Headlines

IPL 2026: ರೋಹಿತ್ ಶರ್ಮಾ ಗಾಯಗೊಂಡ ಬೆನ್ನಲ್ಲೇ ಮುಂಬೈ ತಂಡಕ್ಕೆ ಬದಲಿ ಆಟಗಾರನ ಎಂಟ್ರಿ – Kannada News | IPL 2026: Rohit Sharma’s Injury Hits MI Hard; Krish Bhagat Replaces Atharva Ankolekar

ಐಪಿಎಲ್ 2026 (IPL 2026) ರ ಆವೃತ್ತಿಯಲ್ಲಿ ಸರಣಿ ಸೋಲುಗಳಿಂದ ಬಳಲುತ್ತಿರುವ ಮುಂಬೈ ಇಂಡಿಯನ್ಸ್ (Mumbai Indians) ತಂಡಕ್ಕೆ ರೋಹಿತ್ ಶರ್ಮಾ (Rohit Sharma) ಅವರ ಗಾಯ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಈ ನಡುವೆ ಗಾಯದಿಂದಾಗಿ ಪಂದ್ಯಾವಳಿಯಿಂದ ಹೊರಗುಳಿದ ಯುವ ಆಟಗಾರ ಅಥರ್ವ ಅಂಕೋಲೆಕರ್ ಬದಲಿಗೆ ಕ್ರಿಶ್ ಭಗತ್ ಎಂಬ ಹೊಸ ಹುಡುಗನನ್ನು ಮುಂಬೈ ಫ್ರಾಂಚೈಸಿ ತಂಡಕ್ಕೆ ಸೇರಿಸಿಕೊಂಡಿದೆ. ಮೊಣಕಾಲಿನ ಗಾಯದಿಂದಾಗಿ ಅಂಕೋಲೆಕರ್ ಸೀಸನ್​ ಆರಂಭಕ್ಕೂ ಮುನ್ನವೇ ತಂಡವನ್ನು ತೊರೆಯಬೇಕಾಯಿತು. ಇದೀಗ ಮುಂಬೈ ಆಡಳಿತ ಮಂಡಳಿ ನಾಲ್ಕು ಪಂದ್ಯಗಳ ನಂತರ ಅಧಿಕೃತವಾಗಿ ಬದಲಿ ಆಟಗಾರನನ್ನು ಘೋಷಿಸಿದೆ. ಇಂದು ಪಂಜಾಬ್ ಕಿಂಗ್ಸ್ ವಿರುದ್ಧದ ನಿರ್ಣಾಯಕ ಪಂದ್ಯಕ್ಕೂ ಮುನ್ನ ಈ ಬದಲಾವಣೆ ನಡೆದಿರುವುದು ಗಮನಾರ್ಹ.

ಕ್ರಿಶ್ ಭಗತ್ ಯಾರು?

21 ವರ್ಷದ ಕ್ರಿಶ್ ಭಗತ್ ಆಲ್‌ರೌಂಡರ್ ಆಗಿದ್ದು, ದೇಶೀಯ ಕ್ರಿಕೆಟ್‌ನಲ್ಲಿ ಪಂಜಾಬ್ ರಾಜ್ಯವನ್ನು ಪ್ರತಿನಿಧಿಸುತ್ತಾರೆ. ಕ್ರಿಶ್ ಉತ್ತಮ ವೇಗದ ಬೌಲರ್ ಮಾತ್ರವಲ್ಲ, ಸಮರ್ಥ ಕೆಳ ಕ್ರಮಾಂಕದ ಬ್ಯಾಟರ್ ಕೂಡ. ಅವರು ಕಳೆದ ಎರಡು ವರ್ಷಗಳಿಂದ ಮುಂಬೈ ಇಂಡಿಯನ್ಸ್ ಟ್ರಯಲ್ಸ್‌ನಲ್ಲಿ ಭಾಗವಹಿಸುತ್ತಿದ್ದಾರೆ. ಈ ವರ್ಷ ಡಿವೈ ಪಾಟೀಲ್ ಟಿ20 ಕಪ್‌ನಲ್ಲಿ ರಿಲಯನ್ಸ್ ತಂಡದ ಪರ ಆಡುವ ಮೂಲಕ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದರು.

ದಾಖಲೆಗಳು ಹೇಗಿವೆ?

ಕ್ರಿಶ್ ಭಗತ್ ಇಲ್ಲಿಯವರೆಗೆ ಆಡಿರುವ 7 ಪ್ರಥಮ ದರ್ಜೆ ಪಂದ್ಯಗಳಲ್ಲಿ 145 ರನ್ ಗಳಿಸಿದ್ದು 7 ವಿಕೆಟ್‌ಗಳನ್ನು ಪಡೆದಿದ್ದಾರೆ. ಲಿಸ್ಟ್-ಎ ಕ್ರಿಕೆಟ್‌ನಲ್ಲಿ 9 ಪಂದ್ಯಗಳನ್ನು ಆಡಿರುವ ಅವರು 52 ರನ್​ಗಳೊಂದಿಗೆ 9 ವಿಕೆಟ್‌ಗಳನ್ನು ಪಡೆದಿದ್ದಾರೆ.

IPL 2026: ಇದಕ್ಕಿದ್ದಂತೆ ಐಪಿಎಲ್ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಿದ ಬಿಸಿಸಿಐ

ಮುಂಬೈಗೆ ಇಂದು ನಿರ್ಣಾಯಕ ಪಂದ್ಯ

ಹಾರ್ದಿಕ್ ಪಾಂಡ್ಯ ನೇತೃತ್ವದ ಮುಂಬೈ ಇಂಡಿಯನ್ಸ್ ಕಳೆದ ನಾಲ್ಕು ಪಂದ್ಯಗಳಲ್ಲಿ ಕೇವಲ ಒಂದನ್ನು ಮಾತ್ರ ಗೆದ್ದಿದೆ. ರೋಹಿತ್ ಶರ್ಮಾ ಅವರ ಫಿಟ್ನೆಸ್ ಕೂಡ ತಂಡಕ್ಕೆ ಕಳವಳಕಾರಿಯಾಗಿದೆ. ಈ ಗಾಯದಿಂದಾಗಿ ರೋಹಿತ್ ಪಂಜಾಬ್ ವಿರುದ್ಧ ಆಡಲು ಸಾಧ್ಯವಾಗುವುದಿಲ್ಲ ಎಂದು ಹೇಳಲಾಗುತ್ತಿದೆ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ಮುಂಬೈ ಇಂದು ವಾಂಖೆಡೆ ಕ್ರೀಡಾಂಗಣದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಎದುರಿಸಲಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *