ಳುವುದರಿಂದ ಕೃಷಿ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತರಬಹುದು ಎಂದರು. ಭಾರತೀಯ ಯುವಕರಿಗೆ ಅಂತರರಾಷ್ಟ್ರೀಯ ಮಟ್ಟದ ಅವಕಾಶಗಳು ಮತ್ತು ಭವಿಷ್ಯದ ಅಗತ್ಯತೆಗಳಿಗೆ ಅನುಗುಣವಾಗಿ ತರಬೇತಿ ನೀಡಲು, ಜಾಗತಿಕ ಮಟ್ಟದಲ್ಲಿ ಕೌಶಲ್ಯ ಅಗತ್ಯಗಳ ಮ್ಯಾಪಿಂಗ್ ನಡೆಸುವುದು ಅತ್ಯಗತ್ಯ ಎಂದು ಪ್ರಧಾನಿ ಮೋದಿ ಸಭೆಯಲ್ಲಿ ಸ್ಪಷ್ಟಪಡಿಸಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಇನ್ಮುಂದೆ ಫುಟ್‌ಪಾತ್‌ನಲ್ಲಿ ಬೈಕ್ ಓಡಿಸಿದ್ರೆ 5 ಸಾವಿರ ರೂ ದಂಡ! ಸಾರಿಗೆ ಸಚಿವರಿಗೆ ಕೃಷ್ಣಬೈರೇಗೌಡ ಪತ್ರ – Kannada News | Bengaluru Hikes Fine for Riding Bikes on Footpaths to 5,000 to Improve Pedestrian Safety

ಪೊಲೀಸ್ ಅಧಿಕಾರಿಗಳ ಜೊತೆಗೆ ಸಚಿವ ಕೃಷ್ಣಬೈರೇಗೌಡ ಸಭೆImage Credit source: tv9 kannada

ಬೆಂಗಳೂರು, ಜುಲೈ 22: ನಗರದ ಫುಟ್​​ಪಾತ್​​ನಲ್ಲಿ (Footpath) ಬೈಕ್​ ಓಡಿಸುವವರಿಗೆ ವಿಧಿಸಲಾಗುತ್ತಿದ್ದ 500 ರೂ ದಂಡದ ಮೊತ್ತವನ್ನು ಐದು ಸಾವಿರ ರೂಗೆ ಹೆಚ್ಚಿಸುವಂತೆ ಸಾರಿಗೆ ಸಚಿವ ಭೈರತಿ ಸುರೇಶ್​​ಗೆ ಬೆಂಗಳೂರು ನಗರಾಭಿವೃದ್ಧಿ ಇಲಾಖೆ ಸಚಿವ ಕೃಷ್ಣಬೈರೇಗೌಡ (Minister Krishna Byregowda) ಪತ್ರ ಬರೆದಿದ್ದಾರೆ. ಆ ಮೂಲಕ ಫುಟ್‌ಪಾತ್‌ ಶೂರರಿಗೆ ಬಿಗ್ ಶಾಕ್ ನೀಡಲು ರಾಜ್ಯ ಸರ್ಕಾರ ಸಜ್ಜಾಗಿದೆ.

ಫುಟ್‌ಪಾತ್ ಮೇಲೆ ಬೈಕ್ ಓಡಿಸುವವರಿಗೆ ಬಿಸಿ ಮುಟ್ಟಿಸಲು ಮುಂದಾದ ಸರ್ಕಾರ

ಬೆಂಗಳೂರಿನಲ್ಲಿ ಫುಟ್‌ಪಾತ್‌ನಲ್ಲಿ ಬೈಕ್‌ ಓಡಿಸುವವ ಸಂಖ್ಯೆ ಹೆಚ್ಚಾಗುತ್ತಿದೆ. ಫುಡ್‌ ಡೆಲವರಿ ಬಾಯ್‌ಗಳು ನಂಬರ್ ಇಲ್ಲದ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನ ಎಲ್ಲೆಂದರಲ್ಲಿ ನುಗ್ಗಿಸುತ್ತಿದ್ದಾರೆ. ಈ ಸಂಬಂಧ ಟಿವಿ9 ಕೂಡ ಈ ಹಿಂದೆ ರಿಯಾಲಿಟಿ ಚೆಕ್‌ ಮೂಲಕ ಸರ್ಕಾರದ ಕಣ್ಣು ತೆರೆ ಕೆಲಸ ಮಾಡಿತ್ತು. ಇದರ ಇಂಪ್ಯಾಕ್ಟ್ ಎಂಬಂತೆ ಸಚಿವ ಕೃಷ್ಣಬೈರೇಗೌಡ ಅಲರ್ಟ್ ಆಗಿದ್ದು, ಇದೀಗ ಫುಟ್‌ಪಾತ್ ಮೇಲೆ ಬೈಕ್ ಓಡಿಸುವವರಿಗೆ ಬಿಸಿ ಮುಟ್ಟಿಸಲು ಮುಂದಾಗಿದ್ದಾರೆ.

ಪತ್ರದಲ್ಲಿ ಏನಿದೆ? 

‘ಸಾರ್ವಜನಿಕರ ನಡೆಯುವ ಹಕ್ಕನ್ನು ಖಚಿತಪಡಿಸುವ ಸಲುವಾಗಿ ಸುಪ್ರೀಂ ಕೋರ್ಟ್ ಸೂಚನೆಯ ಮೇರೆಗೆ ನಗರದಲ್ಲಿ ಪಾದಾಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಐದು ಪಾಲಿಕೆಯ ವ್ಯಾಪ್ತಿಯಲ್ಲಿ ಒತ್ತುವರಿ ತೆರವು ಕೆಲಸಕ್ಕೆ ಸಾರ್ವಜನಿಕರಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಆದರೆ, ಹೀಗೆ ಬೀದಿಬದಿ ವ್ಯಾಪಾರಿಗಳಿಂದ ತೆರವಾದ ಜಾಗದಲ್ಲಿ ಯಾವುದೇ ರೀತಿಯ ಮೋಟಾರು ವಾಹನಗಳನ್ನು ಚಲಾಯಿಸುವುದು ಸರಿಯಲ್ಲ. ಇಂತಹ ಕೃತ್ಯಗಳನ್ನು ಸಹಿಸಿಕೊಳ್ಳುವುದು ಸಾಧ್ಯವಿಲ್ಲ’ ಎಂದಿದ್ದಾರೆ.

ಇದನ್ನೂ ಓದಿ: ಶಿವಾಜಿನಗರ ಹಲ್ಲೆ ಪ್ರಕರಣ: ಇವರು ಜೀವನೋಪಾಯಕ್ಕಾಗಿ ಕಷ್ಟಪಟ್ಟು ದುಡಿಯುವ ಬಡಜನರಲ್ಲ, ಸಮಾಜಘಾತುಕರು; ಸಚಿವ ಕೃಷ್ಣಭೈರೇಗೌಡ ಕಿಡಿ

‘ವಾಹನ ಸವಾರರು ಯಾವುದೇ ಭಯ ಇಲ್ಲದೆ ಒತ್ತುವರಿ ತೆರವಾಗಿರುವ ಪಾದಾಚಾರಿ ಮಾರ್ಗದಲ್ಲಿ ಚಲಿಸುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಈ ಬಗ್ಗೆ ಹಲವರು ಈಗಾಗಲೇ ನನಗೆ ದೂರು ನೀಡಿದ್ದಾರೆ. ಪಾದಾಚಾರಿ ಮಾರ್ಗದಲ್ಲಿ ವಾಹನ ಚಲಾಯಿಸುವಾಗ ಅಪಘಾತಗಳಾದರೆ ಯಾರು ಹೊಣೆ? ಹೀಗಾಗಿ ಟ್ರಾಫಿಕ್ ಪೊಲೀಸರು ಇಂತಹ ಕೃತ್ಯಗಳಲ್ಲಿ ತೊಡಗುವವರ ವಿರುದ್ಧ ಕಠಿಣ ಕಾನೂನು ಕ್ರಮಗಳನ್ನು ಜರುಗಿಸಬೇಕು. ಅಲ್ಲದೆ, ದಂಡದ ಮೊತ್ತ ಅಧಿಕವಾದರೆ ಮಾತ್ರ ಇಂತಹ ಅಪರಾಧಗಳನ್ನು ತಡೆಯಲು ಸಾಧ್ಯ. ಹೀಗಾಗಿ ಪಾದಾಚಾರಿ ಮಾರ್ಗದಲ್ಲಿ ವಾಹನ ಚಲಾಯಿಸಿದರೆ ಪ್ರಸ್ತುತ ಚಾಲ್ತಿಯಲ್ಲಿರುವ ರೂ.500 ದಂಡವನ್ನು ರೂ.5000ಕ್ಕೆ ಏರಿಸುವಂತೆ ಸಾರಿಗೆ ಇಲಾಖೆಗೆ’ ಪತ್ರದ ಮೂಲಕ ಸಚಿವ ಕೃಷ್ಣಬೈರೇಗೌಡ ಒತ್ತಾಯಿಸಿದ್ದಾರೆ.

‘ಒನ್-ಸೈಡ್ ಪಾರ್ಕಿಂಗ್’ ಕಟ್ಟುನಿಟ್ಟಾಗಿ ಜಾರಿಗೆ ತರಲು ತಾಕೀತು

ಬೆಂಗಳೂರು ನಗರ ಸಂಚಾರಿ ಪೊಲೀಸ್ ಅಧಿಕಾರಿಗಳ ಜೊತೆ ನಡೆಸಿದ ಸಭೆಯಲ್ಲಿ ನಗರದ ಟ್ರಾಫಿಕ್ ಸಮಸ್ಯೆಯ ಕುರಿತು ಸಚಿವ ಕೃಷ್ಣಬೈರೇಗೌಡ ಚರ್ಚೆ ಮಾಡಿದರು. ‘ನಗರದ ಮುಖ್ಯ ರಸ್ತೆಗಳಲ್ಲಿ ವಾಹನ ದಟ್ಟಣೆ ನಿಯಂತ್ರಿಸಲು ಚಾಲ್ತಿಯಲ್ಲಿರುವ “ಆಲ್ಟರ್ನೇಟ್ ಪಾರ್ಕಿಂಗ್” ಅಥವಾ “ಒನ್-ಸೈಡ್ ಪಾರ್ಕಿಂಗ್” ನಿಯಮವನ್ನು ಸವಾರರು ಪಾಲಿಸುತ್ತಿಲ್ಲ ಹಾಗೂ ಅಧಿಕಾರಿಗಳು ಇದನ್ನು ಜಾರಿಗೊಳಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ನಿಯಮ ಪಾಲನೆಗೆ ಹೊಸ ಅಧಿಸೂಚನೆ ಅಗತ್ಯವಿಲ್ಲ ಎಂದ ಸಚಿವರು, ಪರ್ಯಾಯ ಪಾರ್ಕಿಂಗ್ ವ್ಯವಸ್ಥೆ ಕಟ್ಟುನಿಟ್ಟಾಗಿ ಜಾರಿಯಾದರೆ ರಸ್ತೆಯ ಒಂದು ಬದಿಯಲ್ಲಿ ಕನಿಷ್ಠ 7 ರಿಂದ 8 ಅಡಿ ಜಾಗ ಉಳಿಯಲಿದ್ದು, ಸಂಚಾರ ಸುಗಮವಾಗಲಿದೆ. ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಲಕ್ಷಾಂತರ ಕೋಟಿ ರೂ. ಖರ್ಚು ಮಾಡುವ ಮೊದಲು ಪಾರ್ಕಿಂಗ್ ನಿಯಮಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವಂತೆ ಸೂಚಿಸಿದರು’.

ಇದನ್ನೂ ಓದಿ: ಬೆಂಗಳೂರಿನಲ್ಲಿ ಸಚಿವ ಕೃಷ್ಣಭೈರೇಗೌಡ ನೈಟ್ ರೌಂಡ್ಸ್: ಇಂಜಿನಿಯರ್‌ಗಳಿಗೆ ಕ್ಲಾಸ್

ಸಿಗ್ನಲ್‌ಗಳ ತೀರಾ ಹತ್ತಿರದಲ್ಲಿ ಬಿಎಂಟಿಸಿ ಬಸ್ ಸೇರಿದಂತೆ ಇತರೆ ವಾಹನಗಳನ್ನು ನಿಲ್ಲಿಸುವುದರಿಂದ ಟ್ರಾಫಿಕ್ ಜಾಮ್ ಹೆಚ್ಚಾಗುತ್ತಿದೆ. ಹೀಗಾಗಿ ಸಿಗ್ನಲ್‌ಗಳಿಂದ ಕನಿಷ್ಠ 75 ಮೀಟರ್ ಹಾಗೂ ಜಂಕ್ಷನ್‌ಗಳಿಂದ 50 ಮೀಟರ್ ಅಂತರದಲ್ಲಿ ಬಸ್ ನಿಲ್ದಾಣಗಳು ಇರಬೇಕು. ನಿಯಮಕ್ಕೆ ವಿರುದ್ಧವಾಗಿ ಸಿಗ್ನಲ್ ಸಮೀಪವಿರುವ ಬಸ್ ನಿಲ್ದಾಣಗಳನ್ನು ತಕ್ಷಣವೇ ಬೇರೆಡೆಗೆ ಸ್ಥಳಾಂತರಿಸುವಂತೆ ಅಧಿಕಾರಿಗಳಿಗೆ ಸಚಿವ ಕೃಷ್ಣಬೈರೇಗೌಡ ಸೂಚಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.  

Published On – 9:57 pm, Wed, 22 July 26

Source link

ಅತಿಯಾಗಿ ಟಿವಿ ನೋಡ್ತೀರಾ?: ನಿಮ್ಮ ಮೆದುಳು ಕುಗ್ಗಬಹುದು ಹುಷಾರ್!; ಸಂಶೋಧನೆಯಲ್ಲಿ ಬೆಚ್ಚಿಬೀಳಿಸುವ ಸತ್ಯ – Kannada News | Too Much TV? Protect Your Brain: How Screen Time Harms Middle Aged Minds

ಬೆಂಗಳೂರು, ಜು.22: ಹೆಚ್ಚು ಟಿವಿ ನೋಡಬೇಡ, ಮೆದುಳು ಹಾಳಾಗುತ್ತದೆ ಎಂದು ಹಿರಿಯರು ಹೇಳುತ್ತಿದ್ದ ಮಾತುಗಳನ್ನು ನಾವು ಇದುವರೆಗೆ ಕೇವಲ ತಮಾಷೆ ಅಥವಾ ಅತಿಯಾದ ಎಚ್ಚರಿಕೆ ಎಂದು ತಳ್ಳಿಹಾಕುತ್ತಿದ್ದೆವು. ಆದರೆ, ಈ ಹಳೆಯ ಮಾತಿನಲ್ಲಿ ನಿಜವಾದ ಸತ್ಯಾಂಶವಿದೆ ಎಂಬುದನ್ನು ವಿಜ್ಞಾನಿಗಳು ಈಗ ಕಂಡುಕೊಂಡಿದ್ದಾರೆ!

ಮಧ್ಯ ವಯಸ್ಸಿನಲ್ಲಿ ಅತಿಯಾಗಿ ಟಿವಿ ನೋಡುವ ಅಭ್ಯಾಸವು ವಯಸ್ಸಾದಂತೆ ನೆನಪಿನ ಶಕ್ತಿ, ಕಲಿಕೆ ಮತ್ತು ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವನ್ನು ನಿಯಂತ್ರಿಸುವ ಮೆದುಳಿನ ಭಾಗಗಳನ್ನು ಕುಗ್ಗಿಸುತ್ತದೆ ಎಂದು ಹೊಸ ವೈಜ್ಞಾನಿಕ ಅಧ್ಯಯನವೊಂದು ಎಚ್ಚರಿಸಿದೆ.

ಈ ಬಗ್ಗೆ ಅಧ್ಯಯನ ಹೇಳುವುದೇನು?:

ಈ ವಿಚಾರದ ಬಗ್ಗೆ’ಆಲ್ಝೈಮರ್ಸ್ ಆಂಡ್ ಡಿಮೆನ್ಷಿಯಾ’ಎಂಬ ಜಾಗತಿಕ ನಿಯತಕಾಲಿಕೆಯಲ್ಲಿ ಈ ಅಧ್ಯಯನ ಪ್ರಕಟವಾಗಿದೆ. ಸಂಶೋಧಕರು ಮಧ್ಯವಯಸ್ಸಿನ ಸುಮಾರು 1,700 ವ್ಯಕ್ತಿಗಳ ಟಿವಿ ನೋಡುವ ಅಭ್ಯಾಸಗಳನ್ನು ವಿಶ್ಲೇಷಿಸಿ, 20 ವರ್ಷಗಳ ನಂತರ ಅವರ ಮೆದುಳಿನ MRI ಸ್ಕ್ಯಾನ್‌ಗಳನ್ನು ಪರಿಶೀಲಿಸಿದರು.

‘ಅತಿಯಾಗಿ’ ಟಿವಿ ನೋಡುವವರಲ್ಲಿ ಕಂಡುಬಂದ ಆತಂಕಕಾರಿ ಬದಲಾವಣೆಗಳು

ವಿರಳವಾಗಿ ಅಥವಾ ಕಮ್ಮಿ ಟಿವಿ ನೋಡುವವರಿಗೆ ಹೋಲಿಸಿದರೆ, ಅತಿಯಾಗಿ ಟಿವಿ ನೋಡುವ ಅಭ್ಯಾಸ ಹೊಂದಿದ್ದವರಲ್ಲಿ ಈ ಕೆಳಗಿನ ಪ್ರಮುಖ ವ್ಯತ್ಯಾಸಗಳು ಕಂಡುಬಂದಿವೆ.

  • ನೆನಪಿನ ಶಕ್ತಿ ಕುಸಿತ: ನೆನಪುಗಳನ್ನು ರೂಪಿಸುವ ಮೆದುಳಿನ ಭಾಗಗಳ ಗಾತ್ರ ಕಡಿಮೆಯಾಗಿದೆ.
  • ಫ್ರಂಟಲ್ ಲೋಬ್ ಕುಗ್ಗುವಿಕೆ: ಯೋಜನೆ, ನಿರ್ಧಾರ ಕೈಗೊಳ್ಳುವುದು ಹಾಗೂ ಸಮಸ್ಯೆ ಬಗೆಹರಿಸುವಿಕೆಗೆ ನೆರವಾಗುವ ‘ಫ್ರಂಟಲ್ ಲೋಬ್’ (Frontal Lobe) ಗಾತ್ರ ಸಣ್ಣದಾಗಿದೆ.
  • ಆಕ್ಸಿಪಿಟಲ್ ಲೋಬ್ ಮೇಲೆ ಪರಿಣಾಮ: ದೃಶ್ಯಗಳನ್ನು ವಿಶ್ಲೇಷಿಸುವ ‘ಆಕ್ಸಿಪಿಟಲ್ ಲೋಬ್’ (Occipital Lobe) ಭಾಗದ ಪ್ರಮಾಣವೂ ಕಡಿಮೆಯಾಗಿದೆ.
  • ವೈಟ್ ಮ್ಯಾಟರ್ ಹಾನಿ: ವೃದ್ಧಾಪ್ಯ, ಪಾರ್ಶ್ವವಾಯು (Stroke), ಜ್ಞಾಪಕಶಕ್ತಿ ನಷ್ಟ ಹಾಗೂ ಡಿಮೆನ್ಷಿಯಾಗೆ (Dementia) ಕಾರಣವಾಗುವ ‘ವೈಟ್ ಮ್ಯಾಟರ್’ ಹಾನಿಯ ಪ್ರಮಾಣ ಹೆಚ್ಚಾಗಿರುವುದು ಕಂಡುಬಂದಿದೆ.

ಈ ಅಧ್ಯಯನದ ಅತ್ಯಂತ ಕುತೂಹಲಕಾರಿ ಅಂಶವೆಂದರೆ , ಬರಿ ಕೂತು ಕೆಲಸ ಮಾಡುವುದು ಈ ಸಮಸ್ಯೆಗೆ ಮುಖ್ಯ ಕಾರಣವಲ್ಲ. ಉದಾಹರಣೆಗೆ, ಕಚೇರಿಯಲ್ಲಿ ದೀರ್ಘಕಾಲ ಕುಳಿತು ಏಕಾಗ್ರತೆ ಅಥವಾ ಮಾನಸಿಕ ಶ್ರಮದ ಕೆಲಸ ಮಾಡುವವರಲ್ಲಿ ಈ ರೀತಿಯ ಮೆದುಳಿನ ಕುಗ್ಗುವಿಕೆ ಕಂಡುಬಂದಿಲ್ಲ. ಅಂದರೆ, ಕೇವಲ ಒಂದೇ ಕಡೆ ಕೂತಿರುವುದಕ್ಕಿಂತ ‘ನಿಷ್ಕ್ರಿಯ ಸ್ಕ್ರೀನ್ ಟೈಮ್’ ಅಂದರೆ ಯಾವುದೇ ಮಾನಸಿಕ ಕಸರತ್ತಿಲ್ಲದೆ ಸುಮ್ಮನೆ ಟಿವಿ ನೋಡುವುದು ಮೆದುಳಿಗೆ ಹೆಚ್ಚು ಹಾನಿಕರ ಎಂದು ವಿಜ್ಞಾನಿಗಳು ಸ್ಪಷ್ಟಪಡಿಸಿದ್ದಾರೆ. ಓದುವುದು, ಹೊಸ ವಿಷಯಗಳನ್ನು ಕಲಿಯುವುದು ಅಥವಾ ಸಂಭಾಷಣೆ ನಡೆಸುವುದು ಮೆದುಳಿನ ಹಲವು ಜಾಲಗಳನ್ನು ಸಕ್ರಿಯಗೊಳಿಸುತ್ತದೆ. ಆದರೆ, ಟಿವಿ ವೀಕ್ಷಣೆಗೆ ಮೆದುಳಿನ ಯಾವುದೇ ಸಕ್ರಿಯ ಶ್ರಮದ ಅಗತ್ಯವಿರುವುದಿಲ್ಲ.

ಹಾಗಾದರೆ ಟಿವಿ ನೋಡಿದರೆ ನೆನಪಿನ ಶಕ್ತಿ ಪೂರ್ಣ ಹೊರಟುಹೋಗುತ್ತದೆಯೇ?

ಖಂಡಿತ ಇಲ್ಲ.. ಟಿವಿ ನೋಡುವುದೇ ನೇರವಾಗಿ ಡಿಮೆನ್ಷಿಯಾಗೆ ಕಾರಣ ಎಂದು ಈ ಅಧ್ಯಯನ ಸಂಪೂರ್ಣವಾಗಿ ದೃಢಪಡಿಸಿಲ್ಲ. ಬದಲಿಗೆ, ಇದು ಟಿವಿ ವೀಕ್ಷಣೆ ಮತ್ತು ಮೆದುಳಿನ ಗಾತ್ರ ಕುಗ್ಗುವಿಕೆಯ ನಡುವಿನ ಸಂಬಂಧವನ್ನು ತೋರಿಸಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ದೈಹಿಕ ಚಟುವಟಿಕೆ, ಉತ್ತಮ ಆಹಾರ ಪದ್ಧತಿ, ರಕ್ತದೊತ್ತಡ, ನಿದ್ರೆ, ಹಾಗೂ ಸಾಮಾಜಿಕ ಒಡನಾಟಗಳು ಸಹ ಮೆದುಳಿನ ಆರೋಗ್ಯದ ಮೇಲೆ ಪ್ರಭಾವ ಬೀರುತ್ತವೆ.

ಇದನ್ನೂ ಓದಿ: ಪ್ರಾಡಕ್ಟ್ ಲೇಬಲ್ ಓದದೆಯೇ ಖರೀದಿಸುವ ಅಭ್ಯಾಸವಿದ್ದರೆ ಹಿಡನ್ ಶುಗರ್ ಹೆಚ್ಚಾಗಬಹುದು ಎಚ್ಚರ!

ಮೆದುಳನ್ನು ಚುರುಕಾಗಿಡಲು ತಜ್ಞರ ಸಲಹೆಗಳು:

ವಯಸ್ಸಾದ ಮೇಲೆಯೂ ಮೆದುಳಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಮಧ್ಯವಯಸ್ಸಿನ ಅವಧಿ ಅತ್ಯಂತ ನಿರ್ಣಾಯಕ. ಓದುವುದು, ಒಗಟು/ಸುಡೋಕು ಬಿಡಿಸುವುದು, ಹೊಸ ಭಾಷೆ ಅಥವಾ ವಾದ್ಯಗಳನ್ನು ಕಲಿಯುವುದು. ಒಟ್ಟಿನಲ್ಲಿ ಬುದ್ಧಿಗೆ ಕೆಲಸ ಕೊಡಿ. ಸ್ವಲ್ಪ ದೈಹಿಕ ಚಟುವಟಿಕೆಯಿಂದ ಇರಬೇಕು. ಪ್ರತಿದಿನ ಕನಿಷ್ಠ ವ್ಯಾಯಾಮ ಅಥವಾ ವಾಕಿಂಗ್ ಮಾಡುವುದು. ಜತೆಗೆ ಸಂವಹನವನ್ನು ಮಾಡಿ, ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ಅರ್ಥಪೂರ್ಣವಾಗಿ ಮಾತನಾಡುವುದು.

ಆರೋಗ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನಟಿ ಪ್ರಿಯಾಂಕಾ ಉಪೇಂದ್ರ 50ನೇ ಸಿನಿಮಾ ‘ಡಿಟೆಕ್ಟಿವ್ ತೀಷ್ಣ’; ಏನಿದರ ಕಥೆ? – Kannada News | Kannada actress Priyanka Upendra talks about her 50th movie Detective Teekshana

ಖ್ಯಾತ ನಟಿ ಪ್ರಿಯಾಂಕಾ ಉಪೇಂದ್ರ (Priyanka Upendra) ಅವರು ‘ಡಿಟೆಕ್ಟಿವ್ ತೀಷ್ಣ’ ಸಿನಿಮಾದಲ್ಲಿ ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ. ಇದು ಪ್ರಿಯಾಂಕಾ ನಟನೆಯ 50ನೇ ಸಿನಿಮಾ ಎಂಬುದು ವಿಶೇಷ. ಈ ಚಿತ್ರದಲ್ಲಿ ಪತ್ತೇದಾರಿ ಪಾತ್ರ ಮಾಡಿರುವುದು ಪ್ರಿಯಾಂಕಾ ಪಾಲಿಗೆ ಖುಷಿ ತಂದಿದೆ. ಆ ಬಗ್ಗೆ ಅವರು ಟಿವಿ9 ಜೊತೆ ಮಾತನಾಡಿದ್ದಾರೆ. ‘ನನಗೆ ಬಹಳ ಖುಷಿ ಆಗುತ್ತಿದೆ. ಈ ಸಿನಿಮಾದಲ್ಲಿ ಫೈಟ್ಸ್ ಇದೆ. ಅದರ ಜೊತೆಗೆ ಕಥೆ ಬಹಳ ಚೆನ್ನಾಗಿದೆ. ಇದೇ ಮೊದಲ ಬಾರಿಗೆ ಕನ್ನಡದಲ್ಲಿ ಮಹಿಳಾ ಪತ್ತೇದಾರಿ ಕಥೆ ಬರುತ್ತಿದೆ. ಯಾವುದೇ ಸಿನಿಮಾ ಮಾಡುವಾಗ ನನಗೆ ಕಥೆ ಬಹಳ ಮುಖ್ಯ ಆಗುತ್ತದೆ. ಮಹಿಳೆಯರಿಗೆ ಸಂದೇಶ ಮತ್ತು ಸ್ಫೂರ್ತಿ ನೀಡುವಂತಹ ಕಥೆಗಳನ್ನು ನಾನು ಈಗ ಆಯ್ಕೆ ಮಾಡಿಕೊಳ್ಳುತ್ತಿದ್ದೇನೆ. ಆ ರೀತಿಯ ಪಾತ್ರಗಳೇ ಬರಲಿ ಅಂತ ನಾನು ಬಯಸುತ್ತೇನೆ’ ಎಂದು ಪ್ರಿಯಾಂಕಾ ಉಪೇಂದ್ರ ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

‘ಪ್ರಶ್ನೆಪತ್ರಿಕೆ ಸೋರಿಕೆ ಕುರಿತು ಸಂಸತ್​ನಲ್ಲಿ ವಿವರವಾದ ಚರ್ಚೆಗೆ ಸರ್ಕಾರ ಸಿದ್ಧ’; ಜೆ.ಪಿ ನಡ್ಡಾ ಭರವಸೆ – Kannada News | Government ready for detailed discussion on NEET Paper Leak in Parliament Session Union Minsiter JP Nadda says

ನವದೆಹಲಿ, ಜುಲೈ 22: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ (NEET Paper Leak) ಮತ್ತು ವಿದ್ಯಾರ್ಥಿ ಪ್ರತಿಭಟನೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳ ಟೀಕೆಗೆ ಪ್ರತ್ಯುತ್ತರ ನೀಡಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಹಾಗೂ ಕೇಂದ್ರ ಸಚಿವ ಜೆ.ಪಿ. ನಡ್ಡಾ (JP Nadda), “ಈ ಸೂಕ್ಷ್ಮ ವಿಷಯವನ್ನು ಯಾರೂ ರಾಜಕೀಯಗೊಳಿಸಬಾರದು. ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಸಂಸತ್ತಿನಲ್ಲಿ ಈ ವಿಷಯದ ಕುರಿತು ಸುದೀರ್ಘ ಚರ್ಚೆ ನಡೆಸಲು ಸರ್ಕಾರ ಸಂಪೂರ್ಣವಾಗಿ ಸಿದ್ಧವಾಗಿದೆ” ಎಂದು ಸ್ಪಷ್ಟಪಡಿಸಿದ್ದಾರೆ.

ದೆಹಲಿಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿದ ಕೇಂದ್ರ ಆರೋಗ್ಯ ಸಚಿವ ಜೆ.ಪಿ ನಡ್ಡಾ, “ಈ ವಿಷಯದಲ್ಲಿ ರಾಜಕೀಯ ಲಾಭ ಹುಡುಕುವುದು ಸರಿಯಲ್ಲ. ಪ್ರಶ್ನೆಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸುತ್ತಿದ್ದಾರೆ. ಮೊದಲನೆಯದಾಗಿ, ಈ ವಿಷಯವನ್ನು ರಾಜಕೀಯಗೊಳಿಸಬಾರದು ಮತ್ತು ಇದರಿಂದ ರಾಜಕೀಯ ಲಾಭ ಪಡೆಯಲು ಯತ್ನಿಸುವುದು ಸೂಕ್ತವಲ್ಲ ಎಂದು ನಾನು ವಿನಂತಿಸುತ್ತೇನೆ. ಇದೊಂದು ಗಂಭೀರ ಸಮಸ್ಯೆಯಾಗಿದ್ದು, ವಿವರವಾದ ಚರ್ಚೆಯ ಅಗತ್ಯವಿದೆ” ಎಂದಿದ್ದಾರೆ.

ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ:

ವಿಪಕ್ಷ ನಾಯಕ ರಾಹುಲ್ ಗಾಂಧಿ ಸಂಸತ್ತಿನಲ್ಲಿ ಉಲ್ಲೇಖಿಸಿದ 152 ಪೇಪರ್ ಲೀಕ್ ಪ್ರಕರಣಗಳ ಆರೋಪಗಳಿಗೆ ತಿರುಗೇಟು ನೀಡಿದ ಸಚಿವ ಜೆ.ಪಿ ನಡ್ಡಾ ಕಾಂಗ್ರೆಸ್ ನೇತೃತ್ವದ ಯುಪಿ ಸರ್ಕಾರದ ಅವಧಿಯಲ್ಲಿ ನಡೆದ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಗಳ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ.

ಇದನ್ನೂ ಓದಿ: ನೀಟ್ ಅಕ್ರಮ ಖಂಡಿಸಿ ಪ್ರಧಾನಿ ನಿವಾಸದ ಹೊರಗೆ ಕಾಂಗ್ರೆಸ್ ಧರಣಿ; ಮೋದಿ ರಾಜೀನಾಮೆಗೆ ರಾಹುಲ್ ಗಾಂಧಿ, ಖರ್ಗೆ ಒತ್ತಾಯ

“ಇಂಡಿಯ ಮೈತ್ರಿಕೂಟದ ಪಕ್ಷಗಳು ಆಡಳಿತ ನಡೆಸುತ್ತಿರುವ ರಾಜ್ಯಗಳಲ್ಲಿ ನಡೆದ ಪೇಪರ್ ಲೀಕ್‌ಗಳ ಬಗ್ಗೆ ಹಾಗೂ ಯುಪಿಎ ಸರ್ಕಾರದ ಅವಧಿಯಲ್ಲಿ ನಡೆದ ಇಂತಹ ಘಟನೆಗಳ ಬಗ್ಗೆ ರಾಹುಲ್ ಗಾಂಧಿ ಏಕೆ ಮಾತನಾಡುತ್ತಿಲ್ಲ?” ಎಂದು ಅವರು ಪ್ರಶ್ನಿಸಿದರು. ರಾಹುಲ್ ಗಾಂಧಿ ಅವರಿಗೆ ವಿದ್ಯಾರ್ಥಿಗಳಿಗೆ ನ್ಯಾಯ ಸಿಗುವುದು ಅಥವಾ ಅವರ ಬೇಡಿಕೆಗಳಿಗಿಂತ ರಾಜಕೀಯ ಲಾಭ ಪಡೆಯುವುದೇ ಮುಖ್ಯವಾಗಿದೆ ಎಂದು ಆರೋಪಿಸಿದರು.

ಸಂಸತ್ತಿನಲ್ಲಿ ವಿಸ್ತೃತ ಚರ್ಚೆಗೆ ಸರ್ಕಾರ ಸಿದ್ಧ:

“ವಿದ್ಯಾರ್ಥಿಗಳ ಭವಿಷ್ಯವು ಅಪಾಯದಲ್ಲಿದೆ. ಹೀಗಾಗಿ, ಈ ವಿಷಯವು ಸಂಸತ್ತಿನಲ್ಲಿ ಗಂಭೀರ ಚರ್ಚೆಗೆ ಅರ್ಹವಾಗಿದೆ. ಈ ಹಿನ್ನೆಲೆಯಲ್ಲಿ ವಿಪಕ್ಷಗಳು ಚರ್ಚೆಗೆ ಎಷ್ಟು ಗಂಟೆಗಳ ಕಾಲಾವಕಾಶವನ್ನು ಕೇಳುತ್ತವೆಯೋ, ಅಷ್ಟು ಸಮಯವನ್ನು ನೀಡಲು ಸರ್ಕಾರ ಸಿದ್ಧವಾಗಿದೆ” ಎಂದು ಜೆಪಿ ನಡ್ಡಾ ತಿಳಿಸಿದರು.

ಇದನ್ನೂ ಓದಿ: ಕೇಂದ್ರ ಸಚಿವ ಜೆ.ಪಿ. ನಡ್ಡಾಗೆ 3 ಬೇಡಿಕೆ ಸಲ್ಲಿಸಿದ ಸಿಜೆಪಿ ನಾಯಕರು; ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಪಟ್ಟು

ಪರಿಹಾರಕ್ಕೆ ಆದ್ಯತೆ:

ವಿರೋಧ ಪಕ್ಷಗಳ ಇನ್ನೊಂದು ಬೇಡಿಕೆಯಾದ ಆತ್ಮಹತ್ಯೆ ಮಾಡಿಕೊಂಡ ನೀಟ್ ಪರೀಕ್ಷಾರ್ಥಿಗಳ ಕುಟುಂಬಕ್ಕೆ ಪರಿಹಾರ ನೀಡುವ ಬಗ್ಗೆಯೂ ಮಾತನಾಡಿದ ಜೆ.ಪಿ ನಡ್ಡಾ, “ಎಲ್ಲಾ ರಾಜಕೀಯ ಪಕ್ಷಗಳು ಒಂದಾಗಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು. ವಿದ್ಯಾರ್ಥಿಗಳಿಗೆ ಯಾವುದೇ ಅನ್ಯಾಯವಾಗಲು ಸರ್ಕಾರ ಬಿಡುವುದಿಲ್ಲ ಎಂದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಈ ಸಮಸ್ಯೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು, ಕೇಂದ್ರ ಸರ್ಕಾರವು ಜವಾಬ್ದಾರಿಯುತವಾಗಿ ನಡೆದುಕೊಳ್ಳುತ್ತಿದೆ” ಎಂದು ಸಮರ್ಥಿಸಿಕೊಂಡರು. ಆದರೆ, ವಿರೋಧ ಪಕ್ಷಗಳು ಮತ್ತು ಪ್ರತಿಭಟನಾಕಾರರ ಪ್ರಮುಖ ಮತ್ತು ಮೊದಲ ಬೇಡಿಕೆಯಾದ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಯ ಕುರಿತು ಕೇಂದ್ರ ಸಚಿವ ಜೆ.ಪಿ ನಡ್ಡಾ ಯಾವುದೇ ಪ್ರಸ್ತಾಪವನ್ನೂ ಮಾಡಿಲ್ಲ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

IND vs ZIM: ಸ್ಟಾರ್, ಸೋನಿ, ಹಾಟ್ ಸ್ಟಾರ್​ನಲ್ಲಿ ಪ್ರಸಾರವಾಗಲ್ಲ ಟಿ20 ಸರಣಿ! ಎಲ್ಲಿ ವೀಕ್ಷಿಸಬಹುದು? – Kannada News | India vs Zimbabwe T20 Series: Full Schedule, Live Streaming and Broadcast Channels

ಐರ್ಲೆಂಡ್ ಮತ್ತು ಇಂಗ್ಲೆಂಡ್ ಪ್ರವಾಸಗಳಲ್ಲಿ ಸತತ ಸೋಲುಗಳಿಂದ ನಿರಾಶೆಗೊಂಡಿದ್ದ ಭಾರತ ತಂಡ, ಈಗ ಜಿಂಬಾಬ್ವೆ (India vs Zimbabwe) ಪ್ರವಾಸದೊಂದಿಗೆ ಹೊಸ ಆರಂಭಕ್ಕೆ ಸಿದ್ಧವಾಗಿದೆ. ಮೂರು ಪಂದ್ಯಗಳ ಟಿ20 ಸರಣಿಗಾಗಿ ಟೀಂ ಇಂಡಿಯಾ (Team India) ಹರಾರೆಗೆ ಆಗಮಿಸಿದೆ. ಸರಣಿಯು ಜುಲೈ 23 ರಿಂದ ಪ್ರಾರಂಭವಾಗಲಿದ್ದು, ಎಲ್ಲಾ ಮೂರು ಪಂದ್ಯಗಳು ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನಡೆಯಲಿವೆ. ಈ ಮೂರು ಪಂದ್ಯಗಳ ಆರಂಭದ ಸಮಯ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಅನುಕೂಲಕರವಾಗಿದ್ದರೂ, ಈ ಪಂದ್ಯವನ್ನು ವೀಕ್ಷಿಸಲು ಮಾತ್ರ ಅಭಿಮಾನಿಗಳು ಚಂದಾದಾರರಾಗಬೇಕಾಗಿದೆ. ಏಕೆಂದರೆ ಈ ಸರಣಿ ಸ್ಟಾರ್ ಸ್ಪೋರ್ಟ್ಸ್, ಸೋನಿ ಸ್ಪೋರ್ಟ್ಸ್ ಹಾಗೂ ಜಿಯೋಹಾಟ್‌ಸ್ಟಾರ್​ನಲ್ಲಿ ಪ್ರಸಾರವಾಗುತ್ತಿಲ್ಲ. ಹಾಗಿದ್ದರೆ ಈ ಸರಣಿಯ ಪಂದ್ಯಗಳನ್ನು ಯಾವ ಚಾನೆಲ್​ನಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ ಎಂಬುದನ್ನು ನೋಡುವುದಾದರೆ..

ಯಾವ ಚಾನೆಲ್​ನಲ್ಲಿ ನೇರಪ್ರಸಾರ?

ಭಾರತ ಮತ್ತು ಜಿಂಬಾಬ್ವೆ ನಡುವಿನ ಟಿ20 ಸರಣಿಯ ಪಂದ್ಯಗಳನ್ನು ಮೇಲೆ ಹೇಳಿದಂತೆ ಸ್ಟಾರ್ ಸ್ಪೋರ್ಟ್ಸ್ ಮತ್ತು ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್‌ಗಳಲ್ಲಿ ಪ್ರಸಾರ ಮಾಡಲಾಗುವುದಿಲ್ಲ. ಅಲ್ಲದೆ, ಜಿಯೋಹಾಟ್‌ಸ್ಟಾರ್ ಮತ್ತು ಸೋನಿ ಲಿವ್‌ನಲ್ಲಿ ನೇರ ಪ್ರಸಾರ ಲಭ್ಯವಿರುವುದಿಲ್ಲ. ಹೀಗಾಗಿ ಅಭಿಮಾನಿಗಳು ಈ ಮೂರು ಪಂದ್ಯಗಳನ್ನು ಫ್ಯಾನ್‌ಕೋಡ್ ಪ್ಲಾಟ್‌ಫಾರ್ಮ್‌ನಲ್ಲಿ ಮಾತ್ರ ಲೈವ್ ಸ್ಟ್ರೀಮಿಂಗ್ ಮೂಲಕ ವೀಕ್ಷಿಸಬಹುದಾಗಿದೆ. ನೀವು ಈ ಪಂದ್ಯಗಳನ್ನು ವೀಕ್ಷಿಸಲು 35 ರೂಗಳ ಚಂದಾದಾರಿಕೆಯನ್ನು ತೆಗೆದುಕೊಳ್ಳಬೇಕಾಗುತ್ತದೆ. ಅಲ್ಲದೆ, ನೀವು ಇದನ್ನು ಟಿವಿಯಲ್ಲಿ ವೀಕ್ಷಿಸಲು ಬಯಸಿದರೆ ಯುನೈಟ್8 ಸ್ಪೋರ್ಟ್ಸ್ ಟಿವಿ ಚಾನೆಲ್ ಮತ್ತು ಡಿಡಿ ಸ್ಪೋರ್ಟ್ಸ್ ಎರಡರಲ್ಲೂ ನೇರಪ್ರಸಾರ ವೀಕ್ಷಿಸಬಹುದು.

3 ಪಂದ್ಯಗಳ ಟಿ20 ಸರಣಿ ವೇಳಾಪಟ್ಟಿ

  • ಭಾರತ vs ಜಿಂಬಾಬ್ವೆ: ಮೊದಲನೇ ಪಂದ್ಯ-ಜುಲೈ 23, ಹರಾರೆ ಸ್ಪೋರ್ಟ್ಸ್ ಕ್ಲಬ್, ಸಂಜೆ 4:30
  • ಭಾರತ vs ಜಿಂಬಾಬ್ವೆ: ಎರಡನೇ ಪಂದ್ಯ-ಜುಲೈ 25, ಹರಾರೆ ಸ್ಪೋರ್ಟ್ಸ್ ಕ್ಲಬ್, ಸಂಜೆ 4:30
  • ಭಾರತ vs ಜಿಂಬಾಬ್ವೆ: ಮೂರನೇ ಪಂದ್ಯ-ಜುಲೈ 26, ಹರಾರೆ ಸ್ಪೋರ್ಟ್ಸ್ ಕ್ಲಬ್, ಸಂಜೆ 4:30

IND vs ZIM: ಭಾರತ- ಜಿಂಬಾಬ್ವೆ ಪಂದ್ಯಕ್ಕೆ ಮಳೆ ಅಡ್ಡಿ? ಹರಾರೆ ಪಿಚ್ ಯಾರಿಗೆ ಸಹಕಾರಿ?

ಭಾರತ ತಂಡ: ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮಾ, ವೈಭವ್ ಸೂರ್ಯವಂಶಿ, ಅಭಿಷೇಕ್ ಶರ್ಮಾ, ಇಶಾನ್ ಕಿಶನ್ (ವಿಕೆಟ್ ಕೀಪರ್), ಪ್ರಭ್ಸಿಮ್ರನ್ ಸಿಂಗ್ (ವಿಕೆಟ್ ಕೀಪರ್), ಶಿವಂ ದುಬೆ, ಸೂರ್ಯಾಂಶ್ ಶೆಡ್ಗೆ, ರಿಂಕು ಸಿಂಗ್, ಹರ್ಷ್ ದುಬೆ, ರವಿ ಬಿಷ್ಣೋಯ್, ಪ್ರಿನ್ಸ್ ಯಾದವ್, ಯಶ್ ಠಾಕೂರ್, ಅಶೋಕ್ ಶರ್ಮಾ, ಮಾಯಾಂಕ್ ಯಾದವ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕತ್ತರಿಸಿದ ಹಣ್ಣುಗಳು ಬೇಗ ಕಪ್ಪಾಗುವುದನ್ನು ತಡೆಯಲು ಇಲ್ಲಿದೆ ಸಿಂಪಲ್ ಟಿಪ್ಸ್ – Kannada News | How to Store Cut Fruits Without Turning Brown: Simple Home Tricks

ಕತ್ತರಿಸಿದ ಹಣ್ಣುಗಳು ಕಪ್ಪಾಗದಂತೆ ತಡೆಯಲು ಟಿಪ್ಸ್Image Credit source: Getty Images

ಹಣ್ಣುಗಳು ಆರೋಗ್ಯಕರ ಆಹಾರದ ಪ್ರಮುಖ ಭಾಗವಾಗಿದ್ದು, ಸೇಬು, ಬಾಳೆಹಣ್ಣು, ಪಿಯರ್, ಅವಕಾಡೊ ಸೇರಿದಂತೆ ಹಲವು ಹಣ್ಣುಗಳನ್ನು ಜನರು ಪ್ರತಿದಿನ ಸೇವಿಸುತ್ತಾರೆ. ಆದರೆ ಈ ಹಣ್ಣುಗಳನ್ನು ಕತ್ತರಿಸಿದ ಕೆಲವೇ ನಿಮಿಷಗಳಲ್ಲಿ ಅವು ಕಂದು ಅಥವಾ ಕಪ್ಪು ಬಣ್ಣಕ್ಕೆ ತಿರುಗುತ್ತವೆ. ಇದನ್ನು ಕಂಡ ಹಲವರು ಹಣ್ಣನ್ನು ತಿನ್ನುವುದನ್ನೇ ಬಿಡುತ್ತಾರೆ. ವಾಸ್ತವದಲ್ಲಿ, ಕತ್ತರಿಸಿದ ಹಣ್ಣುಗಳು ಗಾಳಿಯಲ್ಲಿರುವ ಆಮ್ಲಜನಕದ ಸಂಪರ್ಕಕ್ಕೆ ಬಂದಾಗ ಅವುಗಳಲ್ಲಿ ಇರುವ ಕೆಲವು ನೈಸರ್ಗಿಕ ಸಂಯುಕ್ತಗಳು ಪ್ರತಿಕ್ರಿಯೆಗೊಳಗಾಗುತ್ತವೆ. ಇದನ್ನು ಆಕ್ಸಿಡೇಶನ್ (Oxidation) ಎಂದು ಕರೆಯಲಾಗುತ್ತದೆ. ಈ ಪ್ರಕ್ರಿಯೆಯಿಂದ ಹಣ್ಣಿನ ಬಣ್ಣ ಬದಲಾಗುತ್ತದೆ. ಆದರೆ ಬಣ್ಣ ಬದಲಾಗಿದೆ ಎಂದರೆ ಹಣ್ಣು ಹಾಳಾಗಿದೆ ಎಂದರ್ಥವಲ್ಲ. ಸರಿಯಾದ ವಿಧಾನಗಳನ್ನು ಅನುಸರಿಸಿದರೆ ಕತ್ತರಿಸಿದ ಹಣ್ಣುಗಳ ತಾಜಾತನ ಮತ್ತು ಬಣ್ಣವನ್ನು ಹೆಚ್ಚು ಸಮಯ ಕಾಪಾಡಬಹುದು. ಹಾಗಾದರೆ ಹಣ್ಣು ಕಪ್ಪಾಗುವುದನ್ನು ತಡೆಯಲು ಏನು ಮಾಡಬೇಕು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಹಣ್ಣುಗಳು ಏಕೆ ಕಪ್ಪಾಗುತ್ತವೆ?

ಹಣ್ಣುಗಳನ್ನು ಕತ್ತರಿಸಿದಾಗ ಅವುಗಳ ಕೋಶಗಳು ಒಡೆಯುತ್ತವೆ. ಆಗ ಪಾಲಿಫಿನಾಲ್ ಆಕ್ಸಿಡೇಸ್ (Polyphenol Oxidase – PPO) ಎಂಬ ಎಂಜೈಮ್ ಗಾಳಿಯಲ್ಲಿರುವ ಆಮ್ಲಜನಕದೊಂದಿಗೆ ಪ್ರತಿಕ್ರಿಯಿಸಿ ಕಂದು ಬಣ್ಣದ ವರ್ಣದ್ರವ್ಯಗಳನ್ನು ಉತ್ಪಾದಿಸುತ್ತದೆ. ಇದೇ ಕಾರಣದಿಂದ ಸೇಬು, ಬಾಳೆಹಣ್ಣು, ಪಿಯರ್ ಮತ್ತು ಅವಕಾಡೊ ಹಣ್ಣುಗಳು ಬೇಗ ಬಣ್ಣ ಬದಲಿಸುತ್ತವೆ.

ಹಣ್ಣುಗಳು ಕಪ್ಪಾಗದಂತೆ ತಡೆಯುವ ಸುಲಭ ವಿಧಾನಗಳು

ನಿಂಬೆ ರಸ ಬಳಸಿ: ಸೇಬು, ಬಾಳೆಹಣ್ಣು ಅಥವಾ ಪಿಯರ್ ಹಣ್ಣುಗಳ ಮೇಲೆ ಸ್ವಲ್ಪ ನಿಂಬೆ ರಸವನ್ನು ಹಚ್ಚಿ. ಈ ರೀತಿ ಮಾಡುವುದರಿಂದ ನಿಂಬೆಯಲ್ಲಿರುವ ವಿಟಮಿನ್ ಸಿ ಮತ್ತು ನೈಸರ್ಗಿಕ ಆಂಟಿಆಕ್ಸಿಡೆಂಟ್‌ಗಳು ಆಕ್ಸಿಡೇಶನ್ ಪ್ರಕ್ರಿಯೆಯನ್ನು ನಿಧಾನಗೊಳಿಸಿ ಹಣ್ಣಿನ ಬಣ್ಣವನ್ನು ಕಾಪಾಡಲು ಸಹಾಯ ಮಾಡುತ್ತವೆ. ಆದರೆ ಹೆಚ್ಚು ನಿಂಬೆ ರಸ ಬಳಸಿದರೆ ಹಣ್ಣಿನ ರುಚಿ ಬದಲಾಗಬಹುದು.

ಏರ್‌ಟೈಟ್ ಡಬ್ಬಿಯಲ್ಲಿ ಸಂಗ್ರಹಿಸಿಡಿ: ಕತ್ತರಿಸಿದ ಹಣ್ಣುಗಳನ್ನು ತೆರೆದ ಪಾತ್ರೆಯಲ್ಲಿ ಇಡಬೇಡಿ. ಅವುಗಳನ್ನು ಏರ್‌ಟೈಟ್ ಕಂಟೇನರ್‌ನಲ್ಲಿ ಸಂಗ್ರಹಿಸಿದರೆ ಗಾಳಿಯ ಸಂಪರ್ಕಕ್ಕೆ ಬರುವುದು ಕಡಿಮೆಯಾಗುತ್ತದೆ ಮತ್ತು ಹಣ್ಣುಗಳು ಬೇಗ ಕಪ್ಪಾಗುವುದಿಲ್ಲ.

ಇದನ್ನೂ ಓದಿ: ನೇರಳೆ ಹಣ್ಣು ತಿಂದರೆ ನಿಜವಾಗಿಯೂ ಡಯಾಬಿಟಿಸ್ ನಿಯಂತ್ರಿಸಬಹುದೇ?

ಫ್ರಿಜ್‌ನಲ್ಲಿ ಇಡಿ: ಹಣ್ಣುಗಳನ್ನು ಕತ್ತರಿಸಿದ ನಂತರ ಹೆಚ್ಚು ಸಮಯ ಕೋಣೆಯ ಉಷ್ಣಾಂಶದಲ್ಲಿ ಬಿಡಬೇಡಿ. ತಕ್ಷಣ ಬಳಸದೇ ಇದ್ದರೆ ಫ್ರಿಜ್‌ನಲ್ಲಿ ಇಡುವುದು ಉತ್ತಮ. ತಂಪಾದ ವಾತಾವರಣವು ಹಣ್ಣಿನ ತಾಜಾತನವನ್ನು ಹೆಚ್ಚು ಸಮಯ ಕಾಪಾಡುತ್ತದೆ.

ಬೇಕಾದಷ್ಟು ಮಾತ್ರ ಕತ್ತರಿಸಿ: ಅಗತ್ಯಕ್ಕಿಂತ ಹೆಚ್ಚು ಹಣ್ಣುಗಳನ್ನು ಮುಂಚಿತವಾಗಿ ಕತ್ತರಿಸಿ ಇಡುವ ಬದಲು, ತಿನ್ನುವಷ್ಟು ಮಾತ್ರ ಕತ್ತರಿಸಿ. ಇದರಿಂದ ಹಣ್ಣಿನ ರುಚಿ, ಬಣ್ಣ ಮತ್ತು ಪೌಷ್ಟಿಕಾಂಶ ಚೆನ್ನಾಗಿರುತ್ತದೆ.

ಕತ್ತರಿಸಿದ ಹಣ್ಣುಗಳು ಎಷ್ಟು ಸಮಯ ಸುರಕ್ಷಿತವಾಗಿರುತ್ತದೆ?

ಕೋಣೆಯ ಉಷ್ಣಾಂಶದಲ್ಲಿ ಸುಮಾರು 1 ಗಂಟೆಯವರೆಗೆ ಉತ್ತಮವಾಗಿರಬಹುದು. ಏರ್‌ಟೈಟ್ ಡಬ್ಬಿಯಲ್ಲಿ ಅಥವಾ ಫ್ರಿಜ್‌ನಲ್ಲಿ ಹೆಚ್ಚಿನ ಹಣ್ಣುಗಳು ಸುಮಾರು 24 ಗಂಟೆಗಳವರೆಗೆ ಚೆನ್ನಾಗಿಡಬಹುದು. ಆದರೆ, ಪೌಷ್ಟಿಕಾಂಶ ಮತ್ತು ರುಚಿ ಚೆನ್ನಾಗಿರಲು ಸಾಧ್ಯವಾದಷ್ಟು ಬೇಗ ಸೇವಿಸುವುದು ಉತ್ತಮ.

ಹಣ್ಣುಗಳನ್ನು ಸಂಗ್ರಹಿಸುವಾಗ ಗಮನಿಸಬೇಕಾದ ವಿಷಯಗಳು

  • ಯಾವಾಗಲೂ ಸ್ವಚ್ಛ ಮತ್ತು ಒಣಗಿದ ಡಬ್ಬಿ ಬಳಸಿ.
  • ಸ್ವಚ್ಛ ಚಾಕು ಮತ್ತು ಕಟಿಂಗ್ ಬೋರ್ಡ್ ಬಳಸಿ ಹಣ್ಣುಗಳನ್ನು ಕತ್ತರಿಸಿ.
  • ಕತ್ತರಿಸಿದ ಹಣ್ಣುಗಳನ್ನು ಹೆಚ್ಚು ಸಮಯ ಹೊರಗೆ ಇಡಬೇಡಿ.
  • ದುರ್ವಾಸನೆ, ಅತಿಯಾದ ಬಣ್ಣ ಬದಲಾವಣೆ ಅಥವಾ ಮೃದುವಾದ/ ಜಿಗುಟಾದ ರಚನೆ ಕಂಡುಬಂದರೆ ಆ ಹಣ್ಣುಗಳನ್ನು ಸೇವಿಸಬೇಡಿ.

ಕತ್ತರಿಸಿದ ಹಣ್ಣುಗಳನ್ನು ದೀರ್ಘಕಾಲ ಸಂಗ್ರಹಿಸುವುದಕ್ಕಿಂತ ತಾಜಾ ಕತ್ತರಿಸಿ ತಕ್ಷಣ ಸೇವಿಸುವುದು ಉತ್ತಮ. ಇದರಿಂದ ಪೌಷ್ಟಿಕಾಂಶ, ರುಚಿ ಮತ್ತು ತಾಜಾತನ ಉಳಿಯುತ್ತದೆ. ಮಕ್ಕಳ ಟಿಫಿನ್ ಅಥವಾ ಆಫೀಸ್ ತೆಗೆದುಕೊಂಡು ಹೋಗುವ ಹಣ್ಣುಗಳನ್ನು ಏರ್‌ಟೈಟ್ ಡಬ್ಬಿಯಲ್ಲಿ ಫ್ರಿಜ್‌ನಲ್ಲಿ ಇಟ್ಟು ನಂತರ ಬಳಸುವುದು ಉತ್ತಮ.

ಸೂಚನೆ: ಈ ಲೇಖನವು ಆರೋಗ್ಯ ಮಾಹಿತಿಗಾಗಲಿ ಮಾತ್ರ. ಆಹಾರ ಸುರಕ್ಷತೆ ಅಥವಾ ಆರೋಗ್ಯ ಸಂಬಂಧಿತ ಯಾವುದೇ ಅನುಮಾನಗಳಿದ್ದರೆ ತಜ್ಞರ ಸಲಹೆ ಪಡೆಯಿರಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IND vs ZIM: ಭಾರತ- ಜಿಂಬಾಬ್ವೆ ಪಂದ್ಯಕ್ಕೆ ಮಳೆ ಅಡ್ಡಿ? ಹರಾರೆ ಪಿಚ್ ಯಾರಿಗೆ ಸಹಕಾರಿ? – Kannada News | IND vs ZIM T20 Series: 1st Match Preview, Pitch Report and Weather in Harare

ಭಾರತ ಮತ್ತು ಜಿಂಬಾಬ್ವೆ (India vs Zimbabwe) ನಡುವಿನ ಮೂರು ಪಂದ್ಯಗಳ ಟಿ20 ಸರಣಿಯು ಜುಲೈ 23 ರಂದು ಪ್ರಾರಂಭವಾಗಲಿದೆ. ಮೂರೂ ಪಂದ್ಯಗಳು ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನಡೆಯಲಿವೆ. ಸರಣಿಯ ಮೊದಲ ಪಂದ್ಯವನ್ನು ಗೆದ್ದುಕೊಳ್ಳುವ ಮೂಲಕ ಶ್ರೇಯಸ್ ಅಯ್ಯರ್ ನಾಯಕನಾಗಿ ಗೆಲುವಿನ ಖಾತೆ ತೆರೆಯುವ ಇರಾದೆಯಲ್ಲಿದ್ದಾರೆ. ಇತ್ತ ಟೀಂ ಇಂಡಿಯಾ ಕೂಡ ಸತತ 6 ಪಂದ್ಯಗಳ ಸೋಲಿನ ನಂತರ ಗೆಲುವಿನ ಸವಿಸವಿಯುವ ಗುರಿ ಹೊಂದಿದೆ. ಇದಕ್ಕೆ ಪೂರಕವಾಗಿ ಹರಾರೆಯ ಹವಾಮಾನ ಕೂಡ ಮೊದಲ ಪಂದ್ಯಕ್ಕೆ ಅನುಕೂಲಕರವಾಗಿರುತ್ತದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದ್ದು, ಪಿಚ್ ಕೂಡ ಬ್ಯಾಟ್ಸ್‌ಮನ್‌ಗಳಿಗೆ ಅನುಕೂಲಕರವಾಗಿರುತ್ತದೆ ಎಂದು ವರದಿಯಾಗಿದೆ.

ಭಾರತ-ಜಿಂಬಾಬ್ವೆ ಸರಣಿಯ ಮೂರು ಪಂದ್ಯಗಳು ಜುಲೈ 23, 25 ಮತ್ತು 26 ರಂದು ನಡೆಯಲಿವೆ. ಎಲ್ಲಾ ಮೂರು ಪಂದ್ಯಗಳು ಒಂದೇ ಮೈದಾನದಲ್ಲಿ ನಡೆಯಲಿವೆ, ಆದರೆ ಪಿಚ್‌ಗಳು ವಿಭಿನ್ನವಾಗಿರಬಹುದು. ಎಲ್ಲಾ ಪಂದ್ಯಗಳು ಒಂದೇ ಸಮಯದಲ್ಲಿ ನಡೆಯಲಿವೆ.

ಹವಾಮಾನ ಮತ್ತು ಪಿಚ್ ಹೇಗಿರಲಿದೆ?

ಜುಲೈ 23, ಗುರುವಾರ, ಪಂದ್ಯದ ದಿನದಂದು ಹರಾರೆಯಲ್ಲಿ ಹವಾಮಾನವು ಸ್ಪಷ್ಟವಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಮಳೆ ಬರುವ ಸಾಧ್ಯತೆ ಇರುವುದಿಲ್ಲ. ತಾಪಮಾನವು 20 ರಿಂದ 25 ಡಿಗ್ರಿ ಸೆಲ್ಸಿಯಸ್ ನಡುವೆ ಇರುತ್ತದೆ, ಇದು ಬೌಲರ್‌ಗಳಿಗೆ ಸವಾಲಾಗಿ ಪರಿಣಮಿಸಬಹುದು. ಹರಾರೆ ಸಾಮಾನ್ಯವಾಗಿ ಸ್ವಲ್ಪ ಬೌನ್ಸ್ ಹೊಂದಿರುತ್ತದೆ. ಆದಾಗ್ಯೂ, ಪ್ರಸ್ತುತ ಹವಾಮಾನವನ್ನು ಗಮನಿಸಿದರೆ, ಬೌನ್ಸ್ ಬ್ಯಾಟ್ಸ್‌ಮನ್‌ಗಳಿಗೆ ಸುಲಭವಾಗುತ್ತದೆ. ಈ ಪಂದ್ಯದಲ್ಲಿ ಬೌಂಡರಿ ಮತ್ತು ಸಿಕ್ಸರ್‌ಗಳ ಮಳೆಯಾಗುವ ಸಾಧ್ಯತೆಯಿದೆ. ಎರಡನೇ ಇನ್ನಿಂಗ್ಸ್‌ನಲ್ಲಿ ಸ್ಪಿನ್ನರ್‌ಗಳು ಸಹ ನಿರ್ಣಾಯಕ ಪಾತ್ರ ವಹಿಸಬಹುದಾದರೂ, 160 ರಿಂದ 170 ರನ್​ಗಳು ಸ್ಪರ್ಧಾತ್ಮಕವೆಂದು ಪರಿಗಣಿಸಲಾಗಿದೆ.

ಉಭಯ ತಂಡಗಳ ಮುಖಾಮುಖಿ ದಾಖಲೆ

ಭಾರತ ಮತ್ತು ಜಿಂಬಾಬ್ವೆ ನಡುವೆ ಇದುವರೆಗೆ ಒಟ್ಟು 14 ಟಿ20 ಅಂತರರಾಷ್ಟ್ರೀಯ ಪಂದ್ಯಗಳು ನಡೆದಿವೆ. ಭಾರತ ತಂಡವು 11 ಪಂದ್ಯಗಳಲ್ಲಿ ಗೆದ್ದು ಮೂರರಲ್ಲಿ ಸೋತಿದೆ. ಜಿಂಬಾಬ್ವೆ ನೆಲದಲ್ಲಿ ದಾಖಲೆಯ ಬಗ್ಗೆ ಹೇಳುವುದಾದರೆ, ಟೀಂ ಇಂಡಿಯಾ ಇಲ್ಲಿ 12 ಟಿ20 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದು, ಅವುಗಳಲ್ಲಿ ಒಂಬತ್ತು ಪಂದ್ಯಗಳನ್ನು ಗೆದ್ದಿದೆ. ಇಲ್ಲಿ ಎರಡೂ ತಂಡಗಳ ನಡುವಿನ ಐದನೇ ಟಿ20 ಅಂತರರಾಷ್ಟ್ರೀಯ ಸರಣಿ ಇದಾಗಿದೆ. ನಾಲ್ಕು ಸರಣಿಗಳಲ್ಲಿ ಭಾರತ ಮೂರರಲ್ಲಿ ಗೆದ್ದಿದ್ದು, ಒಂದು ಟೈ ಆಗಿದೆ.

Source link

ಬಂಟ್ವಾಳದಲ್ಲಿ ಹೃದಯವಿದ್ರಾವಕ ಘಟನೆ: ಬಸ್ ಮೇಲೆ ಬಿದ್ದ ಬೃಹತ್ ಮರ; ಯುಕೆಜಿ ಬಾಲಕಿ ಚಿರನ್ವಿ ಸಾವು – Kannada News | Tragedy in Barimaru: UKG Student Chiranvi Killed in School Bus Accident.

ಮಂಗಳೂರು, ಜು.22: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಾಣಿಯ ಬರಿಮಾರು ಸಮೀಪದ ಕಲ್ಲಡ್ಕ ಶ್ರೀರಾಮ ಶಾಲಾ ಬಸ್ ಮೇಲೆ ಮರ ಬಿದ್ದ ಪರಿಣಾಮ ಐದು ವರ್ಷದ ಬಾಲಕಿ ಚಿರನ್ವಿ ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ ವರದಿಯಾಗಿದೆ. ಈ ದುರಂತದಲ್ಲಿ ಕಲ್ಲಡ್ಕದ ಶ್ರೀರಾಮ ಶಾಲೆಯಲ್ಲಿ ಯುಕೆಜಿ ಓದುತ್ತಿದ್ದ ಐದು ವರ್ಷದ ಚಿರನ್ವಿ ಪ್ರಾಣ ಕಳೆದುಕೊಂಡಿದ್ದು, ಮತ್ತಿಬ್ಬರು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಶಾಲೆ ಮುಗಿಸಿಕೊಂಡು ಮಕ್ಕಳನ್ನು ಮನೆಗೆ ತಲುಪಿಸುತ್ತಿದ್ದ ಶಾಲಾ ವಾಹನದ ಮೇಲೆ ಆಕಸ್ಮಿಕವಾಗಿ ಬೃಹತ್ ಮರವೊಂದು ಬಿದ್ದಿದೆ. ಮರ ಬಿದ್ದ ತಕ್ಷಣವೇ ಮೂವರು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲು ಕ್ರಮ ಕೈಗೊಳ್ಳಲಾಯಿತು. ಗಂಭೀರವಾಗಿ ಗಾಯಗೊಂಡಿದ್ದ ಚಿರನ್ವಿಯನ್ನು ಆಟೋದಲ್ಲಿ ಪುತ್ತೂರು ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ಮಾಡಲಾಯಿತು. ಆದರೆ, ಆಸ್ಪತ್ರೆ ತಲುಪುವ ಮೊದಲೇ ಮಾರ್ಗ ಮಧ್ಯೆಯೇ ಚಿರನ್ವಿ ಕೊನೆಯುಸಿರೆಳೆದಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ. ಈ ದುರಂತದಲ್ಲಿ ಗಾಯಗೊಂಡಿದ್ದ ಇತರ ಇಬ್ಬರು ಮಕ್ಕಳು ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಸ್ಥಿತಿ ಕೂಡ ಗಂಭೀರವಾಗಿದೆ ಎಂದು ವರದಿಯಾಗಿದೆ. ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಕೂಲಂಕಷ ಪರಿಶೀಲನೆ ನಡೆಸಿದ್ದಾರೆ. ಈ ಹೃದಯ ಕಲಕುವ ಘಟನೆ ಸ್ಥಳೀಯರಲ್ಲಿ ದುಃಖವನ್ನುಂಟು ಮಾಡಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version