ಜಾನಕಮ್ಮ ಸ್ಮಾರಕಕ್ಕೆ ಬೇಡಿಕೆ: ಶೀಘ್ರದಲ್ಲೇ ತೀರ್ಮಾನ ಮಾಡ್ತೀವಿ ಎಂದ ಸಚಿವ ಯತೀಂದ್ರ – Kannada News | Demand for Janakamma Memorial: Minister Yathindra Says Decision Will Be Taken Soon

ಮೈಸೂರು, ಜುಲೈ 12: ಸ್ವರ ಸರಸ್ವತಿ ಎಸ್ ಜಾನಕಿಯವರಿಗೂ ಮೈಸೂರಿಗೂ ಅವಿನಾಭಾವ ಸಂಬಂಧವಿದೆ. 2008ರಿಂದ ತಮ್ಮ ಇಳಿವಯಸ್ಸಿನವರೆಗೆ ಅಂದರೆ ತಮ್ಮ ಕೊನೆಯ ದಿನಗಳನ್ನು ಕಳೆದಿದ್ದ ಜಾನಕಿಯವರು, ನಾನು ಮೈಸೂರಿನಲ್ಲೇ ಮಣ್ಣಾಗಬೇಕು ಎಂಬ ಮಾತನ್ನ ಹೇಳಿದ್ದರಂತೆ. ಹೀಗಾಗಿ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಸಾರ್ವಜನಿಕರು ಮತ್ತು ಗಣ್ಯರಿಗೆ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಸಂಜೆ 5 ಗಂಟೆಗೆ ಅಂತಿಮ ಸಂಸ್ಕಾರ ನೆರವೇರಲಿದೆ. ಸರ್ಕಾರದ ಪ್ರತಿನಿಧಿಯಾಗಿ ಸಚಿವ ಯತೀಂದ್ರ ಸಿದ್ದರಾಮಯ್ಯ ಅಂತಿಮ ಸಂಸ್ಕಾರದಲ್ಲಿ ಭಾಗವಹಿಸಲಿದ್ದಾರೆ. ಇನ್ನು ಜಾನಕಿಯಮ್ಮ ಅವರ ಸ್ಮಾರಕ ನಿರ್ಮಿಸಬೇಕೆಂಬ ಸಾರ್ವಜನಿಕರ ಬೇಡಿಕೆ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಯತೀಂದ್ರ, ಈ ಕುರಿತು ಸಿಎಂ ಗಮನಕ್ಕೆ ತರುವುದಾಗಿ ಹೇಳಿದರು. ಇದು ಸರ್ಕಾರದ ಮಟ್ಟದಲ್ಲಿ ಮುಖ್ಯಮಂತ್ರಿಗಳೇ ತೀರ್ಮಾನಿಸಬೇಕಾದ ವಿಷಯವಾಗಿದ್ದು, ನಾನು ಕೂಡ ಈ ಬಗ್ಗೆ ಮನವಿ ಸಲ್ಲಿಸುವುದಾಗಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ರೈಲ್ವೆ ಟಿಕೆಟ್ ನಿಯಮಗಳ ಪರಿಷ್ಕರಣೆ; ಟಿಕೆಟ್​ನ ವಾಟ್ಸಾಪ್ ಸ್ಕ್ರೀನ್​ಶಾಟ್, ಫೋಟೋ, ಪಿಡಿಎಫ್ ಕಾಪಿಗಳು ಮಾನ್ಯವಾ? – Kannada News | Indian railways update, WhatsApp screenshot, photos, pdf valid or invalid, what are new digital ticket rules

ರೈಲಿನ ಸಾಂದರ್ಭಿಕ ಚಿತ್ರImage Credit source: Firdous Nazir/NurPhoto via Getty Images

ನವದೆಹಲಿ, ಜುಲೈ 11: ಇತ್ತೀಚೆಗೆ ಮಹಿಳಾ ಪ್ರಯಾಣಿಕರೊಬ್ಬರು ರೈಲಿನಲ್ಲಿ ಪ್ರಯಾಣಿಸುವಾಗ ತಮ್ಮ ಸಹೋದರ ವಾಟ್ಸಾಪ್ (WhatsApp) ಮೂಲಕ ಕಳುಹಿಸಿದ್ದ ಡಿಜಿಟಲ್ ಅನ್ ರಿಸರ್ವ್ಡ್ (ಸಾಮಾನ್ಯ/ಜನರಲ್) ಟಿಕೆಟ್‌ನ ಸ್ಕ್ರೀನ್‌ಶಾಟ್ ಅನ್ನು ಟಿಕೆಟ್ ತಪಾಸಣಾಧಿಕಾರಿಗೆ (TTE) ತೋರಿಸಿದ್ದರು. ಆದರೆ ಆ ಟಿಕೆಟ್ ರೈಲು ನಿಲ್ದಾಣದಿಂದ ಹೊರಟ ನಂತರ ಬುಕ್ ಆಗಿರುವುದು ಟಿಟಿಇ ಗಮನಕ್ಕೆ ಬಂದಿತು. ಹಾಗೆಯೇ, ಮಹಿಳೆಯ ಸ್ವಂತ ಮೊಬೈಲ್‌ನಿಂದ ಟಿಕೆಟ್ ಬುಕ್ ಆಗಿರಲಿಲ್ಲ. ಈ ಕಾರಣಕ್ಕೆ ಮಹಿಳೆ ತೋರಿದ ಡಿಜಿಟಲ್ ಟಿಕೆಟ್ ಅನ್ನು ಟಿಟಿಇ ಮಾನ್ಯ ಮಾಡಲಿಲ್ಲ. ಒಂದು ರೀತಿಯಲ್ಲಿ ಆ ಮಹಿಳೆಯದ್ದು ರೈಲು ಹೋದ ಮೇಲೆ ಟಿಕೆಟ್ ಕೊಂಡ ಕಥೆಯಂತಿತ್ತು. ಈ ಘಟನೆ ಬಳಿಕ ಭಾರತೀಯ ರೈಲ್ವೆಯು ತನ್ನ ಡಿಜಿಟಲ್ ಟಿಕೆಟ್ ನಿಯಮಗಳನ್ನು ಕಟ್ಟುನಿಟ್ಟಾಗಿಸಿದ್ದು, ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಅವುಗಳ ವಿವರ ಇಲ್ಲಿದೆ:

ಭಾರತೀಯ ರೈಲ್ವೆ: ಯಾವ ರೀತಿಯ ಟಿಕೆಟ್‌ಗಳು ಅಮಾನ್ಯ?

  • ವಾಟ್ಸಾಪ್ ಅಥವಾ ಇತರೆ ಮೆಸೇಜಿಂಗ್ ಆ್ಯಪ್‌ಗಳಲ್ಲಿ ಬಂದ ಟಿಕೆಟ್‌ಗಳ ಸ್ಕ್ರೀನ್‌ಶಾಟ್‌ಗಳು (Screenshots).
  • ಟಿಕೆಟ್‌ನ ಫೋಟೋಗಳು ಅಥವಾ ಕೇವಲ ಪಿಡಿಎಫ್ (PDF) ಪ್ರತಿಗಳು.
  • ಬೇರೆ ಯಾರೋ ಬುಕ್ ಮಾಡಿ ಕಳುಹಿಸಿದ ಫೋಟೋಗಳು.

ಇಂತಹ ಸ್ಕ್ರೀನ್‌ಶಾಟ್‌ಗಳನ್ನು ತೋರಿಸಿದರೆ ನೀವು ಸೂಕ್ತ ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿದ್ದೀರಿ ಎಂದು ಪರಿಗಣಿಸಿ ದಂಡ ವಿಧಿಸಲಾಗುತ್ತದೆ.

ಇದನ್ನೂ ಓದಿ: ಕ್ರೆಡಿಟ್ ಕಾರ್ಡ್ ಹೊಂದಿರುವವರು ದಿಢೀರ್ ಮೃತಪಟ್ಟರೆ ಬಿಲ್ ಕಟ್ಟೋರು ಯಾರು? ಕುಟುಂಬದವರ ಜವಾಬ್ದಾರಿಯೇ?

ಭಾರತೀಯ ರೈಲ್ವೆ: ಹೊಸ ನಿಯಮಗಳ ಪ್ರಕಾರ ಯಾವುದು ಸಿಂಧು?

  • ಡಿಜಿಟಲ್ ಅನ್ ರಿಸರ್ವ್ಡ್ (Unreserved/General) ಟಿಕೆಟ್‌ಗಳಾಗಿದ್ದರೆ, ನೀವು ಅಧಿಕೃತ ‘ರೈಲ್ ಒನ್’ (Rail One) ಅಥವಾ ಆಯಾ ಅಧಿಕೃತ ಆ್ಯಪ್ ಮೂಲಕವೇ ಮೂಲ (Original) ಟಿಕೆಟ್ ಅನ್ನು ಲೈವ್ ಆಗಿ ತೋರಿಸಬೇಕು.
  • ಯಾವ ಮೊಬೈಲ್ ಸಂಖ್ಯೆ ಮತ್ತು ಸಾಧನದಿಂದ ಟಿಕೆಟ್ ಬುಕ್ ಆಗಿದೆಯೋ, ಅದೇ ಮೊಬೈಲ್ ಸಾಧನದಲ್ಲಿ ಟಿಕೆಟ್ ಅನ್ನು ತೋರಿಸುವುದು ಕಡ್ಡಾಯ.
  • ರೈಲು ನಿಲ್ದಾಣದಿಂದ ಹೊರಡುವ ಮುನ್ನವೇ ಈ ಡಿಜಿಟಲ್ ಅನ್ ರಿಸರ್ವ್ಡ್ ಟಿಕೆಟ್‌ಗಳನ್ನು ಬುಕ್ ಮಾಡಿರಬೇಕು. ರೈಲು ಹೊರಟ ನಂತರ ಬುಕ್ ಮಾಡಿದರೆ ಅದು ಮಾನ್ಯವಾಗುವುದಿಲ್ಲ.

ರಿಸರ್ವ್ಡ್ (ಕಾಯ್ದಿರಿಸಿದ) ಟಿಕೆಟ್‌ಗಳಿಗೆ ಈ ನಿಯಮ ಅನ್ವಯಿಸುತ್ತದೆಯೇ?

ರಿಸರ್ವ್ಡ್ ಟಿಕೆಟ್​ಗಳಿಗೆ ಈ ನಿಯಮ ಅನ್ವಯಿಸುವುದಿಲ್ಲ. ಈ ಕಟ್ಟುನಿಟ್ಟಾದ ಸ್ಕ್ರೀನ್‌ಶಾಟ್ ನಿಯಮವು ಮುಖ್ಯವಾಗಿ ಡಿಜಿಟಲ್ ಅನ್ ರಿಸರ್ವ್ಡ್ (ಸಾಮಾನ್ಯ) ಟಿಕೆಟ್‌ಗಳಿಗೆ ಮಾತ್ರ ಅನ್ವಯಿಸುತ್ತದೆ.

ರಿಸರ್ವ್ಡ್ (IRCTC ಮೂಲಕ ಬುಕ್ ಮಾಡಿದ ಸ್ಲೀಪರ್, AC ಇತ್ಯಾದಿ) ಟಿಕೆಟ್‌ಗಳನ್ನು ಹೊಂದಿರುವವರು ಅಧಿಕೃತ ಆ್ಯಪ್, SMS ದೃಢೀಕರಣ ಅಥವಾ ಇ-ಟಿಕೆಟ್ ಪ್ರತಿಯೊಂದಿಗೆ ತಮ್ಮ ಸರ್ಕಾರದ ಅಧಿಕೃತ ಗುರುತಿನ ಚೀಟಿ (Aadhaar, PAN, Voter ID ಇತ್ಯಾದಿ) ತೋರಿಸಿ ಪ್ರಯಾಣಿಸಬಹುದು.

ಇದನ್ನೂ ಓದಿ: ಬಿಎಸ್ಸೆನ್ನೆಲ್​ನಿಂದ ಸೆಟಿಲೈಟ್ ಫೋನ್; ಬೆಲೆ 1.34 ಲಕ್ಷ ರೂ; ಮಾಸಿಕ ಸಬ್​ಸ್ಕ್ರಿಪ್ಷನ್ ಪ್ಲಾನ್ 3,500 ರೂನಿಂದ ಆರಂಭ

ಪ್ರಯಾಣಿಕರಿಗೆ ರೈಲ್ವೆಯ ಸಲಹೆಗಳು

  • ನಿಮ್ಮ ಪ್ರಯಾಣದ ಉದ್ದಕ್ಕೂ ಟಿಕೆಟ್ ಬುಕ್ ಮಾಡಿದ ಮೊಬೈಲ್ ಫೋನ್ ಅನ್ನು ನಿಮ್ಮ ಬಳಿಯೇ ಇಟ್ಟುಕೊಳ್ಳಿ.
  • ಫೋನ್‌ನಲ್ಲಿ ಸಾಕಷ್ಟು ಬ್ಯಾಟರಿ ಚಾರ್ಜ್ ಇರುವಂತೆ ನೋಡಿಕೊಳ್ಳಿ (TTE ತಪಾಸಣೆ ಮಾಡುವಾಗ ಫೋನ್ ಆಫ್ ಆಗಿದ್ದರೆ ಸಮಸ್ಯೆ ಎದುರಾಗಬಹುದು).

ಯಾವುದೇ ವಂಚನೆ ಅಥವಾ ತಪ್ಪುಗಳನ್ನು ತಡೆಯಲು ರೈಲ್ವೆ ಇಲಾಖೆ ಈ ಕಠಿಣ ಕ್ರಮ ಕೈಗೊಂಡಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಹೈಸ್ಪೀಡ್ ಯುಗಕ್ಕೆ ಭಾರತ ಸಜ್ಜು: 2027 ಆಗಸ್ಟ್ 15 ರಿಂದ ದೇಶದ ಮೊದಲ ಬುಲೆಟ್ ರೈಲು ಸಂಚಾರ ಆರಂಭ – Kannada News | India’s First Bullet Train: Mumbai Ahmedabad High Speed Rail Set for Aug 2027 Launch

ನವದೆಹಲಿ, ಜುಲೈ 12: ಭಾರತೀಯ ರೈಲ್ವೆಯ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆಯಬಹುದಾದ ಕ್ಷಣ ಹತ್ತಿರವಾಗುತ್ತಿದೆ. ದೇಶದ ಮೊದಲ ಹೈಸ್ಪೀಡ್ ಬುಲೆಟ್ ರೈಲು (Bullet Train) ಸೇವೆಯು ಆಗಸ್ಟ್ 15, 2027 ರಿಂದ ಹಂತ ಹಂತವಾಗಿ ಸಾರ್ವಜನಿಕ ಕಾರ್ಯಾಚರಣೆಯನ್ನು ಪ್ರಾರಂಭಿಸಲಿದೆ. ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಈ ಮಹತ್ವದ ಯೋಜನೆಯ ಅಧಿಕೃತ ವೇಳಾಪಟ್ಟಿಯನ್ನು ಹಂಚಿಕೊಂಡಿದ್ದು, ಭಾರತವು ಅಧಿಕೃತವಾಗಿ ಜಾಗತಿಕ ಹೈಸ್ಪೀಡ್ ರೈಲು ಕ್ಲಬ್‌ಗೆ ಸೇರ್ಪಡೆಯಾಗಲಿದೆ ಎಂದು ಪ್ರಕಟಿಸಿದ್ದಾರೆ.

ಮೊದಲ ಬುಲೆಟ್ ರೈಲು ಯಾವ ಮಾರ್ಗದಲ್ಲಿ ಚಲಿಸಲಿದೆ?

ಮುಂಬೈ-ಅಹಮದಾಬಾದ್ ಹೈ-ಸ್ಪೀಡ್ ರೈಲು (MAHSR) ಕಾರಿಡಾರ್ ಅಡಿಯಲ್ಲಿ ಮೊದಲ ಹಂತವಾಗಿ ಗುಜರಾತ್‌ನ ಸೂರತ್ ಮತ್ತು ಬಿಲಿಮೊರಾ ನಡುವಿನ ಮಾರ್ಗವು ಕಾರ್ಯಾಚರಣೆಗೆ ಬರಲಿದೆ.

ಒಟ್ಟು 508 ಕಿಲೋಮೀಟರ್ ಉದ್ದದ ಈ ಇಡೀ ಕಾರಿಡಾರ್ ಅನ್ನು ಒಂದೇ ಬಾರಿಗೆ ತೆರೆಯುವ ಬದಲು ಸುರಕ್ಷತೆಯ ದೃಷ್ಟಿಯಿಂದ ಹಂತ ಹಂತವಾಗಿ ಲೋಕಾರ್ಪಣೆ ಮಾಡಲಾಗುತ್ತದೆ. ಸೂರತ್-ಬಿಲಿಮೊರಾ ಮಾರ್ಗದ ಯಶಸ್ಸಿನ ನಂತರ, ವಾಪಿ-ಸೂರತ್, ವಾಪಿ-ಅಹಮದಾಬಾದ್, ಅಹಮದಾಬಾದ್-ಥಾಣೆ ಮತ್ತು ಅಂತಿಮವಾಗಿ ಅಹಮದಾಬಾದ್-ಮುಂಬೈ ಮಾರ್ಗಗಳನ್ನು ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸಲಾಗುತ್ತದೆ.

ಶೇ. 80 ರಷ್ಟು ಕೆಲಸ ಪೂರ್ಣ
ಯೋಜನೆಯ ಪ್ರಗತಿಯ ಕುರಿತು ಮಾತನಾಡಿದ ರೈಲ್ವೆ ಸಚಿವರು, ಈಗಾಗಲೇ ಇಡೀ ಬುಲೆಟ್ ರೈಲು ಯೋಜನೆಯ ಸುಮಾರು ಶೇ. 80 ರಷ್ಟು ನಿರ್ಮಾಣ ಕಾರ್ಯಗಳು ಯಶಸ್ವಿಯಾಗಿ ಪೂರ್ಣಗೊಂಡಿವೆ ಎಂದಿದ್ದಾರೆ. ನಿಗದಿಪಡಿಸಿದ ಗುರಿಯನ್ನು ತಲುಪಲು ಹಗಲಿರುಳು ಕೆಲಸಗಳು ಸಾಗುತ್ತಿವೆ. ಈ ಯೋಜನೆ ಪೂರ್ಣಗೊಂಡರೆ ಭಾರತದ ಎರಡು ಪ್ರಮುಖ ಆರ್ಥಿಕ ನಗರಗಳಾದ ಮುಂಬೈ ಮತ್ತು ಅಹಮದಾಬಾದ್ ನಡುವಿನ ಪ್ರಯಾಣದ ಸಮಯ ಗಣನೀಯವಾಗಿ ಕಡಿಮೆಯಾಗಲಿದ್ದು, ಪ್ರಾದೇಶಿಕ ಆರ್ಥಿಕತೆಗೆ ಭಾರಿ ಉತ್ತೇಜನ ಸಿಗಲಿದೆ.

ಮತ್ತಷ್ಟು ಓದಿ; ಇನ್ಮುಂದೆ ಬೆಂಗಳೂರಿನಿಂದ ಮಂಗಳೂರಿಗೆ ಕೇವಲ 5 ಗಂಟೆಗಳಲ್ಲಿ ತಲುಪಬಹುದು! ಅದು ಹೇಗೆ ಗೊತ್ತಾ?

ದಕ್ಷಿಣ ಭಾರತಕ್ಕೂ ಸಿಗಲಿದೆ ಬುಲೆಟ್ ರೈಲು ಭಾಗ್ಯ
ಕೇಂದ್ರ ಸರ್ಕಾರವು ಕೇವಲ ಮುಂಬೈ-ಅಹಮದಾಬಾದ್ ಮಾರ್ಗಕ್ಕೆ ಸೀಮಿತವಾಗದೆ, ದೇಶದಾದ್ಯಂತ ಹೈಸ್ಪೀಡ್ ಜಾಲವನ್ನು ವಿಸ್ತರಿಸಲು ಬ್ಲೂಪ್ರಿಂಟ್ ಸಿದ್ಧಪಡಿಸಿದೆ. ದಕ್ಷಿಣ ಭಾರತದ ಪ್ರಮುಖ ಐಟಿ ಹಬ್ ಆಗಿರುವ ಹೈದರಾಬಾದ್ ಅನ್ನು ಕೇಂದ್ರೀಕರಿಸಿ ಮೂರು ಹೊಸ ಬುಲೆಟ್ ರೈಲು ಕಾರಿಡಾರ್‌ಗಳನ್ನು ಘೋಷಿಸಲಾಗಿದೆ.

ಹೈದರಾಬಾದ್ – ಬೆಂಗಳೂರು ಕಾರಿಡಾರ್
ಪುಣೆ – ಹೈದರಾಬಾದ್ ಕಾರಿಡಾರ್

ಹೈದರಾಬಾದ್ – ಚೆನ್ನೈ ಕಾರಿಡಾರ್

ಇದರ ಜೊತೆಗೆ ಹೈದರಾಬಾದ್‌ನಿಂದ ಮುಂಬೈಗೂ ನೇರ ಹೈಸ್ಪೀಡ್ ರೈಲು ಸಂಪರ್ಕ ಕಲ್ಪಿಸುವ ಪ್ರಸ್ತಾವನೆ ಸರ್ಕಾರದ ಮುಂದಿದೆ ಎಂದು ಸಚಿವರು ತಿಳಿಸಿದ್ದಾರೆ.

ಬುಲೆಟ್ ರೈಲು ಮಾತ್ರವಲ್ಲದೆ, ದೇಶದ ಸಾಮಾನ್ಯ ಪ್ರಯಾಣಿಕರು ಬಳಸುವ ಸಾಮಾನ್ಯ ರೈಲು ನಿಲ್ದಾಣಗಳ ಮುಖಾಂತರವನ್ನೂ ಬದಲಾಯಿಸಲು ಸರ್ಕಾರ ‘ನವ-ನಿರ್ಮಾಣ’ ಉಪಕ್ರಮವನ್ನು ಜಾರಿಗೆ ತಂದಿದೆ. ಇದರ ಅಡಿಯಲ್ಲಿ ಭಾರತದಾದ್ಯಂತ 261 ರೈಲು ನಿಲ್ದಾಣಗಳನ್ನು ವಿಶ್ವದರ್ಜೆಯ ವಿಮಾನ ನಿಲ್ದಾಣಗಳ ಮಾದರಿಯಲ್ಲಿ ಆಧುನೀಕರಿಸಲಾಗುತ್ತಿದೆ.

ಅತ್ಯಾಧುನಿಕ ವೈಟಿಂಗ್ ಲಾಂಜ್, ಉಚಿತ ವೈಫೈ, ಶಾಪಿಂಗ್ ಕಾಂಪ್ಲೆಕ್ಸ್ ಸೇರಿದಂತೆ ಹಲವು ಸೌಲಭ್ಯಗಳನ್ನು ನೀಡಲಾಗುತ್ತಿದ್ದು, ಸಿಕಂದರಾಬಾದ್ ಹಾಗೂ ಹೈಟೆಕ್ ಸಿಟಿ ನಿಲ್ದಾಣಗಳಲ್ಲಿ ಸದ್ಯ ಪುನರಾಭಿವೃದ್ಧಿ ಕಾರ್ಯಗಳು ವೇಗವಾಗಿ ನಡೆಯುತ್ತಿವೆ. ಭಾರತೀಯ ರೈಲ್ವೆಯ ಈ ಡಿಜಿಟಲ್ ಹಾಗೂ ಹೈಟೆಕ್ ರೂಪಾಂತರವು ಭವಿಷ್ಯದ ಸುಗಮ ಪ್ರಯಾಣಕ್ಕೆ ದಾರಿಯಾಗಲಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Vastu Tips: ಮನೆಯ ಗೋಡೆಯ ಮೇಲೆ ಸೂರ್ಯಾಸ್ತದ ಫೋಟೋ ನೇತುಹಾಕಿದ್ದೀರಾ? ವಾಸ್ತು ಎಚ್ಚರಿಕೆ ಇಲ್ಲಿದೆ – Kannada News | Vastu Pictures: Avoid Sunset, Choose Sunrise for Prosperity and Positive Home Energy

ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿರುವ ಪ್ರತಿಯೊಂದು ವಸ್ತು, ಚಿತ್ರ ಅಥವಾ ಅಲಂಕಾರವು ಅಲ್ಲಿನ ವಾತಾವರಣ ಮತ್ತು ನಿವಾಸಿಗಳ ಮನಸ್ಥಿತಿಯ ಮೇಲೆ ಪ್ರಭಾವ ಬೀರುತ್ತದೆ ಎಂಬ ನಂಬಿಕೆ ಇದೆ. ಆದ್ದರಿಂದ ಮನೆಯಲ್ಲಿ ನೇತುಹಾಕುವ ಚಿತ್ರಗಳನ್ನು ಆಯ್ಕೆ ಮಾಡುವಾಗಲೂ ಕೆಲವು ವಾಸ್ತು ನಿಯಮಗಳನ್ನು ಅನುಸರಿಸುವಂತೆ ಸಲಹೆ ನೀಡಲಾಗುತ್ತದೆ. ಅವುಗಳಲ್ಲಿ ಪ್ರಮುಖವಾದದ್ದು ಮುಳುಗುತ್ತಿರುವ ಸೂರ್ಯನ (Sunset) ಚಿತ್ರದ ಕುರಿತ ನಂಬಿಕೆ.

ಮುಳುಗುತ್ತಿರುವ ಸೂರ್ಯನ ಚಿತ್ರ ಅಶುಭವೆಂದು ಏಕೆ ಪರಿಗಣಿಸಲಾಗುತ್ತದೆ?

ವಾಸ್ತು ಶಾಸ್ತ್ರದ ಪ್ರಕಾರ, ಮುಳುಗುತ್ತಿರುವ ಸೂರ್ಯ ದಿನದ ಅಂತ್ಯವನ್ನು ಸೂಚಿಸುತ್ತದೆ. ಇದು ಅವಕಾಶಗಳ ಮುಕ್ತಾಯ, ಉತ್ಸಾಹದ ಕುಂಠಿತತೆ, ಆಲಸ್ಯ, ನಿಶ್ಚಲತೆ ಹಾಗೂ ಜೀವನದಲ್ಲಿ ಪ್ರಗತಿ ನಿಧಾನವಾಗುವುದರ ಸಂಕೇತವೆಂದು ಪರಿಗಣಿಸಲಾಗುತ್ತದೆ. ಈ ಕಾರಣದಿಂದ ಮನೆಯ ಮುಖ್ಯ ಹಾಲ್, ಪೂಜಾ ಕೋಣೆ, ಮಲಗುವ ಕೋಣೆ ಅಥವಾ ಕಚೇರಿಯಂತಹ ಪ್ರಮುಖ ಸ್ಥಳಗಳಲ್ಲಿ ಇಂತಹ ಚಿತ್ರಗಳನ್ನು ಹಾಕುವುದನ್ನು ತಪ್ಪಿಸಬೇಕು ಎಂದು ವಾಸ್ತು ತಜ್ಞರು ಸಲಹೆ ನೀಡುತ್ತಾರೆ.

ಇದಲ್ಲದೆ, ಕೆಲವು ವಾಸ್ತು ನಂಬಿಕೆಗಳ ಪ್ರಕಾರ ಮುಳುಗುತ್ತಿರುವ ಸೂರ್ಯನ ಚಿತ್ರವು ಮನೆಯಲ್ಲಿನ ಸಕಾರಾತ್ಮಕ ಶಕ್ತಿಯನ್ನು ಕಡಿಮೆ ಮಾಡಿ ನಿರಾಶೆಯ ಭಾವನೆ ಹೆಚ್ಚಿಸಬಹುದು ಎಂದು ಹೇಳಲಾಗುತ್ತದೆ. ಆದರೆ ಈ ನಂಬಿಕೆಗಳಿಗೆ ವೈಜ್ಞಾನಿಕ ದೃಢೀಕರಣ ಇಲ್ಲ ಎಂಬುದನ್ನು ಗಮನಿಸಬೇಕು.

ಇದನ್ನೂ ಓದಿ: ಚಿಕ್ಕ ಮಕ್ಕಳಿಗೆ ಕನ್ನಡಿ ತೋರಿಸಬಾರದು ಏಕೆ? ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ಕಾರಣ ಇಲ್ಲಿದೆ

ಯಾವ ಚಿತ್ರದ ಆಯ್ಕೆ ಶುಭಕರ?

ವಾಸ್ತು ಶಾಸ್ತ್ರದಲ್ಲಿ ಉದಯಿಸುತ್ತಿರುವ ಸೂರ್ಯನ (Sunrise) ಚಿತ್ರವನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಉದಯಿಸುವ ಸೂರ್ಯ ಹೊಸ ಆರಂಭ, ಯಶಸ್ಸು, ಆಶಾವಾದ, ಆತ್ಮವಿಶ್ವಾಸ, ಬೆಳವಣಿಗೆ ಮತ್ತು ಸಮೃದ್ಧಿಯ ಸಂಕೇತವಾಗಿದೆ. ಆದ್ದರಿಂದ ಮನೆಯ ಪೂರ್ವ ದಿಕ್ಕಿನಲ್ಲಿ ಅಥವಾ ಸಭಾಂಗಣದಲ್ಲಿ ಉದಯಿಸುತ್ತಿರುವ ಸೂರ್ಯನ ಚಿತ್ರವನ್ನು ಅಳವಡಿಸುವುದು ಉತ್ತಮ ಎಂದು ಹೇಳಲಾಗುತ್ತದೆ.

ಇನ್ನೂ ಯಾವ ರೀತಿಯ ಚಿತ್ರಗಳು ಶುಭಕರ?

ವಾಸ್ತು ನಂಬಿಕೆಗಳ ಪ್ರಕಾರ, ಮನೆಯಲ್ಲಿ ಹಸಿರು ಪ್ರಕೃತಿ, ಹರಿಯುವ ನದಿ, ಅರಳಿದ ಹೂವುಗಳು, ಪರ್ವತ, ಪಕ್ಷಿಗಳು ಹಾಗೂ ಸಕಾರಾತ್ಮಕತೆಯನ್ನು ಪ್ರತಿಬಿಂಬಿಸುವ ಚಿತ್ರಗಳನ್ನು ಅಳವಡಿಸುವುದು ಶುಭಕರವೆಂದು ಪರಿಗಣಿಸಲಾಗುತ್ತದೆ. ಇಂತಹ ಚಿತ್ರಗಳು ಮನಸ್ಸಿಗೆ ನೆಮ್ಮದಿ ನೀಡುವುದರ ಜೊತೆಗೆ ಮನೆಯ ವಾತಾವರಣವನ್ನು ಆಹ್ಲಾದಕರವಾಗಿಡಲು ಸಹಕಾರಿಯಾಗುತ್ತವೆ ಎಂಬ ನಂಬಿಕೆಯೂ ಇದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಆರ್‌ಎಸ್‌ಎಸ್​​ ಸಭೆ ಮುಕ್ತಾಯ: ರಾಮಮಂದಿರ ದೇಣಿಗೆ ದುರ್ಬಳಕೆಗೆ ವಿಷಾದ, ಜನಸಂಖ್ಯೆ ಅಸಮತೋಲನದ ಬಗ್ಗೆ ಕಳವಳ – Kannada News | RSS Belagavi Meet Raises Concerns Over Ayodhya Ram Mandir Donation Misuse and Population Imbalance

ಬೆಳಗಾವಿ, ಜುಲೈ 12: ಬೆಳಗಾವಿಯ ಆನಗೋಳದ ಸಂತ ಮೀರಾ ಶಾಲೆಯಲ್ಲಿ ಮೂರು ದಿನಗಳಿಂದ ನಡೆದಿದ್ದ ಆರ್‌ಎಸ್‌ಎಸ್ (RSS) ರಾಷ್ಟ್ರೀಯ ವಾರ್ಷಿಕ ಸಭೆ ಇಂದು ಮುಕ್ತಾಯವಾಗಿದೆ. ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್​ ಭಾಗವತ್‌, ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಸೇರಿದಂತೆ 226 ಪ್ರಚಾರಕರು ಸಭೆಯಲ್ಲಿ ಭಾಗಿಯಾಗಿದ್ದು, 2026ರ ಶಾಖಾ ವಿಸ್ತರಣೆ, ಪ್ರಶಿಕ್ಷಣ ವರ್ಗಗಳ ವಿಶ್ಲೇಷಣೆ ಬಗ್ಗೆ ಚರ್ಚಿಸಲಾಗಿದೆ. ಜೊತೆಗೆ ಅಯೋಧ್ಯೆ ರಾಮಮಂದಿರ ದೇಣಿಗೆ ದುರ್ಬಳಕೆ ಬಗ್ಗೆ ವಿಷಾದ ವ್ಯಕ್ತಪಡಿಸಲಾಗಿದ್ದು, ಇಂಥ ಘಟನೆ ಮರುಕಳಿಸದಂತೆ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ಗೆ ಆಗ್ರಹಿಸಲಾಗಿದೆ.

ರಾಮಮಂದಿರ ದೇಣಿಗೆ ದುರ್ಬಳಕೆ ಬಗ್ಗೆ ವಿಷಾದ

ಸಭೆಯಲ್ಲಿ ಅಯೋಧ್ಯೆ ರಾಮಮಂದಿರ ದೇಣಿಗೆ ದುರ್ಬಳಕೆ ಬಗ್ಗೆ ವಿಷಾದ ವ್ಯಕ್ತಪಡಿಸಲಾಗಿದೆ. ಕೋಟ್ಯಂತರ ರಾಮಭಕ್ತರ ಅಪಾರ ನಂಬಿಕೆ ಮತ್ತು ಭಾವನೆಗಳಿಗೆ ಧಕ್ಕೆ ಬಾರದಂತೆ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ತಕ್ಷಣವೇ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಭೆಯಲ್ಲಿ ಆಗ್ರಹಿಸಲಾಗಿದೆ. ಈ ಹಗರಣದ ಸತ್ಯ ಎಸ್‌ಐಟಿ ಹಾಗೂ ಪೊಲೀಸ್ ತನಿಖೆಯಿಂದ ಹೊರಬರಬೇಕು. ಇಂತಹ ಘಟನೆಗಳು ಭವಿಷ್ಯದಲ್ಲಿ ಎಂದಿಗೂ ಮರುಕಳಿಸಬಾರದು ಎಂದು ಸಂಘವು ಬಲವಾಗಿ ಒತ್ತಾಯಿಸಿದೆ.

ಶಾಖಾ ವಿಸ್ತರಣೆ, ಪ್ರಶಿಕ್ಷಣ ವರ್ಗಗಳ ವಿಶ್ಲೇಷಣೆ ಬಗ್ಗೆ ಚರ್ಚೆ

ಸಭೆ ಬಳಿಕ ಮಾಧ್ಯಮದವರೊಂದಿಗೆ ಆರ್‌ಎಸ್ಎಸ್ ಪ್ರಚಾರ ವಿಭಾಗದ ಪ್ರಮುಖ ಸುನೀಲ್ ಅಂಬೇಕರ್ ಮಾತನಾಡಿದ್ದು, ‘‘ಆರ್‌ಎಸ್‌ಎಸ್ ಸ್ಥಾಪನೆಯಾಗಿ ಶತಾಬ್ದಿ ವರ್ಷ ಹಿನ್ನೆಲೆ ದೇಶಾದ್ಯಂತ ಸಂಘದ ಶಾಖೆಗಳನ್ನು ಗರಿಷ್ಠ ಮಟ್ಟದಲ್ಲಿ ವಿಸ್ತರಿಸುವ ಕುರಿತು ಸಭೆಯಲ್ಲಿ ಚರ್ಚೆ ಮಾಡಲಾಗಿದೆ. ಈ ನಿಟ್ಟಿನಲ್ಲಿ ಮೋಹನ್ ಭಾಗವತ್ ಅವರ ಮುಂಬರುವ ದೇಶವ್ಯಾಪಿ ಪ್ರವಾಸದ ಕಾರ್ಯಕ್ರಮಗಳ ಬಗ್ಗೆ ವಿಶೇಷ ಕ್ರಿಯಾಯೋಜನೆಯನ್ನು ಸಿದ್ಧಪಡಿಸಲಾಗಿದೆ. 2026ರ ಸಾಲಿನಲ್ಲಿ ಶಾಖೆಗಳ ವಿಸ್ತರಣೆ ಹಾಗೂ ಪ್ರಶಿಕ್ಷಣ ವರ್ಗಗಳ ಪ್ರಗತಿ ಪರಿಶೀಲನೆಯನ್ನು ಕೈಗೊಳ್ಳಲಾಗಿದ್ದು, ಸಾಮಾಜಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಾರ್ವಜನಿಕರ ಸಹಭಾಗಿತ್ವವನ್ನು ಹೆಚ್ಚಿಸಲು ನಿರ್ಧರಿಸಲಾಗಿದೆ’’ ಎಂದು ತಿಳಿಸಿದರು.

ಇದನ್ನೂ ಓದಿ: ಬೆಳಗಾವಿಯಲ್ಲಿ ಆರ್‌ಎಸ್‌ಎಸ್‌ ವಾರ್ಷಿಕ ಸಭೆ ಬಗ್ಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಖಡಕ್ ಮಾತು

‘‘ಇನ್ನು ದೇಶಾದ್ಯಂತ ಒಟ್ಟು 83 ಸಂಘ ಶಿಕ್ಷಣ ವರ್ಗಗಳನ್ನು ಹಾಗೂ 12 ಕಾರ್ಯಕರ್ತ ವಿಕಾಸ ವರ್ಗಗಳನ್ನು ಆಯೋಜಿಸಲಾಗಿತ್ತು. ಈ ವರ್ಗಗಳಲ್ಲಿ ಒಟ್ಟು 18,842 ಸ್ವಯಂಸೇವಕರಿಗೆ ತರಬೇತಿ ನೀಡಲಾಗಿದ್ದು, ಈ ತರಬೇತಿಯಲ್ಲಿ ಸಂಘದ ಮೂಲ ತತ್ವಗಳೊಂದಿಗೆ ಪರಿಸರ ಸಂರಕ್ಷಣೆ, ಜಲ ಸಂರಕ್ಷಣೆ ಹಾಗೂ ವಿಪತ್ತು ನಿರ್ವಹಣೆಯಂತಹ ಸಾಮಾಜಿಕ ಜವಾಬ್ದಾರಿಗಳ ಕುರಿತು ಕಾರ್ಯಕರ್ತರಿಗೆ ಮಾರ್ಗದರ್ಶನ ನೀಡಲಾಗಿದೆ’’ ಎಂದರು.

ಜನಸಂಖ್ಯೆ ಅಸಮತೋಲನದ ಬಗ್ಗೆ ಕಳವಳ ವ್ಯಕ್ತಪಡಿಸಿದ ಆರ್‌ಎಸ್‌ಎಸ್

‘‘ದೇಶದ ಜನಸಂಖ್ಯೆ ಅಸಮತೋಲನ ಕುರಿತು ಸಭೆಯಲ್ಲಿ ಕಳವಳ ವ್ಯಕ್ತಪಡಿಸಲಾಗಿದ್ದು, ಜನಸಂಖ್ಯೆ ಹೆಚ್ಚಳದಿಂದಾಗುವ ಸವಾಲುಗಳು ಮತ್ತು ಜನಗಣತಿ ಬಗ್ಗೆ ಚರ್ಚಿಸಲಾಗಿದೆ. ಅದೇ ರೀತಿಯಾಗಿ ಮಾದಕ ವ್ಯಸನದ ಹೆಚ್ಚಳದ ಬಗ್ಗೆಯೂ ಆತಂಕ ವ್ಯಕ್ತಪಡಿಸಲಾಗಿದ್ದು, ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಆದ್ಯತೆ ನೀಡಲು ಕರೆ ನೀಡಲಾಗಿದೆ. ಇನ್ನು ಮಹಾನ್ ಸಂತ ಶ್ರೀ ಸಂತೋಷಿನೋಮಣಿ ರವಿದಾಸ್ ಮಹಾರಾಜರ 650ನೇ ವರ್ಷದ ಅಂಗವಾಗಿ ಅವರ 60ನೇ ಜನ್ಮಶತಮಾನ ಆಚರಣೆಗೆ ಸಿದ್ಧತೆ ಬಗ್ಗೆಯೂ ಸಭೆಯಲ್ಲಿ ಚರ್ಚೆ ಮಾಡಲಾಗಿದೆ’’ ಎಂದು ಸುನೀಲ್ ಅಂಬೇಕರ್ ಮಾಹಿತಿ ನೀಡಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 3:28 pm, Sun, 12 July 26

Source link

ಒಂದು ಹಾಡು ನಾಲ್ಕು ಧ್ವನಿ: ಎಸ್ ಜಾನಕಿ ಹಾಡಿರುವ ಈ ಹಾಡು ಕೇಳಿದ್ದೀರಾ? – Kannada News | S Janaki displayed her voice modulation ability in Ravanna Durgamma song

ಗಾಯಕಿ ಎಸ್ ಜಾನಕಿ (S Janaki) ನಿಧನ ಹೊಂದಿರುವುದು ಭಾರತೀಯ ಸಿನಿಮಾ ಸಂಗೀತ ಕ್ಷೇತ್ರಕ್ಕೆ ಬಹು ದೊಡ್ಡ ನಷ್ಟವಾದಂತಾಗಿದೆ. ಸಾವಿರಾರು ಹಾಡುಗಳನ್ನು ಹಲವಾರು ಭಾಷೆಗಳಲ್ಲಿ ಹಾಡಿದ್ದ ಜಾನಕಿ ಅವರು ನಿನ್ನೆ (ಜುಲೈ 11) ಮೈಸೂರಿನಲ್ಲಿ ನಿಧನ ಹೊಂದಿದರು. ಅವರ ಆಸೆಯಂತೆ ಈಗ ಮೈಸೂರಿನಲ್ಲೇ ಅವರ ಅಂತಿಮ ಸಂಸ್ಕಾರ ಮಾಡಲು ಅಣಿ ಮಾಡಲಾಗುತ್ತಿದೆ. ಹಲವಾರು ಭಾಷೆಗಳಲ್ಲಿ ಅಸಂಖ್ಯ ಹಾಡುಗಳನ್ನು ಹಾಡಿದ್ದ ಜಾನಕಿ ಅವರಿಗೆ ಪ್ರತಿ ರಾಜ್ಯಗಳಲ್ಲಿಯೂ ಅಭಿಮಾನಿಗಳಿದ್ದಾರೆ. ಪ್ರತಿ ಭಾಷೆಯಲ್ಲಿಯೂ ಹಲವಾರು ಸೂಪರ್ ಹಿಟ್ ಹಾಡುಗಳಿವೆ. ಸುಮಧುರ ಗಾಯಕಿ ಆಗಿದ್ದ ಜೊತೆಗೆ ಜಾನಕಿ ಅವರು ಪ್ರಯೋಗಗಳಿಗೂ ಒಗ್ಗಿಕೊಳ್ಳುವ ಮನಸ್ಥಿತಿ ಉಳ್ಳವರಾಗಿದ್ದರು. ಅವರು ಒಮ್ಮೆ ಒಂದೇ ಹಾಡನ್ನು ನಾಲ್ಕು ಭಿನ್ನ ಧ್ವನಿಗಳಿಂದ ಹಾಡಿದ್ದರು ಎಂಬುದು ನಿಮಗೆ ಗೊತ್ತೆ? ಮಾಹಿತಿ ಇಲ್ಲಿದೆ ನೋಡಿ…

ಈಗೆಲ್ಲ ಆಟೋಟ್ಯೂನ್ ಸೇರಿದಂತೆ ಹಲವಾರು ಉಪಕರಣಗಳು ಮಾರುಕಟ್ಟೆಯಲ್ಲಿದ್ದು ಕೆಟ್ಟ ಧ್ವನಿಯ ನಟರುಗಳು ಸಹ ಗಾಯಕರಾಗಿದ್ದಾರೆ. ಒಬ್ಬರ ಧ್ವನಿಯನ್ನು ಇನ್ನೊಬ್ಬರ ಧ್ವನಿಯನ್ನಾಗಿ ಸಹ ಮಾಡಬಹುದಾದಷ್ಟು ತಂತ್ರಜ್ಞಾನ ಈಗ ಮುಂದುವರೆದಿದೆ. ಆದರೆ ಎಸ್ ಜಾನಕಿ ಅವರು ಯಾವುದೇ ಹೊಸ ತಂತ್ರಜ್ಞಾನ ಇಲ್ಲದೆ ಇದ್ದಾಗಲೂ ಸಹ ಒಂದೇ ಹಾಡನ್ನು ಭಿನ್ನ-ಭಿನ್ನ ಧ್ವನಿಗಳಲ್ಲಿ ಖುದ್ದು ಅವರೇ ಹಾಡಿದ್ದರು.

ಜಾನಕಿ ಅವರು ಈ ಭಿನ್ನ ಪ್ರಯೋಗ ಅಥವಾ ಸಾಹಸ ಮಾಡಿರುವುದು ತೆಲುಗಿನ ಒಂದು ಭಕ್ತಿಗೀತೆಗಾಗಿ. ತೆಲುಗಿನಲ್ಲಿ ಜಾನಕಿ ಅವರು ‘ರಾವಮ್ಮ ದುರ್ಗಮ್ಮ’ ಎಂಬ ಭಕ್ತಿಗೀತೆ ಹಾಡಿದ್ದಾರೆ. ಆ ಹಾಡಿನಲ್ಲಿ ಜಾನಕಿ ಅವರು ಬರೋಬ್ಬರಿ ನಾಲ್ಕು ವಿಭಿನ್ನ ಧ್ವನಿಗಳಲ್ಲಿ ಹಾಡನ್ನು ಹಾಡಿ ಶ್ರೋತೃಗಳನ್ನು ಆಶ್ಚರ್ಯಚಕಿತಗೊಳಿಸಿದ್ದಾರೆ. ಆ ವಿಡಿಯೋ ಯೂಟ್ಯೂಬ್​​ನಲ್ಲಿ ಲಭ್ಯವಿದ್ದು, ಈಗ ಜಾನಕಿ ಅವರು ನಿಧನ ಹೊಂದಿದ ಬಳಿಕ ವಿಡಿಯೋ ಮತ್ತೆ ವೈರಲ್ ಆಗುತ್ತಿದೆ.

ಎಸ್ ಜಾನಕಿ ಅವರು ಚಿಕ್ಕ ಮಗು, ಒಬ್ಬ ಪುರುಷ, ಒಬ್ಬ ಸಾಮಾನ್ಯ ಮಹಿಳೆ, ಮತ್ತು ಒಬ್ಬ ವೃದ್ಧೆಯ ಧ್ವನಿಗಳಲ್ಲಿ ‘ರಾವಮ್ಮ ದುರ್ಗಮ್ಮ’ ಹಾಡನ್ನು ಅತೀ ಸುಂದರವಾಗಿ ಹಾಡಿದ್ದಾರೆ. ಈ ನಾಲ್ಕೂ ಧ್ವನಿಗಳು ಒಬ್ಬರದ್ದೇ ಎಂದು ಹೇಳಲು ಸಾಧ್ಯವಾಗದ ರೀತಿಯಲ್ಲಿ ಅವರು ಧ್ವನಿಗಳನ್ನು ಬದಲಾಯಿಸಿದ್ದಾರೆ. ಮಹಿಳೆ ‘ರಾವಮ್ಮ ದುರ್ಗಮ್ಮ’ ಹಾಡು ಹಾಡುವಾಗ ಮಗು ಬಂದು ತಾನೂ ಹಾಡು ಕಲಿಯಬೇಕು ಎನ್ನುವುದು, ಬಳಿಕ ವೃದ್ಧೆ ಬಂದು ಮಗುವಿಗೆ ಹಾಡು ಕಲಿಸು ಎನ್ನುವುದು ಬಳಿಕ ಕುಟುಂಬದ ಯಜಮಾನ ಬಂದು ಮಾತನಾಡುವುದು, ಹೀಗೆ ಒಂದು ಪ್ರಸಂಗವನ್ನೇ ಜಾನಕಿ ಅವರು ಸೃಷ್ಟಿಸಿದ್ದಾರೆ. ಎಲ್ಲರಿಗೂ ಖುದ್ದು ತಾವೊಬ್ಬರೇ ಧ್ವನಿ ನೀಡಿದ್ದಾರೆ.

ಎಸ್ ಜಾನಕಿ ಅವರು ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಚಿಕ್ಕ ಮಕ್ಕಳ ಹಾಡುಗಳಿಗೆ ಧ್ವನಿ ಆಗಿದ್ದಾರೆ, ಮಕ್ಕಳಂತೆ ಖುದ್ದು ಜಾನಕಿ ಅವರೇ ಹಾಡಿದ್ದಾರೆ. ಆದರೆ ನಾಲ್ಕು ಭಿನ್ನ ವ್ಯಕ್ತಿಗಳ, ವಯಸ್ಸಿನವರ ಧ್ವನಿಯನ್ನು ಜಾನಕಿ ಒಬ್ಬರೇ ಅನುಕರಣೆ ಮಾಡಿರುವುದು ಅದ್ಭುತ. ಹಾಡು ಯೂಟ್ಯೂಬ್​​ನಲ್ಲಿದೆ. ಆಸಕ್ತರು ವೀಕ್ಷಿಸಬಹುದು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

‘ಎಸ್. ಜಾನಕಿ ಹಾಡು ಕೇಳುತ್ತಲೇ ನಮ್ಮ ತಾಯಿ ಪ್ರಾಣ ಬಿಟ್ಟಿದ್ದರು’: ಸಾಧು ಕೋಕಿಲ – Kannada News | Actor Sadhu Kokila emotional words about singer S Janaki demands Memorial in Mysore

ನಟ ಸಾಧು ಕೋಕಿಲ ಅವರು ಮೈಸೂರಿನಲ್ಲಿ ಎಸ್. ಜಾನಕಿ ಅವರ ಅಂತಿಮ ದರ್ಶನ ಪಡೆದಿದ್ದಾರೆ. ಬಳಿಕ ಅವರು ಮಾಧ್ಯಮಗಳ ಜೊತೆ ಮಾತನಾಡಿದರು. ‘ನಮ್ಮ ತಾಯಿ ಸಿಂಗರ್. ವಾದ್ಯಗೋಷ್ಠಿಗಳಲ್ಲಿ ಅವರು ಕೇವಲ ಜಾನಕಿ ಅವರ ಹಾಡನ್ನು ಮಾತ್ರ ಹಾಡುತ್ತಿದ್ದರು. ಜಾನಕಿ ಅಮ್ಮನವರ ಧ್ವನಿಯಲ್ಲೇ ನಮ್ಮ ತಾಯಿ ಫೇಮಸ್ ಆಗಿರುವುದು. ನಮ್ಮದು ಆರ್ಕೆಸ್ಟ್ರಾ ಫ್ಯಾಮಿಲಿ. ಜಾನಕಿ ಅಮ್ಮನವರ ಹಾಡುಗಳನ್ನು ಹಾಡಿಯೇ ನಾವು ಜೀವನ ಮಾಡುತ್ತಿದ್ದೆವು. ಎಸ್. ಜಾನಕಿ (S Janaki) ಅವರ ಕರೆದರೂ ಕೇಳದೇ ಹಾಡನ್ನು ಕೇಳುತ್ತಲೇ ನಮ್ಮ ತಾಯಿ ಕೊನೆಯುಸಿರು ಎಳೆದರು. ಜಾನಕಿ ಅವರನ್ನು ಇಷ್ಟಪಡದೇ ಇರುವವರು ಯಾರೂ ಇಲ್ಲ. ಅವರು ಎಲ್ಲ ಪ್ರಕಾರದ ಹಾಡುಗಳನ್ನು ಹಾಡುತ್ತಿದ್ದರು. ಅವರು ಯಾವ ದಿನ ಹಾಡುವುದನ್ನು ನಿಲ್ಲಿಸಿದ್ದರೋ ಅಂದೇ ತಮ್ಮ ಜೀವನ ಇಷ್ಟೇ ಅಂತ ಅಂದುಕೊಂಡಿರುತ್ತಾರೆ. ಇಡೀ ಭಾರತದಲ್ಲಿ ಇಂಥ ಓರ್ವ ಗಾಯಕಿ ಇಲ್ಲ. ಮೈಸೂರಿನಲ್ಲೇ ಜಾನಕಿ ಅವರ ಸ್ಮಾರಕ ಆಗಬೇಕು’ ಎಂದು ಸಾಧು ಕೋಕಿಲ ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Gold Rate: ಚಿನ್ನದ ಬೆಲೆ ಗ್ರಾಮ್​ಗೆ 45 ರೂ, ಬೆಳ್ಳಿ ಬೆಲೆ 5 ರೂ ಇಳಿಕೆ – Kannada News | Gold Price Today on 12th July 2026, Gold And Silver Rates In Bengaluru, Delhi, Mumbai | Latest News in Kannada

ನವದೆಹಲಿ, ಜುಲೈ 12: ಶುಕ್ರವಾರ ಗ್ರಾಮ್​ಗೆ 145 ರೂ ಏರಿದ್ದ ಚಿನ್ನದ ಬೆಲೆ (Gold Rates) ವಾರಾಂತ್ಯದಲ್ಲಿ 45 ರೂ ತಗ್ಗಿದೆ. ಚಿನ್ನದಂತೆ ಬೆಳ್ಳಿಯ ಬೆಲೆಯೂ ಕಡಿಮೆ ಆಗಿದೆ. ವಿದೇಶಗಳಲ್ಲಿ ಬಂಗಾರದ ದರ ಕೆಲವೆಡೆ ಅಲ್ಪ ಇಳಿಕೆ ಕಂಡರೆ, ಇನ್ನೂ ಕೆಲವೆಡೆ ಅಲ್ಪ ಹೆಚ್ಚಳಗೊಂಡಿದೆ. ಬೆಳ್ಳಿ ಬೆಲೆ ಗ್ರಾಮ್​ಗೆ 5 ರೂ ಇಳಿದಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,32,300 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,44,330 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 23,500 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,32,300 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 23,400 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 24,000 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಜುಲೈ 12ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,433 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,230 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 10,825 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 235 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,433 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,230 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 235 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 13,230 ರೂ
  • ಚೆನ್ನೈ: 13,300 ರೂ
  • ಮುಂಬೈ: 13,230 ರೂ
  • ದೆಹಲಿ: 13,245 ರೂ
  • ಕೋಲ್ಕತಾ: 13,230 ರೂ
  • ಕೇರಳ: 13,230 ರೂ
  • ಅಹ್ಮದಾಬಾದ್: 13,235 ರೂ
  • ಜೈಪುರ್: 13,245 ರೂ
  • ಲಕ್ನೋ: 13,245 ರೂ
  • ಭುವನೇಶ್ವರ್: 13,230 ರೂ

ಇದನ್ನೂ ಓದಿ: ಬಿಎಸ್ಸೆನ್ನೆಲ್​ನಿಂದ ಸೆಟಿಲೈಟ್ ಫೋನ್; ಬೆಲೆ 1.34 ಲಕ್ಷ ರೂ; ಮಾಸಿಕ ಸಬ್​ಸ್ಕ್ರಿಪ್ಷನ್ ಪ್ಲಾನ್ 3,500 ರೂನಿಂದ ಆರಂಭ

ವಿದೇಶಗಳಲ್ಲಿ 24 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 555 ರಿಂಗಿಟ್ (13,005 ರುಪಾಯಿ)
  • ದುಬೈ: 494 ಡಿರಾಮ್ (12,828 ರುಪಾಯಿ)
  • ಅಮೆರಿಕ: 135.50 ಡಾಲರ್ (12,923 ರುಪಾಯಿ)
  • ಸಿಂಗಾಪುರ: 181.50 ಸಿಂಗಾಪುರ್ ಡಾಲರ್ (13,402 ರುಪಾಯಿ)
  • ಕತಾರ್: 496 ಕತಾರಿ ರಿಯಾಲ್ (12,977 ರೂ)
  • ಸೌದಿ ಅರೇಬಿಯಾ: 510 ಸೌದಿ ರಿಯಾಲ್ (12,955 ರುಪಾಯಿ)
  • ಓಮನ್: 52.55 ಒಮಾನಿ ರಿಯಾಲ್ (13,017 ರುಪಾಯಿ)
  • ಕುವೇತ್: 41.33 ಕುವೇತಿ ದಿನಾರ್ (12,808 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 235 ರೂ
  • ಚೆನ್ನೈ: 240 ರೂ
  • ಮುಂಬೈ: 235 ರೂ
  • ದೆಹಲಿ: 235 ರೂ
  • ಕೋಲ್ಕತಾ: 235 ರೂ
  • ಕೇರಳ: 240 ರೂ
  • ಅಹ್ಮದಾಬಾದ್: 235 ರೂ
  • ಜೈಪುರ್: 235 ರೂ
  • ಲಕ್ನೋ: 235 ರೂ
  • ಭುವನೇಶ್ವರ್: 240 ರೂ
  • ಪುಣೆ: 235

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರು ಟ್ರಾಫಿಕ್ ಕಿರಿಕಿರಿ: ಕೋಲ್ಕತ್ತಾ ತಲುಪುವ ಫ್ಲೈಟ್ ಜರ್ನಿಗಿಂತ ಏರ್‌ಪೋರ್ಟ್ ರಸ್ತೆ ಪ್ರಯಾಣವೇ ಲಾಂಗ್! – Kannada News | Bengaluru Traffic: Drive to Airport Takes Longer Than Flight to Kolkata, Netizens Slam City Planning

ಬೆಂಗಳೂರು ಟ್ರಾಫಿಕ್ ಕಿರಿಕಿರಿImage Credit source: Hindustan Times

ಬೆಂಗಳೂರು, ಜುಲೈ 12: ನಗರದ ಟ್ರಾಫಿಕ್ ಸಮಸ್ಯೆ ಮತ್ತು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ (KIA) ನಡುವಿನ ದೂರದ ಬಗೆಗಿನ ಚರ್ಚೆಗಳು ಜಾಲತಾಣಗಳಲ್ಲಿ ಹೊಸದೇನಲ್ಲ. ಆದರೆ, ಇತ್ತೀಚೆಗೆ ಮನೀಶ್ ಕುಮಾರ್ ಸಿಂಗ್ ಎಂಬ ಪ್ರಯಾಣಿಕರೊಬ್ಬರು ಹಂಚಿಕೊಂಡಿರುವ ವಿಡಿಯೋ ವೈರಲ್ ಆಗಿದೆ. ಬೆಂಗಳೂರಿನ ಎಚ್‌ಎಸ್‌ಆರ್ ಲೇಔಟ್‌ನಿಂದ ಏರ್‌ಪೋರ್ಟ್‌ ತಲುಪಲು ತಗಲುವ ಸಮಯ, ಬೆಂಗಳೂರಿನಿಂದ ಕೋಲ್ಕತ್ತಾ ತಲುಪುವ ಫ್ಲೈಟ್ ಪ್ರಯಾಣದ ಸಮಯಕ್ಕಿಂತಲೂ ಹೆಚ್ಚಾಗಿದೆ ಎಂದು ಅವರು ಅಸಮಾಧಾನ ಹೊರಹಾಕಿದ್ದಾರೆ.

ಕೋಲ್ಕತ್ತಾ ವಿಮಾನ ಪ್ರಯಾಣಕ್ಕಿಂತ ಏರ್‌ಪೋರ್ಟ್ ರಸ್ತೆಯೇ ದೀರ್ಘ!

ಮನೀಶ್ ಕುಮಾರ್ ಸಿಂಗ್ ಅವರು ಕೋಲ್ಕತ್ತಾಗೆ ತೆರಳಲು ಎಚ್‌ಎಸ್‌ಆರ್ ಲೇಔಟ್‌ನಿಂದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಕಾರಿನಲ್ಲಿ ಪ್ರಯಾಣಿಸುವಾಗ ಈ ಇನ್‌ಸ್ಟಾಗ್ರಾಮ್ ವಿಡಿಯೋವನ್ನು ರೆಕಾರ್ಡ್ ಮಾಡಿದ್ದಾರೆ. ವಿಡಿಯೋದಲ್ಲಿ ಮಾತನಾಡಿರುವ ಅವರು, ನಮ್ಮ ದೇಶದ ಕಳಪೆ ನಗರಾಭಿವೃದ್ಧಿ ಯೋಜನೆಯಿಂದಾಗಿ ಜನರು ತಮ್ಮ ಅಮೂಲ್ಯ ಸಮಯವನ್ನು ಎಷ್ಟು ಪ್ರಮಾಣದಲ್ಲಿ ಕಳೆದುಕೊಳ್ಳುತ್ತಿದ್ದಾರೆ ಎಂಬುದನ್ನು ಕೇಳಿದರೆ ನಿಮಗೆ ಆಶ್ಚರ್ಯ ಹಾಗೂ ತಮಾಷೆ ಎನಿಸಬಹುದು ಎಂದಿದ್ದಾರೆ.

ಬೆಂಗಳೂರು ನಗರದಿಂದ ವಿಮಾನ ನಿಲ್ದಾಣವನ್ನು ತಲುಪಲು ಸದ್ಯ ಎರಡೂವರೆಯಿಂದ ಮೂರು ಗಂಟೆಗಳ ಕಾಲ ಸಮಯ ಬೇಕಾಗುತ್ತದೆ. ಆದರೆ ಬೆಂಗಳೂರಿನಿಂದ ಕೋಲ್ಕತ್ತಾಗೆ ಇರುವ ಫ್ಲೈಟ್ ಜರ್ನಿಯ ಸಮಯ ಕೇವಲ 2 ಗಂಟೆ 20 ನಿಮಿಷಗಳು ಮಾತ್ರ. ನಾನು ಎಚ್‌ಎಸ್‌ಆರ್ ಲೇಔಟ್‌ನಿಂದ ಏರ್‌ಪೋರ್ಟ್ ತಲುಪಲು ತೆಗೆದುಕೊಂಡ ಸಮಯವು, ನಾನು ಬೆಂಗಳೂರಿನಿಂದ ವಿಮಾನದ ಮೂಲಕ ಕೋಲ್ಕತ್ತಾ ತಲುಪಲು ತೆಗೆದುಕೊಳ್ಳುವ ಸಮಯಕ್ಕಿಂತ ಹೆಚ್ಚಾಗಿದೆ. ವಿಮಾನ ನಿಲ್ದಾಣಕ್ಕೆ ಹೋಗಲು ಇಷ್ಟೊಂದು ಸಮಯ ವ್ಯಯಿಸುವಂತೆ ನಗರವನ್ನು ಯೋಜಿಸಬೇಕಿತ್ತೇ? ಎಂದು ಅವರು ಪ್ರಶ್ನಿಸಿದ್ದಾರೆ.

ಅಂತರರಾಷ್ಟ್ರೀಯ ನಗರಗಳ ಜೊತೆ ಹೋಲಿಕೆ

ನ್ಯೂಯಾರ್ಕ್ ಮತ್ತು ಚಿಕಾಗೋದಂತಹ ಜಾಗತಿಕ ಮೆಟ್ರೋಪಾಲಿಟನ್ ನಗರಗಳನ್ನು ಉದಾಹರಿಸಿದ ಮನೀಶ್, ಆ ನಗರಗಳು ವಿಸ್ತಾರವಾಗಿದ್ದರೂ ಸಹ ಅಲ್ಲಿನ ಅತ್ಯುತ್ತಮ ಕನೆಕ್ಟಿವಿಟಿಯಿಂದಾಗಿ ಜನರು ನಗರದ ಯಾವುದೇ ಮೂಲೆಯಿಂದ 30 ರಿಂದ 40 ನಿಮಿಷಗಳಲ್ಲಿ ಏರ್‌ಪೋರ್ಟ್ ತಲುಪಬಹುದು ಎಂದಿದ್ದಾರೆ. ಆದರೆ ನಮ್ಮಲ್ಲಿ ಮೊದಲು ವಿಮಾನ ನಿಲ್ದಾಣವನ್ನು ನಿರ್ಮಿಸಿ, ನಂತರ ಅಲ್ಲಿಗೆ ಜನ ತಲುಪುವುದು ಹೇಗೆ ಎಂದು ಯೋಚಿಸುತ್ತಾರೆ. ಇದು ಸಂಪೂರ್ಣ ಉಲ್ಟಾ ಯೋಜನೆಯಾಗಿದೆ ಎಂದು ಅವರು ದೂರಿದ್ದಾರೆ.

ಅಭಿವೃದ್ಧಿಯ ಹೆಸರಿನಲ್ಲಿ ನಾವು ಏನನ್ನು ನಿರ್ಮಿಸುತ್ತಿದ್ದೇವೆ? ಒಂದು ನಗರದ ಒಂದು ಮೂಲೆಯಿಂದ ಮತ್ತೊಂದು ಮೂಲೆಗೆ ಹೋಗುವಷ್ಟರಲ್ಲಿ 2,000 ಕಿಲೋಮೀಟರ್ ದೂರದಲ್ಲಿರುವ ಮತ್ತೊಂದು ನಗರಕ್ಕೆ ಫ್ಲೈಟ್‌ನಲ್ಲಿ ಹೋಗಿ ತಲುಪಬಹುದು ಎಂದರೆ ಇದು ಎಷ್ಟು ವಿಚಿತ್ರ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ನೆಟ್ಟಿಗರ ಸಹಮತ

ಈ ವಿಡಿಯೋ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ಸಾವಿರಾರು ಬೆಂಗಳೂರಿಗರು ಇದಕ್ಕೆ ಸಹಮತ ವ್ಯಕ್ತಪಡಿಸಿದ್ದಾರೆ. ಇದು ನೂರಕ್ಕೆ ನೂರು ನಿಜ. ಏರ್‌ಪೋರ್ಟ್‌ಗೆ ಮೂರು ಗಂಟೆ ಮುಂಚಿತವಾಗಿ ಪ್ರಯಾಣ ಆರಂಭಿಸಬೇಕು, ಜೊತೆಗೆ ಅಲ್ಲಿ ಎರಡು ಗಂಟೆ ಮುಂಚಿತವಾಗಿ ಇರಬೇಕು. ಒಟ್ಟಾರೆ ವಿಮಾನ ಹತ್ತುವಷ್ಟರಲ್ಲೇ ಇಡೀ ದಿನದ ಶಕ್ತಿ ಮುಗಿದುಹೋಗಿರುತ್ತದೆ ಎಂದು ಬಳಕೆದಾರರೊಬ್ಬರು ಕಮೆಂಟ್ ಮಾಡಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪ್ರವೀಣ್ ನೆಟ್ಟಾರು ಪ್ರಕರಣ: ನಾಲ್ಕು ವರ್ಷಗಳ ಬಳಿಕ ಇಬ್ಬರು ಪ್ರಮುಖ ಆರೋಪಿಗಳನ್ನು ಬಂಧಿಸಿದ ಎನ್​ಐಎ – Kannada News | Praveen Nettar Case: NIA Arrests Two Most Wanted Accused After Four Years

ಮಂಗಳೂರು, ಜುಲೈ 12: ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ವರ್ಷಗಳ ಬಳಿಕ ರಾಷ್ಟ್ರೀಯ ತನಿಖಾ ದಳ (ಎನ್​ಐಎ) ಇಬ್ಬರು ಮೋಸ್ಟ್ ವಾಂಟೆಡ್ ಆರೋಪಿಗಳನ್ನು ಬಂಧಿಸಿದೆ. ಬಂಧಿತ ಆರೋಪಿಗಳನ್ನು 32 ವರ್ಷದ ನೌಷಾದ್ ಮತ್ತು 41 ವರ್ಷದ ಅಬ್ದುಲ್ ನಾಸಿರ್ ಎಂದು ಗುರುತಿಸಲಾಗಿದೆ. ನೌಷಾದ್ ಬೆಳ್ತಂಗಡಿಯ ಪದಂಗಡಿ ಪೋಯ್ಯಗುಡ್ಡೆಯ ನಿವಾಸಿಯಾಗಿದ್ದು, ಈತ ಬೆಂಗಳೂರಿನಲ್ಲಿ ಅಡಗಿಕೊಂಡಿದ್ದ. ಇನ್ನು ಮತ್ತೋರ್ವ ಅಬ್ದುಲ್ ನಾಸಿರ್ ಕೊಡಗಿನ ಸೋಮವಾರಪೇಟೆಯ ನಿವಾಸಿಯಾಗಿದ್ದು, ಕೇರಳದ ಕೊಚ್ಚಿಯಲ್ಲಿ ಈತನನ್ನು ಬಂಧಿಸಲಾಗಿದೆ. ಈ ಇಬ್ಬರು ಪ್ರಮುಖ ಆರೋಪಿಗಳ ಪತ್ತೆಗಾಗಿ ಎನ್​ಐಎ ತಲಾ 2 ಲಕ್ಷ ರೂಪಾಯಿ ನಗದು ಬಹುಮಾನವನ್ನು ಘೋಷಿಸಿತ್ತು.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

Exit mobile version