Headlines

ಭಾರತಕ್ಕೆ ತೈಲ ಮತ್ತು ಅನಿಲ ಪೂರೈಕೆ ಹೆಚ್ಚಿಸಲು ಸಿದ್ಧ: ರಷ್ಯಾ ಅಭಯ

ನವದೆಹಲಿ, ಏಪ್ರಿಲ್ 3: ಪಶ್ಚಿಮ ಏಷ್ಯಾ ಬಿಕ್ಕಟ್ಟಿನಿಂದಾಗಿ ಗಲ್ಫ್ ರಾಷ್ಟ್ರಗಳಿಂದ ಭಾರತಕ್ಕೆ ತೈಲ ಮತ್ತು ಅನಿಲ ಪೂರೈಕೆ ಸ್ಥಗಿತಗೊಂಡಿದೆ. ಇದರಿಂದ ಭಾರತದ ಇಂಧನ ಕ್ಷೇತ್ರ ಒತ್ತಡಕ್ಕೆ ಸಿಲುಕಿದೆ. ರಷ್ಯಾದಿಂದ ಒಂದಷ್ಟು ತೈಲ ಪೂರೈಕೆಯಾಗುತ್ತಿರುವುದು ಸಮಾಧಾನದ ಸಂಗತಿ. ಆದರೆ, ಭಾರತದ ತೈಲ ಮತ್ತು ಅನಿಲದ ಅಗತ್ಯತೆ ಅಗಾಧವಾಗಿದೆ. ಹೀಗಾಗಿ, ಹೆಚ್ಚಿನ ಪ್ರಮಾಣದ ತೈಲ ಮತ್ತು ಅನಿಲವು ಭಾರತಕ್ಕೆ ನಿರಂತರವಾಗಿ ಸರಬರಾಜಾಗುವುದು ಅಗತ್ಯ. ಇದೇ ವೇಳೆ, ಭಾರತದ ನೆರವಿಗೆ ರಷ್ಯಾ ಮುಂದಾಗಿದೆ. ಭಾರತಕ್ಕೆ ತೈಲ ಮತ್ತು ಎಲ್​ಎನ್​ಜಿ (LNG) ಪೂರೈಕೆ…

Read More

ಮಳೆಗೆ ಕಾಂಪೌಂಡ್ ಕುಸಿದು 7 ಜನ ಸಾವು: ಮೃತರ ಕುಟುಂಬಕ್ಕೆ 5 ಲಕ್ಷ ರೂ ಪರಿಹಾರ ಘೋಷಿಸಿದ ಸಿಎಂ – Kannada News | Bengaluru: 7 dead in After Rain Triggered Compound Collapse; CM Siddaramaiah Announces 5 Lakh Relief

ಬೆಂಗಳೂರು, ಏಪ್ರಿಲ್​ 29: ಬಿರುಗಾಳಿ, ಗುಡುಗು, ಸಿಡಿಲು, ಆಲಿಕಲ್ಲು ಸಹಿತ ಅಬ್ಬರಿಸಿದ ಮಳೆಗೆ ನಗರದ ಬೌರಿಂಗ್ ಆಸ್ಪತ್ರೆ ಬಳಿ ಕಾಂಪೌಂಡ್ ಕುಸಿದು ಬರೋಬ್ಬರಿ 7 ಜನರು ಮೃತಪಟ್ಟಿದ್ದಾರೆ. ದುರಂತ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಸಿಎಂ ಸಿದ್ದರಾಮಯ್ಯ (Siddaramaiah) ಮೃತರ ಕುಟುಂಬದವರಿಗೆ 5 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ್ದಾರೆ. ಇನ್ನು ಘಟನೆಯಲ್ಲಿ ಗಾಯಗೊಂಡಿರುವ 7 ಜನರಿಗೆ ಉಚಿತ ಚಿಕಿತ್ಸೆ ನೀಡುವಂತೆ ಸೂಚನೆ ನೀಡಿದ್ದಾರೆ. ಅಧಿಕಾರಿಗಳ ಅಜಾಗರೂಕತೆ ಸಾಬೀತಾದರೆ ಅವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ, ಅಗತ್ಯವಿದ್ದರೆ…

Read More

ಹಸುಗೂಸು ಸಾವು ಕೇಸ್​​ಗೆ ಟ್ವಿಸ್ಟ್: ಹೆಣ್ಣುಮಗು ಎಂದು ವಿಷವುಣಿಸಿದ್ದ ತಂದೆ ಅರೆಸ್ಟ್​​

ಬೆಳಗಾವಿ, ಮಾರ್ಚ್​ 20: 15 ದಿನದ ಹಿಂದೆಯಷ್ಟೇ ಜನಿಸಿದ್ದ ಹಸುಗೂಸು (baby death) ಏಕಾಏಕಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಣ್ಣುಮಗು ಎಂಬ ಕಾರಣಕ್ಕೆ ತಂದೆಯೇ ವಿಷವುಣಿಸಿದ್ದು, ಸದ್ಯ ಕಾಕತಿ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಭೀಮರಾಯ ಚಿಪ್ಪಾಡೆ ಬಂಧಿತ ತಂದೆ. ಮಾ.17ರಂದು ಬೆಳಗಾವಿ ತಾಲೂಕಿನ ಉಕ್ಕಡ ಗ್ರಾಮದಲ್ಲಿ ಘಟನೆ ನಡೆದಿತ್ತು. ಕಾಕತಿ ಪೊಲೀಸ್​ ಠಾಣೆಗೆ ಮಗುವಿನ ತಾಯಿ ಶೀಲಾ ದೂರು ನೀಡಿದ್ದರು. ನಡೆದಿದ್ದೇನು? ಇತ್ತೀಚೆಗೆ ಅಂದರೆ ಮಾರ್ಚ್​ 17ರಂದು 15 ದಿನಗಳ ಹಿಂದೆ ಜನಿಸಿದ್ದ ಹಸುಗೂಸು…

Read More

ಭಾರತದ ವಿದೇಶ ವಿನಿಮಯ ಮೀಸಲು ನಿಧಿಯಲ್ಲಿ ಚಿನ್ನದ ಪಾಲು ಗಣನೀಯ ಏರಿಕೆ – Kannada News | India forex reserves down by 4 billion USD, while gold share in forex reserves rises to 16pc

ನವದೆಹಲಿ, ಮೇ 3: ಭಾರತದ ವಿದೇಶ ವಿನಿಮಯ ಮೀಸಲು ನಿಧಿ (Forex Reserves) ಮತ್ತೆ 700 ಬಿಲಿಯನ್ ಡಾಲರ್ ಮಟ್ಟಕ್ಕಿಂತ ತುಸು ಕೆಳಗೆ ಇಳಿದಿದೆ. ಆರ್​ಬಿಐ ಮೊನ್ನೆ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ ಏಪ್ರಿಲ್ 24ರಂದು ಅಂತ್ಯಗೊಂಡ ವಾರದಲ್ಲಿ (ಏಪ್ರಿಲ್ 18-24) 4.82 ಬಿಲಿಯನ್ ಡಾಲರ್​ನಷ್ಟು ಕುಸಿದಿದೆ. ಇದರೊಂದಿಗೆ ಒಟ್ಟು ಫಾರೆಕ್ಸ್ ರಿಸರ್ವ್ಸ್ 698.49 ಬಿಲಿಯನ್ ಡಾಲರ್ ಆಗಿದೆ. ಫಾರೆಕ್ಸ್ ರಿಸರ್ವ್ಸ್​ನ ಎಲ್ಲಾ ಭಾಗಗಳೂ ಇಳಿದಿವೆ. ಫಾರೀನ್ ಕರೆನ್ಸಿ ಅಸೆಟ್​ಗಳು 2.84 ಬಿಲಿಯನ್ ಡಾಲರ್​ನಷ್ಟು ಕಡಿಮೆ ಆದರೆ,…

Read More

‘45’ ಸಿನಿಮಾ ಹೇಗಿದೆ? ಸಿನಿಮಾ ನೋಡಿ ವಿಮರ್ಶೆ ತಿಳಿಸಿದ ಫ್ಯಾನ್ಸ್ – Kannada News | 45 Movie Twitter Review Fans Happy After Watching Shivarajkumar Upendra And Raj Movie

‘45’ ಸಿನಿಮಾ (45 Movie) ಇಂದು (ಡಿಸೆಂಬರ್ 25) ರಿಲೀಸ್ ಆಗಿದೆ. ಈ ಸಿನಿಮಾದಲ್ಲಿ ಉಪೇಂದ್ರ, ರಾಜ್ ಬಿ ಶೆಟ್ಟಿ, ಶಿವರಾಜ್​ಕುಮಾರ್ ನಟಿಸಿದ್ದಾರೆ. ಈ ಸಿನಿಮಾ ನೋಡಿದ ಫ್ಯಾನ್ಸ್ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಅಭಿಪ್ರಾಯ ತಿಳಿಸುತ್ತಿದ್ದಾರೆ. ಅನೇಕರು ಈ ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ. ಟ್ವಿಟರ್​​ನಲ್ಲಿ ಈ ವಿಷಯವನ್ನು ಹಂಚಿಕೊಳ್ಳುತ್ತಿದ್ದಾರೆ. ಸಿನಿಮಾದಲ್ಲಿ ಯಾವ ವಿಷಯ ಹೆಚ್ಚು ಇಷ್ಟ ಆಗುತ್ತಿದೆ ಎಂಬುದನ್ನು ಹೇಳಿದ್ದಾರೆ. ಅರ್ಜುನ್ ಜನ್ಯ ಅವರು ಮ್ಯೂಸಿಕ್ ಡೈರೆಕ್ಟರ್ ಆಗಿ ಫೇಮಸ್ ಆದವರು. ಇದೇ ಮೊದಲ ಬಾರಿಗೆ ಅವರು ‘45’…

Read More

ಕರ್ನಾಟಕದಲ್ಲಿ ಖಜಾನೆ ಲೂಟಿಯಾಗುತ್ತಿದೆ, ಸಿಎಂ ಎಷ್ಟು ದಿನ ಇರುತ್ತಾರೋ ಗೊತ್ತಿಲ್ಲ: ಪ್ರಧಾನಿ ಮೋದಿ ವ್ಯಂಗ್ಯ! – Kannada News | Treasury is being looted in Karnataka, don’t know how long the CM will stay: Prime Minister Modi sarcastically!

ಹೆಚ್‌ಎಎಲ್ ವಿಮಾನ ನಿಲ್ದಾಣದ ಬಳಿ ಜನರತ್ತ ಕೈಬೀಸಿದ ಪ್ರಧಾನಿ ಮೋದಿImage Credit source: tv9 ಬೆಂಗಳೂರು, ಮೇ 10: ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಬಿಜೆಪಿ (BJP) ಐತಿಹಾಸಿಕ ವಿಜಯ ಸಾಧಿಸಿದ ಬೆನ್ನಲ್ಲೇ ಸಿಲಿಕಾನ್ ಸಿಟಿ ಬೆಂಗಳೂರಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ (Narendra Modi), ಹೆಚ್‌ಎಎಲ್ ವಿಮಾನ ನಿಲ್ದಾಣದ ಬಳಿ ನೆರೆದಿದ್ದ ಸಾವಿರಾರು ಬಿಜೆಪಿ ಕಾರ್ಯಕರ್ತರನ್ನು, ಅಭಿಮಾನಿಗಳನ್ನು ಉದ್ದೇಶಿಸಿ ಭರ್ಜರಿ ಭಾಷಣ ಮಾಡಿದರು. ಬಂಗಾಳದ ಗೆಲುವಿನ ಸಂಭ್ರಮದ ಜೊತೆಗೆ ಕರ್ನಾಟಕದೊಂದಿಗಿನ ತಮ್ಮ ಅವಿನಾಭಾವ ಸಂಬಂಧ ಮತ್ತು ದೇಶದ…

Read More

ದಿನ ಭವಿಷ್ಯ: ಇಂದು ಈ ರಾಶಿಯವರ ಮನಸ್ಸನ್ನು ಗೆಲ್ಲುವ ಪ್ರಯತ್ನ… – Kannada News | Dina Rashi Bhavishya June 18, 2026: Daily Horoscope Predictions for Thursday

ಮೇಷ ರಾಶಿ: ಇಂದು ನಿಮ್ಮ ಸಾಧಾರಣ ಬಟ್ಟೆಯನ್ನು ಕಂಡು ನಿಮ್ಮನ್ನು ಅಳೆಯಬಹುದು.‌ ಅಂಧಾನುಕರಣೆ ಬೇಡ. ಸಮಾರಂಭಕ್ಕೆ ಹೋಗುವಾಗ ಉತ್ತಮ‌ ಬಟ್ಟೆಯು ಇರಲಿ. ಕಾರ್ಯವಾಗದಿದ್ದಾಗ ಬೇಸರ, ಹತಾಶೆ ಕಾಣಿಸುವುದು. ಸ್ತ್ರೀಯರಿಗೆ ತವರುಮನೆಯ ಕಡೆಯಿಂದ ಶುಭವಾದ ಸುದ್ದಿಯು ಬರಲಿದೆ. ಸ್ವಾಭಿಮಾನಕ್ಕೆ ಧಕ್ಕೆ ಬರುವ ಕೆಲಸವು ಎಂತದ್ದೇ ಆಗಿದ್ದರೂ ಇಂದು ಮಾಡಲಾರಿರಿ. ದೊಡ್ಡ ವಿಚಾರವನ್ನು ಸಣ್ಣದಾಗಿ ಮಾಡಿ, ಯಾರಿಗೂ ಗೊತ್ತಾಗದಂತೆ ಮಾಡುವಿರಿ. ವೃಷಭ ರಾಶಿ: ಸಾಲವನ್ನು ಮಾಡಬೇಕಾಗಿ ಬಂದರೆ ಅಗತ್ಯವನ್ನು ನೋಡಿ ಮಾಡಿ. ನಿಮಗೆ ಬಾಣಲಿಯಿಂದ ಬೆಂಕಿಗೆ ಬಿದ್ದ ಅನುಭವವಾಗಬಹುದು. ಮನಸ್ಸು…

Read More