ಫಿಫಾ ವಿಶ್ವಕಪ್‌ ಸಂಭ್ರಮಾಚರಣೆಯಲ್ಲಿ ದುರಂತ: 13 ವರ್ಷದ ಬಾಲಕ ಸಾವು; ಇಬ್ಬರಿಗೆ ಗಾಯ – Kannada News | Spain Crowned 2026 FIFA World Cup Champions; Victory Celebration Ends in Tragedy

2026 ರ ಫಿಫಾ ವಿಶ್ವಕಪ್​ಗೆ (FIFA World Cup 2026) ಅದ್ಧೂರಿ ತೆರೆಬಿದ್ದಿದೆ. ನ್ಯೂಜೆರ್ಸಿಯಲ್ಲಿ ನಡೆದ ಈ ಪ್ರಶಸ್ತಿ ಪಂದ್ಯದಲ್ಲಿ, ಸ್ಪೇನ್ ಹಾಲಿ ಚಾಂಪಿಯನ್ ಅರ್ಜೆಂಟೀನಾವನ್ನು (Spain vs Argentina) 1-0 ಗೋಲುಗಳಿಂದ ಸೋಲಿಸಿ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಈ ಮೂಲಕ ಸ್ಪೇನ್ ಎರಡನೇ ಬಾರಿಗೆ ವಿಶ್ವಕಪ್ ಗೆದ್ದ ಸಾಧನೆಯನ್ನು ಮಾಡಿತು. ತಂಡದ ಈ ಗೆಲುವನ್ನು ಸ್ಪೇನ್​ನಲ್ಲಿ ಹಬ್ಬದಂತೆ ಆಚರಿಸಲಾಗುತ್ತಿದೆ. ಅಲ್ಲಿನ ನಾಗರೀಕರು ಬೀದಿಗಿಳಿದು ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ಆದರೆ ಈ ಸಂಭ್ರಮಾಚರಣೆ ದುರಂತವಾಗಿ ಮಾರ್ಪಟ್ಟಿದೆ.

ಫೌಂಟೇನ್ ಬಿದ್ದು ಬಾಲಕ ಸಾವು

ನ್ಯೂಜೆರ್ಸಿಯಲ್ಲಿ ಸ್ಪೇನ್ ತಂಡ ವಿಶ್ವಕಪ್ ಎತ್ತಿಹಿಡಿದು ಸಂಭ್ರಮಿಸುತ್ತಿದ್ದರೆ, ಇಲ್ಲಿ ಸ್ಪೇನ್ ದೇಶದ ಅಭಿಮಾನಿಗಳು ಕೂಡ ಬೀದಿಗಿಳಿದು ಸಂಭ್ರಮಿಸುತ್ತಿದ್ದರು. ಅದರಂತೆ ಪಶ್ಚಿಮ ನಗರವಾದ ಸಿಯುಡಾಡ್ ರೋಡ್ರಿಗೋದಲ್ಲಿ ವಿಜಯೋತ್ಸವದ ಸಂದರ್ಭದಲ್ಲಿ ಫೌಂಟೇನ್​ನ ಒಂದು ಭಾಗ ಕುಸಿದಿದೆ, ಈ ದುರಂತದಲ್ಲಿ 13 ವರ್ಷದ ಬಾಲಕ ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿದ್ದಾರೆ ಎಂದು ರಾಯಿಟರ್ಸ್ ವರದಿ ಮಾಡಿದೆ.

ಪೋರ್ಚುಗಲ್ ಗಡಿ ಬಳಿಯ ಸಲಾಮಾಂಕಾ ಪ್ರಾಂತ್ಯದ ಐತಿಹಾಸಿಕ ನಗರದಲ್ಲಿರುವ ಅರ್ಬೋಲ್ ಗೋರ್ಡೊ ಕಾರಂಜಿಯಲ್ಲಿ ಈ ಅವಘಡ ಸಂಭವಿಸಿದೆ. ರಾಯಿಟರ್ಸ್ ಪ್ರಕಾರ, ಫೌಂಟೆನ್ ಮೇಲಿನ ಒಂದು ಭಾಗವು ಸಂಭ್ರಮಾಚರಣೆಯಲ್ಲಿ ತೊಡಗಿದ್ದ ಜನಸಮೂಹದ ಮೇಲೆ ಬಿದ್ದಿದೆ. ಈ ಅವಘಡದಲ್ಲಿ ಹಲವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದರೆ, 13 ವರ್ಷದ ಬಾಲಕನೊಬ್ಬ ಸಾವನ್ನಪ್ಪಿದ್ದು, ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಪಂದ್ಯ ಹೀಗಿತ್ತು

120 ನಿಮಿಷಗಳ ಕಾಲ ನಡೆದ ಫೈನಲ್‌ನಲ್ಲಿ, ಬದಲಿ ಆಟಗಾರ ಫೆರಾನ್ ಟೊರೆಸ್ ಅವರ ಏಕೈಕ ಗೋಲಿನಿಂದ ಸ್ಪೇನ್ ಅರ್ಜೆಂಟೀನಾವನ್ನು 1-0 ಗೋಲುಗಳಿಂದ ಸೋಲಿಸಿತು. ಟೊರೆಸ್ 106 ನೇ ನಿಮಿಷದಲ್ಲಿ ಗೋಲು ಗಳಿಸಿ ಅರ್ಜೆಂಟೀನಾವನ್ನು ಸೋಲಿನ ದವಡೆಗೆ ತಳ್ಳಿದರು. ಆರಂಭದಿಂದಲೂ, ಈ ಫೈನಲ್‌ನಲ್ಲಿ ಸ್ಪೇನ್ ತಂಡವು ಅರ್ಜೆಂಟೀನಾ ವಿರುದ್ಧ ಮೇಲುಗೈ ಸಾಧಿಸಿತ್ತು. ಆದಾಗ್ಯೂ ಹಿಂದಿನ ಎರಡು ಪಂದ್ಯಗಳಲ್ಲಿ, ಅರ್ಜೆಂಟೀನಾ ಅಂತಿಮ ನಿಮಿಷಗಳಲ್ಲಿ ಸೋಲನ್ನು ಗೆಲುವಾಗಿ ಪರಿವರ್ತಿಸಿ, ಪಂದ್ಯದ ಮೇಲುಗೈ ಸಾಧಿಸಿತ್ತು. ಹೀಗಾಗಿ ಕೊನೆಯ ನಿಮಿಷಗಳಲ್ಲಿ ಅರ್ಜೆಂಟೀನಾ ಪುಟಿದೇಳಲಿದೆ ಎಂದು ಎಲ್ಲರೂ ಕಾದು ಕುಳಿತಿದ್ದರು. ಆದರೆ ಸ್ಪೇನ್ ವಿರುದ್ಧ ಅರ್ಜೆಂಟೀನಾದ ಯಾವ ತಂತ್ರವೂ ಫಲಕೊಡಲಿಲ್ಲ.

ವಿಶ್ವಕಪ್‌ ಸ್ವರೂಪದಲ್ಲಿ ಬದಲಾವಣೆ; 4 ತಂಡಗಳ ನಾಯಕರ ಅಸಮಾಧಾನ

ಸ್ಪೇನ್ ಗೆಲುವಿನಲ್ಲಿ ಹೀಗೊಂದು ಕಾಕತಾಳೀಯ

ಈ ಸೋಲಿನೊಂದಿಗೆ ಸತತ ಎರಡನೇ ಮತ್ತು ಒಟ್ಟಾರೆಯಾಗಿ ನಾಲ್ಕನೇ ಬಾರಿಗೆ ಪ್ರಶಸ್ತಿ ಗೆಲ್ಲುವ ಅರ್ಜೆಂಟೀನಾದ ಕನಸು ಭಗ್ನವಾಯಿತು. ಹಾಗೆಯೇ ಮೆಸ್ಸಿಯ ಮತ್ತೊಂದು ವಿಶ್ವಕಪ್ ಟ್ರೋಫಿಯೊಂದಿಗೆ ನಿವೃತ್ತಿ ಹೊಂದುವ ಕನಸು ಕೂಡ ನನಸಾಗಲಿಲ್ಲ. ಇತ್ತ ಸ್ಪೇನ್ ಎರಡನೇ ಬಾರಿಗೆ ಟ್ರೋಫಿಯನ್ನು ಗೆದ್ದುಕೊಂಡಿತು. ಪ್ರಾಸಂಗಿಕವಾಗಿ, 2010 ರಲ್ಲಿ ಕೊನೆಯ ಬಾರಿಗೆ ಸ್ಪೇನ್ ಟ್ರೋಫಿಯನ್ನು ಎತ್ತಿಹಿಡಿದಾಗ, ಪಂದ್ಯದ ಏಕೈಕ ಗೋಲು ಹೆಚ್ಚುವರಿ ಸಮಯದಲ್ಲಿ ಗಳಿಸಲ್ಪಟ್ಟಿತು, ಇದರಿಂದಾಗಿ ಸ್ಪೇನ್ ಚಾಂಪಿಯನ್ ಆಗಿತ್ತು. ಅಲ್ಲದೆ, ಆ ಸಮಯದಲ್ಲಿ, ತಂಡವು ವಿಶ್ವಕಪ್ ಗೆಲ್ಲುವ ಎರಡು ವರ್ಷಗಳ ಮೊದಲು ಯುರೋ ಕಪ್ ಕೂಡ ಗೆದ್ದಿತ್ತು. ಈ ಬಾರಿಯೂ, ತಂಡವು ಹೆಚ್ಚುವರಿ ಸಮಯದಲ್ಲಿ ಗೋಲು ದಾಖಲಿಸಿ ಚಾಂಪಿಯನ್ ಆಯಿತ್ತಲ್ಲದೆ, ತಂಡವು ಕೇವಲ ಎರಡು ವರ್ಷಗಳ ಹಿಂದೆ ಅಂದರೆ 2024 ರಲ್ಲಿ ಯುರೋ ಕಪ್ ಕೂಡ ಗೆದ್ದಿತ್ತು.

Source link

ಸಂಸತ್​ನಲ್ಲಿ ತಮ್ಮನ್ನು ಹೊಗಳಿದ ಪ್ರಧಾನಿಗೆ ಸ್ಕೈರೂಟ್ ಏರೋಸ್ಪೇಸ್ ಧನ್ಯವಾದ – Kannada News | Skyroot Aerospace thanks PM Narendra Modi for recognizing the achievement of rocket launch

ಸ್ಕೈರೂಟ್ ಏರೋಸ್ಪೇಸ್ ತಂಡImage Credit source: PTI

ಹೈದರಾಬಾದ್, ಜುಲೈ 20: ಖಾಸಗಿ ಬಾಹ್ಯಾಕಾಶ ಸ್ಟಾರ್ಟ್‌ಅಪ್ ‘ಸ್ಕೈರೂಟ್ ಏರೋಸ್ಪೇಸ್’ (Skyroot Aerospace) ತನ್ನ ‘ವಿಕ್ರಮ್-1’ (Vikram-1) ರಾಕೆಟ್‌ನ ಯಶಸ್ವಿ ಉಡಾವಣೆಯ ಮೂಲಕ ಐತಿಹಾಸಿಕ ಮೈಲಿಗಲ್ಲು ಸ್ಥಾಪಿಸಿದೆ. ಈ ಸಾಧನೆಯನ್ನು ಸಂಸತ್ತಿನ ಅಧಿವೇಶನದ ಆರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮುಕ್ತಕಂಠದಿಂದ ಪ್ರಶಂಸಿಸಿದ್ದಾರೆ. ಪ್ರಧಾನಿಯವರಿಂದ ಸಂಸತ್ತಿನಲ್ಲಿ ತಮ್ಮ ತಂಡದ ಸಾಧನೆಗೆ ಸಿಕ್ಕ ಮನ್ನಣೆಗೆ ಸ್ಕೈರೂಟ್ ಸಂಸ್ಥೆಯು ಹರ್ಷ ವ್ಯಕ್ತಪಡಿಸಿದ್ದು, “ನಾವು ಭಾರತದಿಂದ ಜಗತ್ತಿಗಾಗಿ ಹೊಸ ಆವಿಷ್ಕಾರಗಳನ್ನು ಮುಂದುವರಿಸುತ್ತೇವೆ” ಎಂದು ಧನ್ಯವಾದ ಅರ್ಪಿಸಿದೆ.

‘ಸಂಸತ್ತಿನ ಮೊದಲ ಮುಂಗಾರು ಅಧಿವೇಶನ ದಿನದಂದು ಪ್ರಧಾನಿ ಮೋದಿ ಅವರು ಸ್ಕೈರೂಟ್ ತಂಡದ ಬಗ್ಗೆ ಮಾತನಾಡಿದ್ದು ಬಹಳ ಸಂತೋಷದ ಸಂಗತಿ. ನಮ್ಮ ತಂಡದ ಸರಾಸರಿ ವಯಸ್ಸು ಅವರು ಹೇಳಿದಂತೆ ಕೇವಲ 28 ವರ್ಷ. ಭಾರತೀಯ ಎಂಜಿನಿಯರುಗಳಿಗೆ ಮಹತ್ವಾಕಾಂಕ್ಷೆಯೊಂದಿಗೆ ಅವಕಾಶ ಸಿಕ್ಕರೆ ಏನು ಸಾಧಿಸಬಹುದು ಎನ್ನುವುದಕ್ಕೆ ಇದು ಕನ್ನಡಿ ಹಿಡಿದಿದೆ. ನಾವು ಭಾರತದಿಂದ ವಿಶ್ವಕ್ಕಾಗಿ ನಿರ್ಮಿಸುವುದನ್ನು ಮುಂದುವರಿಸುತ್ತೇವೆ’ ಎಂದು ಸ್ಕೈರೂಟ್ ಏರೋಸ್ಪೇಸ್​ನ ಎಕ್ಸ್ ಪೋಸ್ಟ್​ನಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ಬಾಹ್ಯಾಕಾಶ ವಲಯದಲ್ಲಿ ಭಾರತದ ಹೊಸ ಸೂರ್ಯೋದಯ:ದೇಶದ ಮೊದಲ ಖಾಸಗಿ ರಾಕೆಟ್ ‘ವಿಕ್ರಮ್-1’ ಉಡಾವಣೆ

ಹಲವು ಉದ್ಯಮಿಗಳು, ರಾಜಕಾರಣಿಗಳು, ಸಚಿವರು, ಸಿನಿಮಾ ನಟರು, ವಿಚಾರವಾದಿಗಳು ಹೀಗೆ ಸಮಾಜದ ವಿವಿಧ ವರ್ಗಗಳ ನಾಯಕರು ಸ್ಕೈರೂಟ್ ಸಾಧನೆಯನ್ನು ಕೊಂಡಾಡಿದ್ದಾರೆ, ಅಭಿನಂದಿಸಿದ್ದಾರೆ. ಈ ಎಲ್ಲರಿಗೂ ಸ್ಕೈರೂಟ್ ಸಂಸ್ಥೆ ಧನ್ಯವಾದ ಹೇಳಿದೆ.

ಪ್ರಧಾನಿ ಮೋದಿಗೆ ಸ್ಕೈರೂಟ್ ಧನ್ಯವಾದ

ಸ್ಕೈರೂಟ್ ಸಾಧನೆ ಬಗ್ಗೆ ಪ್ರಧಾನಿ ಮೋದಿ ಪ್ರಶಂಸಿಸಿದ್ದೇನು?

ಸಂಸತ್ತಿನ ಮಳೆಗಾಲದ ಅಧಿವೇಶನದ ಮುನ್ನ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಸ್ಕೈರೂಟ್ ಸಂಸ್ಥೆಯ ಯುವ ವಿಜ್ಞಾನಿಗಳ ಸಾಧನೆಯನ್ನು ಕೊಂಡಾಡಿದರು. “ಸ್ಕೈರೂಟ್ ಸ್ಟಾರ್ಟ್‌ಅಪ್‌ನ ತಂಡದ ಸರಾಸರಿ ವಯಸ್ಸು ಕೇವಲ 28 ವರ್ಷಗಳು. ಇಂತಹ ಯುವಕರು ಬಾಹ್ಯಾಕಾಶದಲ್ಲಿ ಭಾರತದ ಧ್ವಜವನ್ನು ಹಾರಿಸಿದ್ದಾರೆ… ಖಾಸಗಿ ಕ್ಷೇತ್ರದಿಂದ ಇಂತಹ ದೊಡ್ಡ ಸಾಧನೆ ಮಾಡಿರುವ ಬೆರಳೆಣಿಕೆಯಷ್ಟು ದೇಶಗಳಲ್ಲಿ ಭಾರತವೂ ಒಂದಾಗಿದ್ದು, ಇದು ದೇಶದ ಯುವಜನತೆಯ ಅಪಾರ ಸಾಮರ್ಥ್ಯವನ್ನು ತೋರಿಸುತ್ತದೆ” ಎಂದರು.

ಇದನ್ನೂ ನೋಡಿ: ಸಂಸತ್ ಮುಂಗಾರು ಅಧಿವೇಶನ: ಯುವಶಕ್ತಿ, ಬಾಹ್ಯಾಕಾಶ ಸಾಧನೆ, ದೇಶದ ಆರ್ಥಿಕ ಪ್ರಗತಿ ಶ್ಲಾಘಿಸಿದ ಪ್ರಧಾನಿ ಮೋದಿ

ಖಾಸಗಿ ರಾಕೆಟ್ ಹಾರಿಸಿದ ಮೂರನೇ ದೇಶ ಭಾರತ

ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಗೊಂಡ ‘ವಿಕ್ರಮ್-1’ ರಾಕೆಟ್ ಯಶಸ್ವಿಯಾಗಿ ಕಕ್ಷೆಯನ್ನು ತಲುಪಿದೆ. ಈ ರಾಕೆಟ್ ವಿವಿಧ ಉಪಗ್ರಹಗಳನ್ನು ಕಕ್ಷೆಗೆ ಹೊತ್ತೊಯ್ದಿದೆ. ಇದರೊಂದಿಗೆ ಅಮೆರಿಕ ಮತ್ತು ಚೀನಾದ ನಂತರ ಖಾಸಗಿ ವಲಯದಿಂದ ಕಕ್ಷೆಗೆ ಉಪಗ್ರಹ/ರಾಕೆಟ್ ಕಳುಹಿಸಿದ ವಿಶ್ವದ ಮೂರನೇ ದೇಶ ಎಂಬ ಹೆಗ್ಗಳಿಗೆ ಭಾರತ ಪಾತ್ರವಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಮನೆ ಮನೆಗೆ ಶಾಶ್ವತ ನಿವಾಸ ಪ್ರಮಾಣ ಪತ್ರ ವಿತರಣೆಗೆ ಚಾಲನೆ: SIR ವೇಳೆ ಇದನ್ನು ಮಾನ್ಯ ದಾಖಲೆಯಾಗಿ ಪರಿಣಗಣಿಸಲಾಗುತ್ತದೆಯೇ? – Kannada News | Doorstep Delivery of Permanent Residence Certificate Launched: Will PRC be Accepted as Valid Document for SIR?

ಮನೆ ಮನೆಗೆ ಶಾಶ್ವತ ನಿವಾಸ ಪ್ರಮಾಣ ಪತ್ರ ವಿತರಣೆಗೆ ಚಾಲನೆImage Credit source: DK Shivakumar X Account

ಬೆಂಗಳೂರು, ಜುಲೈ 20: ಮನೆ ಮನೆಗೆ ಜಾತಿ‌ ಪ್ರಮಾಣ ಪತ್ರ ವಿತರಣೆ ಮತ್ತು ಶಾಶ್ವತ ನಿವಾಸ ಪ್ರಮಾಣ ಪತ್ರ ವಿತರಣೆಗೆ ಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಡಿಸಿಎಂ ಡಾ.ಜಿ. ಪರಮೇಶ್ವರ್ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಚಾಲನೆ ನೀಡಿದ್ದಾರೆ. ಬಿಜೆಪಿ ವಿರೋಧದ ನಡುವೆಯೂ ಶಾಶ್ವತ ನಿವಾಸ ಪತ್ರ ವಿತರಣೆಗೆ ಚಾಲನೆ ನೀಡಲಾಗಿದ್ದು, 4.85 ಕೋಟಿ ಕುಟುಂಬಗಳಿಗೆ ಇದರ ಪ್ರಯೋಜನ ದೊರೆಯಲಿದೆ. ದೇಶದಲ್ಲಿ ಯಾವ ಸರ್ಕಾರವೂ ಮಾಡದ ಕೆಲಸವನ್ನು ನಾವು ಮಾಡಿದ್ದೇವೆ ಎಂದು ಸಿಎಂ ತಿಳಿಸಿದ್ದಾರೆ.

ಶಾಶ್ವತ ನಿವಾಸ ಪ್ರಮಾಣ ಪತ್ರ ಪಡೆಯೋದೇಗೆ?

ಮನೆ-ಮನೆಗೆ ವಿತರಣೆ

ಒಟ್ಟು 4.85 ಕೋಟಿ ಡಿಜಿಟಲ್ ಜಾತಿ ಪ್ರಮಾಣ ಪತ್ರಗಳನ್ನು ಗ್ರಾಮವಾರು ವಿಂಗಡಿಸಿ PDF ರೂಪದಲ್ಲಿ ಜಿಲ್ಲಾಧಿಕಾರಿಗಳಿಗೆ ಒದಗಿಸಲಾಗಿದೆ. ಈ ಪ್ರತಿಗಳನ್ನು ಮುದ್ರಿಸಿ ಸಾರ್ವಜನಿಕರ ಮನೆ ಬಾಗಿಲಿಗೆ ತಲುಪಿಸಲಾಗುತ್ತಿದೆ. ಪ್ರಮಾಣ ಪತ್ರ ವಿತರಿಸಿದ ಬಳಿಕ, ವಿತರಕರು ಮೊಬೈಲ್ ಸಂಖ್ಯೆಯನ್ನು ದಾಖಲಿಸಿ, ಆಪ್ ಮೂಲಕ ಒಟ್ಟು ವಿತರಣೆಯ ವಿವರಗಳನ್ನು ದಾಖಲಿಸುತ್ತಾರೆ.

ಇದನ್ನೂ ಓದಿ: ‘ಅಕ್ರಮ ವಲಸಿಗರಿಗೆ ಮಣೆ, ಭದ್ರತೆಗೆ ಧಕ್ಕೆ’; ಕರ್ನಾಟಕ ಶಾಶ್ವತ ನಿವಾಸಿ ಪ್ರಮಾಣ ಪತ್ರಕ್ಕೆ ತಡೆನೀಡಲು ಅಮಿತ್ ಶಾಗೆ ಶೋಭಾ ಪತ್ರ

ವೆಬ್​​ಸೈಟ್​​ ಮೂಲಕ ಉಚಿತ ಡೌನ್‌ ಲೋಡ್

ಸಾರ್ವಜನಿಕರು ತಮ್ಮ ಜಾತಿ ಪ್ರಮಾಣ ಪತ್ರವನ್ನು ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಲು ವಿಶೇಷ ವೆಬ್‌ಸೈಟ್ ಅಭಿವೃದ್ಧಿಪಡಿಸಲಾಗಿದೆ. ಆರ್.ಡಿ. ಸಂಖ್ಯೆ, ರೇಷನ್ ಕಾರ್ಡ್ ಸಂಖ್ಯೆ ಅಥವಾ ಆಧಾ‌ರ್ ಸಂಖ್ಯೆಯನ್ನು ನಮೂದಿಸುವ ಮೂಲಕ ಪ್ರಮಾಣ ಪತ್ರವನ್ನು ಪಡೆಯಬಹುದು. https://nadakacheri.karnataka.gov.in/AJSKCertificates ಎಂಬುದು ವೆಬ್‌ಸೈಟ್ URL ಆಗಿದೆ.

ಹೋಬಳಿ ಮಟ್ಟದಲ್ಲಿ ಸಹಾಯ ಕೇಂದ್ರಗಳು

ಜಾತಿ ಪ್ರಮಾಣ ಪತ್ರವನ್ನು ಸಾರ್ವಜನಿಕರು ಸುಲಭವಾಗಿ ಡೌನ್ ಲೋಡ್ ಮಾಡಿಕೊಂಡು ಮುದ್ರಿಸಿಕೊಳ್ಳಲು ಪ್ರತಿ ಹೋಬಳಿ ಮಟ್ಟದಲ್ಲಿ ಸಹಾಯ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಈ ಕೇಂದ್ರಗಳಲ್ಲಿ ಜಾತಿ ಪ್ರಮಾಣ ಪತ್ರ ದಾಖಲೆಗಳ ಮುದ್ರಣವನ್ನು ಸಾರ್ವಜನಿಕರಿಗೆ ಸಂಪೂರ್ಣ ಉಚಿತವಾಗಿ ಒದಗಿಸಲಾಗುವುದು.

ವಾಟ್ಸ್​​ಆ್ಯಪ್​​/ ಎಸ್‌ಎಂಎಸ್ ಮೂಲಕ ಮಾಹಿತಿ

ಸುಮಾರು 85 ಲಕ್ಷ ಜಾತಿ ಪ್ರಮಾಣ ಪತ್ರಗಳನ್ನು ಈಗಾಗಲೇ ಮೊಬೈಲ್ ಸಂಖ್ಯೆಗಳೊಂದಿಗೆ ಲಿಂಕ್ ಮಾಡಲಾಗಿದ್ದು ಸಂಬಂಧಿತ ಫಲಾನುಭವಿಗಳಿಗೆ ವಾಟ್ಸ್​​ಆ್ಯಪ್ಅಥವಾ SMS ಮೂಲಕ ಡೌನ್‌ಲೋಡ್ ಲಿಂಕ್ ಕಳುಹಿಸಲಾಗಿದೆ. ಇದರ ಮೂಲಕ ಅವರು ತಮ್ಮ ಜಾತಿ ಪ್ರಮಾಣ ಪತ್ರಗಳನ್ನು ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.

ಶಾಶ್ವತ ನಿವಾಸ ಪ್ರಮಾಣ ಪತ್ರದ ಸೇವೆಯನ್ನು ಸರ್ಕಾರವು ಆದ್ಯತೆಯ ಮೇರೆ ಆರಂಭಿಸಿದ್ದು, ಸಾರ್ವಜನಿಕರು ಅವಶ್ಯಕತೆಗೆ ತಕ್ಕಂತೆ ಶಾಶ್ವತ ಪ್ರಮಾಣ ಪತ್ರ ಪಡೆಯಲು ಹತ್ತಿರದ ನಾಡಕಚೇರಿಯಲ್ಲಿ ಅಥವಾ ಆನ್ಸೆನ್ ಮುಖಾಂತರ ಸಲ್ಲಿಸಬಹುದು ಎಂದು ತಿಳಿಸಲಾಗಿದೆ.

ಸಾಮಾನ್ಯವಾಗಿ ಕೇಳಲಾಗುವ ಪ್ರಶ್ನೆಗಳು, ಉತ್ತರಗಳು (FAQ’s)

ಪ್ರಶ್ನೆ: ಶಾಶ್ವತ ನಿವಾಸ ಪ್ರಮಾಣಪತ್ರ ಪಡೆಯಲು ಅರ್ಜಿ ಸಲ್ಲಿಸೋದು ಹೇಗೆ?

ಉತ್ತರ: ಅರ್ಹ ಅರ್ಜಿದಾರರು ಸೇವಾ ಸಿಂಧು ಪೋರ್ಟಲ್‌, ಅಟಲ್‌ ಜನಸ್ನೇಹಿ ಕೆಂದ್ರ (ಎಜೆಎಸ್‌ಕೆ) ಪೋರ್ಟಲ್‌ ಅಥವಾ ಸರ್ಕಾರ ಕಾಲಕಾಲಕ್ಕೆ ಅಧಿಸೂಚಿಸುವ ಇತರೆ ಪೋರ್ಟಲ್‌ ಮೂಲಕ ಅರ್ಜಿ ಸಲ್ಲಿಸಬಹುದು.

ಪ್ರಶ್ನೆ: ಪರ್ಮನೆಂಟ್​​ ರೆಸಿಡೆನ್ಸ್​​ ಸರ್ಟಿಫಿಕೇಟ್​​ ಪಡೆಯಲು ಇರುವ ಮಾನದಂಡಗಳು ಏನು?

ಉತ್ತರ: ಕರ್ನಾಟಕದಲ್ಲಿ 10 ವರ್ಷಗಳ ವಾಸ, ರಾಜ್ಯದಲ್ಲಿ 10 ವರ್ಷಗಳ ಶಿಕ್ಷಣ ಅಥವಾ ರಾಜ್ಯದಲ್ಲಿ ಸ್ಥಿರ ಆಸ್ತಿ ಹೊಂದಿರಬೇಕು. ಈ ಅಂಶಗಳನ್ನು ಸಾಬೀತುಪಡಿಸಲು ಆಧಾರ್ ಕಾರ್ಡ್, ಪಡಿತರ ಚೀಟಿ, ಕಂದಾಯ ದಾಖಲೆಗಳು, ಮತದಾರರ ಪಟ್ಟಿ ಸೇರಿದಂತೆ ವಿವಿಧ ದಾಖಲೆಗಳನ್ನು ಸಲ್ಲಿಸಬಹುದು.

ಪ್ರಶ್ನೆ: ಶಾಶ್ವತ ನಿವಾಸ ಪ್ರಮಾಣಪತ್ರವನ್ನು(PRC) ಯಾವೆಲ್ಲ ಅಧಿಕಾರಿಗಳು ನೀಡಬಹುದು?

ಉತ್ತರ: ಕರ್ನಾಟಕದಲ್ಲಿ ಎಲ್ಲಾ‌ ಜಿಲ್ಲಾಧಿಕಾರಿಗಳು ಅಧಿಕೃತಗೊಳಿಸಲಾದ ತಹಶೀಲ್ದಾರ್ ಅಥವಾ ಉಪ ತಹಸೀಲ್ದಾರ್ ಅಥವಾ ಇತರೆ ಯಾವುದೇ ಅಧಿಕಾರಿ ಪ್ರಮಾಣಪತ್ರ ನೀಡುವ ಪ್ರಾಧಿಕಾರವಾಗಿರುತ್ತಾರೆ. ಸಹಾಯಕ ಆಯುಕ್ತರು (ಎಸಿ)ಮೇಲ್ಮನವಿ ಪ್ರಾಧಿಕಾರವಾಗಿದ್ದರೆ, ಜಿಲ್ಲಾಧಿಕಾರಿಗಳು ಪುನರ್ ಪರಿಶೀಲನಾ ಪ್ರಾಧಿಕಾರವಾಗಿರುತ್ತಾರೆ.

ಪ್ರಶ್ನೆ: ದೇಶದ ಎಲ್ಲೆಲ್ಲಿ ಶಾಶ್ವತ ನಿವಾಸ ಪ್ರಮಾಣಪತ್ರ ನೀಡಲಾಗುತ್ತದೆ?

ಉತ್ತರ: ಅರುಣಾಚಲ ಪ್ರದೇಶ, ಅಸ್ಸಾಂ, ಮಣಿಪುರ, ಮೇಘಾಲಯ, ಮಿಜೋರಾಂ ಮತ್ತು ತ್ರಿಪುರಾ, ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್​​ನಲ್ಲಿ ಶಾಶ್ವತ ನಿವಾಸ ಪ್ರಮಾಣಪತ್ರ ನೀಡಲಾಗುತ್ತದೆ.

ಪ್ರಶ್ನೆ: ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ ವೇಳೆ ಶಾಶ್ವತ ನಿವಾಸ ಪ್ರಮಾಣಪತ್ರ ಅರ್ಹ ದಾಖಲೆಯಾಗಿ ಮಾನ್ಯವಾಗಲಿದೆಯೇ?

ಉತ್ತರ: ಹೌದು. ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ ವೇಳೆ ಶಾಶ್ವತ ನಿವಾಸ ಪ್ರಮಾಣಪತ್ರ ಅರ್ಹ ದಾಖಲೆಯಾಗಿ ಮಾನ್ಯವಾಗಲಿದೆ. ಪಶ್ಚಿಮ ಬಂಗಾಳದಲ್ಲಿನ ಎಸ್​ಐಆರ್​​ ಪ್ರಕ್ರಿಯೆ ವೇಳೆ ಈ ಬಗ್ಗೆ ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.

ಪ್ರಶ್ನೆ: ಪರ್ಮನೆಂಟ್​​ ರೆಸಿಡೆನ್ಸ್​​ ಸರ್ಟಿಫಿಕೇಟ್​​ ಯಾವುದಕ್ಕೆಲ್ಲ ಉಪಯೋಗವಾಗುತ್ತೆ?

ಉತ್ತರ: ಪರ್ಮನೆಂಟ್​​ ರೆಸಿಡೆನ್ಸ್​​ ಸರ್ಟಿಫಿಕೇಟ್ ಕೇವಲ ಆಡಳಿತಾತ್ಮಕ ಉದ್ದೇಶದ ಪುರಾವೆಯಾಗಿದ್ದು, ಉದ್ಯೋಗ ಅಥವಾ ಭೂ ಮಂಜೂರಾತಿಯ ಮೀಸಲಾತಿಗೆ ಅನ್ವಯಿಸುವುದಿಲ್ಲ ಎಂದು ಕರ್ನಾಟಕ ಸರ್ಕಾರ ಸ್ಪಷ್ಟಪಡಿಸಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Monsoon Hair Care Tips: ಮಳೆಯಲ್ಲಿ ನೆನೆದರೆ ಕೂದಲು ಉದುರುತ್ತದೆಯೇ? ಚರ್ಮರೋಗ ತಜ್ಞರು ಹೇಳುವುದೇನು? – Kannada News | Monsoon hair care tips rain water hair fall fungal scalp infection

ಮಳೆಗಾಲದಲ್ಲಿ ಮಳೆಯಲ್ಲಿ (Rain) ನೆನೆದರೆ ಕೂದಲು ಹೆಚ್ಚು ಉದುರುತ್ತದೆ ಎಂಬ ಮಾತನ್ನು ನಾವು ಆಗಾಗ ಕೇಳುತ್ತೇವೆ. ಮಳೆನೀರು ಕೂದಲನ್ನು ದುರ್ಬಲಗೊಳಿಸುತ್ತದೆ ಎಂದು ಹಲವರು ನಂಬುತ್ತಾರೆ. ಆದರೆ ತಜ್ಞರ ಪ್ರಕಾರ, ಮಳೆನೀರು ನೇರವಾಗಿ ಕೂದಲು ಉದುರುವಿಕೆಗೆ ಕಾರಣವಾಗುವುದಿಲ್ಲ. ಬದಲಾಗಿ, ಮಳೆಯಲ್ಲಿ ನೆನೆದ ನಂತರ ಕೂದಲಿಗೆ ಸರಿಯಾದ ಆರೈಕೆ ನೀಡದಿರುವುದೇ ಪ್ರಮುಖ ಕಾರಣವಾಗಿದೆ. ಮಳೆನೀರು, ತೇವಾಂಶ ಮತ್ತು ಮಾಲಿನ್ಯದ ಪರಿಣಾಮದಿಂದ ನೆತ್ತಿ ಹಾಗೂ ಕೂದಲಿನ ಆರೋಗ್ಯದ ಮೇಲೆ ಸಮಸ್ಯೆಗಳು ಉಂಟಾಗಬಹುದು.

ಕ್ಯಾಪಿಲರ್ ಆಸ್ಪತ್ರೆಯ ತಜ್ಞರ ಪ್ರಕಾರ, ಮಳೆನೀರು ಕೂದಲು ಉದುರುವಿಕೆಗೆ ನೇರ ಕಾರಣವಲ್ಲ. ಆದರೆ ಮಳೆಯಲ್ಲಿ ನೆನೆದ ನಂತರ ಗಾಳಿಯಲ್ಲಿರುವ ಹೆಚ್ಚಿನ ತೇವಾಂಶ ಕೂದಲನ್ನು ಹೆಚ್ಚು ಹೊತ್ತು ಒದ್ದೆಯಾಗಿಯೇ ಇರಿಸುತ್ತದೆ. ಇದರಿಂದ ನೆತ್ತಿಯಲ್ಲಿ ಧೂಳು ಹಾಗೂ ಕಲ್ಮಶ ಸುಲಭವಾಗಿ ಅಂಟಿಕೊಳ್ಳುತ್ತದೆ. ಈ ಪರಿಸ್ಥಿತಿ ಕೂದಲಿನ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ.

ಚರ್ಮರೋಗ ತಜ್ಞೆ ಡಾ. ಸುರೂಚಿ ಪುರಿ ಅವರ ಪ್ರಕಾರ, ನಗರ ಪ್ರದೇಶಗಳಲ್ಲಿ ಬೀಳುವ ಮಳೆನೀರು ಸಂಪೂರ್ಣ ಶುದ್ಧವಾಗಿರುವುದಿಲ್ಲ. ಕೈಗಾರಿಕೆಗಳಿಂದ ಹೊರಬರುವ ಹೊಗೆ, ವಾಹನಗಳ ಮಾಲಿನ್ಯ ಮತ್ತು ವಾತಾವರಣದಲ್ಲಿರುವ ರಾಸಾಯನಿಕಗಳನ್ನು ಮಳೆನೀರು ಹೀರಿಕೊಳ್ಳುವುದರಿಂದ ಅದು ಹೆಚ್ಚು ಆಮ್ಲೀಯವಾಗುತ್ತದೆ. ಇಂತಹ ನೀರು ನೆತ್ತಿಯ ಪಿಎಚ್ ಸಮತೋಲನವನ್ನು ಹಾಳುಮಾಡಿ ತುರಿಕೆ, ತಲೆಹೊಟ್ಟು, ಕೂದಲು ಮುರಿಯುವುದು ಮತ್ತು ನೆತ್ತಿಯ ಕಿರಿಕಿರಿಯಂತಹ ಸಮಸ್ಯೆಗಳಿಗೆ ಕಾರಣವಾಗಬಹುದು.

ಮಳೆಗಾಲದಲ್ಲಿ ಗಾಳಿಯಲ್ಲಿರುವ ಹೆಚ್ಚಿನ ತೇವಾಂಶದಿಂದ ನೆತ್ತಿ ಹೆಚ್ಚು ಸಮಯ ಒದ್ದೆಯಾಗಿರುತ್ತದೆ. ಈ ತೇವಾಂಶ ಫಂಗಸ್ ಮತ್ತು ಬ್ಯಾಕ್ಟೀರಿಯಾಗಳು ಬೆಳೆಯಲು ಅನುಕೂಲಕರ ವಾತಾವರಣವನ್ನು ಸೃಷ್ಟಿಸುತ್ತದೆ. ಕೂದಲು ದೀರ್ಘಕಾಲ ಒದ್ದೆಯಾಗಿಯೇ ಉಳಿದರೆ ಫಂಗಲ್ ಸೋಂಕಿನ ಅಪಾಯ ಹೆಚ್ಚಾಗುತ್ತದೆ. ಇದರಿಂದ ಕೂದಲಿನ ಬೇರುಗಳು ದುರ್ಬಲಗೊಂಡು ಕೂದಲು ಉದುರುವಿಕೆ ಹೆಚ್ಚಾಗಬಹುದು. ಅಲ್ಲದೆ, ಒದ್ದೆಯಾದ ಕೂದಲು ಅತ್ಯಂತ ಸೂಕ್ಷ್ಮವಾಗಿರುವುದರಿಂದ ಅದನ್ನು ಬಿಗಿಯಾಗಿ ಕಟ್ಟುವುದು ಅಥವಾ ಬಲವಾಗಿ ಬಾಚುವುದು ಕೂದಲು ಮುರಿಯಲು ಕಾರಣವಾಗುತ್ತದೆ.

ಮಳೆಯಲ್ಲಿ ನೆನೆದ ನಂತರ ಕೆಲವು ಸರಳ ಕ್ರಮಗಳನ್ನು ಅನುಸರಿಸಿದರೆ ಕೂದಲಿನ ಆರೋಗ್ಯವನ್ನು ಕಾಪಾಡಬಹುದು. ಮನೆಗೆ ಬಂದ ಕೂಡಲೇ ಶುದ್ಧ ನೀರಿನಿಂದ ಕೂದಲನ್ನು ಚೆನ್ನಾಗಿ ತೊಳೆದು, ಮಳೆನೀರಿನಲ್ಲಿರುವ ಧೂಳು, ಮಾಲಿನ್ಯ ಮತ್ತು ಆಮ್ಲೀಯ ಅಂಶಗಳನ್ನು ತೆಗೆದುಹಾಕಬೇಕು. ನಂತರ ಸೌಮ್ಯವಾದ ಸಲ್ಫೇಟ್-ರಹಿತ ಶಾಂಪೂ ಬಳಸಿ ಕೂದಲನ್ನು ಸ್ವಚ್ಛಗೊಳಿಸುವುದು ಉತ್ತಮ.

Night Clothes Washing: ನೀವು ರಾತ್ರಿಯಲ್ಲಿ ಬಟ್ಟೆ ಒಗೆಯುತ್ತೀರಾ?, ಈ ತಪ್ಪು ನಿಮ್ಮನ್ನು ಬಡವರನ್ನಾಗಿ ಮಾಡುತ್ತವೆ!

ಕೂದಲನ್ನು ಹೆಚ್ಚು ಹೊತ್ತು ಒದ್ದೆಯಾಗಿರಲು ಬಿಡಬಾರದು. ತೊಳೆದ ಬಳಿಕ ಮೃದುವಾದ ಟವೆಲ್‌ನಿಂದ ಒರೆಸಿ ಸಂಪೂರ್ಣ ಒಣಗಿಸಬೇಕು. ಹೊರಗೆ ಹೋಗುವಾಗ ಸಾಧ್ಯವಾದರೆ ಛತ್ರಿ ಅಥವಾ ಕ್ಯಾಪ್ ಬಳಸುವುದು ಉತ್ತಮ. ಜೊತೆಗೆ, ಹೊರಗೆ ಹೋಗುವ ಮೊದಲು ಲೀವ್-ಇನ್ ಕಂಡೀಷನರ್ ಅಥವಾ ಹೇರ್ ಸೀರಮ್ ಹಚ್ಚುವುದರಿಂದ ಕೂದಲಿನ ಮೇಲೆ ರಕ್ಷಣಾತ್ಮಕ ಪದರ ನಿರ್ಮಾಣವಾಗಿ ಮಾಲಿನ್ಯ ನೇರವಾಗಿ ಕೂದಲಿನೊಳಗೆ ಪ್ರವೇಶಿಸುವುದನ್ನು ತಡೆಯಲು ಸಹಾಯವಾಗುತ್ತದೆ.

ಒಟ್ಟಾರೆ, ಮಳೆನೀರು ಮಾತ್ರ ಕೂದಲು ಉದುರುವಿಕೆಗೆ ಕಾರಣವಲ್ಲ. ಆದರೆ ಮಳೆಯಲ್ಲಿ ನೆನೆದ ನಂತರ ಸರಿಯಾದ ಕೂದಲಿನ ಆರೈಕೆ ಮಾಡದಿದ್ದರೆ ತಲೆಹೊಟ್ಟು, ಫಂಗಲ್ ಸೋಂಕು ಮತ್ತು ಕೂದಲು ಉದುರುವಿಕೆಯಂತಹ ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆ ಇದೆ. ಆದ್ದರಿಂದ ಮಳೆಗಾಲದಲ್ಲಿ ಸ್ವಲ್ಪ ಎಚ್ಚರಿಕೆ ವಹಿಸಿ ಕೂದಲನ್ನು ಸ್ವಚ್ಛವಾಗಿ ಹಾಗೂ ಒಣಗಿರುವಂತೆ ನೋಡಿಕೊಳ್ಳುವುದು ಅತ್ಯಗತ್ಯ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 3:12 pm, Mon, 20 July 26

Source link

Kitchen Tips: ಫ್ರಿಜ್‌ನಲ್ಲಿಟ್ಟರೂ ಹಸಿ ಮೆಣಸಿನಕಾಯಿ ಬೇಗ ಹಾಳಾಗುತ್ತಿದೆಯೇ? ಈ ಸುಲಭ ಟ್ರಿಕ್ ಅನುಸರಿಸಿ – Kannada News | How to store green chillies in fridge to keep fresh longer

ಅಡುಗೆಮನೆಯಲ್ಲಿ ಹಸಿ ಮೆಣಸಿನಕಾಯಿ (Green Chilli) ಪ್ರತಿದಿನ ಬಳಸುವ ಪ್ರಮುಖ ಪದಾರ್ಥಗಳಲ್ಲಿ ಒಂದಾಗಿದೆ. ಆದರೆ ಒಮ್ಮೆ ಹೆಚ್ಚು ಪ್ರಮಾಣದಲ್ಲಿ ಖರೀದಿಸಿ ಫ್ರಿಜ್‌ನಲ್ಲಿ ಇಟ್ಟರೂ ಕೆಲವೇ ದಿನಗಳಲ್ಲಿ ಅದು ಮೆತ್ತಗಾಗಿ, ಕಪ್ಪಾಗಲು ಅಥವಾ ಕೊಳೆಯಲು ಆರಂಭಿಸುತ್ತದೆ. ಇದರಿಂದ ಅನೇಕರು ಮೆಣಸಿನಕಾಯಿಯನ್ನು ಆಗಾಗ ಖರೀದಿಸಬೇಕಾಗುತ್ತದೆ. ಆದರೆ ಕೆಲವು ಸರಳ ವಿಧಾನಗಳನ್ನು ಅನುಸರಿಸಿದರೆ ಹಸಿ ಮೆಣಸಿನಕಾಯಿಯನ್ನು ಹೆಚ್ಚು ದಿನ ತಾಜಾವಾಗಿ ಇಟ್ಟುಕೊಳ್ಳಬಹುದು.

ಮೊದಲು, ಮಾರುಕಟ್ಟೆಯಿಂದ ತಂದ ತಕ್ಷಣ ಮೆಣಸಿನಕಾಯಿಯನ್ನು ತೊಳೆಯಬೇಡಿ. ಅದರ ಮೇಲೆ ಉಳಿದಿರುವ ತೇವಾಂಶ ಕೊಳೆಯುವ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ. ಬಳಸುವ ಸಮಯದಲ್ಲಿ ಮಾತ್ರ ತೊಳೆದು ಬಳಸುವುದು ಉತ್ತಮ. ಮೆಣಸಿನಕಾಯಿ ಸಂಪೂರ್ಣ ಒಣವಾಗಿರುವಾಗಲೇ ಸಂಗ್ರಹಿಸಬೇಕು.

ಮೆಣಸಿನಕಾಯಿಯ ತೊಟ್ಟು (ಕಾಂಡ) ತೆಗೆದು ಸಂಗ್ರಹಿಸಿದರೆ ಅದು ಹೆಚ್ಚು ದಿನ ತಾಜಾವಾಗಿರುತ್ತದೆ. ಕಾಂಡದ ಭಾಗದಿಂದ ತೇವಾಂಶ ಒಳನುಗ್ಗುವ ಸಾಧ್ಯತೆ ಹೆಚ್ಚು. ಆದ್ದರಿಂದ ಸಂಗ್ರಹಿಸುವ ಮೊದಲು ತೊಟ್ಟುಗಳನ್ನು ನಿಧಾನವಾಗಿ ತೆಗೆದುಹಾಕುವುದು ಉತ್ತಮ.

ನಂತರ ಮೆಣಸಿನಕಾಯಿಯನ್ನು ಟಿಷ್ಯೂ ಪೇಪರ್ ಅಥವಾ ಕಿಚನ್ ಟವೆಲ್‌ನಲ್ಲಿ ಸುತ್ತಿ ಗಾಳಿಯಾಡದ ಡಬ್ಬಿ ಅಥವಾ ಜಿಪ್-ಲಾಕ್ ಬ್ಯಾಗ್‌ನಲ್ಲಿ ಇಟ್ಟು ಫ್ರಿಜ್‌ನ ತರಕಾರಿ ವಿಭಾಗದಲ್ಲಿ ಇರಿಸಿ. ಟಿಷ್ಯೂ ಹೆಚ್ಚುವರಿ ತೇವಾಂಶವನ್ನು ಹೀರಿಕೊಳ್ಳುವುದರಿಂದ ಮೆಣಸಿನಕಾಯಿ ಬೇಗ ಹಾಳಾಗುವುದನ್ನು ತಡೆಯುತ್ತದೆ. ಟಿಷ್ಯೂ ಒದ್ದೆಯಾದರೆ ಅದನ್ನು ಬದಲಾಯಿಸುತ್ತಿರಬೇಕು.

Monsoon Hair Care Tips: ಮಳೆಯಲ್ಲಿ ನೆನೆದರೆ ಕೂದಲು ಉದುರುತ್ತದೆಯೇ? ಚರ್ಮರೋಗ ತಜ್ಞರು ಹೇಳುವುದೇನು?

ಮೆಣಸಿನಕಾಯಿಯನ್ನು ಪ್ಲಾಸ್ಟಿಕ್ ಕವರ್‌ನಲ್ಲಿ ಗಾಳಿ ಸಿಲುಕುವಂತೆ ಇಡುವುದನ್ನು ತಪ್ಪಿಸಿ. ಇದರಿಂದ ಒಳಗೆ ನೀರಿನ ಹನಿಗಳು ರೂಪುಗೊಂಡು ಕೊಳೆಯುವ ಸಾಧ್ಯತೆ ಹೆಚ್ಚಾಗುತ್ತದೆ. ಸಾಧ್ಯವಾದರೆ ಸಣ್ಣ ಗಾಳಿಯಾಡುವ ರಂಧ್ರಗಳಿರುವ ಡಬ್ಬಿ ಅಥವಾ ಸ್ವಲ್ಪ ತೆರೆದಿರುವ ಸಂಗ್ರಹ ಪೆಟ್ಟಿಗೆಯನ್ನು ಬಳಸಬಹುದು.

ಮೆಣಸಿನಕಾಯಿಯನ್ನು ಈ ರೀತಿಯಲ್ಲಿ ಸರಿಯಾಗಿ ಸಂಗ್ರಹಿಸಿದರೆ ಅದು ಸುಮಾರು ಎರಡು ರಿಂದ ಮೂರು ವಾರಗಳವರೆಗೆ ತಾಜಾವಾಗಿ ಉಳಿಯುವ ಸಾಧ್ಯತೆ ಇದೆ. ಇದರಿಂದ ಆಹಾರದ ವ್ಯರ್ಥವೂ ಕಡಿಮೆಯಾಗುತ್ತದೆ ಮತ್ತು ಪ್ರತಿಸಾರಿ ಹೊಸದಾಗಿ ಖರೀದಿಸುವ ಅಗತ್ಯವೂ ಇರುವುದಿಲ್ಲ. ಸರಿಯಾದ ಸಂಗ್ರಹ ವಿಧಾನವನ್ನು ಅನುಸರಿಸಿದರೆ ಹಸಿ ಮೆಣಸಿನಕಾಯಿಯ ರುಚಿ, ಬಣ್ಣ ಮತ್ತು ತಾಜಾತನವನ್ನು ಹೆಚ್ಚು ದಿನ ಕಾಪಾಡಿಕೊಳ್ಳಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವರ್ಕ್ ಫ್ರಮ್ ಹೋಮ್ ಆಮಿಷ: ಕೋಲಾರದಲ್ಲಿ ಊದುಬತ್ತಿ ಕಂಪನಿಯಿಂದ 10 ಕೋಟಿ ರೂ ವಂಚನೆ! – Kannada News | Shri Kalikadevi Enterprises 10 Crore Work From Home Packing Scam Exposed

ಕೋಲಾರ, ಜುಲೈ 20: ಮನೆಯಲ್ಲೇ ಕುಳಿತು ಬಿಡುವಿನ ವೇಳೆಯಲ್ಲಿ ಊದುಬತ್ತಿ ಹಾಗೂ ಕರ್ಪೂರ ಪ್ಯಾಕ್ ಮಾಡುವ ಕೆಲಸ (work from home) ಮತ್ತು ಆಕರ್ಷಕ ಸಂಬಳ ನೀಡುವುದಾಗಿ ನಂಬಿಸಿ, ಸಾರ್ವಜನಿಕರಿಂದ ಕೋಟ್ಯಂತರ ರೂ ಹೂಡಿಕೆ ಮಾಡಿಸಿಕೊಂಡಿದ್ದ ಕಂಪನಿಯೊಂದು ಇದೀಗ ವಂಚನೆ (fraud) ಮಾಡಿರುವ ಗಂಭೀರ ಆರೋಪ ಕೇಳಿಬಂದಿದೆ. ಕೋಲಾರ ನಗರದ ಪಾಲಸಂದ್ರ ಬಡಾವಣೆಯ 4ನೇ ಕ್ರಾಸ್‌ನಲ್ಲಿ ಕಳೆದ ಒಂದು ವರ್ಷದ ಹಿಂದೆ ಆರಂಭವಾಗಿದ್ದ ‘ಶ್ರೀ ಕಾಳಿಕಾದೇವಿ ಎಂಟರ್‌ಪ್ರೈಸಸ್’ ಎಂಬ ಸಂಸ್ಥೆಯೇ ವಂಚನೆ ಎಸಗಿರುವ ಕಂಪನಿ.

ನಡೆದಿದ್ದೇನು?

ಈ ಕಂಪನಿಯು ವಿವಿಧ ಬ್ರಾಂಡ್‌ಗಳ ಊದುಬತ್ತಿ, ಕರ್ಪೂರ, ಪೇಪರ್ ಪ್ಲೇಟ್ ಹಾಗೂ ಪೇಪರ್ ಕಪ್‌ಗಳಂತಹ ಸಲಕರಣೆಗಳನ್ನು ಪ್ಯಾಕ್ ಮಾಡಲು ನೀಡುವುದಾಗಿ ಹೇಳಿ, ಆ ವಸ್ತುಗಳ ಸುರಕ್ಷತಾ ಠೇವಣಿ (ಸೆಕ್ಯೂರಿಟಿ ಡೆಪಾಸಿಟ್) ಹೆಸರಿನಲ್ಲಿ ಸಾರ್ವಜನಿಕರಿಂದ ಲಕ್ಷಾಂತರ ರೂ ಹಣವನ್ನು ಪಡೆದುಕೊಂಡಿತ್ತು. ಒಂದು ಲಕ್ಷ ರೂ ಹೂಡಿಕೆ ಮಾಡಿದರೆ ಇಂತಿಷ್ಟು ಸಾವಿರ ಸಂಬಳ ನೀಡುವುದಾಗಿ ಆಮಿಷ ಒಡ್ಡಲಾಗಿತ್ತು.

ಇದನ್ನೂ ಓದಿ: ನಿರ್ಮಲಾ ಸೀತಾರಾಮನ್ ಡೀಪ್‌ಫೇಕ್ ವಿಡಿಯೊ ನಂಬಿ 6.88 ಲಕ್ಷ ರೂ. ಕಳೆದುಕೊಂಡ ವ್ಯಕ್ತಿ! ನಕಲಿ ಹೂಡಿಕೆ ಜಾಹೀರಾತುಗಳ ಬಗ್ಗೆ ಎಚ್ಚರ

ಇದನ್ನು ನಂಬಿದ ಕೋಲಾರ ಜಿಲ್ಲೆಯ ಜನರು ಒಬ್ಬೊಬ್ಬರಾಗಿ 1 ಲಕ್ಷದಿಂದ ಹಿಡಿದು 30 ಲಕ್ಷ ರೂ.ವರೆಗೆ ಬಂಡವಾಳ ಹೂಡಿದ್ದಾರೆ. ಕೋಲಾರ ಮಾತ್ರವಲ್ಲದೆ ಬಂಗಾರಪೇಟೆ ತಾಲೂಕಿನ ಬೂದಿಕೋಟೆ, ಮಾಲೂರು ಪಟ್ಟಣ ಸೇರಿದಂತೆ ಜಿಲ್ಲೆಯ ವಿವಿಧೆಡೆ ಶಾಖೆಗಳನ್ನು ತೆರೆದು, ಸುಮಾರು 2 ರಿಂದ 3 ಸಾವಿರ ಜನರಿಂದ ಅಂದಾಜು 10 ಕೋಟಿ ರೂಪಾಯಿಗೂ ಅಧಿಕ ಹಣವನ್ನು ಸಂಗ್ರಹಿಸಲಾಗಿದೆ ಎಂದು ಸಂತ್ರಸ್ತರು ಆರೋಪಿಸಿದ್ದಾರೆ.

ಜನರು ಆಕ್ರೋಶ 

ಆರಂಭದ ಒಂದು ವರ್ಷದ ಅವಧಿಯಲ್ಲಿ ಹೂಡಿಕೆಗೆ ತಕ್ಕಂತೆ ಕಂಪನಿಯು ಸಂಬಳವನ್ನು ನೀಡುತ್ತಾ ಬಂದಿತ್ತಾದರೂ, ಕಳೆದ ಎರಡು ತಿಂಗಳಿಂದ ವೇತನ ನೀಡದೆ ವಿಳಂಬ ಮಾಡಿದೆ. ಇದರಿಂದ ಆತಂಕಗೊಂಡ ಹೂಡಿಕೆದಾರರು ಕಚೇರಿಗೆ ಬಂದು ವಿಚಾರಿಸಿದಾಗ ಸಿಬ್ಬಂದಿಯಿಂದ ಯಾವುದೇ ಸಮಂಜಸವಾದ ಉತ್ತರ ಸಿಕ್ಕಿಲ್ಲ. ಸದ್ಯ ಕಚೇರಿಯಲ್ಲಿ ಉತ್ತರಿಸುವವರಿಲ್ಲದೆ ಸಿಬ್ಬಂದಿ ನಾಪತ್ತೆಯಾಗಿದ್ದು, ಹಣ ಕಳೆದುಕೊಂಡ ನೂರಾರು ಅಮಾಯಕ ಜನರು ಕೈಯಲ್ಲಿ ಬಾಂಡ್ ಪೇಪರ್ ಹಿಡಿದುಕೊಂಡು ಕಚೇರಿ ಎದುರು ಜಮಾಯಿಸಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ: ಸರ್ಕಾರಿ ಕೆಲಸ ಕೊಡಿಸುವ ನೆಪದಲ್ಲಿ ವಂಚನೆ: ಟಿವಿ9 ವರದಿ ಬಳಿಕ ಆರೋಪಿಗಳ ಬಂಧನ!

ಈ ನಡುವೆ, ಕಂಪನಿಯ ವ್ಯವಸ್ಥಾಪಕಿ ರಮ್ಯಾ ಎಂಬುವರು ಕೋಲಾರ ಎಸ್ಪಿ ಹಾಗೂ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಗ್ರಾಹಕರಿಂದ ಒಂದು ವಾರ ಕಾಲಾವಕಾಶ ಕೇಳಿದ್ದಾರೆ. ಸಾರ್ವಜನಿಕರಿಂದ ಪಡೆದ ಹಣವನ್ನು ಆದಷ್ಟು ಬೇಗ ವಾಪಸ್ ನೀಡುವುದಾಗಿ ಅವರು ಭರವಸೆ ನೀಡಿದ್ದಾರೆ. ಕಷ್ಟಪಟ್ಟು ದುಡಿದ ಹಣವನ್ನು ಕಳೆದುಕೊಂಡು ಬೀದಿಗೆ ಬಿದ್ದಿರುವ ಸಾರ್ವಜನಿಕರು ಸಪ್ಪೆಮೋರೆ ಹಾಕಿಕೊಂಡು ನಿಲ್ಲುವಂತಾಗಿದ್ದು, ಪೊಲೀಸ್ ಇಲಾಖೆಯು ತಕ್ಷಣವೇ ಮಧ್ಯಪ್ರವೇಶಿಸಿ ವಂಚಕರಿಗೆ ತಕ್ಕ ಪಾಠ ಕಲಿಸಬೇಕು ಮತ್ತು ಸಂತ್ರಸ್ತರಿಗೆ ನ್ಯಾಯ ಒದಗಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಮುಖಂಡರು ಹಾಗೂ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಚನ್ನಮ್ಮ ಪಾರ್ಥಿವ ಶರೀರ ಹೊತ್ತು ತರಲು ತಯಾರಿಸಿದ ಹೂವಿನ ಪಲ್ಲಕ್ಕಿ ಹೇಗಿದೆ ನೋಡಿ

ಹಾಸನ, (ಜುಲೈ 20): ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಪತ್ನಿ ಚೆನ್ನಮ್ಮ ಅವರ ಅಂತ್ಯಕ್ರಿಯೆ
ಹೊಳೆನರಸೀಪುರ ತಾಲೂಕಿನ ಮಾವಿನಕೆರೆ ಬೆಟ್ಟದ ತಪ್ಪಲಿನ ಜಮೀನಿನಲ್ಲಿ ನಡೆಯಲಿದ್ದು, ಈಗಾಗಲೇ ಕಣ್ಣನ್ ಸ್ವಾಮಿ ನೇತೃತ್ವದಲ್ಲಿ ಅಂತಿಮ ಸಂಸ್ಕಾರದ ವಿಧಿವಿಧಾನಗಳು ಆರಂಭವಾಗಿವೆ. ಒಕ್ಕಲಿಗ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಯಲಿದ್ದು, ಸಮಾಧಿ ಸ್ಥಳದಲ್ಲಿ ಮಂತ್ರಘೋಷಗಳು ಮೊಳಗುತ್ತಿವೆ. ಇನ್ನು ಚೆನ್ನಮ್ಮನವರ ಪಾರ್ಥಿವ ಶರೀರವನ್ನು ಅಂತ್ಯಕ್ರಿಯೆ ಸ್ಥಳಕ್ಕೆ ಹೊತ್ತು ತರಲು ಹೂವಿನ ಪಲ್ಲಕಿ ಸಹ ಸಿದ್ಧವಾಗಿದೆ. ಇನ್ನು ಹೂವಿನ ಪಲ್ಲಕಿ ಹೇಗಿದೆ ಎನ್ನುವುದನ್ನು ನೋಡಿ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಕ್ಷಮಿಸಿ ಅಪ್ಪಾ, 50 ಬಾರಿ ಪ್ರಯತ್ನ ಪಟ್ರೂ ಸರ್ಕಾರಿ ಕೆಲಸ ಸಿಗ್ಲಿಲ್ಲ, ಚಿನ್ನದ ಪದಕ ವಿಜೇತ ಯುವಕ ಆತ್ಮಹತ್ಯೆ – Kannada News | Sorry Dad, UP Graduate’s Heartbreaking Message before death Sparks Discussion on Employment Challenges

ಕಾನ್ಪುರ, ಜುಲೈ 20: ಇತ್ತೀಚಿನ ದಿನಗಳಲ್ಲಿ ಇದ್ದು ಸಾಧಿಸುವುದಕ್ಕಿಂತ ಹೇಡಿಯಂತೆ ಸಾಯುವ ದಾರಿಯನ್ನು ಯುವಕರು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ಎಂಬುದು ಬೇಸರದ ಸಂಗತಿ. ಬಿಟೆಕ್​ನಲ್ಲಿ ಚಿನ್ನದ ಪದಕ ಗೆದ್ದು ಎಲ್ಲರಿಂದ ಭೇಷ್ ಎನಿಸಿಕೊಂಡಿದ್ದ ಯುವಕ ಈಗ ಸರ್ಕಾರಿ ಕೆಲಸ (Government Job)ಸಿಗಲಿಲ್ಲ ಎನ್ನುವ ಕ್ಷುಲ್ಲಕ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ.
ಮೃತನನ್ನು 23 ವರ್ಷದ ಆನಂದ್ ಕುಮಾರ್ ಎಂದು ಗುರುತಿಸಲಾಗಿದೆ. ಈತ ಕಾನ್ಪುರದ ಪ್ರಸಿದ್ಧ ಪ್ರಣವೀರ್ ಸಿಂಗ್ ಇನ್​ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನಲ್ಲಿ 2024ನೇ ಸಾಲಿನ ಬಿಟೆಕ್ ವಿಭಾಗದಲ್ಲಿ ಟಾಪರ್ ಆಗಿದ್ದ ಹಾಗೂ ಇಡೀ ಉತ್ತರ ಪ್ರದೇಶದಕ್ಕೆ 3ನೇ ರ‍್ಯಾಂಕ್ ಗಳಿಸಿದ್ದ. ಕಾಲೇಜು ಘಟಿಕೋತ್ಸವದಲ್ಲಿ ಉತ್ತರ ಪ್ರದೇಶದ ರಾಜ್ಯಪಾಲರಾದ ಆನಂದಿಬೆನ್ ಪಟೇಲ್ ಅವರ ಕೈಯಿಂದಲೇ ಈತ ಚಿನ್ನದ ಪದಕ ಪಡೆದುಕೊಂಡಿದ್ದ.

ನನ್ನನ್ನು ಕ್ಷಮಿಸಿ ಅಪ್ಪಾ: ಡೆತ್​ ನೋಟ್​ನಲ್ಲಿ ಏನಿತ್ತು?

ಗೋವಿಂದ್ ನಗರದಲ್ಲಿರುವ ತಮ್ಮ ಮೂರು ಅಂತಸ್ತಿನ ಮನೆಯಲ್ಲಿ ಆನಂದ್ ಕುಮಾರ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕುಟುಂಬಸ್ಥರು ಅಣ್ಣನ ಮದುವೆ ಮಾತುಕತೆಗಾಗಿ ಬಿಹಾರದಲ್ಲಿದ್ದಾಗ ಈ ದುರಂತ ಸಂಭವಿಸಿದೆ. ಘಟನಾ ಸ್ಥಳದಲ್ಲಿ ಪೊಲೀಸರಿಗೆ 5 ಸಾಲುಗಳ ಡೆತ್ ನೋಟ್ ಸಿಕ್ಕಿದೆ. ಕ್ಷಮಿಸಿ ಅಪ್ಪಾ, ನಾನು ಸರ್ಕಾರಿ ಕೆಲಸ ಪಡೆಯಲು ಸುಮಾರು 50 ಬಾರಿ ಪರೀಕ್ಷೆ ಬರೆದು ಪ್ರಯತ್ನಿಸಿದೆ, ಆದರೆ ನನಗೆ ಯಶಸ್ಸು ಸಿಗಲಿಲ್ಲ. ದಯವಿಟ್ಟು ನನ್ನನ್ನು ಕ್ಷಮಿಸಿಬಿಡಿ ಎಂದು ಬರೆದಿದ್ದಾನೆ.

ನಿವೃತ್ತ ಉದ್ಯೋಗಿಯಾಗಿರುವ ಆನಂದ್ ತಂದೆ ರಾಜ್‌ಕುಮಾರ್ ಕಣ್ಣೀರಿಡುತ್ತಾ ತಮ್ಮ ಮಗನ ಶ್ರಮವನ್ನು ಹಂಚಿಕೊಂಡಿದ್ದಾರೆ. ಬಿಟೆಕ್ ಪದವಿ ಮುಗಿಸಿದ ನಂತರ ಆನಂದ್ ‘ಪವರ್ ಗ್ರಿಡ್’ ಸಂಸ್ಥೆಯಲ್ಲಿ ಒಂದು ವರ್ಷದ ಅಪ್ರೆಂಟಿಸ್‌ಶಿಪ್ ಪೂರ್ಣಗೊಳಿಸಿದ್ದ. ನಂತರ ರೈಲ್ವೇಸ್, ಎಸ್‌ಎಸ್‌ಸಿ (SSC), ಬ್ಯಾಂಕಿಂಗ್ ಮತ್ತು ಶಿಕ್ಷಣ ಇಲಾಖೆಯ ಸರಣಿ ನೇಮಕಾತಿ ಪರೀಕ್ಷೆಗಳಿಗೆ ಹಗಲಿರುಳು ಸಿದ್ಧತೆ ನಡೆಸಿದ್ದ. 50 ಕ್ಕೂ ಹೆಚ್ಚು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆದಿದ್ದರೂ ಹುದ್ದೆ ಕೈಸೇರದಿದ್ದಕ್ಕೆ ಕಳೆದ ಕೆಲವು ತಿಂಗಳುಗಳಿಂದ ತೀವ್ರ ಮಾನಸಿಕ ಖಿನ್ನತೆಗೆ ಒಳಗಾಗಿದ್ದ.

ಸ್ಪರ್ಧಾತ್ಮಕ ಪರೀಕ್ಷೆಗಳ ಒತ್ತಡ ಮತ್ತು ಯುವಜನತೆಯ ಕಳವಳ

ಖಾಸಗಿ ಕಾಲೇಜಿನಲ್ಲಿ ಟಾಪರ್ ಆಗಿ, ರಾಜ್ಯಪಾಲರಿಂದಲೇ ಪ್ರಶಸ್ತಿ ಪಡೆದಿದ್ದರೂ, ಸರ್ಕಾರಿ ಉದ್ಯೋಗಗಳ ಮೇಲಿನ ವಿಪರೀತ ಕ್ರೇಜ್ ಮತ್ತು ಸೀಮಿತ ಹುದ್ದೆಗಳಿಂದಾಗಿ ಯುವಕರು ತೀವ್ರ ನಿರಾಶೆಗೆ ಒಳಗಾಗುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ದೇಶದಾದ್ಯಂತ ಸ್ಪರ್ಧಾತ್ಮಕ ಪರೀಕ್ಷೆಗಳ ಪೇಪರ್ ಸೋರಿಕೆ, ಪರೀಕ್ಷೆಗಳ ಫಲಿತಾಂಶ ವಿಳಂಬ ಹಾಗೂ ನೇಮಕಾತಿ ಪ್ರಕ್ರಿಯೆಯಲ್ಲಿನ ಅಡೆತಡೆಗಳು ಲಕ್ಷಾಂತರ ನಿರುದ್ಯೋಗಿ ಯುವಕರ ಮಾನಸಿಕ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತಿವೆ.

ಶಿಕ್ಷಣ ತಜ್ಞರ ಪ್ರಕಾರ, ಪರೀಕ್ಷೆಯ ಸೋಲು ಅಥವಾ ಉದ್ಯೋಗ ಸಿಗದಿರುವುದು ಜೀವನದ ಅಂತ್ಯವಲ್ಲ. ಯುವಕರು ಕೇವಲ ಸರ್ಕಾರಿ ಕೆಲಸದ ಮೇಲಷ್ಟೇ ಅವಲಂಬಿತರಾಗದೆ, ಖಾಸಗಿ ವಲಯ ಹಾಗೂ ಕೌಶಲ್ಯಾಧಾರಿತ ಕ್ಷೇತ್ರಗಳತ್ತ ಗಮನಹರಿಸಬೇಕು ಮತ್ತು ಖಿನ್ನತೆ ಉಂಟಾದಾಗ ತಕ್ಷಣವೇ ಮಾನಸಿಕ ತಜ್ಞರ ಅಥವಾ ಕುಟುಂಬದವರ ನೆರವು ಪಡೆಯಬೇಕು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 3:04 pm, Mon, 20 July 26

Source link

ಮುರಿದುಬಿದ್ದ ಸ್ಟೀಲ್ ಬ್ರಿಡ್ಜ್​​​​ ಸೇತುವೆ ಸರಳು: ರಾಯಚೂರು-ಮಂತ್ರಾಲಯ ಮಾರ್ಗದಲ್ಲಿ ಟ್ರಾಫಿಕ್‌ ಜಾಮ್‌ – Kannada News | Full Traffic Jam In Raichur Mantralayam Road over Steel Bridge Cut

ರಾಯಚೂರು, (ಜುಲೈ 20): ತಾಲೂಕಿನ (Raichur) ಗಿಲ್ಲೆಸುಗೂರು ಬಳಿ ಆಂಧ್ರ ಪ್ರದೇಶ ಹಾಗೂ ಕರ್ನಾಟಕ ಮಾರ್ಗದಲ್ಲಿ ತುಂಗಭದ್ರಾ ನದಿಗೆ (Tungabhadra River) ಅಡ್ಡಲಾಗಿ ನಿರ್ಮಿಸಿದ ಉಕ್ಕಿನ ಸೇತುವೆಯ (Steel Bridge) ಸರಳುಗಳು ತುಂಡಾಗಿವೆ. ಇದರಿಂದ ರಾಯಚೂರು – ಮಂತ್ರಾಲಯ ಮಾರ್ಗದಲ್ಲಿ ಎರಡು ಗಂಟೆಗಳ ಕಾಲ ಟ್ರಾಫಿಕ್‌ ಜಾಮ್‌ ಉಂಟಾಗಿದೆ. ರಾಯಚೂರು – ಮಂತ್ರಾಲಯಕ್ಕೆ ತೆರಳುವ ಮಾರ್ಗದ ಮುಖ್ಯ ಸೇತುವೆ ಇದಾಗಿದ್ದು, ಏಕಾಏಕಿ ಬ್ರಿಡ್ಜ್​​​​ ಮೇಲ್ಭಾಗದ ಕಬ್ಬಿಣದ ಸರಳು ಕಟ್ ಆಗಿ ಬಿದ್ದಿದೆ. ಅದೃಷ್ಟವಶಾತ್, ಅದೃಷ್ಟವಶಾತ್ ಈ ಅವಘಡದಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಇನ್ನು ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಂಧ್ರಪ್ರದೇಶದ ಮಾದಾವರಂ ಪೊಲೀಸರ ಭೇಟಿ, ಪರಿಶೀಲನೆ ಮಾಡಿದರು. ನಂತರ ಕಟ್ ಆಗಿ ಬಿದ್ದಿದ್ದ ಕಬ್ಬಿಣದ ಸರಳು ಸರಿಪಡಿಸಿ ಸಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಹೋಂಸ್ಟೇಗೆ ನೋಂದಣಿ ಕಡ್ಡಾಯ: ಕರ್ನಾಟಕದಾದ್ಯಂತ 500ಕ್ಕೂ ಹೆಚ್ಚು ಅರ್ಜಿ ಸಲ್ಲಿಕೆ – Kannada News | Karnataka Homestays: Over 500 Apply for Registration as Tourism Department Makes It Mandatory

ಹೋಂಸ್ಟೇ (ಸಾಂದರ್ಭಿಕ ಚಿತ್ರ)Image Credit source: Getty Images

ಬೆಂಗಳೂರು, ಜುಲೈ 20: ಕರ್ನಾಟಕದಲ್ಲಿ (Karnataka) ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಹೋಂಸ್ಟೇಗಳು (Homestays) ಪ್ರವಾಸೋದ್ಯಮ ಇಲಾಖೆಯಲ್ಲಿ ಕಡ್ಡಾಯವಾಗಿ ನೋಂದಾಯಿಸಿಕೊಳ್ಳಬೇಕು ಎಂದು ರಾಜ್ಯ ಸರ್ಕಾರ ಸೂಚಿಸಿದ್ದು, ಹೊಸ ಮಾರ್ಗಸೂಚಿಗಳ ಅನ್ವಯ ಈಗಾಗಲೇ 500ಕ್ಕೂ ಹೆಚ್ಚು ಹೋಂಸ್ಟೇಗಳು ನೋಂದಣಿಗೆ ಅರ್ಜಿ ಸಲ್ಲಿಸಿವೆ. ದಾಖಲೆಗಳ ಪರಿಶೀಲನೆ ಹಾಗೂ ಸ್ಥಳ ಪರಿಶೀಲನೆ ಪ್ರಕ್ರಿಯೆ ನಡೆಯುತ್ತಿದ್ದು, ಮಾನದಂಡಗಳನ್ನು ಪೂರೈಸಿದ ಹೋಂಸ್ಟೇಗಳಿಗೆ ಮಾತ್ರ ನೋಂದಣಿ ಪ್ರಮಾಣಪತ್ರ ನೀಡಲಾಗುತ್ತದೆ.

‘ಹೋಂಸ್ಟೇ ಎಸ್ಟಾಬ್ಲಿಷ್‌ಮೆಂಟ್ ನೋಂದಣಿ ಮಾರ್ಗಸೂಚಿ-2025’ ಅಡಿಯಲ್ಲಿ ಇನ್ನೂ ನೋಂದಣಿ ಮಾಡಿಸದ ಎಲ್ಲ ಹೋಂಸ್ಟೇ ಮಾಲೀಕರು ಕಡ್ಡಾಯವಾಗಿ ಅರ್ಜಿ ಸಲ್ಲಿಸುವಂತೆ ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ಆಯುಕ್ತ ವಿ. ರಾಮ್ ಪ್ರಸಾತ್ ಮನೋಹರ್ ಸೂಚಿಸಿದ್ದಾರೆ. ಕೊಡಗು ಜಿಲ್ಲೆಯಲ್ಲಿ ಅಮೆರಿಕದ ಮಹಿಳೆಯ ಮೇಲೆ ನಡೆದ ಅತ್ಯಾಚಾರ ಪ್ರಕರಣದ ಬಳಿಕ ಹೋಂಸ್ಟೇಗಳ ಸುರಕ್ಷತೆ ಹಾಗೂ ನಿಯಂತ್ರಣಕ್ಕೆ ಸರ್ಕಾರ ಹೆಚ್ಚಿನ ಒತ್ತು ನೀಡಿದೆ.

400ಕ್ಕೂ ಹೆಚ್ಚು ಅರ್ಜಿಗಳ ಪರಿಶೀಲನೆ ನಡೆಸಿದ ಪ್ರವಾಸೋದ್ಯಮ ಇಲಾಖೆ

ಈವರೆಗೆ ಬಂದಿರುವ ಅರ್ಜಿಗಳ ಪೈಕಿ ಸುಮಾರು 400 ಅರ್ಜಿಗಳ ದಾಖಲೆಗಳನ್ನು ಪರಿಶೀಲಿಸಲಾಗಿದ್ದು, ಸ್ಥಳ ಪರಿಶೀಲನೆ ಪ್ರಗತಿಯಲ್ಲಿದೆ. ಪ್ರವಾಸೋದ್ಯಮ ಇಲಾಖೆ, ಪೊಲೀಸ್ ಇಲಾಖೆ, ಜಿಲ್ಲಾಧಿಕಾರಿ ಕಚೇರಿ, ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ನಗರಾಭಿವೃದ್ಧಿ ಘಟಕದ ಅಧಿಕಾರಿಗಳು ಜಂಟಿಯಾಗಿ ಪರಿಶೀಲನೆ ನಡೆಸುತ್ತಿದ್ದಾರೆ.

ಹೋಂಸ್ಟೇಗಳ ನೋಂದಣಿಗೆ ಮಾನದಂಡವೇನು?

ಹೋಂಸ್ಟೇಗಳಲ್ಲಿ ಮೂಲಸೌಕರ್ಯ, ಸುರಕ್ಷತೆ, ಸ್ವಚ್ಛತೆ ಮತ್ತು ಕಾರ್ಯಾಚರಣೆಗೆ ಸಂಬಂಧಿಸಿದ ನಿಯಮಗಳನ್ನು ಪಾಲಿಸಲಾಗಿದೆಯೇ ಎಂಬುದನ್ನು ಅಧಿಕಾರಿಗಳು ಪರಿಶೀಲಿಸಲಿದ್ದಾರೆ. ನಿಗದಿತ ಮಾನದಂಡಗಳನ್ನು ಪೂರೈಸದ ಹೋಂಸ್ಟೇಗಳಿಗೆ ನೋಂದಣಿ ನೀಡುವುದಿಲ್ಲ. ಕೊರತೆಗಳನ್ನು ಸರಿಪಡಿಸಿದ ಬಳಿಕ ಮತ್ತೊಮ್ಮೆ ಅರ್ಜಿ ಸಲ್ಲಿಸಲು ಅವಕಾಶ ಇರಲಿದೆ.

ಪರಿಶೀಲನೆ ಪೂರ್ಣಗೊಂಡ 45 ದಿನಗಳ ಒಳಗೆ ಸರ್ಟಿಫಿಕೇಟ್

ಪರಿಶೀಲನೆ ಪೂರ್ಣಗೊಂಡು ಸಂಬಂಧಿತ ಪ್ರಾಧಿಕಾರದ ಅನುಮೋದನೆ ದೊರೆತ ಬಳಿಕ 45 ದಿನಗಳೊಳಗೆ ನೋಂದಣಿ ಪ್ರಮಾಣಪತ್ರ ನೀಡಲಾಗುತ್ತದೆ. ಈ ಪ್ರಮಾಣಪತ್ರವು ಐದು ವರ್ಷಗಳ ಕಾಲ ಮಾನ್ಯವಾಗಿದ್ದು, ನಂತರ ನವೀಕರಣ ಕಡ್ಡಾಯವಾಗಲಿದೆ.

ಇದನ್ನೂ ಓದಿ: ಪ್ರವಾಸಿಗರೇ ಎಚ್ಚರ! 2000ಕ್ಕೂ ಹೆಚ್ಚು ಅಕ್ರಮ ಹೋಂಸ್ಟೇಗಳ ಕಪಿಮುಷ್ಠಿಯಲ್ಲಿ ಕೊಡಗು; ಕಠಿಣ ಕ್ರಮಕ್ಕೆ ಆಗ್ರಹ

ಈ ಕ್ರಮದಿಂದ ರಾಜ್ಯದಲ್ಲಿನ ಅಧಿಕೃತ ಹೋಂಸ್ಟೇಗಳ ವಿಶ್ವಾಸಾರ್ಹ ಡೇಟಾಬೇಸ್ ನಿರ್ಮಾಣವಾಗುವುದರ ಜೊತೆಗೆ, ಪ್ರವಾಸಿಗರಿಗೆ ಸುರಕ್ಷಿತ ಹಾಗೂ ಗುಣಮಟ್ಟದ ವಸತಿ ವ್ಯವಸ್ಥೆ ಕಲ್ಪಿಸುವುದು ಸರ್ಕಾರದ ಉದ್ದೇಶವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version