Headlines

Video: ಅಮೆರಿಕದ ಉತ್ತರ ಕೆರೊಲಿನಾದಲ್ಲಿ ವಿಮಾನ ಪತನ, ನಾಸ್ಕರ್ ಚಾಲಕನ ಇಡೀ ಕುಟುಂಬವೇ ಬೆಂಕಿಯಲ್ಲಿ ಬೆಂದು ಹೋಯ್ತು – Kannada News | Former NASCAR Driver Greg Biffle Dies With Family in North Carolina Plane Crash

ಕೆರೊಲಿನಾ, ಡಿಸೆಂಬರ್ 19: ಅಮೆರಿಕದ ಉತ್ತರ ಕರೆಲಿನಾದಲ್ಲಿ ಗುರುವಾರ ಹೃದಯವಿದ್ರಾವಕ ಘಟನೆಯೊಂದು ಸಂಭವಿಸಿದೆ. ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ವಿಮಾನ ಅಪಘಾತಕ್ಕೀಡಾಗಿದೆ. ವಿಮಾನದಲ್ಲಿದ್ದ ಏಳು ಜನರು ಸಾವನ್ನಪ್ಪಿದ್ದಾರೆ.ಈ ಅಪಘಾತದಲ್ಲಿ ನಿವೃತ್ತ NASCAR ಚಾಲಕ ಗ್ರೆಗ್ ಬಿಫಲ್, ಅವರ ಪತ್ನಿ ಮತ್ತು ಅವರ ಇಬ್ಬರು ಮಕ್ಕಳು ಸೇರಿದ್ದಾರೆ. ಸೆಸ್ನಾ C550 ವಿಮಾನವು ಬೆಳಗ್ಗೆ 10 ಗಂಟೆ ಸುಮಾರಿಗೆ ಸ್ಟೇಟ್ಸ್‌ವಿಲ್ಲೆ ಪ್ರಾದೇಶಿಕ ವಿಮಾನ ನಿಲ್ದಾಣದಿಂದ ಹೊರಟಿತು. ವಿಮಾನವು ಫ್ಲೋರಿಡಾಕ್ಕೆ ತೆರಳುತ್ತಿತ್ತು, ಆದರೆ ಟೇಕ್ ಆಫ್ ಆದ ಸ್ವಲ್ಪ…

Read More

‘ಜೆನ್-ಜಿ ದೇಶವಿರೋಧಿಗಳಲ್ಲ, ಅವರ ಬಗ್ಗೆ ಕುರುಡು ನಂಬಿಕೆಯಿದೆ’; ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್ ಭಾಗವತ್ – Kannada News | ‘Gen Z Is Not Anti National, I trust them blindly,; RSS Chief Mohan Bhagwat Says

ನವದೆಹಲಿ, ಆಗಸ್ಟ್ 6: ಸಿಜೆಪಿ ನೇತೃತ್ವದಲ್ಲಿ ದೇಶಾದ್ಯಂತ ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯನ್ನು ವಿರೋಧಿಸಿ ಇತ್ತೀಚೆಗೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಜೆನ್​-ಜಿಗಳು ಈ ಪ್ರತಿಭಟನೆಯಲ್ಲಿ ಬೃಹತ್ ಸಂಖ್ಯೆಯಲ್ಲಿ ಪಾಲ್ಗೊಂಡು ಪೊಲೀಸರ ಲಾಠಿಚಾರ್ಜ್ ರುಚಿಯನ್ನೂ ನೋಡಿದ್ದರು. ಈ ಪ್ರತಿಭಟನೆ ಬಿಜೆಪಿ ನೇತೃತ್ವದ ಎನ್​ಡಿಎ ಸರ್ಕಾರಕ್ಕೆ ದೊಡ್ಡ ಹೊಡೆತ ನೀಡಿತ್ತು. ಇದರ ಬೆನ್ನಲ್ಲೇ ಇಂದು ಬೃಹತ್ ಯುವ ಸಮಾವೇಶವೊಂದರಲ್ಲಿ ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್ ಭಾಗವತ್ ಸಂವಾದದಲ್ಲಿ ಪಾಲ್ಗೊಂಡಿದ್ದಾರೆ. ಈ ಸಂವಾದದಲ್ಲಿ ಮಾತನಾಡಿದ ಅವರು ಜೆನ್​ ಜಿ ಕುರಿತಾಗಿ ಬಹಳ ಉತ್ತಮ ಅಭಿಪ್ರಾಯವನ್ನು…

Read More

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಜನವರಿ 24ರ ದಿನಭವಿಷ್ಯ – Kannada News | Numerology Prediction Jan 24: Birth Numbers 4, 5, 6 Daily Fate

ಜನ್ಮಸಂಖ್ಯೆ 4, 5, 6ರ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆ ಆಧಾರದಲ್ಲಿ ಜನವರಿ 24ರ ಶನಿವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ. ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4) ಎಲ್ಲರನ್ನೂ ನೀವು ಸಮಾನವಾಗಿ ಕಾಣುತ್ತಿಲ್ಲ ಎಂಬ ಆರೋಪವನ್ನು ಹೊತ್ತಿಕೊಳ್ಳಬೇಕಾಗುತ್ತದೆ. ನೀವು ನೀಡುವ ಯಾವ ಸಮಜಾಯಿಷಿಯನ್ನೂ ಕೇಳಿಸಿಕೊಳ್ಳುವ ಸ್ಥಿತಿಯಲ್ಲಿ ಇತರರು ಇರುವುದಿಲ್ಲ. ಈ ಹಿಂದೆ ಯಾವಾಗಲೋ ನೀವಾಡಿದ ಮಾತು, ನಡೆದುಕೊಂಡ ರೀತಿಯನ್ನು ಉದಾಹರಿಸಿ, ನಿಮ್ಮನ್ನು ನಿಂದಿಸುತ್ತಾರೆ. ನೀವು…

Read More

IPL 2026: 2-0 ಇರೋದ್ನ 4-0 ಮಾಡ್ತೀನಿ; ಸಿಎಸ್​ಕೆಗೆ ಸವಾಲು ಹಾಕಿದ ವೈಭವ್ ಸೂರ್ಯವಂಶಿ

2026 ರ ಐಪಿಎಲ್ (IPL 2026) ಮಾರ್ಚ್ 28 ರಂದು ಆರ್‌ಸಿಬಿ ಮತ್ತು ಸನ್‌ರೈಸರ್ಸ್ ಹೈದರಾಬಾದ್ (RCB vs SRH) ನಡುವಿನ ಪಂದ್ಯದೊಂದಿಗೆ ಪ್ರಾರಂಭವಾಗಲಿದೆ. ಈ ಪಂದ್ಯ ಮುಗಿದ ಒಂದು ದಿನದ ನಂತರ ಅಂದರೆ ಮಾರ್ಚ್​ 30 ರಂದು ಐದು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ (CSK vs RR) ತಂಡಗಳು ಮುಖಾಮುಖಿಯಾಗಲಿವೆ. ಆದರೆ ಈ ಪಂದ್ಯಕ್ಕೂ ಮುನ್ನ ರಾಜಸ್ಥಾನ್ ರಾಯಲ್ಸ್ ತಂಡದ ಯುವ ಆರಂಭಿಕ ಆಟಗಾರ 14 ವರ್ಷದ ವೈಭವ್…

Read More

ಗಾಂಜಾ ಅಮಲಿನಲ್ಲಿ ಸಿಕ್ಕಸಿಕ್ಕ ವಾಹನಗಳಿಗೆ ಡಿಕ್ಕಿ ಹೊಡೆದ ಯುವಕರಿಗೆ ಹಿಗ್ಗಾಮುಗ್ಗಾ ಥಳಿಸಿದ ಜನ

ಹಾಸನ, ಮಾ.14: ನಗರದ ರಸ್ತೆಗಳಲ್ಲಿ ಅಮಲಿನಲ್ಲಿ ಆಟೋ ಚಲಾಯಿಸಿ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದ್ದ ಪುಂಡ ಯುವಕರಿಗೆ  ಸಾರ್ವಜನಿಕರು ಸರಿಯಾಗಿಯೇ ಪಾಠ ಕಲಿಸಿದ್ದಾರೆ. ಸಿಕ್ಕಸಿಕ್ಕ ವಾಹನಗಳಿಗೆ ಡಿಕ್ಕಿ ಹೊಡೆದು ಅಟ್ಟಹಾಸ ಮೆರೆದ ಯುವಕರನ್ನು ಹಿಡಿದು ಸಾರ್ವಜನಿಕರು ಹಿಗ್ಗಾಮುಗ್ಗಾ ಥಳಿಸಿದ ಘಟನೆ ನಿನ್ನೆ ಸಂಜೆ ನಡೆದಿದೆ. ಹಾಸನ ನಗರದಲ್ಲಿ ನಿನ್ನೆ ಸಂಜೆ ಆಟೋವೊಂದನ್ನು ಅತೀ ವೇಗವಾಗಿ ಮತ್ತು ಅಜಾಗರೂಕತೆಯಿಂದ ಚಲಾಯಿಸಿದ ಯುವಕರ ತಂಡ, ರಸ್ತೆಯಲ್ಲಿ ಹೋಗುತ್ತಿದ್ದವರ ಮೇಲೆ ಆತಂಕ ಮೂಡಿಸಿದ್ದಾರೆ. ಈ ಪುಂಡರ ಹುಚ್ಚಾಟದಿಂದಾಗಿ ಮೂರು ಬೈಕ್‌ಗಳು ಜಖಂಗೊಂಡಿದ್ದು, ನಾಲ್ವರು…

Read More

ಜೈಲುಪಾಲಾಗಿರುವ ಪುತ್ರ ಪ್ರಜ್ವಲ್ ಗಾಗಿ ತಂದೆ ರೇವಣ್ಣ ವಿಶೇಷ ಪೂಜೆ

ಮಂಡ್ಯ, (ಮಾರ್ಚ್​​ 29): ಜಿಲ್ಲೆಯ ಪಾಂಡವಪುರ ತಾಲೂಕಿನಲ್ಲಿರುವ ಶ್ರೀಕ್ಷೇತ್ರ ಮೇಲುಕೋಟೆಯಲ್ಲಿ ವಿಶ್ವವಿಖ್ಯಾತ ವೈರಮುಡಿ ಬ್ರಹ್ಮೋತ್ಸವ ಅದ್ದೂರಿಯಾಗಿ ಜರುಗಿತು. ಈ ಭವ್ಯ ಉತ್ಸವವನ್ನು ಕಣ್ತುಂಬಿಕೊಳ್ಳಲು ಸಹಸ್ರಾರು ಭಕ್ತರು ನೆರೆದಿದ್ದರು. ವೈರಮುಡಿ ಬ್ರಹ್ಮೋತ್ಸವದ ಪ್ರಮುಖ ಆಕರ್ಷಣೆಯೆಂದರೆ ಶ್ರೀದೇವಿ ಮತ್ತು ಭೂದೇವಿ ಸಮೇತ ಚಲುವನಾರಾಯಣಸ್ವಾಮಿಯು ರತ್ನಖಚಿತ ವೈರಮುಡಿ ಕಿರೀಟವನ್ನು ಧರಿಸಿ ಭಕ್ತರಿಗೆ ದರ್ಶನ ನೀಡುವುದು. ಈ ವೈರಮುಡಿ ಕಿರೀಟವನ್ನು ದೇವರಿಗೆ ಧಾರಣೆ ಮಾಡುವ ಆ ಕ್ಷಣವು ಅತಿ ಪವಿತ್ರವೆಂದು ಪರಿಗಣಿಸಲಾಗುತ್ತದೆ. ಈ ವಿಶಿಷ್ಟ ಸಂದರ್ಭವನ್ನು ಕಣ್ತುಂಬಿಕೊಳ್ಳಲು ದೇಶದ ನಾನಾ ಭಾಗಗಳಿಂದ ಭಕ್ತರು…

Read More

SRH-CSK ಪಂದ್ಯದ ವೇಳೆ ಬ್ಲಾಕ್ ಮ್ಯಾಜಿಕ್; ನಿಂಬೆ ಹಣ್ಣು ಮಂತ್ರಿಸಿದ ಕೂಡಲೇ ಬಿತ್ತು ವಿಕೆಟ್! – Kannada News | SRH vs CSK IPL 2026: The Truth Behind Viral “Black Magic” and Fake BCCI Complaint

ಐಪಿಎಲ್ 2026 ರ 27 ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಮ್ಮ ಮೂರನೇ ಗೆಲುವು ದಾಖಲಿಸಿತು. ಸನ್‌ರೈಸರ್ಸ್ ಹೈದರಾಬಾದ್ ನೀಡಿದ್ದ 195 ರನ್‌ಗಳ ಗುರಿಯನ್ನು ಬೆನ್ನಟ್ಟುವಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿಫಲವಾಯಿತು. ಪರಿಣಾಮವಾಗಿ ಸಿಎಸ್​​ಕೆ ಲೀಗ್​ನಲ್ಲಿ 4ನೇ ಸೋಲು ಅನುಭವಿಸಿದರೆ, ಇತ್ತ ಸನ್‌ರೈಸರ್ಸ್ ಮೂರನೇ ಗೆಲುವು ದಾಖಲಿಸಿ ಪಾಯಿಂಟ್ ಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿದೆ. ಇದು ಪಂದ್ಯದ ವಿಚಾರವಾದರೆ, ಇದೇ ಪಂದ್ಯದ ವೇಳೆ ಮಾಟ- ಮಂತ್ರದ ಪ್ರಯೋಗ ನಡೆದಿದ್ದು, ಇದರಿಂದಾಗಿ ಸಿಎಸ್​​ಕೆ ತಂಡ ಸೋತಿದೆ ಎಂಬ ಮಾತು ಸೋಶಿಯಲ್…

Read More

ರಾಜ್ಯ ಕಡಲೆ ಬೆಳೆಗಾರರ ಬೆನ್ನಿಗೆ ನಿಂತ ಕೇಂದ್ರ ಸರ್ಕಾರ, ಬೆಂಬಲ ಬೆಲೆ ಎಷ್ಟು? – Kannada News | Centre permits Karnataka to procure 1.01 lakh tonnes of Bengal gram

ನವದೆಹಲಿ, (ಜನವರಿ 23): ಸಂಕಷ್ಟಿತ ಸಮಯದಲ್ಲಿ ಸದಾ ಕರ್ನಾಟಕದ (Karnataka) ರೈತರ ಬೆನ್ನಿಗೆ ನಿಲ್ಲುತ್ತಿರುವ ಕೇಂದ್ರ ಸರ್ಕಾರ, ಇದೀಗ ರಾಜ್ಯದ ಕಡಲೆ (Bengal gram) ಬೆಳೆಗಾರರ ಬೆಂಬಲಕ್ಕೂ ಬಂದಿದೆ. ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ (Pralhad Joshi) ಅವರ ಮನವಿ ಮೇರೆಗೆ ರಾಜ್ಯದಿಂದ ಬೆಂಬಲ ಬೆಲೆಯಲ್ಲಿ 1 ಲಕ್ಷ ಮೆಟ್ರಿಕ್ ಟನ್ ಕಡಲೆ ಖರೀದಿಗೆ ಅಸ್ತು ಎಂದಿದೆ. ಬೆಂಬಲ ಬೆಲೆ ಯೋಜನೆಯಡಿ ಕನಿಷ್ಠ ಬೆಂಬಲ ಬೆಲೆ  5875 ರೂ. ದರದಲ್ಲಿ ಒಟ್ಟು…

Read More

Video: ಮಗನ ಕ್ಲಾಸ್ ಮಿಸ್ ಆಗುತ್ತೆ ಎಂದು ಸ್ಕೂಲ್ ಬಸ್ ಹಿಂದೆ ಓಡಿದ ತಾಯಿ, ವೈರಲ್‌ ಆಯ್ತು ದೃಶ್ಯ – Kannada News | Mother ran and put her son on the school bus

ತಾಯಿಗೆ (mother) ಮಕ್ಕಳೇ ಪ್ರಪಂಚ. ಹೀಗಾಗಿ ಹೊಟ್ಟೆ ಬಟ್ಟೆ ಕಟ್ಟಿ ಮಕ್ಕಳಿಗೆ ಒಂದೊಳ್ಳೆ ಭವಿಷ್ಯ ಕಟ್ಟಿ ಕೊಡಲು ಒದ್ದಾಡುತ್ತಾಳೆ. ಹೀಗಾಗಿ ಅಮ್ಮ ಅಂದ್ರೆ ತ್ಯಾಗಮಯಿ. ಮಕ್ಕಳಿಗಾಗಿ ಎಲ್ಲಾ ಕಷ್ಟವನ್ನು ಸಹಿಸಿಕೊಳ್ಳುತ್ತಾರೆ. ಇದಕ್ಕೆ ಸಾಕ್ಷಿಯಾಗಿದೆ ಈ ವಿಡಿಯೋ. ಮಗನ ಸ್ಕೂಲ್ ಬಸ್ (school bus) ಹೊರಟಿತೆಂದು ಬ್ಯಾಗ್ ಹೆಗಲಿಗೇರಿಸಿಕೊಂಡು ತಾಯಿಯೂ ಬಸ್ ಹಿಂದೆ ಓಡುತ್ತಿರುವ ದೃಶ್ಯವು ಎಲ್ಲರ ಗಮನ ಸೆಳೆದಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ತಾಯಿ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ಟಿವಿ…

Read More

ಇನ್ನೂ ಮುಗಿದಿಲ್ಲ ಖಾತೆ ಕ್ಯಾತೆ: ಹೈಕಮಾಂಡ್​ನಿಂದ ಸ್ಪಷ್ಟತೆ ಸಿಗುವ ವರೆಗೆ ಅಧಿಕಾರ ಸ್ವೀಕರಿಸಲ್ಲವೆಂದ ಕೃಷ್ಣಭೈರೇಗೌಡ! – Kannada News

ಬೆಂಗಳೂರು ನಗರಾಭಿವೃದ್ಧಿ ಖಾತೆಯಲ್ಲಿ ಬಿಡಿಎ, ಬಿಎಂಆರ್‌ಡಿಎ ಸೇರಿಸಲು ಕೃಷ್ಣಭೈರೇಗೌಡ ಪಟ್ಟುImage Credit source: tv9 ಬೆಂಗಳೂರು, ಜೂನ್ 8: ಸಿಎಂ ಡಿಕೆ ಶಿವಕುಮಾರ್ (DK Shivakumar) ನೇತೃತ್ವದ ನೂತನ ಸಚಿವ ಸಂಪುಟ ರಚನೆಯಾಗಿ ಮೂರ್ನಾಲ್ಕು ದಿನಗಳೇ ಕಳೆದರೂ ಖಾತೆ ಹಂಚಿಕೆ ಕುರಿತಂತೆ ಗೊಂದಲಗಳು ಮುಂದುವರಿದಿವೆ. ಬೆಂಗಳೂರು ನಗರಾಭಿವೃದ್ಧಿ ಖಾತೆ ಪಡೆದಿರುವ ಸಚಿವ ಕೃಷ್ಣಭೈರೇಗೌಡರು (Krishna Byre Gowda), ಖಾತೆಯಲ್ಲಿ ಬಿಡಿಎ (ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ) ಮತ್ತು ಬಿಎಂಆರ್‌ಡಿಎ (ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರ) ಇಲಾಖೆಗಳನ್ನು ಸೇರಿಸುವಂತೆ ಹೈಕಮಾಂಡ್…

Read More