Headlines

ಬೆಂಗಳೂರು: ಬೆಳ್ಳಂಬೆಳಗ್ಗೆ ಗುದ್ದಲಿ, ಪೊರಕೆ ಹಿಡಿದು ಬೀದಿಗಿಳಿದ ಟೆಕ್ಕಿಗಳು!

ಬೆಂಗಳೂರು, ಜನವರಿ 17: ನಗರದ ಮಹದೇವಪುರದ ಬಳಗೆರೆ ರಸ್ತೆಯಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚದಿರುವುದನ್ನು ಖಂಡಿಸಿ ಐಟಿ–ಬಿಟಿ ಉದ್ಯೋಗಿಗಳು ವಿಭಿನ್ನ ರೀತಿಯ ಪ್ರತಿಭಟನೆ ನಡೆಸಿದ್ದಾರೆ. ಹಾಳಾಗಿರುವ ರಸ್ತೆಗಳಿಂದ ನಿತ್ಯ ಸಂಚಾರಕ್ಕೆ ತೊಂದರೆ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಟೆಕ್ಕಿಗಳು ಗುದ್ದಲಿ, ಬಾಂಡಲಿ, ಹಾರೆ ಮತ್ತು ಪೊರಕೆ ಹಿಡಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಲವರು ಟ್ರ್ಯಾಕ್ಟರ್ ತರಿಸಿ ರಸ್ತೆ ಮೇಲೆ ತುಂಬಿಕೊಂಡಿದ್ದ ಮಣ್ಣು ಹಾಗೂ ಧೂಳನ್ನು ಸ್ವಚ್ಛಗೊಳಿಸುವ ಮೂಲಕ ಆಡಳಿತದ ನಿರ್ಲಕ್ಷ್ಯವನ್ನು ಪ್ರಶ್ನಿಸಿದ್ದಾರೆ. ಬಳಗೆರೆ ರಸ್ತೆ ಸಂಪೂರ್ಣವಾಗಿ ಹಾಳಾಗಿದ್ದು, ವಾಹನ ಸವಾರರು ಹಾಗೂ ಪಾದಚಾರಿಗಳು…

Read More

ತನ್ನ ಕುಡಿತದ ಚಟದ ಬಗ್ಗೆ ಬಹಿರಂಗವಾಗಿ ಮಾತನಾಡಿದ ಯುವನಟಿ ಜಾನ್ಹವಿ ಕಪೂರ್ – Kannada News | Janhvi Kapoor talks about alcohol addiction and how she break free from that

ಬಾಲಿವುಡ್​​ನ ಸ್ಟಾರ್ ಯುವ ನಟಿ ಜಾನ್ಹವಿ ಕಪೂರ್ (Janhvi Kapoor). ಇತ್ತೀಚೆಗೆ ದಕ್ಷಿಣದಲ್ಲೂ ಸಹ ಜೂ ಎನ್​​ಟಿಆರ್, ರಾಮ್ ಚರಣ್ ಅಂಥಹಾ ಸ್ಟಾರ್ ನಟರುಗಳೊಟ್ಟಿಗೆ ನಟಿಸುತ್ತಿದ್ದಾರೆ. ಬಾಲಿವುಡ್​​ನಲ್ಲಿ ಮುಂಚೂಣಿಯಲ್ಲಿರುವ ಯುವನಟಿ ಎನಿಸಿಕೊಂಡಿದ್ದಾರೆ. ಒಂದರ ಹಿಂದೊಂದು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಕೊಕಾ-ಕೊಲಾ ಸೇರಿದಂತೆ ಹಲವು ಪ್ರತಿಷ್ಠಿತ ಬ್ರ್ಯಾಂಡುಗಳ ರಾಯಭಾರಿ ಆಗಿದ್ದಾರೆ. ಭಾರತದ ಬ್ಯುಸಿ ಸ್ಟಾರ್ ನಟಿಯರಲ್ಲಿ ಒಬ್ಬರೆನಿಸಿಕೊಂಡಿದ್ದಾರೆ. ಇದೆಲ್ಲದರ ಜೊತೆಗೆ ಪಾರದರ್ಶಕತೆಗೆ ಒತ್ತು ಕೊಡುವ ನಟಿಯೂ ಸಹ ಆಗಿದ್ದು, ಇದೀಗ ಅವರ ಕುಡಿತದ ಚಟದ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ. ಸಂದರ್ಶನವೊಂದರಲ್ಲಿ…

Read More

ಸಿಎಂ ವಿಜಯ್ ಭೇಟಿ ಮಾಡಿದ MRF ಟೀಮ್: ದಳಪತಿಗೆ ಸಿಕ್ಕಿತು ಕಿಂಗ್ ಕೊಹ್ಲಿ ಸಹಿ ಮಾಡಿದ ರೇರ್ ಬ್ಯಾಟ್ ಗಿಫ್ಟ್! – Kannada News | CM Vijay Receives Kohli Autographed Bat from MRF: TN Sports and Business Boost

ಚೆನ್ನೈ, ಮೇ,22: ತಮಿಳುನಾಡಿನ ನೂತನ ಮುಖ್ಯಮಂತ್ರಿ ವಿಜಯ್ ಅವರನ್ನು ಭಾರತದ ಮುಂಚೂಣಿಯ ಟೈರ್ ತಯಾರಿಕಾ ಸಂಸ್ಥೆಯಾದ ಎಂಆರ್‌ಎಫ್ (MRF) ತಂಡವು ಸೌಜನ್ಯಯುತವಾಗಿ ಭೇಟಿ ಮಾಡಿದೆ. ಈ ವಿಶೇಷ ಸಂದರ್ಭದಲ್ಲಿ ಎಂಆರ್‌ಎಫ್ ನಿಯೋಗವು ಮುಖ್ಯಮಂತ್ರಿ ವಿಜಯ್ ಅವರಿಗೆ ಭಾರತದ ಸ್ಟಾರ್ ಕ್ರಿಕೆಟರ್ ವಿರಾಟ್ ಕೊಹ್ಲಿ ಸಹಿ ಮಾಡಿರುವ ಕ್ರಿಕೆಟ್ ಬ್ಯಾಟ್ ಅನ್ನು ನೆನಪಿನ ಕಾಣಿಕೆಯಾಗಿ ನೀಡಿ ಗೌರವಿಸಿದೆ. ಈ ಬಗ್ಗೆ ಕ್​ರಿಕಟರ್ ಮುಫದ್ದಲ್ ವೋಹ್ರಾ ತಮ್ಮ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದೀಗ ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಭಾರೀ…

Read More

ಮೈಸೂರು ಅರಮನೆ ಬಳಿ ಸ್ಫೋಟ: ಹತ್ತಾರು ಅನುಮಾನ; ಇಬ್ಬರ ವಿಚಾರಣೆ – Kannada News | Major Twist in Mysuru Palace Helium Blast Case as NIA Enters Probe

ಮೈಸೂರು, ಡಿಸೆಂಬರ್​​ 26: ಮೈಸೂರು ಅರಮನೆ ಬಳಿ ಸಂಭವಿಸಿದ ಹೀಲಿಯಂ ಗ್ಯಾಸ್ ಸಿಲಿಂಡರ್ ಸ್ಫೋಟ ಪ್ರಕರಣಕ್ಕೆ ಇದೀಗ ಮಹತ್ವದ ತಿರುವು ದೊರೆತಿದೆ. ಆರಂಭದಲ್ಲಿ ಇದೊಂದು ಸಾಮಾನ್ಯ ಸ್ಫೋಟ, ಬಹುಶಃ ಗ್ಯಾಸ್ ತುಂಬಿಸುವ ವೇಳೆ ಸಂಭವಿಸಿರಬಹುದು ಎಂದು ಅಂದಾಜಿಸಲಾಗಿತ್ತು. ಆದರೆ, ಈಗ ಈ ಘಟನೆಯಲ್ಲಿ ಹಲವು ಗಂಭೀರ ವಿಚಾರಗಳು ಅಡಗಿವೆ ಎಂಬ ಅನುಮಾನಗಳು ವ್ಯಕ್ತವಾಗಿವೆ. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಅಧಿಕಾರಿಗಳ ತಂಡ ಮೈಸೂರಿಗೆ ಆಗಮಿಸಲಿದೆ. ಘಟನೆಯಲ್ಲಿ ಮೃತಪಟ್ಟಿರೋ ಸಲೀಂ ಜತೆ ವಾಸವಿದ್ದ ಇಬ್ಬರನ್ನು ಪೊಲೀಸರು…

Read More

ಹೊಸಕೋಟೆಯಲ್ಲಿ ನಾಲ್ವರು ಕಾರ್ಮಿಕರ ಅನುಮಾನಾಸ್ಪದ ಸಾವು! – Kannada News | Bengaluru Rural: 4 Assam Workers Dead in Hoskote Warehouse

ಹೊಸಕೋಟೆಯಲ್ಲಿ ನಾಲ್ವರು ಕಾರ್ಮಿಕರ ಅನುಮಾನಾಸ್ಪದ ಸಾವು! ಬೆಂಗಳೂರು ಗ್ರಾಮಾಂತರ, ಜನವರಿ 31: ಜಿಲ್ಲೆಯ (Bengaluru Rural) ಹೊಸಕೋಟೆ ತಾಲೂಕಿನ ಮುತ್ಸಂದ್ರ ಗ್ರಾಮದಲ್ಲಿ ಅನುಮಾನಾಸ್ಪದವಾಗಿ ನಾಲ್ವರು ಯುವಕರು ಸಾವನ್ನಪ್ಪಿರುವ ಘಟನೆ ನಡೆದಿದ್ದು, ಹಲ್ ಚಲ್ ಎಬ್ಬಿಸಿದೆ. ಕೋಕಾಕೋಲಾ ವೇರ್‌ಹೌಸ್‌ನಲ್ಲಿ ಕೆಲಸ ಮಾಡುತ್ತಿದ್ದ ಅಸ್ಸಾಂ ಮೂಲದ ನಾಲ್ವರು ಕಾರ್ಮಿಕರು ಲೇಬರ್ ಶೆಡ್‌ನಲ್ಲಿ ಮಲಗಿದ್ದ ವೇಳೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಉಸಿರುಗಟ್ಟಿ ಸಾವನ್ನಪ್ಪಿರುವ ಶಂಕೆ ಮೃತರನ್ನು ಜಯಂತ್ ಸಿಂಧೆ (25), ನೀರೇಂದ್ರನಾಥ್ (24), ಡಾಕ್ಟರ್ ಟೈಡ್ (25) ಹಾಗೂ ಧನಂಜಯ್ ಟೈಡ್…

Read More

ಅಜ್ಜಿ ಚೆನ್ನಮ್ಮ ನಿಧನದ ಸುದ್ದಿ ಕೇಳೆ ಜೈಲಲ್ಲೇ ಕಣ್ಣೀರಿಟ್ಟ ಪ್ರಜ್ವಲ್​​ ರೇವಣ್ಣ: ಅಂತ್ಯಕ್ರಿಯೆಯಲ್ಲಿ ಭಾಗಿಗೆ ಅವಕಾಶ ಕೋರಿ ಪೆರೋಲ್ ಅರ್ಜಿ ಸಲ್ಲಿಕೆ – Kannada News | Prajwal Revanna Cries in Jail Over Grandmother Chennamma’s Death, Files Parole Application to Attend Funeral

ಅಜ್ಜಿ ಚೆನ್ನಮ್ಮ ನಿಧನದ ಸುದ್ದಿ ಕೇಳೆ ಜೈಲಲ್ಲೇ ಕಣ್ಣೀರಿಟ್ಟ ಪ್ರಜ್ವಲ್​​ ರೇವಣ್ಣImage Credit source: PTI ಬೆಂಗಳೂರು, ಜುಲೈ 19: ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚೆನ್ನಮ್ಮ ಅವರ ನಿಧದ ಹಿನ್ನೆಲೆ ಕುಟುಂಬಸ್ಥರಲ್ಲಿ ಶೋಕ ಮಡುಗಟ್ಟಿದೆ. ಈ ನಡುವೆ ಅಜ್ಜಿ ಮೃತಪಟ್ಟಿರುವ ಸುದ್ದಿ ಕೇಳಿ ಜೀವಾವಧಿ ಶಿಕ್ಷೆಗೆ ಗುರಿಯಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಪ್ರಜ್ವಲ್ ರೇವಣ್ಣ ಕೂಡ ಕಣ್ಣೀರು ಹಾಕಿದ್ದಾರೆ. ಅಜ್ಜಿ ಚೆನ್ನಮ್ಮರ ಪ್ರೀತಿಯ ಮೊಮ್ಮಗನಾಗಿದ್ದರೂ ಆಕೆಯ ಕೊನೆ ಕಾಲದಲ್ಲಿ ಕನಿಷ್ಠ ಅವರ ಮುಖವನ್ನು ನೋಡಲೂ ಸಾಧ್ಯವಾಗದ…

Read More

ಟಾಲಿವುಡ್ ಬಗ್ಗೆ ಅಸಮಾಧಾನ? ಜೂ ಎನ್​​ಟಿಆರ್-ನೀಲ್ ಸಿನಿಮಾ ಆಫರ್ ತಿರಸ್ಕರಿಸಿದ ನಟ

ಒಂದು ಚಿತ್ರರಂಗದ (Movie Industry) ದೊಡ್ಡ ಸ್ಟಾರ್​​ಗಳು ಮತ್ತೊಂದು ಚಿತ್ರರಂಗದ ಸ್ಟಾರ್ ನಟರ ಸಿನಿಮಾಗಳಲ್ಲಿ ನಟಿಸುವುದು ತೀರಾ ಸಾಮಾನ್ಯ. ಹಲವು ದಶಕಗಳಿಂದಲೂ ಇದು ನಡೆಯುತ್ತಿದೆ. ಪ್ಯಾನ್ ಇಂಡಿಯಾ ಸಿನಿಮಾ ಹವಾ ಹೆಚ್ಚಾದ ಬಳಿಕ ಈ ಸಂಪ್ರದಾಯ ಇನ್ನೂ ಹೆಚ್ಚಾಗಿದೆ. ಅದರಲ್ಲೂ ಮಲಯಾಳಂ ಚಿತ್ರರಂಗದ ಸ್ಟಾರ್ ನಟರನ್ನು ಬೇರೆ ಬೇರೆ ಭಾಷೆಯ ಚಿತ್ರರಂಗದವರು ತುಸು ಹೆಚ್ಚಾಗಿಯೇ ಬಳಸಿಕೊಳ್ಳುತ್ತಿದ್ದಾರೆ. ಪೃಥ್ವಿರಾಜ್ ಸುಕುಮಾರನ್, ದುಲ್ಕರ್ ಸಲ್ಮಾನ್, ಫಹಾದ್ ಫಾಸಿಲ್, ಮೋಹನ್​​ಲಾಲ್ ಇನ್ನೂ ಹಲವು ನಟರು ಪರ ಭಾಷೆಯ ಸ್ಟಾರ್ ನಟರುಗಳೊಡನೆ ನಟಿಸಿದ್ದಾರೆ….

Read More

Video: ಭಾರತ-ಯುಎಸ್ ವ್ಯಾಪಾರ ಒಪ್ಪಂದ ಐತಿಹಾಸಿಕ, ರೈತರಿಗೆ ಯಾವುದೇ ಹಾನಿ ಇಲ್ಲ: ಪಿಯೂಷ್ ಗೋಯಲ್ – Kannada News | In Lok Sabha, Piyush Goyal Outlines India’s Stand in India US Trade Negotiations

ನವದೆಹಲಿ, ಫೆಬ್ರವರಿ 04: ಭಾರತ-ಯುಎಸ್ ವ್ಯಾಪಾರ ಒಪ್ಪಂದದ ಬಗ್ಗೆ ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್(Piyush Goyal) ಲೋಕಸಭೆಯಲ್ಲಿ ಮಾತನಾಡಿದ್ದಾರೆ. ಈ ಒಪ್ಪಂದ ಐತಿಹಾಸಿಕವಾಗಿದ್ದು, ರೈತರಿಗೆ ಯಾವುದೇ ಹಾನಿಯಿಲ್ಲ, ದೇಶದ ಹಿತಾಸಕ್ತಿಗಳನ್ನು ರಕ್ಷಿಸಲಾಗಿದೆ ಎಂದು ಹೇಳಿದರು. ವಿರೋಧ ಪಕ್ಷದ ಸಂಸದರು ಪ್ರತಿಭಟನೆ ಮತ್ತು ಘೋಷಣೆಗಳನ್ನು ಕೂಗುವುದನ್ನು ಮುಂದುವರೆಸಿದರು. ಬಜೆಟ್ ಅಧಿವೇಶನದ ಸಂದರ್ಭದಲ್ಲಿ ಲೋಕಸಭೆಯಲ್ಲಿ ವಿರೋಧ ಪಕ್ಷದ ಸಂಸದರ ಗದ್ದಲದ ನಡುವೆಯೂ ಮಾತನಾಡಿದ ಅವರು ದೇಶದ ಹಿತಾಸಕ್ತಿಗಳನ್ನು ರಕ್ಷಿಸಲಾಗಿದೆ ಮತ್ತು ರೈತರ ಹಿತಾಸಕ್ತಿಗಳಿಗೆ ಧಕ್ಕೆಯಾಗುವುದಿಲ್ಲ ಎಂದು ಹೇಳಿದರು. ಕೃಷಿ…

Read More

‘ಅವರಿಗೊಂದು ನ್ಯಾಯ, ನನಗೊಂದು ನ್ಯಾಯ’; ನಿವೃತ್ತಿ ಘೋಷಿಸಿ ಸಿಡಿದ ಉಸ್ಮಾನ್ ಖವಾಜಾ – Kannada News | Usman Khawaja Retires: Australian Cricketer Blasts ‘Racial Abuse’ Allegations

ಹೊಸ ವರ್ಷದ ಮೊದಲ ದಿನವೇ ಕ್ರಿಕೆಟ್ ಲೋಕಕ್ಕೆ ದಿಗ್ಗಜ ಆಟಗಾರನೊಬ್ಬ ವಿದಾಯ ಹೇಳಿದ್ದಾರೆ. ಆಸ್ಟ್ರೇಲಿಯಾ ಟೆಸ್ಟ್ ತಂಡದ ಆರಂಭಿಕ ಆಟಗಾರ ಉಸ್ಮಾನ್ ಖವಾಜಾ (Usman Khawaja) ನಿವೃತ್ತಿ ಘೋಷಿಸಿದ್ದಾರೆ. ವಾಸ್ತವವಾಗಿ ಖವಾಜಾ ನಿವೃತ್ತಿಯ ಬಗ್ಗೆ ಬಹಳ ದಿನಗಳಿಂದಲೂ ವರದಿಗಳು ಹರಿದಾಡುತ್ತಿದ್ದವು. ಅದರಂತೆ ಈಗ ಖವಾಜಾ ಕ್ರಿಕೆಟ್​ ಬದುಕಿನಿಂದ ದೂರ ಸರಿಯಲು ನಿರ್ಧರಿಸಿದ್ದಾರೆ. ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ಆಶಸ್ ಸರಣಿಯ (Ashes series) ನಡುವೆ ಖವಾಜಾ ತಮ್ಮ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಇದರ ಜೊತೆಗೆ ಮಾಜಿನ ಕ್ರಿಕೆಟಿಗರ…

Read More

ರಜನೀಕಾಂತ್ ನಟನೆಯ ‘ಜೈಲರ್ 2’ ಸಿನಿಮಾ ಬಿಡುಗಡೆ ಮುಂದೂಡಿಕೆ: ಕಾರಣ? – Kannada News | Rajinikanth starrer Jailer 2 movie release date postpone

ಸೂಪರ್‌ಸ್ಟಾರ್ ರಜನಿಕಾಂತ್ (Rajinikanth) ನಟನೆಯ ಬಹುನಿರೀಕ್ಷಿತ ‘ಜೈಲರ್ 2’ ಸಿನಿಮಾದ ಬಗ್ಗೆ ಅಭಿಮಾನಿಗಳಿಗೆ ಭಾರಿ ನಿರೀಕ್ಷೆ ಇದೆ. ಸಿನಿಮಾದ ಮೊದಲ ಭಾಗ ದೊಡ್ಡ ಹಿಟ್ ಆಗಿತ್ತು. ನಿರ್ದೇಶಕ ನೆಲ್ಸನ್, ರಜನೀಕಾಂತ್ ಅವರ ಜೊತೆಗೆ ಇನ್ನೂ ಕೆಲವು ಸ್ಟಾರ್ ನಟರನ್ನು ಒಟ್ಟಿಗೆ ಕರೆ ತಂದು ಒಳ್ಳೆಯ ಮಾಸ್ ಸಿನಿಮಾವನ್ನು ನೀಡಿದ್ದರು. ಇದೇ ಕಾರಣಕ್ಕೆ ‘ಜೈಲರ್ 2’ ಸಿನಿಮಾದ ಬಗ್ಗೆಯೂ ಅಭಿಮಾನಿಗಳಿಗೆ ಭಾರಿ ನಿರೀಕ್ಷೆ ಇದೆ. ಈ ಹಿಂದೆ ‘ಜೈಲರ್ 2’ ಸಿನಿಮಾ ಜೂನ್ 12 ರಂದು ಬಿಡುಗಡೆ ಆಗಲಿದೆ…

Read More