Headlines

ಬಿಗ್​​ಬಾಸ್​​ ಸಂಭಾವನೆ, ಆದ ಖರ್ಚು ಮತ್ತು ಪಿಆರ್ ಬಗ್ಗೆ ಕಾವ್ಯಾ ಮಾತು – Kannada News | Kavya Shaiva talks about her remuneration for Bigg Boss Kannada

ಬಿಗ್​​ಬಾಸ್ ಕನ್ನಡ ಸೀಸನ್ 12 (Bigg Boss Kannada) ಮುಗಿದಿದ್ದು ಗಿಲ್ಲಿ ವಿನ್ನರ್ ಎನಿಸಿಕೊಂಡಿದ್ದಾರೆ. ಗಿಲ್ಲಿ ಜೊತೆಗೆ ಆಪ್ತ ಗೆಳೆತನ ಹೊಂದಿದ್ದ ಕಾವ್ಯಾ ಫಿನಾಲೆವರೆಗೆ ಬಂದಿದ್ದು, 10 ಲಕ್ಷ ಬಹುಮಾನದ ಮೊತ್ತವನ್ನು ಸಹ ಗೆದ್ದು ಹೊರಬಂದಿದ್ದಾರೆ. ಇದೀಗ ಟಿವಿ9 ಜೊತೆಗೆ ಮಾತನಾಡಿರುವ ಕಾವ್ಯಾ, ಬಿಗ್​​ಬಾಸ್​​ನ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಗಿಲ್ಲಿ ಜೊತೆಗಿನ ಗೆಳೆತನ, ಅಚ್ಚರಿ ರೀತಿ ರಕ್ಷಿತಾ ರನ್ನರ್ ಅಪ್ ಆಗಿದ್ದು, ಇವುಗಳ ಜೊತೆಗೆ ಬಿಗ್​​ಬಾಸ್​​ಗಾಗಿ ತಾವು ಪಡೆದ ಸಂಭಾವನೆ, ಬಿಗ್​​ಬಾಸ್ ಮನೆಯಲ್ಲಿ ತಮಗೆ ಆದ ಖರ್ಚು ಮತ್ತು…

Read More

‘ಜನ ನಾಯಗನ್’ ಲೀಕ್ ಬಗ್ಗೆ ಪ್ರಶ್ನೆ ಮಾಡಿದರೆ ಉತ್ತರಿಸದೆ ಹೋದ ದಳಪತಿ ವಿಜಯ್

‘ಜನ ನಾಯಗನ್’ ಸಿನಿಮಾ (Jana Nayagan) ಬಗ್ಗೆ ಸೃಷ್ಟಿ ಆದ ವಿವಾದಗಳು ಒಂದೆರಡಲ್ಲ. ಪ್ರತಿ ಹಂತದಲ್ಲೂ ಚಿತ್ರಕ್ಕೆ ಹಿನ್ನಡೆಗಳು ಆಗುತ್ತಲೇ ಬರುತ್ತಿದ್ದವು. ಈಗ ಸಿನಿಮಾಗೆ ದೊಡ್ಡ ಹೊಡೆತ ಸಿಕ್ಕಿದೆ. ಚಿತ್ರದ ಪ್ರಮುಖ ದೃಶ್ಯಗಳೇ ಲೀಕ್ ಆಗಿವೆ. ಈ ಮೂಲಕ ನೂರಾರು ಕೋಟಿ ರೂಪಾಯಿ ಸುರಿದು ಸಿನಿಮಾ ಮಾಡಿದ ನಿರ್ಮಾಪಕರು ಸಂಕಷ್ಟ ಅನುಭವಿಸುತ್ತಿದ್ದಾರೆ. ಈ ವಿಷಯವನ್ನು ಅನೇಕ ಸ್ಟಾರ್​​ಗಳು ಖಂಡನೆ ಮಾಡಿದ್ದಾರೆ. ಆದರೆ, ವಿಜಯ್ ಮಾತ್ರ ಈ ವಿಷಯದಲ್ಲಿ ಮೌನ ತಾಳಿದ್ದಾರೆ. ‘ಜನ ನಾಯಗನ್’ ಸಿನಿಮಾ ಲೀಕ್ ವಿಷಯವನ್ನು…

Read More

CWG 2026: ಜಾವೆಲಿನ್ ಥ್ರೋ ಫೈನಲ್​ ಸುತ್ತಿಗೆ ಅರ್ಹತೆ ಪಡೆದ ಮೂವರು ಭಾರತೀಯರು – Kannada News | CWG 2026 Javelin: Neeraj Chopra, Rohit, Yashveer Qualify for Finals

2026 ರ ಕಾಮನ್‌ವೆಲ್ತ್ ಕ್ರೀಡಾಕೂಟದ 8ನೇ ದಿನದಂದು ಪುರುಷರ ಜಾವೆಲಿನ್ ಥ್ರೋ ಅರ್ಹತಾ ಸುತ್ತು ಇಂದು ನಡೆಯಿತು. ಈ ಸುತ್ತಿನಲ್ಲಿ ಭಾರತದಿಂದ ಮೂವರು ಜಾವೆಲಿನ್ ಎಸೆತಗಾರರು ಭಾಗವಹಿಸಿದ್ದರು. ಅವರಲ್ಲಿ ಸ್ಟಾರ್ ಜಾವೆಲಿನ್ ಥ್ರೋವರ್ ನೀರಜ್ ಚೋಪ್ರಾ, ರೋಹಿತ್ ಯಾದವ್ ಮತ್ತು ಯಶ್ವೀರ್ ಸಿಂಗ್ ಸೇರಿದ್ದರು. ಈ ಮೂವರು ಜಾವೆಲಿನ್ ಥ್ರೋ ಫೈನಲ್‌ ಸುತ್ತಿಗೆ ಅರ್ಹತೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂವರೂ ಅಗ್ರ 12 ರಲ್ಲಿ ಸ್ಥಾನ ಪಡೆದು ಪದಕ ಸ್ಪರ್ಧೆಗೆ ಅರ್ಹತೆ ಪಡೆದಿದ್ದಾರೆ. ಅರ್ಹತಾ ಸುತ್ತಿನಲ್ಲಿ ನೀರಜ್…

Read More

IPL 2026: ನಂಬಲಸಾಧ್ಯ..! ಬುಮ್ರಾ ಸೇರಿದಂತೆ ಈ ಆರು ಬೌಲರ್​ಗಳಿಗೆ ಇನ್ನೂ ವಿಕೆಟ್ ಸಿಕ್ಕಿಲ್ಲ

ವಿಶ್ವ ಕ್ರಿಕೆಟ್​ನ ಅಗ್ರ ಗಣ್ಯ ಬೌಲರ್​ಗಳ ಪಟ್ಟಿಯಲ್ಲಿ ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ಕೂಡ ಒಬ್ಬರು. ಬುಮ್ರಾ ಬೌಲಿಂಗ್​ನಲ್ಲಿ ಯಾವುದೇ ಬ್ಯಾಟ್ಸ್‌ಮನ್​ಗೂ ಸರಾಗವಾಗಿ ರನ್ ಕಲೆಹಾಕುವುದು ಕಷ್ಟಕರ. ಹಾಗೆಯೇ ವಿಕೆಟ್​​ನಲ್ಲಿ ಉಳಿಯುವುದು ಕೂಡ ಕಷ್ಟ. ಹೀಗಿರುವಾಗ ಇಂತಹ ಬುಮ್ರಾಗೆ 2026 ರ ಐಪಿಎಲ್​ನಲ್ಲಿ ಇದುವರೆಗೆ ಒಂದೇ ಒಂದು ವಿಕೆಟ್ ಸಿಕ್ಕಿಲ್ಲ ಎಂಬುದು ಅಚ್ಚರಿಯ ಸಂಗತಿಯಾಗಿದೆ. ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಪ್ರತಿನಿಧಿಸುವ ಬುಮ್ರಾ ಈ ಆವೃತ್ತಿಯ ಐಪಿಎಲ್‌ನಲ್ಲಿ ಇದುವರೆಗೆ 3 ಪಂದ್ಯಗಳನ್ನಾಡಿದ್ದಾರೆ. ಇದರಲ್ಲಿ ಕೆಕೆಆರ್ ವಿರುದ್ಧದ…

Read More

ಕರ್ನಾಟಕದಲ್ಲಿ ಹೊರರಾಜ್ಯ ನೋಂದಣಿ ವಾಹನ ಹೊಂದಿರುವವರಿಗೆ ಸರ್ಕಾರದಿಂದ ಬಿಗ್​ ಶಾಕ್ – Kannada News | New Karnataka Vehicle Tax: Out of State Cars and EVs Face Mandatory Payment Rules

ಬೆಂಗಳೂರು, ಏ,30: ರಾಜ್ಯದಲ್ಲಿ ಹೊರರಾಜ್ಯದ ವಾಹನಗಳ ಸಂಚಾರ ಹೆಚ್ಚಾಗಿದೆ. ಇದರಿಂದ ಪರಿಸರ ಮಾಲಿನ್ಯ ಆಗುತ್ತಿದೆ. ದೆಹಲಿ ಸೇರಿದಂತೆ ದೇಶದ ಅನೇಕ ರಾಜ್ಯಗಳಿಂದ ನೋಂದಣಿ ಆಗಿರುವ ವಾಹನಗಳು ಬರುತ್ತಿದೆ. ಹೆಚ್ಚಾಗಿ ದೆಹಲಿಯಿಂದ ವಾಹನಗಳು ಬೆಂಗಳೂರು ಸೇರಿದಂತೆ ರಾಜ್ಯದ ಅನೇಕು ಕಡೆ ಬಂದಿದೆ. ಇದರಿಂದ ರಾಜ್ಯದಲ್ಲಿ ಗಾಳಿಯ ಮಟ್ಟ, ಪರಿಸರ ಮಾಲಿನ್ಯ ಉಂಟಾಗುತ್ತಿದೆ. ಇದನ್ನು ತಡೆಯಲು ರಾಜ್ಯದ ಸರ್ಕಾರ ಹೊಸ ಪ್ಲಾನ್​​ ಒಂದನ್ನು ಮಾಡಿದೆ. ರಾಜ್ಯದಲ್ಲಿ ಸಂಚರಿಸುತ್ತಿರುವ ಹೊರರಾಜ್ಯ ನೋಂದಣಿಯ ವಾಹನಗಳಿಂದ ತೆರಿಗೆ ಸಂಗ್ರಹಿಸಲು ಕರ್ನಾಟಕ ಸರ್ಕಾರವು ಕರ್ನಾಟಕ ಮೋಟಾರು…

Read More

ಅಮೆರಿಕದಲ್ಲಿ ಭಾರತೀಯ ಯುವತಿಯ ನಿಗೂಢ ಸಾವು; ಕೊಲೆ ಮಾಡಿ ಭಾರತಕ್ಕೆ ಓಡಿಬಂದನಾ ಬಾಯ್​ಫ್ರೆಂಡ್​? – Kannada News | Indian Woman Nikitha Godishala Found Dead In US apartment Ex Boyfriend Fled To India

ನ್ಯೂಯಾರ್ಕ್, ಜನವರಿ 5: ಅಮೆರಿಕದಲ್ಲಿ ವಾಸಿಸುತ್ತಿದ್ದ 27 ವರ್ಷದ ಭಾರತೀಯ ಯುವತಿಯಾದ ನಿಕಿತಾ ರಾವ್ ಗೋಡಿಶಾಲ ಎಂಬಾಕೆಯನ್ನು ಮೇರಿಲ್ಯಾಂಡ್‌ನಲ್ಲಿರುವ ತನ್ನ ಮಾಜಿ ಪ್ರಿಯಕರನ ಅಪಾರ್ಟ್‌ಮೆಂಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಪೊಲೀಸರು ಆಕೆಯ ಮಾಜಿ ಪ್ರೇಮಿಯನ್ನೇ ಪ್ರಮುಖ ಶಂಕಿತ ಎಂದು ಹೆಸರಿಸಿದ್ದಾರೆ. ಆತ ಅಮೆರಿಕ (United States) ಬಿಟ್ಟು ಭಾರತಕ್ಕೆ ಪರಾರಿಯಾಗಿದ್ದಾನೆ ಎನ್ನಲಾಗಿದೆ. ನಿಕಿತಾ ಗೋಡಿಶಾಲ ಜನವರಿ 2ರಂದು ನಾಪತ್ತೆಯಾಗಿದ್ದಳು. ಮರುದಿನ ಆಕೆಯ ಶವ ಪತ್ತೆಯಾಗಿತ್ತು. ಆಕೆಯ ಸಾವಿನ ನಂತರ ಆಕೆಯ ಮಾಜಿ ಪ್ರಿಯಕರನಾದ 27 ವರ್ಷದ ಅರ್ಜುನ್ ಶರ್ಮಾ…

Read More

ನಿದ್ದೆಯಿಂದ ಪದೇ ಪದೇ ಎಚ್ಚರವಾಗಿ ನಿದ್ರೆ ಹಾಳಾಗುತ್ತಿದ್ದರೆ ತಡಮಾಡದೆಯೇ ಈ ವಿಷಯಗಳನ್ನು ತಿಳಿದುಕೊಳ್ಳಿ – Kannada News | Frequent Night Waking: Heart & Brain Risks

ಆರೋಗ್ಯ ಚೆನ್ನಾಗಿರಬೇಕು ಅಂದ್ರೆ ಮೊದಲು ಸರಿಯಾಗಿ ನಿದ್ರೆ ಮಾಡಬೇಕು. ರಾತ್ರಿ ನಿದ್ರೆ ಸರಿಯಾಗಿ ಆಗದೆಯೇ ಪದೇ ಪದೇ ಎಚ್ಚರವಾಗುತ್ತಿದ್ದರೆ ಅದನ್ನು ಸಾಮಾನ್ಯ ಸಮಸ್ಯೆ ಎಂದು ನಿರ್ಲಕ್ಷ್ಯ ಮಾಡಬೇಡಿ. ಹೌದು, ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್‌ನಲ್ಲಿ ಪ್ರಕಟವಾದ ಹೊಸ ಸಂಶೋಧನೆಯ ಪ್ರಕಾರ, ರಾತ್ರಿ ನಿದ್ರೆಯಲ್ಲಿ ಆಗಾಗ ಎಚ್ಚರಗೊಂಡು ಸರಿಯಾಗಿ ನಿದ್ರೆ ಆಗದಿದ್ದರೆ ಅದು ಹೃದಯದ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತವೆ. ಈ ಸಮಸ್ಯೆ ದೀರ್ಘಕಾಲದವರೆಗೆ ಮುಂದುವರಿದರೆ, ಅನೇಕ ರೀತಿಯ ಅಪಾಯಕಾರಿ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ. ಸಂಶೋಧನೆಯ ಪ್ರಕಾರ,…

Read More

ಬೆಳ್ತಂಗಡಿಯಲ್ಲಿ ವಿದ್ಯಾರ್ಥಿನಿ ಕಿಡ್ನ್ಯಾಪ್​​ ಯತ್ನ ಕೇಸ್​​ಗೆ ಬಿಗ್​​ ಟ್ವಿಸ್ಟ್​​: ಇಲ್ಲಿದೆ ಅಸಲಿ ಕಹಾನಿ – Kannada News | Big Twist in Belthangady Student Kidnap Attempt Case: Girl’s Drama Exposed in Police Investigation

ಪೊಲೀಸರಿಂದ ಸ್ಥಳ ಪರಿಶೀಲನೆImage Credit source: Tv9 Kannada ಮಂಗಳೂರು, ಫೆಬ್ರವರಿ 10: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ವಿದ್ಯಾರ್ಥಿನಿ ಅಪಹರಣ ಯತ್ನ ಕೇಸ್​​ಗೆ ಬಿಗ್​​ ಟ್ವಿಸ್ಟ್​​ ಸಿಕ್ಕಿದೆ. ನಗರದಲ್ಲಿ ಕಾಲೇಜಿಗೆ ಸೇರುವ ಆಸೆ ಹಿನ್ನೆಲೆ ಆಕೆಯೇ ಸಿನಿಮೀಯ ಮಾದರಿ ಕತೆ ಕಟ್ಟಿರೋದು ಪೊಲೀಸ್​​ ತನಿಖೆ ವೇಳೆ ಬಯಲಾಗಿದೆ. ಸ್ಕೂಟಿಯಲ್ಲಿ ಕಾಲೇಜಿಗೆ ಹೋಗುತ್ತಿದ್ದ ವೇಳೆ ತನ್ನನ್ನು ಅಪಹರಿಸಲು ದುಷ್ಕರ್ಮಿಗಳು ಯತ್ನಿಸಿದ್ದಾರೆ ಎಂದು 16 ವರ್ಷದ ಪ್ರಥಮ ಪಿಯುಸಿ  ವಿದ್ಯಾರ್ಥಿನಿ ಆರೋಪಿಸಿದ್ದಳು. ಕಾರಿನಲ್ಲಿ…

Read More

ದಿನ ಭವಿಷ್ಯ: ಇಂದು ಈ ರಾಶಿಯವರ ಭಾವನೆಯನ್ನು ಅಪರಿಚಿತರು ಅರಿಯುವರು… – Kannada News | Daily Horoscope for July 20, 2026: Uttarayan Greeshma season, Ashada Masa shukla Paksha Monday astrology Prediction

ಮೇಷ ರಾಶಿ: ಮಕ್ಕಳ ವಿದ್ಯಾಭ್ಯಾಸದ ಪ್ರಗತಿಯನ್ನು ಕಂಡು ಖುಷಿಯಾಗುವುದು. ಸ್ತ್ರೀಯರಿಂದ ಧನಸಹಾಯವು ಆಗಲಿದೆ. ಇಂದು ನಿಮಗೆ ಸಾಕಷ್ಟು ಸಮಯವಿರಲಿದ್ದು ಸದುಪಯೋಗ ಮಾಡಿಕೊಳ್ಳಬೇಕಿದೆ. ದೇಹವಿಂದು ನಿಮ್ಮ ನಿಯಂತ್ರಣದಲ್ಲಿ ಇರದು. ಸಂಗಾತಿಯ ನಡೆವಳಿಕೆಯನ್ನು ಪ್ರಶಂಸಿಸುವರು. ಸ್ನೇಹಿತರ ಕೆಲವು ವರ್ತನೆಗಳು ನಿಮಗೆ ಇಷ್ಟವಾಗದೇ ಇರಬಹುದು. ಸಮಯದ ನಿರೀಕ್ಷೆಯಲ್ಲಿ ಇರಿ. ನಿಮ್ಮ ರಹಸ್ಯವು ಬೆಳಕಿಗೆ ಬರಬಬಹುದು ಎಂಬ ಭೀತಿಯು ಇರಲಿದೆ. ವೃಷಭ ರಾಶಿ: ನಿಮ್ಮ ಗುರಿಯನ್ನು ಬಹಳ ಪ್ರಯತ್ನದಿಂದ ಇಂದು ಮುಟ್ಟುವಿರಿ. ರಾಜಕೀಯವಾಗಿ ಪ್ರಭಾವವಿರುವ ವ್ಯಕ್ತಿಗಳ ಸಂಪರ್ಕವು ಇಂದು ಆಗಲಿದೆ. ವೈವಾಹಿಕ ಜೀವನದಲ್ಲಿ…

Read More

Bengaluru Air Quality: ಬೆಳಗಾವಿಯ ಗಾಳಿಯೂ ಆರೋಗ್ಯಕ್ಕೆ ಮಾರಕ! – Kannada News | Bangalore Air Pollution Crisis: Belagavi’s Air quality is getting worse

ಬೆಳಗಾವಿಯ ಗಾಳಿಯೂ ಆರೋಗ್ಯಕ್ಕೆ ಮಾರಕ! ಬೆಂಗಳೂರು, ಫೆಬ್ರವರಿ 23: ರಾಜ್ಯದಲ್ಲಿ ಬೆಂಗಳೂರು ಸೇರಿದಂತೆ ಬೆಳಗಾವಿ, ಮಂಗಳೂರು ಮತ್ತು ಉಡುಪಿಯ ವಾಯು ಗುಣಮಟ್ಟವೂ (Bengaluru Air Quality) ಹದಗೆಟ್ಟಿದೆ. ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಈ ನಗರಗಳ ಗಾಳಿಯ ಗುಣಮಟ್ಟ, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಇಂದೂ ಸಹ ಹಲವೆಡೆ ಕಳಪೆ ಏರ್ ಕ್ವಾಲಿಟಿ ದಾಖಲಾಗಿದ್ದು, ಬೆಳಗಾವಿಯ AQI ಇನ್ನಷ್ಟು ಹದಗೆಟ್ಟಿದೆ. ಕೆಲ ದಿನಗಳ ಹಿಂದೆಯಷ್ಟೇ ತೀವ್ರ ಕಳಪೆ ಮಟ್ಟಕ್ಕೆ ಇಳಿದಿದ್ದ ಬೆಂಗಳೂರಿನ ಏರ್ ಕ್ವಾಲಿಟಿ ಇಂದು 88ಕ್ಕೆ ತಲುಪಿದೆ. ಅದಕ್ಕಿಂತ…

Read More