Bengaluru Air Quality: ವರುಣನ ಕೃಪೆಯಿಂದ ಬೆಂಗಳೂರಿಗರಿಗೆ ಸಿಕ್ತು ಬಿಗ್ ರಿಲೀಫ್: ರಾಜ್ಯದ ಪ್ರಮುಖ ನಗರಗಳ ಇಂದಿನ AQI ಹೇಗಿದೆ ಗೊತ್ತಾ? – Kannada News | Bengaluru AQI Update: Air Quality Improves in Karnataka Cities due to Rains

ಬೆಂಗಳೂರು, ಜುಲೈ 19: ಕರ್ನಾಟಕದಲ್ಲಿ ಮುಂಗಾರು ಮಳೆಯ ಆರ್ಭಟ ಮುಂದುವರಿದಿದ್ದು, ಇದರ ಸಕಾರಾತ್ಮಕ ಪರಿಣಾಮ ರಾಜ್ಯದ ವಾಯುಗುಣಮಟ್ಟದ ಮೇಲೂ ಬೀರಿದೆ. ಜುಲೈ 19 ರ ಇಂದಿನ ವರದಿಗಳ ಪ್ರಕಾರ, ರಾಜಧಾನಿ ಬೆಂಗಳೂರು ಸೇರಿದಂತೆ ಕರ್ನಾಟಕದ ಬಹುತೇಕ ಪ್ರಮುಖ ನಗರಗಳಲ್ಲಿ ವಾಯು ಗುಣಮಟ್ಟ ಸೂಚ್ಯಂಕ (AQI) ಅತ್ಯಂತ ಉತ್ತಮ ಹಾಗೂ ತೃಪ್ತಿಕರ ಮಟ್ಟದಲ್ಲಿದೆ. ಮಳೆ ಮತ್ತು ಬಲವಾದ ಗಾಳಿಯ ಕಾರಣದಿಂದಾಗಿ ವಾತಾವರಣದಲ್ಲಿದ್ದ ಧೂಳಿನ ಕಣಗಳು ನಿಯಂತ್ರಣಕ್ಕೆ ಬಂದಿದ್ದು, ಕರಾವಳಿ ಹಾಗೂ ಒಳನಾಡಿನ ಜನತೆ ಶುದ್ಧ ಗಾಳಿಯನ್ನು ಉಸಿರಾಡುತ್ತಿದ್ದಾರೆ.

ಬೆಂಗಳೂರಿನಲ್ಲಿ ‘ಉತ್ತಮ’ ಗಾಳಿ ಗುಣಮಟ್ಟ

ಐಟಿ ಸಿಟಿ ಬೆಂಗಳೂರಿನಲ್ಲಿ ಇತ್ತೀಚಿನ ತಿಂಗಳುಗಳಲ್ಲಿ ವಾಹನ ದಟ್ಟಣೆ ಹಾಗೂ ಕಾಮಗಾರಿಗಳಿಂದಾಗಿ ವಾಯು ಮಾಲಿನ್ಯ ಕೊಂಚ ಏರಿಕೆಯಾಗಿತ್ತು. ಆದರೆ ಇಂದಿನ (ಜುಲೈ 19) ಅಧಿಕೃತ ಹವಾಮಾನ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿಯ ದತ್ತಾಂಶಗಳ ಪ್ರಕಾರ, ಬೆಂಗಳೂರಿನ ಸರಾಸರಿ AQI ಕೇವಲ 50 ರ ಆಸುಪಾಸಿನಲ್ಲಿದೆ. ಇದು ‘ಅತ್ಯಂತ ಉತ್ತಮ’ (Good) ವಲಯಕ್ಕೆ ಸೇರುತ್ತದೆ.

ಮೆಜೆಸ್ಟಿಕ್ ಮತ್ತು ಕಾರ್ಪೊರೇಷನ್ ಸುತ್ತಮುತ್ತ ವಾಯುಗುಣಮಟ್ಟ ಸೂಚ್ಯಂಕ 48 ರಿಂದ 52ರವೆಗಿದ್ದು, ತೃಪ್ತಿಕರ ಮಟ್ಟದಲ್ಲಿದೆ. ಜಯನಗರ ಮತ್ತು ಬಸವನಗುಡಿಯಲ್ಲಿ 45 AQI ಇದ್ದು, ಉತ್ತಮ ವಾತಾವರಣವಿದೆ. ವೈಟ್‌ಫೀಲ್ಡ್ ಹಾಗೂ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಏಕ್ಯೂಐ 55 ಇದ್ದು, ಸಾಧಾರಣ ಮಟ್ಟದಲ್ಲಿದೆ.

ಮುಖ್ಯವಾಗಿ ವಾತಾವರಣದಲ್ಲಿ ಹಾನಿಕಾರಕ ಸೂಕ್ಷ್ಮ ಕಣಗಳಾದ PM 2.5 ಮತ್ತು PM 10 ಮಟ್ಟವು ತೀರಾ ಕಡಿಮೆ ದಾಖಲಾಗಿದ್ದು, ಶ್ವಾಸಕೋಶದ ಸಮಸ್ಯೆ ಇರುವವರು ಹಾಗೂ ಹಿರಿಯ ನಾಗರಿಕರು ಯಾವುದೇ ಆತಂಕವಿಲ್ಲದೆ ಹೊರಾಂಗಣ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬಹುದು ಎಂದು ತಜ್ಞರು ತಿಳಿಸಿದ್ದಾರೆ.

ರಾಜ್ಯದ ಇತರ ನಗರಗಳ ಇಂದಿನ AQI ಸ್ಥಿತಿಗತಿ ಹೇಗಿದೆ?

ರಾಜಧಾನಿ ಮಾತ್ರವಲ್ಲದೆ ರಾಜ್ಯದ ಇತರೆ ಪ್ರಮುಖ ನಗರಗಳಲ್ಲೂ ಮುಂಗಾರು ಮಳೆಯ ಸಿಂಚನದಿಂದಾಗಿ ವಾಯು ಮಾಲಿನ್ಯ ಗಣನೀಯವಾಗಿ ಕುಸಿದಿದೆ. ಕರಾವಳಿ ಮತ್ತು ಮಲೆನಾಡು ಭಾಗದ ನಗರಗಳು ಅತ್ಯಂತ ಸ್ವಚ್ಛ ಗಾಳಿಯನ್ನು ಹೊಂದಿವೆ.

  • ಚಿಕ್ಕಮಗಳೂರು ಮತ್ತು ಮಡಿಕೇರಿ: 35 – 38 AQI (ರಾಜ್ಯದಲ್ಲೇ ಅತ್ಯಂತ ಸ್ವಚ್ಛ ಗಾಳಿ)
  • ಮಂಗಳೂರು ಮತ್ತು ಉಡುಪಿ: 42 – 47 AQI (ಉತ್ತಮ ವಲಯ)
  • ಮೈಸೂರು: 46 AQI
  • ಹುಬ್ಬಳ್ಳಿ-ಧಾರವಾಡ ಮತ್ತು ಬೆಳಗಾವಿ: 45 – 50 AQI
  • ಕಲಬುರಗಿ ಮತ್ತು ಬಳ್ಳಾರಿ: 58 – 65 AQI (ಸಾಧಾರಣ ಮಟ್ಟ)

ಒಟ್ಟಾರೆಯಾಗಿ ಹೇಳುವುದಾದರೆ, ಇಂದಿನ ದಿನ ಇಡೀ ಕರ್ನಾಟಕದ ಜನತೆಗೆ ವಾಯು ಮಾಲಿನ್ಯದ ದೃಷ್ಟಿಯಿಂದ ಅತ್ಯಂತ ಆರೋಗ್ಯಕರ ದಿನವಾಗಿದೆ. ಮುಂದಿನ ಕೆಲವು ದಿನಗಳ ಕಾಲ ಮಳೆ ಮುಂದುವರಿಯಲಿರುವುದರಿಂದ ಗಾಳಿಯ ಗುಣಮಟ್ಟ ಇದೇ ರೀತಿ ಉತ್ತಮವಾಗಿರಲಿದೆ ಎಂದು ಪರಿಸರ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಇಂಗ್ಲೆಂಡ್ vs ಫ್ರಾನ್ಸ್: ಒಂದೇ ಪಂದ್ಯದಲ್ಲಿ 10 ಗೋಲು ದಾಖಲು! – Kannada News | England Edge France 6 4 In 10 Goal World Cup Epic

ಫಿಫಾ ವಿಶ್ವಕಪ್‌ನ ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ ತಂಡವು ಫ್ರಾನ್ಸ್ ವಿರುದ್ಧ 6-4 ಗೋಲುಗಳ ಅಂತರದಿಂದ ಐತಿಹಾಸಿಕ ಜಯ ಸಾಧಿಸಿದೆ. ಮಿಯಾಮಿ ಸ್ಟೇಡಿಯಂನಲ್ಲಿ ಶನಿವಾರ (ಜುಲೈ 18, 2026) ನಡೆದ ಈ ಪಂದ್ಯವು ಇತ್ತೀಚಿನ ದಶಕಗಳಲ್ಲೇ ಅತ್ಯಂತ ರೋಮಾಂಚಕ ಮತ್ತು ಅತಿ ಹೆಚ್ಚು ಗೋಲುಗಳು ದಾಖಲಾದ ಪಂದ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಇಂಗ್ಲೆಂಡ್ ಮಿಂಚಿನಾಟ:

ಥಾಮಸ್ ಟುಚೆಲ್ ಅವರ ಮಾರ್ಗದರ್ಶನದಲ್ಲಿ ಕಣಕ್ಕಿಳಿದ ಇಂಗ್ಲೆಂಡ್ ಪಂದ್ಯದ ಮೊದಲಾರ್ಧದಲ್ಲೇ 4-0 ಮುನ್ನಡೆ ಸಾಧಿಸಿತು. ಬುಕಾಯೊ ಸಾಕಾ ಅವರ ಭರ್ಜರಿ ಎರಡು ಗೋಲುಗಳು, ಡೆಕ್ಲಾನ್ ರೈಸ್ ಮತ್ತು ಎಜ್ರಿ ಕೋನ್ಸಾ ಅವರ ತಲಾ ಒಂದು ಗೋಲು ಇಂಗ್ಲೆಂಡ್‌ಗೆ ಬೃಹತ್ ಮುನ್ನಡೆ ತಂದುಕೊಟ್ಟವು.

ಫ್ರಾನ್ಸ್ ಅಧ್ಬುತ ಕಂಬ್ಯಾಕ್:

ದ್ವಿತೀಯಾರ್ಧದಲ್ಲಿ ಫ್ರಾನ್ಸ್ ಕೋಚ್ ಡಿಡಿಯರ್ ಡೆಶಾಂಪ್ಸ್ ನಾಲ್ಕು ಮಹತ್ವದ ಆಟಗಾರರ ಬದಲಾವಣೆ ಮಾಡಿದರು. ಇದು ಪಂದ್ಯದ ಚಿತ್ರಣವನ್ನೇ ಬದಲಿಸಿತು. ಫ್ರಾನ್ಸ್ ಪರ ಕಿಲಿಯನ್ ಎಂಬಾಪೆ ಎರಡು ಗೋಲು ಬಾರಿಸಿದರು. ಇದರ ನಡುವೆ ಇಂಗ್ಲೆಂಡ್ ಆಟಗಾರ ಬ್ರಾಡ್ಲಿ ಬಾರ್ಕೋಲಾ ಸೆಲ್ಫ್ ಗೋಲು ದಾಖಲಾಯಿತು. ಪರಿಣಾಮ ಉಭಯ ತಂಡಗಳ ಅಂತರ 4-3 ಕ್ಕೆ ಬಂದು ನಿಂತಿತು.

ಸಾಕಾ ಹ್ಯಾಟ್ರಿಕ್: ಜೂಡ್ ಗೆಲುವಿನ ಗೋಲು!

ಪಂದ್ಯದ 86ನೇ ನಿಮಿಷದಲ್ಲಿ ಬುಕಾಯೊ ಸಾಕಾ ಪೆನಾಲ್ಟಿಯನ್ನು ಗೋಲಾಗಿ ಪರಿವರ್ತಿಸಿ ತಮ್ಮ ಹ್ಯಾಟ್ರಿಕ್ ಪೂರ್ಣಗೊಳಿಸಿದರು. ಆ ಮೂಲಕ ವಿಶ್ವಕಪ್‌ನಲ್ಲಿ ಹ್ಯಾಟ್ರಿಕ್ ಗಳಿಸಿದ ನಾಲ್ಕನೇ ಇಂಗ್ಲೆಂಡ್ ಆಟಗಾರ ಎನಿಸಿಕೊಂಡರು.

ಕೊನೆಯ ಕ್ಷಣದಲ್ಲಿ ಫ್ರಾನ್ಸ್‌ನ ಉಸ್ಮಾನೆ ಡೆಂಬೆಲೆ ಮತ್ತೊಂದು ಗೋಲು ಹೊಡೆದರೂ, ಜೂಡ್ ಬೆಲ್ಲಿಂಗ್‌ಹ್ಯಾಮ್ ಇಂಜುರಿ ಟೈಮ್‌ನಲ್ಲಿ ಅದ್ಭುತ ಸೋಲೋ ರನ್ ಮೂಲಕ ಗೋಲು ಬಾರಿಸಿ 6-4 ಗೋಲುಗಳ ಅಂತರದಿಂದ ಇಂಗ್ಲೆಂಡ್‌ ತಂಡದ ಗೆಲುವನ್ನು ಖಚಿತಪಡಿಸಿದರು.

ಹೊಸ ದಾಖಲೆಗಳು ನಿರ್ಣಾಣ:

  • ಕಿಲಿಯನ್ ಎಂಬಾಪೆ ಆಲ್-ಟೈಮ್ ರೆಕಾರ್ಡ್: ಫ್ರಾನ್ಸ್ ಸೋತರೂ, ನಾಯಕ ಕಿಲಿಯನ್ ಎಂಬಾಪೆ ಎರಡು ಭರ್ಜರಿ ಗೋಲು ಗಳಿಸುವ ಮೂಲಕ ಲಿಯೋನೆಲ್ ಮೆಸ್ಸಿ ಅವರ ದಾಖಲೆಯನ್ನು ಮುರಿದರು. ಎಂಬಾಪೆ ಈಗ ವಿಶ್ವಕಪ್ ಇತಿಹಾಸದಲ್ಲೇ ಅತಿ ಹೆಚ್ಚು ಗೋಲು (22 ಗೋಲುಗಳು) ಗಳಿಸಿದ ದಾಖಲೆ ಬರೆದಿದ್ದಾರೆ.
  • ಮೈಕೇಲ್ ಒಲಿಸೆ ಹೊಸ ದಾಖಲೆ: ಎಂಬಾಪೆ ಅವರ ಎರಡು ಗೋಲುಗಳಿಗೆ ಅಸಿಸ್ಟ್ ಮಾಡಿದ ಮೈಕೇಲ್ ಒಲಿಸೆ, ಈ ವಿಶ್ವಕಪ್‌ನಲ್ಲಿ ಒಟ್ಟು 7 ಅಸಿಸ್ಟ್‌ಗಳನ್ನು ಮಾಡಿದಂತಾಗಿದೆ. ಈ ಮೂಲಕ 1970ರಲ್ಲಿ ಪೀಲೆ ಬರೆದಿದ್ದ “ಒಂದೇ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಅಸಿಸ್ಟ್” ಮಾಡಿದ ದಾಖಲೆಯನ್ನು ಅವರು ಮುರಿದರು.

ಇದನ್ನೂ ಓದಿ: ಫಿಫಾ ವಿಶ್ವಕಪ್ ಫೈನಲ್ ಪಂದ್ಯದ ಟಿಕೆಟ್ ದರ ಕೇಳಿದ್ರೆ ದಂಗಾಗುವುದು ಗ್ಯಾರೆಂಟಿ!

ಈ ಗೆಲುವಿನೊಂದಿಗೆ ಇಂಗ್ಲೆಂಡ್ ತಂಡವು ವಿದೇಶಿ ನೆಲದಲ್ಲಿ ತನ್ನ ಅತ್ಯುತ್ತಮ ವಿಶ್ವಕಪ್ ಪ್ರದರ್ಶನವನ್ನು ದಾಖಲಿಸಿ ಕಂಚಿನ ಪದಕಕ್ಕೆ ಮುತ್ತಿಕ್ಕಿದೆ. ಫ್ರಾನ್ಸ್ ಕೋಚ್ ಆಗಿ ಡಿಡಿಯರ್ ಡೆಶಾಂಪ್ಸ್ ಅವರ ಸುದೀರ್ಘ ಪಯಣ ಈ ಪಂದ್ಯದೊಂದಿಗೆ ಕೊನೆಗೊಂಡಿದೆ. ಅಲ್ಲದೆ ಫ್ರಾನ್ಸ್ ಪಡೆಯ ಮುಂದಿನ ಕೋಚ್​ ಆಗಿ ಮಾಜಿ ಆಟಗಾರ ಝಿನೆದಿನ್ ಝಿದಾನ್ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

Published On – 7:42 am, Sun, 19 July 26

Source link

ಬೆಂಗಳೂರಿಗರೇ ಗಮನಿಸಿ: ಇಂದಿನಿಂದ ಮೂರು ದಿನ ನಗರದ ವಿವಿಧೆಡೆ ವಿದ್ಯುತ್​​ ವ್ಯತ್ಯಯ; ಇಲ್ಲಿದೆ ಮಾಹಿತಿ – Kannada News | Bengaluru Power Cut Alert: 3 Day Outage in Several Areas Starting Today Due to BESCOM, KPTCL Maintenance

ಬೆಂಗಳೂರು, ಜುಲೈ 19: ಬೆಸ್ಕಾಂ (BESCOM) ಹಾಗೂ ಕೆಪಿಟಿಸಿಎಲ್ (KPTCL) ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಭಾನುವಾರ, ಸೋಮವಾರ ಮತ್ತು ಮಂಗಳವಾರ ಬೆಂಗಳೂರಿನ (Bengaluru) ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಹೀಗಾಗಿ ಸಾರ್ವಜನಿಕರು ಅಗತ್ಯ ಮುನ್ನೆಚ್ಚರಿಕೆ ವಹಿಸಿಕೊಳ್ಳುವಂತೆ ಪ್ರಕಟಣೆ ಮೂಲಕ ಅಧಿಕಾರಿಗಳು ಮನವಿ ಮಾಡಿದ್ದಾರೆ

ಭಾನುವಾರ ಎಲ್ಲೆಲ್ಲಿ ವಿದ್ಯುತ್​​ ವ್ಯತ್ಯಯ?

ಸೂರ್ಯ ಸಿಟಿ ಫೇಸ್-1, ಮರಸೂರು, ನಾಗನಾಯಕನಹಳ್ಳಿ, ಇಗ್ಗಲೂರು, ಸರ್ಜಾಪುರ, ಇಟ್ಟಗನೂರು, ಕಾಡ ಅಗ್ರಹಾರ, ಸೋಂಪುರ ಗೇಟ್, ಬಿ. ಹೊಸಹಳ್ಳಿ, ದಾಸನಪುರ, ಕಂಬ್ಳಿಪುರ, ಹರೋಹಳ್ಳಿ, ಬೊಮ್ಮಸಂದ್ರ, ಬೊಮ್ಮಸಂದ್ರ ಕೈಗಾರಿಕಾ ಪ್ರದೇಶ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಿಗ್ಗೆ 9 ರಿಂದ ಸಂಜೆ 4 ಗಂಟೆವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ಇದನ್ನೂ ಓದಿ: ಬೆಂಗಳೂರಿಗರ ನಿದ್ದೆ ಕಸಿಯುತ್ತಿದೆ ಈ ತಾಪಮಾನ! ಹೇಗೆ ಗೊತ್ತಾ?

ಸೋಮವಾರ ಈ ಪ್ರದೇಶಗಳಲ್ಲಿ ಕರೆಂಟ್​​ ಇರಲ್ಲ

ಎಲ್ & ಟಿ ಅಪಾರ್ಟ್‌ಮೆಂಟ್, ಯಶೋದನಗರ, ಜಕ್ಕೂರು ಪ್ಲಾಂಟೇಶನ್, ಸೆಂಚುರಿ ಅಪಾರ್ಟ್‌ಮೆಂಟ್, ಬ್ಯಾಟರಾಯನಪುರ, ಸ್ಪಾರ್ಕಲ್ ಒನ್ ಮಾಲ್, ಅಮೃತಹಳ್ಳಿ, ಸಹಕಾರನಗರ ಜಿ ಬ್ಲಾಕ್, ಶಬರಿನಗರ, ಕೆನರಾ ಬ್ಯಾಂಕ್ ಲೇಔಟ್, ಧನಲಕ್ಷ್ಮಿ ಲೇಔಟ್, ತಿಂಡ್ಲು ಮುಖ್ಯರಸ್ತೆ, ಸರ್ ಎಂ.ವಿ. ಲೇಔಟ್, ಫಾರ್ಚೂನಾ ಸೆಂಟರ್ ಪಾರ್ಕ್, ತಿಂಡ್ಲು ಗ್ರಾಮ, ಸಪ್ತಗಿರಿ ಲೇಔಟ್, ಗುರುದರ್ಶನ ಲೇಔಟ್, ವೆಂಕಟಸ್ವಾಮಪ್ಪ ಲೇಔಟ್, ನಂಜಪ್ಪ ಸರ್ಕಲ್, ಎಲ್ & ಜಿ ಎನ್‌ಕ್ಲೇವ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಿಗ್ಗೆ 11ರಿಂದ ಸಂಜೆ 4 ಗಂಟೆವರೆಗೆ ಕರೆಂಟ್​​ ಇರಲ್ಲ.

ಇದಲ್ಲದೆ, ರವೀಂದ್ರನಗರ, ಪ್ರಸನ್ನತ್ ನಗರ, ಸಂತೋಷ್ ನಗರ, ಏರ್‌ಫೋರ್ಸ್ ಜಾಲಹಳ್ಳಿ ವೆಸ್ಟ್, ವೈಷ್ಣವಿ ನಕ್ಷತ್ರ ಅಪಾರ್ಟ್‌ಮೆಂಟ್, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ತ್ರಿವೇಣಿ, ಎಚ್‌ಎಚ್‌ವಿ, ಡಿಎಂಜಿ, ಕೃಷ್ಣ ಫ್ಯಾಬ್ರಿಕೇಷನ್ಸ್, ಜೆಮಿನಿ ಇಂಡಸ್ಟ್ರೀಸ್, ರವಿ-ಕಿರ್ಲೋಸ್ಕರ್ ಆಸ್ಪತ್ರೆ, ಎಂಎಸ್‌ಐಎಲ್ ಪ್ರಿಂಟಿಂಗ್ ಪ್ರೆಸ್, ವಿಪ್ರೋ ವೆಲ್‌ಕಾಸ್ಟ್ ಫ್ಯಾಕ್ಟರಿ, ಐಟಿಸಿ, ವೋಲ್ವೋ, ಹಿಟಾಚಿ ಇಂಡಸ್ಟ್ರೀಸ್, ಗೀತಾ ಟಿಂಬರ್ಸ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲೂ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ಮಂಗಳವಾರ ಎಲ್ಲೆಲ್ಲಿ ವಿದ್ಯುತ್ ಸರಬರಾಜು ಸ್ಥಗಿತ?

ಗಂಗಾನಗರ, ವೀವರ್ಸ್ ಕಾಲೋನಿ, ಸಿಬಿಐ ಕ್ವಾರ್ಟರ್ಸ್, ಆರ್‌ಬಿಐ ಕಾಲೋನಿ, ಸಿಪಿಯು ಬ್ಲಾಕ್, ಡಿಜಿಕ್ಯೂ ಕ್ವಾರ್ಟರ್ಸ್, ಯುಎಎಸ್ ಕ್ಯಾಂಪಸ್, ದಿನ್ನೂರು ಮುಖ್ಯರಸ್ತೆ, ಆರ್.ಟಿ.ನಗರ, ಎಚ್‌ಎಂಟಿ ಬ್ಲಾಕ್, ಚಾಮುಂಡಿನಗರ, ಆರ್ಮಿ ವೆಟರನ್ಸ್ ಕಾಲೋನಿ, ಆರ್.ಟಿ.ನಗರ ಪೊಲೀಸ್ ಠಾಣೆ, ಡಾಲರ್ಸ್ ಕಾಲೋನಿ, ಎಂಎಲ್‌ಎ ಲೇಔಟ್, ರತನ್ ಅಪಾರ್ಟ್‌ಮೆಂಟ್, ಗಾಯತ್ರಿ ಅಪಾರ್ಟ್‌ಮೆಂಟ್, ನೃಪತುಂಗ ಎಕ್ಸ್‌ಟೆನ್ಷನ್, ಕೃಷ್ಣಪ್ಪ ಬ್ಲಾಕ್, ಸಿಬಿಐ ಮುಖ್ಯರಸ್ತೆ, ವೇಣುಗೋಪಾಲ ಲೇಔಟ್, ಜಡ್ಜಸ್ ಕಾಲೋನಿ, ಕರಿಯಣ್ಣ ಲೇಔಟ್, ಯೋಗೇಶ್ವರ ನಗರ, ರಿಂಗ್ ರಸ್ತೆ, ಕುವೆಂಪುನಗರ, ನೇತಾಜಿ ನಗರ, ಸ್ಟರ್ಲಿಂಗ್ ಗಾರ್ಡನ್ ಲೇಔಟ್, ಅಲ್ಪೈನ್ ಅಪಾರ್ಟ್‌ಮೆಂಟ್, ಜೈನ್ ಅಪಾರ್ಟ್‌ಮೆಂಟ್, ಗಿದ್ದಪ್ಪ ಬ್ಲಾಕ್, ಎಜಿಎಸ್ ಕಾಲೋನಿ, ಎಸ್‌ಬಿಎಂ ಕಾಲೋನಿ, ಸಂಜಯನಗರ, ಎಇಸಿಎಸ್ ಲೇಔಟ್, ಗೆದ್ದಲಹಳ್ಳಿ, ಭೂಪಸಂದ್ರ, ಸೆಂಟ್ರಲ್ ಎಕ್ಸೈಸ್ ಲೇಔಟ್, ಕಲ್ಪನಾ ಚಾವ್ಲಾ ರಸ್ತೆ, ಮೊಹಮ್ಮದ್ ಲೇಔಟ್, ವಿಎಸ್‌ಎನ್‌ಎಲ್ ವೈಟ್ ಹೌಸ್, ಅಮರಜ್ಯೋತಿ ಲೇಔಟ್, ಸನ್‌ರೈಸ್ ಕಾಲೋನಿ, ಮೈತ್ರಿ ಬಜಾರ್, ತಿಮ್ಮಕ್ಕ ಲೇಔಟ್, ಅಕ್ಕಯ್ಯಮ್ಮ ಲೇಔಟ್, ಗುಡ್ಡದಹಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಿಗ್ಗೆ 11 ರಿಂದ ಮಧ್ಯಾಹ್ನ 3 ಗಂಟೆವರೆಗೆ ವಿದ್ಯುತ್ ಸರಬರಾಜು ಸ್ಥಗಿತಗೊಳ್ಳಲಿದೆ ಎಂದು ದಿ ಟೈಮ್ಸ್​​ ಆಫ್​​ ಇಂಡಿಯಾ​​ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

‘ಧುರಂಧರ್’ ನಿರ್ದೇಶಕನ ಪತ್ನಿ ಯಾಮಿ ಗೌತಮ್​ಗೆ ರಾಷ್ಟ್ರ ಪ್ರಶಸ್ತಿ: ಖುಷಿ ಹಂಚಿಕೊಂಡ ನಟಿ – Kannada News | Aditya Dhar wife Yami Gautam reaction after winning Best Actress 72nd National Film Awards for Article 370 Movie

ಭಾರತೀಯ ಚಿತ್ರರಂಗದ ಅತ್ಯುನ್ನತ ಗೌರವ ಎಂದೇ ಪರಿಗಣಿಸಲಾಗುವ 72ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿಗಳು (72nd National Film Awards) ಜುಲೈ 18ರಂದು ಪ್ರಕಟಗೊಂಡಿದ್ದು, ಬಾಲಿವುಡ್‌ನ ಯಶಸ್ವಿ ಸಿನಿಮಾ ‘ಆರ್ಟಿಕಲ್ 370’ ಅತ್ಯುತ್ತಮ ಸಿನಿಮಾ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಇನ್ನು ಈ ಚಿತ್ರದಲ್ಲಿನ ನಟನೆಗಾಗಿ ನಟಿ ಯಾಮಿ ಗೌತಮ್  ‘ಅತ್ಯುತ್ತಮ ನಟಿ’ (Best Actor – Female) ರಾಷ್ಟ್ರ ಪ್ರಶಸ್ತಿಗೆ ಭಾಜನರಾಗಿದ್ದಾರೆ. ತಮ್ಮ ಬದುಕಿನ ಈ ಬಹುದೊಡ್ಡ ಸಾಧನೆಯ ಕುರಿತು ನಟಿ ಯಾಮಿ ಗೌತಮ್ (Yami Gautam) ‘ಎಕ್ಸ್’ (ಟ್ವಿಟರ್) ಖಾತೆಯಲ್ಲಿ ಅತ್ಯಂತ ಭಾವುಕ ಸಾಲುಗಳನ್ನು ಹಂಚಿಕೊಂಡಿದ್ದಾರೆ.

‘ಪ್ರತಿಯೊಂದು ಪ್ರಯಾಣದಲ್ಲೂ ನಾವು ಯಾಕೆ ಸುಲಭವಾಗಿ ಸೋಲೊಪ್ಪಿಕೊಳ್ಳಬಾರದು ಎಂಬುದನ್ನು ನೆನಪಿಸುವ ಒಂದು ಕ್ಷಣ ಬಂದೇ ಬರುತ್ತದೆ. ಇಂದು ನನ್ನ ಪಾಲಿಗೆ ಅಂತಹದ್ದೇ ಒಂದು ಅದ್ಭುತ ಕ್ಷಣ. ‘ಆರ್ಟಿಕಲ್ 370’ ಚಿತ್ರಕ್ಕಾಗಿ ರಾಷ್ಟ್ರ ಪ್ರಶಸ್ತಿ ಪಡೆಯುತ್ತಿರುವುದು ನನ್ನ ಜೀವನದ ಅತ್ಯಂತ ಹೆಮ್ಮೆಯ ಮತ್ತು ನಾನು ಸದಾ ನೆನಪಿನಲ್ಲಿಡುವ ಕ್ಷಣವಾಗಿದೆ’ ಎಂದು ಯಾಮಿ ತಮ್ಮ ಪೋಸ್ಟ್ ಆರಂಭಿಸಿದ್ದಾರೆ.

‘ಇದು ನನ್ನ ಹಲವು ವರ್ಷಗಳ ಕನಸು’

‘ಕಳೆದ 14 ವರ್ಷಗಳಿಂದ ನಾನು ಕೇವಲ ನನ್ನ ಕಲೆಗೆ ಪ್ರಾಮಾಣಿಕವಾಗಿರಲು ಪ್ರಯತ್ನಿಸಿದ್ದೇನೆ. ಕಠಿಣ ಪರಿಶ್ರಮ ಮತ್ತು ನನ್ನ ನಟನೆಯೇ ಮಾತನಾಡಲಿ ಎಂದು ಕಾಯುತ್ತಿದ್ದೆ. ಈ ಗೌರವವು ನನ್ನ ಭರವಸೆ, ಪರಿಶ್ರಮ, ಸ್ಥಿತಿಸ್ಥಾಪಕತ್ವ ಮತ್ತು ಚಿತ್ರರಂಗದ ಮೇಲಿನ ಅಚಲವಾದ ಪ್ರೀತಿಯ ಫಲವಾಗಿದೆ. ಇದು ಹಲವು ವರ್ಷಗಳಿಂದ ನನ್ನ ಹೃದಯದಲ್ಲಿ ಹೊತ್ತಿದ್ದ ಕನಸು. ಇಂದು ಅತ್ಯಂತ ಕೃತಜ್ಞತೆ ಮತ್ತು ನಮ್ರತೆಯಿಂದ ಇದನ್ನು ಸ್ವೀಕರಿಸುತ್ತಿದ್ದೇನೆ’ ಎಂದು ಯಾಮಿ ಗೌತಮ್ ಹೇಳಿದ್ದಾರೆ.

‘ಇದು ಕೇವಲ ಒಂದು ಸಿನಿಮಾವಲ್ಲ’

‘ಆರ್ಟಿಕಲ್ 370 ನನಗೆ ಕೇವಲ ಒಂದು ಸಿನಿಮಾ ಆಗಿರಲಿಲ್ಲ. ಇದು ನಾನು ಆಳವಾಗಿ ನಂಬಿದ ಕಥೆಯಾಗಿತ್ತು. ಅದರಲ್ಲೂ ಇದು ನಮ್ಮದೇ ಸ್ವಂತ ಹೋಮ್ ಪ್ರೊಡಕ್ಷನ್ ಚಿತ್ರವಾಗಿರುವುದರಿಂದ ಈ ಪ್ರಶಸ್ತಿ ನನಗೆ ಇನ್ನಷ್ಟು ಭಾವುಕ ಮತ್ತು ವೈಯಕ್ತಿಕವಾಗಿದೆ. ಚಿತ್ರೀಕರಣದ ದಿನಗಳಲ್ಲಿ ಎದುರಾದ ಪ್ರತಿಯೊಂದು ಸವಾಲು ಮತ್ತು ಸಂಭಾಷಣೆಗಳ ಹಿಂದೆ ಪ್ರಾಮಾಣಿಕತೆಯಿಂದ ಕಥೆ ಹೇಳುವ ಒಂದೇ ಉದ್ದೇಶವಿತ್ತು’ ಎಂದು ಯಾಮಿ ಗೌತಮ್ ಅವರು ಬರೆದಿದ್ದಾರೆ.

ಧನ್ಯವಾದ ಅರ್ಪಿಸಿದ ಯಾಮಿ ಗೌತಮ್:

‘ಗೌರವಾನ್ವಿತ ಜ್ಯೂರಿ ಸದಸ್ಯರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು. ಹಾಗೆಯೇ ನಮ್ಮ ನಿರ್ದೇಶಕರು, ತಾರಾಗಣ, ತಾಂತ್ರಿಕ ತಂಡ ಮತ್ತು ಆರ್ಟಿಕಲ್ 370 ಚಿತ್ರವನ್ನು ಪ್ರೀತಿಯಿಂದ ಸ್ವೀಕರಿಸಿದ ಪ್ರೇಕ್ಷಕ ಮಹಾಪ್ರಭುಗಳಿಗೆ ನನ್ನ ನಮನಗಳು. ಅರ್ಥಪೂರ್ಣ ಕಥೆಗಳು ಯಾವಾಗಲೂ ಜನರ ಹೃದಯವನ್ನು ತಲುಪುತ್ತವೆ ಎಂಬುದನ್ನು ನೀವು ಸಾಬೀತುಪಡಿಸಿದ್ದೀರಿ. ನನ್ನ ಕಷ್ಟ-ಸುಖಗಳೆರಡರಲ್ಲೂ ಜೊತೆಯಾಗಿ ನಿಂತ ನನ್ನ ಕುಟುಂಬ, ನನ್ನ ತಂಡ ಮತ್ತು ಹಿತೈಷಿಗಳಿಗೆ ಧನ್ಯವಾದಗಳು’ ಎಂದು ಯಾಮಿ ಗೌತಮ್ ಕೃತಜ್ಞತೆ ಸಲ್ಲಿಸಿದ್ದಾರೆ.

ಇದನ್ನೂ ಓದಿ: ಚರ್ಮದ ಕಾಯಿಲೆ ಬಗ್ಗೆ ಹೇಳಿಕೊಂಡು ನಿರಾಳ ಆದ ನಟಿ ಯಾಮಿ ಗೌತಮ್​; ಅವರಿಗಿರುವ ಸಮಸ್ಯೆ ಏನು?

ಕನಸು ಕಾಣುವವರಿಗೆ ಸ್ಪೂರ್ತಿಯ ಮಾತುಗಳನ್ನಾಡಿದ ಯಾಮಿ, ‘ಈ ಪ್ರಶಸ್ತಿ ನನ್ನ ಕನಸಿನ ಅಂತ್ಯವಲ್ಲ, ಬದಲಿಗೆ ಇನ್ನೂ ಹೆಚ್ಚಿನ ಜವಾಬ್ದಾರಿಯ ಆರಂಭ. ಇನ್ನು ಮುಂದೆ ಮತ್ತಷ್ಟು ಬೆಳೆಯಲು, ರಿಸ್ಕ್ ತೆಗೆದುಕೊಳ್ಳಲು ಮತ್ತು ಮೌಲ್ಯಯುತವಾದ ಕಥೆಗಳನ್ನು ಹೇಳಲು ಇದು ಪ್ರೇರಣೆ. ನಮ್ಮಲ್ಲಿ ಛಲವಿದ್ದಾಗ ಕನಸುಗಳು ಖಂಡಿತ ನನಸಾಗುತ್ತವೆ. ತಮ್ಮ ಯಶಸ್ಸಿನ ಕ್ಷಣಕ್ಕಾಗಿ ಕಾಯುತ್ತಿರುವ ಪ್ರತಿಯೊಬ್ಬ ಕನಸುಗಾರನಿಗೂ ಈ ಪ್ರಶಸ್ತಿಯನ್ನು ಅರ್ಪಿಸುತ್ತೇನೆ. ನಂಬಿಕೆಯನ್ನು ಎಂದಿಗೂ ಕಳೆದುಕೊಳ್ಳಬೇಡಿ’ ಎಂದು ಬರೆದುಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

‘Nirvastra Vrat’: ವರ್ಷಕ್ಕೊಮ್ಮೆ ಬಟ್ಟೆಯಿಲ್ಲದೆ ‘ನಿರ್ವಾಸ್ತ್ರ ವ್ರತ’ ಆಚರಣೆ ಮಾಡುವ ಈ ಗ್ರಾಮದ ಬಗ್ಗೆ ಗೊತ್ತಾ? – Kannada News | Himachal Pini Village’s Unique ‘Nirvastra Vrat’: Shravana Month Tradition and Legend

ಭಾರತದ ವಿಚಿತ್ರ ಸಂಪ್ರದಾಯImage Credit source: hive.blog

ವಿವಿಧ ಸಂಸ್ಕೃತಿಗಳು ಮತ್ತು ಅಪರೂಪದ ಪದ್ಧತಿಗಳಿಂದ ಸಮೃದ್ಧವಾಗಿರುವ ಭಾರತದಲ್ಲಿ, ಪ್ರತಿಯೊಂದು ಹಳ್ಳಿ ಮತ್ತು ಪ್ರದೇಶವು ತನ್ನದೇ ಆದ ವಿಶಿಷ್ಟತೆಯನ್ನು ಹೊಂದಿದೆ. ಕೆಲವು ಪದ್ಧತಿಗಳು ನಮಗೆ ಅದ್ಭುತವೆನಿಸಿದರೆ, ಇನ್ನು ಕೆಲವು ಆಶ್ಚರ್ಯ ಮತ್ತು ಭಯವನ್ನು ಉಂಟುಮಾಡುತ್ತವೆ. ಅಂತಹದ್ದೇ ಒಂದು ವಿಚಿತ್ರ ಮತ್ತು ನಂಬಲಸಾಧ್ಯವಾದ ಪದ್ಧತಿ ಕಂಡುಬರುವುದು ಹಿಮಾಚಲ ಪ್ರದೇಶದ ಮಣಿಕರ್ಣ ಕಣಿವೆಯಲ್ಲಿರುವ ‘ಪಿನಿ’ (Pini) ಎಂಬ ಗ್ರಾಮದಲ್ಲಿ. ಇಲ್ಲಿನ ಮಹಿಳೆಯರು ಶತಮಾನಗಳಿಂದ ‘ನಿರ್ವಾಸ್ತ್ರ ವ್ರತ’ ಎಂಬ ವಿಶಿಷ್ಟ ಉಪವಾಸವನ್ನು ಆಚರಿಸಿಕೊಂಡು ಬರುತ್ತಿದ್ದಾರೆ.

ಶ್ರಾವಣ ಮಾಸದ ಆ 5 ದಿನಗಳ ಕಠಿಣ ದೀಕ್ಷೆ:

ವರ್ಷಪೂರ್ತಿ ಮಹಿಳೆಯರು ಹೀಗೆಯೇ ಇರುತ್ತಾರೆ ಎಂದು ನೀವು ಭಾವಿಸಿದರೆ ಅದು ತಪ್ಪು. ಪ್ರತಿ ವರ್ಷ ಶ್ರಾವಣ ಮಾಸದಲ್ಲಿ ಕೇವಲ ಐದು ದಿನಗಳ ಕಾಲ ಮಾತ್ರ ಅವರು ಈ ವಿಶೇಷ ದೀಕ್ಷೆಯನ್ನು ತೆಗೆದುಕೊಳ್ಳುತ್ತಾರೆ. ಈ ದೀಕ್ಷೆಯ ದಿನಗಳಲ್ಲಿ ಮಹಿಳೆಯರು ಯಾವುದೇ ಬಟ್ಟೆಗಳನ್ನು ಧರಿಸುವುದಿಲ್ಲ. ಕೆಲವರು ಕೇವಲ ಒಂದು ತೆಳುವಾದ ರೇಷ್ಮೆ ಬಟ್ಟೆಯನ್ನು ಮಾತ್ರ ದೇಹಕ್ಕೆ ಸುತ್ತಿಕೊಳ್ಳುತ್ತಾರೆ. ಅತ್ಯಂತ ಮುಖ್ಯವಾದ ವಿಷಯವೆಂದರೆ, ಈ ಐದು ದಿನಗಳ ಕಾಲ ಅವರು ಮನೆಯಿಂದ ಹೊರಗೆ ಬರುವುದಿಲ್ಲ. ಸಂಪೂರ್ಣ ಏಕಾಂತದಲ್ಲಿರುವ ಅವರು ಯಾರನ್ನೂ ಭೇಟಿಯಾಗುವುದಿಲ್ಲ ಮತ್ತು ಯಾರೊಂದಿಗೂ ಮಾತನಾಡುವುದಿಲ್ಲ.

ಈ ವಿಚಿತ್ರ ಪದ್ಧತಿಯ ಹಿಂದಿರುವ ರಾಕ್ಷಸರ ಕಥೆ:

ಹಾಗಾದರೆ ಈ ಗ್ರಾಮದಲ್ಲಿ ಇಂತಹದೊಂದು ಆಚರಣೆ ಜಾರಿಗೆ ಬರಲು ಕಾರಣವೇನು? ಸ್ಥಳೀಯರ ನಂಬಿಕೆಯ ಪ್ರಕಾರ, ಶತಮಾನಗಳ ಹಿಂದೆ ಈ ಗ್ರಾಮವನ್ನು ಕ್ರೂರ ರಾಕ್ಷಸರು ಆಳುತ್ತಿದ್ದರು. ಆ ರಾಕ್ಷಸರು ಸುಂದರವಾದ ಉಡುಪು ಧರಿಸಿದ ವಿವಾಹಿತ ಮಹಿಳೆಯರನ್ನು ಅಪಹರಿಸಿ ಕೊಲ್ಲುತ್ತಿದ್ದರು. ಇದರಿಂದ ಭಯಭೀತರಾದ ಗ್ರಾಮಸ್ಥರು ತಮ್ಮ ರಕ್ಷಕ ದೇವತೆಯಾದ ‘ಲಾಹುವಾ ಘೋಂಟ್’ ಮೊರೆ ಹೋದರು. ಆ ದೇವತೆಯು ಗ್ರಾಮಕ್ಕೆ ಬಂದು ರಾಕ್ಷಸರನ್ನು ಸಂಹರಿಸಿದಳು. ಆ ಘಟನೆಯ ನೆನಪಿಗಾಗಿ ಮತ್ತು ಭವಿಷ್ಯದಲ್ಲಿ ಯಾವುದೇ ದುಷ್ಟ ಶಕ್ತಿಗಳು ಗ್ರಾಮಕ್ಕೆ ಬಾರದಿರಲಿ ಎಂದು ಈ ಆಚರಣೆಯನ್ನು ಇಂದಿಗೂ ಮುಂದುವರಿಸಿಕೊಂಡು ಬರಲಾಗಿದೆ.

ಇದನ್ನೂ ಓದಿ: ಪುರಿ ಜಗನ್ನಾಥ ರಥಯಾತ್ರೆಯಲ್ಲಿ ಹಳದಿ ಮತ್ತು ಕೆಂಪು ಬಣ್ಣದ ಉಡುಪುಗಳನ್ನೇ ಆಯ್ಕೆ ಮಾಡುವುದೇಕೆ ಗೊತ್ತಾ? ಇಲ್ಲಿದೆ ಆಧ್ಯಾತ್ಮಿಕ ಮಹತ್ವ!

ಪುರುಷರಿಗೂ ಉಂಟು ಕಟ್ಟುನಿಟ್ಟಿನ ನಿಯಮಗಳು:

ಮಹಿಳೆಯರು ಮಾತ್ರವಲ್ಲದೆ, ಈ ಐದು ದಿನಗಳ ಕಾಲ ಗ್ರಾಮದ ಪುರುಷರು ಸಹ ಕಠಿಣ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಅವರು ತಮ್ಮ ಹೆಂಡತಿಯರೊಂದಿಗೆ ಮಾತನಾಡುವಂತಿಲ್ಲ, ಮದ್ಯಪಾನ ಮಾಡುವಂತಿಲ್ಲ ಮತ್ತು ಮಾಂಸಾಹಾರವನ್ನು ಸಂಪೂರ್ಣವಾಗಿ ತ್ಯಜಿಸಬೇಕಾಗುತ್ತದೆ. ವಿಶೇಷವೆಂದರೆ, ಈ ಐದು ದಿನಗಳ ಕಾಲ ಹೊರಗಿನ ಪ್ರದೇಶದ ಯಾವುದೇ ವ್ಯಕ್ತಿಗೂ ಈ ಗ್ರಾಮದೊಳಗೆ ಪ್ರವೇಶಿಸಲು ಅನುಮತಿ ಇರುವುದಿಲ್ಲ. ಈ ಪದ್ಧತಿಯು ಗ್ರಾಮದ ಸಾಮೂಹಿಕ ನಂಬಿಕೆ ಮತ್ತು ಸಂಪ್ರದಾಯದ ರಕ್ಷಣೆಯನ್ನು ಸಂಕೇತಿಸುತ್ತದೆ ಎಂದು ಸ್ಥಳೀಯರು ನಂಬುತ್ತಾರೆ.

ಆಧುನಿಕ ಕಾಲದಲ್ಲೂ ಮುಂದುವರಿದ ಸಂಪ್ರದಾಯ:

ಕಾಲ ಬದಲಾದರೂ, ಶತಮಾನಗಳಷ್ಟು ಹಳೆಯದಾದ ಈ ವಿಚಿತ್ರ ಪದ್ಧತಿಯನ್ನು ಅಲ್ಲಿನ ವಿವಾಹಿತ ಮಹಿಳೆಯರು ಇಂದಿಗೂ ಶ್ರದ್ಧೆಯಿಂದ ಅನುಸರಿಸುತ್ತಿದ್ದಾರೆ. ಆದರೆ, ಆಧುನಿಕ ಕಾಲಕ್ಕೆ ತಕ್ಕಂತೆ ಆಚರಣೆಯಲ್ಲಿ ಸಣ್ಣ ಬದಲಾವಣೆ ಮಾಡಿಕೊಳ್ಳಲಾಗಿದೆ. ಈಗಿನ ಮಹಿಳೆಯರು ಸಂಪೂರ್ಣವಾಗಿ ಬೆತ್ತಲೆಯಾಗುವ ಬದಲು, ತಮ್ಮ ದೇಹವನ್ನು ಒಂದು ತೆಳುವಾದ ಉಣ್ಣೆಯ ಅಥವಾ ರೇಷ್ಮೆಯ ಬಟ್ಟೆಯಿಂದ ಮುಚ್ಚಿಕೊಂಡು ಮನೆಯೊಳಗೆ ಏಕಾಂತ ವ್ರತ ಆಚರಿಸುತ್ತಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 7:33 am, Sun, 19 July 26

Source link

ನಿಂತಿದ್ದ ಆಟೋಗೆ ಬಿಎಂಟಿಸಿ ಎಲೆಕ್ಟ್ರಿಕ್​​ ಬಸ್​​ ಡಿಕ್ಕಿ: ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಚಾಲಕ – Kannada News | Bengaluru: Auto Driver Dies After BMTC Electric Bus Rams Auto Near KR Circle

ನಿಂತಿದ್ದ ಆಟೋಗೆ ಬಿಎಂಟಿಸಿ ಎಲೆಕ್ಟ್ರಿಕ್​​ ಬಸ್​​ ಡಿಕ್ಕಿImage Credit source: Tv9 Kannada

ಬೆಂಗಳೂರು, ಜುಲೈ 19: ಸಿಗ್ನಲ್​ನಲ್ಲಿ ನಿಂತಿದ್ದ ಆಟೋಗೆ ಅತಿ ವೇಗವಾಗಿ ಬಂದ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಡಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡಿದ್ದ ಆಟೋ ಚಾಲಕ ಚಿಕಿತ್ಸೆ ಫಲಿಸದೆ ಮೃತಪಟ್ಟಿರುವ ಘಟನೆ ಬೆಂಗಳೂರಿನಲ್ಲಿ (Bengaluru) ನಡೆದಿದೆ. ಸಿಂಗಯ್ಯನಪಾಳ್ಯ ನಿವಾಸಿ ಕೃಷ್ಣಮೂರ್ತಿ(60) ಮೃತ ದುರ್ದೈವಿಯಾಗಿದ್ದು, ಕೆ.ಆರ್.ಸರ್ಕಲ್​​ನಲ್ಲಿ ಬಸ್​​ ಆಟೋಗೆ ಗುದ್ದಿತ್ತು. ಕೂಡಲೇ ಗಾಯಾಳು ಆಟೋ ಚಾಲಕನನ್ನು ಸೇಂಟ್ ಮಾರ್ಥಾಸ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಪ್ರಯೋಜನವಾಗಿಲ್ಲ.

ಬ್ರೇಕ್​​ ಫೇಲ್​​ ಎಂದು ಬಸ್​​ ಚಾಲಕನ ನಾಟಕ

ಇನ್ನು ಅಪಘಾತದ ಬೆನ್ನಲ್ಲೇ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಚಾಲಕ ಬ್ರೇಕ್​​ ಫೇಲ್​​ ಆಗಿದೆ ಎಂದು ನಾಟಕವಾಡಿದ್ದು, ಬಸ್​​ನ ಟೋಯಿಂಗ್ ಮಾಡದೆ ಡ್ರೈವ್ ಮಾಡಿಕೊಂಡೇ ಬಿಎಂಟಿಸಿ ಸಿಬ್ಬಂದಿ ಕೊಂಡೊಯ್ದಿದ್ದಾರೆ. ಘಟನೆ ಸಂಬಂಧ ಪೊಲೀಸರು ಬಿಎಂಟಿಸಿ ಬಸ್‌ ಚಾಲಕನನ್ನು ವಶಕ್ಕೆ ಪಡೆದಿದ್ದು, ವಿಕ್ಟೋರಿಯಾ ಆಸ್ಪತ್ರೆಯ ಶವಾಗಾರದಲ್ಲಿ ಆಟೋ ಚಾಲಕ ಕೃಷ್ಣಮೂರ್ತಿ ಶವದ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.

ಇದನ್ನೂ ಓದಿ: ಮಗನ ಸಾವಿನಲ್ಲೂ ಸಾರ್ಥಕತೆ ಮೆರೆದ ಕುಟುಂಬ; ಇದ್ದ ಏಕೈಕ ಮಗನನ್ನ ಕಳೆದುಕೊಂಡ ಕುಟುಂಬದ ಕಣ್ಣೀರ ಕಥೆ

ಪೊಲೀಸರ ಮಾಹಿತಿ ಪ್ರಕಾರ, ಮಧ್ಯಾಹ್ನ ಸುಮಾರು 3:15 ಗಂಟೆಗೆ, ಮೆಜೆಸ್ಟಿಕ್‌ನಿಂದ ಚಂದಾಪುರದತ್ತ ತೆರಳುತ್ತಿದ್ದ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಕೆ.ಆರ್. ಸರ್ಕಲ್ ಇಳಿಜಾರು ರಸ್ತೆಯಲ್ಲಿ ಆಟೋ ರಿಕ್ಷಾದ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಆಟೋ ಪಕ್ಕದಲ್ಲೇ ಸಾಗುತ್ತಿದ್ದ ಕಾರಿಗೆ ಅಪ್ಪಳಿಸಿದೆ. ಘಟನೆಯ ಬಳಿಕ ನಿಯಂತ್ರಣ ತಪ್ಪಿದ ಬಸ್ ರಸ್ತೆ ಬದಿಯ ವಿದ್ಯುತ್ ಕಂಬ ಹಾಗೂ ಮರಕ್ಕೆ ಡಿಕ್ಕಿ ಹೊಡೆದು ನಿಂತಿದೆ.

ಸ್ಥಳೀಯರು ಹಾಗೂ ಪ್ರಯಾಣಿಕರ ಪ್ರಕಾರ, ಫ್ರೀಡಂ ಪಾರ್ಕ್‌ನಿಂದ ಕೆ.ಆರ್. ಸರ್ಕಲ್‌ವರೆಗೆ ಇರುವ ಇಳಿಜಾರು ರಸ್ತೆ ಮತ್ತು ಹಲವು ಮಾರ್ಗಗಳು ಒಂದೇ ಜಂಕ್ಷನ್‌ನಲ್ಲಿ ಸೇರುವುದರಿಂದ ಇಲ್ಲಿ ಪದೇಪದೇ ಅಪಘಾತದ ಪರಿಸ್ಥಿತಿಗಳು ನಿರ್ಮಾಣವಾಗುತ್ತವೆ. ಟ್ರಾಫಿಕ್ ಸಿಗ್ನಲ್ ತಪ್ಪಿಸಿಕೊಳ್ಳಲು ಕೆಲ ವಾಹನ ಚಾಲಕರು ವೇಗವಾಗಿ ಸಂಚರಿಸುವುದರಿಂದ ಅಪಾಯ ಹೆಚ್ಚುತ್ತಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.

ವರದಿ: ವಿಕಾಸ್​​, ಟಿವಿ9 ಬೆಂಗಳೂರು

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 7:16 am, Sun, 19 July 26

Source link

Karnataka Weather Forecast: ಕರಾವಳಿಯಲ್ಲಿ ಭಾರೀ ಮಳೆ, 15ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಬಿರುಗಾಳಿಯ ಭೀತಿ! – Kannada News | Karnataka Weather Update: Heavy Rain and Strong Winds Warned Across State

ಕರಾವಳಿಯಲ್ಲಿ ಭಾರೀ ಮಳೆ, 15ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಬಿರುಗಾಳಿಯ ಭೀತಿ!

ಬೆಂಗಳೂರು, ಜುಲೈ 19: ಕರ್ನಾಟಕದಾದ್ಯಂತ ಮುಂದಿನ ಕೆಲವು ದಿನಗಳ ಕಾಲ ಮಳೆ (Monsoon Rain) ಹಾಗೂ ಬಲವಾದ ಗಾಳಿ ಬೀಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯದ ಕರಾವಳಿ, ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಹವಾಮಾನ ವೈಪರೀತ್ಯ ಉಂಟಾಗಲಿದ್ದು, ಸಾರ್ವಜನಿಕರು ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ.

ಕರಾವಳಿ ಭಾಗದಲ್ಲಿ ಮುಂದುವರಿದ ಅಬ್ಬರ

ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ಮೂರು ಜಿಲ್ಲೆಗಳಿಗೂ ಯೆಲ್ಲೋ ಅಲರ್ಟ್​ ಸೂಚಿಸಲಾಗಿದೆ. ಮಳೆಯೊಂದಿಗೆ ಗಂಟೆಗೆ 30 ರಿಂದ 40 ಕಿಲೋಮೀಟರ್ ವೇಗದಲ್ಲಿ ಬಲವಾದ ಗಾಳಿ ಬೀಸಲಿದ್ದು, ಮೀನುಗಾರರು ಹಾಗೂ ನದಿ ತೀರದ ನಿವಾಸಿಗಳು ಜಾಗರೂಕರಾಗಿರಲು ಕೋರಲಾಗಿದೆ.

ಉತ್ತರ ಒಳನಾಡಿನಲ್ಲಿ ಬಿರುಗಾಳಿಯ ಭೀತಿ

ಬೆಳಗಾವಿ, ಧಾರವಾಡ, ಗದಗ್, ಬೀದರ್, ಕಲಬುರಗಿ ಮತ್ತು ಹಾವೇರಿ ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ. ಈ ಭಾಗದಲ್ಲಿ ಗಾಳಿಯ ವೇಗ ಹೆಚ್ಚಿರಲಿದ್ದು, ಗಂಟೆಗೆ 40 ರಿಂದ 50 ಕಿಲೋಮೀಟರ್ ವೇಗದಲ್ಲಿ ಸುಂಟರಗಾಳಿ ಮಾದರಿಯ ಬಲವಾದ ಗಾಳಿ ಬೀಸಲಿದೆ. ಇದರೊಂದಿಗೆ ಬಾಗಲಕೋಟೆ, ಕೊಪ್ಪಳ, ರಾಯಚೂರು, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಗಳಲ್ಲೂ ಸಹ ಮಳೆಯ ಮುನ್ಸೂಚನೆ ಇಲ್ಲದಿದ್ದರೂ, ಗಂಟೆಗೆ 40 ರಿಂದ 50 ಕಿಲೋಮೀಟರ್ ವೇಗದ ಬಲವಾದ ಗಾಳಿ ಬೀಸುವ ಸಾಧ್ಯತೆ ಹೆಚ್ಚಾಗಿದೆ.

ದಕ್ಷಿಣ ಒಳನಾಡಿನಲ್ಲೂ ಮಳೆ-ಗಾಳಿಯ ಆರ್ಭಟ

ಸಿಟಿ ಹಾಗೂ ಗ್ರಾಮಾಂತರ ಪ್ರದೇಶಗಳು ಸೇರಿದಂತೆ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಹವಾಮಾನ ಬದಲಾಗಲಿದೆ. ಶಿವಮೊಗ್ಗ, ಚಿಕ್ಕಮಗಳೂರು, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಮಂಡ್ಯ, ಮೈಸೂರು, ಹಾಸನ, ಕೊಡಗು, ಚಾಮರಾಜನಗರ ಹಾಗೂ ರಾಮನಗರ ಜಿಲ್ಲೆಗಳ ಕೆಲವು ಕಡೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಲಿದೆ. ಇಲ್ಲಿಯೂ ಸಹ ಗಾಳಿಯ ತೀವ್ರತೆ ಹೆಚ್ಚಿರಲಿದ್ದು, 40 ರಿಂದ 50 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸಲಿದೆ.

ಇನ್ನುಳಿದಂತೆ ಬಳ್ಳಾರಿ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ತುಮಕೂರು ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಪ್ರಮುಖವಾಗಿ ಗಂಟೆಗೆ 40 ರಿಂದ 50 ಕಿಲೋಮೀಟರ್ ವೇಗದ ಬಲವಾದ ಗಾಳಿ ಬೀಸಲಿದ್ದು, ಒಟ್ಟಾರೆ ರಾಜ್ಯದ ಬಹುತೇಕ ಭಾಗಗಳಲ್ಲಿ ಮೋಡ ಕವಿದ ವಾತಾವರಣ ಹಾಗೂ ತಂಪಾದ ಗಾಳಿ ಮುಂದುವರಿಯಲಿದೆ. ಬಲವಾದ ಗಾಳಿಯಿಂದಾಗಿ ಮರಗಳು ಹಾಗೂ ವಿದ್ಯುತ್ ಕಂಬಗಳು ಉರುಳುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಸುರಕ್ಷಿತ ಸ್ಥಳಗಳಲ್ಲಿ ಆಶ್ರಯ ಪಡೆಯಲು ಹವಾಮಾನ ಇಲಾಖೆ ಸಲಹೆ ನೀಡಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Horoscope Today: ಇಂದು ಈ ರಾಶಿಯವರಿಗೆ ದೈವಾನುಗ್ರಹದಿಂದ ಮಾಡಿದ ಕೆಲಸಗಳಲ್ಲಿ ಯಶಸ್ಸು

ಟಿವಿ9 ಡಿಜಿಟಲ್ ವಾಹಿನಿಯಲ್ಲಿ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಅವರು 2026ರ ಜುಲೈ 19, ಭಾನುವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ಪ್ರಸ್ತುತಪಡಿಸಿದ್ದಾರೆ. ಈ ದಿನ ಪರಾಭವನಾಮ ಸಂವತ್ಸರ, ದಕ್ಷಿಣಾಯನ, ಆಷಾಢ ಮಾಸ, ಗ್ರೀಷ್ಮ ಋತು, ಶುಕ್ಲಪಕ್ಷ ಪಂಚಮಿ, ಉತ್ತರಾ ನಕ್ಷತ್ರ, ಪರಿಘ ಯೋಗ ಮತ್ತು ಬಾಲವಕರಣ ಇರುತ್ತದೆ. ರಾಹುಕಾಲ ಸಂಜೆ 5:11 ರಿಂದ 6:47 ರವರೆಗೆ ಇರಲಿದ್ದು, ಸಂಕಲ್ಪ ಕಾಲ ಬೆಳಗ್ಗೆ 10:49 ರಿಂದ ಮಧ್ಯಾಹ್ನ 12:25 ರವರೆಗೆ ಇರುತ್ತದೆ. ಇಂದು ಅಮೃತ ಲಕ್ಷ್ಮಿ ವ್ರತ, ಅಗಡಿ ನಾರಾಯಣ ಜಯಂತಿ ಹಾಗೂ ಮಹಂಗಾವ ಮಹಾರಾಜರ ಪುಣ್ಯದಿನವೂ ಆಗಿದೆ. ರವಿ ಕರ್ಕಾಟಕ ರಾಶಿಯಲ್ಲಿ ಹಾಗೂ ಚಂದ್ರ ಕನ್ಯಾ ರಾಶಿಯ ಉತ್ತರಾ ನಕ್ಷತ್ರದಲ್ಲಿ ಸಂಚರಿಸಲಿದ್ದಾನೆ ಎಂದು ಬಸವರಾಜ ಗುರೂಜಿ ತಿಳಿಸಿದ್ದಾರೆ.

Source link

ಸಕಲ ಸರ್ಕಾರಿ ಗೌರವದೊಂದಿಗೆ ನಾಳೆ ಚೆನ್ನಮ್ಮ ಅಂತ್ಯಕ್ರಿಯೆ: ಮಾವಿನ‌ಕೆರೆ ರಂಗನಾಥಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಅಂತಿಮ ವಿಧಿ ವಿಧಾನ – Kannada News | Former PM H.D. Deve Gowda’s Wife Chennamma to Be Cremated with State Honours Tomorrow

ಸಕಲ ಸರ್ಕಾರಿ ಗೌರವದೊಂದಿಗೆ ನಾಳೆ ಚೆನ್ನಮ್ಮ ಅಂತ್ಯಕ್ರಿಯೆImage Credit source: Tv9 Kannada

ಬೆಂಗಳೂರು, ಜುಲೈ 19: ಅನಾರೋಗ್ಯದಿಂದ ನಿನ್ನೆ (ಜುಲೈ 18) ವಿಧಿವಶರಾಗಿರುವ ಮಾಜಿ ಪ್ರಧಾನಮಂತ್ರಿ ಹೆಚ್​. ಡಿ. ದೇವೇಗೌಡರ ಪತ್ನಿ ಚೆನ್ನಮ್ಮನವರ ಅಂತ್ಯಕ್ರಿಯೆ ನಾಳೆ ಹಾಸನದ ಮಾವಿನ‌ಕೆರೆ ರಂಗನಾಥಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ನಡೆಯಲಿದೆ.  ದೇವೇಗೌಡರ ಪದ್ಮನಾಭನಗರದ ನಿವಾಸ ಸಮೀಪದ ಮೈದಾನದಲ್ಲಿ ಇಂದು ಬೆಳಿಗ್ಗೆ 7 ರಿಂದ 11 ಗಂಟೆವರೆಗೆ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಬೆಳಗ್ಗೆ 11.05ಕ್ಕೆ ಬೆಂಗಳೂರಿನಿಂದ ಹಾಸನ ಜಿಲ್ಲೆಯ ಹೊಳೆನರಸೀಪುರವರೆಗೆ ಚೆನ್ನಮ್ಮ ಅಂತಿಮ ಯಾತ್ರೆ ನಡೆಯಲಿದೆ. ಹೊಳೆನರಸೀಪುರದ ರೇವಣ್ಣ ನಿವಾಸದಲ್ಲಿ ನಾಳೆ ಬೆಳಗ್ಗೆ 7 ರಿಂದ 9.30ರವರೆಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, 10 ಗಂಟೆಗೆ ಹೊಳೆನರಸೀಪುರದಿಂದ ಪಾರ್ಥಿವ ಶರೀರ ರವಾನೆಯಾಗಲಿದೆ. ಬೆಳಗ್ಗೆ 11.30ಕ್ಕೆ ಮಾವಿನ‌ಕೆರೆ ರಂಗನಾಥಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

ಅಂತಿಮಯಾತ್ರೆ ಸಾಗುವ ಮಾರ್ಗ

ಬೆಂಗಳೂರಿನಿಂದ ನೆಲಮಂಗಲ ಕ್ರಾಸ್, ಸೋಲೂರು ಕ್ರಾಸ್, ಮರೂರು ಹ್ಯಾಂಡ್ ಪೋಸ್ಟ್, ಕುಣಿಗಲ್ ಕ್ರಾಸ್, ಬೆಳ್ಳೂರು ಕ್ರಾಸ್, ಕದಬಳ್ಳಿ ಕ್ರಾಸ್, ಹಿರಿಸಾವೆ, ಚನ್ನರಾಯಪಟ್ಟಣ, ಎಲೆಯೂರು, ಹಾಸನ ಡೈರಿ ಸರ್ಕಲ್, ಭೂನಳ್ಳಿ ಕ್ರಾಸ್, ಶಾಂತಿ ಗ್ರಾಮ, N.R.ಸರ್ಕಲ್ ಮೂಲಕ ಮೊಸಳೆ ಹೊಸಳ್ಳಿಗೆ ತಲುಪಲಿದೆ.

ಇದನ್ನೂ ಓದಿ: ಆ್ಯಸಿಡ್‌ ದಾಳಿಗೂ ಮುನ್ನ ಮಾಜಿ ಪ್ರಧಾನಿ ಪತ್ನಿ ಚೆನ್ನಮ್ಮ ಹೇಗಿದ್ರು ಗೊತ್ತಾ? ಇಲ್ಲಿವೆ ಅಪರೂಪದ ಚಿತ್ರಗಳು

ಶೈತ್ಯಾಗಾರ ಪೆಟ್ಟಿಗೆ ಮೇಲೆರಗಿ ದೇವೇಗೌಡರು ಕಣ್ಣೀರು

ಇನ್ನು ಪತ್ನಿಯ ಅಗಲುವಿಕೆಯ ನೋವಲ್ಲಿರುವ ದೇವೇಗೌಡರು, ದುಃಖ ತಾಳಲಾರದೆ ಚೆನ್ನಮ್ಮ ಅವರ ಪಾರ್ಥಿವ ಶರೀರ ಇರಿಸಿದ್ದ ಶೈತ್ಯಾಗಾರ ಪೆಟ್ಟಿಗೆ ಮೇಲೆರಗಿ ಕಣ್ಣೀರು ಹಾಕಿದ್ದಾರೆ. ಈ ವೇಳೆ ಮಾಜಿ ಪ್ರಧಾನಿಗಳನ್ನು ಮಗಳು ಶೈಲಜಾ ಸಂತೈಸಿದ್ದಾರೆ.

ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ

ಚೆನ್ನಮ್ಮನ್ನವರ ಅಂತಿಮ ದರ್ಶನ ಪಡೆದ ಬಳಿಕ ಸಕಲ ಸರ್ಕಾರಿ ಗೌರವದೊಂದಿಗೆ ಅವರ ಅಂತ್ಯಕ್ರಿಯೆಗೆ ತೀರ್ಮಾನಿಸಿರೋದಾಗಿ ಸಿಎಂ ಡಿ.ಕೆ. ಶಿವಕುಮಾರ್​​ ತಿಳಿಸಿದ್ದಾರೆ. ಈ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ದೇಶದ ಮಾಜಿ ಪ್ರಧಾನಿಯ ಧರ್ಮಪತ್ನಿ, ಕೇಂದ್ರ ಸಚಿವರ ತಾಯಿ ಎಂಬುದನ್ನು ಗಮನದಲ್ಲಿರಿಸಿ ಈ ತೀರ್ಮಾನ ಮಾಡಿರೋದಾಗಿ ಹೇಳಿದ್ದಾರೆ. ಇಂದು ನಡೆಯಲಿರುವ ಕ್ಯಾಬಿನೆಟ್​​ ಸಭೆಯಲ್ಲಿಯೂ ಚೆನ್ನಮ್ಮನವರಿಗೆ ಗೌರವ ನಮನ ಸಲ್ಲಿಸಲಾಗುತ್ತೆ ಎಂದು ಮಾಹಿತಿ ನೀಡಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 6:41 am, Sun, 19 July 26

Source link

ಜಾಕ್ವೆಲಿನ್ ಫರ್ನಾಂಡಿಸ್​ಗೆ ಮುಜುಗರ ತಂದ ವಿಡಿಯೋ ಸಾಂಗ್; ಬ್ಲರ್ ಮಾಡಿದ ತಂಡ – Kannada News | Jacqueline Fernandez Music Video Controversy: Wardrobe Malfunction Rumors Go Viral

ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರ ಹೊಸ ಮ್ಯೂಸಿಕ್ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಸೋನು ತುಕ್ರಾಲ್ ಮತ್ತು ಬಿ ಪ್ರಾಕ್ ಧ್ವನಿಯಲ್ಲಿ ಮೂಡಿಬಂದಿರುವ ಈ ಹಾಡು ಜುಲೈ 15 ರಂದು ಬಿಡುಗಡೆಯಾಗಿದೆ. ಹಾಡು ಬಿಡುಗಡೆಯಾದ ಬೆನ್ನಲ್ಲೇ, ನಟಿಯ ಬಟ್ಟೆಯ ಮುಜುಗರದ ಕ್ಷಣದ ಕುರಿತು ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ. ಇದರಿಂದ ನಟಿ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಹಾಡಿನ ಒಂದು ಸಣ್ಣ ಭಾಗದಲ್ಲಿ ಜಾಕ್ವೆಲಿನ್ ಅವರ ಮುಜುಗರದ ಕ್ಷಣ ಸೆರೆಯಾಗಿದೆ ಎಂದು ನೆಟ್ಟಿಗರು ಆರೋಪಿಸಿದ್ದು, ಇದಕ್ಕೆ ಸಂಬಂಧಿಸಿದ ಕ್ಲಿಪ್ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಆದರೆ, ವಿವಾದ ಬೆಳೆಯುತ್ತಿದ್ದಂತೆ ಯೂಟ್ಯೂಬ್‌ನಲ್ಲಿ ಆ ನಿರ್ದಿಷ್ಟ ಭಾಗವನ್ನು ಬ್ಲರ್ ಮಾಡಲಾಗಿದೆ. ಇದು ಅಭಿಮಾನಿಗಳ ಗಮನಕ್ಕೆ ಬಂದಿದೆ.

ವಿಡಿಯೋ ವೈರಲ್ ಆದ ನಂತರ ಚಿತ್ರತಂಡ ಈ ತಪ್ಪು ತಿದ್ದಿಕೊಂಡಿರಬಹುದು ಎಂದು ಅಂದಾಜಿಸಲಾಗಿದೆ. ಈ ಇಡೀ ಘಟನೆಯ ಬಗ್ಗೆ ಜಾಕ್ವೆಲಿನ್ ಫರ್ನಾಂಡಿಸ್ ಆಗಲಿ ಅಥವಾ ವಿಡಿಯೋ ನಿರ್ಮಾಪಕರಾಗಲಿ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.

ಇನ್ನು ಸಿನಿಮಾಗಳ ವಿಷಯಕ್ಕೆ ಬಂದರೆ, ಜಾಕ್ವೆಲಿನ್ ಫರ್ನಾಂಡಿಸ್ ಇತ್ತೀಚೆಗಷ್ಟೇ ಅಕ್ಷಯ್ ಕುಮಾರ್ ನಟನೆಯ ‘ವೆಲ್‌ಕಮ್ ಟು ದಿ ಜಂಗಲ್’ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಇದು ದೊಡ್ಡ ತಾರಾಗಣದ ಸಿನಿಮಾವಾಗಿದ್ದು, ಸುನಿಲ್ ಶೆಟ್ಟಿ, ದಿಶಾ ಪಟಾನಿ, ಅರ್ಷದ್ ವಾರ್ಸಿ, ರವೀನಾ ಟಂಡನ್ ಮತ್ತು ಪರೇಶ್ ರಾವಲ್ ಸೇರಿದಂತೆ ಬಾಲಿವುಡ್‌ನ ಪ್ರಮುಖ ನಟರು ಈ ಚಿತ್ರದಲ್ಲಿದ್ದಾರೆ.

ಇದನ್ನೂ ಓದಿ:  ಸುಕೇಶ್ ಚಂದ್ರಶೇಖರ್ ಕೇಸ್: ಸುಪ್ರೀಂ ಕೋರ್ಟ್‌ನಿಂದ ಅರ್ಜಿ ಹಿಂಪಡೆದ ನಟಿ ಜಾಕ್ವೆಲಿನ್ ಫರ್ನಾಂಡಿಸ್

ಇನ್ನು 200 ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ಜಾಕ್ವೆಲಿನ್ ಫರ್ನಾಂಡಿಸ್ ಅವರು ಸಿಲುಕಿಕೊಂಡಿದ್ದಾರೆ. ಈ ಪ್ರಕರಣ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ಈ ಪ್ರಕರಣದ ಆರೋಪಿ ಸುಕೇಶ್ ಚಂದ್ರಶೇಖರ್ ಜೊತೆ ಜಾಕ್ವೆಲಿನ್ ಡೇಟಿಂಗ್ ಮಾಡುತ್ತಾ ಇದ್ದಿದ್ದೇ ಅವರಿಗೆ ಸಮಸ್ಯೆ ತಂದೊಡ್ಡಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version