Headlines

Karnataka Weather Forecast: 11 ಜಿಲ್ಲೆಗಳಲ್ಲಿ ನಾಳೆ ವರುಣಾರ್ಭಟ, ತೀವ್ರ ಗಾಳಿಯ ಎಚ್ಚರಿಕೆ – Kannada News

ಬೆಂಗಳೂರು, ಜೂನ್​​ 03: ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಲಾಗಿದ್ದು, ಜೂ.9ರವರೆಗೆ ರಾಜ್ಯದ ವಿವಿಧ ಭಾಗಗಳಲ್ಲಿ ವರುಣನ ಆಗಮನದ ನಿರೀಕ್ಷೆ ಇದೆ. ಉತ್ತರ ಒಳನಾಡು, ದಕ್ಷಿಣ ಒಳನಾಡು ಹಾಗೂ ಕರಾವಳಿ ಭಾಗಗಳಲ್ಲಿ ಶೇ.50ಕ್ಕಿಂತ ಕಡಿಮೆ ಪ್ರದೇಶಗಳಲ್ಲಿ ಮಳೆಯಾಗುವ ಸಾಧ್ಯತೆ ಇದ್ದು, ಕೆಲವೆಡೆ ಭಾರಿ ಮಳೆಯೊಂದಿಗೆ ಬಿರುಗಾಳಿ ಬೀಸಬಹುದೆಂಬ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ. ಪ್ರತಿ ಗಂಟೆಗೆ 40-50 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದ್ದು, ಕರಾವಳಿ, ಉತ್ತರ ಹಾಗೂ ದಕ್ಷಿಣ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ…

Read More

ಯಾವುದೇ ಭಾಷೆಯಲ್ಲಾದರೂ ಕರೆ ಮಾಡಿ, ಪೊಲೀಸರು ಓಡಿ ಬರ್ತಾರೆ! ನಮ್ಮ 112 ಗೆ ಹೈಟೆಕ್ AI ಟಚ್; ಇದು ಜನರಿಗೆ ಹೇಗೆ ಪ್ರಯೋಜನ? – Kannada News | VANKI AI Transforms Bengaluru Emergency Calls: Namma 112 Now Multilingual and Faster

ಬೆಂಗಳೂರು, ಏ.29: ಸಿಲಿಕಾನ್ ಸಿಟಿಯ ಜನಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು ಬೆಂಗಳೂರು ನಗರ ಪೊಲೀಸರು ತಮ್ಮ ತುರ್ತು ಸ್ಪಂದನಾ ವ್ಯವಸ್ಥೆಯಾದ ‘ನಮ್ಮ 112’ ಗೆ ಭರ್ಜರಿ ಅಪ್‌ಗ್ರೇಡ್ ನೀಡಿದ್ದಾರೆ. ತುರ್ತು ಸಂದರ್ಭಗಳಲ್ಲಿ ಭಾಷೆಯ ಅಡೆತಡೆಯನ್ನು ನಿವಾರಿಸಲು ಭಾರತದಲ್ಲೇ ಮೊದಲ ಬಾರಿಗೆ ಬಹುಭಾಷಾ AI ಚಾಲಿತ ‘VANKI’ (Voice AI for Nationwide Key Interventions) ವ್ಯವಸ್ಥೆಯನ್ನು ಬಿಡುಗಡೆ ಮಾಡಲಾಗಿದೆ. ಇದೀಗ ಇದು ಜನರಿಗೆ ಹೇಗೆ ಪ್ರಯೋಜನ ಆಗಲಿದೆ ಎಂಬುದನ್ನು ಕೂಡ ಹೇಳಿದೆ. ಈ ಬಗ್ಗೆ ಎಕ್ಸ್​​ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಏನಿದು…

Read More

ಬಿಸಿಲ ಝಳಕ್ಕೆ ತತ್ತರಿಸಿದ ಪ್ರಯಾಣಿಕರಿಗೆ ಆಸರೆಯಾದ ಕೆಎಸ್​ಆರ್​ಟಿಸಿ ಬಸ್! – Kannada News | KSRTC Free Water: Mysuru Route Staff Quench Passengers’ Thirst in Summer Travel

ಮೈಸೂರು, ಫೆಬ್ರವರಿ 25: ಟಿ.ನರಸೀಪುರ–ಬನ್ನೂರು–ಮಂಡ್ಯ ಬಸ್‌ಗಳಲ್ಲಿ ಸುಡುವ ಬೇಸಿಗೆಯಲ್ಲಿ ಪ್ರಯಾಣಿಕರಿಗೆ KSRTC ಸಿಬ್ಬಂದಿ ಆಶ್ರಯ ನೀಡಿದ್ದಾರೆ. ನಿರ್ವಾಹಕ ಲಕ್ಷ್ಮೇಶ್ ಮತ್ತು ಚಾಲಕ ಹೇಮಂತ್ ತಮ್ಮ ಆಸಕ್ತಿಯಿಂದ ಬಸ್ಸಿನೊಳಗೆ ಶುದ್ಧ ಕುಡಿಯುವ ನೀರಿನ ಕ್ಯಾನ್ ಅಳವಡಿಸಿ, ಪ್ರಯಾಣಿಕರ ದಾಹ ನಿವಾರಣೆ ಮಾಡಿದ್ದಾರೆ. ಪ್ರತಿದಿನ 2–3 ಕ್ಯಾನ್ ನೀರನ್ನು ಶುದ್ಧ ನೀರಿನ ಘಟಕಗಳಿಂದ ತರುತ್ತಿರುವ ಅವರ ಮಾನವೀಯ ಕಾರ್ಯವನ್ನು ಸಾರ್ವಜನಿಕರು ಶ್ಲಾಘಿಸಿದ್ದಾರೆ. ಇದರಿಂದ ಪ್ರೇರಣೆ ಪಡೆದು ಇದೇ ಮಾರ್ಗದ 5 ಬಸ್‌ಗಳಲ್ಲಿ ಸಹ ಉಚಿತ ನೀರಿನ ವ್ಯವಸ್ಥೆ ಮಾಡಲಾಗಿದೆ. ಕರ್ನಾಟಕದ…

Read More

ಆಸ್ತಿಗಾಗಿ ತಂದೆಯನ್ನೇ ಹತ್ಯೆಗೈದ ಇಬ್ಬರು ಗಂಡು ಮಕ್ಕಳು: ದಾರುಣ ಘಟನೆಗೆ ಸಾಕ್ಷಿಯಾದ ಬೆಂಗಳೂರಿನ ದೂಪನಹಳ್ಳಿ – Kannada News | Property Dispute Turns Fatal in Bengaluru: Sons Kill Father in Indiranagar’s Doopanahalli

ಬೆಂಗಳೂರು, ಫೆಬ್ರವರಿ 17: ಇಂದಿರಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ದೂಪನಹಳ್ಳಿಯಲ್ಲಿ ಆಸ್ತಿ ವಿವಾದವೊಂದು ವೃದ್ಧರೊಬ್ಬರs ಸಾವಿಗೆ ಕಾರಣವಾಗಿದೆ. ಬಿಎಂಟಿಸಿಯ ನಿವೃತ್ತ ಕಂಡಕ್ಟರ್ 70 ವರ್ಷದ ಮುನಿಕೃಷ್ಣಪ್ಪ ಅವರನ್ನು ಅವರ ಇಬ್ಬರು ಮಕ್ಕಳೇ ಆಸ್ತಿ ಆಸೆಗಾಗಿ ಹತ್ಯೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಕಳೆದ ಶನಿವಾರ ರಾತ್ರಿ ದೂಪನಹಳ್ಳಿಯ ಮುತ್ತಿಯಾಲಮ್ಮ ದೇವಾಲಯದ ಬಳಿ ತಂದೆ ಮುನಿಕೃಷ್ಣಪ್ಪ ಮತ್ತು ಅವರ ಪುತ್ರರಾದ ಮೋಹನ್ ಕುಮಾರ್ ಹಾಗೂ ಗಜೇಂದ್ರ ನಡುವೆ ಆಸ್ತಿ ವಿಚಾರಕ್ಕೆ ಗಲಾಟೆ ನಡೆದಿದೆ. ಈ ವೇಳೆ ಮಗ ಮೋಹನ್…

Read More

“ಸರಿಯಾಗಿರೋ ಬಟ್ಟೆ ಧರಿಸಿ” ಎಂದ ಮಹಿಳಾ ಪೊಲೀಸ್​​​ಗೆ ರಕ್ತ ಬರುವಂತೆ ಹೊಡೆದ ಬೆಂಗಳೂರಿನ ಯುವತಿ – Kannada News | Bengaluru Incident: Police Attire Advice Sparks Assault, Leads to Damini’s Arrest

ಬೆಂಗಳೂರು, ಜ.12: ಬೆಂಗಳೂರಿನಲ್ಲಿ ಬಟ್ಟೆಯ (Bangalore Dress Code Row) ಬಗ್ಗೆ ಚರ್ಚೆಗಳು ನಡೆಯುತ್ತಿದೆ. ಪೊಲೀಸರೊಬ್ಬರು ಯುವತಿಯೊಬ್ಬಳಿಗೆ ಸರಿಯಾದ ಬಟ್ಟೆ ಹಾಕೊಳ್ಳಿ ಎಂದು ಹೇಳಿದಕ್ಕೆ ಪೊಲೀಸ್​​​ ಮೇಲೆ ಹಲ್ಲೆ ಮಾಡಿದ್ದಾಳೆ. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಯಾಗುತ್ತಿದೆ. ಹಾಗೂ ಈ ಯುವತಿಯನ್ನು ಬಂಧಿಸಿದ್ದಾರೆ. ಮಹದೇವಪುರದ ನಾರಾಯಣಪುರ ನಿವಾಸಿ ದಾಮಿನಿ ಅಲಿಯಾಸ್ ಮೋಹಿನಿ ಎಂಬ ಯುವತಿಯನ್ನು ಪೊಲೀಸರು ಬಂಧಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ 20 ವಯಸ್ಸಿನ ಯುವತಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಬಾಣಸವಾಡಿ…

Read More

ಚಿನ್ನದ ನಿಧಿಗೆ ಬಿಗ್ ಟ್ವಿಸ್ಟ್: ಅದು ನಮ್ಮ ಬಂಗಾರ ವಾಪಸ್​ ನೀಡಿ – Kannada News | Archaeological Department Declares Gadag Gold Not Ancient Treasure, Family Seeks Ownership

ಗದಗ, ಜ.11: ಜಿಲ್ಲೆಯ ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ಮನೆಯ ಅಡಿಪಾಯ ಹಾಕುವಾಗ ದೊರೆತ ಚಿನ್ನದ ಪ್ರಕರಣದಲ್ಲಿ ಮಹತ್ವದ ತಿರುವು ಕಂಡುಬಂದಿದೆ. ಆರಂಭದಲ್ಲಿ, ಇದು ನಿಧಿ ಎಂದು ಪರಿಗಣಿಸಿ ಪ್ರಾಮಾಣಿಕವಾಗಿ ಸರ್ಕಾರಕ್ಕೆ ಒಪ್ಪಿಸಲಾಗಿತ್ತು. ಆದರೆ, ಭಾರತೀಯ ಪುರಾತತ್ವ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ, ಇದು ನಿಧಿ ಅಲ್ಲ, ಬದಲಿಗೆ ಕುಟುಂಬದ ಹಿರಿಯರು ತಮ್ಮ ಮನೆಯಲ್ಲೇ ಇಟ್ಟಿದ್ದ ಬಂಗಾರ ಎಂದು ಸ್ಪಷ್ಟಪಡಿಸಿದ್ದಾರೆ. ಪುರಾತತ್ವ ಇಲಾಖೆಯ ಜಂಟಿ ನಿರ್ದೇಶಕ ರಮೇಶ್ ಮೂಲಿಮನಿ ಅವರು, ಪತ್ತೆಯಾದ ಚಿನ್ನವು…

Read More

ಮಹಿಳಾ ನೌಕರರಿಗೆ ಗುಡ್ ನ್ಯೂಸ್: ತಿಂಗಳಿಗೆ ಒಂದು ದಿನ ‘ಋತುಸ್ರಾವ ರಜೆ’ ಕಡ್ಡಾಯ; ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಮಹತ್ವದ ನಿರ್ದೇಶನ – Kannada News | Menstrual Leave in Karnataka: HC Orders Mandatory Implementation for All Women

ಬೆಂಗಳೂರು, ಏ.16: ಮಹಿಳೆಯರ ಆರೋಗ್ಯ ಮತ್ತು ಘನತೆಯನ್ನು ಎತ್ತಿಹಿಡಿಯುವ ನಿಟ್ಟಿನಲ್ಲಿ ಕರ್ನಾಟಕ ಹೈಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ. 18 ರಿಂದ 52 ವರ್ಷದೊಳಗಿನ ಮಹಿಳಾ ಉದ್ಯೋಗಿಗಳಿಗೆ ಪ್ರತಿ ತಿಂಗಳು ಒಂದು ದಿನದ ವೇತನ ಸಹಿತ ‘ಋತುಸ್ರಾವ ರಜೆ’ (Menstrual Leave) ನೀತಿಯನ್ನು ರಾಜ್ಯ ಸರ್ಕಾರವು “ಕಟ್ಟುನಿಟ್ಟಾಗಿ ಮತ್ತು ನಂಬಿಕಸ್ತವಾಗಿ” ಜಾರಿಗೆ ತರಬೇಕು ಎಂದು ಕೋರ್ಟ್ ನಿರ್ದೇಶಿಸಿದೆ. ಈ ಹಿಂದೆ ರಾಜ್ಯ ಸರ್ಕಾರ ಮಹಿಳೆಯರ ಮುಟ್ಟಿನ ರಜೆಗೆ ಅನುಮೋದನೆಯನ್ನು ನೀಡಿತ್ತು. ಆದರೆ ಕೆಲವೊಂದು ಕಂಪನಿಗಳು ಹಾಗೂ ಸಂಸ್ಥೆಗಳು ತಮ್ಮ…

Read More

‘ರಾಮಾಯಣ’ ವೇದಿಕೆಯಲ್ಲಿ ಯಶ್ ಹವಾ ಕಂಡು ದಂಗಾದ ಬಾಲಿವುಡ್ ಮಂದಿ – Kannada News | Yash Steals the Show at Ramayana Event Outshines Ranbir Kapoor as Craze Soars

ರಾಕಿಂಗ್ ಸ್ಟಾರ್ ಯಶ್ (Yash) ಕ್ರೇಜ್ ಯಾವ ರೀತಿ ಇದೆ ಎಂಬುದನ್ನು ಮತ್ತೊಮ್ಮೆ ಹೇಳುವ ಅಗತ್ಯವಿಲ್ಲ. ಅವರ ನಟನೆಯ ‘ಟಾಕ್ಸಿಕ್’ ಚಿತ್ರದ ಬಗ್ಗೆ ಅಪಾರ ನಿರೀಕ್ಷೆ ಇದೆ. ಇನ್ನು, ‘ರಾಮಾಯಣ’ ಸಿನಿಮಾದಲ್ಲಿ ಅವರನ್ನು ರಾವಣನಾಗಿ ನೋಡಲು ಫ್ಯಾನ್ಸ್ ಕಾದಿದ್ದಾರೆ. ಈಗ ಯಶ್ ಜನಪ್ರಿಯತೆ ಎಷ್ಟಿದೆ ಎಂಬುದಕ್ಕೆ ಮತ್ತೊಂದು ಸಾಕ್ಷಿ ಸಿಕ್ಕಿದೆ. ಅವರು ‘ರಾಮಾಯಣ’ ಸಿನಿಮಾದ ವೇದಿಕೆ ಏರುತ್ತಿದ್ದಂತೆ ಅವರಿಗೆ ದೊಡ್ಡ ಮಟ್ಟದಲ್ಲಿ ಚಪ್ಪಾಳೆ ಹಾಗೂ ಸಿಳ್ಳೆ ಬಿದ್ದಿವೆ. ಈ ವಿಡಿಯೋ ವೈರಲ್ ಆಗಿ ಗಮನ ಸೆಳೆಯುತ್ತಿದೆ. ಯಶ್…

Read More

Daily Devotional: ನೀವು ಸತ್ತಂತೆ ಕನಸು ಕಂಡಿದ್ದೀರಾ? ಇದರ ಹಿಂದಿನ ರಹಸ್ಯವೇನು ಗೊತ್ತಾ?

ಟಿವಿ9​​ ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ನಮ್ಮ ಕನಸಿನಲ್ಲಿ ನಾವು ಸಾವನ್ನಪ್ಪಿದರೆ ಏನು ಅರ್ಥ ಎಂದು ಡಾ.ಬಸವರಾಜ ಗುರೂಜಿ ವಿವರಿಸಿದ್ದಾರೆ. ಸ್ವಪ್ನಶಾಸ್ತ್ರದ ಪ್ರಕಾರ, ಮರಣಕ್ಕೆ ಸಂಬಂಧಿಸಿದ ಕನಸುಗಳು ಸಾಮಾನ್ಯವಾಗಿ ಶುಭ ಸೂಚಕವಾಗಿರುತ್ತವೆ. ನಿಮ್ಮ ಸಾವು ಕನಸಿನಲ್ಲಿ ಕಂಡರೆ ಅದು ಕಷ್ಟಗಳಿಂದ ಪಾರಾಗುವ, ಸಂಕಟಗಳು ದೂರವಾಗುವ, ದೋಷಗಳು ನಿವಾರಣೆಯಾಗುವ ಮತ್ತು ಅದೃಷ್ಟ ಕೂಡಿ ಬರುವ ಸೂಚನೆಯಾಗಿದೆ. ಬೇರೆಯವರ ಮರಣವನ್ನು ಕನಸಿನಲ್ಲಿ ಕಂಡರೆ ಅವರಿಗೆ ಆಯುಷ್ಯ ವೃದ್ಧಿಯಾಗುತ್ತದೆ. ಬ್ರಹ್ಮ ವೈವರ್ತ ಪುರಾಣದಲ್ಲಿ  ಇದನ್ನು ಸ್ಪಷ್ಟಪಡಿಸಲಾಗಿದೆ. ಇಂತಹ ಕನಸುಗಳು ಶುಭವನ್ನು ತರುವುದರಿಂದ ಯಾವುದೇ…

Read More

ಗೃಹಲಕ್ಷ್ಮೀ ಫಲಾನುಭವಿಗಳಿಗೆ ಗುಡ್​​ನ್ಯೂಸ್​​​: ಮುಂದಿನ ವಾರ ಹಣ ಬಿಡುಗಡೆ ಎಂದ ಸಚಿವೆ ಹೆಬ್ಬಾಳ್ಕರ್ – Kannada News | Good News for Gruha Lakshmi Scheme Beneficiaries: Minister Hebbalkar Says Funds to Be Released Next Week

ಬೆಳಗಾವಿ, ಡಿಸೆಂಬರ್​ 21: ಗೃಹಲಕ್ಷ್ಮೀ ಯೋಜನೆಯ (Gruha Lakshmi) ಹಣ ಬಿಡುಗಡೆ ವಿಚಾರವಾಗಿ ಇತ್ತೀಚೆಗೆ ಅಧಿವೇಶನದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಗೃಹಲಕ್ಷ್ಮೀ ಯೋಜನೆ ಹಣ ಬಿಡುಗಡೆ ಆಗುತ್ತದೆ ಎಂದು ಕಾಯುತ್ತಿರುವ ಮಹಿಳೆಯರಿಗೆ ಇದೀಗ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ (Lakshmi Hebbalkar) ಗುಡ್​ನ್ಯೂಸ್​​ ನೀಡಿದ್ದಾರೆ. ಸೋಮವಾರದಿಂದ ಶನಿವಾರದ ಒಳಗಡೆ 24ನೇ ಕಂತು ಬಿಡುಗಡೆ ಆಗುತ್ತೆ ಎಂದು ಹೇಳಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​, ಈಗಾಗಲೇ 24ನೇ ಕಂತಿನ ಹಣ ಬಿಡುಗಡೆಗೆ…

Read More