ಅಕ್ಸೆಂಚರ್ನ ಎಲ್ಲಾ ಎಂಜನಿಯರುಗಳ ಕೆಲಸಗಳನ್ನೂ ಕ್ಲಾಡ್ ಕೋಡ್ ಕಲಿತ ಈ ಒಬ್ಬನೇ ವ್ಯಕ್ತಿ ಮಾಡಬಲ್ಲುನಂತೆ
ಬೆಂಗಳೂರು, ಮಾರ್ಚ್ 9: ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕುರಿತು ನಾನಾ ರೀತಿಯ ಅಭಿಪ್ರಾಯಗಳು, ಭಯ, ಆತಂಕ, ಖುಷಿ ಎಲ್ಲಾ ವ್ಯಕ್ತವಾಗುತ್ತಿವೆ. ಆಂಥ್ರೋಪಿಕ್ನ ಕ್ಲಾಡ್ ಎಐ ಬಿಡುಗಡೆಯಾದ ಬಳಿಕ ಎಲ್ಲಾ ಸಾಫ್ಟ್ವೇರ್ ಕಂಪನಿಗಳು ಧೂಳೀಪಟವಾಗುತ್ತವೆ ಎನ್ನುವ ಸುದ್ದಿ ಇತ್ತೀಚೆಗೆ ಸಾಕಷ್ಟು ಕೇಳಿ ಬಂದಿತ್ತು. ಎಲ್ಲಾ ಹೊಸ ತಂತ್ರಜ್ಞಾನಗಳು ಬಂದರೆ ಇದೇ ರೀತಿ ಭಯ ಇರುತ್ತೆ. ಆದರೆ, ತಂತ್ರಜ್ಞಾನಗಳು ಮನುಷ್ಯನಿಗೆ ಬಲ ನೀಡುತ್ತವೆಯೇ ಹೊರತು ಅವನ ಸ್ಥಾನ ಕಿತ್ತುಕೊಳ್ಳುವುದಿಲ್ಲ ಎನ್ನುವ ಸಮಾಧಾನಕರ ಅಭಿಪ್ರಾಯಗಳೂ ಇವೆ. ಈ ಮಧ್ಯೆ ಟಾಮ್ ಬ್ಲಾಮ್ಫೀಲ್ಡ್ (Tom…