Headlines

ರೋಹಿತ್ ಶರ್ಮಾ ಸೆಂಚುರಿಗೆ ಸಚಿನ್ ಸಾರ್ವಕಾಲಿಕ ದಾಖಲೆ ಉಡೀಸ್ – Kannada News | Rohit Sharma Breaks Sachin Tendulkar’s All Time Record

ಲಾರ್ಡ್ಸ್ ಮೈದಾನದಲ್ಲಿ ಹಿಟ್​​ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಸಿಡಿಸಿದ ಸೆಂಚುರಿಗೆ ಸಚಿನ್ ತೆಂಡೂಲ್ಕರ್ ಅವರ ಸಾರ್ವಕಾಲಿಕ ದಾಖಲೆ ಧೂಳೀಪಟವಾಗಿದೆ. ಈ ಶತಕದೊಂದಿಗೆ ಹಿಟ್​​​ಮ್ಯಾನ್ ಟೀಮ್ ಇಂಡಿಯಾ ಪರ ಆರಂಭಿಕನಾಗಿ ಅತ್ಯಧಿಕ ಶತಕ ಬಾರಿಸಿದ ಬ್ಯಾಟರ್ ಎನಿಸಿಕೊಂಡಿದ್ದಾರೆ. (PC: BCCI) ಇಂಗ್ಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದ ರೋಹಿತ್ ಶರ್ಮಾ 84 ಎಸೆತಗಳಲ್ಲಿ ಶತಕ ಪೂರೈಸಿದರು. ಈ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅತ್ಯಧಿಕ ಸೆಂಚುರಿ ಸಿಡಿಸಿದ ಟೀಮ್ ಇಂಡಿಯಾದ ಆರಂಭಿಕ ದಾಂಡಿಗ ಎಂಬ ಹಿರಿಮೆಯನ್ನು ತಮ್ಮದಾಗಿಸಿಕೊಂಡರು….

Read More

ಅಶ್ಲೀಲ ಕಮೆಂಟ್; ರಮ್ಯಾ, ವಿಜಯಲಕ್ಷ್ಮೀ ಬಳಿಕ ದೂರು ದಾಖಲಿಸಿದ ಐಶ್ವರ್ಯಾ ಸಿಂಧೋಗಿ – Kannada News | Aishwarya Sindogi Battles Cyber Bullying: Actress Files FIR Over Derogatory Comments

ಸ್ಯಾಂಡಲ್‌ವುಡ್ ನಟಿಯರನ್ನು ಗುರಿಯಾಗಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ನಿಂದಿಸುವ ಮತ್ತು ಅವಹೇಳನಕಾರಿ ಕಮೆಂಟ್ ಮಾಡುವುದಕ್ಕೆ ಬ್ರೇಕ್ ಬಿದ್ದಿಲ್ಲ. ನಟಿ ರಮ್ಯಾ ಹಾಗೂ ದರ್ಶನ್ ಪತ್ನಿ ವಿಜಯಲಕ್ಷ್ಮೀ ಈ ವಿಷಯವನ್ನು ಗಂಭೀರವಾಗಿ ಸ್ವೀಕರಿಸಿ ಕೇಸ್ ದಾಖಲಿಸಿದ್ದರು. ಈ ಪ್ರಕರಣದಲ್ಲಿ ಅರೆಸ್ಟ್ ಕೂಡ ನಡೆಯಿತು. ಆದರೂ ಕೆಲವರು ಬುದ್ಧಿ ಕಲಿತಿಲ್ಲ. ಈಗ ಕನ್ನಡದ ಮತ್ತೋರ್ವ ನಟಿ ಐಶ್ವರ್ಯ ಸಿಂದೋಗಿ ಅವರು ಇಂತಹ ಕಿಡಿಗೇಡಿಗಳ ಕಾಟಕ್ಕೆ ಬೇಸತ್ತು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ನಟಿ ಐಶ್ವರ್ಯ ಸಿಂಧೋಗಿ ಅವರು ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ…

Read More

ರಾಮ್ ಚರಣ್ ಎದುರು ಹೊಸ ಬೇಡಿಕೆ ಇಟ್ಟ ಅಭಿಮಾನಿಗಳು – Kannada News | Ram Charan RC17: Why Production Speed is Crucial for His Tollywood Career Growth

ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಅವರು ತಮ್ಮ ಮುಂಬರುವ ಚಿತ್ರ ‘ಆರ್‌ಸಿ 17’ ವಿಷಯದಲ್ಲಿ ಬಹಳ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಾದ ಸಮಯ ಬಂದಿದೆ ಎಂದು ಸಿನಿ ರಂಗದ ವ್ಯಾಪಾರ ಮೂಲಗಳು ಅಭಿಪ್ರಾಯಪಟ್ಟಿವೆ. ಈ ಜಾಗರೂಕತೆಯು ಕೇವಲ ನಟನೆ ಅಥವಾ ಚಿತ್ರಕಥೆಯ ಆಯ್ಕೆಗೆ ಮಾತ್ರ ಸೀಮಿತವಾಗಿಲ್ಲ. ಬದಲಿಗೆ, ಚಿತ್ರ ನಿರ್ಮಾಣದ ವೇಗದ ಬಗ್ಗೆಯೂ ಅವರು ವಿಶೇಷ ಗಮನ ಹರಿಸಬೇಕಾಗಿದೆ. ‘ಆರ್‌ಆರ್‌ಆರ್’ ನಂತಹ ಬ್ಲಾಕ್‌ಬಸ್ಟರ್ ಚಿತ್ರದ ನಂತರ, ಚರಣ್ ಇಲ್ಲಿಯವರೆಗೆ ಕೇವಲ ಎರಡು ಚಿತ್ರಗಳನ್ನು ಮಾತ್ರ ಒಪ್ಪಿಕೊಂಡಿದ್ದಾರೆ. ಮೂರು…

Read More

ನಮ್ಮ ಸೋಲಿಗೆ ಇದುವೇ ಪ್ರಮುಖ ಕಾರಣ: ಶುಭ್​​ಮನ್ ಗಿಲ್ ಬೇಸರ – Kannada News | Death Over Woes Cost Us the Game: Shubman Gill

ಇಂಗ್ಲೆಂಡ್ ವಿರುದ್ಧ ಲಾರ್ಡ್ಸ್ ಮೈದಾನದಲ್ಲಿ ನಡೆದ 3ನೇ ಏಕದಿನ ಪಂದ್ಯದಲ್ಲಿ ಭಾರತ ತಂಡ 27 ರನ್‌ಗಳ ಸೋಲು ಅನುಭವಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡವು 50 ಓವರ್​​ಗಳಲ್ಲಿ 387 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾ 360 ರನ್​​ ಗಳಿಸಲಷ್ಟೇ ಶಕ್ತರಾದರು. ಈ ಮೂಲಕ ಭಾರತ ತಂಡವು 27 ರನ್​​ಗಳಿಂದ ಸೋಲೊಪ್ಪಿಕೊಂಡಿದೆ. ಈ ಸೋಲಿನ ಬಳಿಕ ಮಾತನಾಡಿದ ಟೀಮ್ ಇಂಡಿಯಾ ನಾಯಕ ಶುಭ್​​ಮನ್ ಗಿಲ್, ಡೆತ್ ಓವರ್‌ಗಳಲ್ಲಿ ಹೆಚ್ಚು ರನ್…

Read More

ಗೋಲ್ಡನ್ ಬೂಟ್ ಇಲ್ಲ, ಗೋಲ್ಡನ್ ಬಾಲ್​ ಕೂಡ ಇಲ್ಲ… ವಿಶ್ವಕಪ್ ಕೂಡ ಸಿಕ್ಕಿಲ್ಲ! – Kannada News | Lionel Messi Misses World Cup and Historic Double Gold

2026ರ ಜಾಗತಿಕ ಫುಟ್‌ಬಾಲ್ ಹಬ್ಬ ಮುಕ್ತಾಯಗೊಂಡಿದೆ. 39ನೇ ವಯಸ್ಸಿನಲ್ಲೂ ಲಿಯೋನೆಲ್ ಮೆಸ್ಸಿ ಅರ್ಜೆಂಟೀನಾ ತಂಡವನ್ನು ಮುನ್ನಡೆಸಿದ ರೀತಿ ಮತ್ತು ನೀಡಿದ ಪ್ರದರ್ಶನ ಜಗತ್ತನ್ನೇ ಬೆರಗುಗೊಳಿಸಿದೆ. ಆದರೆ ವೈಯಕ್ತಿಕ ಮಟ್ಟದಲ್ಲಿ ಮೆಸ್ಸಿಗೆ ಈ ಬಾರಿ ಅತ್ಯುನ್ನತ ಗೌರವಗಳಾದ ‘ಗೋಲ್ಡನ್ ಬೂಟ್’ ಮತ್ತು ‘ಗೋಲ್ಡನ್ ಬಾಲ್’ ದಕ್ಕಲಿಲ್ಲ. ಅದರಲ್ಲೂ ಈ ಎರಡು ಪ್ರಶಸ್ತಿಗಳನ್ನು ಒಟ್ಟಿಗೆ ಪಡೆಯುವ ಎಲ್ಲಾ ಅವಕಾಶಗಳಿದ್ದವು. ಆದರೆ ಫೈನಲ್ ಪಂದ್ಯಕ್ಕೂ ಮುನ್ನ 3ನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಫ್ರಾನ್ಸ್​ನ ಕಿಲಿಯನ್ ಎಂಬಾಪೆ, ಮೆಸ್ಸಿಯ ಈ ಎಲ್ಲಾ ಲೆಕ್ಕಾಚಾರಗಳನ್ನು…

Read More

ಬೆಂಗಳೂರಿನಲ್ಲಿವೆ ಬರೋಬ್ಬರಿ 25 ಲಕ್ಷ ಪ್ರೈವೆಟ್ ಕಾರುಗಳು! ದೆಹಲಿ, ಮುಂಬೈಗೇ ಸೆಡ್ಡು ಹೊಡೆದ ಸಿಲಿಕಾನ್ ಸಿಟಿ – Kannada News | Highest Private Cars in India: Bengaluru Surpasses Delhi with 25 Lakh Cars

ಬೆಂಗಳೂರು, ಜುಲೈ 20: ದೇಶದ ಐಟಿ ಹಬ್ ಖಾಸಗಿ ಕಾರುಗಳ ಬಳಕೆಯಲ್ಲಿ ಹೊಸ ದಾಖಲೆ ಬರೆದಿದೆ. ಬೆಂಗಳೂರು ಬರೋಬ್ಬರಿ 25 ಲಕ್ಷ ಖಾಸಗಿ ಕಾರುಗಳನ್ನು (Private Cars) ಹೊಂದುವ ಮೂಲಕ ಇಡೀ ದೇಶದಲ್ಲೇ ಅತಿ ಹೆಚ್ಚು ವೈಯಕ್ತಿಕ ಕಾರುಗಳಿರುವ ನಗರವಾಗಿ ಹೊರಹೊಮ್ಮಿದೆ. ವಾಹನ ದಟ್ಟಣೆ ಮತ್ತು ಟ್ರಾಫಿಕ್ ಕಿರಿಕಿರಿಗೆ ಈಗಾಗಲೇ ಹೆಸರಾಗಿರುವ ಬೆಂಗಳೂರಿಗೆ ಈ ಅಂಕಿ-ಅಂಶ ಮತ್ತಷ್ಟು ಆತಂಕ ತಂದಿಟ್ಟಿದೆ. ದೆಹಲಿ, ಮುಂಬೈ ಹಿಂದಿಕ್ಕಿದ ಸಿಲಿಕಾನ್ ಸಿಟಿ ಸಾಮಾನ್ಯವಾಗಿ ದೇಶದಲ್ಲೇ ಅತಿ ಹೆಚ್ಚು ವಾಹನಗಳಿರುವ ನಗರ ಎಂದರೆ…

Read More

Peru Earthquake: ಪೆರುವಿನಲ್ಲಿ ಅವಳಿ ಭೂಕಂಪ: 6 ಮಂದಿ ಸಾವು, 30ಕ್ಕೂ ಹೆಚ್ಚು ಜನರಿಗೆ ಗಾಯ,ಐತಿಹಾಸಿಕ ಚರ್ಚ್ ನೆಲಸಮ – Kannada News | Peru Earthquake Kills 6: Historic Church Destroyed, Dozens Injured in Junin

ಲಿಮಾ, ಜುಲೈ 20: ದಕ್ಷಿಣ ಅಮೆರಿಕದ ಸುಂದರ ದೇಶ ಪೆರವಿನ ಮಧ್ಯ ಜುನಿನ್​ ಪರ್ವತ ಪ್ರದೇಶದಲ್ಲಿ ಅವಳಿ ಭೂಕಂಪ(Earthquake)ಗಳು ಸಂಭವಿಸಿದ್ದು, ಭಾರಿ ವಿನಾಶವನ್ನು ಸೃಷ್ಟಿಸಿವೆ. ಈ ದುರಂತದಲ್ಲಿ ಕನಿಷ್ಠ 6 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.30ಕ್ಕೂ ಹೆಚ್ಚು ಜನರು ತೀವ್ರವಾಗಿ ಗಾಯಗೊಂಡಿದ್ದಾರೆ. ನೂರಾರು ಮನೆಗಳು ಉರುಳಿವೆ, 200ಕ್ಕೂ ಹೆಚ್ಚು ಜನರು ನಿರಾಶ್ರಿತರಾಗಿದ್ದಾರೆ. 5.1 ಹಾಗೂ 3.7 ತೀವ್ರತೆಯ ಭೂಕಂಪ ಸಂಭವಿಸಿದೆ. ರಾಜಧಾನಿ ಲಿಮಾದಿಂದ ಪೂರ್ವಕ್ಕೆ ಸುಮಾರು 300 ಕಿಲೋಮೀಟರ್ ದೂರದಲ್ಲಿರುವ ಹುವಾನ್‌ಕಾಯೊ ಪ್ರಾಂತ್ಯದ ಸಿಕಾಯಾ ನಗರದ ಬಳಿ ಈ…

Read More

ಇಂದು ಮಧ್ಯಾಹ್ನ ದೇವೇಗೌಡರ ಪತ್ನಿ ಚೆನ್ನಮ್ಮ ಅಂತ್ಯಕ್ರಿಯೆ, 4 ಸಾವಿರ ಆಸನ ವ್ಯವಸ್ಥೆ: ಜೋಶಿ ಸೇರಿ ಪ್ರಮುಖ ಬಿಜೆಪಿ ನಾಯಕರು ಭಾಗಿ – Kannada News | HD Deve Gowda’s Wife Chennamma Funeral Today at Mavinakere; 4,000 Seats Arranged for Final Rites

ಹಾಸನ, ಜುಲೈ 20: ಮಾಜಿ ಪ್ರಧಾನಮಂತ್ರಿ ಹೆಚ್.ಡಿ.ದೇವೇಗೌಡರ ಪತ್ನಿ ಚೆನ್ನಮ್ಮ ವಿಧಿವಶರಾಗಿದ್ದು, ಅವರ ಅಂತಿಮ ಸಂಸ್ಕಾರವು ಇಂದು ಮಧ್ಯಾಹ್ನ ಮಾವಿನಕೆರೆ ಬೆಟ್ಟದ ತಪ್ಪಲಿನಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ನಡೆಯಲಿದೆ. ಅಂತ್ಯಕ್ರಿಯೆಗೆ ಸಿದ್ಧತೆಗಳು ಈಗಾಗಲೇ ಪೂರ್ಣಗೊಂಡಿದ್ದು, ಮಾವಿನಕೆರೆಯಲ್ಲಿ ಸುಮಾರು 4,000 ಆಸನಗಳ ವ್ಯವಸ್ಥೆ ಮಾಡಲಾಗಿದೆ. ಇದಕ್ಕಾಗಿ ಮೈಸೂರಿನಿಂದ ಕುರ್ಚಿಗಳನ್ನು ತರಿಸಲಾಗಿದ್ದು, ಶಾಮಿಯಾನ ಹಾಗೂ ವಿದ್ಯುತ್ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ಅಂತಿಮ ಸಂಸ್ಕಾರವು ಒಕ್ಕಲಿಗ ಸಂಪ್ರದಾಯದಂತೆ ನಡೆಯಲಿದ್ದು, ವಿವಿಧ ಭಾಗಗಳ ಜನಪ್ರತಿನಿಧಿಗಳು ಭಾಗಿಯಾಗುವ ಸಾಧ್ಯತೆ ಇದೆ. ಬೆಳಗ್ಗೆ 9:30ರವರೆಗೆ ಹೊಳೆನರಸೀಪುರದ ರೇವಣ್ಣ…

Read More

ನಿರ್ಮಲಾ ಸೀತಾರಾಮನ್ ಡೀಪ್‌ಫೇಕ್ ವಿಡಿಯೊ ನಂಬಿ 6.88 ಲಕ್ಷ ರೂ. ಕಳೆದುಕೊಂಡ ವ್ಯಕ್ತಿ! ನಕಲಿ ಹೂಡಿಕೆ ಜಾಹೀರಾತುಗಳ ಬಗ್ಗೆ ಎಚ್ಚರ – Kannada News | Bengaluru Retiree Loses Rs 6.88 Lakh After Falling for Deepfake Nirmala Sitharaman Investment Scam

ಬೆಂಗಳೂರು, ಜುಲೈ 20: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರ ಡೀಪ್‌ಫೇಕ್ (Deepfake) ವಿಡಿಯೊ ಬಳಸಿಕೊಂಡು ಬೆಂಗಳೂರಿನ ವ್ಯಕ್ತಿಯೊಬ್ಬರಿಗೆ 6.88 ಲಕ್ಷ ರೂ. ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ. ನಾರಾಯಣಪುರ ನಿವಾಸಿಯಾದ 66 ವರ್ಷದ ವ್ಯಕ್ತಿಗೆ, ಕೇಂದ್ರ ಸರ್ಕಾರ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಜಂಟಿಯಾಗಿ ಹೂಡಿಕೆ ಯೋಜನೆ ಆರಂಭಿಸಿರುವಂತೆ ತೋರಿಸುವ ವಿಡಿಯೊ ಫೇಸ್‌ಬುಕ್‌ನಲ್ಲಿ ಕಾಣಿಸಿಕೊಂಡಿತ್ತು. ಅದರಲ್ಲಿ ಹೂಡಿಕೆ ಮಾಡಿದರೆ ಕಡಿಮೆ ಅವಧಿಯಲ್ಲಿ ಉತ್ತಮ ಲಾಭ ಸಿಗುತ್ತದೆ ಎಂದು ನಿರ್ಮಲಾ ಸೀತಾರಾಮನ್…

Read More

ಇಂದಿನಿಂದ ಸಂಸತ್ ಮುಂಗಾರು ಅಧಿವೇಶನ ಆರಂಭ, ಮಸೂದೆಗಳ ಮಂಡನೆ,ನೀಟ್ ಪೇಪರ್ ಸೋರಿಕೆ ಕುರಿತು ಗದ್ದಲ ಸಾಧ್ಯತೆ – Kannada News | Monsoon Session 2026 Begins: NEET Scam, Major Bills and Political Tensions Flare Up

ನವದೆಹಲಿ, ಜುಲೈ 20: ಸಂಸತ್ ಮುಂಗಾರು ಅಧಿವೇಶನ(Parliament Monsoon Session) ಇಂದಿನಿಂದ ಪ್ರಾರಂಭವಾಗಲಿದೆ. ಆಗಸ್ಟ್ 13 ರವರೆಗೆ ಒಟ್ಟು 19 ದಿನಗಳ ಕಾಲ ನಡೆಯಲಿರುವ ಈ ಅಧಿವೇಶನದಲ್ಲಿ ಹಲವು ಪ್ರಮುಖ ಮಸೂದೆಗಳ ಮಂಡನೆ, ಕ್ಷೇತ್ರ ಪುನರ್ವಿಂಗಡಣೆ ಹಾಗೂ ದೇಶಾದ್ಯಂತ ಸದ್ದು ಮಾಡುತ್ತಿರುವ ವಿವಿಧ ವಿಷಯಗಳ ಕುರಿತು ಆಡಳಿತಾರೂಢ ಎನ್‌ಡಿಎ ಮತ್ತು ವಿರೋಧ ಪಕ್ಷಗಳ ನಡುವೆ ಭಾರಿ ವಾಗ್ವಾದಗಳು ನಡೆಯುವ ಸಾಧ್ಯತೆಯಿದೆ. ಅಧಿವೇಶನ ಶುರುವಾಗುವ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಅಧಿವೇಶನದ ಆರಂಭಕ್ಕೂ…

Read More