ಬೆಚ್ಚಿಬಿದ್ದ ಬಳ್ಳಾರಿ: ವಿಚ್ಛೇದಿತ ಮಹಿಳೆಯನ್ನು ಪ್ರೀತಿಸಿ ಮದುವೆಯಾಗಿದ್ದ ನವ ವಿವಾಹಿತನ ಬರ್ಬರ ಕೊಲೆ – Kannada News | Tragedy in Ballari: Groom Dies Hours After Wedding Reception
ಬಳ್ಳಾರಿ, ಜುಲೈ 17: ಪ್ರೀತಿಸಿ ಮದುವೆ ಆಗಿದ್ದ ನವವಿವಾಹಿತನೋರ್ವನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬಳ್ಳಾರಿ ನಗರದ ಬಟ್ಟಿ ಏರಿಯಾದಲ್ಲಿ ನಿನ್ನೆ (ಜುಲೈ 16) ರಾತ್ರಿ ನಡೆದಿದೆ. ನಬಿ ರಸೂಲ್ ಮೃತ ವ್ಯಕ್ತಿಯಾಗಿದ್ದು, ದುರ್ದೈವ ಅಂದರೆ ಮದುವೆಯ ರಿಸೆಪ್ಷನ್ ಕಾರ್ಯಕ್ರಮ ಮುಗಿದ ಕೆಲವೇ ಹೊತ್ತಿನಲ್ಲಿ ಇವರ ಉಸಿರು ನಿಂತಿದೆ. ರಾತ್ರಿ 11 ಗಂಟೆಗೆ ಮನೆಯಿಂದ ಹೊರಹೋಗಿದ್ದ ರಸೂಲ್ ಶವವಾಗಿ ಪತ್ತೆಯಾಗಿದ್ದಾರೆ. ನಬಿ ರಸೂಲ್ ವಿಚ್ಛೇದಿತ ಮಹಿಳೆಯೋರ್ವಳನ್ನು ಪ್ರೀತಿಸುತ್ತಿದ್ದು, 15 ದಿನಗಳ ಹಿಂದೆ ಆಕೆಯನ್ನು ಕರೆದೊಯ್ದಿದ್ದರು. ಕೆಲವು ದಿನಗಳ…