Headlines

Unique Frog Temple: ಭಾರತದ ಏಕೈಕ ‘ಕಪ್ಪೆ ದೇವಾಲಯ’; ಇಲ್ಲಿದೆ ಬಣ್ಣ ಬದಲಾಯಿಸುವ ಶಿವಲಿಂಗ! – Kannada News | Manduk Mandir Oel: India’s Unique Frog Temple and Color Changing Shiva Lingam

ಭಾರತದ ಏಕೈಕ ‘ಕಪ್ಪೆ ದೇವಾಲಯImage Credit source: bhartiyadharohar.com ಹಿಂದೂ ಧರ್ಮ ಮತ್ತು ಪುರಾಣಗಳಲ್ಲಿ ಪ್ರಾಣಿ-ಪಕ್ಷಿಗಳಿಗೆ ಅತ್ಯಂತ ಪವಿತ್ರವಾದ ಸ್ಥಾನವನ್ನು ನೀಡಲಾಗಿದೆ. ಗೋವು, ನಾಗರಹಾವು, ಆನೆ ಅಥವಾ ಸಿಂಹಗಳನ್ನು ದೈವಿಕ ರೂಪದಲ್ಲಿ ಪೂಜಿಸುವುದನ್ನು ನಾವು ಭಾರತದಾದ್ಯಂತ ಕಾಣಬಹುದು. ಆದರೆ, ಮಳೆ ಮತ್ತು ಸಮೃದ್ಧಿಯ ಸಂಕೇತವಾಗಿರುವ ಕಪ್ಪೆಯನ್ನೇ ಪ್ರಧಾನವಾಗಿಟ್ಟುಕೊಂಡು ನಿರ್ಮಿಸಲಾದ ದೇವಾಲಯದ ಬಗ್ಗೆ ನೀವು ಕೇಳಿದ್ದೀರಾ? ಉತ್ತರ ಪ್ರದೇಶದ ಲಖಿಂಪುರ್ ಖೇರಿ ಜಿಲ್ಲೆಯ ‘ಓಯೆಲ್’ (Oel Town) ಎಂಬ ಸಣ್ಣ ಪಟ್ಟಣದಲ್ಲಿ ಇಂತಹದ್ದೊಂದು ಅಪರೂಪದ ಶಿವ ದೇವಾಲಯವಿದೆ. ಇಡೀ…

Read More

ಬೆಂಗಳೂರಿನ ಕಾಫಿ ಪ್ರಿಯರೇ ಎಚ್ಚರ! ಅತಿಯಾದ ಕೆಫಿನ್ ತರುತ್ತಿದೆ ನಿಮ್ಮ ಆರೋಗ್ಯಕ್ಕೆ ಕಂಟಕ – Kannada News | Bengaluru Coffee Lovers: Hidden Health Risks and Safe Caffeine Consumption Limits

ಬೆಂಗಳೂರು, ಜುಲೈ 19: ನಗರದಲ್ಲಿ ಕಾಫಿ ಪ್ರಿಯರಿಗೇನು (Coffee Lovers) ಕಡಿಮೆಯಿಲ್ಲ. ಪ್ರತಿ ಗಲ್ಲಿ-ಗಲ್ಲಿಯಲ್ಲಿಯೂ ತರಹೇವಾರಿ ಕಾಫಿ ಶಾಪ್‌ಗಳು ತಲೆ ಎತ್ತುತ್ತಿದ್ದು, ಯುವ ಪೀಳಿಗೆ ಹಾಗೂ ಐಟಿ ಉದ್ಯೋಗಿಗಳಿಗೆ ಇದು ನೆಚ್ಚಿನ ತಾಣವಾಗಿದೆ. ಆದರೆ ಇದೇ ಕಾಫಿ ಜನರ ಆರೋಗ್ಯಕ್ಕೆ ಕುತ್ತು ತರುತ್ತಿದೆ ಎಂಬ ಕಹಿ ಸತ್ಯ ಬಯಲಾಗಿದ್ದು, ಕಾಫಿ ಪ್ರಿಯರಲ್ಲಿ ಭಾರೀ ಆತಂಕ ಮೂಡಿಸಿದೆ. ನಗರದ ಆಸ್ಪತ್ರೆಗಳಲ್ಲಿ ಓಪಿಡಿಗೆ ಬರುವ 15-20 ರೋಗಿಗಳು ಅತಿಯಾದ ಕಾಫಿ ಸೇವನೆಯಿಂದ ಆರೋಗ್ಯ ಸಮಸ್ಯೆಯಿಂದ ಬಳಲುವವರೇ ಆಗಿದ್ದಾರೆ ಎಂದು ವರದಿ…

Read More

ಅಜ್ಜಿ ಚೆನ್ನಮ್ಮ ನಿಧನದ ಸುದ್ದಿ ಕೇಳೆ ಜೈಲಲ್ಲೇ ಕಣ್ಣೀರಿಟ್ಟ ಪ್ರಜ್ವಲ್​​ ರೇವಣ್ಣ: ಅಂತ್ಯಕ್ರಿಯೆಯಲ್ಲಿ ಭಾಗಿಗೆ ಅವಕಾಶ ಕೋರಿ ಪೆರೋಲ್ ಅರ್ಜಿ ಸಲ್ಲಿಕೆ – Kannada News | Prajwal Revanna Cries in Jail Over Grandmother Chennamma’s Death, Files Parole Application to Attend Funeral

ಅಜ್ಜಿ ಚೆನ್ನಮ್ಮ ನಿಧನದ ಸುದ್ದಿ ಕೇಳೆ ಜೈಲಲ್ಲೇ ಕಣ್ಣೀರಿಟ್ಟ ಪ್ರಜ್ವಲ್​​ ರೇವಣ್ಣImage Credit source: PTI ಬೆಂಗಳೂರು, ಜುಲೈ 19: ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚೆನ್ನಮ್ಮ ಅವರ ನಿಧದ ಹಿನ್ನೆಲೆ ಕುಟುಂಬಸ್ಥರಲ್ಲಿ ಶೋಕ ಮಡುಗಟ್ಟಿದೆ. ಈ ನಡುವೆ ಅಜ್ಜಿ ಮೃತಪಟ್ಟಿರುವ ಸುದ್ದಿ ಕೇಳಿ ಜೀವಾವಧಿ ಶಿಕ್ಷೆಗೆ ಗುರಿಯಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಪ್ರಜ್ವಲ್ ರೇವಣ್ಣ ಕೂಡ ಕಣ್ಣೀರು ಹಾಕಿದ್ದಾರೆ. ಅಜ್ಜಿ ಚೆನ್ನಮ್ಮರ ಪ್ರೀತಿಯ ಮೊಮ್ಮಗನಾಗಿದ್ದರೂ ಆಕೆಯ ಕೊನೆ ಕಾಲದಲ್ಲಿ ಕನಿಷ್ಠ ಅವರ ಮುಖವನ್ನು ನೋಡಲೂ ಸಾಧ್ಯವಾಗದ…

Read More

ರೋಹಿತ್​ ಬಗ್ಗೆ ಕಳವಳವಿಲ್ಲ, ವಿಶೇಷ ರಣರಂತ್ರ: ಮೋರ್ಕೆಲ್ ಹೇಳಿದ್ದೇನು? – Kannada News | Morkel Backs Rohit as India Faces Lord’s Slope Challenge

ಭಾರತ ಮತ್ತು ಇಂಗ್ಲೆಂಡ್ ನಡುವಣ ಏಕದಿನ ಸರಣಿಯ ಕೊನೆಯ ಪಂದ್ಯಕ್ಕೆ ಐತಿಹಾಸಿಕ ಲಾರ್ಡ್ಸ್ ಮೈದಾನ ಸಜ್ಜಾಗಿದೆ. ಈ ಮಹತ್ವದ ಪಂದ್ಯಕ್ಕೂ ಮುನ್ನ ಭಾರತ ತಂಡದ ಬೌಲಿಂಗ್ ಕೋಚ್ ಮೋರ್ನೆ ಮೋರ್ಕೆಲ್ ಮಾಧ್ಯಮಗಳೊಂದಿಗೆ ಮಾತನಾಡಿ, ತಂಡದ ಪ್ರಸ್ತುತ ಸ್ಥಿತಿ ಮತ್ತು ತಂತ್ರಗಳ ಬಗ್ಗೆ ಮುಕ್ತವಾಗಿ ಚರ್ಚಿಸಿದ್ದಾರೆ. ವಿಶೇಷವಾಗಿ, ಇತ್ತೀಚಿನ ಪಂದ್ಯಗಳಲ್ಲಿ ರನ್ ಗಳಿಸಲು ಪರದಾಡುತ್ತಿರುವ ನಾಯಕ ರೋಹಿತ್ ಶರ್ಮಾ ಅವರ ಫಾರ್ಮ್ ಕುರಿತು ಕೇಳಲಾದ ಪ್ರಶ್ನೆಗೆ ಮೋರ್ಕೆಲ್ ಅತ್ಯಂತ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. ರೋಹಿತ್ ಶರ್ಮಾಗೆ ಬೆಂಬಲ: ಕಳೆದ ಕೆಲ…

Read More

Bengaluru Air Quality: ವರುಣನ ಕೃಪೆಯಿಂದ ಬೆಂಗಳೂರಿಗರಿಗೆ ಸಿಕ್ತು ಬಿಗ್ ರಿಲೀಫ್: ರಾಜ್ಯದ ಪ್ರಮುಖ ನಗರಗಳ ಇಂದಿನ AQI ಹೇಗಿದೆ ಗೊತ್ತಾ? – Kannada News | Bengaluru AQI Update: Air Quality Improves in Karnataka Cities due to Rains

ಬೆಂಗಳೂರು, ಜುಲೈ 19: ಕರ್ನಾಟಕದಲ್ಲಿ ಮುಂಗಾರು ಮಳೆಯ ಆರ್ಭಟ ಮುಂದುವರಿದಿದ್ದು, ಇದರ ಸಕಾರಾತ್ಮಕ ಪರಿಣಾಮ ರಾಜ್ಯದ ವಾಯುಗುಣಮಟ್ಟದ ಮೇಲೂ ಬೀರಿದೆ. ಜುಲೈ 19 ರ ಇಂದಿನ ವರದಿಗಳ ಪ್ರಕಾರ, ರಾಜಧಾನಿ ಬೆಂಗಳೂರು ಸೇರಿದಂತೆ ಕರ್ನಾಟಕದ ಬಹುತೇಕ ಪ್ರಮುಖ ನಗರಗಳಲ್ಲಿ ವಾಯು ಗುಣಮಟ್ಟ ಸೂಚ್ಯಂಕ (AQI) ಅತ್ಯಂತ ಉತ್ತಮ ಹಾಗೂ ತೃಪ್ತಿಕರ ಮಟ್ಟದಲ್ಲಿದೆ. ಮಳೆ ಮತ್ತು ಬಲವಾದ ಗಾಳಿಯ ಕಾರಣದಿಂದಾಗಿ ವಾತಾವರಣದಲ್ಲಿದ್ದ ಧೂಳಿನ ಕಣಗಳು ನಿಯಂತ್ರಣಕ್ಕೆ ಬಂದಿದ್ದು, ಕರಾವಳಿ ಹಾಗೂ ಒಳನಾಡಿನ ಜನತೆ ಶುದ್ಧ ಗಾಳಿಯನ್ನು ಉಸಿರಾಡುತ್ತಿದ್ದಾರೆ. ಬೆಂಗಳೂರಿನಲ್ಲಿ…

Read More

ಇಂಗ್ಲೆಂಡ್ vs ಫ್ರಾನ್ಸ್: ಒಂದೇ ಪಂದ್ಯದಲ್ಲಿ 10 ಗೋಲು ದಾಖಲು! – Kannada News | England Edge France 6 4 In 10 Goal World Cup Epic

ಫಿಫಾ ವಿಶ್ವಕಪ್‌ನ ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ ತಂಡವು ಫ್ರಾನ್ಸ್ ವಿರುದ್ಧ 6-4 ಗೋಲುಗಳ ಅಂತರದಿಂದ ಐತಿಹಾಸಿಕ ಜಯ ಸಾಧಿಸಿದೆ. ಮಿಯಾಮಿ ಸ್ಟೇಡಿಯಂನಲ್ಲಿ ಶನಿವಾರ (ಜುಲೈ 18, 2026) ನಡೆದ ಈ ಪಂದ್ಯವು ಇತ್ತೀಚಿನ ದಶಕಗಳಲ್ಲೇ ಅತ್ಯಂತ ರೋಮಾಂಚಕ ಮತ್ತು ಅತಿ ಹೆಚ್ಚು ಗೋಲುಗಳು ದಾಖಲಾದ ಪಂದ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇಂಗ್ಲೆಂಡ್ ಮಿಂಚಿನಾಟ: ಥಾಮಸ್ ಟುಚೆಲ್ ಅವರ ಮಾರ್ಗದರ್ಶನದಲ್ಲಿ ಕಣಕ್ಕಿಳಿದ ಇಂಗ್ಲೆಂಡ್ ಪಂದ್ಯದ ಮೊದಲಾರ್ಧದಲ್ಲೇ 4-0 ಮುನ್ನಡೆ ಸಾಧಿಸಿತು. ಬುಕಾಯೊ ಸಾಕಾ ಅವರ ಭರ್ಜರಿ…

Read More

ಬೆಂಗಳೂರಿಗರೇ ಗಮನಿಸಿ: ಇಂದಿನಿಂದ ಮೂರು ದಿನ ನಗರದ ವಿವಿಧೆಡೆ ವಿದ್ಯುತ್​​ ವ್ಯತ್ಯಯ; ಇಲ್ಲಿದೆ ಮಾಹಿತಿ – Kannada News | Bengaluru Power Cut Alert: 3 Day Outage in Several Areas Starting Today Due to BESCOM, KPTCL Maintenance

ಬೆಂಗಳೂರು, ಜುಲೈ 19: ಬೆಸ್ಕಾಂ (BESCOM) ಹಾಗೂ ಕೆಪಿಟಿಸಿಎಲ್ (KPTCL) ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಭಾನುವಾರ, ಸೋಮವಾರ ಮತ್ತು ಮಂಗಳವಾರ ಬೆಂಗಳೂರಿನ (Bengaluru) ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಹೀಗಾಗಿ ಸಾರ್ವಜನಿಕರು ಅಗತ್ಯ ಮುನ್ನೆಚ್ಚರಿಕೆ ವಹಿಸಿಕೊಳ್ಳುವಂತೆ ಪ್ರಕಟಣೆ ಮೂಲಕ ಅಧಿಕಾರಿಗಳು ಮನವಿ ಮಾಡಿದ್ದಾರೆ ಭಾನುವಾರ ಎಲ್ಲೆಲ್ಲಿ ವಿದ್ಯುತ್​​ ವ್ಯತ್ಯಯ? ಸೂರ್ಯ ಸಿಟಿ ಫೇಸ್-1, ಮರಸೂರು, ನಾಗನಾಯಕನಹಳ್ಳಿ, ಇಗ್ಗಲೂರು, ಸರ್ಜಾಪುರ, ಇಟ್ಟಗನೂರು, ಕಾಡ ಅಗ್ರಹಾರ, ಸೋಂಪುರ ಗೇಟ್, ಬಿ. ಹೊಸಹಳ್ಳಿ, ದಾಸನಪುರ, ಕಂಬ್ಳಿಪುರ, ಹರೋಹಳ್ಳಿ, ಬೊಮ್ಮಸಂದ್ರ, ಬೊಮ್ಮಸಂದ್ರ…

Read More

‘ಧುರಂಧರ್’ ನಿರ್ದೇಶಕನ ಪತ್ನಿ ಯಾಮಿ ಗೌತಮ್​ಗೆ ರಾಷ್ಟ್ರ ಪ್ರಶಸ್ತಿ: ಖುಷಿ ಹಂಚಿಕೊಂಡ ನಟಿ – Kannada News | Aditya Dhar wife Yami Gautam reaction after winning Best Actress 72nd National Film Awards for Article 370 Movie

ಭಾರತೀಯ ಚಿತ್ರರಂಗದ ಅತ್ಯುನ್ನತ ಗೌರವ ಎಂದೇ ಪರಿಗಣಿಸಲಾಗುವ 72ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿಗಳು (72nd National Film Awards) ಜುಲೈ 18ರಂದು ಪ್ರಕಟಗೊಂಡಿದ್ದು, ಬಾಲಿವುಡ್‌ನ ಯಶಸ್ವಿ ಸಿನಿಮಾ ‘ಆರ್ಟಿಕಲ್ 370’ ಅತ್ಯುತ್ತಮ ಸಿನಿಮಾ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಇನ್ನು ಈ ಚಿತ್ರದಲ್ಲಿನ ನಟನೆಗಾಗಿ ನಟಿ ಯಾಮಿ ಗೌತಮ್  ‘ಅತ್ಯುತ್ತಮ ನಟಿ’ (Best Actor – Female) ರಾಷ್ಟ್ರ ಪ್ರಶಸ್ತಿಗೆ ಭಾಜನರಾಗಿದ್ದಾರೆ. ತಮ್ಮ ಬದುಕಿನ ಈ ಬಹುದೊಡ್ಡ ಸಾಧನೆಯ ಕುರಿತು ನಟಿ ಯಾಮಿ ಗೌತಮ್ (Yami Gautam) ‘ಎಕ್ಸ್’ (ಟ್ವಿಟರ್)…

Read More

‘Nirvastra Vrat’: ವರ್ಷಕ್ಕೊಮ್ಮೆ ಬಟ್ಟೆಯಿಲ್ಲದೆ ‘ನಿರ್ವಾಸ್ತ್ರ ವ್ರತ’ ಆಚರಣೆ ಮಾಡುವ ಈ ಗ್ರಾಮದ ಬಗ್ಗೆ ಗೊತ್ತಾ? – Kannada News | Himachal Pini Village’s Unique ‘Nirvastra Vrat’: Shravana Month Tradition and Legend

ಭಾರತದ ವಿಚಿತ್ರ ಸಂಪ್ರದಾಯImage Credit source: hive.blog ವಿವಿಧ ಸಂಸ್ಕೃತಿಗಳು ಮತ್ತು ಅಪರೂಪದ ಪದ್ಧತಿಗಳಿಂದ ಸಮೃದ್ಧವಾಗಿರುವ ಭಾರತದಲ್ಲಿ, ಪ್ರತಿಯೊಂದು ಹಳ್ಳಿ ಮತ್ತು ಪ್ರದೇಶವು ತನ್ನದೇ ಆದ ವಿಶಿಷ್ಟತೆಯನ್ನು ಹೊಂದಿದೆ. ಕೆಲವು ಪದ್ಧತಿಗಳು ನಮಗೆ ಅದ್ಭುತವೆನಿಸಿದರೆ, ಇನ್ನು ಕೆಲವು ಆಶ್ಚರ್ಯ ಮತ್ತು ಭಯವನ್ನು ಉಂಟುಮಾಡುತ್ತವೆ. ಅಂತಹದ್ದೇ ಒಂದು ವಿಚಿತ್ರ ಮತ್ತು ನಂಬಲಸಾಧ್ಯವಾದ ಪದ್ಧತಿ ಕಂಡುಬರುವುದು ಹಿಮಾಚಲ ಪ್ರದೇಶದ ಮಣಿಕರ್ಣ ಕಣಿವೆಯಲ್ಲಿರುವ ‘ಪಿನಿ’ (Pini) ಎಂಬ ಗ್ರಾಮದಲ್ಲಿ. ಇಲ್ಲಿನ ಮಹಿಳೆಯರು ಶತಮಾನಗಳಿಂದ ‘ನಿರ್ವಾಸ್ತ್ರ ವ್ರತ’ ಎಂಬ ವಿಶಿಷ್ಟ ಉಪವಾಸವನ್ನು ಆಚರಿಸಿಕೊಂಡು…

Read More

ನಿಂತಿದ್ದ ಆಟೋಗೆ ಬಿಎಂಟಿಸಿ ಎಲೆಕ್ಟ್ರಿಕ್​​ ಬಸ್​​ ಡಿಕ್ಕಿ: ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಚಾಲಕ – Kannada News | Bengaluru: Auto Driver Dies After BMTC Electric Bus Rams Auto Near KR Circle

ನಿಂತಿದ್ದ ಆಟೋಗೆ ಬಿಎಂಟಿಸಿ ಎಲೆಕ್ಟ್ರಿಕ್​​ ಬಸ್​​ ಡಿಕ್ಕಿImage Credit source: Tv9 Kannada ಬೆಂಗಳೂರು, ಜುಲೈ 19: ಸಿಗ್ನಲ್​ನಲ್ಲಿ ನಿಂತಿದ್ದ ಆಟೋಗೆ ಅತಿ ವೇಗವಾಗಿ ಬಂದ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಡಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡಿದ್ದ ಆಟೋ ಚಾಲಕ ಚಿಕಿತ್ಸೆ ಫಲಿಸದೆ ಮೃತಪಟ್ಟಿರುವ ಘಟನೆ ಬೆಂಗಳೂರಿನಲ್ಲಿ (Bengaluru) ನಡೆದಿದೆ. ಸಿಂಗಯ್ಯನಪಾಳ್ಯ ನಿವಾಸಿ ಕೃಷ್ಣಮೂರ್ತಿ(60) ಮೃತ ದುರ್ದೈವಿಯಾಗಿದ್ದು, ಕೆ.ಆರ್.ಸರ್ಕಲ್​​ನಲ್ಲಿ ಬಸ್​​ ಆಟೋಗೆ ಗುದ್ದಿತ್ತು. ಕೂಡಲೇ ಗಾಯಾಳು ಆಟೋ ಚಾಲಕನನ್ನು ಸೇಂಟ್ ಮಾರ್ಥಾಸ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಪ್ರಯೋಜನವಾಗಿಲ್ಲ. ಬ್ರೇಕ್​​…

Read More