ಸಿಜೆಪಿ ಪ್ರತಿಭಟನೆಗೆ ಬಂದ ‘ಧುರಂಧರ್’ ನಟಿ ಆಯಿಷಾ ಖಾನ್; ವಶಕ್ಕೆ ಪಡೆದ ಮುಂಬೈ ಪೋಲಿಸರು – Kannada News | Dhurandhar actress Ayesha Khan detained by Mumbai Police during Student Protest

‘ಧುರಂಧರ್’ (Dhurandhar) ಚಿತ್ರದ ‘ಶರಾರತ್’ ಗೀತೆಯ ಮೂಲಕ ಗಮನಸೆಳೆದ ನಟಿ ಆಯಿಷಾ ಖಾನ್ (Ayesha Khan) ಅವರನ್ನು ಮುಂಬೈ ಪೊಲೀಸರು ಬುಧವಾರ (ಜುಲೈ 22) ವಶಕ್ಕೆ ಪಡೆದಿದ್ದಾರೆ. ಮುಂಬೈನಲ್ಲಿ ನಡೆಯುತ್ತಿದ್ದ ವಿದ್ಯಾರ್ಥಿಗಳ ಪ್ರತಿಭಟನೆಗೆ (Student Protest) ಬೆಂಬಲ ಸೂಚಿಸಲು ಸ್ನೇಹಿತರೊಂದಿಗೆ ಆಗಮಿಸಿದ್ದ ನಟಿಯನ್ನು ಪೊಲೀಸರು ಬಲವಂತವಾಗಿ ವ್ಯಾನ್‌ಗೆ ತಳ್ಳಿಕೊಂಡು ಹೋಗಿದ್ದಾರೆ. ಈ ಕುರಿತು ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಹಂಚಿಕೊಂಡಿರುವ ಆಯಿಷಾ ಖಾನ್, ಯಾವುದೇ ಮುನ್ಸೂಚನೆ ಅಥವಾ ಕಾರಣ ನೀಡದೆ ತಮ್ಮನ್ನು ಪೊಲೀಸರು ಎಳೆದುಕೊಂಡು ಹೋದ ಘಟನೆಯನ್ನು ವಿವರವಾಗಿ ಹಂಚಿಕೊಂಡಿದ್ದಾರೆ.

ಘಟನೆ ಬಗ್ಗೆ ವಿವರ ನೀಡಿದ ನಟಿ:

ದಾದರ್‌ನಲ್ಲಿ ನಡೆಯಬೇಕಿದ್ದ ವಿದ್ಯಾರ್ಥಿ ಪ್ರತಿಭಟನೆಗೆ ಬೆಂಬಲ ಸೂಚಿಸಲು ತಾವು ಸಂಜೆ 4 ಗಂಟೆಗೆ ತೆರಳಿದ್ದಾಗಿ ಆಯಿಷಾ ಖಾನ್ ಹೇಳಿದ್ದಾರೆ. ‘ನಾವು ಸ್ಥಳಕ್ಕೆ ತಲುಪಿ ಇನ್ನೂ ಒಂದು ಮಾತನ್ನೂ ಆಡಿರಲಿಲ್ಲ, ಯಾವುದೇ ಘೋಷಣೆ ಕೂಗಿರಲಿಲ್ಲ. ಅಷ್ಟರಲ್ಲೇ ಪೊಲೀಸ್ ಅಧಿಕಾರಿಯೊಬ್ಬರು ಬಂದು ಇಲ್ಲಿ ಪ್ರತಿಭಟನೆ ಮಾಡುವಂತಿಲ್ಲ ಎಂದರು. ಮತ್ತೆ ಬೇರೆ ಏನು ಮಾರ್ಗವಿದೆ ತಿಳಿಸಿ ಅಂತ ಕೇಳಿದೆ. ಆದರೆ ಯಾವುದೇ ಮಾತುಕತೆ ನಡೆಸದೆ, ಪೊಲೀಸರು ನನ್ನ ಸಹೋದರ ಮತ್ತು ಸ್ನೇಹಿತನನ್ನು ಎಳೆದುಕೊಂಡು ಹೋದರು. ನಂತರ ಸುಮಾರು 15 ಪೊಲೀಸರು ನಮ್ಮನ್ನು ಬಲವಂತವಾಗಿ ವ್ಯಾನ್ ಹತ್ತಿಸಿದರು’ ಎಂದು ಆಯಿಷಾ ಖಾನ್ ತಿಳಿಸಿದ್ದಾರೆ.

‘ನನ್ನನ್ನು 4-5 ಮಹಿಳಾ ಪೊಲೀಸರು ಎಳೆದೊಯ್ದರು. ವ್ಯಾನ್‌ನಲ್ಲಿದ್ದಷ್ಟು ಸಮಯ ನಮ್ಮನ್ನು ಏಕೆ ವಶಕ್ಕೆ ಪಡೆದಿದ್ದೀರಿ? ನಾವು ಮಾಡಿದ ತಪ್ಪಾದರೂ ಏನು ಎಂದು ಕೇಳಿದರೂ ಯಾವುದೇ ಉತ್ತರ ಸಿಗಲಿಲ್ಲ. ದಾದರ್‌ನಿಂದ ನಮ್ಮನ್ನು ವೋರ್ಲಿಗೆ ಕರೆತಂದರು’ ಎಂದು ಆಯಿಷಾ ಅಳಲು ತೋಡಿಕೊಂಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ:

‘ಶಾಂತಿಯುತವಾಗಿ ರಸ್ತೆಯಲ್ಲಿ ನಿಂತಿದ್ದಕ್ಕೆ ನಮ್ಮನ್ನು ಎಳೆದಾಡಿ ವಶಕ್ಕೆ ಪಡೆಯಲಾಯಿತು. ಯಾವ ಕಾನೂನನ್ನು ನಾವು ಮುರಿದಿದ್ದೇವೆ ಎಂದು ಕೇಳಿದರೂ ಉತ್ತರ ಬರಲಿಲ್ಲ. ರಸ್ತೆಯಲ್ಲಿ ನಿಲ್ಲುವುದು ಎಂದಿನಿಂದ ಅಪರಾಧವಾಯಿತು? ಪ್ರಜಾಪ್ರಭುತ್ವದ ಹಕ್ಕುಗಳನ್ನು ರಕ್ಷಿಸುವ ಬದಲು ಪ್ರಜೆಗಳ ಮೇಲೆಯೇ ದೌರ್ಜನ್ಯ ಎಸಗಲಾಗುತ್ತಿದೆ. ಆದರೂ ನನಗೆ ಉತ್ತಮ ಭವಿಷ್ಯದ ಭರವಸೆಯಿದೆ’ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ‘ಧುರಂಧರ್’ ನಿರ್ದೇಶಕನ ಪತ್ನಿ ಯಾಮಿ ಗೌತಮ್​ಗೆ ರಾಷ್ಟ್ರ ಪ್ರಶಸ್ತಿ: ಖುಷಿ ಹಂಚಿಕೊಂಡ ನಟಿ

ನವದೆಹಲಿಯ ಜಂತರ್ ಮಂತರ್‌ನಿಂದ ಆರಂಭವಾದ ವಿದ್ಯಾರ್ಥಿ ಪ್ರತಿಭಟನೆಗಳು ಈಗ ದೇಶದ ವಿವಿಧ ನಗರಗಳಿಗೆ ಹಬ್ಬಿದ್ದು, ಮುಂಬೈನಲ್ಲಿ ಮೂರನೇ ದಿನವೂ ಪ್ರತಿಭಟನೆ ಮುಂದುವರಿದಿದೆ. ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹಿಸಿ ವಿವಿಧೆಡೆ ಪ್ರತಿಭಟನೆಗಳು ನಡೆಯುತ್ತಿದ್ದು, ಹಲವು ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆಯುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

‘ಮುಂಗಾರು ಮಳೆ’, ‘ಕೆಜಿಎಫ್’ ಸಿನಿಮಾಗಳ ಸ್ಮರಿಸಿದ ತೆಲುಗು ನಟ: ವಿಡಿಯೋ – Kannada News | Kiran Abbavaram talks about Kannada movie Mungaru Male and KGF

ತೆಲುಗಿನ ‘ಚೆನ್ನೈ ಲವ್ ಸ್ಟೋರಿ’ ಸಿನಿಮಾ ಇದೇ ವಾರ ಬಿಡುಗಡೆ ಆಗಲಿದೆ. ಮಧುರ ಪ್ರೇಮಕತೆ ಹೊಂದಿರುವ ಈ ಸಿನಿಮಾನಲ್ಲಿ ಕಿರಣ್ ಅಬ್ಬವರಂ ನಾಯಕ, ಶ್ರೀ ಗೌರಿ ನಾಯಕಿ. ಸಿನಿಮಾದ ಟ್ರೈಲರ್ ಈಗಾಗಲೇ ಹಿಟ್ ಆಗಿದೆ. ಇತ್ತೀಚೆಗಷ್ಟೆ ಸಿನಿಮಾದ ಪ್ರಚಾರಕ್ಕಾಗಿ ಕಿರಣ್ ಅಬ್ಬವರಂ ಮತ್ತು ಗೌರಿ ಬೆಂಗಳೂರಿಗೆ ಬಂದಿದ್ದರು. ಮಾಧ್ಯಮಗಳೊಟ್ಟಿಗೆ ಮಾತನಾಡಿದ ನಟ ಕಿರಣ್ ಅಬ್ಬವರಂ ಕನ್ನಡ ಚಿತ್ರರಂಗ ಹಾಗೂ ಮಗೆ ಇಷ್ಟವಾದ ಕನ್ನಡ ಸಿನಿಮಾಗಳ ಬಗ್ಗೆಯೂ ಸಹ ಮಾತನಾಡಿದರು. ತಾವು ‘ಕೆಜಿಎಫ್’ ಸಿನಿಮಾ ಸರಣಿಯ ಅಭಿಮಾನಿ ಎಂದ ಕಿರಣ್ ಅಬ್ಬವರಂ, ತಮ್ಮ ‘ಚೆನ್ನೈ ಲವ್ ಸ್ಟೋರಿ’ ಸಿನಿಮಾ ‘ಮುಂಗಾರು ಮಳೆ’ ಸಿನಿಮಾವನ್ನು ನೆನಪು ಮಾಡಲಿದೆ ಎಂದರು. ವಿಡಿಯೋ ನೋಡಿ….

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Source link

ಅಲ್ಪ ಮಳೆಗೇ ಪತರುಗುಟ್ಟಿದ ಬೆಂಗಳೂರು: ಹೆಣ್ಣೂರು ಬಾಗಲೂರು ಮುಖ್ಯರಸ್ತೆಯಲ್ಲಿ ಹೊಳೆಯಂತೆ ಹರಿದ ನೀರು!, 3 ಕಿಲೋ ಮೀಟರ್​​ ಟ್ರಾಫಿಕ್​​ ಜಾಮ್​​ – Kannada News | Bengaluru Rain: Short Spell of Rain Floods Hennur Bagalur Road, Triggers 3 km Massive Traffic Jam on New Airport Route

ರಸ್ತೆಯಲ್ಲಿ ಹೊಳೆಯಂತೆ ಹರಿದ ನೀರುImage Credit source: Tv9 Kannada

ಬೆಂಗಳೂರು, ಜುಲೈ 22: ಮಧ್ಯಾಹ್ನದ ವೇಳೆಗೆ ಸುರಿದ ಸಣ್ಣ ಮಳೆಗೂ ಬೆಂಗಳೂರಿನಲ್ಲಿ (Bengaluru) ವಾಹನ ಸವಾರರು ಹೈರಾಣಾದ ಪ್ರಸಂಗ ನಡೆದಿದೆ. ಅಲ್ಪ ಮಳೆಗೇ ಹೆಣ್ಣೂರು ಬಾಗಲೂರು ಮುಖ್ಯರಸ್ತೆ (ನ್ಯೂ ಏರ್ಪೋರ್ಟ್ ರಸ್ತೆ) ಜಲಾವೃತವಾದ ಪರಿಣಾಮ ಸಂಚಾರ ಅಸ್ತವ್ಯಸ್ತಗೊಂಡು ತೊಂದರೆ ಉಂಟಾಗಿದೆ. ಬೆಂಗಳೂರು ಪೂರ್ವ ನಗರ ಪಾಲಿಕೆಯ ಹೊರಮಾವು ವಾರ್ಡ್​​ ವ್ಯಾಪ್ತಿಯಲ್ಲಿ ಮುಖ್ಯರಸ್ತೆ ಮೇಲೆಯೇ ಪ್ರವಾಹದಂತೆ ನೀರು ಹರಿದ ಪರಿಣಾಮ, ರಸ್ತೆ ಯಾವುದು? ಫುಟ್​​ಪಾತ್​​ ಯಾವುದು ಎಂದು ಜನ ಹುಡುಕಬೇಕಾದ ಸ್ಥಿತಿ ಉಂಟಾಗಿದೆ.

3 ಕಿಲೋ ಮೀಟರ್​​ ಟ್ರಾಫಿಕ್​​ ಜಾಮ್​​

ರಸ್ತೆಯಲ್ಲೇ ನೀರು ನಿಂತು ಸಂಚಾರ ಸಮಸ್ಯೆ ಉಂಟಾಗಿದ್ದು, ನ್ಯೂ ಏರ್ಪೋರ್ಟ್ ರಸ್ತೆಯಲ್ಲಿ ವಾಹನಗಳು ಸಾಲುಗಟ್ಟಿನಿಂತ ಪ್ರಸಂಗ ನಡೆದಿದೆ. ಸುಮಾರು 3 ಕಿಲೋ ಮೀಟರ್ ಟ್ರಾಫಿಕ್ ಜಾಮ್ ಉಂಟಾಗಿದೆ.

ಇದನ್ನೂ ಓದಿ: ಕೈಕೊಟ್ಟ ಮಳೆ; ಬಳ್ಳಾರಿ, ವಿಜಯನಗರದಿಂದ ಬರೋಬ್ಬರಿ 13,000 ಮಂದಿ ಗುಳೆ?

ರಾಜ್ಯದ ಹಲವೆಡೆ ಮಳೆಯ ಮುನ್ಸೂಚನೆ

ಮುಂದಿನ 24 ಗಂಟೆಗಳ ಅವಧಿಯಲ್ಲಿ ಕರಾವಳಿ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಒಂದು ಅಥವಾ ಎರಡು ಪ್ರದೇಶಗಳಲ್ಲಿ ಭಾರಿ ಮಳೆ ಅಂದಾಜಿಸಲಾಗಿದೆ. ಉಡುಪಿಯ ಕೆಲವಡೆ ಭಾರಿ ಗಾಳಿಯ ಮುನ್ಸೂಚನೆ ನೀಡಲಾಗಿದ್ದು, ಬಳ್ಳಾರಿ, ದಾವಣಗೆರೆ, ಮೈಸೂರು, ವಿಜಯನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಹಾಸನ, ಕೋಲಾರ, ಮಂಡ್ಯ, ರಾಮನಗರ ಮತ್ತು ತುಮಕೂರು ಜಿಲ್ಲೆಗಳಲ್ಲಿಯೂ ಮಳೆಯ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 6:58 pm, Wed, 22 July 26

Source link

ಸೌಜನ್ಯ ಕೊಲೆ ಪ್ರಕರಣ: ಮರುತನಿಖೆಗೆ ಸುಪ್ರೀಂ ಅಸ್ತು; ಸ್ಥಳಕ್ಕೂ ಹೋಗದ ಸಿಬಿಐಗೆ ತರಾಟೆ – Kannada News | Dharmasthala Sowjanya: SC Paves Way for Justice, Considers SIT or Retired Judge Oversight

ಸೌಜನ್ಯ ಮತ್ತು ಸುಪ್ರೀಂ ಕೋರ್ಟ್​​

ಮಂಗಳೂರು ಜು 22: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದಲ್ಲಿ 14 ವರ್ಷಗಳ ಹಿಂದೆ ನಡೆದಿದ್ದ ವಿದ್ಯಾರ್ಥಿನಿ ಸೌಜನ್ಯ ಅತ್ಯಾ*ರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಇಂದು (ಜು.22) ಮಹತ್ವದ ನಿರ್ಧಾರ ಕೈಗೊಂಡಿದೆ. ಪ್ರಕರಣದ ಮರುತನಿಖೆಗೆ ಸಮ್ಮತಿಸಿರುವ ಸುಪ್ರೀಂ ಕೋರ್ಟ್ , ವಿಚಾರಣೆ ವೇಳೆ ಸಿಬಿಐ ತನಿಖೆಯ ದಾರಿಯನ್ನು ನೋಡಿ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.

ತನಿಖೆಯ ಸ್ವರೂಪ ಹಾಗೂ ಯಾವ ಏಜೆನ್ಸಿ ಮೂಲಕ ಮರುತನಿಖೆ ನಡೆಸಬೇಕು ಎಂಬುದರ ಕುರಿತು ಸುದೀರ್ಘ ವಾದ-ಪ್ರತಿವಾದ ಆಲಿಸಿದ ಪೀಠವು ತನ್ನ ಆದೇಶವನ್ನು ಕಾಯ್ದಿರಿಸಿದೆ.

ಸ್ಥಳಕ್ಕೂ ಹೋಗಿಲ್ಲ, ನೆಪ ಹೇಳಬೇಡಿ: ಸಿಬಿಐಗೆ ಸುಪ್ರೀಂ ತರಾಟೆ

ಸೌಜನ್ಯ ಅವರ ತಾಯಿ ಕುಸುಮಾವತಿ ಗೌಡ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಸಿಬಿಐ ನಡೆಗೆ ಸುಪ್ರೀಂ ಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿತು. ಪ್ರಕರಣ ನಡೆದು 14 ವರ್ಷಗಳಾಗಿದ್ದರೂ ಸರಿಯಾದ ತನಿಖೆ ನಡೆದಿಲ್ಲ. ಸಿಐಡಿ (CID) ನೀಡಿದ್ದ ವರದಿಯನ್ನಷ್ಟೇ ಸಿಬಿಐ ಭಾಷಾಂತರಿಸಿ  ಸಿದ್ದಪಡಿಸಲಾಗಿದೆ. ಹೊರತು, ಸಿಬಿಐ ತನಿಖಾಧಿಕಾರಿ ಘಟನಾ ಸ್ಥಳಕ್ಕೂ ಭೇಟಿ ನೀಡಿಲ್ಲ. ಕೆಳಹಂತದ ನ್ಯಾಯಾಲಯದಲ್ಲಿ ಇನ್ನೂ ಕೆಲವು ಆರೋಪಿಗಳ ವಿರುದ್ಧ ತನಿಖೆ ನಡೆಸಬೇಕಿದೆ ಎಂದು ಈ ಹಿಂದೆ ಹೇಳಿದ್ದ ಸಿಬಿಐ, ಈಗ ಸಿಬ್ಬಂದಿ ಕೊರತೆ ಮತ್ತು ಹಣಕಾಸಿನ ಅಭಾವ ಎಂದು ನೆಪ ಹೇಳುತ್ತಿರುವುದು ಅತ್ಯಂತ ಅಸಮಂಜಸ ಎಂದು ಪೀಠ ತೀವ್ರ ತರಾಟೆಗೆ ತೆಗೆದುಕೊಂಡಿದೆ.

ಎಸ್‌ಐಟಿ ರಚನೆಗೆ ರಾಜ್ಯ ಅಸ್ತು; ನಿವೃತ್ತ ಜಡ್ಜ್ ಉಸ್ತುವಾರಿಗೆ ತಾಯಿ ಪಟ್ಟು:

ವಿಚಾರಣೆ ವೇಳೆ ರಾಜ್ಯ ಸರ್ಕಾರವು ಪ್ರಕರಣದ ಮರುತನಿಖೆಗಾಗಿ ‘ವಿಶೇಷ ತನಿಖಾ ತಂಡ’ವನ್ನು ರಚಿಸಲು ತಾನು ಸಂಪೂರ್ಣ ಸಿದ್ಧವಿರುವುದಾಗಿ ಸುಪ್ರೀಂ ಕೋರ್ಟ್‌ಗೆ ಸ್ಪಷ್ಟಪಡಿಸಿದೆ. ಇನ್ನೊಂದೆಡೆ, ಅರ್ಜಿದಾರರಾದ ಸೌಜನ್ಯ ತಾಯಿ ಕುಸುಮಾವತಿ ಗೌಡ ಅವರು, “ಸಿಬಿಐ ಮೇಲಿನ ಭರವಸೆ ಹುಸಿಯಾಗಿದ್ದು, ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಾಧೀಶರ ನೇರ ಉಸ್ತುವಾರಿಯಲ್ಲೇ ಮರುತನಿಖೆ ನಡೆಯಬೇಕು” ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ: TV9 Kannada News Live: ಸೌಜನ್ಯ ಕೊಲೆ ಪ್ರಕರಣ: ಮರುತನಿಖೆಗೆ ಸುಪ್ರೀಂ ಕೋರ್ಟ್ ಒಪ್ಪಿಗೆ

ಅಂತಿಮ ಆದೇಶದಲ್ಲಿ ವಿಸ್ತೃತ ನಿರ್ದೇಶನ:

ಮರುತನಿಖೆಯನ್ನು ಎಸ್‌ಐಟಿಗೆ ವಹಿಸಬೇಕೇ ಅಥವಾ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದ ತಂಡಕ್ಕೆ ನೀಡಬೇಕೇ ಎಂಬ ಬಗ್ಗೆ ಸುಪ್ರೀಂ ಕೋರ್ಟ್ ತನ್ನ ಅಂತಿಮ ಆದೇಶದಲ್ಲಿ ವಿಸ್ತೃತವಾದ ನಿರ್ದೇಶನಗಳು ಹಾಗೂ ಮಾರ್ಗಸೂಚಿಗಳನ್ನು ನೀಡಲಿದೆ. 14 ವರ್ಷಗಳ ಸುದೀರ್ಘ ಕಾನೂನು ಹೋರಾಟದ ನಂತರ ಸುಪ್ರೀಂ ಕೋರ್ಟ್ ಮರುತನಿಖೆಗೆ ಸಮ್ಮತಿಸಿರುವುದು, ನೈಜ ಆರೋಪಿಗಳಿಗೆ ಶಿಕ್ಷೆಯಾಗಲಿ ಎಂದು ಕಾಯುತ್ತಿರುವ ಕರಾವಳಿ ಜನತೆಯಲ್ಲಿ ಹೊಸ ಭರವಸೆ ಮೂಡಿಸಿದೆ. ಇನ್ನು ನಾಳೆ ಯಾರು ಈ ತನಿಖೆಯನ್ನು ನಡೆಸಬೇಕು ಎಂಬುದನ್ನು ಸುಪ್ರೀಂ ಕೋರ್ಟ್​​ ತಿಳಿಸಲಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರಿಗೆ ಪಿಒಪಿ ಗಣೇಶ ಮೂರ್ತಿಗಳ ಎಂಟ್ರಿ: ಪ್ರಧಾನಿ ಮೋದಿ ಕರೆಗೂ ಇಲ್ಲ ಬೆಲೆ! – Kannada News | Bengaluru Markets entry with POP Ganesha Idols Despite PM Modi’s Eco Friendly Push

ಪಿಒಪಿ ಗಣೇಶ ಮೂರ್ತಿಗಳುImage Credit source: tv9 kannada

ಬೆಂಗಳೂರು, ಜುಲೈ 22: ಎಲ್ಲಾ ಹಬ್ಬಗಳಲ್ಲಿ ಅತ್ಯಂತ ಅದ್ಧೂರಿ ಹಾಗೂ ಕಲರ್ ಫುಲ್​ ಹಬ್ಬ ಅಂದರೆ ಅದು ಗೌರಿ-ಗಣೇಶ ಹಬ್ಬ (Ganesh Chaturthi). ಆದರೆ ಕಳೆದ ಕೆಲವು ವರ್ಷಗಳಿಂದ ಗಣೇಶ ಚತುರ್ಥಿ ಹಬ್ಬದ ಸಮಯದಲ್ಲಿ ಪಿಒಪಿ (POP) ಗಣೇಶ ಮೂರ್ತಿಗಳು ಆರ್ಭಟ ಹೆಚ್ಚಾಗಿದೆ. ಇದು ಪರಿಸರಕ್ಕೂ ಹಾನಿಯಾಗುತ್ತಿದ್ದು, ಧಾರ್ಮಿಕ ಭಾವನೆಗೂ ಧಕ್ಕೆಯಾಗಿದೆ. ಈ ಹಿನ್ನೆಲೆಯಲ್ಲಿ, ಈ ವರ್ಷ ಗಣೇಶ ಹಬ್ಬಕ್ಕೆ ಎರಡು ತಿಂಗಳು ಮುಂಚಿತವಾಗಿಯೇ ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ಎಚ್ಚರಿಸಿದ್ದರು. ಆದರೆ, ಪ್ರಧಾನಿಗಳ ಕರೆಯನ್ನು ಮೀರಿಯೂ ಈಗ ರಾಜಧಾನಿ ಬೆಂಗಳೂರಿಗೆ (bangaluru) ಪಿಒಪಿ ಗಣೇಶ ಮೂರ್ತಿಗಳು ಎಂಟ್ರಿ ನೀಡುತ್ತಿವೆ.

ಬೆಂಗಳೂರಿಗೆ ಪಿಒಪಿ ಗಣೇಶ ಮೂರ್ತಿಗಳು ಎಂಟ್ರಿ

ಈ ವರ್ಷ ಸೆಪ್ಟಂಬರ್ 14ರಂದು ನಾಡಿನಾದ್ಯಂತ ಗೌರಿ-ಗಣೇಶ ಹಬ್ಬ ಆಚರಿಸಲಾಗುತ್ತಿದೆ. ಆದರೆ ಇಷ್ಟು ಬೇಗ ಏಕೆ ಈ ಸುದ್ದಿ ಅಂದರೆ ಗಣೇಶ ಚತುರ್ಥಿಗೂ ಎರಡು ತಿಂಗಳು ಮೊದಲೇ ರಾಜಧಾನಿ ಬೆಂಗಳೂರಿಗೆ ಪಿಒಪಿ ಗಣೇಶ ಮೂರ್ತಿಗಳು ಎಂಟ್ರಿ ಕೊಟ್ಟಿವೆ. ಆ ಮೂಲಕ ಪ್ರಧಾನಿ ನರೇಂದ್ರ ಮೋದಿ ಸಲಹೆಗೂ ಕವಡೆ ಕಾಸಿನ ಬೆಲೆ ಇಲ್ಲದಾಗಿದೆ.

ಇದನ್ನೂ ಓದಿ: ಗಣೇಶ ಹಬ್ಬಕ್ಕೂ ಮುನ್ನವೇ ಸುರೇಶ್ ಕುಮಾರ್ ಅಲರ್ಟ್​​: ಪಿಓಪಿ ಮೂರ್ತಿಗಳ ಬಳಕೆ ತಡೆಗಟ್ಟುವಂತೆ ಕೃಷ್ಣಬೈರೇಗೌಡಗೆ ಪತ್ರ

ಪ್ರಧಾನಿ ಮೋದಿ ಅವರು ಜೂನ್ 28ರಂದೇ ತಮ್ಮ ‘ಮನ್ ಕಿ ಬಾತ್’ ಕಾರ್ಯಕ್ರದಲ್ಲಿ ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ಬಳಸುವಂತೆ ಹಾಗೂ ಪಿಒಪಿ ಮೂರ್ತಿಗಳನ್ನು ತ್ಯಜಿಸುವಂತೆ ಕರೆ ನೀಡಿದ್ದರು. ಈ ಬೆನ್ನಲ್ಲೇ ಇತ್ತೀಚೆಗೆ ಮಾಜಿ ಸಚಿವ, ರಾಜಾಜಿನಗರ ಶಾಸಕ ಸುರೇಶ್ ಕುಮಾರ್, ಬೆಂಗಳೂರು ನಗರಾಭಿವೃದ್ಧಿ ಇಲಾಖೆ ಸಚಿವ ಕೃಷ್ಣಬೈರೇಗೌಡಗೆ ತುರ್ತು ಪತ್ರ ಬರೆಯುವ ಮೂಲಕ ಪಿಒಪಿ ಮೂರ್ತಿಗಳಿಗೆ ಕಡಿವಾಣ ಹಾಕುವಂತೆ ಒತ್ತಾಯಿಸಿದ್ದರು.

ಮೋದಿ ಕರೆಗೂ ಇಲ್ಲ ಬೆಲೆ

ಸದ್ಯ ಗಣೇಶ ಹಬ್ಬಕ್ಕೆ ದಿನಗಣನೆ ಶುರುವಾಗಿದೆ. ಆದರೆ ರಾಜಧಾನಿಯ ಮಾರುಕಟ್ಟೆಗೆ ಪಿಒಪಿ ಗಣೇಶ ಮೂರ್ತಿಗಳ ಎಂಟ್ರಿಯಾಗಿದೆ. ಪ್ರತಿ ವರ್ಷ ಗಣೇಶ ಹಬ್ಬದ ಸಮಯದಲ್ಲಿ ಸರ್ಕಾರ ಪಿಒಪಿ ಗಣೇಶ ಮೂರ್ತಿಗಳಿಗೆ ಕಡಿವಾಣ ಹಾಕಲು ಮುಂದಾಗುತ್ತದೆ. ಆದರೆ ಅಷ್ಟರಲ್ಲಿ ಮಾರುಕಟ್ಟೆಗೆ ಸಾಕಷ್ಟು ಪ್ರಮಾಣದಲ್ಲಿ ಪಿಒಪಿ ಗಣೇಶ ಮೂರ್ತಿಗಳು ಮಾರುಕಟ್ಟೆಗೆ ಬರುತ್ತಿದ್ದವು. ಹೀಗಾಗಿ ನಿಯಂತ್ರಣ ಕಷ್ಟವಾಗುತಿತ್ತು. ಆದರೆ ಈ ವರ್ಷ ಎರಡುವರೆ ತಿಂಗಳು ಮೊದಲೇ ಪ್ರಧಾನಿ ಮೋದಿ ಎಚ್ಚರಿಸಿದರು ಮಾರುಕಟ್ಟೆಗೆ ಪಿಒಪಿ ಮೂರ್ತಿಗಳು ಬರುತ್ತಿವೆ.

ಇದನ್ನೂ ಓದಿ: Raichur News: ರಾಯಚೂರಿನಲ್ಲಿ ಬೀದಿ ನಾಯಿಗಳ ದಾಳಿಗೆ ತತ್ತರಿಸಿದ ಜನತೆ; 3 ವರ್ಷದ ಬಾಲಕಿಗೆ ಗಂಭೀರ ಗಾಯ!

ಒಟ್ಟಿನಲ್ಲಿ ಪ್ರಧಾನಿ ಮೋದಿ ಕರೆ ಬೆನ್ನಲ್ಲೇ ಬೆಂಗಳೂರಿಗೆ ಪಿಒಪಿ ಗಣೇಶ ಮೂರ್ತಿಗಳು ಎಂಟ್ರಿ ಕೊಟ್ಟಿರುವುದು ಕಳವಳಕಾರಿ ಸಂಗತಿ. ಮುಂದಿನ ದಿನಗಳಲ್ಲಿ ಸರ್ಕಾರ ಯಾವ ಕ್ರಮ ಕೈಗೊಳ್ಳುತ್ತದೆ ಅಂತ ಕಾದು ನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 7:11 pm, Wed, 22 July 26

Source link

ಪ್ರತಿಭಟನಾಕಾರರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಉಪವಾಸ ನಿಲ್ಲಿಸುವೆ; ಸರ್ಕಾರಕ್ಕೆ ಸೋನಮ್ ವಾಂಗ್ಚುಕ್ ಪತ್ರ – Kannada News | Sonam Wangchuk write Letter to Government says will end hunger strike on assurance of no legal action against protesters

ನವದೆಹಲಿ, ಜುಲೈ 22: ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆಯನ್ನು ಖಂಡಿಸಿ ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ (Dharmendra Pradhan) ಅವರ ರಾಜೀನಾಮೆಗೆ ಆಗ್ರಹಿಸಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಸಾಮಾಜಿಕ ಕಾರ್ಯಕರ್ತ ಸೋನಮ್ ವಾಂಗ್ಚುಕ್ (Sonam Wangchuk) ತಮ್ಮ ಉಪವಾಸವನ್ನು ಕೊನೆಗೊಳಿಸಲು ಕೇಂದ್ರ ಸರ್ಕಾರಕ್ಕೆ ಕೆಲವು ಷರತ್ತುಗಳನ್ನು ವಿಧಿಸಿ ಇಂದು ಪತ್ರ ಬರೆದಿದ್ದಾರೆ. ಗುರುಗ್ರಾಮದ ಮೇದಾಂತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋನಮ್ ವಾಂಗ್ಚುಕ್ ಅವರನ್ನು ಮಂಗಳವಾರ ಕೇಂದ್ರ ಸಚಿವರಾದ ಜೆ.ಪಿ. ನಡ್ಡಾ ಮತ್ತು ಜಿತೇಂದ್ರ ಸಿಂಗ್ ಭೇಟಿಯಾದ ಬೆನ್ನಲ್ಲೇ ಈ ಪ್ರಮುಖ ಬೆಳವಣಿಗೆ ನಡೆದಿದೆ.

ಆಸ್ಪತ್ರೆಗೆ ಭೇಟಿ ನೀಡಿ ಉಪವಾಸ ಹಿಂಪಡೆಯುವಂತೆ ವಿನಂತಿಸಿದ್ದಕ್ಕಾಗಿ ಸಚಿವರಿಗೆ ಧನ್ಯವಾದ ತಿಳಿಸಿರುವ ಸೋನಮ್ ವಾಂಗ್ಚುಕ್, ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ಮತ್ತು ಹಗರಣದ ಹೊಣೆಗಾರಿಕೆಗೆ ಸಂಬಂಧಿಸಿದಂತೆ ಸರ್ಕಾರದ ಭರವಸೆಗಳಿಗೆ ಪಟ್ಟು ಹಿಡಿದಿದ್ದಾರೆ. ತಮ್ಮ ಭೇಟಿಯ ಸಮಯದಲ್ಲಿ ಸಚಿವರು ಎರಡು ಪ್ರಮುಖ ಬೇಡಿಕೆಗಳನ್ನು ಪರಿಶೀಲಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ವಾಂಗ್ಚುಕ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: ದೆಹಲಿ ಹೈಕೋರ್ಟ್ ಆದೇಶದ ಬೆನ್ನಲ್ಲೇ ಉಪವಾಸ ಸತ್ಯಾಗ್ರಹ ನಿರತ ಸೋನಮ್ ವಾಂಗ್ಚುಕ್ ಮೇದಾಂತ ಆಸ್ಪತ್ರೆಗೆ ಶಿಫ್ಟ್

ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆಯ ನಂತರ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡುವುದು, ಶಿಕ್ಷಣ ಸಚಿವರ ರಾಜೀನಾಮೆಯ ಪರಿಶೀಲನೆ ಸೇರಿದಂತೆ ಸಂಸತ್ತಿನಲ್ಲಿ ಅರ್ಥಪೂರ್ಣ ಚರ್ಚೆ ನಡೆಸುವುದಾಗಿ ಕೇಂದ್ರ ಸಚಿವರು ನನಗೆ ಭರವಸೆ ನೀಡಿದ್ದಾರೆ ಎಂದು ಸೋನಮ್ ವಾಂಗ್ಚುಕ್ ತಿಳಿಸಿದ್ದಾರೆ.

ಜುಲೈ 20ರ ‘ಚಲೋ ಸಂಸದ್’ ಮೆರವಣಿಗೆ ಮತ್ತು ಪ್ರತಿಭಟನಾಕಾರರ ಮೇಲಿನ ಪೊಲೀಸ್ ಲಾಠಿಚಾರ್ಜ್ ಬಗ್ಗೆ ಉಲ್ಲೇಖಿಸಿದ ವಾಂಗ್ಚುಕ್, “ಪೊಲೀಸರ ಅತಿಯಾದ ಬಲಪ್ರಯೋಗ ಮತ್ತು ದೌರ್ಜನ್ಯಗಳ ಹೊರತಾಗಿಯೂ ಪ್ರತಿಭಟನೆಯು ಅತ್ಯಂತ ಶಾಂತಿಯುತವಾಗಿದೆ. ಪ್ರಜಾಪ್ರಭುತ್ವದ ಮಾದರಿಯ ಪ್ರತಿಭಟನೆಗೆ ಅವರ ತಾಳ್ಮೆ ಮತ್ತು ಬದ್ಧತೆಯನ್ನು ಇಡೀ ದೇಶ ಮತ್ತು ಜಗತ್ತು ವೀಕ್ಷಿಸಿದೆ” ಎಂದಿದ್ದಾರೆ.

ಉಪವಾಸ ಹಿಂಪಡೆಯಲು ಷರತ್ತು:

ವಿವಿಧ ಪಕ್ಷಗಳ ಸುಮಾರು 65 ಸಂಸದರು ತಮಗೆ ಪತ್ರ ಬರೆದು ಉಪವಾಸ ಹಿಂಪಡೆಯುವಂತೆ ಮತ್ತು ದೇಶಸೇವೆಗೆ ಹಿಂತಿರುಗುವಂತೆ ವಿನಂತಿಸಿದ್ದಾರೆ ಎಂದು ವಾಂಗ್ಚುಕ್ ವಿವರಿಸಿದ್ದಾರೆ. ಪ್ರತಿಭಟನಾಕಾರರ ವಿರುದ್ಧ ಸರ್ಕಾರ ಯಾವುದೇ ಕಾನೂನು ಕ್ರಮ ಕೈಗೊಳ್ಳುವುದಿಲ್ಲ ಎಂಬ ಖಚಿತ ಭರವಸೆ ನೀಡಿದರೆ ಮಾತ್ರ ತಮ್ಮ ಉಪವಾಸವನ್ನು ಕೊನೆಗೊಳಿಸುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ. “ನಾನು ಬದುಕಲು ಬಯಸುತ್ತೇನೆ. ನನ್ನ ವಿದ್ಯಾರ್ಥಿಗಳು, ಶಿಕ್ಷಣ ಮತ್ತು ನನ್ನ ಜೀವನವನ್ನು ನಿರೂಪಿಸಿದ ಕೆಲಸಕ್ಕೆ ಹಿಂತಿರುಗಲು ನಾನು ಬಯಸುತ್ತೇನೆ. ಆದರೆ, ಈ ಚಳವಳಿಗೆ ಕಾರಣರಾದ ಯುವಜನರ ಭವಿಷ್ಯದ ಬೆಲೆಯ ಮೇಲೆ ನಾನು ಅದನ್ನು ಮಾಡಲು ಸಾಧ್ಯವಿಲ್ಲ. ಈ ಚಳವಳಿಯಲ್ಲಿ ಭಾಗವಹಿಸಿದ್ದಕ್ಕಾಗಿ ಯಾವುದೇ ಯುವ ಪ್ರತಿಭಟನಾಕಾರರ ವಿರುದ್ಧ ಕಾನೂನು ಕ್ರಮಗಳನ್ನು ತೆಗೆದುಕೊಳ್ಳುವುದಿಲ್ಲ ಎಂಬ ಸ್ಪಷ್ಟ ಭರವಸೆಯನ್ನು ಸರ್ಕಾರ ನೀಡಿದರೆ ನಾನು ಒಪ್ಪುತ್ತೇನೆ” ಎಂದು ಅವರು ಬರೆದಿದ್ದಾರೆ.

ಇದನ್ನೂ ಓದಿ: ಸೋನಮ್ ವಾಂಗ್ಚುಕ್ 3 ವಾರಗಳ ಉಪವಾಸ ಸತ್ಯಾಗ್ರಹ ಅಂತ್ಯಕ್ಕೆ ಷರತ್ತು ವಿಧಿಸಿದ ಪತ್ನಿ

ಉಪವಾಸ ಸತ್ಯಾಗ್ರಹದ 21ನೇ ದಿನವಾದ ಜುಲೈ 18ರಂದು ಸೋನಮ್ ವಾಂಗ್ಚುಕ್ ಅವರ ಆರೋಗ್ಯ ಕ್ಷೀಣಿಸಿದ ಕಾರಣ ದೆಹಲಿ ಪೊಲೀಸರು ಅವರನ್ನು ಪ್ರತಿಭಟನಾ ಸ್ಥಳದಿಂದ ತೆರವುಗೊಳಿಸಿ ಸಫ್ದರ್‌ಜಂಗ್ ಆಸ್ಪತ್ರೆಗೆ ದಾಖಲಿಸಿದ್ದರು. ತದನಂತರ, ಸಫ್ದರ್‌ಜಂಗ್ ಆಸ್ಪತ್ರೆಯ ಚಿಕಿತ್ಸೆಯನ್ನು ಪ್ರಶ್ನಿಸಿ ಅವರ ಪತ್ನಿ ಗೀತಾಂಜಲಿ ಜಿ. ಆಂಗ್ಮೊ ಸಲ್ಲಿಸಿದ್ದ ಅರ್ಜಿಯ ಮೇರೆಗೆ ದೆಹಲಿ ಹೈಕೋರ್ಟ್ ಅವರನ್ನು ತಕ್ಷಣವೇ ಗುರುಗ್ರಾಮದ ಮೇದಾಂತ ಆಸ್ಪತ್ರೆಗೆ ಸ್ಥಳಾಂತರಿಸುವಂತೆ ಆದೇಶಿಸಿತ್ತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವಿದೇಶಿ ತಂಡದ ಪರ ಪಾದಾರ್ಪಣೆ ಮಾಡಲಿರುವ ಕುಲ್ದೀಪ್ ಯಾದವ್ – Kannada News | Kuldeep Yadav Joins Yorkshire: India Spinner to Debut in County Cricket After Team India Snub

ಕುಲ್ದೀಪ್‌ ಯಾದವ್, ಜೋ ರೂಟ್ ಮತ್ತು ಜಾನಿ ಬೈರ್‌ಸ್ಟೋವ್‌ರಂತಹ ಸ್ಟಾರ್ ಇಂಗ್ಲಿಷ್ ಕ್ರಿಕೆಟಿಗರಿಗೆ ನೆಲೆಯಾಗಿರುವ ಯಾರ್ಕ್‌ಷೈರ್ ಕೌಂಟಿ ಕ್ರಿಕೆಟ್ ಕ್ಲಬ್ ಪರ ಆಡಲು ಸಜ್ಜಾಗಿದ್ದಾರೆ, ಮುಂದಿನ ಕೆಲವು ಪಂದ್ಯಗಳಲ್ಲಿ ಕುಲದೀಪ್ ಅವರನ್ನು ಆಡಿಸಲು ಯಾರ್ಕ್‌ಷೈರ್ ಕೌಂಟಿ ಒಪ್ಪಂದ ಮಾಡಿಕೊಂಡಿದೆ(PC-PTI).

Source link

ಸೈಲೆಂಟಾಗಿ ನಿಮ್ಮ ಕ್ರೆಡಿಟ್ ಲಿಮಿಟ್​ಗೆ ಕತ್ತರಿ ಬೀಳಬಹುದು; ಬ್ಯಾಂಕುಗಳು ಯಾಕೆ ಈ ಕೆಲಸ ಮಾಡುತ್ತವೆ ಗೊತ್ತಾ? – Kannada News | Surprised with sudden reduction in credit limit of your credit card, know the reasons behind it

ಕ್ರೆಡಿಟ್ ಕಾರ್ಡ್Image Credit source: Ekaterina Demidova/Moment/Getty Images

ಕ್ರೆಡಿಟ್ ಕಾರ್ಡ್ (Credit Card) ಬಳಸುತ್ತಿರುವವರು ಯಾವುದಾದೂ ಸಂದರ್ಭದಲ್ಲಿ ತಮ್ಮ ಕ್ರೆಡಿಟ್ ಲಿಮಿಟ್ (Credit Limit) ಇದ್ದಕ್ಕಿದ್ದಂತೆ ಕಡಿಮೆ ಆಗಿರುವುದು ಗಮನಕ್ಕೆ ಬಂದಿರಬಹುದು. ರೆಗ್ಯುಲರ್ ಆಗಿ ಬಳಸುತ್ತಿರುವ ಕ್ರೆಡಿಟ್ ಕಾರ್ಡ್​ನಲ್ಲಿ ಮಿತಿಯನ್ನು ದಿಢೀರ್ ಇಳಿಸಿರುವುದು, ಅದೂ ನಿಮಗೆ ಸುಳಿವೇ ಇಲ್ಲದಂತೆ ಕತ್ತರಿ ಹಾಕಿರುವುದು ಅಚ್ಚರಿ ತಂದಿರಬಹುದು. ಕ್ರೆಡಿಟ್ ಕಾರ್ಡ್ ಸಂಸ್ಥೆಗಳು ಈ ಕ್ರಮ ತೆಗೆದುಕೊಳ್ಳಲು ಕಾರಣಗಳಿವೆ. ನಿಮ್ಮ ಕ್ರೆಡಿಟ್ ಕಾರ್ಡ್ ನಿರ್ವಹಣೆ ಹೇಗಿದೆ ಎನ್ನುವುದು ಇಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಕ್ರೆಡಿಟ್ ಲಿಮಿಟ್ ಅನ್ನು ಕಡಿಮೆ ಮಾಡಲು ಪ್ರಮುಖ ಕಾರಣಗಳೇನು ಎನ್ನುವ ವಿವರ ಇಲ್ಲಿದೆ.

1. ಪಾವತಿಯಲ್ಲಿ ಶಿಸ್ತು ಇಲ್ಲದಿರುವುದು

ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಯಲ್ಲಿ ಶಿಸ್ತು ಇಲ್ಲದಿದ್ದರೆ ಬ್ಯಾಂಕುಗಳು ಬೇಗ ಗಮನಿಸುತ್ತವೆ. ಕ್ರೆಡಿಟ್ ಕಾರ್ಡ್ ಬಿಲ್ ಅನ್ನು ತಡವಾಗಿ ಪಾವತಿಸಿದರೆ, ಅಥವಾ ಕನಿಷ್ಠ ಬಾಕಿಯನ್ನು ಮಾತ್ರ ಪಾವತಿಸುವ ಪ್ರವೃತ್ತಿ ಇದ್ದರೆ ಆಗ ಬ್ಯಾಂಕುಗಳು ನಿಮ್ಮ ಕಾರ್ಡ್​ನ ಕ್ರೆಡಿಟ್ ಮಿತಿಯನ್ನು ಇಳಿಸುವ ನಿರ್ಧಾರಕ್ಕೆ ಬರಬಹುದು.

ಇದನ್ನೂ ಓದಿ: ಪಿಎಫ್ ಸದಸ್ಯರಿಗೆ ಪೆನ್ಷನ್; ಕನಿಷ್ಠ ಪಿಂಚಣಿಯನ್ನು 3,000 ಅಲ್ಲ, 7,500 ರೂಗೆ ಏರಿಸಬೇಕೆಂದು ಒತ್ತಾಯ; ಸರ್ಕಾರದ ಪ್ರತಿಕ್ರಿಯೆಯೇನು?

2. ಅತಿಯಾಗಿ ಕಾರ್ಡ್ ಬಳಕೆ

ನಿಮ್ಮ ಕ್ರೆಡಿಟ್ ಕಾರ್ಡ್ ಅನ್ನು ಬಹಳ ನಿಯಮಿತವಾಗಿ ಮತ್ತು ಅತಿಯಾಗಿ ಬಳಸುತ್ತಿರುವುದನ್ನು ನಕಾರಾತ್ಮಕ ಸಿಗ್ನಲ್ ಎಂದು ಬ್ಯಾಂಕುಗಳು ಪರಿಗಣಿಸುತ್ತವೆ.

3. ಕಾರ್ಡನ್ನೇ ಬಳಸದಿದ್ದರೆ

ಕ್ರೆಡಿಟ್ ಕಾರ್ಡ್ ಅನ್ನು ಅತಿಯಾಗಿ ಬಳಸಿದರೂ ಕಷ್ಟ, ಕಾರ್ಡ್ ಅನ್ನು ಬಳಸದೇ ಇದ್ದರೂ ಕಷ್ಟ. ನೀವು ಒಂದು ಕ್ರೆಡಿಟ್ ಕಾರ್ಡ್ ಪಡೆದು ಅದನ್ನು ದೀರ್ಘ ಕಾಲ ಬಳಸದಿದ್ದರೆ, ಆ ಕಾರ್ಡ್ ಸುದೀರ್ಘ ಕಾಲ ನಿಷ್ಕ್ರಿಯವಾಗಿದ್ದರೆ ಬ್ಯಾಂಕು ಆ ಕ್ರೆಡಿಟ್ ಮಿತಿಯನ್ನು ಕಡಿಮೆ ಮಾಡಿ, ಬೇರೆಡೆ ಉಪಯೋಗಿಸಬಹುದು.

4. ಕ್ರೆಡಿಟ್ ಸ್ಕೋರ್ ಕಡಿಮೆಗೊಂಡರೆ…

ನಿಮ್ಮ ನಿಮ್ಮ ಸಿಬಿಲ್ ಅಥವಾ ಕ್ರೆಡಿಟ್ ಸ್ಕೋರ್ ಕಡಿಮೆ ಆದಾಗ ಅದು ಬೇಗ ಕ್ರೆಡಿಟ್ ಕಾರ್ಡ್ ಕಂಪನಿಗಳ ಗಮನಕ್ಕೆ ಬರುತ್ತದೆ. ಕೂಡಲೇ ಅವು ಕ್ರೆಡಿಟ್ ಮಿತಿಯನ್ನು ಪರಿಷ್ಕರಿಸಬಹುದು.

ಇದನ್ನೂ ಓದಿ: ಪಿಎಲ್​ಐಗೆ ಮುಂದುವರಿದ ಭರ್ಜರಿ ಸ್ಪಂದನೆ; ಮಾರ್ಚ್ ವೇಳೆಗೆ 2.40 ಲಕ್ಷ ಕೋಟಿ ರೂ ಹೂಡಿಕೆ: ಸಚಿವ ಜಿತಿನ್ ಪ್ರಸಾದ

ಕ್ರೆಡಿಟ್ ಕಾರ್ಡ್ ಹೇಗೆ ಬಳಸಬೇಕು; ಇಲ್ಲಿದೆ ಟಿಪ್ಸ್

ಕ್ರೆಡಿಟ್ ಕಾರ್ಡ್​ಗೆ ನೀಡಲಾಗಿರುವ ಕ್ರೆಡಿಟ್ ಲಿಮಿಟ್​ನಲ್ಲಿ ಶೇ. 30ಕ್ಕಿಂತ ಹೆಚ್ಚು ಬಳಕೆಯಾಗದಂತೆ ನೋಡಿಕೊಳ್ಳಿ. ಕ್ರೆಡಿಟ್ ಕಾರ್ಡ್ ಬಿಲ್ ಅನ್ನು ಪೂರ್ಣವಾಗಿ ಮತ್ತು ನಿಗದಿತ ದಿನದೊಳಗೆ ಪಾವತಿಸುವುದನ್ನು ಮರೆಯದಿರಿ. ಇದರಿಂದ ಉತ್ತಮ ಕ್ರೆಡಿಟ್ ಸ್ಕೋರ್ ಗಳಿಸಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ತುಳಸಿ ಸಸ್ಯ ಸೊಂಪಾಗಿ ಬೆಳೆಯಬೇಕೆಂದರೆ, ಮಳೆಗಾಲದಲ್ಲಿ ಈ ರೀತಿ ಗಿಡವನ್ನು ಆರೈಕೆ ಮಾಡಿ – Kannada News | How to care for tulsi plants during the rainy season

ಹಿಂದೂ ಧರ್ಮದಲ್ಲಿ ತುಳಸಿ (tulsi) ಗಿಡಕ್ಕೆ ವಿಶೇಷ ಮಹತ್ವವಿದೆ. ಪ್ರತಿಯೊಬ್ಬ ಹಿಂದೂಗಳ ಮನೆಯಲ್ಲೂ ತುಳಸಿ ಗಿಡ ಇದ್ದೇ ಇರುತ್ತದೆ. ಆದರೆ ಈ ತುಳಸಿ ಗಿಡ ಮಳೆಗಾಲದಲ್ಲಿ ಹಾಳಾಗಲು ಪ್ರಾರಂಭಿಸುತ್ತದೆ. ತೇವಾಂಶದಿಂದಾಗಿ ತುಳಸಿ ಎಲೆಗಳೆಲ್ಲಾ ಹಳದಿ ಬಣ್ಣಕ್ಕೆ ತಿರುಗಿ ಉದುರಲು ಪ್ರಾರಂಭಿಸುತ್ತವೆ. ಹಾಗಾಗಿ ಮಳೆಗಾಲದಲ್ಲಿ ಇತರ ಗಿಡಗಳ ಬಗ್ಗೆ ಕಾಳಜಿ ವಹಿಸುವಂತೆ ತುಳಗಿ ಗಿಡದ ಬಗ್ಗೆಯೂ ತುಸು ಆರೈಕೆ ಮಾಡಬೇಕು. ಆಗ ಮಾತ್ರ ಮಳೆಗಾಲದಲ್ಲಿಯೂ ಸಹ ತುಳಸಿ ಸೊಂಪಾಗಿ, ಆರೋಗ್ಯಕರವಾಗಿ ಬೆಳೆಯುತ್ತದೆ. ಮಳೆಗಾಲದಲ್ಲಿ ತುಳಸಿ ಗಿಡವನ್ನು ಯಾವ ರೀತಿ ಆರೈಕೆ ಮಾಡಬೇಕು ಎಂಬುದರ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಮಳೆಗಾಲದಲ್ಲಿ ತುಳಸಿ ಗಿಡದ ಆರೈಕೆ ಹೀಗಿರಲಿ:

ಮಳೆಗಾಲದಲ್ಲಿನ ತೇವಾಂಶದ ಕಾರಣದಿಂದ ತುಳಸಿ ಗಿಡಗಳು ಬೇಗನೆ ಹಾಳಾಗುತ್ತವೆ. ಹೀಗೆ ಮಳೆಗಾಲದಲ್ಲಿ ಗಿಡ ಹಾಳಾಗುವುದನ್ನು ತಪ್ಪಿಸಲು ಮತ್ತು ಸೊಂಪಾಗಿ ಬೆಳೆಯಲು ಮಳೆಗಾಲದಲ್ಲಿ ತುಳಸಿ ಗಿಡವನ್ನು ಯಾವ ರೀತಿ ಆರೈಕೆ ಮಾಡಬೇಕು ಎಂಬುದರ ಉಪಯುಕ್ತ ಮಾಹಿತಿಯನ್ನು ಮಧುರಾ ಭಟ್‌ ಎಂಬವರು ತಮ್ಮ ಪೇಸ್‌ಬುಕ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ವಿಡಿಯೋ ಇಲ್ಲಿದೆ ನೋಡಿ:‌

ಹೂವನ್ನು ಚಿವುಟಿ ಹಾಕಬೇಕು: ನಿಮ್ಮ ಮನೆಯ ತುಳಸಿ ಗಿಡವು ಸಹ ದಡ್ಡವಾಗಿ ಹರಡಿ ಬೆಳೆಯಬೇಕೆಂದರೆ ಅದರ ಹೂವನ್ನು ಚಿವುಟಿ ಹಾಕಬೇಕು. ಹೀಗೆ ಹೂವನ್ನು ಚಿವುಟಿ ಹಾಕುವುದರಿಂದ ಗಿಡದ ಎಲೆಗಳು ಸೊಂಪಾಗಿ ಬೆಳೆಯಲು ಸಹಾಯವಾಗುತ್ತದೆ. ಹೂವನ್ನು ತೆಗೆಯದಿದ್ದರೆ ಗಿಡದ ಬೆಳವಣಿಗೆಗೆ ಅಡ್ಡಿಯಾಗುತ್ತದೆ. ಹಾಗಾಗಿ ಮಳೆಗಾದಲ್ಲೂ ಹೂವುಗಳನ್ನು ಚಿವುಟಿ ಹಾಕಬೇಕು. ಈ ಕಾರ್ಯವನ್ನು ಆದಷ್ಟು ಬೆಳಗಿನ ಸಮಯದಲ್ಲಿ ಮಾಡಿದರೆ ಒಳ್ಳೆಯದು.

ಕಹಿಬೇವಿನ ಎಣ್ಣೆಯ ಬಳಕೆ: ಇತರ ಗಿಡಗಳಂತೆ ಮಳೆಗಾಲದಲ್ಲಿ ತುಳಸಿ ಗಿಡಕ್ಕೂ ಕೀಟ, ಹುಳಗಳು ಆವರಿಸುತ್ತವೆ. ಈ ಕೀಟಗಳು ಎಲೆಗಳನ್ನೆಲ್ಲಾ ತಿನ್ನುವುದು ಮಾತ್ರವಲ್ಲದೆ ಗಿಡದ ಬೆಳವಣಿಗೆಗೂ ಅಡ್ಡಿ ಮಾಡುತ್ತದೆ. ಹೀಗಿರುವಾಗ ಕಹಿಬೇವಿನ ಎಣ್ಣೆಯನ್ನು ಕೀಟಗಳಿರುವ ಪ್ರದೇಶಕ್ಕೆ ಸಿಂಪಡಣೆ ಮಾಡಬಹುದು. ಇದರ ಬದಲು ಜೋರಾಗಿ ನೀರು ಸಿಂಪಡಿಸಿಯೂ ಗಿಡದ ಮೇಲೆ ಅಂಟಿರುವ ಕೀಟಗಳನ್ನು ಹೋಗಲಾಡಿಸಬಹುದು.

ಇದನ್ನೂ ಓದಿ: ಮಳೆಗಾಲದಲ್ಲಿ ಗಿಡಗಳನ್ನು ಕಂಬಳಿ ಹುಳಗಳಿಂದ ರಕ್ಷಿಸಲು ಮನೆಮದ್ದುಗಳೇ ಸಾಕು

ಗೊಬ್ಬರದ ಬಳಕೆ: ಲಿಕ್ವಿಡ್‌ ಗೊಬ್ಬರದ ಬದಲು, ಮಳೆಗಾಲದಲ್ಲಿ ತುಳಸಿ ಗಿಡದ ಬುಡಕ್ಕೆ ಹರಳಿಂಡಿ ಹಾಕುವುದು ತುಂಬಾನೇ ಒಳ್ಳೆಯದು. ಸುಮಾರು ನಾಲ್ಕರಿಂದ ಐದು ಮುಷ್ಟಿಯಷ್ಟು ಈ ಗೊಬ್ಬರವನ್ನು ಹಾಕಬೇಕು. ಹರಳಿಂಡಿ ಸಾವಯವ ಗೊಬ್ಬರವಾಗಿದ್ದು, ಇದು ತುಳಸಿ ಗಿಡದ ಬೇರುಗಳಿಗೆ ಹಾನಿ ಮಾಡುವ ಹುಳಗಳನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ, ಮತ್ತು ತುಳಸಿ ಗಿಡ ಸೊಂಪಾಗಿ ಹಚ್ಚ ಹಸಿರಾಗಿ ಬೆಳೆಯಲು ಸಹಾಯ ಮಾಡುತ್ತದೆ.

ಮಳೆಗಾಲದಲ್ಲಿ ತುಳಸಿ ಗಿಡವನ್ನು ಈ ರೀತಿ ಆರೈಕೆ ಮಾಡುವ ಮೂಲಕ ತುಳಸಿ ಸೊಂಪಾಗಿ ಹಚ್ಚ ಹಸಿರಾಗಿ ಬೆಳೆಯುವಂತೆ ಮಾಡಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Viral: ಕಾಣೆಯಾದ ಸಾಕು ನಾಯಿ ಹುಡುಕಿಕೊಟ್ಟವರಿಗೆ 10,000 ರೂ ನಗದು ಬಹುಮಾನ ಘೋಷಿಸಿದ ಮಾಲೀಕ – Kannada News | Telangana: Owner announces Rs 10,000 cash reward for finding missing pet dog in Nalgonda district

ತೆಲಂಗಾಣ, ಜುಲೈ 22: ನೀವು ಹಣ, ಚಿನ್ನಾಭರಣ, ವಾಹನ, ಬೆಳೆ ಬಾಳುವ ವಸ್ತುಗಳು ಕಳೆದು ಹೋದರೆ ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲಿಸುವುದು ಸಾಮಾನ್ಯ.  ಆದರೆ, ನಾಗರಾಜು ಎಂಬ ವ್ಯಕ್ತಿ ಸಾಕು ನಾಯಿ (pet dog) ಕಾಣೆಯಾಗಿದೆ ಎಂದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ತನ್ನ ಪ್ರೀತಿಯ ಶ್ವಾನವನ್ನು ಹುಡುಕಿ ಕೊಟ್ಟವರಿಗೆ 10,000 ರೂ. ನಗದು ಬಹುಮಾನ ಘೋಷಿಸಿದ್ದಾರೆ. ತೆಲಂಗಾಣದ ನಲ್ಗೊಂಡ ಜಿಲ್ಲೆಯ (Nalgonda district in Telangana) ಮಿರಿಯಾಲಗುಡದಲ್ಲಿ ಈ ಘಟನೆ ನಡೆದಿದೆ.

ಇದೇ ತಿಂಗಳ ಜುಲೈ 18 ರಂದು ಅವರ ಸಾಕು ನಾಯಿ ಕಾಣೆಯಾಗಿದೆ. ಕುಟುಂಬದ ಸದಸ್ಯರೆಲ್ಲರೂ ಶ್ವಾನವನ್ನು ಹುಡುಕಿದರೂ ಯಾವುದೇ ಸುಳಿವು ಸಿಗಲೇ ಇಲ್ಲ. ಹೀಗಾಗಿ ಅವರು ವಾಸಿಸುವ ಕಾಲೋನಿಯಲ್ಲಿರುವ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದ್ದಾರೆ. ಈ ವೇಳೆ ಚರ್ಚ್ ರಸ್ತೆಯಲ್ಲಿರುವ ಅಂಬೇಡ್ಕರ್ ಪ್ರತಿಮೆಯಿಂದ ಅಪರಿಚಿತ ವ್ಯಕ್ತಿಗಳು ಸಾಕು ನಾಯಿಯನ್ನು ತೆಗೆದುಕೊಂಡು ಹೋಗಿರುವುದನ್ನು ಗಮನಿಸಿದ್ದಾರೆ. ಇದರಿಂದ ಚಿಂತಿತರಾದ ಮಾಲೀಕ ನಾಗರಾಜು ನೇರವಾಗಿ ಪೊಲೀಸ್ ಠಾಣೆಯ ಮೆಟ್ಟಿಲು ಹತ್ತಿ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ: ಹಾಯಾಗಿ ಮಲಗಿರುವ ಶ್ವಾನಕ್ಕೆ ಬೀಸಣಿಗೆಯಲ್ಲಿ ಗಾಳಿ ಬೀಸುತ್ತಿರುವ ವೃದ್ಧ

ಈ ದೂರನ್ನು ಸಹ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇಷ್ಟಕ್ಕೂ ಸುಮ್ಮನಾಗದ ಮಾಲೀಕ ತನ್ನ ಶ್ವಾನವನ್ನು ಹುಡುಕಿ ಕೊಟ್ಟವರಿಗೆ ಬಹುಮಾನ 10 ಸಾವಿರ ರೂಪಾಯಿಗಳ ನಗದು ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ. ಇದನ್ನು ತಮ್ಮ ವಾಟ್ಸಾಪ್ ಸ್ಟೇಟಸ್‌ನಲ್ಲಿ ಹಂಚಿಕೊಂಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 6:37 pm, Wed, 22 July 26

Source link

Exit mobile version