Headlines

ಇರಾನ್​ಗೆ ತೈಲ ಮಾರಾಟದಿಂದ ದಿನಕ್ಕೆ 7,000 ಕೋಟಿ ರೂ ಆದಾಯ; ಇರಾನ್​ಗೂ ಭರ್ಜರಿ ಆಯಿಲ್ ಬ್ಯುಸಿನೆಸ್

ನವದೆಹಲಿ, ಮಾರ್ಚ್ 26: ಮಧ್ಯಪ್ರಾಚ್ಯದಲ್ಲಿ ಅಮೆರಿಕ ಮತ್ತು ಇಸ್ರೇಲ್ ದೇಶಗಳು ಇರಾನ್ ವಿರುದ್ಧ ಶುರು ಮಾಡಿದ ಯುದ್ಧದಿಂದ ಯಾರಿಗೆ ಲಾಭ, ಯಾರಿಗೆ ನಷ್ಟ ಆಗುತ್ತಿದೆಯೋ ಸ್ಪಷ್ಟ ಇಲ್ಲ, ಆದರೆ ರಷ್ಯಾ ಮತ್ತು ಇರಾನ್​ನ ಆಯಿಲ್ ಬ್ಯುಸಿನೆಸ್ ಬಹಳ ಜೋರಾಗಿ ನಡೆಯುತ್ತಿದೆ. ಎರಡೂ ದೇಶಗಳು ತೈಲ ಮಾರಾಟದಿಂದ ಸಾವಿರಾರು ಕೋಟಿ ರೂ ಲಾಭ ಮಾಡುತ್ತಿವೆ. ತಂತಮ್ಮ ಯುದ್ಧ ಮುಂದುವರಿಸಲು ಈ ದೇಶಗಳಿಗೆ ಫಂಡಿಂಗ್ ಸಿಕ್ಕಂತಾಗಿದೆ. ವಿಶ್ವದ ಶೇ. 20ಕ್ಕಿಂತಲೂ ಹೆಚ್ಚು ತೈಲ ಪೂರೈಕೆಯಾಗುವ ಹಾರ್ಮುಜ್ ಜಲಸಂಧಿಯ ಸಂಪೂರ್ಣ ನಿಯಂತ್ರಣವು…

Read More

‘ಗ್ರಾಮಾಯಣ’ ಸಿನಿಮಾದ ವಿರುದ್ಧ ತಡೆಯಾಜ್ಞೆ: ಏನಿದು ವಿವಾದ? – Kannada News | Stay on Vinay Rajkumar starrer Gramayana movie

ವಿನಯ್ ರಾಜ್​​ಕುಮಾರ್ (Vinay Rajkumar), ಮೇಘನಾ ಶೆಟ್ಟಿ, ಲೂಸ್ ಮಾದ ಯೋಗಿ ಇನ್ನೂ ಕೆಲವು ಪ್ರತಿಭಾವಂತ ನಟರು ನಟಿಸಿರುವ ‘ಗ್ರಾಮಾಯಣ’ ಸಿನಿಮಾ ಇದೇ ವಾರ ಬಿಡುಗಡೆ ಆಗಿದೆ. ಹಲವು ವರ್ಷಗಳ ಹಿಂದೆ ಸೆಟ್ಟೇರಿದ್ದ ಈ ಸಿನಿಮಾ ಹಲವಾರು ಅಡೆ-ತಡೆಗಳನ್ನು ದಾಟಿಕೊಂಡು ಕೊನೆಗೂ ಕಳೆದ ಶುಕ್ರವಾರ ರಿಲೀಸ್ ಆಗಿದೆ. ಆದರೆ ಸಿನಿಮಾ ಬಿಡುಗಡೆ ಆದ ಮೇಲೂ ಸಹ ಸಂಕಷ್ಟಗಳು ಕೊನೆಯಾಗಿಲ್ಲ. ಇದೀಗ ಈ ಸಿನಿಮಾದ ವಿರುದ್ಧ ತಡೆ ಆಜ್ಞೆ ತರಲಾಗಿದೆ. ‘ಗ್ರಾಮಾಯಣ’ ಸಿನಿಮಾದ ಮೂಲ ನಿರ್ಮಾಪಕರಾಗಿದ್ದವರ ಮಕ್ಕಳು, ಹಾಗೂ…

Read More

ಥೈಲ್ಯಾಂಡ್ ಶಾಲೆಯಲ್ಲಿ 9ನೇ ತರಗತಿ ವಿದ್ಯಾರ್ಥಿಯಿಂದ ಗುಂಡಿನ ದಾಳಿ, ಶಿಕ್ಷಕ ಸಾವು, 15ಕ್ಕೂ ಅಧಿಕ ಮಂದಿಗೆ ಗಾಯ – Kannada News | Thailand School Shooting: Student Kills Teacher, Injures 15 in Bangkok Attack

ಬ್ಯಾಂಕಾಕ್, ಆಗಸ್ಟ್ 07: ಥೈಲ್ಯಾಂಡ್‌ನ ರಾಜಧಾನಿ ಬ್ಯಾಂಕಾಕ್ ಬಳಿಯ ಪ್ರಸಿದ್ಧ ಶಾಲೆಯೊಂದರಲ್ಲಿ 9ನೇ ತರಗತಿ ವಿದ್ಯಾರ್ಥಿಯೊಬ್ಬ ಸಹಪಾಠಿಗಳು ಹಾಗೂ ಶಿಕ್ಷಕರ ಮೇಲೆ ದಿಢೀರ್ ಗುಂಡಿನ ದಾಳಿ(Firing) ನಡೆಸಿದ್ದಾನೆ. ಈ ದಾರುಣ ಘಟನೆಯಲ್ಲಿ ಓರ್ವ ಶಿಕ್ಷಕ ಸ್ಥಳದಲ್ಲೇ ಮೃತಪಟ್ಟಿದ್ದು, ಕನಿಷ್ಠ 15 ಜನರು ತೀವ್ರವಾಗಿ ಗಾಯಗೊಂಡಿದ್ದಾರೆ. ದಾಳಿ ನಡೆಸಿದ ವಿದ್ಯಾರ್ಥಿಯು ಕೃತ್ಯದ ಬೆನ್ನಲ್ಲೇ ತನಗೆ ತಾನೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಸ್ಥಳೀಯ ಪೊಲೀಸರು ದೃಢಪಡಿಸಿದ್ದಾರೆ. ಬ್ಯಾಂಕಾಕ್ ಸಮೀಪದ ನೊಂಥಬುರಿಯ ಬ್ಯಾಂಗ್ ಕ್ರುವಾಯಿ ಜಿಲ್ಲೆಯಲ್ಲಿರುವ ದೇಬ್ಸಿರಿನ್ ನೊಂಥಬುರಿ…

Read More

ನ್ಯೂಝಿಲೆಂಡ್ ವಿರುದ್ಧದ ಸರಣಿಗೆ ಭಾರತ ತಂಡ ಪ್ರಕಟ – Kannada News | India Squad For New Zealand Series

ಭಾರತ ಮತ್ತು ನ್ಯೂಝಿಲೆಂಡ್ ನಡುವಣ 8 ಪಂದ್ಯಗಳ ಸರಣಿಯು ಜನವರಿ 11 ರಿಂದ ಶುರುವಾಗಲಿದೆ. ಈ ಸರಣಿಯಲ್ಲಿ ಮೊದಲಿಗೆ ಏಕದಿನ ಪಂದ್ಯಗಳನ್ನಾಡಲಾಗುತ್ತಿದ್ದು, ಇದಾದ ಬಳಿಕ ಟಿ20 ಸರಣಿ ಜರುಗಲಿದೆ. ಇದೀಗ ಟಿ20 ಸರಣಿಗಾಗಿ 15 ಸದಸ್ಯರುಗಳ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಈ ತಂಡದ ನಾಯಕನಾಗಿ ಸೂರ್ಯಕುಮಾರ್ ಯಾದವ್ ಕಾಣಿಸಿಕೊಂಡರೆ, ಉಪನಾಯಕನಾಗಿ ಅಕ್ಷರ್ ಪಟೇಲ್ ಕಣಕ್ಕಿಳಿಯಲಿದ್ದಾರೆ. ಇದಕ್ಕೂ ಮುನ್ನ ನಡೆದ ಸೌತ್ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ಶುಭ್​ಮನ್ ಗಿಲ್ ಉಪನಾಯಕನಾಗಿ ಕಾಣಿಸಿಕೊಂಡಿದ್ದರು. ಇದೀಗ ಅವರನ್ನು ಟಿ20 ತಂಡದಿಂದ…

Read More

ಹಂಪಿ ಉತ್ಸವ 2026: ನಗಾರಿ ಬಾರಿಸಿ ಐತಿಹಾಸಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಿಎಂ ಸಿದ್ದರಾಮಯ್ಯ 

ವಿಜಯನಗರ, ಫೆ.13: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಐತಿಹಾಸಿಕ ಹಂಪಿಯಲ್ಲಿ ಮೂರು ದಿನಗಳ ಹಂಪಿ ಉತ್ಸವ 2026ಕ್ಕೆ ಅಧಿಕೃತವಾಗಿ ಚಾಲನೆ ನೀಡಿದರು. ಸಾಂಪ್ರದಾಯಿಕ ಡೊಳ್ಳು ಮತ್ತು ನಗಾರಿ ಬಾರಿಸುವ ಮೂಲಕ ಈ ಭವ್ಯ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು. ಉತ್ಸವದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ಧ್ವನಿ ಮತ್ತು ಬೆಳಕು ಕಾರ್ಯಕ್ರಮವನ್ನು ಸಹ ಮುಖ್ಯಮಂತ್ರಿಗಳು ಮತ್ತು ಗಣ್ಯರು ಉದ್ಘಾಟಿಸಿದರು. ಈ ಧ್ವನಿ ಮತ್ತು ಬೆಳಕು ಕಾರ್ಯಕ್ರಮವು ಅಂತರರಾಷ್ಟ್ರೀಯ ಮಟ್ಟದ ಒಲಿಂಪಿಕ್ ಟಾರ್ಚ್ ಮಾದರಿಯಲ್ಲಿ ಹಂಪಿಯ ವಿಶಿಷ್ಟ…

Read More

ಅಕ್ಕ-ತಂಗಿ ಅಂದು, ಇಂದು; ರಶ್ಮಿಕಾ-ಶಿಮನ್ ಕ್ಯೂಟ್ ಫೋಟೋ ವೈರಲ್

ರಶ್ಮಿಕಾ ಮಂದಣ್ಣ (Rashmika Mandanna) ಅವರು ಇತ್ತೀಚೆಗೆ ಸುದ್ದಿಯಲ್ಲಿದ್ದಾರೆ. ಅವರ ವಿವಾಹದ ಫೋಟೋಗಳು ವೈರಲ್ ಆಗಿವೆ. ವಿವಾಹ ಪೂರ್ವ ಕಾರ್ಯಕ್ರಮ, ವಿವಾಹ ಶಾಸ್ತ್ರಗಳು ರಾಜಸ್ಥಾನದ ಉದಯಪುರದಲ್ಲಿ ಅದ್ದೂರಿಯಾಗಿ ನಡೆದವು. ಹೀಗಿರುವಾಗಲೇ ರಶ್ಮಿಕಾ ಮಂದಣ್ಣ ಹಾಗೂ ಅವರ ಸಹೋದರಿಯ ಕ್ಯೂಟ್ ಫೋಟೋಗಳು ವೈರಲ್ ಆಗಿವೆ. ಅಂದು ಹೇಗಿದ್ದರು ಹಾಗೂ ಈಗ ಹೇಗಿದ್ದಾರೆ ಎಂಬ ಕೊಲ್ಯಾಜ್ ಗಮನ ಸೆಳೆಯುವ ರೀತಿಯಲ್ಲಿ ಇದೆ. ರಶ್ಮಿಕಾ ಮಂದಣ್ಣ ಸಹೋದರಿ ಹೆಸರು ಶಿಮನ್. ಇಬ್ಬರ ಮಧ್ಯೆ ಸುಮಾರು 16 ವರ್ಷಗಳ ವಯಸ್ಸಿನ ಅಂತರ ಇದೆ….

Read More

ಜುಲೈನಲ್ಲಿ ಇವಿ ಮಾರಾಟದಲ್ಲಿ ಹೊಸ ದಾಖಲೆ; ಒಂದೇ ತಿಂಗಳಲ್ಲಿ 3.28 ಲಕ್ಷ ಎಲೆಕ್ಟ್ರಿಕ್ ವಾಹನಗಳು ಸೇಲ್ – Kannada News | Electric Vehicles retail sales see 66pc rise in 2026 July, with over 3 lakh units sold in 1 month

ನವದೆಹಲಿ, ಆಗಸ್ಟ್ 7: ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ (EV) ಬಳಕೆ ದಿನದಿಂದ ದಿನಕ್ಕೆ ವೇಗವಾಗಿ ಹೆಚ್ಚಾಗುತ್ತಿದ್ದು, ಜುಲೈ ತಿಂಗಳ ರಿಟೇಲ್ ಮಾರಾಟದಲ್ಲಿ ಸಾರ್ವಕಾಲಿಕ ದಾಖಲೆ ನಿರ್ಮಾಣವಾಗಿದೆ. ಆಟೋಮೊಬೈಲ್ ಡೀಲರ್ಸ್ ಅಸೋಸಿಯೇಷನ್ಸ್ ಒಕ್ಕೂಟ (FADA) ನೀಡಿರುವ ಅಂಕಿ-ಅಂಶಗಳ ಪ್ರಕಾರ, ಜುಲೈನಲ್ಲಿ ಒಟ್ಟು 3,27,901 ಎಲೆಕ್ಟ್ರಿಕ್ ವಾಹನಗಳು ಮಾರಾಟವಾಗಿವೆ. ಇದು ಕಳೆದ ವರ್ಷದ (ಜುಲೈ 2025) ಮಾರಾಟಕ್ಕೆ ಹೋಲಿಸಿದರೆ ಶೇ. 66 ಕ್ಕಿಂತ ಹೆಚ್ಚು ವೃದ್ಧಿ ಕಂಡಿದೆ. ಈ ಮೂಲಕ ದೇಶದಲ್ಲಿ ಮಾರಾಟವಾದ ಪ್ರತಿ 8 ವಾಹನಗಳಲ್ಲಿ 1 ಎಲೆಕ್ಟ್ರಿಕ್…

Read More

ರೈಲು ಪ್ರಯಾಣಿಕರಿಗೆ ಮಕರ ಸಂಕ್ರಾಂತಿಗೆ ಸಿಹಿಸುದ್ದಿ: ಬೆಂಗಳೂರಿನಿಂದ ಊರಿಗೆ ಹೋಗಲು ವಿಶೇಷ ರೈಲು – Kannada News | SWR Sankranti Special Trains: Bengaluru Bidar, Yeshwantpur Talaguppa Extended

ಬೆಂಗಳೂರು , ಜ.10: ಹೊಸ ವರ್ಷ ಆರಂಭ ಆಗುತ್ತಿದ್ದಂತೆ, ಸಾಲು ಸಾಲು ಹಬ್ಬಗಳು ಬರುತ್ತಿದೆ. ಈ ವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿ, ಈ ಹಬ್ಬ ತುಂಬಾ ವಿಶೇಷವಾಗಿದೆ. ಮಕರ ಸಂಕ್ರಾಂತಿ ದಕ್ಷಿಣ ಭಾರತಕ್ಕೆ ಮಾತ್ರವಲ್ಲದೆ. ಉತ್ತರ ಭಾರತಕ್ಕೂ ತುಂಬಾ ವಿಶೇಷವಾಗಿದೆ. ಶಬರಿಮಲೆ ಹೋಗುವ ಭಕ್ತರಿಗೂ ಈ ಹಬ್ಬ ಇನ್ನೂ ವಿಶೇಷವಾಗಿರುತ್ತದೆ. ಇನ್ನು ಮಕರ ಸಂಕ್ರಾಂತಿಗೆ ಊರಿಗೆ ಹೋಗಲು ಪ್ಲಾನ್​​​ ಹಾಕಿಕೊಂಡವರಿಗೆ ಬಿಗ್​​​ ಗುಡ್​​​​​ನ್ಯೂಸ್​​​ ಇದೆ. ಮಕರ ಸಂಕ್ರಾಂತಿ ಹಬ್ಬದ (Makar Sankranti special trains) ಪ್ರಯುಕ್ತ…

Read More

ಕರ್ನಾಟಕದ ಈ ಜಿಲ್ಲೆಗಳಲ್ಲಿ 5 ದಿನ ಮಳೆ ಮುನ್ಸೂಚನೆ, ಬಿರುಗಾಳಿ ಸಾಧ್ಯತೆ: ಐಎಂಡಿ ಎಚ್ಚರಿಕೆ – Kannada News | Karnataka Weather and Monsoon rain forecast Alert: IMD Predicts Rain and Strong Winds in Coastal, Malnad, Interior Districts

ಬೆಂಗಳೂರು, ಜುಲೈ 13: ಕರ್ನಾಟಕದಲ್ಲಿ ಮುಂಗಾರು ತುಸು ದುರ್ಬಲವಾಗಿದ್ದರೂ, ಹಲವು ಜಿಲ್ಲೆಗಳಲ್ಲಿ ಮಳೆಯ ವಾತಾವರಣ ಮುಂದುವರಿಯಲಿದೆ. ಭಾರತೀಯ ಹವಾಮಾನ ಇಲಾಖೆ (IMD) ಯ ಬೆಂಗಳೂರು ಹವಾಮಾನ ಕೇಂದ್ರ ಬಿಡುಗಡೆ ಮಾಡಿರುವ ಮುನ್ಸೂಚನೆ ಪ್ರಕಾರ, ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಮುಂದಿನ ಐದು ದಿನಗಳ ಕಾಲ ಸಾಧಾರಣ ಮಳೆಯಾಗುವ ಸಾಧ್ಯತೆ ಇದ್ದು, ಕೆಲವು ಜಿಲ್ಲೆಗಳಲ್ಲಿ ಬಿರುಗಾಳಿಯೂ ಬೀಸಲಿದೆ. ಕರಾವಳಿ ಜಿಲ್ಲೆಗಳಲ್ಲಿ ಹೆಚ್ಚು ಮಳೆ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮುಂದಿನ ಕೆಲವು ದಿನಗಳ ಕಾಲ…

Read More