ಗದಗದಲ್ಲಿ ಅನ್ನಭಾಗ್ಯ ಅಕ್ಕಿಗೆ ಕನ್ನ: ಮಹಾರಾಷ್ಟ್ರಕ್ಕೆ ಅಕ್ರಮವಾಗಿ ಸಾಗಿಸುತ್ತಿದ್ದ 32 ಟನ್ ಜಪ್ತಿ – Kannada News | Gadag: Anna Bhagya Rice Smuggling Foiled, 32 Tonnes Seized En Route to Maharashtra

ಗದಗ, ಜುಲೈ 16: ಅಕ್ರಮವಾಗಿ ಮಹಾರಾಷ್ಟ್ರಕ್ಕೆ ಸಾಗಿಸುತ್ತಿದ್ದ ಅನ್ಮಭಾಗ್ಯ ಅಕ್ಕಿಯನ್ನು ಕಾರ್ಯಾಚರಣೆ ನಡೆಸಿ ಆಹಾರ ಇಲಾಖೆ ಹಾಗೂ ಪೊಲೀಸರು ವಶಪಡಿಸಿಕೊಂಡಿರುವ ಘಟನೆ ಗದಗ ತಾಲೂಕಿನ ಬಿಂಕದಟ್ಟಿ ಗ್ರಾಮದ ಬಳಿ ನಡೆದಿದೆ. ಲಾರಿಯಲ್ಲಿ ಸಾಗಿಸುತ್ತಿದ್ದ 32 ಟನ್ ತೂಕದ 608 ಚೀಲ ಅಕ್ಕಿ ಜಪ್ತಿ ಮಾಡಲಾಗಿದ್ದು, ಆರೋಪಿಗಳು ಹಾವೇರಿ ಕೃಷಿ ಉತ್ಪನ್ನ ಮಾರುಕಟ್ಟೆ ಹೆಸರಲ್ಲಿ ನಕಲಿ ದಾಖಲೆ ಸೃಷ್ಟಿಸಿ ಅಕ್ರಮ ಸಾಗಾಟ ಮಾಡುತ್ತಿದ್ದರು ಎಂಬುದು ಗೊತ್ತಾಗಿದೆ. ಲಾರಿ ಚಾಲಕ ಮತ್ತು ಕ್ಲೀನರ್​​ನ ವಶಕ್ಕೆ ಪಡೆಯಲಾಗಿದ್ದು, ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಅರ್ಜೆಂಟೀನಾ… ಕೊನೆಯ ನಿಮಿಷಗಳ ‘ರಣ’ಧೀರರು! – Kannada News | Argentina: The Late Game Warriors

2026ರ ಫಿಫಾ ವಿಶ್ವಕಪ್‌ನ ರಣಾಂಗಣದಲ್ಲಿ ಅರ್ಜೆಂಟೀನಾ ಕೇವಲ ಫುಟ್‌ಬಾಲ್ ಆಡುತ್ತಿಲ್ಲ, ಬದಲಿಗೆ ಮೈದಾನದಲ್ಲಿ ಮಹಾಕಾವ್ಯವೊಂದನ್ನು ಬರೆಯುತ್ತಿದೆ. ಅದು ಕೂಡ ಇಡೀ ಜಗತ್ತೇ ಉಸಿರು ಬಿಗಿಹಿಡಿದು ನೋಡುವಂತೆ! ಇದಕ್ಕೆ ಸಾಕ್ಷಿ ಕಳೆದ 4 ಪಂದ್ಯಗಳು. ನಾಕೌಟ್ ಹಂತದಲ್ಲಿ ಮೆಸ್ಸಿ ಪಡೆ ಪಂದ್ಯ ಮುಗಿಯಲು ಇನ್ನೇನು ಕೆಲವೇ ನಿಮಿಷಗಳಿರುವಾಗ ಇಡೀ ಮ್ಯಾಚ್​ನ ಚಿತ್ರಣವನ್ನೇ ಬದಲಿಸುತ್ತಿದೆ. ಹೀಗೆ ಅಂತಿಮ ನಿಮಿಷಗಳಲ್ಲಿ ಎಲ್ಲರ ಲೆಕ್ಕಾಚಾರಗಳನ್ನು ಉಲ್ಟಾ ಮಾಡಿ, ತಮಗೆ ‘ಕಿಂಗ್ಸ್ ಆಫ್ ಲೇಟ್ ಗೇಮ್’ ಎಂಬ ಬಿರುದು ಏಕೆ ಸೂಕ್ತ ಎಂಬುದನ್ನು ಜಗತ್ತಿಗೆ ಸಾರಿದೆ.

ಹೀಗೆ ಕಳೆದ ನಾಲ್ಕು ಪಂದ್ಯಗಳ ಅಂತಿಮ ನಿಮಿಷಗಳಲ್ಲಿ ಗೋಲು ಬಾರಿಸುವ ಮೂಲಕ ಅರ್ಜೆಂಟೀನಾ ತಂಡವು ಫೈನಲ್‌ಗೆ ಲಗ್ಗೆ ಇಟ್ಟಿದೆ. ಆದರೆ, ಈ ಮಹಾ ವೇದಿಕೆಗೆ ಲಗ್ಗೆ ಇಡುವ ಮುನ್ನ ಅವರು ನಡೆಸಿದ ಕೊನೆಯ ಕ್ಷಣದ ರೋಮಾಂಚಕ ಹೋರಾಟದ ಸಂಕ್ಷಿಪ್ತ ವರದಿ ಇಲ್ಲಿದೆ.

  • ಕೇಪ್ ವರ್ಡೆ ವಿರುದ್ಧ ಚುರುಕಿನ ಆಟ: ಹೆಚ್ಚುವರಿ ಸಮಯದ (Extra Time) 111ನೇ ನಿಮಿಷದಲ್ಲಿ ಡಿಫೆಂಡರ್ ಕ್ರಿಸ್ಟಿಯನ್ ರೊಮೆರೊ ಗೋಲು ಬಾರಿಸಿದರು. ಸ್ಟ್ರೈಕರ್‌ಗಳು ಮಾತ್ರವಲ್ಲದೆ ತಂಡದ ರಕ್ಷಣಾತ್ಮಕ ಆಟಗಾರರೂ ಗೋಲು ಗಳಿಸುವ ಸಾಮರ್ಥ್ಯ ಹೊಂದಿರುವುದು ತಂಡದ ಅರ್ಜೆಂಟೀನಾ ತಂಡ ಪ್ಲಸ್ ಪಾಯಿಂಟ್. ಈ ಮೂಲಕ ಅಂತಿಮ ನಿಮಿಷಗಳ ವೇಳೆ 3-2 ಅಂತರದಿಂದ ಮುನ್ನಡೆ ಕಾಯ್ದುಕೊಂಡು ಅರ್ಜೆಂಟೀನಾ ತಂಡ ಮುಂದಿನ ಹಂತಕ್ಕೇರಿತು.

  • ಈಜಿಪ್ಟ್ ವಿರುದ್ಧ ಮಿಂಚಿನಾಟ: ನಾಕೌಟ್ ಹಂತದ ಈ ಪಂದ್ಯದಲ್ಲಿ ಅರ್ಜೆಂಟೀನಾ ತಂಡವು 2-0 ಅಂತರದಿಂದ ಹಿನ್ನಡೆಯಲ್ಲಿದ್ದರು. ಪಂದ್ಯ ಇನ್ನೇನು ಮುಗಿಯಲಿದೆ ಅನ್ನುವಷ್ಟರಲ್ಲಿ ಕ್ರಿಸ್ಟಿಯನ್ ರೊಮೇರೊ (79ನೇ ನಿಮಿಷ), ಲಿಯೋನೆಲ್ ಮೆಸ್ಸಿ (83ನೇ ನಿಮಿಷ) ಹಾಗೂ ಎಂಝೋ ಫೆರ್ನಾಂಡಿಸ್ (92ನೇ ನಿಮಿಷ) ಗೋಲು ದಾಖಲಿಸಿ ಈಜಿಪ್ಟ್ ತಂಡವನ್ನು 3-2 ಅಂತರದಿಂದ ಸೋಲಿಸಿ ಕ್ವಾರ್ಟರ್ ಫೈನಲ್​ಗೇರಿದ್ದರು.
  • ಸ್ವಿಟ್ಜರ್ಲೆಂಡ್ ವಿರುದ್ಧ ರೋಚಕ ಹೋರಾಟ: ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅರ್ಜೆಂಟೀನಾ ತಂಡವು 10ನೇ ನಿಮಿಷದಲ್ಲೇ ಗೋಲು ದಾಖಲಿಸಿದ್ದರು. ಆದರೆ ಆ ಬಳಿಕ 67ನೇ ನಿಮಿಷದಲ್ಲಿ ಗೋಲು ಬಾರಿಸಿದ ಸ್ವಿಟ್ಜರ್ಲೆಂಡ್ ಸಮಬಲ ಸಾಧಿಸಿದರು. 90 ನಿಮಿಷಗಳವರೆಗೆ ಸಮಬಲ ಹೊಂದಿದ್ದ ಕಾರಣ ಈ ಮ್ಯಾಚ್ ಪೆನಾಲ್ಟಿ ಶೂಟೌಟ್​ಗೆ ಹೋಗಲಿದೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ 112ನೇ ನಿಮಿಷದಲ್ಲಿ ಜೂಲಿಯನ್ ಅಲ್ವಾರೆಝ್ ಸಿಡಿಸಿದ ಸ್ಟನ್ನರ್ ಗೋಲು ಅರ್ಜೆಂಟೀನಾದ ದಣಿವರಿಯದ ಹೋರಾಟಕ್ಕೆ ಸಾಕ್ಷಿಯಾಯಿತು. ಇದರ ಬೆನ್ನಲ್ಲೇ ಲೌಟಾರೊ ಮಾರ್ಟಿನೆಝ್ (121ನೇ ನಿಮಿಷ) ಮತ್ತೊಂದು ಗೋಲು ಬಾರಿಸಿ 3-1 ಅಂತರದಿಂದ ಅರ್ಜೆಂಟೀನಾ ತಂಡ ಗೆಲುವನ್ನು ಖಚಿತಪಡಿಸಿದರು.
  • ಇಂಗ್ಲೆಂಡ್ ವಿರುದ್ಧ ಜಿದ್ದಾಟ: ಸೆಮಿಫೈನಲ್​ನಲ್ಲಿ ಇಂಗ್ಲೆಂಡ್ ತಂಡವು ಮೊದಲು ಗೋಲು ಬಾರಿಸಿ 1-0 ಅಂತರದಿಂದ ಮುನ್ನಡೆ ಕಾಯ್ದುಕೊಂಡಿದ್ದರು. 85ನೇ ನಿಮಿಷದವರೆಗೂ 0-1 ಹಿನ್ನಡೆಯಲ್ಲಿದ್ದ ಅರ್ಜೆಂಟೀನಾ ತಂಡವು ಟೂರ್ನಿಯಿಂದ ಹೊರಬೀಳಲಿದೆ ಎಂದೇ ಎಲ್ಲರೂ ಭಾವಿಸಿದ್ದರು. ಮುಂದಿನ 7 ನಿಮಿಷಗಳಲ್ಲಿ ಮೆಸ್ಸಿ ಮ್ಯಾಜಿಕ್ ಶುರುವಾಯಿತು. 85ನೇ ಎಂಝೋ ಮಾರ್ಟಿನೆಝ್ ಗೋಲು ದಾಖಲಿಸಿ ಪಂದ್ಯವನ್ನು ಸಮಬಲಕ್ಕೆ ಕೊಂಡೊಯ್ದರು. ಇದರ ಬೆನ್ನಲ್ಲೇ ಮೆಸ್ಸಿ ನೀಡಿದ ಮತ್ತೊಂದು ಪಾಸ್​ ಅನ್ನು ಲೌಟಾರೊ ಮಾರ್ಟಿನೆಝ್ ( 92ನೇ ನಿಮಿಷ) ಗೋಲು ಬಲೆಯೊಳಗೆ ತಲುಪಿಸಿದರು. ಈ ಮೂಲಕ ಕೊನೆಯ ನಿಮಿಷಗಳಿರುವಾಗ 2-1 ಅಂತರದಿಂದ ಇಂಗ್ಲೆಂಡ್ ತಂಡವನ್ನು ಮಣಿಸಿ ಅರ್ಜೆಂಟೀನಾ ಫೈನಲ್​ಗೇರಿದೆ.

ಅರ್ಜೆಂಟೀನಾದ ‘ರಣ’ಧೀರರು:

ಕೊನೆಯ ಕ್ಷಣಗಳ ವೇಳೆಯ ಅತಿಮಾನುಷ ಗೆಲುವುಗಳ ಹಿಂದಿನ ರಹಸ್ಯ ಆಟಗಾರರಲ್ಲಿನ ಮಾನಸಿಕ ದೃಢತೆ. ಸ್ಕಲೋನಿ ಅವರ ಮಾರ್ಗದರ್ಶನದಲ್ಲಿ ಕಣಕ್ಕಿಳಿಯುತ್ತಿರುವ ತಂಡವು ರೆಫ್ರಿ ಕೊನೆಯ ವಿಸ್ಲ್ ಊದುವವರೆಗೂ ಧೈರ್ಯ ಕಳೆದುಕೊಳ್ಳುತ್ತಿಲ್ಲ. ಒತ್ತಡವನ್ನು ಮೆಟ್ಟಿ ನಿಂತು ಸತತ ಕೌಂಟರ್ ಅಟ್ಯಾಕ್ ಮಾಡುತ್ತಿದ್ದಾರೆ. ಅದು ಕೂಡ ಸೋಲನ್ನು ಒಪ್ಪಿಕೊಳ್ಳಲು ತಯಾರಿಲ್ಲದ ರಣಧೀರರಂತೆ.

39 ವರ್ಷದ ಲಿಯೋನೆಲ್ ಮೆಸ್ಸಿಯೇ ಮೈದಾನದಲ್ಲಿ ವೀರಾವೇಶದಿಂದ ಹೋರಾಡುತ್ತಿರುವುದನ್ನು ನೋಡುತ್ತಿರುವ ಅರ್ಜೆಂಟೀನಾದ ಯುವ ಆಟಗಾರರು, ತಮ್ಮ ನೆಚ್ಚಿನ ನಾಯಕನಿಗಾಗಿ ಕೊನೆಯ ಬಾರಿಗೆ ವಿಶ್ವಕಪ್ ಗೆಲ್ಲುವ ಏಕೈಕ ಧ್ಯೇಯೋದ್ದೇಶದೊಂದಿಗೆ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಮುನ್ನುಗ್ಗುತ್ತಿದ್ದಾರೆ.

ಅರ್ಜೆಂಟೀನಾ ಪಡೆಯ ಈ ಅಸಾಮಾನ್ಯ ಹಠ ಮತ್ತು ಧಗಧಗಿಸುವ ಉತ್ಸಾಹವನ್ನು ಕಾಣುತ್ತಿರುವ ಎದುರಾಳಿ ಆಟಗಾರರು ಅಕ್ಷರಶಃ ಮೈದಾನದಲ್ಲೇ ಶರಣಾಗುತ್ತಿದ್ದಾರೆ. ಅವರ ರಣತಂತ್ರಗಳು ಮೆಸ್ಸಿ ಪಡೆಯ ರೌದ್ರಾವತಾರದ ಮುಂದೆ ಧೂಳೀಪಟವಾಗುತ್ತಿವೆ!

ಇದನ್ನೂ ಓದಿ: ಈ ಪುಟ್ಟ ಪುಟಾಣಿಯೇ ಈಗ ಮೆಸ್ಸಿಯ ಎದುರಾಳಿ!

ಹೀಗೆ ಎಲ್ಲಾ ತಂಡಗಳ ಲೆಕ್ಕಾಚಾರಗಳನ್ನು ಕೊನೆಯ ನಿಮಿಷಗಳಲ್ಲಿ ತಲೆಕೆಳಗಾಗಿಸಿ ಮುನ್ನುಗ್ಗಿ ಬಂದಿರುವ ಅರ್ಜೆಂಟೀನಾ ಪಡೆ ಇದೀಗ ವಿಶ್ವಕಪ್ ಇತಿಹಾಸದ ಸುವರ್ಣ ಪುಟಗಳಲ್ಲಿ ಮತ್ತೊಂದು ಹೊಸ ಅಧ್ಯಾಯ ಬರೆಯಲು ಸಜ್ಜಾಗಿದ್ದಾರೆ. 39ರ ಹರೆಯದಲ್ಲೂ ಧೃತಿಗೆಡದ ಮೆಸ್ಸಿಯ ಅದಮ್ಯ ಚೇತನ ಮತ್ತು ಯುವ ಪಡೆಯ ಈ ಉಕ್ಕಿನಂತಹ ಹಠ, ಅರ್ಜೆಂಟೀನಾವನ್ನು ಮತ್ತೊಮ್ಮೆ ವಿಶ್ವ ಚಾಂಪಿಯನ್ ಪಟ್ಟಕ್ಕೇರಿಸಲಿದೆಯಾ ಕಾದು ನೋಡಬೇಕಿದೆ.

Source link

ನಿರುದ್ಯೋಗಿಗಳಿಗೆ ಹಾಗೂ ಕ್ರೀಡಾಪಟುಗಳಿಗೆ ಭರ್ಜರಿ ಗಿಫ್ಟ್: ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಪಟುಗಳಿಗೆ ಲಕ್ಷ ಲಕ್ಷ ಪ್ರೋತ್ಸಾಹಧನ – Kannada News | Minister Parameshwar Details 72,000 Government Job Recruitment, 2,000 for Sportspersons, and New Sports Policy

ಬೆಂಗಳೂರು, ಜು.16: ಕರ್ನಾಟಕದಲ್ಲಿ 72,000 ಸರ್ಕಾರಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ರಾಜ್ಯ ಸರ್ಕಾರ ಆರಂಭಿಸಿದೆ. ಉಪಮುಖ್ಯಮಂತ್ರಿ ಪರಮೇಶ್ವರ್ ಅವರು ಸುದ್ದಿಗೋಷ್ಠಿಯಲ್ಲಿ ಈ ಮಹತ್ವದ ನಿರ್ಧಾರಗಳನ್ನು ಪ್ರಕಟಿಸಿದರು. ಹಣಕಾಸು ಇಲಾಖೆಯ ಅನುಮೋದನೆಯೊಂದಿಗೆ ವಿವಿಧ ಇಲಾಖೆಗಳಿಗೆ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಲು ತಿಳಿಸಲಾಗಿದೆ. ಈ ಬೃಹತ್ ನೇಮಕಾತಿಯಲ್ಲಿ ಕ್ರೀಡಾಪಟುಗಳಿಗೆ ವಿಶೇಷ ಆದ್ಯತೆ ನೀಡಲಾಗಿದ್ದು, ಸಾಮಾನ್ಯ ಇಲಾಖೆಗಳಲ್ಲಿ 2% ಮತ್ತು ಪೊಲೀಸ್ ಇಲಾಖೆಯಲ್ಲಿ 3% ಹುದ್ದೆಗಳನ್ನು ಮೀಸಲಿಡಲಾಗಿದೆ. ಇದರಿಂದ ಸುಮಾರು 2,000 ಹುದ್ದೆಗಳು ರಾಜ್ಯವನ್ನು ಪ್ರತಿನಿಧಿಸುವ ಕ್ರೀಡಾಪಟುಗಳಿಗೆ ದೊರೆಯಲಿವೆ. ಕಳೆದ ಬಾರಿ ಗೃಹ ಸಚಿವರಾಗಿದ್ದಾಗ 180 ಪೊಲೀಸ್ ಸಿಬ್ಬಂದಿ ಮತ್ತು 40 ಸಬ್ ಇನ್ಸ್‌ಪೆಕ್ಟರ್‌ಗಳು ಕ್ರೀಡಾ ಕೋಟಾದಡಿಯಲ್ಲಿ ಆಯ್ಕೆಯಾಗಿದ್ದರು ಎಂದು ತಿಳಿಸಿದರು. ರಾಜ್ಯ ಸರ್ಕಾರ ಹೊಸ ಪ್ರೋತ್ಸಾಹಧನ ಯೋಜನೆಯನ್ನೂ ಪರಿಚಯಿಸಿದೆ. ಕಾಮನ್‌ವೆಲ್ತ್ ಮತ್ತು ಏಷ್ಯನ್ ಗೇಮ್ಸ್‌ಗಳಲ್ಲಿ ರಾಜ್ಯವನ್ನು ಪ್ರತಿನಿಧಿಸುವ ಪ್ರತಿಯೊಬ್ಬ ಕ್ರೀಡಾಪಟುವಿಗೂ 5 ಲಕ್ಷ ರೂಪಾಯಿ ಪ್ರೋತ್ಸಾಹಧನ ನೀಡಲಾಗುವುದು. ಚಿನ್ನದ ಪದಕ ವಿಜೇತರಿಗೆ 35 ಲಕ್ಷ, ಬೆಳ್ಳಿ ಪದಕ ವಿಜೇತರಿಗೆ 25 ಲಕ್ಷ, ಕಂಚಿನ ಪದಕ ವಿಜೇತರಿಗೆ 15 ಲಕ್ಷ ರೂಪಾಯಿ ಬಹುಮಾನ ನೀಡುವುದನ್ನು ಮುಂದುವರಿಸಲಾಗುವುದು. ಇದರ ಜೊತೆಗೆ, ರಾಜ್ಯದಲ್ಲಿ ಕ್ರೀಡಾ ಪ್ರತಿಭೆಗಳನ್ನು ಬೆಳೆಸಲು 50 ಕೋಚ್‌ಗಳನ್ನು ನೇಮಕ ಮಾಡುವ ಕ್ರಮ ಕೈಗೊಳ್ಳಲಾಗಿದೆ. ಈ ಎಲ್ಲಾ ಕ್ರಮಗಳು ರಾಜ್ಯದಲ್ಲಿ ಕ್ರೀಡೆ ಮತ್ತು ಕ್ರೀಡಾಪಟುಗಳಿಗೆ ಹೆಚ್ಚಿನ ಬೆಂಬಲ ನೀಡುವ ಸರ್ಕಾರದ ಬದ್ಧತೆವಾಗಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಶವಪೆಟ್ಟಿಗೆಯಲ್ಲಿ ಅಮೆರಿಕ ಅಧ್ಯಕ್ಷ, ನಾವು ಟ್ರಂಪ್ ಕೊಲ್ಲುತ್ತೇವೆ ಎಂದು ಬರೆದ ಬೃಹತ್ ಫಲಕ​ ಹಾಕಿದ ಇರಾನ್ – Kannada News | Iran’s Trump Billboard Escalates US Iran Diplomatic Crisis in Tehran

ಟೆಹ್ರಾನ್, ಜುಲೈ 16: ಅಮೆರಿಕ ಮತ್ತು ಇರಾನ್(Iran) ನಡುವಿನ ಮಿಲಿಟರಿ ಸಂಘರ್ಷವು ಭೀಕರ ಸ್ವರೂಪ ಪಡೆದುಕೊಂಡಿರುವ ಬೆನ್ನಲ್ಲೇ, ಇರಾನ್ ರಾಜಧಾನಿ ಟೆಹ್ರಾನ್‌ನ ಅತ್ಯಂತ ಜನನಿಬಿಡ ಪ್ರದರ್ಶಿಸಲಾದ ದೈತ್ಯ ಜಾಹೀರಾತು ಫಲಕವೊಂದು ಜಾಗತಿಕವಾಗಿ ತೀವ್ರ ರಾಜತಾಂತ್ರಿಕ ಬಿಕ್ಕಟ್ಟನ್ನು ಸೃಷ್ಟಿಸಿದೆ. ಟೆಹ್ರಾನ್‌ನ ಪ್ರಸಿದ್ಧ ‘ಎಂಘೆಲಾಬ್ ಚೌಕ’ದಲ್ಲಿ ಈ ದೈತ್ಯ ಹೋರ್ಡಿಂಗ್ ಅನ್ನು ಅಳವಡಿಸಲಾಗಿದ್ದು, ಅದರಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಕಪ್ಪು ಶವಪೆಟ್ಟಿಗೆಯೊಳಗೆ ಮಲಗಿಸಿರುವಂತೆ ಚಿತ್ರಿಸಲಾಗಿದೆ.

ಅಷ್ಟೇ ಅಲ್ಲದೆ, ಆ ಫಲಕದ ಮೇಲೆ ಅತ್ಯಂತ ಸ್ಪಷ್ಟವಾಗಿ ನಾವು ಟ್ರಂಪ್ ಅವರನ್ನು ಕೊಲ್ಲುತ್ತೇವೆ ಎಂಬ ಬೆದರಿಕೆಯ ಸಂದೇಶವನ್ನು ಬರೆಯಲಾಗಿದ್ದು, ಇದು ಅಮೆರಿಕದ ಕೆಂಗಣ್ಣಿಗೆ ಕಾರಣವಾಗಿದೆ. ಇರಾನ್‌ನ ಪ್ರಮುಖ ನಗರಗಳು, ಬಂದರುಗಳು ಹಾಗೂ ನಾಗರಿಕ ಪರಮಾಣು ಸ್ಥಾವರಗಳ ಮೇಲೆ ಅಮೆರಿಕದ ವಾಯುಪಡೆಗಳು ನಿರಂತರವಾಗಿ ಬಾಂಬ್ ದಾಳಿ ನಡೆಸುತ್ತಿರುವುದಕ್ಕೆ ಪ್ರತಿಯಾಗಿ ಇರಾನ್ ಸರ್ಕಾರಿ ಬೆಂಬಲಿತ ಸಂಸ್ಥೆಗಳು ಈ ಆಕ್ರೋಶದ ಬಿಲ್‌ಬೋರ್ಡ್ ಅನ್ನು ಪ್ರದರ್ಶಿಸಿವೆ.

ಪ್ರಸ್ತುತ ಹಾರ್ಮುಜ್ ಜಲಸಂಧಿಯ ಸುತ್ತಮುತ್ತ ಉಭಯ ದೇಶಗಳ ಪಡೆಗಳು ಪರಸ್ಪರ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ವಿನಿಮಯ ಮಾಡಿಕೊಳ್ಳುತ್ತಿವೆ. ಅಮೆರಿಕ ಇರಾನ್‌ನ ತೈಲ ಹಡಗುಗಳನ್ನು ಮಾರುಕಟ್ಟೆಯಲ್ಲೇ ಹೊಡೆದುರುಳಿಸುತ್ತಿದ್ದರೆ, ಇರಾನ್ ಬಹ್ರೇನ್‌ನಲ್ಲಿರುವ ಅಮೆರಿಕದ 5ನೇ ನೌಕಾಪಡೆಯ ಬೇಸ್ ಮೇಲೆ ದಾಳಿ ನಡೆಸುತ್ತಿದೆ. ಈ ಭೀಕರ ಸೇನಾ ಸಂಘರ್ಷದ ನಡುವೆ ಟೆಹ್ರಾನ್‌ನ ಹೃದಯಭಾಗದಲ್ಲೇ ಅಮೆರಿಕ ಅಧ್ಯಕ್ಷರ ಹತ್ಯೆಗೆ ಬಹಿರಂಗ ಕರೆ ನೀಡಿರುವುದು ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧ ಸಂಪೂರ್ಣವಾಗಿ ಹೂತುಹೋಗಿರುವುದರ ಸ್ಪಷ್ಟ ಸಂಕೇತವಾಗಿದೆ.

ಜಾಗತಿಕ ಇಂಧನ ಹಾಗೂ ರಾಜತಾಂತ್ರಿಕ ವಲಯದಲ್ಲಿ ತಲ್ಲಣ

ಇರಾನ್ ಮತ್ತು ಅಮೆರಿಕ ನಡುವೆ ಒಮಾನ್ ದೇಶದ ಮಧ್ಯಸ್ಥಿಕೆಯಲ್ಲಿ ನಡೆಯುತ್ತಿದ್ದ ಕೊನೆಯ ಹಂತದ ತೆರೆಮರೆಯ ಶಾಂತಿ ಮಾತುಕತೆಗಳೂ ಸಹ ಈ ಹತ್ಯೆಯ ಬೆದರಿಕೆಯ ಫಲಕದಿಂದಾಗಿ ಸಂಪೂರ್ಣವಾಗಿ ಸ್ಥಗಿತಗೊಳ್ಳುವ ಹಂತ ತಲುಪಿವೆ. ಮಧ್ಯಪ್ರಾಚ್ಯದಲ್ಲಿ ಯಾವುದೇ ಕ್ಷಣದಲ್ಲಿ ಜಾಗತಿಕ ಮಹಾಯುದ್ಧ ಭುಗಿಲೇಳಬಹುದು ಎಂಬ ಆತಂಕದಿಂದಾಗಿ ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಗಳು ರಾಕೆಟ್ ವೇಗದಲ್ಲಿ ಏರುತ್ತಿವೆ.

ಮತ್ತಷ್ಟು ಓದಿ: ಇರಾನ್​​​-ಇಸ್ರೇಲ್​​​ ಯುದ್ಧ: ಯುದ್ಧಭೂಮಿಯಿಂದ ಕನ್ನಡಿಗ ಹೇಳಿದ್ದಿಷ್ಟು

ಇರಾನ್ ಬಿಲ್‌ಬೋರ್ಡ್‌ಗಳ ಇತಿಹಾಸ ಮತ್ತು ‘ಖಾಸಿಂ ಸುಲೈಮಾನಿ’ ನೆರಳು

ಟೆಹ್ರಾನ್‌ನ ಎಂಘೆಲಾಬ್ ಚೌಕದಲ್ಲಿ ಇಂತಹ ವಿವಾದಾತ್ಮಕ ಬಿಲ್‌ಬೋರ್ಡ್‌ಗಳನ್ನು ಪ್ರದರ್ಶಿಸುವುದು ಇದೇ ಮೊದಲೇನಲ್ಲ. ಇರಾನ್‌ನ ಈ ಚೌಕವು ಸರ್ಕಾರದ ಅಧಿಕೃತ ಪ್ರಚಾರದ ಪ್ರಮುಖ ಕೇಂದ್ರವಾಗಿದೆ.

ಸುಲೈಮಾನಿ ಹತ್ಯೆಯ ಸೇಡು: ಟ್ರಂಪ್ ತಮ್ಮ ಮೊದಲ ಅಧ್ಯಕ್ಷೀಯ ಅವಧಿಯಲ್ಲಿ ಇರಾನ್‌ನ ಅತ್ಯಂತ ಪ್ರಭಾವಿ ಸೇನಾ ದಂಡನಾಯಕ ಜನರಲ್ ಖಾಸಿಂ ಸುಲೈಮಾನಿ ಅವರನ್ನು ಬಾಗ್ದಾದ್‌ನಲ್ಲಿ ಡ್ರೋನ್ ದಾಳಿ ಮೂಲಕ ಕೊಂದಿದ್ದರು. ಅಂದಿನಿಂದ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ಸ್ (IRGC) ಟ್ರಂಪ್ ವಿರುದ್ಧ ಸೇಡು ತೀರಿಸಿಕೊಳ್ಳುವುದಾಗಿ ಬಹಿರಂಗ ಪ್ರತಿಜ್ಞೆ ಮಾಡಿದೆ.

ಅಮೆರಿಕದ ಒಳಗೆ ಭದ್ರತಾ ಆತಂಕ: ಪ್ರಸ್ತುತ ಅಮೆರಿಕದ ಗುಪ್ತಚರ ಸಂಸ್ಥೆಗಳು ಇರಾನ್‌ನ ಈ ಬಹಿರಂಗ ಹತ್ಯೆಯ ಬೆದರಿಕೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿವೆ. ಇತ್ತೀಚಿನ ತಿಂಗಳುಗಳಲ್ಲಿ ಅಮೆರಿಕದ ನೆಲದಲ್ಲೇ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮೇಲೆ ನಡೆದ ಸರಣಿ ಶೂಟೌಟ್ ದಾಳಿಗಳ ಹಿಂದೆ ಇರಾನ್ ಪ್ರೇರಿತ ಹಂತಕರ ಪಿತೂರಿ ಇರಬಹುದೇ ಎಂಬ ಕೋನದಲ್ಲೂ ಅಮೆರಿಕದ ಭದ್ರತಾ ಪಡೆಗಳು ತನಿಖೆ ತೀವ್ರಗೊಳಿಸಿವೆ. ಈ ಬಿಲ್‌ಬೋರ್ಡ್ ರಾಜತಾಂತ್ರಿಕ ಬಿಕ್ಕಟ್ಟನ್ನು ಮುಂದಿನ ದಿನಗಳಲ್ಲಿ ಟ್ರಂಪ್ ಆಡಳಿತ ಹೇಗೆ ಎದುರಿಸಲಿದೆ ಎಂಬುದರ ಮೇಲೆ ಇಡೀ ವಿಶ್ವದ ಭವಿಷ್ಯ ನಿಂತಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಸಿಎಂ ಡಿಕೆಶಿ ‘ಜೈಲು’ ಹೇಳಿಕೆಗೆ ಕೇಂದ್ರ ಸಚಿವ ಪ್ರಹ್ಲಾದ್​​ ಜೋಶಿ ಕೌಂಟರ್​​: ಅನುಕಂಪದ ಯತ್ನ ಎಂದು ಕಿಡಿ – Kannada News | Union Minister Pralhad Joshi Counters DK Shivakumar’s ‘Jail’ Statement, Calls It a Sympathy Stunt

ಸಿಎಂ ಡಿಕೆಶೆ ‘ಜೈಲು’ ಹೇಳಿಕೆಗೆ ಕೇಂದ್ರ ಸಚಿವ ಪ್ರಹ್ಲಾದ್​​ ಜೋಶಿ ಕೌಂಟರ್​​Image Credit source: PTI

ಬೆಂಗಳೂರು, ಜುಲೈ 16: ಬಿಡದಿಯಲ್ಲಿ ವಿವಾದಿತ ಟೌನ್​​ಶಿಪ್​​ ನಿರ್ಮಾಣ ವಿಚಾರವಾಗಿ ನಿನ್ನೆ (ಜುಲೈ 15) ಸುದ್ದಿಗೋಷ್ಠಿ ನಡೆಸಿದ್ದ ಸಿಎಂ ಡಿಕೆ ಶಿವಕುಮಾರ್​​, ನಾನು ಸಿಎಂ ಆಗಿದ್ದರಿಂದ ತಡೆದುಕೊಳ್ಳುವುದಕ್ಕೆ ಅವರಿಗೆ ಆಗುತ್ತಿಲ್ಲ. ಜೈಲಿಗೆ ಕಳುಹಿಸಲು ಎಷ್ಟು ಸಂಚು ನಡೀತು ಎಂದು ಮುಂದೆ ಹೇಳ್ತೇನೆ. ಜೈಲು ನನಗೆ ಹೊಸದೇನಲ್ಲ ಎಂದಿದ್ದರು. ಅವರ ಈ ಮಾತಿಗೆ ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ಕೌಂಟರ್​​ ನೀಡಿದ್ದು, ಡಿ.ಕೆ. ಶಿವಕುಮಾರ್ ಅವರನ್ನು ಯಾರೂ ಜೈಲಿಗೆ ಕಳುಹಿಸಲ್ಲ. ಅವರು ಮಾಡಿದ ತಪ್ಪು ಮತ್ತು ಭ್ರಷ್ಟಾಚಾರಕ್ಕೆ ಜೈಲಿಗೆ ಹೋದರೆ ಯಾರು ಏನೂ ಮಾಡಲು ಆಗಲ್ಲ ಎಂದಿದ್ದಾರೆ.

‘ತಪ್ಪು ಮಾಡಿದರೆ ಜೈಲಿಗೆ ಹೋಗುತ್ತಾರೆ’

ಯಾರೇ ಆದರೂ ತಪ್ಪು ಮಾಡಿದರೆ ಜೈಲಿಗೆ ಹೋಗುತ್ತಾರೆ. ಇದರ ಅರ್ಥ ನಾವು ಅವರನ್ನು ಜೈಲಿಗೆ ಕಳುಹಿಸುತ್ತೇವೆ ಅಂತ ಅಲ್ಲ. ಜೈಲಿನ ಬಗ್ಗೆ ಈಗ ಯಾಕೆ ಮಾತಾಡುತ್ತಿದ್ದೀರಿ? ನೀವು ಏನಾದರೂ ತಪ್ಪು ಮಾಡಿದ್ದೀರಾ? ಇದೆಲ್ಲಾ ಅನುಕಂಪ ತೆಗೆದುಕೊಳ್ಳಲು ಮಾಡುತ್ತಿರುವ ಪ್ರಯತ್ನ ಎಂದು ಜೋಶಿ ಆರೋಪಿಸಿದ್ದಾರೆ. ಮುಖ್ಯಮಂತ್ರಿ ಅಂದರೆ ನೀವೇನೂ ಸರ್ವಾಧಿಕಾರಿಗಳಲ್ಲ, ರಾಜ್ಯದ ಮಹಾರಾಜರಲ್ಲ. ಈ ಮಾತನ್ನು ಅರ್ಥ ಮಾಡಿಕೊಂಡು ತಮ್ಮ ನಡೆ ತೋರಿಸಬೇಕು. ಕುಮಾರಸ್ವಾಮಿ ಅವರು ಮಾಡಿರುವ ಭ್ರಷ್ಟಾಚಾರ ಆರೋಪಗಳ ಬಗ್ಗೆ ಸ್ಪಷ್ಟಪಡಿಸಬೇಕು ಎಂದವರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಬಿಡದಿ ಟೌನ್​ಶಿಪ್ ವಿವಾದ; ವಿರೋಧದ ಮಧ್ಯೆ ಭೂಸ್ವಾಧೀನಕ್ಕೆ ಅಂತಿಮ ಅಧಿಸೂಚನೆ ಬಿಡುಗಡೆ ಮಾಡಿದ ಸರ್ಕಾರ

ಬಲವಂತವಾಗಿ ಜಮೀನು ಕಸಿದುಕೊಂಡು ಟೌನ್​ಶಿಪ್ ಮಾಡುವ ಬದಲು, ರೈತರ ಮನವೊಲಿಸಬೇಕು. ಅದನ್ನು ಬಿಟ್ಟು ರೈತರು ತಿರುಗಿ ಬಿದ್ದ ಮೇಲೆ ಒತ್ತಾಯ ಮಾಡಿಲ್ಲ ಅನ್ನೋದಲ್ಲ. ಮೊದಲೇ ಯಾಕೆ ರೈತರ ಜೊತೆ ಮಾತನಾಡಿಲ್ಲ? ಅನೇಕರು ಅನೇಕ ರೀತಿ ಸಲಹೆ ಕೊಟ್ಟರೂ ಯಾಕೆ ಸ್ವೀಕಾರ ಮಾಡಿಲ್ಲ? ಎಂದು ಜೋಶಿ ಪ್ರಶ್ನಿಸಿದ್ದಾರೆ. ಮೂರು ವರ್ಷಗಳಲ್ಲಿ ಸಿದ್ದರಾಮಯ್ಯನವರಿಗೆ ಟೌನ್​​ಶಿಪ್​​ ಬಗ್ಗೆ ಇರದ ಆಸಕ್ತಿ ನಿಮಗೆ ಯಾಕೆ? ಇದರ ಅರ್ಥ ಏನೋ ಡೀಲ್ ಆಗಿದೆ ಅಂತಾ ಅಲ್ವಾ? ಇದರ ಬಗ್ಗೆ ಯಾಕೆ ಉತ್ತರ ಕೊಡುತ್ತಿಲ್ಲ? ದೇವೇಗೌಡರ ಆರೋಪಕ್ಕೆ ಡಿ.ಕೆ. ಶಿವಕುಮಾರ್ ಸ್ಪಷ್ಟನೆ ಕೊಡುವುದು ಬಿಟ್ಟು ಅವರ ಮೇಲೆ ರೇಗಾಡುತ್ತಿದ್ದಾರೆ. ಮನುಷ್ಯ ಏನಾದರೂ ತಪ್ಪು ಮಾಡಿ ಅದನ್ನು ಸಮರ್ಥನೆ ಮಾಡಿಲಿಕ್ಕೆ ಆಗದಿದ್ದಾಗ ಈ ರೀತಿ ರೇಗಾಡುತ್ತಾನೆ ಎಂದು ಪ್ರಹ್ಲಾದ್​​ ಜೋಶಿ ಹೇಳಿದ್ದಾರೆ.

‘ರಾಹುಲ್​​ ಗಾಂಧಿ ಎಲ್ಲಿದ್ದಾರೆ?’

ದೇಶದ ವಿಪಕ್ಷ ನಾಯಕ ರಾಹುಲ್ ಗಾಂಧಿ ಕಳೆದ 25 ದಿನಗಳಿಂದ ಎಲ್ಲಿದ್ದಾರೆ ಎಂಬುದನ್ನು ದೇಶದ ಜನತೆಗೆ ತಿಳಿಸಿ ಎಂದೂ ಕಾಂಗ್ರೆಸ್​​ನ ಕೇಂದ್ರ ಸಚಿವರು ಆಗ್ರಹಿಸಿದ್ದಾರೆ. ನಾವು ಎಲ್ಲೇ ಹೋದರು ಹೇಳುತ್ತೇವೆ. ನಾನು ದಾವೋಸ್​​ಗೆ ಹೋಗಿದ್ದೆ, ಕಿರಣ್ ರಿಜಿಜು ಕತಾರ್​​ಗೆ ಹೋಗಿದ್ದರು. ಆ ರೀತಿ ಇವರು ಯಾಕೆ ಹೇಳುವುದಿಲ್ಲ? ವಿಪಕ್ಷ ನಾಯಕರಾಗಿರುವ ರಾಹುಲ್​​ ಎಲ್ಲಾ ಕೆಲಸ ಸರಿಸಿ ಎಲ್ಲಿಗೆ ಹೋಗಿದ್ದಾರೆ? ಏನು ಮಾಡುತ್ತಿದ್ದಾರೆ? ಎಂದವರು ಪ್ರಶ್ನಿಸಿದ್ದಾರೆ.

‘ಬರದ ವಿಚಾರದಲ್ಲೂ ರಾಜಕೀಯ ಸಲ್ಲ’

ಬರ ಅಧ್ಯಯನಕ್ಕಾಗಿ ಕೇಂದ್ರಕ್ಕೆ ರಾಜ್ಯ ಸರ್ಕಾರ ಪತ್ರ ಬರೆದ ವಿಚಾರವಾಗಿಯೂ ಪ್ರತಿಕ್ರಿಯಿಸಿರುವ ಜೋಶಿ, ರಾಜ್ಯದಲ್ಲಿ ಎಲ್ಲೆಲ್ಲಿ ಮಳೆಯಾಗಿದೆ, ಬರ ಸಮಸ್ಯೆ ಇದೆ ಎಂಬ ಬಗ್ಗೆ ಮೊದಲು ಅಧ್ಯಯನ ಮಾಡಿ ಅದನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಬೇಕು. ಅದನ್ನು ಬಿಟ್ಟು ಇದರಲ್ಲಿ ಸುಮ್ಮನೆ ರಾಜಕೀಯ ಮಾಡುವುದಲ್ಲ. ಕಾಂಗ್ರೆಸ್ ನೀತಿ ಏನಂದರೆ ಮಳೆ ಜಾಸ್ತಿ ಆದರೂ ಮೋದಿ ಕಾರಣ, ಮಳೆ ಕಡಿಮೆ ಆದರೂ ಮೋದಿ ಕಾರಣ. ಜನಸಂಖ್ಯೆ ಜಾಸ್ತಿ ಆದರೂ ಮೋದಿಯವರು ಕಾರಣ. ಇಂತಹ ಧೋರಣೆಯನ್ನು ಕಾಂಗ್ರೆಸ್ ಬಿಡಬೇಕು ಎಂದವರು ವಾಗ್ದಾಳಿ ನಡೆಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಐಸಿಸಿ ಮಾಸ್ಟರ್ ಪ್ಲ್ಯಾನ್: ಭಾರತ vs ಪಾಕಿಸ್ತಾನ್ 3 ಬಾರಿ ಮುಖಾಮುಖಿ! – Kannada News | New ICC Format: 3 India Pakistan Matches In 2027 World Cup

ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ತನ್ನ ಬಹುನಿರೀಕ್ಷಿತ 2027ರ ಪುರುಷರ ಏಕದಿನ ವಿಶ್ವಕಪ್ ಟೂರ್ನಿಯ ಸ್ವರೂಪದಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡಿದೆ. ಈ ಬದಲಾವಣೆಯಿಂದಾಗಿ ಮುಂದಿನ ವಿಶ್ವಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಬರೋಬ್ಬರಿ ಮೂರು ಬಾರಿ ಮುಖಾಮುಖಿಯಾಗಬಹುದು. ಅದರಲ್ಲೂ ಸಾಂಪ್ರದಾಯಿಕ ಎದುರಾಳಿಗಳ ನಡುವೆ ಕನಿಷ್ಠ ಎರಡು ಪಂದ್ಯಗಳು ನಡೆಯುವುದು ಬಹುತೇಕ ಖಚಿತವಾಗಿದೆ.

ಸಾಮಾನ್ಯವಾಗಿ ಹಿಂದಿನ ವಿಶ್ವಕಪ್ ಟೂರ್ನಿಗಳಲ್ಲಿ ಭಾರತ ಮತ್ತು ಪಾಕಿಸ್ತಾನ್ ಲೀಗ್ ಹಂತದಲ್ಲಿ ಕೇವಲ ಒಂದು ಬಾರಿ ಮಾತ್ರ ಮುಖಾಮುಖಿಯಾಗುತ್ತಿದ್ದವು. ಇನ್ನು ದ್ವಿತೀಯ ಬಾರಿ ಉಭಯ ತಂಡಗಳು ಸೆಣಸಾಡಬೇಕಿದ್ದರೆ ಅವು ನಾಕೌಟ್ (ಸೆಮಿಫೈನಲ್ ಅಥವಾ ಫೈನಲ್) ಹಂತಕ್ಕೇರಬೇಕಾದ ಅನಿವಾರ್ಯತೆ ಇರುತ್ತಿತ್ತು.

ಆದರೆ, 2027ರ ಟೂರ್ನಿಯಲ್ಲಿ ಜಾರಿಗೆ ಬರಲಿರುವ ಹೊಸ ‘ಸೂಪರ್ ಸೆವೆನ್’ ನಿಯಮದಿಂದಾಗಿ, ಲೀಗ್ ಹಂತ ಮುಗಿದ ತಕ್ಷಣವೇ ಇವೆರಡೂ ತಂಡಗಳು ಎರಡನೇ ಬಾರಿಗೆ ಪರಸ್ಪರ ಕಾದಾಡುವುದು ಖಾತರಿಯಾಗಲಿದೆ. ಆ ಬಳಿಕ ಪಾಯಿಂಟ್ಸ್ ಪಟ್ಟಿಯ ಆಧಾರದ ಮೇಲೆ ಸೆಮಿಫೈನಲ್ ಅಥವಾ ಫೈನಲ್ ತಲುಪಿದರೆ, ಅಭಿಮಾನಿಗಳು ಒಂದೇ ವಿಶ್ವಕಪ್‌ನಲ್ಲಿ ಮೂರನೇ ಬಾರಿಗೆ ಭಾರತ-ಪಾಕ್ ಮಹಾ ಸಮರವನ್ನು ಕಣ್ಣುಂಬಿಕೊಳ್ಳಬಹುದು.

ಇಂಡೊ-ಪಾಕ್ 3 ಬಾರಿ ಮುಖಾಮುಖಿ ಹೇಗೆ?

ಏಕದಿನ ವಿಶ್ವಕಪ್ ಟೂರ್ನಿಯ ಹೊಸ ಸ್ವರೂಪದ ಪ್ರಕಾರ ಪಂದ್ಯಾವಳಿಯು ಒಟ್ಟು ಮೂರು ಹಂತಗಳಲ್ಲಿ ನಡೆಯಲಿದೆ. ಈ ಮೂರು ಹಂತದಲ್ಲೂ ಭಾರತ ಮತ್ತು ಪಾಕಿಸ್ತಾನ್ ಮುಖಾಮುಖಿಯಾಬಹುದು.

  1. ಲೀಗ್ ಹಂತ: ಮುಂದಿನ ಏಕದಿನ ವಿಶ್ವಕಪ್​ನಲ್ಲಿ ಒಟ್ಟು 12 ತಂಡಗಳು ಕಣಕ್ಕಿಳಿಯಲಿವೆ. ಈ ತಂಡಗಳನ್ನು ತಲಾ 6 ಟೀಮ್​ಗಳಂತೆ ಎರಡು ಗ್ರೂಪ್‌ಗಳಾಗಿ ವಿಂಗಡಿಸಲಾಗುತ್ತದೆ. ಐಸಿಸಿ ಇತಿಹಾಸವನ್ನು ಗಮನಿಸಿದರೆ ಭಾರತ ಮತ್ತು ಪಾಕಿಸ್ತಾನ್ ತಂಡಗಳನ್ನು ಯಾವಾಗಲೂ ಒಂದೇ ಗ್ರೂಪ್‌ನಲ್ಲಿ ಇರಿಸಲಾಗುತ್ತದೆ. ಹೀಗಾಗಿ ಲೀಗ್​ ಹಂತದಲ್ಲಿ ಬದ್ಧವೈರಿಗಳು ಮುಖಾಮುಖಿಯಾಗುವುದು ಖಚಿತ.
  2. ಸೂಪರ್ ಸೆವೆನ್: ಲೀಗ್​ ಹಂತದ ಎರಡೂ ಗ್ರೂಪ್‌ಗಳಿಂದ ತಲಾ 3 ಅತ್ಯುತ್ತಮ ತಂಡಗಳು ಹಾಗೂ ಒಟ್ಟಾರೆ ಪ್ರದರ್ಶನದ ಆಧಾರದ ಮೇಲೆ ಮತ್ತೊಂದು ತಂಡ ಸೇರಿ ಒಟ್ಟು 7 ತಂಡಗಳು ‘ಸೂಪರ್ ಸೆವೆನ್’ ಹಂತಕ್ಕೆ ಲಗ್ಗೆ ಇಡಲಿವೆ. ಅಂದರೆ ದ್ವಿತೀಯ ಸುತ್ತಿನಲ್ಲಿ 7 ತಂಡಗಳು ಒಂದೇ ಗ್ರೂಪ್​ನಲ್ಲೇ ಕಣಕ್ಕಿಳಿಯಲಿವೆ. ಇಲ್ಲಿ ಪ್ರತಿ ತಂಡವು ಉಳಿದ 6 ತಂಡಗಳೊಂದಿಗೆ ತಲಾ ಒಂದು ಪಂದ್ಯ ಆಡುವುದು ಕಡ್ಡಾಯ. ಅದರಂತೆ ಭಾರತ ಮತ್ತು ಪಾಕಿಸ್ತಾನ್ ಸೂಪರ್-7 ಹಂತಕ್ಕೇರಿದರೆ ಮತ್ತೊಮ್ಮೆ ಮುಖಾಮುಖಿಯಾಗಲಿದೆ.
  3. ನಾಕೌಟ್ ಹಂತ: ಈ ಬಾರಿ ಐಸಿಸಿ ಕ್ವಾರ್ಟರ್ ಫೈನಲ್ ಹಂತವನ್ನು ಸಂಪೂರ್ಣವಾಗಿ ರದ್ದುಗೊಳಿಸಿದೆ. ಸೂಪರ್ ಸೆವೆನ್ ಪಾಯಿಂಟ್ಸ್ ಟೇಬಲ್‌ನಲ್ಲಿ ಟಾಪ್ 4 ಸ್ಥಾನ ಪಡೆಯುವ ತಂಡಗಳು ನೇರವಾಗಿ ಸೆಮಿಫೈನಲ್ ಪ್ರವೇಶಿಸಲಿವೆ. ಅಂದರೆ ಇಲ್ಲಿ ಭಾರತ ಮತ್ತು ಪಾಕಿಸ್ತಾನ್ ಸೆಮಿಫೈನಲ್​ನಲ್ಲಿ ಮುಖಾಮುಖಿಯಾಗಬಹುದು. ಅಥವಾ ಎರಡು ತಂಡಗಳು ಬೇರೆ ಬೇರೆ ಸೆಮಿಫೈನಲ್ ಪಂದ್ಯಗಳನ್ನು ಗೆದ್ದು, ಮಹಾ ಫೈನಲ್ ಪಂದ್ಯದಲ್ಲಿ ಪ್ರಶಸ್ತಿಗಾಗಿ ಕಾದಾಡಬಹುದು!

ಐಸಿಸಿ ಮಾಸ್ಟರ್ ಪ್ಲ್ಯಾನ್:

ಜಾಗತಿಕ ಕ್ರಿಕೆಟ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ್ ನಡುವಿನ ಪಂದ್ಯಗಳು ಅತಿ ಹೆಚ್ಚು ಪ್ರಸಾರ ಹಕ್ಕು ಮತ್ತು ಜಾಹೀರಾತು ಲಾಭವನ್ನು ತಂದುಕೊಡುತ್ತವೆ.

ಉಭಯ ದೇಶಗಳ ನಡುವೆ ದ್ವಿಪಕ್ಷೀಯ ಸರಣಿಗಳು ನಡೆಯದ ಕಾರಣ, ಐಸಿಸಿ ಟೂರ್ನಿಗಳಲ್ಲೇ ಗರಿಷ್ಠ ಬಾರಿ ಇವೆರಡನ್ನೂ ಮುಖಾಮುಖಿಯಾಗುವಂತೆ ಮಾಡಿದರೆ ಶತಕೋಟಿ ಡಾಲರ್ ಆದಾಯ ಗಳಿಸಬಹುದು ಎಂಬುದು ಐಸಿಸಿಯ ಮಾಸ್ಟರ್ ಪ್ಲಾನ್.

ಅದರಂತೆ ಮುಂದಿನ ಏಕದಿನ ವಿಶ್ವಕಪ್​ನಲ್ಲಿ ಭಾರತ ಮತ್ತು ಪಾಕಿಸ್ತಾನ್ ನಡುವಣ ಮೂರು ಪಂದ್ಯಗಳನ್ನು ನಿರೀಕ್ಷಿಸಬಹುದು. ಹಾಗೆಯೇ ಇದೇ ಪ್ಲ್ಯಾನ್ ಅನ್ನು 2028ರ ಟಿ20 ವಿಶ್ವಕಪ್‌ನಲ್ಲೂ ಐಸಿಸಿ ಮುಂದುವರೆಸಲಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಐಪಿಎಲ್ ರೆಕಾರ್ಡ್​ ಉಡೀಸ್: ವಿಶ್ವ ದಾಖಲೆಯ ಚೇಸಿಂಗ್!

ಒಟ್ಟಾರೆಯಾಗಿ ಹೇಳುವುದಾದರೆ, 2027ರ ಏಕದಿನ ವಿಶ್ವಕಪ್‌ಗಾಗಿ ಐಸಿಸಿ ತಂದಿರುವ ಈ ಹೊಸ ‘ಸೂಪರ್ ಸೆವೆನ್’ ಸ್ವರೂಪವು ಕ್ರಿಕೆಟ್ ಜಗತ್ತಿನಲ್ಲಿ ಹೊಸ ಸಂಚಲನ ಮೂಡಿಸಿದೆ. ಕೇವಲ ಆರ್ಥಿಕ ಲಾಭ ಮತ್ತು ಜಾಹೀರಾತು ಆದಾಯವನ್ನು ಹೆಚ್ಚಿಸಿಕೊಳ್ಳುವ ಉದ್ದೇಶದಿಂದಲೇ ಐಸಿಸಿ ಈ ಮಾಸ್ಟರ್ ಪ್ಲಾನ್ ರೂಪಿಸಿದ್ದರೂ, ಕ್ರಿಕೆಟ್ ಪ್ರೇಮಿಗಳು ಮಾತ್ರ ಒಂದೇ ವಿಶ್ವಕಪ್‌ನಲ್ಲಿ ಮೂರು ಬಾರಿ ಇಂಡೋ-ಪಾಕ್ ಮಹಾ ಕದನವನ್ನು ಕಣ್ಣುಂಬಿಕೊಳ್ಳಲು ಈಗಿನಿಂದಲೇ ತುದಿಗಾಲಲ್ಲಿ ನಿಂತಿದ್ದಾರೆ.

Source link

ಬೀದರ್: ಶಾಲೆ ಬಳಿ ಬೈಕ್​ನಲ್ಲಿ ಇಟ್ಟುಕೊಂಡು ಪಿಸ್ತೂಲ್ ಮಾರುತ್ತಿದ್ದ ಇಬ್ಬರ ಬಂಧನ – Kannada News | Bidar Police Bust Illegal Arms Racket: Two Maharashtra Men Arrested with Country Made Pistols Near School

ಬೀದರ್, ಜುಲೈ 16: ಬೀದರ್‌ನಲ್ಲಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಶಾಲೆ ಬಳಿ ದೇಶೀ ನಿರ್ಮಿತ ಪಿಸ್ತೂಲ್‌ಗಳನ್ನು ಮಾರಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು, ಮಹಾರಾಷ್ಟ್ರ ಮೂಲದ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತ ಆರೋಪಿಗಳಿಂದ ಐದು ಕಂಟ್ರಿ ಪಿಸ್ತೂಲ್‌ಗಳು, 26 ಜೀವಂತ ಗುಂಡುಗಳು, ಐದು ತಲ್ವಾರ್‌ಗಳು ಮತ್ತು ಅಪರಾಧ ಕೃತ್ಯಗಳಿಗೆ ಬಳಸುತ್ತಿದ್ದ ಒಂದು ಬೈಕ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ತಂಡವು ಶಾಲೆ ಬಳಿ ಬೈಕ್‌ನಲ್ಲಿಟ್ಟುಕೊಂಡು ಅಕ್ರಮವಾಗಿ ಶಸ್ತ್ರಾಸ್ತ್ರಗಳನ್ನು ಮಾರಾಟ ಮಾಡುತ್ತಿತ್ತು.

ಇದರೊಂದಿಗೆ, ಪೊಲೀಸರ ಸಮಯೋಚಿತ ಕಾರ್ಯಾಚರಣೆಯಿಂದ ಅಕ್ರಮ ಶಸ್ತ್ರಾಸ್ತ್ರ ಮಾರಾಟ ಜಾಲಕ್ಕೆ ಬ್ರೇಕ್ ಬಿದ್ದಂತಾಗಿದೆ. ಈ ಇಬ್ಬರು ಆರೋಪಿಗಳು ಮಹಾರಾಷ್ಟ್ರ ಮೂಲದವರಾಗಿದ್ದು, ಬೀದರ್‌ನಲ್ಲಿ ಇಂತಹ ಕೃತ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ಸದ್ಯ, ಈ ಜಾಲದ ಮೂಲ ಮತ್ತು ಇದರ ಹಿಂದೆ ಇರಬಹುದಾದ ದೊಡ್ಡ ಮಟ್ಟದ ವ್ಯವಹಾರದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಭಾರತದ ಮೊದಲ ಹೈಡ್ರೋಜನ್ ಟ್ರೈನ್; ಇದು ವಿಶ್ವದ ಅತಿ ಶಕ್ತಿಶಾಲಿ, ಅತಿ ಉದ್ದದ ಜಲಜನಕ ರೈಲು – Kannada News | India’s first and world most powerful Hydrogen Train to run from July 17th

ಚಂಡೀಗಡ್, ಜುಲೈ 16: ಭಾರತದ ಮೊದಲ ಹೈಡ್ರೋಜನ್ ರೈಲು (Hydrogen Train) ಜುಲೈ 17, ಶುಕ್ರವಾರ ಬೆಳಗ್ಗೆ 7.40ಕ್ಕೆ ಪ್ರಧಾನಿ ಮೋದಿ ಅವರಿಂದ ಚಾಲನೆಗೊಳ್ಳಲಿದೆ. ಹರ್ಯಾಣದ ಜಿಂದ್​ನಿಂದ ಸೋನೆಪತ್​ವರೆಗೆ 89 ಕಿಮೀ ಮಾರ್ಗದಲ್ಲಿ ಈ ರೈಲು ಸಂಚರಿಸಲಿದೆ. ಜಿಂದ್ ರೈಲ್ವೆ ನಿಲ್ದಾಣದಿಂದ 7.40ಕ್ಕೆ ಹೊರಟು ಸೋನೆಪತ್ ನಿಲ್ದಾಣಕ್ಕೆ 9.40ಕ್ಕೆ ತಲುಪಲಿದೆ. ಈ ರೈಲು ಸೇವೆ ಪದಾರ್ಪಣೆಗೊಂಡಿರುವುದು ಭಾರತದ ಪಾಲಿಗೆ ಮತ್ತೊಂದು ಐತಿಹಾಸಿಕ ಮೈಲಿಗಲ್ಲೆನಿಸಿದೆ. ಹೈಡ್ರೋಜನ್ ಶಕ್ತ ರೈಲು ಸೇವೆ ಆರಂಭಿಸಿರುವ ಕೆಲವೇ ದೇಶಗಳ ಗುಂಪಿಗೆ ಭಾರತ ಸೇರ್ಪಡೆಯಾಗಿದೆ. ಇದು ವಿಶ್ವದ ಅತಿ ಶಕ್ತಿಶಾಲಿ ರೈಲು, ಅತಿ ಉದ್ದದ ರೈಲು ಇತ್ಯಾದಿ ವಿಶೇಷತೆಗಳನ್ನು ಹೊಂದಿದೆ.

ಭಾರತದ ಮೊದಲ ಹೈಡ್ರೋಜನ್ ರೈಲಿನ ವಿಶೇಷತೆಗಳು

  • 3,200 ಹಾರ್ಸ್ ಪವರ್- ಇದು ವಿಶ್ವದ ಅತಿ ಶಕ್ತಿಶಾಲಿ ಹೈಡ್ರೋಜನ್ ರೈಲು
  • 10 ಬೋಗಿಗಳು – ಇದು ವಿಶ್ವದ ಅತಿ ಉದ್ದದ ಹೈಡ್ರೋಜನ್ ರೈಲು
  • 2,600 ಪ್ರಯಾಣಿಕರು – ಇದು ವಿಶ್ವದಲ್ಲಿ ಅತಿಹೆಚ್ಚು ಪ್ರಯಾಣಿಕರನ್ನು ಸಾಗಿಸುವ ಹೈಡ್ರೋಜನ್ ರೈಲು
  • 0 ಮಾಲಿನ್ಯ – ಇದು ಮಾಲಿನ್ಯ ಹೊರಸೂಸುವುದಿಲ್ಲ. ನೀರಿನ ಆವಿಯನ್ನು ಮಾತ್ರ ಹೊರಹಾಕುತ್ತದೆ.

ಈ ಹೈಡ್ರೋಜನ್ ರೈಲಿನ ಬಗ್ಗೆ ಇನ್ನಷ್ಟು ಮಾಹಿತಿ

  • ಈ ರೈಲು ಗಂಟೆಗೆ 75 ಕಿಮೀವರೆಗಿನ ವೇಗದಲ್ಲಿ ಓಡುತ್ತದೆ.
  • ಜಲಜನಕ ಮತ್ತು ಆಮ್ಲಜನಕ ನಡುವೆ ರಿಯಾಕ್ಷನ್ ಮೂಲಕ ಇಂಧನ ಶಕ್ತಿ ಉತ್ಪತ್ತಿಯಾಗುತ್ತದೆ.
  • ಇದು 1,200 ಕಿ.ವ್ಯಾ. ಪ್ರೊಪಲ್ಷನ್ ಸಿಸ್ಟಮ್ ಹೊಂದಿದೆ.
  • ಚೆನ್ನೈನ ಐಸಿಎಫ್​ನಲ್ಲಿ ಇದರ ವಿನ್ಯಾಸ ಮಾಡಲಾಗಿದೆ.

2018ರಲ್ಲಿ ಜರ್ಮನಿಯಲ್ಲಿ ಮೊದಲ ವಾಣಿಜ್ಯ ಹೈಡ್ರೋಜನ್ ರೈಲು ಉದ್ಘಾಟನೆಗೊಂಡಿತ್ತು. ಬ್ರಿಟನ್ ಇತ್ಯಾದಿ ಕೆಲವೇ ದೇಶಗಳು ಸದ್ಯ ಹೈಡ್ರೋಜನ್ ರೈಲುಗಳನ್ನು ಹೊಂದಿವೆ. ಭಾರತ ಈ ದೇಶಗಳ ಸಾಲಿಗೆ ಸೇರಿದಂತಾಗಿದೆ.

ಇನ್ನಷ್ಟು ವಿಡಿಯೋ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಅಕುಲ್ ಬಾಲಾಜಿಯ ಹೊಸ ಮನೆಗೆ ಭೇಟಿ ಕೊಟ್ಟ ಶಿವರಾಜ್ ಕುಮಾರ್ ದಂಪತಿ: ವಿಡಿಯೋ – Kannada News | Shiva Rajkumar and Geetha Shiva Rajkumar visits Akul Balaji’s new house

ನಟ, ನಿರೂಪಕ ಅಕುಲ್ ಬಾಲಾಜಿ (Akul Balaji) ಇತ್ತೀಚೆಗಷ್ಟೆ ಒಂದು ಭವ್ಯವಾದ ಮನೆಯೊಂದನ್ನು ನಿರ್ಮಾಣ ಮಾಡಿದ್ದಾರೆ. ಮನೆಯ ಗೃಹ ಪ್ರವೇಶವನ್ನು ಅವರು ಇತ್ತೀಚೆಗಷ್ಟೆ ನೆರೇರಿಸಿದ್ದು, ಮನೆಯನ್ನು ಪ್ರಕೃತಿಯ ಮಡಿಲಲ್ಲಿ ವಿಭಿನ್ನವಾಗಿ ನಿರ್ಮಾಣ ಮಾಡಿದ್ದಾರೆ. ಸ್ವಿಮ್ಮಿಂಗ್ ಪೂಲ್, ಪಾರ್ಟಿ, ಜಿಮ್ ಏರಿಯಾ ಎಲ್ಲದಕ್ಕೂ ಸ್ಥಳವನ್ನು ವಿಂಗಡಿಸಿದ್ದಾರೆ. ತಮ್ಮ ಹೊಸ ಮನೆಯ ವಿಡಿಯೋ ಅನ್ನು ಸಹ ಅಕುಲ್ ಬಾಲಾಜಿ ಹಂಚಿಕೊಂಡಿದ್ದರು. ಇದೀಗ ನಟ ಶಿವರಾಜ್ ಕುಮಾರ್ ಮತ್ತು ಗೀತಾ ಶಿವರಾಜ್ ಕುಮಾರ್ ಅವರುಗಳು ಅಕುಲ್ ಅವರ ಹೊಸ ಮನೆಗೆ ಭೇಟಿ ನೀಡಿ ವೀಕ್ಷಿಸಿದ್ದಾರೆ. ಹೊಸ ಮನೆಗೆ ಅಕುಲ್ ಮತ್ತು ದಂಪತಿಗಳಿಗೆ ಶುಭ ಸಹ ಹಾರೈಸಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Source link

ಹೊಸ ಐಆರ್​ಸಿಟಿಸಿ ವೆಬ್​ಸೈಟ್ ಸಿದ್ಧ; ಬೀಟಾ ಆವೃತ್ತಿ ಬಿಡುಗಡೆ; ರೈಲ್ವೆ ಟಿಕೆಟ್ ಬುಕಿಂಗ್ ಇನ್ಮುಂದೆ ಸರಳ – Kannada News | Indian Railways launch Beta version of new IRCTC website, simpler, stronger ticket booking process

ನವದೆಹಲಿ, ಜುಲೈ 16: ಆನ್‌ಲೈನ್ ರೈಲ್ವೆ ಟಿಕೆಟ್ ಬುಕಿಂಗ್ ಪ್ರಕ್ರಿಯೆಯನ್ನು ಇನ್ನಷ್ಟು ಸುಲಭಗೊಳಿಸಲು ಭಾರತೀಯ ರೈಲ್ವೆ ಇಲಾಖೆಯು ಬಹುನಿರೀಕ್ಷಿತ ಹೊಸ ಐಆರ್‌ಸಿಟಿಸಿ (IRCTC) ವೆಬ್‌ಸೈಟ್‌ನ ಬೀಟಾ (ಪ್ರಾಯೋಗಿಕ) ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಸಾರ್ವಜನಿಕರು ಈ ಬೀಟಾ ಆವೃತ್ತಿಯನ್ನು ಬಳಸಬಹುದು. ಜುಲೈ 16, ರಾತ್ರಿ 9 ಗಂಟೆಯಿಂದ ಇದು ಸಾರ್ವಜನರಿಗೆ ಲಭ್ಯ ಇರುತ್ತದೆ. ಈಗಿರುವ ಅಧಿಕೃತ ಐಆರ್​ಸಿಟಿಸಿ ವೆಬ್​ಸೈಟ್​ನಲ್ಲೇ ಬೀಟಾ ಆವೃತ್ತಿಯ ಲಿಂಕ್ ಇದ್ದು ಅದನ್ನು ಕ್ಲಿಕ್ ಮಾಡಿ ಪ್ರವೇಶ ಪಡೆಯಬಹುದು. ಈ ಲಿಂಕ್ ರಾತ್ರಿ 9ಕ್ಕೆ ಎನೇಬಲ್ ಆಗಬಹುದು.

ಈ ಪ್ರಾಯೋಗಿಕ ಆವೃತ್ತಿಯು ವೆಬ್‌ಸೈಟ್‌ನ ಕಾರ್ಯಕ್ಷಮತೆಯನ್ನು ಪರೀಕ್ಷಿಸಲು ಮತ್ತು ತಾಂತ್ರಿಕ ದೋಷಗಳನ್ನು ಸರಿಪಡಿಸಲು ಸಹಾಯ ಮಾಡಲಿದ್ದು, ಮುಂದಿನ ಕೆಲವು ವಾರಗಳಲ್ಲಿ ಸಂಪೂರ್ಣವಾಗಿ ನವೀಕರಿಸಿದ ವೆಬ್‌ಸೈಟ್ ಸಾರ್ವಜನಿಕ ಬಳಕೆಗೆ ಮುಕ್ತವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಐಆರ್​ಸಿಟಿಸಿ ವೆಬ್‌ಸೈಟ್ ಬದಲಾವಣೆಗೆ ಕಾರಣವೇನು?

ಹಳೆಯ ಐಆರ್‌ಸಿಟಿಸಿ ವೆಬ್‌ಸೈಟ್ ಬಹಳ ನಿಧಾನಗತಿಯಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಅಲ್ಲದೆ ಕಷ್ಟಕರವಾದ ನ್ಯಾವಿಗೇಷನ್ ಹಾಗೂ ಕಿರಿಕಿರಿ ಉಂಟುಮಾಡುವ ‘ಕ್ಯಾಪ್ಚಾ’ (Captcha) ನಿಯಮಗಳಿಂದಾಗಿ ಜನರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಇತ್ತೀಚೆಗೆ ಜೈಪುರದ ಮಾಳವೀಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (MNIT) ಗೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಭೇಟಿ ನೀಡಿದ್ದಾಗ, ವಿದ್ಯಾರ್ಥಿಯೊಬ್ಬರು ಈ ಸಮಸ್ಯೆಯನ್ನು ಸಚಿವರ ಗಮನಕ್ಕೆ ತಂದಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ಸಚಿವರು ವೆಬ್‌ಸೈಟ್ ಅನ್ನು ಸಂಪೂರ್ಣವಾಗಿ ನವೀಕರಿಸಲು ಅಧಿಕಾರಿಗಳಿಗೆ ಸೂಚಿಸಿದ್ದರು. ಈ ಬದಲಾವಣೆಯಲ್ಲಿ ಕಾಲೇಜು ವಿದ್ಯಾರ್ಥಿಗಳ ಸಲಹೆ ಹಾಗೂ ಫೀಡ್‌ಬ್ಯಾಕ್‌ಗಳನ್ನು ಕೂಡ ಪಡೆದುಕೊಳ್ಳಲಾಗಿದೆ.

ಇದನ್ನೂ ಓದಿ: Kia Syros EV: ಕಿಯಾದ ಅತ್ಯಂತ ಚಿಕ್ಕ ಎಲೆಕ್ಟ್ರಿಕ್ ಕಾರು ಅನಾವರಣ: 526 ಕಿ.ಮೀ. ವ್ಯಾಪ್ತಿ 25,000ಕ್ಕೆ ಬುಕ್ಕಿಂಗ್

ಹೊಸ ವೆಬ್‌ಸೈಟ್‌ನ ಪ್ರಮುಖ ಫೀಚರ್​ಗಳು

ಹೊಸ ಬೀಟಾ ಆವೃತ್ತಿಯಲ್ಲಿ ಪ್ರಮುಖವಾಗಿ ನಾಲ್ಕು ದೊಡ್ಡ ಸುಧಾರಣೆಗಳನ್ನು ಮಾಡಲಾಗಿದ್ದು, ಬಳಕೆದಾರರಿಗೆ ಅತ್ಯಂತ ಕ್ಲೀನ್ ಆದ ಇಂಟರ್‌ಫೇಸ್ ನೀಡಲಾಗಿದೆ:

  • ಗೊಂದಲ ಮುಕ್ತ ವಿನ್ಯಾಸ: ಹೊಸ ವೆಬ್‌ಸೈಟ್‌ನಲ್ಲಿ ಅನಗತ್ಯ ಜಾಹೀರಾತುಗಳು, ಪಾಪ್-ಅಪ್‌ಗಳು (Pop-ups) ಮತ್ತು ಕಣ್ಣು ಕೋರೈಸುವ ಗ್ರಾಫಿಕ್ಸ್ ಇರುವುದಿಲ್ಲ. ಇದು ವೆಬ್‌ಸೈಟ್ ವೇಗವನ್ನು ಹೆಚ್ಚಿಸಲಿದೆ.
  • ಕ್ಯಾಪ್ಚಾ ಮುಕ್ತ ಮುಖಪುಟ: ಟಿಕೆಟ್ ಬುಕ್ ಮಾಡುವಾಗ ಪದೇ ಪದೇ ಕಿರಿಕಿರಿ ಉಂಟುಮಾಡುತ್ತಿದ್ದ ಕಡ್ಡಾಯ ಕ್ಯಾಪ್ಚಾಗಳನ್ನು ಮತ್ತು ಗೊಂದಲದ ಅಂಶಗಳನ್ನು ತೆಗೆದುಹಾಕಲಾಗಿದೆ.
  • ಸೀಟುಗಳ ಲಭ್ಯತೆ ಸುಲಭ ವೀಕ್ಷಣೆ: ಒಂದೇ ಪರದೆಯ ಮೇಲೆ ಎಲ್ಲಾ ತರಗತಿಗಳ (Sleeper, 3AC, 2AC ಇತ್ಯಾದಿ) ಸೀಟುಗಳ ಲಭ್ಯತೆಯನ್ನು (Seat Availability) ಸುಲಭವಾಗಿ ನೋಡಬಹುದು.
  • ಬುಕಿಂಗ್ ಪ್ರಕ್ರಿಯೆ ಸರಳೀಕರಣ: ಟಿಕೆಟ್ ಬುಕ್ ಮಾಡಲು ಅನುಸರಿಸಬೇಕಾದ ಹಂತಗಳ ಸಂಖ್ಯೆಯನ್ನು ಕಡಿಮೆ ಮಾಡಲಾಗಿದೆ. ಜೊತೆಗೆ ಪದೇ ಪದೇ ಪ್ರಯಾಣಿಸುವವರ ವಿವರಗಳನ್ನು (Saved Details) ಉಳಿಸಿಕೊಳ್ಳಲು ಅವಕಾಶ ನೀಡಲಾಗಿದೆ.

ಇದನ್ನೂ ಓದಿ: ಮೊಬೈಲ್ ಫೋನ್ ಮ್ಯಾನುಫ್ಯಾಕ್ಚರಿಂಗ್ ಸ್ಕೀಮ್; ಗೇಮ್ ಚೇಂಜರ್ ಯೋಜನೆ; ಏನಿದರ ವಿಶೇಷತೆ?

ಹೊಸ ಐಆರ್​ಸಿಟಿಸಿ ವೆಬ್​ಸೈಟ್​ನಲ್ಲಿ ಟಿಕೆಟ್ ಬುಕ್ ಮಾಡುವುದು ಹೇಗೆ?

ಐಆರ್​ಸಿಟಿಸಿ ಬಳಕೆದಾರರು ಹೊಸ ವೆಬ್‌ಸೈಟ್‌ನಲ್ಲಿ ಈ ಕೆಳಗಿನ ಸುಲಭ ಹಂತಗಳ ಮೂಲಕ ಟಿಕೆಟ್ ಬುಕ್ ಮಾಡಬಹುದು:

  1. ಹೊಸ ಬೀಟಾ ವೆಬ್‌ಸೈಟ್ ಲಿಂಕ್ ಆದ [www.irctc.co.in/eticket] ಗೆ ಭೇಟಿ ನೀಡಿ. (ಹಳೆಯ ವೆಬ್‌ಸೈಟ್‌ನ ಹೋಮ್ ಪೇಜ್‌ನಲ್ಲೂ ಇದರ ಲಿಂಕ್ ನೀಡಲಾಗಿದೆ).
  2. ನಿಮ್ಮ ಐಆರ್‌ಸಿಟಿಸಿ ಯೂಸರ್ ಐಡಿ ಮತ್ತು ಪಾಸ್‌ವರ್ಡ್ ಬಳಸಿ ಲಾಗಿನ್ ಆಗಿ.
  3. ನೀವು ಹೊರಡುವ ನಿಲ್ದಾಣ (From), ತಲುಪಬೇಕಾದ ನಿಲ್ದಾಣ (To) ಮತ್ತು ಪ್ರಯಾಣದ ದಿನಾಂಕವನ್ನು ಆಯ್ಕೆ ಮಾಡಿ ಸರ್ಚ್ ಮಾಡಿ.
  4. ಈಗ ಹೊಸ ವಿನ್ಯಾಸದಲ್ಲಿ ಲಭ್ಯವಿರುವ ರೈಲುಗಳ ಪಟ್ಟಿ ಕಾಣಿಸುತ್ತದೆ. ಅಲ್ಲಿಯೇ ಎಲ್ಲಾ ಕ್ಲಾಸ್‌ಗಳ ಸೀಟುಗಳ ವಿವರ ಸ್ಪಷ್ಟವಾಗಿ ಕಾಣಿಸುವುದರಿಂದ, ನಿಮಗೆ ಬೇಕಾದ ಕ್ಲಾಸ್ ಅನ್ನು ಸುಲಭವಾಗಿ ಆಯ್ಕೆ ಮಾಡಿಕೊಳ್ಳಿ.
  5. ಪ್ರಯಾಣಿಕರ ವಿವರಗಳನ್ನು ನಮೂದಿಸಿ (ಈಗಾಗಲೇ ಉಳಿಸಲಾಗಿದ್ದ ವಿವರಗಳಿದ್ದರೆ ನೇರವಾಗಿ ಆಯ್ಕೆ ಮಾಡಬಹುದು).
  6. ಡಿಜಿಟಲ್ ಪಾವತಿ (UPI, ಡೆಬಿಟ್/ಕ್ರೆಡಿಟ್ ಕಾರ್ಡ್ ಅಥವಾ ನೆಟ್ ಬ್ಯಾಂಕಿಂಗ್) ಪೂರ್ಣಗೊಳಿಸಿ. ಕೆಲವೇ ಹಂತಗಳಲ್ಲಿ ನಿಮ್ಮ ಟಿಕೆಟ್ ಬುಕ್ ಆಗುತ್ತದೆ.

ನೀವು ರೈಲು ಎಲ್ಲಿ ಬರುತ್ತಿದೆ, ನಿಮ್ಮ ನಿಲ್ದಾಣಕ್ಕೆ ಎಷ್ಟು ಹೊತ್ತಿಗೆ ಬರುತ್ತದೆ ಎನ್ನುವ ಲೈವ್ ಅಪ್​ಡೇಟ್ಸ್ ಅನ್ನು ಈ ಮುಂದಿನ ಲಿಂಕ್​ನಲ್ಲಿ ಪಡೆಯಬಹುದು: enquiry.indianrail.gov.in/mntes

ಪ್ರಸ್ತುತ ಐಆರ್‌ಸಿಟಿಸಿ ವೆಬ್‌ಸೈಟ್ ದಿನಕ್ಕೆ ಸರಾಸರಿ 14.5 ಲಕ್ಷ ಟಿಕೆಟ್‌ಗಳನ್ನು ನಿರ್ವಹಿಸುತ್ತಿದ್ದು, ಈ ಹೊಸ ನವೀಕರಣದಿಂದಾಗಿ ಕೋಟ್ಯಂತರ ಪ್ರಯಾಣಿಕರ ಸಮಯ ಉಳಿತಾಯವಾಗಲಿದೆ. ಇದರೊಂದಿಗೆ ರೈಲ್ವೆ ಇಲಾಖೆಯು ತನ್ನ ದಶಕಗಳಷ್ಟು ಹಳೆಯದಾದ ‘ಪ್ಯಾಸೆಂಜರ್ ರಿಸರ್ವೇಶನ್ ಇಂಜಿನ್’ ಅನ್ನು ಸಹ ನವೀಕರಿಸುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On – 12:52 pm, Thu, 16 July 26

Source link

Exit mobile version