Headlines

Video: ತಾಯಿಯನ್ನು ಮೊದಲ ಬಾರಿಗೆ ವಿಮಾನ ಹತ್ತಿಸಿದ ಯುವಕ, ವೈರಲ್‌ ಆಯ್ತು ದೃಶ್ಯ – Kannada News | A young man who took his mother on a flight for the first time.

ಪ್ರತಿಯೊಬ್ಬ ಮಕ್ಕಳಿಗೂ ಚೆನ್ನಾಗಿ ಓದಿ ಕೆಲಸಕ್ಕೆ ಸೇರಿ ತಮ್ಮ ಹೆತ್ತವರನ್ನು (parents) ಚೆನ್ನಾಗಿ ನೋಡಿಕೊಳ್ಳಬೇಕು ಎಂಬ ಆಸೆಯಿರುತ್ತದೆ. ಹೌದು, ಹೆತ್ತವರ ಸಣ್ಣ ಪುಟ್ಟ ಕನಸುಗಳನ್ನು ನನಸಾಗಿರುವುದರಲ್ಲಿ ಏನೋ ಖುಷಿ. ಇದೀಗ ಮಗನೊಬ್ಬ ತಾಯಿಯನ್ನು ಮೊದಲ ಬಾರಿಗೆ ವಿಮಾನ (flight) ಹತ್ತಿಸಿದ್ದಾನೆ. ತಾಯಿಯ ಜತೆಗೆ ವಿಮಾನ ಪ್ರಯಾಣದ ಭಾವನಾತ್ಮಕ ವಿಡಿಯೋ ಹಂಚಿಕೊಂಡಿದ್ದಾನೆ. ಈ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ಸದ್ಯ ವೈರಲ್ ಆಗಿದೆ.

ಅನ್ಮೋಲ್‌ ಖಾತ್ರಿ (Anmol Khattri) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಂಡು, ನನಗೆ 26 ವರ್ಷಗಳು ಬೇಕಾದವು. ಅವರಿಗೆ 50 ವರ್ಷಗಳು ಬೇಕಾದವು. ಅಮ್ಮನ ಮೊದಲ ವಿಮಾನಯಾನ ಎಂಬ ಶೀರ್ಷಿಕೆ ನೀಡಲಾಗಿದೆ. ಈ ಕ್ಲಿಪಿಂಗ್‌ನಲ್ಲಿ ತಾಯಿಯ ಜತೆಗೆ ವಿಮಾನ ಪ್ರಯಾಣ ಮಾಡುತ್ತಿರುವ ದೃಶ್ಯವನ್ನು ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿಯಲಾಗಿದೆ. ಫ್ಲೈಟ್ ನಲ್ಲಿ ಕುಳಿತು ಕಿಟಕಿಯಿಂದ ಆಚೆಗೆ ನೋಡುತ್ತಿರುವ ದೃಶ್ಯವನ್ನು ಕಾಣಬಹುದು. ಮಗನು ತನ್ನ ತಾಯಿಯ ಕೈ ಹಿಡಿದು ಕುಳಿತಿರುವುದನ್ನು ನೋಡಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ತನ್ನ ಓದಿಗಾಗಿ ಚಿನ್ನದ ಬಳೆಗಳನ್ನು ಅಡವಿಟ್ಟ ಅಮ್ಮ; ತಾಯಿಯ ತ್ಯಾಗ ನೆನಪಿಸಿಕೊಂಡ ಮಗಳು

ಈ ವಿಡಿಯೋ ಹದಿನಾರು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಅಮ್ಮನ ಕನಸನ್ನು ಈಡೇರಿಸುವುದಕ್ಕೆ ಯೋಗ ಕೂಡಿ ಬರಬೇಕು ಎಂದು ಹೇಳಿದ್ದಾರೆ. ಮತ್ತೊಬ್ಬರು, ಹೃದಯಕ್ಕೆ ಹತ್ತಿರವಾದ ದೃಶ್ಯ ಎಂದರೆ, ಮತ್ತೊಬ್ಬರು, ನಿಮ್ಮ ಬಗ್ಗೆ ಹೆತ್ತವರಿಗೆ ಖುಷಿ ಅನಿಸುತ್ತಿರಬಹುದು ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *