KIMS Recruitment 2026: ಕಿಮ್ಸ್ ಆಸ್ಪತ್ರೆಯಲ್ಲಿ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ; ನಾಳೆ ಅರ್ಜಿ ಸಲ್ಲಿಕೆಗೆ ಕೊನೆಯ ದಿನ – Kannada News | KIMS Bengaluru Recruitment 2026: 27 Technical and Clerk Jobs – Apply Now!

ಕಿಮ್ಸ್ ಆಸ್ಪತ್ರೆಯಲ್ಲಿ ಉದ್ಯೋಗವಕಾಶ

ಬೆಂಗಳೂರು: ರಾಜಧಾನಿ ಬೆಂಗಳೂರಿನ ವಿ.ವಿ.ಪುರಂನಲ್ಲಿರುವ ‘ಕೆಂಪೇಗೌಡ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ’ (KIMSH) ಅರ್ಹ ಅಭ್ಯರ್ಥಿಗಳಿಂದ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ. ರಾಜ್ಯ ಒಕ್ಕಲಿಗರ ಸಂಘದ ಆಡಳಿತಕ್ಕೊಳಪಟ್ಟ ಈ ಆಸ್ಪತ್ರೆಯಲ್ಲಿ ಖಾಲಿ ಇರುವ ಒಟ್ಟು 27 ತಾಂತ್ರಿಕ ಹಾಗೂ ಕ್ಲರ್ಕ್ ಹುದ್ದೆಗಳನ್ನು ನೇರ ಸಂದರ್ಶನದ ಮೂಲಕ ಭರ್ತಿ ಮಾಡಿಕೊಳ್ಳಲಾಗುತ್ತಿದೆ. ವಿವಿಧ ವಿಭಾಗಗಳಲ್ಲಿ ಖಾಲಿ ಇರುವ ಹುದ್ದೆಗಳು, ಅಗತ್ಯ ಶೈಕ್ಷಣಿಕ ಅರ್ಹತೆ ಮತ್ತು ಅರ್ಜಿ ಸಲ್ಲಿಕೆಯ ಸಂಪೂರ್ಣ ವಿವರ ಇಲ್ಲಿದೆ.

ಖಾಲಿ ಇರುವ ಹುದ್ದೆಗಳು ಮತ್ತು ಅರ್ಹತೆಗಳು:

  • ಇಸಿಜಿ ಟೆಕ್ನಿಷಿಯನ್ (01 ಹುದ್ದೆ): B.Sc Echo/Cardiology ಪೂರ್ಣಗೊಳಿಸಿರಬೇಕು.
  • ಬೆಡ್ ಸೈಡ್ ಲ್ಯಾಬ್ ಟೆಕ್ನಿಷಿಯನ್ (08 ಹುದ್ದೆಗಳು): B.Sc ಅಥವಾ M.Sc ಲ್ಯಾಬ್ ಟೆಕ್ನಿಷಿಯನ್ ಅರ್ಹತೆ ಹೊಂದಿರಬೇಕು.
  • ಮ್ಯಾನಿಫೋಲ್ಡ್ ಆಪರೇಟರ್ಸ್ (04 ಹುದ್ದೆಗಳು): ಮ್ಯಾನಿಫೋಲ್ಡ್ ಆಪರೇಟರ್ ಸರ್ಟಿಫಿಕೇಟ್ ಕೋರ್ಸ್ ಮುಗಿಸಿರಬೇಕು.
  • ಇಇಜಿ/ಇಎನ್ಎಮ್‌ಜಿ ಟೆಕ್ನಿಷಿಯನ್ (01 ಹುದ್ದೆ): B.Sc EEG Technician/ Neurophysiology ಅರ್ಹತೆ ಹೊಂದಿರಬೇಕು.
  • ಒಟಿ / ಅನೆಸ್ಥೇಷಿಯಾ ಟೆಕ್ನಿಷಿಯನ್ (04 ಹುದ್ದೆಗಳು): B.Sc OT Technician ಓದಿರಬೇಕು.
  • ಕೋಡಿಂಗ್ ಕ್ಲರ್ಕ್ (03 ಹುದ್ದೆಗಳು): ಮೆಡಿಕಲ್ ಕೋಡಿಂಗ್‌ನಲ್ಲಿ 5 ವರ್ಷಗಳ ಅನುಭವದೊಂದಿಗೆ ಡಿಪ್ಲೊಮಾ ಹೊಂದಿರಬೇಕು.
  • ರೆಕಾರ್ಡ್ ಕ್ಲರ್ಕ್ (06 ಹುದ್ದೆಗಳು): ಮೆಡಿಕಲ್ ರೆಕಾರ್ಡ್ ಮ್ಯಾನೇಜ್‌ಮೆಂಟ್‌ನಲ್ಲಿ 5 ವರ್ಷಗಳ ಅನುಭವದೊಂದಿಗೆ ಪದವಿ (Degree) ಹೊಂದಿರಬೇಕು.

ವಯೋಮಿತಿ ಮತ್ತು ಆಯ್ಕೆ ಪ್ರಕ್ರಿಯೆ:

ಮ್ಯಾನಿಫೋಲ್ಡ್ ಆಪರೇಟರ್ ಹುದ್ದೆಯನ್ನು ಹೊರತುಪಡಿಸಿ, ಉಳಿದ ಎಲ್ಲಾ ಹುದ್ದೆಗಳಿಗೆ ಅಭ್ಯರ್ಥಿಗಳ ವಯಸ್ಸು 22 ರಿಂದ 30 ವರ್ಷಗಳ ಒಳಗಿರಬೇಕು. ಅಭ್ಯರ್ಥಿಗಳು ಸಲ್ಲಿಸಿದ ಅರ್ಜಿಗಳನ್ನು ಪರಿಶೀಲಿಸಿ, ಅರ್ಹರಾದವರಿಗೆ ದೂರವಾಣಿ ಅಥವಾ ಇ-ಮೇಲ್ ಮುಖಾಂತರ ಸಂದರ್ಶನದ (Interview) ದಿನಾಂಕ ಮತ್ತು ಸಮಯವನ್ನು ತಿಳಿಸಲಾಗುವುದು.

ಇದನ್ನೂ ಓದಿ: ಇಸ್ರೋದಲ್ಲಿ 460 ಅಪ್ರೆಂಟಿಸ್ ಹುದ್ದೆಗಳ ಭರ್ತಿ; ಲಿಖಿತ ಪರೀಕ್ಷೆಯಿಲ್ಲದೆ ನೇರ ಆಯ್ಕೆ!

ಅರ್ಜಿ ಸಲ್ಲಿಸುವ ವಿವರಗಳು:

ಆಸಕ್ತ ಅಭ್ಯರ್ಥಿಗಳು ತಮ್ಮ ಬಯೋಡೇಟಾ ಮತ್ತು ಎಲ್ಲಾ ಅಗತ್ಯ ಶೈಕ್ಷಣಿಕ/ಅನುಭವ ಪ್ರಮಾಣಪತ್ರಗಳ ದೃಢೀಕರಿಸಿದ ನಕಲು ಪ್ರತಿಗಳನ್ನು (Attested Copies) ಭರ್ತಿ ಮಾಡಿ ನೇರವಾಗಿ ಜುಲೈ 22ರಂದು ಸಂಜೆ 05:00 ಗಂಟೆಯೊಳಗೆ ಕಿಮ್ಸ್ ಆಸ್ಪತ್ರೆಯ ಆಡಳಿತ ಕಚೇರಿಗೆ ತಲುಪಿಸಬೇಕಾಗುತ್ತದೆ.

ಅರ್ಜಿ ಸಲ್ಲಿಸಬೇಕಾದ ವಿಳಾಸ:

ಆಡಳಿತ ಕಚೇರಿ, ಕೆಂಪೇಗೌಡ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ (KIMSH), ಕೆ.ಆರ್. ರಸ್ತೆ, ವಿ.ವಿ.ಪುರಂ, ಬೆಂಗಳೂರು – 560 004.

ಉದ್ಯೋಗಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On – 1:08 pm, Tue, 21 July 26

Source link

Karnataka Dam Water Level: ಆಲಮಟ್ಟಿಗೆ ಹರಿದುಬಂತು ಭಾರಿ ನೀರು, ಕಾವೇರಿ-ಕೃಷ್ಣಾ ಕೊಳ್ಳದ ಪ್ರಮುಖ ಡ್ಯಾಂಗಳಲ್ಲಿನ ಸ್ಥಿತಿಗತಿ ಇಲ್ಲಿದೆ! – Kannada News | Karnataka dam water level today almatti inflow surges to 46000 cusecs krs kabini tb hemavathi status

ಬೆಂಗಳೂರು, ಜುಲೈ 21: ರಾಜ್ಯದಾದ್ಯಂತ ಮಳೆಯ ವಾತಾವರಣ ಮುಂದುವರಿದಿದ್ದು, ಪ್ರಮುಖ ಜಲಾಶಯಗಳಿಗೆ ನೀರಿನ ಹರಿವು ಏರಿಕೆಯಾಗುತ್ತಿದೆ. ಕೃಷ್ಣಾ ನದಿ ಕೊಳ್ಳದ ಆಲಮಟ್ಟಿ ಜಲಾಶಯಕ್ಕೆ ಭಾರಿ ಪ್ರಮಾಣದ ನೀರು ಹರಿದುಬರುತ್ತಿದ್ದರೆ, ಕಾವೇರಿ ಹಾಗೂ ತುಂಗಭದ್ರಾ ಕೊಳ್ಳದ ಜಲಾಶಯಗಳಲ್ಲಿ ನೀರಿನ ಮಟ್ಟ ಕ್ರಮೇಣ ಸ್ಥಿರಗೊಳ್ಳುತ್ತಿದೆ. ಜುಲೈ 21ರ ಬೆಳಗಿನ ಅಂಕಿ-ಅಂಶಗಳ ಪ್ರಕಾರ ರಾಜ್ಯದ ಪ್ರಮುಖ 5 ಜಲಾಶಯಗಳ ನೀರಿನ ಮಟ್ಟ ಮತ್ತು ಸಂಗ್ರಹ ವಿವರ ಹೀಗಿದೆ.

1. ಆಲಮಟ್ಟಿ ಜಲಾಶಯ (ಲಾಲ್ ಬಹಾದ್ದೂರ್ ಶಾಸ್ತ್ರೀ ಸಾಗರ)

ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿ ಬಳಿ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಜಲಾಶಯಕ್ಕೆ ಒಳಹರಿವು ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ.

  • ಗರಿಷ್ಠ ಮಟ್ಟ: 519.60 ಮೀಟರ್
  • ಇಂದಿನ ನೀರಿನ ಮಟ್ಟ: 517.97 ಮೀಟರ್
  • ಒಳಹರಿವು: 46,848 ಕ್ಯೂಸೆಕ್
  • ಹೊರಹರಿವು: 16,351 ಕ್ಯೂಸೆಕ್

2. ಕೆ.ಆರ್.ಎಸ್. ಜಲಾಶಯ (ಕೃಷ್ಣರಾಜಸಾಗರ)

ಮಂಡ್ಯ ಜಿಲ್ಲೆಯಲ್ಲಿರುವ ಕಾವೇರಿ ನದಿಯ ಜೀವನಾಡಿ ಕೆಆರ್‌ಎಸ್ ಅಣೆಕಟ್ಟಿನಲ್ಲಿ ನೀರು ಕಾಯ್ದುಕೊಳ್ಳಲಾಗುತ್ತಿದ್ದು, ಸದ್ಯದ ಮಟ್ಟಿಗೆ ಹರಿವು ಸಾಧಾರಣವಾಗಿದೆ.

  • ಗರಿಷ್ಠ ಮಟ್ಟ: 124.80 ಅಡಿ
  • ಇಂದಿನ ನೀರಿನ ಮಟ್ಟ: 92.38 ಅಡಿ
  • ಒಳಹರಿವು: 775 ಕ್ಯೂಸೆಕ್
  • ಹೊರಹರಿವು: 2,391 ಕ್ಯೂಸೆಕ್
  • ಒಟ್ಟು ಸಂಗ್ರಹ ಸಾಮರ್ಥ್ಯ: 49.452 ಟಿಎಂಸಿ
  • ಇಂದಿನ ಸಂಗ್ರಹ: 17.407 ಟಿಎಂಸಿ

3. ಕಬಿನಿ ಜಲಾಶಯ

ಮೈಸೂರು ಜಿಲ್ಲೆಯ ಹೆಚ್.ಡಿ. ಕೋಟೆ ತಾಲೂಕಿನಲ್ಲಿರುವ ಕಬಿನಿ ಜಲಾಶಯದ ಕೊಳ್ಳದಲ್ಲಿ ಕಳೆದ 24 ಗಂಟೆಗಳಲ್ಲಿ 15 ಮಿ.ಮೀ. ಮಳೆ ದಾಖಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಜಲಾಶಯದಲ್ಲಿ ನೀರಿನ ಸಂಗ್ರಹ ಪ್ರಮಾಣ ಕೊಂಚ ಕಡಿಮೆಯಿದೆ.

  • ಇಂದಿನ ನೀರಿನ ಮಟ್ಟ: 72.23 ಅಡಿ (ಕಳೆದ ವರ್ಷ: 83.68 ಅಡಿ)
  • ಇಂದಿನ ಸಂಗ್ರಹ: 12.80 ಟಿಎಂಸಿ (ಕಳೆದ ವರ್ಷ: 19.30 ಟಿಎಂಸಿ)
  • ಒಳಹರಿವು: 3,330 ಕ್ಯೂಸೆಕ್ (ಕಳೆದ ವರ್ಷ: 12,796 ಕ್ಯೂಸೆಕ್)
  • ನದಿಗೆ ಹೊರಹರಿವು: 500 ಕ್ಯೂಸೆಕ್ (ಕಳೆದ ವರ್ಷ: 10,042 ಕ್ಯೂಸೆಕ್)

4. ತುಂಗಭದ್ರಾ ಜಲಾಶಯ

ವಿಜಯನಗರ (ಹೊಸಪೇಟೆ) ವ್ಯಾಪ್ತಿಯ ತುಂಗಭದ್ರಾ ಜಲಾಶಯದಲ್ಲೂ ಒಳಹರಿವು ಮುಂದುವರಿದಿದೆ. ಕಳೆದ 10 ವರ್ಷಗಳ ಸರಾಸರಿಗೆ ಹೋಲಿಸಿದರೆ ಪ್ರಸ್ತುತ ಸಂಗ್ರಹ ಸಾಧಾರಣ ಮಟ್ಟದಲ್ಲಿದೆ.

  • ಗರಿಷ್ಠ ಮಟ್ಟ: 1633.00 ಅಡಿ
  • ಇಂದಿನ ನೀರಿನ ಮಟ್ಟ: 1603.10 ಅಡಿ (ಕಳೆದ ವರ್ಷ: 1625.96 ಅಡಿ)
  • ಒಟ್ಟು ಸಂಗ್ರಹ ಸಾಮರ್ಥ್ಯ: 105.788 ಟಿಎಂಸಿ
  • ಇಂದಿನ ಸಂಗ್ರಹ: 25.796 ಟಿಎಂಸಿ (ಕಳೆದ ವರ್ಷ: 79.665 ಟಿಎಂಸಿ)
  • ಸರಾಸರಿ ಒಳಹರಿವು (24 ಗಂಟೆ): 3,667 ಕ್ಯೂಸೆಕ್
  • ಒಳಹರಿವು: 4,100 ಕ್ಯೂಸೆಕ್
  • ಹೊರಹರಿವು : 3,254 ಕ್ಯೂಸೆಕ್

5. ಹೇಮಾವತಿ ಜಲಾಶಯ (ಗೊರೂರು)

ಹಾಸನ ಜಿಲ್ಲೆಯ ಗೊರೂರಿನಲ್ಲಿರುವ ಹೇಮಾವತಿ ಜಲಾಶಯದಲ್ಲಿ ನೀರಿನ ಸಂಗ್ರಹ ಉತ್ತಮವಾಗಿದ್ದು, ಕಳೆದ ವರ್ಷದ ಹೋಲಿಕೆಯಲ್ಲಿ ಸಮತೋಲನ ಕಾಯ್ದುಕೊಂಡಿದೆ.

  • ಗರಿಷ್ಠ ಮಟ್ಟ: 2922.00 ಅಡಿ
  • ಇಂದಿನ ನೀರಿನ ಮಟ್ಟ: 2904.45 ಅಡಿ (ಕಳೆದ ವರ್ಷ: 2921.00 ಅಡಿ)
  • ಒಟ್ಟು ಸಾಮರ್ಥ್ಯ: 37.103 ಟಿಎಂಸಿ
  • ಇಂದಿನ ಸಂಗ್ರಹ: 22.685 ಟಿಎಂಸಿ (ಕಳೆದ ವರ್ಷ: 36.137 ಟಿಎಂಸಿ)
  • ಒಳಹರಿವು: 1,399 ಕ್ಯೂಸೆಕ್ (ಕಳೆದ ವರ್ಷ: 6,828 ಕ್ಯೂಸೆಕ್)
  • ಒಟ್ಟು ಹೊರಹರಿವು: 300 ಕ್ಯೂಸೆಕ್ (ಕಳೆದ ವರ್ಷ: 6,765 ಕ್ಯೂಸೆಕ್)

ಕೃಷ್ಣಾ ನದಿ ಕೊಳ್ಳದ ಉತ್ತರ ಕರ್ನಾಟಕ ಭಾಗದಲ್ಲಿ ಆಲಮಟ್ಟಿಗೆ ಭಾರಿ ಒಳಹರಿವು ದಾಖಲಾಗಿರುವುದು ರೈತರಲ್ಲಿ ಮತ್ತು ಸಾರ್ವಜನಿಕರಲ್ಲಿ ಸಂತಸ ಮೂಡಿಸಿದೆ. ಇತ್ತ ದಕ್ಷಿಣ ಒಳನಾಡಿನ ಕಾವೇರಿ ಕೊಳ್ಳದ ಜಲಾಶಯಗಳಾದ ಕೆಆರ್‌ಎಸ್, ಕಬಿನಿ ಹಾಗೂ ಹೇಮಾವತಿಯಲ್ಲಿ ಮಲೆನಾಡು ಭಾಗದ ಮಳೆಯನ್ನು ಆಧರಿಸಿ ಮುಂಬರುವ ದಿನಗಳಲ್ಲಿ ಒಳಹರಿವು ಇನ್ನಷ್ಟು ಹೆಚ್ಚುವ ನಿರೀಕ್ಷೆಯಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಒಂದು ರೈಲಿನಿಂದ ಇಳಿದು ಹಳಿ ದಾಟಲು ಹೋದಾಗ ಎದುರಿನಿಂದ ಬಂದೇ ಬಿಡ್ತು ಮತ್ತೊಂದು ರೈಲು – Kannada News | Vasai Road: Man Trapped Between Two Trains Miraculously Survives Viral Mumbai Incident

ಮುಂಬೈ, ಜುಲೈ 21: ಜೀವವನ್ನು ಪಣಕ್ಕಿಟ್ಟು ತೆಗೆದುಕೊಳ್ಳುವ ಒಂದು ನಿರ್ಧಾರವು ಎಷ್ಟು ದೊಡ್ಡ ಅನಾಹುತಕ್ಕೆ ಕಾರಣವಾಗಬಹುದು ಎಂಬುದಕ್ಕೆ ಮಹಾರಾಷ್ಟ್ರದ ವಸಾಯಿ ರೋಡ್ ರೈಲು ನಿಲ್ದಾಣದಲ್ಲಿ ನಡೆದ ಈ ಘಟನೆಯೇ ಸಾಕ್ಷಿ. ನಿಂತಿದ್ದ ರೈಲಿನಿಂದ ಆಚೆ ಬಂದ ವ್ಯಕ್ತಿ ಲೋಹದ ಗ್ರಿಲ್ ದಾಟಿ ಮತ್ತೊಂದು ಕಡೆ ಇರುವ ಪ್ಲಾಟ್​ಫಾರ್ಮ್​ಗೆ ಹೋಗಲು ಯತ್ನಿಸಿದ್ದಾರೆ. ಆದರೆ ಗ್ರಿಲ್ ಮೇಲೆ ಹತ್ತುತ್ತಿದ್ದಂತೆಯೇ ಮತ್ತೊಂದು ಹಳಿಯಲ್ಲಿ ರೈಲು(Train) ಬಂದಿತ್ತು. ಆಗ ಎಲ್ಲೂ ಹೋಗಲಾಗದೆ ಸಂಕಟದಲ್ಲಿ ಸಿಲುಕಿದ್ದಾರೆ. ಅಷ್ಟೇ ಅಲ್ಲದೆ ಹಳಿಯಲ್ಲಿ ಚಲಿಸುತ್ತಿದ್ದಂತೆ ಗ್ರಿಲ್ ಮೇಲೆ ಹತ್ತಿದ್ದ ವ್ಯಕ್ತಿ ಆಯ ತಪ್ಪಿ ಕೆಳಗೆ ಬಿದ್ದಿದ್ದಾರೆ. ಆದರೆ ಅದೃಷ್ಟವಶಾತ್ ಹಳಿಯ ಮೇಲೆ ಬಿದ್ದಿಲ್ಲ.

ವ್ಯಕ್ತಿಯೊಬ್ಬ ರೈಲಿನ ಹೊರಭಾಗದ ಕಬ್ಬಿಣದ ಗ್ರಿಲ್‌ಗಳನ್ನು ಹಿಡಿದುಕೊಂಡು ಅಪಾಯಕಾರಿಯಾಗಿ ಕುಳಿತಿದ್ದ. ಈ ವೇಳೆ ಪಕ್ಕದ ಹಳಿಯಲ್ಲಿ ಮತ್ತೊಂದು ರೈಲು ನಿಧಾನವಾಗಿ ಬರಲು ಪ್ರಾರಂಭಿಸಿತು. ಎರಡೂ ರೈಲುಗಳ ನಡುವಿನ ಜಾಗ ತೀವ್ರ ಕಿರಿದಾಗಿದ್ದರಿಂದ, ಆ ವ್ಯಕ್ತಿ ಅಲ್ಲಿಂದ ತಪ್ಪಿಸಿಕೊಳ್ಳಲಾಗದೆ ನಡುವಲ್ಲೇ ಸಿಲುಕಿಕೊಂಡಿದ್ದಾರೆ.

ಮತ್ತಷ್ಟು ಓದಿ: ನಮ್ಮ ಮೆಟ್ರೋ ಹಸಿರು ಮಾರ್ಗದಲ್ಲಿ ವಿದ್ಯುತ್ ತಾಂತ್ರಿಕ ದೋಷ: ಯಶವಂತಪುರ – ಮಾದಾವರ ನಡುವೆ ರೈಲು ಸಂಚಾರ ವ್ಯತ್ಯಯ!

ಎದುರಿನ ರೈಲಿನಲ್ಲಿದ್ದ ಪ್ರಯಾಣಿಕರೊಬ್ಬರು ಈ ಸಂಪೂರ್ಣ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆಹಿಡಿಯುತ್ತಾ, ರೈಲು ಹತ್ತಿರ ಬರುತ್ತಿದೆ, ಸುರಕ್ಷಿತವಾಗಿರಿ ಎಂದು ನಿರಂತರವಾಗಿ ಕಿರುಚುತ್ತಾ ಎಚ್ಚರಿಕೆ ನೀಡುತ್ತಿರುವುದು ವೀಡಿಯೊದಲ್ಲಿದೆ. ಜನರ ಎಚ್ಚರಿಕೆಯ ಹೊರತಾಗಿಯೂ ಆ ವ್ಯಕ್ತಿ ಅಲ್ಲಿಂದ ಕದಲುವುದು ಸಾಧ್ಯವಾಗಲಿಲ್ಲ. ರೈಲು ಆತನ ಅತ್ಯಂತ ಸಮೀಪದಿಂದ ಹಾದುಹೋದಾಗ, ಗಾಬರಿಯಿಂದ ಆತ ತನ್ನ ಹಿಡಿತ ತಪ್ಪಿ ಗ್ರಿಲ್‌ನಿಂದ ಕೆಳಗೆ ಜಾರಿಬಿದ್ದಿದ್ದಾರೆ. ಆದರೆ, ಅತ್ಯಂತ ಅದೃಷ್ಟವಶಾತ್ ಕ್ಷಣಾರ್ಧದಲ್ಲಿ ತನ್ನ ಸಮತೋಲನವನ್ನು ಕಾಯ್ದುಕೊಂಡು, ರೈಲಿನ ಚಕ್ರಗಳ ಅಡಿಗೆ ಬೀಳದೆ ಬೃಹತ್ ದುರಂತದಿಂದ ಪಾರಾಗಿದ್ದಾರೆ.

ವಿಡಿಯೋ

ಸಾಮಾಜಿಕ ಜಾಲತಾಣಗಳಲ್ಲಿ ಈ ವೀಡಿಯೊ ಹಂಚಿಕೊಳ್ಳಲಾಗಿದ್ದು, ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಇದು ಕೇವಲ ಅಪಾಯವಲ್ಲ, ಆತ ಜೀವಂತವಾಗಿ ಉಸಿರಾಡುತ್ತಿರುವುದೇ ಆತನ ಅದೃಷ್ಟ ಎಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದಾರೆ. ಚಲಿಸುವ ರೈಲುಗಳ ಬಳಿ ಇಂತಹ ಬೇಜವಾಬ್ದಾರಿ ಸಾಹಸಗಳನ್ನು ಪ್ರದರ್ಶಿಸುವುದು ಎಷ್ಟು ಆಪಾಯಕಾರಿ ಎಂಬುದಕ್ಕೆ ಈ ವೀಡಿಯೊ ಕಣ್ಣು ತೆರೆಸುವಂತಿರೆಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

‘ಮನಮೋಹಕ’ ಮೂಲಕ ಕಮಾಲ್ ಮಾಡಿದ ಪ್ರಮೋದ್ ಮರವಂತೆ; ಸ್ಯಾಂಡಲ್‌ವುಡ್ ಸ್ಟಾರ್ ಲಿರಿಸಿಸ್ಟ್ ಜರ್ನಿ – Kannada News | Meet Pramod Maravante: The Genius Behind Manamohaka and Sandalwood Top Songs

ಒಂದು ಹಿಟ್ ಹಾಡು ಬಂತು ಎಂದರೆ, ಅದಕ್ಕೆ ಚಿತ್ರಸಾಹಿತಿಯ ಶ್ರಮ ಸಾಕಷ್ಟಿರುತ್ತದೆ. ಮೆಲೋಡಿ ಹಾಡು ಕೇಳುಗನಿಗೆ ಇಂಪೆನಿಸಬೇಕು. ಪೊಣಿಸುವ ಶಬ್ದಗಳು ಕೇಳುಗನ ಮನಮುಟ್ಟಬೇಕು. ಅದರಲ್ಲೂ ರೊಮ್ಯಾಂಟಿಕ್ ಹಾಡುಗಳಾದರೆ ಶೃಂಗಾರಭರಿತವಾಗಿರಬೇಕು. ಈ ಪ್ರಯತ್ನದಲ್ಲಿ ಗೀತಸಾಹಿತಿ ಪ್ರಮೋದ್ ಮರವಂತೆ ಪ್ರತಿ ಬಾರಿಯೂ ವಿಜಯ ಸಾಧಿಸುತ್ತಾರೆ. ಹೊಸ ಹೊಸ ರೀತಿಯ ಗೀತೆ ನೀಡಿ ಮನಗೆಲ್ಲುತ್ತಾರೆ. ಈಗ ‘ಟಾಕ್ಸಿಕ್’ ಚಿತ್ರದ ‘ಮನಮೋಹಕ’ ಹಾಡಿನ (Manamohaka Song) ಮೂಲಕ ಅವರು ಪ್ರೇಕ್ಷಕರ ಮನಗೆದ್ದಿದ್ದಾರೆ.

‘ಟಾಕ್ಸಿಕ್’ ಸಿನಿಮಾದ ಎರಡನೇ ಹಾಡು ‘ಮನಮೋಹಕ’ ಸದ್ಯ ಐದು ಭಾಷೆಗಳಲ್ಲಿ ಬಿಡುಗಡೆಯಾಗಿ ಇಂಟರ್ನೆಟ್‌ನಲ್ಲಿ ಧೂಳೆಬ್ಬಿಸುತ್ತಿದೆ. ಈ ಅದ್ಭುತ ಮೆಲೋಡಿ ಪ್ರಣಯಗೀತೆಗೆ ಕನ್ನಡದಲ್ಲಿ ಅದ್ಭುತವಾಗಿ ಸಾಹಿತ್ಯ ಪೊಣಿಸಿದ್ದು ಸ್ಯಾಂಡಲ್‌ವುಡ್‌ನ ಪ್ರತಿಭಾವಂತ ಸಾಹಿತ್ಯಗಾರ ಪ್ರಮೋದ್ ಮರವಂತೆ. ಯಶ್ ಮತ್ತು ತಾರಾ ಸುತಾರಿಯಾ ಜೋಡಿಯ ಕೆಮಿಸ್ಟ್ರಿಗೆ ಇವರ ಸಾಹಿತ್ಯದ ಸಾಲುಗಳು ಮತ್ತಷ್ಟು ಕಳೆ ಕಟ್ಟಿರುವುದು ಈಗ ಎಲ್ಲೆಡೆ ಮೆಚ್ಚುಗೆಗೆ ಪಾತ್ರವಾಗಿದೆ.

ಕರಾವಳಿಯಿಂದ ಗಾಂಧಿನಗರದವರೆಗೆ ಮೂಡಿದ ‘ಮರವಂತೆ’ ಛಾಪು

ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಮರವಂತೆ ಮೂಲದ ಪ್ರಮೋದ್, ಕನ್ನಡ ಚಿತ್ರರಂಗದಲ್ಲಿ ಇಂದು ಮೋಸ್ಟ್ ವಾಂಟೆಡ್ ಲಿರಿಸಿಸ್ಟ್ ಆಗಿ ಹೊರಹೊಮ್ಮಿದ್ದಾರೆ. ಆರಂಭದ ದಿನಗಳಲ್ಲಿ ಸಾಕಷ್ಟು ಕಷ್ಟಪಟ್ಟು ಚಿತ್ರರಂಗದಲ್ಲಿ ನೆಲೆ ಕಂಡುಕೊಂಡ ಇವರು, ತಮ್ಮ ವಿಭಿನ್ನ ಶಬ್ದಗಳ ಬಳಕೆ ಮತ್ತು ಭಾವನಾತ್ಮಕ ಸಾಲುಗಳ ಮೂಲಕವೇ ಪ್ರೇಕ್ಷಕರ ಹೃದಯ ಗೆದ್ದವರು. ಕರಾವಳಿಯ ಸೊಗಡನ್ನು ತಮ್ಮ ಹೆಸರಿನಲ್ಲೇ ಇಟ್ಟುಕೊಂಡು ಗಾಂಧಿನಗರದ ದೊಡ್ಡ ದೊಡ್ಡ ಸ್ಟಾರ್ ಸಿನಿಮಾಗಳಿಗೆ ಸಾಹಿತ್ಯ ಬರೆಯುವ ಹಂತಕ್ಕೆ ಬೆಳೆದು ನಿಂತಿದ್ದಾರೆ.

ಹಿಟ್ ಸಿನಿಮಾಗಳ ಸರದಾರ

ಕೇವಲ ‘ಟಾಕ್ಸಿಕ್’ ಮಾತ್ರವಲ್ಲದೆ, ಕನ್ನಡದ ಹಲವು ಬ್ಲಾಕ್‌ಬಸ್ಟರ್ ಸಿನಿಮಾಗಳಿಗೆ ಪ್ರಮೋದ್ ಮರವಂತೆ ಹಿಟ್ ಗೀತೆಗಳನ್ನು ನೀಡಿದ್ದಾರೆ. ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿದ ಜಾಗತಿಕ ಮಟ್ಟದ ಯಶಸ್ಸು ಕಂಡ ‘ಕಾಂತಾರ’ ಚಿತ್ರದ ‘ಸಿಂಗಾರ ಸಿರಿಯೇ’ ಹಾಡಿಗೆ ಸಾಹಿತ್ಯ ಬರೆದಿದ್ದು ಇದೇ ಪ್ರಮೋದ್ ಮರವಂತೆ. ಈ ಹಾಡು ಇವರ ವೃತ್ತಿಜೀವನಕ್ಕೆ ದೊಡ್ಡ ಬ್ರೇಕ್ ನೀಡಿತ್ತು. ಸ್ಯಾಂಡಲ್‌ವುಡ್‌ನ ಪ್ರಮುಖ ತಾರೆಗಳಾದ ರಕ್ಷಿತ್ ಶೆಟ್ಟಿ, ರಾಜ್ ಬಿ. ಶೆಟ್ಟಿ ಸೇರಿದಂತೆ ಹಲವು ಸ್ಟಾರ್ ನಟ ಹಾಗೂ ನಿರ್ದೇಶಕರ ಸಿನಿಮಾಗಳಿಗೆ ಸಾಹಿತ್ಯ ಬರೆದು ಭರವಸೆಯ ಸಾಹಿತಿಯಾಗಿ ಗುರುತಿಸಿಕೊಂಡಿದ್ದಾರೆ.

ಮೆಲೋಡಿ ಮತ್ತು ಮಾಸ್ ಎರಡರಲ್ಲೂ ಸೈ

ಪ್ರಮೋದ್ ಮರವಂತೆ ಅವರ ಸಾಹಿತ್ಯದ ವಿಶೇಷತೆಯೆಂದರೆ ಅವರು ಕೇವಲ ಮೆಲೋಡಿ ಹಾಡುಗಳಿಗೆ ಮಾತ್ರ ಸೀಮಿತವಾಗಿಲ್ಲ. ಒಂದು ಕಡೆ ‘ಸಿಂಗಾರ ಸಿರಿಯೇ’ ಅಥವಾ ಈಗ ಬಂದಿರುವ ‘ಮನಮೋಹಕ’ದಂತಹ ಮಧುರ ಪ್ರಣಯಗೀತೆಗಳನ್ನು ಬರೆಯುವ ಇವರು, ಇನ್ನೊಂದೆಡೆ ಹಳ್ಳಿ ಸೊಗಡಿನ ಹಾಗೂ ಮಾಸ್ ಆಡಿಯನ್ಸ್ ಇಷ್ಟಪಡುವ ಹಾಡುಗಳನ್ನೂ ಬರೆದು ಸೈ ಎನಿಸಿಕೊಂಡಿದ್ದಾರೆ.

ಇದನ್ನೂ ಓದಿ: ‘ಟಾಕ್ಸಿಕ್’ ಚಿತ್ರದ ‘ಮನಮೋಹಕ..’ ಸಾಂಗ್; ಯಶ್-ತಾರಾ ಸುತಾರಿಯಾ ಕೆಮಿಸ್ಟ್ರಿಗೆ ಫ್ಯಾನ್ಸ್ ಫಿದಾ

ಈಗ ‘ಟಾಕ್ಸಿಕ್’ ಸಿನಿಮಾದ ದೊಡ್ಡ ಕ್ಯಾನ್ವಾಸ್‌ನಲ್ಲಿ ಇವರ ಸಾಹಿತ್ಯ ಮೂಡಿಬಂದಿರುವುದು ಅವರ ಯಶಸ್ಸಿನ ಕಿರೀಟಕ್ಕೆ ಮತ್ತೊಂದು ಗರಿ ಇಟ್ಟಂತಾಗಿದೆ. ಮುಂಬರುವ ದಿನಗಳಲ್ಲಿ ಇವರಿಂದ ಮತ್ತಷ್ಟು ಅದ್ಭುತ ಕನ್ನಡ ಗೀತೆಗಳು ಮೂಡಿಬರಲಿ ಎಂಬುದು ಅಭಿಮಾನಿಗಳ ಆಶಯ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Income Tax Notice: ಆದಾಯ ತೆರಿಗೆ ನೋಟೀಸ್ ಬಂತಾ? ಅದು ವಂಚಕರ ಜಾಲವಾ? ಆನ್​ಲೈನ್​ನಲ್ಲೇ ಪರಿಶೀಲಿಸಿ – Kannada News | Income Tax Notice, steps to check the authenticity of the notice online

ನವದೆಹಲಿ, ಜುಲೈ 21: ಆದಾಯ ತೆರಿಗೆ ರಿಟರ್ನ್ಸ್ (ITR- Income Tax Returns) ಸಲ್ಲಿಸುವ ಸೀಸನ್ ಇದು. ಐಟಿಆರ್ ಸಲ್ಲಿಕೆ, ಅಧಿಕಾರಿಗಳಿಂದ ಪರಿಶೀಲನೆ, ರೀಫಂಡ್ ಇತ್ಯಾದಿ ಪ್ರಕ್ರಿಯೆಗಳು ಚಾಲೂ ಇವೆ. ಐಟಿ ರಿಟರ್ನ್ಸ್ (ITR) ಸಲ್ಲಿಕೆಗೆ ಜುಲೈ 31 ಕೊನೆಯ ದಿನಾಂಕವಾಗಿದೆ. ಈ ಸಮಯದಲ್ಲಿ ತೆರಿಗೆದಾರರಿಗೆ ಆದಾಯ ತೆರಿಗೆ ನೋಟೀಸ್ ಬಂದರೆ ಆತಂಕಪಡುವುದು ಸಹಜ. ಇದನ್ನು ಬಂಡವಾಳ ಮಾಡಿಕೊಳ್ಳುವ ಸೈಬರ್ ವಂಚಕರು, ನಕಲಿ ನೋಟೀಸ್‌ಗಳನ್ನು ಕಳುಹಿಸಿ ಹಣ ಅಥವಾ ಓಟಿಪಿ (OTP), ಬ್ಯಾಂಕ್ ವಿವರಗಳನ್ನು ಕದಿಯಲು ಯತ್ನಿಸುತ್ತಾರೆ. ಆದ್ದರಿಂದ, ಯಾವುದೇ ನೋಟೀಸ್‌ಗೆ ಪ್ರತಿಕ್ರಿಯಿಸುವ ಅಥವಾ ಹಣ ಪಾವತಿಸುವ ಮೊದಲು ಅದು ನಕಲಿಯೋ ಅಥವಾ ಅಸಲಿಯೋ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಅತ್ಯಗತ್ಯ.

ನೋಟೀಸ್​ನಲ್ಲಿ ಡಾಕ್ಯುಮೆಂಟ್ ಐಡೆಂಟಿಫಿಕೇಶನ್ ನಂಬರ್ ಇದೆಯಾ?

2019ರ ಅಕ್ಟೋಬರ್​ನಿಂದ ಜಾರಿಗೆ ಬಂದ ನಿಯಮದಂತೆ, ಆದಾಯ ತೆರಿಗೆ ಇಲಾಖೆಯು ನೀಡುವ ಪ್ರತಿಯೊಂದು ಅಧಿಕೃತ ನೋಟೀಸ್ ಅಥವಾ ಪತ್ರವು ಪ್ರತ್ಯೇಕ DIN (Document Identification Number) ಅನ್ನು ಹೊಂದಿರುತ್ತದೆ. DIN ಇಲ್ಲದ ಯಾವುದೇ ನೋಟೀಸ್ ಅಸಿಂಧುವಾಗಿರುತ್ತದೆ. ಸುಳ್ಳು ಡಿಐಎನ್ ಹಾಕಿದ್ದರೆ ಏನು ಮಾಡಬೇಕು? ಅದರ ಕ್ರಮ ಇಲ್ಲಿ ಕೆಳಕಂಡಂತೆ ಇರುತ್ತದೆ.

ಇದನ್ನೂ ಓದಿ: ಜಾತಿ ಪ್ರಮಾಣ ಪತ್ರದಲ್ಲಿನ ವಿಳಾಸ ಬದಲಾಯಿಸಬೇಕೇ? ಹಾಗಾದ್ರೆ ಹೀಗೆ ಮಾಡಿ

ಅಧಿಕೃತ ಪೋರ್ಟಲ್ ಮೂಲಕ ನೋಟೀಸ್ ಪರಿಶೀಲಿಸಿ

ತೆರಿಗೆದಾರರು ಆದಾಯ ತೆರಿಗೆ ಇಲಾಖೆಯ ಅಧಿಕೃತ ಇ-ಫೈಲಿಂಗ್ ಪೋರ್ಟಲ್‌ಗೆ (Income Tax e-filing portal) ಲಾಗ್-ಇನ್ ಆಗದೆಯೇ ನೋಟೀಸ್ ಪರಿಶೀಲಿಸಬಹುದು. ಪೋರ್ಟಲ್​ನ ಮುಖ್ಯಪುಟಕ್ಕೆ ಹೋದರೆ ಅಲ್ಲಿ ತುಸು ಕೆಳಗೆ ಸ್ಕ್ರೋಲ್ ಮಾಡಿದಾಗ ಕ್ವಿಕ್ ಲಿಂಕ್ಸ್ ಭಾಗ ಸಿಗುತ್ತದೆ. ಅದರಲ್ಲಿ ‘Authenticate the Notice/order issued by ITD’ ಅನ್ನು ಕ್ಲಿಕ್ ಮಾಡಬೇಕು. ಇಲ್ಲಿ ಪೋರ್ಟಲ್​ಗೆ ನೀವು ಲಾಗಿನ್ ಆಗುವ ಅವಶ್ಯಕತೆ ಇರುವುದಿಲ್ಲ.

ಈ ಹಂತದಲ್ಲಿ ನೋಟೀಸ್​ನ ಅಧಿಕೃತತೆ ಪರಿಶೀಲಿಸುವ ಮುಂದಿನ ಪ್ರಕ್ರಿಯೆಗೆ ಎರಡು ಆಯ್ಕೆಗಳು ಇರುತ್ತವೆ. ಪ್ಯಾನ್ ಮೂಲಕ, ಮತ್ತು ಡಿಐಎನ್ ಮೂಲಕ ಪರಿಶೀಲನೆ ಮಾಡಬಹುದು. ಮೊಬೈಲ್ ನಂಬರ್ ನೀಡುವಾಗ ಇಫೈಲಿಂಗ್​ಗೆ ನೊಂದಾಯಿತವಾದ ನಂಬರನ್ನೇ ನೀಡಬೇಕೆಂದಿಲ್ಲ. ನಿಮ್ಮ ಬಳಿ ಇರುವ ಯಾವುದೇ ಮೊಬೈಲ್ ನಂಬರ್ ಹಾಕಿ, ಅದರಿಂದ ಒಟಿಪಿ ಪಡೆದು ನಮೂದಿಸಿ ಈ ಕೆಲಸ ಮಾಡಬಹುದು. ನೋಟೀಸ್ ಪರಿಶೀಲಿಸುವಾಗ ನಿಮ್ಮ ಮೊಬೈಲ್ ಸಂಖ್ಯೆಗೆ 15 ನಿಮಿಷಗಳ ಕಾಲಾವಧಿಯ OTP ಬರುತ್ತದೆ, ತಾಳ್ಮೆ ಇರಲಿ.

ಇನ್ಕಮ್ ಟ್ಯಾಕ್ಸ್ ಇಫೈಲಿಂಗ್ ಪೋರ್ಟಲ್​ನ ವಿಳಾಸ ಇಂತಿದೆ: www.incometax.gov.in/iec/foportal

ನೋಟೀಸ್ ಅಥೆಂಟಿಕೇಟ್ ಮಾಡಲು ನೇರ ಲಿಂಕ್: eportal.incometax.gov.in/iec/foservices/#/pre-login/authenticate-notice-issued-by-itd

ಇದನ್ನೂ ಓದಿ: ನಿಮ್ಮ ಬಳಿ 20 ಲಕ್ಷ ರೂ ಇದ್ದರೆ ಎಲ್ಲಿ ಹೂಡಿಕೆ ಮಾಡಬೇಕು? ಇಲ್ಲಿದೆ ಮೂರು ಮಾದರಿಗಳು

ಸುರಕ್ಷತಾ ಸಲಹೆ: ಆದಾಯ ತೆರಿಗೆ ಇಲಾಖೆಯು ಎಂದಿಗೂ ಫೋನ್ ಕರೆ ಅಥವಾ ನಕಲಿ ಲಿಂಕ್‌ಗಳ ಮೂಲಕ ನಿಮ್ಮ ಬ್ಯಾಂಕ್ ಖಾತೆಯ PIN, CVV ಅಥವಾ OTP ಯನ್ನು ಕೇಳುವುದಿಲ್ಲ. ಯಾವುದೇ ನಕಲಿ ಬೆದರಿಕೆಗಳಿಗೆ ಹೆದರದೆ ಅಧಿಕೃತ ಪೋರ್ಟಲ್‌ನಲ್ಲಷ್ಟೇ ಮಾಹಿತಿ ಪರಿಶೀಲಿಸಿ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಅಭಿಮಾನಿಗಳಿಗೆ 5 ಲಕ್ಷ, ಮಹತ್​​ಕಾರ್ಯಕ್ಕೆ ಮುಂದಾದ ಚಿರಂಜೀವಿ – Kannada News | Megastar Chiranjeevi giving 5 lakh rs worth policy to his fans

ಸ್ಟಾರ್ ನಟರುಗಳಿಗೆ ಅಭಿಮಾನಿಗಳು ಇರುವುದು ಸಾಮಾನ್ಯ, ಈ ಅಭಿಮಾನಿಗಳು ಮೆಚ್ಚಿನ ನಟನ ಸಿನಿಮಾ ಬಿಡುಗಡೆ ಆದಾಗ ಕಟೌಟ್ ಕಟ್ಟಿ, ಚಿತ್ರಮಂದಿರಗಳನ್ನು ಸಿಂಗರಿಸಿ ಸಿನಿಮಾ ವೀಕ್ಷಿಸುತ್ತಾರೆ. ಮೆಚ್ಚಿನ ನಟನ ಸಿನಿಮಾ ಸೋಲಲು ಬಿಡುವುದಿಲ್ಲ. ನಟನ ಹುಟ್ಟುಹಬ್ಬದ ಸಂದರ್ಭದಲ್ಲಿ ಹಲವು ಸೇವಾಕಾರ್ಯಗಳನ್ನು ಮಾಡುತ್ತಾರೆ. ಆದರೆ ಸ್ಟಾರ್ ನಟ ತಮ್ಮ ಅಭಿಮಾನಿಗಳಿಗಾಗಿ ಏನನ್ನೂ ಮಾಡುವುದಿಲ್ಲ. ಆದರೆ ಇದೀಗ ಮೆಗಾಸ್ಟಾರ್ ಚಿರಂಜೀವಿ, ಅಭಿಮಾನಿಗಳಿಗಾಗಿ ಮಹತ್​ ಕಾರ್ಯವೊಂದನ್ನು ಮಾಡುತ್ತಿದ್ದಾರೆ.

ಮೆಗಾಸ್ಟಾರ್ ಚಿರಂಜೀವಿ, ದೇಶದಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಸ್ಟಾರ್ ನಟರಲ್ಲಿ ಒಬ್ಬರು. ಒಂದು ಸಮಯದಲ್ಲಿ ಇಡೀ ದೇಶದಲ್ಲಿ ಅತಿ ಹೆಚ್ಚು ರಿಜಿಸ್ಟರ್ಡ್ ಅಭಿಮಾನಿ ಸಂಘಗಳನ್ನು ಹೊಂದಿದ್ದ ನಟ ಸಹ ಹೌದು. ದಶಕಗಳಿಂದಲೂ ಸಹ ಅಭಿಮಾನಿ ಸಂಘಗಳನ್ನು ಬಳಸಿಕೊಂಡು ಹಲವು ಸೇವಾ ಕಾರ್ಯವನ್ನು ಚಿರಂಜೀವಿ ಮಾಡುತ್ತಾ ಬರುತ್ತಿದ್ದಾರೆ. ಆದರೆ ಈಗ ಚಿರಂಜೀವಿ ಅವರು ತಮ್ಮ ಅಭಿಮಾನಿಗಳ ಋಣ ಸಂದಾಯಕ್ಕೆ ಮುಂದಾಗಿದ್ದಾರೆ.

ಮೆಗಾಸ್ಟಾರ್ ಚಿರಂಜೀವಿ ಅವರ ಹುಟ್ಟುಹಬ್ಬ ಆಗಸ್ಟ್ 22 ರಂದು ಇದೆ. ಪ್ರತಿ ವರ್ಷದಂತೆ ಆ ದಿನದಂದು ಚಿರಂಜೀವಿ ಅವರ ಅಭಿಮಾನಿಗಳು ಹಲವು ಸೇವಾ ಕಾರ್ಯಗಳನ್ನು ಹಮ್ಮಿಕೊಂಡಿದ್ದಾರೆ. ಆದರೆ ಆ ಹಬ್ಬದ ಸಂತೋಷವನ್ನು ಮತ್ತಷ್ಟು ದ್ವಿಗುಣಗೊಳಿಸುವಂತೆ ತಮ್ಮ ಮೆಗಾ ಅಭಿಮಾನಿಗಳಿಗಾಗಿ ಮೆಗಾಸ್ಟಾರ್ ಒಂದು ಒಳ್ಳೆಯ ಉಡುಗೊರೆಯನ್ನು ನೀಡಲಿದ್ದಾರೆ.

ಇದನ್ನೂ ಓದಿ:ರಾಮ್ ಚರಣ್ ಕಾರಣಕ್ಕೆ ಟ್ರೋಲ್​​ಗೆ ಒಳಗಾದ ಮೆಗಾಸ್ಟಾರ್ ಚಿರಂಜೀವಿ

ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ತಮ್ಮ ಮೆಗಾ ಅಭಿಮಾನಿಗಳಿಗಾಗಿ ಚಿರಂಜೀವಿ ಒಂದು ಪ್ರಮುಖ ನಿರ್ಧಾರ ಕೈಗೊಂಡಿದ್ದಾರೆ. ಅವರ ಹುಟ್ಟುಹಬ್ಬದ ಅಂಗವಾಗಿ ಅಭಿಮಾನಿಗಳಿಗೆ ರೂ. 5 ಲಕ್ಷ ಮೌಲ್ಯದ ವಿಮೆಯನ್ನು ಮಾಡಿಸಿಕೊಡಲಿದ್ದಾರೆ ಮೆಗಾಸ್ಟಾರ್. ಈ ವಿಷಯವನ್ನು ಅಖಿಲ ಭಾರತ ಚಿರಂಜೀವಿ ಯುವತ ಅಧ್ಯಕ್ಷ ರವಣಂ ಸ್ವಾಮಿ ನಾಯ್ಡು ಬಹಿರಂಗಪಡಿಸಿದ್ದಾರೆ. ಈ ಸಂಬಂಧ ಸಾಮಾಜಿಕ ಜಾಲತಾಣಗಳ ಮೂಲಕ ಅವರು ವೀಡಿಯೊ ಒಂದನ್ನು ಬಿಡುಗಡೆ ಮಾಡಿದ್ದಾರೆ.

‘ಮೆಗಾಸ್ಟಾರ್ ಚಿರಂಜೀವಿ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಎಲ್ಲಾ ಪ್ರದೇಶಗಳಲ್ಲಿ ಹಿರಿಯ ಅಭಿಮಾನಿಗಳನ್ನು ಗುರುತಿಸಿ ಸನ್ಮಾನಿಸಲು ನಾವು ಬಯಸಿದ್ದೇವೆ. ಹಾಗೆಯೇ ಮೂರು ದಶಕಗಳಿಂದ ಕಷ್ಟಪಟ್ಟು ಕೆಲಸ ಮಾಡಿದ ಹಿರಿಯ ಅಭಿಮಾನಿಗಳು, ಅಂದಿನಿಂದ ಇಂದಿನವರೆಗೂ ಥಿಯೇಟರ್‌ಗಳ ಬಳಿ ಕಷ್ಟಪಟ್ಟವರು, ಕಟೌಟ್‌ಗಳನ್ನು ಕಟ್ಟಿ, ಹೂವಿನ ಹಾರ ಹಾಕಿ, ಹಾಲಿನ ಅಭಿಷೇಕ ಮಾಡಿ, ಸೇವಾ ಕಾರ್ಯಗಳನ್ನು ಮಾಡಿದ ಅನೇಕ ಹಿರಿಯ ಅಭಿಮಾನಿಗಳಿದ್ದಾರೆ. ಈಗ ಅವರೆಲ್ಲರನ್ನೂ ಗುರುತಿಸುವ ಕೆಲಸದಲ್ಲಿದ್ದೇವೆ. ಮೆಗಾಸ್ಟಾರ್ ಅವರ ಹುಟ್ಟುಹಬ್ಬದಂದು ಚಿರಂಜೀವಿ ಅವರ ಹಿರಿಯ ಅಭಿಮಾನಿಗಳನ್ನು ಗುರುತಿಸಿ, ಅಖಿಲ ಭಾರತ ಚಿರಂಜೀವಿ ಸಂಘದ ಪರವಾಗಿ ಅವರೆಲ್ಲರಿಗೂ 5 ಲಕ್ಷ ರೂ.ಗಳ ವಿಮಾ ಪಾಲಿಸಿಯನ್ನು ನೀಡಲು ನಿರ್ಧರಿಸಿದ್ದೇವೆ. ಮೊದಲ ಹಂತವಾಗಿ ಗುಂಟೂರು ಜಿಲ್ಲೆಯಿಂದಲೇ ಈ ಕಾರ್ಯಕ್ರಮಕ್ಕೆ ಚಾಲನೆ ನೀಡುತ್ತಿದ್ದೇವೆ’ ಎಂದು ರವಣಂ ಸ್ವಾಮಿ ನಾಯ್ಡು ತಿಳಿಸಿದ್ದಾರೆ.

ಪ್ರಸ್ತುತ ಈ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ಬಹಳ ವೈರಲ್ ಆಗುತ್ತಿದೆ. ಇದನ್ನು ನೋಡಿದ ಚಿರಂಜೀವಿ ಅಭಿಮಾನಿಗಳು ಹರ್ಷ ವ್ಯಕ್ತಪಡಿಸುತ್ತಿದ್ದಾರೆ. ಚಲನಚಿತ್ರರಂಗದ ಇತಿಹಾಸದಲ್ಲಿ ಯಾವ ನಟನೂ ಹೀಗೆ ಅಭಿಮಾನಿಗಳಿಗೆ ವಿಮೆ ಮಾಡಿಸಿಲ್ಲ, ಮೆಗಾಸ್ಟಾರ್ ಮಾತ್ರ ಇಂತಹ ಒಳ್ಳೆಯ ಕಾರ್ಯಕ್ಕೆ ಮುನ್ನುಡಿ ಬರೆದಿದ್ದಾರೆ ಎಂದು ಹಲವರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಕೆಲ ದಿನಗಳ ಹಿಂದಷ್ಟೆ ನಟ ಶಿವರಾಜ್ ಕುಮಾರ್ ಅವರು ತಮ್ಮ ಅಭಿಮಾನಿಗಳಿಗೆ ಆರೋಗ್ಯ ಕಾರ್ಡ್ ಮಾಡಿಸಿಕೊಟ್ಟಿದ್ದನ್ನು ಇಲ್ಲಿ ನೆನಪು ಮಾಡಿಕೊಳ್ಳಬಹುದು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರಿನ 8 ಕಡೆ ಇಡಿ ಅಧಿಕಾರಿಗಳ ದಿಢೀರ್ ದಾಳಿ: ಐಸಿಸ್ ನೆರವು ಹಾಗೂ ಅಕ್ರಮ ಹಣ ವರ್ಗಾವಣೆ ಜಾಲ ಬಯಲು! – Kannada News | ED Raids 8 Locations in Bengaluru Over ISIS Funding and Terror Recruitment

ಬೆಂಗಳೂರಿನ 8 ಕಡೆ ಇಡಿ ಅಧಿಕಾರಿಗಳ ದಿಢೀರ್ ದಾಳಿ

ಬೆಂಗಳೂರು, ಜುಲೈ 21: ಬಂಧಿತ ಉಗ್ರ ಸಂಘಟನೆ ಐಸಿಸ್‌ಗೆ (ISIS) ಹಣಕಾಸಿನ ನೆರವು ನೀಡಿದ ಹಾಗೂ ಯುವಕರನ್ನು ಕಾನೂನುಬಾಹಿರವಾಗಿ ವಿದೇಶಕ್ಕೆ ಕಳುಹಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ (ED) ಅಧಿಕಾರಿಗಳು ಮಂಗಳವಾರ ಬೆಳಿಗ್ಗೆ ಬೆಂಗಳೂರಿನ 8 ಪ್ರಮುಖ ಸ್ಥಳಗಳಲ್ಲಿ ದಿಢೀರ್ ದಾಳಿ ನಡೆಸಿದ್ದಾರೆ. ರಾಷ್ಟ್ರೀಯ ತನಿಖಾ ಸಂಸ್ಥೆ (NIA) ದಾಖಲಿಸಿದ್ದ ಎಫ್‌ಐಆರ್ ಹಾಗೂ ಚಾರ್ಜ್‌ಶೀಟ್ ಆಧರಿಸಿ ಜಾರಿ ನಿರ್ದೇಶನಾಲಯವು ಪ್ರಕರಣವನ್ನು ಕೈಗೆತ್ತಿಕೊಂಡು ಈ ಕಾರ್ಯಾಚರಣೆ ನಡೆಸಿದೆ.

ಪ್ರಕರಣದ ಹಿನ್ನೆಲೆ

ಆರೋಪಿಗಳು ಬೆಂಗಳೂರಿನ ಮುಸ್ಲಿಂ ಯುವಕರನ್ನು ಐಸಿಸ್ ಸಿದ್ಧಾಂತದತ್ತ ಆಕರ್ಷಿಸಲು ‘ಇಕ್ರಾ ಕ್ಯಾಂಪ್’ ಎಂಬ ವ್ಯಕ್ತಿತ್ವ ವಿಕಾಸ ಕಾರ್ಯಾಗಾರವನ್ನು ಆಯೋಜಿಸುತ್ತಿದ್ದರು. ಇದರ ಮೂಲಕ ಬೆಳೆದ ‘ಕುರ್‌ಆನ್ ಸರ್ಕಲ್’ ಎಂಬ ವಾರಾಂತ್ಯದ ಅಧ್ಯಯನ ಕೂಟಗಳ ಮೂಲಕ ಯುವಕರನ್ನು ಗುರುತಿಸಿ ಬ್ರೇನ್‌ವಾಶ್ ಮಾಡಲಾಗುತ್ತಿತ್ತು. ತಮ್ಮ ಸ್ವಂತ ಉಳಿತಾಯ, ಖಾಸಗಿ ವ್ಯಕ್ತಿಗಳು ಹಾಗೂ ‘ಇಕ್ರಾ ವೆಲ್ಫೇರ್ ಟ್ರಸ್ಟ್’ ಮತ್ತು ‘GFM ಟ್ರಸ್ಟ್’ ಗಳ ಮೂಲಕ ಅಕ್ರಮವಾಗಿ ಹಣ ಸಂಗ್ರಹಿಸುತ್ತಿದ್ದರು. ಈ ಹಣವನ್ನು ಯುವಕರ ನೇಮಕಾತಿ ಮತ್ತು ಪ್ರಯಾಣದ ವೆಚ್ಚಕ್ಕೆ ಬಳಸಲಾಗುತ್ತಿತ್ತು ಎಂಬುದು ತನಿಖೆಯಲ್ಲಿ ಪತ್ತೆಯಾಗಿದೆ.

ಟರ್ಕಿ ಮಾರ್ಗವಾಗಿ ಸಿರಿಯಾಗೆ ರವಾನೆ

ಬ್ರೇನ್‌ವಾಶ್‌ಗೊಳಗಾದ ಯುವಕರನ್ನು ಟರ್ಕಿಯ ಮಾರ್ಗವಾಗಿ ಸಿರಿಯಾಗೆ ಅಕ್ರಮವಾಗಿ ಕಳುಹಿಸಿ, ಭಾರತ ಸರ್ಕಾರದೊಂದಿಗೆ ಮೈತ್ರಿ ಹೊಂದಿರುವ ಸಿರಿಯಾ ಸರ್ಕಾರದ ವಿರುದ್ಧ ಐಸಿಸ್ ಪರವಾಗಿ ಯುದ್ಧ ಮಾಡಲು ನೆರವು ನೀಡಲಾಗುತ್ತಿತ್ತು ಎಂದು ಎನ್‌ಐಎ ತನ್ನ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಿದೆ.

ಇದನ್ನೂ ಓದಿ ವಾಟ್ಸಾಪ್​ಗೆ ಎಪಿಕೆ ಫೈಲ್​ನಲ್ಲಿ ಬಂತು ಮದುವೆ ಆಮಂತ್ರಣ: ಕ್ಲಿಕ್ ಮಾಡಿದ ವ್ಯಕ್ತಿಯ ಬ್ಯಾಂಕ್ ಖಾತೆಯಿಂದ 9.96 ಲಕ್ಷ ರೂ. ಮಾಯ!

ಸಿಎಎ (CAA) ಮತ್ತು ಎನ್ಆರ್ಸಿ (NRC) ವಿರೋಧಿ ಪ್ರತಿಭಟನೆಗಳ ಸಂದರ್ಭದಲ್ಲಿ ಯುವಕರ ಭಾವನೆಗಳನ್ನು ದುರುಪಯೋಗಪಡಿಸಿಕೊಂಡು ಮುಸ್ಲಿಮೇತರರ ವಿರುದ್ಧ ಪ್ರಚೋದನೆ ನೀಡಲಾಗಿತ್ತು. ಜೊತೆಗೆ ಸುರಕ್ಷಿತ ಸಾಮಾಜಿಕ ಮಾಧ್ಯಮ ವೇದಿಕೆಗಳ ಮೂಲಕ ಐಸಿಸ್‌ ಸಿದ್ಧಾಂತವನ್ನು ಪಸರಿಸಲು ಸಂಚು ರೂಪಿಸಲಾಗಿತ್ತು. ಪ್ರಸ್ತುತ ಇಡಿ ಅಧಿಕಾರಿಗಳು ವಿವಿಧ ಟ್ರಸ್ಟ್‌ಗಳು ಹಾಗೂ ಶಂಕಿತರ ನಿವಾಸಗಳಲ್ಲಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದು, ತನಿಖೆ ತೀವ್ರಗೊಳಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಫುಟ್ಪಾತ್​​, ಬಿಡಾಡಿ ವಾಹನಗಳ ತೆರವಿನ ಬಳಿಕ ರಾಜಕಾಲುವೆ ಒತ್ತುವರಿದಾರರಿಗೂ ಶಾಕ್​​ ಕೊಡಲು ಮುಂದಾದ ಜಿಬಿಎ – Kannada News | After Footpaths, GBA Targets Encroachers: 260 km Rajakaluve Development with World Bank Aid to Begin Soon

ಬೆಂಗಳೂರು, ಜುಲೈ 21: ಫುಟ್ಪಾತ್​​, ಬಿಡಾಡಿ ವಾಹನಗಳ ತೆರವಿನ ಬಳಿಕ ರಾಜಕಾಲುವೆ ಒತ್ತುವರಿದಾರರಿಗೂ ಶಾಕ್​​ ಕೊಡಲು ಗ್ರೇಟರ್​​ ಬೆಂಗಳೂರು ಪ್ರಾಧಿಕಾರ ಮುಂದಾಗಿದೆ. ಈ ಬಗ್ಗೆ ಬೆಂಗಳೂರು ನಗರಾಭಿವೃದ್ದಿ ಸಚಿವ ಕೃಷ್ಣ ಭೈರೇಗೌಡ ಮಾಹಿತಿ ನೀಡಿದ್ದು, ರಾಜಕಾಲುವೆ ಒತ್ತುವರಿ ತೆರವು ಕಾರ್ಯ ಕೂಡ ಮಾಡುತ್ತೇವೆ. ಬೆಂಗಳೂರಿನಲ್ಲಿ 860 ಕಿ.ಮೀ. ರಾಜಕಾಲುವೆ ವ್ಯಾಪ್ತಿ ಇದ್ದು, ಈಗಾಗಲೇ ಅಂದಾಜು 600 ಕಿ.ಮೀ. ವ್ಯಾಪ್ತಿ ಅಭಿವೃದ್ಧಿ ಮಾಡಿದ್ದೇವೆ. ಸಿದ್ದರಾಮಯ್ಯ ಅವರು ಸಿಎಂ ಆಗಿದ್ದ ವೇಳೆ 400 ಕಿ.ಮೀ. ಮತ್ತು ಬಿಜೆಪಿ ಅವರ ಅಧಿಕಾರಾವಧಿಯಲ್ಲಿ 150 ಕಿ.ಮೀ. ಅಭಿವೃದ್ಧಿಯಾಗಿದೆ. ಹೀಗಾಗಿ ಉಳಿದಿರುವ 260 ಕಿ.ಮೀ. ರಾಜಕಾಲುವೆ ಅಭಿವೃದ್ಧಿ ಆಗಬೇಕಿದೆ. ವಿಶ್ವ ಬ್ಯಾಂಕ್ ಸಹಾಯದೊಂದಿಗೆ ಈ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳುತ್ತೇವೆ. ಈ ವೇಳೆ ಒತ್ತುವರಿ ತೆರವು ಕೂಡ ಮಾಡಿಯೇ ಮಾಡುತ್ತೇವೆ ಎಂದವರು ತಿಳಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಈ ಎರಡು ರಾಶಿಯವರಿಗೆ ಬರುವ ತಾಪತ್ರಯಕ್ಕೆ ಪರಿಹಾರ ಅವರ ಕೈಯಲ್ಲಿದೆ – Kannada News | Leo and Virgo Astrology: Monthly Challenges, Planetary Effects and Remedies

ತಾಪತ್ರಯಕ್ಕೆ ಪರಿಹಾರImage Credit source: Getty Images

ಈ ತಿಂಗಳಲ್ಲಿ ಎದುರಾದ ಎದುರಾಗಲಿರುವ ತೊಂದರೆಗಳು ಯಾವುವು ಎಂದು ಸಿಂಹ ಮತ್ತು ಕನ್ಯಾ ರಾಶಿಯವರಿಗೆ ನೋಡೋಣ. ರವಿ ಹಾಗೂ ಬುಧನ ಆಧಿಪತ್ಯದ ಈ ಎರಡೂ ರಾಶಿಗಳಿಗೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಏನೆಲ್ಲ ಆಗಲಿದೆ, ಅದಕ್ಕೆ ಪರಿಹಾತವನ್ನು ವೈಯಕ್ತಿಯಕವಾಗಿಯೂ ಮಾಡಿಕೊಳ್ಳಬಹುದು.

​ಸಿಂಹ ರಾಶಿ :

​ಸಿಂಹ ರಾಶಿಯವರಿಗೆ ಪ್ರಸ್ತುತ ಗೋಚಾರದಲ್ಲಿ ಪ್ರಮುಖ ಗ್ರಹಗಳ ಸ್ಥಾನವು ಸವಾಲಿನ ಪರಿಸ್ಥಿತಿಯನ್ನು ತಿಳಿಸುತ್ತದೆ.

​ಅಷ್ಟಮ ಶನಿಯ ಪ್ರಭಾವ :

ಮೀನ ರಾಶಿಯಲ್ಲಿ ವಕ್ರಿಯಾಗಿರುವ ಶನಿಯು ಸಿಂಹ ರಾಶಿಗೆ ೮ನೇ ಮನೆಯಲ್ಲಿದ್ದಾನೆ. ಇದು ಮಾನಸಿಕ ಒತ್ತಡ, ಕಾರ್ಯಗಳಲ್ಲಿ ಅನಿರೀಕ್ಷಿತ ಅಡೆತಡೆಗಳು, ಧನ ನಷ್ಟ ಮತ್ತು ಆರೋಗ್ಯದಲ್ಲಿ ಏರಿಳಿತಗಳನ್ನು ಉಂಟುಮಾಡಬಹುದು.

​ಕೇತು ಮತ್ತು ಶುಕ್ರ :

ರಾಶಿಯಲ್ಲೇ ಕೇತು ಮತ್ತು ಶುಕ್ರ ಇರುವುದರಿಂದ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಗೊಂದಲ, ಶರೀರದಲ್ಲಿ ಶಕ್ತಿ ಕುಂದುವುದು ಹಾಗೂ ಅನಗತ್ಯ ಮಾನಸಿಕ ವಿರಕ್ತಿ ಭಾವನೆ ಕಾಡಬಹುದು.

​ಸಪ್ತಮ ಭಾವದಲ್ಲಿ ರಾಹು ಮತ್ತು ಚಂದ್ರ:

ಕುಂಭ ರಾಶಿಯಲ್ಲಿ ರಾಹು ಮತ್ತು ಚಂದ್ರರ ಸಂಯೋಜನೆಯಿಂದ ‘ಗ್ರಹಣ ದೋಷ’ ಉಂಟಾಗುತ್ತದೆ. ಇದು ವೈವಾಹಿಕ ಜೀವನದಲ್ಲಿ ಸಣ್ಣಪುಟ್ಟ ವಿಷಯಗಳಿಗೂ ಭಿನ್ನಾಭಿಪ್ರಾಯ, ಸಂಗಾತಿಯೊಂದಿಗೆ ಅಸಮಾಧಾನ, ಹಾಗೂ ವ್ಯಾಪಾರ-ಪಾಲುದಾರಿಕೆಯಲ್ಲಿ ತಪ್ಪು ಗ್ರಹಿಕೆಗಳಿಗೆ ಕಾರಣವಾಗಬಹುದು.

​ದ್ವಾದಶ ಭಾವದಲ್ಲಿ ಸೂರ್ಯ ಮತ್ತು ಗುರು:

ರಾಶ್ಯಾಧಿಪತಿ ಸೂರ್ಯ ಹಾಗೂ ಅಸ್ತಂಗತನಾದ ಗುರು ೧೨ನೇ ಮನೆಯಲ್ಲಿ ಕರ್ಕಾಟಕ ರಾಶಿಯಲ್ಲಿದ್ದಾರೆ. ಇದರಿಂದ ಅನಗತ್ಯ ಹಾಗೂ ಅನಿರೀಕ್ಷಿತ ವೆಚ್ಚಗಳು ಹೆಚ್ಚಾಗುವುದು, ನಿದ್ರಾಹೀನತೆ ಮತ್ತು ಪ್ರಯಾಣದಲ್ಲಿ ಕ್ಲೇಶಗಳು ಎದುರಾಗಬಹುದು.

ಕನ್ಯಾ ರಾಶಿ:

​ಕನ್ಯಾ ರಾಶಿಯವರಿಗೆ ಗ್ರಹಗಳ ಸ್ಥಾನಮಾನದಂತೆ ಕೆಲವು ಪ್ರಮುಖ ಕ್ಷೇತ್ರಗಳಲ್ಲಿ ಎಚ್ಚರಿಕೆ ಅಗತ್ಯ.

​ಸಪ್ತಮ ಭಾವದಲ್ಲಿ ವಕ್ರ ಶನಿ:

ಮೀನ ರಾಶಿಯ ಶನಿಯು ಕನ್ಯಾ ರಾಶಿಗೆ ನೇರವಾಗಿ ೭ನೇ ಮನೆಯಲ್ಲಿದ್ದು ಲಗ್ನವನ್ನು ವೀಕ್ಷಿಸುತ್ತಾನೆ. ಇದರಿಂದ ದಾಂಪತ್ಯ ಜೀವನದಲ್ಲಿ ಕಷ್ಟ-ಮನಸ್ತಾಪಗಳು, ಸಂಗಾತಿಯ ಆರೋಗ್ಯದಲ್ಲಿ ಏರಿಳಿತ ಮತ್ತು ಹೊಸ ವ್ಯವಹಾರಿಕ ಒಪ್ಪಂದಗಳಲ್ಲಿ ವಿಳಂಬ ಉಂಟಾಗಬಹುದು.

​ದ್ವಾದಶ ಭಾವದಲ್ಲಿ ಕೇತು ಮತ್ತು ಶುಕ್ರ:

೧೨ನೇ ಮನೆಯಲ್ಲಿ ಕೇತು ಮತ್ತು ಶುಕ್ರ ಇರುವುದರಿಂದ ಹಣಕಾಸಿನ ಆಸೋರಿಕೆ, ಹಿಡಿತವಿಲ್ಲದ ಖರ್ಚು, ಕಣ್ಣಿನ ತೊಂದರೆಗಳು ಹಾಗೂ ವೈಯಕ್ತಿಕ ಸುಖ-ಸಂತೋಷಗಳಲ್ಲಿ ಕೊರತೆ ಕಾಣಿಸಬಹುದು.

ಇದನ್ನೂ ಓದಿ: ವಾರದ ಪ್ರೇಮ – ಪ್ರೀತಿ ಭವಿಷ್ಯ: ಜುಲೈ 19 ರಿಂದ 25 ರವರೆಗೆ ಪ್ರಮುಖ ಗ್ರಹಗಳ ಸಂಚಾರ; ನಿಮ್ಮ ಪ್ರೇಮ ಜೀವನದ ಮೇಲಾಗುವ ಪ್ರಭಾವ ಇಲ್ಲಿದೆ

​ಷಷ್ಠ ಭಾವದಲ್ಲಿ ರಾಹು ಮತ್ತು ಚಂದ್ರ:

೬ನೇ ಮನೆಯಲ್ಲಿ ರಾಹು-ಚಂದ್ರರ ಸಂಯೋಜನೆಯಿಂದ ರಹಸ್ಯ ಚಿಂತೆಗಳು, ಜೀರ್ಣಕ್ರಿಯೆ ಅಥವಾ ಮಾನಸಿಕ ಆತಂಕದಂತಹ ಸಮಸ್ಯೆಗಳು ಕಾಡಬಹುದು. ಕೆಲಸದ ಸ್ಥಳದಲ್ಲಿ ಸಹೋದ್ಯೋಗಿಗಳಿಂದ ಸಣ್ಣಪುಟ್ಟ ಕಿರಿಕಿರಿ ಅಥವಾ ಸಾಲದ ಸುಳಿಗೆ ಸಿಲುಕುವ ಎಚ್ಚರಿಕೆ ಅಗತ್ಯ.

​ಗುರು ಅಸ್ತ:

ಲಾಭ ಸ್ಥಾನದಲ್ಲಿ ಉಚ್ಚ ಗುರುವಿದ್ದರೂ, ಆತ ಸೂರ್ಯನಿಂದ ಅಸ್ತಂಗತನಾಗಿರುವುದರಿಂದ ನಿರೀಕ್ಷಿತ ಆರ್ಥಿಕ ಲಾಭಗಳು ತಕ್ಷಣಕ್ಕೆ ಸಿಗದೆ ವಿಳಂಬವಾಗಬಹುದು.

ಪರಿಹಾರಗಳು:

​ಸಿಂಹ ರಾಶಿಯವರು ಶಿವನ ಆರಾಧನೆ, ಹನುಮಾನ್ ಚಾಲೀಸಾ ಪಾರಾಯಣ ಮಾಡುವುದು ಹಾಗೂ ಶನಿವಾರ ಶನಿ ದೇವರಿಗೆ ಎಳ್ಳೆಣ್ಣೆ ದೀಪ ಹಚ್ಚುವುದು ಶ್ರೇಯಸ್ಸು ಪಡೆಯುವರು.

​ಕನ್ಯಾ ರಾಶಿಯವರು ವಿಷ್ಣು ಸಹಸ್ರನಾಮ ಪಠಣ, ಸುಬ್ರಹ್ಮಣ್ಯ ಸ್ವಾಮಿ ಪೂಜೆಯಿಂದ ಶುಭ ಫಲ ಪಡೆಯಬಹುದು.

– ಲೋಹಿತ್ ಹೆಬ್ಬಾರ್

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಈಗಿರುವ ರೂಪದಲ್ಲಿ ಒಪ್ಪಂದ ಸಾಧ್ಯವೇ ಇಲ್ಲ, ಪಾಕಿಸ್ತಾನಕ್ಕೆ ಭಾರತದ ಖಡಕ್ ಎಚ್ಚರಿಕೆ, ಸಿಂಧೂ ಜಲ ಒಪ್ಪಂದದ ಬಗ್ಗೆ ಮತ್ತೆ ಕಠಿಣ ನಿಲುವು – Kannada News | India’s Firm Warning: Indus Water Treaty Impossible in Current Form with Pakistan

ನವದೆಹಲಿ, ಜುಲೈ 21: ಗಡಿಯಾಚೆಗಿನ ಭಯೋತ್ಪಾದನೆಗೆ ಪಾಕಿಸ್ತಾನ(Pakistan) ನೀಡುತ್ತಿರುವ ಬೆಂಬಲವನ್ನು ನಿಲ್ಲಿಸದೇ ಇರುವ ಹಿನ್ನೆಲೆಯಲ್ಲಿ, ಸಿಂಧೂ ಜಲ ಒಪ್ಪಂದದ (IWT) ಕುರಿತು ಭಾರತ ಸರ್ಕಾರ ತನ್ನ ನಿಲುವನ್ನು ಮತ್ತಷ್ಟು ಕಟ್ಟುನಿಟ್ಟುಗೊಳಿಸಿದೆ. 1960 ರಲ್ಲಿ ವಿಶ್ವಬ್ಯಾಂಕ್ ಮಧ್ಯಸ್ಥಿಕೆಯಲ್ಲಿ ನಡೆದ ಈ ಒಪ್ಪಂದವು ಇನ್ಮುಂದೆ “ಈಗಿರುವ ಪ್ರಸ್ತುತ ರೂಪದಲ್ಲಿ ಮುಂದುವರೆಯಲು ಸಾಧ್ಯವೇ ಇಲ್ಲ” ಎಂದು ಕೇಂದ್ರ ಸರ್ಕಾರದ ಉನ್ನತ ಮೂಲಗಳು ಸ್ಪಷ್ಟಪಡಿಸಿವೆ. ಕಳೆದ ವರ್ಷ ಪಹಲ್ಗಾಮ್‌ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ ಭಾರತವು ಈಗಾಗಲೇ ಈ ಒಪ್ಪಂದವನ್ನು ಅಮಾನತಿನಲ್ಲಿಟ್ಟಿತ್ತು.

ಭಾರತದ ಪ್ರಮುಖ ಆಕ್ಷೇಪಣೆಗಳು ಮತ್ತು ಕಠಿಣ ನಿಲುವು
1960 ರ ಒಪ್ಪಂದವನ್ನು ಸಂಪೂರ್ಣವಾಗಿ ರದ್ದುಗೊಳಿಸುವ ಸಕ್ರಿಯ ನಿರ್ಧಾರವನ್ನು ಭಾರತ ತಕ್ಷಣವೇ ತೆಗೆದುಕೊಳ್ಳದಿದ್ದರೂ, ಅಂತಹ ಗರಿಷ್ಠ ಆಯ್ಕೆ ಭಾರತದ ಮೇಜಿನ ಮೇಲೆಯೇ ಇದೆ. ಭಾರತದ ರಾಷ್ಟ್ರೀಯ ಹಿತಾಸಕ್ತಿಗೆ ಧಕ್ಕೆಯಾಗುವ ಯಾವುದೇ ಒಪ್ಪಂದದಲ್ಲೂ ದೇಶ ಮುಂದುವರಿಯುವುದಿಲ್ಲ ಎಂದು ಮೂಲಗಳು ತಿಳಿಸಿವೆ.

ಪಾಕಿಸ್ತಾನವು ಗಡಿಯಾಚೆಗಿನ ಭಯೋತ್ಪಾದನೆ ಮತ್ತು ಉಗ್ರ ಸಂಘಟನೆಗಳಿಗೆ ನೀಡುತ್ತಿರುವ ಬೆಂಬಲವನ್ನು ಸಂಪೂರ್ಣವಾಗಿ ಹಾಗೂ ಶಾಶ್ವತವಾಗಿ ನಿಲ್ಲಿಸುವವರೆಗೆ ಒಪ್ಪಂದವನ್ನು ಪುನರಾರಂಭಿಸುವ ಪ್ರಶ್ನೆಯೇ ಇಲ್ಲ ಎಂದು ಭಾರತೀಯ ಅಧಿಕಾರಿಗಳು ಖಡಕ್ ಆಗಿ ಹೇಳಿದ್ದಾರೆ.

ಜನಸಂಖ್ಯೆಯ ಹೆಚ್ಚಳ, ಶುದ್ಧ ಇಂಧನ ಆಶಯಗಳು ಮತ್ತು ಬದಲಾದ ಹವಾಮಾನ ಪರಿಸ್ಥಿತಿಗಳಿಗೆ ಅನುಗುಣವಾಗಿ ಒಪ್ಪಂದದ ನಿಬಂಧನೆಗಳನ್ನು ಸಂಪೂರ್ಣ ಪರಿಶೀಲಿಸಿ ಮಾರ್ಪಡಿಸಬೇಕು ಎಂಬುದು ಭಾರತದ ಆಗ್ರಹವಾಗಿದೆ.

ಮತ್ತಷ್ಟು ಓದಿ: ಸಿಂಧೂ ನದಿ ಒಪ್ಪಂದದ ಬಿಕ್ಕಟ್ಟು: ಪಾಕಿಸ್ತಾನದ ಕರಾಚಿಯಲ್ಲಿ ತೀವ್ರ ಜಲಕ್ಷಾಮ, ರಾಜಕೀಯ ಕೆಸರೆರಚಾಟ

ಅಂತಾರಾಷ್ಟ್ರೀಯ ಕಾನೂನು ಮತ್ತು ಭಾರತದ ವಾದ
ಒಪ್ಪಂದದಿಂದ ನಿರ್ಗಮಿಸುವ ನಿರ್ದಿಷ್ಟ ಷರತ್ತು ಇಲ್ಲದಿದ್ದರೂ, ಅಂತಾರಾಷ್ಟ್ರೀಯ ನಿಯಮಗಳ ಪ್ರಕಾರ ಒಂದು ದೇಶವು ಗಂಭೀರ ಉಲ್ಲಂಘನೆ (ಭಯೋತ್ಪಾದನೆ) ಮಾಡಿದಾಗ, ಮತ್ತೊಂದು ದೇಶಕ್ಕೆ ಒಪ್ಪಂದವನ್ನು ಅಮಾನತಿನಲ್ಲಿಡುವ ಸಂಪೂರ್ಣ ಹಕ್ಕಿರುತ್ತದೆ.

ಇನ್ನೊಂದೆಡೆ, ಭಾರತದ ಈ ನಿರ್ಧಾರವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸ್ತಾಪಿಸಿ ‘ಬಲಿಪಶು’ ಎಂಬಂತೆ ಬಿಂಬಿಸಲು ಪಾಕಿಸ್ತಾನ ಯತ್ನಿಸುತ್ತಿದೆ. ಆದರೆ, ಪಾಕಿಸ್ತಾನದ ನಿಜವಾದ ತೊಂದರೆ ‘ನೀರಿನ ಅಭಾವವಲ್ಲ, ಬದಲಾಗಿ ಸರಿಯಾದ ನೀರು ನಿರ್ವಹಣೆಯ ಅಭಾವ’ ಎಂದು ಭಾರತ ಪ್ರತ್ಯುತ್ತರ ನೀಡಿದೆ.

ಪಾಕಿಸ್ತಾನದ ನಿರ್ಲಕ್ಷ್ಯ ಮತ್ತು ಭಾರತದ ಮುಂದಿನ ಹೆಜ್ಜೆ
ಸಿಂಧೂ ನದಿ ವ್ಯವಸ್ಥೆಯ ಶೇ. 80 ರಷ್ಟು ನೀರನ್ನು ಪಡೆಯುತ್ತಿದ್ದರೂ, ಪಾಕಿಸ್ತಾನವು 1976 ರಿಂದ ಈವರೆಗೆ ಒಂದೇ ಒಂದು ಬೃಹತ್ ನೀರು ಸಂಗ್ರಹಣಾ ಯೋಜನೆಯನ್ನು ನಿರ್ಮಿಸಿಲ್ಲ. ಒಪ್ಪಂದವನ್ನು ಅಮಾನತಿನಲ್ಲಿಟ್ಟಿದ್ದರೂ, ಜೀವ ಮತ್ತು ಆಸ್ತಿಯ ರಕ್ಷಣೆಯ ಮಾನವೀಯತೆಯ ದೃಷ್ಟಿಯಿಂದ ಭಾರತವು ಪಾಕಿಸ್ತಾನಕ್ಕೆ ಪ್ರವಾಹದ ಮುನ್ನೆಚ್ಚರಿಕೆ ಮಾಹಿತಿಯನ್ನು ನೀಡುವುದನ್ನು ಮುಂದುವರೆಸಿದೆ.

ಮುಂದಿನ ದಿನಗಳಲ್ಲಿ ಭಾರತವು ಆಧುನಿಕ ಎಂಜಿನಿಯರಿಂಗ್, ಜಲಸಂಪನ್ಮೂಲಗಳ ಮೂಲಸೌಕರ್ಯ ಅಭಿವೃದ್ಧಿ ಹಾಗೂ ವೈಜ್ಞಾನಿಕ ನಿರ್ವಹಣೆಯ ಮೂಲಕ ತನಗೆ ಸಿಗಬೇಕಾದ ಜಲಸಂಪತ್ತಿನ ಗರಿಷ್ಠ ಬಳಕೆಗೆ ನಿರ್ಧರಿಸಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Exit mobile version