Karnataka Weather Forecast: ಮುಂದಿನ 24 ಗಂಟೆಗಳಲ್ಲಿ ಕರಾವಳಿ ಸೇರಿ ಈ ಜಿಲ್ಲೆಗಳಲ್ಲಿ ಸುರಿಯಲಿದೆ ಮಳೆ! – Kannada News | Karnataka Weather Forecast: Heavy Rain in Coastal Areas, High Speed Winds Forecasted

ಮುಂದಿನ 24 ಗಂಟೆಗಳಲ್ಲಿ ಕರಾವಳಿ ಸೇರಿ ಈ ಜಿಲ್ಲೆಗಳಲ್ಲಿ ಸುರಿಯಲಿದೆ ಮಳೆ!

ಬೆಂಗಳೂರು, ಜುಲೈ 11: ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಮತ್ತು ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ, ಮುಂದಿನ 24 ಗಂಟೆಗಳಲ್ಲಿ ರಾಜ್ಯದ ವಿವಿಧ ಭಾಗಗಳಲ್ಲಿ ಮಳೆ (Monsoon) ಮತ್ತು ಬಲವಾದ ಗಾಳಿ ಬೀಸುವ ಸಾಧ್ಯತೆಯಿದೆ. ಕರಾವಳಿ, ಮಲೆನಾಡು ಭಾಗಗಳಲ್ಲಿ ಬಹು ದಿನಗಳಿಂದ ವರುಣನ ಅಬ್ಬರ ಜೋರಾಗಿದ್ದು, ಇಂದೂ ಸಹ ಅದೇ ಪರಿಸ್ಥಿತಿ ಇರಲಿದೆ.

ಕರಾವಳಿ ಕರ್ನಾಟಕ

ಕರಾವಳಿ ಜಿಲ್ಲೆಗಳಲ್ಲಿ ಮಳೆಯ ಅಬ್ಬರ ಮುಂದುವರಿಯಲಿದ್ದು, ಬಹುತೇಕ ಎಲ್ಲಾ ಭಾಗಗಳಲ್ಲಿ ಉತ್ತಮ ಮಳೆಯಾಗುವ ಮುನ್ಸೂಚನೆ ಇದೆ. ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಈ ಮೂರೂ ಜಿಲ್ಲೆಗಳ ಬಹುತೇಕ ಪ್ರದೇಶಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಮಳೆಯೊಂದಿಗೆ ಗಂಟೆಗೆ 30 ರಿಂದ 40 ಕಿಲೋಮೀಟರ್ ವೇಗದಲ್ಲಿ ನಿರಂತರವಾಗಿ ಬಲವಾದ ಗಾಳಿ ಬೀಸಲಿದೆ.

ಉತ್ತರ ಒಳನಾಡು

ಉತ್ತರ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಮಳೆಯಾದರೆ, ಇನ್ನು ಕೆಲವು ಜಿಲ್ಲೆಗಳಲ್ಲಿ ಕೇವಲ ಬಲವಾದ ಗಾಳಿ ಮಾತ್ರ ಬೀಸಲಿದೆ. ಬೆಳಗಾವಿ, ಧಾರವಾಡ, ಗದಗ ಮತ್ತು ಹಾವೇರಿ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಲಘು ಅಥವಾ ಮಧ್ಯಮ ಮಳೆಯಾಗುವ ಸಾಧ್ಯತೆಯಿದೆ. ಇದರೊಂದಿಗೆ 30-40 ಕಿಮೀ ವೇಗದ ಗಾಳಿ ಇರಲಿದೆ.

ಬಾಗಲಕೋಟೆ, ಬೀದರ್, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಾಪುರ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಮಳೆಯ ಸಾಧ್ಯತೆ ಕ್ಷೀಣವಾಗಿದ್ದರೂ, ಗಂಟೆಗೆ 30 ರಿಂದ 40 ಕಿಲೋಮೀಟರ್ ವೇಗದಲ್ಲಿ ನಿರಂತರವಾಗಿ ಬಲವಾದ ಗಾಳಿ ಬೀಸಲಿದೆ.

ದಕ್ಷಿಣ ಒಳನಾಡು

ದಕ್ಷಿಣ ಒಳನಾಡಿನ ಮಲೆನಾಡು ಭಾಗಗಳಲ್ಲಿ ಮಳೆಯ ಮುನ್ಸೂಚನೆ ಇದ್ದರೆ, ಬಯಲು ಸೀಮೆ ಜಿಲ್ಲೆಗಳಲ್ಲಿ ಗಾಳಿಯ ತೀವ್ರತೆ ಹೆಚ್ಚಿರಲಿದೆ. ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಮತ್ತು ಕೊಡಗು ಜಿಲ್ಲೆಗಳ ಒಂದೆರಡು ಸ್ಥಳಗಳಲ್ಲಿ ಬಲವಾದ ಗಾಳಿಯೊಂದಿಗೆ ಲಘುವಾಗಿ ಮಳೆಯಾಗುವ ನಿರೀಕ್ಷೆಯಿದೆ.

ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಗಂಟೆಗೆ 30 ರಿಂದ 40 ಕಿಲೋಮೀಟರ್ ವೇಗದಲ್ಲಿ ಬಲವಾದ ಗಾಳಿ ಬೀಸುವ ಸಾಧ್ಯತೆ ಹೆಚ್ಚಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಭಾರತದಲ್ಲೇ ಮೊದಲು ‘ಆಡಸ್ಸಿ’ ಪ್ರದರ್ಶಿಸಿದ ನೋಲನ್, ಪ್ರೇಕ್ಷಕರ ಬಗ್ಗೆ ಹೇಳಿದ್ದೇನು? – Kannada News | Christopher Nolan brings The Odyssey to India

ವಿಶ್ವದ ಅತಿ ನಿರೀಕ್ಷಿತ ಸಿನಿಮಾ ಕ್ರಿಸ್ಟೊಫರ್ ನೋಲನ್ (christopher nolan) ನಿರ್ದೇಶನದ ‘ದಿ ಆಡಸ್ಸಿ’. ಈ ಸಿನಿಮಾ ಜುಲೈ 17 ರಂದು ವಿಶ್ವದಾದ್ಯಂತ ಬಿಡುಗಡೆ ಆಗಲಿದೆ. ಆದರೆ ಭಾರತದಲ್ಲಿ ನಿನ್ನೆಯೇ ಈ ಸಿನಿಮಾದ ವಿಶೇಷ ಶೋ ಪ್ರದರ್ಶಿಸಲಾಗಿದೆ. ಅದೂ ಈ ವಿಶೇಷ ಶೋ ಅನ್ನು ಖುದ್ದು ಸಿನಿಮಾದ ನಿರ್ದೇಶಕ ಕ್ರಿಸ್ಟೊಫರ್ ನೋಲನ್, ನಟ ಮ್ಯಾಟ್ ಡೇಮನ್ ಮತ್ತು ಟಾಮ್ ಹಾಲೆಂಡ್ ಅವರುಗಳು ಆಯೋಜಿಸಿದ್ದರು. ಸಿನಿಮಾದ ವಿಶೇಷ ಪ್ರದರ್ಶನದ ವೇಳೆ ಕ್ರಿಸ್ಟೊಫರ್ ನೋಲನ್ ಅವರು ಭಾರತೀಯ ಸಿನಿಮಾ ಪ್ರೇಮಿಗಳ ಸಹೃದಯತೆ ಹಾಗೂ ಸಿನಿಮಾ ಪ್ರೀತಿಯನ್ನು ಸಹ ಕೊಂಡಾಡಿದರು.

ಮುಂಬೈನ ಲೋವರ್ ಪರಾಲ್​​ನ ಫೀನಕ್ಸ್ ಪಲೇಡಿಯಮ್​​ನ ಪಿವಿಆರ್ ಐಕಾನ್ ಮಲ್ಟಿಪ್ಲೆಕ್ಸ್​​ನಲ್ಲಿ ‘ದಿ ಆಡಸ್ಸಿ’ ಸಿನಿಮಾದ ವಿಶೇಷ ಪ್ರದರ್ಶನ ಮಾಡಲಾಯ್ತು. ದೇಶದ ಹಲವು ನಗರಗಳಿಂದ ಈ ಶೋಗೆ ಪ್ರೇಕ್ಷಕರು ಆಗಮಿಸಿದ್ದರು. ಹಲವು ಸಿನಿಮಾ ಸೆಲೆಬ್ರಿಟಿಗಳು, ದೇಶದ ಜನಪ್ರಿಯ ಸಿನಿಮಾ ವಿಮರ್ಶಕರು, ಸಿನಿಮಾ ವಿಧ್ಯಾರ್ಥಿಗಳು, ಸಿನಿಮಾ ತಂತ್ರಜ್ಞರುಗಳು ಸಹ ವಿಶೇಷ ಪ್ರದರ್ಶನದಲ್ಲಿ ಭಾಗಿ ಆಗಿದ್ದರು. ‘ದಿ ಆಡಸ್ಸೆ’ ಸಿನಿಮಾದ ಮೊಟ್ಟ ಮೊದಲ ವಿಶೇಷ ಪ್ರದರ್ಶನ ಇದಾಗಿತ್ತು ಎಂಬುದು ವಿಶೇಷ.

ಶೋ ಬಳಿಕ ಕ್ರಿಸ್ಟೊಫರ್ ನೋಲನ್, ಮ್ಯಾಟ್ ಡೇಮನ್ ಮತ್ತು ಟಾಮ್ ಹಾಲೆಂಡ್ ಅವರುಗಳು ಪ್ರೇಕ್ಷಕರ ಕುರಿತಾಗಿ ಮಾತನಾಡಿದರು. ಮೊದಲು ಮಾತನಾಡಿದ ನೋಲನ್, ಭಾರತಕ್ಕೆ ತಮ್ಮ ಹಿಂದಿನ ಭೇಟಿಗಳನ್ನು ನೆನಪು ಮಾಡಿಕೊಂಡರು. ತಾವು ಈ ಹಿಂದೆ, ಜೋಧ್​​ಪುರ ಹಾಗೂ ಮುಂಬೈಗಳಲ್ಲಿ ಸಿನಿಮಾದ ಚಿತ್ರೀಕರಣ ಮಾಡಿದ ಸಿಹಿ ಅನುಭವ ಹಂಚಿಕೊಂಡರು. ಭಾರತೀಯ ಪ್ರೇಕ್ಷಕರು ಸಿನಿಮಾಗಳನ್ನು ಬಹಳ ಪ್ರೀತಿಸುತ್ತಾರೆ ಮತ್ತು ಭಾರತೀಯ ಪ್ರೇಕ್ಷಕರು ಇಂಟೆಲಿಜೆಂಟ್ ಸಿನಿಮಾ ವೀಕ್ಷಕರು ಎಂದು ಸಹ ಅವರು ಹೇಳಿದರು.

ಇದನ್ನೂ ಓದಿ:ಬೆಂಗಳೂರಿನಲ್ಲಿ ‘ದಿ ಆಡಸ್ಸಿ’ಯನ್ನು ಹಿಂದಿಕ್ಕಿದ ‘ಸ್ಪೈಡರ್​​ಮ್ಯಾನ್’

‘ದಿ ಆಡಸ್ಸಿ’ ಸಿನಿಮಾವು ಶತಮಾನಗಳಷ್ಟು ಹಳೆಯದಾದ ಸಾಹಿತ್ಯ ಕೃತಿಯ ಸಿನಿಮಾ ರೂಪಾಂತರವಾಗಿದೆ. ಕುರುಡು ಸಾಹಿತಿ ಹೋಮರ್ 8ನೇ ಶತಮಾನದಲ್ಲಿ ಬರೆದ ಕಾವ್ಯವನ್ನು ಆಧರಿಸಿ ನೋಲನ್ ಸಿನಿಮಾ ಮಾಡಿದ್ದಾರೆ. ಸಿನಿಮಾನಲ್ಲಿ ಸ್ಟಾರ್ ನಟರುಗಳಾದ ಮ್ಯಾಟ್ ಡೇಮನ್, ‘ಸ್ಪೈಡರ್​ ಮ್ಯಾನ್’ ಖ್ಯಾತಿಯ ಟಾಮ್ ಹಾಲೆಂಡ್, ಜೆಂಡೇಯಾ, ಅನ್ನಾ ಹಾತ್​​ವೇ, ರಾಬರ್ಟ್ ಪ್ಯಾಟಿನ್​​​ಸನ್, ಟ್ರಾವಿಸ್ ಸ್ಕಾಟ್, ಎಲಿಯಟ್ ಪೇಜ್ ಇನ್ನೂ ಹಲವಾರು ಖ್ಯಾತನಾಮ ನಟರು ನಟಿಸಿದ್ದಾರೆ. ಸಿನಿಮಾಕ್ಕೆ ಮೂರು ಆಸ್ಕರ್ ವಿಜೇತ ಲೂಡ್​​ವಿಂಗ್ ಅವರು ಸಂಗೀತ ನೀಡಿದ್ದಾರೆ. ಜುಲೈ 17ಕ್ಕೆ ಸಿನಿಮಾ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

‘ಅಮೃತಧಾರೆ’: ಭೂಮಿಕಾಗೆ ಈಗ ಕ್ಯಾನ್ಸರ್​; ಇದರಲ್ಲಿದೆ ಬೇರೆ ಟ್ವಿಸ್ಟ್? – Kannada News | Amruthadhare Shocking Twist: Bhoomika Diagnosed with Breast Cancer, Viewers Suspect Shakuntala Plot

ಧಾರಾವಾಹಿಯ ಕಥಾನಾಯಕಿ ಭೂಮಿಕಾ ಮತ್ತು ಗೌತಮ್ ಇಬ್ಬರೂ ಒಬ್ಬರನ್ನೊಬ್ಬರು ಅತಿಯಾಗಿ ಹಚ್ಚಿಕೊಂಡು, ಸುಂದರವಾದ ಸಂಸಾರ ನಡೆಸುತ್ತಿದ್ದರು. ಪ್ರೇಕ್ಷಕರಿಗೂ ಈ ಜೋಡಿ ಅಚ್ಚುಮೆಚ್ಚಾಗಿತ್ತು. ಆದರೆ, ಈಗ ಭೂಮಿಕಾಗೆ ಸ್ತನ ಕ್ಯಾನ್ಸರ್ ಇರುವುದು ದೃಢಪಟ್ಟಿದ್ದು, ಈ ಶಾಕಿಂಗ್ ನ್ಯೂಸ್ ಇಡೀ ಕಥೆಯ ದಿಕ್ಕನ್ನೇ ಬದಲಿಸಿದೆ. ಇದರ ಹಿಂದೆ ಶಕುಂತಲಾಳ ಗಿಮಿಕ್ ಕೂಡ ಇರಬಹದು.

ಪ್ರೇಕ್ಷಕರಲ್ಲಿ ಮೂಡಿದ ಅಸಮಾಧಾನ ಮತ್ತು ಆತಂಕ

ಈ ಟ್ವಿಸ್ಟ್ ಪ್ರೇಕ್ಷಕರಿಗೆ ಮತ್ತು ಅಭಿಮಾನಿಗಳಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಸದಾ ಎಲ್ಲರಿಗೂ ಒಳ್ಳೆಯದನ್ನೇ ಬಯಸುವ ಭೂಮಿಕಾಗೆ ಇಂತಹ ಕಾಯಿಲೆ ಬರಬಾರದಿತ್ತು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಫ್ಯಾನ್ಸ್ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ನೆಮ್ಮದಿಯಾಗಿದ್ದ ಸಂಸಾರದಲ್ಲಿ ಮತ್ತೆ ಯಾಕೆ ಇಂತಹ ದುಃಖದ ಸಂಗತಿ ತರಬೇಕಿತ್ತು ಎನ್ನುವುದು ವೀಕ್ಷಕರ ಅಸಮಾಧಾನಕ್ಕೆ ಕಾರಣವಾಗಿದೆ.

ಇದು ಶಾಕುಂತಲಾದೇವಿ ಹೊಸ ಪ್ಲ್ಯಾನ್ ಇರಬಹುದೇ?

ವೀಕ್ಷಕರಲ್ಲಿ ಈಗ ಮತ್ತೊಂದು ದೊಡ್ಡ ಅನುಮಾನ ಶುರುವಾಗಿದೆ. ಗೌತಮ್ ಮಲತಾಯಿ ಶಾಕುಂತಲಾದೇವಿ ಮೊದಲಿನಿಂದಲೂ ಭೂಮಿಕಾ ಮತ್ತು ಗೌತಮ್ ಒಂದಾಗುವುದನ್ನು ಇಷ್ಟಪಟ್ಟವಳಲ್ಲ. ಇತ್ತೀಚೆಗೆ ಅವಳು ಒಳ್ಳೆಯವಳಂತೆ ನಟಿಸುತ್ತಿದ್ದರೂ, ಈಗ ಅವಳ ಅಸಲಿ ಮುಖ ಮತ್ತೆ ಬಯಲಾಗಿದೆ. ಭೂಮಿಕಾಗೆ ನಿಜವಾಗಿಯೂ ಕ್ಯಾನ್ಸರ್ ಇಲ್ಲದಿದ್ದರೂ, ವೈದ್ಯರೊಂದಿಗೆ ಕೈಜೋಡಿಸಿ ಶಾಕುಂತಲಾ ಈ ಸುಳ್ಳು ವರದಿಯನ್ನು ಸೃಷ್ಟಿಸಿರಬಹುದು ಎಂಬ ಬಲವಾದ ಅನುಮಾನ ವೀಕ್ಷಕರಲ್ಲಿದೆ.

ಇದನ್ನೂ ಓದಿ: ಅಮೃತಧಾರೆ: ಕೊನೆಗೂ ಬಯಲಾಯ್ತು ಶಾಕುಂತಲಾ ಅಸಲಿ ಮುಖ; ವೀಕ್ಷಕರಿಗೆ ನಿರಾಸೆ

ಭೂಮಿಕಾ ಮಾನಸಿಕವಾಗಿ ಕುಗ್ಗಿ, ಗೌತಮ್‌ನಿಂದ ದೂರಾಗಲಿ ಎಂದೇ ಈ ಪ್ಲ್ಯಾನ್ ಮಾಡಿರಬಹುದು ಎಂದು ಊಹಿಸಲಾಗುತ್ತಿದೆ. ಭೂಮಿಕಾ ಈ ದೊಡ್ಡ ಸವಾಲನ್ನು ಹೇಗೆ ಎದುರಿಸುತ್ತಾಳೆ? ಈ ಕಠಿಣ ಪರಿಸ್ಥಿತಿಯಲ್ಲಿ ಗೌತಮ್ ಅವಳಿಗೆ ಹೇಗೆ ಬೆಂಬಲವಾಗಿ ನಿಲ್ಲುತ್ತಾನೆ? ನಿಜವಾಗಿಯೂ ಇದು ಶಾಕುಂತಲಾ ಮಾಡಿದ ತಂತ್ರವೇ ಅಥವಾ ವಿಧಿಯ ಆಟವೇ ಎಂಬುದು ಮುಂದಿನ ಸಂಚಿಕೆಗಳಲ್ಲಿ ತಿಳಿಯಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 7:15 am, Sat, 11 July 26

Source link

Horoscope Today: ಇಂದು ಶನಿದೇವ, ಹನುಮಂತನನ್ನು ಆರಾಧಿಸಿದರೆ ಶುಭ – Kannada News | Horoscope Today 11th July​ 2026: Dr. Basavaraj Gurujis Predictions for Zodiac Signs

ಟಿವಿ9 ಡಿಜಿಟಲ್ ವಾಹಿನಿಯಲ್ಲಿ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಅವರು 2026ರ ಜುಲೈ 11, ಶನಿವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ಪ್ರಸ್ತುತಪಡಿಸಿದ್ದಾರೆ. ಈ ದಿನವು ಪರಾಭವ ನಾಮ ಸಂವತ್ಸರ, ಉತ್ತರಾಯಣ, ಜೇಷ್ಠ ಮಾಸ, ಕೃಷ್ಣ ಪಕ್ಷ, ದ್ವಾದಶಿ ಮತ್ತು ಕೃತಿಕಾ ನಕ್ಷತ್ರದೊಂದಿಗೆ ಕೂಡಿರುತ್ತದೆ.

ಡಾ. ಗುರೂಜಿ ಅವರು ಪ್ರತಿ ರಾಶಿಯವರಿಗೆ ಆ ದಿನದ ಗ್ರಹಗಳ ಸ್ಥಾನ, ಶುಭ ಮತ್ತು ಅಶುಭ ಫಲಗಳು, ಆರೋಗ್ಯ, ಕುಟುಂಬ, ವೃತ್ತಿ, ಹಣಕಾಸು ಹಾಗೂ ಪ್ರಯಾಣದ ಕುರಿತು ಮಾಹಿತಿ ನೀಡಿದ್ದಾರೆ. ರಾಹುಕಾಲ ಮತ್ತು ಸರ್ವಸಿದ್ಧಿ ಕಾಲದಂತಹ ಪ್ರಮುಖ ಸಮಯಗಳನ್ನು ನಮೂದಿಸಲಾಗಿದೆ. ವಿಶೇಷವಾಗಿ ಶನಿವಾರದ ದಿನವು ಶನಿ ಭಗವಾನ್, ವೆಂಕಟೇಶ್ವರ ಮತ್ತು ಹನುಮಂತನ ಕೃಪೆಗೆ ಪಾತ್ರವಾಗಲು ಶುಭಕರವೆಂದು ತಿಳಿಸಲಾಗಿದೆ.

Source link

ದಿನ ಭವಿಷ್ಯ: ಇಂದು ಈ ರಾಶಿಯವರನ್ನು ಅಳೆಯಲು ಸೋತು, ಅವಮಾನವಾಗಲಿದೆ… – Kannada News | Daily Horoscope for July 11, 2026: Uttarayan Greeshma season, Jyeshtha Masa Krishna Paksha Satursday astrology Prediction

ಮೇಷ ರಾಶಿ:

ಹೊಸ ವಿಚಾರಗಳ ಅನ್ವೇಷಣೆಯು ನಿಮಗೆ ಖುಷಿಕೊಡುವುದು. ಇಂದು ಧನ ವ್ಯವಹಾರದಲ್ಲಿ ಸರಿಯಾದ ತಿಳಿವಳಿಕೆ ಇಟ್ಟಕೊಳ್ಳಿ. ಹಳೆಯ ಸಂಬಂಧವನ್ನು ಹೊಸದಾಗಿಸಿಕೊಳ್ಳುವುದು ಉತ್ತಮ. ಪ್ರಭಾವಿಗಳ ಮಾತಿನಿಂದ ನಿಮಗೆ ಸಿಗಬೇಕಾದುದು ಸಿಗಲಿದೆ. ನಿಮ್ಮ ಅಭಿಪ್ರಾಯವು ದೃಢವಾಗಿರಲಿ. ಮಾನಸಿಕ ನೆಮ್ಮದಿಗೆ ತೊಂದರೆಯಾಗಬಹುದು. ಮಕ್ಕಳಿಂದ ಅಪಹಾಸ್ಯಕ್ಕೆ ಒಳಗಾಗುವಿರಿ. ನಿರೀಕ್ಷಿತ ಕಾರ್ಯವನ್ನು ಸಾಧಿಸುವ ತನಕ ನಿಮಗೆ ನೆಮ್ಮದಿ ಸಿಗದು.

ವೃಷಭ ರಾಶಿ:

ಹಣಕಾಸಿನ ವಿಷಯಗಳಲ್ಲಿ ಯಾರಾದರೂ ನಿಮಗೆ ಸಹಾಯ ಮಾಡುತ್ತಾರೆ. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಸೋಲುವ ಸಂಭವವಿದೆ. ಪ್ರಯಾಣವು ಕಷ್ಟವಾದರೂ ಹೋಗಲಿದ್ದೀರಿ. ಇದರಿಂದ ನಿಮಗೆ ಸಂತೋಷವಾಗಲಿದೆ. ದೃಷ್ಟಿದೋಷದಿಂದ ಮನಸ್ಸು ಕುಗ್ಗಲಿದೆ. ನಿಮ್ಮ ಸುತ್ತಲಿನ ವಾತಾವರಣವನ್ನು ಚೆನ್ನಾಗಿರಿಸಿಕೊಳ್ಳುವಿರಿ. ಬಂಧುಗಳ ನಕಾರಾತ್ಮಕ ಮಾತುಗಳಿಂದ ನಿಮಗೆ ಬೇಸರವಾದೀತು. ಹೊಸ ಮನೆಯನ್ನು ಖರೀದಿಸುವ ಬಗ್ಗೆ ಸಂಗಾತಿಯ ಜೊತೆ ಚರ್ಚಿಸುವಿರಿ.

ಮಿಥುನ ರಾಶಿ:

ಅಧ್ಯಯನದಲ್ಲಿ ನೀವು ಮಾಡುವ ಪ್ರಯತ್ನಗಳು ಲಾಭದಾಯಕವೆಂದು ಸಾಬೀತುಪಡಿಸುತ್ತದೆ. ಹಳೆಯ ವಸ್ತುಗಳನ್ನು ನೀವು ಮಾರಾಟ ಮಾಡಿ ಲಾಭ ಗಳಿಸುವಿರಿ. ನಿಮ್ಮ ಆದ್ಯತೆಗಳನ್ನು ಬದಲಾಗಬಹುದು. ಹಣ ಹೂಡಿಕೆಯ ವಿಚಾರದಲ್ಲಿ ಗೊಂದಲವಿರಬಹುದು. ಜೀವನ ಸಂಗಾತಿಯಾಗುವವರ ಹೆಚ್ಚು ಸಮಯವನ್ನು ಕಳೆಯುವಿರಿ. ನಿಮ್ಮ ದುಃಖವು ಕ್ಷಣಿಕವಾಗಿರಲಿದೆ. ಯಾರಾದರೂ ನಿಮ್ಮ ಮಾತನ್ನು ನಂಬುವರು. ದೂರದ ಊರಿಗೆ‌ ಒಬ್ಬರೇ ವಾಹನ ಚಾಲಾಯಿಸುವಿರಿ. ವ್ಯಾಪರದಲ್ಲಿ‌ ಮಧ್ಯವರ್ತಿಗಳಿಂದ ನಿಮ್ಮ ವ್ಯಾಪಾರವು ಕುಂಠಿತವಾಗುವುದು.

ಕರ್ಕಾಟಕ ರಾಶಿ:

ಅಪರಿಚಿತರ ವಾಹನದಲ್ಲಿ ಪ್ರಯಾಣ ಮಾಡುವಿರಿ. ಹಣಕಾಸಿನ ಬಗ್ಗೆ ತೊಂದರೆ ತೆಗೆದುಕೊಳ್ಳುವುದು ಪ್ರಿಯವಾಗಲಿದೆ. ಭಯದ ಮನಸ್ಸು ನಿಮ್ಮನ್ನು ಕೆಲಸದಲ್ಲಿ ಹಿಂದೇಟು ಹಾಕುವಂತೆ ಮಾಡಬಹುದು. ದುಸ್ಸಾಹಸಕ್ಕೆ ಕೈ ಹಾಕುವುದು ಬೇಡ. ಮನೆಯವರ ಅತಿಯಾದ ಪ್ರೀತಿಯಿಂದ ಬಂಧಿತರಾಗಬಹುದು. ಆರ್ಥಿಕಸ್ಥಿತಿಯು ನಿಮಗೆ ಖುಷಿಯನ್ನು ಕೊಟ್ಟರೂ ನೆಮ್ಮದಿ‌ ಮಾತ್ರ ಇರದು. ಚಂಚಲ ಸ್ವಭಾವವು ತಾನಾಗಿಯೇ ಕಡಿಮೆಯಾಗಿದ್ದು ಅಚ್ಚರಿ ಆಗಬಹುದು.

ಸಿಂಹ ರಾಶಿ:

ಇಂದು ನೀವು ತುಂಬಾ ಆರೋಗ್ಯಕರವಾದ ಪ್ರಜ್ಞೆ ಹೊಂದಿರುತ್ತೀರಿ ನಿಮ್ಮ ಕೆಲಸದಲ್ಲಿ ಸಾವಧಾನತೆ ಅಧಿಕವಾಗಿರುವುದು. ಉದ್ಯಮವನ್ನು ಬಿಡುವಂತಹ ಪರಿಸ್ಥಿತಿ ಬರಬಹುದು. ನಿಮ್ಮ ಒತ್ತಡವನ್ನು ಕಡಿಮೆ ಮಾಡಿಕೊಳ್ಳುವ ಮಾರ್ಗವನ್ನು ಕಂಡುಕೊಳ್ಳಿ. ಎಲ್ಲ ಕ್ಷಣಗಳೂ ನಿಮಗೆ ಅನುಕೂಲವಾಗಿರಬೇಕು ಎಂಬುದನ್ನು ನಿರೀಕ್ಷಿಸಲಾಗದು. ಸರ್ಕಾರದ ಸೌಲಭ್ಯವು ನಿಮಗೆ ಸಿಗದೇ ಹೋಗಬಹುದು. ನಿಮ್ಮ ಕೆಲಸವು ಸಂದೇಹಕ್ಕೆ ಆಸ್ಪದ ಮಾಡಿ ಕೊಡಬಹುದು. ಯಶಸ್ಸನ್ನು ಪಡೆಯುವ ಹಂಬಲವಿರಲಿದೆ. ನೀವು ನೋಡಿದ್ದೇ ಸತ್ಯ ಎಂದು ತಿಳಿದುಕೊಳ್ಳುವುದು ಬೇಡ.

ಕನ್ಯಾ ರಾಶಿ:

ಕೆಲವು ಸಂದರ್ಭಗಳಿಂದಾಗಿ ನಿಮ್ಮ ಕೆಲಸದ ಪ್ರಯತ್ನಗಳು ವಿಳಂಬವಾಗುವ ಸಾಧ್ಯತೆಯಿದೆ. ಇಡಿಯ ದಿನವನ್ನು ಸಂತೋಷದಿಂದ ಕಳೆಯುವ ಯೋಜನೆಯನ್ನು ರೂಪಿಸಿಕೊಂಡಿರುವಿರಿ. ಬಹಳ ದಿನಗಳಿಂದ ನಡೆಯುತ್ತಿದ್ದ ಕೆಲಸವನ್ನೂ ಇಂದು ಮುಗಿಸಬೇಕೆಂಬ ಹಠವಿರಲಿದೆ. ಗೃಹನಿರ್ಮಾಣದ ಕಾರ್ಯವನ್ನು ಪುನಃ ಆರಂಭಿಸಲು ನಿಮ್ಮ ಮಾನಸಿಕತೆಗೆ ಹೊಂದಿಕೆಯಾಗುವ ಸಂಗಾತಿಯು ನಿಮಗೆ ಸಿಗಬಹುದು. ದೈವವನ್ನು ನಂಬಿ, ನಿಮ್ಮ ಪ್ರಯತ್ನವನ್ನು ಮಾಡಿ.

ತುಲಾ ರಾಶಿ:

ಇಂದು ಮಾಡುವ ಕೆಲಸಗಳು ಸುಲಲಿತವಾಗಿ ಆರಂಭವಾದರೂ ಅಂತ್ಯವು ಬಹಳ ಗೊಂದಲದಿಂದ ಇರಬುಹುದು. ಅತಿಯಾದ ಧನಾತ್ಮಕ ಚಿಂತನೆಗಳು ನಿಮ್ಮನ್ನು ವಂಚನೆಗೆ ಸಿಕ್ಕಿಸಬಹುದು. ಎದುರಿನಿಂದ ಬೆಂಬಲಿಸಿ ಹಿಂದಿನಿಂದ ನಿಮ್ಮವರೇ ಕಾಲು ಎಳೆಯುವರು. ನಿರ್ಮಾಣದ ವಿಚಾರದಲ್ಲಿ ಅನ್ಯರಿಂದ ಹಿನ್ನಡೆ ಆಗಬಹುದು. ಅದು ಬೇಸರ ಬಂದರೂ ಬಿಡದೇ ಮುಂದುವರಿಸುವುದು ಜೀವನಕ್ಕೆ ಅನಿವಾರ್ಯ. ಯಾವ ಸಂದರ್ಬದಲ್ಲಿಯೂ ಇಂದು ನಿಮ್ಮವರನ್ನು ಬಿಟ್ಟುಕೊಡಲಾರಿರಿ.

ವೃಶ್ಚಿಕ ರಾಶಿ:

ಇಂದು ನೀವು ಯಾವ ಕಾರ್ಯವನ್ನು ಒಪ್ಪಿಕೊಳ್ಳುವಾಗಲೂ ಒಪ್ಪಿಕೊಳ್ಳುವ ಮೊದಲು ನಿಮ್ಮ ಒತ್ತಡವನ್ನು ಗಮನಿಸಿಕೊಳ್ಳಿ. ಸಂಗಾತಿಯ ಕಡೆಯಿಂದ ಕಾಳಜಿ ಇಲ್ಲದಂತೆ ಅನ್ನಿಸುವುದು. ಗಣ್ಯರ ಸಂಪರ್ಕವು ಹಲವು ತಿರುವುಗಳನ್ನು ಪಡೆದುಕೊಂಡೀತು. ನಿಮ್ಮ‌ ತಾಳ್ಮೆಯನ್ನು ಪರೀಕ್ಷಿಸುವ ಸಮಯವೂ ಬರಬಹುದು.‌ ದುಃಸ್ವಪ್ನಗಳು ನಿಮ್ಮನ್ನು ಕಾಡಬಹುದು. ಅತಿಯಾದ ಆತ್ಮವಿಶ್ವಾಸವನ್ನು ಇಟ್ಟುಕೊಳ್ಳುವುದರ ಜೊತೆ ಆಲೋಚನಾ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದೂ ಉತ್ತಮ.

ಧನು ರಾಶಿ:

ನೀವು ಎಂದಿಗಿಂತಲೂ ನಿಮ್ಮ ಸಂಗಾತಿಗೆ ಹತ್ತಿರವಾಗುವ ಹಾಗೆ ನಡೆದುಕೊಳ್ಳುವಿರಿ. ಶಿಸ್ತುಬದ್ಧ ಜೀವನದಿಂದ ಹೊರಬರುವುದು ನಿಮಗೆ ಕಷ್ಟವಾದೀತು. ಹೊಸ ಬದುಕಿಗೆ ಒಗ್ಗಿಕೊಳ್ಳಲು ಸಮಯವನ್ನು ತೆಗೆದುಕೊಳ್ಳುವಿರಿ. ತೆರಿಗೆಯಿಂದ ನಿಮಗೆ ಲಾಭವಾಗಲಿದೆ. ನಿಮ್ಮವರ ಜೊತೆ ಸಂತೋಷದ ಕ್ಷಣವನ್ನು ಕಳೆಯುವಿರಿ. ಅನುಚಿತ ವರ್ತೆನೆಯನ್ನು ಅಧಿಕಾರಿಗಳ ಎದುರು ತೋರಿಸುವಿರಿ. ಉತ್ತಮ ಭೂಮಿಯ ಲಾಭವನ್ನು ಪಡೆಯುವಿರಿ. ಅಪಾಯಯಕ್ಕೆ ಸಿಕ್ಕಿಕೊಳ್ಳುವ ಸಂಭವವಿತ್ತು.

ಮಕರ ರಾಶಿ:

ಕೊನೆಯ ಕಾಲದಲ್ಲಿ ಹಿರಿಯರ ಅಭಿಪ್ರಾಯವನ್ನು ಕಡೆಗಾಣಿಸುವುದು ಬೇಡ. ಹೊಸ ಪ್ರದೇಶಗಳ ಭೇಟಿಯಿಂದ ನಿಮ್ಮ ಉತ್ಸಾಹವು ಹೆಚ್ಚಾಗಲಿದೆ. ನಿಮ್ಮ ಕೆಲಸವು ಬೇರೆಯವರಿಗೆ ಪ್ರೇರಣೆಯಾದೀತು. ಗುಂಪುಗಾರಿಕೆಯಿಂದ ನೀವು ಪ್ರತ್ಯೇಕ ಎನಿಸುವಿರಿ. ಕಾರ್ಯದಿಂದ ಕೆಲಕಾಲ ವಿಶ್ರಾಂತಿಯನ್ನು ಪಡೆಯಿರಿ. ವಿದೇಶ ಪ್ರಯಾಣಕ್ಕೆ ತಯಾರಾಗಿ ನಿಂತಿರುವಿರಿ. ಸ್ನೇಹಿತರ ಸಹಕಾರದಿಂದ ಸ್ಥಿರಾಸ್ತಿಯನ್ನು ಖರೀದಿಸುವಿರಿ. ಹಂಚಿಕೊಳ್ಳುವ ಬಗ್ಗೆ ಸಮಾಧಾನ ಇರದು. ಯೋಗ್ಯ ಸಂಬಂಧವನ್ನು ವಿವಾಹಕ್ಕೆ ಹುಡುಕಿಕೊಳ್ಳುವಿರಿ.

ಕುಂಭ ರಾಶಿ:

ನೀವು ಕೆಲಸದಿಂದ ವಿರಾಮವನ್ನು ತೆಗೆದುಕೊಳ್ಳುವಿರಿ. ಮನೆಯಲ್ಲಿಯೇ ಇದ್ದು ಮಕ್ಕಳ ಜೊತೆ ಕಾಲವನ್ನು ಕಳೆಯುವಿರಿ. ಮಕ್ಕಳಲ್ಲಿ ಯಾವ ಪ್ರಗತಿಯನ್ನು ಕಾಣದೇ ಖರ್ಚು ಮಾಡುವುದಾಗಿ ಅನ್ನಿಸುವುದು. ಕುಟುಂಬದಲ್ಲಿ ಶಾಂತತೆ ಇದ್ದರೂ ಒಳಗೆ ಜ್ವಾಲಾಮುಖಿಯು ಸ್ಫೋಟಿಸಲು ಕಾಯುತ್ತಿರಬಹುದು. ಎಂದೋ‌ ಮಾಡಿದ ಸಹಾಯಕ್ಕೆ ಇಂದು ಪ್ರತಿಫಲ ಸಿಗುವ ಸಾಧ್ಯತೆ ಇದೆ. ಅನಗತ್ಯ ಅಲೆದಾಟವು ನಿಮಗೆ ಕಷ್ಟವಾದೀತು. ಯಾರನ್ನೋ ನಿಂದಿಸುವುದು ಅಭ್ಯಾಸ ಮಾಡಿಕೊಳ್ಳುವುದು ಬೇಡ.‌ ನಿಮ್ಮ ನಿರುದ್ಯೋಗದ ಸ್ಥಿತಿಯು ದಾಯಾದಿಗಳಿಗೆ ಸಂತಸವಾಗುವುದು.

ಮೀನ ರಾಶಿ:

ವೃತ್ತಿಜೀವನಕ್ಕೆ ಬೇಕಾದ ಸಿದ್ಧತೆಯಲ್ಲಿ ಇರುವಿರಿ. ಕೆಲಸದಲ್ಲಿ ಪೂರ್ವಭಾವಿಯಾಗಿ ತಿಳಿದುಕೊಳ್ಳಲು ಹೋದರೆ, ಕೆಲಸಗಳನ್ನು ಅನಾಯಸವಾಗಿ ನಡೆಸಬಹುದು. ನೂತನ ಸ್ನೇಹಿತರನ್ನು ಮಾಡಿಕೊಳ್ಳುವಾಗ ಎಚ್ಚರಿಕೆ ಇರಲಿ. ಕಛೇರಿಯಲ್ಲಿ ನಿಮ್ಮ ಮೇಲೆ‌ ಸಾರ್ವಜನಿಕರಿಂದ ವಾಗ್ವಾದ ನಡೆಯುವುದು.‌ ಶುಭ ಸಮಾಚಾರವು ನಿಮಗೆ ಗೊತ್ತಾಗಬಹುದು.‌ ಇಂದು ಆಗುವ ಬದಲಾವಣೆಯನ್ನು ಸಂತೋಷದಿಂದ ಸ್ವಾಗತಿಸಿ.

ಇಂದಿನ ಪಂಚಾಂಗ:

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ಉತ್ತರಾಯಣ, ಋತು : ಗ್ರೀಷ್ಮ, ಚಾಂದ್ರಮಾಸ : ನಿಜ ಜ್ಯೇಷ್ಠ, ಸೌರ ಮಾಸ : ಮಿಥುನ, ಮಹಾನಕ್ಷತ್ರ : ಪುನರ್ವಸು, ವಾರ : ಶನಿ, ಪಕ್ಷ : ಕೃಷ್ಣ, ತಿಥಿ : ದ್ವಾದಶೀ, ನಿತ್ಯನಕ್ಷತ್ರ : ರೋಹಿಣೀ, ಯೋಗ : ಶೂಲಿ, ಕರಣ : ಬಾಲವ, ಸೂರ್ಯೋದಯ – 06 – 01 am, ಸೂರ್ಯಾಸ್ತ – 06 – 49 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 09:13 – 10:49, ಯಮಗಂಡ ಕಾಲ 14:01 – 15:37, ಗುಳಿಕ ಕಾಲ 06:01 – 07:37

-ಲೋಹಿತ್ ಹೆಬ್ಬಾರ್ – 8762924271 (what’s app only)

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 12:49 am, Sat, 11 July 26

Source link

‘ಜನ ನಾಯಗನ್’ ಸಿನಿಮಾಗೆ 12 ಕಡೆ ಕತ್ತರಿ ಹಾಕಿದ ಸೆನ್ಸಾರ್ ಮಂಡಳಿ – Kannada News | Censor Board Orders 12 Edits to Thalapathy Vijay starrer Jana Nayagan movie TVK References Removed

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ದಳಪತಿ ವಿಜಯ್ ನಟನೆಯ ಬಹುನಿರೀಕ್ಷಿತ ರಾಜಕೀಯ ಥ್ರಿಲ್ಲರ್ ಸಿನಿಮಾ ‘ಜನ ನಾಯಗನ್’ (Jana Nayagan) ಕೊನೆಗೂ ತನ್ನ ಅತಿ ದೊಡ್ಡ ಅಡಚಣೆಯನ್ನು ದಾಟಿದೆ. ಹಲವು ತಿಂಗಳುಗಳ ಕಾಲ ವಿಳಂಬವಾಗಿದ್ದ ವಿಜಯ್ ಅವರ ವೃತ್ತಿಜೀವನದ ಈ ಕೊನೆಯ ಚಿತ್ರಕ್ಕೆ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (CBFC) ಕೊನೆಗೂ ‘ಎ’ ಪ್ರಮಾಣಪತ್ರ ನೀಡಿದ್ದು, ಈ ತಿಂಗಳ ಕೊನೆಯಲ್ಲಿ ಸಿನಿಮಾ ತೆರೆಕಾಣಲು ಹಾದಿ ಸುಗಮವಾಗಿದೆ. ಆದರೆ, ಚಿತ್ರಕ್ಕೆ ಕ್ಲಿಯರೆನ್ಸ್ ನೀಡುವ ಮುನ್ನ ಸೆನ್ಸಾರ್ ಮಂಡಳಿಯು ಚಿತ್ರತಂಡಕ್ಕೆ ಹಲವು ಪ್ರಮುಖ ಬದಲಾವಣೆಗಳನ್ನು ಮಾಡಲು ಸೂಚಿಸಿದೆ.

ಟಿವಿಕೆ ಪಕ್ಷದ ಹೆಸರು, ಅಂಬೇಡ್ಕರ್ ಉಲ್ಲೇಖಕ್ಕೆ ಕತ್ತರಿ:

ಮಾಧ್ಯಮ ವರದಿಗಳ ಪ್ರಕಾರ, ಸೆನ್ಸಾರ್ ಮಂಡಳಿಯು ಸಿನಿಮಾದಲ್ಲಿ ಒಟ್ಟು 12 ಕಡೆಗಳಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಲು ಸೂಚಿಸಿದೆ. ಇದರಲ್ಲಿ ರಾಜಕೀಯ ಉಲ್ಲೇಖಗಳು, ಧಾರ್ಮಿಕ ಪದಗಳು ಹಾಗೂ ಅತ್ಯಂತ ಸೂಕ್ಷ್ಮ ಎನಿಸುವ ಕೆಲವು ದೃಶ್ಯಗಳಿಗೆ ಕತ್ತರಿ ಹಾಕಲಾಗಿದೆ. ಈ ಎಲ್ಲ ಬದಲಾವಣೆಗಳನ್ನು ಮಾಡಿದ ನಂತರವೇ ಚಿತ್ರತಂಡಕ್ಕೆ ಪ್ರಮಾಣಪತ್ರ ನೀಡಿದೆ.

ಟಿವಿಕೆ ಹೆಸರು ಇರುವ ಡೈಲಾಗ್ ಮ್ಯೂಟ್:

ವಿಜಯ್ ಅವರ ರಾಜಕೀಯ ಪಕ್ಷವಾದ ‘ಟಿವಿಕೆ’ಗೆ ಸಂಬಂಧಿಸಿದ ಎಲ್ಲಾ ದೃಶ್ಯ ಹಾಗೂ ಸಂಭಾಷಣೆಗಳನ್ನು ಸಂಪೂರ್ಣವಾಗಿ ಮ್ಯೂಟ್ ಮಾಡಲು ಅಥವಾ ಬದಲಾಯಿಸಲು ಸೂಚಿಸಲಾಗಿದೆ. ಭಾರತದ ರಾಷ್ಟ್ರಧ್ವಜವನ್ನು ತೋರಿಸುವ ಒಂದು ಪ್ರಮುಖ ದೃಶ್ಯವನ್ನು ಚಿತ್ರದಿಂದ ತೆಗೆದುಹಾಕಲಾಗಿದೆ. ಸೆನ್ಸಾರ್ ಮಂಡಳಿಯ ಸೂಚನೆಯಂತೆ ಈ ಬದಲಾವಣೆಗಳನ್ನು ಮಾಡುವುದು ಅನಿವಾರ್ಯ ಆಗಿದೆ.

ಅಂಬೇಡ್ಕರ್ ಭಾವಚಿತ್ರ ಬದಲಾವಣೆ:

ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರವಿರುವ ಪುಸ್ತಕದ ಮುಖಪುಟವನ್ನು ಬದಲಾಯಿಸಲು ಸೆನ್ಸಾರ್ ಮಂಡಳಿ ಸೂಚಿಸಿದೆ. ಅಲ್ಲದೇ, ಅಂಬೇಡ್ಕರ್ ಅವರಿಗೆ ಸಂಬಂಧಿಸಿದ ವಿವಾದಾತ್ಮಕ ಸಂಭಾಷಣೆಯನ್ನು ತಿದ್ದಲು ನಿರ್ದೇಶಿಸಲಾಗಿದೆ. ಚಿತ್ರದಲ್ಲಿ ಬರುವ ಕೆಲವು ಧಾರ್ಮಿಕ ಪದಗಳನ್ನು ಮ್ಯೂಟ್ ಮಾಡಲು ಸೂಚಿಸಲಾಗಿದೆ.

ಇದನ್ನೂ ಓದಿ: ‘ಜನ ನಾಯಗನ್’ ನಿರ್ಮಾಪಕರಿಗೆ ಪ್ರಮುಖ ಜವಾಬ್ದಾರಿ ವಹಿಸಿದ ಸಿಎಂ ವಿಜಯ್

ಸದ್ದಾಂ ಹುಸೇನ್ ಗಲ್ಲು ಶಿಕ್ಷೆ ಹಾಗೂ ಭಾರತಕ್ಕೆ ಸಂಬಂಧಿಸಿದ ಕೆಲವು ಕಟು ಸಂಭಾಷಣೆಗಳನ್ನು ಮ್ಯೂಟ್ ಮಾಡಲು ಸೂಚಿಸಲಾಗಿದೆ. ಇವುಗಳ ಜೊತೆಗೆ ಹೆಣ್ಣುಮಕ್ಕಳ ಶಾರೀರಿಕ ರಚನೆಯ ಬಗ್ಗೆ ಮಾತನಾಡಿದ ಆಕ್ಷೇಪಾರ್ಹ ಮಾತುಗಳು, ಮಗುವನ್ನು ಸುಡುವ ದೃಶ್ಯವನ್ನು ಕೂಡ ಬದಲಾಯಿಸುವಂತೆ ಸೆನ್ಸಾರ್ ಮಂಡಳಿ ಸೂಚಿಸಿದೆ ಎಂದು ವರದಿ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

40 ವರ್ಷದ ಬಳಿಕ ನ್ಯೂಜಿಲೆಂಡ್‌ಗೆ ಭಾರತದ ಪ್ರಧಾನಿ ಭೇಟಿ; ವಿಮಾನ ನಿಲ್ದಾಣದಲ್ಲೇ ಮೋದಿಯನ್ನು ಸ್ವಾಗತಿಸಿದ ನ್ಯೂಜಿಲೆಂಡ್ ಪಿಎಂ – Kannada News | PM Modi arrives in New Zealand on historic visit gets airport welcome from New Zealand PM

ಆಕ್ಲೆಂಡ್, ಜುಲೈ 10: ಭಾರತದ ಪ್ರಧಾನಿ ನರೇಂದ್ರ ಮೋದಿ (PM Modi in New Zealand) ತಮ್ಮ 3 ದೇಶಗಳ ರಾಜತಾಂತ್ರಿಕ ಪ್ರವಾಸದ ಕೊನೆಯ ಹಂತವಾಗಿ ಇಂದು ನ್ಯೂಜಿಲೆಂಡ್‌ನ ಆಕ್ಲೆಂಡ್‌ಗೆ ಆಗಮಿಸಿದ್ದಾರೆ. ಈ ವೇಳೆ ಅಲ್ಲಿನ ಪ್ರಧಾನಿ ಕ್ರಿಸ್ಟೋಫರ್ ಲಕ್ಸನ್ ತಾವೇ ಸ್ವತಃ ವಿಮಾನ ನಿಲ್ದಾಣಕ್ಕೆ ಬಂದು ಅತ್ಯಂತ ಆತ್ಮೀಯವಾಗಿ ಮೋದಿಯನ್ನು ಸ್ವಾಗತಿಸಿದ್ದಾರೆ. ಕಳೆದ 4 ದಶಕಗಳಲ್ಲೇ ಭಾರತದ ಪ್ರಧಾನಿಯೊಬ್ಬರು ನ್ಯೂಜಿಲೆಂಡ್‌ಗೆ ನೀಡುತ್ತಿರುವ ಮೊದಲ ಅಧಿಕೃತ ಭೇಟಿ ಇದಾಗಿದೆ. ಹೀಗಾಗಿ, ನರೇಂದ್ರ ಮೋದಿಯವರ ಈ ಐತಿಹಾಸಿಕ ಭೇಟಿ ಬಹಳ ಮಹತ್ವ ಪಡೆದಿದೆ.

ಏರ್ ಇಂಡಿಯಾ ಒನ್ ವಿಮಾನವು ಆಕ್ಲೆಂಡ್‌ನಲ್ಲಿ ಇಳಿಯುತ್ತಿದ್ದಂತೆ ಪ್ರಧಾನಿ ಮೋದಿ ಅವರನ್ನು ಪ್ರಧಾನಿ ಲಕ್ಸನ್ ಅವರು ಕೈಕುಲುಕಿ, ಆಲಿಂಗನದೊಂದಿಗೆ ಬರಮಾಡಿಕೊಂಡರು. ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುವ ಉದ್ದೇಶದಿಂದ ಪ್ರಧಾನಿ ಲಕ್ಸನ್ ಅವರ ಆಮಂತ್ರಣದ ಮೇರೆಗೆ ಪ್ರಧಾನಿ ಮೋದಿ 2 ದಿನಗಳ ಈ ಪ್ರವಾಸ ಕೈಗೊಂಡಿದ್ದಾರೆ.

ಇದನ್ನೂ ಓದಿ: ಉಗ್ರರ ನೆಲೆ ಮೇಲಿನ ದಾಳಿ ಜಗತ್ತಿನಾದ್ಯಂತ ಪ್ರತಿಧ್ವನಿಸಿತು; ಆಸ್ಟ್ರೇಲಿಯಾದಲ್ಲಿ ಮೋದಿಯಿಂದ ಆಪರೇಷನ್ ಸಿಂಧೂರದ ಗುಣಗಾನ

ಆರ್ಥಿಕ ಮತ್ತು ರಕ್ಷಣಾ ಸಹಕಾರ:

ಈ ಭೇಟಿಯ ಅವಧಿಯಲ್ಲಿ ಪ್ರಧಾನಿ ಮೋದಿ ಮತ್ತು ಅವರ ನ್ಯೂಜಿಲೆಂಡ್ ಸಹವರ್ತಿ ಆರ್ಥಿಕತೆ, ವ್ಯಾಪಾರ, ವಾಣಿಜ್ಯ ಮತ್ತು ರಕ್ಷಣಾ ಸಹಕಾರವನ್ನು ವಿಸ್ತರಿಸುವ ಕುರಿತು ವ್ಯಾಪಕ ಚರ್ಚೆ ನಡೆಸಲಿದ್ದಾರೆ. ಕಳೆದ 2 ವರ್ಷಗಳಲ್ಲಿ ಉಭಯ ದೇಶಗಳ ಬಾಂಧವ್ಯದಲ್ಲಿ ಆಗಿರುವ ಪ್ರಗತಿಯನ್ನು ಉಭಯ ನಾಯಕರು ಪರಾಮರ್ಶಿಸಲಿದ್ದಾರೆ.

ಭಾರತೀಯ ಸಮುದಾಯವನ್ನುದ್ದೇಶಿಸಿ ಮೋದಿ ಭಾಷಣ:

ಪ್ರಧಾನಿ ಮೋದಿ ನ್ಯೂಜಿಲೆಂಡ್‌ನ ಪ್ರಮುಖ ಉದ್ಯಮಿಗಳು ಮತ್ತು ಕ್ರೀಡಾಪಟುಗಳನ್ನು ಭೇಟಿಯಾಗಲಿದ್ದಾರೆ. ಜೊತೆಗೆ, ಅಲ್ಲಿ ನೆಲೆಸಿರುವ ಭಾರಿ ಸಂಖ್ಯೆಯ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಇದು ಉಭಯ ದೇಶಗಳ ನಡುವಿನ ಸಾಂಸ್ಕೃತಿಕ ಬಾಂಧವ್ಯದ ಪ್ರಮುಖ ಸಂಕೇತವಾಗಿದೆ.

ಇದನ್ನೂ ಓದಿ: ಆಸ್ಟ್ರೇಲಿಯಾದ ಕ್ರಿಕೆಟ್ ಸ್ಟೇಡಿಯಂಗೆ ಪ್ರಧಾನಿ ಮೋದಿ ಭೇಟಿ, ಮೆಲ್ಬೋರ್ನ್ ಕ್ಲಬ್ ಜೊತೆ ಐತಿಹಾಸಿಕ ಒಪ್ಪಂದ

ಮೂರು ದೇಶಗಳ ಪ್ರವಾಸ:

ಪ್ರಧಾನಿ ಮೋದಿ ಆಸ್ಟ್ರೇಲಿಯಾದಲ್ಲಿ ಮೂರು ದಿನಗಳ ಪ್ರವಾಸ ಮುಗಿಸಿ ಆಕ್ಲೆಂಡ್‌ಗೆ ತಲುಪಿದ್ದಾರೆ. ಆಸ್ಟ್ರೇಲಿಯಾದಲ್ಲಿ ಪ್ರಧಾನಿ ಆಂಥೋನಿ ಅಲ್ಬನೀಸ್ ಅವರೊಂದಿಗೆ ‘3ನೇ ಆಸ್ಟ್ರೇಲಿಯಾ-ಭಾರತ ವಾರ್ಷಿಕ ನಾಯಕರ ಶೃಂಗಸಭೆ’ಯಲ್ಲಿ ಭಾಗವಹಿಸಿದ್ದ ಅವರು, ನಾಗರಿಕ ಪರಮಾಣು ಇಂಧನ ಒಪ್ಪಂದ ಮತ್ತು ನೌಕಾ ಸಹಕಾರಕ್ಕೆ ಸಹಿ ಹಾಕಿದ್ದರು. ಅದಕ್ಕೂ ಮುನ್ನ ಇಂಡೋನೇಷ್ಯಾದಲ್ಲಿ ಅಧ್ಯಕ್ಷ ಪ್ರಬೋವೊ ಸುಬ್ಯಾಂಟೊ ಅವರೊಂದಿಗೆ ರಕ್ಷಣೆ ಮತ್ತು ಕಡಲ ಭದ್ರತೆ ಸೇರಿದಂತೆ 14 ಪ್ರಮುಖ ಒಪ್ಪಂದಗಳಿಗೆ ಸಹಿ ಹಾಕಿದ್ದರು. ಪ್ರಧಾನಿ ಮೋದಿ ಅವರ ಈ ಆಕ್ಲೆಂಡ್ ಭೇಟಿಯೊಂದಿಗೆ ಅವರ 6 ದಿನಗಳ ಸುದೀರ್ಘ 3 ರಾಷ್ಟ್ರಗಳ ಪ್ರವಾಸ ಮುಕ್ತಾಯಗೊಳ್ಳಲಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On – 10:27 pm, Fri, 10 July 26

Source link

IND vs ENG: ಲಾರ್ಡ್ಸ್‌ನಲ್ಲಿ ಈ ಸಾಧನೆ ಮಾಡಿದ ಏಕೈಕ ಬ್ಯಾಟರ್ ಹರ್ಮನ್‌ಪ್ರೀತ್ ಕೌರ್

Source link

IND vs ENG: ಬದಲಾದ ಸಮಯದಲ್ಲಿ ನಡೆಯಲಿದೆ ಕೊನೆಯ ಟಿ20 ಪಂದ್ಯ – Kannada News | India vs England 5th T20: Date, Time, Venue, Live Stream and Ranking Battle

ಭಾರತ ಮತ್ತು ಇಂಗ್ಲೆಂಡ್ (India vs England) ನಡುವಿನ ಐದು ಪಂದ್ಯಗಳ ಟಿ20 ಸರಣಿ ಈಗ ಅಂತಿಮ ಹಂತಕ್ಕೆ ತಲುಪಿದೆ. ಬ್ರಿಸ್ಟಲ್‌ನಲ್ಲಿ ನಡೆದ ಸರಣಿಯ ನಾಲ್ಕನೇ ಪಂದ್ಯದಲ್ಲಿ ಟೀಂ ಇಂಡಿಯಾ ಒಂಬತ್ತು ವಿಕೆಟ್‌ಗಳ ಹೀನಾಯ ಸೋಲು ಅನುಭವಿಸಿತು. ಈ ಸೋಲಿನೊಂದಿಗೆ, ನಾಯಕ ಶ್ರೇಯಸ್ ಅಯ್ಯರ್ (Shreyas Iyer) ನೇತೃತ್ವದ ಭಾರತ ತಂಡವು ಸರಣಿಯನ್ನು ಕಳೆದುಕೊಂಡಿದೆ. ಆತಿಥೇಯ ಇಂಗ್ಲೆಂಡ್ ಈಗಾಗಲೇ ಸರಣಿಯನ್ನು ಗೆದ್ದಿದ್ದರೂ, ಐದನೇ ಮತ್ತು ಅಂತಿಮ ಪಂದ್ಯದಲ್ಲಿ ಗೆದ್ದು ಕ್ಲೀನ್ ಸ್ವೀಪ್​ನಿಂದ ಪಾರಾಗಲು ಭಾರತ ತಂಡ ಪ್ರಯತ್ನಿಸಲಿದೆ. ಈ ಪಂದ್ಯವನ್ನು ಗೆದ್ದರೆ ಭಾರತ ಈ ಪ್ರವಾಸದಲ್ಲಿ ಮೊದಲು ಗೆಲುವು ದಾಖಲಿಸುವುದರೊಂದಿಗೆ ಟಿ20 ರ್ಯಾಂಕಿಂಗ್​ನಲ್ಲಿ ತನ್ನ ಅಗ್ರಸ್ಥಾನವನ್ನು ಕಾಪಾಡಿಕೊಳ್ಳಲಿದೆ. ಒಂದು ವೇಳೆ ಸೋತರೆ ಇಂಗ್ಲೆಂಡ್​ಗೆ ಅಗ್ರಸ್ಥಾನ ಸಿಗಲಿದೆ. ಆದ್ದರಿಂದ, ಶ್ರೇಯಸ್ ಅಯ್ಯರ್ ಪಡೆ ಈ ಪಂದ್ಯವನ್ನು ಗೆದ್ದು ಪ್ರವಾಸವನ್ನು ಗೆಲುವಿನೊಂದಿಗೆ ಕೊನೆಗೊಳಿಸುವ ಉದ್ದೇಶದಿಂದ ಮೈದಾನಕ್ಕೆ ಇಳಿಯಲಿದೆ.

ಭಾರತ ಮತ್ತು ಇಂಗ್ಲೆಂಡ್‌ ನಡುವಿನ ಕೊನೆಯ ಟಿ20 ಪಂದ್ಯ ಯಾವಾಗ ನಡೆಯಲಿದೆ?

ಭಾರತ ಮತ್ತು ಇಂಗ್ಲೆಂಡ್ ನಡುವಿನ ಟಿ20 ಸರಣಿಯ ಐದನೇ ಮತ್ತು ಅಂತಿಮ ಪಂದ್ಯ ಜುಲೈ 11 ರಂದು ನಡೆಯಲಿದೆ.

ಭಾರತ ಮತ್ತು ಇಂಗ್ಲೆಂಡ್‌ ನಡುವಿನ ಕೊನೆಯ ಟಿ20 ಪಂದ್ಯ ಎಲ್ಲಿ ನಡೆಯಲಿದೆ?

ಭಾರತ ಮತ್ತು ಇಂಗ್ಲೆಂಡ್‌ ನಡುವಿನ ಕೊನೆಯ ಟಿ20 ಪಂದ್ಯ ಸೌತಾಂಪ್ಟನ್‌ನ ರೋಸ್ ಬೌಲ್ ಕ್ರೀಡಾಂಗಣದಲ್ಲಿ ನಡೆಯಲಿದೆ.

ಭಾರತ ಮತ್ತು ಇಂಗ್ಲೆಂಡ್‌ ನಡುವಿನ ಕೊನೆಯ ಟಿ20 ಪಂದ್ಯ ಎಷ್ಟು ಗಂಟೆಗೆ ಆರಂಭ?

ಭಾರತ ಮತ್ತು ಇಂಗ್ಲೆಂಡ್‌ ನಡುವಿನ ಟಿ20 ಸರಣಿಯ ಹಿಂದಿನ ಪಂದ್ಯಗಳಿಗಿಂತ ಭಿನ್ನವಾಗಿ, ಈ ಅಂತಿಮ ಪಂದ್ಯವು ಭಾರತೀಯ ಕಾಲಮಾನ ಸಂಜೆ 7 ಗಂಟೆಗೆ ಆರಂಭವಾಗಲಿದೆ.

ಭಾರತ ಮತ್ತು ಇಂಗ್ಲೆಂಡ್‌ ನಡುವಿನ ಕೊನೆಯ ಟಿ20 ಪಂದ್ಯವನ್ನು ಎಲ್ಲಿ ವೀಕ್ಷಿಸಬಹುದು?

ಭಾರತ ಮತ್ತು ಇಂಗ್ಲೆಂಡ್‌ ನಡುವಿನ ಕೊನೆಯ ಟಿ20 ಪಂದ್ಯವನ್ನು ಸೋನಿ ಸ್ಪೋರ್ಟ್ಸ್​ ನೆಟ್​ವರ್ಕ್​ನಲ್ಲಿ ವೀಕ್ಷಿಸಬಹುದು ಹಾಗೆಯೇ ಜಿಯೋ ಹಾಟ್​ಸ್ಟಾರ್​ನಲ್ಲೂ ನೇರ ಪ್ರಸಾರ ಲಭ್ಯವಿರಲಿದೆ.

IND vs ENG: ಭಾರತಕ್ಕೆ ಹ್ಯಾಟ್ರಿಕ್ ಸೋಲು; ಟಿ20 ಸರಣಿ ಗೆದ್ದ ಇಂಗ್ಲೆಂಡ್‌

ಸೌತಾಂಪ್ಟನ್‌ನಲ್ಲಿ ಭಾರತದ ದಾಖಲೆ

ಈ ಮೈದಾನದಲ್ಲಿ ಟೀಂ ಇಂಡಿಯಾ ಇದುವರೆಗೆ ಒಂದೇ ಒಂದು ಟಿ20 ಪಂದ್ಯವನ್ನು ಆಡಿದೆ. ಈ ಪಂದ್ಯವನ್ನು 2022 ರಲ್ಲಿ ಆಡಲಾಗಿದ್ದು, ಭಾರತ ತಂಡವು ಇಂಗ್ಲೆಂಡ್ ತಂಡವನ್ನು 50 ರನ್‌ಗಳಿಂದ ಸೋಲಿಸಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ 20 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 198 ರನ್ ಗಳಿಸಿತು. ಇದಕ್ಕೆ ಪ್ರತಿಕ್ರಿಯೆಯಾಗಿ ಇಂಗ್ಲೆಂಡ್ 148 ರನ್‌ಗಳಿಗೆ ಆಲೌಟ್ ಆಗಿತ್ತು. ಈ ಬಾರಿಯೂ ಟೀಂ ಇಂಡಿಯಾದಿಂದ ಇದೇ ರೀತಿಯ ಪ್ರದರ್ಶನವನ್ನು ಭಾರತೀಯ ಅಭಿಮಾನಿಗಳು ನಿರೀಕ್ಷಿಸುತ್ತಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಇರಾನ್ ಜೊತೆ ಮಾತುಕತೆಗೆ ಅಮೆರಿಕ ಒಪ್ಪಿಗೆ, ಕದನ ವಿರಾಮ ಅಂತ್ಯ!; ಟ್ರಂಪ್ ಘೋಷಣೆ – Kannada News | Donald Trump Says US Agreed To Iran Talks But Ceasefire Is Over

ವಾಷಿಂಗ್ಟನ್, ಜುಲೈ 10: ಹಾರ್ಮುಜ್ ಜಲಸಂಧಿಯಲ್ಲಿ (Strait of Hormuz) ವಾಣಿಜ್ಯ ಹಡಗಿನ ಮೇಲಿನ ದಾಳಿಯ ನಂತರ ಇರಾನ್ ಮತ್ತು ಅಮೆರಿಕದ ನಡುವೆ ಮತ್ತೆ ಸಂಘರ್ಷ ಶುರುವಾಗಿತ್ತು. ಉಭಯ ದೇಶಗಳ ನಡುವೆ ಸರಣಿ ಪ್ರತಿದಾಳಿಗಳು ನಡೆದು ಮಧ್ಯಪ್ರಾಚ್ಯದಲ್ಲಿ ಮತ್ತೊಮ್ಮೆ ಉದ್ವಿಗ್ನತೆ ಹೆಚ್ಚಾಗಿದೆ. ಇದರ ಬೆನ್ನಲ್ಲೇ, ಇರಾನ್ ಮಾಡಿಕೊಂಡ ಮನವಿಯ ಮೇರೆಗೆ ಅದರೊಂದಿಗೆ ಮಾತುಕತೆ ನಡೆಸಲು ಅಮೆರಿಕ ಒಪ್ಪಿಕೊಂಡಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಘೋಷಿಸಿದ್ದಾರೆ. ಆದರೆ, ಮಾತುಕತೆಗೆ ಸಿದ್ಧವಿದ್ದರೂ ಈಗಾಗಲೇ ಕದನವಿರಾಮ ಅಂತ್ಯವಾಗಿದೆ ಎಂದಿದ್ದಾರೆ.

“ಮಾತುಕತೆಯನ್ನು ಮುಂದುವರಿಸುವಂತೆ ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ ನಮಗೆ ಮನವಿ ಮಾಡಿದೆ” ಎಂದು ಟ್ರಂಪ್ ತಮ್ಮ ‘ಟ್ರುತ್ ಸೋಶಿಯಲ್’ ಖಾತೆಯಲ್ಲಿ ಬರೆದುಕೊಂಡಿದ್ದಾರೆ. “ನಾವು ಅದಕ್ಕೆ ಒಪ್ಪಿದ್ದೇವೆ, ಆದರೆ ಕದನ ವಿರಾಮವು ಮುಕ್ತಾಯಗೊಂಡಿದೆ ಎಂಬುದನ್ನು ಅಮೆರಿಕ ಅವರಿಗೆ ಸ್ಪಷ್ಟವಾಗಿ ತಿಳಿಸಿದೆ!” ಎಂದು ಟ್ರಂಪ್ ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ: ಶೂಟ್ ಮಾಡ್ಬೇಕಾ?; ಭೀಕರ ದಾಳಿಯ ಎಚ್ಚರಿಕೆ ನೀಡಿದ ಟ್ರಂಪ್​ಗೆ ಇರಾನ್ ತಿರುಗೇಟು

ಕಳೆದ 3 ತಿಂಗಳಿಗೂ ಹೆಚ್ಚು ಕಾಲ ನಡೆದಿದ್ದ ಸಂಘರ್ಷಕ್ಕೆ ಅಂತ್ಯ ಹಾಡಲು ಉಭಯ ದೇಶಗಳು ಕಳೆದ ತಿಂಗಳಷ್ಟೇ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ್ದವು. ಆದರೆ, ಹಾರ್ಮುಜ್ ಜಲಸಂಧಿಯಲ್ಲಿ ಇರಾನ್ ಪಡೆಗಳು 3 ಹಡಗುಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ ನಂತರ ಪರಿಸ್ಥಿತಿ ಮತ್ತೆ ವಿಕೋಪಕ್ಕೆ ತಿರುಗಿತು. ಇದಕ್ಕೆ ಪ್ರತಿಯಾಗಿ ಅಮೆರಿಕದ ಪಡೆಗಳು ಈ ವಲಯದಲ್ಲಿದ್ದ ಇರಾನ್‌ನ ಮಿಲಿಟರಿ ನೆಲೆಗಳ ಮೇಲೆ ದಾಳಿ ನಡೆಸಿದವು. ಇರಾನ್ ಕೂಡ ಸುಮ್ಮನಿರದೆ ಅಮೆರಿಕದ ದಾಳಿಗೆ ಪ್ರತೀಕಾರದ ದಾಳಿಗಳನ್ನು ನಡೆಸಿತು. ಹೀಗೆ ಉಭಯ ದೇಶಗಳು ಪರಸ್ಪರ ಸರಣಿ ದಾಳಿಗಳನ್ನು ಮುಂದುವರಿಸಿದ್ದರಿಂದ ಪರಿಸ್ಥಿತಿ ಮತ್ತಷ್ಟು ಉಲ್ಬಣಗೊಂಡಿದೆ.

ಹಾರ್ಮುಜ್ ಜಲಸಂಧಿಯ ಮಹತ್ವ:

ವಿಶ್ವದ ಸುಮಾರು 5ನೇ 1 ಭಾಗದಷ್ಟು ತೈಲ ಮತ್ತು ನೈಸರ್ಗಿಕ ಅನಿಲ ಹಾರ್ಮುಜ್ ಜಲಸಂಧಿಯ ಮಾರ್ಗದ ಮೂಲಕವೇ ಸಾಗುತ್ತದೆ. ಈ ಜಲಸಂಧಿ ಈಗ ತನ್ನ ಸಂಪೂರ್ಣ ನಿಯಂತ್ರಣದಲ್ಲಿರಬೇಕು ಮತ್ತು ಇಲ್ಲಿ ಸಂಚರಿಸುವ ಹಡಗುಗಳು ತನಗೆ ಶುಲ್ಕ ಪಾವತಿಸಬೇಕು ಎಂದು ಇರಾನ್ ವಾದಿಸುತ್ತಿದೆ. ಆದರೆ, ವಾಣಿಜ್ಯ ಹಡಗುಗಳ ಸುರಕ್ಷಿತ ಸಂಚಾರಕ್ಕಾಗಿ ಹಾರ್ಮುಜ್ ಜಲಸಂಧಿಯನ್ನು ಮುಕ್ತವಾಗಿಡುವುದು ತನ್ನ ಜವಾಬ್ದಾರಿ ಎಂದು ಅಮೆರಿಕ ಮಿಲಿಟರಿ ಪ್ರತಿಪಾದಿಸಿದೆ.

ಇದನ್ನೂ ಓದಿ: ಇರಾನ್​ನ ಬುಶೆಹರ್ ಪರಮಾಣು ವಿದ್ಯುತ್ ಸ್ಥಾವರದ ಮೇಲೆ ಅಮೆರಿಕ ದಾಳಿ

ಇರಾನ್‌ನಲ್ಲಿ ಹೆಚ್ಚಿದ ಸಾವು-ನೋವು:

ಅಮೆರಿಕ ನಡೆಸಿದ ತೀವ್ರ ಬಾಂಬ್ ದಾಳಿಯ ಪರಿಣಾಮವಾಗಿ ಇರಾನ್​ನಲ್ಲಿ ಸಾವು-ನೋವುಗಳು ಹೆಚ್ಚಾಗಿವೆ. ಗುರುವಾರ ಇರಾನ್‌ನ ಟೆಹ್ರಾನ್ ಆರೋಗ್ಯ ಸಚಿವಾಲಯವು ಪ್ರಕಟಿಸಿದ ವರದಿಯ ಪ್ರಕಾರ, ಅಮೆರಿಕ ನಡೆಸಿದ ಮೊದಲ 2 ದಿನಗಳ ವೈಮಾನಿಕ ದಾಳಿಗೆ ದೇಶಾದ್ಯಂತ ಅಧಿಕೃತವಾಗಿ 14 ಜನರು ಬಲಿಯಾಗಿದ್ದಾರೆ ಮತ್ತು 78 ಜನರು ಗಾಯಗೊಂಡಿದ್ದಾರೆ. ಸಿರಿಕ್ ಪಟ್ಟಣದ ಮೇಲಿನ ದಾಳಿಯೊಂದರಲ್ಲೇ ಮೂವರು ಸಾವನ್ನಪ್ಪಿದ್ದಾರೆ ಮತ್ತು 15 ಜನರು ಗಾಯಗೊಂಡಿದ್ದಾರೆ. ಮಿಲಿಟರಿ ಕಾರ್ಯಾಚರಣೆಗಳು ಇನ್ನೂ ಮುಂದುವರಿದಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

Exit mobile version