‘ನಿಮ್ಮ ಹೆಸರು ಬಳಸಿಕೊಳ್ಳುತ್ತೇನೆ’: ಸಿಎಂ ವಿಜಯ್ಗೆ ನೇರವಾಗಿ ಹೇಳಿದ ನಟ ವಿಶಾಲ್ – Kannada News | Actor Vishal to CM Vijay: You’re not in films, so I’m using your name
ತಮಿಳು ನಟ ವಿಶಾಲ್ ಅವರು (Vishal) ‘ಮುಗುಡಂ’ ಸಿನಿಮಾ ನಿರ್ದೇಶನ ಮಾಡಿದ್ದಾರೆ. ನಿರ್ದೇಶನದಲ್ಲಿ ಇದು ಅವರಿಗೆ ಚೊಚ್ಚಲ ಅನುಭವ. ಇತ್ತೀಚೆಗೆ ಚಿತ್ರದ ಹಾಡು ಬಿಡುಗಡೆ ಕಾರ್ಯಕ್ರಮ ನಡೆದಿದೆ. ಈ ವೇಳೆ ಅವರು ತಮಿಳುನಾಡಿನ ಮುಖ್ಯಮಂತ್ರಿ ದಳಪತಿ ವಿಜಯ್ ಜೊತೆಗಿನ ತಮ್ಮ ಸ್ನೇಹವನ್ನು ನೆನಪಿಸಿಕೊಂಡಿದ್ದಾರೆ. ಅವರು ಇತ್ತೀಚೆಗೆ ವಿಜಯ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಅದರ ಅನುಭವವನ್ನು ಬಿಚ್ಚಿಟ್ಟಿದ್ದಾರೆ. ‘ಎರಡು ವರ್ಷಗಳ ಹಿಂದೆ ನಾನು ವಿಜಯ್ ಅವರಿಗೆ ಕಥೆ ಹೇಳಲು ಹೋಗಿದ್ದೆ. ಆದರೆ, ಅವರು ಕಥೆ ಒಪ್ಪಿಲ್ಲ….