Headlines

ಕರ್ನಾಟಕದಲ್ಲೊಂದು ಅಪರೂಪದ ಘಟನೆ: ಸಿಬ್ಬಂದಿಗೆ ಬಂದೂಕು ಹೊತ್ತು ರಣಬಿಸಿಲಲ್ಲಿ ನಿಲ್ಲುವ ಶಿಕ್ಷೆ

ಶಾಲಾ ಮಕ್ಕಳಂತೆ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಚಿಕ್ಕಜಾಜೂರು ಠಾಣೆ ಪೊಲೀಸ್ ಸಿಬ್ಬಂದಿಗೆ ರಣಬಿಸಿಲಲ್ಲಿ ನಿಲ್ಲುವ ಶಿಕ್ಷೆ ವಿಧಿಸಿದ ಘಟನೆ ಬೆಳಕಿಗೆ ಬಂದಿದೆ. ಕರ್ತವ್ಯ ನಿರ್ಲಕ್ಷ್ಯ ಕಾರಣಕ್ಕೆ ಈ ಅಪರೂಪದ ಶಿಕ್ಷೆ ವಿಧಿಸಲಾಗಿದೆ. ಅಚ್ಚರಿ ಅನ್ನಿಸಿದರೂ ಸತ್ಯ. PSI ನೇತ್ರಾವತಿ ಅವರು ತಮ್ಮ ಚಿಕ್ಕಜಾಜೂರು ಠಾಣೆ ಪೊಲೀಸ್ ಸಿಬ್ಬಂದಿಗೆ ನಿನ್ನೆ (ಏಪ್ರಿಲ್ 06) ಮಧ್ಯಾಹ್ನ 2ರಿಂದ 5ರವರೆಗೆ ರಣಬಿಸಿನಲ್ಲಿ ಬಂದೂಕು ಹೊತ್ತು ನಿಲ್ಲುವ ಶಿಕ್ಷೆ ವಿಧಿಸಿದ್ದಾರೆ. ಅರ್ಧದಿನ ರಣಬಿಸಿಲಿನಲ್ಲಿ ನಿಲ್ಲಿಸಿದ್ದಕ್ಕೆ ಕೆಲ ಪೊಲೀಸ್ ಸಿಬ್ಬಂದಿ ಆರೋಗ್ಯದಲ್ಲಿ ಏರುಪೇರಾಗಿರುವುದು…

Read More

SMAT 2025: ಇಶಾನ್ ಕಿಶನ್ ನಾಯಕತ್ವದಲ್ಲಿ ಮೊದಲ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿದ ಜಾರ್ಖಂಡ್ – Kannada News | Ishan Kishan’s Century Powers Jharkhand to Maiden Syed Mushtaq Ali Trophy Win

ಇಶಾನ್ ಕಿಶನ್ (Ishan Kishan) ನಾಯಕತ್ವದ ಜಾರ್ಖಂಡ್ ಕ್ರಿಕೆಟ್ ತಂಡವು ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ (Syed Mushtaq Ali Trophy) ಹೊಸ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಭಾರತದ ದೇಶೀಯ ಕ್ರಿಕೆಟ್‌ನ ಅತಿದೊಡ್ಡ ಟಿ20 ಟೂರ್ನಿಯಾದ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಫೈನಲ್‌ನಲ್ಲಿ, ಜಾರ್ಖಂಡ್ ತಂಡವು ಹರಿಯಾಣವನ್ನು 69 ರನ್‌ಗಳಿಂದ ಏಕಪಕ್ಷೀಯವಾಗಿ ಸೋಲಿಸಿತು. ಇದರೊಂದಿಗೆ, ಜಾರ್ಖಂಡ್ ಮೊದಲ ಬಾರಿಗೆ ಮುಷ್ತಾಕ್ ಅಲಿ ಟ್ರೋಫಿ ಪ್ರಶಸ್ತಿಯನ್ನು ಗೆದ್ದುಕೊಂಡಿತು. ತಂಡದ ಈ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ನಾಯಕ ಇಶಾನ್ ಕಿಶನ್…

Read More

ವಿಶ್ವಗುರು ಬಸವಣ್ಣ-ಅಕ್ಕಮಹಾದೇವಿ ಬಗ್ಗೆ ಅಶ್ಲೀಲ ಮಾತು: ಸಿಡಿದೆದ್ದ ಅನುಯಾಯಿಗಳು

ವಿಜಯಪುರ, ಮಾರ್ಚ್​ 12: ಜಗತ್ತಿಗೆ ಸಮಾನತೆಯನ್ನು ಸಾರಿದ ವಿಶ್ವಗುರು ಬಸವಣ್ಣ (Basavanna) ಹಾಗೂ ವೈರಾಗ್ಯಮೂರ್ತಿ, ವಚನಗಾರ್ತಿ ಅಕ್ಕಮಹಾದೇವಿ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ನಿಂದನಾತ್ಮಕವಾದ ಹಾಗೂ ಅಶ್ಲೀಲ ಪದಗಳ ಸಹಿತ ಬರವಣಿಗೆ ಪೋಸ್ಟ್ ಮಾಡಿ ಹರಿಬಿಡಲಾಗಿದೆ. ಫೇಸ್ಬುಕ್​​ನಲ್ಲಿ ಹರಿ ಬಿಟ್ಟವರ ವಿರುದ್ದ ಬಸವ ಅನುಯಾಯಿಗಳು ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಿಡಿಗೇಡಿಗಳ ಬಂಧನಕ್ಕೆ ಒತ್ತಾಯಿಸಿದ್ದಾರೆ. ಬಸವಣ್ಣ ಹಾಗೂ ಅಕ್ಕಮಹಾದೇವಿ ಕುರಿತು ನಿಂದನೆ ಪೋಸ್ಟ್​​ ಬಸವ ಜನ್ಮಭೂಮಿ ವಿಜಯಪುರ ಜಿಲ್ಲೆಯಲ್ಲಿ ಬಸವಾದಿ ಶರಣರ ಅನುಯಾಯಿಗಳ ಆಕ್ರೋಶಗೊಂಡಿದ್ಧಾರೆ. ನ್ಯಾಯಬೇಕೆಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು…

Read More

ಪುರಸಭೆ ಮುಖ್ಯಾಧಿಕಾರಿ ವಿರುದ್ಧ ಸಂಸದ ಸುನೀಲ್​​ ಬೋಸ್​ ಫುಲ್​​ ಗರಂ: ಕಾರಣ ಏನು ಗೊತ್ತಾ? – Kannada News | MP Sunil Bose Confronts Bannur MCO for Disregarding MLA and Distributing Laptops

ಮೈಸೂರು, ಜನವರಿ 31: ಟಿ.ನರಸೀಪುರ ತಾಲೂಕಿನ ಬನ್ನೂರು ಪುರಸಭೆ ಮುಖ್ಯಾಧಿಕಾರಿಯನ್ನು ಸಂಸದ ಸುನೀಲ್​​ ಬೋಸ್​ ತರಾಟೆಗೆ ಪಡೆದ ಘಟನೆ ನಡೆದಿದೆ. ಶಾಸಕರ ಗಮನಕ್ಕೆ ತರದೆ ಲ್ಯಾಪ್​ಟಾಪ್​, ತಳ್ಳೋಗಾಡಿಯನ್ನು ಅಧಿಕಾರಿ ವಿತರಿಸಿರುವ ಕಾರಣ ಪುರಸಭೆ ಮುಖ್ಯಾಧಿಕಾರಿ ಹೇಮಂತ್​​ ವಿರುದ್ಧ ಸಂಸದ ಸುನೀಲ್ ಬೋಸ್ ಗರಂ ಆಗಿದ್ದಾರೆ. ನೀನು ಪುರಸಭೆ ಮುಖ್ಯಾಧಿಕಾರಿನಾ? ಗುಮಾಸ್ತನ​ ರೀತಿ ಮಾತಾಡ್ತೀಯಾ?ನೀನೇನು ದನ ಮೇಯಿಸ್ತೀಯಾ, ಎಷ್ಟು ಸಲ ಹೇಳೋದು ನಿನಗೆ? ನಮ್ಮ ಅನುಮತಿ ಇಲ್ಲದೆ ಲ್ಯಾಪ್​ಟಾಪ್​, ತಳ್ಳೋಗಾಡಿ ಹೇಗೆ ಕೊಟ್ಟೆ? ಶಾಸಕರ ಗಮನಕ್ಕೆ ತರಬೇಕು ತಾನೇ?…

Read More

ಹೀಗೆ ಔಟಾಗಿ, ಹೀಗೊಂದು ದಾಖಲೆ ಬರೆದ ಸಾಯಿ ಸುದರ್ಶನ್ – Kannada News | IPL 2026: Sai Sudharsan Scripts Unwanted History With Bizarre Hit Wicket

IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ 20 ಆಟಗಾರರು ಹಿಟ್​ ವಿಕೆಟ್ ಆಗಿ ಔಟಾಗಿದ್ದಾರೆ. ಈ ಇಪ್ಪತ್ತು ಆಟಗಾರರಲ್ಲಿ ಎರಡು ಬಾರಿ ಹಿಟ್ ವಿಕೆಟ್ ಆದ ಬ್ಯಾಟರ್ ಸಾಯಿ ಸುದರ್ಶನ್. ಹೀಗೆ ಎರಡು ಬಾರಿ ಹಿಟ್ ವಿಕೆಟ್ ಮೂಲಕ ಇನಿಂಗ್ಸ್ ಅಂತ್ಯಗೊಳಿಸಿ ಸಾಯಿ ಸುದರ್ಶನ್ ಅನಗತ್ಯ ದಾಖಲೆ ಬರೆದಿದ್ದಾರೆ. ಐಪಿಎಲ್ 2022 ರಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಕೀರನ್ ಪೊಲಾರ್ಡ್ ಎಸೆದ ಬೌನ್ಸರ್ ಎಸೆತವನ್ನು ಪುಲ್ ಮಾಡುವ ಯತ್ನದಲ್ಲಿ ಸಾಯಿ ಸುದರ್ಶನ್ ಅವರ ಕೈಯಿಂದ…

Read More

1ಕಿ.ಮೀ ಚಾಲೆಂಜ್ ಹಾಕಿ ಸಾರ್ವಜನಿಕರಿಂದ ಛೀಮಾರಿ ಹಾಕಿಸಿಕೊಂಡ ಜಿಬಿಎ! – Kannada News

ಬೆಂಗಳೂರು, (ಜೂನ್ 02): ಗ್ರೇಟರ್ ಬೆಂಗಳೂರು ಪ್ರಾಧಿಕಾರ (Greater Bengaluru Authority) ನಾಗರಿಕರಿಗೆ 1 ಕಿಲೋಮೀಟರ್ ಚಾಲೆಂಜ್ ನೀಡಿ, 1 ಕಿಲೋಮೀಟರ್ ವರೆಗಿನ ದೂರ ಕ್ರಮಿಸಲು ವಾಹನಗಳ ಬದಲು ಕಾಲ್ನಡಿಗೆಯನ್ನು ಆಯ್ಕೆ ಮಾಡಬೇಕು ಎಂದು ಸಾಮಾಜಿಕ ಜಾಲತಾಣ X ನಲ್ಲಿ ಪೋಸ್ಟ್ ಮಾಡಿತ್ತು. ಫುಟ್‌ಪಾತ್‌ಗಳನ್ನು ಬಳಸಿಕೊಂಡು ಪರಿಸರ ಸ್ನೇಹಿಯಾಗಿ ನಡೆದುಕೊಳ್ಳಿ ಎಂಬ ಸಂದೇಶವನ್ನು ನೀಡಿದ್ದ GBA, ಈ ಅಭಿಯಾನದ ಮೂಲಕ ವಾಹನ ಬಳಕೆಯನ್ನು ಕಡಿಮೆ ಮಾಡಿ ಪರಿಸರ ಸಂರಕ್ಷಣೆಗೆ ಉತ್ತೇಜನ ನೀಡುವ ಉದ್ದೇಶ ಹೊಂದಿತ್ತು. ಆದರೆ ಈ…

Read More

ಒಕ್ಕಲಿಗರಿಗೆ ಅವಕಾಶ ಸಿಕ್ಕಿದೆ, ದಲಿತರು, ಅಲ್ಪಸಂಖ್ಯಾತರಿಗೆ ಯಾಕೆ ಮುಖ್ಯಮಂತ್ರಿ ಸ್ಥಾನ ನೀಡಬಾರದು: ಕೆ.ಎನ್. ರಾಜಣ್ಣ – Kannada News | Former Minister KN Rajanna Questions Lack of Dalit and Minority Chief Ministers

ತುಮಕೂರು, ಫೆ.19: ಮಾಜಿ ಸಚಿವ ಕೆ.ಎನ್. ರಾಜಣ್ಣ (KN Rajanna) ಅವರು ಕರ್ನಾಟಕದಲ್ಲಿ ದಲಿತರಿಗೆ ಯಾಕೆ ಮುಖ್ಯಮಂತ್ರಿ ಸ್ಥಾನ ನೀಡಬಾರದು ಎಂದು ಮತ್ತೊಮ್ಮೆ ಹೇಳಿಕೆಯನ್ನು ನೀಡಿದ್ದಾರೆ. ಈ ವಿಷಯದಲ್ಲಿ ಈಗಾಗಲೇ ಮಹದೇವಪ್ಪ ಅವರು ಮಾತನಾಡಿದ್ದು, ಇತರೆ ರಾಜ್ಯಗಳ ಉದಾಹರಣೆಗಳನ್ನು ನೀಡಿ ದಲಿತ ಸಿಎಂ ಸಾಧ್ಯತೆಯನ್ನು ಸಮರ್ಥಿಸಿದ್ದಾರೆ ಎಂದು ರಾಜಣ್ಣ ನೆನಪಿಸಿಕೊಂಡರು. ದಲಿತರು, ಅಲ್ಪಸಂಖ್ಯಾತರು, ವಾಲ್ಮೀಕಿ ಸಮುದಾಯದವರು ಅಥವಾ ಬಲಿಜ ಸಮುದಾಯದವರು ಮುಖ್ಯಮಂತ್ರಿ ಸ್ಥಾನಕ್ಕೆ ಅರ್ಹರಲ್ಲವೇ ಎಂದು ರಾಜಣ್ಣ ಪ್ರಶ್ನಿಸಿದರು. ಕಾಂಗ್ರೆಸ್ ಪಕ್ಷದ ಇತಿಹಾಸವನ್ನು ವಿವರಿಸಿದ ರಾಜಣ್ಣ, ಕಾಂಗ್ರೆಸ್…

Read More

Maruti Suzuki: 30,000 ರೂವರೆಗೂ ಏರಿಕೆಯಾಗಲಿದೆ ಮಾರುತಿ ಸುಜುಕಿಯ ವಿವಿಧ ಕಾರುಗಳ ಬೆಲೆ – Kannada News | Maruti Suzuki to hike prices of its various model cars by upto Rs 30k

ಮಾರುತಿ ಸುಜುಕಿ ಸ್ವಿಫ್ಟ್ ಕಾರುImage Credit source: PTI ನವದೆಹಲಿ, ಜುಲೈ 21: ಭಾರತದ ನಂಬರ್ ಒನ್ ಕಾರು ತಯಾರಕ ಸಂಸ್ಥೆಯಾದ ಮಾರುತಿ ಸುಜುಕಿ ತನ್ನ ವಿವಿಧ ಕಾರುಗಳ ಬೆಲೆಯನ್ನು ಏರಿಸಲಿದೆ. ಮುಂದಿನ ತಿಂಗಳಿಂದ (ಆಗಸ್ಟ್ 2026) ಜಾರಿಗೆ ಬರುವಂತೆ ಮಾರುತಿ ಸುಜುಕಿ (Maruti Suzuki) ತನ್ನ ವಿವಿಧ ಮಾಡಲ್​ಗಳ ಕಾರುಗಳ ಬೆಲೆಯನ್ನು ₹30,000 ವರೆಗೆ ಏರಿಕೆ ಮಾಡುವುದಾಗಿ ಘೋಷಿಸಿದೆ. ಕಾರು ಉತ್ಪಾದನಾ ವೆಚ್ಚಗಳು (Input costs) ಮತ್ತು ಹಣದುಬ್ಬರದ ಒತ್ತಡ ನಿರಂತರವಾಗಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈ…

Read More

ರಷ್ಯಾ ನಿಷೇಧ ಮಸೂದೆಯ ಅಸ್ತ್ರ ಹಿಡಿದ ಅಮೆರಿಕ ಅಧ್ಯಕ್ಷ; ಭಾರತ ಮತ್ತಿತರ ದೇಶಗಳ ಮೇಲೆ ಶೇ. 500 ಟ್ಯಾರಿಫ್​ಗೆ ಟ್ರಂಪ್ ಸಜ್ಜು – Kannada News | Russian sanctions bill to give power for US President to impose 500pc tariffs on India and other countries

ವಾಷಿಂಗ್ಟನ್, ಜನವರಿ 8: ಅಮೆರಿಕ ಅಧ್ಯಕ್ಷರು ರಷ್ಯಾವನ್ನು ಹತ್ತಿಕ್ಕಲು ಹೊಸ ಪ್ರಬಲ ಅಸ್ತ್ರಕ್ಕೆ ಸಜ್ಜಾಗಿದ್ದಾರೆ. ಸರ್ವಪಕ್ಷಗಳ ಸಮ್ಮತಿಯ ಗ್ರಹಾಂ ಬ್ಲೂಮೆಂಥಲ್ ಸ್ಯಾಂಕ್ಷನ್ಸ್ ಬಿಲ್​ಗೆ (Graham Blumenthal sanctions bill) ಅನುಮೋದನೆ ಪಡೆಯಲು ನಿಂತಿದ್ದಾರೆ. ರಷ್ಯಾವನ್ನು ಪೂರ್ಣವಾಗಿ ನಿಷೇಧಿಸಲು ಅನುವು ಮಾಡಿಕೊಡುವ ಈ ಮಸೂದೆಯು ಕಾಯ್ದೆಯಾಗಿ ಜಾರಿಗೆ ಬಂದಿದ್ದೇ ಆದಲ್ಲಿ ಭಾರತ ಮತ್ತಿತರ ಕೆಲ ದೇಶಗಳು ಅಮೆರಿಕವನ್ನು ಪೂರ್ಣವಾಗಿ ಎದಿರುಹಾಕಿಕೊಳ್ಳಬೇಕಾಗುತ್ತದೆ. ರಿಪಬ್ಲಿಕನ್ ಸಂಸದರಾದ ಲಿಂಡ್ಸೇ ಗ್ರಹಾಂ ರೂಪಿಸಿರುವ ಈ ಮಸೂದೆಯು ಅಮೆರಿಕ ಅಧ್ಯಕ್ಷರಿಗೆ ಕೆಲ ವಿಶೇಷಾಧಿಕಾರ ಒದಗಿಸುತ್ತದೆ. ರಷ್ಯಾದ…

Read More

ಸಂಜೆಯಾದರೆ ರಸ್ತೆಗಿಳಿಯುವ ಈ ಒಂಟಿ ಸಲಗಕ್ಕೆ ವಾಹನಗಳೇ ಟಾರ್ಗೆಟ್​​: ಅಟ್ಟಾಡಿಸಿ ಅಟ್ಯಾಕ್​

ಚಾಮರಾಜನಗರ, ಮೇ 21: ಜಿಲ್ಲೆಯ ತಮಿಳುನಾಡಿನ ಗಡಿ ತಾಳವಾಡಿಯ ಮರೂರು ಬಳಿ ಸಂಜೆಯಾದರೆ ಒಂಟಿ ಸಲಗ ರಸ್ತೆಗಿಳಿಯುತ್ತಿದ್ದು, ಗ್ರಾಮಸ್ಥರು ಆತಂಕದಲ್ಲಿಯೇ ದಿನ ದೂಡುವಂತಾಗಿದೆ. ವಾಹನಗಳು ಬಂದರೆ ಈ ಆನೆ ಅಟ್ಟಾಡಿಸುವ ಕಾರಣ ಸಂಜೆ ವೇಳೆ ರಸ್ತೆಯಲ್ಲಿ ಸಂಚರಿಸಲೂ ವಾಹನ ಸವಾರರು ಭಯಪಡಬೇಕಾದ ಸ್ಥಿತಿ ಉದ್ಭವಿಸಿದೆ. ಬೆಳಗಿನ ವೇಳೆ ಜಮೀನುಗಳತ್ತ ಲಗ್ಗೆ ಇಡುತ್ತಿದ್ದ ಕಾಡಾನೆಗಳು ಇದೀಗ ಗ್ರಾಮಗಳ ಸುತ್ತಮುತ್ತವೇ ಸಂಚಾರ ನಡೆಸುತ್ತಿರೋದು ಆತಂಕ ಹೆಚ್ಚಿಸಿದೆ. ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ. Source link

Read More