ಪಕ್ಕದಲ್ಲಿ ಬೋರ್ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು! – Kannada News | Water suddenly started gushing out after Underground Pipe Bursts inside the house Video viral
ಬಿಲಾಸ್‌ಪುರ, ಫೆಬ್ರವರಿ 1: ಛತ್ತೀಸ್‌ಗಢದ ಬಿಲಾಸ್‌ಪುರದಲ್ಲಿ ಶನಿವಾರ (ಜನವರಿ 31) ಮನೆಯ ನೆಲದೊಳಗಿನ ನೀರಿನ ಪೈಪ್ ಒಡೆದು ಇದ್ದಕ್ಕಿದ್ದಂತೆ ನೀರು ಮೇಲೆ ಚಿಮ್ಮಿದೆ. ನೆಲಕ್ಕೆ ಹಾಕಿದ್ದ ಟೈಲ್ಸನ್ನು ಒಡೆದು ನೀರು ಮೇಲೆ ಹಾರಿದೆ. ಈ ವೇಳೆ ಅಲ್ಲೇ ಇದ್ದ ವ್ಯಕ್ತಿಯೊಬ್ಬ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾನೆ. ಈ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಆನ್‌ಲೈನ್‌ನಲ್ಲಿಯೂ ಕಾಣಿಸಿಕೊಂಡಿದೆ. ನೆರೆಹೊರೆಯಲ್ಲಿ ಬೋರ್ವೆಲ್ ಕೆಲಸ ನಡೆಯುತ್ತಿದ್ದುದರಿಂದ ಅದರ ಒತ್ತಡದಿಂದ ಈ ಮನೆಯೊಳಗೆ ನೀರಿನ ಪೈಪ್ ಒಡೆದಿದೆ. ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್…