Headlines

GST ಹೊಡೆತ ಬಿದ್ದರೂ ಕರ್ನಾಟಕ 2ನೇ ಸ್ಥಾನ: ಕೇಂದ್ರಕ್ಕಿಂತ ರಾಜ್ಯದ ಬೆಳವಣಿಗೆ ಉತ್ತಮ ಎಂದ ಸಿದ್ದು

ಬೆಂಗಳೂರು, ಮಾರ್ಚ್​​ 06: ಜಿಎಸ್‌ಟಿ ಹಣ ಕೊಡದಿದ್ದರಿಂದ ರಾಜ್ಯದ ಬೆಳವಣಿಗೆ ಕಡಿಮೆಯಾಗಿದೆ. ಆದರೂ ಜಿಎಸ್‌ಟಿ ಸಂಗ್ರಹದಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಬಜೆಟ್​​ ಮಂಡನೆ ಬಳಿಕ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2026-27ನೇ ಸಾಲಿನ ಮುಂಗಡ ಪತ್ರವನ್ನು ಮಂಡಿಸಿದ್ದೇನೆ. ರಾಜ್ಯದ ಬೆಳವಣಿಗೆ ಪ್ರಮಾಣ ಶೇ.4ರಷ್ಟು ಕಡಿಮೆಯಾಗಿದೆ. ಕೆಲ ರಾಜ್ಯಗಳು ಇನ್ನೂ ಚೇತರಿಸಿಕೊಂಡಿಲ್ಲ, ಮೈನಸ್ ಗ್ರೋತ್‌ನಲ್ಲಿದ್ದಾವೆ. ಆದರೂ ಜಿಎಸ್‌ಟಿ ಸಂಗ್ರಹದಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಮಹಾರಾಷ್ಟ್ರ ನಂಬರ್ ಒನ್ ಸ್ಥಾನದಲ್ಲಿದೆ ಎಂದು…

Read More

ಅರಬ್ಬಿ ಸಮುದ್ರದಲ್ಲಿ ಅಮೆರಿಕದ ಮಿಲಿಟರಿ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ: ಓರ್ವ ಸಿಬ್ಬಂದಿ ನಾಪತ್ತೆ – Kannada News | US Military Helicopter Emergency Lands in Arabian Sea, Crew Member Missing

ಮನಾಮ, ಜುಲೈ 02: ಮಧ್ಯಪ್ರಾಚ್ಯದಲ್ಲಿ ಇರಾನ್(Iran) ಜೊತೆಗಿನ ಉದ್ವಿಗ್ನತೆಯ ಮಧ್ಯೆಯೇ ಅರಬ್ಬಿ ಸಮುದ್ರದಲ್ಲಿ ಅಮೆರಿಕ ನೌಕಾಪಡೆಗೆ (US Navy) ಸೇರಿದ ಯುದ್ಧ ಹೆಲಿಕಾಪ್ಟರ್ ಒಂದು ತುರ್ತು ಪರಿಸ್ಥಿತಿಯಿಂದಾಗಿ ಸಮುದ್ರದ ನೀರಿನ ಮೇಲೆಯೇ ಲ್ಯಾಂಡಿಂಗ್ ಮಾಡಿದೆ. ಹೆಲಿಕಾಪ್ಟರ್‌ನಲ್ಲಿದ್ದ ನಾಲ್ವರು ಸಿಬ್ಬಂದಿಗಳ ಪೈಕಿ ಮೂವರನ್ನು ಯಶಸ್ವಿಯಾಗಿ ರಕ್ಷಿಸಲಾಗಿದ್ದು, ನಾಪತ್ತೆಯಾಗಿರುವ ಮತ್ತೊಬ್ಬ ಸಿಬ್ಬಂದಿಗಾಗಿ ಸಮುದ್ರದಲ್ಲಿ ಬೃಹತ್ ಶೋಧ ಕಾರ್ಯಾಚರಣೆ ಆರಂಭಿಸಲಾಗಿದೆ. ಅಮೆರಿಕದನೌಕಾಪಡೆ ನೀಡಿರುವ ಅಧಿಕೃತ ಮಾಹಿತಿಯ ಪ್ರಕಾರ, ಮುಂಜಾನೆ 3.30 ರ ಸುಮಾರಿಗೆ ಸಂಭವಿಸಿದೆ. ಅಪಘಾತಕ್ಕೀಡಾದ ಹೆಲಿಕಾಪ್ಟರ್ ಅನ್ನು ‘MH-60S ಸೀ…

Read More

ಪ್ರಧಾನಿ ಮೋದಿಗಾಗಿ ಸಿದ್ಧವಾದ ನಾಲ್ವಡಿ ಒಡೆಯರ್ ಮಾದರಿ ಪೇಟದ ವಿಶೇಷಗಳೇನು ಗೊತ್ತಾ? ಇಲ್ಲಿದೆ ನೋಡಿ – Kannada News | Special Mysore Peta for PM Modi: Artist Nandan Singh Crafts Wadiyar Style Turban for Adichunchanagiri Event

ಮೈಸೂರು, ಏಪ್ರಿಲ್ 14: ಮಂಡ್ಯ ಜಿಲ್ಲೆಯ ಆದಿಚುಂಚನಗಿರಿಯಲ್ಲಿ ನಡೆಯಲಿರುವ ಭೈರವೈಕ್ಯ ಮಂದಿರ ಲೋಕಾರ್ಪಣೆ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ವಿಶೇಷ ಮೈಸೂರು ಪೇಟ ಧರಿಸಿ ಗಮನ ಸೆಳೆಯಲಿದ್ದಾರೆ. ಮೈಸೂರಿನ ಹೆಸರಾಂತ ಕಲಾವಿದ ನಂದನ್ ಸಿಂಗ್ ಅವರು ಪ್ರಧಾನಿಗಾಗಿಯೇ ಈ ಪೇಟವನ್ನು ಸಿದ್ಧಪಡಿಸಿದ್ದಾರೆ. ಇದರ ತಯಾರಿಗೆ ಐದು ದಿನಗಳ ಕಾಲ ತಗಲಿದೆ. ಬನಾರಸ್ ಬಟ್ಟೆ ಹಾಗೂ ವಿಶೇಷ ಮೋಲ್ಡ್ ಬಳಸಿ ತಯಾರಿಸಿರುವ ಈ ಪೇಟವು, ಮೈಸೂರು ಅರಸರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಧರಿಸುತ್ತಿದ್ದ ಶೈಲಿಯಲ್ಲಿದೆ. ಪೇಟದ…

Read More

ಕಿರುಕುಳ ಕೊಟ್ಟು ಯುವತಿ ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಿ, ಹೆಣಕ್ಕೆ ತಾಳಿ ಕಟ್ಟಿದ ವ್ಯಕ್ತಿ – Kannada News | Jharkhand: Fiance Marries Deceased Bride Amid Ongoing Questions Around Her Death

ಗಿರಿದಿಹ್ , ಮೇ 19: ತನ್ನ ಕಿರುಕುಳಕ್ಕೆ ಬಲಿಯಾಗಿ ಹೆಣವಾಗಿ ಮಲಗಿದ್ದ ಯುವತಿ ಕತ್ತಿಗೆ ವ್ಯಕ್ತಿಯೊಬ್ಬ ತಾಳಿ ಕಟ್ಟಿರುವ ಘಟನೆ ಜಾರ್ಖಂಡ್​ನ ಗಿರಿದಿಹ್​ನಲ್ಲಿ ನಡೆದಿದೆ. ಆಕೆಯನ್ನು ಆತ್ಮಹತ್ಯೆ(Suicide)ಗೆ ತಳ್ಳಿದ ಆರೋಪಿ ಯುವಕನೇ ಪೊಲೀಸರ ಸಮ್ಮುಖದಲ್ಲಿ ಮದುವೆಯಾಗಿರುವ ವಿಲಕ್ಷಣ ಪ್ರಸಂಗ ನಡೆದಿದೆ. ಮೃತರ ಹಣೆಗೆ ಸಿಂಧೂರ ಹಚ್ಚಿ, ಸಾಂಕೇತಿಕವಾಗಿ ವಿವಾಹ ವಿಧಿವಿಧಾನಗಳನ್ನು ಮುಗಿಸಿದ ನಂತರವೇ ಆಕೆಯ ಅಂತ್ಯಕ್ರಿಯೆ ನಡೆಸಲು ಸಾಧ್ಯವಾಗಿದೆ. ಪೊಲೀಸರ ಮಾಹಿತಿಯ ಪ್ರಕಾರ, ಆರೋಪಿ ಯುವಕ ಮನೀಶ್ ಮುರ್ಮು ಮತ್ತು ಮೃತ ಯುವತಿಗೆ ಸುಮಾರು ನಾಲ್ಕು ತಿಂಗಳ…

Read More

‘ಧುರಂಧರ್ 2’ ಕನ್ನಡ ಟ್ರೇಲರ್: ಕರ್ನಾಟಕದಲ್ಲಿ ಮೋಡಿ ಮಾಡುತ್ತಾ ರಣವೀರ್ ಸಿಂಗ್ ಸಿನಿಮಾ?

ಕಳೆದ ವರ್ಷ ‘ಧುರಂಧರ್’ ಸಿನಿಮಾ ಕೇವಲ ಹಿಂದಿಯಲ್ಲಿ ಬಿಡುಗಡೆ ಆಗಿತ್ತು. ಹಾಗಿದ್ದರೂ ಕೂಡ ಆ ಸಿನಿಮಾಗೆ ದೇಶಾದ್ಯಂತ ಮೆಚ್ಚುಗೆ ಸಿಕ್ಕಿತ್ತು. ಈಗ ಅದರ ಸೀಕ್ವೆಲ್ ಬರುತ್ತಿದೆ. ‘ಧುರಂಧರ್ 2’ (Dhurandhar 2) ಸಿನಿಮಾ ಕನ್ನಡದಲ್ಲೂ ರಿಲೀಸ್ ಆಗಲಿದೆ ಎಂಬುದು ವಿಶೇಷ. ಹಿಂದಿ ಜೊತೆಗೆ ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಯಲ್ಲಿ ಈ ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಲಾಗಿದೆ. ಆ ಮೂಲಕ ದಕ್ಷಿಣ ಭಾರತದಲ್ಲಿ ಹೆಚ್ಚು ಪ್ರೇಕ್ಷಕರನ್ನು ಸೆಳೆಯಲು ಪ್ಲ್ಯಾನ್ ಮಾಡಲಾಗಿದೆ. ಮಾರ್ಚ್ 19ರಂದು ಈ ಸಿನಿಮಾ…

Read More

ಪಂದ್ಯದ ವೇಳೆ ಮೊಬೈಲ್ ಬಳಸಿದ್ದ ರೋಮಿ ಭಿಂದರ್​ಗೆ ದಂಡ; ಮೊಬೈಲ್ ಬಳಸಲು ಕಾರಣ ಬಹಿರಂಗ – Kannada News | Rajasthan Royals Manager Romi Bhinder Fined Over IPL Dugout Phone Controversy

ಐಪಿಎಲ್ (IPL 2026) ಪಂದ್ಯದ ವೇಳೆ ರಾಜಸ್ಥಾನ್ ರಾಯಲ್ಸ್ (Rajasthan Royals) ತಂಡದ ವ್ಯವಸ್ಥಾಪಕ ರೋಮಿ ಭಿಂದರ್ (Romi Bhinder) ಡಗೌಟ್‌ನಲ್ಲಿ ಕುಳಿತು ಫೋನ್ ಬಳಸಿದ್ದು ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಹೀಗಾಗಿ ಬಿಸಿಸಿಐ (BCCI) ಈ ಆರೋಪದ ಬಗ್ಗೆ ತನಿಖೆಗೆ ಆದೇಶ ಹೊರಡಿಸಿತ್ತು. ಇದೀಗ ತನಿಖೆ ಪೂರ್ಣವಾಗಿದ್ದು, ಐಪಿಎಲ್ ನಿಯಮಗಳನ್ನು ಉಲ್ಲಂಘಿಸಿ ಮೊಬೈಲ್ ಬಳಿಸಿದ್ದ ಭಿಂದರ್‌ಗೆ ದಂಡ ವಿಧಿಸಲಾಗಿದೆ. ಇದರ ಜೊತೆಗೆ ಈ ಕೃತ್ಯವನ್ನು ಪುನರಾವರ್ತಿಸದಂತೆ ಎಚ್ಚರಿಕೆ ನೀಡಲಾಗಿದೆ. ಅದೃಷ್ಟವೆಂಬಂತೆ ಭಿಂದರ್‌ ಪಕ್ಕ ಕುಳಿತು ಅವರು ಮೊಬೈಲ್…

Read More

ಇರಾನ್ ಮೇಲೆ ಭೀಕರ ದಾಳಿ ನಿರ್ಧಾರದಿಂದ ಹಿಂದೆ ಸರಿದ ಟ್ರಂಪ್: ಪಾಕಿಸ್ತಾನ ಮಧ್ಯಸ್ಥಿಕೆಯಲ್ಲಿ 2 ವಾರಗಳ ಕದನ ವಿರಾಮ ಘೋಷಣೆ!

ವಾಷಿಂಗ್ಟನ್/ಟೆಹ್ರಾನ್, ಏಪ್ರಿಲ್ 8: ಇರಾನ್ (Iran) ಮೇಲೆ ವಿನಾಶಕಾರಿ ದಾಳಿ ನಡೆಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ನೀಡಿದ್ದ ಗಡುವು ಮುಗಿಯಲು ಕೇವಲ ಎರಡು ಗಂಟೆಗಳಿರುವಾಗ ಬಹು ದೊಡ್ಡ ರಾಜತಾಂತ್ರಿಕ ಬೆಳವಣಿಗೆ ನಡೆದಿದೆ. ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಮತ್ತು ಸೇನಾ ಮುಖ್ಯಸ್ಥರ ಮನವಿಯ ಮೇರೆಗೆ ಟ್ರಂಪ್ ತಮ್ಮ ಬಾಂಬ್ ದಾಳಿಯ ನಿರ್ಧಾರವನ್ನು ಸ್ಥಗಿತಗೊಳಿಸಿದ್ದು, ಎರಡು ವಾರಗಳ ಕದನ ವಿರಾಮಕ್ಕೆ (US Iran Ceasefire) ಸಮ್ಮತಿಸಿದ್ದಾರೆ. ಹಾರ್ಮುಜ್ ಜಲಸಂಧಿ ತೆರೆಯಲು ಇರಾನ್ ಸಮ್ಮತಿ ಕಳೆದ…

Read More

Daily Devotional: ಪೂಜೆಯ ಫಲ ಸಿಗಬೇಕೆ? ಹಾಗಾದರೆ ಮಡಿ ಮತ್ತು ಶಿಸ್ತಿನ ಈ ರಹಸ್ಯಗಳನ್ನು ತಿಳಿಯಿರಿ

ನಮ್ಮ ಜೀವನ ನಿರ್ವಹಣೆಯಲ್ಲಿ ಭಗವಂತನ ಆಶ್ರಯವನ್ನು ಪಡೆಯುವುದು ಅತ್ಯಗತ್ಯ. ಇದಕ್ಕಾಗಿ ಪೂಜೆ, ಪುನಸ್ಕಾರ, ಹವನ, ಯಜ್ಞ, ಯಾಗಾದಿಗಳು, ಮತ್ತು ಜಪ-ತಪಗಳಂತಹ ವಿವಿಧ ಪೂಜಾ ವಿಧಾನಗಳನ್ನು ಅನುಸರಿಸುತ್ತೇವೆ. ಯದ್ಭಾವಂ ತದ್ಭವತಿ ಎಂಬಂತೆ ನಮ್ಮ ಭಾವನೆಗಳಿಗೆ ಅನುಗುಣವಾಗಿ ಭಗವಂತನನ್ನು ಆರಾಧಿಸುತ್ತೇವೆ. ಭಗವಂತನು ಸರ್ವಾಂತರ್ಯಾಮಿ, ಸರ್ವವ್ಯಾಪಿ ಮತ್ತು ಸರ್ವಶಕ್ತನಾಗಿರುತ್ತಾನೆ. ಆದರೆ, ಇಂತಹ ಆರಾಧನೆಯಲ್ಲಿ ಮಡಿಯ ಅಗತ್ಯವಿದೆಯೇ ಎಂಬ ಪ್ರಶ್ನೆ ಹಲವು ಬಾರಿ ಉದ್ಭವಿಸುತ್ತದೆ. ಮಡಿಯಿಂದಲೇ ಪೂಜೆ ಮಾಡಬೇಕಾ ಎಂಬುದು ಹಲವರ ಅನುಮಾನ. ಈ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ…

Read More

AUS vs ENG: ಏನಿದು ಪಿಂಕ್ ಟೆಸ್ಟ್​? – Kannada News | Ashes 2026, Australia vs England: What is the Pink Test?

ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ (Australia vs England) ನಡುವಣ 5ನೇ ಟೆಸ್ಟ್ ಪಂದ್ಯಕ್ಕೆ ಆತಿಥ್ಯವಹಿಸಲು ಸಿಡ್ನಿ ಕ್ರಿಕೆಟ್ ಸ್ಟೇಡಿಯಂ ಸಜ್ಜಾಗಿದೆ. ಈ ಪಂದ್ಯವನ್ನು ಪಿಂಕ್ ಟೆಸ್ಟ್ (Pink Test) ಎಂದು ಕರೆಯಲಾಗುತ್ತದೆ. ಆದರೆ ಇದು ಪಿಂಕ್ ಬಾಲ್ ಟೆಸ್ಟ್ ಅಲ್ಲ. ಬದಲಿಗೆ ಈ ಪಂದ್ಯದಲ್ಲಿ ಉಭಯ ತಂಡಗಳ ಆಟಗಾರರು ಪಿಂಕ್ ಕ್ಯಾಪ್ ಧರಿಸಿ ಕಣಕ್ಕಿಳಿಯಲಿದ್ದಾರೆ. ಏನಿದು ಪಿಂಕ್ ಟೆಸ್ಟ್? ಪ್ರತಿ ವರ್ಷ ಸಿಡ್ನಿಯಲ್ಲಿ ಆಡಲಾಗುವ ಮೊದಲ ಟೆಸ್ಟ್ ಅನ್ನು ಪಿಂಕ್ ಟೆಸ್ಟ್ ಎಂದು ಕರೆಯಲಾಗುತ್ತದೆ. ಇದಕ್ಕೆ ಮುಖ್ಯ…

Read More

ಗುಲ್ಮಾರ್ಗ್‌ನಲ್ಲಿ ಆಕಾಶದ ಮಧ್ಯೆ ಸಿಲುಕಿದ 300 ಪ್ರವಾಸಿಗರು!

ಶ್ರೀನಗರ, ಮೇ 25: ಇಂದು ಜಮ್ಮು ಮತ್ತು ಕಾಶ್ಮೀರದ (Jammu and Kashmir) ಜನಪ್ರಿಯ ಪ್ರವಾಸಿ ತಾಣವಾದ ಗುಲ್ಮಾರ್ಗ್‌ನಲ್ಲಿರುವ ಗೊಂಡೊಲಾ ಕೇಬಲ್ ಕಾರ್ ಸೇವೆಯಲ್ಲಿ ತಾಂತ್ರಿಕ ದೋಷ ಸಂಭವಿಸಿದೆ. ಆದರೆ, ತಕ್ಷಣ ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಿದ್ದರಿಂದ ದೊಡ್ಡ ದುರಂತವೊಂದು ತಪ್ಪಿದೆ. ಇದರಿಂದಾಗಿ ಸುಮಾರು 300 ಪ್ರವಾಸಿಗರು ಕೇಬಲ್ ಕಾರ್​ಗಳಲ್ಲಿ ಸಿಲುಕಿದರು. ತಾಂತ್ರಿಕ ಸಮಸ್ಯೆಯಿಂದಾಗಿ ಗೊಂಡೊಲಾ ಸೇವೆಯನ್ನು ತಕ್ಷಣವೇ ಸ್ಥಗಿತಗೊಳಿಸಬೇಕಾಯಿತು. ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Source link

Read More