Karnataka Dam Water Level: ಕೆಆರ್‌ಎಸ್‌ಗೆ ಒಳಹರಿವು ಮತ್ತಷ್ಟು ಕುಸಿತ; ತುಂಗಭದ್ರೆಯಲ್ಲೂ ಕಳೆದ ವರ್ಷಕ್ಕಿಂತ ಕಡಿಮೆ ನೀರು – Kannada News | Karnataka Reservoir Water Level on 17 July 2026: KRS Inflow Drops Further, Hemavathi and Tungabhadra Storage Remains Below Last Year

ಕೆಆರ್​ಎಸ್ ಡ್ಯಾಂ (ಸಾಂದರ್ಭಿಕ ಚಿತ್ರ)Image Credit source: tv9

ಬೆಂಗಳೂರು, ಜುಲೈ 17: ಕರ್ನಾಟಕದಲ್ಲಿ ಮುಂಗಾರು ಮಳೆ (Monsoon Rain) ಕೊರತೆ ಮುಂದುವರಿದಿರುವ ಪರಿಣಾಮ ಪ್ರಮುಖ ಜಲಾಶಯಗಳ ನೀರಿನ ಮಟ್ಟದಲ್ಲಿ (Karnataka Dam Water Level) ಏರಿಕೆ ಕಾಣುತ್ತಿಲ್ಲ. ಕೆಆರ್‌ಎಸ್, ಹೇಮಾವತಿ, ತುಂಗಭದ್ರೆ ಹಾಗೂ ಆಲಮಟ್ಟಿ ಜಲಾಶಯಗಳ ಒಳಹರಿವು ಸೀಮಿತ ಪ್ರಮಾಣದಲ್ಲಿದ್ದು, ರೈತರು ಹಾಗೂ ನೀರಾವರಿ ವಲಯದ ಅಧಿಕಾರಿಗಳ ಆತಂಕ ಹೆಚ್ಚಾಗಿದೆ. ಬೆಂಗಳೂರಿಗೆ (Bengaluru) ನೀರು ಪೂರೈಸುವ ಪ್ರಮುಖ ಡ್ಯಾಂ ಕೆಆರ್​​ಎಸ್​ಗೆ ಒಳಹರಿವು ಮತ್ತೆ ಇಳಿಕೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ.

ಕೆಆರ್‌ಎಸ್‌ಗೆ ಒಳಹರಿವು ಮತ್ತೆ ಇಳಿಕೆ

ಮಂಡ್ಯ ಜಿಲ್ಲೆಯ ಕೃಷ್ಣರಾಜಸಾಗರ (ಕೆಆರ್‌ಎಸ್) ಜಲಾಶಯದ ಗರಿಷ್ಠ ಮಟ್ಟ 124.80 ಅಡಿ ಆಗಿದ್ದು, ಶುಕ್ರವಾರ ಬೆಳಿಗ್ಗೆ ನೀರಿನ ಮಟ್ಟ 92.92 ಅಡಿ ದಾಖಲಾಗಿದೆ. ಜಲಾಶಯಕ್ಕೆ 1,335 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, 1,090 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಜಲಾಶಯದಲ್ಲಿ ಪ್ರಸ್ತುತ 17.753 ಟಿಎಂಸಿ ನೀರು ಸಂಗ್ರಹವಾಗಿದೆ. ಮುಂಗಾರು ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಸುರಿಯದ ಕಾರಣ ಕೆಆರ್‌ಎಸ್‌ಗೆ ಒಳಹರಿವು ಇನ್ನೂ ಹೆಚ್ಚಾಗಿಲ್ಲ.

ಹೇಮಾವತಿ ಜಲಾಶಯದಲ್ಲೂ ಕಳೆದ ವರ್ಷಕ್ಕಿಂತ ಕಡಿಮೆ ಸಂಗ್ರಹ

ಹಾಸನ ಜಿಲ್ಲೆಯ ಗೊರೂರು ಸಮೀಪದ ಹೇಮಾವತಿ ಜಲಾಶಯದ ಗರಿಷ್ಠ ಮಟ್ಟ 2922 ಅಡಿ (37 ಟಿಎಂಸಿ) ಆಗಿದೆ. ಪ್ರಸ್ತುತ ಜಲಾಶಯದ ನೀರಿನ ಮಟ್ಟ 2903.91 ಅಡಿ ಇದ್ದು, 22.314 ಟಿಎಂಸಿ ನೀರು ಸಂಗ್ರಹವಾಗಿದೆ. ಜಲಾಶಯಕ್ಕೆ 1,512 ಕ್ಯೂಸೆಕ್ ಒಳಹರಿವು ದಾಖಲಾಗಿದ್ದು, 350 ಕ್ಯೂಸೆಕ್ ನೀರನ್ನು ಹೊರಹರಿಸಲಾಗುತ್ತಿದೆ.

ಕಳೆದ ವರ್ಷದ ಇದೇ ದಿನ ಜಲಾಶಯದಲ್ಲಿ 2920.99 ಅಡಿ ನೀರಿನ ಮಟ್ಟ ಹಾಗೂ 36.127 ಟಿಎಂಸಿ ನೀರು ಸಂಗ್ರಹವಿತ್ತು. ಆಗ 6,413 ಕ್ಯೂಸೆಕ್ ಒಳಹರಿವು ಹಾಗೂ 2,900 ಕ್ಯೂಸೆಕ್ ಹೊರಹರಿವು ದಾಖಲಾಗಿತ್ತು. ಹೀಗಾಗಿ ಈ ಬಾರಿಯ ಸಂಗ್ರಹ ಹಾಗೂ ಒಳಹರಿವು ಎರಡೂ ಗಮನಾರ್ಹವಾಗಿ ಕಡಿಮೆಯಾಗಿದೆ.

ತುಂಗಭದ್ರೆಯಲ್ಲಿ 26.125 ಟಿಎಂಸಿ ನೀರು ಸಂಗ್ರಹ

ವಿಜಯನಗರ ಜಿಲ್ಲೆಯ ಹೊಸಪೇಟೆ ಸಮೀಪದ ತುಂಗಭದ್ರಾ ಜಲಾಶಯದ ಗರಿಷ್ಠ ಮಟ್ಟ 1633 ಅಡಿ ಆಗಿದೆ. ಪ್ರಸ್ತುತ ಜಲಾಶಯದ ನೀರಿನ ಮಟ್ಟ 1603.32 ಅಡಿ ಇದ್ದು, 26.125 ಟಿಎಂಸಿ ನೀರು ಸಂಗ್ರಹವಾಗಿದೆ. ಕಳೆದ 24 ಗಂಟೆಗಳಲ್ಲಿ ಸರಾಸರಿ 4,349 ಕ್ಯೂಸೆಕ್ ಒಳಹರಿವು ದಾಖಲಾಗಿದ್ದು, ಪ್ರಸ್ತುತ 4,120 ಕ್ಯೂಸೆಕ್ ನೀರು ಹರಿದು ಬರುತ್ತಿದೆ. 751 ಕ್ಯೂಸೆಕ್ ನೀರನ್ನು ಕಾಲುವೆಗಳಿಗೆ ಬಿಡುಗಡೆ ಮಾಡಲಾಗಿದ್ದು, ನದಿಗೆ ಯಾವುದೇ ನೀರನ್ನು ಹರಿಸಲಾಗುತ್ತಿಲ್ಲ.

ಆಲಮಟ್ಟಿ ಜಲಾಶಯದ ನೀರಿನ ಮಟ್ಟ

ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಕೃಷ್ಣಾ ನದಿಗೆ ನಿರ್ಮಿಸಲಾದ ಲಾಲ್ ಬಹದ್ದೂರ್ ಶಾಸ್ತ್ರಿ ಸಾಗರ (ಆಲಮಟ್ಟಿ) ಜಲಾಶಯದ ಗರಿಷ್ಠ ಮಟ್ಟ 519.60 ಮೀಟರ್ ಆಗಿದೆ. ಪ್ರಸ್ತುತ ನೀರಿನ ಮಟ್ಟ 517.40 ಮೀಟರ್ ದಾಖಲಾಗಿದೆ. ಜಲಾಶಯಕ್ಕೆ 5,686 ಕ್ಯೂಸೆಕ್ ಒಳಹರಿವು ಬರುತ್ತಿದ್ದು, 2,597 ಕ್ಯೂಸೆಕ್ ನೀರನ್ನು ಹೊರಹರಿಸಲಾಗುತ್ತಿದೆ.

ತುಂಗಭದ್ರಾ ಜಲಾಶಯದಿಂದ ನೀರು ಬಿಡುಗಡೆಗೆ ರೈತರ ಒತ್ತಾಯ

ಕೊಪ್ಪಳ ಜಿಲ್ಲೆಯಲ್ಲಿ ಮಳೆ ಕೊರತೆ ಮತ್ತು ಬರದ ಪರಿಸ್ಥಿತಿ ಮುಂದುವರಿದಿರುವ ಹಿನ್ನೆಲೆಯಲ್ಲಿ ತುಂಗಭದ್ರಾ ಜಲಾಶಯದಿಂದ ನೀರು ಬಿಡುಗಡೆ ಮಾಡುವಂತೆ ರೈತರು ಆಗ್ರಹಿಸಿದ್ದಾರೆ. ಕೊಪ್ಪಳ ತಾಲೂಕಿನ ಮುನಿರಾಬಾದ್‌ನಲ್ಲಿರುವ ತುಂಗಭದ್ರಾ ನೀರಾವರಿ ವಲಯ ಕಚೇರಿ ಎದುರು ನೀರು ಬಳಕೆ ಸಹಕಾರ ಸಂಘದ ರೈತರು ಪ್ರತಿಭಟನೆ ನಡೆಸಿ, ಹುಲಗಿ, ಶಿವಪುರ ಹಾಗೂ ವಿಜಯನಗರ ಕಾಲುವೆಗಳಿಗೆ ತಕ್ಷಣ ನೀರು ಹರಿಸುವಂತೆ ಒತ್ತಾಯಿಸಿದರು. ‘ನಮ್ಮ ನೀರು, ನಮ್ಮ ಹಕ್ಕು’ ಎಂಬ ಘೋಷಣೆಗಳನ್ನು ಕೂಗಿ ಅಧಿಕಾರಿಗಳ ಗಮನ ಸೆಳೆದರು.

ಇದನ್ನೂ ಓದಿ: ಮಳೆ ಕೊರತೆ, ಕರ್ನಾಟಕದ ಕೆಲವೆಡೆ ವಾಡಿಕೆಗಿಂತ 3-5 ಡಿಗ್ರಿ ಹೆಚ್ಚಿರಲಿದೆ ಗರಿಷ್ಠ ತಾಪಮಾನ

ಜಲಾಶಯದಲ್ಲಿ 25 ಟಿಎಂಸಿಗೂ ಅಧಿಕ ನೀರು ಸಂಗ್ರಹವಿದ್ದರೂ, ಒಳಹರಿವು ಇಳಿಮುಖವಾಗಿರುವುದರಿಂದ ಪರಿಸ್ಥಿತಿಯನ್ನು ಪರಿಶೀಲಿಸಿ ಮುಖ್ಯ ಇಂಜಿನಿಯರ್ ಆಗಮಿಸಿದ ಬಳಿಕ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ನೀರಾವರಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮಂಗಳೂರು: ಬಿ.ಸಿ.ರೋಡ್​ ಬಸ್​ ನಿಲ್ದಾಣದಲ್ಲಿ ತಲ್ವಾರ್​ನಿಂದ ಯುವತಿಯ ಹತ್ಯೆ! ಮಗಳನ್ನು ಕೊಂದು ತಂದೆಗೆ ಕರೆ ಮಾಡಿದ ಪಾಗಲ್ ಪ್ರೇಮಿ ಪೊಲೀಸರ ವಶ – Kannada News | Man unalives woman named Lavanya at B.C road bus stand, Bantwal: One sided Love suspected, Accused Arrested

ಬಿ.ಸಿ.ರೋಡ್​ ಬಸ್​ ನಿಲ್ದಾಣದಲ್ಲಿ ತಲ್ವಾರ್​ನಿಂದ ಯುವತಿಯ ಹತ್ಯೆ!

ಮಂಗಳೂರು, ಜುಲೈ 17: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಿ.ಸಿ.ರೋಡ್ ಬಸ್ ನಿಲ್ದಾಣದಲ್ಲಿ ಗುರುವಾರ ಸಂಜೆ ನಡೆದ ಯುವತಿಯೊಬ್ಬಳ ಹತ್ಯೆ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಕಕ್ಕೆಪದವು ನಿವಾಸಿ ಲಾವಣ್ಯ (21) ಕೊಲೆಯಾದ ಯುವತಿ. ತನ್ನ ಪ್ರೀತಿಯನ್ನು ಒಪ್ಪಿಕೊಳ್ಳಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಆರೋಪಿ ಈ ಹೇಯ ಕೃತ್ಯ ಎಸಗಿದ್ದು, ಮಂಗಳೂರು ಹೊರವಲಯದ ವಾಮಂಜೂರು ಪಚ್ಚನಾಡಿ ಬಳಿ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ.

ನಡೆದಿದ್ದೇನು?

ಮೃತ ಲಾವಣ್ಯ ಕಲ್ಲಡ್ಕದ ಖಾಸಗಿ ನರ್ಸಿಂಗ್ ಹೋಮ್‌ನಲ್ಲಿ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದಳು. ಆಕೆ ಮತ್ತು ಆರೋಪಿ ಚೇತನ್ ಇಬ್ಬರೂ ದೂರದ ಸಂಬಂಧಿಗಳಾಗಿದ್ದು, ಯುವತಿಯನ್ನು ಆರೋಪಿ ಏಕಮುಖವಾಗಿ ಇಷ್ಟಪಡುತ್ತಿದ್ದ (One sided Love) ಎನ್ನಲಾಗಿದೆ. ಗುರುವಾರ (ಜು.16) ಸಂಜೆ ಸುಮಾರು 6 ಗಂಟೆಗೆ ಲಾವಣ್ಯ ಬಂಟ್ವಾಳದಿಂದ ಕಕ್ಕೆಪದವುಗೆ ತೆರಳುವ ಕೆಎಸ್‌ಆರ್‌ಟಿಸಿ ಬಸ್​ನಲ್ಲಿ ಕುಳಿತಿದ್ದಳು. ಈ ವೇಳೆ ಆರೋಪಿ ಆಕೆಯ ಪಕ್ಕದಲ್ಲಿ ಬಂದು ಕುಳಿತಿದ್ದ. ಇದನ್ನು ಗಮನಿಸಿದ ಯುವತಿ ಸಂಬಂಧಿಕರೊಬ್ಬರಿಗೆ ದೂರವಾಣಿ ಕರೆ ಮಾಡಿ, “ತನ್ನ ಪಕ್ಕದಲ್ಲಿ ಓರ್ವ ಯುವಕ ಕುಳಿತಿದ್ದಾನೆ” ಎಂದು ತಿಳಿಸಿದ್ದಳು. ಬಳಿಕ ಕರೆ ಸಂಪರ್ಕ ಕಡಿತಗೊಂಡಿದೆ ಎಂದು ಹೇಳಲಾಗಿದೆ.

ಚಿಕಿತ್ಸೆ ಫಲಿಸದೆ ಯುವತಿ ಸಾವು

ಯುವತಿ ಬಸ್‌ನಿಂದ ಕೆಳಗಿಳಿದ ತಕ್ಷಣ ಚೇತನ್ ಆಕೆಯನ್ನು ಬೆನ್ನಟ್ಟಿದ್ದಾನೆ. ಆರೋಪಿ ತನ್ನ ಬ್ಯಾಗ್‌ನಿಂದ ತಲ್ವಾರ್ ಹೊರತೆಗೆದಾಗ ಲಾವಣ್ಯ ಓಡಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾಳೆ. ಈ ವೇಳೆ ಲಾವಣ್ಯಳ ಮೇಲೆ ಮಾರಕ ಹಲ್ಲೆ ನಡೆಸಿ, ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಬಂಟ್ವಾಳ ಉಪವಿಭಾಗದ ಪೊಲೀಸ್ ಅಧಿಕಾರಿಗಳು, ನಗರ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತೀವ್ರವಾಗಿ ಗಾಯಗೊಂಡ ಲಾವಣ್ಯ ಅವರನ್ನು ತಕ್ಷಣವೇ ಬಂಟ್ವಾಳ ತಾಲೂಕು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ತಂದೆಗೆ ಕರೆ ಮಾಡಿದ್ದ ಆರೋಪಿ

ಕೃತ್ಯ ಎಸಗಿದ ನಂತರ ಆರೋಪಿ ಚೇತನ್ ತನ್ನ ಆಲ್ಟೋ ಕಾರಿನಲ್ಲಿ ಮಂಗಳೂರಿನ ಕಡೆಗೆ ಪರಾರಿಯಾಗಿದ್ದಾನೆ. ಈ ಮಧ್ಯೆ ಆತ ಲಾವಣ್ಯ ತಂದೆಗೆ ಕರೆ ಮಾಡಿ, “ನಾನು ನಿಮ್ಮ ಮಗಳನ್ನು ಕೊಂದಿದ್ದೇನೆ, ಈಗ ನಾನೂ ಸಹ ಜೀವನ ಕೊನೆಗೊಳಿಸಿಕೊಳ್ಳುತ್ತೇನೆ” ಎಂದು ಹೇಳಿದ್ದ ಎನ್ನಲಾಗಿದೆ. ಈ ಮಾಹಿತಿ ಲಭ್ಯವಾಗುತ್ತಿದ್ದಂತೆ ಅಲರ್ಟ್ ಆದ ಬಂಟ್ವಾಳ ಉಪವಿಭಾಗದ ಪೊಲೀಸರು ವಿಶೇಷ ತಂಡವನ್ನು ರಚಿಸಿ ಕಾರ್ಯಾಚರಣೆ ತೀವ್ರಗೊಳಿಸಿದ್ದರು. ಮೊಬೈಲ್ ನೆಟ್‌ವರ್ಕ್ ಹಾಗೂ ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ವಾಮಂಜೂರು ಪಚ್ಚನಾಡಿ ಬಳಿ ಆರೋಪಿಯನ್ನು ಕಾರು ಸಮೇತ ವಶಕ್ಕೆ ಪಡೆಯಲಾಗಿದೆ.

ಇದನ್ನೂ ಓದಿ ಬೆಂಗಳೂರು: 2 ವರ್ಷದ ಮಗು ಅನುಮಾನಾಸ್ಪದ ಸಾವು, ಲಿವ್-ಇನ್ ಸಂಬಂಧದಲ್ಲಿದ್ದ ದಂಪತಿ ವಿರುದ್ಧ ಅನುಮಾನ

ತಿಂಗಳ ಹಿಂದೆಯೇ ನಡೆದಿತ್ತು ಗಲಾಟೆ

ಪೊಲೀಸ್ ಮೂಲಗಳ ಪ್ರಕಾರ, ಒಂದು ತಿಂಗಳ ಹಿಂದೆಯೂ ಆರೋಪಿ ಚೇತನ್ ಲಾವಣ್ಯ ಕೆಲಸ ಮಾಡುತ್ತಿದ್ದ ಆಸ್ಪತ್ರೆಗೆ ಬಂದು ಗಲಾಟೆ ಮಾಡಿದ್ದ. ಆ ಸಂದರ್ಭದಲ್ಲಿ ಆಸ್ಪತ್ರೆಯ ಇತರ ಸಿಬ್ಬಂದಿ ಮಧ್ಯಪ್ರವೇಶಿಸಿ ಆತನನ್ನು ತಡೆದಿದ್ದರು. ಆದರೆ, ಆ ಸಮಯದಲ್ಲಿ ಯಾವುದೇ ಅಧಿಕೃತ ಪೊಲೀಸ್ ದೂರು ದಾಖಲಾಗದೆ ಇರುವುದು ಈ ದುರಂತಕ್ಕೆ ಕಾರಣವಾಯಿತೇ ಎಂಬ ಆಯಾಮದಲ್ಲೂ ತನಿಖೆ ನಡೆಯುತ್ತಿದೆ. ಬಂಟ್ವಾಳ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

PM Modi to flag off India’s first hydrogen train Live: ಹರಿಯಾಣದಲ್ಲಿ ದೇಶದ ಮೊದಲ ‘ಹೈಡ್ರೋಜನ್ ರೈಲಿ’ಗೆ ಪಿಎಂ ಮೋದಿ ಇಂದು ಚಾಲನೆ, ನೇರ ಪ್ರಸಾರ – Kannada News | PM Modi to Unveil India’s First Hydrogen Powered Train, Marking Green Rail Milestone

ಜಿಂದ್, ಜುಲೈ 17: ಭಾರತದ ಇಂಧನ ಮತ್ತು ರೈಲ್ವೆ ವಲಯದಲ್ಲಿ ಇಂದು ಹೊಸ ಕ್ರಾಂತಿ ಸೃಷ್ಟಿಯಾಗುತ್ತಿದೆ. ಹರಿಯಾಣ, ಚಂಡೀಗಢ ಮತ್ತು ಪಂಜಾಬ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಹರಿಯಾಣದ ಜಿಂದ್ ರೈಲು ನಿಲ್ದಾಣದಿಂದ ಜಿಂದ್ ಮತ್ತು ಸೋನಿಪತ್ ನಡುವೆ ಚಲಿಸಲಿರುವ ಭಾರತದ ಮೊದಲ ‘ಹೈಡ್ರೋಜನ್ ಚಾಲಿತ ರೈಲಿ’ಗೆ ಹಸಿರು ನಿಶಾನೆ ತೋರಲಿದ್ದಾರೆ.

ಸಂಪೂರ್ಣವಾಗಿ ಭಾರತದಲ್ಲೇ ವಿನ್ಯಾಸಗೊಳಿಸಿ, ಸ್ಥಳೀಯ ತಂತ್ರಜ್ಞಾನವನ್ನು ಬಳಸಿ ನಿರ್ಮಿಸಲಾದ ಈ ರೈಲಿನ ಉಡಾವಣೆಯೊಂದಿಗೆ, ಭಾರತವು ವಿಶ್ವದಲ್ಲೇ ಹೈಡ್ರೋಜನ್ ರೈಲು ಓಡಿಸುತ್ತಿರುವ ಜರ್ಮನಿ, ಜಪಾನ್, ಚೀನಾ ಮತ್ತು ಅಮೆರಿಕದಂತಹ ಆಯ್ದ ಹೈಟೆಕ್ ದೇಶಗಳ ಗಣ್ಯರ ಗುಂಪಿಗೆ ಅಧಿಕೃತವಾಗಿ ಸೇರ್ಪಡೆಯಾಗಲಿದೆ.

ಚೀನಾ, ಜರ್ಮನಿಯನ್ನೇ ಹಿಂದಿಕ್ಕಿದ ಭಾರತದ ವಿಶ್ವ ದಾಖಲೆ
ಪ್ರಸ್ತುತ ಹೈಡ್ರೋಜನ್ ತಂತ್ರಜ್ಞಾನವನ್ನು ಬಳಸುತ್ತಿರುವ ಜಾಗತಿಕ ರಾಷ್ಟ್ರಗಳಿಗಿಂತ ಭಾರತ ಒಂದು ಹೆಜ್ಜೆ ಮುಂದೆ ನಿಂತು ಹೊಸ ಮೈಲಿಗಲ್ಲು ಸ್ಥಾಪಿಸಿದೆ.

ದೈತ್ಯ 10 ಬೋಗಿಗಳ ರೈಲು: ಜರ್ಮನಿ ಮತ್ತು ಚೀನಾದಂತಹ ಮುಂದುವರಿದ ದೇಶಗಳು ಸಾಮಾನ್ಯವಾಗಿ ಕೇವಲ 2 ಅಥವಾ 3 ಬೋಗಿಗಳ ಹೈಡ್ರೋಜನ್ ರೈಲನ್ನು ಓಡಿಸುತ್ತವೆ. ಆದರೆ ಭಾರತವು ಜಾಗತಿಕ ಇತಿಹಾಸದಲ್ಲೇ ಮೊದಲ ಬಾರಿಗೆ ಬರೋಬ್ಬರಿ 10 ಬೋಗಿಗಳ ಬೃಹತ್ ಹೈಡ್ರೋಜನ್ ರೈಲನ್ನು ಅಭಿವೃದ್ಧಿಪಡಿಸಿದೆ.

ಭಾರಿ ಸಾಮರ್ಥ್ಯ: ಈ ರೈಲು ಏಕಕಾಲಕ್ಕೆ ಸುಮಾರು 2,600 ಪ್ರಯಾಣಿಕರನ್ನು ಸಾಗಿಸುವ ಸಾಮರ್ಥ್ಯ ಹೊಂದಿದ್ದು, ಇದು ಜಾಗತಿಕವಾಗಿ ಹೈಡ್ರೋಜನ್ ರೈಲುಗಳಲ್ಲೇ ಅತ್ಯಧಿಕ ಸಾಮರ್ಥ್ಯವಾಗಿದೆ.

ಅಪ್ರತಿಮ ಶಕ್ತಿ: ಈ ರೈಲು 3,200-ಅಶ್ವಶಕ್ತಿಯ (HP) ಪ್ರೊಪಲ್ಷನ್ ಸಿಸ್ಟಮ್‌ನಿಂದ ನಿಯಂತ್ರಿಸಲ್ಪಡುತ್ತದೆ. ಇದು ಪ್ರಸ್ತುತ ಕಾರ್ಯಾಚರಣೆಯಲ್ಲಿರುವ ವಿಶ್ವದ ಅತ್ಯಂತ ಶಕ್ತಿಶಾಲಿ ಹೈಡ್ರೋಜನ್ ರೈಲುಗಳಲ್ಲಿ ಒಂದಾಗಿದೆ.

ಹೇಗೆ ಕೆಲಸ ಮಾಡುತ್ತದೆ? ಇಂಗಾಲ ಹೊರಸೂಸುವಿಕೆ ‘ಶೂನ್ಯ’
ಈ ರೈಲು ಅತ್ಯಾಧುನಿಕ ಹೈಡ್ರೋಜನ್ ಇಂಧನ ಕೋಶ ತಂತ್ರಜ್ಞಾನದಿಂದ ಚಾಲಿತವಾಗುತ್ತದೆ. ಇದು ಹೈಡ್ರೋಜನ್ ಅನ್ನು ವಿದ್ಯುತ್ ಶಕ್ತಿಯಾಗಿ ಪರಿವರ್ತಿಸಿ ರೈಲನ್ನು ಚಲಾಯಿಸುತ್ತದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Source link

Gold Rate: ಚಿನ್ನದ ಬೆಲೆ ಸತತ ಇಳಿಕೆ; ಬೆಳ್ಳಿ ಬೆಲೆಯೂ ಭರ್ಜರಿ ಕುಸಿತ – Kannada News | Gold Price Today on 17th July 2026, Gold And Silver Rates In Bengaluru, Delhi, Mumbai | Latest News in Kannada

ನವದೆಹಲಿ, ಜುಲೈ 17: ಚಿನ್ನದ ಬೆಲೆ ಸತತವಾಗಿ ತಗ್ಗಿದೆ. ನಿನ್ನೆ 25 ರೂ ಇಳಿದಿದ್ದ ಇದರ ಬೆಲೆ (Gold Rates) ಇಂದು ಶುಕ್ರವಾರ 70 ರೂ ಕಡಿಮೆಗೊಂಡಿದೆ. ವಿದೇಶಗಳಲ್ಲೂ ಬಹುತೇಕ ಕಡೆ ಬಂಗಾರದ ದರ ಇಳಿದಿದೆ. ಇನ್ನು, ಬೆಳ್ಳಿ ಬೆಲೆಯೂ ಶುಕ್ರವಾರ ಗ್ರಾಮ್​ಗೆ 5 ರೂ ಕಡಿಮೆ ಆಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,30,650 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,42,530 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 23,000 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,30,650 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 23,000 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 23,500 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಜುಲೈ 17ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,253 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,065 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 10,690 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 230 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,253 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,065 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 230 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 13,065 ರೂ
  • ಚೆನ್ನೈ: 13,100 ರೂ
  • ಮುಂಬೈ: 13,065 ರೂ
  • ದೆಹಲಿ: 13,080 ರೂ
  • ಕೋಲ್ಕತಾ: 13,065 ರೂ
  • ಕೇರಳ: 13,065 ರೂ
  • ಅಹ್ಮದಾಬಾದ್: 13,070 ರೂ
  • ಜೈಪುರ್: 13,080 ರೂ
  • ಲಕ್ನೋ: 13,080 ರೂ
  • ಭುವನೇಶ್ವರ್: 13,065 ರೂ

ಇದನ್ನೂ ಓದಿ: ಐಟಿ ರಿಟರ್ನ್ಸ್ ಸಲ್ಲಿಸಲು ಜುಲೈ 31 ಕೊನೆಯ ದಿನ; ಡೆಡ್​ಲೈನ್ ಮಿಸ್ ಆದರೆ ಏನೆಲ್ಲಾ ದಂಡ, ಶುಲ್ಕಗಳಿವೆ ಗೊತ್ತಾ?

ವಿದೇಶಗಳಲ್ಲಿ 24 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 537 ರಿಂಗಿಟ್ (12,677 ರುಪಾಯಿ)
  • ದುಬೈ: 481.50 ಡಿರಾಮ್ (12,625 ರುಪಾಯಿ)
  • ಅಮೆರಿಕ: 132 ಡಾಲರ್ (12,712 ರುಪಾಯಿ)
  • ಸಿಂಗಾಪುರ: 175.20 ಸಿಂಗಾಪುರ್ ಡಾಲರ್ (13,075 ರುಪಾಯಿ)
  • ಕತಾರ್: 483.50 ಕತಾರಿ ರಿಯಾಲ್ (12,774 ರೂ)
  • ಸೌದಿ ಅರೇಬಿಯಾ: 500 ಸೌದಿ ರಿಯಾಲ್ (12,822 ರುಪಾಯಿ)
  • ಓಮನ್: 51.05 ಒಮಾನಿ ರಿಯಾಲ್ (12,770 ರುಪಾಯಿ)
  • ಕುವೇತ್: 40.28 ಕುವೇತಿ ದಿನಾರ್ (12,615 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 230 ರೂ
  • ಚೆನ್ನೈ: 235 ರೂ
  • ಮುಂಬೈ: 230 ರೂ
  • ದೆಹಲಿ: 230 ರೂ
  • ಕೋಲ್ಕತಾ: 230 ರೂ
  • ಕೇರಳ: 235 ರೂ
  • ಅಹ್ಮದಾಬಾದ್: 230 ರೂ
  • ಜೈಪುರ್: 230 ರೂ
  • ಲಕ್ನೋ: 230 ರೂ
  • ಭುವನೇಶ್ವರ್: 235 ರೂ
  • ಪುಣೆ: 230

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

NEET-UG Topper Aryan Gupta: ನೀಟ್-ಯುಜಿ ಟಾಪರ್ ಆರ್ಯನ್ ಗುಪ್ತ ಯಶೋಗಾಥೆ; ಅಜ್ಜಿಯನ್ನು ಬಲಿ ಪಡೆದ ಕ್ಯಾನ್ಸರ್ ವಿರುದ್ಧ ಹೋರಾಡಲು ವೈದ್ಯನಾಗುವ ಸಂಕಲ್ಪ – Kannada News | NEET UG 2026 AIR 1: Aryan Gupta’s 17 Hour Study and Grandma’s Cancer Motivated Topper

ನವದೆಹಲಿ: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ನಡೆಸಿದ ಪ್ರತಿಷ್ಠಿತ ನೀಟ್-ಯುಜಿ (NEET-UG) 2026 ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಪಂಜಾಬ್‌ನ ಲುಧಿಯಾನದ ಆರ್ಯನ್ ಗುಪ್ತ 720ಕ್ಕೆ 715 ಅಂಕಗಳನ್ನು ಗಳಿಸಿ ಅಖಿಲ ಭಾರತ ಮಟ್ಟದಲ್ಲಿ ಪ್ರಥಮ ರ್ಯಾಂಕ್ (AIR-1) ಸಾಧಿಸಿದ್ದಾರೆ. ವೈದ್ಯಕೀಯ ಹಿನ್ನೆಲೆಯ ಕುಟುಂಬದಲ್ಲಿ ಬೆಳೆದಿರುವ ಆರ್ಯನ್ ಅವರ ತಂದೆ ಡಾ. ಸಚಿನ್ ಗುಪ್ತಾ ಅರಿವಳಿಕೆ ತಜ್ಞರಾಗಿದ್ದು, ತಾಯಿ ಡಾ. ರೀನಾ ಗುಪ್ತಾ ಸ್ತ್ರೀರೋಗ ತಜ್ಞರಾಗಿದ್ದಾರೆ. ಅವರ ಹಿರಿಯ ಸಹೋದರ ಕೂಡ ಕಳೆದ ವರ್ಷದ ನೀಟ್ ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ 54ನೇ ರ್ಯಾಂಕ್ ಪಡೆದು ಪ್ರಸ್ತುತ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದಾರೆ.

’17 ಗಂಟೆಗಳ ಓದು, ನಿದ್ದೆಯನ್ನೂ ಮರೆತ ಪರಿಶ್ರಮ’:

ತಮ್ಮ ಯಶಸ್ಸಿನ ಬಗ್ಗೆ ಮಾತನಾಡಿದ ಆರ್ಯನ್, “ಪ್ರತಿದಿನ 16-17 ಗಂಟೆಗಳ ಕಾಲ ಸಂಪೂರ್ಣ ಏಕಾಗ್ರತೆಯಿಂದ ಓದುತ್ತಿದ್ದೆ. ಕೆಲವೊಮ್ಮೆ ಸರಿಯಾಗಿ ನಿದ್ದೆಯೂ ಮಾಡುತ್ತಿರಲಿಲ್ಲ. ಈಗ ಫಲಿತಾಂಶ ನೋಡಿದಾಗ ಈ ಯಶಸ್ಸು ಒಂದು ಸುಂದರ ಕನಸಿನಂತೆ ಅನಿಸುತ್ತಿದೆ. ಮನೆಯಲ್ಲಿ ಎಲ್ಲರೂ ತುಂಬಾ ಸಂತೋಷವಾಗಿದ್ದಾರೆ” ಎಂದು ಹೇಳಿದ್ದಾರೆ.

ಅಜ್ಜಿಯ ಕ್ಯಾನ್ಸರ್ ಸಾವು ಬದಲಿಸಿತು ಜೀವನದ ಗುರಿ:

ಆರ್ಯನ್ ಅವರ ಯಶಸ್ಸಿನ ಹಿಂದಿನ ಅತ್ಯಂತ ಭಾವನಾತ್ಮಕ ಕಥೆ ಅವರ ಅಜ್ಜಿಯ ನೆನಪು. ಮೂರನೇ ತರಗತಿಯಲ್ಲಿ ಓದುತ್ತಿದ್ದಾಗ, ನಾಲ್ಕನೇ ಹಂತದ ಕ್ಯಾನ್ಸರ್‌ನಿಂದ ಅಜ್ಜಿ ಮೃತಪಟ್ಟಿದ್ದರು. ಆ ಘಟನೆ ಅವರ ಜೀವನದ ದಿಕ್ಕನ್ನೇ ಬದಲಿಸಿತು. “ನಮ್ಮ ಕುಟುಂಬದಲ್ಲಿ ಎಲ್ಲರೂ ವೈದ್ಯರಾಗಿದ್ದರೂ, ಅಜ್ಜಿಯನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಆ ದಿನವೇ ನಾನು ಭವಿಷ್ಯದಲ್ಲಿ ಕ್ಯಾನ್ಸರ್ ತಜ್ಞ (Oncologist) ಆಗಿ ಈ ಮಾರಕ ಕಾಯಿಲೆಯ ವಿರುದ್ಧ ಹೋರಾಡಬೇಕು ಎಂದು ನಿರ್ಧರಿಸಿದೆ,” ಎಂದು ಆರ್ಯನ್ ಭಾವುಕರಾಗಿ ತಿಳಿಸಿದ್ದಾರೆ.

ಇದನ್ನೂ ಓದಿ: ಕ್ಯಾಂಪಸ್ ಇಂಟರ್ವ್ಯೂಗೂ ಮುನ್ನವೇ ಒಲಿದ ಅದೃಷ್ಟ; ಭಾರತದ 21 ವರ್ಷದ ವಿದ್ಯಾರ್ಥಿಗೆ ನೆದರ್‌ಲ್ಯಾಂಡ್ಸ್ ಕಂಪನಿಯಿಂದ 2.5 ಕೋಟಿ ರೂ. ಜಾಬ್ ಆಫರ್!

‘ಇದು ಆರಂಭ ಮಾತ್ರ, ಗುರಿ ಇನ್ನೂ ದೊಡ್ಡದು’:

ದೇಶದ ಮೊದಲ ರ್ಯಾಂಕ್ ಗಳಿಸಿದ ಸಂತೋಷದ ನಡುವೆಯೂ ತಮ್ಮ ಗುರಿ ಇನ್ನೂ ದೊಡ್ಡದಾಗಿದೆ ಎಂದು ಆರ್ಯನ್ ಹೇಳಿದ್ದಾರೆ. “ಜೀವನದಲ್ಲಿ ಸಾಧಿಸಬೇಕಿರುವುದು ಇನ್ನೂ ತುಂಬಾ ಇದೆ. ಆದರೆ ಸದ್ಯಕ್ಕೆ ಈ ಯಶಸ್ಸು ನನಗೆ ಅಪಾರ ಹೆಮ್ಮೆ ಮತ್ತು ಸಂತೋಷವನ್ನು ತಂದಿದೆ” ಎಂದು ಅವರು ತಿಳಿಸಿದ್ದಾರೆ. ಈ ಮೂಲಕ ಕಠಿಣ ಪರಿಶ್ರಮ, ದೃಢ ಸಂಕಲ್ಪ ಮತ್ತು ಸಮಾಜಕ್ಕೆ ಸೇವೆ ಸಲ್ಲಿಸುವ ಕನಸು ಇದ್ದರೆ ಯಾವುದೇ ಗುರಿಯನ್ನು ಸಾಧಿಸಬಹುದು ಎಂಬುದಕ್ಕೆ ಆರ್ಯನ್ ಗುಪ್ತ ಅವರ ಯಶೋಗಾಥೆ ದೇಶದ ಲಕ್ಷಾಂತರ ನೀಟ್ ಅಭ್ಯರ್ಥಿಗಳಿಗೆ ಸ್ಫೂರ್ತಿಯಾಗಿದೆ.

ಶಿಕ್ಷಣ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಿಎಂ ವಿಜಯ್ ಬಗ್ಗೆ ಮೊದಲ ಬಾರಿ ಮಾತನಾಡಿದ ಪುತ್ರ ಸಂಜಯ್ – Kannada News | Jason Sanjay talks about his family and his father Vijay

ವಿಜಯ್  (Vijay) ಸಿಎಂ ಆಗಿದ್ದಾರೆ. ವಿಜಯ್, ಸಿನಿಮಾ ಮತ್ತು ರಾಜಕೀಯ ಕ್ಷೇತ್ರ ಎರಡರಲ್ಲೂ ದೊಡ್ಡ ಯಶಸ್ಸು ಗಳಿಸಿದಂತಾಗಿದೆ. ಆದರೆ ಅವರ ಖಾಸಗಿ ಬದುಕು ಇನ್ನೂ ಚರ್ಚೆಯ ವಿಷಯವಾಗಿಯೇ ಉಳಿದಿದೆ. ವಿಜಯ್ ಅವರು ಸಿಎಂ ಆಗುವ ಮುಂಚೆಯೇ ಪತ್ನಿ ಸಂಗೀತಾ ಅವರೊಟ್ಟಿಗೆ ವಿಚ್ಛೇದನಕ್ಕೆ ಅರ್ಜಿ ಹಾಕಿದ್ದರು. ಆ ಸಮಯದಲ್ಲಿ ವಿಜಯ್ ಅವರ ಪುತ್ರ ಜೇಸನ್ ಸಂಜಯ್ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಹೆಸರಿನ ಜೊತೆಗಿದ್ದ ‘ವಿಜಯ್’ ಹೆಸರನ್ನು ತೆಗೆದು ಹಾಕಿದ್ದರು. ಆ ಮೂಲಕ ಪರೋಕ್ಷ ಸಿಟ್ಟನ್ನು ತಂದೆಯ ವಿರದ್ಧ ಹೊರ ಹಾಕಿದ್ದರು. ಆದರೆ ಇದೀಗ ಸಂದರ್ಶನವೊಂದರಲ್ಲಿ ಮಾತನಾಡಿರುವ ಜೇಸನ್, ಮೊದಲ ಬಾರಿಗೆ ತಂದೆಯ ಬಗ್ಗೆ ಮಾತನಾಡಿದ್ದಾರೆ.

ವಿಕಟನ್​ಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಜೇಸನ್, ‘ನಾನು ತಂದೆ, ತಾಯಿ ಸಂಗೀತ ಮತ್ತು ಸಹೋದರಿಯೊಡನೆ ನನ್ನ ಆಯ್ಕೆ (ಸಿನಿಮಾ ನಿರ್ದೇಶನ) ಬಗ್ಗೆ ಚರ್ಚಿಸಿಯೇ ನಿರ್ದೇಶನಕ್ಕೆ ಮುಂದಾದೆ. ಎಲ್ಲರೂ ಸಹ ನನಗೆ ಬೆಂಬಲ ನೀಡಿದರು, ಹಾರೈಸಿದರು. ಒಂದು ಕುಟುಂಬವಾಗಿ ಅವರು ಬಹಳ ಪ್ರೀತಿ, ನಂಬಿಕೆಯನ್ನು ವ್ಯಕ್ತಪಡಿಸಿದರು. ನನ್ನ ಕುಟುಂಬದವರು ನನ್ನ ಮೇಲೆ ಎಷ್ಟು ನಂಬಿಕೆ ಇಟ್ಟಿದ್ದಾರೆ ಎಂಬುದು ನನಗೆ ಇದರಿಂದ ಗೊತ್ತಾಯ್ತು’ ಎಂದಿದ್ದಾರೆ. ಜೇಸನ್ ಮೊದಲ ಸಿನಿಮಾ ನಿರ್ದೇಶನ ಆರಂಭಿಸಿದಾಗ ವಿಜಯ್ ಸೇತುಪತಿ ಸೇರಿ ಹಲವರಿಗೆ ಅವರಿಗೆ ಶುಭ ಹಾರೈಕೆಗಳು, ಆಶೀರ್ವಾದ ದೊರಕಿತಂತೆ. ಸಂದರ್ಶನದಲ್ಲಿ, ಸಂಜಯ್, ತಮಗೆ ವಿಜಯ್ ಅವರಿಂದ ಯಾವುದೇ ಸಹಾಯ ದೊರೆತಿಲ್ಲ ಎಂಬುದನ್ನು ಪರೋಕ್ಷವಾಗಿ ಹೇಳಿದ್ದಾರೆ.

ಇದನ್ನೂ ಓದಿ:ಜುಲೈ 23ಕ್ಕೆ ಬಿಡುಗಡೆ ಆಗಲಿದೆ ದಳಪತಿ ವಿಜಯ್ ಕೊನೆಯ ಸಿನಿಮಾ ‘ಜನ ನಾಯಗನ್’

ಜೇಸನ್ ಸಂಜಯ್ ಅವರು ತಮ್ಮ ಸಿನಿಮಾ ಜರ್ನಿಯ ಬಗ್ಗೆಯೂ ಮಾತನಾಡಿದ್ದು, ‘ನಾನು ಕೆನಡಾನಲ್ಲಿ ಸಿನಿಮಾ ಕಲಿಯುತ್ತಿದ್ದಾಗ 120 ಪುಟಗಳ ಚಿತ್ರಕತೆಯನ್ನು ಬರೆದಿದ್ದೆ. ಆದರೆ ಅದನ್ನು ಸಿನಿಮಾ ಮಾಡುತ್ತೇನೆಯೋ ಇಲ್ಲವೋ ಗೊತ್ತಿರಲಿಲ್ಲ. ಹಾಗಾಗಿ ಆದ ಅದನ್ನು 20 ನಿಮಿಷಗಳ ಶಾರ್ಟ್ ಫಿಲಂ ಮಾಡಿದೆ. ಭಾರತಕ್ಕೆ ಬಂದ ಬಳಿಕ ಮೂರು ಕತೆಗಳ ಮೇಲೆ ಕೆಲಸ ಮಾಡುತ್ತಿದ್ದೆ. ಅದರಲ್ಲಿ ಒಂದು ಐಡಿಯಾ ನನಗೆ ಹಿಡಿಸಿತು, ಕೆಲವರೊಟ್ಟಿಗೆ ಚರ್ಚೆ ಮಾಡಿದೆ. ಎಲ್ಲರಿಗೂ ಅದು ಇಷ್ಟವಾಯ್ತು. ಸೋ ಅದೇ ಐಡಿಯಾ ಮೇಲೆ ಕೆಲಸ ಮಾಡಿ, ಸಿನಿಮಾ ಮಾಡುವ ಮನಸ್ಸು ಮಾಡಿದೆ’ ಎಂದಿದ್ದಾರೆ.

‘ನನ್ನ ಅಂಕಲ್ ಸಂಜೀವ್ ಅವರ ನೆರವಿನಿಂದ ನಾನು ಕೆಲ ನಿರ್ಮಾಪಕರನ್ನು ಭೇಟಿಯಾಗಿ ಸಿನಿಮಾ ಕತೆ ಹೇಳಿದೆ. ತಮಿಳು ಕುಮಾರನ್ ಅವರಿಗೆ ಕತೆ ಇಷ್ಟವಾಯ್ತು, ಸುಭಾಸ್ಕರನ್ ಅವರಿಗೂ ಕತೆ ಇಷ್ಟವಾಯ್ತು. ಹಾಗಾಗಿ ನಾವು ‘ಸಿಗ್ಮಾ’ ಸಿನಿಮಾ ಮಾಡುವ ಮನಸ್ಸು ಮಾಡಿದೆವು. ಸಿನಿಮಾ ನಾವಂದುಕೊಂಡಂತೆ ಚೆನ್ನಾಗಿ ಮೂಡಿ ಬಂದಿದೆ’ ಎಂದಿದ್ದಾರೆ. ಸಂದೀಪ್ ಕೃಷ್ಣ ನಾಯಕನಾಗಿ ನಟಿಸಿರುವ ‘ಸಿಗ್ಮಾ’ ಸಿನಿಮಾ ಇದೇ ತಿಂಗಳು ಬಿಡುಗಡೆ ಆಗಲಿದೆ ಎನ್ನಲಾಗುತ್ತಿದೆ. ಸಿನಿಮಾನಲ್ಲಿ ಖುದ್ದು ಜೇಸನ್ ಸಂಜಯ್ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಮಹಾರಾಷ್ಟ್ರ: ದೇವೇಂದ್ರ ಫಡ್ನವೀಸ್ ನಿವಾಸದಲ್ಲಿ 3 ರಹಸ್ಯ ಸಭೆಗಳು, ಎನ್‌ಸಿಪಿಯಲ್ಲಿ ಮತ್ತೊಂದು ಒಡಕು – Kannada News | Maharashtra NCP Crisis: Fadnavis Secret Meetings Stoke Political Turmoil

ಮುಂಬೈ, ಜುಲೈ 17: ಮಹಾರಾಷ್ಟ್ರ(Maharashtra) ರಾಜಕೀಯದಲ್ಲಿ ಮತ್ತೊಮ್ಮೆ ಭಾರಿ ತಲ್ಲಣ ಸೃಷ್ಟಿಯಾಗಿದೆ. ಆಡಳಿತಾರೂಢ ಎನ್‌ಸಿಪಿ (ಅಜಿತ್ ಪವಾರ್ ಬಣ) ಮುಖ್ಯಸ್ಥೆ ಸುನೇತ್ರಾ ಪವಾರ್ ನೇತೃತ್ವದ ಬಣ ಮತ್ತು ಶರದ್ ಪವಾರ್ ನೇತೃತ್ವದ ವಿರೋಧ ಪಕ್ಷದ ಎನ್‌ಸಿಪಿ ಬಣ ಎರಡರಲ್ಲೂ ಆಂತರಿಕ ಕಲಹಗಳು ತಾರಕಕ್ಕೇರಿವೆ. ಈ ಇಡೀ ರಾಜಕೀಯ ನಾಟಕದ ಕೇಂದ್ರಬಿಂದುವಾಗಿ ಮೂಡಿಬಂದಿರುವ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ನಿವಾಸದಲ್ಲಿ ಬ್ಯಾಕ್ ಟು ಬ್ಯಾಕ್ ನಡೆದಿರುವ ಮೂರು ರಹಸ್ಯ ಸಭೆಗಳು ತೀವ್ರ ಊಹಾಪೋಹಗಳಿಗೆ ಕಾರಣವಾಗಿವೆ. ಅಜಿತ್ ಪವಾರ್ ಅವರ ನಿಧನದ ನಂತರ ಈ ಅಧಿಕೃತ ಬಣದಲ್ಲಿ ಈಗ ಎರಡು ಆಂತರಿಕ ಉಪ-ಬಣಗಳು ಸೃಷ್ಟಿಯಾಗಿವೆ.

ಸುನೇತ್ರಾ ಪವಾರ್ ಮತ್ತು ಪಾರ್ಥ್ ಪವಾರ್ ಬಣ: ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಮತ್ತು ಅವರ ಪುತ್ರ ಪಾರ್ಥ್ ಪವಾರ್ ಈ ಗುಂಪನ್ನು ಮುನ್ನಡೆಸುತ್ತಿದ್ದಾರೆ. ಪಕ್ಷದ ಮೇಲಿನ ಹಿಡಿತ ಸದ್ಯ ಇವರ ಕೈಯಲ್ಲಿದೆ.

ಮತ್ತೊಂದು ಹಿರಿಯ ನಾಯಕರ ಬಣ, ಪಕ್ಷದಲ್ಲಿ ಯುವ ನಾಯಕ ಪಾರ್ಥ್ ಪವಾರ್ ಅವರ ಹಸ್ತಕ್ಷೇಪ ಹೆಚ್ಚುತ್ತಿರುವುದಕ್ಕೆ ಈ ಹಿರಿಯ ನಾಯಕರು ತೀವ್ರ ಅಸಮಾಧಾನಗೊಂಡಿದ್ದಾರೆ. ಇತ್ತೀಚೆಗೆ ಇವರು ಮುಖ್ಯಮಂತ್ರಿ ಫಡ್ನವೀಸ್ ಅವರನ್ನು ತಡರಾತ್ರಿ ರಹಸ್ಯವಾಗಿ ಭೇಟಿಯಾಗಿರುವುದು ಪಕ್ಷದಲ್ಲಿ ಬಿರುಕು ಮೂಡಿರುವುದನ್ನು ಸ್ಪಷ್ಟಪಡಿಸಿದೆ.

ಮತ್ತಷ್ಟು ಓದಿ: ಉದ್ಧವ್ ಠಾಕ್ರೆಗೆ ಶಾಕ್: ಶಿಂಧೆ ಬಣ ಸೇರಿದ ಧಾರಾಶಿವ್ ಸಂಸದ ಓಂರಾಜೇ ನಿಂಬಾಳ್ಕರ್!

ಮತ್ತೊಂದು ವಿರೋಧಿ ಬಣ,ಇದರಲ್ಲಿ ಹಿರಿಯ ಮುತ್ಸದ್ದಿ ಶರದ್ ಪವಾರ್ ಮತ್ತು ಅವರ ಪುತ್ರಿ ಸುಪ್ರಿಯಾ ಸುಳೆ ಈ ಬಣವನ್ನು ಮುನ್ನಡೆಸುತ್ತಿದ್ದಾರೆ. ಇವರು ಕಾಂಗ್ರೆಸ್ ಒಳಗೊಂಡ ಕೇಂದ್ರದ ‘ಇಂಡಿ’ಮೈತ್ರಿಕೂಟದೊಂದಿಗೆ ಗುರುತಿಸಿಕೊಂಡಿದ್ದಾರೆ. ಪ್ರಸ್ತುತ ಈ ಬಣದ ಹಿರಿಯ ನಾಯಕ ಜಯಂತ್ ಪಾಟೀಲ್ ಕೂಡ ಮುಖ್ಯಮಂತ್ರಿಯವರನ್ನು ಭೇಟಿಯಾಗಿರುವುದು ವಿಲೀನ ಅಥವಾ ಪಕ್ಷಾಂತರದ ಹೊಸ ಊಹಾಪೋಹಗಳನ್ನು ಹುಟ್ಟುಹಾಕಿದೆ.

ಬಂಡಾಯ ಎದ್ದು ಪಕ್ಷವನ್ನು ಸೀಳಿದ್ದ ಅಜಿತ್ ಪವಾರ್ ಅವರು ಶರದ್ ಪವಾರ್ ಅವರ ರಾಜಕೀಯ ಶಕ್ತಿಯನ್ನು ಎದುರಿಸಬಲ್ಲ ಏಕೈಕ ನಾಯಕರಾಗಿದ್ದರು. ಈಗ ಅವರ ಪತ್ನಿ ಸುನೇತ್ರಾ ಪವಾರ್ ಉಪಮುಖ್ಯಮಂತ್ರಿಯಾದರೂ, ಪಕ್ಷದ ಶಾಸಕರನ್ನು ಮತ್ತು ತಳಮಟ್ಟದ ಕಾರ್ಯಕರ್ತರನ್ನು ಒಟ್ಟಾಗಿ ಹಿಡಿದಿಟ್ಟುಕೊಳ್ಳುವ ಪ್ರಭಾವಿ ವರ್ಚಸ್ಸು ಅವರಲ್ಲಿಲ್ಲ. ಹೀಗಾಗಿ, ಅಜಿತ್ ಪವಾರ್ ಬಣದಲ್ಲಿರುವ ಶಾಸಕರು ತಮ್ಮ ರಾಜಕೀಯ ಭವಿಷ್ಯದ ಆತಂಕದಿಂದಾಗಿ ಮರಳಿ ಹಿರಿಯ ನಾಯಕ ಶರದ್ ಪವಾರ್ ಜತೆ ನಿಲ್ಲಲು ಉತ್ಸುಕರಾಗಿದ್ದಾರೆ.

ಶರದ್ ಪವಾರ್ ನೇತೃತ್ವದ ಎನ್‌ಸಿಪಿ (NCP-SP) ಸದ್ಯಕ್ಕೆ ವಿರೋಧ ಪಕ್ಷದಲ್ಲಿದ್ದರೂ, ಮುಂದಿನ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಅತ್ಯಂತ ಚಾಣಾಕ್ಷ ಹೆಜ್ಜೆ ಇಡುತ್ತಿದೆ.

ಕಾರ್ಯಕರ್ತರ ಒತ್ತಡ: ಎನ್‌ಸಿಪಿ ಕಾರ್ಯಕರ್ತರು ತಳಮಟ್ಟದಲ್ಲಿ ಎರಡು ಬಣಗಳಾಗಿ ಕಿತ್ತಾಡುವುದರಿಂದ ಪಕ್ಷಕ್ಕೆ ನಷ್ಟವಾಗುತ್ತಿದೆ. ಪಕ್ಷ ಒಂದಾದರೆ ಮಾತ್ರ ಮರಳಿ ಅಧಿಕಾರ ಹಿಡಿಯಬಹುದು ಎಂಬುದು ಅವರ ವಾದ.

ಶರದ್ ಪವಾರ್ ಅವರ ತಂತ್ರ: ಅಜಿತ್ ಪವಾರ್ ಬಣದ ಹಿರಿಯ ನಾಯಕರಾದ ಪ್ರಫುಲ್ ಪಟೇಲ್ ಮತ್ತು ಸುನಿಲ್ ತತ್ಕರೆ ಅವರನ್ನು ದೂರವಿಟ್ಟು, ಕೇವಲ ಶಾಸಕರನ್ನು ಮಾತ್ರ ಮರಳಿ ತಮ್ಮ ಬಣಕ್ಕೆ ಸೇರಿಸಿಕೊಳ್ಳಲು ಶರದ್ ಪವಾರ್ ಒಲವು ತೋರಿದ್ದಾರೆ ಎನ್ನಲಾಗಿದೆ. ಬಂಡಾಯವೆದ್ದ ಪ್ರಮುಖ ನಾಯಕರನ್ನು ಮರಳಿ ಸೇರಿಸಿಕೊಂಡರೆ ಪಕ್ಷದ ಒಳಗೇ ಮತ್ತೆ ಅಸಮಾಧಾನ ಸ್ಫೋಟಗೊಳ್ಳಬಹುದು ಎಂಬುದು ಅವರ ಆತಂಕ.

ಇನ್ನೊಂದೆಡೆ, ಸುನೇತ್ರಾ ಪವಾರ್ ಬಣದಲ್ಲಿ ಮೂಲೆಗುಂಪಾಗುತ್ತಿರುವ ಹಿರಿಯ ನಾಯಕರಾದ ಪ್ರಫುಲ್ ಪಟೇಲ್ ಮತ್ತು ಸುನಿಲ್ ತತ್ಕರೆ ಅವರ ಲೆಕ್ಕಾಚಾರವೇ ಬೇರೆಯಾಗಿದೆ. ಇವರು ಶರದ್ ಪವಾರ್ ಬಣದಲ್ಲಿರುವ ಕೆಲವು ಪ್ರಮುಖ ನಾಯಕರನ್ನು ಸೆಳೆದು, ಉಭಯ ಬಣಗಳನ್ನು ಒಟ್ಟುಗೂಡಿಸಿ, ಆ ಜಂಟಿ ಪಕ್ಷವನ್ನು ಸಂಪೂರ್ಣವಾಗಿ ದೇವೇಂದ್ರ ಫಡ್ನವೀಸ್ ನೇತೃತ್ವದ ಎನ್‌ಡಿಎ (NDA) ಮೈತ್ರಿಕೂಟದ ಭಾಗವಾಗಿ ಮುಂದುವರಿಸಲು ಪ್ರಯತ್ನಿಸುತ್ತಿದ್ದಾರೆ.

ಇದೇ ಕಾರಣಕ್ಕಾಗಿ ಇವರು ಮುಖ್ಯಮಂತ್ರಿ ಫಡ್ನವೀಸ್ ಅವರನ್ನು ತಡರಾತ್ರಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಶರದ್ ಪವಾರ್ ಬಣದ ಜಯಂತ್ ಪಾಟೀಲ್ ಕೂಡ ಅದೇ ಸಮಯದಲ್ಲಿ ಸಿಎಂ ನಿವಾಸದಲ್ಲಿದ್ದುದು ಈ ತೆರೆಮರೆಯ ಸಂಧಾನಕ್ಕೆ ಪುಷ್ಟಿ ನೀಡಿದೆ.

ವಿಲೀನಕ್ಕೆ ಇರುವ ಮುಖ್ಯ ಕಾನೂನಾತ್ಮಕ ಅಡೆತಡೆಗಳು

ಅಧಿಕೃತ ಚಿಹ್ನೆಯ ಜಗಳ: ಭಾರತೀಯ ಚುನಾವಣಾ ಆಯೋಗವು  ಅಜಿತ್ ಪವಾರ್ ಬಣಕ್ಕೆ ಅಧಿಕೃತ ‘ಗಡಿಯಾರ’ ಚಿಹ್ನೆ ಮತ್ತು ಪಕ್ಷದ ಹೆಸರನ್ನು ನೀಡಿತ್ತು. ಈಗ ವಿಲೀನವಾಗಬೇಕಾದರೆ ಸುನೇತ್ರಾ ಪವಾರ್ ಬಣದ ಮೂರನೇ ಎರಡರಷ್ಟು (2/3rd) ಶಾಸಕರು ಒಪ್ಪಿಗೆ ನೀಡಬೇಕಾಗುತ್ತದೆ.

ಸುಪ್ರಿಯಾ ಸುಳೆಗ ನಿರಾಕರಣೆ: ಶರದ್ ಪವಾರ್ ಅವರ ಪುತ್ರಿ ಸುಪ್ರಿಯಾ ಸುಳೆ ಅವರು ಯಾವುದೇ ಕಾರಣಕ್ಕೂ ನಾವು ಬಿಜೆಪಿ,ಎನ್‌ಡಿಎ ಜೊತೆ ಹೋಗುವುದಿಲ್ಲ ಮತ್ತು ನಮ್ಮ ಬಣವು ‘ಇಂಡಿ’  ಮೈತ್ರಿಕೂಟದಲ್ಲೇ ಉಳಿಯಲಿದೆ ಎಂದು ಖಡಕ್ಕಾಗಿ ಹೇಳಿದ್ದಾರೆ.

ಸದ್ಯದ ಪರಿಸ್ಥಿತಿಯಲ್ಲಿ ಶರದ್ ಪವಾರ್ ಅವರ ಎನ್‌ಸಿಪಿ ಬಣವು ಯಾವುದೇ ಕಾರಣಕ್ಕೂ ಆಡಳಿತಾರೂಢ ಮೈತ್ರಿಕೂಟಕ್ಕೆ ಹೋಗುವುದಿಲ್ಲ. ಆದರೆ, ಸುನೇತ್ರಾ ಪವಾರ್ ಬಣದಲ್ಲಿರುವ ಹಲವು ಶಾಸಕರು ಸದ್ದಿಲ್ಲದೆ ಶರದ್ ಪವಾರ್ ಬಣಕ್ಕೆ ಮರಳಲು ಸಿದ್ಧತೆ ನಡೆಸುತ್ತಿರುವುದರಿಂದ, ಮುಂಬರುವ ದಿನಗಳಲ್ಲಿ ಮಹಾರಾಷ್ಟ್ರ ಸರ್ಕಾರದಲ್ಲಿ ದೊಡ್ಡ ಮಟ್ಟದ ರಾಜಕೀಯ ತಲ್ಲಣ ಸೃಷ್ಟಿಯಾಗುವುದು ಖಚಿತ ಎನ್ನಲಾಗುತ್ತಿದೆ.

ಒಂದೇ ರಾತ್ರಿಯಲ್ಲಿ ನಡೆದ 3 ಪ್ರಮುಖ ಸಭೆಗಳು

ಮೊದಲ ಸಭೆ: ಸುನೇತ್ರಾ ಪವಾರ್ ಬಣದ ಹಿರಿಯ ನಾಯಕರಾದ ಪ್ರಫುಲ್ ಪಟೇಲ್ ಮತ್ತು ಸುನಿಲ್ ತತ್ಕರೆ ಅವರು ಮುಖ್ಯಮಂತ್ರಿಯನ್ನು ಭೇಟಿಯಾಗಿ ಸುದೀರ್ಘ ಚರ್ಚೆ ನಡೆಸಿದರು.

ಎರಡನೇ ಸಭೆ: ಇದಾದ ಬೆನ್ನಲ್ಲೇ, ಅಜಿತ್ ಪವಾರ್ ಅವರ ಪುತ್ರ ಹಾಗೂ ಸಂಸದ ಪಾರ್ಥ್ ಪವಾರ್ ಅವರು ಕೂಡ ಮುಖ್ಯಮಂತ್ರಿಯವರನ್ನು ಪ್ರತ್ಯೇಕವಾಗಿ ಭೇಟಿಯಾದರು.

ಮೂರನೇ ಸಭೆ : ಇದೇ ಸಮಯದಲ್ಲಿ ಶರದ್ ಪವಾರ್ ಬಣದ (NCP-SP) ಹಿರಿಯ ನಾಯಕ ಜಯಂತ್ ಪಾಟೀಲ್ ಕೂಡ ಮುಖ್ಯಮಂತ್ರಿ ನಿವಾಸಕ್ಕೆ ಭೇಟಿ ನೀಡಿದ್ದು ತೀವ್ರ ಕುತೂಹಲ ಮೂಡಿಸಿದೆ. ಎರಡು ಶತ್ರು ಬಣಗಳ ನಾಯಕರು ಒಂದೇ ರಾತ್ರಿ ಸಿಎಂ ಭೇಟಿಯಾಗಿರುವುದು ಕೇವಲ ಕಾಕತಾಳೀಯವಾಗಿರಲು ಸಾಧ್ಯವಿಲ್ಲ ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಿದ್ದಾರೆ.

ಪ್ರಫುಲ್ ಪಟೇಲ್ ಮತ್ತು ಸುನಿಲ್ ತತ್ಕರೆ ಅವರು ಶರದ್ ಪವಾರ್ ಪಕ್ಷದ ಒಂದು ಭಾಗದ ನಾಯಕರನ್ನು ಸೆಳೆದು ಒಟ್ಟಾಗಿ ಎನ್‌ಡಿಎ ಮೈತ್ರಿಕೂಟಕ್ಕೆ ಸೇರ್ಪಡೆಗೊಳಿಸುವ ಸಾಧ್ಯತೆಯ ಕುರಿತು ಚರ್ಚಿಸುತ್ತಿದ್ದಾರೆ ಎನ್ನಲಾಗಿದೆ. ಸದ್ಯಕ್ಕೆ ಮಹಾರಾಷ್ಟ್ರದ ರಾಜಕೀಯ ಯಾವ ತಿರುವು ಪಡೆಯಲಿದೆ ಎಂಬುದು ತೀವ್ರ ಕುತೂಹಲ ಕೆರಳಿಸಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

‘ಕರ್ಣ’ ಧಾರಾವಾಹಿಯಲ್ಲಿ ಆಷಾಢದ ಟ್ವಿಸ್ಟ್; ಮೆಕ್ಯಾನಿಕ್ ವೇಷದಲ್ಲಿ ಬಂದ ಕಥಾನಾಯಕ – Kannada News | Karna Serial Update: Karna Turns Mechanic to Meet Nidhi Amid Ashadha Obstacles

ಜೀ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿ ‘ಕರ್ಣ’ದಲ್ಲಿ ಈಗ ರೋಚಕ ತಿರುವು ಎದುರಾಗಿದೆ. ಆಷಾಢ ಮಾಸದ ಹಿನ್ನೆಲೆಯಲ್ಲಿ ಕಥಾನಾಯಕ ಕರ್ಣ ಹಾಗೂ ನಿಧಿ ಜೋಡಿಗೆ ಹೊಸ ಸಂಕಷ್ಟ ಎದುರಾಗಿದೆ. ಇಬ್ಬರೂ ಮನೆಯವರ ಕಣ್ಣು ತಪ್ಪಿಸಿ ಕದ್ದುಮುಚ್ಚಿ ಪ್ರೀತಿ ಮಾಡುವ ಪರಿಸ್ಥಿತಿ ಸೃಷ್ಟಿಯಾಗಿದೆ. ಈ ಫನ್ ಎಪಿಸೋಡ್ ವೀಕ್ಷಕರಿಗೆ ಸಾಕಷ್ಟು ಮನರಂಜನೆ ನೀಡುತ್ತಿದೆ. ಈ ಧಾರಾವಾಹಿ ಮುಂದಿನ ದಿನಗಳಲ್ಲಿ ಯಾವ ರೀತಿಯಲ್ಲಿ ಸಾಗುತ್ತದೆ ಎನ್ನುವ ಕುತೂಹಲ ಮೂಡಿದೆ.

ಹೇಗಾದರೂ ಮಾಡಿ ನಿಧಿಯನ್ನು ಭೇಟಿಯಾಗಲು ಕರ್ಣ ಹೊಸ ಪ್ಲಾನ್ ಮಾಡಿದ್ದಾನೆ. ಆತ ಗ್ಯಾಸ್ ರಿಪೇರಿ ಮಾಡುವ ಮೆಕ್ಯಾನಿಕ್ ವೇಷ ಧರಿಸಿ ನಿಧಿ ಮನೆಗೆ ಬಂದಿದ್ದಾನೆ. ಈ ವೇಳೆ ಕಿಚನ್‌ನಲ್ಲಿ ಇಬ್ಬರೂ ಕದ್ದುಮುಚ್ಚಿ ಮಾತನಾಡುತ್ತಾ ಪ್ರೀತಿಯ ಕ್ಷಣಗಳನ್ನು ಕಳೆಯುತ್ತಾರೆ. ಆದರೆ ಈ ಖುಷಿ ಹೆಚ್ಚು ಹೊತ್ತು ಇರುವುದಿಲ್ಲ.

ಅಷ್ಟರಲ್ಲೇ ಮನೆಗೆ ಅಜ್ಜಿಯ ಎಂಟ್ರಿ ಆಗುತ್ತದೆ. ಹೊರಗಿರುವ ಪುರುಷರ ಚಪ್ಪಲಿ ನೋಡಿ ಅಜ್ಜಿಗೆ ಅನುಮಾನ ಶುರುವಾಗುತ್ತದೆ. ತಕ್ಷಣವೇ ಅಲರ್ಟ್ ಆಗುವ ನಿಧಿ, ಆತನನ್ನು ಫ್ಯಾನ್ ರಿಪೇರಿ ಮಾಡುವ ಮೆಕ್ಯಾನಿಕ್ ಎಂದು ಸುಳ್ಳು ಹೇಳುತ್ತಾಳೆ. ಅಜ್ಜಿ ಆತನಿಗೆ ಫ್ಯಾನ್ ಜೊತೆಗೆ ಐರನ್ ಬಾಕ್ಸ್ ಕೂಡ ರಿಪೇರಿ ಮಾಡಲು ಕೊಟ್ಟು ಪರೀಕ್ಷಿಸುತ್ತಾರೆ. ಈ ಕದ್ದುಮುಚ್ಚಿ ಪ್ರೀತಿಯ ಆಟ ಮುಂದಿನ ದಿನಗಳಲ್ಲಿ ಯಾವ ತಿರುವು ಪಡೆದುಕೊಳ್ಳಲಿದೆ ಎಂಬುದು ಕುತೂಹಲ ಮೂಡಿಸಿದೆ.

ಇದನ್ನೂ ಓದಿ: ‘ಕರ್ಣ’ ಧಾರಾವಾಹಿಯಿಂದ ಕಾಣೆಯಾದ ನಟಿ ನಮ್ರತಾ ಗೌಡ 

ನಿತ್ಯಾ ಕಾಣೆ

ನಿತ್ಯಾ ಪಾತ್ರ ಮಾಡುತ್ತಿರುವ ನಮ್ರತಾ ಗೌಡ ಅವರು ಧಾರಾವಾಹಿಯಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಇದು ವೀಕ್ಷಿರಿಗೆ ಸಾಕಷ್ಟು ಬೇಸರ ಮೂಡಿಸಿದೆ. ಅವರು ಯಾವಾಗ ಧಾರಾವಾಹಿಗೆ ಮರಳುತ್ತಾರೆ ಎನ್ನುವ ಕುತೂಹಲ ಮೂಡಿದೆ. ಅವರು ಇಲ್ಲದೆ ಇರುವುದು ನಮ್ರತಾ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಅವರನ್ನು ಈ ರೀತಿ ಸೈಡ್ಲೈನ್ ಮಾಡಿದ್ದು ಸರಿ ಅಲ್ಲ ಎಂಬ ಮಾತು ಕೇಳಿ ಬಂದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Video: ಆಷಾಢ ಮಾಸ ಶಕ್ತಿ ದೇವತೆಗಳ ಆರಾಧನೆಗೆ ಪ್ರಶಸ್ತವಾದ ಮಾಸ: ಡಾ. ಶಶಿಶೇಖರ್ ದೀಕ್ಷಿತ್ ವಿವರಣೆ – Kannada News | Ashadha Masa: Auspicious for Shakti Devata Worship and Chamundeshwari Devi Puja in Mysore

ಆಷಾಢ ಮಾಸದ ಮೊದಲ ಶುಕ್ರವಾರದಂದು ನಾಡ ಅಧಿದೇವತೆ ತಾಯಿ ಚಾಮುಂಡೇಶ್ವರಿ ದೇವಿಯ ಸನ್ನಿಧಾನ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಹಬ್ಬದ ವಾತಾವರಣ ಮನೆ ಮಾಡಿತ್ತು. ಈ ಕುರಿತು ದೇವಸ್ಥಾನದ ಪ್ರಧಾನ ಅರ್ಚಕರಾದ ಡಾ. ಶಶಿಶೇಖರ್ ದೀಕ್ಷಿತ್ ಅವರು ಮಾತನಾಡಿ, ಆಷಾಢ ಮಾಸವು ಶಕ್ತಿ ದೇವತೆಗಳ ಆರಾಧನೆಗೆ ಅತ್ಯಂತ ಪ್ರಶಸ್ತವಾದ ಮಾಸವಾಗಿದೆ. ಈ ಮಾಸದಲ್ಲಿ ಶಕ್ತಿ ದೇವತೆಗಳನ್ನು ಆರಾಧಿಸಿದರೆ ಸಕಲ ಶುಭಗಳು ಲಭಿಸುತ್ತವೆ ಎಂಬುದು ನಂಬಿಕೆಯಾಗಿದೆ ಎಂದರು. ಪ್ರತಿದಿನದಂತೆ ಬೆಳಿಗ್ಗೆ 3:30 ರಿಂದ ಮಹಾನ್ಯಾಸ ರುದ್ರಾಭಿಷೇಕ, ಪಂಚಾಮೃತಾಭಿಷೇಕ ಹಾಗೂ ಗರ್ಭಗುಡಿಯಲ್ಲಿರುವ ಉತ್ಸವಮೂರ್ತಿಗೆ ವಿಶೇಷ ಲಕ್ಷ್ಮೀ ಅಲಂಕಾರ ಮಾಡಲಾಗಿತ್ತು ಎಂದು ತಿಳಿಸಿದರು. ಆಷಾಢ ಮಾಸದ ನಾಲ್ಕು ಶುಕ್ರವಾರಗಳಲ್ಲೂ ಲಕ್ಷ್ಮೀ ಅಲಂಕಾರ ಮಾಡಲಾಗುತ್ತದೆ ಎಂಬುದು ವಿಶೇಷ ಎಂದು ಅವರು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರು: 2 ವರ್ಷದ ಮಗು ಅನುಮಾನಾಸ್ಪದ ಸಾವು, ಲಿವ್-ಇನ್ ಸಂಬಂಧದಲ್ಲಿದ್ದ ದಂಪತಿ ವಿರುದ್ಧ ಅನುಮಾನ – Kannada News | Bengaluru 2 Year Old Girl Dies Under Suspicious Circumstances; Police Probe Live in Couple

ಬೆಂಗಳೂರು, ಜುಲೈ 17: ಬೆಂಗಳೂರು (Bengaluru) ನಗರದ ಬಾಣಸವಾಡಿ ಪೊಲೀಸ್ ಠಾಣೆ ವ್ಯಾಪ್ತಿಯ ಇಂದಿರಾ ಸ್ಟ್ರೀಟ್‌ನಲ್ಲಿ ಎರಡು ವರ್ಷದ ಹೆಣ್ಣು ಮಗು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ನಡೆದಿದೆ. ಉಸಿರಾಟದ ಸಮಸ್ಯೆಯಿಂದ ಮಗು ಮೃತಪಟ್ಟಿದೆ ಎಂದು ಪೋಷಕರು ತಿಳಿಸಿದ್ದರೂ, ಪ್ರಕರಣದಲ್ಲಿ ಅನುಮಾನ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಜೇಸನ್ ಆಂಥೋನಿ ಮತ್ತು ರೋಸ್ಲಿನ್ ಎಂಬವರು ಹಲವು ವರ್ಷಗಳಿಂದ ಲಿವ್-ಇನ್ ಸಂಬಂಧದಲ್ಲಿದ್ದು, ಅವರಿಗೆ ಎರಡು ವರ್ಷದ ಹೆಣ್ಣು ಮಗು ಇತ್ತು. ಎರಡು ದಿನಗಳ ಹಿಂದೆ ಮಗುವಿಗೆ ಏಕಾಏಕಿ ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಮಗು ಮೃತಪಟ್ಟಿದೆ ಎಂದು ಹೇಳಲಾಗಿದೆ.

ದಂಪತಿ ವಿರುದ್ಧ ದೂರು ನೀಡಿದ ಸ್ನೇಹಿತೆ

ಘಟನೆಯ ಮಾಹಿತಿ ಪಡೆದ ಪೊಲೀಸರು ಪ್ರಾಥಮಿಕ ಪರಿಶೀಲನೆ ನಡೆಸಿದ್ದರು. ಬಳಿಕ ದಂಪತಿಯ ಸ್ನೇಹಿತೆಯೊಬ್ಬರು ಮಗುವಿನ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ದೂರು ನೀಡಿದ್ದಾರೆ. ತಾಯಿ ಮಗುವಿಗೆ ಆಗಾಗ ಹೊಡೆಯುತ್ತಿದ್ದಳು, ಅದನ್ನು ತಾನು ನೋಡಿದ್ದೇನೆ ಎಂದು ದೂರಿನಲ್ಲಿ ಉಲ್ಲೇಖಿಸಿರುವುದಾಗಿ ತಿಳಿದುಬಂದಿದೆ.

ಮಗುವಿನ ದೇಹದ ಮೇಲಿತ್ತು ಗಾಯದ ಗುರುತು

ಇದಲ್ಲದೆ, ಮಗುವಿನ ದೇಹದ ಮೇಲೆ ಕೆಲವೆಡೆ ಗಾಯದ ಗುರುತುಗಳು ಪತ್ತೆಯಾಗಿರುವುದರಿಂದ ಪೊಲೀಸರು ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸದ್ಯ ಮರಣೋತ್ತರ ಪರೀಕ್ಷೆ ವರದಿಗಾಗಿ ಕಾಯುತ್ತಿದ್ದು, ವರದಿ ಬಂದ ಬಳಿಕ ಸಾವಿಗೆ ನಿಖರ ಕಾರಣ ತಿಳಿಯುವ ಸಾಧ್ಯತೆಯಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 10:16 am, Fri, 17 July 26

Source link

Exit mobile version