ಉಳ್ಳಾಲ ಕಡಲತೀರಕ್ಕೆ ಅಪ್ಪಳಿಸಿದ ಲಕ್ಷಾಂತರ ಬೂತಾಯಿ ಮೀನಿನ ರಾಶಿ: ಬಕೆಟ್, ಚೀಲ ಹಿಡಿದು ಓಡಿಬಂದ ಸ್ಥಳೀಯರು – Kannada News | Unprecedented: Boothai Fish Swarm Ullal Shore After Fright, Locals Gather Bounty

ಮಂಗಳೂರು, ಜು.17: ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನ ಸಮುದ್ರ ತೀರದಲ್ಲಿ ಇಂದು ನಂಬಲಸಾಧ್ಯವಾದ ಘಟನೆಯೊಂದು ನಡೆದಿದೆ. ಸಾಮಾನ್ಯವಾಗಿ ಆಳ ಸಮುದ್ರದಲ್ಲಿ ದಂಡು ದಂಡಾಗಿ ಸಂಚರಿಸುವ ಬೂತಾಯಿ ಮೀನುಗಳು ಒಮ್ಮಿಂದೊಮ್ಮೆಗೆ ಕಡಲತೀರದ ಮರಳು ದಡಕ್ಕೆ ಬಂದು ಬಿದ್ದಿವೆ. ಕಣ್ಣು ಹಾಯಿಸಿದ ಕಡೆಯಲ್ಲೆಲ್ಲಾ ಬೆಳ್ಳಿ ಹೊಳೆಯುವಂತೆ ಬಿದ್ದಿದ್ದ ಮೀನುಗಳ ರಾಶಿಯನ್ನು ಕಂಡು ಸ್ಥಳೀಯರು ಹಾಗೂ ಪ್ರವಾಸಿಗರು ಆಶ್ಚರ್ಯಚಕಿತರಾಗಿದ್ದಾರೆ. ಬೂತಾಯಿ ಮೀನುಗಳು ಯಾವಾಗಲೂ ಸಮುದ್ರದಲ್ಲಿ ಲಕ್ಷಾಂತರ ಸಂಖ್ಯೆಯ ದೊಡ್ಡ ಗುಂಪುಗಳಲ್ಲಿ ಒಟ್ಟಾಗಿ ಸಂಚರಿಸುತ್ತವೆ. ಇಂದು ಕೂಡ ಇಂತಹದ್ದೇ ಒಂದು ಬೃಹತ್ ಗುಂಪು ಸಾಗುತ್ತಿರುವಾಗ, ಆಕಸ್ಮಿಕವಾಗಿ ನಾಡದೋಣಿಯೊಂದು ಆ ಮೀನುಗಳ ಹಿಂಡಿಗೆ ಅಡ್ಡ ಬಂದಿದೆ. ಇದರಿಂದ ಹೆದರಿದ ಮೀನುಗಳ ಹಿಂಡು ದಿಕ್ಕು ತಪ್ಪಿ ತನ್ನ ಪಥವನ್ನು ಬದಲಾಯಿಸಿ ದಡದ ಕಡೆಗೆ ಮುಖ ಮಾಡಿದೆ. ಇದೇ ವೇಳೆ ಕಡಲಿನಲ್ಲಿ ಎದ್ದ ದೊಡ್ಡ ಅಲೆಗಳು ಈ ಮೀನಿನ ಗುಂಪಿನ ಮೇಲೆ ಅತ್ಯಂತ ಜೋರಾಗಿ ಅಪ್ಪಳಿಸಿದೆ. ಅಲೆಗಳ ರಭಸಕ್ಕೆ ಸಿಲುಕಿದ ಇಡೀ ಮೀನಿನ ಸಮೂಹವು ಒಮ್ಮೆಗೇ ಉಳ್ಳಾಲ ಕಡಲತೀರದ ದಡಕ್ಕೆ ಬಂದು ಬಿದ್ದಿದೆ.ಅಲೆಗಳ ರಭಸಕ್ಕೆ ದಡದ ಮರಳಿನ ಮೇಲೆ ಬಂದು ಬಿದ್ದ ಮೀನುಗಳಿಗೆ ವಾಪಾಸ್ ನೀರಿಗೆ ಹೋಗಲು ಸಾಧ್ಯವಾಗದೆ ತೀರದಲ್ಲೇ ಸಿಲುಕಿಕೊಂಡಿವೆ. ಕಡಲತೀರದಲ್ಲಿ ಜೀವಂತ ಬೂತಾಯಿ ಮೀನುಗಳು ಬಿದ್ದಿರುವ ಸುದ್ದಿ ತಿಳಿಯುತ್ತಿದ್ದಂತೆಯೇ ಉಳ್ಳಾಲದ ಸುತ್ತಮುತ್ತಲಿನ ನೂರಾರು ಜನರು ತೀರದ ಕಡೆಗೆ ಓಡೋಡಿ ಬಂದಿದ್ದಾರೆ. ಜನ ಕೈಗೆ ಸಿಕ್ಕ ಬಕೆಟ್‌ಗಳು, ಪ್ಲಾಸ್ಟಿಕ್ ಚೀಲಗಳು ಹಾಗೂ ಬುಟ್ಟಿಗಳನ್ನು ಹಿಡಿದುಕೊಂಡು ಮುಗಿಬಿದ್ದು ಮೀನುಗಳನ್ನು ತುಂಬಿಸಿಕೊಂಡಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

ಯಾದಗಿರಿ ಜಿಲ್ಲಾ ಪಂಚಾಯತ್ ನೇಮಕಾತಿ 2026: 12 ಗ್ರಂಥಾಲಯ ಮೇಲ್ವಿಚಾರಕರ ಹುದ್ದೆಗಳಿಗೆ ಅರ್ಜಿ ಆಹ್ವಾನ – Kannada News | Yadgiri District Recruitment 2026: Apply for Library Supervisor Posts Before July 27

ಯಾದಗಿರಿ ಜಿಲ್ಲಾ ಪಂಚಾಯತ್‌ನಲ್ಲಿ ಗ್ರಂಥಾಲಯ ಮೇಲ್ವಿಚಾರಕರ ನೇಮಕಾತಿImage Credit source: Getty Images

ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ಮತ್ತೊಂದು ಉತ್ತಮ ಅವಕಾಶ ಲಭ್ಯವಾಗಿದೆ. ಯಾದಗಿರಿ ಜಿಲ್ಲಾ ಪಂಚಾಯತ್ (Zilla Panchayat Yadgiri) ವತಿಯಿಂದ ಗ್ರಂಥಾಲಯ ಮೇಲ್ವಿಚಾರಕ (Library Supervisor) ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಪ್ರಕಟಿಸಲಾಗಿದೆ. ಒಟ್ಟು 12 ಹುದ್ದೆಗಳ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು 2026ರ ಜುಲೈ 27ರವರೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಗ್ರಾಮ ಪಂಚಾಯತ್‌ವಾರು ಹುದ್ದೆಗಳ ವಿವರ

  • ವರ್ಕನಳ್ಳಿ- 1
  • ಬೇಸ್ ಕ್ಯಾಂಪ್- 1
  • ಅರಕೇರಾ – 1
  • ಕೆ. ಬಿಜಾಸ್ಪುರ- 1
  • ವಡಗೇರಾ- 1
  • ತ್ರಿಹಂಡ್ರೆಡ್ (ಕೆ)- 1
  • ಬಂಡಳ್ಳಿ- 1
  • ಕಿಲ್ಲಾನಕೇರಾ- 1
  • ನಾರಾಯಣಪುರ- 1
  • ಅರಕೇರಾ ಜೆ- 1
  • ಪೇಜ್ ರೆಸಿಪಿ- 1
  • ರಾಜನಕೊಲ್ಲೂರು- 1

ವಿದ್ಯಾರ್ಹತೆ

ಅಭ್ಯರ್ಥಿಗಳು ಮಾನ್ಯತೆ ಪಡೆದ ಶಿಕ್ಷಣ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಪಿಯುಸಿ (PUC / 12ನೇ ತರಗತಿ) ಉತ್ತೀರ್ಣರಾಗಿರಬೇಕು.

ವಯೋಮಿತಿ

ಕನಿಷ್ಠ ವಯಸ್ಸು: 18 ವರ್ಷ
ಗರಿಷ್ಠ ವಯಸ್ಸು: 40 ವರ್ಷ
ವಯೋಮಿತಿ ಸಡಿಲಿಕೆ
SC/ST ಹಾಗೂ ಪ್ರವರ್ಗ-1 ಅಭ್ಯರ್ಥಿಗಳಿಗೆ: 5 ವರ್ಷ
2A, 2B, 3A, 3B ಅಭ್ಯರ್ಥಿಗಳಿಗೆ: 3 ವರ್ಷ

ಆಯ್ಕೆ ಪ್ರಕ್ರಿಯೆ

ಯಾದಗಿರಿ ಜಿಲ್ಲಾ ಪಂಚಾಯತ್ ಈ ನೇಮಕಾತಿಗೆ ಕೆಳಗಿನ ಹಂತಗಳ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಿದೆ.

ಮೆರಿಟ್ ಪಟ್ಟಿ (Merit List): ಅಭ್ಯರ್ಥಿಗಳ ವಿದ್ಯಾರ್ಹತೆ ಹಾಗೂ ಅಂಕಗಳ ಆಧಾರದ ಮೇಲೆ ಮೆರಿಟ್ ಪಟ್ಟಿ ಸಿದ್ಧಪಡಿಸಲಾಗುತ್ತದೆ.

ಸಂದರ್ಶನ (Interview): ಮೆರಿಟ್ ಪಟ್ಟಿಯಲ್ಲಿ ಸ್ಥಾನ ಪಡೆದ ಅಭ್ಯರ್ಥಿಗಳಿಗೆ ಸಂದರ್ಶನ ನಡೆಸಿ ಅಂತಿಮ ಆಯ್ಕೆ ಮಾಡಲಾಗುತ್ತದೆ.

ಇದನ್ನೂ ಓದಿ: ಕರ್ನಾಟಕ ಕಂದಾಯ ಇಲಾಖೆಯಲ್ಲಿ 572 ವಿಎಒ ಹುದ್ದೆಗಳ ನೇಮಕಾತಿ: ಪಿಯುಸಿ ಪಾಸಾದವರಿಗೆ ಸರ್ಕಾರಿ ಉದ್ಯೋಗದ ಅವಕಾಶ

ಅರ್ಜಿ ಸಲ್ಲಿಸುವ ವಿಧಾನ

ಹಂತ 1: ಮೊದಲು ಯಾದಗಿರಿ ಜಿಲ್ಲಾ ಪಂಚಾಯತ್‌ನ ಅಧಿಕೃತ ನೇಮಕಾತಿ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ.

ಹಂತ 2: ಕೆಲವು ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಬೇಕು ಅವುಗಳೆಂದರೆ ಮೊಬೈಲ್ ಸಂಖ್ಯೆ, ಇ-ಮೇಲ್ ಐಡಿ, ಪಿಯುಸಿ ಅಂಕಪಟ್ಟಿ, ಆಧಾರ್ ಅಥವಾ ಗುರುತಿನ ಚೀಟಿ, ಪಾಸ್‌ಪೋರ್ಟ್ ಗಾತ್ರದ ಫೋಟೋ, ಸಹಿ, ಮೀಸಲಾತಿ ಪ್ರಮಾಣಪತ್ರ

ಹಂತ 3: ಯಾದಗಿರಿ ಜಿಲ್ಲಾ ಪಂಚಾಯತ್ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.

ಹಂತ 4: Library Supervisor Recruitment 2026 ಅರ್ಜಿ ಲಿಂಕ್ ತೆರೆಯಿರಿ.

ಹಂತ 5: ವೈಯಕ್ತಿಕ ಹಾಗೂ ಶೈಕ್ಷಣಿಕ ಮಾಹಿತಿಯನ್ನು ಸರಿಯಾಗಿ ನಮೂದಿಸಿ.

ಹಂತ 6: ಅಗತ್ಯ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡಿ.

ಹಂತ 7: ಅರ್ಜಿ ಶುಲ್ಕ ಇಲ್ಲದ ಕಾರಣ ಮಾಹಿತಿಯನ್ನು ಪರಿಶೀಲಿಸಿ ನೇರವಾಗಿ ಅರ್ಜಿ ಸಲ್ಲಿಸಿ.

ಹಂತ 8: ಅರ್ಜಿ ಸಲ್ಲಿಸಿದ ಬಳಿಕ Application Number ಅಥವಾ ಅರ್ಜಿಯ ಪ್ರಿಂಟ್ ಅನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಿ.

ಪದೇ ಪದೇ ಕೇಳಲಾಗುವ ಪ್ರಶ್ನೆಗಳು (FAQs)

ಯಾದಗಿರಿ ಜಿಲ್ಲಾ ಪಂಚಾಯತ್ ಯಾವ ಹುದ್ದೆಗಳಿಗೆ ನೇಮಕಾತಿ ನಡೆಸುತ್ತಿದೆ?

ಉತ್ತರ: ಒಟ್ಟು 12 ಗ್ರಂಥಾಲಯ ಮೇಲ್ವಿಚಾರಕ (Library Supervisor) ಹುದ್ದೆಗಳ ನೇಮಕಾತಿ ನಡೆಸುತ್ತಿದೆ.

ಅರ್ಜಿ ಸಲ್ಲಿಸಲು ಶುಲ್ಕವಿದೆಯೇ?

ಉತ್ತರ: ಇಲ್ಲ. ಈ ನೇಮಕಾತಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ?

ಉತ್ತರ: 2026ರ ಜುಲೈ 27 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.

Source link

‘ಲೈಫ್ ಟುಡೇ’ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ನೀಡಲಿರುವ ಹೊಸ ನಟ ಕಿರಣ್ ಆದಿತ್ಯ – Kannada News | Kiran Aditya Kannada Film Industry Debut Life Today Movie Trailer release date August 6

ಹೊಸ ನಟ ಕಿರಣ್ ಆದಿತ್ಯ ಅವರು ಹೀರೋ ಆಗಿ ಕನ್ನಡ ಚಿತ್ರರಂಗಕ್ಕೆ (Kannada Film Industry) ಎಂಟ್ರಿ ನೀಡುತ್ತಿದ್ದಾರೆ. ಅವರು ನಟಿಸಿರುವ ‘ಲೈಫ್ ಟುಡೇ’ (Life Today) ಚಿತ್ರದ ಮೇಲೆ ಸಿನಿಪ್ರಿಯರಿಗೆ ನಿರೀಕ್ಷೆ ಮನೆಮಾಡಿದೆ. ಈ ಸಿನಿಮಾದ ಶೀರ್ಷಿಕೆಯೇ ಗಮನ ಸೆಳೆಯುವಂತಿದೆ. ಅದಕ್ಕೆ ತಕ್ಕಂತೆಯೇ ಟ್ರೇಲರ್ ಮೂಡಿಬಂದಿದೆ. ಇತ್ತೀಚೆಗೆ ಈ ಚಿತ್ರದ ಟ್ರೇಲರ್ ಬಿಡುಗಡೆ ಮಾಡಲಾಗಿದೆ. ಸಿನಿಮಾ ಕಥೆ ಏನು ಎಂಬುದರ ಸುಳಿವನ್ನು ಟ್ರೇಲರ್ ಮೂಲಕ ನೀಡಲಾಗಿದೆ. ಟ್ರೇಲರ್ ಬಿಡುಗಡೆ ಬಳಿಕ ಚಿತ್ರತಂಡದವರು ಸುದ್ದಿಗೋಷ್ಠಿ ನಡೆಸಿದರು.

‘ಲೈಫ್ ಟುಡೇ’ ಸಿನಿಮಾದಲ್ಲಿ ಕಿರಣ್ ಆದಿತ್ಯ ಅವರಿಗೆ ನಾಯಕಿಯಾಗಿ ಲೇಖಾ ಚಂದ್ರ ಅವರು ಅಭಿನಯಿಸಿದ್ದಾರೆ. ಕಾಂತ ಕನ್ನಲ್ಲಿ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಮೇಘನಾ ಪ್ರದೀಪ್ ಅವರು ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಇದು ಅವರ ಚೊಚ್ಚಲ ನಿರ್ಮಾಣದ ಸಿನಿಮಾ. ಶ್ರೀಧರ್ ವಿ. ಸಂಭ್ರಮ್ ಅವರು ‘ಲೈಫ್ ಟುಡೇ’ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ.

ಟ್ರೇಲರ್​ನಲ್ಲಿ ಕಥೆಯ ಸುಳಿವು:

ಈ ಸಿನಿಮಾದ ಹಾಡುಗಳು ಈಗಾಗಲೇ ಸಿನಿಪ್ರಿಯರ ಗಮನ ಸೆಳೆದಿವೆ. ಈಗ ಚಿತ್ರತಂಡ‌ವು ಅಧಿಕೃತ ಟ್ರೇಲರ್ ಬಿಡುಗಡೆ ಮಾಡುವ ಮೂಲಕ ಇನ್ನಷ್ಟು ಕೌತುಕ ನಿರ್ಮಾಣ ಮಾಡಿದೆ. ಟ್ರೇಲರ್ ಜೊತೆಯಲ್ಲಿ ಸಿನಿಮಾದ ಬಿಡುಗಡೆ ದಿನಾಂಕವನ್ನೂ ಕೂಡ ಘೋಷಿಸಿದೆ. ಆಗಸ್ಟ್ 6ರಂದು ‘ಲೈಫ್ ಟುಡೇ’ ಚಿತ್ರವು ರಾಜ್ಯದಾದ್ಯಂತ ಬಿಡುಗಡೆ ಆಗಲಿದೆ. ಲವ್ ಮತ್ತು ಫ್ಯಾಮಿಲಿ ಸೆಂಟಿಮೆಂಟ್ ಈ ಚಿತ್ರದಲ್ಲಿ ಮುಖ್ಯವಾಗಿರಲಿದೆ ಎಂಬುದು ಟ್ರೇಲರ್ ಮೂಲಕ ಗೊತ್ತಾಗಿದೆ.

‘ಇದು ಗೆಲ್ಲುವು ಸಿನಿಮಾ’

‘ದಿಯಾ’ ನಿರ್ಮಾಪಕ ಕೃಷ್ಣ ಚೈತನ್ಯ, ‘ವಾಮನ’ ನಿರ್ಮಾಪಕ ಚೇತನ್ ಗೌಡ ಅವರು ‘ಲೈಫ್ ಟುಡೇ’ ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಿದರು. ಈ ಸಿನಿಮಾ ಖಂಡಿತಾ ಗೆಲ್ಲಲಿದೆ ಎಂದು ಅವರು ಭರವಸೆ ವ್ಯಕ್ತಪಡಿಸಿದರು. ಇದು ಈಗಿನ ತಲೆಮಾರಿನ ಜನರ ಕಥೆ ಇರುವ ಸಿನಿಮಾ ಎಂದು ನಾಯಕ ನಟ ಕಿರಣ್ ಆದಿತ್ಯ ಅವರು ಹೇಳಿದ್ದಾರೆ. ನಿರ್ದೇಶಕ ಕಾಂತ ಕನ್ನಲ್ಲಿ ಮಾತನಾಡಿ, ‘ಇದು ಇಂದಿನ ಹದಿಹರೆಯದ ಬದುಕುಗಳಿಗೆ ತೀರ ಹತ್ತಿರವಿರುವ ವಿಚಾರ. ಸಿನಿಮ್ಯಾಟಿಕ್ ಆಗಿ ಪ್ರೇಕ್ಷಕರ ಮನಮುಟ್ಟುವ ಪ್ರಯತ್ನ ಮಾಡಿದ್ದೇವೆ’ ಎಂದರು.

ಇದನ್ನೂ ಓದಿ: ಇದೇ ಕಾರಣಕ್ಕೆ ಕನ್ನಡ ಚಿತ್ರರಂಗ ಉದ್ದಾರ ಆಗಲ್ಲ: ‘ಕರಾವಳಿ’ ವಿವಾದಕ್ಕೆ ರಾಜ್ ಬಿ. ಶೆಟ್ಟಿ ಪ್ರತಿಕ್ರಿಯೆ

ನಾಯಕಿಯ ತಂದೆ ಪಾತ್ರದಲ್ಲಿ ತಬಲಾ ನಾಣಿ:

ನಟ ಕಾಕ್ರೋಚ್ ಸುಧಿ ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಹಿರಿಯ ನಟ ತಬಲಾ ನಾಣಿ ಅವರು ಈ ಸಿನಿಮಾದಲ್ಲಿ ನಾಯಕಿಯ ತಂದೆಯ ಪಾತ್ರ ಮಾಡಿದ್ದಾರೆ. ಲೇಖಾ ಚಂದ್ರ ಅವರ ನಟನೆಯನ್ನು ಅವರು ಕೊಂಡಾಡಿದರು. ಸಿನಿಮಾದ ಕಥೆಯಲ್ಲಿ ಸಾಕಷ್ಟು ಟ್ವಿಸ್ಟ್ ಇರಲಿದೆ ಎಂಬ ಸುಳಿವು ಸಿಕ್ಕಿದೆ. ಸದ್ಯಕ್ಕೆ ಟ್ರೇಲರ್ ಮೂಲಕ ಚಿತ್ರತಂಡದವರು ಪ್ರಚಾರ ಕಾರ್ಯ ಆರಂಭಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಅರಬ್ಬಿ ಸಮುದ್ರದಲ್ಲಿ ಮಗುಚಿದ ನಾಡದೋಣಿ: ನಾಲ್ವರು ಮೀನುಗಾರರು ಗ್ರೇಟ್​​ ಎಸ್ಕೇಪ್​​

ಮಂಗಳೂರು, ಜುಲೈ 17: ಸುರತ್ಕಲ್ ಬಳಿಯ ಅರಬ್ಬಿ ಸಮುದ್ರದಲ್ಲಿ ನಾಡ ದೋಣಿಯೊಂದು ಮಗುಚಿರುವ ಘಟನೆ ವರದಿಯಾಗಿದೆ. ಭಾರೀ ಮಳೆ, ಗಾಳಿ ಮತ್ತು ದೊಡ್ಡ ಅಲೆಗಳಿಂದಾಗಿ ಸಮುದ್ರದಲ್ಲಿ ನೀರಿನ ರಭಸ ಹೆಚ್ಚಿತ್ತು. ಈ ಪ್ರತಿಕೂಲ ಹವಾಮಾನದ ನಡುವೆ ಮೀನುಗಾರಿಕೆಗೆ ತೆರಳಿದ್ದ ನಾಡ ದೋಣಿಯೊಂದು ನಿಯಂತ್ರಣ ತಪ್ಪಿ ಮುಗುಚಿದೆ. ದೋಣಿಯಲ್ಲಿದ್ದ ನಾಲ್ವರು ಮೀನುಗಾರರು ನೀರಿಗೆ ಬಿದ್ದರೂ, ಈಜಿ ಸುರಕ್ಷಿತವಾಗಿ ದಡ ಸೇರುವಲ್ಲಿ ಯಶಸ್ವಿಯಾಗಿದ್ದಾರೆ. ಈ ಘಟನೆ ಸೂರತ್ಕಲ್ ಲೈಟ್ ಹೌಸ್ ಸಮೀಪ ನಡೆದಿದ್ದು, ಯಾವುದೇ ರೀತಿಯ ಸಾವು-ನೋವುಗಳು ಸಂಭವಿಸಿಲ್ಲ. ಸ್ಥಳಕ್ಕೆ ಭೇಟಿ ನೀಡಿರುವ ಸೂರತ್ಕಲ್ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಬೆಂಗಳೂರು ಪೊಲೀಸರ ಭರ್ಜರಿ ಬೇಟೆ: 70 ಅಪರಾಧ ಪ್ರಕರಣ ಭೇದಿಸಿ 94 ಖದೀಮರ ಬಂಧನ! – Kannada News | Bengaluru Police Crack 70 Crime Cases: 94 Arrested, Rs 4.9 Crore Worth Stolen Assets Recovered

ಬೆಂಗಳೂರು, ಜುಲೈ 17: ನಗರದ ಉತ್ತರ ವಿಭಾಗದ ಪೊಲೀಸರು ಕಳ್ಳರು, ದರೋಡೆಕೋರರು ಹಾಗೂ ಸುಲಿಗೆಕೋರರ ವಿರುದ್ಧ ಬೃಹತ್ ಕಾರ್ಯಾಚರಣೆ ನಡೆಸಿ ಭರ್ಜರಿ ಯಶಸ್ಸು ಸಾಧಿಸಿದ್ದಾರೆ. ಕಳೆದ ಆರು ತಿಂಗಳ ಅವಧಿಯಲ್ಲಿ ನಡೆದಿದ್ದ ಮನೆಗಳ್ಳತನ, ದರೋಡೆ, ಸರಗಳ್ಳತನ, ವಾಹನ ಕಳವು ಸೇರಿದಂತೆ ಒಟ್ಟು 70 ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚಿರುವ ಪೊಲೀಸರು, ಬರೋಬ್ಬರಿ 94 ಮಂದಿ ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ.

ಬಂಧಿತ ಆರೋಪಿಗಳಿಂದ ವಶಪಡಿಸಿಕೊಳ್ಳಲಾದ ಒಟ್ಟು 4,91,94,517 ರೂ. ಮೌಲ್ಯದ ಚಿನ್ನಾಭರಣ, ನಗದು ಹಾಗೂ ವಾಹನಗಳನ್ನು ನಗರ ಪೊಲೀಸ್ ಆಯುಕ್ತರಾದ ಸೀಮಂತ್ ಕುಮಾರ್ ಅವರು ಇಂದು ಅಧಿಕೃತವಾಗಿ ಮೂಲ ಮಾಲೀಕರಿಗೆ (ವಾರಸುದಾರರಿಗೆ) ಹಸ್ತಾಂತರಿಸಲಿದ್ದಾರೆ.

ವಶಪಡಿಸಿಕೊಂಡ ಕೋಟ್ಯಂತರ ರೂಪಾಯಿ ಮೌಲ್ಯದ ವಸ್ತುಗಳ ವಿವರ

ಉತ್ತರ ವಿಭಾಗದ ಆರ್.ಟಿ.ನಗರ, ಮಲ್ಲೇಶ್ವರಂ, ಸಂಜಯ್ ನಗರ, ಹೆಬ್ಬಾಳ, ಯಶವಂತಪುರ, ಸುಬ್ರಮಣ್ಯ ನಗರ, ಮಹಾಲಕ್ಷ್ಮಿ ಲೇಔಟ್ ಹಾಗೂ ನಂದಿನಿ ಲೇಔಟ್ ಸೇರಿದಂತೆ ವಿವಿಧ ಠಾಣಾ ವ್ಯಾಪ್ತಿಯಲ್ಲಿ ನಡೆಸಿದ ದಾಳಿಯ ವೇಳೆ ಜಪ್ತಿ ಮಾಡಲಾದ ಬೃಹತ್ ಕಳವು ಮಾಲಿನ ಪಟ್ಟಿ ಇಲ್ಲಿದೆ:

  • ಚಿನ್ನ ಮತ್ತು ಬೆಳ್ಳಿ: 2 ಕೆ.ಜಿ. 462 ಗ್ರಾಂ ಚಿನ್ನಾಭರಣ ಹಾಗೂ 2 ಕೆ.ಜಿ. 381 ಗ್ರಾಂ ಬೆಳ್ಳಿ ವಸ್ತುಗಳು.
  • ನಗದು ಹಣ:ವಿವಿಧ ಪ್ರಕರಣಗಳಲ್ಲಿ ಕಳವಾಗಿದ್ದ 34.34 ಲಕ್ಷ ರೂ.
  • ವಾಹನಗಳು: ನೂರಕ್ಕೂ ಹೆಚ್ಚು ದ್ವಿಚಕ್ರ ವಾಹನಗಳ ಪೈಕಿ ಸದ್ಯ 64 ಬೈಕ್‌ಗಳು ಹಾಗೂ 4 ಆಟೋರಿಕ್ಷಾಗಳು.
  • ಗ್ಯಾಜೆಟ್ಸ್: 71 ದುಬಾರಿ ಮೊಬೈಲ್ ಫೋನ್‌ಗಳು, 1 ಲ್ಯಾಪ್‌ಟಾಪ್ ಹಾಗೂ 1 ಟ್ಯಾಬ್.
  • ಇತರೆ ಜಪ್ತಿ: 44.780 ಕೆ.ಜಿ. ತೂಕದ ಶ್ರೀಗಂಧದ ಮರ, 5 ಗ್ಯಾಸ್ ಸಿಲಿಂಡರ್‌ಗಳು ಹಾಗೂ ₹23 ಲಕ್ಷ ಮೌಲ್ಯದ 11 ಗ್ರಾಂ ಮಾದಕ ದ್ರವ್ಯ (ಡ್ರಗ್ಸ್).

ಠಾಣಾವಾರು ಪ್ರಮುಖ ಯಶಸ್ಸಿನ ಹೈಲೈಟ್ಸ್

  • ಮಲ್ಲೇಶ್ವರಂ ಪೊಲೀಸ್ ಠಾಣೆ: ಬರೋಬ್ಬರಿ 14 ಪ್ರಕರಣಗಳನ್ನು ಭೇದಿಸಿರುವ ಮಲ್ಲೇಶ್ವರಂ ಪೊಲೀಸರು 12 ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ. ಇವರಿಂದ 1.84 ಕೋಟಿ ರೂ. ಮೌಲ್ಯದ 1 ಕೆಜಿಗೂ ಅಧಿಕ ಚಿನ್ನ, 6 ಬೈಕ್ ಹಾಗೂ 17 ಮೊಬೈಲ್‌ಗಳನ್ನು ಜಪ್ತಿ ಮಾಡಲಾಗಿದೆ.
  • ಹೆಬ್ಬಾಳ ಪೊಲೀಸ್ ಠಾಣೆ: 6 ಪ್ರಕರಣಗಳಲ್ಲಿ 5 ಆರೋಪಿಗಳನ್ನು ಬಂಧಿಸಿ, 82.01 ಲಕ್ಷ ರೂ. ಮೌಲ್ಯದ 507 ಗ್ರಾಂ ಚಿನ್ನಾಭರಣ ಹಾಗೂ 80 ಸಾವಿರ ರೂ. ನಗದು ವಶಪಡಿಸಿಕೊಳ್ಳಲಾಗಿದೆ.
  • ನಂದಿನಿ ಲೇಔಟ್ ಠಾಣೆ: 7 ಪ್ರಕರಣಗಳಲ್ಲಿ 3 ಆರೋಪಿಗಳನ್ನು ಬಂಧಿಸಲಾಗಿದ್ದು, ಇವರಿಂದ ಬರೋಬ್ಬರಿ 44.780 ಕೆ.ಜಿ. ಶ್ರೀಗಂಧದ ಮರ, ಚಿನ್ನ ಹಾಗೂ ವಾಹನಗಳು ಸೇರಿ ಒಟ್ಟು 48.50 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
  • ಯಶವಂತಪುರ ಪೊಲೀಸ್ ಠಾಣೆ: 9 ಪ್ರಕರಣಗಳಲ್ಲಿ 6 ಆರೋಪಿಗಳನ್ನು ಬಂಧಿಸಿ 36.37 ಲಕ್ಷ ರೂ. ಮೌಲ್ಯದ ಚಿನ್ನ, 17 ಮೊಬೈಲ್ ಹಾಗೂ ಅತ್ಯಾಧುನಿಕ ‘ಕೃತಕ ಬುದ್ಧಿಮತ್ತೆ (AI) ಡಿಜಿಟಲ್ ಉಪಕರಣ’ವನ್ನು ಜಪ್ತಿ ಮಾಡಲಾಗಿದೆ.
  • ಆರ್.ಟಿ. ನಗರ ಮತ್ತು ಸಂಜಯನಗರ: ಆರ್.ಟಿ. ನಗರದಲ್ಲಿ 9 ಪ್ರಕರಣಗಳಲ್ಲಿ 14 ಆರೋಪಿಗಳನ್ನು ಬಂಧಿಸಿ 30.18 ಲಕ್ಷ ರೂ. ಮೌಲ್ಯದ ಮಾಲು ರಿಕವರಿ ಮಾಡಲಾಗಿದೆ. ಸಂಜಯನಗರದಲ್ಲಿ ಅತ್ಯಧಿಕ ಅಂದರೆ 19 ಪ್ರಕರಣಗಳನ್ನು ಭೇದಿಸಿ 7 ಆರೋಪಿಗಳನ್ನು ಬಂಧಿಸಿ 27.44 ಲಕ್ಷ ರೂ. ಮೌಲ್ಯದ ಸೊತ್ತು ವಶಪಡಿಸಿಕೊಳ್ಳಲಾಗಿದೆ.

ಇದರೊಂದಿಗೆ ಶ್ರೀರಾಮಪುರ, ರಾಜಾಜಿನಗರ, ಸುಬ್ರಮಣ್ಯನಗರ, ಮಹಾಲಕ್ಷ್ಮಿ ಲೇಔಟ್, ಆರ್.ಎಂ.ಸಿ ಯಾರ್ಡ್ ಹಾಗೂ ಜಾಲಹಳ್ಳಿ ಮತ್ತು ಜೆ.ಪಿ ನಗರ ಠಾಣೆಯ ಪೊಲೀಸರು ಶ್ಲಾಘನೀಯ ಕಾರ್ಯಾಚರಣೆ ನಡೆಸಿದ್ದಾರೆ. ಕಳೆದ ಆರು ತಿಂಗಳಲ್ಲಿ ಕಷ್ಟಪಟ್ಟು ಸಂಪಾದಿಸಿದ ಹಣ, ಒಡವೆ ಕಳೆದುಕೊಂಡು ಕಂಗಾಲಾಗಿದ್ದ ಸಾರ್ವಜನಿಕರು ಇಂದು ತಮ್ಮ ವಸ್ತುಗಳನ್ನು ಮರಳಿ ಪಡೆಯುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೀದಿಬದಿ ವ್ಯಾಪಾರಿಗಳು ಬಡವರು, ಅವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವುದು ಸರ್ಕಾರದ ಕರ್ತವ್ಯ – Kannada News | Ramalingareddy Advocates for Hawkers Zones to Resolve Bengaluru Footpath Issues

ಬೆಂಗಳೂರು, ಜು.17: ರಾಜಧಾನಿಯಲ್ಲಿ ಫುಟ್‌ಪಾತ್ ಒತ್ತುವರಿ ಸಮಸ್ಯೆ ಮತ್ತು ಬೀದಿಬದಿ ವ್ಯಾಪಾರಿಗಳ ಭವಿಷ್ಯದ ಕುರಿತು ಸಚಿವ ರಾಮಲಿಂಗಾರೆಡ್ಡಿ ಮಾತನಾಡಿದ್ದಾರೆ. ಫುಟ್‌ಪಾತ್‌ಗಳು ಸಾರ್ವಜನಿಕರ ಓಡಾಟಕ್ಕಾಗಿ ಇವೆ. ಅಲ್ಲಿರುವ ವ್ಯಾಪಾರಿಗಳನ್ನು ತೆರವುಗೊಳಿಸಲು ಯಾರೂ ಆಕ್ಷೇಪಿಸುವುದಿಲ್ಲ, ಆದರೆ ಅವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವುದು ಸರ್ಕಾರದ ಜವಾಬ್ದಾರಿ ಎಂದು ಅವರು ಹೇಳಿದರು. ಹಾಕರ್ಸ್ ಝೋನ್ ವ್ಯವಸ್ಥೆ ಪ್ರಪಂಚದಾದ್ಯಂತ ಇದೆ. ಬೆಂಗಳೂರಿನಲ್ಲೂ ಈ ವ್ಯವಸ್ಥೆಯನ್ನು ಜಾರಿಗೆ ತರಬೇಕು. ಬೀದಿಬದಿ ವ್ಯಾಪಾರಿಗಳು ಬಡವರಲ್ಲಿ ಬಡವರು. ಅವರಿಗೆ ಸೂಕ್ತ ಹಾಕರ್ಸ್ ಝೋನ್ ಒದಗಿಸಿ, ಪಾದಚಾರಿಗಳಿಗೆ ಫುಟ್‌ಪಾತ್‌ಗಳನ್ನು ಬಿಟ್ಟುಕೊಡುವುದು ಸೂಕ್ತ. ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿಯೂ ಫುಟ್‌ಪಾತ್ ವ್ಯಾಪಾರಿಗಳಿಗೆ 20,000 ರೂ. ಒನ್ ಟೈಮ್ ನೆರವು ನೀಡುವುದಾಗಿ ಭರವಸೆ ನೀಡಲಾಗಿತ್ತು ಎಂದು ರಾಮಲಿಂಗಾರೆಡ್ಡಿ ನೆನಪಿಸಿದರು. ರಾಹುಲ್ ಗಾಂಧಿಯವರು ಕೂಡ ಇವರೊಂದಿಗೆ ಚರ್ಚೆ ನಡೆಸಿದ್ದರು. ಯುಪಿಎ ಸರ್ಕಾರದ ಅವಧಿಯಲ್ಲಿ ಸೋನಿಯಾ ಗಾಂಧಿ ಮತ್ತು ಮನಮೋಹನ್ ಸಿಂಗ್ ನೇತೃತ್ವದಲ್ಲಿ ಬೀದಿಬದಿ ವ್ಯಾಪಾರಿಗಳ ರಕ್ಷಣೆಗೆ ತಿದ್ದುಪಡಿ ತರಲಾಗಿತ್ತು ಎಂದು ಸಚಿವರು ವಿವರಿಸಿದರು. ಸಾರ್ವಜನಿಕರಿಗೆ ತೊಂದರೆಯಾಗದಂತೆ, ವ್ಯಾಪಾರಿಗಳಿಗೆ ಹಾಕರ್ಸ್ ಝೋನ್ ವ್ಯವಸ್ಥೆ ಕಲ್ಪಿಸುವುದು ರಾಜ್ಯ ಸರ್ಕಾರದ ಕರ್ತವ್ಯವಾಗಿದೆ ಎಂದು ಹೇಳಿದರು.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IND vs ENG: ಕೊನೆಯ ಪಂದ್ಯದಿಂದ ಟೀಂ ಇಂಡಿಯಾದ ಸ್ಟಾರ್ ಆಲ್‌ರೌಂಡರ್ ಔಟ್

Source link

ದೇವೇಗೌಡರ ಪತ್ನಿ ಚೆನ್ನಮ್ಮ ಸ್ಥಿತಿ ಗಂಭೀರ: ಆಸ್ಪತ್ರೆಗೆ ಧಾವಿಸಿದ ಪುತ್ರ ಹೆಚ್​​ಡಿ ಕುಮಾರಸ್ವಾಮಿ – Kannada News | Former PM Deve Gowda’s Wife Chennamma in Critical Condition; HD Kumaraswamy Visits Hospital

ಬೆಂಗಳೂರು, ಜುಲೈ 17: ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡರ ಪತ್ನಿ ಚೆನ್ನಮ್ಮ ಅವರಿಗೆ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದ್ದು, ಸ್ಥಿತಿ ಗಂಭೀರವಾಗಿದೆ. ಹೀಗಾಗಿ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ, ನಿಖಿಲ್ ಸೇರಿದಂತೆ ಹೆಚ್​ಡಿ ರೇವಣ್ಣ ಮತ್ತು ಕುಟುಂಬ ಸದಸ್ಯರು ಮಣಿಪಾಲ್ ಆಸ್ಪತ್ರೆಗೆ ಆಗಮಿಸಿದ್ದಾರೆ. ಮೊನ್ನೆ ಸಂಜೆ ಚೆನ್ನಮ್ಮ ಅವರ ಆರೋಗ್ಯದಲ್ಲಿ ಏರುಪೇರಾದ ಕಾರಣ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ಮೂರು ದಿನಗಳಿಂದ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಹೆಚ್.ಡಿ.ಕುಮಾರಸ್ವಾಮಿ ವೈದ್ಯರೊಂದಿಗೆ ಮಾತನಾಡಿ, ತಾಯಿಯ ಆರೋಗ್ಯದ ಬಗ್ಗೆ ಮಾಹಿತಿ ಪಡೆದಿದ್ದಾರೆ. ಪ್ರಸ್ತುತ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಪತ್ನಿ ಚೆನ್ನಮ್ಮ ಶೀಘ್ರ ಚೇತರಿಕೆಗಾಗಿ ಕುಟುಂಬಸ್ಥರು ಮತ್ತು ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.

ವರದಿ: ಈರಣ್ಣ ಬಸವ

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಈ ದಾಖಲೆಗಳು ನಿಮ್ಮ ಹತ್ರ ಇದ್ರೆ ಹೊಸ ಮನೆಗೆ ಡೋರ್ ನಂಬರ್ ಪಡೆಯೋದು ಸುಲಭ – Kannada News | If you have these documents, it is easy to get a door number for a new house.

ಎಲ್ಲರ ಮನೆಗೂ ಡೋರ್ ನಂಬರ್ (door number) ಇದ್ದೆ ಇರುತ್ತದೆ. ತುರ್ತು ಸೇವೆಗಳ ಆಗಮನ, ಸ್ಥಳೀಯ ಸರ್ಕಾರಿ ದಾಖಲೆಗಳು, ಬ್ಯಾಂಕ್ ಖಾತೆ ಹಾಗೂ ಆಧಾರ್ ಕಾರ್ಡ್‌ನಂತಹ ಅಧಿಕೃತ ಗುರುತಿಗೆ ಮನೆ ಸಂಖ್ಯೆ ಪ್ರಮುಖ ಆಧಾರವಾಗಿದೆ. ನೀವೇನಾದ್ರೂ ಹೊಸ ಮನೆ ಕಟ್ಟಿದ್ದರೆ ಡೋರ್ ನಂಬರ್ ಪಡೆಯುವುದು ಹೇಗೆ ಎನ್ನುವ ಗೊಂದಲ ಇರಬಹುದು. ಆದರೆ ಹೊಸ ಮನೆಗೆ ಅಧಿಕೃತ ಡೋರ್ ನಂಬರ್ ಪಡೆಯಲು, ಸ್ಥಳೀಯ ಗ್ರಾಮ ಪಂಚಾಯತ್ ಅಥವಾ ನಗರಸಭೆ ಕಚೇರಿಗೆ ತೆರಳಿ ಅರ್ಜಿ ಸಲ್ಲಿಸಿದರೆ ಕೆಲವು ದಿನಗಳಲ್ಲೇ ಮನೆಗೆ ಡೋರ್ ನಂಬರ್ ಪಡೆಯಬಹುದು.

 ಹೊಸ ಮನೆಗೆ ಡೋರ್ ನಂಬರ್ ಪಡೆಯುವುದು ಹೇಗೆ?

ಹಂತ 1: ಹೊಸ ಮನೆಗೆ ಅಧಿಕೃತ ಡೋರ್ ನಂಬರ್ ಪಡೆಯಲು, ಸ್ಥಳೀಯ ಗ್ರಾಮೀಣ ಪ್ರದೇಶದಲ್ಲಿ ವಾಸಿಸುತ್ತಿದ್ದರೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ (PDO) ಅಥವಾ ನಗರ ಪ್ರದೇಶದಲ್ಲಿ ನೆಲೆಸಿದ್ದರೆ ಮುನ್ಸಿಪಲ್ ಕಮಿಷನರ್ ಅವರಿಗೆ ಲಿಖಿತವಾಗಿ ಅರ್ಜಿ ಸಲ್ಲಿಸಿ.

ಹಂತ 2: ಅರ್ಜಿಯೊಂದಿಗೆ ಆಸ್ತಿ ಪತ್ರ , ಭೂ ಪರವಾನಗಿ ಪ್ರತಿ, ಕಟ್ಟಡ ನಕ್ಷೆ ಹಾಗೂ ಕಟ್ಟಡ ಪೂರ್ಣಗೊಂಡ ಪ್ರಮಾಣಪತ್ರವನ್ನು ಲಗತ್ತಿಸಿ.

ಹಂತ 3: ಅರ್ಜಿ ಸಲ್ಲಿಸಿದ ಬಳಿಕ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಬಂದು ದಾಖಲೆಗಳನ್ನು ಪರಿಶೀಲನೆ ಮಾಡುತ್ತಾರೆ.

ಹಂತ 4: ಪರಿಶೀಲನೆ ಬಳಿಕ ನಿಮ್ಮ ಮನೆಯನ್ನು ಗ್ರಾಮ ಅಥವಾ ನಗರದ ಆಸ್ತಿ ನೋಂದಣಿ ರಿಜಿಸ್ಟರ್‌ನಲ್ಲಿ ನಮೂದಿಸಿ ಅಧಿಕೃತ ಡೋರ್ ನಂಬರ್ ನೀಡಲಾಗುತ್ತದೆ.

ಇದನ್ನೂ ಓದಿ: ಗೃಹಸಾಲ ಪಡೆಯುತ್ತಿದ್ದೀರಾ? 50 ಲಕ್ಷ ರೂ ಸಾಲ ಪಡೆಯಲು ನಿಮ್ಮ ಸಂಬಳ ಎಷ್ಟಿರಬೇಕು ಗೊತ್ತಾ? ಇಲ್ಲಿದೆ ಲೆಕ್ಕಾಚಾರ

ಸಾಮಾನ್ಯವಾಗಿ ಕೇಳುವ ಪ್ರಶ್ನೆ ಮತ್ತು ಉತ್ತರ (FAQs)

ಪ್ರಶ್ನೆ: ಹೊಸ ಮನೆಗೆ ಡೋರ್ ನಂಬರ್ ಪಡೆಯುವುದು ಹೇಗೆ?

ಉತ್ತರ: ಗ್ರಾಮೀಣ ಪ್ರದೇಶದಲ್ಲಿ ವಾಸಿಸುತ್ತಿದ್ದರೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ (PDO) ಅಥವಾ ನಗರ ಪ್ರದೇಶದಲ್ಲಿ ನೆಲೆಸಿದ್ದರೆ ಮುನ್ಸಿಪಲ್ ಕಮಿಷನರ್ ಅವರಿಗೆ ಲಿಖಿತವಾಗಿ ಅರ್ಜಿ ಸಲ್ಲಿಸಿ.

ಪ್ರಶ್ನೆ: ಹೊಸ ಮನೆಗೆ ಮನೆ ಸಂಖ್ಯೆ ಪಡೆಯಲು ಏನೆಲ್ಲಾ ದಾಖಲೆಗಳು ಬೇಕು?

ಉತ್ತರ: ಅರ್ಜಿಯೊಂದಿಗೆ ಆಸ್ತಿ ಪತ್ರ, ಭೂ ಪರವಾನಗಿ ಪ್ರತಿ, ಕಟ್ಟಡ ನಕ್ಷೆ ಹಾಗೂ ಕಟ್ಟಡ ಪೂರ್ಣಗೊಂಡ ಪ್ರಮಾಣಪತ್ರಗಳಂತಹ ದಾಖಲೆಗಳು ಬೇಕು.

ಪ್ರಶ್ನೆ: ಹೊಸ ಮನೆಗೆ ಡೋರ್ ನಂಬರ್ ಯಾವಾಗ ನೀಡುತ್ತಾರೆ?

ಉತ್ತರ: ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಬಂದು ದಾಖಲೆಗಳನ್ನು ಪರಿಶೀಲಿಸಿದ ಬಳಿಕವೇ ಡೋರ್ ನಂಬರ್ ನೀಡುತ್ತಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 5:27 pm, Fri, 17 July 26

Source link

ಕೇವಲ 4 ನಿಮಿಷಗಳಲ್ಲಿ ಚಾರ್ಜ್; ವಿಜ್ಞಾನಿಗಳಿಂದ ಸೋಡಿಯಂ ಮೆಟಲ್ ಬ್ಯಾಟರಿ ಕ್ರಾಂತಿ – Kannada News | Scientists develop Sodium Metal Battery that can be charged very quickly

ಬ್ಯಾಟರಿ ತಂತ್ರಜ್ಞಾನ ಕ್ಷೇತ್ರದಲ್ಲಿ ವಿಜ್ಞಾನಿಗಳು ಜಗತ್ತೇ ಬೆರಗಾಗುವಂತಹ ಹೊಸ ಆವಿಷ್ಕಾರವೊಂದನ್ನು ಮಾಡಿದ್ದಾರೆ. ನಿಮ್ಮ ಸ್ಮಾರ್ಟ್‌ಫೋನ್, ಲ್ಯಾಪ್‌ಟಾಪ್ ಮತ್ತು ಇಂಟರ್ನೆಟ್ ಸಾಧನಗಳನ್ನು ಕೇವಲ 4 ನಿಮಿಷಗಳಲ್ಲಿ ಶೇ. 100 ರಷ್ಟು ಫುಲ್ ಚಾರ್ಜ್ ಮಾಡಬಲ್ಲ ಅತ್ಯಾಧುನಿಕ ‘ಸೋಡಿಯಂ ಮೆಟಲ್ ಬ್ಯಾಟರಿ’ (Sodium Metal Battery) ಅನ್ನು ಸಂಶೋಧಕರು ಅಭಿವೃದ್ಧಿಪಡಿಸಿದ್ದಾರೆ.

ಏನಿದು ಸೋಡಿಯಂ ಮೆಟಲ್ ಬ್ಯಾಟರಿ?

ಪ್ರಸ್ತುತ ನಮ್ಮ ಮೊಬೈಲ್ ಮತ್ತು ಲ್ಯಾಪ್‌ಟಾಪ್‌ಗಳಲ್ಲಿ ಲಿಥಿಯಂ-ಅಯಾನ್ (Lithium-ion) ಬ್ಯಾಟರಿಗಳನ್ನು ಬಳಸಲಾಗುತ್ತಿದೆ. ಆದರೆ ಲಿಥಿಯಂ ಅತ್ಯಂತ ದುಬಾರಿ ಮತ್ತು ಜಗತ್ತಿನ ಕೆಲವು ದೇಶಗಳಲ್ಲಿ ಮಾತ್ರ ಸಿಗುತ್ತದೆ. ಇದಕ್ಕೆ ಪರ್ಯಾಯವಾಗಿ ಚೀನಾದ ಸಂಶೋಧಕರು ಸುಲಭವಾಗಿ ಮತ್ತು ಅತಿ ಅಗ್ಗವಾಗಿ ಸಿಗುವ ಸೋಡಿಯಂ (ಉಪ್ಪು) ಬಳಸಿ ಈ ಮೆಟಲ್ ಬ್ಯಾಟರಿಯನ್ನು ಸಿದ್ಧಪಡಿಸಿದ್ದಾರೆ.

ಇದನ್ನೂ ಓದಿ: ಶೇ. 100 ಚಾರ್ಜ್ ಆದರೂ ಫೋನ್ ಚಾರ್ಜಿಂಗ್ ಏಕೆ ನಿಲ್ಲುವುದಿಲ್ಲ?, ಆ ವಿದ್ಯುತ್ ಎಲ್ಲಿಗೆ ಹೋಗುತ್ತದೆ?

4 ನಿಮಿಷಗಳಲ್ಲಿ ಚಾರ್ಜ್ ಆಗುವುದು ಹೇಗೆ ಸಾಧ್ಯ?

ವಿಜ್ಞಾನಿಗಳು ಈ ಬ್ಯಾಟರಿಗಾಗಿ ‘ಕ್ವಾಸಿ-ಸಾಲಿಡ್ ಜೆಲ್ ಎಲೆಕ್ಟ್ರೋಲೈಟ್’ (Quasi-Solid Gel Electrolyte) ಎಂಬ ವಿಶೇಷ ಜೆಲ್ ಅನ್ನು ರೂಪಿಸಿದ್ದಾರೆ. ಇದು ಬ್ಯಾಟರಿಯ ಒಳಗೆ ಸೋಡಿಯಂ ಅಯಾನ್‌ಗಳು ಅತಿ ವೇಗವಾಗಿ ಚಲಿಸಲು ಸಹಾಯ ಮಾಡುತ್ತದೆ. ಪ್ರಯೋಗಾಲಯದ ಪರೀಕ್ಷೆಗಳಲ್ಲಿ ಇದು ಕೇವಲ 4 ನಿಮಿಷಗಳಲ್ಲಿ ಸಂಪೂರ್ಣ ಚಾರ್ಜ್ ಆಗುವ ಸಾಮರ್ಥ್ಯವನ್ನು ಪ್ರದರ್ಶಿಸಿದೆ.

ಬ್ಯಾಟರಿ ಬಾಳಿಕೆ ಮತ್ತು ಸುರಕ್ಷತೆ ಹೆಚ್ಚು

ಸಾಮಾನ್ಯವಾಗಿ ಬ್ಯಾಟರಿಗಳನ್ನು ಅತಿ ವೇಗವಾಗಿ ಚಾರ್ಜ್ ಮಾಡಿದಾಗ ಶಾರ್ಟ್ ಸರ್ಕ್ಯೂಟ್ ಆಗುವ ಅಥವಾ ಬ್ಯಾಟರಿ ಹಾಳಾಗುವ ಅಪಾಯ ಇರುತ್ತದೆ. ಆದರೆ, ಈ ಹೊಸ ಜೆಲ್ ತಂತ್ರಜ್ಞಾನವು ಬ್ಯಾಟರಿ ಒಳಗೆ ಸೂಜಿಯಂತಹ ಲೋಹದ ರಚನೆಗಳು (Dendrites) ಬೆಳೆಯದಂತೆ ತಡೆಯುತ್ತದೆ. ಇದರಿಂದ ಬ್ಯಾಟರಿ ಶಾರ್ಟ್ ಸರ್ಕ್ಯೂಟ್ ಆಗುವುದು ತಪ್ಪುತ್ತದೆ ಮತ್ತು ವರ್ಷಗಳ ಕಾಲ ಬ್ಯಾಟರಿಯ ಸಾಮರ್ಥ್ಯ ಕುಂದದೆ ದೀರ್ಘಕಾಲ ಬಾಳಿಕೆ ಬರುತ್ತದೆ.

ಇದನ್ನೂ ಓದಿ: ಬುಲೆಟ್ ರೈಲು ಕಾರಿಡಾರ್ ವೇಗದ ಪ್ರಗತಿ; ಜಪಾನ್​ನಿಂದ ಇ10 ಬರುವಷ್ಟರಲ್ಲೇ ಭಾರತ ನಿರ್ಮಿತ ಟ್ರೈನ್ ಬಳಕೆಗೆ ನಿರ್ಧಾರ

ಸಾರ್ವಜನಿಕರಿಗೆ ಯಾವಾಗ ಲಭ್ಯ?

ಈ ತಂತ್ರಜ್ಞಾನವು ಸದ್ಯಕ್ಕೆ ಸಂಶೋಧನಾ ಪ್ರಯೋಗಾಲಯಗಳ (Labs) ಹಂತದಲ್ಲಿದೆ. ಮಾರುಕಟ್ಟೆಗೆ ಬರುವ ಮುನ್ನ ಇದರ ಸುರಕ್ಷತೆ ಮತ್ತು ವಿವಿಧ ಹವಾಮಾನ ಪರಿಸ್ಥಿತಿಗಳಲ್ಲಿ ಇದರ ಕಾರ್ಯಕ್ಷಮತೆಯನ್ನು ಪರೀಕ್ಷಿಸಬೇಕಾಗಿದೆ. ಮುಂಬರುವ ವರ್ಷಗಳಲ್ಲಿ ಈ ತಂತ್ರಜ್ಞಾನ ಯಶಸ್ವಿಯಾದರೆ ಮೊಬೈಲ್ ಮಾತ್ರವಲ್ಲದೆ ಎಲೆಕ್ಟ್ರಿಕ್ ಕಾರುಗಳು (EVs) ಮತ್ತು ಸೌರ ಇಂಧನ ಶೇಖರಣಾ ಗ್ರಿಡ್‌ಗಳಲ್ಲಿ ಇದು ಭಾರಿ ಕ್ರಾಂತಿ ಸೃಷ್ಟಿಸಲಿದೆ.

ಲಿಥಿಯಂ ಬ್ಯಾಟರಿಗಳಿಗೆ ಹೋಲಿಸಿದರೆ ಸೋಡಿಯಂ ಬ್ಯಾಟರಿಗಳನ್ನು ತಯಾರಿಸುವ ವೆಚ್ಚ ಅತ್ಯಂತ ಕಡಿಮೆ. ಹೀಗಾಗಿ ಭವಿಷ್ಯದಲ್ಲಿ ಮೊಬೈಲ್ ಮತ್ತು ಎಲೆಕ್ಟ್ರಿಕ್ ವಾಹನಗಳ ಬೆಲೆ ಗಣನೀಯವಾಗಿ ಇಳಿಕೆಯಾಗಲು ಈ ಆವಿಷ್ಕಾರ ನೆರವಾಗಲಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On – 5:08 pm, Fri, 17 July 26

Source link

Exit mobile version