Headlines

2 ಸಾವಿರ ರೂ. ಬರುತ್ತೇ ಎಂದು ಖುಷಿ ಪಡಬೇಡಿ: ಮಹಿಳೆಯರಿಗೆ ದೊಡ್ಡ ಎಚ್ಚರಿಕೆ ನೀಡಿದ ಕುಮಾರಸ್ವಾಮಿ

ಬಾಗಲಕೋಟೆ, ಏ.6: ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಪರ ಭರ್ಜರಿ ಪ್ರಚಾರ ನಡೆಸಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಸರ್ಕಾರದ ಗ್ಯಾರಂಟಿ ಯೋಜನೆಗಳು ಭವಿಷ್ಯದ ಪೀಳಿಗೆಗೆ ಸಾಲದ ಹೊರೆ ಹೆಚ್ಚಿಸುತ್ತವೆ ಎಂದು ಅವರು ಎಚ್ಚರಿಸಿದರು. ಪ್ರಸ್ತುತ ಸರ್ಕಾರವು 8.17 ಲಕ್ಷ ಕೋಟಿ ರೂಪಾಯಿ ಸಾಲ ಮಾಡಿದೆ ಎಂದು ಕುಮಾರಸ್ವಾಮಿ ಆರೋಪಿಸಿದರು. ಕುಟುಂಬ ರಾಜಕಾರಣದ ಬಗ್ಗೆ ಸಿದ್ದರಾಮಯ್ಯನವರನ್ನು ಟೀಕಿಸಿದ ಕುಮಾರಸ್ವಾಮಿ, ಅವರ ಪುತ್ರನನ್ನು ರಾಜಕೀಯಕ್ಕೆ ತಂದಿರುವುದನ್ನು ಪ್ರಶ್ನಿಸಿದರು….

Read More

IPL 2026: ‘ಯೂನಿವರ್ಸಲ್ ಬೇಬಿ ಬಾಸ್’; ವೈಭವ್ ಆಟಕ್ಕೆ ಕ್ರಿಸ್ ಗೇಲ್ ಮೆಚ್ಚುಗೆ

ಐಪಿಎಲ್ 2026 (IPL 2026) ರ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವು, ಸನ್‌ರೈಸರ್ಸ್ ಹೈದರಾಬಾದ್ (RR vs SRH) ತಂಡವನ್ನು ಏಕಪಕ್ಷೀಯವಾಗಿ ಸೋಲಿಸಿತು. ರಾಜಸ್ಥಾನ್ ತಂಡದ ಈ ಗೆಲುವಿನಲ್ಲಿ ಯುವ ಪ್ರತಿಭೆ ವೈಭವ್ ಸೂರ್ಯವಂಶಿ (Vaibhav Sooryavanshi) ಅವರ ಪಾತ್ರ ಅಪಾರವಾಗಿತ್ತು. ಸನ್​ರೈಸರ್ಸ್​ ವಿರುದ್ಧದ ಈ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಕೇವಲ 29 ಎಸೆತಗಳಲ್ಲಿ 12 ಸಿಕ್ಸರ್‌ಗಳು ಮತ್ತು 5 ಬೌಂಡರಿಗಳನ್ನು ಒಳಗೊಂಡಂತೆ 97 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದರು. ವೈಭವ್ ಅವರ ಇನ್ನಿಂಗ್ಸ್‌ನಿಂದಾಗಿ ರಾಜಸ್ಥಾನ್…

Read More

ರಾಜಸ್ಥಾನ ರಾಯಲ್ಸ್ ಮಾರಾಟ ಆಗಿದ್ದಕ್ಕೆ ಶೇನ್ ವಾರ್ನ್ ಕುಟುಂಬಕ್ಕೆ ಸಿಗಲಿದೆ 450 ಕೋಟಿ ರೂಪಾಯಿ

ಐಪಿಎಲ್ ಆರಂಭಕ್ಕೂ ಮೊದಲು ಕೆಲವು ಮಹತ್ವದ ಬೆಳವಣಿಗೆ ನಡೆದಿದೆ. ರಾಜಸ್ಥಾನ ರಾಯಲ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮಾರಾಟ ಆಗಿದೆ. ಆರ್​​ಸಿಬಿ ತಂಡವನ್ನು ಆದಿತ್ಯ ಬಿರ್ಲಾ ಗ್ರೂಪ್ ಖರೀದಿಸಿದರೆ, ರಾಜಸ್ಥಾನ ರಾಯಲ್ಸ್ ತಂಡವನ್ನು ಅಮೆರಿಕ ಮೂಲದ ಕಲ್ ಸೋಮಾನಿ ಒಕ್ಕೂಟ ಈ ಕಂಪನಿಯ ಶೇ. 100ರಷ್ಟು ಷೇರನ್ನು ಖರೀದಿ ಮಾಡಿದೆ. ಇದಕ್ಕಾಗಿ 15,290 ಕೋಟಿ ರೂಪಾಯಿ ಪಾವತಿಸಿದೆ. ಈ ಹಣದಲ್ಲಿ ಆಸ್ಟ್ರೇಲಿಯಾದ ಸ್ಪಿನ್ ಮಾಂತ್ರಿಕ ದಿವಂಗತ ಶೇನ್ ವಾರ್ನ್​​​ ಕುಟುಂಬಕ್ಕೂ 450 ಕೋಟಿ ರೂಪಾಯಿ ಸಿಗಲಿದೆ….

Read More

ಅನ್ಯಧರ್ಮದವನೊಂದಿಗೆ ಮೊಮ್ಮಗಳು ವಿವಾಹ: ಇದೇ ಸಿಟ್ಟಿನಲ್ಲಿ ಮರಿಮೊಮ್ಮಗನನ್ನ ಕೊಂದ ಅಜ್ಜಿ

ಚಿಕ್ಕಬಳ್ಳಾಪುರ, ಮಾರ್ಚ್​ 10: ಕೇವಲ 40 ದಿನದ ಹಸುಗೂಸನ್ನು ಹತ್ಯೆಗೈದಿದ್ದ (kill) ಅಜ್ಜಿಯನ್ನು (grandmother) ಚೇಳೂರು ಠಾಣೆ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ಕತ್ತು ಹಿಸುಕಿ ಮರಿ ಮೊಮ್ಮಗನನ್ನೇ ಮೆಹಬೂಬಿ ಹತ್ಯೆಗೈದಿದ್ದರು. ಜಿಲ್ಲೆಯ ಚೇಳೂರು ಪಟ್ಟಣದಲ್ಲಿ 2025ರ ಡಿಸೆಂಬರ್​ 24ರಂದು ಘಟನೆ ನಡೆದಿತ್ತು. ತಡವಾಗಿ ಬೆಳಕಿಗೆ ಬಂದಿದೆ. ಎಫ್​​ಎಸ್​ಎಲ್​ ವರದಿಯಲ್ಲಿ ಮಗುವಿನ ಕೊಲೆ ರಹಸ್ಯ ಬಯಲಾಗಿದೆ. ಚೇಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಡೆದಿದ್ದೇನು? ಕೇವಲ 40 ದಿನದ ಗಂಡು ಮಗು, ಮರಿ ಮೊಮ್ಮಗನನ್ನೇ ಕತ್ತು ಹಿಸುಕಿ ಕೊಲೆ…

Read More

RCB vs KKR ಪಂದ್ಯಕ್ಕೆ 5 ಆಟಗಾರರು ಅಲಭ್ಯ!

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ 57ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ (KKR) ತಂಡಗಳು ಮುಖಾಮುಖಿಯಾಗಲಿದೆ. ರಾಯ್​ಪುರದ ಶಾಹೀದ್ ವೀರ್ ನಾರಾಯಣ್ ಸಿಂಗ್ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯಕ್ಕೆ ಐವರು ಆಟಗಾರರು ಅಲಭ್ಯರಾಗಲಿದ್ದಾರೆ. ಅವರೆಂದರೆ… (PC: IPL) ಹರ್ಷಿತ್ ರಾಣಾ: ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಪ್ರಮುಖ ವೇಗಿ ಹರ್ಷಿತ್ ರಾಣಾ ಮೊಣಕಾಲು ಗಾಯದ ಕಾರಣ ಇಡೀ ಟೂರ್ನಿಯಿಂದ ಹೊರಗುಳಿದಿದ್ದಾರೆ. ಹೀಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ…

Read More

ಬಿಗ್​​ಬಾಸ್​​ ಶೋನಲ್ಲಿ ಈ ವಾರ ಏನು ಮಾಡ್ತೀನಿ ನೋಡ್ತಿರಿ: ಸುದೀಪ್ – Kannada News | Kichcha Sudeep said he will be in weekend episode of Bigg Boss

ಬಿಗ್​​ಬಾಸ್​ ಕನ್ನಡ 12 (Bigg Boss Kannada) ಕ್ಲೈಮ್ಯಾಕ್ಸ್ ಹಂತಕ್ಕೆ ಬಂದಿದೆ. ಬಿಗ್​​ಬಾಸ್ ಶೋ 96 ದಿನಗಳನ್ನು ಪೂರೈಸಿದೆ. ಆದರೆ ಸುದೀಪ್ ಅವರು ಕಳೆದ ವಾರ ಸುದೀಪ್ ಅವರು ವೀಕೆಂಡ್ ಶೋ ನಡೆಸಿಕೊಡಲು ಬಂದಿಲ್ಲ. ‘ಮಾರ್ಕ್’ ಸಿನಿಮಾದ ಬಿಡುಗಡೆ ಮತ್ತು ಪ್ರಚಾರದಲ್ಲಿ ಸುದೀಪ್ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಬೆಂಗಳೂರು, ಮೈಸೂರು ಇನ್ನೂ ಕೆಲವೆಡೆಗೆ ತೆರಳಿ ಅಭಿಮಾನಿಗಳೊಟ್ಟಿಗೆ ‘ಮಾರ್ಕ್’ ಸಿನಿಮಾ ನೋಡುತ್ತಿದ್ದಾರೆ. ಮೈಸೂರಿನಲ್ಲಿ ಚಿತ್ರಮಂದಿರಕ್ಕೆ ಭೇಟಿ ನೀಡಿದ್ದ ಸುದೀಪ್ ಅವರು ಬಿಗ್​​ಬಾಸ್​​ ಬಗ್ಗೆ ಸಹ ಮಾತನಾಡಿದ್ದು, ಈ ವೀಕೆಂಡ್ ಎಪಿಸೋಡ್​​ನಲ್ಲಿ…

Read More

ಸರ್ಕಾರದ ವಿರುದ್ಧ ಉದ್ಯೋಗಾಂಕ್ಷಿಗಳ ಕಿಚ್ಚು: ಅನುಮತಿ ಇಲ್ಲದಿದ್ರೂ ಪ್ರೊಟೆಸ್ಟ್​​ – Kannada News | Massive Protest by Job Aspirants in Dharwad Held Without Police Permission

ಧಾರವಾಡ, ಫೆಬ್ರವರಿ 24: ಖಾಲಿ ಹುದ್ದೆಗಳ ಭರ್ತಿಗೆ ಆಗ್ರಹಿಸಿ ಧಾರವಾಡ ಶ್ರೀನಗರ ವೃತ್ತದಲ್ಲಿ ಉದ್ಯೋಗಾಕಾಂಕ್ಷಿಗಳಿಂದ ಬೃಹತ್ ಪ್ರತಿಭಟನೆ ನಡೆದಿದೆ. ಖಾಲಿ ಇರುವ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡುವಂತೆ ಘೋಷಣೆ ಕೂಗಿರುವ ಪ್ರತಿಭಟನಾಕಾರರು, ಕಾಂಗ್ರೆಸ್ ನಾಯಕರ ಫೋಟೋ ಹಿಡಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿಭಟನಾಕಾರರನ್ನು ನಿಯಂತ್ರಿಸಲು ಧಾರವಾಡ ಪೊಲೀಸರ ಹರಸಾಹಸ ಪಟ್ಟ ಪ್ರಸಂಗವೂ ನಡೆದದೆ. ಇನ್ನು ಇಂದು ಪ್ರತಿಭಟನೆಗೆ ಅಖಿಲ ಕರ್ನಾಟಕ ವಿದ್ಯಾರ್ಥಿ ಸಂಘಟನೆ(AKSA) ಅನುಮತಿ ಕೇಳಿದ್ದು, ಪೊಲೀಸರು ನಿರಾಕರಿಸಿದ್ದರು. ಆದರೆ ಸಂಘಟನೆ ಹೈಕೋರ್ಟ್​​ ಮೊರೆ ಹೋಗಿದ್ದು, ಕೋರ್ಟ್​​ ಪೊಲೀಸರೊಂದಿಗೇ…

Read More

ಪರ್ಫ್ಯೂಮ್, ಸ್ಮಶಾನ ಮೌನ, ಅಸ್ಥಿಪಂಜರ, ಮಗಳ ಶವದೊಂದಿಗೆ ತಂದೆಯ ವಾಸ, ಸಾವು ಮರೆಮಾಚಿದ್ದು ಹೇಗೆ?

ಮೀರತ್, ಏಪ್ರಿಲ್ 13: ಮೀರತ್‌ನ ಬೀದಿಗಳಲ್ಲಿ ಒಂದು ಸುದ್ದಿ ಕಾಳ್ಗಿಚ್ಚಿನಂತೆ ಹರಡಿತು. ತಿಂಗಳುಗಳಿಂದ ಬಾಗಿಲು ಹಾಕಿದ್ದ ಮನೆಯೊಳಗೆ ಮಗಳ ಹೆಣದೊಂದಿಗೆ ತಂದೆ(Father)ಯೊಬ್ಬರು ವಾಸವಿದ್ದರು ಎಂಬ ಸತ್ಯ ಬಯಲಾದಾಗ ಪೊಲೀಸರೇ ಬೆಚ್ಚಿಬಿದ್ದರು. 34 ವರ್ಷದ ಪ್ರಿಯಾಂಕಾ ಎಂಬಾಕೆಯ ದೇಹವು ಈಗ ಬಹುತೇಕ ಅಸ್ಥಿಪಂಜರವಾಗಿ ಮಾರ್ಪಟ್ಟಿದೆ. ನಾಲ್ಕು ತಿಂಗಳ ಮೌನ ಮತ್ತು ಸುಳ್ಳಿನ ಕತೆ ಪ್ರಿಯಾಂಕಾ ಮತ್ತು ಆಕೆಯ ತಂದೆ ಉದಯ್ ಭಾನ್ ಬಿಸ್ವಾಸ್ ಕಳೆದ ನಾಲ್ಕು ತಿಂಗಳಿನಿಂದ ಅಕ್ಕಪಕ್ಕದ ಮನೆಯವರಿಗೆ ಕಾಣಿಸಿಕೊಂಡಿರಲಿಲ್ಲ. ಮನೆಗೆ ಬೀಗ ಹಾಕಲಾಗಿತ್ತು. ಆತಂಕಗೊಂಡ ಸಂಬಂಧಿಕರು…

Read More

ಬಿಗ್​​ಬಾಸ್ ಸ್ಪರ್ಧಿಗಳಿಗೆ ಎದುರಾಗಲಿದೆ ಅಗ್ನಿಪರೀಕ್ಷೆ, ಎದುರಿದ್ದಾರೆ ನಾಲ್ವರು ತೀರ್ಪುಗಾರರು – Kannada News | Bigg Boss Agniparikshe, Four ex Bigg Boss contestants will be Jury

ಬಿಗ್​​ಬಾಸ್ ಕನ್ನಡ (Bigg Boss Kannada) ಹೊಸ ಸೀಸನ್ ಪ್ರಾರಂಭಕ್ಕೆ ದಿನಗಳಷ್ಟೆ ಬಾಕಿ ಇದೆ. ಮುಂದಿನ ವಾರವೇ ಕಾರ್ಯಕ್ರಮ ಪ್ರಾರಂಭ ಆಗಲಿದೆ. ಈ ಬಾರಿ ಸಾಮಾನ್ಯರಿಗೂ ಸಹ ಬಿಗ್​​ಬಾಸ್ ಮನೆಗೆ ಟಿಕೆಟ್ ನೀಡಲಾಗಿದೆ. ಈ ಬಾರಿ ಸಾಕಷ್ಟು ವಿಶೇಷತೆಗಳು ಬಿಗ್​​ಬಾಸ್​​ನಲ್ಲಿ ಇರಲಿವೆ. ಅದರಲ್ಲೂ ಸ್ಪರ್ಧಿಗಳ ಆಯ್ಕೆ ಈ ಬಾರಿ ಬಹಳ ಭಿನ್ನವಾಗಿರಲಿದೆ. ಈ ಬಾರಿ ‘ಬಿಗ್​​ಬಾಸ್ ಅಗ್ನಿಪರೀಕ್ಷೆ’ ಎಂಬ ಹೊಸ ಕಾನ್ಸೆಪ್ಟ್ ಅನ್ನು ಪರಿಚಯಿಸಲಾಗಿದ್ದು, ಮನೆಯ ಒಳಗೆ ಹೋಗುವ ಸ್ಪರ್ಧಿಗಳು ಮೊದಲು ಅಗ್ನಿಪರೀಕ್ಷೆಯನ್ನು ಎದುರಿಸಬೇಕಿರಲಿದೆ. ಈ ಪರೀಕ್ಷೆಯನ್ನು…

Read More

ಕೃಷಿ ಸಂಶೋಧನಾ ಕೇಂದ್ರದಲ್ಲಿನ ಬೆಳೆಬಾಳುವ ಮರಗಳನ್ನೇ ಕಡಿದು ಮಾರಿಕೊಂಡ್ರಾ ಅಧಿಕಾರಿಗಳು?

ಉಡುಪಿ, ಡಿಸೆಂಬರ್​ 29: ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಕೃಷಿ ಸಂಶೋಧನಾ ಕೇಂದ್ರದಲ್ಲಿದ್ದ ಲಕ್ಷಾಂತರ ರೂ ಮೌಲ್ಯದ ಮರಗಳಿಗೆ ಅಧಿಕಾರಿಗಳು ಕೊಡಲಿ ಏಟು ನೀಡಿದ್ದಾರೆ. ಗೇರು,ಮಾವು ಮರಗಳ ಗೆಲ್ಲು ಕಟಾವಿನ ಹೆಸರಿನಲ್ಲಿ ಬೆಲೆಬಾಳುವ ಮರಗಳ ಮಾರಣಹೋಮ ನಡೆದಿದೆ. ಕೃಷಿ ಕೇಂದ್ರದ ಅಧಿಕಾರಿಗಳ ಮೇಲೆ ಮರ ಸಾಗಾಣಿಕೆಯ ಆರೋಪ ಕೇಳಿಬಂದಿದೆ. ಕೃಷಿ ಅಧಿಕಾರಿಗಳ ಜೊತೆ ಅರಣ್ಯಾಧಿಕಾರಿಗಳು ಶಾಮೀಲಾಗಿರುವ ಶಂಕೆ ವ್ಯಕ್ತವಾಗಿದೆ. ಮರ ಮಾರಾಟ ಮಾಡಿದ್ದ ಬಗ್ಗೆ ತನಿಖೆ ಮಾಡುವಂತೆ ಸಾಮಾಜಿಕ ಹೋರಾಟಗಾರರು ಆಗ್ರಹಿಸಿದ್ದಾರೆ. ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್…

Read More