Headlines

Bengaluru Air Quality: ಬೆಂಗಳೂರಿನಲ್ಲಿ ಹೆಚ್ಚಿದ ಕಳಪೆ ಏರ್ ಕ್ವಾಲಿಟಿ, ಜಿಬಿಎ ನಿರ್ಧಾರ ಏನು? – Kannada News | Bangalore Air Pollution Crisis: Bengaluru’s increasing vehicle is also causing poor air quality, GBA to take action

ಬೆಂಗಳೂರಿನಲ್ಲಿ ಹೆಚ್ಚಿದ ಕಳಪೆ ಏರ್ ಕ್ವಾಲಿಟಿ, ಜಿಬಿಎ ನಿರ್ಧಾರ ಏನು? ಬೆಂಗಳೂರು, ಡಿಸೆಂಬರ್ 27: ಹಲವು ದಿನಗಳಿಂದ ಬೆಂಗಳೂರಿನ ಗಾಳಿಯ ಗುಣಮಟ್ಟದಲ್ಲಿ (Bengaluru Air Quality) ಹೆಚ್ಚಿನ ಏರುಪೇರಾಗುತ್ತಲೇ ಇದೆ. ವಾಯು ಗುಣಮಟ್ಟ ಸೂಚ್ಯಂಕದ ಪ್ರಕಾರ (AQI) ಇಂದಿನ ಗಾಳಿಯ ಗುಣಮಟ್ಟ 173 ಇದ್ದು, ನಗರದ ಹಲವು ಭಾಗಗಳಲ್ಲಿ ಇದಕ್ಕೂ ಕಳಪೆ ಏರ್ ಕ್ವಾಲಿಟಿ ಕಂಡುಬರುತ್ತಿದೆ. ಕಳೆದ 4 ವರ್ಷಗಳಲ್ಲಿ ಈ ವರ್ಷವೇ ಗಾಳಿಯ PM (Particulate Matter) ಪ್ರಮಾಣ ಸಹ ಮಿತಿ ಮೀರಿದೆ. ಇಂದೂ ಸಹ…

Read More

IND vs ZIM: 4,6,4,4.. ಔಟ್; 3ನೇ ಓವರ್​ನಲ್ಲೇ ಆಟ ಮುಗಿಸಿದ ವೈಭವ್ – Kannada News | India vs Zimbabwe 2nd T20: Early Wickets in Harare, Sooryavanshi and Abhishek Fall

ಹರಾರೆಯಲ್ಲಿ ನಡೆಯುತ್ತಿರುವ ಭಾರತ ಮತ್ತು ಜಿಂಬಾಬ್ವೆ ನಡುವಿನ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಟಾಸ್ ಗೆದ್ದ ಜಿಂಬಾಬ್ವೆ ಮೊದಲು ಬೌಲಿಂಗ್ ಆಯ್ದುಕೊಂಡಿತು. ಹೀಗಾಗಿ ಮೊದಲು ಬ್ಯಾಟಿಂಗ್‌ ಆರಂಭಿಸಿದ ಭಾರತ ತಂಡಕ್ಕೆ ಮತ್ತೊಮ್ಮೆ ಕಳಪೆ ಆರಂಭ ಸಿಕ್ಕಿದೆ. ಆರಂಭಿಕರಿಬ್ಬರು 3ನೇ ಓವರ್ ಮುಗಿಯುವುದಕ್ಕೂ ಮುನ್ನವೇ ಪೆವಿಲಿಯನ್ ಸೇರಿಕೊಂಡಿದ್ದಾರೆ(PC-BCCI). ಆರಂಭಿಕ ಅಭಿಷೇಕ್ ಶರ್ಮಾ ಮತ್ತೊಮ್ಮೆ ಕಳಪೆ ಪ್ರದರ್ಶನ ನೀಡಿ 8 ರನ್​ಗಳಿಗೆ ವಿಕೆಟ್ ಒಪ್ಪಿಸಿದರೆ, ಕಳೆದ ಪಂದ್ಯದಲ್ಲಿ ಸ್ಫೋಟಕ ಅರ್ಧಶತಕದ ಇನ್ನಿಂಗ್ಸ್ ಆಡಿದ್ದ ವೈಭವ್ ಸೂರ್ಯವಂಶಿ ಕೂಡ ಈ ಪಂದ್ಯದಲ್ಲಿ…

Read More

Video: ಪುಟಾಣಿ ಫ್ಲೈಯಿಂಗ್ ಕಿಸ್ ಕೊಡುತ್ತಿದ್ದಂತೆ ನಾಚಿ ನೀರಾದ ಪುಟ್ಟ ಹುಡುಗ – Kannada News | A little boy holding his face as a little girl gives him a flying kiss.

ಪುಟಾಣಿ ಮಕ್ಕಳು (little kids) ತಮ್ಮ ಮುದ್ದು ಮುದ್ದಾದ ನಡೆ ನುಡಿಯಿಂದಲೇ ಮನಸ್ಸಿಗೆ ಹತ್ತಿರವಾಗುತ್ತಾರೆ. ಪುಟ್ಟ ಮಕ್ಕಳು ಕ್ಯೂಟ್ ಎಕ್ಸ್ಪ್ರೆಶನ್ ಕೊಡುವುದನ್ನು ನೋಡುತ್ತಿದ್ದರೆ ಅಪ್ಪಿ ಮುದ್ದಾಡಬೇಕೆನಿಸುತ್ತದೆ. ಪುಟ್ಟ ಕಂದಮ್ಮ ಮುದ್ದಾದ ವಿಡಿಯೋಗಳು ಆಗಾಗ್ಗೆ ವೈರಲ್ ಆಗುತ್ತಿರುತ್ತವೆ. ಇದೀಗ ಪುಟ್ಟ ಹುಡುಗಿ ತನ್ನ ಎದುರು ಕುಳಿತಿದ್ದ ಪುಟ್ಟ ಹುಡುಗನಿಗೆ ಫ್ಲೈಯಿಂಗ್ ಕಿಸ್ ನೀಡಿದ್ದು, ಈ ಬಾಲಕ ನಾಚಿ ನೀರಾದ ವಿಡಿಯೋ ನೆಟ್ಟಿಗರ ಗಮನ ಸೆಳೆದಿದೆ. currenthub ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಪುಟಾಣಿಯೊಂದು ತನ್ನಎದುರು ಕುಳಿತಿದ್ದ…

Read More

ಪೋಷಕರೇ ಮಗುವಿಗೆ ಹಸಿವಾಗಿರುವುದನ್ನು ಹೇಗೆ ತಿಳಿದುಕೊಳ್ಳಬೇಕು ಗೊತ್ತಾ? – Kannada News | How To Know If Your Toddler Is Hungry: Behavioral Signs To Watch

ಸಣ್ಣ ಮಕ್ಕಳು ತಮ್ಮ ಹಸಿವು ಅಥವಾ ಅಸಹಜತೆಯನ್ನು ಯಾವಾಗಲೂ ಸ್ಪಷ್ಟವಾಗಿ ಹೇಳಲು ಸಾಧ್ಯವಾಗುವುದಿಲ್ಲ. ವಿಶೇಷವಾಗಿ 5 ವರ್ಷಕ್ಕಿಂತ ಚಿಕ್ಕ ವಯಸ್ಸಿನ ಮಕ್ಕಳು ಅಳುವುದು, ಕೋಪಗೊಳ್ಳುವುದು ಅಥವಾ ವರ್ತನೆಯಲ್ಲಿ ಬದಲಾವಣೆ ತೋರಿಸುವ ಮೂಲಕ ತಮ್ಮ ಅಗತ್ಯಗಳನ್ನು ವ್ಯಕ್ತಪಡಿಸುತ್ತಾರೆ. ಆದ್ದರಿಂದ ಪೋಷಕರು ಮಕ್ಕಳ ದಿನನಿತ್ಯದ ವರ್ತನೆ ಮತ್ತು ಸೂಚನೆಗಳ ಮೇಲೆ ಗಮನ ಹರಿಸುವುದು ಬಹಳ ಮುಖ್ಯ ಎಂದು ತಜ್ಞರು ಹೇಳುತ್ತಾರೆ. ವೈದ್ಯರ ಪ್ರಕಾರ, ಹಸಿವಾದಾಗ ಮಕ್ಕಳು (Baby Hunger) ಸಾಮಾನ್ಯಕ್ಕಿಂತ ಹೆಚ್ಚು ಚಿಡಿಚಿಡಿಯಾಗಿ ವರ್ತಿಸುತ್ತಾರೆ ಅಥವಾ ಪದೇಪದೇ ಅಳಬಹುದು. ಕೆಲ…

Read More

ಬೆಂಗಳೂರಿನಲ್ಲಿ 2-ಹೈಟೆಕ್ ನ್ಯಾನೋಮೀಟರ್ ಚಿಪ್ ಅನಾವರಣಗೊಳಿಸಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ – Kannada News | 2 nanometre Qualcomm chip unveiled in Bengaluru Union Minister Ashwini Vaishnaw sets Semicon 2.0 roadmap

ಬೆಂಗಳೂರು, ಫೆಬ್ರವರಿ 7: ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw) ಇಂದು (ಶನಿವಾರ) ಬೆಂಗಳೂರಿನಲ್ಲಿ ಕ್ವಾಲ್ಕಾಮ್ ಟೆಕ್ನಾಲಜೀಸ್ ತಯಾರಿಸಿದ ಹೈಟೆಕ್ 2-ನ್ಯಾನೊಮೀಟರ್ ಚಿಪ್ ಅನ್ನು ಅನಾವರಣಗೊಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, “ನಮ್ಮ ದೇಶವು ಸೆಮಿಕಂಡಕ್ಟರ್ ಉತ್ಪಾದನಾ ವಿನ್ಯಾಸದಲ್ಲಿ ಪ್ರಮುಖ ಪ್ರಗತಿಯನ್ನು ಸಾಧಿಸುತ್ತಿದೆ. ಭಾರತದಲ್ಲಿ ಇದು ಹೊಸ ಉದ್ಯಮವಾಗಿ ರೂಪ ತಳೆಯುತ್ತಿದೆ” ಎಂದು ಹೇಳಿದರು. ಚಿಪ್ ವೇಫರ್ ಅನ್ನು ಕೈಯಲ್ಲಿ ಹಿಡಿದು ತೋರಿಸಿದ ಸಚಿವ ಅಶ್ವಿನಿ ವೈಷ್ಣವ್ ಅದರ ಸಾಮರ್ಥ್ಯಗಳು ಮತ್ತು…

Read More

ಟ್ರೆಕ್ಕಿಂಗ್‌ ಹೋಗುವುದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ? – Kannada News | Do you know how many benefits there are of trekking?

ಇಂದಿನ ಈ ಬ್ಯುಸಿ ಮತ್ತು ಒತ್ತಡದ ಜೀವನದಲ್ಲಿ ಶಾಂತಿ ಮತ್ತು ನೆಮ್ಮದಿಯನ್ನು ಹುಡುಕುತ್ತಾ ಹಲವು ಜನ ಎತ್ತರದ ಪರ್ವತಗಳಿಗೆ ಟ್ರೆಕ್ಕಿಂಗ್‌ (trekking) ಹೋಗುತ್ತಾರೆ. ಯುವ ಜನರಂತೂ ಕೆಲಸದ ಒತ್ತಡದಿಂದ ಕೊಂಚ ಬ್ರೇಕ್‌ ತೆಗೆದುಕೊಂಡು ವೀಕೆಂಡ್‌ನಲ್ಲಿ ಮುಳ್ಳಯ್ಯನಗಿರಿ, ಕೊಡಚಾದ್ರಿ, ಲೋನಾವಾಲ ಅಂತೆಲ್ಲಾ ಬೇರೆ ಬೇರೆ ಕಡೆ ಟ್ರೆಕ್ಕಿಂಗ್‌ ಹೋಗ್ತಾರೆ. ಚಿಂತೆ, ಒತ್ತಡವನ್ನು ಮರೆಯಲು, ಪ್ರಕೃತಿಗೆ ಹತ್ತಿರವಾಗಲು, ಸ್ನೇಹಿತರೊಂದಿಗೆ ಒಂದೊಳ್ಳೆ ಸಮಯ ಕಳೆಯಲು ಟ್ರೆಕ್ಕಿಂಗ್‌ ಬೆಸ್ಟ್‌ ಆಯ್ಕೆ ಆಗಿದೆ. ಇಷ್ಟು ಮಾತ್ರವಲ್ಲ ಚಾರಣ ಹೋಗುವುದರಿಂದ ಸಾಕಷ್ಟು ಪ್ರಯೋಜನಗಳು ಸಹ ಲಭಿಸುತ್ತವೆಂತೆ….

Read More

ಪವನ್ ಖೇರಾಗೆ ಗುವಾಹಟಿ ಹೈಕೋರ್ಟ್ ಶಾಕ್: ಅಸ್ಸಾಂ ಸಿಎಂ ಪತ್ನಿ ದಾಖಲಿಸಿದ ಕೇಸ್‌ನಲ್ಲಿ ಜಾಮೀನು ನಿರಾಕರಣೆ – Kannada News | Pawan Khera Bail Denied by Gauhati HC in Assam CM Wife’s Defamation Case: Arrest Looms

ಗುವಾಹಟಿ, ಏಪ್ರಿಲ್ 24: ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಪತ್ನಿ ರಿನಿಕಿ ಭುಯಾನ್ ಶರ್ಮಾ ಅವರು ದಾಖಲಿಸಿರುವ ಕ್ರಿಮಿನಲ್ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ಪವನ್ ಖೇರಾ(Pawan Khera) ಅವರಿಗೆ  ಭಾರಿ ಹಿನ್ನಡೆಯಾಗಿದೆ. ಪವನ್ ಖೇರಾ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಗುವಾಹಟಿ ಹೈಕೋರ್ಟ್ ತಿರಸ್ಕರಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಮಂಗಳವಾರ ಎರಡೂ ಕಡೆಯ ವಾದ-ಪ್ರತಿವಾದಗಳನ್ನು ಆಲಿಸಿದ್ದ ನ್ಯಾಯಮೂರ್ತಿ ಪಾರ್ಥಿವಜ್ಯೋತಿ ಸೈಕಿಯಾ ಅವರ ಏಕಸದಸ್ಯ ಪೀಠವು ತನ್ನ ತೀರ್ಪನ್ನು ಕಾಯ್ದಿರಿಸಿತ್ತು. ಇಂದು ಅಂತಿಮ ಆದೇಶ…

Read More

ರಾಮನ ಪಾತ್ರಕ್ಕೆ ಹೃತಿಕ್, ದಶರಥನ ಪಾತ್ರಕ್ಕೆ ಅಮಿತಾಭ್; ಈ ಕಥೆ ಗೊತ್ತಾ? – Kannada News | Before Ranbir Kapoor, Hrithik Roshan Was Choice for Lord Ram in Sanjay Khan’s Unreleased Ramayana

ನಿತೇಶ್ ತಿವಾರಿ ನಿರ್ದೇಶನದ ‘ರಾಮಾಯಣ’ ಸಿನಿಮಾ ಭಾರತೀಯ ಚಿತ್ರರಂಗದಲ್ಲಿ ಭಾರೀ ಚರ್ಚೆ ಹುಟ್ಟುಹಾಕಿದೆ. ಈ ಸಿನಿಮಾದಲ್ಲಿ ರಣಬೀರ್ ಕಪೂರ್ ಶ್ರೀರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ ಹಾಗೂ ಯಶ್ ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ, ಈ ಬಹುನಿರೀಕ್ಷಿತ ಪ್ರಾಜೆಕ್ಟ್‌ಗೂ ಸುಮಾರು 18 ವರ್ಷಗಳ ಮುನ್ನವೇ ಮತ್ತೊಬ್ಬರು ನಿರ್ದೇಶಕರು ಇಂತಹದ್ದೇ ದೊಡ್ಡ ಕನಸು ಕಂಡಿದ್ದರು ಎಂಬುದು ಹಲವರಿಗೆ ತಿಳಿದಿಲ್ಲ. 2008ರಲ್ಲೇ ತಯಾರಾಗಿತ್ತು ‘ದಿ ಲೆಜೆಂಡ್ ಆಫ್ ರಾಮ’ ಯೋಜನೆ ‘ಜೈ ಹನುಮಾನ್’ ಹಾಗೂ ‘ದಿ ಸ್ವೋರ್ಡ್ ಆಫ್ ಟಿಪ್ಪು ಸುಲ್ತಾನ್’…

Read More

ದಾಖಲೆಯ ವೀಕ್ಷಣೆ ಕಂಡ ‘ಟಾಕ್ಸಿಕ್’ ಟೀಸರ್; ಇದು ಯಶ್ ಹವಾ – Kannada News | Yash’s ‘Toxic’ Teaser Breaks Records: 47M Views In Less than 24 Hour Raw Gangster Look

‘ಟಾಕ್ಸಿಕ್’ ಸಿನಿಮಾ (Toxic Movie) ಬಗ್ಗೆ ಅಭಿಮಾನಿಗಳಿಗೆ ಇದ್ದ ನಿರೀಕ್ಷೆ ತುಂಬಾನೇ ದೊಡ್ಡದು. ಈಗ ಟೀಸರ್ ರಿಲೀಸ್ ಆಗಿ ಸಂಚಲನ ಸೃಷ್ಟಿಸಿದೆ. ಟೀಸರ್ ಅಂದುಕೊಂಡಿದ್ದಕ್ಕಿಂತ ಹೆಚ್ಚು ರಾ ಆಗಿ ಮೂಡಿ ಬಂದಿದೆ. ಇದು ಅನೇಕರಿಗೆ ಅಚ್ಚರಿ ಮೂಡಿಸಿದೆ. ‘ಟಾಕ್ಸಿಕ್’ ಟೀಸರ್ ಈಗ ದಾಖಲೆಯ ವೀಕ್ಷಣೆ ಕಂಡಿದೆ. ಕನ್ನಡ ಚಿತ್ರರಂಗದ ಟೀಸರ್ ಒಂದು ಈ ರೀತಿಯಲ್ಲಿ ಹವಾ ಮಾಡಿದ್ದು ಇತ್ತೀಚಿನ ದಿನಗಳಲ್ಲಿ ಇದೇ ಮೊದಲು ಎಂದರೂ ತಪ್ಪಾಗಲಾರದು. ‘ಟಾಕ್ಸಿಕ್’ ಸಿನಿಮಾ ಯಶ್ ಜನ್ಮದಿನದ ಪ್ರಯುಕ್ತ ಜನವರಿ 8ರಂದು ರಿಲೀಸ್…

Read More

ಡಿ. 30ರಂದು ಕಸ್ಟಮ್ಸ್ ಇಲಾಖೆಯಿಂದ ಹರಾಜು: ಅತ್ಯಂತ ಕಡಿಮೆ ಬೆಲೆಗೆ ಸಿಗಲಿವೆ ಈ ವಸ್ತುಗಳು – Kannada News | Bengaluru Customs Online Auction via MSTC: Get Electronic Items, Vehicles, Furniture at Low Prices

ಬೆಂಗಳೂರು, ಡಿಸೆಂಬರ್​​ 23: ಕೇಂದ್ರ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ ಮಂಡಳಿ (CBIC) ಅಡಿಯಲ್ಲಿ ಕಾರ್ಯನಿರ್ವಹಿಸುವ ಬೆಂಗಳೂರು ಕಸ್ಟಮ್ಸ್ ಇಲಾಖೆ ವಶಪಡಿಸಿಕೊಂಡಿರುವ ದೇಶಕ್ಕೆ ಅಕ್ರಮವಾಗಿ ಸಾಗಾಟ ಮಾಡಿದ ವಸ್ತುಗಳ ಹರಾಜು ಪ್ರಕ್ರಿಯೆ ಡಿಸೆಂಬರ್​​ 30ರಂದು ನಡೆಯಲಿದೆ. ಎಕ್ಸ್​​ ಖಾತೆಯಲ್ಲಿ ಕಸ್ಟಮ್ಸ್ ಇಲಾಖೆ ನೀಡಿರುವ ಮಾಹಿತಿಯಂತೆ, ಈ ಹರಾಜಿನಲ್ಲಿ ಮೊಬೈಲ್ ಫೋನ್‌ಗಳು, ಕಂಪ್ಯೂಟರ್‌ಗಳು, ಐಪ್ಯಾಡ್‌ಗಳು ಹಾಗೂ ಟಿವಿಗಳಂತಹ ಉತ್ಪನ್ನಗಳು ಮಾರುಕಟ್ಟೆ ಬೆಲೆಗೆ ಹೋಲಿಸಿದರೆ ಬಹಳ ಕಡಿಮೆ ದರದಲ್ಲಿ ಲಭ್ಯವಾಗಲಿವೆ. ವಸ್ತುಗಳ ಖರೀದಿ ಹೇಗೆ? “Auction of Electronics Goods…

Read More