Headlines

Tv9 Kannada news live: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಅದ್ಧೂರಿ ಸ್ವಾಗತಕ್ಕೆ ಬ್ರೇಕ್​! ಈ ಹೊತ್ತಿನ ಪ್ರಮುಖ ಸುದ್ದಿಗಳು ಇಲ್ಲಿವೆ – Kannada News | Tv9 Kannada news live: Nitin Nabin Karnataka Visit, Fuel Price Hike and PM Modi’s Rozgar Mela Updates

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಅದ್ಧೂರಿ ಸ್ವಾಗತಕ್ಕೆ ಬ್ರೇಕ್​! ಬೆಂಗಳೂರು, ಮೇ 23: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ (Nitin nabin) ಬೆಂಗಳೂರಿಗೆ ಭೇಟಿ ನೀಡುತ್ತಿದ್ದು, ಅವರ ಅದ್ಧೂರಿ ಸ್ವಾಗತಕ್ಕೆ ಬ್ರೇಕ್ ಹಾಕಲಾಗಿದೆ. ದೇಶಾದ್ಯಂತ ಇಂಧನ ದರಗಳ ಸತತ ಏರಿಕೆಯ ಬಿಸಿ ಹೆಚ್ಚಾಗಿದ್ದು, ಇಂದು ಸತತ ಮೂರನೇ ಬಾರಿಗೆ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯಾಗಿದೆ. ಇನ್ನೊಂದೆಡೆ ಪ್ರಧಾನಿ ನರೇಂದ್ರ ಮೋದಿ ಇಂದು ‘ರೋಜ್‌ಗಾರ್ ಮೇಳ’ದ ಮೂಲಕ 51,000ಕ್ಕೂ ಹೆಚ್ಚು ಯುವಕರಿಗೆ ನೇಮಕಾತಿ ಪತ್ರ…

Read More

‘ಸತ್ಯಕ್ಕೆ ಜಯವಾಗಿದೆ’: ಮರು ಮತ ಎಣಿಕೆಯಲ್ಲಿ ಗೆಲುವು ಬೆನ್ನಲ್ಲೇ ಶಾಸಕ ಟಿಡಿ ರಾಜೇಗೌಡ ಹೇಳಿದ್ದಿಷ್ಟು – Kannada News | Sringeri Postal Ballot Recount: MLA TD Rajegowda Wins, Watch What He Said After Victory

ಚಿಕ್ಕಮಗಳೂರು, ಮೇ 02: ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಮತ‌ಎಣಿಕೆಯಲ್ಲಿ ಕಾಂಗ್ರೆಸ್​ ಶಾಸಕ ಟಿಡಿ ರಾಜೇಗೌಡಗೆ ಗೆಲುವು ಸಾಧಿಸಿದ್ದಾರೆ. ಚುನಾವಣಾ ಅಧಿಕಾರಿಗಳಿಂದ ಅಧಿಕೃತ ಘೋಷಣೆಯೊಂದೇ ಬಾಕಿ ಇದೆ. ಚಿಕ್ಕಮಗಳೂರಿನ ಐಡಿಎಸ್​ಜಿ ಕಾಲೇಜು ಮುಂಭಾಗ ಕಾರ್ಯಕರ್ತರಿಂದ ಸಂಭ್ರಮಾಚರಣೆ ಜೋರಾಗಿದೆ. ಗೆಲುವಿನ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಟಿಡಿ ರಾಜೇಗೌಡ, ಹೈಕೋರ್ಟ್ ಮರು ಮತ‌ಎಣಿಕೆಗೆ ಆದೇಶ ನೀಡಿತ್ತು. ನಾನು ಸುಪ್ರೀಂ ಕೋರ್ಟ್​ಗೆ ಮೇಲ್ಮನವಿ ಸಲ್ಲಿಸಬಹುದಿತ್ತು. ಆದರೆ ಸತ್ಯ ಹೊರಬರಲಿ ಎಂದು ನಾನು ಮೇಲ್ಮನವಿ ಸಲ್ಲಿಸಲಿಲ್ಲ. ಇಂದು ಮತ್ತೆ…

Read More

ಚೀನಾ ಭಾರತದ ಅತಿದೊಡ್ಡ ವ್ಯಾಪಾರ ಪಾಲುದಾರ: ಅಮೆರಿಕ ಹಿಂದಿಕ್ಕಿ ಅಗ್ರಸ್ಥಾನ, ಹೆಚ್ಚಿದ ವ್ಯಾಪಾರ ಕೊರತೆ – Kannada News | China Overtakes US: India’s Top Trade Partner in FY26, Trade Deficit Soars

ನವದೆಹಲಿ, ಏಪ್ರಿಲ್ 15: ಜಾಗತಿಕ ವ್ಯಾಪಾರ ಮಾರುಕಟ್ಟೆಯಲ್ಲಿ ಮಹತ್ವದ್ದೆಂದು ಪರಿಗಣಿಸಬಹುದಾದ ಬೆಳವಣಿಗೆಯೊಂದರಲ್ಲಿ, ಭಾರತದ ಅತಿದೊಡ್ಡ ಟ್ರೇಡ್ ಪಾರ್ಟ್ನರ್ ದೇಶವಾಗಿ ಅಮೆರಿಕವನ್ನು ಚೀನಾ ಹಿಂದಿಕ್ಕಿದೆ. 2025-26ನೇ ಹಣಕಾಸು ವರ್ಷದಲ್ಲಿ ಭಾರತದ ಅತ್ಯಂತ ದೊಡ್ಡ ವ್ಯಾಪಾರ ಪಾಲುದಾರ ರಾಷ್ಟ್ರವಾಗಿ ಚೀನಾ ಹೊರಹೊಮ್ಮಿದೆ. ಸರ್ಕಾರದ ಇತ್ತೀಚಿನ ದತ್ತಾಂಶಗಳ ಪ್ರಕಾರ, ಉಭಯ ದೇಶಗಳ (ಭಾರತ ಚೀನಾ) ನಡುವಿನ ದ್ವಿಪಕ್ಷೀಯ ವ್ಯಾಪಾರವು (bilateral trade) ಬರೋಬ್ಬರಿ 151.1 ಬಿಲಿಯನ್ ಡಾಲರ್ ತಲುಪಿದೆ. ಕಳೆದ ನಾಲ್ಕು ಸತತ ವರ್ಷಗಳಿಂದ (2021-22 ರಿಂದ 2024-25ರವರೆಗೆ) ಅಮೆರಿಕವು ಭಾರತದ…

Read More

ಬೆಂಗಳೂರು ಮೂಲದ ಸ್ಟಾರ್ಟಪ್​ನಲ್ಲಿ ಮೆಟಾ ಭಾರೀ ಹೂಡಿಕೆ; ವಾಟ್ಸಪ್​ಗೆ ಕುನಾಲ್ ಶಾ ಹೊಸ ಬಾಸ್ – Kannada News | Kunal Shah to be new boss of WhatsApp as Meta investing 900 million USD in Cred

ಬೆಂಗಳೂರು, ಜೂನ್ 22: ಜಾಗತಿಕ ತಂತ್ರಜ್ಞಾನ ದೈತ್ಯ ಸಂಸ್ಥೆಯಾದ ಮೆಟಾ (Meta), ಭಾರತದ ಜನಪ್ರಿಯ ಫಿನ್‌ಟೆಕ್ ಸ್ಟಾರ್ಟ್‌ಅಪ್ ‘ಕ್ರೆಡ್’ (CRED) ಮೇಲೆ ಭಾರಿ ಹೂಡಿಕೆ ಮಾಡುವ ಮೂಲಕ ಮಾರುಕಟ್ಟೆಯಲ್ಲಿ ಹೊಸ ಇತಿಹಾಸ ಸೃಷ್ಟಿಸಿದೆ. ಈ ಕಾರ್ಯತಂತ್ರದ ಭಾಗವಾಗಿ ಕ್ರೆಡ್ ಸಂಸ್ಥೆಯ ಸ್ಥಾಪಕರಾದ ಕುನಾಲ್ ಶಾ (Kunal Shah) ಅವರು ಇನ್ನು ಮುಂದೆ ವಾಟ್ಸಾಪ್ (WhatsApp) ಪ್ಲಾಟ್‌ಫಾರ್ಮ್‌ನ ನೇತೃತ್ವವನ್ನು ವಹಿಸಲಿದ್ದಾರೆ. ಫೇಸ್​ಬುಕ್, ವಾಟ್ಸಪ್, ಇನ್​ಸ್ಟಾಗ್ರಾಮ್ ಪ್ಲಾಟ್​ಫಾರ್ಮ್​ಗಳನ್ನು ನಿರ್ವಹಿಸುವ ಮೆಟಾ ಸಂಸ್ಥೆಯು ಬೆಂಗಳೂರು ಮೂಲದ ಕ್ರೆಡ್ (CRED) ಕಂಪನಿಯಲ್ಲಿ 900…

Read More

IND vs SA: 13 ವರ್ಷಗಳ ಹಳೆಯ ವಿಶ್ವ ದಾಖಲೆ ಮುರಿದ ವೈಭವ್ ಸೂರ್ಯವಂಶಿ

ದಕ್ಷಿಣ ಆಫ್ರಿಕಾದಲ್ಲಿ ನಡೆದ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಏಕದಿನ ಪಂದ್ಯದಲ್ಲಿಯೇ ವೈಭವ್ ಸೂರ್ಯವಂಶಿ ತಂಡವನ್ನು ಮುನ್ನಡೆಸುವ ಮೂಲಕ ಅಂಡರ್-19 ತಂಡವನ್ನು ಮುನ್ನಡೆಸಿದ ವಿಶ್ವದ ಅತ್ಯಂತ ಕಿರಿಯ ನಾಯಕ ಎಂಬ ವಿಶ್ವ ದಾಖಲೆ ಸೃಷ್ಟಿಸಿದ್ದ ವೈಭವ್ ಸೂರ್ಯವಂಶಿ, ಇದೀಗ ಏಕದಿನ ಸರಣಿಯನ್ನು 3-0 ಅಂತರದಿಂದ ಗೆದ್ದು ಮತ್ತೊಂದು ವಿಶ್ವದಾಖಲೆಯನ್ನು ತಮ್ಮ ಖಾತೆಗೆ ಹಾಕಿಕೊಂಡಿದ್ದಾರೆ. ಬೆನೋನಿಯ ವಿಲ್ಲೋಮೂರ್ ಪಾರ್ಕ್‌ನಲ್ಲಿ ನಡೆದ ಮೂರನೇ ಮತ್ತು ಅಂತಿಮ ಪಂದ್ಯದಲ್ಲಿ ಭಾರತ ತಂಡ ಆತಿಥೇಯ ದಕ್ಷಿಣ ಆಪ್ರಿಕಾ ತಂಡವನ್ನು 233 ರನ್​​ಗಳಿಂದ…

Read More

ಮೊಗ್ಗಿನ ಜಡೆ, ಬಗೆಬಗೆಯ ತಿನಿಸುಗಳು! ಮಗಳಂತೆ ಸಾಕಿದ ಹಸುವಿಗೆ ಶಾಸ್ತ್ರೋಕ್ತವಾಗಿ ಸೀಮಂತ – Kannada News | Kolar Farmer Family Hosts Traditional ‘Seemantha’ Baby Shower for Pregnant Cow

ಕೋಲಾರ, ಮೇ 27: ತಾಲೂಕಿನ ಕಳ್ಳಿಪುರ ಗ್ರಾಮದ ರೈತ ಬಸವರಾಜ್ ಎಂಬುವರ ಕುಟುಂಬವು ತಮ್ಮ ಮನೆಯ ‘ಗೌರಿ’ ಎಂಬ ಹಸು ಗರ್ಭಧರಿಸಿದ ಹಿನ್ನೆಲೆಯಲ್ಲಿ ಅದಕ್ಕೆ ಶಾಸ್ತ್ರೋಕ್ತವಾಗಿ ಸೀಮಂತ ಕಾರ್ಯಕ್ರಮ ಆಯೋಜಿಸಿತ್ತು. ಪ್ರೀತಿಯ ಹಸುವಿಗೆ ಸುಂದರವಾದ ಮೊಗ್ಗಿನ ಜಡೆ ಹಾಕಿ, ಬಗೆಬಗೆಯ ತಿಂಡಿ-ತಿನಿಸುಗಳನ್ನು ನೀಡಿ ಸತ್ಕರಿಸಲಾಯಿತು. ಈ ವಿಶೇಷ ಆಚರಣೆಗೆ ಗ್ರಾಮದ ಮಹಿಳೆಯರನ್ನು ಆಹ್ವಾನಿಸಲಾಗಿತ್ತು. ಹಸುವಿಗೆ ಆರತಿ ಬೆಳಗಿ, ಬಂದ ಮಹಿಳೆಯರಿಗೆ ಸಾಂಪ್ರದಾಯಿಕವಾಗಿ ಅರಿಶಿನ-ಕುಂಕುಮ ಹಾಗೂ ತಾಂಬೂಲ ನೀಡಿ ಸೀಮಂತವನ್ನು ಸಂಭ್ರಮಿಸಲಾಯಿತು. ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ…

Read More

ಅಪ್ಪ ನಾನು ಅಜಿತ್ ಪವಾರ್ ಜತೆ ವಿಮಾನದಲ್ಲಿ ಹೋಗ್ತಿದ್ದೀನಿ, ತಂದೆ ಜತೆ ವಿಮಾನ ಸಿಬ್ಬಂದಿಯ ಕೊನೆಯ ಮಾತು – Kannada News | Ajit Pawar Plane Crash: Pinky Mali’s Last Call and Baramati Tragedy Details

ಪಿಂಕಿ ಮಾಲಿ-ಅಜಿತ್ ಪವಾರ್Image Credit source: NDTV ಪುಣೆ, ಜನವರಿ 29: ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್(Ajit Pawar) ಬುಧವಾರ ಬೆಳಗ್ಗೆ ಸಂಭವಿಸಿದ ವಿಮಾನ ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ವಿಮಾನದಲ್ಲಿ ಅವರ ಜತೆ ಇತರೆ ನಾಲ್ವರು ಸಿಬ್ಬಂದಿ ಇದ್ದರು ಅದರಲ್ಲಿ ಪಿಂಕಿ ಮಾಲಿ ಕೂಡ ಒಬ್ಬರು. ಸಾಯುವ ಮುನ್ನ ತಂದೆಗೆ ಕರೆ ಮಾಡಿ ಅಪ್ಪ ನಾನು ಇವತ್ತು ಅಜಿತ್ ಪವಾರ್ ಜತೆ ವಿಮಾನದಲ್ಲಿ ಪ್ರಯಾಣ ಮಾಡ್ತಿದ್ದೀನಿ ಗೊತ್ತಾ ಎಂದು ಖುಷಿಯಿಂದ ಹೇಳಿಕೊಂಡಿದ್ದರು. ಆದರೆ ಇಬ್ಬರಿಗೂ ಅದು ಕೊನೆಯ…

Read More

ಕಮಲಾಕರ್ ಭಟ್ ಮಾತ್ರವಲ್ಲ, ಕಲಬುರಗಿಯ ಜಮೀನ್ದಾರನ ಜೊತೆಗೂ ಸುಚಿತ್ರಾ ಲವ್ವಿಡವ್ವಿ – Kannada News | Siddapur murder Case: revealed Suchitra Love Relationship With Kalaburagi Man

ಕಾರವಾರ, (ಫೆಬ್ರವರಿ 06): ಸಿದ್ದಾಪುರ ವಸಂತ್ ನಾಯ್ಕ್​ ಕೊಲೆ ಪ್ರಕರಣದಲ್ಲಿ (Siddapur murder Case) ಜ್ಯೋತಿಷಿ ಕಮಲಾಕರ್ ಭಟ್ ಹಾಗೂ ಪ್ರೇಯಸಿ ಸುಚಿತ್ರಾ ಜೈಲು ಸೇರಿದ್ದು, ಇದರ ಬೆನ್ನಲ್ಲೇ ಸುಚಿತ್ರಾ ಮತ್ತು ಜ್ಯೋತಿಷಿಯ ಅನೈತಿಕ ಸಂಬಂಧದ ಬಗ್ಗೆ ಒಂದಾಂದಾಗಿ ಸಾಕ್ಷಿಗಳು ಹೊರಬರುತ್ತಿವೆ. ಇಬ್ಬರು ಮಾತನಾಡಿದ್ದಾರೆ ಎನ್ನಲಾದ ರಾಸಲೀಲೆ ಆಡಿಯೋ ರಿಲೀಸ್ ಆಗಿರುವುದು ಒಂದೇಡೆ ಆಗಿದ್ರೆ, ಇನ್ನೊಂದೆಡೆ ಸುಚಿತ್ರಾಳ ಇನ್ಸ್ಠಾ ಬಯೋ ಅನುಮಾನ ಹೆಚ್ಚಿಸಿದೆ. ಇದರ ನಡುವೆ ಇದೀಗ ಸುಚಿತ್ರಾಳ ಮೊಬೈಲ್​ ರಹಸ್ಯ ಗುಟ್ಟು ರಟ್ಟಾಗಿದ್ದು, ಸುಚಿತ್ರಾ ಹಲವರ…

Read More

ಬಾಂಗ್ಲಾದೇಶದಲ್ಲಿ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಟ್ರಕ್ ಪಲ್ಟಿ, 15 ಮಂದಿ ಸಾವು, 10 ಜನರಿಗೆ ಗಾಯ – Kannada News | Bangladesh Truck Crash: 15 Laborers Dead, 10 Injured Traveling for Eid

ಢಾಕಾ, ಮೇ 25: ಬಾಂಗ್ಲಾದೇಶ(Bangladesh)ದಲ್ಲಿ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಟ್ರಕ್ ಪಲ್ಟಿಯಾದ ಪರಿಣಾಮ 15 ಮಂದಿ ಸಾವನ್ನಪ್ಪಿದ್ದು, 10 ಮಂದಿ ಗಾಯಗೊಂಡಿದ್ದಾರೆ. ಈದ್ ಅಲ್-ಅಧಾ’ ಆಚರಣೆಗಾಗಿ ತಮ್ಮ ಕುಟುಂಬಗಳನ್ನು ಸೇರಲು ತಾಯ್ನಾಡಿಗೆ ಹೊರಟಿದ್ದ ಬಡ ದಿನಗೂಲಿ ಕಾರ್ಮಿಕರಿದ್ದ ಟ್ರಕ್ ಪಲ್ಟಿಯಾಗಿ ಕನಿಷ್ಠ 15 ಜನರು ಸಾವನ್ನಪ್ಪಿದ್ದಾರೆ. ಬಾಂಗ್ಲಾದೇಶದ ರಾಜಧಾನಿ ಢಾಕಾದಿಂದ ವಾಯುವ್ಯಕ್ಕೆ ಸುಮಾರು 83 ಕಿಲೋಮೀಟರ್ ದೂರದಲ್ಲಿರುವ ತಂಗೈಲ್ ಜಿಲ್ಲೆಯ ಸೊರಾಟೊಯಿಲ್ ಹೆದ್ದಾರಿಯಲ್ಲಿ ಸೋಮವಾರ ಮುಂಜಾನೆ 5 ಗಂಟೆ ಸುಮಾರಿಗೆ ಈ ಭೀಕರ ಅಪಘಾತ ಸಂಭವಿಸಿದೆ. ನಡೆದಿದ್ದೇನು? ಪೊಲೀಸ್…

Read More

ಕಲ್ಲು ಕ್ವಾರಿಯಲ್ಲಿ ಬಂಡೆ ಕುಸಿದು ದುರಂತ: 7 ಮಂದಿ ಬಲಿ, ಐವರು ಕೂಲಿ ಕಾರ್ಮಿಕರಿಗೆ ಗಾಯ – Kannada News | Ramanagara Quarry Tragedy: 7 Workers Killed, 5 Injured as Boulder Collapses at Kaveri Crusher

ಕಲ್ಲು ಕ್ವಾರಿಯಲ್ಲಿ ಬಂಡೆ ಕುಸಿದು ದುರಂತImage Credit source: Tv9 Kannada ರಾಮನಗರ, ಜುಲೈ 02: ಕಲ್ಲು ಕ್ವಾರಿಯಲ್ಲಿ ಬಂಡೆ ಕುಸಿದು 7 ಕೂಲಿ ಕಾರ್ಮಿಕರು ದಾರುಣವಾಗಿ ಮೃತಪಟ್ಟಿರುವ ಘಟನೆ ಬೆಂಗಳೂರು ದಕ್ಷಿಣ ತಾಲೂಕಿನ ಮಾದಪಟ್ಟಣ ಗ್ರಾಮದ ಬಳಿ ನಡೆದಿದೆ. ಮುಂಜಾನೆ 5 ಗಂಟೆ ಸುಮಾರಿಗೆ ದುರಂತ ಸಂಭವಿಸಿದ್ದು, ಸುಮಾರು 40 ಅಡಿ ಮೇಲಿಂದ ಬಂಡೆ ಬಿದ್ದ ಪರಿಣಾಮ ದೊಡ್ಡ ಪ್ರಮಾಣ ಸಾವುನೋವು ಉಂಟಾಗಿದೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದ್ದು, ದುರಂತ ಸ್ಥಳದಲ್ಲಿ ಮೃತಪಟ್ಟವರ…

Read More