ಫಿಫಾ ವಿಶ್ವಕಪ್ ಸಂಭ್ರಮಾಚರಣೆಯಲ್ಲಿ ದುರಂತ: 13 ವರ್ಷದ ಬಾಲಕ ಸಾವು; ಇಬ್ಬರಿಗೆ ಗಾಯ – Kannada News | Spain Crowned 2026 FIFA World Cup Champions; Victory Celebration Ends in Tragedy
2026 ರ ಫಿಫಾ ವಿಶ್ವಕಪ್ಗೆ (FIFA World Cup 2026) ಅದ್ಧೂರಿ ತೆರೆಬಿದ್ದಿದೆ. ನ್ಯೂಜೆರ್ಸಿಯಲ್ಲಿ ನಡೆದ ಈ ಪ್ರಶಸ್ತಿ ಪಂದ್ಯದಲ್ಲಿ, ಸ್ಪೇನ್ ಹಾಲಿ ಚಾಂಪಿಯನ್ ಅರ್ಜೆಂಟೀನಾವನ್ನು (Spain vs Argentina) 1-0 ಗೋಲುಗಳಿಂದ ಸೋಲಿಸಿ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಈ ಮೂಲಕ ಸ್ಪೇನ್ ಎರಡನೇ ಬಾರಿಗೆ ವಿಶ್ವಕಪ್ ಗೆದ್ದ ಸಾಧನೆಯನ್ನು ಮಾಡಿತು. ತಂಡದ ಈ ಗೆಲುವನ್ನು ಸ್ಪೇನ್ನಲ್ಲಿ ಹಬ್ಬದಂತೆ ಆಚರಿಸಲಾಗುತ್ತಿದೆ. ಅಲ್ಲಿನ ನಾಗರೀಕರು ಬೀದಿಗಿಳಿದು ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ಆದರೆ ಈ ಸಂಭ್ರಮಾಚರಣೆ ದುರಂತವಾಗಿ ಮಾರ್ಪಟ್ಟಿದೆ. ಫೌಂಟೇನ್ ಬಿದ್ದು ಬಾಲಕ…