Headlines

VIDEO: ಶತಕ ಬಾರಿಸಿ ಅಶ್ಲೀಲವಾಗಿ ಸಂಭ್ರಮಿಸಿದ RCB ಆಟಗಾರ – Kannada News | Swapnil Singh’s magnificent century in the Vijay Hazare Trophy

ವಿಜಯ ಹಝಾರೆ ಟೂರ್ನಿಯಲ್ಲಿ ಕರ್ನಾಟಕ ವಿರುದ್ಧ ಶತಕ ಸಿಡಿಸಿ ತ್ರಿಪುರ ಆಟಗಾರ ಸ್ವಪ್ನಿಲ್ ಸಿಂಗ್ ಅಶ್ಲೀಲವಾಗಿ ಸಂಭ್ರಮಿಸಿದ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕರ್ನಾಟಕ ತಂಡದ ಪರ ದೇವದತ್ ಪಡಿಕ್ಕಲ್ (108) ಶತಕ ಸಿಡಿಸಿದ್ದರು. ಈ ಶತಕದ ನೆರವಿನೊಂದಿಗೆ ಕರ್ನಾಟಕ ತಂಡವು 50 ಓವರ್​ಗಳಲ್ಲಿ 332 ರನ್ ಕಲೆಹಾಕಿತು. ಈ ಕಠಿಣ ಗುರಿ ಬೆನ್ನತ್ತಿದ ತ್ರಿಪುರ ಪರ 7ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸ್ವಪ್ನಿಲ್ ಸಿಂಗ್ 93 ಎಸೆತಗಳಲ್ಲಿ 2…

Read More

Viral Video: ಇಂಜಿನಿಯರ್, ಡಾಕ್ಟರನ್ನೆಲ್ಲ ನೂಕಾಚೆ ದೂರ! ಮ್ಯಾಗಿ ಮಾಡಿ ದಿನಕ್ಕೆ 21,000 ರೂ. ಗಳಿಸಿದ ಯುವಕ – Kannada News | Content creator sells maggi in hill station earned 21000 rs for one Day netizens shocked watch video

ನವದೆಹಲಿ, ಜನವರಿ 29: ಯಾವುದೇ ಒಂದು ಬ್ಯುಸಿನೆಸ್ ಮಾಡಬೇಕೆಂದರೂ ಮೊದಲು ಆ ಜಾಗದಲ್ಲಿ ಯಾವುದರ ಅಗತ್ಯ ಜಾಸ್ತಿಯಿದೆ ಅಥವಾ ಯಾವುದರ ಪೂರೈಕೆ ಕಡಿಮೆಯಿದೆ ಎಂಬುದನ್ನು ಅಧ್ಯಯನ ಮಾಡುವುದು ಬಹಳ ಮುಖ್ಯ. ಇದು ಗೊತ್ತಾಯಿತೆಂದರೆ ಅರ್ಧ ಬ್ಯುಸಿನೆಸ್ ಗೆದ್ದಂತೆ. ಹಿಮಾಚಲ ಪ್ರದೇಶದಲ್ಲಿ ಪ್ರವಾಸಕ್ಕೆ ಹೋಗಿದ್ದ ಕಂಟೆಂಟ್ ಕ್ರಿಯೇಟರ್ ಒಬ್ಬ ಒಂದು ದಿನಕ್ಕೆ ಅಲ್ಲಿ ಎಷ್ಟು ಮ್ಯಾಗಿ (Maggi) ಮಾರಾಟವಾಗುತ್ತದೆ ಎಂದು ನೋಡುವ ಕುತೂಹಲದಿಂದ ಒಂದು ದಿನ ಮ್ಯಾಗಿ ಮಾಡಿ ಮಾರಾಟ ಮಾಡಿದ್ದಾನೆ. ಕಂಟೆಂಟ್ ಕ್ರಿಯೇಟರ್ ಹಿಲ್ ಸ್ಟೇಷನ್​​ನಲ್ಲಿ ಮ್ಯಾಗಿ…

Read More

ಬೆಂಗಳೂರು ಚಿತ್ರೋತ್ಸವ: ಫೆ.3ರಂದು ವೀಕ್ಷಿಸಬಹುದಾದ 10 ಬೆಸ್ಟ್ ಸಿನಿಮಾಗಳಿವು.. – Kannada News | Watch these 10 movies on Feb 3 in Bengaluru International Film Festival

ಹಲವು ದೇಶಗಳ ಸಿನಿಮಾಗಳನ್ನು ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (BIFFes) ಪ್ರದರ್ಶನ ಮಾಡಲಾಗುತ್ತಿದೆ. ಸುಚಿತ್ರಾ ಫಿಲ್ಮ್ ಸೊಸೈಟಿ, ಲುಲು ಮಾಲ್ ಹಾಗೂ ಕಲಾವಿದರ ಸಂಘದಲ್ಲಿ ಸಿನಿಮಾಗಳ ಪ್ರದರ್ಶನ ಆಗುತ್ತಿದೆ. ‘ಸ್ತ್ರೀ ಎಂದರೆ ಅಷ್ಟೇ ಸಾಕೆ’ ಎಂಬ ಥೀಮ್​​ನಲ್ಲಿ ಸಿನಿಮಾಗಳನ್ನು ಆಯ್ಕೆ ಮಾಡಲಾಗಿದೆ. ಯಾವ ಸಿನಿಮಾ ನೋಡಬೇಕು ಎಂಬ ಗೊಂದಲ ಇದ್ದವರಿಗೆ ಉಪಯುಕ್ತ ಮಾಹಿತಿ ಇಲ್ಲಿದೆ.. 1. ಡೆಡ್ ಡಾಗ್ – ಲೆಬನಾನ್/ ಫ್ರಾನ್ಸ್. (ಸಮಯ: ಮಧ್ಯಾಹ್ನ 3:10, ಸ್ಕ್ರೀನ್ 1). ವಿವರ: ಸಾರಾ ಫ್ರಾನ್ಸಿಸ್ ನಿರ್ದೇಶನದ ಈ 2025ರ…

Read More

ಇನ್ಮುಂದೆ ಒಂದೇ ಕರೆಯಲ್ಲಿ ಸಿಗುತ್ತೆ ಪೊಲೀಸ್-ಆರೋಗ್ಯ-ಅಗ್ನಿಶಾಮಕ ಸೇವೆ; ರಾಜ್ಯದಲ್ಲಿ ಹೈಟೆಕ್ ‘ಹೆಲ್ತ್ ಎಮರ್ಜೆನ್ಸಿ ಸೆಂಟರ್’ ಲೋಕಾರ್ಪಣೆ! – Kannada News | Karnataka Launches 24/7 Health Emergency Operation Centre (HEOC) for Rapid Relief

ರಾಜ್ಯದಲ್ಲಿ ಹೈಟೆಕ್ ‘ಹೆಲ್ತ್ ಎಮರ್ಜೆನ್ಸಿ ಸೆಂಟರ್’ ಲೋಕಾರ್ಪಣೆ ಬೆಂಗಳೂರು, ಮೇ 08: ಜನರಿಗೆ ತುರ್ತು ಸಂದರ್ಭಗಳಲ್ಲಿ ಆರೋಗ್ಯ ಸೇವೆ ಪಡೆಯಲು ಸುಲಭ ದಾರಿ ಸಿಕ್ಕಿದ್ದು, ಆರೋಗ್ಯ ಇಲಾಖೆಯು ಅತ್ಯಾಧುನಿಕ ತಂತ್ರಜ್ಞಾನದಡಿ ‘ಹೆಲ್ತ್ ಎಮರ್ಜೆನ್ಸಿ ಆಪರೇಷನ್ ಸೆಂಟರ್’ (HEOC) ಆರಂಭಿಸುವ ಮೂಲಕ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಬೆಂಗಳೂರಿನ ಆರೋಗ್ಯ ಸೌಧದಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ಈ ನೂತನ ಕೇಂದ್ರಕ್ಕೆ ಚಾಲನೆ ನೀಡಿದ್ದಾರೆ. ಈ ಕೇಂದ್ರವು ಕೇವಲ ಒಂದು ಸಹಾಯವಾಣಿಯಾಗಿರದೆ, ವಿವಿಧ ಇಲಾಖೆಗಳ ಸಮನ್ವಯದ…

Read More

“ಬೆಂಗಳೂರಿನ ಹೋಟೆಲ್ ಉದ್ಯಮಿಗಳಿಗೆ ಗುಡ್ ನ್ಯೂಸ್!”: ಮತ್ತೆ ಆರಂಭವಾಗಲಿವೆ ಮುಚ್ಚಿದ್ದ ಹೋಟೆಲ್‌ಗಳು

ಬೆಂಗಳೂರು, ಏ.10: ಬೆಂಗಳೂರಿನಲ್ಲಿ ದಿನನಿತ್ಯ ಎಲ್​​ಪಿಜಿ ಗ್ಯಾಸ್​​ ಬಗ್ಗೆ ಒಂದೊಂದು ಗೊಂದಲವಾಗಿತ್ತು. ಹೊಟೇಲ್​​​, ಹಲವಾರು ರೆಸ್ಟೋರೆಂಟ್‌ಗಳು ತುಂಬಾ ಸಂಕಷ್ಟಕ್ಕೆ ಒಳಗಾಗಿತ್ತು. ಜನರಿಗೆ ರುಚಿರುಚಿಯಾದ ತಿಂಡಿ, ಊಟಗಳನ್ನು ಮಾಡಲಾಗುತ್ತಿಲ್ಲ ಎಂಬ ಕೊರಗು ಕೂಡ ಅವರನ್ನು ಕಾಡುತ್ತಿತ್ತು. ಇದೀಗ ಕೇಂದ್ರ ಬೆಂಗಳೂರು ಹೊಟೇಲ್​​​, ರೆಸ್ಟೋರೆಂಟ್‌ಗಳಿಗೆ ಬಿಗ್​​ ಗುಡ್​​​​ ನ್ಯೂಸ್​​​​ವೊಂದನ್ನು ನೀಡಿದೆ. ಕೇಂದ್ರ ಸರ್ಕಾರವು ತಮ್ಮ ಎಲ್‌ಪಿಜಿ ಅವಶ್ಯಕತೆಗಳಲ್ಲಿ 70% ವರೆಗೆ ಪುನಃಸ್ಥಾಪಿಸುವುದಾಗಿ ಘೋಷಿಸಿದೆ ಇದರಿಂದ ಹೊಟೇಲ್ ಉದ್ಯಮಕ್ಕೆ ಬೂಸ್ಟ್​​​ ನೀಡಿದಂತಾಗಿದೆ. ನಗರದಲ್ಲಿ ಹಲವಾರು ರೆಸ್ಟೋರೆಂಟ್‌ಗಳು ಮತ್ತು ತಿನಿಸುಗಳು ತಾತ್ಕಾಲಿಕವಾಗಿ ಮುಚ್ಚಲ್ಪಟ್ಟ…

Read More

ಬಂಧನದ ಬಗ್ಗೆ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಫಸ್ಟ್ ರಿಯಾಕ್ಷನ್ – Kannada News | Social activist Snehamayi Krishna first reaction to the CCB Crime Police arrest

ಬೆಂಗಳೂರು, ಫೆಬ್ರವರಿ 21: ಸಿಸಿಬಿ ಕ್ರೈಂ ಪೊಲೀಸರಿಂದ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ವಿಚಾರಣೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಆಯುಕ್ತ ಡಿ.ವಿ. ನಟೇಶ್ ನೀಡಿದ ದೂರಿನ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ನಟೇಶ್ ಅವರು, ತಾನು ಆಡಿಯೋ ಸೃಷ್ಟಿಸಿ ಫೇಸ್‌ಬುಕ್‌ನಲ್ಲಿ ಹಾಕಿದ್ದೇನೆ ಹಾಗೂ ರಾಜ್ಯ ಸರ್ಕಾರ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರ ವಿರುದ್ಧ ಸುಳ್ಳು ಆರೋಪ ಮಾಡಿದ್ದೇನೆ ಎಂದು ದೂರು ನೀಡಿದ್ದರು. ಈ ದೂರು ಹಿನ್ನೆಲೆ ಸೈಬರ್ ಕ್ರೈಂ ಠಾಣೆಯಲ್ಲಿ…

Read More

ನೆಲಮಂಗಲ: ಸ್ನಾಪ್‌ಚಾಟಲ್ಲಿ ಪ್ರೀತಿಸಿ ಮದುವೆ, ಎರಡೇ ತಿಂಗಳಿಗೆ ಬ್ರೇಕ್‌ಅಪ್! ಗಂಡ ಬೇಕೆಂದು ಠಾಣೆ ಮೆಟ್ಟಿಲೇರಿದ ಯುವತಿ – Kannada News | Nelamangala: Snapchat Love Story Ends in Just Two Months of Marriage; Nursing Woman Files Police Complaint

ನೆಲಮಂಗಲ, ಮೇ 27: ಸಾಮಾಜಿಕ ಜಾಲತಾಣಗಳ ಪರಿಚಯ ಮತ್ತು ಪ್ರೀತಿ ಎಷ್ಟೊಂದು ಬೇಗ ಹಳಿತಪ್ಪಬಹುದು ಎಂಬುದಕ್ಕೆ ನೆಲಮಂಗಲ (Nelamangala) ಸಮೀಪದ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಈ ಘಟನೆಯೇ ಸಾಕ್ಷಿ. ಸ್ನಾಪ್‌ಚಾಟ್ (Snapchat) ಆ್ಯಪ್‌ನಲ್ಲಿ ಪರಿಚಯವಾಗಿ, ಒಂದೂವರೆ ವರ್ಷಗಳ ಕಾಲ ಪ್ರೀತಿಸಿ, ಕೇವಲ ಎರಡು ತಿಂಗಳ ಹಿಂದೆಯಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಜೋಡಿಯೊಂದು ಈಗ ಎರಡೇ ತಿಂಗಳಲ್ಲಿ ವಿಚ್ಛೇದನದ ಹಂತಕ್ಕೆ ಬಂದು ನಿಂತಿದೆ. ಮದುವೆಯಾದ ಎರಡೇ ತಿಂಗಳಿಗೆ ಪತಿರಾಯ ‘ನೀನು ನನಗೆ ಬೇಡ’ ಎಂದು ಹೆಂಡತಿಯನ್ನು…

Read More

ಆಂಬ್ಯುಲೆನ್ಸ್ ನೀಡಲು ನಿರಾಕರಣೆ: ಕಣ್ಣೀರು ಹಾಕುತ್ತ ಮಗುವಿನ ಮೃತ ದೇಹವನ್ನು ರಟ್ಟಿನ ಪೆಟ್ಟಿಗೆಯಲ್ಲಿ ಕೊಂಡೊಯ್ದ ತಂದೆ

ಚಕ್ರಧರಪುರ ಮಾ.9: ಸರ್ಕಾರಿ ಆಸ್ಪತ್ರೆ ಎಂದು ಮೂಗು ಮುರಿಯಲು ಇಂತಹ ಕೆಲವೊಂದು ಅಮಾನವೀಯ ಘಟನೆಗಳೇ ಕಾರಣ, ಇದೀಗ ಸರ್ಕಾರಿ ಆಸ್ಪತ್ರೆಗಳ ನಿರ್ಲಕ್ಷ್ಯಕ್ಕೆ ಸಾಕ್ಷಿಯೆಂಬಂತೆ ಜಾರ್ಖಂಡ್‌ನಲ್ಲಿ (Jharkhand) ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಆಸ್ಪತ್ರೆಯು ಆಂಬ್ಯುಲೆನ್ಸ್ ನೀಡಲು ನಿರಾಕರಿಸಿದ ಕಾರಣ, ತಂದೆಯೊಬ್ಬರು ತನ್ನ ಮೃತ ಮಗುವಿನ ದೇಹವನ್ನು ಹಳೆಯ ರಟ್ಟಿನ ಪೆಟ್ಟಿಗೆಯಲ್ಲಿ ಹಾಕಿ ಅಳುತ್ತಲೇ ಊರಿಗೆ ಕೊಂಡೊಯ್ದಿದ್ದಾರೆ.ರಾಮಕೃಷ್ಣ ಹೇಂಬ್ರಾಮ್ ಎಂಬವರು ಮಾರ್ಚ್ 5 ರಂದು ತಮ್ಮ ಗರ್ಭಿಣಿ ಪತ್ನಿ ರೀತಾ ತಿರಿಯಾ (28) ಅವರನ್ನು ಚಕ್ರಧರಪುರದ ಉಪವಿಭಾಗದ ಆಸ್ಪತ್ರೆಗೆ…

Read More

ಕರ್ನಾಟಕ ವಿಧಾನ ಪರಿಷತ್ ಚುನಾವಣೆಗೆ ಅಧಿಸೂಚನೆ ಪ್ರಕಟ, ಮತದಾನ, ರಿಸಲ್ಟ್ ಯಾವಾಗ? ಇಲ್ಲಿದೆ ವಿವರ

ಬೆಂಗಳೂರು, (ಜೂನ್ 01): ರಾಜ್ಯ ವಿಧಾನಸಭೆಯಿಂದ ವಿಧಾನಪರಿಷತ್‌ನ (Karnataka Legislative Council biennial polls) 7 ಸದಸ್ಯ ಸ್ಥಾನಕ್ಕೆ ನಡೆಯುವ ದ್ವಿವಾರ್ಷಿಕ ಚುನಾವಣೆಗೆ ಅಧಿಸೂಚನೆ ಹೊರಡಿಸಲಾಗಿದ್ದು, ಇಂದಿನಿಂದ (ಜೂನ್ 01) ಜೂ.8ರವರೆಗೆ ನಾಮಪತ್ರ ಸಲ್ಲಿಸಬಹುದಾಗಿದೆ. ವಿಧಾನಪರಿಷತ್‌ನ ದ್ವೈವಾರ್ಷಿಕ ಚುನಾವಣೆಯ ಚುನಾವಣಾಧಿಕಾರಿ ಹಾಗೂ ವಿಧಾನಸಭೆ ಕಾರ್ಯದರ್ಶಿ ಎಂ.ಕೆ.ವಿಶಾಲಕ್ಷಿ ಅವರು ಈ ಸಂಬಂಧ ಪ್ರಕಟಣೆ ಹೊರಡಿಸಿದ್ದಾರೆ.ಜೂ.9 ರಂದು ನಾಮಪತ್ರ ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಅಂದು ಸಂಜೆ ವೇಳೆಗೆ ಸಿಂಧುವಾದ ನಾಮಪತ್ರಗಳ ಪ್ರಕಟಣೆ ಹೊರಡಿಸಲಾಗುತ್ತದೆ. ಮುಖ್ಯಾಂಶಗಳು ಕರ್ನಾಟಕ ವಿಧಾನ ಪರಿಷತ್ ಚುನಾವಣೆಗೆ…

Read More

ಹೈದರಾಬಾದ್‌ನ ಪಬ್‌ನಲ್ಲಿ ನಟಿ ಹೇಮಾ ಕೊಲ್ಲಗೆ ಡ್ರಗ್ಸ್ ಪರೀಕ್ಷೆ

ಬೆಂಗಳೂರಿನ ಪಾರ್ಟಿಯೊಂದರಲ್ಲಿ ಭಾಗಿ ಆಗಿ ಡ್ರಗ್ಸ್ ಸೇವಿಸಿದ್ದ ಆರೋಪದಲ್ಲಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದ ನಟಿ ಹೇಮಾ ಕೊಲ್ಲ (Hema Kolla) ಇದಿಗ ಮತ್ತೊಮ್ಮೆ ಪಾರ್ಟಿಯೊಂದರಲ್ಲಿ ಡ್ರಗ್ಸ್ ಪರೀಕ್ಷೆಗೆ ಒಳಪಟ್ಟಿದ್ದಾರೆ. ನಟಿ ಹೇಮಾ ಕೊಲ್ಲ ಹೈದರಾಬಾದ್​​ನ ಪಬ್ ಒಂದರಲ್ಲಿ ಪಾರ್ಟಿಯಲ್ಲಿ ಭಾಗಿ ಆಗಿದ್ದರು. ಈ ವೇಳೆ ಪಬ್​ ಮೇಲೆ ಪೊಲೀಸ್ ದಾಳಿ ಆಗಿದ್ದು, ಅಲ್ಲಿ ನಟಿ ಹೇಮಾ ಅವರಿಗೆ ಡ್ರಗ್ಸ್ ಪರೀಕ್ಷೆ ಮಾಡಲಾಗಿತ್ತು. ಹೈದರಾಬಾದ್‌ನ ಕೊಂಡಾಪುರದಲ್ಲಿರುವ ‘ಕ್ವಾಕ್ ಅರೀನಾ ಪಬ್’ ಮೇಲೆ ಇತ್ತೀಚೆಗೆ ಹೈದರಾಬಾದ್ ಪೊಲೀಸರು ಮತ್ತು ಮಾದಕ…

Read More