Headlines

Karnataka LPG Crisis: ಬೆಂಗಳೂರಿನಲ್ಲಿ ಆಟೋ ಗ್ಯಾಸ್​ಗಾಗಿ ಕಿ.ಮೀ ದೂರ ಫುಲ್ ಕ್ಯೂ!

ಬೆಂಗಳೂರು, ಏಪ್ರಿಲ್ 01: ಬೆಂಗಳೂರಿನಲ್ಲಿ ಆಟೋ ಎಲ್‌ಪಿಜಿ ಕೊರತೆ ತೀವ್ರಗೊಂಡಿದ್ದು, ಚಾಲಕರು ಅಭೂತಪೂರ್ವ ಸಂಕಷ್ಟಕ್ಕೆ ಸಿಲುಕಿದ್ದಾರೆ. ನಗರದ ಹೆಬ್ಬಾಳದ ಗುಡ್ಡದಹಳ್ಳಿ ವೃತ್ತ ಮತ್ತು ನವರಂಗ್ ಸೇರಿದಂತೆ ವಿವಿಧ ಎಲ್‌ಪಿಜಿ ಬಂಕ್‌ಗಳಲ್ಲಿ ಕಿಲೋಮೀಟರ್‌ಗಟ್ಟಲೆ ಉದ್ದದ ಸರತಿ ಸಾಲುಗಳು ಕಂಡುಬರುತ್ತಿವೆ. ಬೆಳಗ್ಗಿನ ಜಾವ 4-6 ಗಂಟೆಗಳಿಂದಲೇ ಚಾಲಕರು ಗ್ಯಾಸ್‌ಗಾಗಿ ಕಾಯುತ್ತಿದ್ದಾರೆ. ಅನೇಕ ಗ್ಯಾಸ್ ಏಜೆನ್ಸಿಗಳು ಸ್ಟಾಕ್ ಇಲ್ಲ ಎನ್ನುತ್ತಿದ್ದರೆ ಲಭ್ಯವಿರುವ ಕೆಲವು ಬಂಕ್‌ಗಳಲ್ಲೂ, ಪೂರ್ಣ ಟ್ಯಾಂಕ್ ಬದಲಾಗಿ ಪ್ರತಿ ಆಟೋಗೆ 400 ರೂ. ಮೌಲ್ಯದ ಸೀಮಿತ ಪ್ರಮಾಣದ ಗ್ಯಾಸ್ ಮಾತ್ರ…

Read More

ಇಸ್ರೇಲ್ ಪ್ರಧಾನಿ ನೆತನ್ಯಾಹು ವಾಷಿಂಗ್ಟನ್ ಭೇಟಿ: ಡೊನಾಲ್ಡ್ ಟ್ರಂಪ್ ಭೇಟಿ ಮತ್ತು ನ್ಯೂಯಾರ್ಕ್ ಪ್ರವಾಸದ ಸುತ್ತ ರಾಜಕೀಯ ವಿವಾದ – Kannada News | Netanyahu’s US Visit: Trump Meeting, Iran Talks and ICC Warrant Controversy

ವಾಷಿಂಗ್ಟನ್, ಜುಲೈ 27: ಅಂತಾರಾಷ್ಟ್ರೀಯ ರಾಜಕೀಯ ಮತ್ತು ಭೌಗೋಳಿಕ ಉದ್ವಿಗ್ನತೆಗಳ ನಡುವೆಯೇ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಶ್ವೇತಭವನದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಅವರನ್ನು ಭೇಟಿಯಾಗಲು ವಾಷಿಂಗ್ಟನ್‌ಗೆ ಆಗಮಿಸುತ್ತಿದ್ದಾರೆ. ಇತ್ತೀಚೆಗೆ ನಿಧನರಾದ ಇಸ್ರೇಲ್ ಬೆಂಬಲಿಗ ಸೆನೆಟರ್ ಲಿಂಡ್ಸೆ ಗ್ರಹಾಂ ಅವರ ಸ್ಮರಣಾರ್ಥ ಕಾರ್ಯಕ್ರಮದಲ್ಲೂ ಅವರು ಭಾಗವಹಿಸಲಿದ್ದಾರೆ. ಇರಾನ್ ವಿರುದ್ಧದ ಯುದ್ಧ, ಪರಮಾಣು ಯೋಜನೆಗಳ ವಿನಾಶ ಹಾಗೂ ಲೆಬನಾನ್‌ನಲ್ಲಿ ಹಿಜ್ಬುಲ್ಲಾ ನಿಶ್ಶಸ್ತ್ರೀಕರಣದ ಕುರಿತು ಉಭಯ ನಾಯಕರು ನಿರ್ಣಾಯಕ ಚರ್ಚೆ ನಡೆಸಲಿದ್ದಾರೆ.ಫಾಕ್ಸ್ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ…

Read More

ವಿಶ್ವನಾಥ ವಿರುದ್ಧ ಎಫ್‌ಐಆರ್: ಸಿಎಂ ಸಿದ್ದರಾಮಯ್ಯ ಪುತ್ರನ ವಿರುದ್ಧ ಸ್ಫೋಟಕ ಆರೋಪ – Kannada News | BJP MLC H Vishwanath Makes Serious Allegations Against Yathindra Siddaramaiah Over Loan Assault Case

ಮೈಸೂರು, (ಮೇ 20):ಸಾಲದ ಹಣ ವಾಪಸ್ ಕೇಳಲು ಹೋದ ವ್ಯಕ್ತಿ ಮೇಲೆ ಹಲ್ಲೆ ಮಾಡಿದ ಆರೋಪದ ಮೇಲೆ ಬಿಜೆಪಿ ವಿಧಾನಪರಿಷತ್ ಸದಸ್ಯ ಎಚ್​​​ ವಿಶ್ವನಾಥ್ (H Vishwanath) ವಿರುದ್ಧ ಎಫ್​​ಐಆರ್ ದಾಖಲಾಗಿದೆ. ಮಹದೇವ್ ಎನ್ನುವ ವ್ಯಕ್ತಿ ಎಂಟಿಬಿ ನಾಗರಾಜ್ ಅವರ ಮೂಲಕ ವಿಶ್ವನಾಥ್​ ಅವರಿಗೆ ಸಾಲ ಕೊಡಿಸಿದ್ದರು. ಬಳಿಕ ಆ ಹಣವನ್ನು ವಾಪಸ್ ಕೇಳಿದ್ದಕ್ಕೆ ಹಲ್ಲೆ ಮಾಡಿದ್ದಾರೆಂದು ಆರೋಪಿಸಿದ್ದು, ಈ ಸಂಬಂಧ ನ್ಯಾಯಾಲದ ಮೊರೆ ಹೋಗಿದ್ದರು. ಇದೀಗ ಕೋರ್ಟ್ ಆದೇಶದ ಮೇರೆಗೆ ವಿಶ್ವನಾಥ್ ವಿರುದ್ಧ ದೇವರಾಜ ಠಾಣೆಯಲ್ಲಿ…

Read More

Video: ಹೊಸ ವರ್ಷಾಚರಣೆ ವೇಳೆ ಸ್ವಿಟ್ಜರ್​ಲ್ಯಾಂಡ್​ನ ಬಾರ್‌ನಲ್ಲಿ ಬಾಂಬ್ ಸ್ಫೋಟ, ಹಲವು ಮಂದಿ ಸಾವು – Kannada News | Deadly Explosion Hits Bar in Upscale Swiss Ski Resort

ಸ್ವಿಟ್ಜರ್​ಲ್ಯಾಂಡ್, ಜನವರಿ 01: ಹೊಸ ವರ್ಷದ ಸಂಭ್ರಮದಲ್ಲಿ ಸೂತಕದ ಛಾಯೆ ಮೂಡಿದೆ. ಸ್ವಿಟ್ಜರ್ಲೆಂಡ್‌ನ ಬಾರೊಂದರಲ್ಲಿ ಬಾಂಬ್ ಸ್ಫೋಟ ಸಂಭವಿಸಿದ್ದು, ಹಲವು ಮಂದಿ ಮೃತಪಟ್ಟಿರುವ ಕುರಿತು ಮಾಹಿತಿ ಲಭ್ಯವಾಗಿದೆ. ಸ್ವಿಸ್ ಪೊಲೀಸರು ಸ್ವಿಸ್ ನಗರದ ಕ್ರಾನ್ಸ್-ಮೊಂಟಾನಾದಲ್ಲಿ ಸಂಭವಿಸಿದೆ ಎಂದು ಹೇಳಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾರೆ. ಸ್ಫೋಟದ ನಂತರ, ಬಾರ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಈ ಬೆಂಕಿಯಲ್ಲಿ ಹಲವಾರು ಜನರು ಸಿಲುಕಿಕೊಂಡಿದ್ದಾರೆ. ಸ್ವಿಸ್ ಪೊಲೀಸ್ ರಕ್ಷಣಾ ತಂಡಗಳು ಅವರನ್ನು ಬಾರ್‌ನಿಂದ ಸ್ಥಳಾಂತರಿಸಿ ಆಸ್ಪತ್ರೆಗೆ ಕಳುಹಿಸುವ ಕೆಲಸ ಮಾಡುತ್ತಿದೆ….

Read More

ಮೃತ IAS ಮಹಾಂತೇಶ್​ ಪುತ್ರಿಗೆ ಯಾವ ಇಲಾಖೆಯಲ್ಲಿ ಕೆಲಸ? ಎಷ್ಟು ಸಂಬಳ? ಇಲ್ಲಿದೆ ವಿವರ

ದಕ್ಷ ಹಾಗೂ ಜನಸ್ನೇಹಿ ಆಡಳಿತಕ್ಕೆ ಹೆಸರಾಗಿದ್ದ ದಿವಂಗತ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಅವರ ಕುಟುಂಬಕ್ಕೆ ಅನುಕಂಪದ ಕೆಲಸ ನೀಡಬೇಕೆಂಬ ಕೂಗು ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರ ಇತ್ತೀಚೆಗೆ ಮಹಾಂತೇಶ್ ಅವರ ಪುತ್ರಿ ಚೈತನ್ಯ ಮಹಾಂತೇಶ್ ಬೀಳಗಿ ಅವರಿಗೆ ಸರ್ಕಾರಿ ನೌಕರಿ ನೀಡಲು ಸಚಿವ ಸಂಪುಟ ಮಹತ್ವದ ತೀರ್ಮಾನ ಕೈಗೊಂಡಿತ್ತು. ಅದರಂತೆ ಇದೀಗ ಮಹಾಂತೇಶ್ ಪುತ್ರಿಗೆ ಅಧಿಕೃತವಾಗಿ ನೇಮಕಾತಿ ಆದೇಶವನ್ನು ನೀಡಲಾಗಿದೆ. ಭಾರತೀಯ ಆಡಳಿತ ಸೇವೆಗೆ ಸೇರಿದ ದಕ್ಷ ಅಧಿಕಾರಿಯಾಗಿದ್ದ ಮಹಾಂತೇಶ್ ಬೀಳಗಿ ಅವರು ಸೇವೆಯಲ್ಲಿದ್ದಾಗಲೇ ದಿನಾಂಕ…

Read More

Ugadi 2026: ಈ ವರ್ಷ ಯುಗಾದಿ ಹಬ್ಬ ಯಾವಾಗ ? ಈ ದಿನ ಏನು ಮಾಡಬೇಕು ಮತ್ತು ಏನು ಮಾಡಬಾರದು?

ಹಿಂದೂ ಧರ್ಮದ ನಂಬಿಕೆಯಂತೆ ಯುಗಾದಿಯು ಸೃಷ್ಟಿಯ ಆರಂಭದ ದಿನ ಹಾಗೂ ಹೊಸ ವರ್ಷದ ಮುನ್ನುಡಿ. ಈ ಬಾರಿ ಅಂದರೆ 2026ರಲ್ಲಿ ಯುಗಾದಿ ಹಬ್ಬವನ್ನು ಮಾರ್ಚ್ 19, ಗುರುವಾರದಂದು ಆಚರಿಸಲಾಗುತ್ತಿದೆ. ಕರ್ನಾಟಕ ಮತ್ತು ಆಂಧ್ರಪ್ರದೇಶದ ಬಹುತೇಕ ಭಾಗಗಳಲ್ಲಿ ಚಾಂದ್ರಮಾನ ಯುಗಾದಿಯನ್ನು ಅತ್ಯಂತ ಸಡಗರದಿಂದ ಆಚರಿಸಲಾಗುತ್ತದೆ. ಅಂದು ಮುಂಜಾನೆಯ ಶುಭ ಮುಹೂರ್ತಗಳಾದ ಬೆಳಿಗ್ಗೆ 5:00 ರಿಂದ 7:30 ಅಥವಾ 9:00 ರಿಂದ 11:30 ರ ಅವಧಿಯಲ್ಲಿ ದೈವಿಕ ಆರಾಧನೆಗೆ ಅತ್ಯಂತ ಪ್ರಶಸ್ತವಾದ ಸಮಯವಾಗಿದೆ. ಯುಗಾದಿ ಹಬ್ಬದಂದು ಏನು ಮಾಡಬೇಕು? ಈ…

Read More

ಬೆಂಗಳೂರಿನಲ್ಲಿ ಈ ಎರಡು ದಿನ ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯ, ಯಾವಾಗ-ಎಲ್ಲೆಲ್ಲಿ? – Kannada News | Bengaluru to face 2 day Cauvery water disruption on Feb 5 And 6 due to BWSSB emergency pipeline works

ಬೆಂಗಳೂರು, (ಫೆಬ್ರವರಿ 02): ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ವ್ಯಾಪ್ತಿಯಲ್ಲಿ ತುರ್ತು ನಿರ್ವಹಣೆ ಕಾಮಗಾರಿ ಕೈಗೊಳ್ಳಲಿದೆ. ಹೀಗಾಗಿ ಇದೇ ಫೆಬ್ರವರಿ 5 ಮತ್ತು 6ರಂದು ಬೆಂಗಳೂರು ನಗರದ ವಿವಿಧೆಡೆ ಕಾವೇರಿ ನೀರು (Cauvery water )ಸರಬರಾಜುವಿನಲ್ಲಿ ವ್ಯತ್ಯಯವಾಗಲಿದೆ. ಈ ಬಗ್ಗೆ ಜಲಮಂಡಳಿ ಅಧ್ಯಕ್ಷರಾದ ಡಾ.ವಿ.ರಾಮ್‌ ಪ್ರಸಾತ್‌ ಮನೋಹರ್‌ ಮಾಹಿತಿ ನೀಡಿದ್ದು, ನಾಗರಿಕರು ಮುಂಜಾಗ್ರತೆಯಾಗಿ ನೀರನ್ನು ಸಂಗ್ರಹಿಸಿಟ್ಟುಕೊಳ್ಳಲು ಸೂಚಿಸಿದ್ದಾರೆ. ಬೆಂಗಳೂರು ನೀರು ಸರಬರಾಜು ಮತ್ತು ಮಂಡಳಿಯ ವತಿಯಿಂದ ಸರಬರಾಜು ವತಿಯಿಂದ ನಿರ್ಮಾಣ 1200ಎಂಎಂ, 900…

Read More

RRB Recruitment 2026: ರೈಲ್ವೆಯಲ್ಲಿ 22,000 ಖಾಲಿ ಹುದ್ದೆಗಳಿಗೆ ನೇಮಕಾತಿ; 10th ಪಾಸಾಗಿದ್ರೆ ಸಾಕು! – Kannada News | RRB Group D Recruitment 2026: 22,000 Posts, Apply Online! 10th Pass and ITI Eligible

ರೈಲ್ವೆ ಉದ್ಯೋಗಗಳಿಗೆ ತಯಾರಿ ನಡೆಸುತ್ತಿರುವವರಿಗೆ, ರೈಲ್ವೆ ನೇಮಕಾತಿ ಮಂಡಳಿ (RRB) ಗ್ರೂಪ್ D ಹುದ್ದೆಗಳಿಗೆ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. RRB ಒಟ್ಟು 22,000 ಹುದ್ದೆಗಳಿಗೆ ಖಾಲಿ ಹುದ್ದೆಗಳನ್ನು ಪ್ರಕಟಿಸಿದೆ. ಹತ್ತನೇ ತರಗತಿ ಮತ್ತು ಐಟಿಐ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರು. ಈ ನೇಮಕಾತಿ ಪ್ರಕ್ರಿಯೆಯಲ್ಲಿ ಆಸಕ್ತಿ ಹೊಂದಿರುವವರು ಜನವರಿ 31 ರಿಂದ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮಾರ್ಚ್ 2. ಅರ್ಜಿ ಪ್ರಕ್ರಿಯೆಯು ಮೊದಲು ಜನವರಿ 20 ರಿಂದ ಫೆಬ್ರವರಿ…

Read More

ಭಾರತದ ಧ್ವಜದ ಬಣ್ಣದ ರಿಬ್ಬನ್ ಕತ್ತರಿಸಲು ನಿರಾಕರಿಸಿದ ಸಿಎಂ ಒಮರ್ ಅಬ್ದುಲ್ಲಾ! – Kannada News | Jammu and Kashmir CM Omar Abdullah refuses to Cut Tricolour Ribbon

ಶ್ರೀನಗರ, ಏಪ್ರಿಲ್ 15: ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ (Omar Abdullah) ಕಾರ್ಯಕ್ರಮವೊಂದರಲ್ಲಿ, ತ್ರಿವರ್ಣದ ರಿಬ್ಬನ್‌ ಅನ್ನು ಕತ್ತರಿಯಿಂದ ಕಟ್ ಮಾಡಲು ನಿರಾಕರಿಸಿದ್ದಾರೆ. ಭಾರತದ ಧ್ವಜವಿರುವ ರಿಬ್ಬನ್ ಅನ್ನು ನಾನು ಕತ್ತರಿಸುವುದಿಲ್ಲ ಎಂದು ಹೇಳಿರುವ ಅವರು ಕಾರ್ಯಕ್ರಮದ ಆಯೋಜಕರಿಗೆ ಆ ರಿಬ್ಬನ್ ಅನ್ನು ಬಿಚ್ಚಿ ಸುತ್ತಿಡಲು ಸೂಚಿಸಿದ್ದಾರೆ. ಮುಖ್ಯಮಂತ್ರಿಗಳ ಈ ನಿಲುವು ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ. ಕಾರ್ಯಕ್ರಮದ ಉದ್ಘಾಟನೆ ವೇಳೆ ತಾವು ಕತ್ತರಿಸಬೇಕಾಗಿದ್ದ ರಿಬ್ಬನ್‌ನಲ್ಲಿ ಕೇಸರಿ, ಬಿಳಿ ಮತ್ತು ಹಸಿರು ಪಟ್ಟೆಗಳನ್ನು ಗಮನಿಸಿದ ಸಿಎಂ…

Read More

ಮಧುಮೇಹ ರೋಗಿಗಳು ಹೃದಯಾಘಾತಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚಿದೆಯೇ? ನೀವು ತಿಳಿಯಲೇಬೇಕಾದ ಮಾಹಿತಿ ಇದು – Kannada News | Diabetes & Heart Attack Risk: What Experts Say

ಇತ್ತೀಚಿನ ದಿನಗಳಲ್ಲಿ ಮಧುಮೇಹ (Diabetes) ರೋಗಿಗಳ ಸಂಖ್ಯೆ ವೇಗವಾಗಿ ಹೆಚ್ಚುತ್ತಿವೆ. ಇದಕ್ಕೆ ಕಾರಣಗಳು ಹಲವು ಆದರೆ ಬದಲಾಗುತ್ತಿರುವ ಜೀವನಶೈಲಿ, ಕಳಪೆ ಆಹಾರ ಪದ್ಧತಿ ಮತ್ತು ದೈಹಿಕ ಚಟುವಟಿಕೆಯ ಕೊರತೆ ಇವೆಲ್ಲವೂ ಕೂಡ ಈ ರೀತಿ ಆರೋಗ್ಯ ಸಮಸ್ಯೆ ಹೆಚ್ಚುತ್ತಿರುವುದಕ್ಕೆ ಮುಖ್ಯ ಕಾರಣವಾಗಬಹುದು. ಮಧುಮೇಹ ಕ್ರಮೇಣ ದೇಹದ ಅನೇಕ ಪ್ರಮುಖ ಅಂಗಗಳ ಮೇಲೆ ಪರಿಣಾಮ ಬೀರುತ್ತದೆ. ನಿರ್ದಿಷ್ಟವಾಗಿ ಹೇಳುವುದಾದರೆ, ಹೃದಯ ಸಂಬಂಧಿತ ಕಾಯಿಲೆಗಳ ಅಪಾಯವು ಮಧುಮೇಹ ರೋಗಿಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ವಿಶ್ವ ಹೃದಯ ಒಕ್ಕೂಟದ ವರದಿಯ ಪ್ರಕಾರ, ಇತ್ತೀಚಿನ…

Read More