Headlines

1921ರ ದಂಗೆ, ಬಿಟಿಷರ ಬಾಲ್ ಬಾಯ್ಸ್, ಕೇರಳಂ ಫುಟ್​​ಬಾಲ್ ಕ್ರೇಝ್! – Kannada News | The Epic Journey of Kerala Football

“ಭಾರತದ ನಕ್ಷೆಯಲ್ಲಿ ಕ್ರಿಕೆಟ್ ಬ್ಯಾಟ್ ಹಿಡಿದು ಸಂಭ್ರಮಿಸುವ ಕೋಟ್ಯಂತರ ಜನರ ನಡುವೆ, ಕಾಲಿಗೆ ಚೆಂಡು ಸಿಕ್ಕರೆ ಸಾಕು ಇಡೀ ಜಗತ್ತನ್ನೇ ಮರೆಯುವ ಒಂದು ಸುಂದರ ರಾಜ್ಯವಿದೆ, ಅದುವೇ ಕೇರಳಂ! ಇಡೀ ದೇಶ ಕ್ರಿಕೆಟ್ ಜ್ವರದಲ್ಲಿ ಮುಳುಗಿರುವಾಗ, ಕೇರಳದ ಮಲಬಾರ್ ಗದ್ದೆಗಳಲ್ಲಿ ಮತ್ತು ಕರಾವಳಿಯ ತೀರಗಳಲ್ಲಿ ಮಾತ್ರ ಫುಟ್‌ಬಾಲ್ ಎಂಬ ಮಾಂತ್ರಿಕ ಆಟದ ಸದ್ದು ಮೊಳಗುತ್ತಿರುತ್ತದೆ. ಅಲ್ಲಿನ ಜನರಿಗೆ ಫುಟ್‌ಬಾಲ್ ಕೇವಲ 90 ನಿಮಿಷಗಳ ಆಟವಲ್ಲ, ಅದೊಂದು ಭಾವನೆ, ಉಸಿರು ಮತ್ತು ಪರಂಪರೆ. ಆದರೆ, ಭಾರತೀಯ ಫುಟ್‌ಬಾಲ್ ಇತಿಹಾಸದ…

Read More

IPL 2026: 4 ಪಂದ್ಯಗಳ ಬಳಿಕ ಪಾಯಿಂಟ್ ಪಟ್ಟಿಯಲ್ಲಿ ಯಾರಿಗೆ ಅಗ್ರಸ್ಥಾನ? ಆರ್​ಸಿಬಿಗೆ ಯಾವ ಸ್ಥಾನ?

ಮಾರ್ಚ್ 28 ರಿಂದ ಆರಂಭವಾದ ಐಪಿಎಲ್ 2026 ರಲ್ಲಿ (IPL 2026) ಇದುವರೆಗೆ ನಾಲ್ಕು ಪಂದ್ಯಗಳು ನಡೆದಿವೆ. ಅಂದರೆ 10 ತಂಡಗಳ ಪೈಕಿ 8 ತಂಡಗಳು ತಲಾ ಒಂದೊಂದು ಪಂದ್ಯವನ್ನು ಆಡಿವೆ. ಇಂದು ನಡೆಯುವ ಲಕ್ನೋ ಸೂಪರ್​ಜೈಂಟ್ಸ್ ಹಾಗೂ ಡೆಲ್ಲಿ ನಡುವಿನ ಪಂದ್ಯದ ಬಳಿಕ ಎಲ್ಲಾ ತಂಡಗಳು ಒಂದೊಂದು ಪಂದ್ಯವನ್ನು ಆಡಿದಂತಾಗುತ್ತದೆ. ಈಗ ಆಡಿರುವ 8 ತಂಡಗಳ ಪೈಕಿ, 4 ತಂಡಗಳು ಗೆಲುವಿನ ಖಾತೆ ತೆರೆದಿದ್ದರೆ, ಇನ್ನ 4 ತಂಡಗಳು ಸೋಲಿಗೆ ಶರಣಾಗಿವೆ. ಹೀಗಾಗಿ ಗೆದ್ದ 4…

Read More

Vastu Tips: ಲಕ್ಷ್ಮಿ ಕೃಪೆಗೆ ಮನೆಯ ಈ ದಿಕ್ಕಿನಲ್ಲಿ ಈ ಒಂದು ಗಿಡ ನೆಡಿ; ಅದೃಷ್ಟವೇ ಬದಲಾಗಲಿದೆ! – Kannada News | Marigold Vastu Tips: Attract Prosperity, Positive Energy and Knowledge to Your Home

ಹಿಂದೂ ಸಂಪ್ರದಾಯದಲ್ಲಿ ಹಳದಿ ಬಣ್ಣವು ಸಂಪತ್ತು, ಸಮೃದ್ಧಿ ಮತ್ತು ಜ್ಞಾನದ ಸಂಕೇತವಾಗಿದೆ. ಈ ಕಾರಣದಿಂದಲೇ ಪೂಜಾ ಕಾರ್ಯಗಳಲ್ಲಿ ಹಳದಿ ಹೂವುಗಳಿಗೆ ವಿಶೇಷ ಮಹತ್ವವಿದೆ. ವಿಶೇಷವಾಗಿ, ಚೆಂಡು ಹೂವಿನ ಗಿಡವನ್ನು ಲಕ್ಷ್ಮಿ ಮತ್ತು ವಿಷ್ಣು ದೇವರಿಗೆ ಅತ್ಯಂತ ಪ್ರಿಯವಾದುದೆಂದು ಪರಿಗಣಿಸಲಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಚೆಂಡು ಹೂವಿನ ಗಿಡವನ್ನು ಸರಿಯಾದ ದಿಕ್ಕಿನಲ್ಲಿ ನೆಡುವುದರಿಂದ ಧನಾತ್ಮಕ ಶಕ್ತಿಯು ಹೆಚ್ಚಾಗುತ್ತದೆ ಮತ್ತು ಮನೆಯಲ್ಲಿ ಸುಖ-ಶಾಂತಿ ನೆಲೆಸುತ್ತದೆ. ಜ್ಯೋತಿಷ್ಯ ಶಾಸ್ತ್ರದ ದೃಷ್ಟಿಯಿಂದ ನೋಡುವುದಾದರೆ, ಹಳದಿ ಚೆಂಡು ಹೂವುಗಳು ‘ಗುರು’ ಗ್ರಹವನ್ನು ಪ್ರತಿನಿಧಿಸುತ್ತವೆ,…

Read More

ತಾಯಿಯೂ ಇಲ್ಲ, ಗೊಂಬೆಯನ್ನೇ ಸರ್ವಸ್ವ ಎಂದುಕೊಂಡಿರುವ ಪಂಚ್ ಕೋತಿಯಿಂದ ಗೊಂಬೆಯನ್ನು ದೂರ ಮಾಡ್ತಾರಾ? – Kannada News | Viral Star Punch May Be Separated From Signature Plushie, Fans React

ಜಪಾನ್, ಮಾರ್ಚ್​ 04: ಜಪಾನ್​​ನ ಮೃಗಾಲಯದಲ್ಲಿರುವ ಪಂಚ್ ಕೋತಿಯ ಬಗ್ಗೆ ಈಗ ಇಡೀ ಪ್ರಪಂಚಕ್ಕೆ ಗೊತ್ತಿದೆ. ಹುಟ್ಟಿನಿಂದಲೇ ತಾಯಿ ಪ್ರೀತಿ ಕಳೆದುಕೊಂಡಿದ್ದ ಕೋತಿಗೆ ಅದರ ಬಳಿ ಇರುವ ಕೋತಿಯ ಗೊಂಬೆಯೇ ಆಸರೆ. ನೋವಾದರೂ, ಬೇಸರವೆನಿಸಿದರೂ, ಬೇರೆ ಕೋತಿಗಳು ದಾಳಿ ಮಾಡಿದಾಗಲೂ ಈ ಕೋತಿ ಹೋಗಿ ಅಪ್ಪಿಕೊಂಡಿದ್ದು, ಆ ಗೊಂಬೆಯನ್ನೇ ಹೊರತು ಮತ್ತೊಂದು ಕೋತಿಯನ್ನಲ್ಲ. ಅದರ ಮೇಲೆ ತಲೆಇಟ್ಟು ಮಲಗುವ, ತಿಂಡಿ ಮಾಡುವಾಗಲೂ, ಎಲ್ಲೇ ನಡೆದಾಡುವಾಗಲೂ ಆ ಗೊಂಬೆಯನ್ನೇ ಹೊತ್ತು ತಿರುಗುವ ಕೋತಿಯಿಂದ ಆ ಗೊಂಬೆಯನ್ನು ಕಸಿದುಕೊಳ್ಳಲಾಗುತ್ತಿದೆ ಎನ್ನುವ…

Read More

ಹಾಲಿವುಡ್​​ನಲ್ಲಿ ಸ್ಟಾರ್ ಆಗಿ ಮೆರೆಯುತ್ತಿರುವ ಈ ಮಲಯಾಳಿಯ ಬಗ್ಗೆ ನಿಮಗೆ ಗೊತ್ತೆ? – Kannada News | Manoj Night Shyamalan is Indian origin Hollywood famous director

ಭಾರತೀಯರು (India) ಎಲ್ಲಿಲ್ಲ? ಎಲ್ಲೆಡೆ ಇದ್ದಾರೆ, ಎಲ್ಲ ಕ್ಷೇತ್ರಗಳಲ್ಲಿ, ಎಲ್ಲ ದೇಶಗಳಲ್ಲಿ ಸಾಧನೆ ಮಾಡುತ್ತಿದ್ದಾರೆ. ವಿಶೇಷವಾಗಿ ಐಟಿ, ಉದ್ಯಮದ ಕ್ಷೇತ್ರಗಳಲ್ಲಿ ಭಾರತೀಯರು ಹಲವು ದೇಶಗಳಲ್ಲಿ ಪ್ರಮುಖ ಸ್ಥಾನಗಳಲ್ಲಿದ್ದಾರೆ. ಆದರೆ ಸಿನಿಮಾ ವಿಷಯವಾಗಿ ವಿಶೇಷವಾಗಿ ಆಸ್ಕರ್​​​ನಲ್ಲಿ ಭಾರತೀಯ ಸಾಧನೆ ತುಸು ಕಡಿಮೆ ಎನ್ನಬಹುದು. ಆದರೆ ಭಾರತೀಯರೊಬ್ಬರು ಹಾಲಿವುಡ್​ನ ಸ್ಟಾರ್ ನಿರ್ದೇಶಕರಾಗಿ ಮಿಂಚುತ್ತಿರುವ ವಿಷಯ ನಿಮಗೆ ಗೊತ್ತೆ? ಈ ಸಿನಿಮಾ ನಿರ್ದೇಶಕನ ಹೆಸರು ನಿಮಗೆ ತಿಳಿಯದೇ ಇರಬಹುದು ಆದರೆ ನೀವು ಸಿನಿಮಾ ಪ್ರೇಮಿ ಆಗಿದ್ದರೆ ಖಂಡಿತ ಈ ವ್ಯಕ್ತಿ ನಿರ್ದೇಶನ…

Read More

ಬೆಂಗಳೂರು NIA ವಿಶೇಷ ನ್ಯಾಯಾಲಯದಿಂದ ಮಹತ್ವದ ತೀರ್ಪು: ಮಾನವ ಕಳ್ಳಸಾಗಣೆ ಜಾಲದ ನಾಲ್ವರಿಗೆ ಜೈಲು ಶಿಕ್ಷೆ!

ಬೆಂಗಳೂರು, ಏ.9: ಬೆಂಗಳೂರಿನ ಎನ್‌ಐಎ (NIA) ವಿಶೇಷ ನ್ಯಾಯಾಲಯವು ಅಂತರಾಷ್ಟ್ರೀಯ ಮಾನವ ಕಳ್ಳಸಾಗಣೆ ಜಾಲದಲ್ಲಿ ಭಾಗಿಯಾಗಿದ್ದ ನಾಲ್ವರು ಬಾಂಗ್ಲಾದೇಶಿ ಪ್ರಜೆಗಳಿಗೆ 3 ವರ್ಷಗಳ ಕಠಿಣ ಜೈಲು ಶಿಕ್ಷೆ (Rigorous Imprisonment) ಮತ್ತು ತಲಾ 20,000 ರೂ. ದಂಡ ವಿಧಿಸಿ ಆದೇಶಿಸಿದೆ. ಜಾಕಿರ್ ಖಾನ್, ಬಾದಲ್ ಹೌಲಾದರ್, ಕಬೀರ್ ತಾಲುಕ್ದಾರ್ ಮತ್ತು ಮೊಹಮ್ಮದ್ ಬಚ್ಚು ಘರಾಮಿ ದೋಷಿಗಳು ಎಂದು ಹೇಳಿದ್ದಾರೆ. ಇವರು ಬೆನಾಪೋಲ್ ಮತ್ತು ಅಖೌರಾ ಮೂಲಕ ಅಕ್ರಮವಾಗಿ ಭಾರತ ಪ್ರವೇಶಿಸಿದ್ದರು. ನಕಲಿ ಭಾರತೀಯ ಗುರುತಿನ ಚೀಟಿಗಳನ್ನು ಸೃಷ್ಟಿಸಿ…

Read More

JDS ಮುಖಂಡೆ ಪುತ್ರನ ಕಿರುಕುಳಕ್ಕೆ ರಿಶೇಲ ಡಿಸೋಜಾ ಆತ್ಮಹತ್ಯೆ: ಸಿಡಿದೆದ್ದ ಕ್ರಿಶ್ಚಿಯನ್ ಸಮುದಾಯ – Kannada News | Karwar: Rishala D’Souza suicide case: Mother Demands Justice for Rishel

ಕಾರವಾರ, ಜನವರಿ 19: ಕಾರವಾರ ಜೆಡಿಎಸ್​​ (JDS) ಮುಖಂಡೆ ಪುತ್ರನ ಕಿರುಕಳಕ್ಕೆ ರಿಶೇಲ ಡಿಸೋಜಾ ಆತ್ಮಹತ್ಯೆ (suicide) ಪ್ರಕರಣ ಈಗಾಗಲೇ ಗ್ರಾಮಗಳ ಮಧ್ಯೆ ವೈಮನಸ್ಸಿಗೆ ಕಾರಣವಾಗಿದೆ. ಇತ್ತೀಚೆಗೆ ಕದ್ರಾ ಪಿಎಸ್​​​ಐಯನ್ನು ಅಮಾನತು ಕೂಡ ಮಾಡಲಾಗಿದೆ. ನನ್ನ ಮಗಳು ಆತ್ಮಹತ್ಯೆ ಮಾಡಿಕೊಂಡು ಇವತ್ತಿಗೆ 11ನೇ ದಿನ. ಇದುವರೆಗೂ ಆರೋಪಿಯನ್ನ ಏಕೆ ಬಂಧಿಸಿಲ್ಲ? ಇದರಲ್ಲಿ ರಾಜಕೀಯ ಪ್ರಭಾವವಿರುವುದು ಗೊತ್ತಾಗುತ್ತಿದೆ ಎಂದು ಮೃತ ಯುವತಿಯ ತಾಯಿ ರೀನಾ ಡಿಸೋಜಾ ಗಂಭೀರ ಆರೋಪ ಮಾಡಿದ್ದಾರೆ. ಕಾಣದ ಕೈಗಳು ನನ್ನ ಮಗಳ ಪ್ರಕರಣದಲ್ಲಿ ಕೆಲಸ…

Read More

ಕಲುಷಿತ ಕಾವೇರಿ ನೀರಿನ ಪೂರೈಕೆ: ಬೆಂಗಳೂರಿನ ಕತ್ರಿಗುಪ್ಪೆ ನಿವಾಸಿಗಳ ಆಕ್ರೋಶ – Kannada News | Bengaluru Residents Suffer from Contaminated Cauvery Water Supply in Katriguppe

ಬೆಂಗಳೂರು, ಜುಲೈ 21: ನಗರದ ದಕ್ಷಿಣ ನಗರ ಪಾಲಿಕೆಯ ಕತ್ರಿಗುಪ್ಪೆ ವಾರ್ಡ್‌ನಲ್ಲಿ ಕಾವೇರಿ ನೀರು ಕಲುಷಿತಗೊಂಡು ಪೂರೈಕೆಯಾಗುತ್ತಿದ್ದು, ನೂರಕ್ಕೂ ಹೆಚ್ಚು ಮನೆಗಳ ನಿವಾಸಿಗಳು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಕಳೆದ ನಾಲ್ಕೈದು ವರ್ಷಗಳಿಂದ ಪದೇ ಪದೇ ಪುನರಾವರ್ತಿತವಾಗುತ್ತಿರುವ ಈ ಸಮಸ್ಯೆಯಿಂದ ಕಾವೇರಿ ನೀರನ್ನು ನಂಬಿಕೊಂಡಿದ್ದ ಜನರಿಗೆ ದೊಡ್ಡ ಆಘಾತ ಉಂಟಾಗಿದೆ. ಕಲುಷಿತ ನೀರು ಮಣ್ಣು ಮಿಶ್ರಿತವಾಗಿದ್ದು, ಕೆಟ್ಟ ವಾಸನೆ ಹಾಗೂ ಕಪ್ಪು ಬಣ್ಣದಿಂದ ಕೂಡಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಕುಡಿಯಲು ಅಥವಾ ಇತರೆ ಗೃಹಬಳಕೆಗೆ ನೀರನ್ನು ಉಪಯೋಗಿಸಲು ಭಯವಾಗುತ್ತಿದೆ…

Read More

ರಾಜ್ಯಸಭೆಗೆ ಕಣಕ್ಕಿಳಿದ ಪ್ರೊ. ಎಂ. ನಾಗರಾಜ; ಮಾಜಿ ಪ್ರಧಾನಿ ದೇವೇಗೌಡರ ಸ್ಥಾನಕ್ಕೆ ಬಿಜೆಪಿ ಇವರನ್ನೇ ಆರಿಸಿದ್ದೇಕೆ? – Kannada News

ಪ್ರೊ. ಎಂ. ನಾಗರಾಜImage Credit source: The Hindu ಬೆಂಗಳೂರು, ಜೂನ್ 08: ಕರ್ನಾಟಕ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯಲಿರುವ ಚುನಾವಣೆಗೆ ಭಾರತೀಯ ಜನತಾ ಪಾರ್ಟಿ (BJP) ಭಾನುವಾರ ರಾತ್ರಿ ತನ್ನ ಅಭ್ಯರ್ಥಿಯಾಗಿ ಪ್ರೊ. ಎಂ. ನಾಗರಾಜ ಅವರ ಹೆಸರನ್ನು ಅಂತಿಮಗೊಳಿಸಿ ಅಧಿಕೃತವಾಗಿ ಘೋಷಿಸಿದೆ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರನ್ನು ಮತ್ತೊಮ್ಮೆ ಕಣಕ್ಕಿಳಿಸುವ ಕುರಿತು ರಾಜಕೀಯ ವಲಯದಲ್ಲಿ ಭಾರೀ ಚರ್ಚೆ ನಡೆದಿತ್ತು. ಅಂತಿಮವಾಗಿ ಬಿಜೆಪಿ ಹೈಕಮಾಂಡ್ ಪ್ರೊ. ನಾಗರಾಜ ಅವರಿಗೆ ಮನ್ನಣೆ ನೀಡಿದೆ.ಇದರೊಂದಿಗೆ, ವಿಧಾನಪರಿಷತ್ ಚುನಾವಣೆಯ ಅಭ್ಯರ್ಥಿಗಳಾಗಿ…

Read More

Video: ಬುರ್ಖಾ ಧರಿಸಿದ್ದ ಮಹಿಳೆಯ ಮೈಮುಟ್ಟಿ ಪರಾರಿಯಾಗಿದ್ದ ನೌಶಾದ್​ಗೆ ಪೊಲೀಸರ ಗುಂಡೇಟು – Kannada News | Caught on Camera: Moradabad Man Who Assaulted Woman in Burqa Arrested After Gunfight

ಮೊರಾದಾಬಾದ್, ಮೇ 1: ರಸ್ತೆಯಲ್ಲಿ ಬುರ್ಖಾ ಧರಿಸಿದ್ದ ಮಹಿಳೆಗೆ ಲೈಂಗಿಕ ಕಿರುಕುಳ ಕೊಟ್ಟಿದ್ದ ನೌಶಾದ್​ನ ಕಾಲಿಗೆ ಪೊಲೀಸರು ಗುಂಡು ಹಾರಿಸಿರುವ ಘಟನೆ ಉತ್ತರ ಪ್ರದೇಶದ ಮೊರಾದಾಬಾದ್​ನಲ್ಲಿ ನಡೆದಿದೆ. ಕತ್ಘರ್ ಪೊಲೀಸ್ ಠಾಣೆ ವ್ಯಾಪ್ತಿಯ ನಿವಾಸಿಯಾದ ನೌಶಾದ್, ಓಣಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಬುರ್ಖಾ ಧರಿಸಿದ ಮಹಿಳೆಯನ್ನು ಹಿಂದಿನಿಂದ ತಬ್ಬಿಕೊಂಡು ಅಲ್ಲಿಂದ ಪರಾಋಇಯಾಗಿದ್ದ. ಕುರ್ತಾ-ಪೈಜಾಮ ಮತ್ತು ಟೋಪಿ ಧರಿಸಿದ್ದ ವ್ಯಕ್ತಿಯನ್ನು ಕಾಣಬಹುದು. ಆತನ ಕೃತ್ಯವು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಪೊಲೀಸರು ತನಿಖೆ ಚುರುಕುಗೊಳಿಸಿದರು. ಆರೋಪಿಗಾಗಿ…

Read More