Headlines

ಭಯ ಆಗ್ತಿದೆ… ವೈಭವ್​ ಭವಿಷ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ ಸೌತ್ ಆಫ್ರಿಕಾ ಕ್ರಿಕೆಟಿಗ! – Kannada News | Darryl cullinan concern about Vaibhav Sooryavanshi

ಕ್ರಿಕೆಟ್ ಲೋಕದ ಹೊಸ ಸೆನ್ಸೇಷನ್ ವೈಭವ್ ಸೂರ್ಯವಂಶಿ ಸಿಡಿಲಬ್ಬರ ಮುಂದುವರೆದಿದೆ. ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಪ್ರಚಂಡ ಬ್ಯಾಟಿಂಗ್ ಪ್ರದರ್ಶಿಸಿ ಕ್ರಿಕೆಟ್ ಪ್ರೇಮಿಗಳ ಮನಗೆದ್ದಿದ್ದ ಯುವ ದಾಂಡಿಗ ಇತ್ತೀಚೆಗೆ ಶ್ರೀಲಂಕಾ ಎ ವಿರುದ್ಧದ ಏಕದಿನ ಪಂದ್ಯದಲ್ಲೂ ಅಬ್ಬರಿಸಿದ್ದಾರೆ. ಅದು ಕೂಡ ಕೇವಲ 29 ಎಸೆತಗಳಲ್ಲಿ 94 ರನ್​ ಚಚ್ಚುವ ಮೂಲಕ. ಈ ಸ್ಫೋಟಕ ಇನಿಂಗ್ಸ್ ಬೆನ್ನಲ್ಲೇ ಸೌತ್ ಆಫ್ರಿಕಾದ ಮಾಜಿ ದಿಗ್ಗಜ ಬ್ಯಾಟರ್ ಡ್ಯಾರಿಲ್ ಕಲ್ಲಿನನ್ ಅವರು ವೈಭವ್ ಭವಿಷ್ಯದ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸೋಷಿಯಲ್…

Read More

ಟೀಮ್ ಇಂಡಿಯಾ ಆಯ್ಕೆಗಾರರ ವರ್ತನೆಗೆ ಬಿಸಿಸಿಐ ತೀವ್ರ ಅಸಮಾಧಾನ! – Kannada News | BCCI unhappy with selectors over Rohit Sharma retirement buzz

ಭಾರತ ತಂಡದ ಅನುಭವಿ ಆಟಗಾರ ರೋಹಿತ್ ಶರ್ಮಾ ಅವರ ಏಕದಿನ ಕ್ರಿಕೆಟ್ ನಿವೃತ್ತಿಯ ಕುರಿತು ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವರದಿಗಳ ಬೆನ್ನಲ್ಲೇ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಮತ್ತು ರಾಷ್ಟ್ರೀಯ ಆಯ್ಕೆ ಸಮಿತಿ ನಡುವಿನ ಭಿನ್ನಾಭಿಪ್ರಾಯ ಬಹಿರಂಗಗೊಂಡಿದೆ. ರೋಹಿತ್ ಶರ್ಮಾ ಅವರ ಭವಿಷ್ಯದ ಕುರಿತು ಅನಗತ್ಯ ಗೊಂದಲ ಮೂಡಿಸಿರುವ ಆಯ್ಕೆಗಾರರ ಧೋರಣೆಗೆ ಬಿಸಿಸಿಐ ಹಿರಿಯ ಅಧಿಕಾರಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ. ಆಯ್ಕೆಗಾರರ ವಿರುದ್ಧ ಬಿಸಿಸಿಐ ಗರಂ ಆಗಿದ್ದೇಕೆ? ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ನೇತೃತ್ವದ…

Read More

ಶೇರುಗಳಂತೆ ರಿಯಲ್ ಎಸ್ಟೇಟ್ ಆಸ್ತಿಯಲ್ಲಿ ಪಾಲು ಖರೀದಿಸಿ… ಇದು REITs ಮತ್ತು InvITs ಕೊಡುವ ಅವಕಾಶ

ಅಸ್ತಿಯಲ್ಲಿ ಹೂಡಿಕೆImage Credit source: Getty Images ದೊಡ್ಡ ದೊಡ್ಡ ರಿಯಲ್ ಎಸ್ಟೇಟ್ ಪ್ರಾಜೆಕ್ಟ್​ಗಳನ್ನು ನೋಡಿದಾಗ, ‘ವ್ಹಾ, ನಮಗೂ ಇಲ್ಲೆಲ್ಲಿಯಾದರೂ ಒಂದು ಅಡಿ ಜಾಗವಾದರೂ ಬರಬಾರದಾ’ ಎಂದು ಜನಸಾಮಾನ್ಯರು ಅಂದುಕೊಳ್ಳಬಹುದು. ಆದರೆ, ಅಲ್ಲೆಲ್ಲಾ ಚದರಡಿಗೆ ಹಲವು ಸಾವಿರ ರೂಗಳೇ ಆಗುತ್ತವೆ. ಒಂದು ಮನೆ ಖರೀದಿಸಲು ಕೋಟಿ ರೂ ಕೊಟ್ಟರೂ ಸಾಲದು. ಅಷ್ಟೆಲ್ಲಾ ಇನ್ವೆಸ್ಟ್ ಮಾಡಲು ಸಾಮಾನ್ಯರ ಇಡೀ ಜೀವಮಾನದ ಸಂಪಾದನೆ ಬೇಕಾಗುತ್ತದೆ. ಆದರೆ, ಕೆಲ ಹೂಡಿಕೆ ಯಂತ್ರಗಳು ಬಹಳ ಸುಲಭವಾಗಿ ರಿಯಲ್ ಎಸ್ಟೇಟ್ ಮತ್ತು ಇನ್​ಫ್ರಾಸ್ಟ್ರಕ್ಚರ್ ಪ್ರಾಜೆಕ್ಟ್​ಗಳಲ್ಲಿ…

Read More

2 ಸರಣಿಗಳಿಂದ ಟೀಮ್ ಇಂಡಿಯಾ ಆಟಗಾರ ಔಟ್! – Kannada News | Nitish Kumar Reddy Ruled Out Of Ireland England Tour

ಟೀಮ್ ಇಂಡಿಯಾದ ಉದಯೋನ್ಮುಖ ಆಲ್-ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಅವರು ಮುಂಬರುವ ಐರ್ಲೆಂಡ್ ಹಾಗೂ ಇಂಗ್ಲೆಂಡ್ ವಿರುದ್ಧದ ಸರಣಿಗಳಿಂದ ಹೊರಬಿದ್ದಿದ್ದಾರೆ.  ಎಡಗಾಲಿನ ಸ್ನಾಯು ಸೆಳೆತದ ಗಾಯದ ಸಮಸ್ಯೆಯ ಕಾರಣದಿಂದಾಗಿ ಅವರನ್ನು ತಂಡದಿಂದ ಕೈ ಬಿಡಲಾಗಿದೆ. ಅಫ್ಘಾನಿಸ್ತಾನ್ ವಿರುದ್ಧದ ಸರಣಿಯ ವೇಳೆ ಅವರು ತೊಡೆಯ ನೋವಿನ ಸಮಸ್ಯೆ ಎದುರಿಸಿದ್ದರು. ಆ ಬಳಿಕ ಅವರ ಗಾಯದ ಸಮಸ್ಯೆ ಮತ್ತಷ್ಟು ಉಲ್ಬಣಗೊಂಡಿದೆ. ಈ ಸಮಸ್ಯೆಯ ಹಿನ್ನಲೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಿತೀಶ್ ಅವರ ಎಡಗಾಲಿನ ಸ್ನಾಯುವಿನಲ್ಲಿ ತೀವ್ರವಾದ ಊತ ಮತ್ತು  ಹಾನಿಯಾಗಿರುವುದು ಎಂಆರ್‌ಐ…

Read More

ಮಾರ್ಮಿಕವಾಗಿ ಮಾಜಿ ಸಂಸದ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು? – Kannada News | DK Sureshs Cryptic Post Amidst Karnataka Power Tussle Sparks Debate

ಬೆಂಗಳೂರು, ಡಿಸೆಂಬರ್​​ 25: ಕರ್ನಾಟಕ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಸ್ಥಾನಕ್ಕಾಗಿ ನಡೆಯುತ್ತಿರುವ ಅಧಿಕಾರ ರಾಜಕೀಯದ ನಡುವೆ, ಡಿ.ಕೆ. ಸುರೇಶ್ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಒಂದು ಮಾರ್ಮಿಕ ಪೋಸ್ಟ್ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ಪಾಟೀಲ ಪುಟ್ಟಪ್ಪನವರ ಹೇಳಿಕೆಯಾದ ‘ಗುರಿಯನ್ನ ಬೇಗ ತಲುಪಬೇಕು ಅನ್ನುವವರು ದಾರಿಯಲ್ಲಿ ವಿಶ್ರಮಿಸುತ್ತಾ ಕುಳಿತುಕೊಳ್ಳಬಾರದು’ ಎಂಬ ವಾಕ್ಯವನ್ನು ಡಿ.ಕೆ. ಸುರೇಶ್ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ಯಾರನ್ನು ಉದ್ದೇಶಿಸಿದೆ ಎಂಬ ಬಗ್ಗೆ ವ್ಯಾಪಕ ಚರ್ಚೆಗಳು ನಡೆಯುತ್ತಿವೆ. ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ….

Read More

IPL 2026: ಐಪಿಎಲ್​ಗೆ ತಯಾರಿ ಶುರು ಮಾಡಿದ ಧೋನಿ; ವಿಡಿಯೋ ಬಿಡುಗಡೆ – Kannada News | MS Dhoni Begins IPL 2026 Preparations in Ranchi: Is This His Last Season for CSK?

2026 ರ ಐಪಿಎಲ್​ಗೆ (IPL 2026) ಅಭಿಮಾನಿಗಳು ಕೌಂಟ್‌ಡೌನ್ ಪ್ರಾರಂಭಿಸಿದ್ದಾರೆ. ಮಾರ್ಚ್​ ತಿಂಗಳಲ್ಲಿ ಈ ಮಿಲಿಯನ್ ಡಾಲರ್​ ಟೂರ್ನಿಗೆ ಚಾಲನೆ ಸಿಗಲಿದೆ. ಹೀಗಾಗಿ ಎಲ್ಲಾ ಫ್ರಾಂಚೈಸಿಗಳು ಕೂಡ ತಮ್ಮ ತಯಾರಿಯನ್ನು ಆರಂಭಿಸಲು ಸಜ್ಜಾಗಿವೆ. ಕಳೆದ ಕೆಲವು ಆವೃತ್ತಿಗಳಿಂದ ಉತ್ತಮ ಪ್ರದರ್ಶನ ನೀಡುವಲ್ಲಿ ಎಡವಿರುವ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಈ ಬಾರಿ ಯುವ ಪಡೆಯೊಂದಿಗೆ ಕಣಕ್ಕಿಳಿಯಲು ಸಜ್ಜಾಗಿದೆ. ಇದರೊಂದಿಗೆ ಕೊನೆಯ ಐಪಿಎಲ್ ಆಡುತ್ತಿರುವ ಎಂಎಸ್ ಧೋನಿ (MS Dhoni) ಕೂಡ ವರ್ಷದ ಬಳಿಕ ಮೈದಾನಕ್ಕೆ ಮರಳಲು ಸಜ್ಜಾಗಿದ್ದು,…

Read More

‘ಶಿಕ್ಷಣ ಅಂದ್ರೆ ಶಾಲೆಗೆ ಹೋಗೋದಲ್ಲ, ಸಿನಿಮಾ ಜ್ಞಾನ’: ವಿವಾದಾತ್ಮಕ ಹೇಳಿಕೆಗೆ ಸತೀಶ್ ಸ್ಪಷ್ಟನೆ, ಕ್ಷಮೆಯಾಚನೆ – Kannada News | Neninasam Satish Clarifies ‘Cinema Education’ Remark, Apologizes to Producers for Ayogya 2 Row

‘ಅಯೋಗ್ಯ 2’ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ನಿರ್ಮಾಪಕರ ಕುರಿತು ತಾವು ನೀಡಿದ್ದ ಹೇಳಿಕೆ ಚಿತ್ರರಂಗದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗುತ್ತಿದ್ದಂತೆಯೇ, ನಟ ನೀನಾಸಂ ಸತೀಶ್ ಅವರು ವಿಡಿಯೋ ಸಂದೇಶವೊಂದರ ಮೂಲಕ ತಮ್ಮ ಮಾತಿಗೆ ಸ್ಪಷ್ಟನೆ ನೀಡಿದ್ದಾರೆ. ಅಲ್ಲದೆ, ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ ಬಹಿರಂಗವಾಗಿ ಕ್ಷಮೆ ಯಾಚನೆ ಮಾಡೋದಾಗಿಯೂ ಹೇಳಿದ್ದಾರೆ. ಇತ್ತೀಚೆಗೆ ‘ಅಯೋಗ್ಯ 2’ ಕಾರ್ಯಕ್ರಮದ ವೇದಿಕೆ ಮೇಲೆ ಮಾತನಾಡಿದ್ದ ಅವರು, ‘ ಸಿನಿಮಾ ಸೋಲುತ್ತದೆ ಎಂಬುದು ಗೊತ್ತಿದ್ದ ಮೇಲೂ ಯಾಕೆ ಸಿನಿಮಾ ಮಾಡಬೇಕು? ನಿರ್ಮಾಪಕರಿಗೆ ಶಿಕ್ಷಣದ ಅವಶ್ಯಕತೆ ಇದೆ ಎಂದು…

Read More

PSLV-C62: 16 ಉಪಗ್ರಹಗಳನ್ನು ಹೊತ್ತು ಹೊರಟಿದ್ದ ಇಸ್ರೋದ ಪಿಎಸ್​ಎಲ್​ವಿ-ಸಿ62 ರಾಕೆಟ್​ನಲ್ಲಿ ತಾಂತ್ರಿಕ ದೋಷ – Kannada News | ISRO PSLV C62 Launch: Anomaly Detected in Third Stage, Data Analysis Underway

ಶ್ರೀಹರಿಕೋಟ, ಜನವರಿ 12: ಆಂಧ್ರಪ್ರದೇಶದ ಶ್ರೀಹರಿಕೋಟದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ 16 ಉಪಗ್ರಹಗಳನ್ನು ಹೊತ್ತು ಹೊರಟಿದ್ದ PSLV-C62 ರಾಕೆಟ್​ನಲ್ಲಿ ತಾಂತ್ರಿಕ ದೋಷ ಕಂಡುಬಂದಿದೆ. ಇಸ್ರೋದ ಮಹತ್ವಾಕಾಂಕ್ಷೆಯ ಪಿಎಸ್‌ಎಲ್‌ವಿ ಸಿ-62 ರಾಕೆಟ್ ಉಡಾವಣೆಯ ಮೂರನೇ ಹಂತದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ರಾಕೆಟ್ ಪಥ ಬದಲಾಯಿಸಿದೆ. 16 ಉಪಗ್ರಹಗಳನ್ನು ಹೊತ್ತೊಯ್ದಿದ್ದ ಈ ರಾಕೆಟ್‌ನ ದತ್ತಾಂಶವನ್ನು ಇಸ್ರೋ ವಿಶ್ಲೇಷಿಸುತ್ತಿದೆ. ಡಿಆರ್​ಡಿಒ ನಿರ್ಮಿತ ಅನ್ವೇಷ ಉಪಗ್ರಹ ಸೇರಿದಂತೆ ಈ ವರ್ಷದ ಇಸ್ರೋದ ಮೊದಲ ಉಡಾವಣೆ ಇದಾಗಿದೆ. ಬೆಳಗ್ಗೆ 10:17ಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ…

Read More

ಒಟ್ಟಿಗೆ ದಾಳಿ ಮಾಡಿದ ಧ್ರುವಂತ್-ಅಶ್ವಿನಿ, ಕಕ್ಕಾಬಿಕ್ಕಿಯಾದ ಗಿಲ್ಲಿ – Kannada News | Bigg Boss Kannada 12: Dhruvanth and Ashwini attacks on Gilli

ಬಿಗ್​​ಬಾಸ್ (Bigg Boss) ಮನೆಯಲ್ಲಿ ಗಿಲ್ಲಿ ಮಾಡುವ ಹಾಸ್ಯ ಎಲ್ಲರಿಗೂ ಇಷ್ಟ ಆಗುವಂಥಹುದ್ದಲ್ಲ, ಅದರಲ್ಲೂ ಕೆಲವೊಮ್ಮೆ ಅತಿರೇಕಕ್ಕೆ ಹೋಗಿ ಹಿರಿಯರು, ಕಿರಿಯರೆನ್ನದೆ ಮಾತನಾಡುವುದು, ವಿಪರೀತಕ್ಕೆ ಹೋಗಿ ಗೇಲಿ ಮಾಡುವುದು, ವ್ಯಂಗ್ಯ ಮಾಡುವುದು ಮಾಡುತ್ತಾರೆ. ಇದೇ ಕಾರಣಕ್ಕೆ ಮನೆಯ ಕೆಲವು ಸದಸ್ಯರಿಂದ ಬೈಸಿಕೊಂಡಿದ್ದು, ವಿರೋಧ ಕಟ್ಟಿಕೊಂಡಿದ್ದೂ ಸಹ ಇದೆ. ಆದರೆ ಯಾರೂ ಸಹ ಗಿಲ್ಲಿಯ ಬಾಯಿಗೆ ಬಾಯಿ ಕೊಟ್ಟು ಮಾತನಾಡಿರಲಿಲ್ಲ. ಆದರೆ ಈ ಬಾರಿ ಧ್ರುವಂತ್ ಮತ್ತು ಅಶ್ವಿನಿ ಅವರ ಆರ್ಭಟಕ್ಕೆ ಸ್ವತಃ ಗಿಲ್ಲಿ ಕಕ್ಕಾ ಬಿಕ್ಕಿ ಆಗಿಬಿಟ್ಟಿದ್ದಾರೆ….

Read More

ದಾಖಲೆಯ ವೀವ್ಸ್ ಗಳಿಸಿದ ‘ಟಾಕ್ಸಿಕ್’ ಟೀಸರ್: ಯಾವ ಭಾಷೆಯಲ್ಲಿ ಹೆಚ್ಚು – Kannada News | Toxic movie teaser views count after 24 hours of its release

ಯಶ್ (Yash) ನಟನೆಯ ‘ಟಾಕ್ಸಿಕ್’ ಸಿನಿಮಾ ಟೀಸರ್ ನಿನ್ನೆಯಷ್ಟೆ (ಫೆಬ್ರವರಿ 20) ಬಿಡುಗಡೆ ಆಗಿದೆ. ಭಾರತ ಚಿತ್ರರಂಗದ ಅತ್ಯಂತ ನಿರೀಕ್ಷಿತ ಸಿನಿಮಾ ಎನಿಸಿಕೊಂಡಿದೆ ‘ಟಾಕ್ಸಿಕ್’ ನಿನ್ನೆ ಬೆಳಿಗ್ಗೆ 9:30ಕ್ಕೆ ಕನ್ನಡ, ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಟೀಸರ್ ಬಿಡುಗಡೆ ಆಗಿದ್ದು, ಟೀಸರ್ ಬಿಡುಗಡೆ ಆಗಿ 24 ಗಂಟೆಗಳಾಗಿವೆ. ಈ ಅವಧಿಯಲ್ಲಿ ದಾಖಲೆ ಮೊತ್ತದ ಜನ ಸಿನಿಮಾದ ಟೀಸರ್ ವೀಕ್ಷಿಸಿದ್ದಾರೆ. ‘ಟಾಕ್ಸಿಕ್’ ಸಿನಿಮಾದ ಟೀಸರ್ ಕೇವಲ 24 ಗಂಟೆಗಳಲ್ಲಿ ಸುಮಾರು ಐದು ಕೋಟಿ ವೀವ್ಸ್ ಗಳಿಸಿಕೊಂಡಿದೆ….

Read More