ಸಂಗೀತ ಮಾಡುವಾಗ ಮೇಣದ ಬತ್ತಿ ಹಚ್ಚುವುದೇಕೆ ಎಆರ್ ರೆಹಮಾನ್ – Kannada News | Why AR Rahman light candle while composing music

ಭಾರತದ ನಂಬರ್ 1 ಸಂಗೀತ ನಿರ್ದೇಶಕ ಎಆರ್ ರೆಹಮಾನ್ (AR Rahman), ಹಲವು ದಶಕಗಳಿಂದಲೂ ಅವರು ನಂಬರ್ 1 ಸ್ಥಾನದಲ್ಲಿದ್ದಾರೆ. ಬಹಳ ವರ್ಸಟೈಲ್ ಸಂಗೀತ ನಿರ್​ದೇಶಕರಾಗಿರುವ ರೆಹಮಾನ್, ಭಾರತ ಕಂಡ ಈ ವರೆಗಿನ ಅತ್ಯುತ್ತಮ ಸಂಗೀತ ನಿರ್ದೇಶಕ ಎಂದು ಖುದ್ದು ಜಾವೇದ್ ಆಖ್ತರ್ ಬಣ್ಣಿಸಿದ್ದಾರೆ. ಅದಕ್ಕೆ ಕಾರಣವೇನು ಎಂದು ಸಹ ಅವರು ಸಂದರ್ಶನವೊಂದರಲ್ಲಿ ವಿವರಿಸಿದ್ದಾರೆ. ಅಂದಹಾಗೆ ಈ ವರೆಗೆ ಸಾವಿರಾರು ಅತ್ಯದ್ಭುತ ಹಾಡುಗಳನ್ನು ನೀಡಿರುವ ಎಆರ್ ರೆಹಮಾನ್, ಪ್ರತಿಬಾರಿ ಸಂಗೀತ ನೀಡುವಾಗಲೂ ಕೋಣೆಯಲ್ಲಿ ಮೇಣದಬತ್ತಿಯೊಂದನ್ನು ಹಚ್ಚುತ್ತಾರಂತೆ. ಇದಕ್ಕೆ…

Read More

ಅಜಿತ್ ಪವಾರ್ ಪ್ರಯಾಣಿಸುತ್ತಿದ್ದ ವಿಮಾನ ಪತನವಾಗಿದ್ದು ಹೇಗೆ? ತನಿಖೆಯಲ್ಲಿ ಬಯಲಾದ ಸಂಗತಿಗಳಿವು – Kannada News | Ajit Pawar Death Preliminary probe into plane crash flags low visibility at Baramati Airport

ಮುಂಬೈ, ಫೆಬ್ರವರಿ 28: ಜನವರಿ 28ರಂದು ಮಹಾರಾಷ್ಟ್ರದ ಬಾರಾಮತಿ ಬಳಿ ನಡೆದ ವಿಮಾನ ಅಪಘಾತದಲ್ಲಿ ಮಾಜಿ ಡಿಸಿಎಂ ಅಜಿತ್ ಪವಾರ್ (Ajit Pawar) ಸಾವನ್ನಪ್ಪಿದ್ದರು. ಈ ಅಪಘಾತ ನಡೆದ ಒಂದು ತಿಂಗಳ ನಂತರ, ಅಪಘಾತದ ಪ್ರಾಥಮಿಕ ತನಿಖಾ ವರದಿ ಹೊರಬಿದ್ದಿದೆ. ಅಜಿತ್ ಪವಾರ್ ಅವರ ವಿಮಾನ ಏಕೆ ಅಪಘಾತಕ್ಕೀಡಾಯಿತು ಎಂಬುದರ ಕುರಿತು ಇದು ಮಾಹಿತಿಯನ್ನು ನೀಡಿದೆ. 22 ಪುಟಗಳ ಈ ವರದಿಯು ಆಘಾತಕಾರಿ ಮಾಹಿತಿಯನ್ನು ಬಹಿರಂಗಪಡಿಸಿದೆ. ಈ ವಿಮಾನವು ನೆಲಕ್ಕೆ ಅಪ್ಪಳಿಸುವ ಮೊದಲು ಮರಕ್ಕೆ ಡಿಕ್ಕಿ ಹೊಡೆದು…

Read More

ಮಾಕಳಿ ಬಳಿ ಸರಣಿ ಅಪಘಾತ: ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟರೂ ಲೆಕ್ಕಿಸದೆ ಮೂಟೆಗಳಲ್ಲಿ ಈರುಳ್ಳಿ ತುಂಬಿಕೊಂಡು ಹೋದ ಜನ! – Kannada News | Makali Accident: Biker Killed in Multi Vehicle Crash as Onions Are Looted, Sparks Public Outrage

ನೆಲಮಂಗಲ, ಜನವರಿ 21: ಬೆಂಗಳೂರು (Bangalore) ಉತ್ತರ ತಾಲೂಕಿನ ಮಾಕಳಿ ಸಮೀಪ ಭೀಕರ ಸರಣಿ ಅಪಘಾತ ಸಂಭವಿಸಿ, ಬೈಕ್ ಸವಾರನೊಬ್ಬ ಸ್ಥಳದಲ್ಲೇ ದುರ್ಮರಣ ಹೊಂದಿದ ಘಟನೆ ಬುಧವಾರ ನಡೆದಿದೆ. ಅಪಘಾತದಲ್ಲಿ ಮತ್ತೊಬ್ಬ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆ. ಸೊಲ್ಲಾಪುರದಿಂದ ಈರುಳ್ಳಿ ತುಂಬಿಕೊಂಡು ಬರುತ್ತಿದ್ದ ಕ್ಯಾಂಟರ್ ಲಾರಿ, ಆಟೋ ಹಾಗೂ ಎರಡು ಬೈಕ್‌ಗಳ ನಡುವೆ ಅಪಘಾತ ಸಂಭವಿಸಿದೆ. ಪ್ರತ್ಯಕ್ಷದರ್ಶಿಗಳ ಮಾಹಿತಿ ಪ್ರಕಾರ, ರಸ್ತೆಯಲ್ಲಿ ಸಾಗುತ್ತಿದ್ದ ಆಟೋ ಸಡನ್ ಆಗಿ ಬ್ರೇಕ್ ಹಾಕಿದ್ದರಿಂದ ಹಿಂದೆ ಬರುತ್ತಿದ್ದ ಕ್ಯಾಂಟರ್ ಲಾರಿಗೆ…

Read More

ಎರಡು ಟ್ರಕ್​ಗಳ ನಡುವೆ ಸಿಲುಕಿ ಪಿಕಪ್ ವ್ಯಾನ್ ನಜ್ಜುಗುಜ್ಜು, ಮದುವೆ ಮನೆಯಿಂದ ಬರುತ್ತಿದ್ದ 13 ಮಂದಿ ಸಾವು – Kannada News | Indonesia Road Accident: 13 Dead as Pickup Van Crushed Between Two Trucks

ಜಕಾರ್ತಾ, ಜುಲೈ 13: ಮದುವೆ(Marriage) ಮನೆಯ ಸಂಭ್ರಮ ಮುಗಿಸಿ ಮನೆಗೆ ಮರಳುತ್ತಿದ್ದ ಅತಿಥಿಗಳ ಪಾಲಿಗೆ ಹೆದ್ದಾರಿಯೇ ಮೃತ್ಯುಕೂಪವಾಗಿ ಮಾರ್ಪಟ್ಟಿತ್ತು. ಇಂಡೋನೇಷ್ಯಾದ ಜಾವಾ ದ್ವೀಪದ ಜನನಿಬಿಡ ಹೆದ್ದಾರಿಯಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ 13 ಜನರು ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ. ಎರಡು ಬೃಹತ್ ಟ್ರಕ್‌ಗಳ ನಡುವೆ ಮದುವೆ ಅತಿಥಿಗಳಿದ್ದ ಪಿಕಪ್ ವ್ಯಾನ್ ಸಿಲುಕಿ ಸಂಪೂರ್ಣ ನಜ್ಜುಗುಜ್ಜಾಗಿದ್ದರಿಂದ  ಐವರನ್ನು ಬಿಟ್ಟು ಎಲ್ಲರೂ ಪ್ರಾಣ ಕಳೆದುಕೊಂಡಿದ್ದಾರೆ. ಯು-ಟರ್ನ್ ತೆಗೆದುಕೊಳ್ಳಲು ಹೋದಾಗ ಸಂಭವಿಸಿದ ಅವಘಡ ಇಂದ್ರಮಾಯು ರೀಜೆನ್ಸಿಯ ಕಿಯಾಜರನ್ ಕುಲೋನ್ ಗ್ರಾಮದ ಬಳಿಯ ಉತ್ತರ…

Read More

ಆರ್‌ಟಿಒ ಕಚೇರಿಯಲ್ಲಿ ತಾಯಿಯ ಬದಲು ಮಗಳ ದರ್ಬಾರ್: ಲೋಕಾಯುಕ್ತ ದಾಳಿಯಲ್ಲಿ ಬಯಲಾಯಿತು ಸತ್ಯ – Kannada News | Irregularities Uncovered: Lokayukta Investigation At Ramanagara RTO Highlights Proxy Employment And Broker Menace

ರಾಮನಗರ, ಜೂ.12: ಜಿಲ್ಲೆಯ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ (RTO) ನಡೆಯುತ್ತಿದ್ದ ಬ್ರಹ್ಮಾಂಡ ಭ್ರಷ್ಟಾಚಾರ ಹಾಗೂ ಸಾರ್ವಜನಿಕರ ದೂರುಗಳ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಇಂದು ಬೆಳ್ಳಂಬೆಳಗ್ಗೆ ದಿಢೀರ್ ದಾಳಿ ನಡೆಸಿದ್ದಾರೆ. ಲೋಕಾಯುಕ್ತ ಎಸ್​ಪಿ ಪಿ.ವಿ.ಸ್ನೇಹಾ ಅವರ ನೇತೃತ್ವದಲ್ಲಿ ನಡೆದ ಈ ದಾಳಿಯ ವೇಳೆ ಕಚೇರಿಯ ಇಂಚಿಂಚೂ ದಾಖಲೆಗಳನ್ನು ಪರಿಶೀಲಿಸಲಾಗಿದ್ದು, ಆರ್‌ಟಿಒ ಕಚೇರಿಯ ಕರಾಳ ಮುಖ ಬಯಲಾಗಿದೆ. ನಿಯಮದ ಪ್ರಕಾರ ಕೇವಲ 7 ದಿನಗಳಲ್ಲಿ ಸಾರ್ವಜನಿಕರ ಕೈ ಸೇರಬೇಕಾಗಿದ್ದ ಲೈಸೆನ್ಸ್ ಹಾಗೂ ಆರ್‌ಸಿ ಸ್ಮಾರ್ಟ್ ಕಾರ್ಡ್‌ಗಳು, ಮೂರು ತಿಂಗಳು ಕಳೆದರೂ…

Read More

Morning Ritual: ಬೆಳಗಿನ ಜಾವ ಹೊಸಿಲಿಗೆ ನೀರು ಚಿಮುಕಿಸುವುದು ಬರಿ ಸಂಪ್ರದಾಯವಲ್ಲ; ಇದರ ಹಿಂದಿದೆ ಅದ್ಭುತ ವೈಜ್ಞಾನಿಕ ರಹಸ್ಯ! – Kannada News | Morning Water Ritual: Benefits of Sprinkling Water at Home Entrance for Positivity

ಬೆಳಗಿನ ಜಾವ ಮನೆಯ ಮುಂದೆ ನೀರು ಚಿಮುಕಿಸುವುದುImage Credit source: gemini ai ಪಂಚಭೂತಗಳಲ್ಲಿ ನೀರು ಅತ್ಯಂತ ಪ್ರಮುಖವಾದ ಅಂಶವಾಗಿದೆ. ಆದರೆ, ಮನೆಯ ಮುಂದೆ ಬೆಳಗಿನ ಜಾವ ನೀರು ಚಿಮುಕಿಸುವುದು, ತೊಳೆಯುವುದು ಅಥವಾ ಸುರಿಯುವುದರ ಹಿಂದಿನ ಮಹತ್ವವೇನು ಎಂಬ ಪ್ರಶ್ನೆ ಅನೇಕರಿಗೆ ಮೂಡಬಹುದು. ಇದು ಕೇವಲ ಸಂಪ್ರದಾಯ ಅಥವಾ ಆಚರಣೆಯಲ್ಲ, ಇದರ ಹಿಂದೆ ವೈಜ್ಞಾನಿಕ, ಧಾರ್ಮಿಕ ಮತ್ತು ಜ್ಯೋತಿಷ್ಯಶಾಸ್ತ್ರದ ಆಧಾರವಿದೆ. ಈ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ…

Read More

ಗಲಭೆ, ಗೊಂದಲ, ಭ್ರಷ್ಟಾಚಾರ: ತೆಲುಗು ಸಿನಿಮಾ ಡ್ಯಾನ್ಸರ್​​ಗಳ ಪ್ರತಿಭಟನೆ – Kannada News | Tollywood dance association members protest against Jani Master

ತೆಲುಗು ಸಿನಿಮಾಗಳಲ್ಲಿ (Tollywood) ಡ್ಯಾನ್ಸ್​​ಗೆ ಬಹಳ ಪ್ರಧಾನ್ಯತೆ, ಇತರೆ ಸಿನಿಮಾ ರಂಗಗಳಿಗೆ ಹೋಲಿಸಿದರೆ ತೆಲುಗು ಸಿನಿಮಾಗಳಲ್ಲಿ ಡ್ಯಾನ್ಸ್ ಹೆಚ್ಚು ಗುಣಮಟ್ಟದಿಂದಲೂ ಕೂಡಿರುತ್ತದೆ. ‘ಆರ್​​ಆರ್​​ಆರ್’ ಸಿನಿಮಾದ ಡ್ಯಾನ್ಸು ಆಸ್ಕರ್ ವೇದಿಕೆಯಲ್ಲೂ ಮಿಂಚಿದ್ದು ನೆನಪಿರಬಹುದು. ಆದರೆ ಇದೀಗ ತೆಲುಗು ಚಿತ್ರರಂಗದ ಡ್ಯಾನ್ಸರ್​​ಗಳು ಸಮಸ್ಯೆಗೆ ಸಿಲುಕಿದ್ದಾರೆ. ಇದಾಗಲೇ ಡ್ಯಾನ್ಸ್ ಅಸೋಷಿಯೇಷನ್ ಒಡೆದು ಎರಡು ಭಾಗವಾಗಿದ್ದು, ಇತ್ತೀಚೆಗಷ್ಟೆ ತೆಲುಗು ಸಿನಿಮಾ ಮತ್ತು ಟಿವಿ ಡ್ಯಾನ್ಸರ್ ಅಸೋಸಿಯೇಷನ್ ಸದಸ್ಯರು ಜಾನಿ ಮಾಸ್ಟರ್ ಮತ್ತು ಅವರ ಪತ್ನಿ ಹಾಗೂ ಅಸೋಷಿಯೇಷನ್ ಅಧ್ಯಕ್ಷೆ ಸುಮಲತಾ ವಿರುದ್ಧ ಪ್ರತಿಭಟನೆ…

Read More

ಕೊಲೆ ಆರೋಪಿ ದರ್ಶನ್ ಭೇಟಿಗೆ ಆಗಮಿಸಿದ ನಟಿ ರಕ್ಷಿತಾ ಪ್ರೇಮ್, ಪತ್ನಿ ವಿಜಯಲಕ್ಷ್ಮೀ – Kannada News | Actress Rakshita Prem and Vijayalakshmi Meet Darshan in Jail

ನಟ ದರ್ಶನ್ ಅವರು ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲುಪಾಲಾಗಿ ಕಂಬಿ ಎಣಿಸುತ್ತಿದ್ದಾರೆ. ಜಾಮೀನು ಪಡೆಯಲು ಅವರು ಮಾಡಿದ ಎಲ್ಲ ಪ್ರಯತ್ನಗಳೂ ವ್ಯರ್ಥ ಆಗಿವೆ. ಅವರನ್ನು ನೋಡಲು ಆಪ್ತರು ಮತ್ತು ಕುಟುಂಬದವರು ಪರಪ್ಪನ ಅಗ್ರಹಾರ ಜೈಲಿಗೆ ಆಗಮಿಸುತ್ತಿದ್ದಾರೆ. ಮಂಗಳವಾರ (ಜುಲೈ 21) ನಟಿ ರಕ್ಷಿತಾ ಪ್ರೇಮ್ ಮತ್ತು ಪತ್ನಿ ವಿಜಯಲಕ್ಷ್ಮಿ ಅವರು ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿಗೆ ಭೇಟಿ ನೀಡಿ, ದರ್ಶನ್ (Darshan) ಜೊತೆ ಮಾತನಾಡಿದ್ದಾರೆ. ರಕ್ಷಿತಾ ಪ್ರೇಮ್ ಮತ್ತು ವಿಜಯಲಕ್ಷ್ಮೀ ಅವರು 2 ಕಾರುಗಳಲ್ಲಿ ಪ್ರತ್ಯೇಕವಾಗಿ ಜೈಲಿಗೆ…

Read More

2025ನೇ ಸಾಲಿನ ಮುಖ್ಯಮಂತ್ರಿ ಪದಕ ಪ್ರಕಟ: ಪ್ರಜ್ವಲ್ ರೇವಣ್ಣ ಕೇಸ್ ತನಿಖೆ ನಡೆಸಿದ್ದ ಸುಮನ್ ಪನ್ನೇಕರ್‌ ಸೇರಿ 153 ಪೊಲೀಸರು ಆಯ್ಕೆ

ಬೆಂಗಳೂರು, ಮಾ.28: ಪೊಲೀಸ್ ಇಲಾಖೆಯಲ್ಲಿ ಅಸಾಧಾರಣ ಸೇವೆ ಮತ್ತು ದಕ್ಷತೆ ಮೆರೆದ ಒಟ್ಟು 153 ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗೆ 2025ನೇ ಸಾಲಿನ ಪ್ರತಿಷ್ಠಿತ ‘ಮುಖ್ಯಮಂತ್ರಿ ಪದಕ’ (Chief Minister’s Medal) ಪ್ರಕಟವಾಗಿದೆ. ಏಪ್ರಿಲ್ 2ರಂದು ಬೆಂಗಳೂರಿನಲ್ಲಿ ನಡೆಯಲಿರುವ ಭವ್ಯ ಸಮಾರಂಭದಲ್ಲಿ ಈ ಪದಕಗಳನ್ನು ಪ್ರದಾನ ಮಾಡಲಾಗುವುದು. ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣದ ತನಿಖೆ ನಡೆಸಿದ ಎಸ್‌ಐಟಿ (SIT) ತಂಡದಲ್ಲಿದ್ದ ಐಪಿಎಸ್ ಅಧಿಕಾರಿ, ಬಳ್ಳಾರಿ ಎಸ್​ಪಿ ಡಾ. ಸುಮನ್ ಡಿ. ಪನ್ನೇಕರ್…

Read More

ಬಳ್ಳಾರಿ ಉದ್ವಿಗ್ನ: ಜನಾರ್ದನ ರೆಡ್ಡಿ ಮನೆ ಮುಂದಿನ ಸಂಘರ್ಷದ ಭೀಕರತೆ ಬಿಚ್ಚಿಟ್ಟ ವಿಡಿಯೋ – Kannada News | Ballari Tension Escalates: Video Reveals Severity of Clash Outside Janardhan Reddy’s Residence

ಬಳ್ಳಾರಿ, ಜನವರಿ 2: ಬಳ್ಳಾರಿ ನಗರದಲ್ಲಿ ವಾಲ್ಮೀಕಿ ಪುತ್ಥಳಿ ಅನಾವರಣ ಸಂಬಂಧ ಬ್ಯಾನರ್ ಅಳವಡಿಕೆ ವೇಳೆ ಶುರುವಾದ ಘರ್ಷಣೆ ಕಾಂಗ್ರೆಸ್ ಕಾರ್ಯಕರ್ತನ ಬಲಿತೆಗೆದುಕೊಂಡಿದೆ. ಜನವರಿ 3ರಂದು ನಡೆಯಲಿರುವ ಕಾರ್ಯಕ್ರಮಕ್ಕೆ ಶಾಸಕ ಜನಾರ್ದನ ರೆಡ್ಡಿ ಅವರ ಮನೆ ಮುಂದೆ ಬ್ಯಾನರ್ ಕಟ್ಟುತ್ತಿದ್ದಾಗ ಎರಡು ಗುಂಪುಗಳ ನಡುವೆ ಗಲಾಟೆ ಸಂಭವಿಸಿದೆ. ಈ ಘರ್ಷಣೆಯು ಕಲ್ಲು ತೂರಾಟ, ದೊಣ್ಣೆಗಳ ಬಳಕೆ ಮತ್ತು ಖಾರದ ಪುಡಿ ಎರಚಾಟ ಸೇರಿದಂತೆ ತೀವ್ರ ಸ್ವರೂಪ ಪಡೆದುಕೊಂಡಿತ್ತು ಎಂಬುದು ಘಟನಾ ಸ್ಥಳದ ವಿಡಿಯೋದಿಂದ ತಿಳಿದುಬಂದಿದೆ. ಪರಿಸ್ಥಿತಿ ನಿಯಂತ್ರಣಕ್ಕೆ…

Read More