ಅತಿ ಆಸೆ ಗತಿಗೇಡು: ಲೋನ್ ಆಸೆಗೆ ತಾಳಿ ಅಡವಿಟ್ಟು ಮುಂಗಾಡ ಹಣ ಕಟ್ಟಿ ಮೋಸ ಹೋದ ಮಹಿಳೆಯರು – Kannada News | Vijayapura Loan Fraud: Women Duped of Lakhs in Low Interest Loan Scam

ವಿಜಯಪುರ, ಜುಲೈ 20: “ಮೋಸ ಹೋಗುವವರು ಇರುವವರೆಗೂ ಮೋಸ ಮಾಡುವವರು ಇದ್ದೇ ಇರುತ್ತಾರೆ” ಎಂಬ ಮಾತಿಗೆ ಪುಷ್ಟಿ ನೀಡುವಂತಹ ಮತ್ತೊಂದು ವಂಚನೆ (Fraud) ಜಾಲ ವಿಜಯಪುರದಲ್ಲಿ (vijayapura) ಬಯಲಾಗಿದೆ. ಕಡಿಮೆ ಬಡ್ಡಿ ದರದಲ್ಲಿ ಸಾಲ ಕೊಡಿಸುವುದಾಗಿ ನಂಬಿಸಿ ನೂರಾರು ಅಮಾಯಕ ಗ್ರಾಮೀಣ ಮಹಿಳೆಯರಿಗೆ ಮಕ್ಮಲ್ ಟೋಪಿ ಹಾಕಲಾಗಿದ್ದು, ಸಾಲದ ಆಸೆಗೆ ಬಿದ್ದ ನೂರಾರು ಜನ ಮುಂಗಾಡವಾಗಿ ಹಣ ಕಟ್ಟಿ ಲಕ್ಷ ಲಕ್ಷ ಹಣ ಕಳೆದುಕೊಂಡು ಕಣ್ಣೀರು ಹಾಕುತ್ತಿದ್ದಾರೆ.

ಜನರನ್ನ ನಂಬಿಸಲು ಹೈಟೆಕ್ ಪ್ಲ್ಯಾನ್ ಮಾಡಿದ್ದ ಖದೀಮರು​

ವಿಜಯಪುರ ತಾಲೂಕಿನ ಲೋಂಗಾವ, ಬಳ್ಳೊಳ್ಳಿ, ಕಪನಿಂಬರಗಿ, ಹೊರ್ತಿ, ತಿಕೋಟ ಮತ್ತು ಜಾಲಗೇರಿ ಸೇರಿದಂತೆ ಹಲವು ಹಳ್ಳಿಗಳ ನೂರಾರು ಜನರು ವಂಚಕರ ಜಾಲಕ್ಕೆ ಸಿಲುಕಿ ಹಣ ಕಳೆದಿಕೊಂಡಿದ್ದಾರೆ. ಜನರನ್ನು ನಂಬಿಸಲೆಂದೇ ಈ ಖದೀಮರು ಹೈಟೆಕ್ ಪ್ಲ್ಯಾನ್​ ಮಾಡಿದ್ದರು. ನಗರದ ಬಂಜಾರಾ ಕ್ರಾಸ್ ಬಳಿಯ ಪಾಟೀಲ್ ಪ್ಲಾನೆಟ್ ಒಳಗೆ ಸುಸಜ್ಜಿತ ಕಚೇರಿಯನ್ನು ತೆರೆದಿದ್ದರು. ವಿಜಯಪುರದ ಧೀರಜ್ ಸಿಂಗ್ ರಜಪೂತ್ ಹಾಗೂ ಲೋಂಗಾವ ಮೂಲದ ಬಂದೇನವಾಜ್ ಪಠಾಣ್ ಎಂಬುವವರೇ ಈ ವಂಚನೆ ಜಾಲದ ಸೂತ್ರಧಾರರು.

ಇದನ್ನೂ ಓದಿ: ವರ್ಕ್ ಫ್ರಮ್ ಹೋಮ್ ಆಮಿಷ: ಕೋಲಾರದಲ್ಲಿ ಊದುಬತ್ತಿ ಕಂಪನಿಯಿಂದ 10 ಕೋಟಿ ರೂ ವಂಚನೆ!

ಈ ಖದೀಮರು ಕೇವಲ ನೂರಕ್ಕೆ 50 ಪೈಸೆ ಬಡ್ಡಿ ದರದಲ್ಲಿ ಲೋನ್ ಕೊಡುವುದಾಗಿ ನಂಬಿಸಿದ ಈ ಖದೀಮರು, ಮೊದಲು ಮೂರ್ನಾಲ್ಕು ಕಂತಿನ ಹಣ ಕಟ್ಟಿ, ಆಮೇಲೆ ನಿಮ್ಮ ಅಕೌಂಟ್‌ಗೆ ನೇರವಾಗಿ ಲೋನ್ ಜಮೆ ಆಗುತ್ತದೆ ಎಂದು ಯಾಮಾರಿಸಿದ್ದಾರೆ.

ತಾಳಿ ಅಡವಿಟ್ಟು ಹಣ ಕಟ್ಟಿದ ಮಹಿಳೆಯರು

ಹೆಚ್ಚಿನ ಲೋನ್ ಸಿಗುತ್ತದೆ ಎಂಬ ಆಸೆಗೆ ಬಿದ್ದ ಹಳ್ಳಿಗರು 50 ಸಾವಿರದಿಂದ ಹಿಡಿದು 1 ಲಕ್ಷ ರೂ.ವರೆಗೂ ಹಣ ತಂದು ಕಟ್ಟಿದ್ದಾರೆ. ಅದರಲ್ಲೂ ದುರಂತ ಅಂದರೆ ಸಾಲ ಸಿಕ್ಕರೆ ಬದುಕು ಹಸನಾಗಬಹುದು ಎಂಬ ಆಸೆಯಿಂದ ಗ್ರಾಮೀಣ ಭಾಗದ ಮಹಿಳೆಯರು ತಮ್ಮ ತಾಳಿಯನ್ನ ಅಡವಿಟ್ಟು ತಂದು ಹಣ ಕಟ್ಟಿದ್ದಾರೆ. ಮಹಿಳೆಯರಿಗೆ ನಂಬಿಕೆ ಬರಲಿ ಎಂದು ನಕಲಿ ರಸೀದಿ, ಬಿಲ್ ಹಾಗೂ ನಕಲಿ ಬಾಂಡ್‌ ಪೇಪರ್‌ಗಳನ್ನು ಸಹ ಈ ವಂಚಕರು ನೀಡಿದ್ದರು. ಸದ್ಯ ಅಮಾಯಕರಿಂದ ಕೋಟಿಗೂ ಅಧಿಕ ಹಣ ಸಂಗ್ರಹಿಸಿ ಖದೀಮರು ಊರು ಬಿಟ್ಟು ಪರಾರಿಯಾಗಿದ್ದಾರೆ.

ಎಸ್​​ಪಿ ಕಚೇರಿ ಮೆಟ್ಟಿಲೇರಿದ ಸಂತ್ರಸ್ತರು 

ಅತ್ತ ಲೋನ್​​ ಇಲ್ಲ, ಇತ್ತ ಕಟ್ಟಿದ ಹಣವೂ ಇಲ್ಲದೇ ಕಂಗಾಲಾದ ಮಹಿಳೆಯರು ಮತ್ತು ಸಂತ್ರಸ್ತರು ದೂರು ನೀಡಲು ವಿಜಯಪುರ ಎಸ್​​ಪಿ ಕಚೇರಿ ಮೆಟ್ಟಿಲು ಹತ್ತಿದ್ದಾರೆ. ವಿಷಯದ ಗಾಂಭೀರ್ಯತೆ ಅರಿತಿರುವ ಎಸ್​​ಪಿ ಲಕ್ಷ್ಮಣ ನಿಂಬರಗಿ, ಸಂತ್ರಸ್ತರಿಂದ ಪ್ರತ್ಯೇಕ ದೂರುಗಳನ್ನು ದಾಖಲಿಸಿಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಸದ್ಯ ಪೊಲೀಸರು ವಂಚಕರಿಗಾಗಿ ಬಲೆ ಬೀಸಿದ್ದಾರೆ.

ಕರ್ನಾಟಕ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Car Tyres: ಕಾರಿನ ಟೈರ್‌ಗಳು ಮೊದಲು ಬಿಳಿ ಬಣ್ಣದಲ್ಲಿದ್ದವು! ನಂತರ ಕಪ್ಪಾಗಿದ್ದು ಏಕೆ? ಇಲ್ಲಿದೆ ಕಾರಣ – Kannada News | Why car tyres were once white and why they turned black

ಇಂದು ರಸ್ತೆಗಳಲ್ಲಿ ಓಡಾಡುವ ಬಹುತೇಕ ಎಲ್ಲಾ ಕಾರುಗಳ ಟೈರ್‌ಗಳು (Car Tyre) ಕಪ್ಪು ಬಣ್ಣದಲ್ಲೇ ಕಾಣಿಸುತ್ತವೆ. ಆದರೆ ಒಂದು ಕಾಲದಲ್ಲಿ ಕಾರಿನ ಟೈರ್‌ಗಳು ಬಿಳಿ ಅಥವಾ ತೆಳು ಬೂದು ಬಣ್ಣದಲ್ಲಿದ್ದವು ಎಂಬುದು ಅನೇಕರಿಗೆ ಗೊತ್ತಿಲ್ಲ. ಕಾಲಕ್ರಮೇಣ ತಂತ್ರಜ್ಞಾನದಲ್ಲಿ ಆದ ಬದಲಾವಣೆಗಳಿಂದಲೇ ಟೈರ್‌ಗಳ ಬಣ್ಣವೂ ಬದಲಾಗಿದೆ. ಆರಂಭಿಕ ದಿನಗಳಲ್ಲಿ ಟೈರ್‌ಗಳನ್ನು ನೈಸರ್ಗಿಕ ರಬ್ಬರ್‌ನಿಂದ ತಯಾರಿಸಲಾಗುತ್ತಿತ್ತು. ನೈಸರ್ಗಿಕ ರಬ್ಬರ್‌ನ ಬಣ್ಣ ಹಾಲಿನಂತೆಯೇ ಬಿಳಿಯಾಗಿರುವುದರಿಂದ ಆಗಿನ ಟೈರ್‌ಗಳೂ ಬಿಳಿ ಅಥವಾ ಬೂದು ಬಣ್ಣದಲ್ಲಿದ್ದವು. ಆದರೆ ಈ ಟೈರ್‌ಗಳು ಹೆಚ್ಚು ಬಾಳಿಕೆ ಬರುವುದಿಲ್ಲ, ಬೇಗ ಸವೆದು ಹೋಗುತ್ತವೆ ಮತ್ತು ಹೆಚ್ಚಿನ ಉಷ್ಣತೆಯನ್ನು ಸಹಿಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ.

ಈ ಸಮಸ್ಯೆಗೆ ಪರಿಹಾರವಾಗಿ ತಯಾರಕರು ರಬ್ಬರ್ ಮಿಶ್ರಣಕ್ಕೆ ಕಾರ್ಬನ್ ಬ್ಲ್ಯಾಕ್ (Carbon Black) ಎಂಬ ವಸ್ತುವನ್ನು ಸೇರಿಸಲು ಆರಂಭಿಸಿದರು. ಇದರಿಂದ ಟೈರ್‌ಗಳು ಸಹಜವಾಗಿಯೇ ಕಪ್ಪು ಬಣ್ಣಕ್ಕೆ ತಿರುಗಿದವು. ಆದರೆ ಇದು ಕೇವಲ ಬಣ್ಣಕ್ಕಾಗಿ ಅಲ್ಲ. ಕಾರ್ಬನ್ ಬ್ಲ್ಯಾಕ್ ಟೈರ್‌ಗೆ ಹೆಚ್ಚಿನ ಬಲ, ಬಾಳಿಕೆ ಮತ್ತು ಸವೆತ ನಿರೋಧಕ ಗುಣವನ್ನು ನೀಡುತ್ತದೆ. ಜೊತೆಗೆ ಟೈರ್‌ನೊಳಗಿನ ಉಷ್ಣತೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಮತ್ತು ಸೂರ್ಯನ ಅಲ್ಟ್ರಾವಯೊಲೆಟ್ (UV) ಕಿರಣಗಳಿಂದ ರಬ್ಬರ್ ಹಾಳಾಗುವುದನ್ನೂ ಕಡಿಮೆ ಮಾಡುತ್ತದೆ.

ಒಂದು ಕಾಲದಲ್ಲಿ ವೆಚ್ಚವನ್ನು ಕಡಿಮೆ ಮಾಡಲು ಟೈರ್‌ನ ರಸ್ತೆ ಸಂಪರ್ಕದಲ್ಲಿರುವ ಭಾಗಕ್ಕೆ ಮಾತ್ರ ಕಾರ್ಬನ್ ಬ್ಲ್ಯಾಕ್ ಬಳಸಲಾಗುತ್ತಿತ್ತು. ಉಳಿದ ಬದಿಯ ಭಾಗ ಬಿಳಿಯೇ ಇರುತ್ತಿತ್ತು. ಇದೇ ಕಾರಣದಿಂದ “ವೈಟ್‌ವಾಲ್ ಟೈರ್‌ಗಳು” (Whitewall Tyres) ಜನಪ್ರಿಯವಾದವು. ನಂತರ ತಂತ್ರಜ್ಞಾನ ಅಭಿವೃದ್ಧಿಯಾದಂತೆ ಸಂಪೂರ್ಣ ಟೈರ್‌ಗೂ ಕಾರ್ಬನ್ ಬ್ಲ್ಯಾಕ್ ಬಳಸಲು ಆರಂಭಿಸಲಾಯಿತು ಮತ್ತು ಇಂದಿನಂತೆ ಸಂಪೂರ್ಣ ಕಪ್ಪು ಟೈರ್‌ಗಳು ಸಾಮಾನ್ಯವಾದವು.

Auto Tips: ಕಾರುಗಳಿಗೆ ನಾಲ್ಕೇ ಚಕ್ರಗಳು ಏಕೆ? ಇದರ ಹಿಂದಿನ ವಿಜ್ಞಾನ ತಿಳಿದರೆ ಅಚ್ಚರಿಯಾಗುತ್ತದೆ!

ಇಂದಿಗೂ ಕೆಲ ವಿಂಟೇಜ್ ಹಾಗೂ ಕ್ಲಾಸಿಕ್ ಕಾರುಗಳಲ್ಲಿ ವೈಟ್‌ವಾಲ್ ಟೈರ್‌ಗಳನ್ನು ಕಾಣಬಹುದು. ಆದರೆ ಆಧುನಿಕ ವಾಹನಗಳಲ್ಲಿ ಸುರಕ್ಷತೆ, ಬಾಳಿಕೆ ಮತ್ತು ಉತ್ತಮ ಕಾರ್ಯಕ್ಷಮತೆಯನ್ನು ಗಮನದಲ್ಲಿಟ್ಟುಕೊಂಡು ಕಪ್ಪು ಬಣ್ಣದ ಟೈರ್‌ಗಳನ್ನೇ ಹೆಚ್ಚಾಗಿ ಬಳಸಲಾಗುತ್ತದೆ. ಹೀಗಾಗಿ ಟೈರ್‌ಗಳ ಕಪ್ಪು ಬಣ್ಣವು ಕೇವಲ ಅಲಂಕಾರಕ್ಕಾಗಿ ಅಲ್ಲ, ಅದರ ಹಿಂದೆ ವೈಜ್ಞಾನಿಕ ಹಾಗೂ ತಾಂತ್ರಿಕ ಕಾರಣಗಳಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಹಾರ್ಮುಜ್ ಜಲಸಂಧಿಯಲ್ಲಿ ದಾಳಿಗೊಳಗಾದ ಹಡಗಿನಲ್ಲಿ ಬೆಂಕಿ ಅವಘಡ; ಸಿಬ್ಬಂದಿ ರಕ್ಷಣೆ – Kannada News | Ship caught fire in the strategic Strait of Hormuz following a missile strike crew rescued

ಟೆಹ್ರಾನ್, ಜುಲೈ 20: ವಿಶ್ವದ ಅತ್ಯಂತ ಪ್ರಮುಖ ತೈಲ ಸಾರಿಗೆ ಮಾರ್ಗವಾದ ಹಾರ್ಮುಜ್ ಜಲಸಂಧಿಯಲ್ಲಿ (Strait of Hormuz) ಸರಕು ಸಾಗಣೆ ಹಡಗೊಂದರ ಮೇಲೆ ಭೀಕರ ದಾಳಿ ನಡೆದಿದ್ದು, ಹಡಗು ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿದೆ. ಈ ದಾಳಿಯ ಬೆನ್ನಲ್ಲೇ ರಕ್ಷಣಾ ಪಡೆಗಳು ತಕ್ಷಣ ಕಾರ್ಯಪ್ರವೃತ್ತರಾಗಿದ್ದರಿಂದ ಹಡಗಿನಲ್ಲಿದ್ದ ಎಲ್ಲಾ ಸಿಬ್ಬಂದಿಯನ್ನು ಯಶಸ್ವಿಯಾಗಿ ರಕ್ಷಿಸಲಾಗಿದೆ. ಈ ದಾಳಿಯ ತೀವ್ರತೆಗೆ ಹಡಗಿನಲ್ಲಿ ಭಾರಿ ಪ್ರಮಾಣದ ಸ್ಫೋಟ ಸಂಭವಿಸಿದ್ದು, ಕ್ಷಣಾರ್ಧದಲ್ಲಿ ಬೆಂಕಿ ಇಡೀ ನೌಕೆಯನ್ನು ಆವರಿಸಿದೆ. ಹಡಗಿನಿಂದ ದಟ್ಟವಾದ ಕಪ್ಪು ಹೊಗೆ ಆಕಾಶಕ್ಕೆ ಚಿಮ್ಮುತ್ತಿರುವುದು ಕಂಡುಬಂದಿದೆ.

ಹಾರ್ಮುಜ್ ಜಲಸಂಧಿಯಲ್ಲಿ ಕ್ಷಿಪಣಿ ದಾಳಿಯ ಪರಿಣಾಮವಾಗಿ ಸರಕು ಸಾಗಣೆ ಹಡಗೊಂದರಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, ಅದರಲ್ಲಿದ್ದ ನಾವಿಕರನ್ನು ತಕ್ಷಣವೇ ಸ್ಥಳಾಂತರಿಸಲಾಗಿದೆ. ಅವರೆಲ್ಲರೂ ಸುರಕ್ಷಿತರಾಗಿದ್ದಾರೆ. ಅಮೆರಿಕದ ಈ ಮಿಲಿಟರಿ ಕ್ರಮದ ವಿರುದ್ಧ ಅಂತಾರಾಷ್ಟ್ರೀಯ ಅಣುಶಕ್ತಿ ಸಂಸ್ಥೆಗೆ (IAEA) ಇರಾನ್ ದೂರು ನೀಡಿದೆ. ಹಾರ್ಮುಜ್ ಜಲಸಂಧಿಯಲ್ಲಿ ಹಡಗಿನ ಮೇಲಿನ ದಾಳಿ ಮತ್ತು ಇರಾನ್‌ನ ಒಳಗಿರುವ ಪರಮಾಣು ಕೇಂದ್ರಗಳ ಮೇಲಿನ ಅಮೆರಿಕದ ವೈಮಾನಿಕ ದಾಳಿಗಳು ಗಲ್ಫ್ ಪ್ರದೇಶದಲ್ಲಿ ಸಂಪೂರ್ಣ ಯುದ್ಧದ ಭೀತಿಯನ್ನು ಹುಟ್ಟುಹಾಕಿದ್ದು, ಜಾಗತಿಕ ತೈಲ ಪೂರೈಕೆಯಲ್ಲಿ ಭಾರಿ ಏರುಪೇರಾಗುವ ಆತಂಕ ಮೂಡಿದೆ.

ಇದನ್ನೂ ಓದಿ: ಮಹಾ ಒಪ್ಪಂದವನ್ನು ಕಿತ್ತೊಗೆದ ಇರಾನ್: ಹಾರ್ಮುಜ್ ಕಡಲಿನಲ್ಲಿ ಅಮೆರಿಕ-ಇರಾನ್ ನಡುವೆ ಭೀಕರ ಸಂಘರ್ಷ

“ಅಮೆರಿಕ ಎಸಗಿರುವ ಈ ಅಪರಾಧವನ್ನು ಅಂತಾರಾಷ್ಟ್ರೀಯ ಅಣುಶಕ್ತಿ ಸಂಸ್ಥೆಯ ಗವರ್ನರ್‌ಗಳ ಮಂಡಳಿ ಮತ್ತು ಮಹಾನಿರ್ದೇಶಕರು ಸ್ಪಷ್ಟ ಮಾತುಗಳಲ್ಲಿ ಖಂಡಿಸಬೇಕು. ಐಎಇಎ ತನ್ನ ನಿಲುವನ್ನು ಜಗತ್ತಿನ ಮುಂದೆ ಬಹಿರಂಗಪಡಿಸಬೇಕು ಎಂದು ಇರಾನ್ ನಿರೀಕ್ಷಿಸುತ್ತದೆ” ಎಂದು ಟೆಹ್ರಾನ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರ ಇಸ್ಮಾಯಿಲ್ ಬಘೇಯ್ ಹೇಳಿದ್ದಾರೆ.

ಇರಾನ್ ಮೇಲೆ ಅಮೆರಿಕದ ಬಾಂಬ್ ದಾಳಿ:

ಅಮೆರಿಕ ಇಂದು (ಸೋಮವಾರ) ಮುಂಜಾನೆ ಇರಾನ್ ಮೇಲೆ ಹೊಸದಾಗಿ ಬಾಂಬ್ ದಾಳಿಯ ಸರಣಿಯನ್ನು ಪ್ರಾರಂಭಿಸಿದೆ. ಇದು ಅಮೆರಿಕ ನಡೆಸುತ್ತಿರುವ ಸತತ 9ನೇ ರಾತ್ರಿಯ ಮಿಲಿಟರಿ ಕಾರ್ಯಾಚರಣೆಯಾಗಿದೆ. ಇರಾನ್‌ನ ವಿದ್ಯುತ್ ಸ್ಥಾವರಗಳು ಮತ್ತು ಪ್ರಮುಖ ಸೇತುವೆಗಳನ್ನು ಗುರಿಯಾಗಿಸಿಕೊಂಡು ಅಮೆರಿಕದ ಸೆಂಟ್ರಲ್ ಕಮಾಂಡ್ ಈ ವೈಮಾನಿಕ ದಾಳಿಗಳನ್ನು ನಡೆಸುತ್ತಿದೆ.

ಅಮೆರಿಕದ ಸೆಂಟ್ರಲ್ ಕಮಾಂಡ್ ತನ್ನ ಅಧಿಕೃತ ಪ್ರಕಟಣೆಯಲ್ಲಿ, ವಾಣಿಜ್ಯ ಹಡಗುಗಳು ಮತ್ತು ನಾಗರಿಕ ನಾವಿಕರ ಮೇಲೆ ದಾಳಿ ಮಾಡಲು ಇರಾನ್ ಬಳಸುತ್ತಿರುವ ಮಿಲಿಟರಿ ಸಾಮರ್ಥ್ಯವನ್ನು ಕುಂಠಿತಗೊಳಿಸಲು ನಮ್ಮ ದಾಳಿಗಳು ಮುಂದುವರಿಯಲಿವೆ ಎಂದು ಸ್ಪಷ್ಟಪಡಿಸಿದೆ.

ಇದನ್ನೂ ಓದಿ: ಹಾರ್ಮುಜ್ ಜಲಸಂಧಿಯಲ್ಲಿ ಭಾರತದ ನಾವಿಕರನ್ನು ನಿಯೋಜಿಸಬೇಡಿ; ಹಡಗು ಕಂಪನಿ ಮಾಲೀಕರಿಗೆ ಭಾರತ ಆದೇಶ

‘ಯುನೈಟೆಡ್ ಕಿಂಗ್‌ಡಮ್ ಮ್ಯಾರಿಟೈಮ್ ಟ್ರೇಡ್ ಆಪರೇಷನ್ಸ್’ (UKMTO) ಈ ಘಟನೆಯನ್ನು ದೃಢಪಡಿಸಿದ್ದು, “ಹಡಗಿನಲ್ಲಿದ್ದ ಸಿಬ್ಬಂದಿ ಸುರಕ್ಷಿತವಾಗಿ ಹೊರಬಂದಿದ್ದು, ಅವರನ್ನು ಟಗ್ ಬೋಟ್ ಮೂಲಕ ರಕ್ಷಿಸಲಾಗಿದೆ” ಎಂದು ತಿಳಿಸಿದೆ. ಒಮಾನ್‌ನ ಕುಮ್ಜಾರ್‌ನಿಂದ ಸುಮಾರು 15 ಕಿಲೋಮೀಟರ್ ದೂರದಲ್ಲಿ ಈ ಭೀಕರ ದಾಳಿ ನಡೆದಿದೆ.

ಹಾರ್ಮುಜ್ ಜಲಸಂಧಿಯಲ್ಲಿ ಟ್ಯಾಂಕರ್ ಸಮರ ಹೆಚ್ಚಳ:

ಈ ಸಮುದ್ರ ಮಾರ್ಗದ ಮೇಲಿನ ದಾಳಿಯು ಪ್ರಾದೇಶಿಕ ರಾಜಕೀಯ ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸಿದೆ. ಹಾರ್ಮುಜ್ ಜಲಸಂಧಿಯ ಮೂಲಕ ಹಾದುಹೋಗುವಾಗ ಒಮಾನ್‌ಗೆ ಹತ್ತಿರವಿರುವ ಮಾರ್ಗವನ್ನು ಬಳಸುವಂತೆ ಅಮೆರಿಕ ಮಿಲಿಟರಿ ತನ್ನ ಹಡಗುಗಳಿಗೆ ಸಲಹೆ ನೀಡಿದೆ. ಇದಕ್ಕೆ ಪ್ರತೀಕಾರವಾಗಿ ಇರಾನ್ ಈ ಹಡಗುಗಳ ಮೇಲೆ ದಾಳಿ ನಡೆಸುತ್ತಿದ್ದು, ಜಾಗತಿಕವಾಗಿ ವ್ಯಾಪಾರವಾಗುವ ಶೇ. 20ರಷ್ಟು ತೈಲ ಮತ್ತು ನೈಸರ್ಗಿಕ ಅನಿಲ ಸಾಗಣೆಯಾಗುವ ಈ ಪ್ರಮುಖ ಸಮುದ್ರ ಮಾರ್ಗದ ಮೇಲೆ ತನ್ನದೇ ಸಾರ್ವಭೌಮತ್ವ ಇರಬೇಕೆಂದು ಇರಾನ್ ಪಟ್ಟು ಹಿಡಿದಿದೆ. ಇದರ ಪರಿಣಾಮವಾಗಿ ಹಾರ್ಮುಜ್ ಜಲಸಂಧಿಯ ಮೂಲಕ ನಡೆಯುವ ಕಡಲ ಸಾರಿಗೆಯು ಸಂಪೂರ್ಣವಾಗಿ ಸ್ಥಗಿತಗೊಂಡಿದೆ.

ಜೋರ್ಡಾನ್ ಮೇಲೆ ಇರಾನ್ ಕ್ಷಿಪಣಿ ದಾಳಿ:

ಇತ್ತ ಇರಾನ್ ಸಹ ತೀವ್ರ ಪ್ರತೀಕಾರ ತೀರಿಸಿಕೊಳ್ಳುತ್ತಿದ್ದು, ಜೋರ್ಡಾನ್ ದೇಶದ ಮೇಲೆ ಕ್ಷಿಪಣಿಗಳನ್ನು ಉಡಾಯಿಸಿದೆ. ಇದು ನೆರೆಯ ಇಸ್ರೇಲ್ ದೇಶಕ್ಕೂ ಯುದ್ಧ ಹರಡುವ ಭೀತಿಯನ್ನು ಹುಟ್ಟುಹಾಕಿದೆ. ಕಳೆದ ತಿಂಗಳು ನಡೆದಿದ್ದ ತಾತ್ಕಾಲಿಕ ಕದನ ವಿರಾಮ ಒಪ್ಪಂದವು ಸಂಪೂರ್ಣವಾಗಿ ಮುರಿದುಬಿದ್ದಿದ್ದು, ಅಮೆರಿಕ-ಇರಾನ್ ದೇಶಗಳು ಈಗ ಪೂರ್ಣ ಪ್ರಮಾಣದ ಯುದ್ಧದತ್ತ ಮುನ್ನುಗ್ಗುತ್ತಿವೆ. ಇರಾನ್‌ನ ಕ್ಷಿಪಣಿ ಹಾಗೂ ಡ್ರೋನ್ ದಾಳಿಗಳನ್ನು ತಡೆಯಲು ಕುವೈತ್, ಬಹ್ರೇನ್ ಮತ್ತು ಜೋರ್ಡಾನ್ ದೇಶಗಳು ತಮ್ಮ ವಾಯು ರಕ್ಷಣಾ ವ್ಯವಸ್ಥೆಯನ್ನು ಸಕ್ರಿಯಗೊಳಿಸಿವೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ವಾರದ ಪ್ರೇಮ – ಪ್ರೀತಿ ಭವಿಷ್ಯ: ಜುಲೈ 19 ರಿಂದ 25 ರವರೆಗೆ ಪ್ರಮುಖ ಗ್ರಹಗಳ ಸಂಚಾರ; ನಿಮ್ಮ ಪ್ರೇಮ ಜೀವನದ ಮೇಲಾಗುವ ಪ್ರಭಾವ ಇಲ್ಲಿದೆ – Kannada News | Weekly Love Forecast July 19 25: How Planets Shape Your Zodiac’s Romance

​ಜುಲೈ 19ರಿಂದ 25ರ ತನಕದ ಈ ವಾರದಲ್ಲಿ ಗ್ರಹಗಳ ರಾಜನಾದ ಸೂರ್ಯ ಮತ್ತು ಜ್ಞಾನಕಾರಕ ಗುರು ಕರ್ಕಾಟಕ ರಾಶಿಯಲ್ಲಿ ಜೊತೆಯಾಗಿದ್ದಾರೆ. ಮತ್ತೊಂದೆಡೆ ಪ್ರೇಮದೇವತೆ ಶುಕ್ರನು ಸಿಂಹ ರಾಶಿಯಲ್ಲಿದ್ದು, ಬುಧನು ಮಿಥುನದಲ್ಲಿ ವಿಹರಿಸುತ್ತಿದ್ದಾನೆ. ಈ ಅಪರೂಪದ ಗ್ರಹಗತಿಗಳು ನಿಮ್ಮ ಪ್ರೇಮ ಸಾಮ್ರಾಜ್ಯದಲ್ಲಿ ಯಾವ ರೀತಿಯ ಪ್ರೇಮದ ಚದುರಂಗದಾಟ ಆಡಿಸಲಿವೆ ಎಂದು ಆಳವಾಗಿ ನೋಡಬಹುದು.


ಮೇಷ ರಾಶಿ :

​ಈ ವಾರ ನಿಮ್ಮ ಪ್ರೇಮ ಜೀವನದಲ್ಲಿ ಉತ್ಸಾಹದ ಬಿರುಗಾಳಿಯೇ ಬೀಸಲಿದೆ. ಕರ್ಕಾಟಕದ ಗುರು-ಸೂರ್ಯರ ಶುಭ ದೃಷ್ಟಿಯಿಂದಾಗಿ ನಿಮ್ಮ ಮನಸ್ಸಿನಲ್ಲಿದ್ದ ಗೊಂದಲಗಳು ದೂರವಾಗಿ, ಪ್ರೀತಿಯಲ್ಲಿ ಸ್ಪಷ್ಟತೆ ಸಿಗಲಿದೆ. ಪ್ರೇಮಿಗಳು ಸುಂದರವಾದ ತಾಣಕ್ಕೆ ಸಣ್ಣ ಪ್ರವಾಸ ಕೈಗೊಳ್ಳುವ ಸಾಧ್ಯತೆ ದಟ್ಟವಾಗಿದೆ. ಒಂಟಿಯಾಗಿರುವವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಅಥವಾ ಸ್ನೇಹಿತರ ಪಾರ್ಟಿಯಲ್ಲಿ ವಿಶೇಷ ವ್ಯಕ್ತಿಯೊಬ್ಬರ ಪರಿಚಯವಾಗಿ, ಹೃದಯದ ಬಡಿತ ಹೆಚ್ಚಾಗಬಹುದು.


ವೃಷಭ ರಾಶಿ :

​ನಿಮ್ಮ ರಾಶ್ಯಾಧಿಪತಿಯಾದ ಶುಕ್ರನು ಸಿಂಹ ರಾಶಿಯಲ್ಲಿದ್ದು ನಿಮ್ಮ ಪ್ರೇಮದ ಮನೆಯನ್ನು ವೀಕ್ಷಿಸುತ್ತಿದ್ದಾನೆ. ಇದರಿಂದಾಗಿ ಪ್ರೇಮ ಸಂಬಂಧಗಳಲ್ಲಿ ರೋಮ್ಯಾನ್ಸ್ ಮತ್ತು ಐಷಾರಾಮಿ ಲಕ್ಷಣಗಳು ಎದ್ದು ಕಾಣಲಿವೆ. ಸಂಗಾತಿಯ ಮುನಿಸನ್ನು ಮುದ್ದಾದ ಉಡುಗೊರೆ ಅಥವಾ ಕ್ಯಾಂಡಲ್ ಲೈಟ್ ಡಿನ್ನರ್ ಮೂಲಕ ಕರಗಿಸುವಲ್ಲಿ ನೀವು ಯಶಸ್ವಿಯಾಗಲಿದ್ದೀರಿ. ಹಳೆಯ ನೆನಪುಗಳು ಮರುಕಳಿಸಿ, ಇಬ್ಬರ ನಡುವಿನ ನಂಬಿಕೆ ಮತ್ತಷ್ಟು ಗಟ್ಟಿಯಾಗಲಿದೆ. ಪ್ರೀತಿಯನ್ನು ವಿವಾಹಕ್ಕೆ ಕೊಂಡೊಯ್ಯಲು ಮಾತುಕತೆ ನಡೆಯಲಿದೆ.


ಮಿಥುನ ರಾಶಿ :

​ನಿಮ್ಮ ರಾಶಿಯಲ್ಲಿಯೇ ಬುಧನ ರಾಜಯೋಗವಿರುವುದರಿಂದ ನಿಮ್ಮ ಸಂವಹನ ಚಾತುರ್ಯ ಅತ್ಯದ್ಭುತವಾಗಿರಲಿದೆ. ಪ್ರೀತಿಯನ್ನು ವ್ಯಕ್ತಪಡಿಸಲು ಕಾವ್ಯಮಯ ಶೈಲಿಯನ್ನು ಬಳಸಲಿದ್ದೀರಿ. ಪ್ರೇಮಿಗಳ ನಡುವೆ ಇದ್ದ ಸಣ್ಣಪುಟ್ಟ ಸಂಶಯಗಳು ಕೇವಲ ಒಂದು ಆತ್ಮೀಯ ಸಮಾಲೋಚನೆಯಿಂದ ದೂರವಾಗಲಿವೆ. ಸಂಗಾತಿಯು ನಿಮ್ಮ ಬುದ್ಧಿವಂತಿಕೆ ಮತ್ತು ಮಾತಿನ ಶೈಲಿಗೆ ಮತ್ತೊಮ್ಮೆ ಮನಸೋಲಲಿದ್ದಾರೆ.


ಕರ್ಕಾಟಕ ರಾಶಿ :

​ನಿಮ್ಮ ರಾಶಿಯಲ್ಲಿ ಗುರು ಮತ್ತು ಸೂರ್ಯನ ಯುತಿ ಇರುವುದರಿಂದ ನಿಮ್ಮ ವ್ಯಕ್ತಿತ್ವದಲ್ಲಿ ಒಂದು ರೀತಿಯ ಕಾಂತಿಯಿರಲಿದೆ. ಪ್ರೇಮ ಜೀವನದಲ್ಲಿ ಭಾವನಾತ್ಮಕ ಭದ್ರತೆ ಹೆಚ್ಚಾಗಲಿದೆ. ಸಂಗಾತಿಯ ಸಣ್ಣ ಇಷ್ಟ-ಕಷ್ಟಗಳಿಗೂ ಅತಿಯಾದ ಮಹತ್ವ ನೀಡಿ ಅವರನ್ನು ಸುಖವಾಗಿ ನೋಡಿಕೊಳ್ಳಲಿದ್ದೀರಿ. ಹೊಸದಾಗಿ ಪ್ರೇಮ ನಿವೇದನೆ ಮಾಡಲು ಬಯಸುವವರಿಗೆ ಈ ವಾರ ಅದೃಷ್ಟ ಕೈಹಿಡಿಯಲಿದೆ. ಪ್ರೀತಿಪಾತ್ರರ ಜೊತೆ ಕಳೆಯುವ ಪ್ರತಿಯೊಂದು ಕ್ಷಣವೂ ನಿಮಗೊಂದು ಮಧುರ ಕಾವ್ಯದಂತೆ ಭಾಸವಾಗಲಿದೆ.

​ಸಿಂಹ ರಾಶಿ :

​ಪ್ರೇಮ ಕಾರಕನಾದ ಶುಕ್ರನು ನಿಮ್ಮದೇ ರಾಶಿಯಲ್ಲಿ ವಿರಾಜಮಾನನಾಗಿದ್ದಾನೆ. ಹಾಗಾಗಿ ಈ ವಾರದ ರೋಮ್ಯಾಂಟಿಕ್ ನಾಯಕ ಅಥವಾ ನಾಯಕಿಯರು ನೀವೇ. ನಿಮ್ಮ ಆಕರ್ಷಣಾ ಶಕ್ತಿ ಎಲ್ಲರನ್ನೂ ಕೈಬೀಸಿ ಕರೆಯಲಿದೆ. ಸಂಗಾತಿಯು ನಿಮ್ಮ ಪ್ರತಿಯೊಂದು ಆಸೆಗೂ ತಲೆಯಾಡಿಸುವ ಸನ್ನಿವೇಶ ನಿರ್ಮಾಣವಾಗಲಿದೆ. ಹಳೆಯ ಪ್ರೇಮ ವೈಫಲ್ಯಗಳಿಂದ ನೊಂದವರಿಗೆ ಈ ವಾರ ಹೊಸ ಚೈತನ್ಯ ಸಿಗಲಿದ್ದು, ಹಳೆಯ ಪುಟಗಳನ್ನು ಮುಚ್ಚಿ ಹೊಸ ಪ್ರೇಮ ಲೇಖನ ಬರೆಯಲು ಗ್ರಹಗಳು ಪ್ರೇರೇಪಿಸಲಿವೆ.


ಕನ್ಯಾ ರಾಶಿ :

​ನಿಮ್ಮ ಪ್ರೇಮ ಜೀವನದಲ್ಲಿ ಈ ವಾರ ಸೌಮ್ಯ ಹಾಗೂ ಅತ್ಯಂತ ಶಾಂತಿಯುತ ವಾತಾವರಣವಿರಲಿದೆ. ಅಬ್ಬರವಿಲ್ಲದಿದ್ದರೂ ಆಳವಾದ ಪ್ರೀತಿ ನಿಮ್ಮದಾಗಲಿದೆ. ಕಚೇರಿಯ ಒತ್ತಡದ ನಡುವೆಯೂ ಸಂಗಾತಿಯು ನಿಮಗೆ ನೀಡುವ ಮಾನಸಿಕ ಬೆಂಬಲ ನಿಮ್ಮನ್ನು ಭಾವುಕರನ್ನಾಗಿಸಬಹುದು. ಪ್ರೀತಿಪಾತ್ರರ ಜೊತೆ ಕುಳಿತು ಭವಿಷ್ಯದ ಕನಸುಗಳನ್ನು ಹೆಣೆಯಲಿದ್ದೀರಿ. ಮೂರನೇ ವ್ಯಕ್ತಿಯ ಮಾತಿಗೆ ಕಿವಿಗೊಡದೆ, ಪರಸ್ಪರರ ಕಣ್ಣುಗಳನ್ನು ನಂಬಿ ನಡೆದರೆ ಈ ವಾರ ಪ್ರೇಮಲೋಕದ ಅತ್ಯುನ್ನತ ಸುಖವನ್ನು ಅನುಭವಿಸುವಿರಿ.


ತುಲಾ ರಾಶಿ :

​ನಿಮ್ಮ ರಾಶ್ಯಾಧಿಪತಿ ಶುಕ್ರನ ಶುಭ ಸ್ಥಾನದಿಂದಾಗಿ ಪ್ರೇಮ ಮತ್ತು ಸಾಮರಸ್ಯದ ಅದ್ಭುತ ಜುಗಲ್ಬಂದಿ ಈ ವಾರ ಗೋಚರಿಸಲಿದೆ. ಎಷ್ಟೇ ಕಾರ್ಯನಿರತರಾಗಿದ್ದರೂ ಸಂಗಾತಿಗಾಗಿ ಸಮಯ ಮೀಸಲಿಡುವಿರಿ. ನಿಮ್ಮ ಪ್ರೇಮ ಸಂಬಂಧಕ್ಕೆ ಹೆತ್ತವರ ಅಥವಾ ಹಿರಿಯರ ಸಮ್ಮತಿ ಸಿಗುವ ಶುಭ ಸೂಚನೆಗಳಿವೆ. ಅವಿವಾಹಿತರಿಗೆ ಕಂಕಣ ಬಲ ಕೂಡಿಬರಲು ಈ ವಾರದ ಗ್ರಹಚಾರ ಪೂರಕವಾಗಿದೆ. ವಾರದ ಮಧ್ಯಭಾಗದಲ್ಲಿ ಸಂಗಾತಿಯಿಂದ ಅನಿರೀಕ್ಷಿತ ಪ್ರೇಮ ಸಂದೇಶವೊಂದು ಬಂದು ನಿಮ್ಮ ದಿನವನ್ನು ರಂಜನೀಯವಾಗಿಸಲಿದೆ.


ವೃಶ್ಚಿಕ ರಾಶಿ :

​ನಿಮ್ಮ ಪ್ರೇಮದಲ್ಲಿ ತೀವ್ರತೆ ಹಾಗೂ ಕೃತಕತೆ ಹೆಚ್ಚಾಗಲಿದೆ. ಸಂಗಾತಿಯನ್ನು ಅತಿಯಾಗಿ ಹಚ್ಚಿಕೊಳ್ಳುವುದರಿಂದ ಸಣ್ಣ ಮಟ್ಟಿನ ಮತ್ಸರ ಅಥವಾ ಸ್ವಾಮ್ಯ ಮೂಡಬಹುದು, ಇದನ್ನು ನಿಯಂತ್ರಿಸಿ. ವಾರದ ಆರಂಭದಲ್ಲಿ ಸಣ್ಣಪುಟ್ಟ ಮುನಿಸುಗಳಿದ್ದರೂ, ವಾರದ ಉತ್ತರಾರ್ಧದಲ್ಲಿ ಅವು ಕಾಮಪ್ರಚೋದಕ ಮತ್ತು ರೋಮಾಂಚಕ ಕ್ಷಣಗಳಾಗಿ ಬದಲಾಗಲಿವೆ. ಸಂಗಾತಿಯ ಕಣ್ಣಲ್ಲೇ ಮೂಡುವ ಪ್ರೀತಿಯ ಭಾಷೆಯನ್ನು ಅರ್ಥೈಸಿಕೊಳ್ಳುವಲ್ಲಿ ನೀವು ಯಶಸ್ವಿಯಾಗಲಿದ್ದೀರಿ.

ಇದನ್ನೂ ಓದಿ: ಜುಲೈ ಉದ್ಯೋಗ ಭವಿಷ್ಯ: ಮೇಲಧಿಕಾರಿಗಳಿಂದ ಬೇಸರ, ಉದ್ಯೋಗದಿಂದ ತೆಗದುಹಾಕುವ ಭೀತಿ ಇವೆಲ್ಲ ಈ ವಾರದ ಉದ್ಯೋಗ ಭವಿಷ್ಯ

​ಧನು ರಾಶಿ :

​ನಿಮ್ಮ ಪ್ರೇಮ ಜೀವನಕ್ಕೆ ಈ ವಾರ ಹೊಸ ರೆಕ್ಕೆಗಳು ಬರಲಿವೆ. ಸಾಹಸ ಪ್ರವೃತ್ತಿಯ ನಿಮಗೆ ಸಂಗಾತಿಯೂ ಸಾಥ್ ನೀಡಲಿದ್ದಾರೆ. ಒಟ್ಟಿಗೆ ಸುಂದರ ಪ್ರಕೃತಿಯ ಮಡಲಿಗೆ ಪಯಣ ಬೆಳೆಸುವ ಯೋಜನೆ ಯಶಸ್ವಿಯಾಗಲಿದೆ. ಒಂಟಿಯಾಗಿರುವ ಧನು ರಾಶಿಯವರಿಗೆ ದೂರ ಪ್ರಯಾಣ ಅಥವಾ ಧಾರ್ಮಿಕ ಸ್ಥಳಗಳಲ್ಲೋ ಮನಸ್ಸು ಕದಿಯುವ ವ್ಯಕ್ತಿಯ ಭೇಟಿಯಾಗಬಹುದು. ಪ್ರೀತಿಯಲ್ಲಿ ಯಾವುದೇ ಮುಚ್ಚುಮರೆಯಿಲ್ಲದೆ ಮುಕ್ತವಾಗಿ ಹಂಚಿಕೊಳ್ಳುವುದರಿಂದ ನೆಮ್ಮದಿ ಸಿಗಲಿದೆ.


ಮಕರ ರಾಶಿ :

​ಸಾಮಾನ್ಯವಾಗಿ ಗಂಭೀರವಾಗಿರುವ ನೀವು ಈ ವಾರ ಪ್ರೀತಿಯ ವಿಷಯದಲ್ಲಿ ಕೊಂಚ ಮೃದುವಾಗಲಿದ್ದೀರಿ. ಸಂಗಾತಿಯ ಪ್ರೀತಿಯ ಮಳೆಗೆ ನಿಮ್ಮ ಕಠಿಣ ಮನಸ್ಸು ಕರಗಲಿದೆ. ನಿಮ್ಮ ಸಂಗಾತಿಯ ಭಾವನೆಗಳಿಗೆ ಮತ್ತು ಅವರ ಸಣ್ಣ ತ್ಯಾಗಗಳಿಗೆ ಗೌರವ ನೀಡುವುದನ್ನು ಕಲಿಯುವಿರಿ. ಹಳೆಯ ತಪ್ಪು ತಿಳುವಳಿಕೆಗಳನ್ನು ಮರೆತು ಪರಸ್ಪರ ತಬ್ಬಿಕೊಳ್ಳುವ ಮೂಲಕ ಸಂಬಂಧಕ್ಕೆ ಹೊಸ ಭಾಷ್ಯ ಬರೆಯಲಿದ್ದೀರಿ. ನಿಮ್ಮ ಪ್ರಾಯೋಗಿಕ ಜಗತ್ತಿಗೆ ಸಂಗಾತಿಯು ಪ್ರೇಮದ ರಂಗು ತುಂಬಲಿದ್ದಾರೆ.


ಕುಂಭ ರಾಶಿ :

​ಪ್ರೇಮ ಸಂಬಂಧದಲ್ಲಿ ಹೊಸ ವೈವಿಧ್ಯತೆಯನ್ನು ಬಯಸುವಿರಿ. ಸಂಗಾತಿಯೊಂದಿಗೆ ಕೇವಲ ದೈಹಿಕವಾಗಿ ಮಾತ್ರವಲ್ಲದೆ ಬೌದ್ಧಿಕವಾಗಿಯೂ ಹತ್ತಿರವಾಗಲಿದ್ದೀರಿ. ಇಬ್ಬರೂ ಜೊತೆಯಾಗಿ ಸಿನಿಮಾ, ನಾಟಕ ವೀಕ್ಷಣೆ ಅಥವಾ ಸಾಹಿತ್ಯ ಚರ್ಚೆಗಳಲ್ಲಿ ತೊಡಗಬಹುದು. ನಿಮ್ಮ ವಿಭಿನ್ನ ಆಲೋಚನಾ ಶೈಲಿಯು ಸಂಗಾತಿಗೆ ನಿಮ್ಮ ಮೇಲಿರುವ ಗೌರವವನ್ನು ಮತ್ತಷ್ಟು ಹೆಚ್ಚಿಸಲಿದೆ. ವಾರಾಂತ್ಯದಲ್ಲಿ ಸಂಗಾತಿಯ ಕೈರುಚಿಯ ಊಟದೊಂದಿಗೆ ರೋಮ್ಯಾಂಟಿಕ್ ಸಂಜೆ ಕಳೆಯುವ ಯೋಗವಿದೆ.

​ಮೀನ ರಾಶಿ :

​ಭಾವನಾತ್ಮಕ ಜಗತ್ತಿನಲ್ಲಿ ತೇಲುವ ಮೀನ ರಾಶಿಯವರಿಗೆ ಈ ವಾರ ಪ್ರೇಮದ ಪರಾಕಾಷ್ಠೆ ಸಿಗಲಿದೆ. ನಿಮ್ಮ ರಾಶಿಯಲ್ಲಿರುವ ಶನಿಯ ಪ್ರಭಾವದ ನಡುವೆಯೂ, ಶುಕ್ರ ಮತ್ತು ಗುರುವಿನ ಶುಭ ದೃಷ್ಟಿಯಿಂದಾಗಿ ಸಂಗಾತಿ ನಿಮ್ಮನ್ನು ಅತಿಯಾಗಿ ಪ್ರೀತಿಸಲಿದ್ದಾರೆ. ನಿಮ್ಮ ಕಣ್ಣೋಟದಲ್ಲೇ ಪ್ರೀತಿಯ ಕಾವ್ಯವನ್ನು ಓದುವ ಸಂಗಾತಿ ನಿಮಗೆ ಸಿಗಲಿದ್ದಾರೆ. ಪ್ರೇಮ ಜೀವನದಲ್ಲಿ ಶಾಂತಿ, ನೆಮ್ಮದಿ ಹಾಗೂ ಸಪ್ತವರ್ಣಗಳ ರಂಗು ತುಂಬಿರಲಿದ್ದು, ಈ ವಾರ ಇಬ್ಬರನ್ನೂ ಮತ್ತಷ್ಟು ಹತ್ತಿರ ತರಲಿದೆ.

– ಲೋಹಿತ್ ಹೆಬ್ಬಾರ್

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಗಣಿ ಇಲಾಖೆ ಇತಿಹಾಸದಲ್ಲೇ ಅತಿದೊಡ್ಡ ವರ್ಗಾವಣೆ: ಬರೋಬ್ಬರಿ 160 ಅಧಿಕಾರಿಗಳಿಗೆ ಟ್ರಾನ್ಸ್​​ಫರ್​​ ಭಾಗ್ಯ – Kannada News | Major Reshuffle in Karnataka Mines Department: CM DK Shivakumar Transfers 160 Officers

ಬರೋಬ್ಬರಿ 160 ಅಧಿಕಾರಿಗಳಿಗೆ ಟ್ರಾನ್ಸ್​​ಫರ್​​ ಭಾಗ್ಯImage Credit source: Tv9 Kannada

ಬೆಂಗಳೂರು, ಜುಲೈ 20: ಗಣಿ ಇಲಾಖೆಗೆ ಸಿಎಂ ಡಿ.ಕೆ. ಶಿವಕುಮಾರ್​​ ಮೇಜರ್​​ ಸರ್ಜರಿ ಮಾಡಿದ್ದು, ಒಂದೇ ಸ್ಥಳದಲ್ಲಿ ಠಿಕಾಣಿ ಹೂಡಿದ್ದ ಇಲಾಖೆಯ ಶೇ.80ರಷ್ಟು ಸಿಬ್ಬಂದಿಯನ್ನು ವರ್ಗಾವಣೆ ಮಾಡುವ ಮೂಲಕ ಭರ್ಜರಿ ಶಾಕ್​​ ಕೊಟ್ಟಿದ್ದಾರೆ. ಬರೋಬ್ಬರಿ 160 ಅಧಿಕಾರಿಗಳ ಬೃಹತ್ ವರ್ಗಾವಣೆ ಮಾಡಿ ಸರ್ಕಾರ ಆದೇಶಿಸಿದ್ದು, 131 ಭೂವಿಜ್ಞಾನಿಗಳು, 23 ಹಿರಿಯ ಭೂವಿಜ್ಞಾನಿಗಳು, 6 ಉಪನಿರ್ದೇಶಕರು ಈ ಪಟ್ಟಿಯಲ್ಲಿದ್ದಾರೆ. ದಶಕಗಳ ಕಾಲ ಒಂದೇ ಸ್ಥಳದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮತ್ತು ಸ್ವಂತ ಹಾಗೂ ನೆರೆಯ ಜಿಲ್ಲೆಗಳಲ್ಲಿ ಬೀಡು ಬಿಟ್ಟಿದ್ದ ಅಧಿಕಾರಿಗಳಿಗೆ ಟ್ರಾನ್​ಸ್​​ಫರ್​​ ಭಾಗ್ಯ ಸಿಕ್ಕಿದೆ.

ಆದೇಶದಲ್ಲಿ ಏನಿದೆ?

ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹೆಚ್ಚಿನ ಉಪ ನಿರ್ದೇಶಕರು ತಮ್ಮ ಸ್ವಂತ ಜಿಲ್ಲೆಗಳಲ್ಲಿ ಅಥವಾ ನೆರೆಯ ಜಿಲ್ಲೆಗಳಲ್ಲಿಯೇ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಒಂದೇ ಸ್ಥಳದಲ್ಲಿ ದೀರ್ಘಕಾಲದಿಂದ ಮುಂದುವರಿದಿದ್ದಾರೆ ಅಥವಾ ಆಡಳಿತಾತ್ಮಕ ಹಾಗೂ ಸಾರ್ವಜನಿಕ ದೂರುಗಳನ್ನು ಎದುರಿಸುತ್ತಿದ್ದಾರೆ. ಇಂತಹ ದೀರ್ಘಕಾಲದ ಕಾರ್ಯಾವಧಿಯು ಸ್ವಹಿತಾಸಕ್ತಿಗಳಿಗೆ ಎಡೆಮಾಡಿಕೊಡುತ್ತದೆ ಹಾಗೂ ಇಲಾಖೆಯ ಘನತೆಗೆ ಧಕ್ಕೆ ತರುವ ಕಾರಣ ಸ್ಥಳೀಯ ಮಟ್ಟದ ಏಕಸ್ವಾಮ್ಯವನ್ನು ಮುರಿಯಲು ಮತ್ತು ಸಾಂಖ್ಯಿಕ ಅಕ್ರಮಗಳನ್ನು ತಡೆಗಟ್ಟಲು, ಇಲಾಖೆಯ ಪ್ರಮುಖ ಆದಾಯ ಸಂಗ್ರಹಣಾ ಕಾರ್ಯಗಳಿಗೆ ಯಾವುದೇ ಅಡಚಣೆಯಾಗದಂತೆ, ವಸ್ತುನಿಷ್ಠತೆ, ಪಾರದರ್ಶಕತೆ ಮತ್ತು ಸಾರ್ವಜನಿಕ ಹೊಣೆಗಾರಿಕೆಯನ್ನು ಮರುಸ್ಥಾಪಿಸುವ ನಿಟ್ಟಿನಲ್ಲಿಈ ಕೂಡಲೇ ಜಾರಿಗೆ ಬರುವಂತೆ 160 ಅಧಿಕಾರಿಗಳನ್ನು ವರ್ಗಾವಣೆ ಮಾಡಿರೋದಾಗಿ ಆದೇಶದಲ್ಲಿ ತಿಳಿಸಲಾಗಿದೆ. ವರ್ಗಾಯಿಸಿದ ಹುದ್ದೆಗೆ ತಕ್ಷಣ ಕರ್ತವ್ಯಕ್ಕೆ ವರದಿ ಮಾಡಿಕೊಂಡು ಕೇಂದ್ರ ಕಚೇರಿಗೆ ಮಾಹಿತಿಯನ್ನು ನೀಡುವಂತೆಯೂ ಸೂಚಿಸಲಾಗಿದೆ.

ಇದನ್ನೂ ಓದಿ: ಮನೆ ಮನೆಗೆ ಶಾಶ್ವತ ನಿವಾಸ ಪ್ರಮಾಣ ಪತ್ರ ವಿತರಣೆಗೆ ಚಾಲನೆ; SIR ವೇಳೆ ಇದನ್ನು ಮಾನ್ಯ ದಾಖಲೆಯಾಗಿ ಪರಿಣಗಣಿಸಲಾಗುತ್ತದೆಯೇ?

ಅನಧಿಕೃತ ಗಣಿಗಾರಿಕೆಗೆ ಕಡಿವಾಣಕ್ಕೆ ಕಠಿಣ ಕ್ರಮ

ಅನಧಿಕೃತ ಗಣಿಗಾರಿಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ಗಣಿ ಇಲಾಖೆಯಲ್ಲಿ ಆಡಳಿತಾತ್ಮಕ ಬದಲಾವಣೆ ಮಾಡಲಾಗಿದೆ. ಜುಲೈ 1ರಂದು ನಡೆದಿದ್ದ ಗಣಿ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಇಲಾಖಾ ಕಾರ್ಯದರ್ಶಿ ರೋಹಿಣಿ ಸಿಂಧೂರಿ ಅವರಿಂದ ಈ ವಿಷಯ ಪ್ರಸ್ತಾಪವಾಗಿತ್ತು. ಈ ಬಗ್ಗೆ ಕಡತ ಮಂಡಿಸುವಂತೆ ಸಭೆಯಲ್ಲೇ ಕಾರ್ಯದರ್ಶಿ ರೋಹಿಣಿ ಸಿಂಧೂರಿ ಅವರಿಗೆ ಸಿಎಂ ಸೂಚನೆ ನೀಡಿದ್ದರು. ಸ್ಥಳೀಯ ಪ್ರಭಾವಕ್ಕೆ ಬ್ರೇಕ್ ಹಾಕುವುದರ ಜೊತೆಗೆ ಪಾರದರ್ಶಕತೆ, ಉತ್ತರದಾಯಿತ್ವಕ್ಕೆ ಒತ್ತು ನೀಡಿದ ರಾಜ್ಯ ಸರ್ಕಾರ ಈ ಕ್ರಮ ಕೈಗೊಂಡಿದೆ ಎನ್ನಲಾಗಿದೆ. ಗಣಿ ಇಲಾಖೆಯ ಇತಿಹಾಸದಲ್ಲೇ ಇದು ಅತಿದೊಡ್ಡ ವರ್ಗಾವಣೆ ಪ್ರಕ್ರಿಯೆಯಾಗಿದ್ದು, ಗಣಿ ಆದಾಯ ಹೆಚ್ಚಳ ಮತ್ತು ಅಕ್ರಮ ಗಣಿಗಾರಿಕೆ ನಿಯಂತ್ರಣದ ವಿಚಾರದಲ್ಲಿ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 3:59 pm, Mon, 20 July 26

Source link

IND vs ENG: ಬಾಲ್ಯದ ಗೆಳೆಯ ನೀಡಿದ ಬ್ಯಾಟ್​ನಿಂದ ಲಾರ್ಡ್ಸ್‌ನಲ್ಲಿ ಶತಕ ಬಾರಿಸಿದ ರೋಹಿತ್ – Kannada News | Rohit Sharma’s Lord’s Century: Shardul Thakur’s Bat Behind the Historic 138 Runs!

ರೋಹಿತ್ ಭಾಯ್​ಗೆ ನಾನು ಬಳಸುವ ಬ್ಯಾಟ್​ಗಳೆಂದರೆ ತುಂಬಾ ಇಷ್ಟ. ಹೀಗಾಗಿ ಒಮ್ಮೆ ಅವರು ನನ್ನಲ್ಲಿದ್ದ ಒಂದೆರಡು ಬ್ಯಾಟ್​ಗಳನ್ನು ಕೇಳಿದ್ದರು. ನಾವೆಲ್ಲರೂ ಅವರನ್ನು ತುಂಬಾ ಪ್ರೀತಿಸುತ್ತೇವೆ ಮತ್ತು ಅವರು ಕ್ರಿಕೆಟ್ ಮೈದಾನದಲ್ಲಿ ನಮಗೆ ಲೆಕ್ಕವಿಲ್ಲದಷ್ಟು ಸಂತೋಷದ ಕ್ಷಣಗಳನ್ನು ನೀಡಿದ್ದಾರೆ. ಆದ್ದರಿಂದ, ಅವರಿಗೆ ಬ್ಯಾಟ್ ನಿರಾಕರಿಸುವ ಪ್ರಶ್ನೆಯೇ ಇರಲಿಲ್ಲ(PC-PTI).

Source link

Video: ಬೆಂಗ್ಳೂರಿಗೆ ಬಂದ್ರೆ ನಿದ್ದೆ ಮಾಡೋಕೆ ಮನಸ್ಸಾಗುತ್ತೆ; ವೈರಲ್‌ ಆಯ್ತು ಕಾಮಿಡಿಯನ್‌ ಕೊಟ್ಟ ಪಂಚ್‌ ಡೈಲಾಗ್‌ – Kannada News | Comedian Shubham Pujari remarked that no matter what the weather is like in Bengaluru, people keep working.

ಸ್ಟ್ಯಾಂಡ್ ಅಪ್ ಕಾಮಿಡಿಯನ್ ಶುಭಂ ಪೂಜಾರಿImage Credit source: Instagram

ಬೆಂಗಳೂರು, ಜುಲೈ 20: ಬೆಂಗಳೂರಿಗೆ (Bengaluru) ಬರುವ ಅನೇಕರು ಇಲ್ಲಿನ ಹವಾಮಾನ, ಟ್ರಾಫಿಕ್ ಸಮಸ್ಯೆ, ರಸ್ತೆ ಗುಂಡಿಗಳ ಸಮಸ್ಯೆ ಹೀಗೆ ಒಂದಲ್ಲ ಒಂದು ವಿಷ್ಯದ ಬಗ್ಗೆ ಪೋಸ್ಟ್ ಹಂಚಿಕೊಳ್ಳುವುದಿದೆ. ಆದರೆ ಸ್ಟ್ಯಾಂಡ್ ಅಪ್ ಕಾಮಿಡಿಯನ್ ಶುಭಂ ಪೂಜಾರಿಯವರಿಗೆ ಬೆಂಗಳೂರಿಗೆ ಬಂದ್ರೆ ಕೆಲಸ ಮಾಡೋಕೆ ಮನಸ್ಸೇ ಆಗಲ್ಲವಂತೆ. ಮತ್ತೆ ಅಲಸ್ಯ ಭಾವನೆ ಮೂಡುತ್ತದೆ ಎಂದು ಹೇಳಿದ್ದಾರೆ. ಈ ಪೋಸ್ಟ್ ಸದ್ಯ ಆನ್ಲೈನ್‌ನಲ್ಲಿ ವೈರಲ್ ಆಗಿದ್ದು ಚರ್ಚೆಗೆ ಕಾರಣವಾಗಿದೆ.

ಶುಭಂ ಪೂಜಾರಿ (Shubham pujari) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್‌ನಲ್ಲಿ ಸ್ಟ್ಯಾಂಡ್ ಅಪ್ ಕಾಮಿಡಿಯನ್ ಬೆಂಗಳೂರಿಗೆ ಬಂದ ತಕ್ಷಣ ಕಂಬಳಿ ಹೊದ್ದು, ಫ್ಯಾನ್ ವೇಗವನ್ನು ಮಧ್ಯಮದಲ್ಲಿಟ್ಟುಕೊಂಡು, ಮೊಬೈಲ್ ಸ್ಕ್ರಾಲ್ ಮಾಡುತ್ತಾ ಮಲಗ್ಬೇಕು ಎಂದೆನಿಸುತ್ತದೆ. ಹೀಗಾಗಿ ನನಗೆ ಐಟಿ ಹಬ್ ಹಾಗೆ ಕಾಣಿಸಲ್ಲ, ನಿವೃತ್ತಿ ನಂತರದಲ್ಲಿ ವಿಶ್ರಾಂತಿ ಪಡೆಯುವ ತಾಣದಂತೆ ಕಾಣುತ್ತದೆ ಎಂದು ವಾಸ್ತವ ಸ್ಥಿತಿ ಬಗ್ಗೆ ವಿವರಿಸಿದ್ದಾರೆ.

ವೈರಲ್ ವಿಡಿಯೋ ಇಲ್ಲಿದೆ

ಈ ದೆಹಲಿಯಲ್ಲಿ ಒಂದು ಕಪ್ ಚಹಾ ಕುಡಿದ್ರೆ ಕ್ಷಣಾರ್ಧದಲ್ಲಿ ಕೆಲಸ ಮಾಡಬೇಕೆಂದು ಅನಿಸುತ್ತದೆ. ಆದ್ರೆ ಬೆಂಗಳೂರಿನಲ್ಲಿ ಹಾಗೆ ಅಲ್ಲ, ಮೂರು ನಾಲ್ಕು ಕಪ್ ಚಹಾ ಕುಡಿದರೂ ಉದಾಸೀನ ಮಾತ್ರ ನಮ್ಮ ಬಿಟ್ಟು ದೂರ ಹೋಗಲ್ಲ. ಈ ಹವಾಮಾನವಿದ್ರೂ ಬೆಂಗಳೂರಿಗರು ಪ್ರತಿದಿನ ಬೆಳಿಗ್ಗೆ ಎದ್ದು ಆಫೀಸ್‌ಗೆ ಹೇಗೆ ಹೋಗ್ತಾರೆ. ಈ ಜನರಿಗೆ ದೊಡ್ಡ ಮೊತ್ತದ ಸಾಲ ಹಾಗೂ ಇಎಂಐಗಳು ಇರಬೇಕು. ಇಲ್ಲದಿದ್ರೆ ಈ ಹವಾಮಾನದಲ್ಲೂ ಅತಂತ್ಯ ಉತ್ಸಾಹದಿಂದ ಕೆಲಸ ಮಾಡಲು ಹೇಗೆ ಸಾಧ್ಯ ಎಂದು ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನ ಆಟೋ ಚಾಲಕನ ಆತ್ಮೀಯತೆಗೆ ಫಿದಾ ಆದ ವಿದೇಶಿಗ

ಈ ವಿಡಿಯೋ ಒಂದೂವರೆ ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ನಿಮ್ಮ ಮಾತನ್ನು ನಾವು ಒಪ್ಪುತ್ತೇವೆ ಎಂದಿದ್ದಾರೆ. ಇನ್ನೊಬ್ಬರು, ಇಎಂಐ ಪ್ರಭಾವ ಎಂದು ಹೇಳಿದ್ದಾರೆ. ಮತ್ತೊಬ್ಬರು, ಇಲ್ಲಿನ ದಿನಚರಿ ಮಲಗುವುದು, ಬೆಳಗ್ಗೆ ಏಳುವುದು ಹಾಗೂ ಸ್ವಲ್ಪ ಕೆಲಸ ಮಾಡಿ ಮತ್ತೆ ಮಲಗುವುದಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Human Fridge: ಮಾರುಕಟ್ಟೆಗೆ ಬಂತು ಮನುಷ್ಯರನ್ನು ತಂಪಾಗಿಸುವ ವಿಶೇಷ ಫ್ರಿಡ್ಜ್ – Kannada News | Human fridge Japan do hiemon box cools body in 10 minutes

ಬೇಸಿಗೆಯ ತೀವ್ರ ಬಿಸಿಲು (Summer) ಮತ್ತು ಹೀಟ್‌ಸ್ಟ್ರೋಕ್‌ನಿಂದ ಜನರನ್ನು ರಕ್ಷಿಸಲು ಜಪಾನ್‌ನಲ್ಲಿ ವಿಶೇಷ ರೀತಿಯ ‘ಹ್ಯೂಮನ್ ಫ್ರಿಡ್ಜ್’ (Human Fridge) ಅಭಿವೃದ್ಧಿಪಡಿಸಲಾಗಿದೆ. ಸಾಮಾನ್ಯವಾಗಿ “ಬಿಸಿಲು ತುಂಬಾ ಇದೆ, ಫ್ರಿಡ್ಜ್ ಒಳಗೆ ಕುಳಿತುಕೊಳ್ಳಬೇಕು ಅನಿಸುತ್ತಿದೆ” ಎಂದು ಹಲವರು ತಮಾಷೆಗೆ ಹೇಳುತ್ತಾರೆ. ಆದರೆ ಜಪಾನ್ ಈ ಕಲ್ಪನೆಯನ್ನು ನಿಜವಾಗಿಸಿದೆ. ಡೋ ಹಿಯೆಮನ್ ಬಾಕ್ಸ್ (Do Hiemon Box) ಎಂದು ಕರೆಯಲಾಗುವ ಈ ಸಾಧನವು ನೋಡಲು ಸಾಮಾನ್ಯ ಫ್ರಿಡ್ಜ್‌ನಂತೆಯೇ ಕಾಣಿಸಿದರೂ, ಆಹಾರ ವಸ್ತುಗಳನ್ನು ತಂಪಾಗಿಡಲು ಅಲ್ಲ, ಮನುಷ್ಯರ ದೇಹವನ್ನು ಶೀಘ್ರವಾಗಿ ತಂಪಾಗಿಸಲು ವಿನ್ಯಾಸಗೊಳಿಸಲಾಗಿದೆ. ಕಂಪನಿಯ ಪ್ರಕಾರ, ಇದರಲ್ಲಿ ಸುಮಾರು 10 ನಿಮಿಷ ಕುಳಿತರೆ ದೇಹದ ಉಷ್ಣತೆಯನ್ನು ಸಾಮಾನ್ಯ ಮಟ್ಟಕ್ಕೆ ತರಲು ಸಹಾಯವಾಗುತ್ತದೆ.

ಜಪಾನ್‌ನಲ್ಲಿ ವೆಂಡಿಂಗ್ ಮೆಷಿನ್‌ಗಳ ಬಳಕೆ ಹೆಚ್ಚಿರುವುದರಿಂದ, ಅದೇ ಮಾದರಿಯಲ್ಲಿ ಈ ಸಾಧನವನ್ನು ರೂಪಿಸಲಾಗಿದೆ. ಇದನ್ನು ತಯಾರಿಸಿರುವ SDRC ಕಂಪನಿ ಮುಖ್ಯವಾಗಿ ವೆಂಡಿಂಗ್ ಮೆಷಿನ್‌ಗಳನ್ನು ನಿರ್ಮಿಸುವ ಸಂಸ್ಥೆಯಾಗಿದೆ. ಈ ಫ್ರಿಡ್ಜ್ ಮಾದರಿಯ ಕ್ಯಾಬಿನ್‌ನ ಒಳಗಿನ ತಾಪಮಾನವನ್ನು ಯಾವಾಗಲೂ ಸುಮಾರು 15 ಡಿಗ್ರಿ ಸೆಲ್ಸಿಯಸ್ ಮಟ್ಟದಲ್ಲಿ ಕಾಯ್ದುಕೊಳ್ಳಲಾಗುತ್ತದೆ. ಒಳಗೆ ಕಾಲಿಟ್ಟ ತಕ್ಷಣವೇ ತಂಪಿನ ಅನುಭವವಾಗುತ್ತದೆ. ಅದರೊಳಗೆ ಒಂದು ವಿಶೇಷ ಕುರ್ಚಿಯೂ ಇದ್ದು, ಅದರಲ್ಲಿ ಕುಳಿತಾಗ ತಲೆ, ಕುತ್ತಿಗೆ, ಭುಜ ಮತ್ತು ಬೆನ್ನಿನ ಭಾಗಕ್ಕೆ ಸುಮಾರು 5 ಡಿಗ್ರಿ ಸೆಲ್ಸಿಯಸ್ ತಂಪಾದ ಗಾಳಿಯನ್ನು ಬೀಸಲಾಗುತ್ತದೆ. ಇದರಿಂದ ದೇಹದ ಉಷ್ಣತೆ ವೇಗವಾಗಿ ಕಡಿಮೆಯಾಗುತ್ತದೆ.

ಹ್ಯೂಮನ್ ಫ್ರಿಡ್ಜ್:

ಈ ಸಾಧನದಲ್ಲಿ ಸುಮಾರು 5 ನಿಮಿಷ ಕುಳಿತರೆ ಸಾಕಷ್ಟು ನಿರಾಳತೆ ಸಿಗುತ್ತದೆ ಎಂದು ಕಂಪನಿ ಹೇಳಿದೆ. ಸುಮಾರು 10 ನಿಮಿಷ ಬಳಸಿದರೆ ತೀವ್ರ ಬಿಸಿಲು ಅಥವಾ ಲೂನಿಂದ ಉಂಟಾಗುವ ಆಯಾಸವನ್ನು ಕಡಿಮೆ ಮಾಡಲು ಸಹಕಾರಿಯಾಗಬಹುದು. ಅತಿಯಾದ ತಂಪಿನಿಂದ ಬಳಕೆದಾರರಿಗೆ ತೊಂದರೆಯಾಗದಂತೆ, ಈ ಯಂತ್ರವು 20 ನಿಮಿಷಗಳ ನಂತರ ಸ್ವಯಂಚಾಲಿತವಾಗಿ ಆಫ್ ಆಗುತ್ತದೆ. ಮತ್ತೊಂದು ವಿಶೇಷವೆಂದರೆ, ಇದು ಸಾಮಾನ್ಯ ಏರ್ ಕಂಡೀಷನರ್‌ಗಿಂತ ಸುಮಾರು ಅರ್ಧದಷ್ಟು ವಿದ್ಯುತ್ ಮಾತ್ರ ಬಳಸುತ್ತದೆ. ಜೊತೆಗೆ, ಇದನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸುಲಭವಾಗಿ ಸಾಗಿಸಿ ಬಳಸಬಹುದಾಗಿದೆ.

ಗ್ರಾಹಕರಿಗೆ DND ಆಯ್ಕೆ ತೋರಿಸಿ, ಬ್ಲಾಕ್ಡ್ ಬ್ಯಾಡ್ಜ್ ಅಲ್ಲ; ಟ್ರೂಕಾಲರ್​ಗೆ ಸರ್ಕಾರ ನಿರ್ದೇಶನ

ಜಪಾನ್‌ನಲ್ಲಿ ಈ ಹ್ಯೂಮನ್ ಫ್ರಿಡ್ಜ್ ಈ ವರ್ಷದ ಏಪ್ರಿಲ್‌ನಿಂದ ಮಾರಾಟಕ್ಕೆ ಲಭ್ಯವಿದೆ. ವರದಿಗಳ ಪ್ರಕಾರ, ಇದರ ಒಂದು ಘಟಕವನ್ನು ಗುನ್ಮಾ ಪ್ರಾಂತ್ಯದ ಮಯೆಬಾಶಿ ಸಿಟಿ ಹಾಲ್‌ಗೆ ದಾನ ಮಾಡಲಾಗಿದ್ದು, ಸಾರ್ವಜನಿಕರು ಅದನ್ನು ಉಚಿತವಾಗಿ ಬಳಸುತ್ತಿದ್ದಾರೆ. ವಿಶೇಷವಾಗಿ ಕಾರ್ಖಾನೆಗಳು, ಕಟ್ಟಡ ನಿರ್ಮಾಣ ಸ್ಥಳಗಳು, ಗೋದಾಮುಗಳು ಹಾಗೂ ಬಿಸಿಲಿನಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಇದು ಬಹಳ ಉಪಯುಕ್ತ ಸಾಧನವಾಗಲಿದೆ ಎಂದು ಹೇಳಲಾಗುತ್ತಿದೆ. ಇದರ ಬೆಲೆ ಸುಮಾರು 15 ಲಕ್ಷ ಯೆನ್ (ಸುಮಾರು 9 ಲಕ್ಷ ರೂಪಾಯಿ) ಆಗಿದ್ದು, ಮುಖ್ಯವಾಗಿ ಕಂಪನಿಗಳು ಮತ್ತು ಸಂಸ್ಥೆಗಳ ಬಳಕೆಗೆ ಉದ್ದೇಶಿಸಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಟಿವಿ9 ಸಂಸ್ಥೆಯ ಸಂಜೀವ್ ಶ್ರೀವಾಸ್ತವಗೆ ‘ಅತ್ಯುತ್ತಮ ಸಿನಿಮಾ ವಿಮರ್ಶಕ’ ರಾಷ್ಟ್ರ ಪ್ರಶಸ್ತಿ – Kannada News | 72nd National Film Awards Tv9 Critic Sanjeev Shrivastava wins Best Film Critic Award

ನವದೆಹಲಿ: ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಶನಿವಾರ (ಜುಲೈ 18) 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ (72nd National Film Awards 2026) ವಿಜೇತರ ಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಿದೆ. ಈ ಬಾರಿಯ ಪ್ರಶಸ್ತಿ ಪಟ್ಟಿಯಲ್ಲಿ ಟಿವಿ9 ಸಂಸ್ಥೆಗೆ ದೊಡ್ಡ ಗೌರವ ಲಭಿಸಿದೆ. ಟಿವಿ9 ಭಾರತ್‌ವರ್ಷ್‌ನ ಅಸಿಸ್ಟೆಂಟ್ ಎಡಿಟರ್ ಹಾಗೂ ಖ್ಯಾತ ಲೇಖಕ, ಸಿನಿಮಾ ವಿಮರ್ಶಕ ಸಂಜೀವ್ ಶ್ರೀವಾಸ್ತವ (Sanjeev Shrivastava) ಅವರು ಅತ್ಯುತ್ತಮ ಸಿನಿಮಾ ವಿಮರ್ಶಕ (ಹಿಂದಿ) ವಿಭಾಗದಲ್ಲಿ ಪ್ರತಿಷ್ಠಿತ ‘ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ’ಯನ್ನು ಮುಡಿಗೇರಿಸಿಕೊಂಡಿದ್ದಾರೆ.

ಸಂಸ್ಥೆಗೆ ಧನ್ಯವಾದ ಅರ್ಪಿಸಿದ ಸಂಜೀವ್ ಶ್ರೀವಾಸ್ತವ:

ರಾಷ್ಟ್ರ ಪ್ರಶಸ್ತಿ ಲಭಿಸಿದ ಹಿನ್ನೆಲೆಯಲ್ಲಿ ಅಪಾರ ಸಂತಸ ವ್ಯಕ್ತಪಡಿಸಿರುವ ಸಂಜೀವ್ ಶ್ರೀವಾಸ್ತವ, ‘ರಾಷ್ಟ್ರ ಪ್ರಶಸ್ತಿ ಘೋಷಣೆಯಾದಾಗ ಪ್ರತಿಯೊಬ್ಬರಿಗೂ ಸಂತೋಷವಾಗುವುದು ಸಹಜ, ನನಗೂ ಅತೀವ ಆನಂದವಾಗಿದೆ. ಇದು ನಮ್ಮ ಕೆಲಸಕ್ಕೆ ಸಿಕ್ಕ ಸರಿಯಾದ ಮನ್ನಣೆಯಾಗಿದೆ. ಭಾರತದ ಗೌರವಾನ್ವಿತ ರಾಷ್ಟ್ರಪತಿಗಳ ಕೈಯಿಂದ ರಾಷ್ಟ್ರ ಪ್ರಶಸ್ತಿ ಸ್ವೀಕರಿಸುವುದು ನನ್ನ ಜೀವನದ ಅತಿ ದೊಡ್ಡ ಸಾಧನೆಯಾಗಿದೆ. ಟಿವಿ9 ಭಾರತ್‌ವರ್ಷ್‌ನ ಹಿಂದಿ ವೆಬ್‌ಸೈಟ್‌ನಲ್ಲಿ ಸಿನಿಮಾ ಕುರಿತು ಬರೆಯಲು ನನಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿತ್ತು. ಇದಕ್ಕಾಗಿ ನನ್ನ ಸಂಸ್ಥೆಗೆ ಹಾಗೂ ಬೆಂಬಲವಾಗಿ ನಿಂತ ಎಲ್ಲಾ ಹಿರಿಯ ಸಹೋದ್ಯೋಗಿಗಳಿಗೆ ಧನ್ಯವಾದ ಅರ್ಪಿಸುತ್ತೇನೆ. ಈ ಗೌರವ ಟಿವಿ9 ಸಂಸ್ಥೆಯಿಂದಾಗಿಯೇ ನನಗೆ ಸಿಕ್ಕಿದೆ’ ಎಂದು ಹೇಳಿದ್ದಾರೆ.

ಸಿನಿಮಾ ಸಂಸ್ಕೃತಿಯನ್ನು ಬಲಪಡಿಸುವುದೇ ಮುಖ್ಯ ಉದ್ದೇಶ:

ತಮ್ಮ ಬರವಣಿಗೆಯ ಶೈಲಿ ಹಾಗೂ ಸಿನಿಮಾ ವಿಶ್ಲೇಷಣೆಯ ಕುರಿತು ಮಾತನಾಡಿದ ಸಂಜೀವ್ ಶ್ರೀವಾಸ್ತವ ಅವರು, ‘ಕಳೆದ ಎರಡೂವರೆ ದಶಕಗಳಿಂದ ನಾನು ವೃತ್ತಿಪರ ಪತ್ರಕರ್ತನಾಗಿ ಮತ್ತು ಲೇಖಕನಾಗಿ ಕೆಲಸ ಮಾಡುತ್ತಿದ್ದೇನೆ. ಅರ್ಥಪೂರ್ಣ ಬರವಣಿಗೆ ಮತ್ತು ಸೂಕ್ತ ವಿಶ್ಲೇಷಣೆಯು ಚಲನಚಿತ್ರಗಳಿಗೆ ಉತ್ತಮ ಗೌರವವನ್ನು ತಂದುಕೊಡುತ್ತದೆ. ಸಿನಿಮಾ ಎನ್ನುವುದು ಜನಸಾಮಾನ್ಯರನ್ನು ತಲುಪುವ ಒಂದು ಮಾಂತ್ರಿಕ ಶಕ್ತಿ. ಇದು ಕೇವಲ ಮನರಂಜನೆಯಷ್ಟೇ ಅಲ್ಲದೆ ಸಾಹಿತ್ಯ ಮತ್ತು ಪತ್ರಿಕೋದ್ಯಮದಂತೆ ಸಮಾಜದ ಮೇಲೆ ನೇರ ಪ್ರಭಾವ ಬೀರುತ್ತದೆ. ನನ್ನ ವಿಮರ್ಶೆಗಳು ಕೇವಲ ಕಥೆಯನ್ನಷ್ಟೇ ಹೇಳದೆ, ಸಿನಿಮಾದ ವೈವಿಧ್ಯಮಯ ಆಯಾಮಗಳನ್ನು ಪ್ರೇಕ್ಷಕರಿಗೆ ತಲುಪಿಸುವಂತಿರುತ್ತವೆ. ಇದು ಸಿನಿಮಾ ಸಂಸ್ಕೃತಿಯನ್ನು ಮತ್ತಷ್ಟು ಬಲಪಡಿಸುತ್ತದೆ’ ಎಂದಿದ್ದಾರೆ.

ಚಿತ್ರರಂಗದ ಜೊತೆಗಿನ ಅಪಾರ ಒಡನಾಟ:

ಸಂಜೀವ್ ಶ್ರೀವಾಸ್ತವ ಅವರು ಕೇವಲ ಹೊಸ ಸಿನಿಮಾಗಳ ವಿಮರ್ಶೆಯಷ್ಟೇ ಅಲ್ಲದೆ, ಹಳೆಯ ಚಲನಚಿತ್ರಗಳಿಗೆ ಸಂಬಂಧಿಸಿದಂತೆ ಅನೇಕ ಲೇಖನಗಳು ಹಾಗೂ ಸಂಶೋಧನಾ ಬರಹಗಳನ್ನು ಬರೆದಿದ್ದಾರೆ. ಇವರ ಬರವಣಿಗೆಯಲ್ಲಿ ಮೂಡಿಬಂದಿರುವ ‘ಸಮಯ್ ಸಿನಿಮಾ ಔರ್ ಇತಿಹಾಸ್’ (ಪ್ರಕಾಶನ ವಿಭಾಗ) ಮತ್ತು ಮಾಧುರಿ ಪತ್ರಿಕೆಯ ಮಾಜಿ ಸಂಪಾದಕ ಅರವಿಂದ್ ಕುಮಾರ್ ಅವರೊಂದಿಗಿನ ಸಂಭಾಷಣೆ ಆಧಾರಿತ ‘ಮಾಧುರಿ ಕಾಲ್’ (ಇ-ಬುಕ್) ಪುಸ್ತಕಗಳು ಚಿತ್ರರಂಗದಲ್ಲಿ ಭಾರೀ ಗಮನ ಸೆಳೆದಿವೆ. ಸಿನಿಮಾದ ಜೊತೆಗೆ ಸಾಹಿತ್ಯದಲ್ಲೂ ಆಸಕ್ತಿ ಹೊಂದಿರುವ ಇವರು ಕವಿತೆ, ಕಥೆ ಹಾಗೂ ಕಾದಂಬರಿಗಳನ್ನೂ ಬರೆಯುತ್ತಾರೆ.

ಇದನ್ನೂ ಓದಿ: 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ: ಮಿಂಚಿದ ಕನ್ನಡ ಸಿನಿಮಾ ‘ಮಿಥ್ಯ’

ಸಂಜೀವ್ ಶ್ರೀವಾಸ್ತವ ಯಾರು?

ಮೂಲತಃ ಬಿಹಾರದ ಸೀತಾಮಢಿಯವರಾದ ಸಂಜೀವ್ ಶ್ರೀವಾಸ್ತವ ಅವರು ಕಳೆದ 25 ವರ್ಷಗಳಿಂದ ದೆಹಲಿ ಮತ್ತು ಮುಂಬೈನ ಮಾಧ್ಯಮ ರಂಗದಲ್ಲಿ ಸಕ್ರಿಯರಾಗಿದ್ದಾರೆ. ಬ್ರೇಕಿಂಗ್ ನ್ಯೂಸ್‌ನಿಂದ ಹಿಡಿದು ಕ್ರಿಯೇಟಿವ್ ರೈಟಿಂಗ್‌ವರೆಗೂ ಅಪಾರ ಕೌಶಲ ಹೊಂದಿರುವ ಇವರು ದೇಶ-ವಿದೇಶಗಳ ರಾಜಕೀಯ, ಚಲನಚಿತ್ರ, ಸಾಹಿತ್ಯ ಹಾಗೂ ಅಪರಾಧ ಜಗತ್ತಿನ ಕುರಿತು ತಮ್ಮದೇ ಆದ ಶೈಲಿಯಲ್ಲಿ ವಿಶ್ಲೇಷಣೆ ಮಾಡುತ್ತಾರೆ. ಸಾಮಾನ್ಯ ಓದುಗರಿಗೂ ಸುಲಭವಾಗಿ ಅರ್ಥವಾಗುವ ಭಾಷೆಯಲ್ಲಿ ಬರೆಯುವುದು ಇವರ ಹೆಗ್ಗಳಿಕೆ. ಚಿತ್ರರಂಗದ ಮೇಲಿನ ಒಲವಿನಿಂದಾಗಿ ಈಗಾಗಲೇ ಮೂರು ಪುಸ್ತಕಗಳು, ಎರಡು ಕಾದಂಬರಿಗಳು ಹಾಗೂ ಕೆಲವು ಚಿತ್ರಕಥೆ-ಸಂಭಾಷಣೆಗಳನ್ನೂ ಬರೆದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ತುಮಕೂರಿಗೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕೂಗು ಮತ್ತೆ ಮುನ್ನಲೆಗೆ – Kannada News | Demand for International Airport in Tumakuru Back in the Spotlight

ತುಮಕೂರು, ಜುಲೈ 20: ಬೆಂಗಳೂರಿಗೆ ಪರ್ಯಾಯವಾಗಿ ತುಮಕೂರಿನಲ್ಲಿ (tumakuru) ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣದ (International Airport) ಕೂಗು ಮತ್ತೆ ಜೋರಾಗಿದೆ. ಮಾಜಿ ಸಿಎಂ ಬಿಎಸ್​​ ಯಡಿಯೂರಪ್ಪ ಸರ್ಕಾರಕ್ಕೆ ಪತ್ರ ಬರೆದು ಒತ್ತಾಯಿಸಿದ ಬೆನ್ನಲ್ಲೇ ಇದೀಗ ತುಮಕೂರು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿಯೂ ಧ್ವನಿಗೂಡಿಸಿದೆ. ವಸಂತ ನರಸಾಪುರದ 2 ಸಾವಿರ ಎಕರೆ ಸರ್ಕಾರಿ ಭೂಮಿಯಲ್ಲಿ ವಿಮಾನ ನಿಲ್ದಾಣ ನಿರ್ಮಿಸಿದರೆ ಕೈಗಾರಿಕೆ, ಲಾಜಿಸ್ಟಿಕ್ಸ್ ಮತ್ತು ಉತ್ತರ ಕರ್ನಾಟಕದ ಅಭಿವೃದ್ಧಿಗೆ ಹೊಸ ವೇಗ ಸಿಗಲಿದೆ ಎಂದು ಮಂಡಳಿ ಅಭಿಪ್ರಾಯಪಟ್ಟಿದೆ.

ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬೇಡಿಕೆ ಮತ್ತೊಮ್ಮೆ ಮುನ್ನೆಲೆಗೆ

ತುಮಕೂರಿಗೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬೇಡಿಕೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಬಿಡದಿ ಟೌನ್‌ಶಿಪ್ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ ತುಮಕೂರಿನಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಒತ್ತಾಯಿಸಿದ್ದರು. ಈ ಸಂಬಂಧ ಸಿಎಂ ಡಿಕೆ ಶಿವಕುಮಾರ್​ಗೆ ಪತ್ರ ಕೂಡ ಬರೆದಿದ್ದಾರೆ ಎನ್ನಲಾಗಿತ್ತು. ಈ ಬೆನ್ನಲ್ಲೇ ಇದೀಗ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣದ ಕೂಗು ಮತ್ತೆ ಜೋರಾಗಿದೆ.

ವಸಂತ ನರಸಾಪುರದಲ್ಲಿ ವಿಮಾನ ನಿಲ್ದಾಣಕ್ಕೆ ಆಗ್ರಹ

ಯಡಿಯೂರಪ್ಪ ಒತ್ತಾಯದ ಬೆನ್ನಲ್ಲೇ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿ ಕೂಡ ಸರ್ಕಾರ ಮುಂದು ಮನವಿ ಇಟ್ಟಿದೆ. ವಸಂತ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಸುಮಾರು 2 ಸಾವಿರ ಎಕರೆ ಸರ್ಕಾರಿ ಭೂಮಿ ಲಭ್ಯವಿದ್ದು, ಇಲ್ಲಿಯೇ ಕರ್ನಾಟಕದ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸಬೇಕು ಎಂದು ಆಗ್ರಹಿಸಿದೆ.

ಇದನ್ನೂ ಓದಿ: ಬೆಂಗಳೂರು ವಿಮಾನ ನಿಲ್ದಾಣದಲ್ಲಿ 2.09 ಕೋಟಿ ರೂ. ಮೌಲ್ಯದ ಹೈಡ್ರೋಪೋನಿಕ್ ಗಾಂಜಾ ಜಪ್ತಿ

ಚೆನ್ನೈ ಟು ಬೆಂಗಳೂರು ಕೈಗಾರಿಕಾ ಕಾರಿಡಾರ್‌, ರಾಷ್ಟ್ರೀಯ ಹೂಡಿಕೆ ಮತ್ತು ಉತ್ಪಾದನಾ ವಲಯ ಹೊಂದಿರುವ ರಾಜ್ಯದ ಏಕೈಕ ಜಿಲ್ಲೆ ತುಮಕೂರು. ಜೊತೆಗೆ 48 ಹಾಗೂ 206 ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಅತ್ಯುತ್ತಮ ರಸ್ತೆ ಸಂಪರ್ಕ ಹಾಗೂ 17 ಜಿಲ್ಲೆಗಳಿಗೆ ಹೆಬ್ಬಾಗಿಲಾಗಿರುವ ಭೌಗೋಳಿಕ ಅನುಕೂಲವೂ ತುಮಕೂರಿಗಿದೆ ಎಂದು ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಪಾಂಡುರಂಗ ಹೇಳಿದ್ದಾರೆ.

ಉದ್ಯೋಗಾವಕಾಶ, ಲಾಜಿಸ್ಟಿಕ್ಸ್​ಗೆ ಸಹಕಾರಿ 

ಒಟ್ಟಾರೆ ಕೈಗಾರಿಕೆ, ರಫ್ತು, ಲಾಜಿಸ್ಟಿಕ್ಸ್ ಮತ್ತು ಉದ್ಯೋಗಾವಕಾಶಗಳನ್ನು ಮತ್ತಷ್ಟು ವಿಸ್ತರಿಸಲು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಅತ್ಯಗತ್ಯ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿ ಅಭಿಪ್ರಾಯಪಟ್ಟಿದೆ. ಆದರೆ ತುಮಕೂರಿಗೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರಸ್ತಾಪ ಮೊದಲಿನದಲ್ಲ. ಆದರೆ ಈ ಒತ್ತಾಯ ಈಗ ಮತ್ತೆ ಕೇಳಿ ಬಂದಿದ್ದು, ಈ ಬೇಡಿಕೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಯಾವ ರೀತಿಯ ಸ್ಪಂದಿಸಲಿವೆ ಎಂಬುವುದನ್ನು ಕಾದು ನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Exit mobile version