Headlines

ವಿಜಯಪುರದಲ್ಲಿ ಭಾರೀ ಅಗ್ನಿ ಅವಘಡ: ಹೊತ್ತಿ ಉರಿದ ಸರ್ವೀಸ್ ಸೆಂಟರ್, 1 ಕೋಟಿ ರೂ.ಗೂ ಅಧಿಕ ಬೆಲೆಬಾಳುವ ಕಾರುಗಳು ಭಸ್ಮ – Kannada News | Massive Fire Accident in Vijayapura Car Service Center: Vehicles Worth Over R1 Crore Gutted

ವಿಜಯಪುರ, ಫೆಬ್ರವರಿ 5: ವಿಜಯಪುರ ನಗರದ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಇರುವ ಹೆಚ್‌ಎಂಕೆ ಕಾರ್ ಸರ್ವೀಸ್ ಸೆಂಟರ್‌ನಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿ, ಸುಮಾರು 20ಕ್ಕೂ ಹೆಚ್ಚು ಕಾರುಗಳು ಸುಟ್ಟು ಭಸ್ಮವಾಗಿವೆ. ಹನಮಂತ ಕನಮಡಿ ಅವರಿಗೆ ಸೇರಿದ ಈ ಸರ್ವೀಸ್ ಸೆಂಟರ್‌ನಲ್ಲಿ ರಿಪೇರಿ ಮತ್ತು ಸರ್ವಿಸ್‌ಗಾಗಿ ನಿಲ್ಲಿಸಲಾಗಿದ್ದ ವಿವಿಧ ಕಂಪನಿಗಳ ಕಾರುಗಳು ಬೆಂಕಿಗಾಹುತಿಯಾಗಿವೆ. ಅಗ್ನಿ ಅವಘಡದ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ. ಬೆಂಕಿಯ ಕೆನ್ನಾಲಿಗೆಗೆ ಇಡೀ ಸರ್ವಿಸ್ ಸೆಂಟರ್ ಸುಟ್ಟು ಕರಕಲಾಗಿದ್ದು, ಅಂಗಡಿಯಲ್ಲಿ ಇಟ್ಟಿದ್ದ ಸುಮಾರು…

Read More

ಮೂರು ದಿನಗಳಿಂದ ನಾಪತ್ತೆಯಾಗಿದ್ದ ಶ್ರೀನಂದಾ ಮೃತದೇಹ ಚಂದ್ರದ್ರೋಣ ಪರ್ವತದ 2 ಸಾವಿರ ಅಡಿ ಪ್ರಪಾತದಲ್ಲಿ ಪತ್ತೆ

ಚಿಕ್ಕಮಗಳೂರು, ಏ.10: ಚಂದ್ರದ್ರೋಣ ಪರ್ವತ ಶ್ರೇಣಿಯ ಮಾಣಿಕ್ಯಧಾರಾ ಜಲಪಾತದ ಬಳಿ ಕಳೆದ ಮೂರು ದಿನಗಳಿಂದ ನಾಪತ್ತೆಯಾಗಿದ್ದ ಕೇರಳ ಮೂಲದ 14 ವರ್ಷದ ಬಾಲಕಿ ಶ್ರೀನಂದಾ ಅವರ ಮೃತದೇಹ ಇಂದು (ಏಪ್ರಿಲ್ 10) ಪತ್ತೆಯಾಗಿದೆ. ಸುಮಾರು 2 ಸಾವಿರ ಅಡಿ ಆಳದ ಪ್ರಪಾತದಲ್ಲಿ ಬಾಲಕಿಯ ಶವ ಸಿಕ್ಕಿರುವುದು ದೃಢಪಟ್ಟಿದೆ. ಕೇರಳದಿಂದ ಏಪ್ರಿಲ್ 7ರಂದು ಚಿಕ್ಕಮಗಳೂರು ನಗರಕ್ಕೆ ಆಗಮಿಸಿದ್ದ 40 ಜನರ ಪ್ರವಾಸಿ ತಂಡದಲ್ಲಿ ಶ್ರೀನಂದಾ ಕೂಡ ಇದ್ದರು. ಇನಾಮು ದತ್ತಾತ್ರೇಯ ಪೀಠ ಹಾಗೂ ಮಾಣಿಕ್ಯಧಾರಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ…

Read More

LSG vs RR: ರಾಯಲ್ಸ್ ಮುಂದೆ ಪಂತ್ ಪಡೆ ಪಲ್ಟಿ! – Kannada News | IPL 2026 LSG vs RR Highlights

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ 32ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್​ ತಂಡ ಭರ್ಜರಿ ಗೆಲುವು ದಾಖಲಿಸಿದೆ. ಲಕ್ನೋನ ಏಕಾನ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಎಲ್​ಎಸ್​ಜಿ ತಂಡದ ನಾಯಕ ರಿಷಭ್ ಪಂತ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡವು ನಿರೀಕ್ಷಿತ ಆರಂಭ ಪಡೆದಿರಲಿಲ್ಲ. ಆರಂಭಿಕ ದಾಂಡಿಗ ಯಶಸ್ವಿ ಜೈಸ್ವಾಲ್ (22) ಆರಂಭದಲ್ಲಿ ಅಬ್ಬರಿಸಿದರೂ ಬೇಗನೆ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ ಧ್ರುವ್ ಜುರೆಲ್ (0) ಸಹ…

Read More

ಹಾವೇರಿಯಲ್ಲಿ ಮೋಡ ಬಿತ್ತನೆಗೆ ತೀರ್ಮಾನ: 1 ಗಂಟೆ ಮೋಡ ಬಿತ್ತನೆಗೆ ಎಷ್ಟು ಖರ್ಚು? ವಿವರಿಸಿದ ಶಾಸಕ ಪ್ರಕಾಶ್ ಕೋಳಿವಾಡ – Kannada News | Congress MLA Prakash Koliwada talks about cloud seeding in Haveri

ಹಾವೇರಿ, (ಜುಲೈ 03): ಮುಂಗಾರು ಮಳೆ ಕೊರತೆಯ ಪರಿಣಾಮ ರಾಜ್ಯದಲ್ಲಿ ಸ್ಪಷ್ಟವಾಗಿ ಗೋಚರಿಸಲಾರಂಭಿಸಿದೆ. ಈ ಹೊತ್ತಿಗಾಗಲೇ ಕೃಷಿ ಚಟುವಟಿಕೆಗಳಲ್ಲಿ ನಿರತರಾಗಿರಬೇಕಿದ್ದ ರೈತರು, ಆಗಸ ನೋಡುತ್ತ ಕುಳಿತಿದ್ದಾರೆ. ಬಿತ್ತನೆ ಚಟುವಟಿಕೆಗಳು ಕುಂಠಿತಗೊಂಡಿದ್ದು, ಬಿತ್ತನೆ ಪ್ರಮಾಣವು ವಾಡಿಕೆಯ ಕಾಲು ಭಾಗವನ್ನೂ ದಾಟಿಲ್ಲ. ಹೀಗಾಗಿ ಈ ಬಾರಿ ಬರಗಾಲ ಆತಂಕ ಮನೆ ಮಾಡಿದೆ. ಇನ್ನೊಂದೆಡೆ ಹಾವೇರಿಯಲ್ಲಿ ಮಳೆಗಾಗಿ ಮೋಡ ಬಿತ್ತನೆಗೆ ಜಿಲ್ಲೆಯ ಶಾಸಕರು ಮುಂದಾಗಿದ್ದಾರೆ. ಹೌದು…ಹಾವೇರಿ ಜಿಲ್ಲೆಯ ಎಲ್ಲಾ ಶಾಸಕರು ಸೇರಿಕೊಂಡು ಸ್ವಂತ ಹಣದಲ್ಲಿ ಮೂರು ದಿನಗಳ ಕಾಲ ಮೋಡ ಬಿತ್ತನೆ…

Read More

ಬೆಂಗಳೂರಿಗರೇ ಗಮನಿಸಿ: ಇಂದಿನಿಂದ ಮೂರು ದಿನ ನಗರದ ವಿವಿಧೆಡೆ ವಿದ್ಯುತ್​​ ವ್ಯತ್ಯಯ; ಇಲ್ಲಿದೆ ಮಾಹಿತಿ – Kannada News | Bengaluru Power Cut Alert: 3 Day Outage in Several Areas Starting Today Due to BESCOM, KPTCL Maintenance

ಬೆಂಗಳೂರು, ಜುಲೈ 19: ಬೆಸ್ಕಾಂ (BESCOM) ಹಾಗೂ ಕೆಪಿಟಿಸಿಎಲ್ (KPTCL) ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಭಾನುವಾರ, ಸೋಮವಾರ ಮತ್ತು ಮಂಗಳವಾರ ಬೆಂಗಳೂರಿನ (Bengaluru) ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಹೀಗಾಗಿ ಸಾರ್ವಜನಿಕರು ಅಗತ್ಯ ಮುನ್ನೆಚ್ಚರಿಕೆ ವಹಿಸಿಕೊಳ್ಳುವಂತೆ ಪ್ರಕಟಣೆ ಮೂಲಕ ಅಧಿಕಾರಿಗಳು ಮನವಿ ಮಾಡಿದ್ದಾರೆ ಭಾನುವಾರ ಎಲ್ಲೆಲ್ಲಿ ವಿದ್ಯುತ್​​ ವ್ಯತ್ಯಯ? ಸೂರ್ಯ ಸಿಟಿ ಫೇಸ್-1, ಮರಸೂರು, ನಾಗನಾಯಕನಹಳ್ಳಿ, ಇಗ್ಗಲೂರು, ಸರ್ಜಾಪುರ, ಇಟ್ಟಗನೂರು, ಕಾಡ ಅಗ್ರಹಾರ, ಸೋಂಪುರ ಗೇಟ್, ಬಿ. ಹೊಸಹಳ್ಳಿ, ದಾಸನಪುರ, ಕಂಬ್ಳಿಪುರ, ಹರೋಹಳ್ಳಿ, ಬೊಮ್ಮಸಂದ್ರ, ಬೊಮ್ಮಸಂದ್ರ…

Read More

ಏಕದಿನ ವಿಶ್ವಕಪ್​ಗೆ ಅಚ್ಚರಿಯ ಹೆಸರುಗಳಿರುವ ತಂಡ ಪ್ರಕಟಿಸಿದ ಮಾಜಿ ಕೋಚ್ ರವಿಶಾಸ್ತ್ರಿ – Kannada News | Ravi Shastri Predicts India’s ODI World Cup Squad 2027: Kohli, Rohit, Pant Inclusions!

ಮುಂದಿನ ವರ್ಷ ಅಂದರೆ 2027 ರಲ್ಲಿ ನಡೆಯಲಿರುವ  ಏಕದಿನ ವಿಶ್ವಕಪ್​ಗೆ (ODI World Cup 2027) ಟೀಂ ಇಂಡಿಯಾದಲ್ಲಿ (Team India) ಯಾರಿಗೆಲ್ಲ ಅವಕಾಶ ಸಿಗಲಿದೆ ಎಂಬುದು ಇದುವರೆಗೂ ಖಚಿತವಾಗಿಲ್ಲ. ಅದರಲ್ಲೂ ತಂಡದ ಹಿರಿಯ ಆಟಗಾರರಾದ ರೋಹಿತ್ ಶರ್ಮಾ, ಮೊಹಮ್ಮದ್ ಸಿರಾಜ್ ಮತ್ತು ಮೊಹಮ್ಮದ್ ಶಮಿಗೆ ಸ್ಥಾನ ಸಿಗುತ್ತದೆಯೇ? ಇಶಾನ್ ಕಿಶನ್ ವಿಕೆಟ್ ಕೀಪರ್ ಆಗುತ್ತಾರೆಯೇ ಅಥವಾ ರಿಷಭ್ ಪಂತ್ ಏಕದಿನ ತಂಡಕ್ಕೆ ಮರಳುತ್ತಾರೆಯೇ? ಎಂಬುದನ್ನು ಹೇಳಲು ಸಾಧ್ಯವಾಗುತ್ತಿಲ್ಲ. ಇದೆಲ್ಲದರ ನಡುವೆ ಟೀಂ ಇಂಡಿಯಾದ ಮಾಜಿ ಕೋಚ್…

Read More

ಕರ್ನಾಟಕದಲ್ಲೇ ಅತಿದೊಡ್ಡ ಡಿಜಿಟಲ್ ಅರೆಸ್ಟ್ ನಡೆದಿದ್ದೇಗೆ? ಮಾಡಿದ್ಯಾರು? ಇಲ್ಲಿದೆ ಪ್ರಕರಣದ ಆಳ-ಅಗಲ – Kannada News | Karnataka’s Biggest Digital Arrest Case Explained: Who Was Behind the Massive Cyber Scam

ಡಿಜಿಟಲ್ ಅರೆಸ್ಟ್ (ಎಐ ಚಿತ್ರ)Image Credit source: tv9 kannada ಬೆಂಗಳೂರು, ಮೇ 25: ಕರ್ನಾಟಕದಲ್ಲಿ ನಡೆದಿದ್ದ ಅತಿದೊಡ್ಡ ಡಿಜಿಟಲ್ ಅರೆಸ್ಟ್ (Digital Arrest) ಪ್ರಕರಣವನ್ನು ಸದ್ಯ ಬೆಂಗಳೂರು ಸೈಬರ್ ಕಮಾಂಡ್ ಪೊಲೀಸರು ಭೇದಿಸಿದ್ದಾರೆ. ರಾಜ್ಯದಲ್ಲೂ ಆ್ಯಕ್ಟಿವ್ ಆಗಿದ್ದ ಉತ್ತರ ಭಾರತದ ಸೈಬರ್ ವಂಚಕರ ಜಾಲವನ್ನು ಪತ್ತೆ ಹಚ್ಚುವ ಮೂಲಕ ಆರು ಆರೋಪಿಗಳನ್ನು ಬಂಧಿಸಲಾಗಿದೆ. ಮುಂಬೈ ಮೂಲದ ಎ.ಮಲ್ಲಿಕ್, ತಮಿಳುನಾಡು ಮೂಲದ ಶಿವಗ್ಯಾನಂ, ಗುಜರಾತ್ ಮೂಲದ ಪಾಲಕ್ ಬೈ ಪಟೇಲ್, ಮೊಹಮ್ಮದ್ ಹಮೀದ್ ಮತ್ತು ದೆಹಲಿ ಮೂಲದ…

Read More

ಬಿಜೆಪಿ ಮುಖಂಡನ ಅನೈತಿಕ ಸಂಬಂಧಕ್ಕೆ ಬೇಸತ್ತು ಪತ್ನಿ ಆತ್ಮಹತ್ಯೆ: ಸೊರಬ ಪುರಸಭೆ ಮಾಜಿ ಅಧ್ಯಕ್ಷ ಅರೆಸ್ಟ್! – Kannada News | Shivamogga: BJP Leader and Former Soraba TMC President Arrested After Wife ended Over Extra Marital Affair

ಶಿವಮೊಗ್ಗ, ಏಪ್ರಿಲ್ 29: ಪತಿಯ ಅನೈತಿಕ ಸಂಬಂಧ ಹಾಗೂ ದೈಹಿಕ-ಮಾನಸಿಕ ಹಿಂಸೆಯಿಂದ ಬೇಸತ್ತ ಬಿಜೆಪಿ (BJP) ಮುಖಂಡನ ಪತ್ನಿಯೊಬ್ಬರು ನೇಣಿಗೆ ಶರಣಾಗಿರುವ ಘಟನೆ ಸೊರಬ ಪಟ್ಟಣದ ಕಾನುಕೇರಿ ಬಡಾವಣೆಯಲ್ಲಿ ನಡೆದಿದೆ. ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ಹೊಸವೀರಾಪುರ ಗ್ರಾಮದ ಮಂಜುಳಾ (38) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಈ ಬಗ್ಗೆ ಮೃತಳ ತಾಯಿ ಸೊರಬ ಪೋಲೀಸರಿಗೆ ದೂರು ನೀಡಿದ್ದು, ಇದರ ಆಧಾರದಲ್ಲಿ ಬಿಜೆಪಿ ಮುಖಂಡ ಪ್ರಭು ಮೇಸ್ತ್ರಿಯನ್ನು ಬಂಧಿಸಲಾಗಿದೆ. ಅಲ್ಲದೆ, ಪ್ರಭು ಮೇಸ್ತ್ರಿಯ ಹಲವು ವಿಚಾರಗಳು ಬೆಳಕಿಗೆ ಬಂದಿವೆ….

Read More

ತಾಯಿ ನಿಧನರಾದಾಗ ಹೇಗನಿಸುತ್ತದೆ? ಪಾಪರಾಜಿಗಳ ಪ್ರಶ್ನೆಗೆ ನಟ ಜಾಕಿ ಶ್ರಾಫ್ ಗರಂ

ಭಾರತೀಯ ಚಿತ್ರರಂಗದ ಲೆಜೆಂಡರಿ ಗಾಯಕಿ ಆಶಾ ಭೋಸ್ಲೆ (Asha Bhosle) ಅವರ ಅಗಲಿಕೆಯಿಂದ ಅಭಿಮಾನಿಗಳಿಗೆ, ಆಪ್ತರಿಗೆ, ಕುಟುಂಬದವರಿಗೆ ತೀವ್ರ ನೋವಾಗಿದೆ. ಏಪ್ರಿಲ್ 12ರಂದು ನಿಧನರಾದ ಅವರ ಅಂತಿಮ ಸಂಸ್ಕಾರ ಇಂದು (ಏ.13) ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು. ಈ ಸಂದರ್ಭದಲ್ಲಿ ಬಾಲಿವುಡ್‌ನ ಹಲವು ಗಣ್ಯರು ಭಾಗವಹಿಸಿ ಅಂತಿಮ ನಮನ ಸಲ್ಲಿಸಿದರು. ಆದರೆ, ಅಲ್ಲಿ ನಡೆದ ಒಂದು ಘಟನೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಖ್ಯಾತ ನಟ ಜಾಕಿ ಶ್ರಾಫ್ ಅವರು…

Read More

ಈ ವಾರ ನಿರೀಕ್ಷಿಸಿ ಹೊಸ ಸ್ವರೂಪದ ಇಪಿಎಫ್​ಒ; ಸೈಟ್ಸ್ ಅಳವಡಿಕೆ; ವೇಗದ ಸೇವೆ ಸುಲಭ ಬಳಕೆ; ಇನ್ನೇನಿದೆ ಇದರ ವಿಶೇಷತೆ? – Kannada News | EPFO with new technical upgrade coming this week, know what new features it has

ನವದೆಹಲಿ, ಜುಲೈ 8: ಇಪಿಎಫ್‌ಒ (EPFO – ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ) ತನ್ನ ಡಿಜಿಟಲ್ ಸೇವೆಯನ್ನು ಮೇಲ್ದರ್ಜೆಗೆ ಏರಿಸಿದ್ದು, ‘EPFO 2.01’ ಎಂಬ ಹೊಸ ಸ್ವರೂಪದಲ್ಲಿ ಈ ವಾರದಲ್ಲಿ ಪ್ರಾರಂಭಿಸಲಿದೆ. ಇದು ಸಂಸ್ಥೆಯ ಇತಿಹಾಸದಲ್ಲೇ ಅತಿದೊಡ್ಡ ತಾಂತ್ರಿಕ ಬದಲಾವಣೆಗಳಲ್ಲಿ ಒಂದಾಗಿದೆ. ಕೆಲ ದಿನಗಳ ಹಿಂದೆ ಇಪಿಎಫ್ ಡಿಜಿಟಲ್ ಪ್ಲಾಟ್​ಫಾರ್ಮ್ ಸಾರ್ವಜನಿಕವಾಗಿ ಅಲಭ್ಯವಾಗಿದ್ದು ಇದೇ ಕಾರಣಕ್ಕೆ. ಹೊಸ ಕೇಂದ್ರೀಕೃತ ಸಿಸ್ಟಂ ಅಳವಡಿಕೆಯಾಗುತ್ತಿದ್ದುದರಿಂದ ಇಪಿಎಫ್​ಒ ಡಿಜಿಟಲ್ ಪ್ಲಾಟ್​ಫಾರ್ಮ್ ಪುನಾರಂಭಗೊಳ್ಳುವುದು ವಿಳಂಬವಾಗಿತ್ತು. ಕೇಂದ್ರ ಸರ್ಕಾರದ ಸೈಟ್ಸ್ (CITES- Centralised IT…

Read More