ಏಕದಿನ ವಿಶ್ವಕಪ್​ಗೂ ಮುನ್ನ ಆತಂಕ ಹೆಚ್ಚಿಸಿದ ಗಂಭೀರ್-ಗಿಲ್ ಜೋಡಿ! – Kannada News | The Gambhir Gill Era: A Tough Transition for Team India

ಭಾರತೀಯ ಕ್ರಿಕೆಟ್‌ನಲ್ಲಿ ರೋಹಿತ್ ಶರ್ಮಾ ಅವರ ಯಶಸ್ವಿ ನಾಯಕತ್ವದ ಯುಗದ ನಂತರ, ಯುವ ಓಪನರ್ ಶುಭ್‌ಮನ್ ಗಿಲ್ ಹಾಗೂ ಮುಖ್ಯ ಕೋಚ್ ಗೌತಮ್ ಗಂಭೀರ್ ಜೋಡಿಯು ಹೊಸ ಪರ್ವ ಆರಂಭಿಸಿದ್ದರು. 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆಲುವಿನ ಬೆನ್ನಲ್ಲೇ ಹೊಸ ಯುಗ ಆರಂಭವಾಗಿದ್ದರೂ, ಭಾರತ ತಂಡದ ದ್ವಿಪಕ್ಷೀಯ ಏಕದಿನ ಸರಣಿಗಳಲ್ಲಿನ ಪ್ರದರ್ಶನವು ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಆಸ್ಟ್ರೇಲಿಯಾ, ನ್ಯೂಝಿಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧ ಎದುರಿಸಿದ ಸರಣಿ ಸೋಲುಗಳು ತಂಡದ ಸ್ಥಿತ್ಯಂತರದ ಸವಾಲುಗಳನ್ನು ಎತ್ತಿ ತೋರಿಸಿವೆ. 2027ರ ವಿಶ್ವಕಪ್ ದೃಷ್ಟಿಯಿಂದ ಈ ಹೊಸ ಸಾರಥ್ಯದ ಆರಂಭಿಕ ಏರಿಳಿತಗಳು, ತಂತ್ರಗಾರಿಕೆ ಹಾಗೂ ಒಟ್ಟಾರೆ ಪ್ರದರ್ಶನದ ಆಳವಾದ ವಿಶ್ಲೇಷಣೆ ಇಲ್ಲಿದೆ.

ಪ್ರಮುಖ ಅಂಕಿ-ಅಂಶಗಳು:

  • ಗಿಲ್-ಗಂಭೀರ್ ಸಾರಥ್ಯದಲ್ಲಿಆಡಿದ ಒಟ್ಟು ಏಕದಿನ ಸರಣಿಗಳು: 04
  • ಗೆದ್ದ ಸರಣಿ: 01 (ಅಫ್ಘಾನಿಸ್ತಾನ ವಿರುದ್ಧ 3-0)
  • ಸೋತ ಸರಣಿಗಳು: 03 (ಆಸ್ಟ್ರೇಲಿಯಾ, ನ್ಯೂಝಿಲೆಂಡ್, ಇಂಗ್ಲೆಂಡ್
  • ಒಟ್ಟು ಆಡಿದ ಏಕದಿನ ಪಂದ್ಯಗಳು: 12
  • ಗೆಲುವು: 06 | ಸೋಲು: 06

ವೈಫಲ್ಯಕ್ಕೆ ಪ್ರಮುಖ ಕಾರಣಗಳೇನು?

ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರಂತಹ ದಿಗ್ಗಜರ ಅನುಪಸ್ಥಿತಿ ನಡುವೆ, ಮಧ್ಯಮ ಕ್ರಮಾಂಕದಲ್ಲಿ ಇನ್ನಿಂಗ್ಸ್ ಕಟ್ಟುವ ಆಟಗಾರರ ಕೊರತೆ ಎದ್ದು ಕಾಣುತ್ತಿದೆ. ಕೆ.ಎಲ್. ರಾಹುಲ್ ಅಥವಾ ಶ್ರೇಯಸ್ ಅಯ್ಯರ್ ಅವರ ಸ್ಥಿರತೆಯ ಕೊರತೆ ಮತ್ತು ಯುವ ಆಟಗಾರರು ಒತ್ತಡದ ಸಂದರ್ಭದಲ್ಲಿ ವಿಕೆಟ್ ಒಪ್ಪಿಸುತ್ತಿರುವುದು ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಕುಸಿತಕ್ಕೆ ಮುಖ್ಯ ಕಾರಣವಾಗಿದೆ.

ಶುಭ್‌ಮನ್ ಗಿಲ್ ಅವರಿಗೆ ಇನ್ನೂ ನಾಯಕತ್ವದ ಆರಂಭಿಕ ದಿನಗಳು. ಪಂದ್ಯದ ಗತಿಯನ್ನು ಬದಲಾಯಿಸುವ ನಿರ್ಣಾಯಕ ಕ್ಷಣಗಳಲ್ಲಿ ಎದುರಾಳಿ ಬ್ಯಾಟರ್‌ಗಳ ಮೇಲೆ ಒತ್ತಡ ಹೇರಲು ಅವರು ವಿಫಲರಾಗುತ್ತಿದ್ದಾರೆ. ಬೌಲಿಂಗ್ ಬದಲಾವಣೆ ಮತ್ತು ಫೀಲ್ಡ್ ಸೆಟ್ಟಿಂಗ್‌ಗಳಲ್ಲಿ ಅನುಭವದ ಕೊರತೆ ಎದ್ದು ಕಾಣುತ್ತಿದೆ.

ಟೀಮ್ ಇಂಡಿಯಾದ ಯುವ ಬ್ಯಾಟರ್‌ಗಳು ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‌ನಲ್ಲಿ ಸ್ವಿಂಗ್ ಬೌಲಿಂಗ್ ಎದುರಿಸಲು ಹಾಗೂ ಸ್ವದೇಶದಲ್ಲಿ (ನ್ಯೂಝಿಲೆಂಡ್ ವಿರುದ್ಧ) ಟರ್ನಿಂಗ್ ಟ್ರ್ಯಾಕ್‌ಗಳಲ್ಲಿ ಸ್ಪಿನ್ ಎದುರಿಸಲು ತಾಂತ್ರಿಕವಾಗಿ ಪರದಾಡುತ್ತಿದ್ದಾರೆ. ಪಿಚ್‌ಗೆ ತಕ್ಕಂತೆ ಆಟದ ಶೈಲಿಯನ್ನು ಬದಲಾಯಿಸಿಕೊಳ್ಳಲು ಯುವ ಆಟಗಾರರಿಗೆ ಸಾಧ್ಯವಾಗುತ್ತಿಲ್ಲ.

ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ವಿರುದ್ಧದ ವಿದೇಶಿ ಸರಣಿಗಳಲ್ಲಿ ಭಾರತ ಮೊದಲ ಪಂದ್ಯವನ್ನು ಗೆದ್ದು ಶುಭಾರಂಭ ಮಾಡಿತ್ತು. ಆದರೆ, ನಂತರದ ಪಂದ್ಯಗಳಲ್ಲಿ ಎದುರಾಳಿ ತಂಡಗಳು ಕಂಬ್ಯಾಕ್ ಮಾಡಿದಾಗ, ಭಾರತ ಅದಕ್ಕೆ ತಕ್ಕ ಪ್ರತಿ-ತಂತ್ರಗಳನ್ನು ರೂಪಿಸದೆ ಸರಣಿಯನ್ನು ಕೈಚೆಲ್ಲಿದೆ.

ಗಂಭೀರ್ ಪ್ರಯೋಗ!

ಮುಖ್ಯ ಕೋಚ್ ಗೌತಮ್ ಗಂಭೀರ್ ಅವರು 2027ರ ವಿಶ್ವಕಪ್ ದೃಷ್ಟಿಯಿಂದ ತಂಡದಲ್ಲಿ ನಿರಂತರ ಪ್ರಯೋಗಗಳನ್ನು ಮಾಡುತ್ತಿದ್ದಾರೆ. ಬ್ಯಾಟಿಂಗ್ ಕ್ರಮಾಂಕದಲ್ಲಿ ಪದೇ ಪದೇ ಬದಲಾವಣೆ ಮಾಡುವುದು ಮತ್ತು ವಿಭಿನ್ನ ಬೌಲಿಂಗ್ ಕಾಂಬಿನೇಷನ್ ಪ್ರಯತ್ನಿಸುತ್ತಿರುವುದರಿಂದ ಆಟಗಾರರಿಗೆ ತಮ್ಮ ಸ್ಥಾನದ ಬಗ್ಗೆ ಭದ್ರತೆಯ ಭಾವನೆ ಇಲ್ಲದಂತಾಗಿದೆ. ಇದು ಒಟ್ಟಾರೆ ಪ್ರದರ್ಶನದ ಮೇಲೆ ಬೀರಿದೆ.

ಇದನ್ನೂ ಓದಿ: 6,322 ಕೋಟಿ ರೂ. ಬಹುಮಾನ: ಯಾರಿಗೆ ಎಷ್ಟು ಕೋಟಿ? ಇಲ್ಲಿದೆ ಸಂಪೂರ್ಣ ಮಾಹಿತಿ

ಒಟ್ಟಾರೆಯಾಗಿ ಹೇಳುವುದಾದರೆ, ಗೌತಮ್ ಗಂಭೀರ್ ಅವರ ಮಾರ್ಗದರ್ಶನ ಮತ್ತು ಶುಭ್‌ಮನ್ ಗಿಲ್ ಅವರ ಸಾರಥ್ಯದ ಆರಂಭಿಕ ಪರ್ವವು ಸವಾಲುಗಳು ಹಾಗೂ ಭವಿಷ್ಯದ ಪಾಠಗಳಿಂದ ಕೂಡಿದೆ. ಚಾಂಪಿಯನ್ಸ್ ಟ್ರೋಫಿ ಗೆಲುವಿನಂತಹ ದೊಡ್ಡ ಯಶಸ್ಸಿನ ನಡುವೆಯೂ, ಸಾಲು ಸಾಲು ದ್ವಿಪಕ್ಷೀಯ ಸರಣಿಗಳ ಸೋಲು ತಂಡದಲ್ಲಿನ ತಾಂತ್ರಿಕ ಹಾಗೂ ರಣತಂತ್ರದ ಲೋಪದೋಷಗಳನ್ನು ಎತ್ತಿ ತೋರಿಸಿದೆ. ಈ ಲೋಪದೋಷಗಳನ್ನು ಸರಿಪಡಿಸಿ ಟೀಮ್ ಇಂಡಿಯಾ ಮುಂಬರುವ ಸರಣಿಗಳ ಮೂಲಕ ಕಂಬ್ಯಾಕ್ ಮಾಡಲಿದೆಯಾ ಕಾದು ನೋಡಬೇಕಿದೆ.

Source link

Video: ತಾಯಾನೆಯಂತೆ ಮರಳನ್ನು ಮೈ ಮೇಲೆ ಎರಚಿಕೊಂಡು ಸ್ನಾನ ಮಾಡಿದ ಮರಿಯಾನೆ – Kannada News | The baby elephant took a dust bath just like its mother

ಮರಿಯಾನೆಗಳು (baby elephants) ಏನು ಮಾಡಿದ್ರೂ ನೋಡೋಕೆ ಚಂದ. ನೀವು ಈ ದೃಶ್ಯ ನೋಡಿದ್ರೆ ಮತ್ತೆ ಮತ್ತೆ ನೋಡ್ತೀರಾ. ಮರಿಯಾನೆಯೊಂದು ತನ್ನ ತಾಯಿಯನ್ನೇ ಅನುಕರಣೆ ಮಾಡಿದೆ. ತಾಯಾನೆಯಂತೆ ಮೈ ಮೇಲೆ ಮರಳನ್ನು ಎರಚಿಕೊಂಡು ಧೂಳಿನ ಸ್ನಾನ ಮಾಡಿರುವ ವಿಡಿಯೋ ಸದ್ಯ ವೈರಲ್ ಆಗಿದೆ. ಈ ದೃಶ್ಯ ನೋಡಿದ ನೆಟ್ಟಿಗರು ಈ ಆನೆ ಮರಿಯ ತುಂಟಾಟ ಕ್ಕೆ ಫಿದಾ ಆಗಿದ್ದಾರೆ.

ಸಾಫ್ಫ್ರೆಂನ್ ಸ್ನೈಪರ್ (saffron sniper) ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್ ನಲ್ಲಿ ತಾಯಿಯೊಂದು ಮರಳನ್ನು ಮೈ ಮೇಲೆ ಎರಚಿಕೊಳ್ಳುತ್ತಿದೆ. ಇದನ್ನು ನೋಡಿದ ಮರಿಯಾನೆಯು ತನ್ನ ತಾಯಿಯಂತೆ ಮರಳನ್ನು ಮೈ ಮೇಲೆ ಎರಚಿಕೊಂಡು ಧೂಳಿನ ಸ್ನಾನ ಮಾಡಿರುವುದನ್ನು ಕಾಣಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಮಾಲೀಕನ ತೊಡೆ ಮೇಲೆ ತಲೆಯಿಟ್ಟು ಮಲಗಿದ ಮರಿಯಾನೆ

ಈ ವಿಡಿಯೋ ಮೂವತ್ತು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ, ತುಂಬಾ ಸುಂದರವಾದ ಕ್ಷಣ ಎಂದರೆ, ಮತ್ತೊಬ್ಬರು, ಈ ಪುಟಾಣಿ ಮರಿಯಾನೆ ಎಷ್ಟು ಮುದ್ದಾಗಿದೆ ಎಂದಿದ್ದಾರೆ. ಇನ್ನೊಬ್ಬರು, ಒಳ್ಳೆಯ ಕೆಲಸ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮನುಷ್ಯರಿಗೇ ಬುದ್ಧಿ ಕಲಿಸಿದ ಬೆಂಗಳೂರಿನ ಬೀದಿ ನಾಯಿಗಳು: ಟ್ರಾಫಿಕ್ ರೂಲ್ಸ್ ಪಾಲಿಸಿ ‘ಜಿಬ್ರಾ ಕ್ರಾಸಿಂಗ್’ನಲ್ಲೇ ರಸ್ತೆ ದಾಟಿದ ಶ್ವಾನಗಳ ಗುಂಪು – Kannada News | Watch: Bangalore’s Smartest Dogs Set Example, Cross Roads Only on Zebra Crossings

ಬೆಂಗಳೂರು, ಜು.20: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ದಿನನಿತ್ಯ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ವರದಿಯಾಗುತ್ತಲೇ ಇರುತ್ತವೆ. ಆದರೆ, ಇದೀಗ ನಗರದ ಅತ್ಯಂತ ಬುದ್ಧಿವಂತ ಹಾಗೂ ಕಾನೂನು ಪಾಲಿಸುವ ಶ್ವಾನಗಳ ಹಿಂಡೊಂದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ. ಬೆಂಗಳೂರಿನ ಬೀದಿಯೊಂದರಲ್ಲಿ ನಿಯಮಬದ್ಧವಾಗಿ ಕೇವಲ ಜಿಬ್ರಾ ಕ್ರಾಸಿಂಗ್ (Zebra Crossing) ಮೂಲಕವೇ ರಸ್ತೆ ದಾಟುತ್ತಿರುವ ಬೀದಿ ನಾಯಿಗಳ ಶಿಸ್ತು ಇಡೀ ಸೋಶಿಯಲ್​ ಮೀಡಿಯಾದಲ್ಲಿ ಗಮನ ಸೆಳೆದಿದೆ.

ಸಾಮಾಜಿಕ ಜಾಲತಾಣವಾದ ಎಕ್ಸ್ (X) ನಲ್ಲಿ ಹಂಚಿಕೊಳ್ಳಲಾದ ಈ ಕಿರು ವಿಡಿಯೋಗೆ, “ಬೆಂಗಳೂರಿನಲ್ಲಿ ಜಿಬ್ರಾ ಕ್ರಾಸಿಂಗ್ ಬಳಸುತ್ತಿರುವ ಡೋಗೇಶ್” ಎಂಬ ತಮಾಷೆಯ ಶೀರ್ಷಿಕೆಯನ್ನು ನೀಡಲಾಗಿದೆ. ವಿಡಿಯೋ ಚಿಕ್ಕದಾಗಿದ್ದರೂ, ಅತ್ಯಂತ ಮನರಂಜನಾತ್ಮಕವಾಗಿದ್ದು, ನೋಡನೋಡುತ್ತಿದ್ದಂತೆಯೇ ಸಾವಿರಾರು ವೀಕ್ಷಣೆಗಳನ್ನು ಪಡೆದುಕೊಂಡಿದೆ. ವಾಹನಗಳು ಬರುವ ಹಾದಿಯನ್ನು ಗಮನಿಸಿ, ಪಾದಚಾರಿಗಳಿಗಾಗಿ ಮೀಸಲಿಟ್ಟ ಜಿಬ್ರಾ ಕ್ರಾಸಿಂಗ್‌ನಲ್ಲೇ ನಾಯಿಗಳು ಸಾಲಾಗಿ ರಸ್ತೆ ದಾಟುವ ದೃಶ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಇದನ್ನೂ ಓದಿ: ಮಳೆ ಕೊರತೆಯಿಂದ ಬತ್ತಿದ ತುಂಗಭದ್ರಾ ನದಿ: ನೀರಿಲ್ಲದೆ ಸಾವಿರಾರು ಮೀನುಗಳು ಸಾವು

ಎಕ್ಸ್​ ಪೋಸ್ಟ್​ ಇಲ್ಲಿದೆ ನೋಡಿ:

ಈ ಶ್ವಾನಗಳ ವ್ಯವಸ್ಥಿತ ಮತ್ತು ನಾಗರಿಕ ನಡವಳಿಕೆಯನ್ನು ಕಂಡು ನೆಟ್ಟಿಗರು ಫಿದಾ ಆಗಿದ್ದು, ಮನುಷ್ಯರು ಈ ಪ್ರಾಣಿಗಳನ್ನು ನೋಡಿ ಕಲಿಯುವುದು ಸಾಕಷ್ಟಿದೆ ಎಂದು ಕಮೆಂಟ್ ಮಾಡುತ್ತಿದ್ದಾರೆ. ಈ ನಾಯಿಗಳಿಗೆ ಜಿಬ್ರಾ ಕ್ರಾಸಿಂಗ್‌ನ ಉದ್ದೇಶ ಸರಿಯಾಗಿ ಅರ್ಥವಾಗಿದೆ. ಆದರೆ ಕೆಲವು ಮನುಷ್ಯರು ಇಂದಿಗೂ ಜಿಬ್ರಾ ಕ್ರಾಸಿಂಗ್‌ಗಳನ್ನು ಪಾರ್ಕಿಂಗ್ ಜಾಗ ಎಂದುಕೊಂಡಿದ್ದಾರೆ ಎಂದು ಒಬ್ಬರು ಕಮೆಂಟ್​ ಮಾಡಿದ್ದಾರೆ. “ಮನುಷ್ಯರಿಗಿಂತ ಪ್ರಾಣಿಗಳಿಗೇ ರಸ್ತೆ ಮತ್ತು ಜಾಗದ ಪ್ರಜ್ಞೆ ಹೆಚ್ಚಾಗಿದೆ” ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ. ಭಾರತದ ನಾಯಿಗಳು ಹೆಚ್ಚು ನಾಗರಿಕವಾಗಿವೆ ಇನ್ನೊಬ್ಬರು ಹೇಳಿದ್ದಾರೆ. ಬೆಂಗಳೂರಿನ ಟ್ರಾಫಿಕ್ ಕಿರಿಕಿರಿ ನಡುವೆ ಇಂತಹ ಸಕಾರಾತ್ಮಕ ಮತ್ತು ಮುದ್ದಾದ ವಿಡಿಯೋಗಳು ಸಾರ್ವಜನಿಕರಿಗೆ ಟ್ರಾಫಿಕ್ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಲು ನೆರವಾಗುತ್ತಿರುವುದು ವಿಶೇಷವಾಗಿದೆ.

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 2:37 pm, Mon, 20 July 26

Source link

ಬುಡುಬುಡುಕೆ ಸ್ವಾಮೀಜಿ ವೇಷದಲ್ಲಿ ಬಂದು ಚಿನ್ನಾಭರಣ ದೋಚಿದ ಆಸಾಮಿ! – Kannada News | Bengaluru Crime: Fake Budubuduke Swamiji Robs Gold Worth Rs 1.2 Lakh From Pregnant Woman

ಬುಡುಬುಡುಕೆ ಸ್ವಾಮೀಜಿ ವೇಷದಲ್ಲಿ ಬಂದು ಚಿನ್ನಾಭರಣ ದೋಚಿದ ಆಸಾಮಿ!

ನೆಲಮಂಗಲ, ಜುಲೈ 20: ನಿಮ್ಮ ಮನೆ ಬಾಗಿಲಿಗೆ ಬರುವ ಅಪರಿಚಿತ ಜ್ಯೋತಿಷಿಗಳು ಅಥವಾ ಸ್ವಾಮೀಜಿಗಳ ಬಗ್ಗೆ ತೀವ್ರ ಜಾಗರೂಕರಾಗಿರಬೇಕು. ಬುಡುಬುಡುಕೆ ಸ್ವಾಮೀಜಿ ವೇಷದಲ್ಲಿ ಬಂದು, ಮನೆಯಲ್ಲಿ ಸಾವಿನ ಕಂಟಕವಿದೆ ಎಂದು ಹೆದರಿಸಿ, ಪೂಜೆಯ ನೆಪದಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ದೋಚುವ ಶಾಕಿಂಗ್ ಘಟನೆಯೊಂದು ಬೆಂಗಳೂರು ಉತ್ತರ ತಾಲೂಕಿನ ಹೆಗ್ಗಡದೇವನಪುರದಲ್ಲಿ ಬೆಳಕಿಗೆ ಬಂದಿದೆ.

ನಡೆದಿದ್ದೇನು?

ಹೆಗ್ಗಡದೇವನಪುರದ ನಿವಾಸಿ ಮೋಹನ್ ಹಾಗೂ ಅವರ ಪತ್ನಿ ಉಷಾ ಅವರ ಮನೆಗೆ ಬುಡುಬುಡುಕೆ ಸ್ವಾಮೀಜಿ ವೇಷ ಧರಿಸಿದ್ದ ಕಳ್ಳನೊಬ್ಬ ಬಂದಿದ್ದ. ಮೋಹನ್ ಅವರ ಪತ್ನಿ ಉಷಾ ಪ್ರಸ್ತುತ 8 ತಿಂಗಳ ಗರ್ಭಿಣಿಯಾಗಿದ್ದು, ಇದನ್ನೇ ಬಂಡವಾಳ ಮಾಡಿಕೊಂಡ ಖದೀಮ, ನಿಮ್ಮ ಮನೆಗೆ ದೊಡ್ಡ ದೋಷವಿದೆ, ಶೀಘ್ರದಲ್ಲೇ ಯಾರೋ ಸಾಯುತ್ತಾರೆ ಎಂದು ದಂಪತಿಯನ್ನು ಹೆದರಿಸಿದ್ದಾನೆ. ಇದರಿಂದ ಆತಂಕಗೊಂಡ ದಂಪತಿ ಪರಿಹಾರ ಕೇಳಿದಾಗ, ನನಗೆ ಯಾವುದೇ ಹಣ ಬೇಡ, ಉಚಿತವಾಗಿಯೇ ಪೂಜೆ ಮಾಡಿಕೊಡುತ್ತೇನೆ ಎಂದು ನಂಬಿಸಿ ಮನೆ ಒಳಗೆ ಪ್ರವೇಶಿಸಿದ್ದಾನೆ.

ಕ್ಷಣಾರ್ಧದಲ್ಲಿ ಚಿನ್ನಾಭರಣ ಮಾಯ

ಮನೆಯೊಳಗೆ ಬರುತ್ತಿದ್ದಂತೆ ಪೂಜೆಯ ನಾಟಕವಾಡಿದ ಕಳ್ಳ ಸ್ವಾಮಿ, ತಾನು ತಂದಿದ್ದ ಮಣ್ಣಿನ ಕುಡಿಕೆಯನ್ನು ಮುಂದಿಟ್ಟಿದ್ದಾನೆ. ಈ ಕುಡಿಕೆಯಲ್ಲಿ ನಿಮ್ಮಲ್ಲಿರುವ ಚಿನ್ನಾಭರಣಗಳನ್ನು ಹಾಕಿ ಪೂಜೆ ಮಾಡಿದರೆ ಮನೆಯ ದೋಷ ನಿವಾರಣೆಯಾಗುವುದಲ್ಲದೆ, ಚಿನ್ನ ಇನ್ನೂ ಹೆಚ್ಚಾಗುತ್ತದೆ ಎಂದು ಪುಸಲಾಯಿಸಿದ್ದಾನೆ. ಇದನ್ನು ನಿಜವೆಂದು ನಂಬಿದ ದಂಪತಿ, ತಮ್ಮ ಬಳಿಯಿದ್ದ ಕಿವಿ ಓಲೆ, ಮಾಟಿ ಹಾಗೂ ಉಂಗುರವನ್ನು ಬಿಚ್ಚಿ ಕುಡಿಕೆಯಲ್ಲಿ ಹಾಕಿದ್ದಾರೆ.

ಬಳಿಕ ದಂಪತಿಗೆ ನೀರು ತರುವಂತೆ ನೆಪ ಹೇಳಿ ಒಳಗಡೆ ಕಳುಹಿಸಿದ ಖದೀಮ, ಕ್ಷಣಾರ್ಧದಲ್ಲಿ ಚಿನ್ನವಿದ್ದ ಕುಡಿಕೆಯನ್ನು ಬದಲಾಯಿಸಿ ತನ್ನ ಬಳಿಯಿದ್ದ ಬೇರೊಂದು ನಕಲಿ ಕುಡಿಕೆಯನ್ನು ಅಲ್ಲಿಟ್ಟಿದ್ದಾನೆ. ನಂತರ ದಂಪತಿಯ ಕೈಗೆ ಒಂದು ವಸ್ತುವನ್ನು ನೀಡಿ, ಇದನ್ನು ಯಾರಿಗೂ ತಿಳಿಯದಂತೆ ತಕ್ಷಣ ಹೋಗಿ ಕೆರೆಗೆ ಬಿಟ್ಟು ಬನ್ನಿ ಎಂದು ಕಳುಹಿಸಿದ್ದಾನೆ. ದಂಪತಿ ಕೆರೆಯತ್ತ ಹೋಗುತ್ತಿದ್ದಂತೆ, ಇತ್ತ ಕಳ್ಳಸ್ವಾಮಿ ಸುಮಾರು 1 ಲಕ್ಷದ 20 ಸಾವಿರ ರೂಪಾಯಿ ಮೌಲ್ಯದ ಚಿನ್ನಾಭರಣದೊಂದಿಗೆ ಎಸ್ಕೇಪ್ ಆಗಿದ್ದಾನೆ.

ಮಾದನಾಯಕನಹಳ್ಳಿ ಠಾಣೆಯಲ್ಲಿ ದೂರು

ಕೆರೆಗೆ ವಸ್ತು ಬಿಟ್ಟು ಮನೆಗೆ ಮರಳಿದ ದಂಪತಿ, ಸ್ವಾಮೀಜಿ ಕಾಣದೆ ಇದ್ದಾಗ ಅನುಮಾನಗೊಂಡು ಪೂಜೆಯ ಕುಡಿಕೆಯನ್ನು ಪರಿಶೀಲಿಸಿದ್ದಾರೆ. ಆಗ ಅದರಲ್ಲಿ ಚಿನ್ನದ ಬದಲಿಗೆ ಕಲ್ಲು-ಮಣ್ಣು ಇರುವುದನ್ನು ಕಂಡು ತಾವೇ ಮೋಸ ಹೋಗಿರುವುದು ಬೆಳಕಿಗೆ ಬಂದಿದೆ. ಈ ವಂಚನೆಗೆ ಸಂಬಂಧಿಸಿದಂತೆ ಸದ್ಯ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಕಳ್ಳ ಸ್ವಾಮಿಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.

ವರದಿ: ಮಂಜುನಾಥ, ಟಿವಿ9 ನೆಲಮಂಗಲ

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವಯಸ್ಸಾಗಿದೆ ಎಂದವರಿಗೆ ತಿರುಗೇಟು ಕೊಟ್ಟ ನಟ ಸಲ್ಮಾನ್ ಖಾನ್ – Kannada News | Salman Khan Reacts to Health Rumors with Cryptic Instagram Post Shares Fresh Pics

ಇತ್ತೀಚೆಗೆ ಸಲ್ಮಾನ್ ಖಾನ್ ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿತ್ತು. ಅದರಲ್ಲಿ 60 ವರ್ಷದ ನಟ ಎಂದಿಗಿಂತಲೂ ತುಂಬಾ ಸಣ್ಣಗಾಗಿ, ಮುಖದಲ್ಲಿ ವಯಸ್ಸಾದಂತೆ ಮತ್ತು ಸುಸ್ತಾದವರಂತೆ ಕಾಣಿಸಿಕೊಂಡಿದ್ದು ಅಭಿಮಾನಿಗಳಲ್ಲಿ ಆತಂಕ ಮೂಡಿಸಿತ್ತು.

Source link

ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಶಾಸಕರ ಸಮಿತಿ, ಎಬೋಲಾ ಹರಡುವಿಕೆ ತಡೆಗೆ ಏರ್‌ಪೋರ್ಟ್‌ಗಳಲ್ಲಿ ಸ್ಕ್ರೀನಿಂಗ್: ಯುಟಿ ಖಾದರ್ ಘೋಷಣೆ – Kannada News | Karnataka to Form MLAs Committee for Epidemic Control, Ebola Screening Begins at Airports: Says UT Khader

ಬೆಂಗಳೂರು, ಜುಲೈ 20: ಕರ್ನಾಟಕದಲ್ಲಿ ಸಾಂಕ್ರಾಮಿಕ ರೋಗಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಕ್ರಮ ಕೈಗೊಳ್ಳಲು ಪ್ರತಿ ಕ್ಷೇತ್ರದ ಜನಪ್ರತಿನಿಧಿಗಳನ್ನು ಒಳಗೊಂಡ ವಿಶೇಷ ಶಾಸಕರ ಸಮಿತಿ ರಚಿಸಲು ಆರೋಗ್ಯ ಇಲಾಖೆ ನಿರ್ಧರಿಸಿದೆ. ಜೊತೆಗೆ, ಆಫ್ರಿಕಾದ ಕೆಲವು ದೇಶಗಳಲ್ಲಿ ಎಬೋಲಾ (Ebola) ಸೋಂಕಿನ ಆತಂಕ ಹೆಚ್ಚಿರುವ ಹಿನ್ನೆಲೆಯಲ್ಲಿ, ಆ ದೇಶಗಳಿಂದ ರಾಜ್ಯಕ್ಕೆ ಆಗಮಿಸುವ ಪ್ರಯಾಣಿಕರಿಗೆ ವಿಮಾನ ನಿಲ್ದಾಣಗಳಲ್ಲಿ ಆರೋಗ್ಯ ತಪಾಸಣೆ (Health Screening) ನಡೆಸಲಾಗುತ್ತಿದೆ ಎಂದು ಆರೋಗ್ಯ ಸಚಿವ ಯುಟಿ ಖಾದರ್ (UT Khader) ತಿಳಿಸಿದ್ದಾರೆ. ಸಾಂಕ್ರಾಮಿಕ ರೋಗಗಳ ಹರಡುವಿಕೆ ನಿಯಂತ್ರಣ ಕುರಿತು ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದ ಬಳಿಕ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕೈಗೊಂಡ ತೀರ್ಮಾನಗಳ ಬಗ್ಗೆ ಮಾಹಿತಿ ನೀಡಿದರು.

ಆರೋಗ್ಯ ತುರ್ತು ಪರಿಸ್ಥಿತಿ ನಿರ್ವಹಣೆಗೆ ಹೊಸ ವ್ಯವಸ್ಥೆ ಜಾರಿಗೆ ತರಲಾಗಿದೆ. ಇದರ ಮೂಲಕ ಎಲ್ಲ ಜಿಲ್ಲೆಗಳಿಗೂ ತ್ವರಿತವಾಗಿ ಮಾಹಿತಿ ರವಾನಿಸಿ, ರೋಗ ನಿಯಂತ್ರಣ ಕ್ರಮಗಳನ್ನು ಇನ್ನಷ್ಟು ಸಮನ್ವಯದಿಂದ ಕೈಗೊಳ್ಳಲು ಸಾಧ್ಯವಾಗಲಿದೆ ಎಂದು ಖಾದರ್ ಹೇಳಿದರು.

ಸಾಂಕ್ರಾಮಿಕ ರೋಗಗಳ ನಿಯಂತ್ರಣದಲ್ಲಿ ಸ್ಥಳೀಯ ಮಟ್ಟದ ಮೇಲ್ವಿಚಾರಣೆ ಅಗತ್ಯವಾಗಿರುವುದರಿಂದ, ಪ್ರತಿ ಕ್ಷೇತ್ರದ ಶಾಸಕರ ನೇತೃತ್ವದಲ್ಲಿ ಜನಪ್ರತಿನಿಧಿಗಳನ್ನು ಒಳಗೊಂಡ ಸಮಿತಿಗಳನ್ನು ರಚಿಸಲಾಗುವುದು ಎಂದು ಸಚಿವರು ತಿಳಿಸಿದರು. ಸ್ಥಳೀಯ ಸಮಸ್ಯೆಗಳನ್ನು ತ್ವರಿತವಾಗಿ ಗುರುತಿಸಿ ಕ್ರಮ ಕೈಗೊಳ್ಳಲು ಈ ಸಮಿತಿಗಳು ನೆರವಾಗಲಿವೆ ಎಂದು ಹೇಳಿದರು.

ಎಬೋಲಾ ಕುರಿತು ಕಟ್ಟೆಚ್ಚರ: ಏರ್​ಪೋರ್ಟ್​​ನಲ್ಲಿ ಸ್ಕ್ರೀನಿಂಗ್

ಕಾಂಗೋ, ಉಗಾಂಡಾ ಹಾಗೂ ಆಫ್ರಿಕಾದ ಇತರೆ ಸೋಂಕು ಪೀಡಿತ ದೇಶಗಳಿಂದ ರಾಜ್ಯಕ್ಕೆ ಆಗಮಿಸುವ ಪ್ರಯಾಣಿಕರಿಗೆ ವಿಮಾನ ನಿಲ್ದಾಣಗಳಲ್ಲಿ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ. ಗಡಿ ಭಾಗಗಳಲ್ಲಿಯೂ ಆರೋಗ್ಯ ಇಲಾಖೆ ನಿಗಾ ವಹಿಸಿದ್ದು, ಪರಿಸ್ಥಿತಿಯನ್ನು ನಿರಂತರವಾಗಿ ಪರಿಶೀಲಿಸಲಾಗುತ್ತಿದೆ ಎಂದು ಯು.ಟಿ. ಖಾದರ್ ತಿಳಿಸಿದರು.

ಮಲೇರಿಯಾ, ಡೆಂಗೀ ಪ್ರಕರಣ ಇಳಿಕೆ

ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ರಾಜ್ಯದಲ್ಲಿ ಮಲೇರಿಯಾ ಪ್ರಕರಣಗಳು ಶೇ 70ರಷ್ಟು ಹಾಗೂ ಡೆಂಗೀ ಪ್ರಕರಣಗಳು ಶೇ 33ರಷ್ಟು ಕಡಿಮೆಯಾಗಿವೆ ಎಂದು ಸಚಿವರು ಮಾಹಿತಿ ನೀಡಿದರು. ಮನೆಮನೆಗೆ ತೆರಳಿ ಲಾರ್ವಾ ಸಮೀಕ್ಷೆ ನಡೆಸಲು ಸಿಬ್ಬಂದಿಗೆ ಸೂಚನೆ ನೀಡಲಾಗಿದೆ. ಅಗತ್ಯವಿರುವ ಲ್ಯಾಬ್ ಟೆಕ್ನಿಷಿಯನ್ ಮತ್ತು ಫಾರ್ಮಸಿಸ್ಟ್‌ಗಳ ನೇಮಕಾತಿಗೂ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಿದರೆ ಮಾಹಿತಿ ನೀಡುವುದು ಕಡ್ಡಾಯ

ಖಾಸಗಿ ಆಸ್ಪತ್ರೆಗಳಲ್ಲಿ ಸಾಂಕ್ರಾಮಿಕ ರೋಗಿಗಳಿಗೆ ಚಿಕಿತ್ಸೆ ನೀಡಿದರೆ, ಅದರ ಮಾಹಿತಿಯನ್ನು ಆರೋಗ್ಯ ಇಲಾಖೆಗೆ ಕಡ್ಡಾಯವಾಗಿ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ. ಅಲ್ಲದೆ, ಸಾಂಕ್ರಾಮಿಕ ರೋಗಗಳ ಹೆಸರಿನಲ್ಲಿ ಆಸ್ಪತ್ರೆಗಳು ಅನಗತ್ಯವಾಗಿ ಹೆಚ್ಚಿನ ಶುಲ್ಕ ವಿಧಿಸದಂತೆ ನಿಗಾ ವಹಿಸಲು ಎಸ್‌ಒಪಿ (SOP) ರೂಪಿಸಲಾಗಿದೆ ಎಂದು ಖಾದರ್ ತಿಳಿಸಿದರು.

ಇದನ್ನೂ ಓದಿ: ಶಾಲಾ ಮಕ್ಕಳ ನೆಚ್ಚಿನ ಜಂಕ್ ಫುಡ್ ಮೇಲೆ ಆಹಾರ ಇಲಾಖೆ ಹದ್ದಿನ ಕಣ್ಣು: ನೂರಕ್ಕೂ ಹೆಚ್ಚು ಕಡೆ ಭರ್ಜರಿ ರೇಡ್!

ಶಾಲೆಗಳ ಸುತ್ತಮುತ್ತ ಜಂಕ್ ಫುಡ್ ಮಾರಾಟದ ಮೇಲೂ ನಿಗಾ ವಹಿಸಲಾಗುತ್ತಿದ್ದು, ಶಾಲಾ ಆವರಣಗಳಲ್ಲಿ ಜಂಕ್ ಫುಡ್ ನಿಷೇಧಿಸುವ ಕುರಿತು ಸರ್ಕಾರ ಗಂಭೀರವಾಗಿ ಚಿಂತನೆ ನಡೆಸುತ್ತಿದೆ ಎಂದು ಸಚಿವ ಯು.ಟಿ. ಖಾದರ್ ಹೇಳಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕಾವೇರಿ ಜಲ ವಿವಾದ: ಮೇಕೆದಾಟು ಯೋಜನೆಗೆ ಲೋಕಸಭೆಯಲ್ಲಿ ಡಿಎಂಕೆ ತೀವ್ರ ವಿರೋಧ; ಜುಲೈ 22ರಂದು CWMA ಮೀಟಿಂಗ್​ – Kannada News | Cauvery Water Row: DMK Strongly Opposes Mekedatu Project in Lok Sabha; Crucial CWMA Meeting Scheduled for July 22

ಮೇಕೆದಾಟು ಯೋಜನೆಗೆ ಲೋಕಸಭೆಯಲ್ಲಿ ಡಿಎಂಕೆ ತೀವ್ರ ವಿರೋಧ

ದೆಹಲಿ, ಜುಲೈ 20: ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ನೆರೆ ರಾಜ್ಯ ತಮಿಳುನಾಡು ಮತ್ತೆ ಕ್ಯಾತೆ ತೆಗೆದಿದೆ. ಕರ್ನಾಟಕದ ಮೇಕೆದಾಟು ಯೋಜನೆಗೆ ಲೋಕಸಭೆಯಲ್ಲಿ ಡಿಎಂಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಕಲಾಪ ಆರಂಭವಾಗುತ್ತಿದ್ದಂತೆಯೇ ವಿಷಯ ಪ್ರಸ್ತಾಪ ಮಾಡಿದೆ. ಮೇಕೆದಾಟು ವಿಚಾರವಾಗಿ ನಿಲುವಳಿ ಸೂಚನೆಗೆ ಅವಕಾಶ ಡಿಎಂಕೆ ಕೋರಿದ್ದು, ತಕ್ಷಣವೇ ಚರ್ಚೆ ನಡೆಸಬೇಕು ಎಂದು ಪಟ್ಟು ಹಿಡಿದ ಪ್ರಸಂಗ ನಡೆದಿದೆ. ಡಿಎಂಕೆ ಸಂಸದೀಯ ಮಂಡಳಿ ನಾಯಕ ಟಿ.ಆರ್.ಬಾಲು ಈ ಬಗ್ಗೆ ಒತ್ತಾಯಿಸಿದ್ದು, ಪ್ರಸ್ತಾವನೆಗೆ ಸ್ಪೀಕರ್ ಓಂ ಬಿರ್ಲಾ ನಿರಾಕರಿಸಿದ ಕಾರಣ ಲೋಕಸಭೆ ಸದನದ ಬಾವಿಗಿಳಿದು ಡಿಎಂಕೆ‌ ಸಂಸದರು ಪ್ರತಿಭಟನೆ ನಡೆಸಿದ್ದಾರೆ.

ಜುಲೈ 22ರಂದು ದೆಹಲಿಯಲ್ಲಿ CWMA ಮೀಟಿಂಗ್​

ಬರದ ನಡುವೆಯೂ ನೀರು ಬಿಡುವಂತೆ ಕಾವೇರಿ ನೀರು ಹರಿಸುವಂತೆ ತಮಿಳುನಾಡು ಸರ್ಕಾರ ಪಟ್ಟು ಹಿನ್ನೆಲೆ ಬುಧವಾರ ದೆಹಲಿಯಲ್ಲಿ ಉನ್ನತ ಮಟ್ಟದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆ ನಿಗದಿಯಾಗಿದೆ. ಕಳೆದ ವಾರವಷ್ಟೇ ಕಾವೇರಿ ನೀರು ನಿಯಂತ್ರಣ ಸಮಿತಿ ಸಭೆ ನಡೆದಿತ್ತು. ಆದರೆ ಈ ವೇಳೆ ಕರ್ನಾಟಕಕ್ಕೆ ನೀರು ಹರಿಸುವ ಬಗ್ಗೆ ಯಾವುದೇ ಸೂಚನೆಯನ್ನು CWRC ನೀಡಿರಲಿಲ್ಲ. ಹೀಗಾಗಿ CWRC ನಿರ್ಧಾರಕ್ಕೆ ತಮಿಳುನಾಡು ಅಸಮಾಧಾನ ವ್ಯಕ್ತಪಡಿಸಿದ್ದು, ಶೀಘ್ರ CWMA ಸಭೆ ಕರೆಯುವಂತೆ ಮನವಿ ಮಾಡಿತ್ತು. ಹೀಗಾಗಿ ಜುಲೈ 22ರಂದು ದೆಹಲಿಯಲ್ಲಿ CWMA ಮೀಟಿಂಗ್​ ನಡೆಯಲಿದೆ. ಕೇಂದ್ರ ಜಲ ಆಯೋಗದ ಅಧ್ಯಕ್ಷರ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಸಿಡಬ್ಲ್ಯುಆರ್​ಸಿಗಿಂತ ಉನ್ನತ ಅಧಿಕಾರವನ್ನು CWMA ಹೊಂದಿದೆ ಎನ್ನುವುದಿಲ್ಲಿ ಗಮನಾರ್ಹ.

ಇದನ್ನೂ ಓದಿ: ತಮ್ಮ ಪಾಲಿನ ನೀರು ಬಿಡುವಂತೆ ತಮಿಳುನಾಡು ಪಟ್ಟು; ಸಾಧ್ಯವೇ ಇಲ್ಲ ಎಂದ ಕರ್ನಾಟಕ

CWRC ಸಭೆಯಲ್ಲಿ ಕರ್ನಾಟಕದ ವಾದ ಏನಾಗಿತ್ತು?

ಕೆಆರ್​ಎಸ್​ನಿಂದ ತಮಿಳುನಾಡಿಗೆ ನೀರು ಹರಿಸಲು ಸಾಧ್ಯವಿಲ್ಲವೆಂದು CWRC ಸಭೆಯಲ್ಲಿ ಕರ್ನಾಟಕ ವಾದಿಸಿತ್ತು. ಕಾವೇರಿ ಕೊಳ್ಳದಲ್ಲಿ ಮಳೆ ಅಭಾವ ಆಗಿದೆ. ಜೂನ್ ತಿಂಗಳಲ್ಲಿ ಜಲಾಶಯಗಳಿಗೆ ಶೂನ್ಯ ಒಳಹರಿವಿದ್ದು, ಜುಲೈ ತಿಂಗಳಲ್ಲಿ ಹಲವೆಡೆ ಸ್ವಲ್ಪ ಪ್ರಮಾಣದಲ್ಲಿ ಮಳೆಯಾಗಿದೆ. ಇದರಿಂದ ಬರಿದಾದ ಡ್ಯಾಂಗಳಿಗೆ ಸ್ವಲ್ಪ ಪ್ರಮಾಣದಲ್ಲಿ ನೀರು ಸಂಗ್ರಹವಾಗಿದೆ. ಈ ನಡುವೆ ಮಾನ್ಸೂನ್ ಮತ್ತೆ ಚುರುಕು ಪಡೆಯುವ ಯಾವ ಮುನ್ಸೂಚನೆ ಇಲ್ಲ. ಹೀಗಾಗಿ ಸದ್ಯ ಸಂಗ್ರಹವಿರುವ ನೀರನ್ನು ಮುಂದಿನ ಮಾನ್ಸೂನ್​ವರೆಗೂ ಕುಡಿಯಲು ಬಳಸಿಕೊಳ್ಳಬೇಕು. ಕರ್ನಾಟಕದಲ್ಲಿ ರೈತರು ಕೃಷಿಗೆ ನೀರು ಕೇಳುತ್ತಿದ್ದಾರೆ, ಆದರೆ ನಾವು ಬಿಡುತ್ತಿಲ್ಲ. ರಾಜ್ಯದಲ್ಲಿ ಸಂಪೂರ್ಣ ಬರ ಆವರಿಸಿದೆ. ಹೀಗಾಗಿ ತಮಿಳುನಾಡಿಗೆ ನೀರು ಬಿಡಲು ಸಾಧ್ಯವೇ ಇಲ್ಲ. ನಮಗೆ ಇಲ್ಲಿ ಕುಡಿಯಲೂ ನೀರಿಲ್ಲ ಎಂದು ಕರ್ನಾಟಕ ತಿಳಿಸಿತ್ತು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಪ್ಲಾಸ್ಟಿಕ್ ನೋಟುಗಳನ್ನು ಮುದ್ರಿಸಲಿರುವ ಆರ್​ಬಿಐ; ನಕಲಿ ಮಾಡಲು ಆಗದ ಈ ನೋಟುಗಳ ವಿಶೇಷತೆಯೇನು? – Kannada News | RBI to print polymer notes of Rs 10, Rs 20 face value

ನವದೆಹಲಿ, ಜುಲೈ 20: ಭಾರತೀಯ ರಿಸರ್ವ್ ಬ್ಯಾಂಕ್ (RBI) ಕಾಗದದ ನೋಟುಗಳ ಬದಲಿಗೆ ಪಾಲಿಮರ್ (ಪ್ಲಾಸ್ಟಿಕ್) ನೋಟುಗಳನ್ನು ಪರಿಚಯಿಸಲು ಪ್ರಾಯೋಗಿಕ ಯೋಜನೆಗೆ (Pilot Project) ಸಿದ್ಧತೆ ನಡೆಸುತ್ತಿದೆ. ಆರ್‌ಬಿಐನ ನೋಟು ಮುದ್ರಣ ಸಂಸ್ಥೆಯಾದ ‘ಭಾರತೀಯ ರಿಸರ್ವ್ ಬ್ಯಾಂಕ್ ನೋಟ್ ಮುದ್ರಣ್ ಪ್ರೈವೇಟ್ ಲಿಮಿಟೆಡ್’ (BRBNMPL) ಗ್ಲೋಬಲ್ ಟೆಂಡರ್ (EOI) ಕರೆದಿದ್ದು, ಪ್ರಾಯೋಗಿಕವಾಗಿ ₹10 ಮತ್ತು ₹20 ಮುಖಬೆಲೆಯ ನೋಟುಗಳಿಗೆ ಪ್ಲಾಸ್ಟಿಕ್ ಹಾಳೆಗಳನ್ನು ಪೂರೈಸಲು ಜಾಗತಿಕ ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಿದೆ.

ಪ್ಲಾಸ್ಟಿಕ್ ನೋಟುಗಳ ವಿಶೇಷತೆಗಳೇನು?

  • ದೀರ್ಘಾವಧಿ ಬಾಳಿಕೆ: ಕಾಗದದ ನೋಟುಗಳಿಗೆ ಹೋಲಿಸಿದರೆ ಪಾಲಿಮರ್ ನೋಟುಗಳು ನೀರು, ಕೊಳಕು ಮತ್ತು ಹರಿಯುವಿಕೆಗೆ ಹೆಚ್ಚಿನ ನಿರೋಧಕತೆ ಹೊಂದಿದ್ದು, 4 ರಿಂದ 5 ಪಟ್ಟು ಹೆಚ್ಚು ಕಾಲ ಬಾಳಿಕೆ ಬರಲಿವೆ.
  • ಸುರಕ್ಷತಾ ಫೀಚರ್ಸ್: ಕಳ್ಳನೋಟುಗಳ ಹಾವಳಿ ತಡೆಯಲು ಈ ನೋಟುಗಳಲ್ಲಿ ಪಾರದರ್ಶಕ ವಿಂಡೋ, ಮೆಟಾಲಿಕ್ ನ್ಯೂಮರಲ್, ಮ್ಯಾಗ್ನೆಟಿಕ್ ಥ್ರೆಡ್ ಹಾಗೂ ನೆರಳು ಚಿತ್ರಗಳಂತಹ ಅತ್ಯಾಧುನಿಕ ಭದ್ರತಾ ಫೀಚರ್‌ಗಳನ್ನು ಸೇರಿಸಲಾಗುತ್ತದೆ. ಇವುಗಳನ್ನು ನಕಲು ಮಾಡುವುದು ಬಹಳ ಕಷ್ಟ.

ಇದನ್ನೂ ಓದಿ: ಗ್ರಾಹಕರಿಗೆ DND ಆಯ್ಕೆ ತೋರಿಸಿ, ಬ್ಲಾಕ್ಡ್ ಬ್ಯಾಡ್ಜ್ ಅಲ್ಲ; ಟ್ರೂಕಾಲರ್​ಗೆ ಸರ್ಕಾರ ನಿರ್ದೇಶನ

ಪ್ಲಾಸ್ಟಿಕ್ ನೋಟು ಪೂರೈಕೆದಾರರಿಗೆ ಕಟ್ಟುನಿಟ್ಟಿನ ನಿಯಮಗಳು

ಹೊಸ ಸೆಕ್ಯೂರಿಟಿ ಫೀಚರ್​ಗಳಿರುವ ವಿಶೇಷೀಕೃತ ಪಾಲಿಮರ್ ಸಬ್​ಸ್ಟ್ರೇಟ್ ಶೀಟ್​ಗಳನ್ನು ತಯಾರಿಸುವವರು ಇಒಐ ಸಲ್ಲಿಸಬಹುದು ಎಂದು ಆರ್​ಬಿಐ ತಿಳಿಸಿದೆ. ಪೂರೈಕೆದಾರರು ಚೀನಾ ಅಥವಾ ಪಾಕಿಸ್ತಾನದೊಂದಿಗೆ ಯಾವುದೇ ಸಂಪರ್ಕ ಹೊಂದಿರಬಾರದು ಮತ್ತು ನೋಟುಗಳ ತಯಾರಿಕೆಯಲ್ಲಿ ಪ್ರಾಣಿಗಳ ಕೊಬ್ಬು (Animal Tallow) ಬಳಸದಿರುವುದನ್ನು ದೃಢೀಕರಿಸಬೇಕು ಎನ್ನುವ ನಿಯಮಗಳನ್ನೂ ಸೇರಿಸಲಾಗಿದೆ.

ಪೇಪರ್ ನೋಟುಗಳು ಬ್ಯಾನ್ ಆಗುವುದಿಲ್ಲ?

ಪ್ರಸ್ತುತ ಚಾಲ್ತಿಯಲ್ಲಿರುವ ಕಾಗದದ ನೋಟುಗಳನ್ನು ತಕ್ಷಣವೇ ಹಿಂಪಡೆಯಲಾಗುತ್ತದೆ ಎಂಬ ವದಂತಿಗಳು ಸುಳ್ಳು. ಈ ಪಾಲಿಮರ್ ನೋಟುಗಳ ಯೋಜನೆಯು ಆರಂಭಿಕ ಹಾಗೂ ಪ್ರಾಯೋಗಿಕ ಹಂತದಲ್ಲಿದ್ದು, ಈ ಪರೀಕ್ಷೆಗಳು ಯಶಸ್ವಿಯಾದರೆ ಮಾತ್ರ ಮುಂದಿನ ದಿನಗಳಲ್ಲಿ ಹಂತ-ಹಂತವಾಗಿ ಜಾರಿಗೆ ಬರಲಿದೆ ಎಂದು ಹೇಳಲಾಗಿದೆ. ಸದ್ಯಕ್ಕೆ 10 ರೂ ಮತ್ತು 20 ರೂ ಮುಖಬೆಲೆಯ ನೋಟುಗಳನ್ನು ಮಾತ್ರ ಪಾಲಿಮರ್​ನಿಂದ ಮುದ್ರಿಸಲಾಗುತ್ತದೆ. ಈ ಪೈಲಟ್ ಪ್ರಾಜೆಕ್ಟ್ ಯಶಸ್ವಿಯಾದ ಬಳಿಕ ಬೇರೆ ನೋಟುಗಳನ್ನೂ ಪ್ಲಾಸ್ಟಿಕ್​ನಿಂದಲೇ ತಯಾರಿಸಲು ಆರ್​ಬಿಐ ಮುಂದಾಗಬಹುದು.

ಇದನ್ನೂ ಓದಿ: ಸ್ಕೂಲ್​ನಲ್ಲಿ ಫೇಲ್, ಬ್ಯುಸಿನೆಸ್​ನಲ್ಲಿ ವಿನ್; ದೊಡ್ಡ ಬ್ಯುಸಿನೆಸ್ ಸಾಮ್ರಾಜ್ಯ ಕಟ್ಟಿದ ರೋನಿ ಸ್ಕ್ರೂವಾಲಾ ಅವರ ಯಶೋಗಾಥೆ

ಬೇರೆ ಬೇರೆ ದೇಶಗಳಲ್ಲಿ ಇವೆಯಾ ಪ್ಲಾಸ್ಟಿಕ್ ನೋಟುಗಳು?

ಹಲವು ದೇಶಗಳಲ್ಲಿ ಪಾಲಿಮರ್​ನಿಂದ ತಯಾರಿಸಲಾದ ನೋಟುಗಳಿವೆ. ಆಸ್ಟ್ರೇಲಿಯಾ, ಕೆನಡಾ, ನ್ಯೂಜಿಲ್ಯಾಂಡ್, ಸಿಂಗಾಪುರ್, ಬ್ರಿಟನ್ ಮೊದಲಾದ ಸುಮಾರು 40 ದೇಶಗಳಲ್ಲಿ ಪ್ಲಾಸ್ಟಿಕ್ ನೋಟುಗಳನ್ನು ಮುದ್ರಿಸಲಾಗುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಶೇರುಬಜಾರು ಕುಸಿತ; ಕೆಂಪು ಬಣ್ಣಕ್ಕೆ ತಿರುಗಿದ ಸೆನ್ಸೆಕ್ಸ್, ನಿಫ್ಟಿ ಸೇರಿ ಪ್ರಮುಖ ಸೂಚ್ಯಂಕಗಳು; ಏನು ಕಾರಣ? – Kannada News | Stock Market down on Monday, key reasons behind the fall of sensex, nifty

ನವದೆಹಲಿ, ಜುಲೈ 20: ಜಾಗತಿಕ ಮಾರುಕಟ್ಟೆಯ (Stock Market) ಮಂದಗತಿ ಮತ್ತು ಪ್ರಮುಖ ಬ್ಯಾಂಕಿಂಗ್ ಶೇರುಗಳಲ್ಲಿನ ಮಾರಾಟದ ಒತ್ತಡದಿಂದಾಗಿ ಭಾರತೀಯ ಶೇರು ಮಾರುಕಟ್ಟೆಯ ಪ್ರಮುಖ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ 50 ಭಾರಿ ಕುಸಿತ ಕಂಡಿವೆ. ಸೆನ್ಸೆಕ್ಸ್ ಸುಮಾರು 700 ಅಂಕಗಳವರೆಗೆ (ಗರಿಷ್ಠ 1%) ಇಳಿಕೆಯಾಗಿ 77,445 ಅಂಕಗಳ ಕನಿಷ್ಠ ಮಟ್ಟವನ್ನು ತಲುಪಿತು. ನಿಫ್ಟಿ 50 ಸೂಚ್ಯಂಕವು ಬೆಳಗಿನ ಒಂದು ಹಂತದಲ್ಲಿ 180ಕ್ಕೂ ಹೆಚ್ಚು ಅಂಕಗಳನ್ನು ಕಳೆದುಕೊಂಡು 24,150 ಮಟ್ಟಕ್ಕೆ ಕುಸಿದಿತ್ತು. ಇಂಧನ, ಯುಟಿಲಿಟಿ, ಕನ್ಸೂಮರ್ ಡುರಬಲ್ ಕ್ಷೇತ್ರದ ಸೂಚ್ಯಂಕಗಳು ಪಾಲಿಸಿಟಿವ್ ಇವೆ. ಉಳಿದಂತೆ ಹೆಚ್ಚಿನ ಸೂಚ್ಯಂಕಗಳು ಕೆಂಪು ಬಣ್ಣಕ್ಕೆ ತಿರುಗಿವೆ.

ಜುಲೈ 20ರಂದು ಷೇರು ಮಾರುಕಟ್ಟೆ ಕುಸಿತಕ್ಕೆ ಪ್ರಮುಖ ಕಾರಣಗಳು

ಜಾಗತಿಕ ಮಾರುಕಟ್ಟೆಗಳ ಹಿನ್ನಡೆ

ಜಾಗತಿಕ ಶೇರು ಮಾರುಕಟ್ಟೆಗಳು (global markets) ಇಂದು ಕಳೆಗುಂದಿವೆ. ಇದು ಭಾರತದ ಮಾರುಕಟ್ಟೆಯ ಮೇಲೂ ಪರಿಣಾಮ ಬೀರಿದೆ.

ಬ್ಯಾಂಕಿಂಗ್ ಸೆಕ್ಟರ್ ಮೇಲೆ ಒತ್ತಡ

ಮೊದಲ ತ್ರೈಮಾಸಿಕ (Q1) ಆರ್ಥಿಕ ಫಲಿತಾಂಶಗಳ (Quarterly results) ಪ್ರಕಟಣೆಯ ನಂತರ ಪ್ರಮುಖ ಖಾಸಗಿ ಬ್ಯಾಂಕ್‌ಗಳ (ಎಚ್‌ಡಿಎಫ್‌ಸಿ, ಆಕ್ಸಿಸ್, ಕೊಟಕ್ ಬ್ಯಾಂಕ್) ಶೇರುಗಳ ಮೇಲೆ ಒತ್ತಡ ಬಿದ್ದಿದೆ. ಬಹಳಷ್ಟು ಹೂಡಿಕೆದಾರರು ಬ್ಯಾಂಕಿಂಗ್ ಶೇರುಗಳಿಂದ ಪ್ರಾಫಿಟ್ ಬುಕಿಂಗ್ ಮಾಡಿದ್ದಾರೆ.

ತೈಲ ಬೆಲೆ ಏರಿಕೆ

ಕಚ್ಚಾ ತೈಲ ಬೆಲೆ ಒಂದು ಬ್ಯಾರಲ್​ಗೆ 90 ಡಾಲರ್​ಗಿಂತ ಹೆಚ್ಚು ಬೆಲೆಗೆ ಏರಿದೆ. ಹಾರ್ಮುಜ್ ಜಲಸಂಧಿಯಲ್ಲಿ ಬಿಕ್ಕಟ್ಟು ಶಮನವಾಗದ ಹಿನ್ನೆಲೆಯಲ್ಲಿ ತೈಲ ಬೆಲೆ ಮತ್ತಷ್ಟು ಏರುವ ಸಾಧ್ಯತೆ ಇದೆ. ಇದು ಮಾರುಕಟ್ಟೆಯ ಉತ್ಸಾಹ ಕುಂದಿಸಿರಬಹುದು.

ರುಪಾಯಿ ಮೌಲ್ಯ ಕುಸಿತ

ಡಾಲರ್ ಎದುರು ರುಪಾಯಿ ದುರ್ಬಲ ಪ್ರದರ್ಶನ ಮುಂದುವರಿದಿದೆ. ಸೋಮವಾರ ರುಪಾಯಿ ಮೌಲ್ಯ ಪ್ರತೀ ಡಾಲರ್​ಗೆ 96.4575 ಮಟ್ಟಕ್ಕೆ ಕುಸಿದಿದೆ. ಇದು ರುಪಾಯಿಯ ಸಾರ್ವಕಾಲಿಕ ಕೆಳಮಟ್ಟವಾದ 96.9650ಗೆ ಬಹಳ ಸಮೀಪ ಇದೆ. ರುಪಾಯಿ ಈ ಕನಿಷ್ಠ ಮಟ್ಟವನ್ನೂ ದಾಟಿ ಬಿಡುವ ಸಾಧ್ಯತೆ ಇದೆ.

ಎಫ್​ಪಿಐಗಳಿಂದ ಮಾರಾಟ ಹೆಚ್ಚಳ

ವಿದೇಶೀ ಪೋರ್ಟ್​ಫೋಲಿಯೋ ಹೂಡಿಕೆದಾರರು ಷೇರುಗಳ ಮಾರಾಟ ಮಾಡುತ್ತಿರುವ ಟ್ರೆಂಡ್ ಮುಂದುವರಿದಿದೆ. ಕಳೆದ ವಾರ (ಜುಲೈ 13-17) ಕ್ಯಾಷ್ ಸೆಗ್ಮೆಂಟ್​ನಲ್ಲಿ 9,120 ಕೋಟಿ ರೂ ಮೌಲ್ಯದ ಷೇರುಗಳನ್ನು ಇವರು ಮಾರಿ ಕೈತೊಳೆದುಕೊಂಡಿದ್ದಾರೆ.

ನಿಫ್ಟಿ ತಾಂತ್ರಿಕ ಕಾರಣ

ಪರಿಣಿತರ ಪ್ರಕಾರ ನಿಫ್ಟಿ50 ಸೂಚ್ಯಂಕವು 24,200 ಅಂಕಗಳ ಮಟ್ಟಕ್ಕಿಂತ ಕೆಳಗೆ ಹೋದರೆ ಬಹಳ ಒತ್ತಡಕ್ಕೆ ಸಿಲುಕಬೇಕಾಗುತ್ತದೆ. 23,800 ಅಂಕಗಳವರೆಗೆ ಅದು ಕುಸಿಯುವ ಅಪಾಯ ಇರುತ್ತದೆ. ಸದ್ಯ ನಿಫ್ಟಿ 24,181 ಅಂಕಗಳ ಮಟ್ಟದಲ್ಲಿದೆ.

ಇದನ್ನೂ ಓದಿ: ಷೇರುಬಜಾರಿನಲ್ಲಿ ಈ ವಾರ ಕಲರವ; 7 ಹೊಸ ಐಪಿಒಗಳು ಶುರು; 5 ಷೇರುಗಳ ಲಿಸ್ಟಿಂಗ್

ಮಿಡ್‌ಕ್ಯಾಪ್ ಮತ್ತು ಸ್ಮಾಲ್‌ಕ್ಯಾಪ್ ಸ್ಥಿರತೆ: ಪ್ರಮುಖ ಸೂಚ್ಯಂಕಗಳು ಕುಸಿದರೂ, ಮಿಡ್‌ಕ್ಯಾಪ್ 100 ಸೂಚ್ಯಂಕ 0.20% ಹಾಗೂ ಸ್ಮಾಲ್‌ಕ್ಯಾಪ್ 100 ಸೂಚ್ಯಂಕ 0.30% ನಷ್ಟು ಏರಿಕೆ ಕಂಡು ಚೇತರಿಕೆ ಕಾಯ್ದುಕೊಂಡವು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On – 12:12 pm, Mon, 20 July 26

Source link

ಪಾಕ್ ಕ್ರಿಕೆಟಿಗನ ರೆಕಾರ್ಡ್​ ಉಡೀಸ್: ರೂಟ್ ಹೊಸ ವಿಶ್ವ ದಾಖಲೆ – Kannada News | Joe Root holds New world record in ODI Cricket

ಏಕದಿನ ಕ್ರಿಕೆಟ್​ನಲ್ಲಿ ಜೋ ರೂಟ್ ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಅದು ಸಹ ಪಾಕಿಸ್ತಾನದ ಮಾಜಿ ಆಟಗಾರ ಜಾವೆದ್ ಮಿಯಾಂದಾದ್ ಹೆಸರಿನಲ್ಲಿದ್ದ ವರ್ಲ್ಡ್​ ರೆಕಾರ್ಡ್ ಮುರಿಯುವ ಮೂಲಕ ಎಂಬುದು ವಿಶೇಷ.ಭಾರತದ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ರೂಟ್ ಒಮ್ಮೆಯೂ ಔಟ್ ಆಗಿರಲಿಲ್ಲ. ಆಡಿದ ಮೂರು ಇನಿಂಗ್ಸ್​ಗಳ ಮೂಲಕ ಕಲೆಹಾಕಿದ್ದು ಬರೋಬ್ಬರಿ 249 ರನ್​​ಗಳು.

ಈ 249 ರನ್​​ಗಳೊಂದಿಗೆ ದ್ವಿಪಕ್ಷೀಯ ಏಕದಿನ ಸರಣಿಯೊಂದರಲ್ಲಿ ಒಮ್ಮೆಯೂ ಔಟಾಗದೆ ಅತಿ ಹೆಚ್ಚು ರನ್ ಕಲೆಹಾಕಿದ ಜಗತ್ತಿನ ಏಕೈಕ ಬ್ಯಾಟರ್ ಎಂಬ ಹೆಗ್ಗಳಿಕೆಗೆ ರೂಟ್ ಪಾತ್ರರಾಗಿದ್ದಾರೆ. ಇದಕ್ಕೂ ಮುನ್ನ ಈ ವಿಶ್ವ ದಾಖಲೆ ಪಾಕಿಸ್ತಾನ್ ತಂಡದ ಮಾಜಿ ನಾಯಕ ಜಾವೆದ್ ಮಿಯಾಂದಾದ್ ಹೆಸರಿನಲ್ಲಿತ್ತು.

  • 1982 ರಲ್ಲಿ ಭಾರತದ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಜಾವೆದ್ ಮಿಯಾಂದಾದ್ ಕ್ರಮವಾಗಿ 45*, 119*, 70* ರನ್ ಬಾರಿಸುವ ಮೂಲಕ ಒಟ್ಟು 234 ರನ್ ಕಲೆಹಾಕಿದ್ದರು.

ಈ ಮೂಲಕ ಮೂರು ಮ್ಯಾಚ್​​ಗಳ ಸರಣಿಯ ಮೂರು ಇನಿಂಗ್ಸ್​​ಗಳಲ್ಲೂ ಅಜೇಯರಾಗಿ ಉಳಿದು ಗರಿಷ್ಠ ಸ್ಕೋರ್​ ಗಳಿಸಿದ ಬ್ಯಾಟರ್ ಎನಿಸಿಕೊಂಡಿದ್ದರು. ಇದೀಗ ಈ ದಾಖಲೆಯನ್ನು ಜೋ ರೂಟ್ ಅಳಿಸಿ ಹಾಕಿದ್ದಾರೆ.

  • ಭಾರತದ ವಿರುದ್ಧದ ಪಂದ್ಯದ ಮೂರು ಮ್ಯಾಚ್​​​ಗಳ ಸರಣಿಯಲ್ಲಿ ರೂಟ್ ಕ್ರಮವಾಗಿ 76*, 99*, 74* ರನ್​​ಗಳ ಅಜೇಯ ಇನಿಂಗ್ಸ್ ಆಡಿದ್ದಾರೆ. ಈ ಮೂಲಕ ಕಲೆಹಾಕಿದ್ದು ಬರೋಬ್ಬರಿ 249 ರನ್​ಗಳು.

ಇದರೊಂದಿಗೆ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಅಜೇಯರಾಗಿ ಉಳಿದು ಗರಿಷ್ಠ ಸ್ಕೋರ್ ಗಳಿಸಿದ ಬ್ಯಾಟರ್ ಎಂಬ ವಿಶ್ವ ದಾಖಲೆ ಜೋ ರೂಟ್ ಪಾಲಾಯಿತು.

ಅಷ್ಟೇ ಅಲ್ಲದೆ ದ್ವಿಪಕ್ಷೀಯ ಸರಣಿಯೊಂದರಲ್ಲಿ ಅಜೇಯರಾಗಿ ಉಳಿದು ಗರಿಷ್ಠ ಸ್ಕೋರ್ ಗಳಿಸಿದ ವಿಶ್ವ ದಾಖಲೆಯನ್ನು ಕೂಡ ರೂಟ್ ತಮ್ಮದಾಗಿಸಿಕೊಂಡಿದ್ದಾರೆ.ಈ ಹಿಂದೆ ಈ ದಾಖಲೆ ಇಂಗ್ಲೆಂಡ್ ತಂಡದ ಮತ್ತೊಬ್ಬ ಸ್ಟಾರ್ ಆಟಗಾರ ಜೋಸ್ ಬಟ್ಲರ್ ಹೆಸರಿನಲ್ಲಿತ್ತು.

  • ಜೋಸ್ ಬಟ್ಲರ್ 2022ರಲ್ಲಿ ನೆದರ್ಲ್ಯಾಂಡ್ಸ್ ವಿರುದ್ಧದ ಸರಣಿಯಲ್ಲಿ 2 ಇನಿಂಗ್ಸ್​​ಗಳ (162*, 86*) ಮೂಲಕ ಔಟಾಗದೆ 248 ರನ್ ಗಳಿಸಿದ್ದರು. ಇದೀಗ ಜೋ ರೂಟ್ ಈ ದಾಖಲೆಯನ್ನು ಕೇವಲ 1 ರನ್‌ನಿಂದ ಮೀರಿ ನಿಂತಿದ್ದಾರೆ.
  • ಭಾರತದ ವಿರುದ್ಧದ ಸರಣಿಯ ಮೂರು ಇನಿಂಗ್ಸ್​​ಗಳಲ್ಲೂ ಅರ್ಧಶತಕ ಸಿಡಿಸಿರುವ ಜೋ ರೂಟ್ ಒಟ್ಟು 249 ರನ್​​ ಗಳಿಸಿದ್ದಾರೆ. ಈ ಮೂಲಕ ಒಡಿಐ ಸಿರೀಸ್​​ನಲ್ಲಿ ನಾಟೌಟ್ ಆಗಿ ಗರಿಷ್ಠ ರನ್ ಕಲೆಹಾಕಿದ ಬ್ಯಾಟರ್ ಎಂಬ ವಿಶ್ವ ದಾಖಲೆ ನಿರ್ಮಿಸಿದ್ದಾರೆ.

ಸತತ 6 ಫಿಫ್ಟಿ ದಾಖಲೆ:

ಈ ಅದ್ಭುತ ಸರಣಿಯ ಮೂಲಕ ಜೋ ರೂಟ್ ಇಂಗ್ಲೆಂಡ್ ಕ್ರಿಕೆಟ್ ಇತಿಹಾಸದಲ್ಲೇ ಮತ್ತೊಂದು ಅಪರೂಪದ ಸಾಧನೆ ಮಾಡಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಸತತ 6 ಅರ್ಧಶತಕಗಳನ್ನು (61, 75, 111*, 76*, 99*, 74*) ಬಾರಿಸಿದ ಇಂಗ್ಲೆಂಡ್‌ನ ಮೊದಲ ಬ್ಯಾಟರ್ ಎಂಬ ಕೀರ್ತಿಗೂ ರೂಟ್ ಭಾಜನರಾಗಿದ್ದಾರೆ.

ಇದನ್ನೂ ಓದಿ: ರೋಹಿತ್ ಶರ್ಮಾ ಸೆಂಚುರಿಗೆ ಸಚಿನ್ ಸಾರ್ವಕಾಲಿಕ ದಾಖಲೆ ಉಡೀಸ್

ಜೋ ರೂಟ್ ಅವರ ಈ ಅಸಾಧಾರಣ ಬ್ಯಾಟಿಂಗ್ ಪ್ರದರ್ಶನವು ಕೇವಲ ಅವರ ರನ್ ಗಳಿಸುವ ಸಾಮರ್ಥ್ಯವನ್ನು ಮಾತ್ರವಲ್ಲ, ಅವರ ಅದ್ಭುತ ಸ್ಥಿರತೆ ಮತ್ತು ಸುದೀರ್ಘ ಕಾಲ ಕ್ರೀಸ್‌ನಲ್ಲಿ ನಿಲ್ಲುವ ದಕ್ಷತೆಯನ್ನು ಜಗತ್ತಿಗೆ ಮತ್ತೊಮ್ಮೆ ಸಾಬೀತುಪಡಿಸಿರುವುದು ಸುಳ್ಳಲ್ಲ.

Published On – 1:28 pm, Mon, 20 July 26

Source link

Exit mobile version