ಧಾರವಾಡ ಕೃಷಿ ವಿವಿ ಸಂಶೋಧನೆಗೆ ಜಾಗತಿಕ ಮನ್ನಣೆ: ಇಂಡೋನೇಷ್ಯಾಗೆ ಗೋಧಿ ಬೀಜ ರಫ್ತು – Kannada News | Dharwad Agricultural University Gains Global Recognition as Wheat Seeds Are Exported to Indonesia

ಧಾರವಾಡ, ಜುಲೈ 10: ಧಾರವಾಡ ಕೃಷಿ ವಿಶ್ವವಿದ್ಯಾಲಯ (University of Agricultural Sciences) ದೇಶದಲ್ಲಷ್ಟೇ ಅಲ್ಲ ವಿದೇಶಗಳಲ್ಲಿ ಭಾರೀ ಹೆಸರು ಮಾಡಿದೆ. ತನ್ನ ಕೃಷಿ ಸಂಶೋಧನೆಗಳಿಂದಾಗಿ ವಿಶ್ವಮಟ್ಟದಲ್ಲಿ ಗುರುತಿಸಿಕೊಂಡಿದೆ. ಇಂತಹ ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳು ಸಂಶೋಧಿಸಿದ ಗೋಧಿ (wheat) ತಳಿಯೊಂದು ಇದೀಗ ವಿದೇಶಕ್ಕೆ ರಫ್ತಾಗುತ್ತಿದೆ. ಇತ್ತೀಚಿಗೆ ಪ್ರಧಾನಿ ನರೇಂದ್ರ ಮೋದಿ ಇಂಡೋನೇಷ್ಯಾಕ್ಕೆ ಭೇಟಿ ನೀಡಿದಾಗ ಧಾರವಾಡ (dharwad) ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳು ಸಂಶೋಧಿಸಿದ ಈ ತಳಿಯನ್ನು ಆ ದೇಶಕ್ಕೆ ನೀಡುವ ಒಡಂಬಡಿಕೆಗೆ ಸಹಿ ಹಾಕಿದ್ದಾರೆ. ಇದು ಕೃಷಿ ವಿಶ್ವವಿದ್ಯಾಲಯದ ಪಾಲಿಗೆ ಹೆಮ್ಮೆಯ ಸಂಗತಿಯಾಗಿದೆ.

ಮತ್ತೊಂದು ಮೈಲಿಗಲ್ಲು ಮುಟ್ಟಿದ ಧಾರವಾಡದ ಕೃಷಿ ವಿಶ್ವವಿದ್ಯಾಲಯ

ಧಾರವಾಡದ ಕೃಷಿ ವಿಶ್ವವಿದ್ಯಾಲಯ ಇದೀಗ ಮತ್ತೊಂದು ಮಹತ್ವದ ಮೈಲಿಗಲ್ಲನ್ನು ಮುಟ್ಟಿದೆ. ಈ ಕೃಷಿ ವಿಶ್ವವಿದ್ಯಾಲಯ ಸಂಶೋಧಿಸಿದ ಗೋಧಿ ತಳಿಯೊಂದು ಇದೀಗ ವಿದೇಶಕ್ಕೆ ರಫ್ತಾಗುತ್ತಿದೆ. ಪ್ರಾದೇಶಿಕ ಆಹಾರ ಭದ್ರತೆ ಮತ್ತು ಕೃಷಿ ಸಹಕಾರ ಬಲಪಡಿಸುವ ನಿಟ್ಟಿನಲ್ಲಿ ಭಾರತ ಮತ್ತು ಇಂಡೋನೇಷ್ಯಾ ಮಹತ್ವದ ಹೆಜ್ಜೆ ಇಟ್ಟಿವೆ. ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಇಂಡೋನೇಷ್ಯಾಗೆ ಭೇಟಿ ಸಂದರ್ಭದಲ್ಲಿ ಉಭಯ ದೇಶಗಳ ನಡುವೆ ಸಹಿ ಮಾಡಲಾದ ಒಪ್ಪಂದ ಪತ್ರದ ಭಾಗವಾಗಿ ಧಾರವಾಡದ ಕೃಷಿ ವಿಶ್ವವಿದ್ಯಾಲಯದಿಂದ ಅಭಿವೃದ್ಧಿಪಡಿಸಲಾದ ಉನ್ನತ ಗುಣಮಟ್ಟದ ಡಿಡಬ್ಲ್ಯೂಆರ್ 162 ಗೋಧಿ ಬೀಜಗಳನ್ನು ಇಂಡೋನೇಷ್ಯಾ ದೇಶಕ್ಕೆ ಪೂರೈಸಲು ನಿರ್ಧರಿಸಲಾಗಿದೆ.

ಇದನ್ನೂ ಓದಿ: ಹುಬ್ಬಳ್ಳಿಯ ಕೆಎಂಸಿಆರ್‌ಐನಲ್ಲಿ ಅಪರೂಪದ ಶಸ್ತ್ರಚಿಕಿತ್ಸೆ: ಎರಡು ವರ್ಷಗಳಲ್ಲಿ 70ಕ್ಕೂ ಹೆಚ್ಚು ‘ಸ್ಕಲ್ ಬೇಸ್ ಆಸ್ಟಿಯೋಮೈಲೈಟಿಸ್’ ರೋಗಿಗಳಿಗೆ ಯಶಸ್ವಿ ಟ್ರೀಟ್​​ಮೆಂಟ್​

ಗೋಧಿಯನ್ನು ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ವ್ಯಾಪಕವಾಗಿ ಬೆಳೆಯುತ್ತಿದ್ದು, ಈ ಪ್ರದೇಶಗಳಲ್ಲಿ ಗೋಧಿ ಬೆಳೆಯುವ ಅವಧಿಯುದ್ದಕ್ಕೂ ಉಷ್ಣಾಂಶ ಹೆಚ್ಚಾಗಿರುವುದು, ಬೆಳೆ ಅವಧಿ ಕಡಿಮೆ ಹಾಗೂ ಹವಾಮಾನ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವ ಗೋಧಿ ತಳಿಗಳ ಅಭಿವೃದ್ಧಿ ಆಗಬೇಕು ಎಂಬುದು 1980ರ ದಶಕದ ಸಮಯದಲ್ಲಿ ಪ್ರಮುಖ ಸಂಶೋಧನಾ ಗುರಿಯಾಗಿತ್ತು. ಆಗ ಧಾರವಾಡದ ಕೃಷಿ ವಿವಿ ಅಂದಿನ ಗೋಧಿ ತಳಿ ಶಾಸ್ತ್ರಜ್ಞರು, ಕೃಷಿ ವಿವಿ ವಿಶ್ರಾಂತ ಕುಲಪತಿ ಆದ ಡಾ.ಆರ್.ಆರ್. ಹಂಚಿನಾಳ ನೇತೃತ್ವದಲ್ಲಿ ಗೋಧಿ ಸುಧಾರಣಾ ಕಾರ್ಯಕ್ರಮವನ್ನು ಆರಂಭಿಸಿತ್ತು.

ಡಿಡಬ್ಲ್ಯೂಆರ್ 162 ಚಪಾತಿ ಗೋಧಿ ತಳಿಯ ವಿಶೇಷತೆ ಏನು?

ಶಟಲ್ ಬ್ರೀಡಿಂಗ್ ವಿಧಾನ ಬಳಸಿಕೊಂಡು ಅಭಿವೃದ್ಧಿಪಡಿಸಲಾದ ಡಿಡಬ್ಲ್ಯೂಆರ್ 162 ಚಪಾತಿ ಗೋಧಿ ತಳಿಯನ್ನು 1993ರಲ್ಲಿ ಭಾರತ ಅಧಿಕೃತವಾಗಿ ಬಿಡುಗಡೆ ಮಾಡಿತ್ತು. ಈ ತಳಿಯು ಎಲೆ ತುಕ್ಕು ಹಾಗೂ ಕಾಂಡ ತುಕ್ಕು ರೋಗಗಳಿಗೆ ಪ್ರತಿರೋಧಕವಾಗಿದ್ದು, ಹೆಚ್ಚಿನ ಇಳುವರಿ ಸಾಮರ್ಥ್ಯ, ಉತ್ತಮ ಧಾನ್ಯದ ಗುಣಮಟ್ಟ ಹಾಗೂ ಬೆಳೆ ಬೆಳವಣಿಗೆಯ ಅವಧಿಯಲ್ಲಿ ಉಷ್ಣ ಒತ್ತಡವನ್ನು ಸಹಿಸಿಕೊಳ್ಳುವ ಸಾಮರ್ಥ್ಯ ಹೊಂದಿದೆ. ಈ ವಿಶೇಷ ಗುಣಲಕ್ಷಣಗಳಿಂದಾಗಿ ಈ ತಳಿಯು ಭಾರತದ ಉಷ್ಣ ಹವಾಮಾನದಲ್ಲಿಯೂ ಉತ್ತಮವಾಗಿ ಬೆಳೆಯುವ ಸಾಮರ್ಥ್ಯ ಹೊಂದಿದೆ. ಮೂರು ದಶಕಗಳ ಹಿಂದೆ ಬಿಡುಗಡೆಯಾದರೂ, ಡಿಡಬ್ಲ್ಯೂಆರ್ 162 ಇಂದಿಗೂ ರೈತರ ಅತ್ಯಂತ ಮೆಚ್ಚಿನ ಗೋಧಿ ತಳಿಗಳಲ್ಲಿ ಒಂದಾಗಿದ್ದು, ಬ್ರೀಡರ್ ಬೀಜಗಳ ಬೇಡಿಕೆಯಲ್ಲಿಯೂ ಮುಂಚೂಣಿಯಲ್ಲಿದೆ.

ರಾಷ್ಟ್ರೀಯ ಆಹಾರ ಭದ್ರತೆ ಬಲಪಡಿಸುವ ಉದ್ದೇಶದಿಂದ ಇಂಡೋನೇಷ್ಯಾ ಸರ್ಕಾರ ಭಾರತೀಯ ಸಂಶೋಧನಾ ಸಂಸ್ಥೆಗಳು ಹಾಗೂ ಅಂತಾರಾಷ್ಟ್ರೀಯ ಮೆಕ್ಕೆಜೋಳ ಮತ್ತು ಗೋಧಿ ಸುಧಾರಣಾ ಕೇಂದ್ರ ಅಭಿವೃದ್ಧಿಪಡಿಸಿದ ವಿವಿಧ ಗೋಧಿ ತಳಿಗಳನ್ನು ತನ್ನ ಉಷ್ಣವಲಯದ ಹವಾಮಾನಕ್ಕೆ ಹೊಂದಾಣಿಕೆ ಪರೀಕ್ಷಿಸಲು ಆಮದು ಮಾಡಿಕೊಂಡಿತ್ತು. ಈ ಪರೀಕ್ಷೆಗಳಲ್ಲಿ ಧಾರವಾಡ ಕೃಷಿ ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸಿದ ಡಿಡಬ್ಲ್ಯೂಆರ್ 162 ತಳಿಯು ಇತರೆ ಎಲ್ಲಾ ತಳಿಗಳಿಗಿಂತ ಉತ್ತಮ ಇಳುವರಿ ಹಾಗೂ ಗುಣಮಟ್ಟವನ್ನು ಪ್ರದರ್ಶಿಸಿದೆ. ಈ ಅತ್ಯುತ್ತಮ ಫಲಿತಾಂಶ ಗುರುತಿಸಿದ ಇಂಡೋನೇಷ್ಯಾ ಸರ್ಕಾರ 2000 ಇಸವಿಯಲ್ಲೇ ದೊಡ್ಡ ಪ್ರಮಾಣದ ಕ್ಷೇತ್ರ ಪರೀಕ್ಷೆಗಳಿಗಾಗಿ ಈ ತಳಿಯ ಬೀಜಗಳನ್ನು ಆಮದು ಮಾಡಿಕೊಂಡಿತ್ತು. ಜೊತೆಗೆ ಈ ತಳಿಯ ಕೃಷಿ ತಂತ್ರಜ್ಞಾನ ಮತ್ತು ನಿರ್ವಹಣೆಯ ಕುರಿತು ತಾಂತ್ರಿಕ ಮಾರ್ಗದರ್ಶನ ನೀಡಲು ಡಾ. ಆರ್. ಆರ್. ಹಂಚಿನಾಳ ಅವರನ್ನು ಸಲಹೆಗಾರರಾಗಿ ಆಹ್ವಾನಿಸಿತ್ತು.

100 ಟನ್ ಡಿಡಬ್ಲ್ಯೂಆರ್ 162 ಗೋಧಿ ಬೀಜಗಳ ಪೂರೈಕೆಗೆ ನಿರ್ಧಾರ

ಭಾರತದಲ್ಲಿ ಸಸ್ಯ ತಳಿಗಳು ಮತ್ತು ರೈತರ ಹಕ್ಕುಗಳ ಸಂರಕ್ಷಣಾ ಕಾಯ್ದೆ ಹಾಗೂ ಜೈವಿಕ ವೈವಿದ್ಯ ಕಾಯ್ದೆ ಜಾರಿಗೆ ಬಂದ ಪರಿಣಾಮ, ಇಂಡೋನೇಷ್ಯಾಗೆ ಉತ್ತಮ ಗುಣಮಟ್ಟದ ಡಿಡಬ್ಲ್ಯೂಆರ್ 162 ಬೀಜಗಳನ್ನು ಪೂರೈಸುವಲ್ಲಿ ಕೆಲವು ಅಡೆತಡೆಗಳು ಎದುರಾದವು. ಇದರಿಂದ ಇಂಡೋನೇಷ್ಯಾ ಸರ್ಕಾರ ಭಾರತ ಸರ್ಕಾರದೊಂದಿಗೆ ನಿರಂತರವಾಗಿ ಸಮಾಲೋಚನೆ ನಡೆಸಿ, ಕಾನೂನುಬದ್ಧ ಹಾಗೂ ಸಾಂಸ್ಥಿಕ ವ್ಯವಸ್ಥೆಗಳ ಮೂಲಕ ಬೀಜಗಳ ಪೂರೈಕೆಗೆ ಅವಕಾಶ ಕಲ್ಪಿಸಲು ಪ್ರಯತ್ನಿಸಿತ್ತು. ಇದರ ಭಾಗವಾಗಿ ಭಾರತವು ಧಾರವಾಡ ಕೃಷಿ ವಿಶ್ವವಿದ್ಯಾಲಯದಿಂದ ಉತ್ಪಾದಿಸಲಾದ 100 ಟನ್ ಉನ್ನತ ಗುಣಮಟ್ಟದ ಡಿಡಬ್ಲ್ಯೂಆರ್ 162 ಗೋಧಿ ಬೀಜಗಳನ್ನು ಇಂಡೋನೇಷ್ಯಾಗೆ ಪೂರೈಸಲು ನಿರ್ಧರಿಸಿದೆ.

ಇದನ್ನೂ ಓದಿ: ನಮ್ಮ ಬೆಂಗಳೂರಿನಿಂದ ಹೊರಡೋ ಈ 5 ವಂದೇ ಭಾರತ್ ರೈಲುಗಳಲ್ಲಿದೆ ಸೂಪರ್ ವೀಕೆಂಡ್ ಟ್ರಿಪ್ ಪ್ಲಾನ್

ಇನ್ನು ಭಾರತದ ಈ ಗೋಧಿಯನ್ನು ಖರೀದಿಸುವ ಇಂಡೋನೇಷ್ಯಾದ ಈ ಕ್ರಮವು ಆಹಾರ ಭದ್ರತಾ ಕಾರ್ಯಕ್ರಮಗಳಿಗೆ ಮಹತ್ವದ ಬೆಂಬಲ ಒದಗಿಸಲಿದೆ. ಭಾರತ ಮತ್ತು ಇಂಡೋನೇಷ್ಯಾ ನಡುವಿನ ದೀರ್ಘಕಾಲೀನ ಕೃಷಿ ಸಹಭಾಗಿತ್ವದಲ್ಲಿ ಇದೊಂದು ಮಹತ್ವದ ಮೈಲಿಗಲ್ಲಾಗಲಿದೆ. ಇಂಥದ್ದೊಂದು ಸಾಧನೆಗೆ ಕಾರಣವಾದ ಕೃಷಿ ವಿವಿಗೆ ಇದೊಂದು ಹೆಮ್ಮೆಯ ಸಂಗತಿಯೇ ಸರಿ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ದೇಶದ 400ಕ್ಕೂ ಹೆಚ್ಚು ಶಾಲೆಗಳಲ್ಲಿ ‘ರಾಮಾಯಣ’ ಸಿನಿಮಾದ ಭರ್ಜರಿ ಪ್ರಚಾರ – Kannada News | Ramayana Movie makers announce nationwide School Outreach Campaign Ranbir Kapoor Yash

ಭಾರತೀಯ ಚಿತ್ರರಂಗದ ಅತ್ಯಂತ ಪ್ರತಿಷ್ಠಿತ ಹಾಗೂ ಬಹುನಿರೀಕ್ಷಿತ ಸಿನಿಮಾಗಳಲ್ಲೊಂದಾದ ‘ರಾಮಾಯಣ’ (Ramayana) ಬಿಡುಗಡೆಗೆ ಸಿದ್ಥತೆ ನಡೆಯುತ್ತಿದೆ. ಇದೀಗ ಪ್ರೇಕ್ಷಕರನ್ನು ತಲುಪಲು ಚಿತ್ರತಂಡ ಅದ್ದೂರಿ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿದೆ. ದೇಶಾದ್ಯಂತ ಬೃಹತ್ ಶಾಲಾ ಅಭಿಯಾನವನ್ನು ಮಾಡಲು ನಿರ್ಮಾಪಕರು ಮುಂದಾಗಿದ್ದಾರೆ. ಜುಲೈ 9ರಿಂದಲೇ ಈ ಮಹತ್ವದ ಶಾಲಾ ಅಭಿಯಾನ ಆರಂಭವಾಗಿದೆ. ದೇಶದ 18 ಪ್ರಮುಖ ನಗರಗಳ 400ಕ್ಕೂ ಹೆಚ್ಚು ಶಾಲೆಗಳನ್ನು ತಲುಪುವ ಗುರಿ ಹೊಂದಲಾಗಿದೆ.

ಈ ಕಾರ್ಯಕ್ರಮದ ಮೂಲಕ ಬರೋಬ್ಬರಿ 5 ಲಕ್ಷಕ್ಕೂ ಅಧಿಕ ಶಾಲಾ ವಿದ್ಯಾರ್ಥಿಗಳಿಗೆ ರಾಮಾಯಣದ ಕಥೆ ಹಾಗೂ ಅದರಲ್ಲಿರುವ ಉದಾತ್ತ ಮೌಲ್ಯಗಳನ್ನು ಅತ್ಯಂತ ಆಕರ್ಷಕವಾಗಿ ಪರಿಚಯಿಸಲಾಗುತ್ತದೆ. ಈ ಸಿನಿಮಾದಲ್ಲಿ ಯಶ್, ರಣಬೀರ್ ಕಪೂರ್, ಸಾಯಿ ಪಲ್ಲವಿ, ಸನ್ನಿ ಡಿಯೋಲ್ ಮುಂತಾದವರು ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ.

ಏನಿದು ಅಭಿಯಾನ? ಇದರ ಉದ್ದೇಶವೇನು?

ಚಿತ್ರತಂಡವು ಕೇವಲ ಸಾಂಪ್ರದಾಯಿಕ ಪ್ರಚಾರಕ್ಕೆ ಸೀಮಿತವಾಗದೆ, ಮಕ್ಕಳಲ್ಲಿ ರಾಮಾಯಣದ ನೈಜ ಸಾರವನ್ನು ಮೂಡಿಸಲು ಯೋಜನೆ ರೂಪಿಸಿದೆ. ಇದಕ್ಕಾಗಿ ಶಾಲೆಗಳಲ್ಲಿ ರೇಖಾಚಿತ್ರ ಸ್ಪರ್ಧೆಗಳು, ರಸಪ್ರಶ್ನೆಗಳು ಹಾಗೂ ಸಂವಾದದ ರೀತಿಯ ವಿವಿಧ ಸೃಜನಶೀಲ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಇದು ಮಕ್ಕಳ ಜೊತೆಗೆ ಅವರ ಕುಟುಂಬದಲ್ಲೂ ರಾಮಾಯಣದ ಸಾಂಸ್ಕೃತಿಕ ಮಹತ್ವದ ಬಗ್ಗೆ ಚರ್ಚೆಗಳು ನಡೆಯಲು ಪ್ರೇರೇಪಿಸಲಿದೆ.

ಯುವ ಪೀಳಿಗೆಯನ್ನು ತಲುಪುವ ಪ್ರಯತ್ನ

‘ನಮ್ಮ ಸತ್ಯ. ನಮ್ಮ ಇತಿಹಾಸ’ ಎಂಬ ಶೀರ್ಷಿಕೆಯಡಿ ಈ ಕಾರ್ಯಕ್ರಮವನ್ನು ವಿನ್ಯಾಸಗೊಳಿಸಲಾಗಿದೆ. ಯುವ ಪೀಳಿಗೆಯು ಭಾರತದ ಸಾಂಸ್ಕೃತಿಕ ಪರಂಪರೆಯನ್ನು ಸಂಭ್ರಮಿಸುವಂತೆ ಮಾಡುವುದು ಇದರ ಮುಖ್ಯ ಉದ್ದೇಶವಾಗಿದೆ ಎಂದು ಚಿತ್ರತಂಡ ಹೇಳಿದೆ. ಚಿತ್ರದ ಬಿಡುಗಡೆಗೆ ಇನ್ನೂ ಸಾಕಷ್ಟು ಸಮಯ ಇದೆ. ಆದರೆ ಮುಂಚಿತವಾಗಿಯೇ ಇಂಥ ಹಲವು ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ.

ರಾಮಾಯಣದ ಮೌಲ್ಯ ತಿಳಿಸಲು ಕಾರ್ಯಕ್ರಮ

‘ರಾಮಾಯಣವು ತಲೆಮಾರುಗಳಿಂದ ಕಥೆಗಳು ಹಾಗೂ ನೈತಿಕ ಮೌಲ್ಯಗಳ ಮೂಲಕ ಜೀವಂತವಾಗಿದೆ. ಈ ಶಾಲಾ ಪ್ರಚಾರದ ಅಭಿಯಾನದಲ್ಲಿ ಮೂಲಕ ಆ ಭವ್ಯ ಪರಂಪರೆಯನ್ನು ಇಂದಿನ ಯುವ ಮನಸ್ಸುಗಳಿಗೆ ಅರ್ಥಪೂರ್ಣವಾಗಿ ತಲುಪಿಸುವುದು ನಮ್ಮ ಪ್ರಯತ್ನ. ಕೇವಲ ಪುರಾಣದ ಕಥೆಯಾಗಿ ಮಾತ್ರವಲ್ಲದೆ ಧೈರ್ಯ, ಕರ್ತವ್ಯ, ಪ್ರೀತಿ ಮತ್ತು ಧರ್ಮದ ಸಂದೇಶವಾಗಿ ಮಕ್ಕಳು ಇದನ್ನು ಗ್ರಹಿಸಬೇಕು’ ಎಂದು ಚಿತ್ರತಂಡ ಹೇಳಿದೆ.

ಇದನ್ನೂ ಓದಿ: ರಾಮಾಯಣ ಚಿತ್ರಕ್ಕೆ ಕರಣ್ ಜೋಹರ್ ಡಿಸ್ಟ್ರಿಬ್ಯೂಟರ್; ಕೇವಲ 250 ಕೋಟಿ ರೂ.ಗೆ ಡೀಲ್

‘ದಂಗಲ್’ ಖ್ಯಾತಿಯ ನಿರ್ದೇಶಕ ನಿತೇಶ್ ತಿವಾರಿ ಅವರು ‘ರಾಮಾಯಣ’ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ನಮಿತ್ ಮಲ್ಹೋತ್ರಾ ಅವರ ‘ಪ್ರೈಮ್ ಫೋಕಸ್ ಸ್ಟುಡಿಯೋಸ್’, ‘DNEG’ ಮತ್ತು ಯಶ್ ಅವರ ‘ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್’ ಜಂಟಿಯಾಗಿ ಈ ಸಿನಿಮಾವನ್ನು ದೊಡ್ಡ ಬಜೆಟ್‌ನಲ್ಲಿ ನಿರ್ಮಿಸುತ್ತಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕರ್ನಾಟಕ ಹೈಕೋರ್ಟ್ ಉದ್ಯೋಗ 2026: 10ನೇ ತರಗತಿ ಪಾಸಾದವರಿಗೆ ಸರ್ಕಾರಿ ಉದ್ಯೋಗದ ಅವಕಾಶ – Kannada News | Karnataka Judiciary Recruitment 2026: Notification, Selection Process & Last Date

ಕರ್ನಾಟಕ ಹೈಕೋರ್ಟ್ ನೇಮಕಾತಿ 2026Image Credit source: Getty Images

ಸರ್ಕಾರಿ ಉದ್ಯೋಗಕ್ಕಾಗಿ ಕಾಯುತ್ತಿರುವ ಅಭ್ಯರ್ಥಿಗಳಿಗೆ ಕರ್ನಾಟಕ ಹೈಕೋರ್ಟ್ (Karnataka High Court) ಸಿಹಿಸುದ್ದಿ ನೀಡಿದೆ. 2026ನೇ ಸಾಲಿನ ನೇಮಕಾತಿ ಅಧಿಸೂಚನೆ ಪ್ರಕಟವಾಗಿದ್ದು, ಒಟ್ಟು 106 ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಪಿಯೂನ್, ವಾಚ್‌ಮನ್, ಸ್ವೀಪರ್, ಲಿಫ್ಟ್ ಅಟೆಂಡರ್, ಅಸಿಸ್ಟೆಂಟ್ ಬೈಂಡರ್, ಟೈಲರ್ ಹಾಗೂ ಧೋಬಿ ಹುದ್ದೆಗಳು ಇದರಲ್ಲಿ ಸೇರಿವೆ. 10ನೇ ತರಗತಿ (SSLC) ಉತ್ತೀರ್ಣರಾದ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಆಸಕ್ತ ಅಭ್ಯರ್ಥಿಗಳು 2026ರ ಜುಲೈ 31ರೊಳಗೆ ಕರ್ನಾಟಕ ಹೈಕೋರ್ಟ್ ಅಧಿಕೃತ ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು.

ಹುದ್ದೆಗಳ ವಿವರ:

  • ಪಿಯೂನ್ / ವಾಚ್‌ಮನ್ / ಸ್ವೀಪರ್ 98
  • ಲಿಫ್ಟ್ ಅಟೆಂಡರ್- 5
  • ಅಸಿಸ್ಟೆಂಟ್ ಬೈಂಡರ್- 1
  • ಟೈಲರ್- 1
  • ಧೋಬಿ- 1
  • ಒಟ್ಟು 106

ವಿದ್ಯಾರ್ಹತೆ ಮತ್ತು ವೇತನ

ಅಭ್ಯರ್ಥಿಗಳು ಮಾನ್ಯತೆ ಪಡೆದ ಶಿಕ್ಷಣ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ SSLC / 10ನೇ ತರಗತಿ ಉತ್ತೀರ್ಣರಾಗಿರಬೇಕು.

ಪಿಯೂನ್ / ವಾಚ್‌ಮನ್ / ಸ್ವೀಪರ್ ರೂ. 19,900 – 63,200
ಲಿಫ್ಟ್ ಅಟೆಂಡರ್- ರೂ. 21,700 – 69,100
ಅಸಿಸ್ಟೆಂಟ್ ಬೈಂಡರ್- ರೂ.19,900 – 63,200
ಟೈಲರ್ – ರೂ.21,700 – 69,100
ಧೋಬಿ- ರೂ. 19,900 – 63,200

ವಯೋಮಿತಿ

ಕನಿಷ್ಠ ವಯಸ್ಸು: 18 ವರ್ಷ
ಗರಿಷ್ಠ ವಯಸ್ಸು: 40 ವರ್ಷ

ವಯೋಮಿತಿ ಸಡಿಲಿಕೆ

SC / ST / ಪ್ರವರ್ಗ-1 ಅಭ್ಯರ್ಥಿಗಳು – 5 ವರ್ಷ
2A / 2B / 3A / 3B ಅಭ್ಯರ್ಥಿಗಳು – 3 ವರ್ಷ

ಅರ್ಜಿ ಶುಲ್ಕ

SC / ST / ಪ್ರವರ್ಗ-1 / PwBD – ರೂ.100
ಸಾಮಾನ್ಯ / 2A / 2B / 3A / 3B – ರೂ.200

ಆಯ್ಕೆ ಪ್ರಕ್ರಿಯೆ:

ಅಭ್ಯರ್ಥಿಗಳ ಆಯ್ಕೆ ಈ ಕೆಳಗಿನ ಹಂತಗಳಲ್ಲಿ ನಡೆಯಲಿದೆ.

ಲಿಖಿತ ಪರೀಕ್ಷೆ: ಅಭ್ಯರ್ಥಿಗಳ ಸಾಮಾನ್ಯ ಜ್ಞಾನ, ಭಾಷಾ ಸಾಮರ್ಥ್ಯ ಹಾಗೂ ಮೂಲಭೂತ ಅರ್ಹತೆಯನ್ನು ಪರೀಕ್ಷಿಸಲಾಗುತ್ತದೆ.

ಸಂದರ್ಶನ: ಲಿಖಿತ ಪರೀಕ್ಷೆಯಲ್ಲಿ ಅರ್ಹರಾದ ಅಭ್ಯರ್ಥಿಗಳಿಗೆ ಸಂದರ್ಶನ ನಡೆಸಲಾಗುತ್ತದೆ.

ದಾಖಲೆ ಪರಿಶೀಲನೆ: ಆಯ್ಕೆಯಾದ ಅಭ್ಯರ್ಥಿಗಳ ಮೂಲ ದಾಖಲೆಗಳನ್ನು ಪರಿಶೀಲಿಸಿ ಅಂತಿಮ ನೇಮಕಾತಿ ಆದೇಶ ನೀಡಲಾಗುತ್ತದೆ.

ಇದನ್ನೂ ಓದಿ: ಉದ್ಯೋಗಾಕಾಂಕ್ಷಿಗಳಿಗೆ ಸುವರ್ಣಾವಕಾಶ: ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ 7,925 ಹುದ್ದೆಗಳ ನೇಮಕಾತಿ

ಅರ್ಜಿ ಸಲ್ಲಿಸುವ ವಿಧಾನ:

ಹಂತ 1: ಕರ್ನಾಟಕ ಹೈಕೋರ್ಟ್ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.

ಹಂತ 2: Recruitment ವಿಭಾಗದಲ್ಲಿ 2026ರ ಅಧಿಸೂಚನೆಯನ್ನು ಓದಿ.

ಹಂತ 3: ಅರ್ಜಿ ಫಾರ್ಮ್‌ನಲ್ಲಿ ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿ.

ಹಂತ 4: ಪಾಸ್‌ಪೋರ್ಟ್ ಗಾತ್ರದ ಫೋಟೋ, ಸಹಿ ಹಾಗೂ ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ.

ಹಂತ 5: ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಿ.

ಹಂತ 6: ಅರ್ಜಿಯನ್ನು ಸಲ್ಲಿಸಿದ ನಂತರ ಅದರ ಪ್ರಿಂಟ್ ಅಥವಾ ಅರ್ಜಿ ಸಂಖ್ಯೆಯನ್ನು ಸೇವ್ ಮಾಡಿಕೊಳ್ಳಿ

ಅಭ್ಯರ್ಥಿಗಳು ಗಮನಿಸಬೇಕಾದ ವಿಷಯಗಳು:

  • ಅರ್ಜಿ ಸಲ್ಲಿಸುವ ಮೊದಲು ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಬೇಕು.
  • ಹೆಸರು, ಜನ್ಮ ದಿನಾಂಕ ಹಾಗೂ ಶೈಕ್ಷಣಿಕ ಮಾಹಿತಿಯನ್ನು ಸರಿಯಾಗಿ ನಮೂದಿಸಬೇಕು.
  • ತಪ್ಪು ಮಾಹಿತಿ ನೀಡಿದರೆ ಅರ್ಜಿ ತಿರಸ್ಕರಿಸಬಹುದು.
  • ಕೊನೆಯ ದಿನಾಂಕದವರೆಗೆ ಕಾಯದೇ ಮುಂಚಿತವಾಗಿಯೇ ಅರ್ಜಿ ಸಲ್ಲಿಸುವುದು ಉತ್ತಮ.

ಅಧಿಕೃತ ವೆಬ್‌ಸೈಟ್: https://judiciary.karnataka.gov.in

ಸಾಮಾನ್ಯವಾಗಿ ಕೇಳುವ ಪ್ರಶ್ನೆಗಳು ಮತ್ತು ಉತ್ತರಗಳು (FAQs)

ಕರ್ನಾಟಕ ಹೈಕೋರ್ಟ್ ನೇಮಕಾತಿ 2026ರಲ್ಲಿ ಎಷ್ಟು ಹುದ್ದೆಗಳಿವೆ?

ಉತ್ತರ: ಒಟ್ಟು 106 ಹುದ್ದೆಗಳು ಭರ್ತಿಯಾಗಲಿವೆ.

ಅರ್ಜಿ ಸಲ್ಲಿಸಲು ಕನಿಷ್ಠ ವಿದ್ಯಾರ್ಹತೆ ಏನು?

ಉತ್ತರ:  SSLC / 10ನೇ ತರಗತಿ ಉತ್ತೀರ್ಣರಾಗಿರಬೇಕು.

ಆಯ್ಕೆ ಪ್ರಕ್ರಿಯೆಯಲ್ಲಿ ಲಿಖಿತ ಪರೀಕ್ಷೆ ಇದೆಯೇ?

ಉತ್ತರ: ಹೌದು. ಲಿಖಿತ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು?

ಉತ್ತರ: 31 ಜುಲೈ 2026.

ವೇತನ ಎಷ್ಟು ಸಿಗಲಿದೆ?

ಉತ್ತರ:  ಹುದ್ದೆಗೆ ಅನುಗುಣವಾಗಿ ರೂ. 19,900 ರಿಂದ ರೂ. 69,100 ಮಾಸಿಕ ವೇತನ ದೊರೆಯಲಿದೆ.

ಉದ್ಯೋಗಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Source link

ಸೌತ್ ಇಂಡಿಯಾ ವುಮನ್ ಅಚೀವರ್ಸ್ ಅವಾರ್ಡ್ಸ್‌ 2026: ಬೆಂಗಳೂರಿನ ಶೋಭಾ ನವೀನ್‌ಗೆ ‘ಚೇಂಜ್ ಮೇಕರ್’ ಪ್ರಶಸ್ತಿ – Kannada News | Bengaluru’s Shobha Naveen Honored with ‘Change Maker’ Title at South India Woman Achievers Awards 2026

ಪ್ರಶಸ್ತಿ ಸ್ವೀಕರಿಸಿದ ಶೋಭಾ ನವೀನ್

ಬೆಂಗಳೂರು, ಜುಲೈ 10: ಪ್ರತಿಷ್ಠಿತ ಸೌತ್ ಇಂಡಿಯಾ ವುಮನ್ ಅಚೀವರ್ಸ್ ಅವಾರ್ಡ್ಸ್ 2026 (SIWAA) ಪ್ರಶಸ್ತಿಗೆ ಬೆಂಗಳೂರು ಮೂಲದ ಶೋಭಾ ನವೀನ್ ಅವರು ಭಾಜನರಾಗಿದ್ದಾರೆ. ಜೂನ್ 21ರಂದು ನಗರದ ಜವಾಹರಲಾಲ್ ನೆಹರು ಸೆಂಟರ್ ಆಡಿಟೋರಿಯಂನಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗಿದ್ದು, ‘ಚೇಂಜ್ ಮೇಕರ್’ ವಿಭಾಗದಲ್ಲಿ ಅಚೀವರ್ಸ್ ಅವಾರ್ಡ್ಸ್ ಪಡೆಯುವ ಮೂಲಕ ರಾಜ್ಯಕ್ಕೆ ಅವರು ಹೆಮ್ಮೆ ತಂದಿದ್ದಾರೆ. ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡಿದ ಮಹಿಳೆಯರನ್ನು ಗುರುತಿಸಿ ಗೌರವಿಸುವ ಉದ್ದೇಶದಿಂದ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ.

ವಿಶ್ವದಾಖಲೆ ಬರೆದ ಕಾರ್ಯಕ್ರಮ

2019ರಲ್ಲಿ ಆರಂಭವಾದ ಸೌತ್ ಇಂಡಿಯಾ ವುಮನ್ ಅಚೀವರ್ಸ್ ಅವಾರ್ಡ್ಸ್ ಈ ಬಾರಿ ತನ್ನ 10ನೇ ಆವೃತ್ತಿಯನ್ನು ಆಚರಿಸಿದೆ. ಈ ವರ್ಷದ ಪ್ರಶಸ್ತಿಗಾಗಿ ಸುಮಾರು 60 ಸಾವಿರಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದು, ಅವುಗಳಲ್ಲಿ ಆಯ್ಕೆಯಾದ ಸುಮಾರು 200 ಮಹಿಳಾ ಸಾಧಕರಿಗೆ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಅಲ್ಲದೆ, ಹಿಂದೂಸ್ತಾನ್ ಬುಕ್ ಆಫ್ ರೆಕಾರ್ಡ್ಸ್ ಸಹಯೋಗದಲ್ಲಿ ಒಂದೇ ದಿನ 200 ಮಹಿಳೆಯರನ್ನು ಸನ್ಮಾನಿಸುವ ಮೂಲಕ ಈ ಕಾರ್ಯಕ್ರಮ ವಿಶ್ವದಾಖಲೆಯನ್ನೂ ನಿರ್ಮಿಸಿದೆ. ಚೇಂಜ್ ಮೇಕರ್ ವಿಭಾಗದಲ್ಲಿ ಪ್ರಶಸ್ತಿ ಪಡೆದಿರುವ ಶೋಭಾ ನವೀನ್ ಅವರ ಸಾಧನೆಗೆ ವಿವಿಧ ವಲಯಗಳಿಂದ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ವಿಜಯಪುರ: ಡಿವೈಡರ್‌ಗೆ ಕಾರು ಡಿಕ್ಕಿ; ಇಬ್ಬರು ಪುತ್ರರು ಸೇರಿದಂತೆ ತಾಯಿಯೂ ಸಾವು – Kannada News | Three Family Members death in Tragic Car Accident on NH 50 Near Managuli

ವಿಜಯಪುರ, ಜುಲೈ 10: ನಿಯಂತ್ರಣ ತಪ್ಪಿ ಕಾರೊಂದು ರಸ್ತೆ ಡಿವೈಡರ್‌ಗೆ ಡಿಕ್ಕಿ (Accident) ಹೊಡೆದ ಪರಿಣಾಮ, ಇಬ್ಬರು ಪುತ್ರರು ಸೇರಿದಂತೆ ತಾಯಿ ಸ್ಥಳದಲ್ಲೇ ಸಾವನ್ನಪ್ಪಿರುವ (death) ಘಟನೆ ವಿಜಯಪುರ (vijayapura) ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಸಮೀಪದ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ನಡೆದಿದೆ. ತಾಯಿ ಸತ್ಯವೇಣಿ(38), ಪುತ್ರರಾದ ಹರಿವೆಂಕಟರಾಮ್(20) ಮತ್ತು ಜಶ್ವಂತ(18) ಮೃತರು. ತಂದೆ ರಾಘವೇಂದ್ರ(41)ಗೆ ಗಂಭೀರ ಗಾಯವಾಗಿದೆ.

ನಿದ್ದೆಯ ಮಂಪರೇ ದುರಂತಕ್ಕೆ ಕಾರಣ?

ಕುಟುಂಬವು ಕೊಪ್ಪಳ ಜಿಲ್ಲೆಯ ಕಾರಟಗಿಯಿಂದ ಶಿರಡಿಗೆ ಹೊರಟಿದ್ದರು. 20 ವರ್ಷದ ಮಗ ಹರಿವೆಂಕಟರಾಮ್​​ ಕಾರು ಚಲಾಯಿಸುತ್ತಿದ್ದ. ಈ ವೇಳೆ ಡಿವೈಡರ್​ಗೆ ಕಾರು ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ನಿದ್ದೆ ಮಂಪರಿನಲ್ಲಿ ಅವಘಡ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ. ಇನ್ನು ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣವಾಗಿ ಜಖಂಗೊಂಡಿದೆ.

ಇದನ್ನೂ ಓದಿ: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಕಾರು ಅಡ್ಡಗಟ್ಟಿ ಚಾಲಕನ ಮೇಲೆ ಹಲ್ಲೆ: ವಿಡಿಯೋ ವೈರಲ್

ಇನ್ನು ಘಟನಾ ಸ್ಥಳಕ್ಕೆ ಮನಗೂಳಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಕುರಿತು ಮನಗೂಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಕಾರಿಗೆ ಡಿಕ್ಕಿ ಹೊಡೆದ ಲಾರಿ: ಓರ್ವ ಸಾವು, ಇಬ್ಬರ ಸ್ಥಿತಿ ಗಂಭೀರ

ಕಾರು ಮತ್ತು ಲಾರಿ ಡಿಕ್ಕಿಯಾಗಿ ಓರ್ವ ಸಾವನ್ನಪ್ಪಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ. ಕಲಬುರಗಿ ಹೊರವಲಯದಲ್ಲಿರುವ ಹೈಕೋರ್ಟ್ ಕ್ರಾಸ್ ಬಳಿ ಘಟನೆ ನಡೆದಿದೆ. ವೇಗವಾಗಿ ಬಂದು ಕಾರಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಕಾರು ಸಂಪೂರ್ಣ ನಜುಗುಜ್ಜಾಗಿದೆ.

ಇದನ್ನೂ ಓದಿ: ಮಣಿಪಾಲ ಬಳಿ ಕಂದಕಕ್ಕೆ ಉರುಳಿದ ಶಾಲಾ ಬಸ್: ಎಂಟು ಮಕ್ಕಳಿಗೆ ಗಾಯ

ಕಾರಿನಲ್ಲಿದ್ದ ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಡಿಸಿಪಿ ಶಾಲೂ ಸೇರಿ ಹಿರಿಯ ಪೋಲಿಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಕಲಬುರಗಿ ಟ್ರಾಫಿಕ್-01 ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 8:53 pm, Fri, 10 July 26

Source link

ಸತತ ಸೋಲುಗಳು; ಗಂಭೀರ್, ಅಯ್ಯರ್ ಜೊತೆಗೆ ಬಿಸಿಸಿಐ ಪರಿಶೀಲನಾ ಸಭೆ – Kannada News | Team India T20 Crisis: BCCI to Review Gautam Gambhir, Shreyas Iyer After Ireland and England Losses

ಹಾಲಿ ಟಿ20 ಚಾಂಪಿಯನ್ ಎಂಬ ಪಟ್ಟದೊಂದಿಗೆ ಐರ್ಲೆಂಡ್ ಹಾಗೂ ಇಂಗ್ಲೆಂಡ್‌ ಪ್ರವಾಸ ಮಾಡಿದ್ದ ಟೀಂ ಇಂಡಿಯಾ (Team India), ಒಂದೇ ಒಂದು ಗೆಲುವಿಗಾಗಿ ಹಾತೋರೆಯುವಂತ್ತಾಗಿದೆ. ಇದುವರೆಗೆ 6 ಟಿ20 ಪಂದ್ಯಗಳನ್ನಾಡಿರುವ ಶ್ರೇಯಸ್ ಅಯ್ಯರ್ (Shreyas Iyer) ಪಡೆ 5 ಪಂದ್ಯಗಳನ್ನು ಸೋತಿದ್ದು, ಉಳಿದ ಒಂದು ಪಂದ್ಯ ಮಳೆಯಿಂದ ರದ್ದಾಗಿದೆ. ಅಂದರೆ ಈ ಎರಡೂ ಪ್ರವಾಸಗಳಲ್ಲಿ ಭಾರತಕ್ಕೆ ಒಂದೇ ಒಂದು ಪಂದ್ಯವನ್ನು ಗೆಲ್ಲಲು ಸಾಧ್ಯವಾಗಿಲ್ಲ. ತಂಡದ ಈ ಕಳಪೆ ಪ್ರದರ್ಶನ ವಿಶ್ವ ಕ್ರಿಕೆಟ್​ನ ದೊಡ್ಡಣ್ಣ ಬಿಸಿಸಿಐಗೆ ದೊಡ್ಡ ತಲೆನೋವು ತಂದಿದೆ. ತಂಡದ ಈ ಕಳಪೆ ಪ್ರದರ್ಶನವನ್ನು ಆರಂಭದಲ್ಲೇ ಸರಿಪಡಿಸದಿದ್ದರೆ, ಅದು ತನ್ನ ಆದಾಯದ ಮೂಲಕ್ಕೆ ದೊಡ್ಡ ಹೊಡೆತ ನೀಡಲಿದೆ ಎಂಬುದು ಬಿಸಿಸಿಐಗೆ ಗೊತ್ತು. ಹೀಗಾಗಿ ಎರಡು ಸರಣಿ ಸೋಲುಗಳ ಬಳಿಕ ಎಚ್ಚೆತ್ತುಕೊಂಡಿರುವ ಬಿಸಿಸಿಐ, ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಹಾಗೂ ನಾಯಕ ಶ್ರೇಯಸ್ ಅಯ್ಯರ್ ಅವರೊಂದಿಗೆ ಪರಿಶೀಲನಾ ಸಭೆ ನಡೆಸಲು ತೀರ್ಮಾನಿಸಿದೆ.

ಪರಿಶೀಲನಾ ಸಭೆ

ಟೀಂ ಇಂಡಿಯಾದ ಪ್ರದರ್ಶನದ ಬಗ್ಗೆ ತಮಗೆ ಕಳವಳವಿದೆ ಎಂದು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಹೇಳಿರುವುದಾಗಿ ಇಂಡಿಯಾ ಟುಡೇ ವರದಿ ಮಾಡಿದೆ. ಹೀಗಾಗಿ ಇಂಗ್ಲೆಂಡ್‌ ವಿರುದ್ಧದ ಸರಣಿ ಮುಗಿದ ನಂತರ ನಾಯಕ ಶ್ರೇಯಸ್ ಅಯ್ಯರ್ ಮತ್ತು ತರಬೇತುದಾರ ಗೌತಮ್ ಗಂಭೀರ್ ಅವರೊಂದಿಗೆ ಪರಿಶೀಲನಾ ಸಭೆ ನಡೆಸಲಿದ್ದು, ತಂಡದಲ್ಲಿರುವ ನ್ಯೂನತೆಗಳನ್ನು ಸರಿಪಡಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು. ಈ ಮೂಲಕ ಭಾರತ ಟಿ20 ತಂಡವು ತನ್ನ ಹಳೆಯ ಲಯಕ್ಕೆ ಮರಳಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಸೈಕಿಯಾ ತಿಳಿಸಿರುವುದಾಗಿ ವರದಿ ಮಾಡಿದೆ.

ಐರ್ಲೆಂಡ್‌ನಲ್ಲಿ ಕ್ಲೀನ್ ಸ್ವೀಪ್

ಟೀಂ ಇಂಡಿಯಾದ ಯುಕೆ ಪ್ರವಾಸವು ಐರ್ಲೆಂಡ್ ವಿರುದ್ಧದ ಟಿ20 ಸರಣಿಯೊಂದಿಗೆ ಪ್ರಾರಂಭವಾಯಿತು. ಅಲ್ಲಿ ಭಾರತ ಎರಡು ಪಂದ್ಯಗಳ ಟಿ20 ಸರಣಿಯಲ್ಲಿ ಕ್ಲೀನ್ ಸ್ವೀಪ್ ಮುಜುಗರಕ್ಕೀಡಾಯಿತು. ಶ್ರೇಯಸ್ ಅಯ್ಯರ್ ನಾಯಕನಾಗಿ ನಡೆದ ಮೊದಲ ಟಿ20 ಸರಣಿಯಲ್ಲಿ ಟೀಂ ಇಂಡಿಯಾ, ಐರ್ಲೆಂಡ್ ವಿರುದ್ಧ ಟಿ20 ಪಂದ್ಯ ಮತ್ತು ಸರಣಿ ಸೋತ ಬೇಡದ ದಾಖಲೆ ಬರೆದಿತ್ತು.

IND vs ENG: 14 ವರ್ಷಗಳ ನಂತರ ಭಾರತದ ವಿರುದ್ಧ ಟಿ20 ಸರಣಿ ಗೆದ್ದ ಇಂಗ್ಲೆಂಡ್‌

ಇಂಗ್ಲೆಂಡ್‌ನಲ್ಲೂ ಸರಣಿ ಸೋಲು

ಐರ್ಲೆಂಡ್ ನಂತರ ಟೀಂ ಇಂಡಿಯಾ ಇಂಗ್ಲೆಂಡ್‌ಗೆ ಪ್ರಯಾಣಿಸಿತ್ತು. ಆದರೆ ಅಲ್ಲಿಯೂ ಪರಿಸ್ಥಿತಿ ಬದಲಾಗಲಿಲ್ಲ. ಐದು ಪಂದ್ಯಗಳ ಟಿ20 ಸರಣಿಯನ್ನು ಭಾರತ 3-0 ಅಂತರದಿಂದ ಕಳೆದುಕೊಂಡಿದೆ. ಒಂದು ಪಂದ್ಯ ಮಳೆಯಿಂದ ರದ್ದಾಗಿದ್ದರೆ, ಇಂಗ್ಲೆಂಡ್ ಮೂರು ಪಂದ್ಯಗಳನ್ನು ಗೆದ್ದುಕೊಂಡಿದೆ. ಈಗ, ಟೀಂ ಇಂಡಿಯಾ ಕ್ಲೀನ್ ಸ್ವೀಪ್​ನಿಂದ ಪಾರಾಗಲು ಮತ್ತು ಟಿ20 ಶ್ರೇಯಾಂಕದಲ್ಲಿ ಅಗ್ರಸ್ಥಾನವನ್ನು ಉಳಿಸಿಕೊಳ್ಳಬೇಕೆಂದರೆ ಉಳಿದಿರುವ ಕೊನೆಯ ಪಂದ್ಯದಲ್ಲಿ ಗೆಲ್ಲಲೇಬೇಕಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಯಾರೇ ಲಂಚ ಕೇಳಿದರೂ ಕೊಡೋದಿಲ್ಲ ಹೇಳಿ; ಕರೂರಿನಲ್ಲಿ ಭ್ರಷ್ಟಾಚಾರದ ವಿರುದ್ಧ ಗುಡುಗಿದ ಸಿಎಂ ವಿಜಯ್ – Kannada News | If anyone demands a bribe from you just say wont pay it Tamil Nadu Chief Minister Vijay says to people

ಕರೂರ್, ಜುಲೈ 10: ಇಂದು ತಮಿಳುನಾಡಿನ ಕರೂರ್‌ನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ವಿಜಯ್ (CM Vijay), “ನಿಮ್ಮ ಬಳಿ ಯಾರೇ ಲಂಚ ಕೇಳಿದರೂ ನೀವು ಅದನ್ನು ಕಟ್ಟುನಿಟ್ಟಾಗಿ ನಿರಾಕರಿಸಬೇಕು” ಎಂದು ಘೋಷಿಸಿದ್ದಾರೆ. ನಿಮ್ಮ ಜೊತೆಗೆ ನಾನಿದ್ದೇನೆ. ಲಂಚ ಕೊಡುವಂತಿಲ್ಲ ಎಂದು ಮುಖ್ಯಮಂತ್ರಿಗಳೇ ಹೇಳಿದ್ದಾರೆ ಎಂದು ಹೇಳಿ. ಹಾಗೆ ನಿರಾಕರಿಸುವ ಜನರ ಪರವಾಗಿ ರಾಜ್ಯದ ಮುಖ್ಯಮಂತ್ರಿಯಾಗಿ ನಾನು ಸಂಪೂರ್ಣ ಬೆಂಬಲವಾಗಿ ನಿಲ್ಲಲಿದ್ದೇನೆ ಎಂಬ ಭರವಸೆಯನ್ನೂ ನೀಡಿದ್ದಾರೆ.

ಇದೇವೇಳೆ, ತಮ್ಮ 55 ದಿನಗಳ ಆಡಳಿತದಲ್ಲಿ ಮಾಡಿದ ಬದಲಾವಣೆಗಳನ್ನು ಪಟ್ಟಿ ಮಾಡಿದ ಸಿಎಂ ವಿಜಯ್, “ಲಂಚ ಮತ್ತು ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಲು ಸಾಧ್ಯವಿಲ್ಲ, ಅದು ನಮ್ಮ ರಕ್ತದಲ್ಲಿ ಬೇರೂರಿದೆ ಎಂದು ಹೇಳುವವರ ಬಾಯಿ ಮುಚ್ಚಿಸಲು ಇಂದು ಸರ್ಕಾರಿ ಕಚೇರಿಗಳಲ್ಲಿ ಒಂದು ಪೈಸೆ ಲಂಚ ಅಥವಾ ಭ್ರಷ್ಟಾಚಾರವಿಲ್ಲದೆ ಕೆಲಸಗಳು ಟಕಟಕನೆ ನಡೆಯುತ್ತಿವೆ” ಎಂದು ಹೇಳಿದರು. ಪ್ರಸ್ತುತ ಆಡಳಿತದಲ್ಲಿ ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡುವ ಸಾರ್ವಜನಿಕರನ್ನು ಸರಿಯಾದ ಗೌರವ ಮತ್ತು ಸೂಕ್ತ ಆಸನಗಳೊಂದಿಗೆ ನಡೆಸಿಕೊಂಡಿದ್ದಕ್ಕಾಗಿ ಅಧಿಕಾರಿಗಳನ್ನು ವೃದ್ಧರೊಬ್ಬರು ಹೊಗಳಿದ್ದನ್ನು ಅವರು ಹಂಚಿಕೊಂಡರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

BJP-JDS ನಡುವೆ ಸಮನ್ವಯ ಸಮಿತಿ ರಚನೆಗೆ ನಿರ್ಧಾರ: ರಾಜ್ಯ ಸರ್ಕಾರದ ವಿರುದ್ಧದ ಜಂಟಿ ಹೋರಾಟಕ್ಕೂ ತೀರ್ಮಾನ – Kannada News | BJP JDS Alliance Decides to Form Coordination Committee; Resolves to Launch Joint Protest Against State Government

ಬಿ.ವೈ. ವಿಜಯೇಂದ್ರ ಮತ್ತು ಹೆಚ್​​.ಡಿ. ಕುಮಾರಸ್ವಾಮಿImage Credit source: BY Vijayendra X Account

ಬೆಂಗಳೂರು, ಜುಲೈ 10: ರಾಜ್ಯ ಸರ್ಕಾರದ ವಿರುದ್ಧದ ಹೋರಾಟ ಮತ್ತು ಉಪಚುನಾವಣೆಗಳ ಹಿನ್ನೆಲೆಯಲ್ಲಿ ಮೈತ್ರಿ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಎಸ್​​ನ ರಾಜ್ಯಾಧ್ಯಕ್ಷರು ಬೆಂಗಳೂರಿನಲ್ಲಿ ಚರ್ಚೆ ನಡೆಸಿದ್ದಾರೆ. ಸಮನ್ವಯ ಸಮಿತಿ ರಚನೆ ಬಗ್ಗೆ ಈ ವೇಳೆ ತೀರ್ಮಾನಿಸಲಾಗಿದ್ದು, ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಡುವಿನ ಮೈತ್ರಿ ಮತ್ತಷ್ಟು ಗಟ್ಟಿಗೊಳ್ಳಲು ಈ ಸಮಿತಿ ರಚನೆಯಾಗಬೇಕು ಎಂಬುದು ದೀರ್ಘ ಕಾಲದ ಬೇಡಿಕೆಯೂ ಆಗಿತ್ತು. ಇದೀಗ ಆ ಬಗ್ಗೆ ತೀರ್ಮಾನ ಆಗಿದ್ದು, ಶೀಘ್ರದಲ್ಲೇ ಸಮಿತಿ ಘೋಷಣೆ ಆಗಲಿದೆ.

ಸಮನ್ವಯ ಸಮಿತಿಯಲ್ಲಿ ಯಾರ್ಯಾರಿಗೆ ಸ್ಥಾನ?

ಸಮನ್ವಯ ಸಮಿತಿಗೆ ಸದಸ್ಯರನ್ನಾಗಿ ಬಿಜೆಪಿಯಿಂದ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಪಕ್ಷ ನಾಯಕ ಆರ್. ಅಶೋಕ್ ಮತ್ತು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರನ್ನು ಹೆಸರಿಸಲಾಗಿದೆ. ಜೆಡಿಎಸ್​​ನಿಂದ ಹೆಚ್‌.ಡಿ. ಕುಮಾರಸ್ವಾಮಿ ಅವರೊಂದಿಗೆ ಇನ್ನಿಬ್ಬರು ಸಮಿತಿ ಸದಸ್ಯರಾಗಲಿದ್ದಾರೆ‌. ಒಟ್ಟು ಆರು ಜನ ಸದಸ್ಯರನ್ನು ಒಳಗೊಂಡಿರುವ ಸಮನ್ವಯ ಸಮಿತಿಯನ್ನು ರಚನೆಗೆ ನಾಯಕರು ತೀರ್ಮಾನಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಉಪ ಚುನಾವಣೆ ಘೋಷಣೆಗೂ ಮುನ್ನವೇ ಹಿರಿಯೂರು ಕ್ಷೇತ್ರದ ಮೇಲೆ ದಳಪತಿಗಳ ಕಣ್ಣು; ತೆರೆಮರೆಯಲ್ಲಿ ಹೆಚ್‌ಡಿಕೆ ತಂತ್ರಗಾರಿಕೆ

ಮಾತುಕತೆ ವೇಳೆ ಬೇರೆ ಏನೆಲ್ಲ ಚರ್ಚೆ?

ಮೈತ್ರಿ ಪಕ್ಷಗಳ ನಾಕಯಕರ ಮಾತುಕತೆ ವೇಳೆ ಹಿರಿಯೂರು ಉಪಚುನಾವಣೆ ಬಗ್ಗೆ ಪ್ರಸ್ತಾಪ ಮಾಡಲಾಗಿದೆ. ಹಿರಿಯೂರು ಕ್ಷೇತ್ರ ನಮಗೆ ಬಿಟ್ಟು ಬಿಡಿ ಎಂದು ಕುಮಾರಸ್ವಾಮಿ ಅವರು ಹೇಳಿದ್ದು, ಈ ಹಿಂದೆ ಹಿರಿಯೂರಿನಲ್ಲಿ ಬಿಜೆಪಿ ಗೆದ್ದಿದ್ದ ಬಗ್ಗೆ ವಿಜಯೇಂದ್ರ ತಿಳಿಸಿದ್ದಾರೆ. ಇನ್ನು ನಾಲ್ಕು ವಿಧಾನ ಪರಿಷತ್ ಚುನಾವಣೆಯಲ್ಲಿ ಮೂರು ಕ್ಷೇತ್ರಗಳಲ್ಲಿ ಬಿಜೆಪಿಗೆ ಜೆಡಿಎಸ್ ಸಹಕಾರವನ್ನು ವಿಜಯೇಂದ್ರ ಕೇಳಿದ್ದು, ರಾಜ್ಯ ಸರ್ಕಾರದ ವಿರುದ್ಧದ ಹೋರಾಟಗಳ ಬಗ್ಗೆ ಜಂಟಿ ಚರ್ಚೆ ಮಾಡಿಯೇ ಮುಂದುವರಿಯಲು ತೀರ್ಮಾನ ಮಾಡಲಾಗಿದೆ.

ಸಭೆ ಬಳಿಕ ಮಾತನಾಡಿರುವ ಹೆಚ್​​ಡಿಕೆ, ಮನ್ವಯ ಸಮಿತಿ ರಚನೆ ಬಗ್ಗೆ ವಿಜಯೇಂದ್ರ ಜತೆ ಚರ್ಚಿಸಿದ್ದೇನೆ. ಅಲ್ಲದೇ ಇತ್ತೀಚಿನ ಬೆಳವಣಿಗೆಗಳ ಬಗ್ಗೆಯೂ ಮಾತನಾಡಿದ್ದೇವೆ ಎಂದಿದ್ದಾರೆ. ರಾಜ್ಯದ ವಿದ್ಯಮಾನಗಳ ಬಗ್ಗೆ ಹೆಚ್​ಡಿಕೆ ಜೊತೆ ಚರ್ಚೆ ಮಾಡಿದ್ದೇನೆ. ಸಮಸ್ಯೆಗಳಿದ್ದರೆ ಕುಳಿತು ಚರ್ಚಿಸಿ ಹೋರಾಟ ಮಾಡೋಣ ಎಂದಿದ್ದಾರೆ. ಒಟ್ಟಾಗಿ ಹೋಗಬೇಕು ಎಂಬುದು ರಾಷ್ಟ್ರೀಯ ನಾಯಕರ ಅಪೇಕ್ಷೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಕೂಡ ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 8:34 pm, Fri, 10 July 26

Source link

‘ಮೈನಾ’ ಸೀರಿಯಲ್ ವಿಶೇಷ ಸಂಚಿಕೆಗಳು; ಕಬಡ್ಡಿ ಅಖಾಡದಲ್ಲಿ ಧೂಳೆಬ್ಬಿಸಿದ ಧನುಷ್

Source link

ಜಮ್ಮು-ಕಾಶ್ಮೀರವನ್ನು ಪಾಕ್ ಭಾಗವೆಂದು ತೋರಿಸಿದ ಬಾಂಗ್ಲಾ; ಭಾರತೀಯ ರಾಜತಾಂತ್ರಿಕ ಅಧಿಕಾರಿ ಪೂಜಾ ಝಾ ಆಕ್ಷೇಪ – Kannada News | Indian Diplomat raised objection after incorrect map of India during a foreign policy seminar in Bangladesh

ಢಾಕಾ, ಜುಲೈ 10: ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿ ನಡೆದ ವಿದೇಶಾಂಗ ನೀತಿ ಕುರಿತಾದ ಸೆಮಿನಾರ್ ಒಂದರಲ್ಲಿ ಭಾರತದ ತಪ್ಪು ನಕ್ಷೆಯನ್ನು ಪ್ರದರ್ಶಿಸಿದ್ದಕ್ಕೆ ಅಲ್ಲಿ ನಿಯೋಜನೆಗೊಂಡಿರುವ ಭಾರತೀಯ ರಾಜತಾಂತ್ರಿಕ ಅಧಿಕಾರಿ ಪೂಜಾ ಝಾ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆ ನಕ್ಷೆಯಲ್ಲಿ ಜಮ್ಮು ಮತ್ತು ಕಾಶ್ಮೀರವನ್ನು (Jammu and Kashmir) ಪಾಕಿಸ್ತಾನದ ಭಾಗವಾಗಿ ತೋರಿಸಲಾಗಿತ್ತು. “ಜಮ್ಮು ಮತ್ತು ಕಾಶ್ಮೀರವು ಭಾರತದ ಅವಿಭಾಜ್ಯ ಅಂಗವಾಗಿದೆ” ಎಂದು ಅವರು ಸೆಮಿನಾರ್ ನಡುವೆಯೇ ತಮ್ಮ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋ ಭಾರತೀಯರ ಮನಗೆದ್ದಿದೆ.

ಢಾಕಾದಲ್ಲಿರುವ ಭಾರತೀಯ ಹೈಕಮಿಷನ್‌ನ ದ್ವಿತೀಯ ಕಾರ್ಯದರ್ಶಿಯಾಗಿರುವ ಪೂಜಾ ಝಾ ಈ ಸೆಮಿನಾರ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸೆಮಿನಾರ್‌ನ ಸ್ಕ್ರೀನ್ ಮೇಲೆ ಭಾರತದ ತಪ್ಪು ನಕ್ಷೆ ಪ್ರದರ್ಶನಗೊಳ್ಳುತ್ತಿರುವುದನ್ನು ಗಮನಿಸಿದ ಅವರು ತಕ್ಷಣವೇ ಮಧ್ಯಪ್ರವೇಶಿಸಿ, “ಇಲ್ಲಿ ಪ್ರದರ್ಶಿಸುತ್ತಿರುವ ಭಾರತದ ನಕ್ಷೆಯು ತಪ್ಪಾಗಿದೆ. ಜಮ್ಮು ಮತ್ತು ಕಾಶ್ಮೀರವು ಭಾರತದ ಅವಿಭಾಜ್ಯ ಅಂಗವಾಗಿದೆ” ಎಂದು ಸ್ಪಷ್ಟಪಡಿಸಿದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ: ಜಮ್ಮು ಕಾಶ್ಮೀರವನ್ನು ಪಾಕಿಸ್ತಾನದ ಭಾಗವೆಂದು ನಕ್ಷೆಯಲ್ಲಿ ತೋರಿಸಿ ವಿವಾದಕ್ಕೀಡಾದ ನೇಪಾಳ ಏರ್​​​ಲೈನ್ಸ್

ಆ ವಿದೇಶಾಂಗ ನೀತಿ ಸೆಮಿನಾರ್‌ನಲ್ಲಿ ಪ್ರದರ್ಶಿಸಲಾದ ನಕ್ಷೆಯಲ್ಲಿ ಭಾರತದ ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರವನ್ನು ಪಾಕಿಸ್ತಾನಕ್ಕೆ ಸೇರಿದ ಭೂಪ್ರದೇಶ ಎಂಬಂತೆ ಬಿಂಬಿಸಲಾಗಿತ್ತು. ಇದನ್ನು ಕಂಡ ಭಾರತೀಯ ಅಧಿಕಾರಿ ಜಾಗತಿಕ ವೇದಿಕೆಯಲ್ಲೇ ಭಾರತದ ಅಧಿಕೃತ ನಿಲುವನ್ನು ಗಟ್ಟಿಯಾಗಿ ಪ್ರತಿಪಾದಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಯಾವುದೇ ಸಾರ್ವಜನಿಕ ಅಥವಾ ಅಧಿಕೃತ ವೇದಿಕೆಗಳಲ್ಲಿ ಭಾರತದ ನಕ್ಷೆಯನ್ನು ಸರಿಯಾಗಿ ಮತ್ತು ನಿಖರವಾಗಿ ಪ್ರದರ್ಶಿಸಬೇಕು ಎಂಬ ಭಾರತದ ಸುದೀರ್ಘ ನಿಲುವನ್ನು ಅವರ ಈ ನಡೆ ಮತ್ತೊಮ್ಮೆ ಎತ್ತಿಹಿಡಿದಿದೆ.

ಆಯೋಜಕರ ಸ್ಪಷ್ಟನೆ:

ಪೂಜಾ ಝಾ ತಮ್ಮ ಆಕ್ಷೇಪವನ್ನು ವ್ಯಕ್ತಪಡಿಸುತ್ತಿದ್ದಂತೆ ಕಾರ್ಯಕ್ರಮದ ಆಯೋಜಕರಾದ ತಾರಿಕ್ ಎ. ಕರೀಮ್ ಅವರು ಸ್ಪಷ್ಟನೆ ನೀಡಿದ್ದು, “ಈ ನಕ್ಷೆಯನ್ನು ಕೇವಲ ವಿಷಯವನ್ನು ವಿವರಿಸುವ ಉದ್ದೇಶಕ್ಕಾಗಿ ಬಳಸಲಾಗಿದೆಯೇ ಹೊರತು, ಇದರ ಹಿಂದೆ ಯಾವುದೇ ರಾಜಕೀಯ ಉದ್ದೇಶ ಅಥವಾ ಹೇಳಿಕೆ ಇರಲಿಲ್ಲ” ಎಂದು ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version