Headlines

ಸೈಟ್ ಒತ್ತುವರಿ ಪ್ರಕರಣ: ನ್ಯಾಯಾಲಯದಲ್ಲಿ ಯಶ್ ತಾಯಿಗೆ ಹಿನ್ನಡೆ

ನಟ ಯಶ್ (Yash) ಅವರ ತಾಯಿ ಅವರಿಗೆ ಸೇರಿದ್ದು ಎನ್ನಲಾಗಿದ್ದ ಸೈಟಿಗೆ ಕಟ್ಟಲಾಗಿದ್ದ ಕಾಂಪೌಂಡ್ ಅನ್ನು ಒಡೆದುಹಾಕಿದ್ದು ಇತ್ತೀಚೆಗೆ ಸುದ್ದಿ ಆಗಿತ್ತು. ಹಾಸನದಲ್ಲಿ ಯಶ್ ಅವರ ತಾಯಿ ಪುಷ್ಪ ಅವರಿಗೆ ಸೇರಿದ ಮನೆಗೆ ಹೊಂದಿಕೊಂಡಂತೆ 125*45 ಅಳತೆಯ ಸೈಟಿಗೆ ಪುಷ್ಪ ಅವರು ಕಾಂಪೌಂಡ್ ಹಾಕಿದ್ದರು. ಆ ಕಾಂಪೌಂಡ್ ಅನ್ನು ದೇವರಾಜು ಎಂಬುವರು ಜೆಸಿಬಿ ಬಳಸಿ ಒಡೆದು ಹಾಕಿದ್ದರು. ಆದರೆ ಇದನ್ನು ಯಶ್ ತಾಯಿ ಖಂಡಿಸಿ ಪೊಲೀಸ್ ಠಾಣೆಗೆ ಭೇಟಿ ನೀಡಿ ದೂರು ಸಹ ನೀಡಿದ್ದರು. ವಕೀಲರ ಸಹಾಯದಿಂದ…

Read More

ಸಿಎಂ ಉದ್ಘಾಟಿಸಿದ್ರೂ ಬಳಕೆಯಾಗದ ಐದಂತಸ್ತಿನ ಭವನ: ಮಾದಪ್ಪನ ಭಕ್ತರ ಪಾಡು ಕೇಳೋರ್‍ಯಾರು? – Kannada News | Male Mahadeshwara: Vajramale Building Ready, But Devotees Still Await Accommodation

ಚಾಮರಾಜನಗರ, ಫೆಬ್ರವರಿ 27: ಮಾದಪ್ಪನ ಭಕ್ತರು ಕೋಟ್ಯಂತರ ಸಂಖ್ಯೆಯಲ್ಲಿದ್ದಾರೆ. ಹಬ್ಬ, ಹರಿದಿನ ಸೇರಿದಂತೆ ಅಮವಾಸ್ಯೆ ಬಂದರೆ ಮಲೆ ಮಹದೇಶ್ವರ ಬೆಟ್ಟದಲ್ಲಿ (Male Mahadeshwara Betta) ಕಾಲಿಡಲು ಸ್ಥಳ ಇರುವುದಿಲ್ಲ. ತಂಗುವುದಕ್ಕೂ ಸ್ಥಳವಿರಲ್ಲ. ಈ ಸಮಸ್ಯೆ ಬಗೆ ಹರಿಸುವುದಕ್ಕೆ ಪ್ರಾಧಿಕಾರ ಮುಂದಾಗಿದೆ. 376 ಕೊಠಡಿಯ ವಜ್ರ ಮಲೆ ಕಟ್ಟಡ ಉದ್ಘಾಟಿಸಲಾಗಿದೆ. ಆದರೂ ಪ್ರಯೋಜನಕ್ಕೆ ಬಾರದ ರೀತಿಯಂತಾಗಿದೆ. ಪ್ರಾಧಿಕಾರದ ವಿಳಂಬ ನಡೆಗೆ ಭಕ್ತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಏಳು ಎಪ್ಪತ್ತೇಳು ಮಲೆಯ ಒಡೆಯ ಮಲೆ ಮಾದಪ್ಪನಿಗೆ ಭಕ್ತ ವೃಂದ ಅಪಾರ. ರಾಜ್ಯ…

Read More

ಪೋಕ್ಸೋ ಪ್ರಕರಣಗಳನ್ನು ತಕ್ಷಣ ವರದಿ ಮಾಡಬೇಕು; ಖಾಸಗಿ ಆಸ್ಪತ್ರೆಗಳಿಗೆ ಕಟ್ಟುನಿಟ್ಟಿನ ಸೂಚನೆ!

ಬೆಂಗಳೂರು, ಏಪ್ರಿಲ್ 04: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಖಾಸಗಿ ಆಸ್ಪತ್ರೆಗಳಿಗಾಗಿ ಮಹತ್ವದ ನಿರ್ದೇಶನ ಹೊರಡಿಸಿದೆ. ಮಕ್ಕಳ ಲೈಂಗಿಕ ದೌರ್ಜನ್ಯ ಪ್ರಕರಣಗಳಿಗೆ ಸಂಬಂಧಿಸಿದಂತೆ, ಪೋಕ್ಸೋ ಕಾಯ್ದೆ 2012ರಡಿ (POCSO Act) ಕಡ್ಡಾಯವಾಗಿ ವರದಿ ಸಲ್ಲಿಸುವಂತೆ ಎಲ್ಲಾ ಖಾಸಗಿ ಆಸ್ಪತ್ರೆಗಳಿಗೆ ಸೂಚಿಸಲಾಗಿದೆ. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ಪತ್ತೆಯಾದಾಗ ಖಾಸಗಿ ಆಸ್ಪತ್ರೆಗಳು ತಕ್ಷಣವೇ ಪೊಲೀಸ್ ಇಲಾಖೆ ಅಥವಾ ವಿಶೇಷ ಕಿಶೋರ ಪೊಲೀಸ್ ಘಟಕಕ್ಕೆ ಮಾಹಿತಿ ನೀಡಬೇಕು ಎಂದು ಇಲಾಖೆಯು ಸ್ಪಷ್ಟಪಡಿಸಿದೆ. ಸಾಮಾನ್ಯವಾಗಿ ಇಂತಹ ಪ್ರಕರಣಗಳು ಆಸ್ಪತ್ರೆಗಳಿಗೆ…

Read More

National Technology Day 2026: ದೇಶದ ಸುಸ್ಥಿರ ಅಭಿವೃದ್ಧಿಯಲ್ಲಿ ತಂತ್ರಜ್ಞಾನದ ಪಾತ್ರ ಅಪಾರ – Kannada News | National Technology Day 2026: Why is National Technology Day celebrated? Here is the information

ರಾಷ್ಟ್ರೀಯ ತಂತ್ರಜ್ಞಾನ ದಿನImage Credit source: Pinterest ನಮ್ಮ ದೈನಂದಿನ ಜೀವನದಿಂದ ಹಿಡಿದು, ಕೃಷಿ, ಸಾರಿಗೆ, ಸಂಪರ್ಕ, ಆರೋಗ್ಯ, ದೇಶ ರಕ್ಷಣೆ ಕೈಗಾರಿಗೆ, ಶಿಕ್ಷಣದ ವರೆಗೆ ಪ್ರತಿಯೊಂದು ಕ್ಷೇತ್ರದಲ್ಲೂ ತಂತ್ರಜ್ಞಾನ  (Technology)ಬಹು ಮುಖ್ಯ ಪಾತ್ರವನ್ನು ವಹಿಸುತ್ತಿದೆ. ಅಲ್ಲದೆ ತಂತ್ರಜ್ಞಾನ ನಮ್ಮ ಬದುಕಿನಲ್ಲಿ ಹಲವು ಸೌಲಭ್ಯಗಳನ್ನು ಒದಗಿಸಿದೆ. ಹೀಗೆ ಕೃಷಿ, ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಗಳನ್ನು ಸುಧಾರಣೆ ಮಾಡುತ್ತಾ ದೇಶದ ಅಭಿವೃದ್ಧಿಗೆ ತಂತ್ರಜ್ಞಾನ ಅಪಾಯ ಕೊಡುಗೆಯನ್ನು ನೀಡುತ್ತಾ ಬಂದಿದೆ. ತಂತ್ರಜ್ಞಾನ ಕ್ಷೇತ್ರದ ಈ ಕೊಡುಗೆಗಳನ್ನು ಸ್ಮರಿಸಲು ವಿಜ್ಞಾನಿಗಳು, ಎಂಜಿನಿಯರ್‌ಗಳು…

Read More

TV9 Kannada News Live: ರಾಜ್ಯದಲ್ಲಿ SIR ವಿರೋಧಿ ಸಂಘಟನೆಗಳ ಜೊತೆ ಸಿಎಂ ಮೀಟಿಂಗ್‌! ಇಲ್ಲಿದೆ ಈ ಹೊತ್ತಿನ ಪ್ರಮುಖ ಸುದ್ದಿಗಳು – Kannada News | TV9 Kannada News Live: CM Siddaramaiah Meets Progressive Groups Over SIR Row; NCRB Ranks Bengaluru 3rd in Crimes Against Women

ಬೆಂಗಳೂರು, ಮೇ 08: ಕೇಂದ್ರದ ಎಸ್‌ಐಆರ್ (SIR) ಜಾರಿ ವಿಚಾರದಲ್ಲಿ ತೀವ್ರ ವಿರೋಧ ವ್ಯಕ್ತವಾಗಿರುವ ಹಿನ್ನೆಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಪ್ರಗತಿಪರ ಸಂಘಟನೆಗಳ ಮುಖಂಡರೊಂದಿಗೆ ತುರ್ತು ಸಭೆ ನಡೆಸುತ್ತಿದ್ದಾರೆ. ಅದಲ್ಲದೆ ಸಿಲಿಕಾನ್ ಸಿಟಿಯಲ್ಲಿ ಮಹಿಳಾ ಸುರಕ್ಷತೆಯ ಪ್ರಶ್ನೆ ಮತ್ತೆ ಎದ್ದಿದ್ದು, ಎನ್‌ಸಿಆರ್‌ಬಿ (NCRB) ಬಿಡುಗಡೆ ಮಾಡಿರುವ 2024ರ ವರದಿಯ ಪ್ರಕಾರ, ಮಹಿಳೆಯರ ವಿರುದ್ಧದ ಅಪರಾಧಗಳಲ್ಲಿ ಬೆಂಗಳೂರು 3ನೇ ಸ್ಥಾನದಲ್ಲಿದೆ. ಇನ್ನೊಂದೆಡೆ ಪಶ್ಚಿಮ ಬಂಗಾಳದ ಹತ್ಯೆ ಪ್ರಕರಣದ ತನಿಖೆ ದಿಗಿಲು ಹುಟ್ಟಿಸಿದೆ. ಮುಖ್ಯಾಂಶಗಳು ಎಸ್‌ಐಆರ್…

Read More

Bankra Masjid: ಕೋಲ್ಕತ್ತಾ ಏರ್​ಪೋರ್ಟ್ ಆವರಣದಿಂದ ಶತಮಾನದ ಹಳೆಯ ಬಾಂಕ್ರಾ ಮಸೀದಿಯ ಸ್ಥಳಾಂತರಕ್ಕೆ ನಿರ್ಧಾರ – Kannada News | Kolkata Airport Security: Bankra Mosque Relocation for Enhanced Flight Safety

ಕೋಲ್ಕತ್ತಾ, ಜೂನ್ 14: ಭದ್ರತೆ ಹಾಗೂ ವಿಮಾನಯಾನ ಸುರಕ್ಷತೆಯ ದೃಷ್ಟಿಯಿಂದ ಕೋಲ್ಕತ್ತಾದ ನೇತಾಜಿ ಸುಭಾಷ್ ಚಂದ್ರಬೋಸ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ರನ್‌ವೇ ಬಳಿ ಇರುವ 136 ವರ್ಷ ಹಳೆಯ ‘ಬಾಂಕ್ರಾ ಮಸೀದಿ’ಯನ್ನು (ಗೌರಿಪುರ ಜಾಮೆ ಮಸೀದಿ) ಸ್ಥಳಾಂತರಿಸುವ ಮೂರು ದಶಕಗಳ ಹಳೆಯ ಪ್ರಸ್ತಾವನೆಗೆ ಇದೀಗ ಮರುಜೀವ ಬಂದಿದೆ. ಕೇಂದ್ರ ಸರ್ಕಾರ ಮತ್ತು ಪಶ್ಚಿಮ ಬಂಗಾಳ ರಾಜ್ಯ ಸರ್ಕಾರಗಳು ಒಮ್ಮತಕ್ಕೆ ಬಂದಿದ್ದು, ಮಸೀದಿಯನ್ನು ಸುರಕ್ಷಿತವಾಗಿ ಬೇರೆಡೆಗೆ ಸ್ಥಳಾಂತರಿಸಲು ಜಂಟಿ ಮಾತುಕತೆಗಳು ಚುರುಕುಗೊಂಡಿವೆ. ಏನಿದು ಬಾಂಕ್ರಾ ಮಸೀದಿ ಸ್ಥಳಾಂತರ ಸಮಸ್ಯೆ?…

Read More

ಸುಬ್ರಹ್ಮಣ್ಯಕ್ಕೆ ಹೋಗುವ ಭಕ್ತರ ಗಮನಕ್ಕೆ: ಬೆಂಗಳೂರು – ಮಂಗಳೂರು ರೈಲು ಸಂಚಾರದಲ್ಲಿ ಮಹತ್ವದ ಬದಲಾವಣೆ

ಮಂಗಳೂರು, ಮಾರ್ಚ್ 19: ನೈಋತ್ಯ ರೈಲ್ವೆಯಲ್ಲಿ ಭಾರೀ ಬದಲಾವಣೆಯನ್ನು ಇಲಾಖೆ ತಂದಿದೆ. ತುರ್ತು ಹಳಿ ನಿರ್ವಹಣಾ ಕಾರ್ಯ ನಿಗದಿಯಾಗಿರುವುದರಿಂದ, ಮಂಗಳೂರು ಮತ್ತು ಸುಬ್ರಹ್ಮಣ್ಯ ನಡುವೆ ಕಾರ್ಯನಿರ್ವಹಿಸುವ ಪ್ರಯಾಣಿಕ ರೈಲು ಸೇವೆಗಳಲ್ಲಿ ಗಮನಾರ್ಹ ಬದಲಾವಣೆಗಳನ್ನು ಮಾಡಲಾಗಿದೆ. ಮಂಗಳೂರು ಸೆಂಟ್ರಲ್ ಮತ್ತು ಸುಬ್ರಹ್ಮಣ್ಯ ಮಾರ್ಗವಾಗಿ ಸಂಚಾರಿಸುವ ಪ್ಯಾಸೆಂಜರ್ ರೈಲುಗಳನ್ನು ಒಟ್ಟು 35 ದಿನಗಳವರೆಗೆ ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ. ರೈಲು ಸಂಖ್ಯೆ 56629 (ಮಂಗಳೂರು – ಸುಬ್ರಹ್ಮಣ್ಯ ರಸ್ತೆ ಪ್ಯಾಸೆಂಜರ್) ಮತ್ತು ರೈಲು ಸಂಖ್ಯೆ 56630 (ಸುಬ್ರಹ್ಮಣ್ಯ ರಸ್ತೆ – ಮಂಗಳೂರು ಪ್ಯಾಸೆಂಜರ್)…

Read More

ಗೋಕರ್ಣದ ಮಹಾಬಲೇಶ್ವರ ದೇಗುಲದಲ್ಲಿ ಆತ್ಮಲಿಂಗವನ್ನೇ ಮುಳುಗಿಸಿದ ಕೊಳಚೆ ನೀರು – Kannada News

ಕಾರವಾರ, ಜೂನ್ 9: ಭಾರೀ ಮಳೆಯಿಂದಾಗಿ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದಲ್ಲಿರುವ ಐತಿಹಾಸಿಕ ಮಹಾಬಲೇಶ್ವರ ದೇಗುಲದಲ್ಲಿ ಕೊಳಚೆ ನೀರು ತುಂಬಿಕೊಂಡಿದೆ. ದೇಗುಲದ ಗರ್ಭಗುಡಿಯಲ್ಲಿರುವ ಮಹಾಬಲೇಶ್ವರನ ಆತ್ಮಲಿಂಗ ಕೂಡ ಸಂಪೂರ್ಣವಾಗಿ ಕೊಳಚೆ ನೀರಿನಲ್ಲಿ ಮುಳುಗಿದೆ. ಇದು ಭಕ್ತರಲ್ಲಿ ತೀವ್ರ ಆತಂಕ ಹಾಗೂ ಅಸಮಾಧಾನಕ್ಕೆ ಕಾರಣವಾಗಿದೆ. ದೇಗುಲದ ಅಕ್ಕಪಕ್ಕದ ಶೌಚಾಲಯಗಳು ಮತ್ತು ಇತರೆ ಭಾಗಗಳಿಂದ ಕೊಳಚೆ ನೀರು ಗರ್ಭಗುಡಿಗೆ ನುಗ್ಗಿದೆ. ಮಹಾಬಲೇಶ್ವರ ದೇಗುಲದ ಗರ್ಭಗುಡಿಗೆ ಕೊಳಚೆ ನೀರು ನುಗ್ಗುತ್ತಿರುವುದು ಇದೇನು ಮೊದಲ ಸಲವಲ್ಲ. ಈ ಹಿಂದೆ ಕೂಡ…

Read More