Tech Tips: ಪಾರ್ಟ್ನರ್ ಜೊತೆ ಖಾಸಗಿ ಸಮಯ ಕಳೆಯುವಾಗ ಈ ಫೋನ್ ಸೆಟ್ಟಿಂಗ್ಸ್ ತಪ್ಪದೇ ಆಫ್ ಮಾಡಿ – Kannada News | Tech Tips Turn off these phone settings during private moments for better privacy

ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್‌ಫೋನ್ (Smartphone) ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ. ಕರೆ ಮಾಡುವುದು, ಫೋಟೋ ತೆಗೆಯುವುದು, ಬ್ಯಾಂಕಿಂಗ್, ಶಾಪಿಂಗ್ ಸೇರಿದಂತೆ ಬಹುತೇಕ ಎಲ್ಲ ಕೆಲಸಗಳಿಗೂ ನಾವು ಫೋನ್‌ನ್ನೇ ಅವಲಂಬಿಸಿದ್ದೇವೆ. ಆದರೆ ಕೆಲವು ಫೋನ್ ಸೆಟ್ಟಿಂಗ್‌ಗಳು ಯಾವಾಗಲೂ ಸಕ್ರಿಯವಾಗಿದ್ದರೆ, ಅದು ನಮ್ಮ ಖಾಸಗಿ ಮಾಹಿತಿಯ ಸುರಕ್ಷತೆಗೆ ಅಪಾಯವಾಗಬಹುದು. ವಿಶೇಷವಾಗಿ ನಿಮ್ಮ ಸಂಗಾತಿಯೊಂದಿಗೆ ಖಾಸಗಿ ಸಮಯ ಕಳೆಯುವಾಗ ಕೆಲವು ಸೆಟ್ಟಿಂಗ್‌ಗಳನ್ನು ತಾತ್ಕಾಲಿಕವಾಗಿ ಆಫ್ ಮಾಡುವುದು ಉತ್ತಮ ಎಂದು ತಜ್ಞರು ಸಲಹೆ ನೀಡುತ್ತಾರೆ.

ಮೊದಲನೆಯದಾಗಿ, ನೀವು ಹೆಚ್ಚಾಗಿ ಬಳಸದೇ ಇದ್ದರೆ Google Assistant ಅಥವಾ Siri ಸೇರಿದಂತೆ ವಾಯ್ಸ್ ಅಸಿಸ್ಟೆಂಟ್‌ಗಳನ್ನು ಆಫ್ ಮಾಡಬಹುದು. ಇವು ಧ್ವನಿ ಆಜ್ಞೆಗಳನ್ನು ಗುರುತಿಸಲು ಮೈಕ್ರೋಫೋನ್ ಅನ್ನು ಸದಾ ಸಕ್ರಿಯ ಸ್ಥಿತಿಯಲ್ಲಿಡುತ್ತವೆ. ಇದರಿಂದ ಬ್ಯಾಟರಿ ಉಳಿತಾಯವಾಗುವುದರ ಜೊತೆಗೆ ಗೌಪ್ಯತೆಯೂ ಹೆಚ್ಚುತ್ತದೆ.

ಅದೇ ರೀತಿ, ಅನೇಕ ಆ್ಯಪ್‌ಗಳು ಅಗತ್ಯವಿಲ್ಲದಿದ್ದರೂ ಮೈಕ್ರೋಫೋನ್ ಮತ್ತು ಕ್ಯಾಮೆರಾ ಅನುಮತಿಯನ್ನು ಕೇಳುತ್ತವೆ. ಫೋನ್‌ನ Privacy ಅಥವಾ Permission Manager ವಿಭಾಗಕ್ಕೆ ಹೋಗಿ ಯಾವ ಆ್ಯಪ್‌ಗಳಿಗೆ ಈ ಅನುಮತಿಗಳಿವೆ ಎಂಬುದನ್ನು ಪರಿಶೀಲಿಸಿ. ಅಗತ್ಯವಿಲ್ಲದ ಆ್ಯಪ್‌ಗಳಿಂದ ಆ ಅನುಮತಿಗಳನ್ನು ತೆಗೆದುಹಾಕುವುದು ಸುರಕ್ಷಿತ.

ಇದಲ್ಲದೆ, ಹಲವಾರು ಆ್ಯಪ್‌ಗಳು ನಿರಂತರವಾಗಿ ನಿಮ್ಮ ಸ್ಥಳ (Location) ಮಾಹಿತಿಯನ್ನು ಟ್ರ್ಯಾಕ್ ಮಾಡುತ್ತಿರುತ್ತವೆ. ಯಾವಾಗಲೂ ಲೊಕೇಶನ್ ಪ್ರವೇಶ ನೀಡುವ ಬದಲು While using the app ಅಥವಾ Ask every time ಆಯ್ಕೆಯನ್ನು ಬಳಸುವುದು ಉತ್ತಮ. ಇದರಿಂದ ಅನಗತ್ಯ ಸ್ಥಳ ಮಾಹಿತಿ ಹಂಚಿಕೆ ತಪ್ಪಿಸಬಹುದು.

ಮೊಬೈಲ್ ಫೋನ್ ಮ್ಯಾನುಫ್ಯಾಕ್ಚರಿಂಗ್ ಸ್ಕೀಮ್; ಗೇಮ್ ಚೇಂಜರ್ ಯೋಜನೆ; ಏನಿದರ ವಿಶೇಷತೆ?

ಕೆಲವು ಆ್ಯಪ್‌ಗಳು ಒಂದು ಫೋಟೋ ಅಪ್‌ಲೋಡ್ ಮಾಡಲು ಸಂಪೂರ್ಣ ಗ್ಯಾಲರಿಯ ಪ್ರವೇಶವನ್ನು ಕೇಳುತ್ತವೆ. ಸಾಧ್ಯವಾದರೆ Selected Photos ಅಥವಾ Limited Access ಆಯ್ಕೆಯನ್ನು ಆರಿಸಿ. ಇದರಿಂದ ನಿಮ್ಮ ವೈಯಕ್ತಿಕ ಫೋಟೋಗಳು ಸುರಕ್ಷಿತವಾಗಿರುತ್ತವೆ. ಜೊತೆಗೆ, ಬಳಕೆಯಲ್ಲಿಲ್ಲದಿದ್ದರೂ ಬ್ಯಾಕ್‌ಗ್ರೌಂಡ್‌ನಲ್ಲಿ ಕಾರ್ಯನಿರ್ವಹಿಸುವ ಆ್ಯಪ್‌ಗಳನ್ನು ನಿಷ್ಕ್ರಿಯಗೊಳಿಸಿದರೆ ಅನಗತ್ಯ ಡೇಟಾ ಹಂಚಿಕೆ ಕಡಿಮೆಯಾಗುತ್ತದೆ.

ಇನ್ನೊಂದು ಪ್ರಮುಖ ವಿಷಯವೆಂದರೆ, ಹೋಟೆಲ್ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ದೊರೆಯುವ ಉಚಿತ ವೈ-ಫೈ ಬಳಸುವಾಗ ಎಚ್ಚರಿಕೆ ವಹಿಸಿ. ಅಗತ್ಯವಿಲ್ಲದಿದ್ದರೆ ಮೊಬೈಲ್ ಡೇಟಾವನ್ನೇ ಬಳಸುವುದು ಸುರಕ್ಷಿತ. ಕೆಲವು ಫೋನ್‌ಗಳಲ್ಲಿ ವಾಯ್ಸ್ ಅಸಿಸ್ಟೆಂಟ್ ಹೊರತಾಗಿಯೂ ಧ್ವನಿಯನ್ನು ಆಲಿಸುವ ವೈಶಿಷ್ಟ್ಯಗಳಿರಬಹುದು. ಅಂತಹ ಫೀಚರ್‌ಗಳು ಇದ್ದರೆ ಅವುಗಳನ್ನು ಪರಿಶೀಲಿಸಿ ಅಗತ್ಯವಿಲ್ಲದಿದ್ದರೆ ಆಫ್ ಮಾಡುವುದು ಗೌಪ್ಯತೆಯ ದೃಷ್ಟಿಯಿಂದ ಉತ್ತಮ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ನಾವು ಯಾವುದೇ ಒಪ್ಪಂದ, ಮಾತುಕತೆಗೆ ಸಿದ್ಧವಿಲ್ಲ, ಯುಎಸ್ ಜೊತೆಗಿನ ಶಾಂತಿ ಒಪ್ಪಂದ ರದ್ದು ಎಂದ ಇರಾನ್ – Kannada News | Iran Rejects US Talks, Cancels Peace Deal Amid Escalating Attacks

ಟೆಹ್ರಾನ್, ಜುಲೈ 16: ಇರಾನ್(Iran) ಅಮೆರಿಕದೊಂದಿಗೆ ಒಪ್ಪಂದ ಮಾಡಿಕೊಳ್ಳಲು ತುದಿಗಾಲಿನಲ್ಲಿ ನಿಂತಿದೆ, ಮಾತುಕತೆಗೆ ಮುಂದಾಗಿದೆ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಹೇಳಿಕೆಯನ್ನು ಇರಾನ್ ತಳ್ಳಿ ಹಾಕಿದೆ. ಅಮೆರಿಕದ ಜೊತೆ ಸದ್ಯಕ್ಕೆ ಯಾವುದೇ ಮಾತುಕತೆ ನಡೆಸುವ ಯೋಜನೆ ತಮಗಿಲ್ಲ ಮತ್ತು ಪ್ರಸ್ತುತ ತಮ್ಮ ಸಂಪೂರ್ಣ ಗಮನ ಕೇವಲ ದೇಶದ ರಕ್ಷಣೆಯ ಮೇಲಿದೆ ಎಂದು ಇರಾನ್ ವಿದೇಶಾಂಗ ಸಚಿವಾಲಯದ ವಕ್ರಾರ ಎಸ್ಮಾಯಿಲ್ ಬಘೈ ಖಡಕ್ ಆಗಿ ಹೇಳಿದ್ದಾರೆ.

ಅಷ್ಟೇ ಅಲ್ಲದೆ, ಹಾರ್ಮುಜ್ ಜಲಸಂಧಿಯ ಬಳಿ ಅಮೆರಿಕ ಪಡೆಗಳು ಇರಾನ್ ಸೇನಾ ನೆಲೆಗಳ ಮೇಲೆ ನಿರಂತರ ಬಾಂಬ್ ದಾಳಿ ನಡೆಸುತ್ತಿರುವುದರಿಂದ, ಜೂನ್ 17 ರಂದು ಉಭಯ ದೇಶಗಳ ನಡುವೆ ಏರ್ಪಟ್ಟಿದ್ದ 14 ಅಂಶಗಳ ಶಾಂತಿ ಒಪ್ಪಂದಕ್ಕೆ ತಾವಿನ್ನು ಬದ್ಧರಾಗಿರುವುದಿಲ್ಲ ಎಂದು ಇರಾನ್ ಘೋಷಿಸಿದೆ.

ಅಮೆರಿಕ ಒಪ್ಪಂದದ ಮೊದಲ ನಿಯಮವನ್ನೇ ಗಾಳಿಗೆ ತೂರಿದೆ. ದಾಳಿಗಳನ್ನು ನಿಲ್ಲಿಸುವುದಾಗಿ ಒಪ್ಪಿಕೊಂಡು, ಈಗ ನಮ್ಮ ದೇಶದ ಬಂದರುಗಳು ಹಾಗೂ ನಗರಗಳ ಮೇಲೆ ಬಾಂಬ್ ಹಾಕುತ್ತಿದೆ. ಶತ್ರುಗಳು ನಮ್ಮ ಬದ್ಧತೆಗಳನ್ನು ಗಾಳಿಗೆ ತೂರಿದ ಮೇಲೆ, ನಾವು ಮಾತ್ರ ಒಪ್ಪಂದಕ್ಕೆ ಕಟ್ಟುಬೀಳಲು ಯಾವುದೇ ಕಾರಣವಿಲ್ಲ. ಅಮೆರಿಕದ ಪ್ರತಿಯೊಂದು ಆಕ್ರಮಣಕ್ಕೂ ನಮ್ಮ ಸಶಸ್ತ್ರ ಪಡೆಗಳು ಮಾರುಕಟ್ಟೆಯಲ್ಲೇ ತಕ್ಕ ಪ್ರತ್ಯುತ್ತರ ನೀಡಲಿವೆ” ಎಂದು ಇರಾನ್‌ನ ಉನ್ನತ ಸಮಾಲೋಚಕ ಮೊಹಮ್ಮದ್ ಬಘರ್ ಗಾಲಿಬಾಫ್ ಎಚ್ಚರಿಸಿದ್ದಾರೆ.

ಇರಾನ್ ಪರಮಾಣು ಸ್ಥಾವರದ ಮೇಲೆ ಅಮೆರಿಕ ದಾಳಿ

ಬುಧವಾರ ಅಮೆರಿಕದ ಯುಎಸ್ ಸೆಂಟ್ರಲ್ ಕಮಾಂಡ್ ಇರಾನ್ ವಿರುದ್ಧ ಹೊಸ ಸುತ್ತಿನ ವಿನಾಶಕಾರಿ ವಾಯುದಾಳಿಗಳನ್ನು ತೀವ್ರಗೊಳಿಸಿದೆ. ಹಾರ್ಮುಜ್ ಜಲಸಂಧಿಯಲ್ಲಿ ವಾಣಿಜ್ಯ ಹಡಗುಗಳ ಸಂಚಾರಕ್ಕೆ ಇರಾನ್ ಅಡ್ಡಿಪಡಿಸುತ್ತಿದೆ ಎಂಬ ಕಾರಣ ನೀಡಿ ಈ ದಾಳಿ ಮಾಡಲಾಗಿದೆ.

ಮತ್ತಷ್ಟು ಓದಿ: ಇರಾನ್​​​-ಇಸ್ರೇಲ್​​​ ಯುದ್ಧ: ಯುದ್ಧಭೂಮಿಯಿಂದ ಕನ್ನಡಿಗ ಹೇಳಿದ್ದಿಷ್ಟು

ಇರಾನ್‌ನ ಪ್ರಮುಖ ಬಂದರು ನಗರಿಗಳಾದ ಬಂದರ್ ಅಬ್ಬಾಸ್, ರಾಸ್ಕ್, ಚಬಹಾರ್, ಕ್ವೆಶ್ಮ್‌ಗಳಲ್ಲಿ ಭೀಕರ ಸ್ಫೋಟಗಳು ಸಂಭವಿಸಿದ್ದು, ಇರಾನ್‌ನ ಏಕೈಕ ನಾಗರಿಕ ಪರಮಾಣು ವಿದ್ಯುತ್ ಸ್ಥಾವರವಿರುವ ‘ಬುಶೆಹರ್’ ಮೇಲೂ ಅಮೆರಿಕದ ಯುದ್ಧವಿಮಾನಗಳು ಬಾಂಬ್ ಹಾಕಿವೆ ಎಂದು ಇರಾನ್ ಮಾಧ್ಯಮಗಳು ವರದಿ ಮಾಡಿವೆ. ಅಲ್ಲದೆ ಇರಾನ್ ಬಂದರುಗಳಿಗೆ ಆಮದು ತಡೆಯಲು ಖಾಲಿ ತೈಲ ಟ್ಯಾಂಕರ್ ಹಡಗೊಂದರ ಮೇಲೂ ಅಮೆರಿಕ ವಾಯುಪಡೆ ಗುಂಡು ಹಾರಿಸಿ ಅದನ್ನು ನಿಷ್ಕ್ರಿಯಗೊಳಿಸಿದೆ.

ಮಧ್ಯಪ್ರಾಚ್ಯದಲ್ಲಿ ಯುದ್ಧವನ್ನು ಕೊನೆಗೊಳಿಸುವ ಉದ್ದೇಶದಿಂದ ಕೇವಲ ಒಂದು ತಿಂಗಳ ಹಿಂದಷ್ಟೇ ಮಾಡಿಕೊಳ್ಳಲಾಗಿದ್ದ ಈ ಶಾಂತಿ ಒಪ್ಪಂದವು ಪ್ರಸ್ತುತ ಸಂಪೂರ್ಣವಾಗಿ ಮುರಿದುಬಿದ್ದಿದ್ದು, ತೆರೆಮರೆಯ ರಾಜತಾಂತ್ರಿಕ ಸಂಧಾನಗಳು ಅಧಿಕೃತವಾಗಿ ರದ್ದಾಗದಿದ್ದರೂ, ರಣಕಣದಲ್ಲಿ ಮಾತ್ರ ಉಭಯ ದೇಶಗಳು ಮುಖಾಮುಖಿ ಮಹಾಯುದ್ಧಕ್ಕೆ ಸಜ್ಜಾಗಿ ನಿಂತಿವೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

13 ಸಿಕ್ಸ್​, 5 ಫೋರ್​: ದಾಖಲೆಯ ಸೆಂಚುರಿ ಸಿಡಿಸಿದ ನಿಕೋಲಸ್ ಪೂರನ್ – Kannada News | Nicholas Pooran smashes 31 ball century in MLC 2026

ಇದಕ್ಕೂ ಮುನ್ನ ಈ ದಾಖಲೆ ಫಿನ್ ಅಲೆನ್ ಹೆಸರಿನಲ್ಲಿತ್ತು. 2025 ರಲ್ಲಿ ಸ್ಯಾನ್ ಫ್ರಾನ್ಸಿಸ್ಕೋ ಯೂನಿಕಾರ್ನ್ಸ್ ಪರ ಕಣಕ್ಕಿಳಿದಿದ್ದ ಫಿನ್ ಅಲೆನ್, ವಾಷಿಂಗ್ಟನ್ ಫ್ರೀಡಂ ವಿರುದ್ಧ ಕೇವಲ 34 ಎಸೆತಗಳಲ್ಲಿ ಶತಕ ಸಿಡಿಸಿದ್ದರು. ಈ ಮೂಲಕ ಮೇಜರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಸ್ಫೋಟಕ ಸೆಂಚುರಿ ಬಾರಿಸಿದ ಬ್ಯಾಟರ್ ಎನಿಸಿಕೊಂಡಿದ್ದರು. (PC: MLC)

Source link

Vastu Tips: ಸೂರ್ಯಾಸ್ತದ ನಂತರ ಈ 4 ವಸ್ತುಗಳನ್ನು ಅಪ್ಪಿತಪ್ಪಿಯೂ ಖರೀದಿಸಬೇಡಿ; ಆರ್ಥಿಕ ನಷ್ಟ ಗ್ಯಾರಂಟಿ! – Kannada News | Vastu: Items Not to Buy After Sunset for Wealth and Positive Energy

ವಾಸ್ತು ಶಾಸ್ತ್ರದ ಪ್ರಕಾರ, ಪ್ರತಿಯೊಂದು ಕೆಲಸಕ್ಕೂ ಒಂದು ನಿರ್ದಿಷ್ಟ ಸಮಯ ಮತ್ತು ವಿಧಾನವಿದೆ ಎಂದು ಹೇಳಲಾಗುತ್ತದೆ. ಇಂದಿನ ಕಾರ್ಯನಿರತ ಜೀವನದಲ್ಲಿ, ಅನೇಕ ಜನರು ಕಚೇರಿಯಿಂದ ಮನೆಗೆ ಬಂದ ನಂತರ ಅಥವಾ ಸಂಜೆ ದಿನಸಿ ಮತ್ತು ಅಗತ್ಯ ವಸ್ತುಗಳನ್ನು ಖರೀದಿಸುತ್ತಾರೆ. ಆದಾಗ್ಯೂ, ಸಾಂಪ್ರದಾಯಿಕ ನಂಬಿಕೆಗಳ ಪ್ರಕಾರ, ಸೂರ್ಯಾಸ್ತದ ನಂತರ ಕೆಲವು ವಸ್ತುಗಳನ್ನು ಖರೀದಿಸುವುದು ಅಶುಭ. ಸಂಜೆ ಲಕ್ಷ್ಮಿ ದೇವಿಯು ಮನೆಗೆ ಭೇಟಿ ನೀಡುವ ಪವಿತ್ರ ಸಮಯವೆಂದು ಪರಿಗಣಿಸಲಾಗುತ್ತದೆ. ಈ ಸಮಯದಲ್ಲಿ ಕೆಲವು ವಸ್ತುಗಳನ್ನು ಖರೀದಿಸುವುದರಿಂದ ಮನೆಯಲ್ಲಿನ ಸಕಾರಾತ್ಮಕ ಶಕ್ತಿ ಕಡಿಮೆಯಾಗುತ್ತದೆ ಮತ್ತು ಆರ್ಥಿಕ ತೊಂದರೆಗಳು ಹಾಗೂ ಅಶಾಂತಿ ಉಂಟಾಗುತ್ತದೆ ಎಂದು ನಂಬಲಾಗಿದೆ. ಆದಾಗ್ಯೂ, ಇವು ಕೇವಲ ಧಾರ್ಮಿಕ ಮತ್ತು ವಾಸ್ತು ಸಂಬಂಧಿತ ಸಾಂಪ್ರದಾಯಿಕ ನಂಬಿಕೆಗಳಾಗಿದ್ದು, ಇವುಗಳಿಗೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ ಎಂಬುದನ್ನು ನೆನಪಿನಲ್ಲಿಡಬೇಕು.

ಉಪ್ಪು (Salt):

ವಾಸ್ತು ಪ್ರಕಾರ, ಉಪ್ಪನ್ನು ಮನೆಯಲ್ಲಿ ಸಕಾರಾತ್ಮಕ ಶಕ್ತಿ ಮತ್ತು ಸಂಪತ್ತಿನ ಸಂಕೇತವೆಂದು ಪರಿಗಣಿಸಲಾಗುತ್ತದೆ. ಸೂರ್ಯಾಸ್ತದ ನಂತರ ಉಪ್ಪು ಖರೀದಿಸುವುದರಿಂದ ಹಣದ ನಷ್ಟ, ಅನಗತ್ಯ ಖರ್ಚುಗಳು ಉಂಟಾಗುತ್ತವೆ ಮತ್ತು ಗಳಿಸಿದ ಹಣವು ಕೈಯಲ್ಲಿ ಬಾಳಿಕೆ ಬರುವುದಿಲ್ಲ ಎಂದು ನಂಬಲಾಗಿದೆ. ಅದಕ್ಕಾಗಿಯೇ ಹಗಲಿನ ವೇಳೆಯಲ್ಲೇ ಉಪ್ಪನ್ನು ಖರೀದಿಸಲು ಜ್ಞಾನಿಗಳು ಶಿಫಾರಸು ಮಾಡುತ್ತಾರೆ.

ಸಾಸಿವೆ ಎಣ್ಣೆ (Mustard Oil):

ಧಾರ್ಮಿಕ ನಂಬಿಕೆಗಳ ಪ್ರಕಾರ ಸಾಸಿವೆ ಎಣ್ಣೆಗೆ ಶನಿ ದೇವರೊಂದಿಗೆ ವಿಶೇಷ ಸಂಬಂಧವಿದೆ. ಸಂಜೆಯ ನಂತರ ಅದನ್ನು ಖರೀದಿಸುವುದರಿಂದ ಮನೆಯಲ್ಲಿ ಆರ್ಥಿಕ ಅಸಮತೋಲನ ಮತ್ತು ಅನಗತ್ಯ ಖರ್ಚುಗಳು ಹೆಚ್ಚಾಗಬಹುದು ಎಂದು ನಂಬಲಾಗಿದೆ. ಆದ್ದರಿಂದ, ಬೆಳಿಗ್ಗೆ ಅಥವಾ ಹಗಲಿನ ವೇಳೆಯಲ್ಲಿ ಸಾಸಿವೆ ಎಣ್ಣೆಯನ್ನು ಖರೀದಿಸುವುದು ಮನೆಗೆ ಅತ್ಯಂತ ಶುಭ ತರುತ್ತದೆ.

ಇದನ್ನೂ ಓದಿ: ಚಿಕ್ಕ ಮಕ್ಕಳಿಗೆ ಕನ್ನಡಿ ತೋರಿಸಬಾರದು ಏಕೆ? ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ಕಾರಣ ಇಲ್ಲಿದೆ

ಪೊರಕೆ (Broom):

ಭಾರತೀಯ ಸಂಪ್ರದಾಯದಲ್ಲಿ ಪೊರಕೆಯನ್ನು ಸಾಕ್ಷಾತ್ ಲಕ್ಷ್ಮಿ ದೇವಿಯ ಸಾಕಾರವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ, ಸೂರ್ಯಾಸ್ತದ ನಂತರ ಹೊಸ ಪೊರಕೆಯನ್ನು ಖರೀದಿಸುವುದು ಅಥವಾ ಮನೆಗೆ ತರುವುದು ಒಳ್ಳೆಯದಲ್ಲ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಒಂದು ವೇಳೆ ಪೊರಕೆ ಖರೀದಿಸುವುದು ಅತ್ಯಗತ್ಯವಾಗಿದ್ದರೆ, ಬೆಳಿಗ್ಗೆ ಅಥವಾ ಮಧ್ಯಾಹ್ನ ಅದನ್ನು ಖರೀದಿಸುವುದು ಉತ್ತಮ ಎಂದು ಹೇಳಲಾಗುತ್ತದೆ.

ಕಪ್ಪು ಎಳ್ಳು (Black Sesame):

ಪೂರ್ವಜರ ಆಚರಣೆಗಳು (ಪಿತೃ ಕಾರ್ಯ), ಶನಿ ಪೂಜೆಗಳು ಮತ್ತು ಇತರ ಧಾರ್ಮಿಕ ಆಚರಣೆಗಳಲ್ಲಿ ಕಪ್ಪು ಎಳ್ಳಿಗೆ ವಿಶೇಷ ಸ್ಥಾನವಿದೆ. ತಾಂತ್ರಿಕವಾಗಿಯೂ ಇದರ ಬಳಕೆ ಹೆಚ್ಚಿರುವುದರಿಂದ, ಸಂಜೆಯ ನಂತರ ಕಪ್ಪು ಎಳ್ಳು ಖರೀದಿಸುವುದರಿಂದ ಮನೆಯಲ್ಲಿ ನಡೆಯುವ ಶುಭ ಚಟುವಟಿಕೆಗಳಿಗೆ ಅಡ್ಡಿಯಾಗುತ್ತದೆ ಎಂದು ಸಾಂಪ್ರದಾಯಿಕವಾಗಿ ನಂಬಲಾಗಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 10:59 am, Thu, 16 July 26

Source link

ಪ್ರೇಮಿ ಜತೆ ಸೇರಿ ಗಂಡನ ಕೊಲೆಗೆ ಸುಪಾರಿ ಕೊಟ್ಟ ಪತ್ನಿ, ಚಲಿಸುವ ರೈಲಿನಲ್ಲೇ ಗುಂಡು ಹಾರಿಸಿ ಹತ್ಯೆ – Kannada News | Bihar Train Case: Woman and Associate Accused of Hiring Contract Attacker Against Husband

ಕತಿಹಾರ್, ಜುಲೈ 16:ತನ್ನ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನನ್ನು ಕೊಲ್ಲಲು ಸ್ವತಃ ಪತ್ನಿಯೇ ತನ್ನ ಪ್ರಿಯಕರನೊಂದಿಗೆ ಸೇರಿ ಹಂತಕನನ್ನು ನೇಮಿಸಿ, ಚಲಿಸುವ ರೈಲಿನಲ್ಲಿಯೇ ಕೊಲೆ ಮಾಡಿಸಿರುವ ಘಟಮೆ ಬಿಹಾರದ ಕತಿಹಾರ್‌ನಲ್ಲಿ ನಡೆದಿದೆ. ಈ ಕೊಲೆಗೆ ಸಂಚು ರೂಪಿಸಿದ ಆರೋಪದ ಮೇಲೆ ಮೃತನ ಪತ್ನಿ, ಆಕೆಯ ಪ್ರಿಯಕರ ಹಾಗೂ ಸುಪಾರಿ ಕಿಲ್ಲರ್ ಮೂವರನ್ನೂ ಪೊಲೀಸರು ಬುಧವಾರ ಬಂಧಿಸಿದ್ದಾರೆ. ಮೃತರನ್ನು ಜಮುಯಿ ಜಿಲ್ಲೆಯ ಬಿಹಾರ ವಿದ್ಯುತ್ ಇಲಾಖೆಯಲ್ಲಿ ತಂತ್ರಜ್ಞರಾಗಿ ಕೆಲಸ ಮಾಡುತ್ತಿದ್ದ ದೇವ್ ಕುಮಾರ್ ಗುಂಜನ್ ಎಂದು ಗುರುತಿಸಲಾಗಿದೆ.

ರೈಲು ಪ್ರಯಾಣದ ವೇಳೆ ನಡೆದ ಭೀಕರ ಹತ್ಯೆ

ದೇವ್ ಕುಮಾರ್ ಗುಂಜನ್ ಮತ್ತು ಸಮಿತಾ ಕುಮಾರಿ ಅವರಿಗೆ 2018 ರಲ್ಲಿ ವಿವಾಹವಾಗಿದ್ದು, ಐದು ವರ್ಷದ ಮುದ್ದಾದ ಮಗಳಿದ್ದಾಳೆ. ಸಮಿತಾ ಕುಮಾರಿ ಸುಪೌಲ್‌ನಲ್ಲಿ ಮೋಟಾರ್ ವೆಹಿಕಲ್ ಇನ್ಸ್‌ಪೆಕ್ಟರ್ ಆಗಿ ಸರ್ಕಾರಿ ಹುದ್ದೆಯಲ್ಲಿದ್ದಾಳೆ. ಜೂನ್ 11 ರಂದು ಗುಂಜನ್ ಅವರು ಖಗಾರಿಯಾ ಜಿಲ್ಲೆಯ ಬದ್ಲಾ ಘಾಟ್ ಬಳಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ಅವರ ಮೇಲೆ ದುಷ್ಕರ್ಮಿಗಳು ಗುಂಡು ಹಾರಿಸಿದ್ದರು. ತೀವ್ರ ರಕ್ತಸ್ರಾವದಿಂದ ಗುಂಜನ್ ಸಾವನ್ನಪ್ಪಿದ್ದರು.

ತನಿಖೆಯಲ್ಲಿ ಬಯಲಾಯ್ತು ಪತ್ನಿಯ ಅಸಲಿ ಮುಖ

ಮೊದಲಿಗೆ ಇದು ಸಾಮಾನ್ಯ ದರೋಡೆ ಅಥವಾ ವೈಷಮ್ಯದ ಕೊಲೆ ಇರಬಹುದು ಎಂದು ಪೊಲೀಸರು ಶಂಕಿಸಿದ್ದರು. ಆದರೆ ಕತಿಹಾರ್ ರೈಲ್ವೆ ಪೊಲೀಸ್ ವರಿಷ್ಠಾಧಿಕಾರಿ (SP) ಹರಿಶಂಕರ್ ಕುಮಾರ್ ನೇತೃತ್ವದಲ್ಲಿ ತನಿಖೆ ತೀವ್ರಗೊಂಡಾಗ ಪತ್ನಿಯ ರಹಸ್ಯ ಬಯಲಾಗಿದೆ.

ಮತ್ತಷ್ಟು ಓದಿ: ಪತ್ನಿಯ ಮುಗಿಸಲು ಮಚ್ಚು ಹಿಡಿದು ಅಟ್ಟಾಡಿಸಿದ ಪಿಎಸ್ಐ ಭೈರಪ್ಪ ಅರೆಸ್ಟ್

ಸಹೋದ್ಯೋಗಿ ಜೊತೆ ಸಂಬಂಧ: ಪತ್ನಿ ಸಮಿತಾ ಕುಮಾರಿಗೆ ನಳಂದದಲ್ಲಿ ಸರ್ಕಾರಿ ತಂತ್ರಜ್ಞನಾಗಿರುವ ಅಜಿತ್ ಕುಮಾರ್ ಎಂಬಾತನೊಂದಿಗೆ ಅಕ್ರಮ ಸಂಬಂಧವಿತ್ತು. ಇಬ್ಬರ ಪ್ರೀತಿಗೆ ಪತಿ ಗುಂಜನ್ ದೊಡ್ಡ ಅಡ್ಡಿಯಾಗಿದ್ದರು.

ರಾಜು ಕುಮಾರ್ ಅಲಿಯಾಸ್ ಧೀರಜ್ ಎಂಬ ಅಪರಾಧ ಹಿನ್ನೆಲೆಯುಳ್ಳ ಕೊಲೆಗಾರನಿಗೆ ಸುಪಾರಿ ನೀಡಿದ್ದರು. ಧೀರಜ್ 2025 ರ ಶಸ್ತ್ರಾಸ್ತ್ರ ಕಾಯ್ದೆಯಡಿ ಜೈಲು ಪಾಲಾಗಿ ಇತ್ತೀಚೆಗಷ್ಟೇ ಜಾಮೀನಿನ ಮೇಲೆ ಹೊರಬಂದಿದ್ದ.

ರೈಲಿನಲ್ಲಿ ಸಂಚು: ಗುಂಜನ್ ರೈಲು ಹತ್ತಿದ ತಕ್ಷಣ ಆತನ ಬೆನ್ನಟ್ಟಿದ ಧೀರಜ್, ನಿರ್ಜನ ಜಾಗದಲ್ಲಿ ತಲೆಗೆ ಗುಂಡಿಕ್ಕಿ ಹತ್ಯೆ ಮಾಡಿದ್ದ.

ವಿಚಾರಣೆಯ ವೇಳೆ ಆರೋಪಿಗಳಾದ ಸಮಿತಾ ಮತ್ತು ಅಜಿತ್ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಕೊಲೆಗೆ ಸ್ಕೆಚ್ ಹಾಕಲು ಬಳಸಲಾಗಿದ್ದ ಮೊಬೈಲ್ ಫೋನ್‌ಗಳು ಮತ್ತು ಸಿಮ್ ಕಾರ್ಡ್‌ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

ಪುಣೆಯ ಕೇಸ್ ನೆನಪಿಸಿದ ಬಿಹಾರದ ಘಟನೆ
ಇದೇ ಮಾದರಿಯ ಘಟನೆ ಇತ್ತೀಚೆಗೆ ಪುಣೆಯಲ್ಲೂ ನಡೆದಿತ್ತು. ಅಲ್ಲಿ ಪ್ರಸಿದ್ಧ ಉದ್ಯಮಿ ಕೇತನ್ ಅಗರ್ವಾಲ್ ಅವರನ್ನು ಅವರ ನಿಶ್ಚಿತಾರ್ಥವಾಗಿದ್ದ ಪತ್ನಿ ಸಿಯಾ ಗೋಯಲ್ ಮತ್ತು ಆಕೆಯ ಪ್ರೇಮಿ ಚೇತನ್ ಸೇರಿ ಕೊಲೆ ಮಾಡಿದ್ದರು. ಪ್ರೀತಿಯ ಹುಚ್ಚಿನಲ್ಲಿ ಐದು ವರ್ಷದ ಮಗಳನ್ನು ಅನಾಥ ಮಾಡಿ, ಗಂಡನನ್ನೇ ಕೊಲ್ಲಿಸಿದ ಈ ಮಹಿಳೆಯ ಕ್ರೌರ್ಯಕ್ಕೆ ಬಿಹಾರದ ಜನತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಷ್ಟ್ರಿಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಬೆಂಗಳೂರು: ಶಾಲೆ ಕೊಠಡಿ ಒಳಗಡೆ ಕುಸಿದುಬಿದ್ದು 5ನೇ ತರಗತಿ ಬಾಲಕ ಸಾವು – Kannada News | Bengaluru School Student Death: Class 5 Boy Collapses in Classroom, Family Alleges Delay in Medical Aid

ಬೆಂಗಳೂರು, ಜುಲೈ 16: ಬೆಂಗಳೂರು ನಗರದ ಬನ್ನೇರುಘಟ್ಟ ರಸ್ತೆಯ ವೀವರ್ಸ್ ಕಾಲೋನಿಯಲ್ಲಿರುವ ನ್ಯೂ ಬ್ಲಾಸಮ್ ಖಾಸಗಿ ಶಾಲೆಯಲ್ಲಿ ದಾರುಣ ಘಟನೆಯೊಂದು ನಡೆದಿದೆ. ಜೂನ್ 10 ರಂದು ಐದನೇ ತರಗತಿಯ 12 ವರ್ಷದ ವಿದ್ಯಾರ್ಥಿ ಅರ್ಹನ್ ಪಾಷಾ ತರಗತಿ ಕೊಠಡಿಯಲ್ಲೇ ಕುಸಿದುಬಿದ್ದು ಮೃತಪಟ್ಟಿದ್ದು, ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿತ್ತು. ಬಾಲಕ ಕುಸಿದುಬೀಳುವ ಮೊದಲು ತನಗೆ ಸುಸ್ತಾಗಿದೆ ಎಂದು ಶಿಕ್ಷಕಿಗೆ ಹೇಳಿಕೊಂಡಿದ್ದ ಎನ್ನಲಾಗಿದೆ. ಆದರೆ, ಶಾಲಾ ಸಿಬ್ಬಂದಿ ಮತ್ತು ಶಿಕ್ಷಕರು ಮಗುವಿನ ಸ್ಥಿತಿಯನ್ನು ಸೌಜನ್ಯಕ್ಕೂ ವಿಚಾರಿಸದೆ ನಿರ್ಲಕ್ಷ್ಯ ತೋರಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ತರಗತಿಗೆ ಬಂದು ಕುಳಿತ ಅರ್ಹನ್ ಪಾಷಾ ಬೆಂಚ್ ಮೇಲೆ ಕುಸಿದುಬಿದ್ದಿದ್ದಾನೆ. ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಬದಲು, ಶಾಲಾ ಸಿಬ್ಬಂದಿ 45 ನಿಮಿಷಗಳ ಕಾಲ ಬಾಲಕನ ಮೃತದೇಹವನ್ನು ಕೊಠಡಿಯಲ್ಲೇ ಇರಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.

ಈ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗದೆ ಮಗು ಮೃತಪಟ್ಟಿದೆ ಎಂದು ಕುಟುಂಬಸ್ಥರು ದೂರಿದ್ದಾರೆ. 45 ನಿಮಿಷಗಳ ನಂತರ ಮಗುವಿನ ಕುಟುಂಬಕ್ಕೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಮಾಹಿತಿತಿಯ ನಂತರ ಕುಟುಂಬಸ್ಥರು ತಕ್ಷಣ ಶಾಲೆಗೆ ಧಾವಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಘಟನೆ ಸಂಬಂಧ ಬೆಂಗಳೂರು ದಕ್ಷಿಣ ವಿಭಾಗ ಶಿಕ್ಷಣಾಧಿಕಾರಿ ರಾಮಮೂರ್ತಿ ಪ್ರತಿಕ್ರಿಯಿಸಿದ್ದು, ‘ನಾನು ಈಗಾಗಲೆ ಎಲ್ಲಾ ಶಾಲೆ ಆಡಳಿತ ಮಂಡಳಿ ಜೊತೆ ಸಭೆ ಮಾಡಿದ್ದೇನೆ. ಮಕ್ಕಳಿಗೆ ಆರೋಗ್ಯ ಸಮಸ್ಯೆಯಾದಾಗ ಪ್ರಥಮ ಚಿಕಿತ್ಸೆ ನೀಡಬೇಕು. ಮಕ್ಕಳು ಬೆಳಿಗ್ಗೆ ಬಂದು ಸಂಜೆ ಹೋಗುವವರೆಗೆ ಮಕ್ಕಳ ಜವಾಬ್ದಾರಿ ಶಾಲೆಯದ್ದಾಗಿರುತ್ತೆ. ಮಕ್ಕಳ ಆರೋಗ್ಯ ಕೆಟ್ಟಾಗ ಹತ್ತಿರದ ಆಸ್ಪತ್ರೆಗೆ ತಕ್ಷಣ ಕರೆದೊಯ್ಯಬೇಕು. ಪೋಷಕರು ಬರುವವರೆಗೂ ಆಡಳಿತ ಮಂಡಳಿ ಕಾಯಬಾರದು. ಈ‌ ಬಗ್ಗೆ ಎಲ್ಲಾ ಶಾಲೆಗಳಿಗೂ ಲಿಖಿತ ರೂಪದಲ್ಲಿ ನೋಟಿಸ್ ಜಾರಿ ಮಾಡುತ್ತೇನೆ’ ಎಂದು ತಿಳಿಸಿದ್ದಾರೆ.

ವರದಿ: ವಿಕಾಸ್, ಟಿವಿ9  ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕರ್ನಾಟಕದ ರೈತರು ಹಾಗೂ ಉದ್ಯಮಿಗಳಿಗೆ ಯುಕೆ ಗಿಫ್ಟ್: ಬ್ರಿಟನ್ ಮಾರುಕಟ್ಟೆಯಲ್ಲಿ ಬ್ಯಾಡಗಿ ಮೆಣಸಿನಕಾಯಿ, ಕಾಫಿಗೆ ಸಿಗಲಿದೆ ಭಾರಿ ಡಿಮ್ಯಾಂಡ್ – Kannada News | Karnataka Gains Big from India UK Free Trade Deal: Zero Duty Exports and UK Investment

ಬೆಂಗಳೂರು, ಜು.16: ಭಾರತ ಮತ್ತು ಬ್ರಿಟನ್ (UK) ನಡುವಿನ ಆರ್ಥಿಕ ಬಾಂಧವ್ಯದಲ್ಲಿ ಹೊಸದೊಂದು ಚಾರಿತ್ರಿಕ ಅಧ್ಯಾಯ ಆರಂಭವಾಗಿದೆ. ಉಭಯ ದೇಶಗಳ ನಡುವಿನ ಮುಕ್ತ ವ್ಯಾಪಾರ ಒಪ್ಪಂದವು (Free Trade Agreement) ಬುಧವಾರದಿಂದ ಜಾರಿಗೆ ಬಂದಿದ್ದು, ಇದರಿಂದ ಕರ್ನಾಟಕ ರಾಜ್ಯದ ವ್ಯಾಪಾರ, ಉದ್ಯಮ ಹಾಗೂ ಶಿಕ್ಷಣ ಕ್ಷೇತ್ರಗಳಿಗೆ ಬಂಪರ್ ಲಾಭ ದೊರೆಯಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.

ಈ ಒಪ್ಪಂದದ ಅನ್ವಯ ಭಾರತದ ಶೇಕಡಾ 99ರಷ್ಟು ಉತ್ಪನ್ನಗಳು ಯಾವುದೇ ಸುಂಕವಿಲ್ಲದೆ ಬ್ರಿಟನ್ ಮಾರುಕಟ್ಟೆಯನ್ನು ಪ್ರವೇಶಿಸಲಿವೆ. ಪ್ರಮುಖ ವಲಯಗಳ ಉತ್ಪನ್ನಗಳ ಮೇಲಿನ ಭಾರಿ ಸುಂಕವನ್ನು ಸಂಪೂರ್ಣವಾಗಿ ಶೂನ್ಯಕ್ಕೆ ಇಳಿಸಲಾಗಿದೆ. ಆಟೋಮೋಟಿವ್ ವಲಯ ಸಂಬಂಧಿಸಿದಂತೆ ಈ ಹಿಂದೆ ಇದ್ದ ಶೇಕಡಾ 110 ರಷ್ಟು ಸುಂಕವನ್ನು ಶೂನ್ಯಕ್ಕೆ ಇಳಿಸಲಾಗಿದೆ. ಎಲೆಕ್ಟ್ರಿಕಲ್ ಮಷೀನರಿಗಳಿಗೆ ಶೇ. 22 ರಷ್ಟಿದ್ದ ಸುಂಕ ಇನ್ಮುಂದೆ ಶೂನ್ಯವಾಗಲಿದೆ.

ವೈದ್ಯಕೀಯ ಉಪಕರಣಗಳಿಗೆ ಶೇ. 13.75 ರಷ್ಟಿದ್ದ ಸುಂಕವನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ. ಏರೋಸ್ಪೇಸ್ ಉತ್ಪನ್ನಗಳಿಗೂ ಶೇ. 11 ರಷ್ಟಿದ್ದ ಸುಂಕ ಈಗ ಶೂನ್ಯಕ್ಕೆ ಇಳಿಕೆಯಾಗಿದೆ. ಇನ್ನು ಕೆಲವು ನಿರ್ದಿಷ್ಟ ಉತ್ಪನ್ನಗಳ ಮೇಲಿನ ಸುಂಕವು ಮುಂದಿನ 5 ರಿಂದ 6 ವರ್ಷಗಳಲ್ಲಿ ಹಂತಹಂತವಾಗಿ ಶೂನ್ಯಕ್ಕೆ ಇಳಿಯಲಿದೆ.

ಈ ಒಪ್ಪಂದದಿಂದ ಕರ್ನಾಟಕದ ಮಲೆನಾಡು ಹಾಗೂ ಕರಾವಳಿ ಭಾಗದ ರಫ್ತುದಾರರಿಗೆ ದೊಡ್ಡ ಮಾರುಕಟ್ಟೆ ಸಿಕ್ಕಂತಾಗಿದೆ. ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಯ ಉತ್ಕೃಷ್ಟ ಗುಣಮಟ್ಟದ ಕಾಫಿ, ಏಲಕ್ಕಿ, ಕಾಳುಮೆಣಸು, ಸಾಂಬಾರ ಪದಾರ್ಥಗಳು, ತೆಂಗು, ಸಿರಿಧಾನ್ಯಗಳು ಹಾಗೂ ಪ್ರಸಿದ್ಧ ಬ್ಯಾಡಗಿ ಮತ್ತು ದೇವನೂರು ಮೆಣಸಿನಕಾಯಿಗೆ ಯುಕೆ ಮಾರುಕಟ್ಟೆಯಲ್ಲಿ ಇನ್ಮುಂದೆ ಸುಂಕದ ಹೊರೆ ಇರುವುದಿಲ್ಲ.

ಎಕ್ಸ್​​ ಪೋಸ್ಟ್​​ ಇಲ್ಲಿದೆ ನೋಡಿ:

ಮಲ್ಲಿಗೆ, ಚೆಂಡುಹೂವು, ಮಾವು, ನಿಂಬೆಹಣ್ಣು, ತರಕಾರಿ, ಮೀನು ಹಾಗೂ ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತಿಗೆ ಭಾರಿ ಬೇಡಿಕೆ ಬರಲಿದೆ. ರಾಜ್ಯದ ಜೈವಿಕ ತಂತ್ರಜ್ಞಾನ , ಫಾರ್ಮಸುಟಿಕಲ್ಸ್, ಜವಳಿ ಮತ್ತು ಗಾರ್ಮೆಂಟ್ಸ್ ಹಾಗೂ ಸಣ್ಣ ಕೈಗಾರಿಕೆಗಳಿಗೆ ಈ ಒಪ್ಪಂದದಿಂದ ಹೊಸ ಚೈತನ್ಯ ಸಿಗಲಿದೆ.

ಈಗಾಗಲೇ ಕರ್ನಾಟಕದಲ್ಲಿ ಬ್ರಿಟನ್ ಮೂಲದ ಪ್ರಮುಖ ಕಂಪನಿಗಳಾದ ರೋಲ್ಸ್ ರಾಯ್ಸ್, ಬಿಎಇ ಸಿಸ್ಟಮ್ಸ್, ಟೆಸ್ಕೋ, ಎಆರ್‌ಎಂ ಮತ್ತು ಹೆಚ್‌ಎಸ್‌ಬಿಸಿ ನೆಲೆಯೂರಿದ್ದು, 30,000ಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡಿವೆ. ಸ್ತುತ ‘ಟೆಸ್ಕೋ’ ಕಂಪನಿಯು ನೂತನ ವಿಸ್ತರಣಾ ಕೇಂದ್ರವನ್ನು ತೆರೆಯುತ್ತಿದ್ದು, ಇದರಿಂದ ಹೊಸದಾಗಿ 15,000 ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ. ರೋಲ್ಸ್ ರಾಯ್ಸ್’ ರಾಜ್ಯದಲ್ಲಿ ಮತ್ತಷ್ಟು ಹೂಡಿಕೆ ಮಾಡಲು ಉತ್ಸುಕತೆ ತೋರಿಸಿದೆ. ಬ್ರಿಟನ್ ಹೂಡಿಕೆದಾರರನ್ನು ಸೆಳೆಯಲು ರಾಜ್ಯ ಸರ್ಕಾರವು ಲಂಡನ್‌ನಲ್ಲಿ ರೋಡ್‌ಶೋ ನಡೆಸಲು ನಿರ್ಧರಿಸಿದ್ದು, ಏರೋಸ್ಪೇಸ್, ಸೆಮಿಕಂಡಕ್ಟರ್, ಶುದ್ಧ ಇಂಧನ ಹಾಗೂ ವಿದ್ಯುತ್ ಚಾಲಿತ ವಾಹನ ಕ್ಷೇತ್ರಗಳಲ್ಲಿ ಸಹಭಾಗಿತ್ವ ವಹಿಸಲಿದೆ.

ಇದನ್ನೂ ಓದಿ: ಇಂಜಿನಿಯರಿಂಗ್ ಸೇರ ಬಯಸುವವರಿಗೆ ಜುಲೈ 24 ಕೊನೆ ದಿನ; ಈ ಬಾರಿ ನಿಯಮದಲ್ಲಿ ದೊಡ್ಡ ಬದಲಾವಣೆ

ಕರ್ನಾಟಕಕ್ಕೆ ಬರಲಿವೆ ಬ್ರಿಟಿಷ್ ವಿಶ್ವವಿದ್ಯಾಲಯಗಳು:

ಕೇವಲ ವ್ಯಾಪಾರ ಮಾತ್ರವಲ್ಲದೆ ಶಿಕ್ಷಣ ಕ್ಷೇತ್ರದಲ್ಲೂ ಈ ಒಪ್ಪಂದ ಕ್ರಾಂತಿ ಸೃಷ್ಟಿಸಲಿದೆ. ಬ್ರಿಟನ್‌ನ ಪ್ರತಿಷ್ಠಿತ ವಿಶ್ವವಿದ್ಯಾಲಯಗಳು ಮತ್ತು ಪ್ರಮುಖ ಶಾಲೆಗಳು ತಮ್ಮ ಕ್ಯಾಂಪಸ್‌ಗಳನ್ನು ಕರ್ನಾಟಕದಲ್ಲೇ ತೆರೆಯಲು ಹಸಿರು ನಿಶಾನೆ ಸಿಕ್ಕಿದೆ. ಇದಲ್ಲದೆ, ಪ್ರಸ್ತುತ ಬೆಂಗಳೂರು ಮತ್ತು ಲಂಡನ್ ನಡುವೆ ವಾರಕ್ಕೆ 34 ನೇರ ವಿಮಾನ ಸೇವೆಗಳಿದ್ದು, ಮುಂಬರುವ ದಿನಗಳಲ್ಲಿ ಈ ಸಂಖ್ಯೆ ಮತ್ತಷ್ಟು ಹೆಚ್ಚಾಗಲಿದೆ. ರಾಜ್ಯದ ರಫ್ತುದಾರರಿಗೆ ಮತ್ತು ಸಣ್ಣ ಉದ್ಯಮಿಗಳಿಗೆ ಈ ಮುಕ್ತ ವ್ಯಾಪಾರದ ಬಗ್ಗೆ ಹೆಚ್ಚಿನ ತಿಳಿವಳಿಕೆ ಮೂಡಿಸಲು ಸರ್ಕಾರ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಿದೆ ಎಂದು ಸಚಿವ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಈ ಪುಟ್ಟ ಪುಟಾಣಿಯೇ ಈಗ ಮೆಸ್ಸಿಯ ಎದುರಾಳಿ! – Kannada News | Lionel Messi once bathed baby Lamine Yamal

ವಿಶ್ವ ಫುಟ್‌ಬಾಲ್ ಇತಿಹಾಸದಲ್ಲಿ ಕೆಲವು ಘಟನೆಗಳು ಕೇವಲ ಕಾಕತಾಳೀಯವಾಗಿರಲು ಸಾಧ್ಯವೇ ಇಲ್ಲ, ಅವುಗಳನ್ನು ವಿಧಿಯೇ ಬರೆದಿಟ್ಟಿರುತ್ತದೆ ಅನಿಸುತ್ತದೆ. ಇದಕ್ಕೆ ಅತ್ಯುತ್ತಮ ಉದಾಹರಣೆ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಸೃಷ್ಟಿಸುತ್ತಿರುವ ಒಂದು ಹಳೆಯ ಫೋಟೋ. ಜಗತ್ತಿನ ಸಾರ್ವಕಾಲಿಕ ಶ್ರೇಷ್ಠ ಫುಟ್‌ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ, ಕೇವಲ ಕೆಲವು ತಿಂಗಳ ಮಗುವಿಗೆ ಜಳಕ ಮಾಡಿಸುತ್ತಿರುವ ಅಪರೂಪದ ಚಿತ್ರವಿದು. ಅಷ್ಟಕ್ಕೂ ಮೆಸ್ಸಿ ಕೈಯಲ್ಲಿದ್ದ ಆ ಪುಟ್ಟ ಮಗು ಬೇರೆ ಯಾರೂ ಅಲ್ಲ. ಇಂದು ಇಡೀ ಫುಟ್‌ಬಾಲ್ ಜಗತ್ತನ್ನು ತನ್ನ ಅದ್ಭುತ ಆಟದ ಮೂಲಕ ಮಂತ್ರಮುಗ್ಧಗೊಳಿಸುತ್ತಿರುವ ಸ್ಪೇನ್ ದೇಶದ ಯುವ ತಾರೆ ಲಾಮಿನ್ ಯಮಾಲ್!

2007 ರಲ್ಲಿ ಮುಖಾಮುಖಿ:

ಲಿಯೋನೆಲ್ ಮೆಸ್ಸಿ ಮತ್ತು ಲಾಮಿನ್ ಯಮಾಲ್ ಮುಖಾಮುಖಿಯಾಗಿದ್ದು 2007 ರಲ್ಲಿ. ಮೆಸ್ಸಿ ಅವರು ಬಾರ್ಸಿಲೋನಾ ಕ್ಲಬ್ ಪರ ಕಣಕ್ಕಿಳಿಯುತ್ತಿದ್ದ ದಿನಗಳಲ್ಲಿ. ಸ್ಪೇನ್‌ನ ಪ್ರಸಿದ್ಧ ಪತ್ರಿಕೆ ‘ಡಿಯಾರಿಯೋ ಸ್ಪೋರ್ಟ್’ ಮತ್ತು ವಿಶ್ವಸಂಸ್ಥೆಯ ಯುನಿಸೆಫ್ ಸಂಸ್ಥೆಗಳು ಜಂಟಿಯಾಗಿ ಒಂದು ಚಾರಿಟಿ ಕ್ಯಾಲೆಂಡರ್ ತಯಾರಿಸಲು ನಿರ್ಧರಿಸಿದ್ದವು.

ಕ್ಯಾಲೆಂಡರ್‌ನ ಚಿತ್ರೀಕರಣಕ್ಕಾಗಿ ಬಾರ್ಸಿಲೋನಾ ಆಟಗಾರರೊಂದಿಗೆ ಫೋಟೋ ತೆಗೆಸಿಕೊಳ್ಳಲು ಯುನಿಸೆಫ್ ಸಂಸ್ಥೆಯು ಬಾರ್ಸಿಲೋನಾದ ರೊಕಾಫೊಂಡಾ ಎಂಬ ಬಡ ಪ್ರದೇಶದಲ್ಲಿ ಒಂದು ಲಾಟರಿ ಪ್ರಕ್ರಿಯೆ ನಡೆಸಿತ್ತು. ಈ ಲಾಟರಿ ಪ್ರಕ್ರಿಯೆಯಲ್ಲಿ ವಿಜೇತರಾದದ್ದೇ ಲಾಮಿನ್ ಯಮಾಲ್ ಅವರ ಪೋಷಕರು!

ಲಾಕರ್ ರೂಮ್​ನಲ್ಲೇ ಮೊದಲ ಭೇಟಿ:

ಲಿಯೋನೆಲ್ ಮೆಸ್ಸಿ ಹಾಗೂ ಲಾಮಿನ್ ಯಮಾಲ್ ಮೊದಲ ಭೇಟಿಯಾಗಿದ್ದು ಬಾರ್ಸಿಲೋನಾ ಕ್ಲಬ್‌ನ ತವರು ಮೈದಾನವಾದ ‘ಕಂಪ್ ನೌ’ ಕ್ರೀಡಾಂಗಣದ ಲಾಕರ್ ರೂಮ್‌ನಲ್ಲಿ. ಅಂದರೆ ಚಾರಿಟಿ ಕ್ಯಾಲೆಂಡರ್ ಫೋಟೋ ಶೂಟ್​ಗಾಗಿ ಛಾಯಾಗ್ರಾಹಕ ಜೋನ್ ಮಾನ್‌ಫೋರ್ಟ್ ‘ಕಂಪ್ ನೌ’ ಕ್ರೀಡಾಂಗಣದ ಲಾಕರ್ ರೂಮ್​ಗೆ ಆಗಮಿಸಿದ್ದರು. ಈ ವೇಳೆ ಸೆರೆ ಹಿಡಿದ ಫೋಟೋವೇ ಇದೀಗ ವೈರಲ್ ಆಗುತ್ತಿದೆ.

ಮಾನ್‌ಫೋರ್ಟ್ ಇತ್ತೀಚೆಗೆ ನೆನಪಿಸಿಕೊಂಡಂತೆ, ಆ ದಿನ ಮೆಸ್ಸಿ ತುಂಬಾ ನಾಚಿಕೆ ಸ್ವಭಾವದವರಾಗಿದ್ದರು. ಯುವ ಮೆಸ್ಸಿಗೆ ಪ್ಲಾಸ್ಟಿಕ್ ಟಬ್‌ನಲ್ಲಿದ್ದ ಪುಟ್ಟ ಮಗುವನ್ನು ಹೇಗೆ ಎತ್ತಿಕೊಳ್ಳಬೇಕು, ಹೇಗೆ ನಿಭಾಯಿಸಬೇಕು ಎಂಬುದು ಆರಂಭದಲ್ಲಿ ತಿಳಿಯದೆ ತಬ್ಬಿಬ್ಬಾಗಿದ್ದರು.

ಆಗ ಮಗುವಿನ ತಾಯಿ ಶೀಲಾ ಎಬಾನಾ ಅವರು ಅಲ್ಲಿಯೇ ಇದ್ದು ಮೆಸ್ಸಿಗೆ ಸಹಾಯ ಮಾಡಿದರು. ಹಾಗೆ ಹುಟ್ಟಿಕೊಂಡಿದ್ದೇ ಈ ಐತಿಹಾಸಿಕ ಫೋಟೋ. ಈ ವೇಳೆ ನಾನು ತೆಗೆದ ಫೋಟೋ ಇದು ಜೋನ್ ಮಾನ್‌ಫೋರ್ಟ್  ನೆನಪಿಸಿಕೊಂಡಿದ್ದಾರೆ.

ವೈರಲ್ ಆಗಿದ್ದು ಹೇಗೆ?

ಈ ಫೋಟೋ ಶೂಟ್ ಮುಗಿದ ನಂತರ ಎಲ್ಲರೂ ಇದನ್ನು ಮರೆತುಬಿಟ್ಟಿದ್ದರು. ಆದರೆ ಇತ್ತೀಚೆಗೆ ಲಾಮಿನ್ ಯಮಾಲ್ ಅವರ ತಂದೆ ಮುನೀರ್ ನಸ್ರಾವಿ ಅವರು “ಎರಡು ದಂತಕಥೆಗಳ ಆರಂಭ” ಎಂಬ ಶೀರ್ಷಿಕೆಯೊಂದಿಗೆ ಈ ಫೋಟೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಾಗ ಇಡೀ ಜಗತ್ತೇ ಆಶ್ಚರ್ಯಚಕಿತವಾಯಿತು.

ಹಲವರು ಇದನ್ನು ಎಐ ಸೃಷ್ಟಿಸಿದ ನಕಲಿ ಫೋಟೋ ಇರಬಹುದು ಎಂದು ಶಂಕಿಸಿದ್ದರು. ಆದರೆ ಛಾಯಾಗ್ರಾಹಕ ಮತ್ತು ಪತ್ರಿಕೆ ಇದನ್ನು ಅಧಿಕೃತವಾಗಿ ಹೌದು ಎಂದು ಖಚಿತಪಡಿಸಿದಾಗ ಫುಟ್‌ಬಾಲ್ ಅಭಿಮಾನಿಗಳಿಗೆ ರೋಮಾಂಚನವಾಯಿತು.

ಪುಟ್ಟ ಪುಟಾಣಿಯೇ ಎದುರಾಳಿ:

19 ವರ್ಷಗಳ ಹಿಂದೆ ಟಬ್‌ನಲ್ಲಿ ಮಲಗಿದ್ದ ಲಾಮಿನ್ ಯಮಾಲ್ ಇದೀಗ ಫೈನಲ್​ ಪಂದ್ಯದಲ್ಲಿ ಸ್ಪೇನ್ ತಂಡದ ಪ್ರಮುಖ ಆಟಗಾರನಾಗಿ ಕಣಕ್ಕಿಳಿಯಲು ಸಜ್ಜಾಗಿದ್ದಾನೆ. ಅದು ಕೂಡ ತನ್ನನ್ನು ಸ್ನಾನ ಮಾಡಿಸಿದ ಲಿಯೋನೆಲ್ ಮೆಸ್ಸಿ ವಿರುದ್ಧ ವಿಶ್ವಕಪ್ ಕಿರೀಟಕ್ಕಾಗಿ ಎಂಬುದು ವಿಶೇಷ.

ಲಾಮಿನ್ ಯಮಾಲ್ ಮತ್ತು ಲಿಯೋನೆಲ್ ಮೆಸ್ಸಿ

ಇದನ್ನೂ ಓದಿ: ಟಿ20 ವಿಶ್ವಕಪ್​ನಲ್ಲೂ ಎಲಿಮಿನೇಟರ್ ರೌಂಡ್: ಸೆಮಿಫೈನಲ್ ಎಂಟ್ರಿ ಮತ್ತಷ್ಟು ರೋಚಕ!

ಒಟ್ಟಾರೆಯಾಗಿ ಹೇಳುವುದಾದರೆ, ಇದು ಕೇವಲ ಒಂದು ಫುಟ್‌ಬಾಲ್ ಪಂದ್ಯವಲ್ಲ. ಇತಿಹಾಸ ಮತ್ತು ಭವಿಷ್ಯದ ನಡುವಿನ ಮಹಾಸಂಗಮ. ಅಂದು ಮೆಸ್ಸಿಯ ಕೈಯಲ್ಲಿದ್ದ ಪುಟ್ಟ ಮಗು ಇಂದು ಜಾಗತಿಕ ಫುಟ್‌ಬಾಲ್‌ನ ದೈತ್ಯ ತಾರೆಯಾಗಿ ಬೆಳೆದು ನಿಂತಿದೆ. ಮೆಸ್ಸಿಯ ವೃತ್ತಿಜೀವನದ ಅಂತಿಮ ಹಂತದಲ್ಲಿ ಯಮಾಲ್ ಅವರಂತಹ ಉದಯೋನ್ಮುಖ ಆಟಗಾರ ಎದುರಾಳಿಯಾಗಿ ನಿಂತಿರುವುದು ಕ್ರೀಡಾಲೋಕದ ಸಾರ್ವಕಾಲಿಕ ಶ್ರೇಷ್ಠ ಮತ್ತು ಭಾವುಕ ಕ್ಷಣವಾಗಿ ಇತಿಹಾಸದ ಪುಟ ಸೇರಲಿದೆ.

Source link

Rain Water: ನೇರವಾಗಿ ಮಳೆ ನೀರು ಕುಡಿಯುವುದು ಸುರಕ್ಷಿತವೇ? ತಜ್ಞರು ಹೇಳಿದ ಸತ್ಯ – Kannada News | Rain water is it safe to drink rainwater health risks expert warning

ಮಳೆಗಾಲ (Monsoon) ಬಂದಾಗ ಕೆಲವರಿಗೆ ಆಕಾಶದಿಂದ ನೇರವಾಗಿ ಬೀಳುವ ಮಳೆ ಹನಿಗಳನ್ನು ಬಾಯಿಗೆ ಹಾಕಿ ಕುಡಿಯುವ ಅಭ್ಯಾಸ ಇರುತ್ತದೆ. ಪ್ರಕೃತಿಯಿಂದ ನೇರವಾಗಿ ಸಿಗುವ ನೀರು ಆದ್ದರಿಂದ ಇದು ಅತ್ಯಂತ ಶುದ್ಧ ಮತ್ತು ಆರೋಗ್ಯಕರ ಎಂದು ಹಲವರು ನಂಬುತ್ತಾರೆ. ಆದರೆ ತಜ್ಞರ ಪ್ರಕಾರ, ಶುದ್ಧೀಕರಿಸದ ಮಳೆ ನೀರನ್ನು ನೇರವಾಗಿ ಕುಡಿಯುವುದು ಆರೋಗ್ಯಕ್ಕೆ ಅಪಾಯಕಾರಿಯಾಗಬಹುದು. ಮಳೆ ಹನಿಗಳು ಭೂಮಿಗೆ ತಲುಪುವ ಮುನ್ನವೇ ಗಾಳಿಯಲ್ಲಿರುವ ಧೂಳು, ಹೊಗೆ, ಮಾಲಿನ್ಯಕಾರಿ ಕಣಗಳು, ಬ್ಯಾಕ್ಟೀರಿಯಾ ಹಾಗೂ ವೈರಸ್‌ಗಳ ಸಂಪರ್ಕಕ್ಕೆ ಬರುತ್ತವೆ. ಹೀಗಾಗಿ ಮಳೆ ನೀರು ಮೊದಲ ನೋಟಕ್ಕೆ ಸ್ವಚ್ಛವಾಗಿ ಕಂಡರೂ, ಅದರಲ್ಲಿ ಹಾನಿಕಾರಕ ಅಂಶಗಳು ಇರಬಹುದೆಂದು ತಜ್ಞರು ಎಚ್ಚರಿಸುತ್ತಿದ್ದಾರೆ.

ತಜ್ಞರ ಪ್ರಕಾರ, ವಿಶೇಷವಾಗಿ ಋತುವಿನ ಮೊದಲ ಮಳೆಯನ್ನು ಕುಡಿಯಬಾರದು. ಏಕೆಂದರೆ ವಾತಾವರಣದಲ್ಲಿ ಸಂಗ್ರಹವಾಗಿರುವ ಧೂಳು, ರಾಸಾಯನಿಕಗಳು ಮತ್ತು ಮಾಲಿನ್ಯಕಾರಿ ಕಣಗಳು ಮೊದಲ ಮಳೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬೆರೆತು ಬರುತ್ತವೆ. ಕೆಲವರು ಮಳೆ ನೀರು ಕ್ಷಾರೀಯ (Alkaline) ಗುಣ ಹೊಂದಿದ್ದು ಆರೋಗ್ಯಕ್ಕೆ ಒಳ್ಳೆಯದು ಎಂದು ನಂಬುತ್ತಾರೆ. ಆದರೆ ವೈಜ್ಞಾನಿಕವಾಗಿ ಮಳೆ ನೀರು ಸ್ವಲ್ಪ ಆಮ್ಲೀಯ (Acidic) ಸ್ವಭಾವ ಹೊಂದಿರುತ್ತದೆ. ಆದ್ದರಿಂದ ಯಾವುದೇ ಶುದ್ಧೀಕರಣವಿಲ್ಲದೆ ಅದನ್ನು ಕುಡಿಯುವುದು ಸೂಕ್ತವಲ್ಲ.

ಕಲುಷಿತ ಮಳೆ ನೀರನ್ನು ಕುಡಿದರೆ ಹೊಟ್ಟೆ ಸೋಂಕು, ಅತಿಸಾರ, ವಾಂತಿ, ಆಹಾರ ವಿಷಬಾಧೆ ಸೇರಿದಂತೆ ಹಲವು ಜೀರ್ಣಾಂಗ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ. ಕೆಲ ಸಂದರ್ಭಗಳಲ್ಲಿ ಟೈಫಾಯ್ಡ್, ಕಾಲರಾ ಹಾಗೂ ಹೆಪಟೈಟಿಸ್ ಎ ಮುಂತಾದ ನೀರಿನ ಮೂಲಕ ಹರಡುವ ಸೋಂಕುಗಳ ಅಪಾಯವೂ ಹೆಚ್ಚಾಗಬಹುದು. ವಿಶೇಷವಾಗಿ ಮಕ್ಕಳು, ವೃದ್ಧರು ಮತ್ತು ರೋಗನಿರೋಧಕ ಶಕ್ತಿ ಕಡಿಮೆ ಇರುವವರು ಹೆಚ್ಚು ಎಚ್ಚರಿಕೆ ವಹಿಸಬೇಕು.

Kids Sleep: ಸ್ಕೂಲ್‌ನಿಂದ ಬಂದ ತಕ್ಷಣ ಮಕ್ಕಳನ್ನು ಮಲಗಿಸಬಹುದೇ?

ಒಂದು ವೇಳೆ ಮಳೆ ನೀರನ್ನು ಕುಡಿಯುವ ಉದ್ದೇಶವಿದ್ದರೆ, ಮೊದಲು ಅದನ್ನು ಚೆನ್ನಾಗಿ ಕುದಿಸಬೇಕು. ನಂತರ ಉತ್ತಮ ಗುಣಮಟ್ಟದ ವಾಟರ್ ಫಿಲ್ಟರ್ ಅಥವಾ ಶುದ್ಧೀಕರಣ ವ್ಯವಸ್ಥೆಯ ಮೂಲಕ ಶೋಧಿಸಿ ಮಾತ್ರ ಬಳಸಬೇಕು. ಕೇವಲ ಕುದಿಸುವುದರಿಂದ ಕೆಲವು ಸೂಕ್ಷ್ಮಾಣುಗಳು ನಾಶವಾಗುತ್ತವಷ್ಟೆ. ಆದರೆ ರಾಸಾಯನಿಕ ಮಾಲಿನ್ಯ ಅಥವಾ ಭಾರವಾದ ಲೋಹಗಳನ್ನು ತೆಗೆದುಹಾಕಲು ಸೂಕ್ತ ಫಿಲ್ಟರ್ ಅಗತ್ಯವಾಗಬಹುದು. ಸರಿಯಾದ ಶುದ್ಧೀಕರಣ ವ್ಯವಸ್ಥೆ ಇಲ್ಲದಿದ್ದರೆ ಮಳೆ ನೀರನ್ನು ಕುಡಿಯುವುದಕ್ಕಿಂತ ಗಿಡಗಳಿಗೆ ನೀರು ಹಾಕುವುದು, ಬಟ್ಟೆ ತೊಳೆಯುವುದು ಅಥವಾ ಇತರ ಗೃಹಬಳಕೆಗೆ ಬಳಸುವುದು ಉತ್ತಮ ಎಂದು ತಜ್ಞರು ಸಲಹೆ ನೀಡಿದ್ದಾರೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Puri Rath Yatra 2026: ಜಗನ್ನಾಥ ರಥಯಾತ್ರೆ ಆರಂಭ; ರಥಯಾತ್ರೆಯ ಮಾರ್ಗವನ್ನು ಚಿನ್ನದ ಪೊರಕೆಯಿಂದ ಗುಡಿಸುವ ಸಂಪ್ರದಾಯದ ಬಗ್ಗೆ ನಿಮಗೆ ಗೊತ್ತಾ? – Kannada News | Puri Jagannath Rath Yatra 2026: Unveiling the Golden Broom Tradition

ಚಿನ್ನದ ಪೊರಕೆಯಿಂದ ರಥಯಾತ್ರೆಯ ಮಾರ್ಗವನ್ನು ಸ್ವಚ್ಛಗೊಳಿಸುವ ಆಚರಣೆ

ಒಡಿಶಾದ ಪುರಿಯಲ್ಲಿರುವ ಶ್ರೀ ಜಗನ್ನಾಥ ದೇವಸ್ಥಾನದಲ್ಲಿ ಪ್ರತಿ ವರ್ಷ ನಡೆಯುವ ‘ಜಗನ್ನಾಥ ರಥಯಾತ್ರೆ‘ ವಿಶ್ವಪ್ರಸಿದ್ಧ ಹಿಂದೂ ಆಧ್ಯಾತ್ಮಿಕ ಉತ್ಸವಗಳಲ್ಲಿ ಒಂದಾಗಿದೆ. ಈ ವರ್ಷ ರಥಯಾತ್ರೆಯು ಇಂದಿನಿಂದ (ಜುಲೈ 16) ಪ್ರಾರಂಭವಾಗುತ್ತಿದೆ. ಈ ಸಂದರ್ಭದಲ್ಲಿ, ಜಗನ್ನಾಥನು ತಮ್ಮ ಅಣ್ಣ ಬಲಭದ್ರ ಮತ್ತು ಸಹೋದರಿ ಸುಭದ್ರಾ ದೇವಿ ಅವರೊಂದಿಗೆ ದೇವಾಲಯದಿಂದ ಭವ್ಯ ರಥದಲ್ಲಿ ಹೊರಟು ಗುಂಡಿಚಾ ದೇವಸ್ಥಾನವನ್ನು ತಲುಪುತ್ತಾರೆ. ದೇಶ ಮತ್ತು ವಿದೇಶಗಳಿಂದ ಲಕ್ಷಾಂತರ ಭಕ್ತರು ಈ ದೈವಿಕ ಮೆರವಣಿಗೆಯನ್ನು ಪ್ರತ್ಯಕ್ಷವಾಗಿ ವೀಕ್ಷಿಸಲು ಪುರಿಗೆ ಬರುತ್ತಾರೆ. ರಥಯಾತ್ರೆಯ ಸಮಯದಲ್ಲಿ ಅನೇಕ ವಿಶಿಷ್ಟ ಸಂಪ್ರದಾಯಗಳನ್ನು ಅನುಸರಿಸಲಾಗುತ್ತದೆ. ಅವುಗಳಲ್ಲಿ ಅತ್ಯಂತ ಆಕರ್ಷಕವಾದದ್ದು ‘ಚಿನ್ನದ ಪೊರಕೆಯಿಂದ ರಥಯಾತ್ರೆಯ ಮಾರ್ಗವನ್ನು ಸ್ವಚ್ಛಗೊಳಿಸುವ ಆಚರಣೆ’. ಈ ಸಂಪ್ರದಾಯದ ಹಿಂದಿನ ಆಧ್ಯಾತ್ಮಿಕ ಸಂದೇಶವು ಬಹಳ ಶ್ರೀಮಂತವಾಗಿದೆ.

ಚಿನ್ನದ ಪೊರಕೆಯಿಂದ ಹಾದಿಯನ್ನು ಗುಡಿಸುವವರು ಯಾರು?

ರಥಯಾತ್ರೆ ಪ್ರಾರಂಭವಾಗುವ ಮೊದಲು, ಪುರಿಯ ಗಜಪತಿ ಮಹಾರಾಜ ಅಥವಾ ಅವರ ವಂಶಸ್ಥರು ‘ಛೇರಾ ಪಹಾನ್ರ’ ಎಂಬ ಪವಿತ್ರ ಸೇವೆಯನ್ನು ಮಾಡುತ್ತಾರೆ. ಚಿನ್ನದ ಹಿಡಿಕೆಯಿಂದ ಅಲಂಕರಿಸಲ್ಪಟ್ಟ ವಿಶೇಷ ಪೊರಕೆಯನ್ನು ರಥಯಾತ್ರೆಯ ಮಾರ್ಗವನ್ನು ಮತ್ತು ರಥಗಳ ಸುತ್ತಲೂ ಗುಡಿಸಿ ಪವಿತ್ರ ನೀರನ್ನು ಸಿಂಪಡಿಸಲು ಬಳಸಲಾಗುತ್ತದೆ. ರಾಜನೇ ಸ್ವತಃ ಪೊರಕೆ ಹಿಡಿದು ರಸ್ತೆ ಗುಡಿಸಿದ ನಂತರ, ವೇದ ಮಂತ್ರಗಳ ಪಠಣದ ನಡುವೆ ರಥಯಾತ್ರೆಯು ಭವ್ಯವಾಗಿ ಚಾಲನೆ ಪಡೆಯುತ್ತದೆ.

ಈ ಸಂಪ್ರದಾಯದ ಹಿಂದಿನ ಆಧ್ಯಾತ್ಮಿಕ ಪರಿಕಲ್ಪನೆ:

ಸನಾತನ ಧರ್ಮದಲ್ಲಿ, ಚಿನ್ನವನ್ನು ಶುದ್ಧತೆ, ದೈವತ್ವ ಮತ್ತು ಶುಭದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಅದಕ್ಕಾಗಿಯೇ ಜಗನ್ನಾಥನ ರಥವು ಪ್ರಯಾಣಿಸುವ ಮಾರ್ಗವನ್ನು ಚಿನ್ನದ ಪೊರಕೆಯಿಂದ ಸ್ವಚ್ಛಗೊಳಿಸಲಾಗುತ್ತದೆ, ಇದು ಭಗವಂತನಿಗೆ ಅತ್ಯುನ್ನತ ಗೌರವವನ್ನು ತೋರಿಸುತ್ತದೆ. ಆದಾಗ್ಯೂ, ಈ ಪದ್ಧತಿಯು ಕೇವಲ ಮಾರ್ಗವನ್ನು ಸ್ವಚ್ಛಗೊಳಿಸುವುದರ ಬಗ್ಗೆ ಅಲ್ಲ. ದೇವರ ಮುಂದೆ ಎಲ್ಲರೂ ಸಮಾನರು ಎಂಬ ದೊಡ್ಡ ಸಂದೇಶವನ್ನು ಇದು ಜಗತ್ತಿಗೆ ರವಾನಿಸುತ್ತದೆ. ಪೊರಕೆ ಹಿಡಿದು ರಥದ ಮುಂದೆ ಸೇವೆ ಸಲ್ಲಿಸುವ ಮೂಲಕ, ಗಜಪತಿ ಮಹಾರಾಜರು ಸ್ವತಃ ದೇವರ ಸನ್ನಿಧಿಯಲ್ಲಿ ರಾಜ, ಬಡವ ಮತ್ತು ಸಾಮಾನ್ಯ ಮನುಷ್ಯನ ನಡುವೆ ಯಾವುದೇ ವ್ಯತ್ಯಾಸವಿಲ್ಲ ಎಂದು ಜಗತ್ತಿಗೆ ಸಾರುತ್ತಾರೆ.

ಇದನ್ನೂ ಓದಿ: ಪುರಿ ಜಗನ್ನಾಥ ರಥಯಾತ್ರೆಯಲ್ಲಿ ಹಳದಿ ಮತ್ತು ಕೆಂಪು ಬಣ್ಣದ ಉಡುಪುಗಳನ್ನೇ ಆಯ್ಕೆ ಮಾಡುವುದೇಕೆ ಗೊತ್ತಾ? ಇಲ್ಲಿದೆ ಆಧ್ಯಾತ್ಮಿಕ ಮಹತ್ವ!

ಪರಮೋಚ್ಚ ಭಕ್ತಿ ಮತ್ತು ನಮ್ರತೆಯ ಸಂಕೇತ:

ಜಗನ್ನಾಥ ರಥಯಾತ್ರೆಯ ಸಮಯದಲ್ಲಿ ಚಿನ್ನದ ಪೊರಕೆಯಿಂದ ರಸ್ತೆ ಗುಡಿಸುವ ಸಂಪ್ರದಾಯವನ್ನು ನಮ್ರತೆ, ಸೇವೆ ಮತ್ತು ಸಮರ್ಪಣೆಯ ಪರಮೋಚ್ಚ ಸಂಕೇತವೆಂದು ಪರಿಗಣಿಸಲಾಗುತ್ತದೆ. ಈ ಪದ್ಧತಿಯು ಎಷ್ಟೇ ದೊಡ್ಡ ಅಧಿಕಾರ ಅಥವಾ ಅಂತಸ್ತಿನಲ್ಲಿರುವವರು ಸಹ ಭಗವಂತನ ಮುಂದೆ ಕೇವಲ ಒಬ್ಬ ಸಾಮಾನ್ಯ ಭಕ್ತನಷ್ಟೇ ವಿನಮ್ರರಾಗಿರಬೇಕು ಎಂಬ ಅದ್ಭುತ ಸಂದೇಶವನ್ನು ನೀಡುತ್ತದೆ. ಭಕ್ತರ ನಂಬಿಕೆಯ ಪ್ರಕಾರ, ಈ ದೈವಿಕ ಸಂಪ್ರದಾಯವನ್ನು ನೇರವಾಗಿ ನೋಡುವುದು, ರಥಯಾತ್ರೆಯಲ್ಲಿ ಭಾಗವಹಿಸುವುದು ಮತ್ತು ರಥದ ಹಗ್ಗಗಳನ್ನು ಎಳೆಯುವುದು ಜಗನ್ನಾಥನ ವಿಶೇಷ ಆಶೀರ್ವಾದವನ್ನು ತರುತ್ತದೆ. ಶತಮಾನಗಳಿಂದ ಅತ್ಯಂತ ನಿಷ್ಠೆಯಿಂದ ನಡೆದುಕೊಂಡು ಬರುತ್ತಿರುವ ಈ ವಿಶಿಷ್ಟ ಆಚರಣೆಯು ಇಂದಿಗೂ ರಥಯಾತ್ರೆಯ ಅತ್ಯಂತ ಪವಿತ್ರ ಮತ್ತು ಭಾವನಾತ್ಮಕ ಕ್ಷಣವಾಗಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version