Headlines

ಬಾಗೇಪಲ್ಲಿ ಭೀಕರ ರಸ್ತೆ ಅಪಘಾತ ಪ್ರಕರಣ: ತನಿಖೆ ಬೆನ್ನಲ್ಲೇ ಶಾಕಿಂಗ್ ಹೇಳಿಕೆ ನೀಡಿದ ಚಿಕ್ಕಬಳ್ಳಾಪುರ ಎಸ್​​ಪಿ

ಬೆಂಗಳೂರು, ಮೇ.31: ಬಾಗೇಪಲ್ಲಿ ತಾಲೂಕಿನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಒಟ್ಟು ಆರು ಮಂದಿ ಸಾವನ್ನಪ್ಪಿದ್ದಾರೆ. ಬೆಂಗಳೂರು-ಹೈದರಾಬಾದ್ ಹೆದ್ದಾರಿಯಲ್ಲಿ ಮಧ್ಯಾಹ್ನ ಸುಮಾರು 3 ಗಂಟೆಗೆ ಈ ದುರ್ಘಟನೆ ನಡೆದಿದೆ. ಗಾರೆ ಕೆಲಸ ಮುಗಿಸಿ ಹಿಂತಿರುಗುತ್ತಿದ್ದ ಹತ್ತು ಜನರನ್ನು (ಒಬ್ಬ ಚಾಲಕ ಮತ್ತು ಒಂಬತ್ತು ಮಹಿಳೆಯರು) ಕರೆದೊಯ್ಯುತ್ತಿದ್ದ ಆಟೋಗೆ, ಅತಿ ವೇಗವಾಗಿ ಬಂದ ಥಾರ್ ವಾಹನವು ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಈ ಪರಿಣಾಮದಿಂದ, ಆಟೋ ವಾಹನವು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಲಾರಿ ಮತ್ತು ಥಾರ್ ವಾಹನಗಳ ನಡುವೆ ಸಿಲುಕಿ…

Read More

ರಶ್ಮಿಕಾ-ವಿಜಯ್ ಫ್ಯಾನ್ಸ್​​ಗೆ ಕೊಟ್ಟ ಸ್ವೀಟ್ ಬಾಕ್ಸ್ ಅಲ್ಲಿ ಏನೆಲ್ಲ ಇದೆ?

ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಅವರು ಇತ್ತೀಚೆಗೆ ಮದುವೆ ಆದರು. ಅವರ ವಿವಾಹ ವಿಷಯ ಸಾಕಷ್ಟು ಚರ್ಚೆ ಹುಟ್ಟುಹಾಕಿತು. ವಿವಾಹ ಆದ ಬಳಿಕ ರಶ್ಮಿಕಾ ಹಾಗೂ ವಿಜಯ್ ಒಟ್ಟಾಗಿ ತಿರುಪತಿ ತೆರಳಿದ್ದರು. ಈ ವೇಳೆ ಅಭಿಮಾನಿಗಳಿಗೆ ಸಿಹಿ ವಿತರಣೆ ಮಾಡಿದ್ದರು. ಸ್ವೀಟ್ ಬಾಕ್ಸ್ ಸಿಕ್ಕ ಫ್ಯಾನ್ಸ್ ಇದನ್ನು ಶೇರ್ ಮಾಡಿಕೊಂಡಿದ್ದಾರೆ.  ರಸಗುಲ್ಲಾ, ಲಾಡು ಸೇರಿ ಮೂರು ವಿಧದ ಸ್ವೀಟ್ ಇವೆ. ಈ ವಿಡಿಯೋ ನೋಡಿದ ಅನೇಕರು, ‘ಸ್ವೀಟ್​​ಗಿಂತ ಬಾಕ್ಸ್​​ಗೆ ಹೆಚ್ಚು ಖರ್ಚಾಗಿದೆ’ ಎಂದು ಅಣಕಿಸಿದ್ದಾರೆ. ಇನ್ನಷ್ಟು…

Read More

ಸಾಕ್ಷಿಗೆ ಬೆದರಿಕೆ ಹಾಕಿ ಅರೆಸ್ಟ್ ಆದ ದರ್ಶನ್ ಅಭಿಮಾನಿಗಳು; ಈ ಮೂವರ ಹಿನ್ನೆಲೆ ಏನು? – Kannada News | Darshan fans arrested for threatening witness of Renukaswamy case

ಅಭಿಮಾನಿಗಳ ಅಭಿಮಾನವೇ ನಟ ದರ್ಶನ್ ಅವರಿಗೆ ಸಂಕಷ್ಟ ತಂದೊಡ್ಡಿದೆ. ಮೂವರು ದರ್ಶನ್ ಅಭಿಮಾನಿಗಳನ್ನು ಪೊಲೀಸರು ಬಂಧಿಸಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಪ್ರಮುಖ ಆರೋಪಿ ಆಗಿದ್ದಾರೆ. ಸದ್ಯ ಅವರು ಜೈಲಿನಲ್ಲಿದ್ದು, ಪ್ರಕರಣದ ವಿಚಾರಣೆ ನಡೆಯುತ್ತಿದೆ. ಈ ಪ್ರಕರಣದ ಸಾಕ್ಷಿಗಳಿಗೆ ಬೆದರಿಕೆ ಹಾಕಿದ ಆರೋಪದಲ್ಲಿ ಮೂವರು ಅಭಿಮಾನಿಗಳನ್ನು ಕಾಮಾಕ್ಷಿಪಾಳ್ಯ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಂಧಿತರನ್ನು ವೇಣು, ಸುಹಾಸ್ ಮತ್ತು ಪುನೀತ್ ಎಂದು ಗುರುತಿಸಲಾಗಿದೆ. ಅಭಿಮಾನದ ಅತಿರೇಕದಿಂದ ಸಾಕ್ಷಿಗಳಿಗೆ ಬೆದರಿಕೆ ಹಾಕಿದ್ದಕ್ಕೆ ಈ ಮೂವರಿಗೂ ಇಂಥ ಸ್ಥಿತಿ ಬಂದಿದೆ. ಅಭಿಮಾನಿಗಳ…

Read More

ಒಟಿಟಿ, ಚಿತ್ರಮಂದಿರದಲ್ಲಿ ಏಕಕಾಲಕ್ಕೆ ರಿಲೀಸ್ ಆಗಲಿದೆ ‘ಹೌದ್ದೋ ಹುಲಿಯ’ ಸಿನಿಮಾ – Kannada News | Vaijanath Biradar new movie Howdu Huliya releasing both in OTT and theatre

ಪಕ್ಕಾ ಉತ್ತರ ಕರ್ನಾಟಕ ಭಾಷೆಯ ಸೊಗಡಿರುವ ಹೊಸ ಕಾಮಿಡಿ ಸಿನಿಮಾ ‘ಹೌದ್ದೋ ಹುಲಿಯ’ (Howdu Huliya) ಬಿಡುಗಡೆಗೆ ಸಜ್ಜಾಗಿದೆ. ‘ಸ್ವಯಂ ಪ್ರಭಾ ಎಂಟರ್‌ಟೈನ್‌ಮೆಂಟ್ ಆ್ಯಂಡ್ ಪ್ರೊಡಕ್ಷನ್ಸ್’ ಸಂಸ್ಥೆಯ ಮೂಲಕ ಈ ಸಿನಿಮಾ ನಿರ್ಮಾಣ ಆಗಿದೆ. ಜನವರಿ 30ರಂದು ಈ ಸಿನಿಮಾ ರಿಲೀಸ್ ಆಗಲಿದೆ. ವಿಶೇಷ ಏನೆಂದರೆ, ಒಂದು ಪ್ರಯೋಗಕ್ಕೆ ಚಿತ್ರತಂಡ ಮುಂದಾಗಿದೆ. ಏಕಕಾಲದಲ್ಲಿ ಚಿತ್ರಮಂದಿರ ಹಾಗೂ ‘ಟಾಕೀಸ್’ ಒಟಿಟಿ (OTT) ಮೂಲಕ ಈ ಚಿತ್ರ ಬಿಡುಗಡೆ ಆಗಲಿದೆ. ‘ಹೌದ್ದೋ ಹುಲಿಯ’ ಸಿನಿಮಾದಲ್ಲಿ ವೈಜನಾಥ್ ಬಿರಾದರ್ (Vaijanath Biradar)…

Read More

Vastu Power: ಮನೆಯ ಮುಖ್ಯ ದ್ವಾರಕ್ಕೆ ಸಿಂಧೂರ ಹಚ್ಚುವುದರ ಹಿಂದಿರುವ ರಹಸ್ಯ ಮತ್ತು ಪ್ರಯೋಜನಗಳು

ಹಿಂದೂ ಧರ್ಮದಲ್ಲಿ ಮನೆಯ ಮುಖ್ಯ ದ್ವಾರವನ್ನು ಕೇವಲ ಪ್ರವೇಶ ದ್ವಾರವೆಂದು ಪರಿಗಣಿಸದೆ, ಶಕ್ತಿಯ ಮೂಲವೆಂದು ನಂಬಲಾಗುತ್ತದೆ. ಅನೇಕರು ಬಾಗಿಲಿಗೆ ಸಿಂಧೂರ ಮತ್ತು ಎಣ್ಣೆಯ ತಿಲಕವನ್ನು ಹಚ್ಚುವುದನ್ನು ನೀವು ನೋಡಿರಬಹುದು. ವಾಸ್ತು ಶಾಸ್ತ್ರದ ಪ್ರಕಾರ ಇದರ ಅದ್ಭುತ ಪ್ರಯೋಜನಗಳನ್ನು ಇಲ್ಲಿ ತಿಳಿದುಕೊಳ್ಳಿ. ನಕಾರಾತ್ಮಕ ಶಕ್ತಿಯಿಂದ ರಕ್ಷಣೆ: ಸಿಂಧೂರವು ಶಕ್ತಿಯ ಸಂಕೇತವಾದರೆ, ಎಣ್ಣೆಯು ಸ್ಥಿರತೆಯನ್ನು ಪ್ರತಿನಿಧಿಸುತ್ತದೆ. ಇವೆರಡರ ಮಿಶ್ರಣವನ್ನು ಮುಖ್ಯ ದ್ವಾರಕ್ಕೆ ಹಚ್ಚುವುದರಿಂದ ಮನೆಗೆ ಒಂದು ‘ರಕ್ಷಣಾತ್ಮಕ ಗುರಾಣಿ’ ಸೃಷ್ಟಿಯಾಗುತ್ತದೆ. ಇದು ದುಷ್ಟ ಶಕ್ತಿಗಳು ಮತ್ತು ಅಶುಭ ಕಂಪನಗಳು ಮನೆಯೊಳಗೆ…

Read More

ಬದುಕಿದ್ದರೂ ದಾಖಲೆಯಲ್ಲಿ ‘ಮೃತ’: ಅಧಿಕಾರಿಗಳ ಎಡವಟ್ಟಿಗೆ ಹಂಪಮ್ಮ ಪರದಾಟ; ಉಪ ಲೋಕಾಯುಕ್ತರು ಮಾಡಿದ್ದೇನೆ ನೋಡಿ

ಹೊಸಪೇಟೆ, ಏ,3: ಜೀವಂತವಾಗಿದ್ದರೂ ಮಹಿಳೆಯೊಬ್ಬರನ್ನು ದಾಖಲೆಗಳಲ್ಲಿ ‘ಮೃತ’ ಎಂದು ತೋರಿಸಿ, ಸರ್ಕಾರದ ಸವಲತ್ತುಗಳಿಂದ ವಂಚಿತರನ್ನಾಗಿಸಿದ ಹೊಸಪೇಟೆ ತಾಲ್ಲೂಕಿನ ಕಂದಾಯ ಅಧಿಕಾರಿಗಳ ವಿರುದ್ಧ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಅವರು ಸ್ವಯಂಪ್ರೇರಿತ (Suo Motu) ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹೊಸಪೇಟೆ ತಾಲ್ಲೂಕಿನ ಧರ್ಮಸಾಗರ ಗ್ರಾಮದ ನಿವಾಸಿ ಎನ್. ಹಂಪಮ್ಮ ಅವರು ಈ ದುರಾಡಳಿತದ ಬಲಿಪಶು. ಅದೇ ಗ್ರಾಮದ ಎನ್. ತಿಮ್ಮಾರೆಡ್ಡಿ ಅವರ ಪತ್ನಿ ಹಂಪಮ್ಮ ಎಂಬುವವರು 2024 ರಲ್ಲಿ ನಿಧನರಾಗಿದ್ದರು. ಆದರೆ, ಅಧಿಕಾರಿಗಳು ಯಾವುದೇ ಪ್ರಾಥಮಿಕ ಪರಿಶೀಲನೆ ನಡೆಸದೆ,…

Read More

ಚಿನ್ನ ಅಡವಿಟ್ಟ ಗ್ರಾಹಕರಿಗೆ ‘ಮಕ್ಮಲ್ ಟೋಪಿ’! ಕೋಟ್ಯಾಂತರ ರೂ. ವಂಚಿಸಿ ಜ್ಯುವೆಲರಿ ಶಾಪ್ ಮಾಲೀಕ ಪರಾರಿ – Kannada News | Bengaluru Gold Fraud: Raghavendra Jewellery Owner Tejas Gowda Cons Customers; FIR Registered

ತೇಜಸ್ ಗೌಡ ಮತ್ತು ಆತನ ಜ್ಯುವೆಲರಿ ಶಾಪ್ ಬೆಂಗಳೂರು, ಮೇ 09: ಜನರು ಕಷ್ಟ ಅಂತ ತಮ್ಮ ಬೆಲೆಬಾಳುವ ಚಿನ್ನಾಭರಣವನ್ನು (Gold Jewellery)ಅಡವಿಟ್ಟರೆ, ಇಲ್ಲೊಬ್ಬ ಜ್ಯುವೆಲರಿ ಶಾಪ್ ಮಾಲೀಕ ಜನರಿಗೇ ಪಂಗನಾಮ ಹಾಕಿದ್ದಾನೆ. ಬೆಂಗಳೂರಿನಲ್ಲಿ ಕಡಿಮೆ ಬಡ್ಡಿಯ ಆಸೆ ತೋರಿಸಿ ಗ್ರಾಹಕರಿಂದ ಚಿನ್ನ ಪಡೆದ ಆಸಾಮಿ ಈಗ ಅಂಗಡಿ ಬಾಗಿಲು ಮುಚ್ಚಿಕೊಂಡು ಪರಾರಿಯಾಗಿದ್ದಾನೆ. ಮುಖ್ಯಾಂಶಗಳು ಕಡಿಮೆ ಬಡ್ಡಿ ಆಸೆ ತೋರಿಸಿ ಗ್ರಾಹಕರಿಗೆ ಮೋಸ ತನ್ನ ಶಾಪ್​ನಲ್ಲೇ ಚಿನ್ನ ಅಡವಿರಿಸಿ ಮೋಸ ಶಾಪ್ ಬಂದ್ ಮಾಡಿ ವ್ಯಕ್ತಿ ಪರಾರಿ…

Read More

ಭಾರತದ ಮೊದಲ ಹೈಡ್ರೋಜನ್ ಟ್ರೈನ್; ಇದು ವಿಶ್ವದ ಅತಿ ಶಕ್ತಿಶಾಲಿ, ಅತಿ ಉದ್ದದ ಜಲಜನಕ ರೈಲು – Kannada News | India’s first and world most powerful Hydrogen Train to run from July 17th

ಚಂಡೀಗಡ್, ಜುಲೈ 16: ಭಾರತದ ಮೊದಲ ಹೈಡ್ರೋಜನ್ ರೈಲು (Hydrogen Train) ಜುಲೈ 17, ಶುಕ್ರವಾರ ಬೆಳಗ್ಗೆ 7.40ಕ್ಕೆ ಪ್ರಧಾನಿ ಮೋದಿ ಅವರಿಂದ ಚಾಲನೆಗೊಳ್ಳಲಿದೆ. ಹರ್ಯಾಣದ ಜಿಂದ್​ನಿಂದ ಸೋನೆಪತ್​ವರೆಗೆ 89 ಕಿಮೀ ಮಾರ್ಗದಲ್ಲಿ ಈ ರೈಲು ಸಂಚರಿಸಲಿದೆ. ಜಿಂದ್ ರೈಲ್ವೆ ನಿಲ್ದಾಣದಿಂದ 7.40ಕ್ಕೆ ಹೊರಟು ಸೋನೆಪತ್ ನಿಲ್ದಾಣಕ್ಕೆ 9.40ಕ್ಕೆ ತಲುಪಲಿದೆ. ಈ ರೈಲು ಸೇವೆ ಪದಾರ್ಪಣೆಗೊಂಡಿರುವುದು ಭಾರತದ ಪಾಲಿಗೆ ಮತ್ತೊಂದು ಐತಿಹಾಸಿಕ ಮೈಲಿಗಲ್ಲೆನಿಸಿದೆ. ಹೈಡ್ರೋಜನ್ ಶಕ್ತ ರೈಲು ಸೇವೆ ಆರಂಭಿಸಿರುವ ಕೆಲವೇ ದೇಶಗಳ ಗುಂಪಿಗೆ ಭಾರತ ಸೇರ್ಪಡೆಯಾಗಿದೆ….

Read More

ಇನ್ನು ಮುಂದೆ ಸಿನಿಮಾ ನಿರ್ದೇಶನ ಮಾಡಲ್ಲ; ನಿವೃತ್ತಿ ಘೋಷಿಸಿದ ಆಲಿಯಾ ಭಟ್ ತಂದೆ – Kannada News | Mahesh Bhatt Quits Directing: Bollywood Legend Retires to Mentor New Talent

ಬಾಲಿವುಡ್‌ನ ಹಿರಿಯ ನಿರ್ದೇಶಕ, ಆಲಿಯಾ ಭಟ್ ತಂದೆ ಮಹೇಶ್ ಭಟ್ ಅವರು ಚಿತ್ರ ನಿರ್ದೇಶನಕ್ಕೆ ಅಧಿಕೃತವಾಗಿ ನಿವೃತ್ತಿ ಘೋಷಿಸಿದ್ದಾರೆ. ತಾವು ಇನ್ನು ಮುಂದೆ ಎಂದಿಗೂ ನಿರ್ದೇಶಕನ ಕ್ಯಾಪ್ ತೊಡೋದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ‘ಅರ್ಥ್’, ‘ಸಾರಂಶ್’, ‘ನಾಮ್’, ‘ದಿಲ್ ಹೈ ಕಿ ಮಾಂತಾ ನಹೀ’ ಮತ್ತು ‘ಸಡಕ್’ ನಂತಹ ಅದ್ಭುತ ಸಿನಿಮಾಗಳನ್ನು ನೀಡಿದ ಅವರು ಈಗ ಚಿತ್ರರಂಗದಿಂದ ದೂರ ಸರಿದಿದ್ದಾರೆ. ಪ್ರಸ್ತುತ ಹೊಸ ಪ್ರತಿಭೆಗಳಿಗೆ ಮಾರ್ಗದರ್ಶನ ನೀಡುವುದರಲ್ಲಿ ತಮಗೆ ಹೆಚ್ಚಿನ ಸಂತೋಷ ಸಿಗುತ್ತಿದೆ ಎಂದು ಅವರು ಹೇಳಿದ್ದಾರೆ….

Read More

World Sleep Day 2026: ಆಹಾರ, ವ್ಯಾಯಾಮದಷ್ಟೇ ಉತ್ತಮ ನಿದ್ರೆಯೂ ನಮ್ಮ ಆರೋಗ್ಯಕ್ಕೆ ಅತ್ಯಗತ್ಯ

ನಮ್ಮ ಆರೋಗ್ಯಕ್ಕೆ ಊಟ, ನೀರು, ವ್ಯಾಯಾಮ ಎಷ್ಟು ಮುಖ್ಯವೋ ಅದೇ ರೀತಿ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಸರಿಯಾದ ನಿದ್ರೆಯೂ (Sleep) ಅಷ್ಟೇ ಮುಖ್ಯ. ಆದ್ರೆ ಇಂದಿನ ಈ ಸ್ಮಾರ್ಟ್‌ ಫೋನ್‌ ಯುಗದಲ್ಲಿ ಜನ ಸರಿಯಾಗಿ ನಿದ್ರೆ ಮಾಡುತ್ತಿಲ್ಲ, ಇಡೀ ದಿನ ಮೊಬೈಲ್‌ ಫೋನ್‌ ನೋಡುತ್ತಾ ಸಮಯ ಕಳೆಯುತ್ತಾರೆ. ಹೀಗೆ ಸರಿಯಾಗಿ ನಿದ್ರೆ ಮಾಡದಿದ್ದರೆ ಸಾಕಷ್ಟು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಆದ್ದರಿಂದ ನಿದ್ರೆಯ ಮಹತ್ವವನ್ನು ತಿಳಿಸಲು ಮತ್ತು ಉತ್ತಮ ನಿದ್ರೆ ಪಡೆಯುವುದು ಏಕೆ ಮುಖ್ಯ ಎಂಬುದರ ಕುರಿತು…

Read More