Video: ಕಣ್ಣೀರು ಹಾಕುತ್ತಿದ್ದ ಯುವಕನನ್ನು ತಬ್ಬಿಕೊಂಡು ಸಮಾಧಾನ ಪಡಿಸಿದ ಗೋಮಾತೆ – Kannada News | A cow comforted young man who was shedding tears

ಮೂಕ ಪ್ರಾಣಿಗಳು (dumb animal) ತಮ್ಮ ಮೇಲೆ ಪ್ರೀತಿ ತೋರುವ, ಕಾಳಜಿ ವಹಿಸುವವರ ಮೇಲೆ ವಿಶೇಷ ಬಾಂಧವ್ಯವನ್ನು ಬೆಳೆಸಿಕೊಳ್ಳುತ್ತವೆ. ತನ್ನವರ ನೋವಿನಲ್ಲಿ ಜತೆಯಾಗುತ್ತವೆ. ಇದಕ್ಕೆ ಸಾಕ್ಷಿಯಾಗಿದೆ ಈ ವಿಡಿಯೋ. ಯುವಕನೊಬ್ಬ ಹಸುವಿನ ಎದುರು ಕಣ್ಣೀರು ಹಾಕುತ್ತಾ ಕುಳಿತಿದ್ದಾನೆ. ಇದನ್ನರಿತ ಹಸುವು ಆತನನ್ನು ತಬ್ಬಿಕೊಂಡು ಸಮಾಧಾನ ಪಡಿಸುವಂತಿದೆ ಈ ದೃಶ್ಯ. ಈ ಭಾವನಾತ್ಮಕ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರ ಗಮನ ಸೆಳೆದಿದೆ.

ತನ್ಮಯ ಪಾಂಡೆ (Tanmay Pande) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್ ನಲ್ಲಿ ಯುವಕನೊಬ್ಬ ಹಸುವಿನ ಮುಂದೆ ಅಳುತ್ತಾ ಕುಳಿತಿದ್ದಾನೆ. ಯುವಕನ ಮನಸ್ಸಿನ ದುಃಖವನ್ನು ಅರಿತುಕೊಂಡ ಹಸುವು ಹತ್ತಿರ ಬಂದು ಆತನ ಭುಜದ ಮೇಲೆ ತನ್ನ ಮುಖವನ್ನಿಟ್ಟು ಸಮಾಧಾನ ಪಡಿಸುತ್ತಿರುವುದನ್ನು ಕಾಣಬಹುದು.

ವೈರಲ್‌ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ತಂದೆಯ ಅಗಲುವಿಕೆಯ ನೋವಿನಲ್ಲಿದ್ದ ಯುವಕನಿಗೆ ಸಾಂತ್ವನ ನೀಡಿದ ಶ್ವಾನ

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ಮನುಷ್ಯರಿಗಿಂತ ಗುಣದಲಿ ಪ್ರಾಣಿಗಳೇ ಮೇಲು ಎಂದಿದ್ದಾರೆ. ಇನ್ನೊಬ್ಬರು, ಮನುಷ್ಯರನ್ನು ಪ್ರೀತಿ ಮಾಡೋದಕ್ಕಿಂತ ಮಾತು ಬಾರದ ಮೂಕ ಪ್ರಾಣಿಗಳ ಪ್ರೀತಿ ತೋರಿದರೆ ಒಳ್ಳೆಯದು ಎಂದು ಹೇಳಿದ್ದಾರೆ. ಮತ್ತೊಬ್ಬರು, ನಿಷ್ಕಲ್ಮಶ ಪ್ರೀತಿ ಕಾಳಜಿ ಅಂದ್ರೆ ಇದೇ ಇರ್ಬೇಕು ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 12:16 pm, Fri, 17 July 26

Source link

ಪಾಕಿಸ್ತಾನ ಸೇನೆಗೆ ಆಘಾತ: ಮಿಲಿಟರಿ ಬೆಂಗಾವಲು ಪಡೆ ಮೇಲೆ ಪ್ರತ್ಯೇಕತಾವಾದಿಗಳ ದಾಳಿ, 45 ಸೈನಿಕರು ಸಾವು – Kannada News | Balochistan Attack: BLA Claims 45 plus Pakistani Soldiers Killed in Mastung Convoy Ambush

ಬಲೂಚಿಸ್ತಾನ, ಜುಲೈ 17: ಪಾಕಿಸ್ತಾನ(Pakistan)ದ ಬಲೂಚಿಸ್ತಾನದ ಮಸ್ತುಂಗ್ ಜಿಲ್ಲೆಯಲ್ಲಿ ಪಾಕಿಸ್ತಾನಿ ಮಿಲಿಟರಿ ಬೆಂಗಾವಲು ಪಡೆಯ ಮೇಲೆ ಭೀಕರ ಶಸ್ತ್ರಸಜ್ಜಿತ ದಾಳಿ ನಡೆದಿದೆ. ನಿಷೇಧಿತ ಬಲೂಚ್ ಲಿಬರೇಶನ್ ಆರ್ಮಿ (BLA) ಉಗ್ರಗಾಮಿ ಸಂಘಟನೆಯು ಈ ಸಂಘಟಿತ ದಾಳಿಯ ಹೊಣೆ ಹೊತ್ತುಕೊಂಡಿದ್ದು, ತನ್ನ ಗಣ್ಯ ‘ಫತಾಹ್ ಸ್ಕ್ವಾಡ್’ ನಡೆಸಿದ ಕಾರ್ಯಾಚರಣೆಯಲ್ಲಿ ಬರೋಬ್ಬರಿ 45 ಕ್ಕೂ ಹೆಚ್ಚು ಪಾಕಿಸ್ತಾನಿ ಸೈನಿಕರು ಸಾವನ್ನಪ್ಪಿದ್ದಾರೆ .

ಖಾದ್ ಕೂಚಾ ಎಂಬ ಪ್ರದೇಶದ ಹೆದ್ದಾರಿಯಲ್ಲಿ ರಜೆಯಲ್ಲಿದ್ದ ಮಿಲಿಟರಿ ಸಿಬ್ಬಂದಿಯನ್ನು ಸಾಗಿಸುತ್ತಿದ್ದ ಬಸ್‌ಗಳನ್ನು ಗುರಿಯಾಗಿಸಿಕೊಂಡು ಡಜನ್‌ಗಟ್ಟಲೆ ಶಸ್ತ್ರಸಜ್ಜಿತ ಪ್ರತ್ಯೇಕತಾವಾದಿಗಳು ಈ ಹೊಂಚುದಾಳಿ ನಡೆಸಿದ್ದಾರೆ.

ಹೆದ್ದಾರಿಯಲ್ಲಿ ರಕ್ತಪಾತ: ಕೋಚ್‌ಗೆ ಬೆಂಕಿ
ಸ್ಥಳೀಯ ಮೂಲಗಳು ಮತ್ತು ಪ್ರತ್ಯಕ್ಷದರ್ಶಿಗಳ ಪ್ರಕಾರ, ದಾಳಿಯ ತೀವ್ರತೆ ಎಷ್ಟಿತ್ತೆಂದರೆ ಉಗ್ರರು ಸೈನಿಕರಿದ್ದ ಒಂದು ಮಿಲಿಟರಿ ಕೋಚ್ ಬಸ್‌ಗೆ ಸಂಪೂರ್ಣವಾಗಿ ಬೆಂಕಿ ಹಚ್ಚಿದ್ದಾರೆ. ಆರಂಭಿಕ ಹೊಂಚುದಾಳಿಯ ನಂತರ ಪಾಕಿಸ್ತಾನಿ ಸೇನೆ ಮತ್ತು ಉಗ್ರರ ನಡುವೆ ಸುದೀರ್ಘ ಹಾಗೂ ಭೀಕರ ಗುಂಡಿನ ಚಕಮಕಿ ನಡೆದಿದೆ.

ದಾಳಿಯ ನಂತರ ಬಿಎಲ್‌ಎ ಸಂಘಟನೆ ಹೇಳಿಕೆ ಬಿಡುಗಡೆ ಮಾಡಿ, ನಾವು ಸೈನಿಕರನ್ನು ಸಾಗಿಸುತ್ತಿದ್ದ ಬಸ್‌ಗಳನ್ನು ಧ್ವಂಸಗೊಳಿಸಿದ್ದೇವೆ. ಸ್ಥಳದಲ್ಲೇ 45 ಕ್ಕೂ ಹೆಚ್ಚು ಸೈನಿಕರು ಸತ್ತಿದ್ದು, ಹತ್ತಾರು ಸೈನಿಕರು ಗಾಯಗೊಂಡಿದ್ದಾರೆ. ಘರ್ಷಣೆಗಳು ಇನ್ನೂ ಮುಂದುವರೆದಿರುವುದರಿಂದ ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗಬಹುದು ಎಂದು ಹೇಳಿಕೊಂಡಿದೆ.

ಅಧಿಕೃತ ಸಾವುನೋವುಗಳ ಗೊಂದಲ
ಉಗ್ರಗಾಮಿ ಸಂಘಟನೆಯು 45 ಸೈನಿಕರು ಸತ್ತಿದ್ದಾರೆ ಎಂದು ಹೇಳಿಕೊಳ್ಳುತ್ತಿದ್ದರೂ, ಪಾಕಿಸ್ತಾನಿ ಅಧಿಕಾರಿಗಳು ಅಥವಾ ಸೇನೆಯು (ISPR) ಈ ಅಂಕಿಅಂಶಗಳನ್ನು ಇನ್ನು ಅಧಿಕೃತವಾಗಿ ದೃಢಪಡಿಸಿಲ್ಲ.ಪ್ರಾಥಮಿಕ ರಕ್ಷಣಾ ವರದಿಗಳ ಪ್ರಕಾರ, ಈ ಭೀಕರ ಗುಂಡಿನ ಚಕಮಕಿಯ ನಡುವೆ ಸಿಲುಕಿ ಮೂವರು ಸಾಮಾನ್ಯ ನಾಗರಿಕರು ಸಾವನ್ನಪ್ಪಿದ್ದಾರೆ ಮತ್ತು ನಾಲ್ಕು ಮಕ್ಕಳು ಸೇರಿದಂತೆ 11 ಜನರು ಗಾಯಗೊಂಡಿದ್ದಾರೆ.

ಮತ್ತಷ್ಟು ಓದಿ: ಪಿಒಕೆಯಲ್ಲಿ ತೀವ್ರಗೊಂಡ ಹಿಂಸಾಚಾರ; ಪಾಕಿಸ್ತಾನಿ ಪಡೆಗಳ ಗುಂಡಿನ ದಾಳಿಗೆ 6 ಜನ ಬಲಿ

ಆರಂಭಿಕ ಸ್ಥಳೀಯ ವರದಿಗಳು ಕನಿಷ್ಠ ಮೂವರು ಭದ್ರತಾ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎಂದು ಸೂಚಿಸಿದ್ದರೂ, ಸೇನೆಯ ನೈಜ ಸಾವುನೋವುಗಳ ಸಂಖ್ಯೆಯನ್ನು ಪಾಕಿಸ್ತಾನ ಸರ್ಕಾರ ಮುಚ್ಚಿಡುತ್ತಿದೆ ಎಂಬ ಆರೋಪ ಕೇಳಿಬಂದಿದೆ. ತೀವ್ರವಾಗಿ ಗಾಯಗೊಂಡವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಕ್ವೆಟ್ಟಾ ಆಸ್ಪತ್ರೆಗೆ ರವಾನಿಸಲಾಗಿದೆ.

ಹೆದ್ದಾರಿ ಬಂದ್: ಮುಂದುವರೆದ ಸೇನಾ ಕಾರ್ಯಾಚರಣೆ
ಈ ಭೀಕರ ದಾಳಿಯ ಬೆನ್ನಲ್ಲೇ ಪಾಕಿಸ್ತಾನಿ ಭದ್ರತಾ ಪಡೆಗಳು ಇಡೀ ಮಸ್ತುಂಗ್ ಜಿಲ್ಲೆಯನ್ನು ಸುತ್ತುವರೆದಿದ್ದು, ಉಗ್ರರ ಪತ್ತೆಗಾಗಿ ಬೃಹತ್ ಜಂಟಿ ಕಾರ್ಯಾಚರಣೆಯನ್ನು ಪ್ರಾರಂಭಿಸಿವೆ. ಭದ್ರತಾ ಕಾರಣಗಳಿಗಾಗಿ ಪ್ರಮುಖ ಕ್ವೆಟ್ಟಾ-ಕರಾಚಿ ಹೆದ್ದಾರಿಯನ್ನು ಸಂಪೂರ್ಣವಾಗಿ ಮುಚ್ಚಲಾಗಿದ್ದು, ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ. ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ಪರಿಸ್ಥಿತಿ ತೀವ್ರ ಉದ್ವಿಗ್ನವಾಗಿ ಮುಂದುವರೆದಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಉತ್ತರ ಕನ್ನಡದ ಅಂಕೋಲಾದಲ್ಲಿ ಭಾರಿ ಮಳೆ: ಗೋಕರ್ಣ ತದಡಿ ರಸ್ತೆಯಲ್ಲಿ ಗುಡ್ಡ ಕುಸಿತ, ಅಂಗನವಾಡಿ-ಶಾಲೆಗಳಿಗೆ ರಜೆ – Kannada News | Heavy Rain in Uttara Kannada: Holiday Declared for Schools in Ankola, Landslide on Gokarna Tadadi Road

ಕಾರವಾರ, ಜುಲೈ 17: ಉತ್ತರ ಕನ್ನಡ ಜಿಲ್ಲೆಯ ಕೆಲವೆಡೆ ಭಾರಿ ಮಳೆಯಾಗುತ್ತಿದ್ದು, ಅಂಕೋಲಾ ತಾಲೂಕಿನಲ್ಲಿ ವರ್ಷಧಾರೆ ಸುರಿಯುತ್ತಿದೆ. ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಅಂಕೋಲಾ ತಹಶೀಲ್ದಾರ್ ಅವರು ಹೊರಡಿಸಿರುವ ಆದೇಶದ ಪ್ರಕಾರ, ತಾಲೂಕಿನ ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ರಜೆ ನೀಡಲಾಗಿದೆ. ಮತ್ತೊಂದೆಡೆ, ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣ-ತದಡಿ ರಸ್ತೆಯಲ್ಲಿ ಗುಡ್ಡ ಕುಸಿತ ಸಂಭವಿಸಿ ಸಂಚಾರಕ್ಕೆ ಅಡ್ಡಿಯಾಗಿದೆ. ಸದ್ಯ ರಸ್ತೆಯಿಂದ ಮಣ್ಣು ತೆರವು ಕಾರ್ಯ ನಡೆಯುತ್ತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪ್ರಭಾಸ್ ಜೊತೆಗಿರುವ ಆ ಒಬ್ಬರನ್ನು ಕದಿಯುವಾಸೆ ನಟಿ ಪೂಜಾ ಹೆಗ್ಡೆಗೆ – Kannada News | Pooja Hegde said she like to steal Prabhas’s cook

ಪೂಜಾ ಹೆಗ್ಡೆ (Pooja Hegde), ಪ್ಯಾನ್ ಇಂಡಿಯಾ ನಟಿ. ಕೆಲ ವರ್ಷಗಳ ಹಿಂದಿನ ವರೆಗೆ ತೆಲುಗು ಚಿತ್ರರಂಗದ ಟಾಪ್ ನಟಿಯಾಗಿದ್ದ ಪೂಜಾ ಹೆಗ್ಡೆ ಅಲ್ಲು ಅರ್ಜುನ್, ಪ್ರಭಾಸ್, ರಾಮ್ ಚರಣ್, ಜೂ ಎನ್​​ಟಿಆರ್ ಇನ್ನೂ ಕೆಲವು ಸೂಪರ್ ಸ್ಟಾರ್ ನಟರುಗಳೊಟ್ಟಿಗೆ ನಟಿಸಿದರು. ಆದರೆ ಅಚಾನಕ್ಕಾಗಿ ತೆಲುಗು ಚಿತ್ರರಂಗದಿಂದ ಕಾಣೆ ಆಗಿಬಿಟ್ಟರು. ಆದರೆ ಸತತ ನಾಲ್ಕು ವರ್ಷಗಳ ಗ್ಯಾಪ್ ಬಳಿಕ ಇದೀಗ ಮತ್ತೆ ತೆಲುಗು ಚಿತ್ರರಂಗಕ್ಕೆ ಕಾಲಿರಿಸಿದ್ದಾರೆ ನಟಿ ಪೂಜಾ ಹೆಗ್ಡೆ. ಇತ್ತೀಚೆಗಿನ ಸಂದರ್ಶನವೊಂದರಲ್ಲಿ ತೆಲುಗು ಚಿತ್ರರಂಗದ ಬಗ್ಗೆ ಸಹ ನಟರುಗಳ ಬಗ್ಗೆ ಸಾಕಷ್ಟು ವಿಷಯ ಮಾತನಾಡಿದ್ದು, ಪ್ರಭಾಸ್​ ಬಗ್ಗೆಯೂ ಮಾತನಾಡಿದ್ದಾರೆ. ಈ ವೇಳೆ ಪ್ರಭಾಸ್ ಬಳಿ ಇರುವ ಒಂದು ವಸ್ತುವನ್ನು ಕದಿಯುವ ಆಸೆ ತಮಗಿದೆ ಎಂದು ಪೂಜಾ ಹೇಳಿಕೊಂಡಿದ್ದಾರೆ.

ಪ್ರಭಾಸ್​​ ಬಳಿ ಭಾರತದಲ್ಲೇ ಅಪರೂಪವಾದ, ಐಶಾರಾಮಿ ಆದ ಕಾರುಗಳಿವೆ, ದೊಡ್ಡ ಮನೆಗಳಿವೆ, ಅದ್ಭುತವಾದ ಫಾರಂ ಹೌಸ್​​ಗಳು ಇವೆ, ಲಕ್ಷುರಿ ವಾಚುಗಳಿವೆ, ಉಡುಗೆಗಳಿವೆ, ಗ್ಯಾಜೆಟ್​​ಗಳು ಇವೆ. ಆದರೆ ಇವುಗಳನ್ನೆಲ್ಲ ಬಿಟ್ಟು ಪೂಜಾ ಹೆಗ್ಡೆಗೆ, ಪ್ರಭಾಸ್ ಬಳಿ ಇರುವ ಅವರ ಅಡುಗೆಯವನನ್ನು ಕದಿಯುವ ಆಸೆಯಂತೆ. ಅಷ್ಟು ಅದ್ಭುತವಾಗಿ ಆ ಅಡುಗೆಯವ ಅಡುಗೆ ಮಾಡುತ್ತಾರಂತೆ. ಈ ಬಗ್ಗೆ ಪೂಜಾ ಹೆಗ್ಡೆ ಒಂದು ಸಂಗತಿಯನ್ನು ಸಹ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.

ಪೂಜಾ ಹೆಗ್ಡೆ ಹಾಗೂ ಪ್ರಭಾಸ್ ‘ರಾಧೆ-ಶ್ಯಾಮ್’ ಸಿನಿಮಾನಲ್ಲಿ ಒಟ್ಟಿಗೆ ನಟಿಸಿದ್ದರು. ಸಿನಿಮಾ ಚೆನ್ನಾಗಿತ್ತಾದರೂ ಬಾಕ್ಸ್ ಆಫೀಸ್​​ನಲ್ಲಿ ಒಳ್ಳೆಯ ಪ್ರದರ್ಶನ ಕಾಣಲಿಲ್ಲ. ಕೋವಿಡ್ ಇಂದಾಗಿ ಯೋಜಿಸಿದಂತೆ ಶೂಟಿಂಗ್ ಸಹ ಚಿತ್ರತಂಡಕ್ಕೆ ಮಾಡಲಾಗಿರಲಿಲ್ಲ. ಈ ಸಿನಿಮಾದ ಶೂಟಿಂಗ್ ಸಮಯದಲ್ಲಿ ನಡೆದ ಸಂಗತಿ ಹಂಚಿಕೊಂಡಿರುವ ಪೂಜಾ, ಸಿನಿಮಾದ ಶೂಟಿಂಗ್​ಗಾಗಿ ಪೂಜಾ ಹೆಗ್ಡೆ, ಪ್ರಭಾಸ್ ಇನ್ನಿತರರು ಇಟಲಿಗೆ ತೆರಳಿದ್ದರಂತೆ. ಆದರೆ ಅಲ್ಲಿ ಪೂಜಾ ಅವರ ತಂಡದವರಿಗೆ ಕೋವಿಡ್ ಕಾಣಿಸಿಕೊಂಡಿತಂತೆ. ಇದರಿಂದ ಪೂಜಾ ಬಹಳ ಆಸೆ ಪಟ್ಟಿದ್ದಂತಹ ಪಿಜ್ಜಾ, ಪಾಸ್ತಾಗಳನ್ನು ತಿನ್ನಲಾಗಲಿಲ್ಲವಂತೆ. ಆದರೆ ವಿಷಯ ತಿಳಿದ ಪ್ರಭಾಸ್, ತಮ್ಮ ಅಡುಗೆಯವರಿಗೆ ಹೇಳಿ ಪ್ರತಿ ದಿನವೂ ರುಚಿ-ರುಚಿಯಾದ ಸಸ್ಯಹಾರ ಮಾಡಿಸಿ ಕಳಿಸುತ್ತಿದ್ದರಂತೆ.

ಇದನ್ನೂ ಓದಿ:35ರ ವಯಸ್ಸಲ್ಲಿ ಶಾಲಾ ಬಾಲಕಿ ಆದ ನಟಿ ಪೂಜಾ ಹೆಗ್ಡೆ

ಪ್ರಭಾಸ್ ಅವರ ಆತಿಥ್ಯದ ಬಗ್ಗೆ ಹಲವಾರು ಮಂದಿ ಹೇಳಿಕೊಂಡಿದ್ದಾರೆ. ಪ್ರಭಾಸ್ ರೀತಿ ಇನ್ಯಾವ ನಟರೂ ಆತಿಥ್ಯ ಮಾಡುವುದಿಲ್ಲ ಎನ್ನುತ್ತಾರೆ. ವಿಶೇಷವಾಗಿ ತಮ್ಮ ಸಹನಟರಿಗೆ ಊಟ ಮಾಡಿಸುವುದರಲ್ಲಿ ಪ್ರಭಾಸ್ ನಿಸ್ಸೀಮರಂತೆ. ‘ಸಲಾರ್’ ಸಿನಿಮಾ ಸಮಯದಲ್ಲಿ ಪೃಥ್ವಿರಾಜ್ ಸುಕುಮಾರ್ ಕುಟುಂಬಕ್ಕಾಗಿ ಇಡೀ ಒಂದು ಕೋಣೆ ತುಂಬುವಷ್ಟು ಊಟ ಕಳಿಸಿದ್ದರಂತೆ ಪ್ರಭಾಸ್. ‘ಆದಿಪುರುಷ್’ ಸಿನಿಮಾ ಸಮಯದಲ್ಲಿ ಸೈಫ್ ಅಲಿ ಖಾನ್ ಕುಟುಂಬಕ್ಕಾಗಿ ಬಿರಿಯಾನಿ ಕಳಿಸಿದ್ದರು. ಅದೇ ಸಿನಿಮಾದ ಮುಂಬೈ ಶೂಟಿಂಗ್ ವೇಳೆ, ಹೈದರಾಬಾದ್​​ನಿಂದ ಕ್ಯಾರಿಯರ್​​ನಲ್ಲಿ ತೆಲುಗು ಊಟ ತರಿಸಿಕೊಳ್ಳುತ್ತಿದ್ದರು, ಇಡೀ ತಂಡಕ್ಕೂ ತರಿಸುತ್ತಿದ್ದರು ಎಂದು ‘ಆದಿಪುರುಷ್’ ನಿರ್ದೇಶಕ ಓಂ ರಾವತ್ ಹಿಂದೊಮ್ಮೆ ಹೇಳಿದ್ದರು. ಈಗ ಪೂಜಾ ಹೆಗ್ಡೆ ಸಹ ಪ್ರಭಾಸ್ ಆತಿಥ್ಯದ ಬಗ್​ಗೆ ಮಾತನಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 11:33 am, Fri, 17 July 26

Source link

ಬೆಚ್ಚಿಬಿದ್ದ ಬಳ್ಳಾರಿ: ವಿಚ್ಛೇದಿತ ಮಹಿಳೆಯನ್ನು ಪ್ರೀತಿಸಿ ಮದುವೆಯಾಗಿದ್ದ ನವ ವಿವಾಹಿತನ ಬರ್ಬರ ಕೊಲೆ – Kannada News | Tragedy in Ballari: Groom Dies Hours After Wedding Reception

ಬಳ್ಳಾರಿ, ಜುಲೈ 17: ಪ್ರೀತಿಸಿ ಮದುವೆ ಆಗಿದ್ದ ನವವಿವಾಹಿತನೋರ್ವನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬಳ್ಳಾರಿ ನಗರದ ಬಟ್ಟಿ ಏರಿಯಾದಲ್ಲಿ ನಿನ್ನೆ (ಜುಲೈ 16) ರಾತ್ರಿ ನಡೆದಿದೆ. ನಬಿ ರಸೂಲ್​​​ ಮೃತ ವ್ಯಕ್ತಿಯಾಗಿದ್ದು, ದುರ್ದೈವ ಅಂದರೆ ಮದುವೆಯ ರಿಸೆಪ್ಷನ್ ಕಾರ್ಯಕ್ರಮ ಮುಗಿದ ಕೆಲವೇ ಹೊತ್ತಿನಲ್ಲಿ ಇವರ ಉಸಿರು ನಿಂತಿದೆ. ರಾತ್ರಿ 11 ಗಂಟೆಗೆ ಮನೆಯಿಂದ ಹೊರಹೋಗಿದ್ದ ರಸೂಲ್​​​​ ಶವವಾಗಿ ಪತ್ತೆಯಾಗಿದ್ದಾರೆ.

ನಬಿ ರಸೂಲ್​​​​​ ವಿಚ್ಛೇದಿತ ಮಹಿಳೆಯೋರ್ವಳನ್ನು ಪ್ರೀತಿಸುತ್ತಿದ್ದು, 15 ದಿನಗಳ ಹಿಂದೆ ಆಕೆಯನ್ನು ಕರೆದೊಯ್ದಿದ್ದರು. ಕೆಲವು ದಿನಗಳ ಬಳಿಕ ಇಬ್ಬರು ಮನೆಗೆ ವಾಪಸ್ ಆಗಿದ್ದರು. ಈ ವೇಳೆ ರಸೂಲ್​​ ಸಂಬಂಧಿಕರು ಒಪ್ಪಿ ಇವರ ಮದುವೆ ಮಾಡಿಸಿದ್ದರು. ನಿನ್ನೆ ಮನೆಯಲ್ಲಿಯೇ ರಸೂಲ್​ ಮದುವೆ ನಡೆದಿತ್ತು. ಸಂಭ್ರಮದಿಂದ ಮದುವೆ ಮತ್ತು ರಿಸೆಪ್ಷನ್ ಕಾರ್ಯಕ್ರಮ ನಡೆದ ಕೆಲ ಸಮಯದ ಬಳಿಕ ಅಂದರೆ, ರಾತ್ರಿ 11.30ರ ಸುಮಾರಿಗೆ ಸ್ನೇಹಿತ ಕರೆದ ಅಂತಾ ರಸೂಲ್​​ ಹೊರಹೋಗಿದ್ದರು. ಆದರೆ ಅವರು ರಾತ್ರಿ 2 ಗಂಟೆ ಆದ್ರೂ ಬಂದಿರಲಿಲ್ಲ. ಹೀಗಾಗಿ ಮನೆ ಸುತ್ತ ಪೋಷಕರು ಮತ್ತು ಸಂಬಂಧಿಕರು ಹುಡುಕಾಡಿದಾಗ ಮನೆಯಿಂದ 700 ಮೀಟರ್ ದೂರದಲ್ಲಿ ರಸೂಲ್ ಶವ ಪತ್ತೆಯಾಗಿದೆ.

ಇದನ್ನೂ ಓದಿ: ಬಿ.ಸಿ.ರೋಡ್​ ಬಸ್​ ನಿಲ್ದಾಣದಲ್ಲಿ ತಲ್ವಾರ್​ನಿಂದ ಯುವತಿಯ ಹತ್ಯೆ! ಮಗಳನ್ನು ಕೊಂದು ತಂದೆಗೆ ಕರೆ ಮಾಡಿದ ಪಾಗಲ್ ಪ್ರೇಮಿ ಪೊಲೀಸರ ವಶ

ಮಹಿಳೆಯ ಪೋಷಕರಿಂದ ಈ ಮದುವೆಗೆ ವಿರೋಧವಿತ್ತು, ಆಕೆಯ ಸಂಬಂಧಿಕರು ಈ‌ ಹಿಂದೆ ರಸೂಲ್‌ಗೆ ವಾರ್ನಿಂಗ್ ಕೂಡ ಕೊಟ್ಟಿದ್ದರು ಎಂಬ ವಿಚಾರವೂ ಬಯಲಾಗಿದೆ. ಹೀಗಾಗಿ ವಿಚ್ಛೇದಿತ ಮಹಿಳೆಯನ್ನ ಮದುವೆಯಾಗಿದ್ದೇ ಕೊಲೆಗೆ ಕಾರಣವಾಗಿರಬುದೆಂಬ ಶಂಕೆ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ಎಸ್​​​ಪಿ ಸುಮನ್.ಡಿ ಪನ್ನೇಕರ್ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಕೌಲ್​ ಬಜಾರ್ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಡಿಕೆಶಿ ಸಿಎಂ ಆಗಲಿ ಎಂದು ಹರಕೆ ಹೊತ್ತಿದ್ದ ಪತ್ನಿ; ಮೈಸೂರು ಚಾಮುಂಡೇಶ್ವರಿಗೆ ಸೀರೆ ಹರಕೆ ತೀರಿಸಿದ ಉಷಾ ಶಿವಕುಮಾರ್! – Kannada News | Usha Shivakumar Fulfils Chamundeshwari Saree Vow at Mysore Chamundi Hills

ಮೈಸೂರು: ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (ಡಿಕೆಶಿ) ಅವರು ತಮ್ಮ ಚಾಣಾಕ್ಷ ರಾಜಕೀಯ ತಂತ್ರಗಾರಿಕೆ ಮಾತ್ರವಲ್ಲದೆ, ದೈವಭಕ್ತಿಗೂ ಹೆಸರಾದವರು. ಯಾವುದೇ ಕಠಿಣ ರಾಜಕೀಯ ಸವಾಲು ಅಥವಾ ಬಿಕ್ಕಟ್ಟು ಎದುರಾದಾಗಲೂ ಅವರು ಶಕ್ತಿಪೀಠ ಹಾಗೂ ದೇವಸ್ಥಾನಗಳ ಮೊರೆ ಹೋಗುವುದನ್ನು ಕಾಣಬಹುದು. ಇದೀಗ ಅವರ ಕುಟುಂಬದ ದೈವಭಕ್ತಿಗೆ ಸಾಕ್ಷಿಯೆಂಬಂತೆ, ಸಿಎಂ ಅವರ ಪತ್ನಿ ಉಷಾ ಶಿವಕುಮಾರ್ ಇಂದು ಮೈಸೂರಿನ ಐತಿಹಾಸಿಕ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ ತಮ್ಮ ವಿಶೇಷ ಹರಕೆಯೊಂದನ್ನು ತೀರಿಸಿದ್ದಾರೆ.

ಪತಿ ಸಿಎಂ ಆದರೆ ಚಾಮುಂಡೇಶ್ವರಿಗೆ ಸೀರೆ ಉಡಿಸುವುದಾಗಿ ಹರಕೆ ಹೊತ್ತಿದ್ದ ಉಷಾ ಶಿವಕುಮಾರ್:

ತಮ್ಮ ಪತಿ ಡಿ.ಕೆ. ಶಿವಕುಮಾರ್ ಅವರು ರಾಜ್ಯದ ಮುಖ್ಯಮಂತ್ರಿಯಾದರೆ ನಾಡದೇವತೆ ಚಾಮುಂಡೇಶ್ವರಿಗೆ ಸೀರೆ ಉಡಿಸುವುದಾಗಿ ಉಷಾ ಶಿವಕುಮಾರ್ ಅವರು ಈ ಹಿಂದೆ ಹರಕೆ ಹೊತ್ತಿದ್ದರು. ಅದರಂತೆ, ಇಂದು ಆಷಾಢ ಮಾಸದ ಮೊದಲ ಶುಕ್ರವಾರದ ಅತ್ಯಂತ ಪವಿತ್ರ ದಿನದಂದು ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿದ್ದು, ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ತಾವು ಕಾಣಿಕೆಯಾಗಿ ತಂದಿದ್ದ ರೇಷ್ಮೆ ಸೀರೆಯನ್ನು ತಾಯಿಯ ಮೂಲ ವಿಗ್ರಹಕ್ಕೆ ಸಮರ್ಪಿಸುವ ಮೂಲಕ ಹರಕೆ ಪೂರೈಸಿದರು. ಸಿಎಂ ಪತ್ನಿ ಭಕ್ತಿಯಿಂದ ಅರ್ಪಿಸಿದ ಈ ಸೀರೆಯನ್ನು ಚಾಮುಂಡಿಬೆಟ್ಟದ ಆಡಳಿತ ಮಂಡಳಿ ಹಾಗೂ ಪ್ರಧಾನ ಅರ್ಚಕರು ದೇವಿಗೆ ಉಡಿಸಿ, ವಿಶೇಷ ಅಲಂಕಾರದೊಂದಿಗೆ ಮಹಾಮಂಗಳಾರತಿ ನೆರವೇರಿಸಿದ್ದಾರೆ. ಮೊದಲ ಆಷಾಢ ಶುಕ್ರವಾರದ ಸಡಗರದಲ್ಲಿ ಸಿಎಂ ಕುಟುಂಬದ ಈ ವಿಶೇಷ ಸೇವೆ ಭಕ್ತರ ಗಮನ ಸೆಳೆದಿದೆ.

ಇದನ್ನೂ ಓದಿ: ಮೊದಲ ಆಷಾಢ ಶುಕ್ರವಾರ ಹಿನ್ನೆಲೆ ಚಾಮುಂಡೇಶ್ವರಿಗೆ ವಿಶೇಷ ಪೂಜೆ

ಏನಿದು ಸೀರೆ ಹರಕೆ? ಭಕ್ತರಿಗಾಗಿ ಇಲ್ಲಿದೆ ಸಂಪೂರ್ಣ ವಿವರ:

ಮೈಸೂರು ಚಾಮುಂಡೇಶ್ವರಿ ದೇವಿಗೆ ಸೀರೆ ಉಡಿಸುವ ಹರಕೆಯನ್ನು ಭಕ್ತರು ವಿಶೇಷವಾಗಿ ಮದುವೆ, ನಾಮಕರಣ, ಉದ್ಯೋಗ ಅಥವಾ ಇತರೆ ಇಷ್ಟಾರ್ಥಗಳು ನೆರವೇರಿದಾಗ ಮಾಡಿಕೊಳ್ಳುತ್ತಾರೆ. ಈ ಹರಕೆಯನ್ನು ತಲುಪಿಸಲು ದೇವಾಲಯದಲ್ಲಿ ಅಧಿಕೃತ ಸೀರೆ ಹರಕೆ ಸೇವೆ ಲಭ್ಯವಿದೆ.

  • ಸೀರೆ ಮತ್ತು ಪೂಜೆ: ಹರಕೆಯಾಗಿ ಅರ್ಪಿಸಲು ಭಕ್ತರು ತಾವೇ ಸ್ವತಃ ಹೊಸ ರೇಷ್ಮೆ ಸೀರೆಯನ್ನು ತಂದು ದೇವಸ್ಥಾನದ ಕಚೇರಿಗೆ ನೀಡಬೇಕು.
  • ಶುಲ್ಕ: ದೇವಸ್ಥಾನದ ಇ-ಸೇವಾ ನಿಯಮಾವಳಿಗಳ ಪ್ರಕಾರ, ತಾಯಿಗೆ ಒಂದು ಸೀರೆ ಉಡಿಸಲು ಪ್ರಾಧಿಕಾರವು ನಿಗದಿಪಡಿಸಿರುವ ಸೇವಾ ಶುಲ್ಕ ಅತ್ಯಂತ ಕೈಗೆಟುಕುವಂತಿದ್ದು (ಸುಮಾರು 50 ರಿಂದ 1000 ರ ಆಸುಪಾಸಿನಲ್ಲಿ), ತಿಂಗಳ ಆರಂಭಕ್ಕೆ 5 ದಿನ ಮುಂಚಿತವಾಗಿಯೇ ಇದರ ಆನ್‌ಲೈನ್ ಬುಕಿಂಗ್ ವಿಂಡೋ ತೆರೆಯುತ್ತದೆ.
  • ಸಮಯ: ಈ ಸೇವೆಯು ಸಾಮಾನ್ಯವಾಗಿ ದೇವಸ್ಥಾನದ ಪೂಜಾ ವೇಳೆಯಲ್ಲಿ ನಡೆಯುತ್ತದೆ. ಭಕ್ತರು ಮುಂಜಾನೆ 7.30 ರಿಂದ ಮಧ್ಯಾಹ್ನ 2.00 ರವರೆಗೆ ಅಥವಾ ಮಧ್ಯಾಹ್ನ 3.30 ರಿಂದ ಸಂಜೆ 6.00 ರವರೆಗೆ ದೇವಸ್ಥಾನದ ಅಧಿಕೃತ ಇ-ಸೇವಾ ಬುಕಿಂಗ್ ಪೋರ್ಟಲ್ ಮೂಲಕ ಮುಂಗಡವಾಗಿ ಟಿಕೆಟ್ ಕಾಯ್ದಿರಿಸಬಹುದು.
  • ಪ್ರಸಾದ: ಪೂಜೆ ಮುಗಿದ ನಂತರ ದೇವಿಗೆ ಉಡಿಸಿ ಪೂಜಿಸಿದ ಸೀರೆಯ ಜೊತೆಗೆ ದೇವಿಯ ಕುಂಕುಮ, ಬಳೆ ಹಾಗೂ ಇತರ ಪವಿತ್ರ ಪ್ರಸಾದವನ್ನು ಭಕ್ತರಿಗೆ ಗೌರವಪೂರ್ವಕವಾಗಿ ಹಿಂತಿರುಗಿಸಲಾಗುತ್ತದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 11:39 am, Fri, 17 July 26

Source link

Video: ಭಾರತದ ಮೊದಲ ಹೈಡ್ರೋಜನ್ ರೈಲಿಗೆ ಹಸಿರು ನಿಶಾನೆ ತೋರಿದ ಪ್ರಧಾನಿ ಮೋದಿ – Kannada News | PM Modi Flags Off India’s First Hydrogen Train, Launching a New Era in Green Rail Transport

ಜಿಂದ್, ಜುಲೈ 17: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಹರಿಯಾಣದ ಜಿಂದ್ ರೈಲು ನಿಲ್ದಾಣದಿಂದ ಜಿಂದ್ ಮತ್ತು ಸೋನಿಪತ್ ನಡುವೆ ಚಲಿಸಲಿರುವ ಭಾರತದ ಮೊದಲ ‘ಹೈಡ್ರೋಜನ್ ಚಾಲಿತ ರೈಲಿ’ಗೆ ಹಸಿರು ನಿಶಾನೆ ತೋರಿದ್ದಾರೆ. ‘ಮೇಕ್ ಇನ್ ಇಂಡಿಯಾ’ ಯೋಜನೆಯಡಿ ಸಂಪೂರ್ಣ ಸ್ಥಳೀಯ ತಂತ್ರಜ್ಞಾನ ಬಳಸಿ ಈ ಪರಿಸರಸ್ನೇಹಿ ರೈಲನ್ನು ನಿರ್ಮಿಸಲಾಗಿದೆ. ಅತ್ಯಾಧುನಿಕ ಹೈಡ್ರೋಜನ್ ಇಂಧನ ಕೋಶ ತಂತ್ರಜ್ಞಾನದ ಮೂಲಕ ಚಲಿಸುವ ಈ ರೈಲು, ಕೇವಲ ನೀರಿನ ಆವಿಯನ್ನು ಹೊರಸೂಸುತ್ತದೆ. ಇದರಿಂದಾಗಿ ಇಂಗಾಲದ ಹೊರಸೂಸುವಿಕೆ ಸಂಪೂರ್ಣ ಶೂನ್ಯವಾಗಿರುತ್ತದೆ. ಈ ಐತಿಹಾಸಿಕ ಉಡಾವಣೆಯೊಂದಿಗೆ, ಜರ್ಮನಿ, ಜಪಾನ್, ಚೀನಾ ಮತ್ತು ಅಮೆರಿಕದ ನಂತರ ಹೈಡ್ರೋಜನ್ ರೈಲು ಓಡಿಸುತ್ತಿರುವ ವಿಶ್ವದ ಆಯ್ದ ಹೈಟೆಕ್ ದೇಶಗಳ ಗಣ್ಯರ ಗುಂಪಿಗೆ ಭಾರತ ಅಧಿಕೃತವಾಗಿ ಸೇರ್ಪಡೆಯಾಗಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Karnataka Dam Water Level: ಕೆಆರ್‌ಎಸ್‌ಗೆ ಒಳಹರಿವು ಮತ್ತಷ್ಟು ಕುಸಿತ; ತುಂಗಭದ್ರೆಯಲ್ಲೂ ಕಳೆದ ವರ್ಷಕ್ಕಿಂತ ಕಡಿಮೆ ನೀರು – Kannada News | Karnataka Reservoir Water Level on 17 July 2026: KRS Inflow Drops Further, Hemavathi and Tungabhadra Storage Remains Below Last Year

ಕೆಆರ್​ಎಸ್ ಡ್ಯಾಂ (ಸಾಂದರ್ಭಿಕ ಚಿತ್ರ)Image Credit source: tv9

ಬೆಂಗಳೂರು, ಜುಲೈ 17: ಕರ್ನಾಟಕದಲ್ಲಿ ಮುಂಗಾರು ಮಳೆ (Monsoon Rain) ಕೊರತೆ ಮುಂದುವರಿದಿರುವ ಪರಿಣಾಮ ಪ್ರಮುಖ ಜಲಾಶಯಗಳ ನೀರಿನ ಮಟ್ಟದಲ್ಲಿ (Karnataka Dam Water Level) ಏರಿಕೆ ಕಾಣುತ್ತಿಲ್ಲ. ಕೆಆರ್‌ಎಸ್, ಹೇಮಾವತಿ, ತುಂಗಭದ್ರೆ ಹಾಗೂ ಆಲಮಟ್ಟಿ ಜಲಾಶಯಗಳ ಒಳಹರಿವು ಸೀಮಿತ ಪ್ರಮಾಣದಲ್ಲಿದ್ದು, ರೈತರು ಹಾಗೂ ನೀರಾವರಿ ವಲಯದ ಅಧಿಕಾರಿಗಳ ಆತಂಕ ಹೆಚ್ಚಾಗಿದೆ. ಬೆಂಗಳೂರಿಗೆ (Bengaluru) ನೀರು ಪೂರೈಸುವ ಪ್ರಮುಖ ಡ್ಯಾಂ ಕೆಆರ್​​ಎಸ್​ಗೆ ಒಳಹರಿವು ಮತ್ತೆ ಇಳಿಕೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ.

ಕೆಆರ್‌ಎಸ್‌ಗೆ ಒಳಹರಿವು ಮತ್ತೆ ಇಳಿಕೆ

ಮಂಡ್ಯ ಜಿಲ್ಲೆಯ ಕೃಷ್ಣರಾಜಸಾಗರ (ಕೆಆರ್‌ಎಸ್) ಜಲಾಶಯದ ಗರಿಷ್ಠ ಮಟ್ಟ 124.80 ಅಡಿ ಆಗಿದ್ದು, ಶುಕ್ರವಾರ ಬೆಳಿಗ್ಗೆ ನೀರಿನ ಮಟ್ಟ 92.92 ಅಡಿ ದಾಖಲಾಗಿದೆ. ಜಲಾಶಯಕ್ಕೆ 1,335 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, 1,090 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಜಲಾಶಯದಲ್ಲಿ ಪ್ರಸ್ತುತ 17.753 ಟಿಎಂಸಿ ನೀರು ಸಂಗ್ರಹವಾಗಿದೆ. ಮುಂಗಾರು ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಸುರಿಯದ ಕಾರಣ ಕೆಆರ್‌ಎಸ್‌ಗೆ ಒಳಹರಿವು ಇನ್ನೂ ಹೆಚ್ಚಾಗಿಲ್ಲ.

ಹೇಮಾವತಿ ಜಲಾಶಯದಲ್ಲೂ ಕಳೆದ ವರ್ಷಕ್ಕಿಂತ ಕಡಿಮೆ ಸಂಗ್ರಹ

ಹಾಸನ ಜಿಲ್ಲೆಯ ಗೊರೂರು ಸಮೀಪದ ಹೇಮಾವತಿ ಜಲಾಶಯದ ಗರಿಷ್ಠ ಮಟ್ಟ 2922 ಅಡಿ (37 ಟಿಎಂಸಿ) ಆಗಿದೆ. ಪ್ರಸ್ತುತ ಜಲಾಶಯದ ನೀರಿನ ಮಟ್ಟ 2903.91 ಅಡಿ ಇದ್ದು, 22.314 ಟಿಎಂಸಿ ನೀರು ಸಂಗ್ರಹವಾಗಿದೆ. ಜಲಾಶಯಕ್ಕೆ 1,512 ಕ್ಯೂಸೆಕ್ ಒಳಹರಿವು ದಾಖಲಾಗಿದ್ದು, 350 ಕ್ಯೂಸೆಕ್ ನೀರನ್ನು ಹೊರಹರಿಸಲಾಗುತ್ತಿದೆ.

ಕಳೆದ ವರ್ಷದ ಇದೇ ದಿನ ಜಲಾಶಯದಲ್ಲಿ 2920.99 ಅಡಿ ನೀರಿನ ಮಟ್ಟ ಹಾಗೂ 36.127 ಟಿಎಂಸಿ ನೀರು ಸಂಗ್ರಹವಿತ್ತು. ಆಗ 6,413 ಕ್ಯೂಸೆಕ್ ಒಳಹರಿವು ಹಾಗೂ 2,900 ಕ್ಯೂಸೆಕ್ ಹೊರಹರಿವು ದಾಖಲಾಗಿತ್ತು. ಹೀಗಾಗಿ ಈ ಬಾರಿಯ ಸಂಗ್ರಹ ಹಾಗೂ ಒಳಹರಿವು ಎರಡೂ ಗಮನಾರ್ಹವಾಗಿ ಕಡಿಮೆಯಾಗಿದೆ.

ತುಂಗಭದ್ರೆಯಲ್ಲಿ 26.125 ಟಿಎಂಸಿ ನೀರು ಸಂಗ್ರಹ

ವಿಜಯನಗರ ಜಿಲ್ಲೆಯ ಹೊಸಪೇಟೆ ಸಮೀಪದ ತುಂಗಭದ್ರಾ ಜಲಾಶಯದ ಗರಿಷ್ಠ ಮಟ್ಟ 1633 ಅಡಿ ಆಗಿದೆ. ಪ್ರಸ್ತುತ ಜಲಾಶಯದ ನೀರಿನ ಮಟ್ಟ 1603.32 ಅಡಿ ಇದ್ದು, 26.125 ಟಿಎಂಸಿ ನೀರು ಸಂಗ್ರಹವಾಗಿದೆ. ಕಳೆದ 24 ಗಂಟೆಗಳಲ್ಲಿ ಸರಾಸರಿ 4,349 ಕ್ಯೂಸೆಕ್ ಒಳಹರಿವು ದಾಖಲಾಗಿದ್ದು, ಪ್ರಸ್ತುತ 4,120 ಕ್ಯೂಸೆಕ್ ನೀರು ಹರಿದು ಬರುತ್ತಿದೆ. 751 ಕ್ಯೂಸೆಕ್ ನೀರನ್ನು ಕಾಲುವೆಗಳಿಗೆ ಬಿಡುಗಡೆ ಮಾಡಲಾಗಿದ್ದು, ನದಿಗೆ ಯಾವುದೇ ನೀರನ್ನು ಹರಿಸಲಾಗುತ್ತಿಲ್ಲ.

ಆಲಮಟ್ಟಿ ಜಲಾಶಯದ ನೀರಿನ ಮಟ್ಟ

ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಕೃಷ್ಣಾ ನದಿಗೆ ನಿರ್ಮಿಸಲಾದ ಲಾಲ್ ಬಹದ್ದೂರ್ ಶಾಸ್ತ್ರಿ ಸಾಗರ (ಆಲಮಟ್ಟಿ) ಜಲಾಶಯದ ಗರಿಷ್ಠ ಮಟ್ಟ 519.60 ಮೀಟರ್ ಆಗಿದೆ. ಪ್ರಸ್ತುತ ನೀರಿನ ಮಟ್ಟ 517.40 ಮೀಟರ್ ದಾಖಲಾಗಿದೆ. ಜಲಾಶಯಕ್ಕೆ 5,686 ಕ್ಯೂಸೆಕ್ ಒಳಹರಿವು ಬರುತ್ತಿದ್ದು, 2,597 ಕ್ಯೂಸೆಕ್ ನೀರನ್ನು ಹೊರಹರಿಸಲಾಗುತ್ತಿದೆ.

ತುಂಗಭದ್ರಾ ಜಲಾಶಯದಿಂದ ನೀರು ಬಿಡುಗಡೆಗೆ ರೈತರ ಒತ್ತಾಯ

ಕೊಪ್ಪಳ ಜಿಲ್ಲೆಯಲ್ಲಿ ಮಳೆ ಕೊರತೆ ಮತ್ತು ಬರದ ಪರಿಸ್ಥಿತಿ ಮುಂದುವರಿದಿರುವ ಹಿನ್ನೆಲೆಯಲ್ಲಿ ತುಂಗಭದ್ರಾ ಜಲಾಶಯದಿಂದ ನೀರು ಬಿಡುಗಡೆ ಮಾಡುವಂತೆ ರೈತರು ಆಗ್ರಹಿಸಿದ್ದಾರೆ. ಕೊಪ್ಪಳ ತಾಲೂಕಿನ ಮುನಿರಾಬಾದ್‌ನಲ್ಲಿರುವ ತುಂಗಭದ್ರಾ ನೀರಾವರಿ ವಲಯ ಕಚೇರಿ ಎದುರು ನೀರು ಬಳಕೆ ಸಹಕಾರ ಸಂಘದ ರೈತರು ಪ್ರತಿಭಟನೆ ನಡೆಸಿ, ಹುಲಗಿ, ಶಿವಪುರ ಹಾಗೂ ವಿಜಯನಗರ ಕಾಲುವೆಗಳಿಗೆ ತಕ್ಷಣ ನೀರು ಹರಿಸುವಂತೆ ಒತ್ತಾಯಿಸಿದರು. ‘ನಮ್ಮ ನೀರು, ನಮ್ಮ ಹಕ್ಕು’ ಎಂಬ ಘೋಷಣೆಗಳನ್ನು ಕೂಗಿ ಅಧಿಕಾರಿಗಳ ಗಮನ ಸೆಳೆದರು.

ಇದನ್ನೂ ಓದಿ: ಮಳೆ ಕೊರತೆ, ಕರ್ನಾಟಕದ ಕೆಲವೆಡೆ ವಾಡಿಕೆಗಿಂತ 3-5 ಡಿಗ್ರಿ ಹೆಚ್ಚಿರಲಿದೆ ಗರಿಷ್ಠ ತಾಪಮಾನ

ಜಲಾಶಯದಲ್ಲಿ 25 ಟಿಎಂಸಿಗೂ ಅಧಿಕ ನೀರು ಸಂಗ್ರಹವಿದ್ದರೂ, ಒಳಹರಿವು ಇಳಿಮುಖವಾಗಿರುವುದರಿಂದ ಪರಿಸ್ಥಿತಿಯನ್ನು ಪರಿಶೀಲಿಸಿ ಮುಖ್ಯ ಇಂಜಿನಿಯರ್ ಆಗಮಿಸಿದ ಬಳಿಕ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ನೀರಾವರಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮಂಗಳೂರು: ಬಿ.ಸಿ.ರೋಡ್​ ಬಸ್​ ನಿಲ್ದಾಣದಲ್ಲಿ ತಲ್ವಾರ್​ನಿಂದ ಯುವತಿಯ ಹತ್ಯೆ! ಮಗಳನ್ನು ಕೊಂದು ತಂದೆಗೆ ಕರೆ ಮಾಡಿದ ಪಾಗಲ್ ಪ್ರೇಮಿ ಪೊಲೀಸರ ವಶ – Kannada News | Man unalives woman named Lavanya at B.C road bus stand, Bantwal: One sided Love suspected, Accused Arrested

ಬಿ.ಸಿ.ರೋಡ್​ ಬಸ್​ ನಿಲ್ದಾಣದಲ್ಲಿ ತಲ್ವಾರ್​ನಿಂದ ಯುವತಿಯ ಹತ್ಯೆ!

ಮಂಗಳೂರು, ಜುಲೈ 17: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಿ.ಸಿ.ರೋಡ್ ಬಸ್ ನಿಲ್ದಾಣದಲ್ಲಿ ಗುರುವಾರ ಸಂಜೆ ನಡೆದ ಯುವತಿಯೊಬ್ಬಳ ಹತ್ಯೆ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಕಕ್ಕೆಪದವು ನಿವಾಸಿ ಲಾವಣ್ಯ (21) ಕೊಲೆಯಾದ ಯುವತಿ. ತನ್ನ ಪ್ರೀತಿಯನ್ನು ಒಪ್ಪಿಕೊಳ್ಳಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಆರೋಪಿ ಈ ಹೇಯ ಕೃತ್ಯ ಎಸಗಿದ್ದು, ಮಂಗಳೂರು ಹೊರವಲಯದ ವಾಮಂಜೂರು ಪಚ್ಚನಾಡಿ ಬಳಿ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ.

ನಡೆದಿದ್ದೇನು?

ಮೃತ ಲಾವಣ್ಯ ಕಲ್ಲಡ್ಕದ ಖಾಸಗಿ ನರ್ಸಿಂಗ್ ಹೋಮ್‌ನಲ್ಲಿ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದಳು. ಆಕೆ ಮತ್ತು ಆರೋಪಿ ಚೇತನ್ ಇಬ್ಬರೂ ದೂರದ ಸಂಬಂಧಿಗಳಾಗಿದ್ದು, ಯುವತಿಯನ್ನು ಆರೋಪಿ ಏಕಮುಖವಾಗಿ ಇಷ್ಟಪಡುತ್ತಿದ್ದ (One sided Love) ಎನ್ನಲಾಗಿದೆ. ಗುರುವಾರ (ಜು.16) ಸಂಜೆ ಸುಮಾರು 6 ಗಂಟೆಗೆ ಲಾವಣ್ಯ ಬಂಟ್ವಾಳದಿಂದ ಕಕ್ಕೆಪದವುಗೆ ತೆರಳುವ ಕೆಎಸ್‌ಆರ್‌ಟಿಸಿ ಬಸ್​ನಲ್ಲಿ ಕುಳಿತಿದ್ದಳು. ಈ ವೇಳೆ ಆರೋಪಿ ಆಕೆಯ ಪಕ್ಕದಲ್ಲಿ ಬಂದು ಕುಳಿತಿದ್ದ. ಇದನ್ನು ಗಮನಿಸಿದ ಯುವತಿ ಸಂಬಂಧಿಕರೊಬ್ಬರಿಗೆ ದೂರವಾಣಿ ಕರೆ ಮಾಡಿ, “ತನ್ನ ಪಕ್ಕದಲ್ಲಿ ಓರ್ವ ಯುವಕ ಕುಳಿತಿದ್ದಾನೆ” ಎಂದು ತಿಳಿಸಿದ್ದಳು. ಬಳಿಕ ಕರೆ ಸಂಪರ್ಕ ಕಡಿತಗೊಂಡಿದೆ ಎಂದು ಹೇಳಲಾಗಿದೆ.

ಚಿಕಿತ್ಸೆ ಫಲಿಸದೆ ಯುವತಿ ಸಾವು

ಯುವತಿ ಬಸ್‌ನಿಂದ ಕೆಳಗಿಳಿದ ತಕ್ಷಣ ಚೇತನ್ ಆಕೆಯನ್ನು ಬೆನ್ನಟ್ಟಿದ್ದಾನೆ. ಆರೋಪಿ ತನ್ನ ಬ್ಯಾಗ್‌ನಿಂದ ತಲ್ವಾರ್ ಹೊರತೆಗೆದಾಗ ಲಾವಣ್ಯ ಓಡಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾಳೆ. ಈ ವೇಳೆ ಲಾವಣ್ಯಳ ಮೇಲೆ ಮಾರಕ ಹಲ್ಲೆ ನಡೆಸಿ, ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಬಂಟ್ವಾಳ ಉಪವಿಭಾಗದ ಪೊಲೀಸ್ ಅಧಿಕಾರಿಗಳು, ನಗರ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತೀವ್ರವಾಗಿ ಗಾಯಗೊಂಡ ಲಾವಣ್ಯ ಅವರನ್ನು ತಕ್ಷಣವೇ ಬಂಟ್ವಾಳ ತಾಲೂಕು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ತಂದೆಗೆ ಕರೆ ಮಾಡಿದ್ದ ಆರೋಪಿ

ಕೃತ್ಯ ಎಸಗಿದ ನಂತರ ಆರೋಪಿ ಚೇತನ್ ತನ್ನ ಆಲ್ಟೋ ಕಾರಿನಲ್ಲಿ ಮಂಗಳೂರಿನ ಕಡೆಗೆ ಪರಾರಿಯಾಗಿದ್ದಾನೆ. ಈ ಮಧ್ಯೆ ಆತ ಲಾವಣ್ಯ ತಂದೆಗೆ ಕರೆ ಮಾಡಿ, “ನಾನು ನಿಮ್ಮ ಮಗಳನ್ನು ಕೊಂದಿದ್ದೇನೆ, ಈಗ ನಾನೂ ಸಹ ಜೀವನ ಕೊನೆಗೊಳಿಸಿಕೊಳ್ಳುತ್ತೇನೆ” ಎಂದು ಹೇಳಿದ್ದ ಎನ್ನಲಾಗಿದೆ. ಈ ಮಾಹಿತಿ ಲಭ್ಯವಾಗುತ್ತಿದ್ದಂತೆ ಅಲರ್ಟ್ ಆದ ಬಂಟ್ವಾಳ ಉಪವಿಭಾಗದ ಪೊಲೀಸರು ವಿಶೇಷ ತಂಡವನ್ನು ರಚಿಸಿ ಕಾರ್ಯಾಚರಣೆ ತೀವ್ರಗೊಳಿಸಿದ್ದರು. ಮೊಬೈಲ್ ನೆಟ್‌ವರ್ಕ್ ಹಾಗೂ ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ವಾಮಂಜೂರು ಪಚ್ಚನಾಡಿ ಬಳಿ ಆರೋಪಿಯನ್ನು ಕಾರು ಸಮೇತ ವಶಕ್ಕೆ ಪಡೆಯಲಾಗಿದೆ.

ಇದನ್ನೂ ಓದಿ ಬೆಂಗಳೂರು: 2 ವರ್ಷದ ಮಗು ಅನುಮಾನಾಸ್ಪದ ಸಾವು, ಲಿವ್-ಇನ್ ಸಂಬಂಧದಲ್ಲಿದ್ದ ದಂಪತಿ ವಿರುದ್ಧ ಅನುಮಾನ

ತಿಂಗಳ ಹಿಂದೆಯೇ ನಡೆದಿತ್ತು ಗಲಾಟೆ

ಪೊಲೀಸ್ ಮೂಲಗಳ ಪ್ರಕಾರ, ಒಂದು ತಿಂಗಳ ಹಿಂದೆಯೂ ಆರೋಪಿ ಚೇತನ್ ಲಾವಣ್ಯ ಕೆಲಸ ಮಾಡುತ್ತಿದ್ದ ಆಸ್ಪತ್ರೆಗೆ ಬಂದು ಗಲಾಟೆ ಮಾಡಿದ್ದ. ಆ ಸಂದರ್ಭದಲ್ಲಿ ಆಸ್ಪತ್ರೆಯ ಇತರ ಸಿಬ್ಬಂದಿ ಮಧ್ಯಪ್ರವೇಶಿಸಿ ಆತನನ್ನು ತಡೆದಿದ್ದರು. ಆದರೆ, ಆ ಸಮಯದಲ್ಲಿ ಯಾವುದೇ ಅಧಿಕೃತ ಪೊಲೀಸ್ ದೂರು ದಾಖಲಾಗದೆ ಇರುವುದು ಈ ದುರಂತಕ್ಕೆ ಕಾರಣವಾಯಿತೇ ಎಂಬ ಆಯಾಮದಲ್ಲೂ ತನಿಖೆ ನಡೆಯುತ್ತಿದೆ. ಬಂಟ್ವಾಳ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

PM Modi to flag off India’s first hydrogen train Live: ಹರಿಯಾಣದಲ್ಲಿ ದೇಶದ ಮೊದಲ ‘ಹೈಡ್ರೋಜನ್ ರೈಲಿ’ಗೆ ಪಿಎಂ ಮೋದಿ ಇಂದು ಚಾಲನೆ, ನೇರ ಪ್ರಸಾರ – Kannada News | PM Modi to Unveil India’s First Hydrogen Powered Train, Marking Green Rail Milestone

ಜಿಂದ್, ಜುಲೈ 17: ಭಾರತದ ಇಂಧನ ಮತ್ತು ರೈಲ್ವೆ ವಲಯದಲ್ಲಿ ಇಂದು ಹೊಸ ಕ್ರಾಂತಿ ಸೃಷ್ಟಿಯಾಗುತ್ತಿದೆ. ಹರಿಯಾಣ, ಚಂಡೀಗಢ ಮತ್ತು ಪಂಜಾಬ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಹರಿಯಾಣದ ಜಿಂದ್ ರೈಲು ನಿಲ್ದಾಣದಿಂದ ಜಿಂದ್ ಮತ್ತು ಸೋನಿಪತ್ ನಡುವೆ ಚಲಿಸಲಿರುವ ಭಾರತದ ಮೊದಲ ‘ಹೈಡ್ರೋಜನ್ ಚಾಲಿತ ರೈಲಿ’ಗೆ ಹಸಿರು ನಿಶಾನೆ ತೋರಲಿದ್ದಾರೆ.

ಸಂಪೂರ್ಣವಾಗಿ ಭಾರತದಲ್ಲೇ ವಿನ್ಯಾಸಗೊಳಿಸಿ, ಸ್ಥಳೀಯ ತಂತ್ರಜ್ಞಾನವನ್ನು ಬಳಸಿ ನಿರ್ಮಿಸಲಾದ ಈ ರೈಲಿನ ಉಡಾವಣೆಯೊಂದಿಗೆ, ಭಾರತವು ವಿಶ್ವದಲ್ಲೇ ಹೈಡ್ರೋಜನ್ ರೈಲು ಓಡಿಸುತ್ತಿರುವ ಜರ್ಮನಿ, ಜಪಾನ್, ಚೀನಾ ಮತ್ತು ಅಮೆರಿಕದಂತಹ ಆಯ್ದ ಹೈಟೆಕ್ ದೇಶಗಳ ಗಣ್ಯರ ಗುಂಪಿಗೆ ಅಧಿಕೃತವಾಗಿ ಸೇರ್ಪಡೆಯಾಗಲಿದೆ.

ಚೀನಾ, ಜರ್ಮನಿಯನ್ನೇ ಹಿಂದಿಕ್ಕಿದ ಭಾರತದ ವಿಶ್ವ ದಾಖಲೆ
ಪ್ರಸ್ತುತ ಹೈಡ್ರೋಜನ್ ತಂತ್ರಜ್ಞಾನವನ್ನು ಬಳಸುತ್ತಿರುವ ಜಾಗತಿಕ ರಾಷ್ಟ್ರಗಳಿಗಿಂತ ಭಾರತ ಒಂದು ಹೆಜ್ಜೆ ಮುಂದೆ ನಿಂತು ಹೊಸ ಮೈಲಿಗಲ್ಲು ಸ್ಥಾಪಿಸಿದೆ.

ದೈತ್ಯ 10 ಬೋಗಿಗಳ ರೈಲು: ಜರ್ಮನಿ ಮತ್ತು ಚೀನಾದಂತಹ ಮುಂದುವರಿದ ದೇಶಗಳು ಸಾಮಾನ್ಯವಾಗಿ ಕೇವಲ 2 ಅಥವಾ 3 ಬೋಗಿಗಳ ಹೈಡ್ರೋಜನ್ ರೈಲನ್ನು ಓಡಿಸುತ್ತವೆ. ಆದರೆ ಭಾರತವು ಜಾಗತಿಕ ಇತಿಹಾಸದಲ್ಲೇ ಮೊದಲ ಬಾರಿಗೆ ಬರೋಬ್ಬರಿ 10 ಬೋಗಿಗಳ ಬೃಹತ್ ಹೈಡ್ರೋಜನ್ ರೈಲನ್ನು ಅಭಿವೃದ್ಧಿಪಡಿಸಿದೆ.

ಭಾರಿ ಸಾಮರ್ಥ್ಯ: ಈ ರೈಲು ಏಕಕಾಲಕ್ಕೆ ಸುಮಾರು 2,600 ಪ್ರಯಾಣಿಕರನ್ನು ಸಾಗಿಸುವ ಸಾಮರ್ಥ್ಯ ಹೊಂದಿದ್ದು, ಇದು ಜಾಗತಿಕವಾಗಿ ಹೈಡ್ರೋಜನ್ ರೈಲುಗಳಲ್ಲೇ ಅತ್ಯಧಿಕ ಸಾಮರ್ಥ್ಯವಾಗಿದೆ.

ಅಪ್ರತಿಮ ಶಕ್ತಿ: ಈ ರೈಲು 3,200-ಅಶ್ವಶಕ್ತಿಯ (HP) ಪ್ರೊಪಲ್ಷನ್ ಸಿಸ್ಟಮ್‌ನಿಂದ ನಿಯಂತ್ರಿಸಲ್ಪಡುತ್ತದೆ. ಇದು ಪ್ರಸ್ತುತ ಕಾರ್ಯಾಚರಣೆಯಲ್ಲಿರುವ ವಿಶ್ವದ ಅತ್ಯಂತ ಶಕ್ತಿಶಾಲಿ ಹೈಡ್ರೋಜನ್ ರೈಲುಗಳಲ್ಲಿ ಒಂದಾಗಿದೆ.

ಹೇಗೆ ಕೆಲಸ ಮಾಡುತ್ತದೆ? ಇಂಗಾಲ ಹೊರಸೂಸುವಿಕೆ ‘ಶೂನ್ಯ’
ಈ ರೈಲು ಅತ್ಯಾಧುನಿಕ ಹೈಡ್ರೋಜನ್ ಇಂಧನ ಕೋಶ ತಂತ್ರಜ್ಞಾನದಿಂದ ಚಾಲಿತವಾಗುತ್ತದೆ. ಇದು ಹೈಡ್ರೋಜನ್ ಅನ್ನು ವಿದ್ಯುತ್ ಶಕ್ತಿಯಾಗಿ ಪರಿವರ್ತಿಸಿ ರೈಲನ್ನು ಚಲಾಯಿಸುತ್ತದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Source link

Exit mobile version