Headlines

ಬಂಡೀಪುರ ಸಫಾರಿಗೆ ಹೋದ ಪ್ರವಾಸಿಗರಿಗೆ ಡಬಲ್ ಧಮಾಕ: ಮರಿಗಳ ಜೊತೆಗೆ ತಾಯಿ ಹುಲಿಯ ದರ್ಶನ

ಚಾಮರಾಜನಗರ, ಏಪ್ರಿಲ್​​ 05: ಬಂಡೀಪುರ ಸಫಾರಿಗೆ ಹೋದ ಪ್ರವಾಸಿಗರಿಗೆ ಡಬಲ್ ಧಮಾಕ ಸಿಕ್ಕಿದೆ. ಒಂದೆಡೆ ತನ್ನ ಮರಿಗಳೊಂದಿಗೆ ತಾಯಿ ಹುಲಿ ದರ್ಶನ ನೀಡಿದ್ದರೆ, ಮತ್ತೊಂದೆಡೆ ಬೃಹತ್ ವ್ಯಾಘ್ರವೊಂದು ಕ್ಯಾಮರಕ್ಕೆ ಪೋಸ್ ಕೊಟ್ಟಿದೆ. ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಟೈಗರ್ ರಿಸರ್ವ್ ಫಾರೆಸ್ಟ್​​ನಲ್ಲಿ ತಾಯಿಯೊಂದಿಗೆ ಚಿನ್ನಾಟ ಆಡುತ್ತಿರುವ ಮರಿಗಳ ಅಪರೂಪದ ದೃಶ್ಯ ಸೆರೆಯಾಗಿದ್ದು, ಸಫಾರಿ ರೀ ಓಪನ್ ಆದ ಬಳಿಕ ಮೊದಲ ಬಾರಿಗೆ ವ್ಯಾಘ್ರನ ಕುಟುಂಬವನ್ನ ಪ್ರವಾಸಿಗರು ಕಣ್ತುಂಬಿಕೊಂಡಿದ್ದಾರೆ. ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ. Source link

Read More

ಹಾರ್ಮುಜ್ ಜಲಸಂಧಿಯಲ್ಲಿ ಭಾರತದ ಹಡಗನ್ನು ವಶಪಡಿಸಿಕೊಂಡ ಇರಾನ್ – Kannada News | Iran Seizes India bound ship among 2 vessels In strait of Hormuz

ಟೆಹ್ರಾನ್, ಏಪ್ರಿಲ್ 22: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಘೋಷಿಸಿದ ಕದನ ವಿರಾಮ ವಿಸ್ತರಣೆಯ ಹೊರತಾಗಿಯೂ ಹಾರ್ಮುಜ್ ಜಲಸಂಧಿಯಲ್ಲಿ (Strait of Hormuz) ಉದ್ವಿಗ್ನತೆ ಮುಂದುವರಿದಿದೆ. ಹಾರ್ಮುಜ್ ಜಲಸಂಧಿಯಲ್ಲಿ 2 ಹಡಗುಗಳನ್ನು ವಶಪಡಿಸಿಕೊಂಡಿರುವುದಾಗಿ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಹೇಳಿದೆ. ಆ 2 ಹಡಗುಗಳಲ್ಲಿ ಒಂದು ಭಾರತದ ಗುಜರಾತ್​​ನತ್ತ ಬರುತ್ತಿತ್ತು. “ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ನೌಕಾ ಪಡೆ ಇಂದು ಬೆಳಿಗ್ಗೆ ಹಾರ್ಮುಜ್ ಜಲಸಂಧಿಯಲ್ಲಿ ಎರಡು ಹಡಗುಗಳು ನಿಯಮ ಉಲ್ಲಂಘನೆ ಮಾಡಿದ್ದನ್ನು…

Read More

ಗ್ರೀನ್​ಲ್ಯಾಂಡ್ ದಕ್ಕೋವರೆಗೂ ಅಮೆರಿಕದಿಂದ ಐರೋಪ್ಯ ರಾಷ್​ಟ್ರಗಳಿಗೂ ಟ್ರಂಪ್ ಟ್ಯಾರಿಫ್ ಧಮ್ಕಿ; ಭಾರತಕ್ಕೇನು ಪಾಠ? – Kannada News | EU vs USA tariff conflict, what lessons India can learn from this

ನವದೆಹಲಿ, ಜನವರಿ 18: ಗ್ರೀನ್​ಲ್ಯಾಂಡ್ ಅನ್ನು ಕೊಡಲು ಒಪ್ಪದ ಡೆನ್ಮಾರ್ಕ್ ದೇಶದ ಪರವಾಗಿ ನಿಂತಿರುವ ಕೆಲ ಐರೋಪ್ಯ ದೇಶಗಳ ಮೇಲೆ ಡೊನಾಲ್ಡ್ ಟ್ರಂಪ್ (Donald Trump) ಶೇ. 10ರಷ್ಟು ಟ್ಯಾರಿಫ್ ಪ್ರಕಟಿಸಿದ್ದಾರೆ. ಫೆಬ್ರುವರಿ 1ರಿಂದ ಈ ಟ್ಯಾರಿಫ್ ಜಾರಿಗೆ ಬರುತ್ತದೆ. ಜೂನ್ 1ರಿಂದ ಈ ಟ್ಯಾರಿಫ್ ಶೇ. 25ಕ್ಕೆ ಏರಲಿದೆ. ಗ್ರೀನ್​ಲ್ಯಾಂಡ್ ದಕ್ಕುವವರೆಗೂ ಯೂರೋಪಿಯನ್ ದೇಶಗಳ ಮೇಲಿನ ಈ ಟ್ಯಾರಿಫ್ ಕ್ರಮ ಮುಂದುವರಿಯುತ್ತದೆ ಎಂದು ಟ್ರಂಪ್ ಎಚ್ಚರಿಕೆ ಕೊಟ್ಟಿದ್ದಾರೆ. ಅಮೆರಿಕದ ನಿಲುವನ್ನು ಖಂಡಿಸಿದ ಯೂರೋಪ್ ಡೆನ್ಮಾರ್ಕ್, ನಾರ್ವೆ,…

Read More

ರಾಜ್ ಬಿ ಶೆಟ್ಟಿಯ ಮೊದಲ ಹಿಂದಿ ಸಿನಿಮಾದ ಟ್ರೈಲರ್ ಬಿಡುಗಡೆ – Kannada News | Raj B Shetty starrer first Hindi movie’s trailer released

ರಾಜ್ ಬಿ ಶೆಟ್ಟಿ (Raj B Shetty) ಕನ್ನಡದ ಜನಪ್ರಿಯ ನಟ ಮತ್ತು ನಿರ್ದೇಶಕ. ಕೆಲವು ಅದ್ಭುತ ಸಿನಿಮಾಗಳನ್ನು ಈಗಾಗಲೇ ಅವರು ನೀಡಿದ್ದಾರೆ. ಒಳ್ಳೆಯ ನಟರೂ ಆಗಿರುವ ರಾಜ್ ಬಿ ಶೆಟ್ಟಿಗೆ ನೆರೆಯ ಚಿತ್ರರಂಗಗಳಿಂದಲೂ ಆಫರ್​​ಗಳು ಬರುತ್ತಲೇ ಇವೆ. ಈಗಾಗಲೇ ಮೂರು ಮಲಯಾಳಂ ಸಿನಿಮಾಗಳಲ್ಲಿ ರಾಜ್ ಬಿ ಶೆಟ್ಟಿ ನಟಿಸಿ ಬಂದಿದ್ದಾರೆ. ಇದೀಗ ರಾಜ್ ಬಿ ಶೆಟ್ಟಿ, ಬಾಲಿವುಡ್​​ಗೆ ಸಹ ಕಾಲಿಟ್ಟಿದ್ದು, ಅವರು ನಟಿಸಿರುವ ಮೊದಲ ಹಿಂದಿ ಸಿನಿಮಾದ ಟ್ರೈಲರ್ ಇದೀಗ ಬಿಡುಗಡೆ ಆಗಿದೆ. ‘ಬಂದರ್’ ಹೆಸರಿನ…

Read More

‘ಧೈರ್ಯವಿದ್ದರೆ ವಿಧಾನಸಭೆಯಲ್ಲಿ ಉತ್ತರಿಸಿ’; ಕಾವೇರಿ ಸಮಸ್ಯೆ ಕುರಿತು ಸಿಎಂ ವಿಜಯ್‌ಗೆ ಉದಯನಿಧಿ ಸ್ಟಾಲಿನ್ ಸವಾಲು – Kannada News | Wearing black Shirt Udhayanidhi Stalin slams CM Vijay over farmers issues and Cauvery Dispute

ಚೆನ್ನೈ, ಆಗಸ್ಟ್ 6: ತಮಿಳುನಾಡು ವಿಧಾನಸಭೆಯಲ್ಲಿ ಮಂಡಿಸಲಾದ 2026-27ರ ಹಣಕಾಸು ವರ್ಷದ ಕೃಷಿ ಮತ್ತು ರೈತ ಕಲ್ಯಾಣ ಇಲಾಖೆಯ ಬಜೆಟ್ ವರದಿಯನ್ನು ರೈತರಿಗೆ ಯಾವುದೇ ಪ್ರಯೋಜನವನ್ನು ನೀಡದ ನಿರಾಶಾದಾಯಕ ವರದಿ ಎಂದು ವಿರೋಧ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್ (Udhayanidhi Stalin)  ಟೀಕಿಸಿದ್ದಾರೆ. ಎಲ್ಲಾ ಡಿಎಂಕೆ ಶಾಸಕರು ಇಂದು ವಿಧಾನಸಭೆಗೆ ಕಪ್ಪು ಶರ್ಟ್ ಧರಿಸಿ ಬಂದು, ಸರ್ಕಾರ ರೈತರಿಗೆ ದ್ರೋಹ ಮಾಡಿದೆ ಎಂದು ಆರೋಪಿಸಿದರು. ಬಜೆಟ್ ಭಾಷಣದ ನಂತರ ವಿಧಾನಸಭೆ ಆವರಣದಲ್ಲಿ ಮಾಧ್ಯಮಗಳನ್ನು ಭೇಟಿಯಾದ ಡಿಎಂಕೆ ನಾಯಕ…

Read More

MI vs RCB Playing XI: ಟಾಸ್ ಗೆದ್ದ ಮುಂಬೈ; ಆರ್​ಸಿಬಿ ಪ್ಲೇಯಿಂಗ್​ 11 ನಿಂದ ಹೇಜಲ್​ವುಡ್ ಔಟ್

ಐಪಿಎಲ್ 2026 (IPL 2026) ರ 20ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್, ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (MI vs RCB) ತಂಡವನ್ನು ಎದುರಿಸಿದೆ. ಎರಡೂ ತಂಡಗಳಿಗೆ ಇದು ಈ ಆವೃತ್ತಿಯ ನಾಲ್ಕನೇ ಪಂದ್ಯವಾಗಿದೆ. ಎರಡೂ ತಂಡಗಳು ಕಳೆದ ಪಂದ್ಯದಲ್ಲಿ ಸೋತಿವೆ. ಆದ್ದರಿಂದ, ಎರಡೂ ತಂಡಗಳು ಮತ್ತೆ ಗೆಲುವಿನ ಲಯಕ್ಕೆ ಮರಳಲು ಪ್ರಯತ್ನಿಸಲಿವೆ. ಒಂದೆಡೆ ಆರ್​ಸಿಬಿ ಆಡಿರುವ ಮೂರು ಪಂದ್ಯಗಳಲ್ಲಿ 2 ಪಂದ್ಯಗಳನ್ನು ಗೆದ್ದು 1 ಪಂದ್ಯದಲ್ಲಿ ಸೋತಿದ್ದು, 4 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಮೂರನೇ…

Read More

IND vs BAN: 6 ಪಂದ್ಯಗಳ ಸರಣಿಗಾಗಿ ಬಾಂಗ್ಲಾ ಪ್ರವಾಸ ಮಾಡಲಿದೆ ಭಾರತ; ವೇಳಾಪಟ್ಟಿ ಪ್ರಕಟ – Kannada News | India vs Bangladesh Cricket Tour Schedule Released: ODI and T20 Series Dates

ಬಾಂಗ್ಲಾದೇಶದ ಸ್ಟಾರ್ ವೇಗಿ ಮುಸ್ತಾಫಿಜುರ್ ರೆಹಮಾನ್ (Mustafizur Rahman ) ಅವರನ್ನು ಐಪಿಎಲ್‌ನಲ್ಲಿ (IPL) ಆಡಲು ಅನುಮತಿ ನೀಡಿರುವುದಕ್ಕೆ ಭಾರತದಲ್ಲಿ ಅಸಾಮಾಧಾನ ಸ್ಫೋಟಗೊಂಡಿದೆ. ಬಾಂಗ್ಲಾ ಆಟಗಾರನನ್ನು 9 ಕೋಟಿ ರೂ,ಗೆ ಖರೀದಿಸಿರುವ ಕೋಲ್ಕತ್ತಾ ನೈಟ್ ರೈಡರ್ಸ್​ ತಂಡಕ್ಕೂ ಜನ ಛೀಮಾರಿ ಹಾಕುತ್ತಿದ್ದಾರೆ. ಇದೆಲ್ಲದರ ನಡುವೆ ಬಿಸಿಸಿಐ (BCCI) ಅಚ್ಚರಿಯ ನಿರ್ಧಾರವೊಂದನ್ನು ತೆಗೆದುಕೊಂಡಿದೆ. ಅದೆನೆಂದರೆ, ಏಕದಿನ ಹಾಗೂ ಟಿ20 ಸರಣಿಗಾಗಿ ಟೀಂ ಇಂಡಿಯಾ, ಬಾಂಗ್ಲಾದೇಶ ಪ್ರವಾಸವನ್ನು ಮಾಡಲಿದೆ. ಈ ಪ್ರವಾಸದ ವೇಳಾಪಟ್ಟಿಯನ್ನು ಇಂದು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಬಿಡುಗಡೆ ಮಾಡಿದೆ….

Read More

ಹೊಸ ವರ್ಷಕ್ಕೆ ಹೊಸ ಚಾಲೆಂಜ್; 10 ದಿನ ಸಕ್ಕರೆ ತಿನ್ನದಿದ್ದರೆ ದೇಹದಲ್ಲಿ ಏನೆಲ್ಲಾ ಆಗುತ್ತೆ ನೋಡಿ – Kannada News | Sugar Detox: 10 Days to a Healthier You

ಇತ್ತೀಚಿಗೆ ಶುಗರ್ (Sugar) ಫ್ರೀ ಚಾಲೆಂಜ್ ನಡೆಯುತ್ತಿದ್ದು ಇದು ಆರೋಗ್ಯಕರ ಜೀವನಶೈಲಿಯನ್ನು ಕಾಪಾಡಿಕೊಳ್ಳಲು, ತೂಕ ಇಳಿಸಿಕೊಳ್ಳಲು, ದೇಹದಲ್ಲಿರುವ ಶಕ್ತಿಯನ್ನು ಹೆಚ್ಚಿಸಲು ಮತ್ತು ಮಧುಮೇಹದಂತಹ ಸಮಸ್ಯೆಗಳನ್ನು ತಡೆಗಟ್ಟಲು ಸಹಾಯ ಮಾಡುತ್ತದೆ. ಆದರೆ ಸಿಹಿ ತಿನ್ನುವ ಬಯಕೆ ಅಥವಾ ಹಂಬಲವನ್ನು ನಿಯಂತ್ರಿಸುವುದು ಮತ್ತು ಸಂಸ್ಕರಿಸಿದ ಆಹಾರಗಳಿಂದ ದೂರವಿರುವುದು ಅಷ್ಟು ಸುಲಭವಲ್ಲ, ಅದೊಂದು ಸವಾಲಾಗಿರುತ್ತದೆ. ಆದರೆ ಸಿಹಿ ತಿಂಡಿ ಸೇವನೆ ಮಾಡುವುದನ್ನು ಕಡಿಮೆ ಮಾಡುವ ಮೂಲಕ ಅಥವಾ ತ್ಯಜಿಸುವ ಮೂಲಕ ಒಬ್ಬ ವ್ಯಕ್ತಿ ತನ್ನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಹಾಗಾದರೆ ಸಕ್ಕರೆಯ ಸೇವನೆ…

Read More

‘ಸ್ಪೈಡರ್ ಮ್ಯಾನ್’ ದಾಖಲೆ; ಭಾರತದಲ್ಲಿ ಮೊದಲ ದಿನವೇ 72 ಕೋಟಿ ರೂ. ಗಳಿಕೆ – Kannada News | Spider Man: Brand New Day Box Office Day 1: Tom Holland Starrer Beats Avengers Endgame Record in India

ಟಾಮ್ ಹಾಲೆಂಡ್ ನಟನೆಯ ‘ಸ್ಪೈಡರ್-ಮ್ಯಾನ್: ಬ್ರಾಂಡ್ ನ್ಯೂ ಡೇ’ ಸಿನಿಮಾ (Spider Man) ಭಾರತೀಯ ಗಲ್ಲಾಪೆಟ್ಟಿಗೆಯಲ್ಲಿ ಹೊಸ ಇತಿಹಾಸ ಸೃಷ್ಟಿಸಿದೆ. ಜುಲೈ 30ರಂದು ರಿಲೀಸ್ ಆದ ಈ ಸಿನಿಮಾ ಮೊದಲ ದಿನವೇ ಭರ್ಜರಿ ಕಲೆಕ್ಷನ್ ಮಾಡುವ ಮೂಲಕ ಬಾಕ್ಸ್ ಆಫೀಸ್ ಧೂಳೀಪಟ ಮಾಡಿದೆ. ಈ ಚಿತ್ರವು ಹಾಲಿವುಡ್‌ನ ಬಿಗ್ ಹಿಟ್ ‘ಅವೆಂಜರ್ಸ್: ಎಂಡ್‌ಗೇಮ್’ ದಾಖಲೆಯನ್ನು ಮುರಿದಿದೆ. ಭಾರತದಲ್ಲಿ ಅತಿ ಹೆಚ್ಚು ಹಣ ಗಳಿಸಿದ ಮೊದಲ ದಿನದ ವಿದೇಶಿ ಸಿನಿಮಾ ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಿದೆ. ಭರ್ಜರಿ ಕಲೆಕ್ಷನ್…

Read More

TV9 Kannada News Live: ಉಪಚುನಾವಣೆ ಗೆದ್ದರೂ ‘ಕೈ’ಗೆ ಹೊಸ ಚಿಂತೆ, ಟಿವಿಕೆ ಮೈತ್ರಿ ಬಗ್ಗೆ ಅಂತೆಕಂತೆ – Kannada News | TV9 Kannada News Live: Muslim Votes shifts From Congress in Dvanagere, Vijay’s Alliance curiosity in Tamilnadu

ಬೆಂಗಳೂರು, ಮೇ 05: ದಾವಣಗೆರೆ ದಕ್ಷಿಣ ಕ್ಷೇತ್ರದ ಉಪ ಚುನಾವಣೆಯ ಫಲಿತಾಂಶ ಕಾಂಗ್ರೆಸ್‌ಗೆ ಆತಂಕ ಮೂಡಿಸಿದೆ. ಎಲೆಕ್ಷನ್​​ನಲ್ಲಿ ಕಾಂಗ್ರೆಸ್​​ ಅಭ್ಯರ್ಥಿ ಸಮರ್ಥ್​​ ಶಾಮನೂರು ಗೆದ್ದಿದ್ದರೂ, ವಿಜಯದ ಅಂತರ ಬಹಳ ಕಡಿಮೆಯಾಗಿರೋದು ಮುಸ್ಲಿಂ ಮತದಾರರು ಕಾಂಗ್ರೆಸ್‌ನಿಂದ ದೂರ ಸರಿದಿರುವುದನ್ನು ಸ್ಪಷ್ಟವಾಗಿ ತೋರಿಸುತ್ತಿದೆ ಎಂದು ವಿಶ್ಲೇಷಿಸಲಾಗಿದೆ. ಎಸ್​​ಡಿಪಿಐ ಅಭ್ಯರ್ಥಿ ಸೇರಿದಂತೆ ಚುನಾವಣೆಗೆ ಸ್ಪರ್ಧಿಸಿದ್ದ ಮುಸ್ಲಿಂ ಸಮಉದಾಯಕ್ಕೆ ಸೇರಿರುವ ಕ್ಯಾಂಡಿಡೇಟ್​​ಗಳು 20 ಸಾವಿರಕ್ಕೂ ಅಧಿಕ ಮತಗಳನ್ನು ಪಡೆದುಕೊಂಡಿದ್ದಾರೆ. ಈ ಬೆಳವಣಿಗೆಯು ಮುಂದಿನ ದಿನಗಳಲ್ಲಿ 40-50 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ದೊಡ್ಡ ಮಟ್ಟದ ಹಾನಿಯನ್ನುಂಟು…

Read More