ಭಾರಿ ಗಾಳಿ ಮಳೆಯಿಂದ ಅರ್ಧದಲ್ಲೇ ನಿಂತ ಮೆಟ್ರೋ, ಸಂಚಾರದಲ್ಲಿ ವ್ಯತ್ಯಯ – Kannada News | Metal sheets from nearby structures fall on Namma Metro tracks, disrupt train services amid gusty winds And rains
ಬೆಂಗಳೂರು, (ಮೇ 21): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿಂದು ಸುರಿದ ಮಳೆಯು (Bengaluru rainss) ನಮ್ಮ ಮೆಟ್ರೋ (Namma Metro) ಪ್ರಯಾಣಿಕರ ದೈನಂದಿನ ಸಂಚಾರವನ್ನು ಸಂಪೂರ್ಣವಾಗಿ ಅಸ್ತವ್ಯಸ್ತಗೊಳಿಸಿದೆ. ಹೌದು… ಇಂದು (ಮೇ 21) ಸಂಜೆ ಭಾರೀ ಗಾಳಿ ಮಳೆಯಿಂದಾಗಿ ಬೆಂಗಳೂರು (Bengaluru) ಮೆಟ್ರೋ ರೈಲು ನಿಗಮ ವ್ಯಾಪ್ತಿಯ ಹಸಿರು ಮತ್ತು ನೇರಳೆ ಸೇರಿದಂತೆ ಎಲ್ಲಾ ಪ್ರಮುಖ ಮೆಟ್ರೋ ಮಾರ್ಗಗಳ ರೈಲು ಸೇವೆಗಳಲ್ಲಿ ವಿಳಂಬ ಉಂಟಾಗಿದೆ. ಇದರಿಂದ ಪ್ರಯಾಣಿಕರು ಪರದಾಡುವಂತಾಗಿದ್ದು. ಈ ಬಗ್ಗೆ ಬಿಎಂಆರ್ಸಿಎಲ್ (BMRCL) ವಿಶೇಷ ಮನವಿ ಮಾಡಿಕೊಂಡಿದೆ….