Headlines

ವರುಣ್ ಧವನ್ ಜೊತೆಗೆ ಕುಣಿದು-ಕುಪ್ಪಳಿಸಿದ ಮೃಣಾಲ್ ಠಾಕೂರ್: ವಿಡಿಯೋ – Kannada News | Mrunal Thakur shared dance shoot video with Varun Dhawan

ನಟಿ ಮೃಣಾಲ್ ಠಾಕೂರ್ (Mrunal Thakur) ಬಲು ಬೇಡಿಕೆಯ ಪ್ಯಾನ್ ಇಂಡಿಯಾ ನಟಿ. ತೆಲುಗು ಸಿನಿಮಾಗಳ ಜೊತೆಗೆ ಬಾಲಿವುಡ್ ಸಿನಿಮಾಗಳಲ್ಲಿಯೂ ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೆ ಮೃಣಾಲ್ ಠಾಕೂರ್ ನಟನೆಯ ತೆಲುಗು ಸಿನಿಮಾ ‘ಡಕಾಯತ್’ ಬಿಡುಗಡೆ ಆಗಿದೆ. ಇದೀಗ ಬಾಲಿವುಡ್​​ನ ನಟ ವರುಣ್ ಧವನ್ ಜೊತೆಗೆ ‘ಹೈ ಜವಾನಿ ಥೋ ಇಷ್ಕ್ ಹೋನಾ ಹೈ’ ಸಿನಿಮಾನಲ್ಲಿ ನಟಿಸಿದ್ದಾರೆ. ಹಾಡಿನ ಚಿತ್ರೀಕರಣದ ವಿಡಿಯೋ ಒಂದನ್ನು ನಟಿ ಮೃಣಾಲ್ ಠಾಕೂರ್ ಹಂಚಿಕೊಂಡಿದ್ದಾರೆ. ಹಾಡಿನಲ್ಲಿ ವರುಣ್ ಹಾಗೂ ಮೃಣಾಲ್ ಸಖತ್ ಆಗಿ ಡ್ಯಾನ್ಸ್ ಮಾಡಿದ್ದಾರೆ…

Read More

ಎಲ್ಲಾ ಹೋಟೆಲ್​ಗಳಲ್ಲಿ ಕುಡಿಯಲು ಬಿಸಿ ನೀರು ಕಡ್ಡಾಯ: ಏನಿದರ ಹಿಂದಿನ ಉದ್ದೇಶ? – Kannada News | Hot Water mandatory to customers for drinking In all Bengaluru Hotels Says Minister UT Khader

ಬೆಂಗಳೂರು, (ಆಗಸ್ಟ್ 02): ಬೆಂಗಳೂರಿನಲ್ಲಿ ಕುಡಿಯುವ ನೀರು ಹದಗೆಡುತ್ತಿರುವ ಹಿನ್ನೆಲೆ ನಾನಾ ರೀತಿ ಆರೋಗ್ಯ ಸಮಸ್ಯೆಗಳಿಗೆ ಜನರು ತುತ್ತಾಗುತ್ತಿದ್ದಾರೆ. ಹೀಗಾಗಿ ಸಾರ್ವಜನಿಕ ಪ್ರದೇಶಗಳಲ್ಲಿ ಜನರ ಆರೋಗ್ಯ ಕಾಪಾಡಲು ಎಲ್ಲಾ ಹೋಟೆಲ್​ಗಳಲ್ಲಿ ಗ್ರಾಹಕರಿಗೆ ಕುಡಿಯಲು ಬಿಸಿ ನೀರನ್ನ (Hot Water) ಕೊಡೋದು ಕಡ್ಡಾಯ ಎಂಬ ನಿಯಮ ತರಲು ಆರೋಗ್ಯ ಇಲಾಖೆ ಮುಂದಾಗಿದೆ. ಸದ್ಯ ಎಲ್ಲಾ ಪ್ರೀಮಿಯಮ್ ಹಾಗೂ ಸ್ಟ್ಯಾಂಡರ್ಡ್ ಹೋಟೆಲ್​ಗಳಲ್ಲಿ ಕುಡಿಯಲು ಬಿಸಿ ನೀರಿನ ವ್ಯವಸ್ಥೆ ಇದೆ. ಇದನ್ನ ಎಲ್ಲಾ ರೀತಿಯ ಅಂದರೆ, ಸಣ್ಣ-ಪುಟ್ಟ ಹೋಟೆಲ್​ಗಳಲ್ಲೂ ಕಡ್ಡಾಯ ಮಾಡಬೇಕಿದೆ…

Read More

HIV ತವರಾಗುತ್ತಿದೆಯಾ ಬೆಂಗಳೂರು?: ಯುವ ಜನತೆಯಲ್ಲೇ ಸೋಂಕು ಪತ್ತೆಯಿಂದ ಹೆಚ್ಚಿದ ಆತಂಕ – Kannada News | Is Bengaluru Becoming an HIV Hotspot? Rising Infections Among Youth Trigger Concern

ಬೆಂಗಳೂರು, ಜುಲೈ 30:  ಸಲಿಂಗ ಕಾಮದ ಪರಿಣಾಮವಾಗಿ ಬೆಂಗಳೂರಿನಲ್ಲಿ ಹೆಚ್​​ಐವಿ ಸೋಂಕಿತ ಪುರುಷರ ಸಂಖ್ಯೆಯಲ್ಲಿ ಹೆಚ್ಚಳವಾಗಿದ್ದು, ಡೇಟಿಂಗ್​​ ಆ್ಯಪ್​​ಗಳ ಹೆಚ್ಚಳವೂ ಇದಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ. ಆತಂಕಕಾರಿ ವಿಚಾರವೆಂದರೆ ಕಾಲೇಜು ಮತ್ತು ವಿಶ್ವ ವಿದ್ಯಾಲಯಗಳ ಹಾಸ್ಟೆಲ್​​ ವಿದ್ಯಾರ್ಥಿಗಳು ಮತ್ತು ಪಿಜಿಗಳಲ್ಲಿ ನೆಲೆಸಿರುವವರೇ ಹೆಚ್ಚಿನ ಪೈಕಿ ಸೋಂಕಿಗೆ ತುತ್ತಾಗಿದ್ದಾರೆ. ಹೀಗಾಗಿ ಶಾಲಾ ಕಾಲೇಜುಗಳಲ್ಲಿ ಈ ಬಗ್ಗೆ ಅರಿವು ಮೂಡಿಸಲು ಆರೋಗ್ಯ ಇಲಾಖೆ ಮುಂದಾಗಿದೆ. ಐದೇ ತಿಂಗಳಲ್ಲಿ 4,795 HIV ಪಾಸಿಟಿವ್ ಕೇಸ್ ಪತ್ತೆ ಕಳೆದ 5 ತಿಂಗಳ ಅವಧಿಯಲ್ಲಿ…

Read More

ಎತ್ತ ಸಾಗಿದೆ ಪ್ರೀತಿಯೆಂಬ ಮಾಯೆ! – Kannada News | Valentine’s Day: Youth, Love and Navigating Modern Relationships Responsibly

ಪ್ರೀತಿಯಲ್ಲಿ ಹಾಗೂ ಯುದ್ದದಲ್ಲಿ ಎಲ್ಲವೂ ಸರಿ, Everything is fair in Love & War ಅಂತಾ ಅದ್ಯಾವ ಪುಣ್ಯಾತ್ಮ ಈ ಸಾಲುಗಳನ್ನು ಗೀಚಿದನೋ ಗೊತ್ತಿಲ್ಲ. ಇದನ್ನು ಬರೆದವ ಇದನ್ನು ಅದೆಷ್ಟೋ ಗಂಭೀರವಾಗಿ ತೆಗೆದುಕೊಂಡಿದ್ದನ್ನೋ ? ಇಲ್ಲವೋ ? ಗೊತ್ತಿಲ್ಲ ಆದ್ರೆ ನಮ್ಮ ಯುವ ಪೀಳಿಗೆ, ದ ಜೆನ್ಸಿಸ್ ಮಾತ್ರ ಇದನ್ನೇ ವೇದ ವಾಕ್ಯದಂತೆ ಪಾಲಿಸುತ್ತಿದ್ದಾರೆ. ಅದರಲ್ಲೂ ಪ್ರೀತಿ ವಿಚಾರ ಬಂದರೆ ಅವರಿಗೆ ಇದೇ ಭಗವದ್ಗೀತೆ, ಇದೇ ಕುರಾನ್, ಬೈಬಲ್ ಎಲ್ಲವೂ ಆಗಿದೆ. ಪ್ರೀತಿಯ ಮೋಡಿಗೊಳಗಾದವರಿಗೆ ತಾವು…

Read More

ಕಾರ್ಮಿಕರ ಮೇಲೆ ಹಲ್ಲೆ ಮಾಡಿ ಚಹಾ ಅಂಗಡಿ ಧ್ವಂಸಗೊಳಿಸಿದ ಪೊಲೀಸಪ್ಪ! ಚಿಕ್ಕಮಗಳೂರಿಗೆ ಹೊಷ ವರ್ಷಾಚರಣೆಗೆ ಬಂದು ರಂಪಾಟ – Kannada News | Chikkamagaluru: Policeman Attacks Workers, Vandalises Tea Stall During New Year Celebrations, CCTV Video Surfaces

ಚಿಕ್ಕಮಗಳೂರು, ಜನವರಿ 1: ಬೆಂಗಳೂರಿನಿಂದ ಹೊಸ ವರ್ಷದ ಆಚರಣೆಗೆಂದು ಚಿಕ್ಕಮಗಳೂರಿಗೆ ಬಂದಿದ್ದ ಪೊಲೀಸ್ ಕಾನ್​ಸ್ಟೇಬಲ್ ಒಬ್ಬರು ರಂಪಾಟ ಮಾಡಿರುವುದು ವರದಿಯಾಗಿದೆ. ಚಹಾ ಕೊಡಲು ತಡವಾಯಿತು ಎಂಬ ಕಾರಣಕ್ಕೆ ಟೀ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರ ಮೇಲೆ ಹಲ್ಲೆ ನಡೆಸಿದ್ದಾರೆ. ಚಿಕ್ಕಮಗಳೂರು ನಗರದ KSRTC ಬಸ್ ನಿಲ್ದಾಣದ ಬಳಿ ಇರುವ ಟೀ ಅಂಗಡಿಯಲ್ಲಿ ಈ ಘಟನೆ ನಡೆದಿದ್ದು, ಮೀಸಲು ಪೊಲೀಸ್ ಪಡೆಯ ಕೋರಮಂಗಲದ ಸಿಬ್ಬಂದಿ ಪುನೀತ್ ಹಲ್ಲೆ ಮಾಡಿದ್ದಾರೆ. ಮುಂಜಾನೆ ಸಮಯದಲ್ಲಿ ಪುನೀತ್ ಮತ್ತು ಅವರ ಸ್ನೇಹಿತರು ಬಸ್…

Read More

ರಾಜಸ್ಥಾನ ರಾಯಲ್ಸ್ ಮಾರಾಟ ಆಗಿದ್ದಕ್ಕೆ ಶೇನ್ ವಾರ್ನ್ ಕುಟುಂಬಕ್ಕೆ ಸಿಗಲಿದೆ 450 ಕೋಟಿ ರೂಪಾಯಿ

ಐಪಿಎಲ್ ಆರಂಭಕ್ಕೂ ಮೊದಲು ಕೆಲವು ಮಹತ್ವದ ಬೆಳವಣಿಗೆ ನಡೆದಿದೆ. ರಾಜಸ್ಥಾನ ರಾಯಲ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮಾರಾಟ ಆಗಿದೆ. ಆರ್​​ಸಿಬಿ ತಂಡವನ್ನು ಆದಿತ್ಯ ಬಿರ್ಲಾ ಗ್ರೂಪ್ ಖರೀದಿಸಿದರೆ, ರಾಜಸ್ಥಾನ ರಾಯಲ್ಸ್ ತಂಡವನ್ನು ಅಮೆರಿಕ ಮೂಲದ ಕಲ್ ಸೋಮಾನಿ ಒಕ್ಕೂಟ ಈ ಕಂಪನಿಯ ಶೇ. 100ರಷ್ಟು ಷೇರನ್ನು ಖರೀದಿ ಮಾಡಿದೆ. ಇದಕ್ಕಾಗಿ 15,290 ಕೋಟಿ ರೂಪಾಯಿ ಪಾವತಿಸಿದೆ. ಈ ಹಣದಲ್ಲಿ ಆಸ್ಟ್ರೇಲಿಯಾದ ಸ್ಪಿನ್ ಮಾಂತ್ರಿಕ ದಿವಂಗತ ಶೇನ್ ವಾರ್ನ್​​​ ಕುಟುಂಬಕ್ಕೂ 450 ಕೋಟಿ ರೂಪಾಯಿ ಸಿಗಲಿದೆ….

Read More

ಮಂಜುನಾಥ್ ಆಪ್ತರಿಗೂ ತಟ್ಟಿದ ಇಡಿ ಬಿಸಿ: ಅಬಕಾರಿ ಎಸ್ಪಿ, ಡಿವೈಎಸ್ಪಿ ಮನೆಗಳ ಮೇಲೂ ರೇಡ್​ – Kannada News | ED Crackdown in Karnataka: Raids Extended to Houses of Excise SP and DySP Close to Additional Commissioner Y Manjunath

ಮಂಜುನಾಥ್ ಆಪ್ತರಿಗೂ ತಟ್ಟಿದ ಇಡಿ ಬಿಸಿ ಬೆಳಗಾವಿ, ಜೂನ್​​ 24: ಸಚಿವ ಸತೀಶ್ ಜಾರಕಿಹೊಳಿ ಅವರ ಸಹೋದರಿಯ ಪತಿ ಹಾಗೂ ಬೆಳಗಾವಿ ವಿಭಾಗದ ಅಬಕಾರಿ ಇಲಾಖೆಯ ಹೆಚ್ಚುವರಿ ಆಯುಕ್ತ ವೈ. ಮಂಜುನಾಥ್ ಅವರಿಗೆ ಬೆಳ್ಳಂ ಬೆಳಿಗ್ಗೆ ಶಾಕ್​​ ನೀಡಿರುವ ಇಡಿ ಮಂಜುನಾಥ್​​ಗೆ ಆಪ್ತರಾಗಿರುವ ಅಧಿಕಾರಿಗಳಿಗೂ ಬಿಸಿ ಮುಟ್ಟಿಸಿದೆ. ಚಿಕ್ಕೋಡಿ ಅಬಕಾರಿ ಡಿವೈಎಸ್ಪಿ ಮತ್ತು ತುಮಕೂರು ಅಬಕಾರಿ ಎಸ್ಪಿ ಮನೆಗಳ ಮೇಲೂ ಇಡಿ ಅಧಿಕಾರಿಗಳು ರೇಡ್​​ ನಡೆಸಿ, ಶೋಧ ಆರಂಭಿಸಿದ್ದಾರೆ. ತುಮಕೂರು ಅಬಕಾರಿ ಎಸ್ಪಿಗೆ ಇಡಿ ಶಾಕ್​​ ತುಮಕುರು…

Read More

ಶರಣು ಸಲಗರ ಪತ್ನಿ ಬಗ್ಗೆ ಮಾತಾಡಿದ್ದಕ್ಕೆ ಶಿವಲಿಂಗೇಗೌಡ ವಿಷಾದ: ಇತ್ತ ಶಾಸಕರ ಅಮಾನತಿಗೆ JDS ಆಗ್ರಹ – Kannada News | Shivalingegowda Apologizes for Salagar Wife Remark; JDS Demands MLA Disqualification

ಬೆಂಗಳೂರು, ಫೆಬ್ರವರಿ 05: ವಿಬಿ ಜಿ ರಾಮ್ ಜಿ ಕಾಯ್ದೆಯನ್ನು ವಿರೋಧಿಸಿ ಮಂಡಿಸಿದ ನಿರ್ಣಯ ಪರ ವಿಧಾನ ಸಭೆಯಲ್ಲಿ ಮಾತನಾಡಲು ಮುಂದಾದಾಗ ಬಿಜೆಪಿ ಸದಸ್ಯರು ಅಡ್ಡಿಪಡಿಸಿದ್ದಕ್ಕೆ ರೊಚ್ಚಿಗೆದ್ದ ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡ ಹಿಗ್ಗಾಮುಗ್ಗಾ ಬೈದಿದ್ದರು. ಈ ವಿಚಾರವಾಗಿ ಆಕ್ರೋಶ ಕೇಳಿಬಂದ ಹಿನ್ನೆಲೆ ಸ್ವತಃ ಶಾಸಕರೇ ಸ್ಪಷ್ಟನೆ ನೀಡಿದ್ದಾರೆ. ನಾನು ಸಲಗರ, ವೇದವ್ಯಾಸ​ ಕಾಮತ್ ಬಗ್ಗೆ ಮಾತ್ರ ಮಾತಾಡಿದ್ದು. ತಹಶೀಲ್ದಾರ್ ಆಗಿರುವ ಪತ್ನಿಯಿಂದಲೇ​ ಶಾಸಕ ಶರಣು ಸಲಗರ ಎಂಎಲ್ಎ ಆಗಿದ್ದಾರೆಂದು ನಮ್ಮ ಕಡೆಯವ್ರು ಹೇಳಿದ್ರು. ಹೆಣ್ಮಗು ವಿಚಾರವಾಗಿ ಮಾತನಾಡಿದ್ದಕ್ಕೆ…

Read More

ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್‌ ವೇ ಟೋಲ್ ದರ ಮತ್ತೆ ಏರಿಕೆ: ಎಷ್ಟು ಹೆಚ್ಚಳ? ಇಲ್ಲಿದೆ ಮಾಹಿತಿ – Kannada News | Bengaluru Mysore Expressway Toll Rates Hiked Again: Check New Toll Tariffs for Cars, Buses, and Heavy Vehicles

ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್‌ ವೇ ಟೋಲ್ ದರ ಮತ್ತೆ ಏರಿಕೆ ಬೆಂಗಳೂರು, ಜುಲೈ 23: ಮೂರು ತಿಂಗಳೊಳಗೆ ಎರಡನೇ ಬಾರಿಗೆ ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್‌ವೇಯ ಟೋಲ್​​ ದರಗಳನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಪರಿಷ್ಕರಿಸಿದ್ದು, ಕನಿಮಿಣಿಕೆ ಮತ್ತು ಶೇಷಗಿರಿಹಳ್ಳಿ ಟೋಲ್ ಪ್ಲಾಜಾಗಳಲ್ಲಿ ದರ ಹೆಚ್ಚಳ ಮಾಡಲಾಗಿದೆ. ಆ ಮೂಲಕ ವಾಹನ ಸವಾರರಿಗೆ ಮತ್ತೆ ದರ ಏರಿಕೆಯ ಬಿಸಿ ತಟ್ಟಿದೆ. ಹೊಸ ದರಗಳು ಜುಲೈ 21ರ ಮಧ್ಯರಾತ್ರಿಯಿಂದ ಜಾರಿಗೆ ಬಂದಿದ್ದು, ಎನ್‌ಎಚ್-275ರ ಆರು ಪಥದ ಬೆಂಗಳೂರು–ನಿಡಘಟ್ಟ ಮಾರ್ಗಕ್ಕೆ ಅನ್ವಯವಾಗಲಿವೆ. 2023ರಲ್ಲಿ ಎಕ್ಸ್‌ಪ್ರೆಸ್‌ವೇ…

Read More

ಬೇಸಿಗೆಯಲ್ಲಿ ಕಾಡುವ ಆಯಾಸ, ನಿರ್ಜಲೀಕರಣವನ್ನು ದೂರ ಮಾಡಲು ಸೇವಿಸಲೇಬೇಕಾದ ಆಹಾರಗಳು

ಈ ಸುಡು ಬೇಸಿಗೆಯಲ್ಲಿ (summer) ದಿನದಿಂದ ದಿನಕ್ಕೆ ಬಿಸಿಲಿನ ಝಳ ಹೆಚ್ಚಾಗುತ್ತಿದೆ. ಬಿಸಿಲಿನ ತಾಪಕ್ಕೆ ಆಯಾಸ, ಸುಸ್ತು, ನಿರ್ಜಲೀಕರಣದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಆದ್ದರಿಂದ  ಈ ಸಮಯದಲ್ಲಿ ದೇಹವನ್ನು ಹೈಡ್ರೇಟ್‌ ಆಗಿ ಇಟ್ಟುಕೊಳ್ಳುವುದು ತುಂಬಾನೇ ಮುಖ್ಯ. ಇದಕ್ಕಾಗಿ ಸಾಕಷ್ಟು ನೀರು ಕುಡಿದರೆ ಸಾಕು ಎಂದು ಹಲವರು ಭಾವಿಸುತ್ತಾರೆ. ಆದರೆ ಸಾಕಷ್ಟು ಪ್ರಮಾಣದ ನೀರನ್ನು ಕುಡಿದರೂ ಬಿರು ಬೇಸಿಗೆಯಲ್ಲಿ ದೇಹ ಹೆಚ್ಚು ಬೆವರುವ ಕಾರಣ ನಿರ್ಜಲೀಕರಣ ಸಮಸ್ಯೆ ಕಾಣಿಸಿಕೊಳ್ಳಬಹುದು. ಹಾಗಾಗಿ ಸಾಕಷ್ಟು ಪ್ರಮಾಣದ ನೀರನ್ನು ಕುಡಿಯುವುದರ ಜೊತೆಗೆ ನಿರ್ಜಲೀಕರಣವನ್ನು ತಡೆಗಟ್ಟಲು…

Read More