IND vs ENG: 64 ಎಸೆತ 131 ರನ್..! ಭಾರತದ ಬೌಲರ್​ಗಳನ್ನು ಬೆಂಡೆತ್ತಿದ ಬಟ್ಲರ್

Source link

ಕ್ಯಾನ್ಸರ್ ಔಷಧಿ ಬೆಲೆ ಕಡಿಮೆಗೊಳಿಸಲು ಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿ, ತೀರ್ಪಿಗಾಗಿ ಕಾಯುತ್ತಲೇ ಪ್ರಾಣ ಬಿಟ್ಟ ಮಹಿಳೆ! – Kannada News | Kerala Woman Filed Petition For Cheaper Breast Cancer Drug She Died Waiting For Court Verdict

ತಿರುವನಂತಪುರಂ, ಜುಲೈ 11: ಕೆಲವೊಮ್ಮೆ ನ್ಯಾಯಾಲಯದ ವಿಳಂಬದ ತೀರ್ಪಿನಿಂದಾಗಿ ಆ ಅರ್ಜಿ ಸಲ್ಲಿಸಿದ ವ್ಯಕ್ತಿಗಳಿಗೆ ಯಾವೆಲ್ಲ ರೀತಿಯ ತೊಂದರೆಗಳಾಗುತ್ತವೆ ಎಂಬುದಕ್ಕೆ ಜ್ವಲಂತ ಉದಾಹರಣೆಯೊಂದು ಕೇರಳದಲ್ಲಿ ನಡೆದಿದೆ. ಕೇರಳದ ಎರ್ನಾಕುಲಂ ಮೂಲದ ಸ್ತನ ಕ್ಯಾನ್ಸರ್ ಪೀಡಿತ ಮಹಿಳೆಯೊಬ್ಬರು 2022ರ ಜೂನ್‌ನಲ್ಲಿ ಕೇರಳ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು. ಸ್ತನ ಕ್ಯಾನ್ಸರ್​​ನಿಂದ (Breast Cancer) ಬಳಲುತ್ತಿದ್ದ ಈ ಮಹಿಳೆ ಪ್ರತಿ ತಿಂಗಳು ಆ ಕ್ಯಾನ್ಸರ್​​ನ ಔಷಧಿಗೆ ಲಕ್ಷಾಂತರ ರೂ. ಖರ್ಚು ಮಾಡಲಾಗದೆ ಕ್ಯಾನ್ಸರ್​​ನ ಔಷಧದದ ಬೆಲೆಯನ್ನು ಕಡಿಮೆಗೊಳಿಸಲು ಆದೇಶ ನೀಡಿ ಎಂದು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ಸಲ್ಲಿಸಿ 4 ವರ್ಷಗಳೇ ಕಳೆದಿತ್ತು. ಆದರೂ ಈ ಪ್ರಕರಣದಲ್ಲಿ ತೀರ್ಪು ಪ್ರಕಟವಾಗಲಿಲ್ಲ. ನ್ಯಾಯಾಲಯದ ತೀರ್ಪಿಗಾಗಿ ಕಾದು ಕಾದು ಆ ಅರ್ಜಿದಾರರಾದ ಮಹಿಳೆ ಕ್ಯಾನ್ಸರ್​​ ರೋಗದಿಂದ ಮೃತಪಟ್ಟಿದ್ದಾರೆ.

ಕೇರಳ ಹೈಕೋರ್ಟ್‌ನ ಕಡತಗಳ ನಡುವೆ ಆಕೆ ಸಲ್ಲಿಸಿದ್ದ ಅರ್ಜಿ ಇನ್ನೂ ಧೂಳು ತಿನ್ನುತ್ತಾ ಬಿದ್ದಿದೆ. ಆದರೆ, ಆ ಬಗ್ಗೆ ಪ್ರಶ್ನಿಸಲು ಅದನ್ನು ಸಲ್ಲಿಸಿದ್ದ ಮಹಿಳೆ ಇಂದು ಜೀವಂತವಾಗಿಲ್ಲ. ಸ್ತನ ಕ್ಯಾನ್ಸರ್​​ನಿಂದ ಬಳಲುತ್ತಿದ್ದ ಆ ಮಹಿಳೆ, ತಿಂಗಳಿಗೆ ಬರೋಬ್ಬರಿ 1.5 ಲಕ್ಷ ವೆಚ್ಚ ತಗಲುವ ಎರಡು ಪ್ರಮುಖ ಕ್ಯಾನ್ಸರ್ ಔಷಧಿಗಳ ಬೆಲೆಯನ್ನು ಕಡಿಮೆ ಮಾಡುವಂತೆ ಕೋರಿ 2022ರಲ್ಲಿ ಕೋರ್ಟ್ ಮೆಟ್ಟಿಲೇರಿದ್ದರು. ಆದರೆ, 4 ವರ್ಷಗಳ ಸುದೀರ್ಘ ಕಾಯುವಿಕೆ ಮತ್ತು 57 ಕೋರ್ಟ್ ವಿಚಾರಣೆಗಳ ನಂತರವೂ ಯಾವುದೇ ತೀರ್ಪು ಸಿಗದೆ ಆಕೆ ಕೊನೆಯುಸಿರೆಳೆದಿದ್ದಾರೆ.

ಹೋರಾಟ ನಿಂತಿಲ್ಲ:

ಅರ್ಜಿ ಸಲ್ಲಿಸಿದ ಮಹಿಳೆ ಕ್ಯಾನ್ಸರ್​​ನಿಂದ ಮೃತಪಟ್ಟಿದ್ದರೂ ಆಕೆ ಆರಂಭಿಸಿದ ಹೋರಾಟ ಇನ್ನೂ ಮುಗಿದಿಲ್ಲ. ಜ್ಯೋತ್ಸ್ನಾ ಸಿಂಗ್ ಮತ್ತು ಕೆ.ಎಮ್. ಗೋಪಕುಮಾರ್ ಎಂಬ ಇಬ್ಬರು ಸಾಮಾಜಿಕ ಕಾರ್ಯಕರ್ತರು ಈ ಪ್ರಕರಣದ ತುರ್ತು ವಿಚಾರಣೆ ನಡೆಸುವಂತೆ ಕೋರಿ ಕೇರಳ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆದಿದ್ದಾರೆ. ಇದೇ ಪತ್ರದ ಪ್ರತಿಗಳನ್ನು ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರಿಗೂ ರವಾನಿಸಲಾಗಿದೆ.

ಇದನ್ನೂ ಓದಿ: ಚಿಕ್ಕ ವಯಸ್ಸಿನಲ್ಲಿ ಸ್ತನ ಕ್ಯಾನ್ಸರ್ ಏಕೆ ಸಂಭವಿಸುತ್ತದೆ? ತಜ್ಞರು ಹೇಳುವುದೇನು?

“ಈ ಹೋರಾಟವನ್ನು ಆರಂಭಿಸಿದ ಮಹಿಳೆ ಇಂದು ನಮ್ಮೊಂದಿಗಿಲ್ಲ. ಜೀವ ರಕ್ಷಕ ಔಷಧಿಗಳ ವಿಷಯದಲ್ಲಿ ನ್ಯಾಯಾಂಗದ ವಿಳಂಬವು ಎಷ್ಟು ಜೀವವನ್ನು ಬಲಿ ತೆಗೆದುಕೊಳ್ಳಬಹುದು ಎಂಬುದಕ್ಕೆ ಈ ಘಟನೆಯೇ ಸಾಕ್ಷಿ” ಎಂದು ಆ ಪತ್ರದಲ್ಲಿ ಈ ಘಟನೆಯನ್ನು ವಿವರಿಸಿ ಬರೆಯಲಾಗಿದೆ.

57 ವಿಚಾರಣೆಗಳು ನಡೆದರೂ ತೀರ್ಪಿಲ್ಲ:

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ನಲ್ಲಿ ಇದುವರೆಗೆ ಬರೋಬ್ಬರಿ 57 ವಿಚಾರಣೆಗಳು ನಡೆದಿವೆ. ಕೋರ್ಟ್ ಒಬ್ಬ ವಿಶೇಷ ವಕೀಲರನ್ನು ನೇಮಿಸಿತ್ತು, ಸರ್ಕಾರದ ಸಂಪೂರ್ಣ ವರದಿಯನ್ನು ಕೇಳಿತ್ತು ಹಾಗೂ ಔಷಧ ಕಂಪನಿಗಳಿಗೂ ಸಮನ್ಸ್ ನೀಡಿತ್ತು. ವಿಚಾರಣೆಯ ಸಂದರ್ಭದಲ್ಲಿ ಸರ್ಕಾರವು “ಕ್ಯಾನ್ಸರ್‌ಗೆ ಹಳೆಯ ಔಷಧಿಯೇ ಸಾಕು” ಎಂದು ವಾದಿಸಿದಾಗ, ಕೋರ್ಟ್ ನೇಮಿಸಿದ್ದ ವಕೀಲರು “ಆ ಹಳೆಯ ಔಷಧಿಗಳು ಆರಂಭಿಕ ಹಂತದ ಕ್ಯಾನ್ಸರ್‌ಗೆ ಕೆಲಸ ಮಾಡುವುದಿಲ್ಲ” ಎಂದು ಸಾಬೀತುಪಡಿಸಿದ್ದರು. ಈ ಕೇಸ್‌ನ ಗಂಭೀರತೆ ಪರಿಗಣಿಸಿ ಒಂದು ವಿಶೇಷ ಶನಿವಾರದಂದೂ ಇಡೀ ದಿನ ವಿಚಾರಣೆ ನಡೆಸಲಾಗಿತ್ತು. 2025ರ ವೇಳೆಗೆ ಎಲ್ಲಾ ವಾದ-ಪ್ರತಿವಾದಗಳು ಪೂರ್ಣಗೊಂಡಿದ್ದವು. ಕೇಸ್ ಪದೇ ಪದೇ “ತೀರ್ಪಿಗೆ ಸಿದ್ಧವಿರುವ” ಪಟ್ಟಿಯಲ್ಲಿ ಕಾಣಿಸಿಕೊಳ್ಳುತ್ತಿತ್ತಾದರೂ, ಪ್ರತಿ ಬಾರಿಯೂ ಅದನ್ನು ಮುಂದೂಡಲಾಗುತ್ತಿತ್ತು. ಕೊನೆಯ ವಿಚಾರಣೆಯು ಜುಲೈ 2ರಂದು ನಡೆದಿದ್ದು, ಮುಂದಿನ ವಿಚಾರಣೆಯನ್ನು ಜುಲೈ 15ಕ್ಕೆ ನಿಗದಿಪಡಿಸಲಾಗಿದೆ.

ಇದನ್ನೂ ಓದಿ: ಸಿಟಿಯ ಮಹಿಳೆಯರಲ್ಲೇ ಸ್ತನ ಕ್ಯಾನ್ಸರ್ ಹೆಚ್ಚಾಗುತ್ತಿರುವುದೇಕೆ? ಅಚ್ಚರಿಯ ಕಾರಣ ಇಲ್ಲಿದೆ

ಆ ಔಷಧಿಗಳು ಯಾವುವು?:

ಸ್ತನ ಕ್ಯಾನ್ಸರ್ ಚಿಕಿತ್ಸೆಗೆ ಅತ್ಯಂತ ಅಗತ್ಯವಿರುವ ಎರಡು ಜೀವ ರಕ್ಷಕ ಔಷಧಿಗಳ ಬೆಲೆಯೇ ಈ ಇಡೀ ಪ್ರಕರಣದ ಮುಖ್ಯ ವಿಷಯವಾಗಿದೆ. ಆ 2 ಪ್ರಮುಖ ಔಷಧಗಳೆಂದರೆ, ರಿಬೋಸಿಸಿಕ್ಲಿಬ್ (Ribociclib). ಇದರ ಬೆಲೆ ತಿಂಗಳಿಗೆ 78,468 ರೂ. ಇನ್ನೊಂದು ಔಷಧ ಅಬೆಮಾಸಿಸಿಕ್ಲಿಬ್ (Abemaciclib). ಇದರ ಬೆಲೆ ತಿಂಗಳಿಗೆ 47,752 ರೂ.ನಿಂದ 95,504 ರೂ.ಗಳಷ್ಟಿದೆ. ಇವೆರಡನ್ನೂ ತೆಗೆದುಕೊಳ್ಳಲು ತಿಂಗಳಿಗೆ ಒಂದೂವರೆ ಲಕ್ಷ ರೂ.ಗಳಷ್ಟು ವೆಚ್ಚವಾಗಲಿದೆ.

ಅರ್ಜಿ ಸಲ್ಲಿಸಿದ್ದ ಮಹಿಳೆಯು ದೇಹದಾದ್ಯಂತ ಅತ್ಯಂತ ವೇಗವಾಗಿ ಹರಡುವ ಒಂದು ವಿಶಿಷ್ಟ ಮಾದರಿಯ ಸ್ತನ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಈ ದುಬಾರಿ ಔಷಧಿಗಳನ್ನು ಭಾರತದಲ್ಲೇ ಕಡಿಮೆ ಬೆಲೆಗೆ ಉತ್ಪಾದಿಸಲು ಅನುಮತಿ ನೀಡುವಂತಹ ಕಾನೂನನ್ನು ಸರ್ಕಾರ ಜಾರಿಗೆ ತರಬೇಕು ಎಂದು ಅವರು ಕೋರ್ಟ್‌ಗೆ ಮನವಿ ಮಾಡಿದ್ದರು. ಆದರೆ, ಆಕೆ ಸಾವನ್ನಪ್ಪುವವರೆಗೂ ತೀರ್ಪು ಪ್ರಕಟವಾಗಲೇ ಇಲ್ಲ. ಆಕೆಯ ಸಾವಿನ ಬಳಿಕವಾದರೂ ಆಕೆಯ ಹೋರಾಟಕ್ಕೆ ಫಲ ಸಿಗಲಿ ಎಂಬ ಆಶಯದಿಂದ ಆಕೆಯ ಆಪ್ತರ ತಂಡ ಈಗ ಕಾರ್ಯೋನ್ಮುಖವಾಗಿದೆ.

ಸ್ತನ ಕ್ಯಾನ್ಸರ್​​ನ ಭೀಕರತೆ:

2022ರಲ್ಲಿ ಭಾರತದಲ್ಲಿ ಅಂದಾಜು 1.9 ಲಕ್ಷ ಹೊಸ ಸ್ತನ ಕ್ಯಾನ್ಸರ್ ಪ್ರಕರಣಗಳು ದಾಖಲಾಗಿದ್ದು, 98,337 ಮಹಿಳೆಯರು ಇದರಿಂದ ಸಾವನ್ನಪ್ಪಿದ್ದಾರೆ. ಭಾರತದಲ್ಲಿ ಮಹಿಳೆಯರ ಕ್ಯಾನ್ಸರ್ ಸಾವುಗಳಿಗೆ ಇದುವೇ ಪ್ರಮುಖ ಕಾರಣವಾಗಿದೆ. ಇತ್ತೀಚೆಗೆ ಅಂದರೆ ಫೆಬ್ರವರಿ 2026ರಲ್ಲಿ ಸರ್ಕಾರವೇ ಸಂಸತ್ತಿಗೆ ನೀಡಿರುವ ಮಾಹಿತಿಯ ಪ್ರಕಾರ, ಈ ಸಂಖ್ಯೆಯು ಶೀಘ್ರದಲ್ಲೇ ವರ್ಷಕ್ಕೆ 2.4 ಲಕ್ಷಕ್ಕೆ ಏರಿಕೆಯಾಗುವ ಸಾಧ್ಯತೆಯಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 10:51 pm, Sat, 11 July 26

Source link

15 ದಿನಗಳ ಹಿಂದಷ್ಟೇ ಮಂಗಳೂರಿನ ಮಂಗಳಾದೇವಿ ದರ್ಶನ ಪಡೆದಿದ್ದ ‘ಎಸ್‌ ಜಾನಕಮ್ಮ’: ಇಲ್ಲಿವೆ ಫೋಟೋಸ್​​ – Kannada News | S. Janaki Passes Away: She Sought Blessings at Mangaladevi Temple Just 15 Days Ago; See Photos

ಬರೋಬ್ಬರಿ 20 ಭಾಷೆಗಳಲ್ಲಿ 48 ಸಾವಿರ ಹಾಡುಗಳನ್ನ ಆಡಿದ್ದ ಗಾನ ಕೋಗಿಲು ಇಂದು ಹಾಡೋದನ್ನ ನಿಲ್ಲಿಸಿದೆ. 88 ವರ್ಷಗಳ ಸಾರ್ಥಕ ಜೀವನ ನಡೆಸಿದ್ದ ಜಾನಕಮ್ಮ ವಿಧಿವಶರಾಗಿದ್ದಾರೆ. 15 ದಿನಗಳ ಹಿಂದೆಯಷ್ಟೇ ಮಂಗಳೂರಿಗೆ ಭೇಟಿ ನೀಡಿದ್ದರು.

ಎಸ್‌.ಜಾನಕಿ ಅವರು ನಿಧನಕ್ಕೂ ಕೇವಲ 15 ದಿನಗಳ ಮುನ್ನವಷ್ಟೇ ಮಂಗಳೂರಿನ ಪ್ರಸಿದ್ಧ ಮಂಗಳಾದೇವಿ ದೇವಸ್ಥಾನ ಮತ್ತು ಕಮಲಶಿಲೆಗೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದರು.

ಭಾರತೀಯ ಚಿತ್ರರಂಗದ ಸಾರ್ವಕಾಲಿಕ ಶ್ರೇಷ್ಠ ಗಾಯಕಿ ಎಸ್‌.ಜಾನಕಿ ವಿಧಿವಶ ಹಿನ್ನಲೆ ಇಡೀ ಸಂಗೀತ ಕ್ಷೇತ್ರ ಕಂಬನಿ ಮಿಡಿದಿದೆ. ಕನ್ನಡ ಚಿತ್ರರಂಗ ಸೇರಿದಂತೆ ರಾಜಕೀಯ ನಾಯಕರು ಕೂಡ ಸಂತಾಪ ಸೂಚಿಸಿದ್ದಾರೆ.

ಭಾನುವಾರ ಮೈಸೂರಿನಲ್ಲಿ ಸಾರ್ವಜನಿಕ ಅಂತಿಮ ದರ್ಶನದ ಬಳಿಕ, ತೆಲುಗು ಬ್ರಾಹ್ಮಣ ಸಂಪ್ರದಾಯದಂತೆ ಮೊಮ್ಮಗಳು ಅಪ್ಸರಾ ಅವರಿಂದ ಜಾನಕಿ ಅಮ್ಮನ ಅಂತ್ಯಸಂಸ್ಕಾರ ನೆರವೇರಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

ಎಸ್‌.ಜಾನಕಿ ಅವರು ಇನ್ನಿಲ್ಲವಾದ್ರೂ ಅವರು ಹಾಡಿದ್ದ ಹಾಡುಗಳು ಮಾತ್ರ ಅಮರ. ಕರುನಾಡಿನ ಪ್ರತಿಯೊಬ್ಬರ ಬಾಯಲ್ಲೂ ಅವರ ಹಾಡು ಗುನುಗುತ್ತವೆ.

Published On – 10:51 pm, Sat, 11 July 26

Source link

ವಾರ ಭವಿಷ್ಯ: ವಾರ ಭವಿಷ್ಯ ಜುಲೈ 12-18, 2026: ಆರೋಗ್ಯ, ಆರ್ಥಿಕತೆ, ವಿದ್ಯಾಭ್ಯಾಸ ಎಲ್ಲ ರಾಶಿಗಳ ಭವಿಷ್ಯ – Kannada News | Zodiac Predictions July 12 18, 2026: Your Week Ahead in Health, Finance and Travel

ಜುಲೈ 12ರಿಂದ 18, 2026ರ ವರೆಗೆ ಎಲ್ಲ ರಾಶಿಗಳ ಆರೋಗ್ಯ, ಆರ್ಥಿಕತೆ, ಪ್ರವಾಸ, ವಿದ್ಯಾಭ್ಯಾಸ, ಸಹವಾಸ ಮತ್ತು ಖರ್ಚು ವೆಚ್ಚಗಳನ್ನು ತಿಳಿದರೆ ಇಡುವ ಹೆಜ್ಜೆ ದೃಢವಾಗಿರಲಿದೆ. ಧೈರ್ಯದಿಂದ ಮುಂದಡಿ ಇಡಲೂ ಸಾಧ್ಯ.

​ಮೇಷ ರಾಶಿ:

ಈ ವಾರ ಆರೋಗ್ಯ ಮಧ್ಯಮವಾಗಿದ್ದು, ಶೀತದ ಸಮಸ್ಯೆ ಇರಬಹುದು. ಆರ್ಥಿಕತೆ ಚೆನ್ನಾಗಿದ್ದರೂ ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕುವುದು ಒಳಿತು. ವಿದ್ಯಾಭ್ಯಾಸದಲ್ಲಿ ಪರಿಶ್ರಮ ಅಗತ್ಯವಿದ್ದು, ಸ್ನೇಹಿತರ ಉತ್ತಮ ಸಹವಾಸದಿಂದ ಲಾಭವಿದೆ ಮತ್ತು ಸಣ್ಣ ಪ್ರವಾಸ ಸಂಭವಿಸಲಿದೆ.

​ವೃಷಭ ರಾಶಿ:

ಮಂಗಳನ ಪ್ರಭಾವದಿಂದ ದೈಹಿಕ ಉತ್ಸಾಹ ಹೆಚ್ಚಲಿದ್ದು, ವಿದ್ಯಾಭ್ಯಾಸದಲ್ಲಿ ಉತ್ತಮ ಪ್ರಗತಿ ಕಾಣಬಹುದು. ಆರ್ಥಿಕ ಪರಿಸ್ಥಿತಿ ಸದೃಢವಾಗಿದ್ದು ಹೂಡಿಕೆಗೆ ಸೂಕ್ತ ಸಮಯವಾಗಿದೆ. ಕುಟುಂಬದೊಂದಿಗೆ ಪ್ರವಾಸ ಯೋಗವಿದ್ದು, ಸತ್ಪುರುಷರ ಸಹವಾಸ ದೊರೆಯಲಿದೆ.

​ಮಿಥುನ ರಾಶಿ:

ಬುಧನ ಸ್ಥಾನದಿಂದಾಗಿ ಮಾನಸಿಕ ನೆಮ್ಮದಿ ಹಾಗೂ ಬುದ್ಧಿಶಕ್ತಿ ವೃದ್ಧಿಸಲಿದೆ, ಓದಿನಲ್ಲಿ ಉತ್ತಮ ಸಾಧನೆ ಮಾಡುವಿರಿ. ಹಠಾತ್ ಧನಲಾಭವಾಗಲಿದ್ದರೂ ಖರ್ಚುಗಳು ನಿಯಂತ್ರಣದಲ್ಲಿರಲಿ. ಸದ್ಯಕ್ಕೆ ದೂರದ ಪ್ರಯಾಣ ಮುಂದೂಡುವುದು ಹಾಗೂ ನಂಬಿಕಸ್ಥರ ಸಹವಾಸ ಮಾಡುವುದು ಒಳಿತು.

ಕರ್ಕಾಟಕ ರಾಶಿ:

ಸೂರ್ಯ ಮತ್ತು ಗುರುವಿನ ಸಂಯೋಜನೆಯಿಂದ ಆರೋಗ್ಯ ಸುಧಾರಿಸಲಿದೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಿಗಲಿದೆ. ಆರ್ಥಿಕವಾಗಿ ಶುಭ ವಾರವಾಗಿದ್ದರೂ ಧಾರ್ಮಿಕ ಕಾರ್ಯಗಳಿಗೆ ಖರ್ಚು ಹೆಚ್ಚಾಗಲಿದೆ. ತೀರ್ಥಯಾತ್ರೆ ಸಾಧ್ಯತೆಯಿದ್ದು, ಅಪರಿಚಿತರ ಸಹವಾಸದಿಂದ ದೂರವಿರಿ.

​ಸಿಂಹ ರಾಶಿ:

ಚಂದ್ರ ಮತ್ತು ಶುಕ್ರನ ಸ್ಥಾನದಿಂದಾಗಿ ಆರೋಗ್ಯ ಉತ್ತಮವಾಗಿರುತ್ತದೆ, ಕಲೆ-ಸಾಹಿತ್ಯದ ವಿದ್ಯಾರ್ಥಿಗಳಿಗೆ ಯಶಸ್ಸು ಸಿಗಲಿದೆ. ಆದಾಯ ವೃದ್ಧಿಯಾಗಲಿದ್ದು ಐಷಾರಾಮಿ ವಸ್ತುಗಳಿಗಾಗಿ ವೆಚ್ಚವಾಗಬಹುದು. ಮನರಂಜನಾ ಪ್ರವಾಸ ಯೋಗವಿದ್ದು, ಮಿತ್ರರ ಸಹಕಾರ ಸಿಗಲಿದೆ.

​ಕನ್ಯಾ ರಾಶಿ:

ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ, ಓದಿನಲ್ಲಿ ಏಕಾಗ್ರತೆ ಕೊರತೆ ಮೂಡಬಹುದು. ಸಾಲದ ಸಮಸ್ಯೆಗಳಿಂದ ಮುಕ್ತಿ ಸಿಗಲಿದ್ದು ಖರ್ಚುಗಳು ಸಿತಮಿತವಾಗಿರಲಿ. ವ್ಯಾಪಾರ ನಿಮಿತ್ತ ಪ್ರವಾಸದಿಂದ ಲಾಭವಿದೆ, ಆದರೆ ಹಿತಶತ್ರುಗಳ ಸಹವಾಸದಿಂದ ದೂರವಿರಿ.

​ತುಲಾ ರಾಶಿ:

ದೈಹಿಕ ಆರೋಗ್ಯ ಚೆನ್ನಾಗಿರಲಿದ್ದು, ಉನ್ನತ ಶಿಕ್ಷಣಕ್ಕೆ ಒಳ್ಳೆಯ ಅವಕಾಶಗಳು ಸಿಗಲಿವೆ. ಹಳೆಯ ಬಾಕಿ ವಸೂಲಿಯಾಗಿ ಆರ್ಥಿಕತೆ ಸುಧಾರಿಸಲಿದೆ, ಆದರೂ ಅನಗತ್ಯ ವೆಚ್ಚ ತಪ್ಪಿಸಿ. ಸ್ನೇಹಿತರೊಂದಿಗೆ ಪ್ರವಾಸದ ಯೋಜನೆ ಕೈಗೂಡಲಿದ್ದು, ಸತ್ಸಂಗದಿಂದ ಮಾನಸಿಕ ನೆಮ್ಮದಿ ಸಿಗಲಿದೆ.

​ವೃಶ್ಚಿಕ ರಾಶಿ:

ಕೋಪ ನಿಯಂತ್ರಿಸದಿದ್ದರೆ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು, ವಿದ್ಯಾರ್ಥಿಗಳಿಗೆ ಕಠಿಣ ಪರಿಶ್ರಮದ ಅಗತ್ಯವಿದೆ. ಆರ್ಥಿಕ ಏರಿಳಿತಗಳಿರುವುದರಿಂದ ಹಠಾತ್ ಖರ್ಚುಗಳು ಎದುರಾಗಬಹುದು. ಪ್ರಯಾಣದಲ್ಲಿ ಜಾಗ್ರತೆ ಅಗತ್ಯವಿದ್ದು, ಹಿರಿಯರ ಸಹವಾಸದಿಂದ ಮಾರ್ಗದರ್ಶನ ಪಡೆಯಿರಿ.

​ಧನು ರಾಶಿ:

ಉತ್ತಮ ಆರೋಗ್ಯ ಭಾಗ್ಯವಿದ್ದು, ವಿದ್ಯಾಭ್ಯಾಸದಲ್ಲಿ ಗುರುಗಳ ಆಶೀರ್ವಾದದಿಂದ ಯಶಸ್ಸು ಸಿಗಲಿದೆ. ಆರ್ಥಿಕ ಸ್ಥಿತಿ ಸದೃಢವಾಗಿರುತ್ತದೆ ಹಾಗೂ ಭೂಮಿ ಅಥವಾ ವಾಹನ ಖರೀದಿಗೆ ವೆಚ್ಚವಾಗಬಹುದು. ಆಧ್ಯಾತ್ಮಿಕ ಪ್ರವಾಸ ಯೋಗವಿದ್ದು, ಸಜ್ಜನರ ಸಹವಾಸದಿಂದ ಒಳಿತಾಗಲಿದೆ.

​ಮಕರ ರಾಶಿ:

ನಿಮಗೆ ಕೆಲಸದ ಒತ್ತಡ ಮತ್ತು ಆಯಾಸವಿರಬಹುದು, ಓದಿಗೆ ಹೆಚ್ಚಿನ ಸಮಯ ನೀಡಿ. ಆದಾಯಕ್ಕಿಂತ ಖರ್ಚು ಅಧಿಕವಾಗುವ ಸಂಭವವಿರುವುದರಿಂದ ಬಜೆಟ್ ಯೋಜನೆ ಅಗತ್ಯ. ಪ್ರವಾಸದಲ್ಲಿ ಅಡೆತಡೆಗಳು ಉಂಟಾಗಬಹುದು, ಹೊಸ ಗೆಳೆತನದಲ್ಲಿ ಎಚ್ಚರಿಕೆ ಇರಲಿ.

​ಕುಂಭ ರಾಶಿ:

ರಾಹುವಿನ ಪ್ರಭಾವದಿಂದ ಮಾನಸಿಕ ಗೊಂದಲವಿರಬಹುದು ಆದರೆ ತಾಂತ್ರಿಕ ವಿದ್ಯಾರ್ಥಿಗಳಿಗೆ ಶುಭ ಫಲವಿದೆ. ಆದಾಯ ಸಾಮಾನ್ಯವಾಗಿದ್ದು ಕೌಟುಂಬಿಕ ಜವಾಬ್ದಾರಿಗಳಿಗಾಗಿ ವೆಚ್ಚವಾಗಲಿದೆ. ಉದ್ಯೋಗ ನಿಮಿತ್ತ ಪ್ರಯಾಣ ಬೆಳೆಸುವಿರಿ, ತಪ್ಪು ಸಹವಾಸದಿಂದ ದೂರವಿರಿ.

​ಮೀನ ರಾಶಿ:

ಶನಿಯ ಪ್ರಭಾವದಿಂದ ಕಾಲು ನೋವು ಅಥವಾ ಆಲಸ್ಯ ಇರಬಹುದು, ವಿದ್ಯಾರ್ಥಿಗಳಿಗೆ ಸಾಧಾರಣ ಫಲಿತಾಂಶ ಸಿಗಲಿದೆ. ಹಣಕಾಸಿನ ಶಿಸ್ತು ಅಗತ್ಯವಿದ್ದು ಆಸ್ಪತ್ರೆ ಅಥವಾ ಔಷಧಿಗೆ ಖರ್ಚಾಗುವ ಸಾಧ್ಯತೆ ಇದೆ. ದೂರದ ಪ್ರಯಾಣ ತೊಂದರೆದಾಯಕವಾಗಬಹುದು, ವಿಶ್ವಾಸಾರ್ಹ ವ್ಯಕ್ತಿಗಳ ಜೊತೆ ಮಾತ್ರ ಸಹವಾಸ ಮಾಡಿ.

– ಲೋಹಿತ್ ಹೆಬ್ಬಾರ್

Published On – 10:35 pm, Sat, 11 July 26

Source link

‘ರಾಮಾಯಣ’ ಚಿತ್ರದ ಟ್ರೇಲರ್ ಬಿಡುಗಡೆ ದಿನಾಂಕ ಘೋಷಣೆ; ಜಾಗತಿಕ ಮಟ್ಟದಲ್ಲಿ ಅಬ್ಬರ – Kannada News | Nitesh Tiwari Epic Ramayana Trailer Release Date Formally Announced For July 24

ಭಾರತೀಯ ಚಿತ್ರರಂಗದಲ್ಲೇ ಹಿಂದೆಂದೂ ಕಾಣದ ಅತ್ಯಂತ ವಿಶಿಷ್ಟ ಹಾಗೂ ಬೃಹತ್ ಮಟ್ಟದಲ್ಲಿ ‘ರಾಮಾಯಣ’ ಸಿನಿಮಾ ಸಿದ್ಧವಾಗುತ್ತಿದೆ. ಭಾರತದ ಹೆಮ್ಮೆಯ ಪೌರಾಣಿಕ ಮಹಾಕಾವ್ಯವನ್ನು ಜಾಗತಿಕ ಮಟ್ಟದ ಪ್ರೇಕ್ಷಕರಿಗೆ ತಲುಪಿಸುವ ಸಲುವಾಗಿ, ಅದ್ದೂರಿ ಮೇಕಿಂಗ್ ಹಾಗೂ ತಂತ್ರಜ್ಞಾನದೊಂದಿಗೆ ಈ ಚಿತ್ರವನ್ನು ಜಗತ್ತಿನಾದ್ಯಂತ ದೊಡ್ಡ ಮಟ್ಟದಲ್ಲಿ ರಿಲೀಸ್ ಮಾಡಲು ಚಿತ್ರತಂಡ ಭರದಿಂದ ಸಿದ್ಧತೆ ನಡೆಸುತ್ತಿದೆ. ಈಗ ಸಿನಿಮಾದ ಟ್ರೇಲರ್ ರಿಲೀಸ್ ದಿನಾಂಕ ರಿವೀಲ್ ಆಗಿದೆ.

‘ರಾಮಾಯಣ’ ಟ್ರೇಲರ್ ರಿಲೀಸ್ ದಿನಾಂಕದ ಬಗ್ಗೆ ಇತ್ತೀಚೆಗೆ ಹಲವು ಸುದ್ದಿ ಹರಡಿತ್ತು. ಈಗ ಬಿಗ್ ಅಪ್ಡೇಟ್ ಅನ್ನು ಚಿತ್ರತಂಡ ಅಧಿಕೃತವಾಗಿ ಹೊರಹಾಕಿದೆ. ಚಿತ್ರದ ಟ್ರೇಲರ್ ಜುಲೈ 24ರಂದು ವಿಶ್ವಾದ್ಯಂತ ಏಕಕಾಲಕ್ಕೆ ಬಿಡುಗಡೆಯಾಗಲಿದೆ ಎಂದು ತಂಡ ಘೋಷಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರದ ವಿಶೇಷ ಪೋಸ್ಟರ್ ಹಂಚಿಕೊಳ್ಳುವ ಮೂಲಕ ಈ ಬಿಡುಗಡೆಯ ದಿನಾಂಕವನ್ನು ಚಿತ್ರತಂಡ ಅಧಿಕೃತವಾಗಿ ಖಚಿತಪಡಿಸಿದೆ.

ಸಿನಿಮಾ ಘೋಷಣೆಯಾದ ದಿನದಿಂದಲೂ ಪ್ರೇಕ್ಷಕರಲ್ಲಿ ಚಿತ್ರದ ದೃಶ್ಯ ವೈಭವದ ಬಗ್ಗೆ ಸಾಕಷ್ಟು ಕುತೂಹಲ ಮನೆಮಾಡಿದೆ. ಈ ಟ್ರೇಲರ್ ಮೂಲಕ ಚಿತ್ರದ ಭವ್ಯ ಲೋಕ, ಪಾತ್ರಗಳ ವಿವರ ಹಾಗೂ ಹಾಲಿವುಡ್ ಮಟ್ಟದ ಗ್ರಾಫಿಕ್ಸ್ ಝಲಕ್ ಕಾಣ ಸಿಗಲಿದೆ ಎಂಬ ಭಾರಿ ನಿರೀಕ್ಷೆ ಸೃಷ್ಟಿಯಾಗಿದೆ. ಈ ಟ್ರೇಲರ್ ಭಾರತೀಯ ಚಿತ್ರರಂಗದಲ್ಲೇ ಹೊಸ ದಾಖಲೆ ಬರೆಯಲಿದೆ ಎಂದು ಸಿನಿವಿಶ್ಲೇಷಕರು ಅಂದಾಜಿಸಿದ್ದಾರೆ.

ಇದನ್ನೂ ಓದಿ: ದೇಶದ 400ಕ್ಕೂ ಹೆಚ್ಚು ಶಾಲೆಗಳಲ್ಲಿ ‘ರಾಮಾಯಣ’ ಸಿನಿಮಾದ ಭರ್ಜರಿ ಪ್ರಚಾರ

ನಿತೇಶ್ ತಿವಾರಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಮೆಗಾ ಬಜೆಟ್ ಚಿತ್ರದಲ್ಲಿ ಬಾಲಿವುಡ್ ನಟ ರಣಬೀರ್ ಕಪೂರ್ ಶ್ರೀರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ ಮತ್ತು ರಾಕಿಂಗ್ ಸ್ಟಾರ್ ಯಶ್ ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸುಮಾರು 4,000 ಕೋಟಿ ರೂ.ಗಳ ಬೃಹತ್ ಬಜೆಟ್‌ನಲ್ಲಿ ನಿರ್ಮಾಣವಾಗುತ್ತಿರುವ ಈ ಮಹಾಕಾವ್ಯದ ಮೊದಲ ಭಾಗವು ಇದೇ ವರ್ಷದ ದೀಪಾವಳಿ ಹಬ್ಬದ ಪ್ರಯುಕ್ತ ವಿಶ್ವದಾದ್ಯಂತ ಐಮ್ಯಾಕ್ಸ್ ಪರದೆಗಳ ಮೇಲೆ ಅದ್ದೂರಿಯಾಗಿ ಬಿಡುಗಡೆಯಾಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಉದ್ಯೋಗ ಭವಿಷ್ಯ: ಜುಲೈ 12-18 ಉದ್ಯೋಗ ಭವಿಷ್ಯ: 12 ರಾಶಿಗಳ ವೃತ್ತಿಜೀವನ, ಹಣಕಾಸು ಮತ್ತು ಯಶಸ್ಸಿನ ಭವಿಷ್ಯ – Kannada News | Career Astrology: July 12 18 Job Predictions for All Rashi Signs

ಜುಲೈ 12ರಿಂದ 18ರವರೆಗೆ ಮೂರನೇ ವಾರವಾಗಿದ್ದು ವಿವಾದ, ಹಿಂಜರಿಕೆ, ದಾಖಲೆ ಪರಿಶೀಲನೆ, ಉದ್ಯೋಗ ಬದಲು, ಹೂಡಕೆಯ ಜವಾಬ್ದಾರಿ, ಒತ್ತಡ ಇಲ್ಲದೇ ಆಲಸ್ಯ ಇವುಗಳೆಲ್ಲ ಇರಲಿದ್ದು, ಸಮಯಕ್ಕೆ ಬೇಕಾದ ಚಾತುರ್ಯ ಇರಬೇಕು. ಸಮಯಸ್ಪೂರ್ತಿಯಿಂದ ವಾರವು ನಿಮ್ಮದಾಗಲಿದೆ.

ಮೇಷ ರಾಶಿ :

​ವೃತ್ತಿಜೀವನದಲ್ಲಿ ಹೊಸ ಉತ್ಸಾಹ ಕಂಡುಬರಲಿದೆ. ಮಂಗಳನ ಶುಭ ದೃಷ್ಟಿಯಿಂದಾಗಿ ಕಠಿಣ ಕೆಲಸಗಳನ್ನೂ ಸುಲಭವಾಗಿ ಪೂರ್ಣಗೊಳಿಸುವಿರಿ. ಕಚೇರಿಯಲ್ಲಿ ಸಹೋದ್ಯೋಗಿಗಳೊಂದಿಗೆ ವಾದ-ವಿವಾದಗಳಿಗೆ ಇಳಿಯಬೇಡಿ, ನಿಮ್ಮ ಕೆಲಸದ ಕಡೆಗೆ ಮಾತ್ರ ಗಮನಹರಿಸಿ.

ವೃಷಭ ರಾಶಿ :

​ನಿಮ್ಮದೇ ರಾಶಿಯಲ್ಲಿ ಮಂಗಳನಿರುವುದರಿಂದ ಆತ್ಮವಿಶ್ವಾಸ ಹೆಚ್ಚಿರುತ್ತದೆ. ಕಠಿಣ ಪರಿಶ್ರಮಕ್ಕೆ ತಕ್ಕ ಮನ್ನಣೆ ಮತ್ತು ಮೇಲಧಿಕಾರಿಗಳಿಂದ ಪ್ರಶಂಸೆ ಸಿಗುವ ಯೋಗವಿದೆ. ಹೊಸ ಜವಾಬ್ದಾರಿಗಳು ಸಿಕ್ಕಾಗ ಹಿಂಜರಿಯದೆ ಮುನ್ನಡೆಯಿರಿ, ಇದು ನಿಮ್ಮ ಬೆಳವಣಿಗೆಗೆ ಸಹಕಾರಿ.

ಮಿಥುನ ರಾಶಿ :

​ಬುಧನ ನಡೆ ಹಾಗೂ ಬದಲಾವಣೆಗಳಿಂದಾಗಿ ಸಂವಹನ ಕ್ಷೇತ್ರದಲ್ಲಿ ಇರುವವರಿಗೆ ಉತ್ತಮ ಅವಕಾಶಗಳು ಸಿಗಲಿವೆ. ಪ್ರವಾಸ ಅಥವಾ ವಿದೇಶಿ ಸಂಪರ್ಕಗಳಿಂದ ಲಾಭವಾಗಬಹುದು. ಸಹಿ ಮಾಡುವ ಮುನ್ನ ಯಾವುದೇ ದಾಖಲೆಗಳನ್ನು ಸರಿಯಾಗಿ ಓದಿ ನೋಡುವುದು ಉತ್ತಮ.

​ಕರ್ಕಾಟಕ ರಾಶಿ :

ಸೂರ್ಯ ಮತ್ತು ಗುರುವಿನ ಸಂಯೋಜನೆಯು ನಿಮ್ಮ ರಾಶಿಯಲ್ಲೇ ಇರುವುದರಿಂದ ವೃತ್ತಿರಂಗದಲ್ಲಿ ಅತ್ಯಂತ ಸುವರ್ಣ ಅವಕಾಶಗಳು ಎದುರಾಗಲಿವೆ. ಉದ್ಯೋಗ ಬದಲಾವಣೆಗೆ ಇದು ಸೂಕ್ತ ಸಮಯ. ನಾಯಕತ್ವದ ಗುಣಗಳನ್ನು ಪ್ರದರ್ಶಿಸಲು ಸಿಗುವ ಅವಕಾಶವನ್ನು ಕೈಚೆಲ್ಲಬೇಡಿ.

ಸಿಂಹ ರಾಶಿ :

​ಶುಕ್ರ ಮತ್ತು ಕೇತುಗಳ ಪ್ರಭಾವದಿಂದಾಗಿ ಸೃಜನಾತ್ಮಕ ಕ್ಷೇತ್ರಗಳಲ್ಲಿ ಇರುವವರಿಗೆ ಉತ್ತಮ ಯಶಸ್ಸು ಸಿಗಲಿದೆ. ಆದರೆ, ಕೆಲಸದ ಒತ್ತಡ ಸ್ವಲ್ಪ ಹೆಚ್ಚಿರಬಹುದು. ಕಚೇರಿಯ ರಾಜಕೀಯದಿಂದ ದೂರವಿರಿ ಮತ್ತು ನಿಮ್ಮ ಗುರಿಯತ್ತ ಮಾತ್ರ ಗಮನವಿರಲಿ.

ಕನ್ಯಾ ರಾಶಿ :

ಉದ್ಯೋಗದಲ್ಲಿ ಸ್ಥಿರತೆ ಇರಲಿದ್ದು, ಹಳೆಯ ಬಾಕಿ ಉಳಿದಿದ್ದ ಕೆಲಸಗಳು ಸುಲಭವಾಗಿ ಪೂರ್ಣಗೊಳ್ಳಲಿವೆ. ಉದ್ಯಮಿಗಳಿಗೆ ಹೊಸ ಹೂಡಿಕೆಯಿಂದ ಲಾಭವಾಗುವ ಸಾಧ್ಯತೆ ಇದೆ. ಸಹೋದ್ಯೋಗಿಗಳಿಗೆ ಸಹಾಯ ಮಾಡುವುದರಿಂದ ಕಚೇರಿಯಲ್ಲಿ ನಿಮ್ಮ ಗೌರವ ಹೆಚ್ಚುತ್ತದೆ.

ತುಲಾ ರಾಶಿ :

​ವೃತ್ತಿ ಜೀವನದಲ್ಲಿ ಪ್ರಗತಿ ಕಂಡುಬರಲಿದೆ. ನಿಮ್ಮ ದಕ್ಷತೆ ಮತ್ತು ಕೌಶಲ್ಯಕ್ಕೆ ತಕ್ಕಂತೆ ಹೊಸ ಯೋಜನೆ ನಿಮ್ಮ ಕೈಸೇರಲಿವೆ. ಸಂಬಳ ಹೆಚ್ಚಳದ ಮಾತುಕತೆ ಸಫಲವಾಗಬಹುದು. ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಉದ್ವೇಗಕ್ಕೆ ಒಳಗಾಗಬೇಡಿ, ತಾಳ್ಮೆಯಿಂದ ಯೋಚಿಸಿ.

ವೃಶ್ಚಿಕ ರಾಶಿ :

​ಅದೃಷ್ಟದ ಸಂಪೂರ್ಣ ಬೆಂಬಲ ನಿಮಗಿದೆ. ದೀರ್ಘಕಾಲದಿಂದ ಕಾಯುತ್ತಿದ್ದ ಪದೋನ್ನತಿ ಅಥವಾ ವರ್ಗಾವಣೆಯ ಸುದ್ದಿ ಈ ವಾರ ಸಿಗುವ ಸಾಧ್ಯತೆ ದಟ್ಟವಾಗಿದೆ. ಹಿರಿಯ ಅಧಿಕಾರಿಗಳ ಮಾರ್ಗದರ್ಶನವನ್ನು ಗೌರವಿಸಿ, ಅದು ನಿಮ್ಮ ಮುಂದಿನ ಹಾದಿಗೆ ಸಹಕಾರಿ.

ಧನು ರಾಶಿ :

​ಈ ವಾರ ಕೆಲಸದ ಜವಾಬ್ದಾರಿಗಳು ಹೆಚ್ಚಾಗಬಹುದು. ಕಠಿಣ ಪರಿಶ್ರಮಕ್ಕೆ ತಕ್ಕ ಫಲ ತಕ್ಷಣ ಸಿಗದಿದ್ದರೂ, ಭವಿಷ್ಯದಲ್ಲಿ ಇದು ಉತ್ತಮ ಬುನಾದಿ ಹಾಕಿಕೊಡಲಿದೆ. ಸಾಧನೆಗೆ ಕಳ್ಳ ದಾರಿಗೆ ಮೊರೆ ಹೋಗಬೇಡಿ, ಪ್ರಾಮಾಣಿಕ ಪ್ರಯತ್ನವೇ ನಿಮ್ಮನ್ನು ಯಶಸ್ಸಿನತ್ತ ಮುನ್ನಡೆಸುತ್ತದೆ.

ಮಕರ ರಾಶಿ :

ಪಾಲುದಾರಿಕೆಯ ವ್ಯವಹಾರಗಳಲ್ಲಿ ಉತ್ತಮ ಪ್ರಗತಿ ಇರಲಿದೆ. ಕಚೇರಿಯಲ್ಲಿ ನಿಮ್ಮ ನಿರ್ಧಾರಗಳಿಗೆ ಎಲ್ಲರಿಂದ ಮನ್ನಣೆ ಸಿಗಲಿದ್ದು, ನಿಮ್ಮ ಪ್ರಭಾವ ಹೆಚ್ಚಾಗಲಿದೆ. ನಿಮ್ಮ ಯೋಚನೆಗಳು ಸಹೋದ್ಯೋಗಿಗಳೊಂದಿಗೆ ಹಂಚಿಕೊಳ್ಳುವಾಗ ಸ್ವಲ್ಪ ಜಾಗರೂಕರಾಗಿರಿ.

ಇದನ್ನೂ ಓದಿ: ಈ 4 ರಾಶಿಯವರಿಗೆ ಹಣದ ವ್ಯವಹಾರದಲ್ಲಿ ಇರಲಿ ಎಚ್ಚರ; ಸಾಲ ಕೊಡುವ ಮೊದಲು ಯೋಚಿಸಿ

ಕುಂಭ ರಾಶಿ :

​ರಾಹುವಿನ ಪ್ರಭಾವದಿಂದಾಗಿ ಕೆಲವು ಸವಾಲುಗಳು ಎದುರಾಗಬಹುದು, ಆದರೆ ನಿಮ್ಮ ಚತುರತೆಯಿಂದ ಅದನ್ನು ನಿಭಾಯಿಸುವಿರಿ. ಸ್ಪರ್ಧಾತ್ಮಕ ಪರೀಕ್ಷೆ ಬರೆಯುವವರಿಗೆ ಶುಭ ವಾರ್ತೆ ಇದೆ. ಕೆಲಸದ ಸ್ಥಳದಲ್ಲಿ ಸೋಮಾರಿತನವನ್ನು ಬಿಟ್ಟು ಚುರುಕಾಗಿರಿ.

ಮೀನ ರಾಶಿ :

ಶನಿಯು ನಿಮ್ಮದೇ ರಾಶಿಯಲ್ಲಿರುವುದರಿಂದ ಜವಾಬ್ದಾರಿಗಳು ಹೆಚ್ಚಲಿವೆ. ಆದಾಗ್ಯೂ, ನಿಮ್ಮ ಕಠಿಣ ಪರಿಶ್ರಮ ಹಾಗೂ ನಿಷ್ಠೆಗೆ ತಕ್ಕಂತೆ ಉದ್ಯೋಗದಲ್ಲಿ ಉತ್ತಮ ಸ್ಥಾನಮಾನ ದೊರೆಯಲಿದೆ. ಒತ್ತಡವನ್ನು ನಿರ್ವಹಿಸಲು ಸಮಯದ ಯೋಜನೆಯನ್ನು ಸರಿಯಾಗಿ ಮಾಡಿಕೊಳ್ಳಿ.

– ಲೋಹಿತ್ ಹೆಬ್ಬಾರ್

Source link

IND vs ENG: ಏಕಾಂಗಿಯಾದ ವೈಭವ್ ಸೂರ್ಯವಂಶಿ ವಿಡಿಯೋ ವೈರಲ್ – Kannada News | T20 Shock: Vaibhav Sooryavanshi Benched from England Match, Emotional Video Goes Viral

ಸೌತಾಂಪ್ಟನ್‌ನಲ್ಲಿ ನಡೆದ ಇಂಗ್ಲೆಂಡ್‌ ವಿರುದ್ಧದ ಐದನೇ ಟಿ20 ಪಂದ್ಯದಿಂದ ವೈಭವ್ ಸೂರ್ಯವಂಶಿಯನ್ನು ಹೊರಗಿಡಲಾಗಿದೆ. ಈ ಸರಣಿಯ ಮೂರು ಪಂದ್ಯಗಳಲ್ಲಿ ಆಡುವ ಅವಕಾಶ ಪಡೆದಿದ್ದ ವೈಭವ್​ಗೆ ಗಮನಾರ್ಹ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಆಡಿದ ಮೂರು ಪಂದ್ಯಗಳಲ್ಲಿ ಕ್ರಮವಾಗಿ 14, 13 ಮತ್ತು 15 ರನ್​ ಕಲೆಹಾಕಲಷ್ಟೇ ಶಕ್ತರಾಗಿದ್ದರು. ಹೀಗಾಗಿ ಅವರನ್ನು ಕೊನೆಯ ಟಿ20 ಪಂದ್ಯದಿಂದ ಕೈಬಿಡಲಾಗಿದೆ. ಹೀಗೆ ತಂಡದಿಂದ ಹೊರಬಿದ್ದು, ಬೌಂಡರಿ ಗೆರೆ ಬಳಿ ವೈಭವ್ ಏಕಾಂಗಿಯಾಗಿ ಕುಳಿತಿದ್ದ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ವೈಭವ್ ಅವರ ಮುಖದಲ್ಲಿ ಬೇಸರ ಹಾಗೂ ಹತಾಶೆ ಸ್ಪಷ್ಟವಾಗಿ ಗೋಚರಿಸುತ್ತಿದೆ. ಸ್ವಲ್ಪ ಹೊತ್ತು ಬೇಸರದಿಂದ ಕುಳಿತಿದ್ದ ವೈಭವ್ ಅದಾದ ಬಳಿಕ ಸಪ್ಪೆ ಮೊರೆ ಹಾಕಿಕೊಂಡು ಮೈದಾನದಿಂದ ಹೊರನಡೆದಿದ್ದಾರೆ.

Source link

ಬಿಎಂಟಿಸಿ ಬಸ್‌ನಲ್ಲಿ ಸಚಿವ ಬೈರತಿ ಸುರೇಶ್ ರಿಯಾಲಿಟಿ ಚೆಕ್: ಚಿಲ್ಲರೆ ಇಲ್ಲದ್ದಕ್ಕೆ ಸಚಿವರನ್ನೇ ಬಸ್‌ನಿಂದ ಕೆಳಗಿಳಿಸಲು ಯತ್ನಿಸಿದ ಕಂಡಕ್ಟರ್ – Kannada News | Bengaluru BMTC Shocker: Minister Bairathi Suresh’s Surprise Check Reveals Bus Problems

ಬೆಂಗಳೂರು, ಜು.11: ಸಿಲಿಕಾನ್ ಸಿಟಿಯ ಬಿಎಂಟಿಸಿ (BMTC) ಬಸ್‌ಗಳಲ್ಲಿ ಸಾರ್ವಜನಿಕರಿಗೆ ಎದುರಾಗುತ್ತಿರುವ ಸಮಸ್ಯೆಗಳು ಹಾಗೂ ನಿರ್ವಾಹಕರ ಕಳ್ಳಾಟವನ್ನು ಬಯಲಿಗೆಳೆಯಲು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರು ಇಂದು (ಜು.11) ಮಾಸ್ಕ್ ಧರಿಸಿ ದಿಢೀರ್ ‘ಸ್ವಯಂ ರಿಯಾಲಿಟಿ ಚೆಕ್’ ನಡೆಸಿದ್ದಾರೆ. ಈ ವೇಳೆ ಸಚಿವರನ್ನೇ ಕಂಡಕ್ಟರ್ ಒಬ್ಬರು ಬಸ್‌ನಿಂದ ಕೆಳಗಿಳಿಸಲು ಯತ್ನಿಸಿದ ತೀವ್ರ ಆಘಾತಕಾರಿ ಪ್ರಸಂಗವೊಂದು ಬೆಳಕಿಗೆ ಬಂದಿದೆ. ಸಚಿವರ ಈ ದಿಢೀರ್ ಭೇಟಿಯಿಂದಾಗಿ ಬಿಎಂಟಿಸಿ ಇಲಾಖೆಯ ಹಲವು ಅಕ್ರಮಗಳು ಮತ್ತು ಸಾರ್ವಜನಿಕರ ಮೇಲಿನ ದಬ್ಬಾಳಿಕೆ ರಸ್ತೆಯಲ್ಲೇ ಸಾಬೀತಾಗಿದೆ. ಬೆಂಗಳೂರಿನ ಭೂಪಸಂದ್ರದಿಂದ ಹೆಬ್ಬಾಳಕ್ಕೆ ತೆರಳುವ ಬಿಎಂಟಿಸಿ ಬಸ್‌ಗೆ ಸಚಿವ ಬೈರತಿ ಸುರೇಶ್ ಅವರು ಸಾಮಾನ್ಯ ಪ್ರಯಾಣಿಕನಂತೆ ಮಾಸ್ಕ್ ಧರಿಸಿ ಹತ್ತಿದ್ದಾರೆ. ಬಸ್ ಚಲಿಸಲು ಆರಂಭಿಸಿದಾಗ ಎರಡು ಟಿಕೆಟ್ ನೀಡುವಂತೆ ಕಂಡಕ್ಟರ್‌ಗೆ ಕೇಳಿ, ಅದಕ್ಕಾಗಿ 100 ರೂಪಾಯಿ ನೋಟನ್ನು ನೀಡಿದ್ದಾರೆ. ಈ ವೇಳೆ ಕಂಡಕ್ಟರ್, “ನನ್ನ ಬಳಿ ಚಿಲ್ಲರೆ ಇಲ್ಲ, ಮೊದಲು ನನಗೆ 12 ರೂಪಾಯಿ ಚಿಲ್ಲರೆ ಕೊಡಿ” ಎಂದು ಸಚಿವರಿಗೆ ತಾಕೀತು ಮಾಡಿದ್ದಾನೆ.

ಇದಕ್ಕೆ ಸಚಿವರು “ನನ್ನ ಬಳಿ ಚಿಲ್ಲರೆ ಇಲ್ಲ” ಎಂದು ಉತ್ತರಿಸುತ್ತಿದ್ದಂತೆಯೇ, ಆತ ಸಚಿವರೆಂಬುದನ್ನು ತಿಳಿಯದ ಕಂಡಕ್ಟರ್ ಉದ್ಧಟತನ ಪ್ರದರ್ಶಿಸಿ, “ಚಿಲ್ಲರೆ ಇಲ್ಲದಿದ್ದರೆ ತಕ್ಷಣ ಬಸ್‌ನಿಂದ ಕೆಳಗೆ ಇಳಿಯಿರಿ” ಎಂದು ಸಚಿವರಿಗೇ ಆರ್ಡರ್ ಮಾಡಿದ್ದಾನೆ. ಈ ವೇಳೆ ಸಚಿವರು ಮಾಸ್ಕ್ ತೆಗೆದು ತಮ್ಮ ಗುರುತು ಪರಿಚಯಿಸುತ್ತಿದ್ದಂತೆಯೇ ಕಂಡಕ್ಟರ್ ಹಾಗೂ ಬಸ್‌ನಲ್ಲಿದ್ದ ಸಿಬ್ಬಂದಿ ಅಕ್ಷರಶಃ ಶಾಕ್ ಆಗಿದ್ದಾರೆ. ಪ್ರತಿದಿನ ಸಾಮಾನ್ಯ ನಾಗರಿಕರು ಚಿಲ್ಲರೆ ವಿಚಾರವಾಗಿ ಇಂತಹ ಎಷ್ಟೋ ಕಟು ಅನುಭವಗಳನ್ನು ಎದುರಿಸುತ್ತಿದ್ದಾರೆ ಎಂಬುದನ್ನು ಸಚಿವರು ಸ್ಥಳದಲ್ಲೇ ಮನಗಂಡಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಶಾಸಕರಿಗೆ ಬಿಜೆಪಿಯಿಂದ 20-30 ಕೋಟಿ ರೂ. ಆಫರ್; ಒಮರ್ ಅಬ್ದುಲ್ಲಾ ಗಂಭೀರ ಆರೋಪ – Kannada News | Omar Abdullah Alleges National Conference MLAs Offered Rs 20 to 30 Crore To Switch Sides Operation Lotus

ಶ್ರೀನಗರ, ಜುಲೈ 11: ಜಮ್ಮು ಮತ್ತು ಕಾಶ್ಮೀರದ ಆಡಳಿತಾರೂಢ ಪಕ್ಷದ ಶಾಸಕರನ್ನು ತನ್ನತ್ತ ಸೆಳೆಯಲು ಬಿಜೆಪಿ ಆಪರೇಷನ್ ಕಮಲಕ್ಕೆ ಮುಂದಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ (Omar Abdullah) ಇಂದು ಗಂಭೀರ ಆರೋಪ ಮಾಡಿದ್ದಾರೆ. ನ್ಯಾಷನಲ್ ಕಾನ್ಫರೆನ್ಸ್ (NC) ಶಾಸಕರಿಗೆ 20ರಿಂದ 30 ಕೋಟಿ ರೂ. ಹಣ, ಸಚಿವ ಸ್ಥಾನ ಮತ್ತು ಜಮ್ಮು-ಕಾಶ್ಮೀರಕ್ಕೆ ಮರಳಿ ರಾಜ್ಯ ಸ್ಥಾನಮಾನ ಕೊಡಿಸುವ ಆಮಿಷಗಳನ್ನು ಬಿಜೆಪಿ ಒಡ್ಡುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ಇದು ಜಮ್ಮು ಕಾಶ್ಮೀರದ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ.

ಶ್ರೀನಗರದಲ್ಲಿ ನಡೆದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಈ ಹೇಳಿಕೆ ನೀಡಿದ್ದಾರೆ. ತಮ್ಮ ಪಕ್ಷದ ಜಮ್ಮು ಭಾಗದ ಶಾಸಕರೊಬ್ಬರನ್ನು ಸುಪ್ರೀಂ ಕೋರ್ಟ್ ವಕೀಲರೂ ಆಗಿರುವ ಬಿಜೆಪಿಯ ಪ್ರಮುಖ ಪದಾಧಿಕಾರಿಯೊಬ್ಬರು ರಹಸ್ಯವಾಗಿ ಭೇಟಿಯಾಗಿದ್ದರು ಎಂದು ಒಮರ್ ಅಬ್ದುಲ್ಲಾ ಬಹಿರಂಗಪಡಿಸಿದ್ದಾರೆ.

“ಬಿಜೆಪಿ ಅಧಿಕಾರಿಯೊಬ್ಬರು ಮುಚ್ಚಿದ ಕೋಣೆಯಲ್ಲಿ ನಮ್ಮ ಜಮ್ಮುವಿನ ಶಾಸಕರೊಬ್ಬರಿಗೆ, ‘ನಾವು ನಿಮಗೆ 20ರಿಂದ 30 ಕೋಟಿ ರೂ. ಹಣ, ಒಂದು ಸಚಿವ ಸ್ಥಾನ ಮತ್ತು ರಾಜ್ಯ ಸ್ಥಾನಮಾನ ನೀಡುತ್ತೇವೆ. ನೀವು ನಮ್ಮೊಂದಿಗೆ ಬನ್ನಿ’ ಎಂದು ಆಫರ್ ನೀಡಿದ್ದಾರೆ. ಆದರೆ, ತಮ್ಮ ಶಾಸಕರು ಈ ಆಫರ್ ಅನ್ನು ತಕ್ಷಣವೇ ತಿರಸ್ಕರಿಸಿದ್ದಾರೆ ಮತ್ತು ಹಿಂಬಾಗಿಲಿನಿಂದ ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಡೆದಿದ್ದಾರೆ” ಎಂದು ಸಿಎಂ ಒಮರ್ ಅಬ್ದುಲ್ಲಾ ಹೇಳಿದ್ದಾರೆ.

ಇದನ್ನೂ ಓದಿ: ಆಪರೇಷನ್ ಕಮಲ ತಡೆಯಲು ಡಿಕೆ ಪ್ಲಾನ್; ವಂಡರ್ ಲಾಗೆ ತಲುಪಿದ ಅಸ್ಸಾಂ ಶಾಸಕರು!

“ಬಿಜೆಪಿ ನಾಯಕರೇ, ನಮ್ಮನ್ನು ಅಷ್ಟು ದುರ್ಬಲರು ಎಂದು ಭಾವಿಸಬೇಡಿ. ನಿಮಗೆ ಹಿಂಬಾಗಿಲಿನಿಂದ ಜಮ್ಮು ಕಾಶ್ಮೀರದಲ್ಲಿ ಸರ್ಕಾರ ರಚಿಸಲು ಪ್ರವೇಶವಿಲ್ಲ. ಸದ್ಯಕ್ಕೆ ಇಲ್ಲಿನ ಜನತೆ ನಿಮ್ಮನ್ನು ಹಿಂದಿನ ಸೀಟಿನಲ್ಲಿ ಕೂರಿಸಿದ್ದಾರೆ, ನೀವು ಅಲ್ಲೇ ಇರಬೇಕಾಗುತ್ತದೆ” ಎಂದು ಅವರು ಗುಡುಗಿದ್ದಾರೆ.

ಜುಲೈ 20ರಂದು ದೆಹಲಿಯಲ್ಲಿ ಬೃಹತ್ ಪ್ರತಿಭಟನೆ:

ಜಮ್ಮು ಮತ್ತು ಕಾಶ್ಮೀರಕ್ಕೆ ಪೂರ್ಣ ಪ್ರಮಾಣದ ರಾಜ್ಯ ಸ್ಥಾನಮಾನವನ್ನು ಮರಳಿ ನೀಡಬೇಕೆಂದು ಆಗ್ರಹಿಸಿ ಜುಲೈ 20ರಂದು ನವದೆಹಲಿಯ ಜಂತರ್ ಮಂತರ್‌ನಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದೆ. ಇದಕ್ಕೆ ಇನ್ನು ಅಧಿಕೃತ ಅನುಮತಿ ಸಿಗದಿದ್ದರೂ ಪ್ರತಿಭಟನೆ ನಡೆಸುವುದು ಖಚಿತ ಎಂದು ಒಮರ್ ಅಬ್ದುಲ್ಲಾ ಪುನರುಚ್ಚರಿಸಿದ್ದಾರೆ. ಈ ಪ್ರತಿಭಟನೆಗೆ ವಿವಿಧ ಪಕ್ಷಗಳ ಹಾಲಿ ಮತ್ತು ಮಾಜಿ ಶಾಸಕರು ಸೇರಿದಂತೆ 52 ರಾಜಕೀಯ ನಾಯಕರಿಗೆ ಆಹ್ವಾನ ನೀಡಲಾಗಿದೆ.

ಇದನ್ನೂ ಓದಿ: ಡಿಎಂಕೆ ಸೇರಲು10 ಶಾಸಕರು ಸಿದ್ಧರಿದ್ದಾರೆ ಎಂದು ಆಮಿಷ; ಟಿವಿಕೆ ಎಂಎಲ್​ಎ ಇಳಯರಾಜ ಆರೋಪ

ಒಮರ್​ಗೆ ಕಾಂಗ್ರೆಸ್ ಬೆಂಬಲ:

ಜಮ್ಮು-ಕಾಶ್ಮೀರ ಸರ್ಕಾರದ ಮೈತ್ರಿಕೂಟದ ಪಾಲುದಾರ ಪಕ್ಷವಾದ ಕಾಂಗ್ರೆಸ್ ಬಿಜೆಪಿಯ ವಿರುದ್ಧದ ಒಮರ್ ಅಬ್ದುಲ್ಲಾ ಅವರ ಆರೋಪಗಳನ್ನು ಬಲವಾಗಿ ಬೆಂಬಲಿಸಿದೆ. ಇದಕ್ಕೆ ಕಾಂಗ್ರೆಸ್ ನಾಯಕ ಸಲ್ಮಾನ್ ಸೋಜ್ ಪ್ರತಿಕ್ರಿಯಿಸಿದ್ದು, “ಶಾಸಕರಿಗೆ 30 ಕೋಟಿ ಆಫರ್ ನೀಡಿ ಪಕ್ಷ ಒಡೆಯಲು ಬಿಜೆಪಿ ಯತ್ನಿಸುತ್ತಿದೆ ಎಂದು ಸಿಎಂ ಹೇಳುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಪಕ್ಷದ ಇಂತಹ ಭ್ರಷ್ಟ ಕ್ರಮಗಳ ಬಗ್ಗೆ ದೇಶಕ್ಕೆ ಉತ್ತರಿಸುತ್ತಾರೆಯೇ?” ಎಂದು ಪ್ರಶ್ನಿಸಿದ್ದಾರೆ.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಮಾತನಾಡಿ, “ಇದು ಮೋದಿ-ಶಾ ಜೋಡಿಯ ಹಳೆಯ ಟೂಲ್‌ಕಿಟ್ ಮತ್ತು ಅವರ ಎಂದಿನ ಆಪರೇಷನ್ ಮಾದರಿ” ಎಂದು ಟೀಕಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯ ಬಲಾಬಲ:

ಪ್ರಸ್ತುತ ಒಮರ್ ಅಬ್ದುಲ್ಲಾ ನೇತೃತ್ವದ ಸರ್ಕಾರವು ವಿಧಾನಸಭೆಯಲ್ಲಿ ಸ್ಪಷ್ಟ ಬಹುಮತವನ್ನು ಹೊಂದಿದೆ. ಒಟ್ಟು 95 ಸದಸ್ಯರ ಬಲದ (5 ನಾಮನಿರ್ದೇಶಿತ ಸದಸ್ಯರು ಸೇರಿ) ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಲು 48 ಶಾಸಕರ ಬೆಂಬಲ ಬೇಕು. ಆಡಳಿತಾರೂಢ ಮೈತ್ರಿಕೂಟ (52 ಶಾಸಕರು): ನ್ಯಾಷನಲ್ ಕಾನ್ಫರೆನ್ಸ್ (41), ಕಾಂಗ್ರೆಸ್ (6), ಸಿಪಿಐ(ಎಂ) (1) ಮತ್ತು 4 ಪಕ್ಷೇತರ ಶಾಸಕರು. ಪ್ರತಿಪಕ್ಷವಾದ ಬಿಜೆಪಿ 29 ಶಾಸಕರನ್ನು ಹೊಂದಿದ್ದು, ಪಿಡಿಪಿ 4 ಸ್ಥಾನಗಳನ್ನು ಹೊಂದಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಶಾಶ್ವತವಾಗಿ ಹಾಡು ನಿಲ್ಲಿಸಿದ ಕನ್ನಡಿಗರ ಹೆಮ್ಮೆಯ ಗಾನ ಕೋಗಿಲೆ ‘ಎಸ್‌ ಜಾನಕಮ್ಮ’: ಇಲ್ಲಿವೆ ಫೋಟೋಸ್​​ – Kannada News | S. Janaki, Pride of Kannadigas and the Nightingale of Song, Falls Silent Forever; see photos

ಕನ್ನಡಿಗರ ಹೆಮ್ಮೆಯ ಗಾನ ಕೋಗಿಲೆ ಎಸ್. ಜಾನಕಿ ಅವರು ಇನ್ನಿಲ್ಲ. ತಮ್ಮ 88ನೇ ವಯಸ್ಸಿನಲ್ಲಿ ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ. 20ಕ್ಕೂ ಹೆಚ್ಚು ಭಾಷೆಗಳಲ್ಲಿ 48 ಸಾವಿರಕ್ಕೂ ಹೆಚ್ಚು ಗೀತೆಗಳಿಗೆ ಜೀವ ತುಂಬಿದ್ದ ಆ ದೈವಿ ಕಂಠ ಈಗ ಶಾಶ್ವತವಾಗಿ ಮೌನವಾಗಿದೆ.

ಎಸ್.ಜಾನಕಿ, ಮೂಲತಃ ಆಂಧ್ರಪ್ರದೇಶದವರು. 1938ರ ಏಪ್ರಿಲ್ 23ರಂದು ಗುಂಟೂರು ಜಿಲ್ಲೆಯ ಪಲ್ಲಪಟ್ಲ ಗ್ರಾಮದಲ್ಲಿ ಜನಿಸಿದರು. ಇವರಿಗೆ ಬಾಲ್ಯದಿಂದಲೇ ಸಂಗೀತವೆಂದರೆ ಪಂಚಪ್ರಾಣ. ಕೇವಲ 3ನೇ ವಯಸ್ಸಿನಲ್ಲೇ ಸಂಗೀತದತ್ತ ಆಕರ್ಷಿತರಾಗಿದ್ದ ಅವರು, ಶಾಸ್ತ್ರೀಯ ಸಂಗೀತಗಾರ ಪೈಡಿ ಸ್ವಾಮಿಯವರಿಂದ ಸಂಗೀತದ ಪ್ರಾಥಮಿಕ ಪಾಠ ಕಲಿತರು.

1957ರಲ್ಲಿ ಸಿನಿಮಾ ಸಂಗೀತ ಪ್ರಪಂಚಕ್ಕೆ ಜಾನಕಿ ಪದಾರ್ಪಣೆ ಮಾಡಿದರು. ತಮಿಳಿನ ‘ವಿಧಿವಿಲಕ್ಕು’ ಚಿತ್ರದ ಮೂಲಕ ಗಾನ ಯಾನ ಆರಂಭಿಸಿದರು. 20ಕ್ಕೂ ಹೆಚ್ಚು ಭಾಷೆಗಳಲ್ಲಿ, 48,000ಕ್ಕೂ ಹೆಚ್ಚು ಗೀತೆಗಳಿಗೆ ಜಾನಕಿ ಅವರು ಧ್ವನಿ ಆಗಿದ್ದರು.

1957ರಲ್ಲಿ ‘ರತಿಮನ್ಮಥ’ ಚಿತ್ರದ ‘ತುಂಬಿ ಬಂದಾಡ ಭ್ರಮರ’ ಹಾಡಿನ ಮೂಲಕ ಎಸ್​​.ಜಾನಕಿ ಅವರು ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು. ಹುಟ್ಟಿನಿಂದ ತೆಲುಗಿನವರಾದರೂ, ಅವರಿಗೆ ಅತಿ ಹೆಚ್ಚು ಪ್ರೀತಿ, ಗೌರವ ಸಂಪಾದಿಸಿಕೊಟ್ಟಿದ್ದು ಕನ್ನಡ ನಾಡು. ಕನ್ನಡಿಗರು ಅವರನ್ನು ‘ಗಾನ ಕೋಗಿಲೆ’ ಎಂದೇ ಅಪ್ಪಿಕೊಂಡರು.

ವರನಟ ಡಾ. ರಾಜ್‌ಕುಮಾರ್ ಮತ್ತು ಎಸ್. ಜಾನಕಿ ಅವರ ಕಾಂಬಿನೇಷನ್ ಕನ್ನಡ ಚಿತ್ರರಂಗದಲ್ಲಿ ಸುವರ್ಣ ಯುಗವನ್ನೇ ಸೃಷ್ಟಿಸಿತ್ತು. ಪಿ.ಬಿ. ಶ್ರೀನಿವಾಸ್ ಮತ್ತು ಎಸ್. ಪಿ. ಬಾಲಸುಬ್ರಹ್ಮಣ್ಯಂ ಅವರೊಂದಿಗೆ ಜಾನಕಿಯವರು ಹಾಡಿದ ಭಾವನಾತ್ಮಕ ಯುಗಳ ಗೀತೆಗಳು ಎಂದೆಂದಿಗೂ ಸದಾ ಹಸಿರು.

ಎಸ್​​ ಜಾನಕಿ ಅವರು 4 ಬಾರಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. 33 ವಿವಿಧ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಸಂದಿವೆ. ಮೈಸೂರು ವಿವಿಯಿಂದ ಗೌರವ ಡಾಕ್ಟರೇಟ್, ತಮಿಳುನಾಡು ಸರ್ಕಾರದಿಂದ ‘ಕಲೈಮಾಮಣಿ’ ಗೌರವವೂ ಸಿಕ್ಕಿತ್ತು. ಅಷ್ಟೇ ಅಲ್ಲ ಕರ್ನಾಟಕ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿತ್ತು.

60 ವರ್ಷಗಳ ತಮ್ಮ ಸುದೀರ್ಘ ಸಂಗೀತ ಪಯಣಕ್ಕೆ 2016ರಲ್ಲಿ ವಿರಾಮ ಹೇಳಿದ್ದ ಜಾನಕಿಯವರು, 2017ರಲ್ಲಿ ಮೈಸೂರಿನಲ್ಲಿಯೇ ತಮ್ಮ ಕೊನೆಯ ಸಾರ್ವಜನಿಕ ಕಾರ್ಯಕ್ರಮ ನೀಡಿ ನಿವೃತ್ತರಾಗಿದ್ದರು.

Published On – 9:53 pm, Sat, 11 July 26

Source link

Exit mobile version