Headlines

ಮುಜರಾಯಿ ದೇಗುಲಗಳ ಆದಾಯಕ್ಕೆ ಬೂಸ್ಟ್​​ ಕೊಟ್ಟ ಶಕ್ತಿ ಯೋಜನೆ: ಭಕ್ತರ ಜೊತೆ ಕಾಣಿಕೆ ಸಂಗ್ರಹವೂ ಹೆಚ್ಚಳ

ಬೆಂಗಳೂರು, ಮೇ 28: ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆಯ ಪರಿಣಾಮ ರಾಜ್ಯದ ಮುಜರಾಯಿ ದೇಗುಲಗಳಲ್ಲಿನ ಆದಾಯದಲ್ಲಿ ಗಣನೀಯ ಹೆಚ್ಚಳ ಆಗಿರುವುದು ಕಂಡುಬಂದಿದೆ. ಈ ಯೋಜನೆಯಡಿ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ಸಿಗುತ್ತಿರುವ ಕಾರಣ ದೇಗುಲಗಳಿಗೆ ಬರುತ್ತಿರುವ ಭಕ್ತರ ಸಂಖ್ಯೆ ಹಡೆಚ್ಚಿದೆ. ಹೀಗಾಗಿ ಆದಾಯವೂ ಏರಿಕೆ ಕಾಣುತ್ತಿದೆ ಎನ್ನಲಾಗಿದೆ. ಆದಾಯದಲ್ಲಿ ಗಮನಾರ್ಹ ಹೆಚ್ಚಳ ವಿಶೇಷವಾಗಿ ಮಹಿಳೆಯರು ದೇವಸ್ಥಾನಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿರುವ ಪರಿಣಾಮ, ರಾಜ್ಯದ ಪ್ರಮುಖ 15 ದೇವಸ್ಥಾನಗಳ…

Read More

ಗದಗ: ಆಂಜನೇಯ ದೇಗುಲದಲ್ಲಿ ಮೂರು ದಿನಗಳಿಂದ ನಿರಂತರ ಕೇಳಿಸುತ್ತಿದೆ ನಿಗೂಢ ಗೆಜ್ಜೆ ಶಬ್ದ! – Kannada News | Mysterious Anklet Sounds Echo for Three Days at Anjaneya Temple in Gadag, Villagers on Night Vigil

ಗದಗ, ಜನವರಿ 17: ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಕೊರ್ಲಹಳ್ಳಿಯ ಆಂಜನೇಯ ದೇಗುಲದಲ್ಲಿ ನಿಗೂಢ ಗೆಜ್ಜೆ ಶಬ್ದ ಮೂರು ದಿನಗಳಿಂದ ನಿರಂತರವಾಗಿ ಕೇಳಿಬರುತ್ತಿದ್ದು, ಈ ಅನಿರೀಕ್ಷಿತ ಘಟನೆಯಿಂದ ಗ್ರಾಮಸ್ಥರಲ್ಲಿ ಭೀತಿ ಆವರಿಸಿದೆ. ಮೂಲಗಳ ಪ್ರಕಾರ, ಗ್ರಾಮದಲ್ಲಿ ನಿರ್ಮಿಸಲಾಗುತ್ತಿರುವ ಹೊಸ ದೇವಾಲಯಕ್ಕೆಂದು ತಂದ ದುರ್ಗಮ್ಮ ಮತ್ತು ಮಾಯಮ್ಮ ದೇವಿ ಮೂರ್ತಿಗಳನ್ನು ಆಂಜನೇಯ ದೇಗುಲದಲ್ಲಿ ತಾತ್ಕಾಲಿಕವಾಗಿ ಇರಿಸಿದ ನಂತರ ಗೆಜ್ಜೆನಾದ ಕೇಳಿಸಲು ಪ್ರಾರಂಭಿಸಿದೆ. ಗುರುವಾರ ರಾತ್ರಿ 8 ಗಂಟೆಯಿಂದ ಆರಂಭವಾದ ಈ ಶಬ್ದ ಇದುವರೆಗೆ ನಿಂತಿಲ್ಲ ಎಂದು ಸ್ಥಳೀಯ ನಿವಾಸಿ…

Read More

‘ಶಿಕ್ಷಣ ಅಂದ್ರೆ ಶಾಲೆಗೆ ಹೋಗೋದಲ್ಲ, ಸಿನಿಮಾ ಜ್ಞಾನ’: ವಿವಾದಾತ್ಮಕ ಹೇಳಿಕೆಗೆ ಸತೀಶ್ ಸ್ಪಷ್ಟನೆ, ಕ್ಷಮೆಯಾಚನೆ – Kannada News | Neninasam Satish Clarifies ‘Cinema Education’ Remark, Apologizes to Producers for Ayogya 2 Row

‘ಅಯೋಗ್ಯ 2’ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ನಿರ್ಮಾಪಕರ ಕುರಿತು ತಾವು ನೀಡಿದ್ದ ಹೇಳಿಕೆ ಚಿತ್ರರಂಗದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗುತ್ತಿದ್ದಂತೆಯೇ, ನಟ ನೀನಾಸಂ ಸತೀಶ್ ಅವರು ವಿಡಿಯೋ ಸಂದೇಶವೊಂದರ ಮೂಲಕ ತಮ್ಮ ಮಾತಿಗೆ ಸ್ಪಷ್ಟನೆ ನೀಡಿದ್ದಾರೆ. ಅಲ್ಲದೆ, ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ ಬಹಿರಂಗವಾಗಿ ಕ್ಷಮೆ ಯಾಚನೆ ಮಾಡೋದಾಗಿಯೂ ಹೇಳಿದ್ದಾರೆ. ಇತ್ತೀಚೆಗೆ ‘ಅಯೋಗ್ಯ 2’ ಕಾರ್ಯಕ್ರಮದ ವೇದಿಕೆ ಮೇಲೆ ಮಾತನಾಡಿದ್ದ ಅವರು, ‘ ಸಿನಿಮಾ ಸೋಲುತ್ತದೆ ಎಂಬುದು ಗೊತ್ತಿದ್ದ ಮೇಲೂ ಯಾಕೆ ಸಿನಿಮಾ ಮಾಡಬೇಕು? ನಿರ್ಮಾಪಕರಿಗೆ ಶಿಕ್ಷಣದ ಅವಶ್ಯಕತೆ ಇದೆ ಎಂದು…

Read More

ದಿನ ಭವಿಷ್ಯ: ಇಂದು ಈ ರಾಶಿಯವರು ತಮ್ಮಿಷ್ಟದವರ ಕೈಹಿಡಿಯುವ ಉತ್ಸಾಹದಲ್ಲಿರುವರು – Kannada News | Dina Rashi Bhavishya June 16, 2026: Daily Horoscope Predictions for Tuesday

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ಉತ್ತರಾಯಣ, ಋತು : ಗ್ರೀಷ್ಮ, ಚಾಂದ್ರಮಾಸ : ಜ್ಯೇಷ್ಠ, ಸೌರ ಮಾಸ : ವೃಷಭ, ಮಹಾನಕ್ಷತ್ರ : ಮೃಗಶಿರಾ, ವಾರ : ಮಂಗಳ, ಪಕ್ಷ : ಕೃಷ್ಣ, ತಿಥಿ : ದ್ವಿತೀಯಾ, ನಿತ್ಯನಕ್ಷತ್ರ : ಆರ್ದ್ರಾ, ಯೋಗ : ಧೃತಿ, ಕರಣ : ಗರಜ, ಸೂರ್ಯೋದಯ – 05 – 54 am, ಸೂರ್ಯಾಸ್ತ – 06 – 45 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ…

Read More

ದೆಹಲಿಯಲ್ಲಿ ಉದ್ಯಮಿಯನ್ನು ಹೆಲ್ಮೆಟ್​​ನಿಂದ ಹೊಡೆದು ಕೊಂದ ಮೂವರು ಡೆಲಿವರಿ ಏಜೆಂಟ್​ಗಳು – Kannada News | Delhi Entrepreneur Murder: Delivery Agents Helmet Attack Kills Businessman in Connaught Place

ನವದೆಹಲಿ, ಫೆಬ್ರವರಿ 04: ರಾತ್ರಿ ಪಾರ್ಟಿಗೆಂದು ಹೋಗಿದ್ದ ಉದ್ಯಮಿಯೊಬ್ಬರನ್ನು ಮೂವರು ಡೆಲಿವರಿ ಏಜೆಂಟ್​​ಗಳು ಸೇರಿ ಹೆಲ್ಮೆಟ್​ನಿಂದ ಹೊಡೆದು ಕೊಲೆ(Murder)ಮಾಡಿರುವ ಘಟನೆ ದೆಹಲಿಯ ಕನ್ನಾಟ್ ಪ್ಲೇಸ್​​ನಲ್ಲಿ ನಡೆದಿದೆ. ಜನವರಿ 3 ರ ರಾತ್ರಿ ಈ ಘಟನೆ ನಡೆದಿದೆ. ಉದ್ಯಮಿ ಶಿವಂ ಗುಪ್ತಾ ಎರಡು ವಾರಗಳಿಗೂ ಹೆಚ್ಚು ಕಾಲ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದರು. ಜನವರಿ 19 ರಂದು ಅವರು ಕೊನೆಯುಸಿರೆಳೆದಿದ್ದಾರೆ. ಪೊಲೀಸರು ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ ಮತ್ತು ಗುಪ್ತಾ ಅವರ ರಕ್ತದ ಕಲೆಗಳಿಂದ ಕೂಡಿದ ಬಟ್ಟೆಗಳನ್ನು…

Read More

ಜು.24ಕ್ಕೆ ‘ಸರ್ಕಾರಿ ನ್ಯಾಯ ಬೆಲೆ ಅಂಗಡಿ’ ಸಿನಿಮಾ ತೆರೆಗೆ; ಕನ್ನಡದಲ್ಲೊಂದು ಹೊಸ ಪ್ರಯತ್ನ – Kannada News | Sarkari Nyaya Bele Angadi Movie To Release one July Highlights Food and Ration System

‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಸರಗೋಡು’ ಸಿನಿಮಾ ಆರಂಭದಲ್ಲಿ ಟೈಟಲ್ ಮೂಲಕ ಗಮನ ಸೆಳೆದಿತ್ತು. ಈಗ ‘ಸರ್ಕಾರಿ ನ್ಯಾಯ ಬೆಲೆ ಅಂಗಡಿ’ ಹೆಸರಿನ ವಿಭಿನ್ನ ಸಿನಿಮಾ ಜುಲೈ 24ರಂದು ರಾಜ್ಯಾದ್ಯಂತ ರಿಲೀಸ್ ಆಗುತ್ತಿದೆ. ಮನುಷ್ಯನ ಮೂಲಭೂತ ಅಗತ್ಯಗಳಾದ ನೀರು ಮತ್ತು ಆಹಾರದ ಮಹತ್ವವನ್ನು ಸಾರುವ ಹಾಗೂ ಸರ್ಕಾರದ ಪಡಿತರ ವ್ಯವಸ್ಥೆಯ ಹಿನ್ನೆಲೆಯನ್ನು ಇದು ಒಳಗೊಂಡಿದೆ ಎಂಬುದು ವಿಶೇಷ. ರೇಷನ್ ಅಂಗಡಿಗಳ ಪ್ರಾಮುಖ್ಯತೆ ಮತ್ತು ಅವುಗಳ ಸುತ್ತ ನಡೆಯುವ ಕಥಾಹಂದರ ಹೊಂದಿರುವ ದೇಶದ ಮೊದಲ ಚಲನಚಿತ್ರ ಎಂಬ ಹೆಗ್ಗಳಿಕೆಗೆ…

Read More

ರಜನೀಕಾಂತ್​​ರ ‘ಕೊಚಾಡಿಯನ್’ ಸಿನಿಮಾ ಮರು ಬಿಡುಗಡೆ: ಕೋರ್ಟ್ ಹೇಳಿದ್ದೇನು? – Kannada News | Madras High Court refuse to stay Kochadaiyaan movie re rlease

2014ರಲ್ಲಿ ಬಿಡುಗಡೆಯಾಗಿದ್ದ ಸೂಪರ್ ಸ್ಟಾರ್ ರಜನಿಕಾಂತ್ (Rajinikanth), ದೀಪಿಕಾ ಪಡುಕೋಣೆ ನಟನೆಯ ‘ಕೊಚ್ಚಾಡಿಯನ್’ (Kochadaiiyaan) ಸಿನಿಮಾ ಆಗ ದೊಡ್ಡ ಫ್ಲಾಪ್ ಆಗಿತ್ತು. ಭಾರಿ ಬಜೆಟ್ ಹಾಕಿ, ನೂತನ ತಂತ್ರಜ್ಞಾನ ಬಳಸಿ ಚಿತ್ರೀಕರಿಸಲಾಗಿದ್ದ ಆ ಸಿನಿಮಾ ಇನ್ನಿಲ್ಲದಂತೆ ನೆಲಕಚ್ಚಿದ್ದು ಮಾತ್ರವೇ ಅಲ್ಲದೆ, ಸುದೀರ್ಘವಾದ ಕಾನೂನು ಹೋರಾಟಕ್ಕೂ ಕಾರಣವಾಯ್ತು. ಇದೀಗ ಅದೇ ಸಿನಿಮಾ ಅನ್ನು ಎಐ ಮೂಲಕ ಇನ್ನಷ್ಟು ಉತ್ತಮಗೊಳಿಸಲಿ ಬಿಡುಗಡೆ ಮಾಡಲು ನಿರ್ಮಾಪಕರು ಮುಂದಾಗಿದ್ದಾರೆ. ಆದರೆ ಇದಕ್ಕೆ ತಡೆ ನೀಡಬೇಕೆಂದು ಸಿನಿಮಾಕ್ಕೆ ಹಣ ಒದಗಿಸಿದ್ದ ಫೈನ್ಯಾನ್ಶಿಯರ್​​ಗಳು ನ್ಯಾಯಾಲಯದ ಮೊರೆ…

Read More

ಇದು “ತೆರಿಗೆ ಅಥವಾ ಸುಲಿಗೆ?”: ಸೈಕಲ್ ಸವಾರನಿಂದಲ್ಲೂ 25 ರೂ. ಟೋಲ್ ವಸೂಲಿ ಮಾಡಿದ ಸಿಬ್ಬಂದಿ

ಬೆಂಗಳೂರು, ಏ.21: ದೇಶಾದ್ಯಂತ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸೈಕಲ್ ಮತ್ತು ದ್ವಿಚಕ್ರ ವಾಹನಗಳಿಗೆ ಟೋಲ್ ಮುಕ್ತ ಸಂಚಾರಕ್ಕೆ ಅವಕಾಶವಿರುವುದು ಸಾಮಾನ್ಯ. ಆದರೆ, ಬೆಂಗಳೂರಿನ ಈ ನಿರ್ದಿಷ್ಟ ಕಾರಿಡಾರ್‌ನಲ್ಲಿ ಸೈಕಲ್ ಸವಾರನೊಬ್ಬನಿಂದ 25 ರೂ. ಟೋಲ್ ವಸೂಲಿ ಮಾಡಿರುವ ವಿಡಿಯೋ ಈಗ “ತೆರಿಗೆ ಅಥವಾ ಸುಲಿಗೆ?” ಎಂಬ ಚರ್ಚೆಯನ್ನು ಹುಟ್ಟುಹಾಕಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ಸೈಕಲ್ ಸವಾರ ಟೋಲ್ ಬೂತ್‌ನಲ್ಲಿ ನಿಂತು ನಗದು ಹಣ ನೀಡುತ್ತಿರುವುದು ಮತ್ತು ಸಿಬ್ಬಂದಿ ಅದನ್ನು ಸ್ವೀಕರಿಸುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಸರ್ಕಾರಿ ಸ್ವಾಮ್ಯದ ರಸ್ತೆಗಳಲ್ಲಿ ಸೈಕಲ್‌ಗಳಿಗೆ…

Read More

Vasthu Shastra: ಮನೆ ಸಮೀಪ ನುಗ್ಗೆ ಮರ ಯಾಕೆ ಇರಬಾರದು? ವಾಸ್ತು ತಜ್ಞರ ಸಲಹೆ ಇಲ್ಲಿದೆ – Kannada News | Why You Should Not Plant a Drumstick Tree Close to Your House: A Comprehensive Guide

ಶಾಸ್ತ್ರೀಯ ಮತ್ತು ಜ್ಯೋತಿಷ್ಯ ದೃಷ್ಟಿಕೋನದಿಂದ , ನುಗ್ಗೆ ಮರವನ್ನು ಮನೆಯ ಹತ್ತಿರ, ವಿಶೇಷವಾಗಿ ಆಗ್ನೇಯ, ಈಶಾನ್ಯ, ವಾಯುವ್ಯ, ನೈರುತ್ಯ ದಿಕ್ಕುಗಳಲ್ಲಿ ಬೆಳೆಸುವುದು ಅಷ್ಟು ಶುಭಕರವಲ್ಲ, ಬದಲಿಗೆ ಅಶುಭ ಎಂದು ಶಾಸ್ತ್ರಗಳು ಹೇಳುತ್ತವೆ. ವಾಸ್ತು ಶಾಸ್ತ್ರದ ಪ್ರಕಾರವೂ ಇದು ಮನೆಯ ಅಂಗಳದಲ್ಲಿ ಅಥವಾ ಯಾವುದೇ ಪ್ರಮುಖ ದಿಕ್ಕುಗಳಲ್ಲಿ ಇರುವುದು ಅಷ್ಟೊಂದು ಉತ್ತಮವಲ್ಲ. ಈ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ. ನಂಬಿಕೆಗಳ ಪ್ರಕಾರ, ನುಗ್ಗೆ…

Read More

Viral: ಕಾಣೆಯಾದ ಸಾಕು ನಾಯಿ ಹುಡುಕಿಕೊಟ್ಟವರಿಗೆ 10,000 ರೂ ನಗದು ಬಹುಮಾನ ಘೋಷಿಸಿದ ಮಾಲೀಕ – Kannada News | Telangana: Owner announces Rs 10,000 cash reward for finding missing pet dog in Nalgonda district

ತೆಲಂಗಾಣ, ಜುಲೈ 22: ನೀವು ಹಣ, ಚಿನ್ನಾಭರಣ, ವಾಹನ, ಬೆಳೆ ಬಾಳುವ ವಸ್ತುಗಳು ಕಳೆದು ಹೋದರೆ ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲಿಸುವುದು ಸಾಮಾನ್ಯ.  ಆದರೆ, ನಾಗರಾಜು ಎಂಬ ವ್ಯಕ್ತಿ ಸಾಕು ನಾಯಿ (pet dog) ಕಾಣೆಯಾಗಿದೆ ಎಂದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ತನ್ನ ಪ್ರೀತಿಯ ಶ್ವಾನವನ್ನು ಹುಡುಕಿ ಕೊಟ್ಟವರಿಗೆ 10,000 ರೂ. ನಗದು ಬಹುಮಾನ ಘೋಷಿಸಿದ್ದಾರೆ. ತೆಲಂಗಾಣದ ನಲ್ಗೊಂಡ ಜಿಲ್ಲೆಯ (Nalgonda district in Telangana) ಮಿರಿಯಾಲಗುಡದಲ್ಲಿ ಈ ಘಟನೆ ನಡೆದಿದೆ. ಇದೇ ತಿಂಗಳ ಜುಲೈ…

Read More